Ankita Amar: ಗುಡ್‌ ನ್ಯೂಸ್‌ ಕೊಟ್ಟ ಶೈನ್‌ ಶೆಟ್ಟಿ -ಅಂಕಿತಾ ಅಮರ್‌!  - Vistara News

ಸ್ಯಾಂಡಲ್ ವುಡ್

Ankita Amar: ಗುಡ್‌ ನ್ಯೂಸ್‌ ಕೊಟ್ಟ ಶೈನ್‌ ಶೆಟ್ಟಿ -ಅಂಕಿತಾ ಅಮರ್‌! 

Ankita Amar: ಜಸ್ಟ್ ಮ್ಯಾರೀಡ್’ ಸಿನಿಮಾಗೆ ಬೆಂಗಳೂರು, ಮೈಸೂರು ಹಾಗೂ ಚಿಕ್ಕಮಗಳೂರಿನಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆದಿತ್ತು. ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿ ಜನಪ್ರಿಯತೆ ಪಡೆದ ಅಜನೀಶ್ ಲೋಕನಾಥ್ ಅವರು ಈ ಸಿನಿಮಾದ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದಾರೆ. ಸಿ.ಆರ್.ಬಾಬಿ ಅವರು ಈ ಸಿನಿಮಾದ ನಿರ್ಮಾಣದಲ್ಲಿ ಅಜನೀಶ್​ಗೆ ಸಾಥ್ ನೀಡಿದ್ದಾರೆ.

VISTARANEWS.COM


on

Ankita Amar shyne shetty Gives Good News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ನಿರ್ಮಿಸುತ್ತಿರುವ, ಸಿ.ಆರ್. ಬಾಬಿ ನಿರ್ದೇಶನದ ʻಜಸ್ಟ್‌ ಮ್ಯಾರೀಡ್‌ʼ ಸಿನಿಮಾ ಇದೀಗ ಹೊಸ ಅಪ್‌ಡೇಟ್‌ ನೀಡಿದೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಕಿರುತೆರೆ ಕಲಾವಿದೆ ಅಂಕಿತಾ ಅಮರ್ (Ankita Amar) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಈಗಷ್ಟೇ ಮುಕ್ತಾಯವಾಗಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಕ್ಕೂ ಚಿತ್ರತಂಡ ಚಾಲನೆ ನೀಡಿದೆ. 

ʻಜಸ್ಟ್ ಮ್ಯಾರೀಡ್’ ಸಿನಿಮಾಗೆ ಬೆಂಗಳೂರು, ಮೈಸೂರು ಹಾಗೂ ಚಿಕ್ಕಮಗಳೂರಿನಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆದಿತ್ತು. ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿ ಜನಪ್ರಿಯತೆ ಪಡೆದ ಅಜನೀಶ್ ಲೋಕನಾಥ್ ಅವರು ಈ ಸಿನಿಮಾದ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದಾರೆ. ಸಿ.ಆರ್.ಬಾಬಿ ಅವರು ಈ ಸಿನಿಮಾದ ನಿರ್ಮಾಣದಲ್ಲಿ ಅಜನೀಶ್​ಗೆ ಸಾಥ್ ನೀಡಿದ್ದಾರೆ.

ಮಹಿಲಾ ನಿರ್ದೇಶಕಿ ಸಿ.ಆರ್‌ ಬಾಬಿ ಈ ಸಿನಿಮಾ ಮೂಲಕ ನಿರ್ದೇಶಕಿಯಾಗಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು ಅಜನೀಶ್ ಲೋಕನಾಥ್ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಮೋದ್ ಮರವಂತೆ ಬರೆದ ಹಾಡು, ವಿಜಯ್ ಪ್ರಕಾಶ್ ಧ್ವನಿಯಲ್ಲಿ ಬಂದ “ಅಭಿಮಾನಿಯಾಗಿ ಹೋದೆ” ಸಾಂಗ್ ಇತ್ತೀಚಿಗೆ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿದೆ. ‌

ಇದನ್ನೂ ಓದಿ: K-pop megastars BTS: BTS release their book Beyond the Story

ಜಸ್ಟ್ ಮ್ಯಾರೀಡ್’ ಚಿತ್ರದಲ್ಲಿ ಶೈನ್ ಶೆಟ್ಟಿ, ಅಂಕಿತಾ ಅಮರ್, ಅಚ್ಯುತ್​ ಕುಮಾರ್, ದೇವರಾಜ್, ಅನೂಪ್ ಭಂಡಾರಿ, ಮಾಳವಿಕಾ ಅವಿನಾಶ್, ಶ್ರುತಿ ಹರಿಹರನ್, ಸಾಕ್ಷಿ ಅಗರವಾಲ್, ಶ್ರುತಿ ಕೃಷ್ಣ, ರವಿಶಂಕರ್ ಗೌಡ, ಶ್ರೀಮಾನ್, ರವಿ ಭಟ್, ಸಂಗೀತಾ ಅನಿಲ್, ವಾಣಿ ಹರಿಕೃಷ್ಣ, ಕುಮುದಾ, ವೇದಿಕಾ ಕಾರ್ಕಳ, ಜಯರಾಮ್ ಮುಂತಾದವರು ನಟಿಸಿದ್ದಾರೆ ಎಂಬುದು ವಿಶೇಷ. ಸಿ.ಆರ್. ಬಾಬಿ ಅವರೇ ಕಥೆ ಬರೆದಿದ್ದಾರೆ‌. ಅವರ ಜೊತೆ ಸೇರಿ ಧನಂಜಯ್ ರಂಜನ್ ಚಿತ್ರಕಥೆ ಬರೆದಿದ್ದಾರೆ. ಈ ಚಿತ್ರದ ಸಂಭಾಷಣೆ ರಘು ನಿಡುವಳ್ಳಿ ಅವರದ್ದು.

