Chaithra J Achar: ʼಕನ್ನಡದ ಆಲಿಯಾ ಭಟ್‌ʼ ಚೈತ್ರಾ ಆಚಾರ್ - ಕಿಶನ್ ಬಿಳಗಲಿ ಶೃಂಗಾರ ನೃತ್ಯಕ್ಕೆ ಮನಸೋತ ಫ್ಯಾನ್ಸ್‌! - Vistara News

ಸ್ಯಾಂಡಲ್ ವುಡ್

Chaithra J Achar: ʼಕನ್ನಡದ ಆಲಿಯಾ ಭಟ್‌ʼ ಚೈತ್ರಾ ಆಚಾರ್ – ಕಿಶನ್ ಬಿಳಗಲಿ ಶೃಂಗಾರ ನೃತ್ಯಕ್ಕೆ ಮನಸೋತ ಫ್ಯಾನ್ಸ್‌!

Chaithra J Achar: ‘ಗಿಲ್ಕಿʼ ಸಿನಿಮಾ ಮೂಲಕ ಖ್ಯಾತಿ ಪಡೆದ ಚೈತ್ರಾ ಆಚಾರ್ ʻಮಹಿರ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ರಾಜ್ ಬಿ ಶೆಟ್ಟಿ ನಟನೆಯ ‘ಗರುಡ ಗಮನ ವೃಷಭ ವಾಹನ’ ಸಿನಿಮಾದ ‘ಮಾದೇವ ಮಾದೇವ.. ಸೋಜುಗಾದ ಸೂಜಿಮಲ್ಲಿಗೆ’ ಹಾಡನ್ನು ಹಾಡಿರುವ ಚೈತ್ರಾ ಆಚಾರ್. ʼಸಾರ್ವಜನಿಕರಿಗೆ ಸುವರ್ಣಾವಕಾಶ’, ‘ಮಾಯಾ ಬಜಾರ್‌ʼ ಸಿನಿಮಾಗಳಲ್ಲಿ ಹಾಡಿದ್ದಾರೆ. ಇದೀಗ ಚೈತ್ರಾ ಬಿಗ್‌ಬಾಸ್‌ ಮಾಜಿ ಸ್ಪರ್ಧಿ, ಡ್ಯಾನ್ಸರ್‌ ಕಿಶನ್‌ ಬಿಳಗಲಿ ಜತೆ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

VISTARANEWS.COM


on

Chaithra J Achar Kishen Bilagali Romantic video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಿಗ್‌ಬಾಸ್‌ ಮಾಜಿ ಸ್ಪರ್ಧಿ, ಡ್ಯಾನ್ಸರ್‌ ಕಿಶನ್‌ ಬಿಳಗಲಿ (Kishen Bilagali) ಸ್ಯಾಂಡಲ್‌ವುಡ್ ‘ಟೋಬಿ’ ಸುಂದರಿ ಚೈತ್ರಾ ಆಚಾರ್ (Chaithra J Achar) ಜತೆ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅನಿಮಲ್‌ ಸಿನಿಮಾದ ʻಪಹ್ಲೆ ಬೀ ಮೇನ್‌ʼ ಹಾಡಿಗೆ ಇವರಿಬ್ಬರು ಡ್ಯಾನ್ಸ್‌ ಮಾಡಿದ್ದಾರೆ.

ಕಿಶನ್‌ ಬಿಳಗಲಿ ಈ ರೀತಿ ರೊಮ್ಯಾಂಟಿಕ್‌ ಹಾಡಿಗೆ ಸ್ಟೆಪ್ಸ್‌ ಹಾಕುವುದು ಹೊಸದೇನಲ್ಲ. ನಟಿ ನಮ್ರತಾ ಗೌಡ ಜತೆ ಈ ಹಿಂದೆ ಕೂಡ ಈ ರೀತಿ ನೃತ್ಯ ಮಾಡಿ ಪೋಸ್ಟ್‌ ಮಾಡಿದ್ದರು.

ʻಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿʼ ಮೂಲಕ ಸಿನಿಪ್ರಿಯರನ್ನು ಗಮನ ಸೆಳೆದ ನಟಿ ಚೈತ್ರಾ ಜೆ ಆಚಾರ್‌ ಶೃಂಗಾರದ ಹಲವು ಸ್ಟೇಪ್ಸ್ ಕಿಶನ್‌ ಜತೆ ಹಾಕಿದ್ದಾರೆ.

ಇದನ್ನೂ ಓದಿ: Chaithra Kundapura : ಅಬ್ಬಾ ಇವಳೆಂಥಾ ವಂಚಕಿ! 5 ಕೋಟಿ ವಂಚಿಸಿದ್ದಷ್ಟೇ ಅಲ್ಲ, ಮರ್ಡರ್‌ ಕೂಡಾ ಮಾಡಿದ್ದಾಳೆ ಚೈತ್ರಾ ಕುಂದಾಪುರ!

