Dhruva Sarja: ಜಿಮ್ ಟ್ರೈನರ್ ಮೇಲೆ ಹಲ್ಲೆ; ಧ್ರುವ ಸರ್ಜಾ ನೀಡಿದ ಸ್ಪಷ್ಟನೆ ಏನು? - Vistara News

ಸ್ಯಾಂಡಲ್ ವುಡ್

Dhruva Sarja: ಜಿಮ್ ಟ್ರೈನರ್ ಮೇಲೆ ಹಲ್ಲೆ; ಧ್ರುವ ಸರ್ಜಾ ನೀಡಿದ ಸ್ಪಷ್ಟನೆ ಏನು?

Dhruva Sarja: ನಂಬರ್ ಪ್ಲೇಟ್ ಇಲ್ಲದ ಗಾಡಿಯಲ್ಲಿ ಮುಖ ಮುಚ್ಚಿ ಕೊಂಡು ಪ್ರಶಾಂತ್‌ ಮೇಲೆ ಇಬ್ಬರು ಅಪರಿಚಿತರು ಬೈಕ್‌ ಮೇಲೆ ಬಂದು ದಾಳಿ ನಡೆಸಿದ್ದಾರೆ. ಈಗಾಗಲೇ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ ಪ್ರಶಾಂತ್‌. ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಧ್ರುವ ಸರ್ಜಾ ಅವರು ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.

VISTARANEWS.COM


on

Dhruva Sarja Trainer Prashanth Was Attacked First Reaction
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ (Dhruva Sarja) ಜತೆಗಿದ್ದ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಭಾನುವಾರ (ಮೇ 26) ರಾತ್ರಿ ಬೆಂಗಳೂರಿನ ಕೆ ಆರ್ ರಸ್ತೆಯಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಸ್ಥಳೀಯ ಹುಡುಗರ ಜತೆ ಗಲಾಟೆ (Dhruva Sarja Trainer Prashanth) ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಗೆ ಸಂಬಂಧಿಸಿದಂತೆ ಧ್ರುವ ಸರ್ಜಾ ಅವರು ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಹಲ್ಲೆ ಬಗ್ಗೆ ಬನಶಂಕರಿ ಪೊಲೀಸರಿಗೆ ಪ್ರಶಾಂತ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವೊಂದಕ್ಕೆ ಧ್ರುವ ಸರ್ಜಾ ಮಾಹಿತಿ ನೀಡಿ ʻʻಪ್ರಶಾಂತ್‌ ಅವರು ಕೆಡಿ ಸಿನಿಮಾ ಈವೆಂಟ್‌ನಲ್ಲಿ ನನ್ನ ಜತೆಯೇ ಇದ್ದರು. ಹೌದು, ಹಲ್ಲೆ ನಡೆದಿದ್ದು ನಿಜ. ಅವರ ವೈಯಕ್ತಿಕ ವಿಚಾರಕ್ಕೆ ಪ್ರಶಾಂತ್ ಮೇಲೆ ಹಲ್ಲೆಯಾಗಿದೆ. ಪ್ರಶಾಂತ್ ನಮ್ ಹುಡುಗ, ಅವನ ಜತೆಗಿರುತ್ತೇನೆ. ಇದು ಮೇಲ್ನೋಟಕ್ಕೆ ಪ್ರಿ ಪ್ಲಾನ್‌ ಅನ್ನಿಸುತ್ತದೆ. ಈ ವಿಚಾರ ದೊಡ್ಡದು ಮಾಡೋದು ಬೇಡʼʼ ಎಂದಿದ್ದಾರೆ.. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಶಾಂತ್‌ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಂಬರ್ ಪ್ಲೇಟ್ ಇಲ್ಲದ ಗಾಡಿಯಲ್ಲಿ ಮುಖ ಮುಚ್ಚಿಕೊಂಡು ಪ್ರಶಾಂತ್‌ ಮೇಲೆ ಇಬ್ಬರು ಅಪರಿಚಿತರು ಬೈಕ್‌ ಮೇಲೆ ಬಂದು ದಾಳಿ ನಡೆಸಿದ್ದಾರೆ. ಈಗಾಗಲೇ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ ಪ್ರಶಾಂತ್‌. ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸಿನಿಮಾ ವಿಚಾರಕ್ಕೆ ಬಂದರೆ ಪ್ರೇಮ್‌ ಹಾಗೂ ಧ್ರುವ ಸರ್ಜಾ (Dhruva Sarja) ಈಗಾಗಲೇ ʻಕೆಡಿʼ ಸಿನಿಮಾ (KD movie) ಬಿಡುಗಡೆ ಯಾವಾಗ ಎಂಬುದನ್ನು ರಿವೀಲ್‌ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಕೆಡಿ ಸಿನಿಮಾ ತೆರೆ ಕಾಣುತ್ತಿದೆ. ಚಿತ್ರರಂಗಕ್ಕೆ ಬಂದ 12 ವರ್ಷಗಳಲ್ಲಿ ಧ್ರುವ ಸರ್ಜಾ 4 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ ಎನ್ನುವ ಬೇಸರ ಕೆಲವರದ್ದು. ಇದೀಗ ಹೊಸ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಬಾಲಿವುಡ್‌ಗೆ ಧ್ರುವ ಸರ್ಜಾ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Dhruva Sarja:  ಧ್ರುವ ಸರ್ಜಾ ಜತೆಗಿದ್ದ ಜಿಮ್ ಟ್ರೈನರ್ ಮೇಲೆ ಮಚ್ಚಿನಿಂದ‌ ಹಲ್ಲೆ?

