Kargil Vijay Diwas 2024: "ಪಾಕಿಸ್ತಾನ ತಪ್ಪುಗಳಿಂದ ಪಾಠ ಕಲಿತಿಲ್ಲ"; ಪ್ರಧಾನಿ ಮೋದಿ ಟಾಂಗ್‌ - Vistara News

ದೇಶ

Kargil Vijay Diwas 2024: “ಪಾಕಿಸ್ತಾನ ತಪ್ಪುಗಳಿಂದ ಪಾಠ ಕಲಿತಿಲ್ಲ”; ಪ್ರಧಾನಿ ಮೋದಿ ಟಾಂಗ್‌

Kargil Vijay Diwas 2024: ಭಯೋತ್ಪಾದನೆ ಮೂಲಕ ಭಾರತವನ್ನು ಗೆಲ್ಲುವ ಪಾಕಿಸ್ತಾನದ ಉದ್ದೇಶ ಎಂದಿಗೂ ಯಶಸ್ವಿ ಆಗುವುದಿಲ್ಲ ಎಂದು ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಇನ್ನು ಇದೇ ವೇಳ ಅಗ್ನಿಪಥ್‌ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಸೇನೆಯ ಈ ಸುಧಾರಣೆಯಲ್ಲೂ ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

VISTARANEWS.COM


on

Kargil Vijay Diwas 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಡಾಖ್‌: ಕಾರ್ಗಿಲ್‌ ವಿಜಯ ದಿವಸ(Kargil Vijay Diwas 2024)ಕ್ಕೆ ಇಂದಿಗೆ 25ವರ್ಷ ಸಂದಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಡ್ರಾಸ್‌ನಲ್ಲಿರುವ ಕಾರ್ಗಿಲ್‌ ಯುದ್ಧ ಸ್ಮಾರಕ(Kargil War Memorial)ಕ್ಕೆ ಭೇಟಿ ಕೊಟ್ಟು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಕಳೆದ ಯುದ್ಧಗಳಲ್ಲಿ ಸೋಲುಂಡಿದ್ದರೂ ಬುದ್ದಿ ಬಾರದ ಪಾಕಿಸ್ತಾನ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ. ಇದುವರೆಗೆ ಪಾಕಿಸ್ತಾನ ತನ್ನ ತಪ್ಪಿನ ಪಾಠ ಕಲಿತಿಲ್ಲ ಎಂದು ಗುಡುಗಿದ್ದಾರೆ.

ಭಯೋತ್ಪಾದನೆ ಮೂಲಕ ಭಾರತವನ್ನು ಗೆಲ್ಲುವ ಪಾಕಿಸ್ತಾನದ ಉದ್ದೇಶ ಎಂದಿಗೂ ಯಶಸ್ವಿ ಆಗುವುದಿಲ್ಲ ಎಂದು ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಇನ್ನು ಇದೇ ವೇಳ ಅಗ್ನಿಪಥ್‌ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಸೇನೆಯ ಈ ಸುಧಾರಣೆಯಲ್ಲೂ ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಅಗ್ನಿಪಥ್‌ ಯೋಜನೆ ಬಗ್ಗೆ ಆರೋಪಕ್ಕೆ ಪ್ರಧಾನಿ ತಿರುಗೇಟು

ಸೈನ್ಯವನ್ನು ನಿರಂತರವಾಗಿ ಯುದ್ಧಕ್ಕೆ ಸಜ್ಜುಗೊಳಿಸುವುದು ಅಗ್ನಿಪಥ್‌ನ ಗುರಿಯಾಗಿದೆ. ದುರದೃಷ್ಟವಶಾತ್, ಕೆಲವರು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಇಂತಹ ಸೂಕ್ಷ್ಮ ವಿಷಯವನ್ನು ರಾಜಕೀಯದ ವಿಷಯವನ್ನಾಗಿ ಮಾಡಿದ್ದಾರೆ. ಸೇನೆಯ ಈ ಸುಧಾರಣೆಯಲ್ಲೂ ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ. ಸೇನೆಯಲ್ಲಿ ಸಾವಿರಾರು ಕೋಟಿ ಹಗರಣಗಳನ್ನು ಮಾಡಿ ನಮ್ಮ ಸೇನೆಯನ್ನು ದುರ್ಬಲಗೊಳಿಸಿದ್ದು ಇದೇ ಜನರು ಎಂದು ಕಿಡಿ ಕಾರಿದರು.