ಬಿಳಿ ಬಣ್ಣದ ಉಡುಗೆಯಲ್ಲಿ ಇಬ್ಬರೂ ಕಂಡಿದ್ದು, ಚೈತ್ರಾ ಅವರ ಸೀರೆ ಡಿಸೈನ್‌ಗೂ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಲವರು ಈ ವಿಡಿಯೊಗೆ “ನಾನು ಮೊದಲ ನೋಟಕ್ಕೆ ಚೈತ್ರಾ ಅವರನ್ನು ಆಲಿಯಾ ಭಟ್‌ ಅಂದುಕೊಂಡೆ” ಎಂದು ಕಮೆಂಟ್‌ ಮಾಡಿದ್ದಾರೆ. ನಟಿ ಚೈತ್ರಾ ಆಚಾರ್ ಇತ್ತೀಚೆಗೆ ನಟಿಸಿದ ‘ಟೋಬಿ’ ಸಿನಿಮಾ ಮತ್ತು ‘ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ’ ಪ್ರೇಕ್ಷಕರ ಗಮನ ಸೆಳೆದಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Actor Darshan: ಯಾರೇ ಆದ್ರೂ ನ್ಯಾಯ ಎತ್ತಿ ಹಿಡಿಯಬೇಕು; ದರ್ಶನ್ ವಿರುದ್ಧ ನಟಿ ರಮ್ಯಾ ಮತ್ತೊಂದು ಟ್ವೀಟ್‌!

Actor Darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರವಾಗಿ ಮಂಗಳವಾರ ರಿ ಟ್ವೀಟ್ ಮಾಡಿದ್ದ ಸ್ಯಾಂಡಲ್ ವುಡ್ ನಟಿ ರಮ್ಯಾ, ಇದೀಗ ಮತ್ತೊಂದು ಪೋಸ್ಟ್ ಹಂಚಿಕೊಂಡು, ನಟ ದರ್ಶನ್‌ ಸೇರಿ ಪ್ರಕರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ತಿಳಿಸಿದ್ದಾರೆ.

VISTARANEWS.COM


on

Actor Darshan
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಒತ್ತಾಯಗಳು ಎಲ್ಲೆಡೆ ಕೇಳಿಬರುತ್ತಿವೆ. ಈ ನಡುವೆ ನಟ ದರ್ಶನ್‌ಗೆ (Actor Darshan) ಜೀವಾವಧಿ ಶಿಕ್ಷೆಯಾಗಲಿ ಎಂಬ ಪೋಸ್ಟ್‌ನ ರಿ ಟ್ವೀಟ್‌ ಮಾಡಿದ್ದ ನಟಿ ರಮ್ಯಾ ಇದೀಗ, ಮತ್ತೊಂದು ಟ್ವೀಟ್‌ ಹಂಚಿಕೊಂಡಿದ್ದಾರೆ. ರೇಣುಕಾಸ್ವಾಮಿ ಕುಟುಂಬದ ಪರ ನಿಂತ ನಟಿ, ಪ್ರಕರಣದಲ್ಲೇ ಯಾರೇ ತಪ್ಪಿತಸ್ಥರಾದರೂ ನ್ಯಾಯ ಎತ್ತಿ ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರವಾಗಿ ಮಂಗಳವಾರ ರಿ ಟ್ವೀಟ್ ಮಾಡಿದ್ದ ಸ್ಯಾಂಡಲ್ ವುಡ್ ನಟಿ ರಮ್ಯಾ, ಇದೀಗ ಮತ್ತೊಂದು ಪೋಸ್ಟ್ ರಿ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ರೇಣುಕಾ ಸ್ವಾಮಿ ತಂದೆ ದು:ಖದಲ್ಲಿರುವ ವಿಡಿಯೊವನ್ನು ಅಕ್ಷಯ್‌ ಅಕ್ಕಿ ಎಂಬುವವರು ಟ್ವಿಟರ್‌ನಲ್ಲಿ ಹಂಚಿಕೊಂಡು, ಯಾರೇ ಆದ್ರೂ ನ್ಯಾಯ ಎತ್ತಿ ಹಿಡಿಯಬೇಕು ಎಂದು ಬರೆದುಕೊಂಡಿದ್ದಾರೆ. ಇದನ್ನು ನಟಿ ರಮ್ಯಾ ರಿ ಟ್ವೀಟ್‌ ಮಾಡಿದ್ದಾರೆ.

ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ನಟ ದರ್ಶನ್​ಗೆ (Actor Darshan) ಮರಣದಂಡನೆಯಾಗಲಿ ಎಂಬ ಸಂದೇಶವನ್ನು ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ನೆನ್ನೆ ಹಂಚಿಕೊಂಡಿದ್ದರು. ಐಪಿಸಿ ಸೆಕ್ಷನ್​ 302ರನ್ನು ಉಲ್ಲೇಖಿಸಿ ಅದರ ಅನ್ವಯ ದರ್ಶನ್​ಗೆ ಕಠಿಣ ಶಿಕ್ಷೆಯಾಗಬಹುದು. ಎಂಬ ಪೋಸ್ಟ್‌ ಅನ್ನು ಕರ್ನಾಟಕ ಬಾಕ್ಸ್‌ ಆಫೀಸ್‌ ಖಾತೆಯಲ್ಲಿ ಟ್ವೀಟ್‌ ಮಾಡಲಾಗಿತ್ತು. ಈ ಸೆಕ್ಷನ್​ 302ರಲ್ಲಿ ಕೊಲೆ ಆರೋಪ ಸಾಬೀತಾದರೆ ಅವರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂಬ ಮಾಹಿತಿ ಇದ್ದ ಪೋಸ್ಟ್‌ ಅನ್ನು ರಮ್ಯಾ ರಿ ಟ್ವೀಟ್‌ ಮಾಡಿದ್ದರು.

