AFG vs BAN: ರೋಚಕ ಗೆಲುವು ಸಾಧಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟ ಆಫ್ಘನ್​; ಟೂರ್ನಿಯಿಂದ ಹೊರಬಿದ್ದ ಆಸೀಸ್​ - Vistara News

ಕ್ರೀಡೆ

AFG vs BAN: ರೋಚಕ ಗೆಲುವು ಸಾಧಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟ ಆಫ್ಘನ್​; ಟೂರ್ನಿಯಿಂದ ಹೊರಬಿದ್ದ ಆಸೀಸ್​

AFG vs BAN: ಆರಂಭಕಾರ ಲಿಟ್ಟನ್​ ದಾಸ್​ ಅಜೇಯ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಲು ಶಕ್ತಿ ಮೀರಿ ಪ್ರಯತ್ನಿಸಿದರು. ಆದರೆ ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್​ ಸಾಥ್​ ಸಿಗದ ಕಾರಣ ಪಂದ್ಯ ಸೋಲು ಕಂಡಿತು.

VISTARANEWS.COM


on

AFG vs BAN
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಿಂಗ್‌ಸ್ಟೌನ್ (ಸೇಂಟ್ ವಿನ್ಸೆಂಟ್): ಅತ್ಯಂತ ರೋಚಕವಾಗಿ ಸಾಗಿದ, ಪ್ರೇಕ್ಷಕರನ್ನು ಉಸಿರು ಬಿಗಿ ಹಿಡಿದು, ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಸಣ್ಣ ಮೊತ್ತದ ಮೇಲಾಟದಲ್ಲಿ ಕೊನೆಗೂ ಬಾಂಗ್ಲಾದೇಶ ವಿರುದ್ಧ ಅಫಘಾನಿಸ್ತಾನ 8 ರನ್​ ಅಂತರ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್​ ಪ್ರೇವೇಶಿಸಿದೆ. ಆಫ್ಘಾನ್ ಗೆಲುವಿನಿಂದ ಆಸ್ಟ್ರೇಲಿಯಾ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಒಂದೊಮ್ಮೆ ಬಾಂಗ್ಲಾ ಗೆಲ್ಲುತ್ತಿದ್ದರೆ ರನ್​ರೇಟ್​ ಆಧಾರದಲ್ಲಿ ಮುಂದಿದ್ದ ಆಸೀಸ್​ಗೆ ಸೆಮಿ ಟಿಕೆಟ್​ ಲಭಿಸುತ್ತಿತ್ತು.

ಹಲವು ಬಾರಿ ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಅಫಘಾನಿಸ್ತಾನ ರಹಮಾನುಲ್ಲಾ ಗುರ್ಬಾಜ್(43) ಅವರ ಏಕಾಂಗಿ ಬ್ಯಾಟಿಂಗ್​ ಹೋರಾಟದ ನೆರವಿನಿಂದ 5 ವಿಕೆಟ್​ಗೆ 115 ರನ್​ ಬಾರಿಸಿತು. ಬಾಂಗ್ಲಾ ಬ್ಯಾಟಿಂಗ್​ ಸರದಿಯ ವೇಳೆ ಹಲವು ಬಾರಿ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಅಂತಿಮವಾಗಿ ಒಂದು ಓವರ್​ ಕಡಿತಗೊಳಿಸಿ 19 ಓವರ್​ಗೆ 114 ರನ್​ ಗೆಲುವಿನ ಗುರಿ ನೀಡಲಾಯಿತು. ಈ ಮೊತ್ತವನ್ನು ಬಾಂಗ್ಲಾ ಒಂದು ಹಂತದವರೆಗೆ ಯಶಸ್ವಿಯಾಗಿ ಬೆನ್ನಟ್ಟಿಕೊಂಡು ಬಂದರೂ ಕೂಡ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 17.5 ಓವರ್​ನಲ್ಲಿ 105 ರನ್​ಗೆ ಸರ್ವಪತನ ಕಂಡಿತು.

ಕಳೆದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾಕ್ಕೆ ಸೋಲುಣಿಸುವ ಮೂಲಕ ಭಾರೀ ಸಂಚಲನ ಮೂಡಿಸಿದ್ದ ಅಫಫಾನಿಸ್ತಾದ ಇದೀಗ ಮೊದಲ ಬಾರಿಗೆ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದೆ. ಸೋಮವಾರ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತ ವಿರುದ್ಧ ಸೋಲು ಕಂಡ ಪರಿಣಾಮ ಆಫ್ಘಾನ್​ಗೆ ಸೆಮಿಫೈನಲ್​ ಪ್ರವೇಶಿಸಲು ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಸಾಕಿತ್ತು. ಅದರಂತೆ ಆಫ್ಘನ್​ ಈ ಪಂದ್ಯ ಗೆದ್ದು ಸೆಮಿಗೆ ಅರ್ಹತೆ ಪಡೆಯಿತು. ಜೂನ್​ 26ರಂದು ನಡೆಯುವ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಆಫ್ಘನ್​​ ತಂಡ ದಕ್ಷಿಣ ಆಫ್ರಿಕಾದ ಸವಾಲು ಎದುರಿಸಲಿದೆ.