ಇದನ್ನೂ ಓದಿ: Kargil Vijay Diwas 2024: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಕ್ಷಣವೂ ಯೋಚಿಸದ ಈ ವೀರ ಯೋಧರಿಗೊಂದು ಸಲಾಮ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Sundar Pichai: ಗೂಗಲ್‌ ಸಿಇಒ ಸುಂದರ್‌ ಪಿಚೈಗೆ ಗೌರವ ಡಾಕ್ಟರೇಟ್‌ ಪ್ರದಾನ-ಫೋಟೋ ವೈರಲ್‌

Sundar Pichai:ಇನ್ನು ಈ ವಿಚಾರವನ್ನು ಸುಂದರ್‌ ಪಿಚೈ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಕಳೆದ ವಾರ ನನ್ನ ಅಲ್ಮಾ ಮೇಟರ್ ಐಐಟಿ ಖರಗ್‌ಪುರದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಲು ನಾನು ಕೃತಜ್ಞನಾಗಿದ್ದೇನೆ. ನನ್ನ ಪೋಷಕರು ಯಾವಾಗಲೂ ನನ್ನ ಡಾಕ್ಟರೇಟ್ ಪಡೆಯಬೇಕೆಂದು ಆಶಿಸುತ್ತಿದ್ದರು, ಈ ಗೌರವ ಸ್ವೀಕರಿಸುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ ಎಂದಿದ್ದಾರೆ.

VISTARANEWS.COM


on

Sundar Pichai
Koo

ಹೊಸದಿಲ್ಲಿ: ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಗೂಗಲ್‌ ಸಿಇಒ(Google CEO) ಸುಂದರ್‌ ಪಿಚೈ(Sundar Pichai) ಮತ್ತು ಅವರ ಪತ್ನಿಗೆ ಅಂಜಲಿ ಪಿಚೈ ಅವರಿಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಗಿದೆ. ಖರಗ್‌ಪುರ ಐಐಟಿ(IIT Kharagpur) ಈ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದೆ.

ಇನ್ನು ಈ ವಿಚಾರವನ್ನು ಸುಂದರ್‌ ಪಿಚೈ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಕಳೆದ ವಾರ ನನ್ನ ಅಲ್ಮಾ ಮೇಟರ್ ಐಐಟಿ ಖರಗ್‌ಪುರದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಲು ನಾನು ಕೃತಜ್ಞನಾಗಿದ್ದೇನೆ. ನನ್ನ ಪೋಷಕರು ಯಾವಾಗಲೂ ನನ್ನ ಡಾಕ್ಟರೇಟ್ ಪಡೆಯಬೇಕೆಂದು ಆಶಿಸುತ್ತಿದ್ದರು, ಈ ಗೌರವ ಸ್ವೀಕರಿಸುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ ಎಂದಿದ್ದಾರೆ.

IIT ಯಲ್ಲಿನ ಶಿಕ್ಷಣ ಮತ್ತು ತಂತ್ರಜ್ಞಾನದ ಅಧ್ಯಯನ ನನ್ನನ್ನು Googleನಂತಹ ಅತಿದೊಡ್ಡ ಸಂಸ್ಥೆಯ ಅತಿ ದೊಡ್ಡ ಹುದ್ದೆಯನ್ನು ಅಲಂಕರಿಸುವಂತೆ ಮಾಡಿತು. ಹಾಗೂ ಹೆಚ್ಚಿನ ಜನರು ತಂತ್ರಜ್ಞಾನವನ್ನು ಪ್ರವೇಶಿಸಲು ಸಹಾಯ ಮಾಡಿತು. ತಂತ್ರಜ್ಞಾನದಲ್ಲಿ ಐಐಟಿಯ ಪಾತ್ರವು AI ಕ್ರಾಂತಿಯೊಂದಿಗೆ ಮಾತ್ರ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ನಾನಿ ಅಲ್ಲಿ ಕಳೆದ ಕೆಲವು ಸಮಯಕ್ಕಾಗಿ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ ಎಂದು ಅವರು ಹೇಳಿದರು.