ಇದನ್ನು ಓದಿ | Actor Darshan: ಡೆವಿಲ್‌ ಗ್ಯಾಂಗ್‌ ಜತೆ ಸ್ಥಳ ಮಹಜರು; ಅಮಾಯಕನಂತೆ ಕೈಕಟ್ಟಿ ನಿಂತ ದರ್ಶನ್‌

ಸೆಕ್ಷನ್ 302 ರ ಅಡಿಯಲ್ಲಿ ನಟ ದರ್ಶನ್​ಗೆ ಜೀವಾವಧಿ ಶಿಕ್ಷೆ ಅಥವಾ ಶಿಕ್ಷೆಯಾಗಬೇಕು. ಬೇರೆ ಯಾವುದೇ ಹಣದ ಪ್ರಭಾವ ಮತ್ತು ಭಾರತೀಯ ಕಾನೂನು ವ್ಯವಸ್ಥೆಯನ್ನು ಅಣಕಿಸುವಂತಾಗಬಾರದು. ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬ ಟ್ವೀಟ್‌ ಅನ್ನು ರಮ್ಯಾ ಮರು ಪೋಸ್ಟ್‌ ಮಾಡಿದ್ದರು. ರಮ್ಯಾ ಈ ಹಿಂದೆಯೂ ಸ್ಟಾರ್ ನಟರ ನಡವಳಿಕೆಯ ಬಗ್ಗೆ ಆಕ್ಷೇಪ ಎತ್ತಿದ್ದರು. ಹಿಂದೆ ದರ್ಶನ್​ಗೆ ಚಪ್ಪಲಿ ಎಸೆತ ಪ್ರಕರಣ ನಡೆದಾಗ ಸ್ಪಂದಿಸಿದ್ದ ಅವರು, ಅಭಿಮಾನಿಗಳು ಹಾಗೂ ನಟರಿಗೆ ಬುದ್ಧಿ ಹೇಳಬೇಕಾಗಿದೆ ಎಂದು ಹೇಳಿದ್ದರು. ಇದೀಗ ಮತ್ತೊಮ್ಮೆ ರಿ ಟ್ವೀಟ್‌ ಮಾಡಿ ಪರೋಕ್ಷವಾಗಿ ದರ್ಶನ್‌ ವಿರುದ್ಧ ಕಠಿಣ ಕ್ರಮವಾಗಲಿ ಎಂದು ಹೇಳಿದ್ದಾರೆ.

Continue Reading

ಸ್ಯಾಂಡಲ್ ವುಡ್

Actor Darshan: ಕೊಲೆ ಆರೋಪಿ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ಡಿವೋರ್ಸ್‌?

Actor Darshan: ಪವಿತ್ರಾ ಗೌಡ ವಿಚಾರದಲ್ಲಿ ವಿಜಯಲಕ್ಷ್ಮಿ ಈ ಹಿಂದೆ ಸಾಕಷ್ಟು ಬಾರಿ ಸೋಷಿಯಲ್​ ಮೀಡಿಯಾ ವಾರ್ ನಡೆಸಿದ್ದರು. ಪವಿತ್ರಾ ವಿರುದ್ಧ ನಾನಾ ರೀತಿಯ ಹೇಳಿಕೆಗಳನ್ನು ನೀಡಿದ್ದರು. ದರ್ಶನ್​ ಕೊಲೆ ಆರೋಪದಲ್ಲಿ ಸಿಕ್ಕಿ ಹಾಕಿಕೊಂಡಿರುವುದ ಪವಿತ್ರಾ ಅವರ ವಿಚಾರದಲ್ಲಿ. ಹೀಗಾಗಿ ಅವರಿಗೆ ಸಹಜವಾಗಿಯೇ ಅಸಮಾಧಾನ ಉಂಟಾಗಿರುತ್ತದೆ.

VISTARANEWS.COM


on

Actor Darshan wife Vijayalakshmi will get divorce
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಅರೆಸ್ಟ್ (Actor Darshan Arrested) ಆಗಿದ್ದರೂ ಅವರ ಪತ್ನಿ ವಿಜಯಲಕ್ಷ್ಮಿ ಇದುವರೆಗೆ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ. ಪವಿತ್ರಾ ಗೌಡ ವಿಚಾರದಲ್ಲಿ ಆಗಾಗ ಸೋಶಿಯಲ್ ಮೀಡಿಯಾಗಳ ಮೂಲಕ ಯುದ್ಧ ಸಾರುತ್ತಿದ್ದ ವಿಜಯಲಕ್ಷ್ಮಿ ಅವರು ಈ ಬಾರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಿರುವಾಗಲೇ ವಿಜಯಲಕ್ಷ್ಮಿ ಅವರು ದರ್ಶನ್‌ ಜತೆಗಿದ್ದ ಇನ್​ಸ್ಟಾಗ್ರಾಮ್​ ಪ್ರೊಫೈಲ್‌​ ಫೋಟೊ ಡಿಲೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ ನಟ ದರ್ಶನ್ ಅವರನ್ನು ಅನ್​ಫಾಲೋ ಮಾಡಿದ್ದಾರೆ. ಇದೀಗ ವಿಜಯಲಕ್ಷ್ಮಿ ವಿಚ್ಛೇದನ ಪಡೆಯುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಕೌಟುಂಬಿಕ ಕಲಹದಲ್ಲಿ ʼದಾಸʼ