ಇದನ್ನೂ ಓದಿ Rohit Sharma: ಬಾಬರ್​ ಅಜಂ ದಾಖಲೆ ಸರಿಗಟ್ಟಿದ ರೋಹಿತ್​ ಶರ್ಮ

ಲಿಟ್ಟನ್​ ದಾಸ್​ ಅರ್ಧಶತಕ ವ್ಯರ್ಥ

ಚೇಸಿಂಗ್​ ವೇಳೆ ಬಾಂಗ್ಲಾದೇಶ ಕೂಡ ಆಫ್ಘನ್​ ತಂಡದಂತೆ ನಾಟಕೀಯ ಕುಸಿತ ಕಂಡಿತು. ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಕೂಡ ತಂಡದ ಗೆಲುವಿಗಾಗಿ ಟೊಂಕ ಕಟ್ಟಿ ನಿಂತ ಆರಂಭಕಾರ ಲಿಟ್ಟನ್​ ದಾಸ್​ ಅಜೇಯ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಲು ಶಕ್ತಿ ಮೀರಿ ಪ್ರಯತ್ನಿಸಿದರು. ಆದರೆ ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್​ ಸಾಥ್​ ಸಿಗದ ಕಾರಣ ಪಂದ್ಯ ಸೋಲು ಕಂಡಿತು. ಆರಂಭಿಕನಾಗಿ ಕಣಕ್ಕಿಳಿದ ದಾಸ್​ ಕೊನೆಯ ತನಕ ಬ್ಯಾಟಿಂಗ್​ ನಡೆಸಿ ಅಜೇಯ 54 ರನ್​ ಬಾರಿಸಿದರು. ಪಂದ್ಯ ಸೋತ ಕಾರಣ ಇವರ ಈ ಬ್ಯಾಟಿಂಗ್​ ಹೋರಾಟ ವ್ಯರ್ಥಗೊಂಡಿತು. ಸಣ್ಣ ಮೊತ್ತ ಬಾರಿಸಿದರೂ ಕೂಡ ಆಫ್ಘನ್​ ಬೌಲರ್​ಗಳು ಶಕ್ತಿ ಮೀರಿ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ನಾಯಕ ರಶೀದ್​ ಖಾನ್​ ಮತ್ತು ನವೀನ್​ ಉಲ್​ ಹಕ್​ ತಲಾ 4 ವಿಕೆಟ್​ ಬೇಟೆಯಾಡಿ ಬಾಂಗ್ಲಾ ಬ್ಯಾಟರ್​ಗಳ ಸೊಕ್ಕಡಗಿಸಿದರು.

ಮೊದಲು ಬ್ಯಾಟಿಂಗ್​ ನಡೆಸಿದ ಅಫಘಾನಿಸ್ತಾನ ಪರ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಹೊರತುಪಡಿಸಿ ಉಳಿದ ಯಾವ ಬ್ಯಾಟರ್​ಗಳು ಕೂಡ ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ಯಶಸ್ಸು ಕಾಣಲಿಲ್ಲ. ಇಬ್ರಾಹಿಂ ಜದ್ರಾನ್(18),ಅಜ್ಮತುಲ್ಲಾ(10), ನಬಿ(1) ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು. ರಹಮಾನುಲ್ಲಾ ಗುರ್ಬಾಜ್ 3 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 43 ರನ್​ ಬಾರಿಸಿದರು. ಇವರ ಈ ಬ್ಯಾಟಿಂಗ್​ ಹೋರಾಟದಿಂದ ತಂಡ 100ರ ಗಡಿ ದಾಟಿತು. ಬಾಂಗ್ಲಾ ಪರ ರಿಶಾದ್ ಹೊಸೈನ್ 26 ರನ್​ಗೆ 3 ವಿಕೆಟ್​ ಕಿತ್ತು ಮಿಂಚಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

GR vishwanath : ಬೆಂಗಳೂರು ನಗರ ವಿವಿಯಿಂದ ಕ್ರಿಕೆಟ್ ದಿಗ್ಗಜ ಗುಂಡಪ್ಪ ವಿಶ್ವನಾಥ್​ಗೆ ಗೌರವ ಡಾಕ್ಟರೇಟ್

GR vishwanath : ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಮೂರನೇ ವಾರ್ಷಿಕ ಘಟಿಕೋತ್ಸವ ಜೂನ್ 29 ಶನಿವಾರ ಬೆಳಿಗ್ಗೆ 11.30 ಕ್ಕೆ ನಗರದ ಅರಮನೆ ರಸ್ತೆಯ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜರುಗಲಿದೆ. ರಾಜ್ಯಪಾಲ ಹಾಗೂ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ.

VISTARANEWS.COM


on

GR Vishwnath
Koo

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಮೂರನೇ ಘಟಿಕೋತ್ಸವದಲ್ಲಿ ಕ್ರಿಕೆಟ್ ದಿಗ್ಗಜ ಗುಂಡಪ್ಪ ವಿಶ್ವನಾಥ್ ರಿಗೆ (GR vishwanath) ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ ಎಂದು ಕುಲಪತಿ ಲಿಂಗರಾಜ ಗಾಂಧಿ ತಿಳಿಸಿದರು. ಸೆಂಟ್ರಲ್ ಕಾಲೇಜು ಆವರಣದ ಜ್ಞಾನ ಜ್ಯೋತಿ ಸಂಭಾಂಗಣದ ಬೋರ್ಡ್ ರೂಮ್ ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಮೂರನೇ ಘಟಿಕೋತ್ಸವ ಜೂನ್ 29 ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಇಬ್ಬರಿಗೆ ನೀಡಲಾಗುತ್ತಿದೆ. ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಸಾಧನೆ ಮಾಡಿರುವ ಗೋಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಆರ್. ಜಯರಾಮ್ ಒಬ್ಬರಾದರೆ ಮತ್ತೊಬ್ಬರು ಖ್ಯಾತ ಮಾಜಿ ಕ್ರಿಕೆಟ್ ಆಟಗಾರ ಜಿ.ಆರ್. ವಿಶ್ವನಾಥ್ ಆಗಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಮೂರನೇ ವಾರ್ಷಿಕ ಘಟಿಕೋತ್ಸವ ಜೂನ್ 29 ಶನಿವಾರ ಬೆಳಿಗ್ಗೆ 11.30 ಕ್ಕೆ ನಗರದ ಅರಮನೆ ರಸ್ತೆಯ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜರುಗಲಿದೆ. ರಾಜ್ಯಪಾಲ ಹಾಗೂ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮ ಕುಲಾಧಿಪತಿ ಡಾ. ಎಂ. ಸಿ. ಸುಧಾಕರ್ ಮತ್ತು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್​ ಎಜುಕೇಶನ್ ಅಧ್ಯಕ್ಷ ಪ್ರೊ. ಟಿ. ಜಿ. ಸೀತಾರಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಯುನಿಫೈಡ್ ಯೂನಿವರ್ಸಿಟಿ ಕಾಲೇಜು ಮ್ಯಾನೇಜ್ಮೆಂಟ್ ಸಿಸ್ಟಮ್ ತಂತ್ರಾಂಶದ ಪ್ರಕಾರ ಸ್ನಾತಕ ಹಾಗೂ ಸ್ಟಾಂಡ್ ಅಲೋನ್ ಕೋರ್ಸುಗಳ ಪ್ರವೇಶ ಪ್ರಕ್ರಿಯೆ ಹಾಗೂ ಪರೀಕ್ಷಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ವಹಿಸಲಾಗುತ್ತಿದೆ. ಅಂತಹ ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡುತ್ತಿರುವ ರಾಜ್ಯ ಪ್ರಥಮ ವಿಶ್ವವಿದ್ಯಾನಿಲಯ ನಮ್ಮದಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