ಅವರು ಗೌರವ ಪದವಿ ಸ್ವೀಕರಿಸುತ್ತಿರುವ ಎರಡು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಸುಂದರ್ ಪಿಚೈ ಅವರಿಗೆ ಡಾಕ್ಟರ್ ಆಫ್ ಸೈನ್ಸ್ (ಆನರಿಸ್ ಕಾಸಾ) ಪ್ರಶಸ್ತಿಯನ್ನು ನೀಡಲಾಯಿತು. ಅವರ ಪತ್ನಿ ಅಂಜಲಿ ಪಿಚೈ ಅವರಿಗೆ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿ ಪ್ರಶಸ್ತಿಯನ್ನು ನೀಡಲಾಯಿತು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಸಮಾರಂಭದಲ್ಲಿ ಅವರು ತಮ್ಮ ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಪಿಚೈ ಪೋಸ್ಟ್‌ಗೆ ನೆಟ್ಟಿಗರ ಪ್ರತಿಕ್ರಿಯೆ

ಇನ್ನು ಸುಂದರ್‌ ಪಿಚೈ ಅವರ ಪೋಸ್ಟ್‌ ಅನೇಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಭಿನಂದನೆ ಸಲ್ಲಿಸಿದ್ದಾರೆ. ಐಐಟಿಯ ವಿದ್ಯಾರ್ಥಿ ಎಂದಿಗೂ ಐಐಟಿಯ ವಿದ್ಯಾರ್ಥಿಯೇ ಆಗಿರುತ್ತಾನೆ. ಸುಂದರ್‌ ಪಿಚೈ ಬರೀ ಹೆಸರಲ್ಲ ಅದೊಂದು ಅದ್ಭುತ ಎಂದು ಒಬ್ಬ ಬರೆದುಕೊಂಡಿದ್ದಾನೆ. ಪಿಚೈ ಒಬ್ಬ ಅದ್ಬುತ ವ್ಯಕ್ತಿ ಅಭಿನಂದನೆಗಳು ಎಂದು ಮತ್ತೊಬ್ಬ ನೆಟ್ಟಿಗ ಬರೆದುಕೊಂಡಿದ್ದಾನೆ.

ಸುಂದರ್ ಪಿಚೈ ಅವರಿಗೆ ಗೌರವ ಪದವಿ ನೀಡಿದ್ದು ಏಕೆ?

ಡಿಜಿಟಲ್ ರೂಪಾಂತರ, ಕೈಗೆಟುಕುವ ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರಗಳಿಗೆ ಅವರ ಗಮನಾರ್ಹ ಕೊಡುಗೆಯನ್ನು ಗುರುತಿಸಿ ಸುಂದರ್‌ ಪಿಚೈ ಅವರಿಗೆ ಈ ಗೌರವ ಪ್ರದಾನ ಮಾಡಲಾಯಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಐಐಟಿ-ಖರಗ್‌ಪುರದ 69 ನೇ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರಶಸ್ತಿ ಪ್ರದಾನ ಮಾಡಿದರು. ಅಂದು ಪಿಚೈ ಅವರು ಗೈರು ಹಾಜರಾಗಿದ್ದ ಕಾರಣ ಜುಲೈ 23 ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ: Kargil Vijay Diwas 2024: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಕ್ಷಣವೂ ಯೋಚಿಸದ ಈ ವೀರ ಯೋಧರಿಗೊಂದು ಸಲಾಮ್

Continue Reading

ದೇಶ

Madras High Court: ವೇಶ್ಯಾವಾಟಿಕೆ ಅಡ್ಡಕ್ಕೆ ರಕ್ಷಣೆ ಕೋರಿ ವಕೀಲನಿಂದ ಅರ್ಜಿ; ಹೈಕೋರ್ಟ್‌ ಫುಲ್‌ ಗರಂ