ಪಿ ಜಿ ಛಾಯಾಗ್ರಹಣ, ಶ್ರೀಕಾಂತ್ ಮತ್ತು ಅಶಿಕ್ ಕುಸುಗೊಳ್ಳಿ (ಗಣೇಶ ಸಾಂಗ್) ಸಂಕಲನ, ಅಮರ್ ಕಲಾ ನಿರ್ದೇಶನ, ವಿಕ್ರಮ್ ಮೋರ್ ಸಾಹಸ ನಿರ್ದೇಶನ ಹಾಗೂ ಬಾಬಾ ಭಾಸ್ಕರ್, ಶಾಂತಿ ಅರವಿಂದ್ ಅವರ ನೃತ್ಯ ನಿರ್ದೇಶನ ಜಸ್ಟ್ ಮ್ಯಾರೀಡ್ ಚಿತ್ರಕ್ಕಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Kannada New Movie: ನಾಲ್ಕು ‌ತಲೆಮಾರಿನ ಕಥೆ ಹೇಳುವ ʼಮಾನ್‌ಸ್ಟರ್ʼ ಚಿತ್ರದ ಟೀಸರ್, ಹಾಡು ರಿಲೀಸ್‌

Kannada New Movie: ಪುಟ್ಟರಾಜ ರೆಡ್ಡಿ ಅವರ ನಿರ್ಮಾಣದ, ಆರನ್ ಕಾರ್ತಿಕ್ ವೆಂಕಟೇಶ್ ಕಥೆ, ಚಿತ್ರಕಥೆ ಬರೆದು ಸಂಗೀತ ‌ಸಂಯೋಜಿಸುವುದರೊಂದಿಗೆ ನಿರ್ದೇಶನ ಮಾಡಿರುವ “ಮಾನ್‌ಸ್ಟರ್” ಚಿತ್ರದ ಟೀಸರ್ ಹಾಗೂ ಹಾಡು ಬಿಡುಗಡೆ ಸಮಾರಂಭವು ಇತ್ತೀಚೆಗೆ ಅದ್ಧೂರಿಯಾಗಿ ನಡೆದಿದೆ. ಚಿತ್ರದಲ್ಲಿ ಮೂರು ನಾಯಕರಿದ್ದಾರೆ. ಥ್ರಿಲ್ಲರ್ ಮಂಜು, ಧರ್ಮ ಕೀರ್ತಿರಾಜ್ ಹಾಗೂ ಪವನ್ ಎಸ್. ನಾರಾಯಣ್ ನಾಯಕರಾಗಿ ಅಭಿನಯಿಸಿದ್ದಾರೆ. ನಿರ್ಮಾಪಕರ ಪುತ್ರ ಸಂತೋಷ್ ರೆಡ್ಡಿ ಸೂಪರ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.

VISTARANEWS.COM


on

Monster movie teaser and song released
Koo

ಬೆಂಗಳೂರು: ಪುಟ್ಟರಾಜ ರೆಡ್ಡಿ ಅವರ ನಿರ್ಮಾಣದ, ಆರನ್ ಕಾರ್ತಿಕ್ ವೆಂಕಟೇಶ್ ಕಥೆ, ಚಿತ್ರಕಥೆ ಬರೆದು ಸಂಗೀತ ‌ಸಂಯೋಜಿಸುವುದರೊಂದಿಗೆ ನಿರ್ದೇಶನವನ್ನು ಮಾಡಿರುವ “ಮಾನ್ ಸ್ಟರ್” ಚಿತ್ರದ (Kannada New Movie) ಟೀಸರ್ ಹಾಗೂ ಹಾಡು ಬಿಡುಗಡೆ ಸಮಾರಂಭವು ಈಚೆಗೆ ಅದ್ಧೂರಿಯಾಗಿ ನೆರವೇರಿತು.

ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಮುನೇಗೌಡ, ನಿರ್ಮಾಪಕ ಹರೀಶ್, ನಟ ರಕ್ಷಕ್ ಬುಲೆಟ್, ಸಿರಿ ಮ್ಯೂಸಿಕ್ ಸಿರಿ ಚಿಕ್ಕಣ್ಣ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹಾಡು‌ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಇದು ನಾನು ಸಂಗೀತ ಸಂಯೋಜಿಸುತ್ತಿರುವ 57ನೇ ಚಿತ್ರ ಹಾಗೂ ನಿರ್ದೇಶಿಸಿರುವ ಆರನೇ ಚಿತ್ರ ಎಂದು ತಿಳಿಸಿದ ಆರನ್ ಕಾರ್ತಿಕ್ ವೆಂಕಟೇಶ್, ಈ ಚಿತ್ರದಲ್ಲಿ ನಾಲ್ಕು ತಲೆಮಾರುಗಳ ಕಥೆ ತೋರಿಸಲಾಗಿದೆ.‌ ಆಕ್ಷನ್ ಥ್ರಿಲ್ಲರ್ ಜಾನರ್‌ನ ಈ ಚಿತ್ರದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಡುವ ಸಾಮಾಜಿಕ ಕಳಕಳಿಯುಳ್ಳ ಅಂಶ ಸಹ ಇದೆ.