63 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ಈ ಘಟಿಕೋತ್ಸವದಲ್ಲಿ ಒಟ್ಟು 63 ವಿದ್ಯಾರ್ಥಿಗಳು ಪ್ರಥಮ ರಾಂಕ್ ಪ್ರಮಾಣ ಪತ್ರಗಳನ್ನು, ಚಿನ್ನದ ಪದಕ ಮತ್ತು ನಗದು ಬಹುಮಾನವನ್ನು ಸ್ವೀಕರಿಸಲಿದ್ದಾರೆ. ಈ ರ್ಯಾಂಕ್​ ವಿಜೇತರಲ್ಲಿ 40 ವಿದ್ಯಾರ್ಥಿಗಳು ಬೆಂಗಳೂರು ನಗರ ವಿಶ್ವವಿದ್ಯಾನಿಲಯದಿಂದ ಸ್ಥಾಪಿತ ಚಿನ್ನದ ಪದಕ ಮತ್ತು ನಗದು ಬಹುಮಾನಗಳನ್ನು ಸ್ವೀಕರಿಸಲಿದ್ದಾರೆ. ವಿವಿಧ ದಾನಿಗಳು ಸ್ಥಾಪಿಸಿರುವ ಒಟ್ಟು 15 ಚಿನ್ನದ ಪದಕಗಳನ್ನು ಸಹ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ವೀಕರಿಸಲಿದ್ದಾರೆ. ಬಿ.ಎ. ಮ್ಯೂಸಿಕ್, ಟೂರಿಸಂ ಮ್ಯಾನೇಜ್ಮೆಂಟ್ ವಿಭಾಗಗಳಲ್ಲಿ ಅರ್ಹ ವಿದ್ಯಾರ್ಥಿಗಳು ಇಲ್ಲದ ಕಾರಣ ಈ ವರ್ಷ ಎರಡು ಚಿನ್ನದ ಪದಕ ವಿತರಿಸಲಾಗುತ್ತಿಲ್ಲ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​​ ಸ್ಮರಣೆಗಾಗಿ ಜೆಎಸ್​ಡಬ್ಲ್ಯುನಿಂದ ಪ್ಯಾರಿಸ್​ನಲ್ಲಿ ವಿಶೇಷ ಪ್ರದರ್ಶನ

ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಸ್ಥಾಪಿಸಿದ 35 ಚಿನ್ನದ ಪದಕ ಮತ್ತು ನಗದು ಬಹುಮಾನಗಳನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಬಿ.ಎ., ಬಿ.ಎಸ್ಸಿ, ಬಿ.ಕಾಂ., ಬಿ.ಬಿ.ಎ. ಬಿ.ಇಡಿ., ಕೋರ್ಸುಗಳಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ನೀಡಲಾಗುವುದು ಎಂದು ಲಿಂಗರಾಜ ಗಾಂಧಿ ಹೇಳಿದರು.

Continue Reading

ಕ್ರೀಡೆ

IND vs SA: ಗೆದ್ದು ಬಾ ಭಾರತ; ನಾಳೆ ಟಿ20 ವಿಶ್ವಕಪ್​ ಫೈನಲ್​

IND vs SA: ಪಂತ್​ ಪ್ರಯೋಗಾತ್ಮಕ ಶೈಲಿಯ ಬ್ಯಾಟಿಂಗ್​ ನಡೆಸುವ ಬದಲು ತಮ್ಮ ಮೂಲ ಸ್ವರೂಪದ ಶೈಲಿಯಲ್ಲೇ ಆಡಿದರೆ ಉತ್ತಮ. ಸೂರ್ಯಕುಮಾರ್​ ಮತ್ತು ಹಾರ್ದಿಕ್​ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್​ ಮೂಲಕ ತಂಡಕ್ಕೆ ನೆರವಾಗುತ್ತಿದ್ದರೆ.

VISTARANEWS.COM


on

Koo

ಬಾರ್ಬಡೋಸ್​: ಚುಟುಕು ಮಾದರಿಯ ಫೈನಲ್(South Africa vs India Final)​ ಕಾದಾಟಕ್ಕೆ ವೇದಿಕೆ ಸಿದ್ದಗೊಂಡಿದೆ. ನಾಳೆ ನಡೆಯುವ ಫೈನಲ್(T20 World Cup 2024)​ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA) ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಕೂಟದ ಅಜೇಯ ತಂಡಗಳ ನಡುವಣ ಈ ಪ್ರಶಸ್ತಿ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.