Madras high court: ರಾಜಾ ಮುರುಗನ್‌ ಎಂಬಾತ ಸಲ್ಲಿಸಿದ್ದ ಈ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್‌ ಆತನಿಗೆ ₹ 10,000 ದಂಡ ವಿಧಿಸಿದೆ. ಮದ್ರಾಸ್ ಹೈಕೋರ್ಟ್‌ ಮಧುರೈ ಪೀಠದ ನ್ಯಾಯಮೂರ್ತಿ ಬಿ ಪುಗಳೇಂದಿ ಅವರು ವಕೀಲನ ನೋಂದಣಿ ಪತ್ರದ ನೈಜತೆ ಮತ್ತು ಆತನ ಶಿಕ್ಷಣ ಪ್ರಮಾಣಪತ್ರಗಳನ್ನು ಪರಿಶೀಲಿಸುವಂತೆ ತಮಿಳುನಾಡು ಮತ್ತು ಪುದುಚೇರಿ ವಕೀಲರ ಪರಿಷತ್ತಿಗೆ ಇತ್ತೀಚೆಗೆ ಆದೇಶಿಸಿದೆ.

VISTARANEWS.COM


on

Koo

ಚೆನ್ನೈ: ವೇಶ್ಯಾವಾಟಿಕೆ ಅಡ್ಡಕ್ಕೆ ರಕ್ಷಣೆ ಕೋರಿ ವ್ಯಕ್ತಿಯೊಬ್ಬ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ. ಕನ್ಯಾಕುಮಾರಿ(Kanyakumari)ಯಲ್ಲಿ ಈ ಘಟನೆ ನಡೆದಿದ್ದು, ತನ್ನನ್ನು ತಾನು ವಕೀಲನೆಂದು ಹೇಳಿಕೊಂಡು ವೇಶ್ಯಾವಾಟಿಕೆ ಅಡ್ಡಕ್ಕೆ ರಕ್ಷಣೆ ಕೊಡಿ ಎಂದು ಮದ್ರಾಸ್‌ ಹೈಕೋರ್ಟ್‌ಗೆ(Madras high court) ಅರ್ಜಿ ಸಲ್ಲಿಸಿದ್ದಾನೆ. ಇನ್ನು ಅರ್ಜಿ ಬಗ್ಗೆ ಕೋರ್ಟ್‌ ತೀರ ಅಸಮಾಧಾನ ವ್ಯಕ್ತಪಡಿಸಿದೆ.

ರಾಜಾ ಮುರುಗನ್‌ ಎಂಬಾತ ಸಲ್ಲಿಸಿದ್ದ ಈ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್‌ ಆತನಿಗೆ ₹ 10,000 ದಂಡ ವಿಧಿಸಿದೆ. ಮದ್ರಾಸ್ ಹೈಕೋರ್ಟ್‌ ಮಧುರೈ ಪೀಠದ ನ್ಯಾಯಮೂರ್ತಿ ಬಿ ಪುಗಳೇಂದಿ ಅವರು ವಕೀಲನ ನೋಂದಣಿ ಪತ್ರದ ನೈಜತೆ ಮತ್ತು ಆತನ ಶಿಕ್ಷಣ ಪ್ರಮಾಣಪತ್ರಗಳನ್ನು ಪರಿಶೀಲಿಸುವಂತೆ ತಮಿಳುನಾಡು ಮತ್ತು ಪುದುಚೇರಿ ವಕೀಲರ ಪರಿಷತ್ತಿಗೆ ಇತ್ತೀಚೆಗೆ ಆದೇಶಿಸಿದೆ.

ಸಮಾಜದಲ್ಲಿ ವಕೀಲರ ಹೆಸರಿಗೆ ಮಸಿ ಬಳಿಯುತ್ತಿರುವುದರ ಬಗ್ಗೆ ವಕೀಲರ ಪರಿಷತ್ತು ಚಿತ್ತ ಹರಿಸಲು ಇದು ಸಕಾಲ ಎಂದ ನ್ಯಾಯಾಲಯ, ವಕೀಲರ ಪರಿಷತ್ತಿನಲ್ಲಿ ಅಧಿಕೃತ ಕಾಲೇಜುಗಳಿಂದ ಪದವಿ ಪಡೆದವರನ್ನು ಮಾತ್ರ ನೋಂದಣಿ ಮಾಡಿಕೊಳ್ಳಬೇಕು. ಸಮವಸ್ತ್ರ ಧರಿಸಿದ್ದ ವಕೀಲರೊಬ್ಬರು ತಾನು ವೇಶ್ಯಾವಾಟಿಕೆ ನಡೆಸುತ್ತಿದ್ದು ಅದಕ್ಕೆ ರಕ್ಷಣೆ ಕೋರುವಂತೆ ಅರ್ಜಿ ಸಲ್ಲಿಸಿರುವುದು ನ್ಯಾಯಾಲಯವನ್ನು ಆಘಾತಕ್ಕೀಡುಮಾಡಿದೆ ಎಂದು ಹೈಕೋರ್ಟ್‌ ಹೇಳಿತು.