ದರ್ಶನ್‌ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಇನ್ನು ಕೌಟುಂಬಿಕ ಕಲಹದಲ್ಲಿಯೂ 28 ದಿನಗಳ ಕಾಲ ಜೈಲಿನಲ್ಲಿ ಇದ್ದು ಬಂದಿದ್ದರು. 2011ರಲ್ಲಿ ವಿಜಯಲಕ್ಷ್ಮಿ ಮೇಲೆ ದರ್ಶನ್ ಮಾರಣಾಂತಿಕ ಹಲ್ಲೆ ಮಾಡಿದ್ದರು. 2016ರಲ್ಲಿ ಮತ್ತೊಮ್ಮೆ ದರ್ಶನ್ ವಿರುದ್ಧ ವಿಜಯಲಕ್ಷ್ಮಿ ದೂರು ನೀಡಿದ್ದ ಘಟನೆಯೂ ನಡೆದಿತ್ತು. ಮಗನನ್ನು ಹತ್ಯೆ ಮಾಡುವುದಾಗಿಯೂ ದರ್ಶನ್‌ ಬೆದರಿಸುವುದಾಗಿ ಕೇಳಿ ಬಂದಿತ್ತು. ಮಾತ್ರವಲ್ಲ ವಿಜಯಲಕ್ಷ್ಮಿ ಅವರಿಗೆ ಸಿಗರೇಟ್‌ನಿಂದ ಸುಟ್ಟು ಗಾಯಗೊಳಿಸಿದ್ದರು. ಅಂಬರೀಶ್ ಮಧ್ಯಪ್ರವೇಶದಿಂದ ವಿಜಯಲಕ್ಷ್ಮಿ ಎಲ್ಲವನ್ನೂ ಮರೆತು ರಾಜಿ ಸಂಧಾನಕ್ಕೆ ಒಪ್ಪಿದ್ದರು.

ಇದನ್ನೂ ಓದಿ: Actor Darshan: ದರ್ಶನ್ ಮೇಲೆ ಮತ್ತೊಂದು ಗಂಭೀರ ಆರೋಪ; ವನ್ಯಜೀವಿ ಧಾಮದಲ್ಲಿ ಖಾಸಗಿ ವಾಹನ ಬಳಕೆ, ಬಾಡೂಟ, ಎಣ್ಣೆ ಪಾರ್ಟಿ!

ಇದಾದ ಬಳಿಕ ದರ್ಶನ್‌ ಕುಡಿದು ಬಂದು ವಿಜಯಲಕ್ಷ್ಮಿ ವಿರುದ್ಧ ಕೂಗಾಡಿರುವ ಆಡಿಯೊ ವೈರಲ್‌ ಆಗಿತ್ತು. ಸ್ವತಃ ವಿಜಯಲಕ್ಷ್ಮಿ ಅವರೇ ಆಡಿಯೊ ಸುಳ್ಳು ಎಂದು ಹೇಳಿಕೆ ನೀಡಿದ್ದರು. ಹೀಗೆ ಸಿಹಿ-ಕಹಿ ಜೀವನ ನಡೆಸುತ್ತಿದ್ದ ದಂಪತಿ ಮಧ್ಯೆ ಮತ್ತೆ ಬಿರುಗಾಳಿಯಂತೆ ಬಂದಿದ್ದು ಪವಿತ್ರಾ ಗೌಡ.

ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದ ದರ್ಶನ್‌

ಇತ್ತೀಚೆಗಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ನಟ ದರ್ಶನ್‌ ಸ್ನೇಹಿತರು ಹುಟ್ಟುಹಬ್ಬವನ್ನು ಜೋರಾಗಿಯೇ ಸೆಲೆಬ್ರೇಟ್ ಮಾಡಿದ್ದರು. ಪಾರ್ಟಿಯೊಂದರಲ್ಲಿ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಮಸ್ತ್‌ ಡಾನ್ಸ್ ‌ಮಾಡಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಿರ್ಮಾಪಕ ಉಮಾಪತಿ ಗೌಡ ಹಾಗೂ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಪದಗಳ ಬಳಕೆ ಹಿನ್ನೆಲೆಯಲ್ಲಿ ಮಹಿಳಾ ಸಂಘಟನೆಗಳು ಸೇರಿ ವಿವಿಧ ಸಂಘಗಳು, ನಟನ ವಿರುದ್ಧ ಅಸಮಾಧಾನ ಹೊರಹಾಕಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದವು. ಆದರೆ, ವಿವಾದಗಳಿಗೆ ಸೊಪ್ಪು ಹಾಕದ ದರ್ಶನ್‌, ಪಾರ್ಟಿಯೊಂದರಲ್ಲಿ ಭಾಗಿಯಾಗಿ ಪತ್ನಿ ಜತೆ ಕುಣಿದು ಕುಪ್ಪಳಿಸಿದ್ದರು.