ಭಯಮುಕ್ತರಾಗಿ ಆಡಬೇಕು


ಭಾರತ ತಂಡದ ದೊಡ್ಡ ಸಮಸ್ಯೆ ಎಂದರೆ ಲೀಗ್, ಸೆಮಿಫೈನಲ್​ನಲ್ಲಿ ಎಷ್ಟೇ ಉತ್ತಮ ಪ್ರದರ್ಶನ ತೋರಿದರೂ ಕೂಡ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಂಪೂರ್ಣ ನರ್ವಸ್​ ಆಗಿ ಆಡುವುದು. ಒಂದು ವಿಕೆಟ್​ ಬಿದ್ದರೆ ಸಾಕು ಬಳಿಕ ಕ್ರೀಸ್​ಗಿಳಿವ ಬ್ಯಾಟರ್​ಗಳು ಭಯದಿಂದಲೇ ಆಡಲು ಮುಂದಾಗಿ ಸತತವಾಗಿ ವಿಕೆಟ್​ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುತ್ತಾರೆ. ಕಳೆದ ಏಕದಿನ ವಿಶ್ವಕಪ್​ ಫೈನಲ್​, ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಇದಕ್ಕೆ ಉತ್ತಮ ನಿದರ್ಶನ. ಹೀಗಾಗಿ ನಾಳೆ ನಡೆಯುವ ಫೈನಲ್​ ಪಂದ್ಯದಲ್ಲಿ ಬ್ಯಾಟರ್​ಗಳು ಮತ್ತು ಬೌಲರ್​ಗಳು ವಿಚಲಿತರಾಗದೆ ಆಡಬೇಕು.

ವಿರಾಟ್​ ಕೊಹ್ಲಿ ಅವರು ಸತತವಾಗಿ ಬ್ಯಾಟಿಂಗ್​ ವೈಫಲ್ಯ ಕಂಡರೂ ಕೂಡ ಫೈನಲ್​ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ನಡೆಸುತ್ತಾರೆ ಎಂದು ನಾಯಕ ರೋಹಿತ್​ ಶರ್ಮ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜತೆಗೆ ಕೋಚ್​ ದ್ರಾವಿಡ್​ ಕೂಡ ಕೊಹ್ಲಿಗೆ ವಿಶೇಷ ಸ್ಫೂರ್ತಿ ತುಂಬುವ ಮೂಲಕ ಫೈನಲ್ ಪಂದ್ಯಕ್ಕೆ ಸಿದ್ದಪಡಿಸಿದ್ದಾರೆ. ಶಿವಂ ದುಬೆ ಮಾತ್ರ ಬ್ಯಾಟಿಂಗ್​ ಸುಧಾರಣೆ ಕಾಣುವಂತೆ ತೋರುತ್ತಿಲ್ಲ. ಹೀಗಾಗಿ ಅವರನ್ನು ಕೈ ಬಿಟ್ಟು ಯಶಸ್ವಿ ಜೈಸ್ವಾಲ್​ ಅವರನ್ನು ಆಡಿಸಿದರೆ ಉತ್ತಮ.

ಒಂದು ಬದಲಾವಣೆ ಸಾಧ್ಯತೆ

ಆರಂಭಿಕ ಆಟಗಾರನಾಗಿರುವ ಜೈಸ್ವಾಲ್​ ಅವರು ರೋಹಿತ್ ಜತೆ ಇನಿಂಗ್ಸ್​ ಆರಂಭಿಸಿದರೆ ಕೊಹ್ಲಿ ತಮ್ಮ ಎಂದಿನ ವನ್​ಡೌನ್​ ಕ್ರಮಾಂಕದಲ್ಲಿ ಆಡಬಹುದು. ಬೌಲಿಂಗ್​ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸುವ ಸಾಧ್ಯತೆ ಇಲ್ಲ. ಮೂರು ಸ್ಪಿನ್ನರ್​ ಮತ್ತು 2 ವೇಗಿಗಳ ಕಾಂಬಿನೇಷನ್​ನಲ್ಲಿಯೇ ಆಡಬಹುದು. ಪಂತ್​ ಪ್ರಯೋಗಾತ್ಮಕ ಶೈಲಿಯ ಬ್ಯಾಟಿಂಗ್​ ನಡೆಸುವ ಬದಲು ತಮ್ಮ ಮೂಲ ಸ್ವರೂಪದ ಶೈಲಿಯಲ್ಲೇ ಆಡಿದರೆ ಉತ್ತಮ. ಸೂರ್ಯಕುಮಾರ್​ ಮತ್ತು ಹಾರ್ದಿಕ್​ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್​ ಮೂಲಕ ತಂಡಕ್ಕೆ ನೆರವಾಗುತ್ತಿದ್ದರೆ. ಫೈನಲ್​ನಲ್ಲಿಯೂ ಈ ಪ್ರದರ್ಶನ ಕಂಡುಬಂದರೆ ಉತ್ತಮ. ಅಕ್ಷರ್​ ಪಟೇಲ್ ತಮ್ಮ ಆಲ್​ರೌಂಡರ್​ ಸ್ಥಾನಕ್ಕೆ ತಕ್ಕ ಪ್ರದರ್ಶನ ತೋರುತ್ತಿದ್ದಾರೆ. ಫೀಲ್ಡಿಂಗ್​, ಬ್ಯಾಟಿಂಗ್​ ಮತ್ತು ಬೌಲಿಂಗ್​ ಎಲ್ಲ ವಿಭಾಗದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುತ್ತಿದ್ದಾರೆ.​

ಇದನ್ನೂ ಓದಿ IND Vs SA T20 WC Final: ಫೈನಲ್​ ಪಂದ್ಯಕ್ಕೂ ಮಳೆ ಭೀತಿ; ಪಂದ್ಯ ರದ್ದಾದರೆ ವಿಜೇತರ ನಿರ್ಧಾರ ಹೇಗೆ?