ಇದನ್ನೂ ಓದಿ: Bengaluru News: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟನೆ ಜೂ.30ಕ್ಕೆ

ಚಿತ್ರದಲ್ಲಿ ಮೂರು ನಾಯಕರಿದ್ದಾರೆ. ಥ್ರಿಲ್ಲರ್ ಮಂಜು, ಧರ್ಮ ಕೀರ್ತಿರಾಜ್ ಹಾಗೂ ಪವನ್ ಎಸ್. ನಾರಾಯಣ್ ನಾಯಕರಾಗಿ ಅಭಿನಯಿಸಿದ್ದಾರೆ. ನಿರ್ಮಾಪಕರ ಪುತ್ರ ಸಂತೋಷ್ ರೆಡ್ಡಿ ಸೂಪರ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಆಪ್ತಮಿತ್ರ ರಾಜ್ ಬಹದ್ದೂರ್, ಯತಿರಾಜ್, ಕುರಿ ಬಾಂಡ್ ರಂಗ, ಯಶ್ವಿಕ , ವಿಕ್ಟರಿ ವಾಸು, ಗಣೇಶ್ ರಾವ್, ಸಂಗೀತ, ದುಬೈ ರಫಿಕ್, ರಾಬರ್ಟ್, ನವಾಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಚಿತ್ರೀಕರಣ ಪೂರ್ಣವಾಗಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಚಿತ್ರದಲ್ಲಿ ಖ್ಯಾತ ಗಾಯಕರು ಹಾಡಿರುವ ಏಳು ಹಾಡುಗಳಿವೆ. ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು.

ಇದು ನನ್ನ ಮೊದಲ ನಿರ್ಮಾಣದ ಚಿತ್ರ. ನಾನು ಅಷ್ಟು ಓದಿದವನಲ್ಲ. ಆದರೆ ಇಂದು ಕಷ್ಟಪಟ್ಟು ಸಿನಿಮಾ ನಿರ್ಮಾಣ ಮಾಡುವ ಹಂತಕ್ಕೆ ತಲುಪಿದ್ದೇನೆ. ಈ ಚಿತ್ರದ ಮೂಲಕ ನನ್ನ ಮಗ ಸಂತೋಷ್ ರೆಡ್ಡಿ ಚಿತ್ರರಂಗ ಪ್ರವೇಶಿಸುತ್ತಿದ್ದಾನೆ.‌ ಅವನಿಗೆ ಹಾಗೂ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಪುಟ್ಟರಾಜ ರೆಡ್ಡಿ ತಿಳಿಸಿದ್ದಾರೆ.

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಚಿತ್ರ ಚೆನ್ನಾಗಿ ಮೂಡಿಬಂದಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ನಟ ಧರ್ಮ ಕೀರ್ತಿರಾಜ್ ತಿಳಿಸಿದರು.

ಇದನ್ನೂ ಓದಿ: Share Market : ಷೇರು ಮಾರುಕಟ್ಟೆಯಲ್ಲಿ ನೂತನ ದಾಖಲೆ; ಮೊದಲ ಬಾರಿಗೆ 78,000 ಮಟ್ಟವನ್ನು ದಾಟಿದ ಸೆನ್ಸೆಕ್ಸ್

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಥ್ರಿಲ್ಲರ್ ಮಂಜು, ಸಂತೋಷ್ ರೆಡ್ಡಿ, ರಾಜ್ ಬಹದ್ದೂರ್, ಗಣೇಶ್ ರಾವ್, ಸಂಗೀತ, ನವಾಜ್ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು “ಮಾನ್ ಸ್ಟರ್” ಬಗ್ಗೆ ಮಾಹಿತಿ ನೀಡಿದರು.

Continue Reading

ಕರ್ನಾಟಕ

Kannada New Movie: ʼನಾ ನಿನ್ನ ಬಿಡಲಾರೆʼ ಎನ್ನುತ್ತಿದ್ದಾರೆ ನಿರ್ದೇಶಕ, ನಟ ಹೇಮಂತ್ ಹೆಗಡೆ

Kannada New Movie: ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಹೇಮಂತ್ ಹೆಗಡೆ ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲೂ ನಟಿಸುತ್ತಿರುವ “ನಾ ನಿನ್ನ ಬಿಡಲಾರೆ” ಚಿತ್ರದ ಮುಹೂರ್ತ ಸಮಾರಂಭ ಪದ್ಮನಾಭ ನಗರದ ಶ್ರೀ ಲಕ್ಷ್ಮೀಕಾಂತ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಆರಂಭ ಫಲಕ ತೋರಿದರು. ನೈಸ್ ಸಂಸ್ಥೆಯ ಅಶೋಕ್ ಖೇಣಿ ಅವರು, ಕ್ಯಾಮೆರಾ ಚಾಲನೆ ಮಾಡಿದರು.