ಪವಿತ್ರಾ ಗೌಡ ಜತೆ ವಾರ್‌

ಪವಿತ್ರಾ ಗೌಡ ವಿಚಾರದಲ್ಲಿ ವಿಜಯಲಕ್ಷ್ಮಿ ಈ ಹಿಂದೆ ಸಾಕಷ್ಟು ಬಾರಿ ಸೋಷಿಯಲ್​ ಮೀಡಿಯಾ ವಾರ್ ನಡೆಸಿದ್ದರು. ಪವಿತ್ರಾ ವಿರುದ್ಧ ನಾನಾ ರೀತಿಯ ಹೇಳಿಕೆಗಳನ್ನು ನೀಡಿದ್ದರು. ದರ್ಶನ್​ ಕೊಲೆ ಆರೋಪದಲ್ಲಿ ಸಿಕ್ಕಿ ಹಾಕಿಕೊಂಡಿರುವುದ ಪವಿತ್ರಾ ಅವರ ವಿಚಾರದಲ್ಲಿ. ಹೀಗಾಗಿ ಅವರಿಗೆ ಸಹಜವಾಗಿಯೇ ಅಸಮಾಧಾನ ಉಂಟಾಗಿರುತ್ತದೆ. ಕೆಲ ತಿಂಗಳ ಹಿಂದೆ ಪವಿತ್ರಾ ಗೌಡ ಅವರು ದರ್ಶನ್ ಜತೆ ಇರೋ ಫೋಟೋ ಹಂಚಿಕೊಂಡಿದ್ದರು. ‘10 ವರ್ಷಗಳ ಸಂಬಂಧ’ ಎಂದು ಟ್ಯಾಗ್​ಲೈನ್ ನೀಡಿದ್ದರು. ಇದನ್ನು ವಿಜಯಲಕ್ಷ್ಮಿ ಖಂಡಿಸಿದ್ದರು. ಇದೀಗ ಇನ್​ಸ್ಟಾಗ್ರಾಮ್​ನಲ್ಲಿ ದರ್ಶನ್ ಸೇರಿ ಎಲ್ಲರನ್ನೂ ವಿಜಯಲಕ್ಷ್ಮಿ ಅನ್​ಫಾಲೋ ಮಾಡಿದ್ದಾರೆ. ಈ ಮೊದಲು ಅವರು ದರ್ಶನ್​ನ ಫಾಲೋ ಮಾಡುತ್ತಿದ್ದರು. ಇನ್ನು, ಇನ್​ಸ್ಟಾಗ್ರಾಮ್ ಡಿಪಿಯನ್ನು ಕೂಡ ತೆಗೆದು ಹಾಕಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಇದೀಗ ಪವಿತ್ರಾ ಗೌಡ ವಿಚಾರವಾಗಿಯೇ ದರ್ಶನ್‌ ಜೈಲು ಸೇರಿದ್ದಾರೆ. ಇನ್ನು ದರ್ಶನ್‌ ಜೈಲು ಸೇರುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ವಿಜಯಲಕ್ಷ್ಮಿ ಅವರು ದರ್ಶನ್‌ ಅವರನ್ನು ಅನ್‌ಫಾಲೋ ಮಾಡಿ, ಡಿಪಿ ಕೂಡ ಡಿಲಿಟ್‌ ಮಾಡಿದ್ದಾರೆ.ವೈವಾಹಿಕ ಜೀವನದಲ್ಲಿ ಪದೇ ಪದೇ ಬೇಸತ್ತು ವಿಜಯಲಕ್ಷ್ಮಿ ವಿಚ್ಛೇದನ ಪಡೆಯುವ ಗಂಭೀರ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಗಾಸಿಪ್‌ಗಳು ಹರಿದಾಡುತ್ತಿವೆ.

Continue Reading

ಸ್ಯಾಂಡಲ್ ವುಡ್

Dolly Dhananjay: ಬಿಡುಗಡೆಗೂ ಮುನ್ನ ‘ಕೋಟಿ’ ಪೇಯ್ಡ್ ಪ್ರೀಮಿಯರ್ ಶೋ: ಜೂನ್‌ 14ಕ್ಕೆ ತೆರೆಗೆ!

Dolly Dhananjay: ಕೋಟಿಯ ಬುಕಿಂಗ್ಸ್ ಈಗ ಓಪನ್ ಆಗಿದ್ದು ಇಂದು ಸಂಜೆ ಸಿನಿಮಾ ತಾರೆಗಳಿಗೆ ಪ್ರೀಮಿಯರ್ ಶೋ ನಡೆಯಲಿದೆ. ಅದರ ಜತೆ ಸಾರ್ವಜನಿಕರಿಗಾಗಿ ಎರಡು ಪೇಯ್ಡ್ ಪ್ರೀಮಿಯರ್ ಶೋಗಳಿವೆ. ನಾಳೆ ಮೈಸೂರಿನಲ್ಲೂ ಪೇಯ್ಡ್ ಪ್ರೀಮಿಯರ್ ಶೋಗಳು ಆಗಲಿದ್ದು ಧನಂಜಯ್ ಮತ್ತು ಸಿನಿಮಾತಂಡ ಮೈಸೂರಿನ ಸಿನಿಪ್ರೇಮಿಗಳ ಜತೆ ‘ಕೋಟಿ’ ನೋಡಲಿದೆ. ಶುಕ್ರವಾರದಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕೋಟಿ’ ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಅಮೇರಿಕಾ, ಇಂಗ್ಲೆಂಡ್, ಯುರೋಪ್ ಮತ್ತು ಗಲ್ಫ್ ದೇಶಗಳಲ್ಲೂ ಬಿಡುಗಡೆಯಾಗಲಿದೆ.

VISTARANEWS.COM


on

Dolly Dhananjay mana manakke Kotee Movie release
Koo

ಬೆಂಗಳೂರು: ಇದೇ ಶುಕ್ರವಾರ ‘ಕೋಟಿ’ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರದ ‘ಮನ ಮನ’ ಹಾಡಿನ ಲಿರಿಕಲ್ ವಿಡಿಯೊ ಬಿಡುಗಡೆಯಾಗಿದ್ದು ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ. ಥ್ರಿಲ್ಲರ್ ಡ್ರಾಮ ಜಾನರ್‌ನ ಈ ಸಿನಿಮಾದಲ್ಲಿ ಧನಂಜಯ್ ‘ಕೋಟಿ’ ಎಂಬ ಒಬ್ಬ ಸಾಮಾನ್ಯ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಂದ್ದಾರೆ. ಯಾರಿಗೂ (dolly dhananjay) ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂಪಾಯಿ ದುಡಿದು ತನ್ನ‌ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ ಆತನದು. ಈ ಥ್ರಿಲ್ಲರ್ ಸಿನಿಮಾದಲ್ಲಿ ಒಂದು ಪುಟ್ಟ ಲವ್ ಸ್ಟೋರಿ ಕೂಡ ಇದೆ.