ತಾನು ʼಫ್ರೆಂಡ್ಸ್ ಫಾರ್ ಎವರ್ʼ ಎಂಬ ಟ್ರಸ್ಟ್ ಸ್ಥಾಪಿಸಿದ್ದು ಇದರ ಮುಖ್ಯ ಉದ್ದೇಶ ತನ್ನ ಸದಸ್ಯರು ಹಾಗೂ ಗ್ರಾಹಕರಿಗೆ ತೈಲ ಅಭ್ಯಂಜನ ಮತ್ತಿತರ ಲೈಂಗಿಕ ಸೇವೆಯಂತಹ ವಯಸ್ಕರ ಮನರಂಜನೆ ಚಟುವಟಿಕೆಗಳನ್ನು ಉತ್ತೇಜಿಸುವುದಾಗಿದೆ. ಸ್ಥಳೀಯ ಪೊಲೀಸರು ತಮ್ಮ ಟ್ರಸ್ಟ್‌ ಮೇಲೆ ದಾಳಿ ನಡೆಸಿ ಅದರ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಲೈಂಗಿಕ ಚಟುವಟಿಕೆಗಳನ್ನು ತಮಿಳುನಾಡು ಅನೈತಿಕ ಮಾನವ ಕಳ್ಳಸಾಗಣೆ (ತಡೆ) ಕಾಯಿದೆ ಕಾನೂನುಬಾಹಿರ ಎಂದು ಘೋಷಿಸಿಲ್ಲ ಎಂದಿದ್ದ ಅರ್ಜಿದಾರ ಲೈಂಗಿಕ ಕಾರ್ಯಕರ್ತರನ್ನು ಘನತೆಯಿಂದ ನಡೆಸಿಕೊಳ್ಳಬೇಕು ಎಂದು ಬುದ್ಧದೇವ್‌ ಕರ್ಮಾಸ್ಕರ್‌ ಮತ್ತು ಪ. ಬಂಗಾಳ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದ.

ವಿಚಾರಣೆ ನಡೆಸಿದ ಕೋರ್ಟ್‌ ಅರ್ಜಿದಾರರು ತಮಿಳುನಾಡು ಕಾಯಿದೆ ಮತ್ತು ಸುಪ್ರೀಂ ಕೋರ್ಟ್‌ ತೀರ್ಪನ್ನು ತಪ್ಪಾಗಿ ಗ್ರಹಿಸಿದ್ದಾರೆ. ಈ ಕಾನೂನುಗಳು ಲೈಂಗಿಕ ಕಾರ್ಯಕರ್ತರನ್ನು ರಕ್ಷಿಸುವ ಮತ್ತು ಪುನರ್ಸವಸತಿ ಕಲ್ಪಿಸುವ ಉದ್ದೇಶ ಹೊಂದಿವೆಯೇ ವಿನಾ ವೇಶ್ಯಾಗೃಹ ನಡೆಸುವುದು ಕಾನೂನು ಬದ್ಧ ಎಂದು ಎಂದಿಗೂ ಹೇಳಿಲ್ಲ ಎಂಬುದಾಗಿ ಹೈಕೋರ್ಟ್‌ ಸ್ಪಷ್ಟಪಡಿಸಿತು.