VISTARANEWS.COM


on

naa ninna bidalaare kannada film muhurtha programme
Koo

ಬೆಂಗಳೂರು: ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹೇಮಂತ್ ಹೆಗಡೆ ನಿರ್ದೇಶಿಸಿ ಪ್ರಮುಖ ಪಾತ್ರದಲ್ಲೂ ನಟಿಸುತ್ತಿರುವ “ನಾ ನಿನ್ನ ಬಿಡಲಾರೆ” ಚಿತ್ರದ (Kannada New Movie) ಮುಹೂರ್ತ ಸಮಾರಂಭ ಪದ್ಮನಾಭ ನಗರದ ಶ್ರೀ ಲಕ್ಷ್ಮೀಕಾಂತ ದೇವಸ್ಥಾನದಲ್ಲಿ ನೆರವೇರಿತು.

ಚಿತ್ರದ ಮೊದಲ ಸನ್ನಿವೇಶಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಆರಂಭ ಫಲಕ ತೋರಿದರು. ನೈಸ್ ಸಂಸ್ಥೆಯ ಅಶೋಕ್ ಖೇಣಿ ಅವರು, ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರರಂಗದ ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.

ಹಾರಾರ್ ಚಿತ್ರ

ಇದೊಂದು ಹಾರಾರ್‌ ಜಾನರ್‌ನ ಚಿತ್ರ ಎಂದು ಮಾತನಾಡಿದ ‌ಹೇಮಂತ್ ಹೆಗಡೆ, ಈ ಸೂಪರ್ ಹಿಟ್ ಚಲನಚಿತ್ರದ ಶೀರ್ಷಿಕೆ ನಮ್ಮ ಚಿತ್ರದ ಕಥೆಗೆ ಸೂಕ್ತವಾಗಿದೆ. ಹಾಗಾಗಿ “ನಾ ನಿನ್ನ ಬಿಡಲಾರೆ” ಶೀರ್ಷಿಕೆ ಇಟ್ಟಿದ್ದೇವೆ. ಆದರೆ ಹಳೆಯ “ನಾ ನಿನ್ನ ಬಿಡಲಾರೆ” ಚಿತ್ರದ ಕಥೆಯೇ ಬೇರೆ. ಈ ಚಿತ್ರದ ಕಥೆಯೇ ಬೇರೆ. ಕನ್ನಡದಲ್ಲಿ ಒಂದೊಳ್ಳೆ ಹಾರಾರ್ ಚಿತ್ರ ಬಂದು ಬಹಳ ಸಮಯವಾಗಿದೆ. ಹಾಗಾಗಿ ಹಾರಾರ್ ಜಾನರ್ ಅನ್ನು ಆಯ್ಕೆ ಮಾಡಿಕೊಂಡಿದ್ದೇವೆ.

ಇದನ್ನೂ ಓದಿ: Karnataka Weather: ನಾಳೆ ಶಿವಮೊಗ್ಗ, ಚಿಕ್ಕಮಗಳೂರು ಸೇರಿ ವಿವಿಧೆಡೆ ಭಾರಿ ಮಳೆ; ಕರಾವಳಿಯಲ್ಲಿ ಮೀನುಗಾರರಿಗೆ ಎಚ್ಚರಿಕೆ!

ಜುಲೈ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ. ಹೊಸನಗರದ ಬಳಿ ನೂರೈವತ್ತು ವರ್ಷಗಳ ಹಳೆಯ ಮನೆಯಲ್ಲೇ ಮೂವತ್ತು ದಿನಗಳ ಚಿತ್ರೀಕರಣ ನಡೆಯಲಿದೆ. ನನ್ನ ಹೆಂಡತಿ ಪಾತ್ರದಲ್ಲಿ ಅಪೂರ್ವ ನಟಿಸುತ್ತಿದ್ದಾರೆ. ಭಾವನಾ ರಾಮಣ್ಣ ಅವರು ದೆವ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿಶೋರ್, ಮಕರಂದ್ ದೇಶಪಾಂಡೆ, ಶಂಕರ್ ಅಶ್ವಥ್, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ರೇವಣ್ಣ ಸಿದ್ದಯ್ಯ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಖ್ಯಾತ ನಟ ನಾಜರ್ ಅವರ ಜತೆ ಕೂಡ ಮಾತುಕತೆ ನಡೆಯುತ್ತಿದೆ‌. ಮೂರು ಹಾಡುಗಳಿದ್ದು ವಾಸುಕಿ ವೈಭವ್ ಸಂಗೀತ ನೀಡಲಿದ್ದಾರೆ. ಕೃಷ್ಣ ಬಂಜನ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ “ಘೋಸ್ಟ್ 2.0” ಎಂಬ ಅಡಿಬರಹವಿದೆ ಎಂದು ತಿಳಿಸಿದ್ದಾರೆ.