ದಕ್ಷಿಣ ಆಫ್ರಿಕಾ ಕೂಡ ಬಲಿಷ್ಠ


ದಕ್ಷಿಣ ಆಫ್ರಿಕಾ ಕೂಡ ಬ್ಯಾಟಿಂಗ್​, ಬೌಲಿಂಗ್​ ಮತ್ತು ಫೀಲ್ಡಿಂಗ್​ ವಿಭಾಗದಲ್ಲಿ ವೈವಿಧ್ಯಮಯವಾಗಿದೆ. ಆದರೆ, ಲಕ್​ ಕೈ ಹಿಡಿಯುತ್ತಾ ಎನ್ನುವುದು ಇಲ್ಲಿ ಮುಖ್ಯ. ಡಿ ಕಾಕ್​, ಮಾರ್ಕ್ರಮ್​, ಕ್ಲಾಸೆನ್​, ಮಿಲ್ಲರ್​ ಸಿಡಿದು ನಿಂತರೆ ಕಷ್ಟ. ಬೌಲಿಂಗ್​ನಲ್ಲಿ ಮಾರ್ಕೊ ಜಾನ್ಸೆನ್​, ಕಗಿಸೊ ರಬಾಡ, ಶಮ್ಸಿ ಉತ್ತಮ ಬೌಲಿಂಗ್​ ಲಯದಲ್ಲಿದ್ದಾರೆ.

ಸಂಭಾವ್ಯ ತಂಡ


ದಕ್ಷಿಣ ಆಫ್ರಿಕಾ:
ಕ್ವಿಂಟನ್ ಡಿ ಕಾಕ್ (ವಿಕೀ), ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಮ್​ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಜೆ, ತಬ್ರೈಜ್ ಶಮ್ಸಿ

ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೀ), ಸೂರ್ಯಕುಮಾರ್ ಯಾದವ್, ಶಿವಂ ದುಬೆ/ ಯಶಸ್ವಿ ಜೈಸ್ವಾಲ್​, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್​ಪ್ರೀತ್​ ಬುಮ್ರಾ.

Continue Reading

ಕ್ರೀಡೆ

Paris Olympics 2024 : ಒಲಿಂಪಿಕ್ಸ್​​ ಸ್ಮರಣೆಗಾಗಿ ಜೆಎಸ್​ಡಬ್ಲ್ಯುನಿಂದ ಪ್ಯಾರಿಸ್​ನಲ್ಲಿ ವಿಶೇಷ ಪ್ರದರ್ಶನ

Paris Olympics 2024 :ಜೆಎಸ್‌ಡಬ್ಲ್ಯೂ ಫೌಂಡೇಶನ್‌ ನ ಅಧ್ಯಕ್ಷೆ ಸಂಗೀತಾ ಜಿಂದಾಲ್ ಮತ್ತು ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಸಂಸ್ಥಾಪಕ ಪಾರ್ಥ್ ಜಿಂದಾಲ್, ಐಓಸಿ ಅಧ್ಯಕ್ಷ ಶ್ರೀ ಥಾಮಸ್ ಬಾಚ್, ಫ್ರಾನ್ಸ್ ನಲ್ಲಿರುವ ಭಾರತದ ರಾಯಭಾರಿ ಜಾವೇದ್ ಅಶ್ರಫ್ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.

VISTARANEWS.COM


on

Paris olympics 2024
Koo


ಬೆಂಗಳೂರು : ಒಲಿಂಪಿಕ್ ಆಂದೋಲನದ ಸಂಸ್ಥಾಪಕ ಪಿಯರೆ ಡಿ ಕೂಬರ್ಟಿನ್ ಅವರ ಬದುಕನ್ನು ಸಂಭ್ರಮಿಸುವ ಉದ್ದೇಶದಿಂದ ಮತ್ತು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ದೇಶದ 100 ವರ್ಷಗಳ ಭಾಗವಹಿಸುವಿಕೆಯನ್ನು ಸ್ಮರಿಸುವ ಸಲುವಾಗಿ ಈ ಬಾರಿಯ ಒಲಿಂಪಿಕ್ಸ್ (Paris Olympics 2024) ಆತಿಥೇಯ ನಗರವಾದ ಪ್ಯಾರಿಸ್ ನಲ್ಲಿ ಜೆಎಸ್‌ಡಬ್ಲ್ಯೂ ಗ್ರೂಪ್ ಪ್ರದರ್ಶನವನ್ನು ಆರಂಭಿಸಿದೆ. ಇದು ಒಲಿಂಪಿಕ್ಸ್ ಮುಕ್ತಾಯದ ತನಕ ನಡೆಯಲಿದ್ದು ಭಾರತದ ಒಲಿಂಪಿಕ್ಸ್ ಪರಂಪರೆಯ ನಾನಾ ಕ್ಷಣಗಳನ್ನು ವೀಕ್ಷಿಸಲು ಅವಕಾಶವಿದೆ.

ಜೆಎಸ್‌ಡಬ್ಲ್ಯೂ ಫೌಂಡೇಶನ್‌ ನ ಅಧ್ಯಕ್ಷೆ ಸಂಗೀತಾ ಜಿಂದಾಲ್ ಮತ್ತು ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಸಂಸ್ಥಾಪಕ ಪಾರ್ಥ್ ಜಿಂದಾಲ್, ಐಓಸಿ ಅಧ್ಯಕ್ಷ ಶ್ರೀ ಥಾಮಸ್ ಬಾಚ್, ಫ್ರಾನ್ಸ್ ನಲ್ಲಿರುವ ಭಾರತದ ರಾಯಭಾರಿ ಜಾವೇದ್ ಅಶ್ರಫ್ ಮತ್ತು ಪಿಯರೆ ಡಿ ಕೂಬರ್ಟಿನ್ ಫ್ಯಾಮಿಲಿ ಅಸೋಸಿಯೇಶನ್‌ ನ ಅಧ್ಯಕ್ಷರಾದ ಅಲೆಕ್ಸಾಂಡ್ರಾ ಡಿ ನವಸೆಲ್ಲೆ ಅವರು ಪ್ಯಾರಿಸ್‌ನ 7ನೇ ಅರೋಂಡಿಸ್ಮೆಂಟ್‌ನ ಟೌನ್ ಹಾಲ್‌ ನಲ್ಲಿ ಆಯೋಜಿಸಲಾಗಿರುವ ಎಕ್ಸಿಬಿಷನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಪ್ರದರ್ಶನವು ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಪ್ಯಾರಿಸ್ 2024ರ ಬೇಸಿಗೆ ಪ್ಯಾರಾಲಿಂಪಿಕ್ ಅಂತ್ಯದವರೆಗೆ ನಡೆಯಲಿದೆ.