ಬಹುನಿರೀಕ್ಷಿತ ‘ವಾರ್-2’ ಚಿತ್ರದಲ್ಲಿ ಕನ್ನಡದ ನಟ ಬಣ್ಣ ಹಚ್ಚುತ್ತಾರೆ ಎನ್ನಲಾಗುತ್ತಿದೆ. ತೆಲುಗು ಮಾಧ್ಯಮಗಳಲ್ಲಿ ಕೂಡ ಇಂತಹದೊಂದು ಸುದ್ದಿ ಹರಿದಾಡುತ್ತಿದೆ. ಜ್ಯೂ. ಎನ್‌ಟಿಆರ್ ಸಹೋದರನ ಪಾತ್ರದಲ್ಲಿ ಧ್ರುವ ನಟಿಸುತ್ತಾರೆ ಎಂದು ಎಂದು ವರದಿಯಾಗುತ್ತಿದೆ. ಧ್ರುವ ಸರ್ಜಾ ಈ ಚಿತ್ರದಲ್ಲಿ ನಟಿಸುತ್ತಾರೆ, ಆ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಾರೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ವರದಿಯ ಪ್ರಕಾರ, ಜ್ಯೂನಿಯರ್‌ ಎನ್‌ಟಿಆರ್‌ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಬಳಿಕ ಆದಿತ್ಯ ಚೋಪ್ರಾ ಅವರು ಅಯನ್ ಮುಖರ್ಜಿ ಅವರ ನಿರ್ದೇಶಕ್ಕೆ ಮನಸೋತು, ಈ ಸಿನಿಮಾ ಮಾಡಲು ಅವಕಾಶ ನೀಡಿದ್ದಾರೆ ಎನ್ನಲಾಗಿದೆ.

ಸಿದ್ದಾರ್ಥ್ ಆನಂದ್ ಅವರು ‘ವಾರ್’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿದ್ದರು. ಮೊದಲ ಪಾರ್ಟ್​​ನಲ್ಲಿ ಟೈಗರ್ ಶ್ರಾಫ್ ಪಾತ್ರ ಕೊನೆಗೊಂಡಿದೆ. ಹೀಗಾಗಿ ‘ವಾರ್-2’ ಚಿತ್ರದಲ್ಲಿ ಹೃತಿಕ್ ಮಾಡಿರುವ ಕಬೀರ್ ಪಾತ್ರ ಮುಂದುವರಿಯುತ್ತಿದೆ. ಜ್ಯೂನಿಯರ್‌ ಎನ್‌ಟಿಆರ್‌ ಅವರು ತಮ್ಮ ಮೊದಲ ಬಾಲಿವುಡ್​ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವುದು ವಿಶೇಷ. ವಾರ್‌-2 ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ಉತ್ತರ ಮತ್ತು ದಕ್ಷಿಣ ಭಾಗದ ಸೂಪರ್‌ಸ್ಟಾರ್‌ಗಳನ್ನು ಹೊಂದಿದೆ. ಕಿಯಾರಾ ಆಡ್ವಾಣಿ ಈ ಸಿನಿಮಾ ನಾಯಕಿ. ʼವಾರ್ 2ʼ 2025ರ ಆಗಸ್ಟ್ 14ರಂದು ಬಿಡುಗಡೆಯಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಸ್ಯಾಂಡಲ್ ವುಡ್

Actor Darshan: `ದರ್ಶನ್‌’ ಫುಲ್‌ ಟೈಟ್‌ ಆದಾಗಲೇ ಅಗ್ರೆಸಿವ್‌ ಆಗೋದು‌ ಎಂದ ಭಾವನಾ ಬೆಳಗೆರೆ!

Actor Darshan: ಕೊಲೆ ಕೇಸ್‌ ಆದ ಬಳಿಕ ರೇಣುಕಾಸ್ವಾಮಿ ನಿವಾಸಕ್ಕೆ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಭೇಟಿ ನೀಡಿ, ಮೃತ ರೇಣುಕಾ ಸ್ವಾಮಿಯ ಪತ್ನಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಆದರೀಗ ವಿಸ್ತಾರ ನ್ಯೂಸ್‌ನಲ್ಲಿ ಭಾವನಾ ಬೆಳಗೆರೆ ಅವರು ʻಕುಡಿದಾಗ ಮಾತ್ರ ದರ್ಶನ್‌ ಅಗ್ರೆಸ್ಸಿವ್‌ ಆಗಿ ಮಾತಾಡಡುತ್ತಾರೆ. ಹಾಗೇ ಈ ಕೃತ್ಯ ಕುಡಿದಾಗಲೇ ಮಾಡಿರಬಹುದುʼʼಎಂದು ಹೇಳಿಕೆ ನೀಡಿದ್ದಾರೆ.