ನಟಿ ಭಾವನ ರಾಮಣ್ಣ ಮಾತನಾಡಿ, ನನ್ನದು ಈ ಚಿತ್ರದಲ್ಲಿ ಮಧ್ಯಮ ವಯಸ್ಸಿನ ಮಲೆನಾಡ ಬ್ರಾಹ್ಮಣ ಹೆಂಗಸಿನ ಪಾತ್ರ. ನಾನು ಹುಟ್ಟಿಬೆಳೆದಿದ್ದು ಶಿವಮೊಗ್ಗದ ಬ್ರಾಹ್ಮಣರ ವಠಾರದಲ್ಲಿ. ಹಾಗಾಗಿ ನನಗೆ ಈ ಪಾತ್ರ ತುಂಬಾ ಹತ್ತಿರವಾಯಿತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: David Warner Retirement: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಡೇವಿಡ್ ವಾರ್ನರ್

ಈ ವೇಳೆ ಶಂಕರ್ ಅಶ್ವಥ್, ಸುಚೇಂದ್ರ ಪ್ರಸಾದ್, ರೇವಣ್ಣ ಸಿದ್ದಯ್ಯ ಮುಂತಾದವರು “ನಾ ನಿನ್ನ ಬಿಡಲಾರೆ” ಚಿತ್ರದ ಕುರಿತು ಮಾತನಾಡಿದರು. ಅನ್ವಿತಾ ಆರ್ಟ್ಸ್ ಲಾಂಛನದಲ್ಲಿ ಶಶಿಕಿರಣ್ ರಂಗನಾಥ್, ಕಿರಣ್ ನಾಗರಾಜ್ ಹಾಗೂ ಬಾಲಕೃಷ್ಣ ಪೆರುಂಬಲ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Continue Reading

ಕರ್ನಾಟಕ

Bengaluru News: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟನೆ ಜೂ.30ಕ್ಕೆ

Bengaluru News: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡದ (ಶಿವಾನಂದ ಸರ್ಕಲ್) ಉದ್ಘಾಟನಾ ಸಮಾರಂಭ ಇದೇ ಜೂನ್ 30 ರಂದು ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ತಿಳಿಸಿದ್ದಾರೆ.

VISTARANEWS.COM


on

Inauguration of new building of Kannada Film Producers Association on June 30
Koo

ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ (ಶಿವಾನಂದ ಸರ್ಕಲ್) ಉದ್ಘಾಟನಾ ಸಮಾರಂಭ ಇದೇ ಜೂನ್ 30ರಂದು ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ (Bengaluru News) ತಿಳಿಸಿದರು.

ನಗರದ ನಿರ್ಮಾಪಕರ ಸಂಘದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಳ ಜನರ ಶ್ರಮದಿಂದ ನಿರ್ಮಾಪಕರ ಸಂಘದ ನೂತನ ಕಟ್ಟಡ ನಿರ್ಮಾಣವಾಗಿ, ಉದ್ಘಾಟನೆ ಆಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೂತನ ಕಟ್ಟಡದ ಉದ್ಘಾಟನೆ ಮಾಡಲಿದ್ದಾರೆ, ಈ ಸಂದರ್ಭದಲ್ಲಿ ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು, ಫಿಲಂ ಫೆಡರೇಷನ್‌ ಆಫ್‌ ಇಂಡಿಯಾ ಪದಾಧಿಕಾರಿಗಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Kannada New Movie: ಅದ್ಧೂರಿಯಾಗಿ ನಡೆದ ’ದ ಪ್ರಸೆಂಟ್’ ಚಿತ್ರದ ಮುಹೂರ್ತ

ಹೊಂಬಾಳೆ ಫಿಲಂಸ್‍, ಆರ್‌.ಎಸ್‌. ಗೌಡ, ವಾಣಿಜ್ಯ ಮಂಡಳಿ ಸೇರಿದಂತೆ ಅನೇಕರು ಈ ನೂತನ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ. ನಿರ್ಮಾಪಕ ರಮೇಶ್‌ ರೆಡ್ಡಿ ಕಟ್ಟಡ ನಿರ್ಮಾಣ ಜವಾಬ್ದಾರಿ ಹೊತ್ತು ನೆರವಾಗಿದ್ದಾರೆ. ದಕ್ಷಿಣ ಭಾರತದಲ್ಲಿ ನಿರ್ಮಾಪಕರಿಗೆ ಎಂದೇ ಸ್ವಂತ ಕಟ್ಟಡ ಹೊಂದಿರುವುದು ಕರ್ನಾಟಕದಲ್ಲಿ ಮಾತ್ರ ಎಂದು ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಸಾರಾ ಗೋವಿಂದು ತಿಳಿಸಿದರು.

ಇದನ್ನೂ ಓದಿ: Kannada New Movie: ಸಿದ್ದು ಪೂರ್ಣಚಂದ್ರ ನಿರ್ದೇಶನದ ನೂತನ ಚಿತ್ರ ‘ಈ ಪಾದ ಪುಣ್ಯ ಪಾದ’ ಶೀರ್ಷಿಕೆ ಅನಾವರಣ

ಈ ಸಂದರ್ಭದಲ್ಲಿ ನಿರ್ಮಾಪಕರ ಸಂಘದ ಕಾರ್ಯದರ್ಶಿ ಪ್ರವೀಣ್ ಕುಮಾರ್, ಎಂ.ಜಿ. ರಾಮಮೂರ್ತಿ, ರಮೇಶ್‍ ಯಾದವ್‍, ಆರ್.ಎಸ್. ಗೌಡ ಹಾಗೂ ಇತರರು ಪಾಲ್ಗೊಂಡಿದ್ದರು.