ಜೆಎಸ್‌ಡಬ್ಲ್ಯೂ ಫೌಂಡೇಶನ್‌ನ ಅಧ್ಯಕ್ಷೆ ಶ್ರೀಮತಿ ಸಂಗೀತಾ ಜಿಂದಾಲ್, “ಪ್ಯಾರಿಸ್‌ ನಲ್ಲಿ ನಡೆಯುತ್ತಿರುವ ಜೀನಿಯಸ್ ಆಫ್ ಸ್ಪೋರ್ಟ್ ಎಕ್ಸಿಬಿಷನ್ ನಲ್ಲಿ ‘ ಭಾರತದ 100 ವರ್ಷಗಳ ಭಾಗವಹಿಸುವಿಕೆ”ಯನ್ನು ಸ್ಮರಿಸುವ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಲು ಗೆ ಸಂತೋಷವಾಗಿದೆ. ಈ ವಿಶಿಷ್ಟ ಪ್ರದರ್ಶನದ ಮೂಲಕ ನಾವು ಪಿಯರೆ ಡಿ ಕೂಬರ್ಟಿನ್ ಅವರ ಬದುಕು ಹಾಗೂ ಪರಂಪರೆಯನ್ನು ಮತ್ತು ಭಾರತದ ಗಮನಾರ್ಹವಾದ 100 ವರ್ಷಗಳ ಒಲಿಂಪಿಕ್ ಪ್ರಯಾಣವನ್ನು ಆಚರಿಸುತ್ತಿದ್ದೇವೆ. ಕ್ರೀಡೆಯು ಜಾಗತಿಕ ಎಲ್ಲಾ ಗಡಿಗಳನ್ನು ಮೀರಿ ಶಾಂತಿ ಹಾಗೂ ಸ್ನೇಹದ ಮೂಲಕ ಜನರನ್ನು ಒಟ್ಟುಗೂಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಪಿಯರೆ ಡಿ ಕೂಬರ್ಟಿನ್ ಅವರ ದೂರದೃಷ್ಟಿ ಮತ್ತು ನಂಬಿಕೆಯನ್ನು ಗೌರವಿಸುತ್ತಿದ್ದೇವೆ. 2024ರ ಒಲಿಂಪಿಕ್ಸ್ ಕ್ರೀಡಾಕೂಟವು ಜೆಎಸ್‌ಡಬ್ಲ್ಯೂ ಗ್ರೂಪ್‌ ಗೆ ಬಹಳ ಪ್ರಮುಖ ಮೈಲಿಗಲ್ಲಾಗಿದೆ. ಈ ಪ್ರದರ್ಶನವನ್ನು ಆಯೋಜಿಸಲು ಮತ್ತು ಪ್ಯಾರಿಸ್‌ ನಲ್ಲಿ ಭಾರತದ ಅಥ್ಲೀಟ್​ಗಳ ನಿಯೋಗವನ್ನು ಬೆಂಬಲಿಸಲು ನಾವು ಹೆಮ್ಮೆಪಡುತ್ತೇವೆ. ನಾವು ಭಾರತದಲ್ಲಿ ಕ್ರೀಡಾ ಸಂಸ್ಕೃತಿ ಮತ್ತು ಪ್ರತಿಭೆಯನ್ನು ಬೆಳೆಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ತೋರಿಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Paris Olympics 2024 : ರಿಲಯನ್ಸ್ ಫೌಂಡೇಷನ್ ಸಹಯೋಗದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ “ಇಂಡಿಯಾ ಹೌಸ್”

ಪಿಯರೆ ಡಿ ಕೂಬರ್ಟಿನ್ ಫ್ಯಾಮಿಲಿ ಅಸೋಸಿಯೇಷನ್‌ ನ ಸಹಯೋಗದೊಂದಿಗೆ ನಡೆಯುತ್ತಿರುವ ಪ್ರದರ್ಶನವು ಕಳೆದ ಶತಮಾನದ ಭಾರತದ ಒಲಿಂಪಿಕ್ ಪ್ರಯಾಣದ ವಿವರಗಳನ್ನು ಒದಗಿಸುತ್ತದೆ. ಭಾರತವು ಒಲಿಂಪಿಕ್ಸ್ ನಲ್ಲಿ ಈ ಹಿಂದೆ ಅನುಭವಿಸಿದ ಯಶಸ್ಸು ಮತ್ತು ಭವಿಷ್ಯದ ಕುರಿತು ಹೊಂದಿರುವ ದೂರದೃಷ್ಟಿಯ ಚಿತ್ರಗಳನ್ನು ಈ ಎಕ್ಸಿಬಿಷನ್ ನಲ್ಲಿ ವೀಕ್ಷಿಸಬಹುದು

ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್‌ ನ ಸಂಸ್ಥಾಪಕ ಪಾರ್ಥ್ ಜಿಂದಾಲ್ ಮಾತನಾಡಿ “ ಒಲಿಂಪಿಕ್ಸ್​​ನಲ್ಲಿ ಭಾರತದ ಸಾಧನೆ ಕುರಿತು ವಿಶೇಷ ಪ್ರದರ್ಶನ ಆಯೋಜಿಸಲು ಪಿಯರೆ ಡಿ ಕೂಬರ್ಟಿನ್ ಕುಟುಂಬದೊಂದಿಗೆ ಸಹಯೋಗ ಮಾಡಿಕೊಂಡಿರುವುದಕ್ಕೆ ನಮಗೆ ಹೆಮ್ಮೆಯಿದೆ ನಾವು ವಿಶ್ವದ ಶ್ರೇಷ್ಠ ಕ್ರೀಡಾಕೂಟದ ಸನಿಹದಲ್ಲಿದ್ದೇವೆ ಮತ್ತು ಈ ಸಂದರ್ಭದಲ್ಲಿ ಒಲಿಂಪಿಕ್ಸ್ ನಡೆಯುವ ಪ್ಯಾರಿಸ್ ನಗರದಲ್ಲಿ ಗಮನ ಸೆಳೆಯುವಂಥದ್ದೇನೋ ಮಾಡಬೇಕೆಂಬುದು ಜೆಎಸ್‌ಡಬ್ಲ್ಯೂ ನಲ್ಲಿನ ನಮ್ಮ ಬಯಕೆಯಾಗಿತ್ತು” ಎಂದು ಹೇಳಿದರು.

ಐಒಸಿ ಅಧ್ಯಕ್ಷ ಶ್ರೀ ಥಾಮಸ್ ಬಾಕ್​ ಮಾತನಾಡಿ “ಈ ಪ್ರದರ್ಶನ ಆಯೋಜಿಸಿದ್ದಕ್ಕಾಗಿ ಧನ್ಯವಾದಗಳು. ಈ ಪ್ರದರ್ಶನದಿಂದ ಸಾರ್ವಜನಿಕರು ಬೆರಗುಗೊಳಿಸುವ ಮತ್ತು ಬಹುಮುಖಿ ವ್ಯಕ್ತಿತ್ವದ ವ್ಯಕ್ತಿಯ ಕುರಿತು ತಿಳಿಯಲು ಸಾಧ್ಯವಾಗುತ್ತದೆ. ಪಿಯರೆ ಡಿ ಕೂಬರ್ಟಿನ್ ಅವರಂತಹ ಅದ್ಭುತ ವ್ಯಕ್ತಿಯ ಬಗ್ಗೆ ಫ್ರೆಂಚ್ ಜನರು ಹೆಮ್ಮೆ ಪಡುತ್ತೇವೆ” ಎಂದು ಹೇಳಿದರು.

Continue Reading

ಕ್ರಿಕೆಟ್

SHAFALI VERMA: 40 ವರ್ಷದ ಟೆಸ್ಟ್​ ದಾಖಲೆ ಮುರಿದ ಭಾರತದ ಶಫಾಲಿ ವರ್ಮ

SHAFALI VERMA: 197 ಎಸೆತ ಎದುರಿಸಿದ ಶಫಾಲಿ 23 ಆಕರ್ಷಕ ಬೌಂಡರಿ ಮತ್ತು 8 ಬಿಗ್​ ಹಿಟ್​ ಸಿಕ್ಸರ್​ ನೆರವಿನಿಂದ 205 ರನ್​ ಬಾರಿಸಿ ರನೌಟ್​ ಸಂಕಟಕ್ಕೆ ಸಿಲುಕಿದರು.

VISTARANEWS.COM


on

SHAFALI VERMA
Koo

ಚೆನ್ನೈ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಚೆನ್ನೈಯಲ್ಲಿ ಸಾಗುತ್ತಿರುವ ಏಕೈಕ ಟೆಸ್ಟ್​ ಪಂದ್ಯದ ಮೊದಲ ದಿನವೇ ಭಾರತ ಮೇಲುಗೈ ಸಾಧಿಸಿದೆ. ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮ(SHAFALI VERMA) ಮತ್ತು ಸ್ಮೃತಿ ಮಂಧಾನ(Smriti Mandhana) ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಗಮನಸೆಳೆದರು. ಈ ಪಂದ್ಯದಲ್ಲಿ ಶಫಾಲಿ ಬಿರುಸಿನ ಶತಕ ಬಾರಿಸುವ ಮೂಲಕ 40 ವರ್ಷಗಳ ಹಿಂದಿನ ಟೆಸ್ಟ್​ ದಾಖಲೆಯೊಂದನ್ನು ಮುರಿದಿದ್ದಾರೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಭಾರತಕ್ಕೆ ಶಫಾಲಿ ವರ್ಮ ಮತ್ತು ಮಂಧಾನ ಶತಕದ ಆಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿದರು. ಶಫಾಲಿ 113 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಮಹಿಳಾ ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ವೇಗದ ಶತಕ ಬಾರಿಸಿದ ಮೊದಲ ಆಟಗಾರ್ತಿ ಎಂಬ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ ಆಟಗಾರ್ತಿ ಜಾನೆಟ್ ಬ್ರಿಟಿನ್ ಹೆಸರಿನಲ್ಲಿತ್ತು. 1984 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 137 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದೀಗ ಈ 40 ವರ್ಷಗಳ ಹಳೆಯ ದಾಖಲೆಯನ್ನು ಶಫಾಲಿ ವರ್ಮಾ ಮುರಿದಿದ್ದಾರೆ.

ಇದನ್ನೂ ಓದಿ T20 World Cup Final: ಚೋಕರ್ಸ್ ಹಣೆಪಟ್ಟಿ ಕಳಚಿಕೊಳ್ಳುವುದೇ ದಕ್ಷಿಣ ಆಫ್ರಿಕಾ?; ನಾಳೆ ಫೈನಲ್​

ಸ್ಮೃತಿ ಮಂಧಾನ 122 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಏಕದಿನ ಬಳಿಕ ಟೆಸ್ಟ್​ನಲ್ಲಿಯೂ ಶತಕ ಬಾರಿಸಿದ ಸಾಧನೆ ಮಾಡಿದರು. ಒಟ್ಟು 161 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 27 ಫೋರ್​ಗಳೊಂದಿಗೆ 149 ರನ್ ಬಾರಿಸಿ ವಿಕೆಟ್​ ಕಳೆದುಕೊಂಡರು.