VISTARANEWS.COM


on

Actor Darshan Full aggressive mode while he drunk
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ಆದ ಬಳಿಕ ರೇಣುಕಾಸ್ವಾಮಿ ನಿವಾಸಕ್ಕೆ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಭೇಟಿ ನೀಡಿ, ಮೃತ ರೇಣುಕಾ ಸ್ವಾಮಿಯ ಪತ್ನಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಮಾತ್ರವಲ್ಲ ಹಲವು ಮಾಧ್ಯಮಗಳಿಗೆ ಈ ಬಗ್ಗೆ ಹೇಳಿಕೆ (Actor Darshan) ನೀಡಿದ್ದಾರೆ. ಆದರೀಗ ವಿಸ್ತಾರ ನ್ಯೂಸ್‌ನಲ್ಲಿ ಭಾವನಾ ಬೆಳಗೆರೆ ಅವರು ʻಕುಡಿದಾಗ ಮಾತ್ರ ದರ್ಶನ್‌ ಅಗ್ರೆಸ್ಸಿವ್‌ ಆಗಿ ಮಾತಾಡಡುತ್ತಾರೆ. ಹಾಗೇ ಈ ಕೃತ್ಯ ಕುಡಿದಾಗಲೇ ಮಾಡಿರಬಹುದುʼʼಎಂದು ಹೇಳಿಕೆ ನೀಡಿದ್ದಾರೆ.

ಭಾವನಾ ಬೆಳಗೆರೆ ಮಾತನಾಡಿ ʻʻದರ್ಶನ್‌ ಅವರು ಕುಡಿದು ಮಾತನಾಡುವಾಗ ಅಗ್ರೆಸಿವ್‌ ಆಗಿ ಮಾತಾಡ್ತಾರೆ. ಇಲ್ಲ ಅಂದರೆ ಆರಾಮಾಗಿ ಮಾತನಾಡುತ್ತಾರೆ. ಪ್ರತಿ ಬಾರಿ ಮಾತನಾಡುವಾಗ ಅಲ್ವಾ! ಎಂಬ ಉತ್ತರಕ್ಕೆ ಕಾಯುತ್ತಾರೆ. ಮಿಕ್ಕಿದ ದಿನದಲ್ಲಿ ಕ್ಯಾಮೆರಾಗೆ ಅಟ್ಯಾಕ್‌ ಮಾಡಲು ಬರುತ್ತಾರೆ. ಕುಡಿದಿದ್ದಾಗ ಯಾರು ಏನೇ ಹೇಳಿದ್ದರೂ ಒಪ್ಪಿಕೊಳ್ಳಲ್ಲ. ಇಂದು ನಾನು ತಂದೆಯವರೆ ಹಿಸ್ಟರಿ ಇಟ್ಟುಕೊಂಡು ಮಾತಾಡ್ತಾ ಇಲ್ಲ. ನನ್ನ ಸ್ವತಃ ಅಣುಭವ ಹಂಚಿಕೊಳ್ಳುತ್ತಿರುವೆʼʼಎಂದರು.

ಇದನ್ನೂ ಓದಿ: ‌Actor Darshan: ರೇಣುಕಾಸ್ವಾಮಿಯನ್ನ ಹೀರೊ ಮಾಡೋದು ನಿಲ್ಲಿಸಿ, ದರ್ಶನ್‌ನ ಬಿಟ್ಟುಕೊಡಲ್ಲ ಎಂದ ಖ್ಯಾತ ನಿರೂಪಕಿ!

ʻʻಆಗಿನ ಕಾಲದ ನಟರನ್ನು ನಾವು ಪೂಜಿಸುತ್ತಿದ್ದೇವು. ಅಣ್ಣಾವ್ರ ಆಗಲಿ ಹಲವು ನಟರು ಇಷ್ಟವಾಗುತ್ತಿದ್ದರು. ಆದರೆ ಆಗ ಅಭಿಮಾನಿಗಳ ನಡುವೆ ಜಿದ್ದಾ ಜಿದ್ದಿ ಇರಲಿಲ್ಲ. ಆದರೆ ಈಗ ದರ್ಶನ್‌ ಅಥವಾ ಅಪ್ಪು, ಸುದೀಪ್‌ ಈ ರೀತಿ ಅಭಿಮಾನಿಗಳು ಮಾತನಾಡಲು ಶುರು ಮಾಡಿದ್ದಾರೆ. ಮುಂಚೆ ಎಲ್ಲರೂ ಒಟ್ಟಿಗೆ ನಿಂತು ಬೆಳೆಸುತ್ತಿದ್ದರು. ಆದರೀಗ ಒಬ್ಬರ ಫ್ಯಾನ್ಸ್‌ ಇನ್ನೊಬ್ಬರ ಸಿನಿಮಾ ಕೂಡ ನೋಡುತ್ತಿಲ್ಲʼʼಎಂದರು.

ನಮ್ಮ ತಂದೆ ಅವತ್ತು ಬುದ್ಧಿ ಹೇಳಿದ್ದೇ ತಪ್ಪಾ?

ʻʻನನ್ನ ತಂದೆ ದರ್ಶನ್‌ ಅವರಿಗೆ ವಿಜಯಲಕ್ಷ್ಮಿ ಅವರನ್ನು ಹೊಡೆಯಬೇಡ ಎಂದಿದ್ದಾಗ, ದರ್ಶನ್‌ ನನ್ನ ಹೆಂಡತಿ ಅವಳು ಹೊಡತ್ತೀನಿ, ನೀನು ಯಾರು ಎಂದು ಕೇಳಿದ್ದರು. ಆದರೆ ನನ್ನ ತಂದೆ ಬುದ್ಧಿ ಮಾತು ಹೇಳಿದ್ದರು. ಕುಡಿದಾಗ ಮಾತ್ರ ದರ್ಶನ್‌ ಹೀಗೆ. ಆದರೆ ಬೇರೆ ಸಮಯದಲ್ಲಿ ತುಂಬ ಸಾಫ್ಟ್‌. ಈ ಕೃತ್ಯ ಆದಾಗ ಅವರು ಕುಡಿದಾಗಲೇ ಮಾಡಿರೋದು. ಆದರೆ ಈಗ ಕಾನೂನು ಒಂದೇ. ಕುಡಿದು ಮಾಡಿದೆ ಅಂತ ಕ್ಷಮೆ ಏನು ಕಡಿಮೆ ಆಗಲ್ಲ. ಆದರೆ ದರ್ಶನ್‌ ಯಾವಾಗ ಈ ರೀತಿಯ ಗೂನವನ್ನು ಸರಿ ಮಾಡ್ಕೋತ್ತಾರೆ? ಆದರೆ ಮುಂದೆ ಏನಾಗುತ್ತೆ ಎನ್ನುವುದು ಗೊತ್ತಿಲ್ಲʼʼಎಂದರು.