Continue Reading

ಸಿನಿಮಾ

Kannada New Movie: ಅದ್ಧೂರಿಯಾಗಿ ನಡೆದ ’ದ ಪ್ರಸೆಂಟ್’ ಚಿತ್ರದ ಮುಹೂರ್ತ

Kannada New Movie: ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ (ಜೆನ್) ಸಂಸ್ಥೆಯು ’ದ ಪ್ರಸೆಂಟ್’ಸಿನಿಮಾವನ್ನು ಮೊದಲ ಹೆಜ್ಜೆಯಾಗಿ ನಿರ್ಮಾಣ ಮಾಡುತ್ತಿದ್ದು, ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಶನಿವಾರ ಅದ್ಧೂರಿಯಾಗಿ ಮುಹೂರ್ತ ನಡೆಯಿತು. ಮಾಜಿ ಸಂಸದ ಎಲ್. ಶಿವರಾಮೇಗೌಡ ಅವರ ಅಳಿಯ ರಾಜೀವ್‌ ರಾಥೋಡ್ ನಾಯಕನಾಗಿ ನಟಿಸುತ್ತಿರುವುದರಿಂದ, ಸಮಾರಂಭಕ್ಕೆ ಆಗಮಿಸಿ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಅವರು ಶುಭ ಹಾರೈಸಿದರು.

VISTARANEWS.COM


on

The Present kannada film muhurtha at Kanteerava Studio
Koo

ಬೆಂಗಳೂರು: ಹೊಸ ಪ್ರತಿಭೆಗಳಿಗೆ ಎಂದೇ ತೆರೆದುಕೊಂಡಿರುವ ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ (ಜೆನ್) ಸಂಸ್ಥೆಯು ’ದ ಪ್ರಸೆಂಟ್’ ಸಿನಿಮಾವನ್ನು ಮೊದಲ ಹೆಜ್ಜೆಯಾಗಿ ನಿರ್ಮಾಣ ಮಾಡುತ್ತಿದ್ದು, ಕಂಠೀರವ ಸ್ಟುಡಿಯೋದಲ್ಲಿ ಶನಿವಾರ ಅದ್ದೂರಿಯಾಗಿ ಮುಹೂರ್ತ (Kannada New Movie) ನಡೆಯಿತು.

ಮಾಜಿ ಸಂಸದ ಎಲ್. ಶಿವರಾಮೇಗೌಡ ಅವರ ಅಳಿಯ ರಾಜೀವ್‌ ರಾಥೋಡ್ ನಾಯಕನಾಗಿ ನಟಿಸುತ್ತಿರುವುದರಿಂದ, ಸಮಾರಂಭಕ್ಕೆ ಆಗಮಿಸಿ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಅವರು ಶುಭ ಹಾರೈಸಿದರು. ರಾಷ್ಟ್ರ ಪ್ರಶಸ್ತಿ ವಿಜೇತ ತುಮಕೂರು ಜಿಲ್ಲೆಯ ಯುವ ರೈತ ರಮೇಶ್ ಕ್ಯಾಮೆರಾ ಆನ್ ಮಾಡಿದರು. ಹಾಗೂ ಕ್ರೈಂ ಬ್ರಾಂಚ್‌ನ ಡೈನಮಿಕ್ ಪೋಲೀಸ್ ಅಧಿಕಾರಿ ಆರ್.ನವೀನ್‌ಕುಮಾರ್ ಅತಿಥಿಯಾಗಿ ಉಪಸ್ಥಿತರಿದ್ದರು.

ಈ ವೇಳೆ ಜೆನ್ ಮಾಲೀಕ ಮತ್ತು ನಿರ್ದೇಶಕ ಶಿವಪೂರ್ಣ ಮಾತನಾಡಿ, ಇದೊಂದು ಮೈಥಲಾಜಿಕಲ್ ವಿಷಯಗಳನ್ನು ಒಳಗೊಂಡಿರುತ್ತದೆ. ಚಿತ್ರಕಥೆ ಸಿದ್ದಪಡಿಸಲು ಒಂದು ವರ್ಷ ಸಮಯ ತೆಗೆದುಕೊಂಡಿದೆ. ಒಂದು ಆತ್ಮದ 3 ಜನ್ಮದ ಕಥೆ ಒಳಗೊಂಡಿರುತ್ತದೆ. ಪ್ರಸೆಂಟ್, ಪಾಸ್ಟ್ ಹಾಗೂ ಫ್ಯೂಚರ್ ಎಂದು ಮೂರು ಭಾಗಗಳಲ್ಲಿ ಬರಲಿದೆ.