‘ಮನ ಮನ’ ಹಾಡಿನ ಲಿರಿಕಲ್ ವಿಡಿಯೋದಲ್ಲಿ ಬರುವ ವಿಡಿಯೋ ತುಣುಕು ಇನ್ಸ್ಟಾಗ್ರಾಮ್ ರೀಲ್, ವಾಟ್ಸಾಪ್ ಸ್ಟೋರಿಯಾಗಿ ಎಲ್ಲೆಡೆ ಓಡಾಡ್ತಾ ಇದೆ. ಇಬ್ಬರ ನಡುವೆ ಪ್ರೀತಿ ಅರಳಿ ನಿಂತಾಗ ಬಹುವಚನದಿಂದ ಏಕವಚನಕ್ಕೆ ಬರುವ ಒಂದು ಸಂದರ್ಭ ಬಂದೇ ಬರುತ್ತದೆ. ‘ನೀವು’ ಅಂತ ಕರೆಯುತ್ತಿದ್ದವರು ‘ನೀನು’ ಅಂತ ಕರೆಯುವ ಸಮಯವದು. ಕೋಟಿಯ ಲೈಫಲ್ಲಿ ಬಂದ ಆ ಸಮಯ ಈ ವಿಡಿಯೋದಲ್ಲಿದೆ. ಎಲ್ಲರ ಲೈಫಲ್ಲೂ ಅಗಿರಬಹುದಾದ ಈ ಸಣ್ಣ ಕ್ಯೂಟ್ ಘಟನೆ ಇದೇ ಕಾರಣಕ್ಕೆ ಈ ಹಾಡಿನಲ್ಲಿ ಎಲ್ಲರಿಗೂ ಕನೆಕ್ಟ್ ಆಗುತ್ತಿದೆ.

ಕೋಟಿಯ ಬರಹಗಾರ ಮತ್ತು ನಿರ್ದೇಶಕರಾದ ಪರಮ್ ಅವರು “ಹುಡುಗಿಯೊಬ್ಬಳು ನೀವು ಅಂತ ಕರೆಯಬೇಡ ಅಂತ ತಾಕೀತು ಮಾಡಿದಾಗ ಸಾಮಾನ್ಯ ಹುಡುಗನೊಬ್ಬ ಎದುರಿಸಬಹುದಾದ ಸಂಕೋಚವನ್ನು ಧನಂಜಯ ಅಭಿನಯಿಸಿರುವ ರೀತಿ ನಿಮಗೆ ಇಷ್ಟ ಆಗಬಹುದು” ಎಂದು ಹೇಳಿದರು.

ಇದನ್ನೂ ಓದಿ: Dolly Dhananjay: ರೋಡಲ್ಲಿ ಹೋಗೋರೆಲ್ಲ ನನ್ನ ಮದ್ವೆ ಬಗ್ಗೆನೇ ಕೇಳ್ತಾರೆ ಎಂದ  ಡಾಲಿ ಧನಂಜಯ್!

ಇದನ್ನೂ ಓದಿ: Dolly Dhananjay: ರೋಡಲ್ಲಿ ಹೋಗೋರೆಲ್ಲ ನನ್ನ ಮದ್ವೆ ಬಗ್ಗೆನೇ ಕೇಳ್ತಾರೆ ಎಂದ  ಡಾಲಿ ಧನಂಜಯ್!

ಕೋಟಿಯ ಬುಕಿಂಗ್ಸ್ ಈಗ ಓಪನ್ ಆಗಿದ್ದು ಇಂದು ಸಂಜೆ ಸಿನಿಮಾ ತಾರೆಗಳಿಗೆ ಪ್ರೀಮಿಯರ್ ಶೋ ನಡೆಯಲಿದೆ. ಅದರ ಜತೆ ಸಾರ್ವಜನಿಕರಿಗಾಗಿ ಎರಡು ಪೇಯ್ಡ್ ಪ್ರೀಮಿಯರ್ ಶೋಗಳಿವೆ. ನಾಳೆ ಮೈಸೂರಿನಲ್ಲೂ ಪೇಯ್ಡ್ ಪ್ರೀಮಿಯರ್ ಶೋಗಳು ಆಗಲಿದ್ದು ಧನಂಜಯ್ ಮತ್ತು ಸಿನಿಮಾತಂಡ ಮೈಸೂರಿನ ಸಿನಿಪ್ರೇಮಿಗಳ ಜತೆ ‘ಕೋಟಿ’ ನೋಡಲಿದೆ. ಶುಕ್ರವಾರದಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕೋಟಿ’ ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಅಮೇರಿಕಾ, ಇಂಗ್ಲೆಂಡ್, ಯುರೋಪ್ ಮತ್ತು ಗಲ್ಫ್ ದೇಶಗಳಲ್ಲೂ ಬಿಡುಗಡೆಯಾಗಲಿದೆ.

ಸಾಕಷ್ಟು ಸದ್ದು‌ ಮಾಡುತ್ತಿರುವ ಅಪ್ಪಟ ಕನ್ನಡ ಮಣ್ಣಿನ ಕತೆಯಾದ ‘ಕೋಟಿ’ ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೆ ಕಂಗೆಟ್ಟಿರುವ ಕನ್ನಡ ಇಂಡಸ್ಟ್ರಿಗೆ ಗೆಲ್ಲುವ ಭರವಸೆಯಾಗಿ ಕಂಡಿದೆ.

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ಮ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.

ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರ ಶುಕ್ರವಾರ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Continue Reading

ಸ್ಯಾಂಡಲ್ ವುಡ್

Actor Darshan: ಚಿತ್ರರಂಗದಿಂದ ಬ್ಯಾನ್‌ ಆಗ್ತಾರಾ ದರ್ಶನ್? ಫಿಲ್ಮ್ ಚೇಂಬರ್ ಅಧ್ಯಕ್ಷರು ಹೇಳಿದ್ದೇನು?

Actor Darshan : ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್​ಎಂ ಸುರೇಶ್ ಅವರು ಆರೋಪ ಸಾಬೀತಾದರೆ ಅವರ ಮೇಲೆ ನಿಷೇಧ ಹೇರುವುದಾಗಿಯೂ ಹೇಳಿದ್ದಾರೆ ಎನ್ನಲಾಗಿದೆ. ಈಗಾಗಲೇ ಕೆಲ ಸೆಲೆಬ್ರಿಟಿಗಳು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ಇದೀಗ ವಿಸ್ತಾರ ಜತೆ ಈ ಪ್ರಕರಣ ಕುರಿತು ಮಾತನಾಡಿದ್ದಾರೆ.

VISTARANEWS.COM


on

Actor Darshan Ban From Sandalwood If Murder Allegation
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್‌ ಅವರನ್ನು (Actor Darshan) ಆರು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆರೋಪ ಸಾಬೀತಾದರೆ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈಗಾಗಲೇ ಕೆಲ ಸೆಲೆಬ್ರಿಟಿಗಳು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ಇದೀಗ ವಿಸ್ತಾರ ಜತೆ ಈ ಪ್ರಕರಣ ಕುರಿತು ಮಾತನಾಡಿದ್ದಾರೆ.

ಎನ್ ಎಂ ಸುರೇಶ್ ಮಾತನಾಡಿ ʻʻರೇಣುಕಾ ಅವರ ತಂದೆ ತಾಯಿಯನ್ನು ನೋಡಿದರೆ ಕರುಳು ಚುರ್ ಅನ್ನುತ್ತೆ. ಯಾರೇ ತಪ್ಪು ಮಾಡಲಿ, ಕಾನೂನು ಶಿಕ್ಷೆ ಕೊಡುತ್ತದೆ. ಸತ್ಯಾಸತ್ಯತೆ ಬಯಲಿಗೆ ಎಳೆಯುತ್ತೇವೆ ಎಂದು ಕಮಿಷನರ್ ಹೇಳಿದ್ದಾರೆ. ತಪ್ಪಿಗೆ ಶಿಕ್ಷೆ ಆಗುತ್ತೆ . ಕಾನೂನಿಗೆ ಮರೆಮಾಚುವ ಕೆಲಸ ಮಾಡೋಕೆ ಆಗೊಲ್ಲ. ಈ ಹಿಂದೆ ಈ ಥರ ಘಟನೆ ಆದಾಗ ಎಚ್ಚೆತ್ತುಕೊಳ್ಬೇಕಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡೋಕೆ ನಾಚಿಕೆ ಆಗುತ್ತೆ. ದೊಡ್ಡ ಮಟ್ಟದಲ್ಲಿ ಬೆಳೆದ ನಟನಿಗೆ ಜವಾಬ್ದಾರಿ ಇರಬೇಕಿತ್ತು. ರಾಷ್ಟ್ರಮಟ್ಟದಲ್ಲಿ ಈ ಘಟನೆಯಿಂದ ಎಲ್ಲರೂ ತಲೆ ತಗ್ಗಿಸುವಂತಾಗಿದೆ. ಆದರ್ಶವಾಗಿ ಇರಬೇಕಾದ ವ್ಯಕ್ತಿ ಹೀಗೆ ಮಾಡಿದಾಗ ಏನು ಹೇಳ್ಬೇಕು ಗೊತ್ತಾಗ್ತಿಲ್ಲ. ಆಸ್ತಿ ಅಂತಸ್ತು ಹಣ ಬಂದ್ಮೇಲೆ ತಲೆ ನಿಲ್ಲೋಲ್ಲ. ರಾಜ್ಯ ಪೊಲೀಸರಿಗೆ ನನ್ನದೊಂದು ಸಲಾಂʼʼ ಎಂದರು.

ಇದನ್ನೂ ಓದಿ: Actor Darshan: ಲಾರಿಗೆ ತಲೆಯನ್ನು ಬಡಿದು ಸಿನಿಮಾ ಶೈಲಿಯಲ್ಲೇ ರೇಣುಕಾ ಸ್ವಾಮಿ ಕೊಲೆ ಮಾಡಿದ್ದ ದರ್ಶನ್ ಗ್ಯಾಂಗ್​!