ರೇಣುಕಾ ಸ್ವಾಮಿ ಚಿತ್ರದುರ್ಗದವರಾಗಿದ್ದು ಬಡ ಮಧ್ಯಮ ಕುಟುಂಬದವರಾಗಿದ್ದಾರೆ. ಕಳೆದ ವರ್ಷ ಇದೇ ತಿಂಗಳು ಮದುವೆಯಾಗಿದ್ದ ರೇಣುಕಾ ಸ್ವಾಮಿಯ ಪತ್ನಿ ಐದು ತಿಂಗಳ ಗರ್ಭಿಣಿ. ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಸ್ವಾಮಿಯನ್ನು ಶನಿವಾರ ಅಪಹರಣ ಮಾಡಿದ್ದ ನಟ ದರ್ಶನ್ ಸಹಚರರು ಪಟ್ಟಣಗೆರೆಯ ಶೆಡ್​ನಲ್ಲಿ ಕೂಡಿಹಾಕಿ ಹೊಡೆದು, ಚಿತ್ರಹಿಂಸೆ ನೀಡಿ ಕೊಲೆ ಮಾಡಿ, ಚರಂಡಿಗೆ ಎಸಗಿ ಹೋಗಿದ್ದರು.

Continue Reading

ಸ್ಯಾಂಡಲ್ ವುಡ್

Tharun Sudhir: ದರ್ಶನ್‌ ತಮಾಷೆಯಿಂದಲೇ ಹುಟ್ಟಿತು ತರುಣ್‌- ಸೋನಲ್‌ ಪ್ರೀತಿ? ಇಬ್ಬರ ಲವ್ ಸ್ಟೋರಿ ಶುರುವಾಗಿದ್ದೇಗೆ?

Tharun Sudhir: ಚೌಕ’ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ತರುಣ್ ಮುಂದೆ ಒಂದರ ಹಿಂದೆಯಂತೆ ಎರಡು ಹಿಟ್ ಸಿನಿಮಾಗಳನ್ನು ಕೊಟ್ಟರು. ಇದೀಗ ತರುಣ್ 4ನೇ ಸಿನಿಮಾ ತಯಾರಿಯಲ್ಲಿದ್ದಾರೆ. ಖಳನಟ ಸುಧೀರ್ ಕಿರಿಯಪುತ್ರ ತರುಣ್ ಮದುವೆ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿವೆ. ಈಗಾಗಲೇ ತರುಣ್‌ ಅವರ ಮದುವೆ ಫಿಕ್ಸ್‌ ಆಗಿದ್ದು, ಎರಡು ತಿಂಗಳಲ್ಲಿ ಮದುವೆ ಫಿಕ್ಸ್‌ ಎನ್ನುವ ವದಂತಿ ಹಬ್ಬಿದೆ.

VISTARANEWS.COM


on

Tharun Sudhir and sonal monteiro love story support By Darshan
Koo

ಬೆಂಗಳೂರು: ನಟಿ ಸೋನಾಲ್ ಮಂಥೆರೊ (sonal monteiro) ಹಾಗೂ ನಿರ್ದೇಶಕ ತರುಣ್ ಸುಧೀರ್ (Tharun Sudhir) ಮದುವೆಯಾಗುವುದು ಬಹುತೇಕ ಫಿಕ್ಸ್‌ ಎನ್ನಲಾಗುತ್ತಿದೆ. ತರುಣ್ ಸುಧೀರ್ ತಾಯಿ ಮಾಲತಿ ಸುಧೀರ್ ಈ ಮದುವೆ ವಿಚಾರವನ್ನು ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ. ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಜೋಡಿ ಅಧಿಕೃತವಾಗಿ ಹೇಳಿಕೆ ನೀಡಿಲಿದೆ ಎನ್ನಲಾಗಿದೆ. ‘ರಾಬರ್ಟ್’ ಚಿತ್ರದಲ್ಲಿ ಸೋನಲ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಶೂಟಿಂಗ್ ಸಮಯದಲ್ಲೇ ತರುಣ್- ಸೋನಲ್ ನಡುವೆ ಪ್ರೀತಿ ಹುಟ್ಟಿತ್ತು ಎಂದು ಹೇಳಲಾಗುತ್ತಿದೆ. ಇನ್ನು ದರ್ಶನ್‌ ಕೂಡ ಆಗಾಗ ತರುಣ್‌ಗೆ ಮದುವೆ ಮಾಡಿಸಬೇಕು ಎನ್ನುತ್ತಿದ್ದರಂತೆ. ಹಾಗಾಗಿ ಶೂಟಿಂಗ್‌ ಸೆಟ್‌ನಲ್ಲಿ ತರುಣ್- ಸೋನಲ್ ಇಬ್ಬರನ್ನು ತಮಾಷೆಯಾಗಿ ರೇಗಿಸುತ್ತಿದ್ದರು, ಇದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿರಬಹುದು ಎನ್ನಲಾಗಿದೆ.