ಇದನ್ನೂ ಓದಿ: Gold Rate Today: ಏರಿಕೆಯೂ ಇಲ್ಲ ಇಳಿಕೆಯೂ ಇಲ್ಲ; ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

ಭಾಗ-1 ಪ್ರಸೆಂಟ್‌ನಲ್ಲಿ ನಡೆಯಲಿರುವ ಅಂಶಗಳನ್ನು ಹೇಳಲಾಗುತ್ತಿದೆ. ನಂತರ ಪಾಸ್ಟ್, ಫ್ಯೂಚರ್ ಟೇಕ್ ಆಫ್ ಆಗುತ್ತದೆ. ಕಾಲ್ಪನಿಕ ಆದರೂ ನೋಡುಗರಿಗೆ ಹೊಸತನ ಕೊಡಬೇಕೆಂದು ಯೋಜನೆ ಹಾಕಲಾಗಿದೆ. ಯುವ ರೈತ ಬಂದಿದ್ದು ಖುಷಿ ತರಿಸಿದೆ. ಕಥೆಯಲ್ಲಿ ರೈತರ ಮಕ್ಕಳು ಪೋಷಕರನ್ನು ಯಾವ ರೀತಿ ಅಸಡ್ಡೆಯಿಂದ ಕಾಣುತ್ತಾರೆ ಎಂಬುದು ಬರುತ್ತದೆ. ಹೆಚ್ಚು ಭಾಗ ಬೆಂಗಳೂರು, ಉಳಿದಂತೆ ಕೇರಳದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗುವುದು.

ಶೇಕಡ 10ರಷ್ಟು ಗ್ರಾಫಿಕ್ಸ್ ಇರುತ್ತದೆ. ಸಿದ್ದಿ ಸಂಗೀತ, ಟಾಲಿವುಡ್‌ದಲ್ಲಿ ಹೆಸರು ಮಾಡಿರುವ ಹಿರಿಯ ಛಾಯಾಗ್ರಾಹಕ ಪ್ರಸಾದ್ ಪುಲಿಚರ್ಲ ನಮ್ಮ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಕ್ರಿಸ್‌ಮಸ್ ವೇಳೆಗೆ ಜನರಿಗೆ ತೋರಿಸುವ ಇರಾದೆ ಇದೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಹಾಗೂ ಮಲೆಯಾಳಂ ಭಾಷೆ ಹೀಗೆ ಪ್ಯಾನ್ ಇಂಡಿಯ ಮಟ್ಟದಲ್ಲಿ ಬರಲಿದೆ ಎಂದು ತಿಳಿಸಿದರು.

ಜೆನ್ ಮೂಲಕ ಹಲವು ಪ್ರತಿಭೆಗಳಿಗೆ ವೇದಿಕೆ ಸೃಷ್ಟಿಸುತ್ತಿದೆ. ವರ್ಷಕ್ಕೆ ಹತ್ತು ಚಿತ್ರಗಳನ್ನು ತಯಾರು ಮಾಡುತ್ತಿದ್ದು, ಇಂತಹವರಿಗೆ ಅವಕಾಶ ಮಾಡಿ ಕೊಡಲಾಗುವುದು. ಮುಂದಿನ ದಿನಗಳಲ್ಲಿ ಸ್ಯಾಟಲೈಟ್ ಚಾನಲ್, ಫ್ಯಾಷನ್ ಶೋ, ಡಿಜಿಟಲ್ ಸೇವೆ ಶುರು ಮಾಡಲಾಗುವುದು. ಹೊಸಬರು ಜೆನ್ ವೆಬ್‌ಸೈಟ್ ಮೂಲಕ ವೇದಿಕೆಯನ್ನು ಸೃಷ್ಟಿಸಿಕೊಳ್ಳಬಹುದು. ನಮ್ಮ ಸಂಸ್ಥೆಯಲ್ಲಿ ಗುರುತಿಸಿಕೊಂಡಿರುವ ಕೀರ್ತಿ ಅವರಿಗೆ ಹೊಸ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲು ಅವಕಾಶ ಮಾಡಿಕೊಡಲಾಗುತ್ತಿದೆ. ಮಾಧ್ಯಮದ ಸಹಕಾರಬೇಕು ಎಂದು ಅವರು ಕೋರಿದರು.

ಚಿತ್ರದಲ್ಲಿ ಸುಪ್ರಿಂ ಸ್ಟಾರ್ ರಾಜೀವ್‌ರಾಥೋಡ್ ನಾಯಕ. ದಿಯಾ, ಮಾನಸಗೌಡ ನಾಯಕಿಯರು. ಬೇಬಿ ಆರಾಧ್ಯ. ಇವರೆಲ್ಲರೂ ಪಾತ್ರದ ಪರಿಚಯ ಮಾಡಿಕೊಂಡರು. ಖಳನಾಗಿ ರಾಬರ್ಟ್ ಉಳಿದಂತೆ ಅವಿನಾಶ್, ಶ್ರೀಧರ್, ದುಬೈ ರಫೀಕ್, ಮಂಜೇಶ್‌ಗೌಡ, ಸಹನ, ಭುವನ, ಮಾಧುರಿರೆಡ್ಡಿ, ಆಶಾ, ಭಾವನಾ, ಸಮೃದ್ದಿ, ಶೌರ್ಯ,ಅರುಣ್, ಮಮತ ಹಾಗೂ ಮುಂತಾದವರು ನಟಿಸುತ್ತಿದ್ದಾರೆ.