ಬ್ಯಾನ್‌ ವಿಚಾರವಾಗಿ ಮಾತನಾಡಿ ʻʻಬ್ಯಾನ್ ಮಾಡಲಿ ಏನೇ ಮಾಡಲಿ ಸತ್ತ ಆ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ಸಿಗುತ್ತಾ..? ಸದ್ಯಕ್ಕೆ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ದರ್ಶನ್‌ ಅವರ ಫ್ಯಾನ್ಸ್ ಬ್ಯಾನ್ ಮಾಡಿ ಅಂತಿದ್ದಾರೆ. ನಾನು ಕೂಡ ಅವರ ದೊಡ್ಡ ಅಭಿಮಾನಿ. ವಾಣಿಜ್ಯ ಮಂಡಳಿ ಮಾತೃಸಂಸ್ಥೆ ಅದಕ್ಕೆ ಗೌರವ ಕೊಡುವುದು ಮೊದಲು ಆಗಲಿ. ಡಾ. ರಾಜ್ ಕುಮಾರ್ ಕಾಲದಿಂದ ವಾಣಿಜ್ಯ ಮಂಡಳಿಗೆ ಕಲಾವಿದರು, ನಿರ್ಮಾಪಕ ನಿರ್ದೇಶಕರು ಗೌರವ ಕೊಟ್ಟಿದ್ದಾರೆʼʼಎಂದರು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್​ಎಂ ಸುರೇಶ್ ಅವರು ಆರೋಪ ಸಾಬೀತಾದರೆ ಅವರ ಮೇಲೆ ನಿಷೇಧ ಹೇರುವುದಾಗಿಯೂ ಹೇಳಿದ್ದಾರೆ ಎನ್ನಲಾಗಿದೆ. ಜತೆಗೆ ಈ ವಿಚಾರದಲ್ಲಿ ಕಲಾವಿದರ ಸಂಘದವರು ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.ದ ರ್ಶನ್ ಸಿನಿಮಾಗಳಿಗೆ ಬೇಡಿಕೆ ಇದೆ. ಅವರು ಸಿನಿಮಾಗಳಿಂದ ಅನೇಕರಿಗೆ ಕೆಲಸ ಸಿಗುತ್ತಿದೆ. ಇವರನ್ನು ಬ್ಯಾನ್ ಮಾಡಬೇಕು ಎಂದಾಗ ಅದನ್ನು ಬೆಂಬಲಿಸುವವರು ಕಡಿಮೆ ಎನ್ನುವ ಮಾತಿದೆ.

Continue Reading
Advertisement
Narendra Modi
ದೇಶ3 mins ago

Narendra Modi: ಆಂಧ್ರದಲ್ಲಿ ಮೆಗಾ ಸ್ಟಾರ್‌, ಪವರ್‌ ಸ್ಟಾರ್‌ ಜತೆ ‘ಪೊಲಿಟಿಕಲ್‌ ಸ್ಟಾರ್’‌ ಮೋದಿ; Video ನೋಡಿ

Terror attack
ದೇಶ9 mins ago

Terror attack : ಉಗ್ರರ ದಾಳಿ; ತನ್ನ ಪ್ರಾಣ ತ್ಯಾಗ ಮಾಡಿ ಪ್ರಯಾಣಿಕರ ಜೀವ ಉಳಿಸಿದ ಬಸ್‌ ಚಾಲಕ

Uttara Kannada MP Vishweshwara hegde kageri spoke in Thanksgiving ceremony for bjp party workers in banavasi
ಉತ್ತರ ಕನ್ನಡ17 mins ago

Uttara Kannada News: ಉ.ಕ ಜಿಲ್ಲೆ ಬಿಜೆಪಿ ಕಾರ್ಯಕರ್ತರ ಕ್ಷೇತ್ರ ಎಂಬುದು ಮತ್ತೊಮ್ಮೆ ಸಾಬೀತು: ಕಾಗೇರಿ

chandrababu naidu takes oath as andhra chief minister mlc TA Sharavana Congratulated
ಬೆಂಗಳೂರು19 mins ago

TA Sharavana: ಆಂಧ್ರಪ್ರದೇಶ ಸಿಎಂ ಆಗಿ ಚಂದ್ರಬಾಬು ನಾಯ್ಡು ಪದಗ್ರಹಣ; ಶರವಣ ಅಭಿನಂದನೆ

Hindu Jana Jagruti Samiti demands immediate ban on Maharaj movie
ದೇಶ21 mins ago

Maharaj Movie: `ಮಹಾರಾಜ್’ ಚಲನಚಿತ್ರ ನಿಷೇಧಕ್ಕೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹ

Minister Dr.Sharanaprakash patil spoke in World Homeopathy Day Celebration and Seminar Programme in Bengaluru
ಕರ್ನಾಟಕ24 mins ago

Bengaluru News: ನಕಲಿ ವೈದ್ಯರ ಹಾವಳಿ ತಡೆಗೆ ಕಟ್ಟುನಿಟ್ಟಿನ ಕ್ರಮ: ಶರಣಪ್ರಕಾಶ್‌ ಪಾಟೀಲ್‌

Opposition party leader r ashok visit mangalore hospital
ಕರ್ನಾಟಕ26 mins ago

R Ashok: ಗೂಂಡಾಗಳ ಕೈಗೆ ರಾಜ್ಯ ನೀಡಿದ ಕಾಂಗ್ರೆಸ್‌ ಸರ್ಕಾರ: ಆರ್‌. ಅಶೋಕ್‌ ಆರೋಪ

Viral Video
ವೈರಲ್ ನ್ಯೂಸ್31 mins ago

Viral Video: ಮೆಟ್ರೋ, ವಿಮಾನ ಆಯಿತು ಈಗ ರೈಲಿನಲ್ಲಿ ಮಕ್ಕಳ ಎದುರೇ ಜೋಡಿಯ ಸರಸ!

Prajwal Revanna Case
ಪ್ರಮುಖ ಸುದ್ದಿ41 mins ago

Prajwal Revanna Case: ಪ್ರಜ್ವಲ್‌ ರೇವಣ್ಣಗೆ ಮತ್ತೆ 6 ದಿನ ಎಸ್‌ಐಟಿ ಕಸ್ಟಡಿ

Paris Olympics 2024
ಕ್ರೀಡೆ41 mins ago

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜತೆಯಾಗಿ ಆಡಲಿದ್ದಾರೆ ನಡಾಲ್-ಅಲ್ಕರಾಜ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ1 day ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ1 day ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ1 day ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ1 day ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