ತರುಣ್ ನಿರ್ದೇಶನದ ‘ರಾಬರ್ಟ್’ ಚಿತ್ರದಲ್ಲಿ ರಾಘವ ವಿನೋದ್ ಪ್ರಭಾಕರ್ ಜೋಡಿ ತನು ಆಗಿ ಸೋನಲ್ ಮಿಂಚಿದ್ದರು. ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಸೋನಲ್ ಮೊದಲಿಗೆ ತುಳು ಸಿನಿಮಾಗಳಲ್ಲಿ ನಟಿಸಿದ್ದರು. ‘ಅಭಿಸಾರಿಕೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಇದೀಗ ಈ ಜೋಡಿ ಸಪ್ತಪದಿ ತುಳಿಯಲಿದೆ ಎನ್ನಲಾಗಿದೆ. ತರುಣ್‌ ಹಾಗೂ ಸೋನಲ್‌ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

‘ಚೌಕ’ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ತರುಣ್ ಮುಂದೆ ಒಂದರ ಹಿಂದೆಯಂತೆ ಎರಡು ಹಿಟ್ ಸಿನಿಮಾಗಳನ್ನು ಕೊಟ್ಟರು. ಇದೀಗ ತರುಣ್ 4ನೇ ಸಿನಿಮಾ ತಯಾರಿಯಲ್ಲಿದ್ದಾರೆ. ಖಳನಟ ಸುಧೀರ್ ಕಿರಿಯಪುತ್ರ ತರುಣ್ ಮದುವೆ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿವೆ. ಈಗಾಗಲೇ ತರುಣ್‌ ಅವರ ಮದುವೆ ಫಿಕ್ಸ್‌ ಆಗಿದ್ದು, ಎರಡು ತಿಂಗಳಲ್ಲಿ ಮದುವೆ ಫಿಕ್ಸ್‌ ಎನ್ನುವ ವದಂತಿ ಹಬ್ಬಿದೆ.

ಇದನ್ನೂ ಓದಿ: Tharun Sudhir: ಸೋನಲ್ ಜತೆ `ತರುಣ್ ಸುಧೀರ್‌’ಗೆ ಕೂಡಿಬಂತು ಕಂಕಣಭಾಗ್ಯ?

ಎಕ್ಸ್‌ಕ್ಯೂಸ್‌ಮಿ’ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದರು. ‘ರ್ಯಾಂಬೊ’ ಚಿತ್ರದ ಸಹ ನಿರ್ದೇಶಕರಾಗಿ ಕೆಲಸ ಮಾಡಿ ತರುಣ್ ‘ಚೌಕ’ ಚಿತ್ರದಿಂದ ನಿರ್ದೇಶಕರಾದರು. ತರುಣ್‌ ಹಾಗೂ ಸೋನಲ್‌ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಅಗಸ್ಟ್‌ 10ಕ್ಕೆ ತರುಣ್‌ ಅವರ ಮದುವೆ ಎನ್ನಲಾಗಿದೆ.

ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಸೋನಲ್ ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಆರಂಭಿಸಿದ್ದರು. ‘ಎಕ್ಕಾ ಸಕ್ಕಾ’ ಎನ್ನುವ ತುಳು ಚಿತ್ರದಲ್ಲಿ ಮೊದಲಿಗೆ ನಟಿಸಿದರು. ಬಳಿಕ ಮತ್ತೆರಡು ತುಳು ಸಿನಿಮಾ ಅವಕಾಶ ಸಿಕ್ಕಿತ್ತು. ನಂತರ ‘ಅಭಿಸಾರಿಕ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.

‘ಎಂಎಲ್‌ಎ’, ‘ಮದುವೆ ದಿಬ್ಬಣ’, ‘ಪಂಚತಂತ್ರ’, ‘ಡೆಮೊ ಪೀಸ್’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಸೋನಲ್ ಮಿಂಚಿದರು.ರಾಬರ್ಟ್’ ಬಳಿಕ ‘ಶಂಭೋ ಶಿವ ಶಂಕರ’, ‘ಗರಡಿ’, ‘ಶುಗರ್ ಫ್ಯಾಕ್ಟರಿ’ ಸಿನಿಮಾಗಳಲ್ಲಿ ಸೋನಲ್ ನಟಿಸಿದ್ದಾರೆ. ‘ಬುದ್ಧಿವಂತ-2’ ಹಾಗೂ ‘ಮಾರ್ಗರೆಟ್ ಲವರ್ ಆಫ್ ರಾಮಾಚಾರಿ’ ಸಿನಿಮಾಗಳಲ್ಲಿ ನಟಿಸಿದ್ದು ಇನ್ನಷ್ಟೇ ಈ ಸಿನಿಮಾಗಳು ತೆರೆಗೆ ಬರಬೇಕಿದೆ.

Continue Reading

ಸ್ಯಾಂಡಲ್ ವುಡ್

‌Actor Darshan: ರೇಣುಕಾಸ್ವಾಮಿಯನ್ನ ಹೀರೊ ಮಾಡೋದು ನಿಲ್ಲಿಸಿ, ದರ್ಶನ್‌ನ ಬಿಟ್ಟುಕೊಡಲ್ಲ ಎಂದ ಖ್ಯಾತ ನಿರೂಪಕಿ!