ಇದನ್ನೂ ಓದಿ: Milk Price: ನಂದಿನಿ ಹಾಲು ದರ ಏರಿಕೆ ಶಾಕ್‌; ಅರ್ಧ ಲೀಟರ್‌ಗೂ ₹2, ಒಂದು ಲೀಟರ್‌ಗೂ ₹2 ಬೆಲೆ ಏರಿಕೆ!

ನಂತರ ರಾತ್ರಿ ನಡೆದ ರ‍್ಯಾಂಪ್ ವಾಕ್‌ದಲ್ಲಿ ಸಂಸ್ಥೆಯ ಪ್ರೊಮೋ, ಟೈಟಲ್ ಅನಾವರಣಗೊಂಡಿತು. ತರುವಾಯ ಸಿನಿಮಾದ ಕಲಾವಿದೆಯರು, ಮಾಡೆಲ್‌ಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಇಂತಹ ಕಾರ್ಯಕ್ರಮಗಳನ್ನು ಮುಂದೆಯೂ ಹಮ್ಮಿಕೊಳ್ಳಲಾಗುವುದೆಂದು ಶಿವಪೂರ್ಣ ಮಾಹಿತಿ ಹಂಚಿಕೊಂಡರು.

Continue Reading
Advertisement
Karnataka Milk Federation
ಪ್ರಮುಖ ಸುದ್ದಿ9 mins ago

ವಿಸ್ತಾರ ಸಂಪಾದಕೀಯ: ಹಾಲು ದರ ಏರಿಕೆ ಬಳಕೆದಾರನಿಗೆ ಹೊರೆಯಾಗದಿರಲಿ

Women's Asia Cup
ಪ್ರಮುಖ ಸುದ್ದಿ6 hours ago

Women’s Asia Cup 2024 : ಮಹಿಳೆಯರ ಏಷ್ಯಾ ಕಪ್​ ಕ್ರಿಕೆಟ್​ನ ವೇಳಾಪಟ್ಟಿ ಬಿಡುಗಡೆ, ಜುಲೈ 19ಕ್ಕೆ ಭಾರತ- ಪಾಕ್ ಪಂದ್ಯ

minister mb patil visit japan and discuss about investment in Karnataka
ಕರ್ನಾಟಕ6 hours ago

Foreign Investment: 100 ಕೋಟಿ ರೂ. ವೆಚ್ಚದ ತ್ಯಾಜ್ಯ ನೀರು ನಿರ್ವಹಣಾ ಉಪಕರಣಗಳ ತಯಾರಿಕಾ ಘಟಕ ಸ್ಥಾಪನೆಗೆ ಒಪ್ಪಂದ

Arvind Kejriwal
ಪ್ರಮುಖ ಸುದ್ದಿ6 hours ago

Arvind Kejriwal : ಜಾಮೀನು ಅರ್ಜಿ ವಿಚಾರಣೆಗೂ ಮುನ್ನ ಅರವಿಂದ್ ಕೇಜ್ರಿವಾಲ್ ಬಂಧಿಸಿದ ಸಿಬಿಐ

Kodagu News
ಕೊಡಗು6 hours ago

Kodagu News: ಕಳೆದುಕೊಂಡಿದ್ದ ಚಿನ್ನದ ನಾಣ್ಯ ವಾರಸುದಾರನ ಕೈ ಸೇರುವಂತೆ ಮಾಡಿದ ಪೊಲೀಸರು!

Lok Sabha Speaker
ಪ್ರಮುಖ ಸುದ್ದಿ7 hours ago

Lok Sabha Speaker : ಸ್ಪೀಕರ್​ ಚುನಾವಣೆಯಲ್ಲಿ ವೈಎಸ್​ಆರ್​ ಪಕ್ಷದಿಂದ ಬಿಜೆಪಿಗೆ ಬೆಂಬಲ

Rahul Gandhi
ಪ್ರಮುಖ ಸುದ್ದಿ7 hours ago

Rahul Gandhi : ಲೋಕ ಸಭೆಯಲ್ಲಿ ಪ್ರತಿ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಆಯ್ಕೆ

Ayodhya Ram Mandir
ಪ್ರಮುಖ ಸುದ್ದಿ8 hours ago

Ayodhya Ram Mandir : ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ‘ಟೆಂಪಲ್ ಮ್ಯೂಸಿಯಮ್​’; ಯೋಗಿ ಸಂಪುಟದ ಸಮ್ಮತಿ

Milk Price
ಪ್ರಮುಖ ಸುದ್ದಿ8 hours ago

Milk Price: ನಂದಿನಿ ಹಾಲಿನ ಹೊಸ ದರ ಹೇಗಿದೆ; ಯಾವುದಕ್ಕೆ ಎಷ್ಟು ಹೆಚ್ಚಳ?

Ayodhya Ram Mandir:
ಪ್ರಮುಖ ಸುದ್ದಿ8 hours ago

Ayodhya Ram Mandir : ರಾಮಮಂದಿರದ ಚಾವಣಿ ಸೋರುತ್ತಿಲ್ಲ; ನಿರ್ಮಾಣ ಸಮಿತಿ ಸ್ಪಷ್ಟನೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ1 day ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ4 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ5 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