ದ್ವಿಶತಕ ಬಾರಿಸಿದ ಶಫಾಲಿ


ಶಫಾಲಿ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವ ಮೂಲಕ ಭಾರತ ಪರ ದ್ವಿಶತಕ ಬಾರಿಸಿದ 2ನೇ ಆಟಗಾರ್ತಿ ಎನಿಸಿಕೊಂಡರು. ಮಿಥಾಲಿ ರಾಜ್​ ಅವರು ಭಾರತ ಪರ ಟೆಸ್ಟ್​ನಲ್ಲಿ ದ್ವಿಶತಕ ಬಾರಿಸಿದ ಮೊದಲ ಆಟಗಾರ್ತಿ. 2002ರಲ್ಲಿ ಇಂಗ್ಲೆಂಡ್​ ವಿರುದ್ಧ 214 ರನ್​ ಬಾರಿಸಿದ್ದರು.

ಸದ್ಯ ಭಾರತ 3 ವಿಕೆಟ್​ ಕಳೆದುಕೊಂಡು 400 ರನ್​ಗಳ ಗಡಿ ದಾಟಿದೆ. ಮೊದಲ ದಿನವೇ ಈ ಬೃಹತ್​ ಮೊತ್ತ ಪೇರಿಸಿದ್ದನ್ನು ನೋಡುವಾಗ ದಾಖಲೆಯ ಮೊತ್ತವನ್ನು ಗಳಿಸುವ ಸಾಧ್ಯತೆ ಇದೆ. ನಾಯಕಿ ಹರ್ಮನ್​ಪ್ರೀತ್​ ಮತ್ತು ಜೇಮಿಮಾ ರೋಡ್ರಿಗಸ್​ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. 197 ಎಸೆತ ಎದುರಿಸಿದ ಶಫಾಲಿ 23 ಆಕರ್ಷಕ ಬೌಂಡರಿ ಮತ್ತು 8 ಬಿಗ್​ ಹಿಟ್​ ಸಿಕ್ಸರ್​ ನೆರವಿನಿಂದ 205 ರನ್​ ಬಾರಿಸಿ ರನೌಟ್​ ಸಂಕಟಕ್ಕೆ ಸಿಲುಕಿದರು.

Continue Reading
Advertisement
Congress government
ಕರ್ನಾಟಕ3 mins ago

Congress government: ಕೈ ಶಾಸಕರಿಂದಲೇ ರಾಜ್ಯ ಸರ್ಕಾರ ಪತನವಾಗಲಿದೆ ಎಂದ ಆರ್.ಅಶೋಕ್‌

BS Yediyurappa
ಪ್ರಮುಖ ಸುದ್ದಿ48 mins ago

BS Yediyurappa: ಪೋಕ್ಸೊ ಪ್ರಕರಣದಲ್ಲಿ ಮಾಜಿ ಸಿಎಂ ಬಿಎಸ್‌ವೈಗೆ ಮಧ್ಯಂತರ ಜಾಮೀನು ವಿಸ್ತರಣೆ

karnataka Weather Forecast
ಮಳೆ50 mins ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

Viral Video
Latest1 hour ago

Viral Video: ರೀಲ್ಸ್ ಮಾಡಲು ಹೋದ ಹುಡುಗರು; ರೈಲಿನ ಪ್ರಯಾಣಿಕರು ಏನು ಮಾಡಿದರು ನೋಡಿ!

Viral Video
Latest1 hour ago

Viral Video: ಒಂದು ದಿನದ ಮಟ್ಟಿಗೆ ಈ ಬಾಲಕ ಐಪಿಎಸ್‌ ಅಧಿಕಾರಿ; ಇವನ ಕಥೆ ಕಣ್ಣೀರು ತರಿಸುವಂಥದ್ದು

DCET 2024
ಬೆಂಗಳೂರು1 hour ago

DCET 2024 : ಡಿಸಿಇಟಿಯಲ್ಲಿ ರ‍್ಯಾಂಕ್‌ ಪಡೆದ ವಿಕಲ ಚೇತನರಿಗೆ ಜುಲೈ 1ರಂದು ವೈದ್ಯಕೀಯ ತಪಾಸಣೆ

Government Guarantee Schemes Progress Review Meeting at Karatagi
ಕೊಪ್ಪಳ1 hour ago

Koppala News: ಕಾರಟಗಿಯಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

Valmiki Development Corporation Scam R. Ashok demands CM Siddaramaiah resignation
ಕರ್ನಾಟಕ1 hour ago

R Ashok: ವಾಲ್ಮೀಕಿ ನಿಗಮ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಹೋರಾಟ; ಆರ್‌. ಅಶೋಕ್‌

GR Vishwnath
ಪ್ರಮುಖ ಸುದ್ದಿ1 hour ago

GR vishwanath : ಬೆಂಗಳೂರು ನಗರ ವಿವಿಯಿಂದ ಕ್ರಿಕೆಟ್ ದಿಗ್ಗಜ ಗುಂಡಪ್ಪ ವಿಶ್ವನಾಥ್​ಗೆ ಗೌರವ ಡಾಕ್ಟರೇಟ್

Vikram Misri
ಪ್ರಮುಖ ಸುದ್ದಿ2 hours ago

Vikram Misri: ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್‌ ಮಿಸ್ರಿ ಆಯ್ಕೆ; ಚೀನಾ ವಿಷಯದಲ್ಲಿ ಇವರು ಎಕ್ಸ್‌ಪರ್ಟ್!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ50 mins ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ8 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು1 day ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ1 day ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ಟ್ರೆಂಡಿಂಗ್‌