Actor Darshan: ರೇಣುಕಾಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ (Actor Darshan) ಮತ್ತು ಆತನ ಸಹಚರ ಪ್ರದೋಷ್‌ ಬಗ್ಗೆ ಮತ್ತೊಂದು ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದೆ. ಇಬ್ಬರ ಬಳಿಯೂ ಪರವಾನಗಿ ಹೊಂದಿದ ಪಿಸ್ತೂಲ್‌ಗಳಿದ್ದು Licenced Pistol), ಲೋಕಸಭೆ ಚುನಾವಣೆ (Lok Sabha Election 2024) ವೇಳೆ ಇಬ್ಬರೂ ಅವುಗಳನ್ನು ಪೊಲೀಸರ ಬಳಿ ಠೇವಣಿ (deposit) ಇರಿಸಿರಲಿಲ್ಲ ಎಂಬುದು ಗೊತ್ತಾಗಿದೆ. ಇದೀಗ ಅವುಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.

VISTARANEWS.COM


on

Actor Darshan support by anchor hemalatha
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿಯ ಭೀಕರ (Actor Darshan) ಹತ್ಯೆಯಲ್ಲಿ ಪವಿತ್ರಾ ಗೌಡ ಹಾಗೂ ದರ್ಶನ್​ 14ದಿನಗಳ ವರೆಗೆ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಹಲವರು ನಟನ ಬೆಂಬಲಕ್ಕೆ ನಿಂತಿದ್ದರು. ನಟಿ ಸಂಜನಾ ಗಲ್ರಾನಿ ಅವರು ಕೂಡ ಸ್ಪಷ್ಟ ಅಭಿಪ್ರಾಯ ನೀಡಿ ದರ್ಶನ್ ತೂಗುದೀಪ ಬೆಂಬಲಕ್ಕೆ ನಿಂತಿದ್ದರು. ಇದರ ಬೆನ್ನಲ್ಲೇ ಕನ್ನಡದ ಖ್ಯಾತ ನಿರೂಪಕಿ ಹೇಮಾಲತಾ ತಮ್ಮ ಇನ್‌ಸ್ಟಾ ಖಾತೆಯಲ್ಲಿ ದರ್ಶನ್‌ ಜೊತೆಗಿನ ಫೋಟೋ ಹಂಚಿಕೊಂಡು ಮೃತ ರೇಣುಕಾಸ್ವಾಮಿಯನ್ನು ಹೀರೋ ಮಾಡುವುದನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದಾರೆ.

ನಿರೂಪಕಿ ಹೇಮಾಲತಾ ಪೋಸ್ಟ್‌ನಲ್ಲಿ ʻʻಸಾವಿರ ಜನ ಸಾವಿರ ಮಾತನಾಡಲಿ.. ಒಮ್ಮೆ ಬೆಳೆದ ಸ್ನೇಹಕ್ಕೆ ಕಡಲಿನಸ್ಟಿರುವ ಪ್ರೀತಿಗೆ ನಾವೆಲ್ಲರೂ ಋಣಿಗಳೇ.. ಸ್ನೇಹಾವೆಂಬ ಸಂಕೋಲೆಯಲಿ ಒಮ್ಮೆ ಸಿಕ್ಕಿಕೊಂಡರೆ ಕೊಂಡಿ ಕಳಚುವುದಿಲ್ಲ…
ಅಂದಿಗೂ ಇಂದಿಗೂ ಎಂದೆಂದಿಗೂ ಮರೆಯುವುದಿಲ್ಲ, ಬಿಡುವುದಿಲ್ಲ, ಬಿಟ್ಟುಕೊಡುವುದಿಲ್ಲ. ಈ ಘಟನೆಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ, ಕಾನೂನಿನ ಮುಖಾಂತರ ಅಂತ್ಯವನ್ನಾಡಿ ಎಲ್ಲಾ ಕಳಂಕವನ್ನು ತೊಳೆದುಕೊಂಡು ಹೊರಗೆ ಬನ್ನಿ. ನಿಮ್ಮ ಮೇಲಿರುವ ಪ್ರೀತಿ ಗೌರವ ಎಂದಿಗೂ ಕಮ್ಮಿ ಆಗುವುದಿಲ್ಲ. ಅಲ್ಲದೇ ಕೊಲೆಯಾಗಿರುವ ರೇಣುಕಾಸ್ವಾಮಿಯನ್ನು ಹೀರೋ ಎನ್ನುವಂತೆ ಬಿಂಬಿಸಬೇಡಿʼʼ ಎಂದು ನಿರೂಪಕಿ ಹೇಮಾಲತಾ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಹಲ್ಲೆಗೆ ಬಳಸಿದ್ದ ʻಪೊಲೀಸ್ ಲಾಠಿʼ ಪತ್ತೆ! ʻಡಿ ಗ್ಯಾಂಗ್‌ʼಗೆ ಸಿಕ್ಕಿದ್ದು ಹೇಗೆ?

ಇನ್ನು ಈ ಹಿಂದೆ ಬಿಗ್‌ಬಾಸ್‌ ಸ್ಪರ್ಧಿ ಇಶಾನಿ ದರ್ಶನ್‌ ಜೊತೆಗಿನ ಫೋಟೋ ಹಂಚಿಕೊಂಡು, ದರ್ಶನ್ ಸರ್ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ ಎಂದಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಇಶಾನಿ, ನಿಜಕ್ಕೂ ಇದು ಅಘಾತಕಾರಿ ಸುದ್ದಿ. ಒಬ್ಬ ಅಣ್ಣನ ರೂಪದಲ್ಲಿ ನಾನು ಕಂಡ ದರ್ಶನ್ ಸರ್ ನಿಜಕ್ಕೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಕೇಳಿದಾಗ ನಂಬಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದರ್ಶನ್‌, ಪ್ರದೋಷ್‌ನಿಂದ ಮೂರು ಪಿಸ್ತೂಲ್‌ ವಶಕ್ಕೆ

ರೇಣುಕಾಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ (Actor Darshan) ಮತ್ತು ಆತನ ಸಹಚರ ಪ್ರದೋಷ್‌ ಬಗ್ಗೆ ಮತ್ತೊಂದು ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದೆ. ಇಬ್ಬರ ಬಳಿಯೂ ಪರವಾನಗಿ ಹೊಂದಿದ ಪಿಸ್ತೂಲ್‌ಗಳಿದ್ದು Licenced Pistol), ಲೋಕಸಭೆ ಚುನಾವಣೆ (Lok Sabha Election 2024) ವೇಳೆ ಇಬ್ಬರೂ ಅವುಗಳನ್ನು ಪೊಲೀಸರ ಬಳಿ ಠೇವಣಿ (deposit) ಇರಿಸಿರಲಿಲ್ಲ ಎಂಬುದು ಗೊತ್ತಾಗಿದೆ. ಇದೀಗ ಅವುಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.

ದರ್ಶನ್ ಬಳಿ ಎರಡು ಯುಎಸ್ ಮೇಡ್ ಪಿಸ್ತೂಲ್‌ಗಳು, ಪ್ರದೋಷ್ ಬಳಿ ಒಂದು ಲೈಸೆನ್ಸ್ ಪಿಸ್ತೂಲ್‌ ಇವೆ. ಕಳೆದ ಲೋಕಸಭಾ ಚುನಾವಣಾ ವೇಳೆ ಲೈಸೆನ್ಸ್ ಪಡೆದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕಿತ್ತು. ಆದರೆ ಚುನಾವಾಣೆ ವೇಳೆ ಶಸ್ತ್ರಾಸ್ತ್ರ ಠೇವಣಿಯಿಂದ ದರ್ಶನ್ ಮತ್ತು ಪ್ರದೋಷ್ ವಿನಾಯಿತಿ ಪಡೆದಿದ್ದರು.

ಬೆಂಗಳೂರು ನಗರಾದ್ಯಂತ 7830 ಗನ್ ಲೈಸೆನ್ಸ್ ಪರವಾನಗಿದಾರರಿದ್ದಾರೆ. ಈ ಪೈಕಿ ದರ್ಶನ್ ಮತ್ತು ಪ್ರದೋಷ್ ಸೇರಿ 277 ಜನರಿಗೆ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ನೀಡಲಾಗಿತ್ತು. ಉಳಿದ 7553 ಪರವಾನಗಿ ಹೊಂದಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ಠೇವಣಿ ಇರಿಸಿಕೊಂಡಿದ್ದರು. ಆದರೆ ನಟ ದರ್ಶನ್ ಮತ್ತು ಪ್ರದೋಷ್ ಪಿಸ್ತೂಲ್ ವಾಪಸ್ ಮಾಡದೇ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಪಡೆದಿದ್ದಾರೆ.

ಬೆಂಗಳೂರಿನ 277 ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಪಡೆದವರಲ್ಲಿ ದರ್ಶನ್ ಮತ್ತು ಪ್ರದೋಷ್‌ಗೂ ವಿನಾಯಿತಿ ನೀಡಲಾಗಿದ್ದು, ಬೆಂಗಳೂರು ಪೊಲೀಸ್ ಕಮೀಷನರ್ ಅವರಿಂದಲೇ ವಿನಾಯಿತಿ ನೀಡಿ ಆದೇಶ ದೊರೆತಿದೆ. ಕಮೀಷನರ್ ಬಿ. ದಯಾನಂದ ಶಸ್ತ್ರಾಸ್ತ್ರ ಠೇವಣಿ ಸ್ಕ್ರೀನಿಂಗ್ ಕಮಿಟಿಯ ಅಧ್ಯಕ್ಷರಾಗಿದ್ದರು. ಅತಿ ಗಣ್ಯರಿಗೆ ನೀಡುವ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿಯಲ್ಲಿ ನಟ ದರ್ಶನ್ ಮತ್ತು ಪ್ರದೋಷ್ ಕೂಡ ಅವಕಾಶ ಪಡೆದಿದ್ದು, ಕಳೆದ ಮಾರ್ಚ್ 27ರಂದು ವಿನಾಯಿತಿ ನೀಡಿ ಕಮೀಷನರ್ ದಯಾನಂದ್ ಆದೇಶ ನೀಡಿದ್ದರು.

Continue Reading

ಸ್ಯಾಂಡಲ್ ವುಡ್

Neha Gowda: ಸೀರೆಯುಟ್ಟು ಸಿಂಪಲ್‌ ಆಗಿ ಗಂಡನ ಜತೆ ಪೋಸ್‌ ಕೊಟ್ಟ ಗರ್ಭಿಣಿ ನೇಹಾ ಗೌಡ!

Neha Gowda: ಬಿಗ್‌ ಬಾಸ್‌ ಕನ್ನಡ ಸೀಸನ್‌ 9ರಲ್ಲಿ ಸ್ಪರ್ಧಿಸಿದ್ದರು ನೇಹಾ, ಕನ್ನಡದ ಜತೆಗೆ ತೆಲುಗು, ತಮಿಳು ಭಾಷೆಗಳಲ್ಲೂ ನೇಹಾ ಕೆಲಸ ಮಾಡಿದ್ದಾರೆ. ಪತಿ ಚಂದನ್ ಜತೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ರಾಜ-ರಾಣಿ ರಿಯಾಲಿಟಿ ಶೋನಲ್ಲೂ ಭಾಗವಹಿಸಿ ಗೆದ್ದಿದ್ದರು

VISTARANEWS.COM


on

Neha Gowda in saree with baby bump
Koo

ಮದುವೆಯಾದ 6 ವರ್ಷಗಳ ಬಳಿಕ ಸಿಹಿ ಸುದ್ದಿ ಕೊಟ್ಟಿದ್ದಾರೆ ಲಕ್ಷ್ಮೀ ಬಾರಮ್ಮ ಖ್ಯಾತಿಯ ಗೊಂಬೆ (Neha Gowda) ನೇಹಾ ಹಾಗೂ ಚಂದನ್‌ ದಂಪತಿ.

ಇದನ್ನೂ ಓದಿ: Vinay Gowda: ʻಡೆವಿಲ್ʼ ಸಿನಿಮಾದಲ್ಲಿ ನಾನೇ ವಿಲನ್, ಪ್ರಾಜೆಕ್ಟ್‌ ಏನಾಗುತ್ತೋ ಗೊತ್ತಿಲ್ಲ ಎಂದ ʻಬಿಗ್ ಬಾಸ್ʼ ಆನೆ ವಿನಯ್ ಗೌಡ!

ಇದೀಗ ತೋಟವೊಂದರಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೊಗಳನ್ನು ನೇಹಾ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಇತ್ತ ಚಂದನ್ ಗೌಡ ತಮ್ಮ ಖಾತೆಯಲ್ಲಿ ಪತ್ನಿ ಜೊತೆ ಅದೇ ಸ್ಥಳದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ನೇಹಾ ನಿರಂತರವಾಗಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ ಸರಳವಾದ ಸೀರೆ ಧರಿಸಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ.

2018ರಂದು ಬೆಂಗಳೂರಿನಲ್ಲಿ ಚಂದನ್ ಮತ್ತು ನೇಹಾ ಗೌಡ ಮದುವೆಯಾಗಿದ್ದರು.ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ನೇಹಾ ಹಾಗೂ ನಟ ಚಂದನ್​, ಸೋಶಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.

Continue Reading
Advertisement
Narendra Modi
ದೇಶ5 mins ago

Narendra Modi: ಸಂಸತ್ತಿನಲ್ಲಿ ಇಬ್ಬರು ‘ಪುಟಾಣಿ’ ಅತಿಥಿಗಳನ್ನು ಸ್ವಾಗತಿಸಿದ ಮೋದಿ; ಯಾರವರು? Video ನೋಡಿ

Weight Loss Tips
ಆರೋಗ್ಯ11 mins ago

Weight Loss Tips: ನಲವತ್ತರ ನಂತರ ತೂಕ ಇಳಿಸುವುದು ಹೇಗೆ?

Nadaprabhu Kempegowda
ಬೆಂಗಳೂರು17 mins ago

Essay on Kempegowda in Kannada: ನಾಡಪ್ರಭು ಕೆಂಪೇಗೌಡರು ಆಧುನಿಕ ಬೆಂಗಳೂರಿನ ಮೂಲ ಶಿಲ್ಪಿ!

Nitin Gadkari
ದೇಶ51 mins ago

Nitin Gadkari: ಜಿಪಿಎಸ್‌ ತಂತ್ರಜ್ಞಾನದಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಬಂಪರ್;‌ 10 ಸಾವಿರ ಕೋಟಿ ರೂ. ಆದಾಯ!

Paris Fashion Week
ಫ್ಯಾಷನ್1 hour ago

Paris Fashion Week: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್ 2024ರ ಹೈಲೈಟ್ಸ್

Anant Ambani
ದೇಶ1 hour ago

Anant Ambani Video: ಮಹಾರಾಷ್ಟ್ರ ಸಿಎಂ ಹೆಗಲ ಮೇಲೆ ಕೈ ಹಾಕಿದ ಅಂಬಾನಿ ಮಗ! ನೀವೇನಂತೀರಿ?

Viral Video
Latest1 hour ago

Viral Video: ಜಿಮ್‌ಗೆ ಹೋಗುವವರೇ ಹುಷಾರ್‌! ಈ ವಿಡಿಯೊ ನೋಡಿ!

Acharya Pramod Krishnam
ದೇಶ2 hours ago

ಕಾಂಗ್ರೆಸ್‌ನಂತೆ 15 ತಿಂಗಳಲ್ಲಿ ಪ್ರತಿಪಕ್ಷಗಳೂ ರಾಹುಲ್‌ ಗಾಂಧಿಯಿಂದ ನಿರ್ನಾಮ; ಆಚಾರ್ಯ ಪ್ರಮೋದ್‌ ಸ್ಫೋಟಕ ಹೇಳಿಕೆ!

Viral Video
Latest2 hours ago

Viral Video: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

Rohit Sharma
ಕ್ರೀಡೆ2 hours ago

Rohit Sharma: ವಿಶ್ವ ದಾಖಲೆ ಮೇಲೆ ಕಣ್ಣಿಟ್ಟ ಹಿಟ್​ಮ್ಯಾನ್​ ರೋಹಿತ್​; ಲಂಕಾ ಆಟಗಾರನಿಗೆ ನಡುಕ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