ಹಿಂದಿನ ಆದೇಶವೊಂದರಲ್ಲಿ, ನ್ಯಾಯಾಲಯವ ಅರ್ಜಿದಾರ ನಿಜವಾಗಿಯೂ ವಕೀಲರೇ ಎಂದು ಖಚಿತಪಡಿಸಿಕೊಳ್ಳಲು ಅವರ ದಾಖಲಾತಿ ಪ್ರಮಾಣಪತ್ರ ಮತ್ತು ಕಾನೂನು ಪದವಿ ಪ್ರಮಾಣಪತ್ರಗಳನ್ನು ಹಾಜರುಪಡಿಸುವಂತೆ ಸೂಚಿಸಿತ್ತು. ಆದರೆ ಅರ್ಜಿದಾರ ದಾಖಲೆಗಳನ್ನು ಸಲ್ಲಿಸಲು ವಿಫಲವಾಗಿದ್ದ. ವ್ಯತಿರಿಕ್ತವಾಗಿ ಮುರುಗನ್ ಅಪ್ರಾಪ್ತ ಬಾಲಕಿಯ ಬಡತನದ ಲಾಭ ಪಡೆದು ಶೋಷಣೆ ಮಾಡಿದ್ದ. ಅರ್ಜಿಯಿಂದ ಕೋಪಗೊಂಡ ನ್ಯಾಯಾಲಯವು ಮುರುಗನ್ ಅವರ ಕಾನೂನು ಶಿಕ್ಷಣ ಮತ್ತು ವಕೀಲರ ಸಂಘದ ಸದಸ್ಯತ್ವವನ್ನು ಪರಿಶೀಲಿಸಲು ಅವರ ದಾಖಲಾತಿ ಪ್ರಮಾಣಪತ್ರ ಮತ್ತು ಕಾನೂನು ಪದವಿಯನ್ನು ಹಾಜರುಪಡಿಸುವಂತೆ ಒತ್ತಾಯ ಮಾಡಿದೆ.

ಇದನ್ನೂ ಓದಿ: NEET UG 2024: ಸುಪ್ರೀಂ ಕೋರ್ಟ್‌ ಆದೇಶದ ಬಳಿಕ ನೀಟ್‌ ಪರಿಷ್ಕೃತ ಫಲಿತಾಂಶ ಪ್ರಕಟ; ಇಲ್ಲಿದೆ ಡೈರೆಕ್ಟ್‌ ಲಿಂಕ್

Continue Reading

ಬಾಲಿವುಡ್

Salman Khan: ಸಲ್ಮಾನ್ ಖಾನ್‌ ಹೆದರುವ ರೀತಿಯಲ್ಲಿ ಗುಂಡಿನ ದಾಳಿ ಆಗಬೇಕು ಎಂದು ಶೂಟರ್‌ಗಳಿಗೆ ಸ್ಫೂರ್ತಿ ತುಂಬಿದ್ದ ಬಿಷ್ಣೋಯಿ!

Salman Khan : ಎಪ್ರಿಲ್‌ 14ರಂದು ಮುಂಬೈಯ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು. ಬೈಕ್‌ನಲ್ಲಿ ಬಂದು ದಾಳಿ ನಡೆಸಿದ್ದ ಶೂಟರ್‌ಗಳಾದ ಸಾಗರ್‌ ಪಾಲ್‌ ಮತ್ತು ವಿಕ್ಕಿ ಗುಪ್ತಾ ಎಂಬ ಇಬ್ಬರು ದುಷ್ಕರ್ಮಿಗಳನ್ನು ಬಳಿಕ ಅರೆಸ್ಟ್‌ ಮಾಡಲಾಗಿತ್ತು. ಮುಂಬೈ ಪೊಲೀಸರು ಜೈಲಿನಲ್ಲಿರುವ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಈ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಘೋಷಿಸಿದ್ದರು.

VISTARANEWS.COM


on

Salman Khan House Gangster's 9-Minute Speech To Shooters Before Attack
Koo

ಬೆಂಗಳೂರು: ಎಪ್ರಿಲ್‌ 14ರಂದು ಮುಂಬೈಯ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ (Salman Khan) ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು. ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಈ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಘೋಷಿಸಿರುವುದು ಗೊತ್ತೇ ಇದೆ. ಜೈಲಿನಲ್ಲಿರುವ ಅನ್ಮೋಲ್ ಬಿಷ್ಣೋಯ್ ಏಪ್ರಿಲ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ಮನೆಯ ಮೇಲೆ ಗುಂಡು ಹಾರಿಸಿದ ಶೂಟರ್‌ಗಳಿಗೆ ಒಂಬತ್ತು ನಿಮಿಷಗಳ ಕಾಲಕ ಸ್ಫೂರ್ತಿದಾಯಕ ಭಾಷಣವನ್ನು ನೀಡಿದ್ದ ಎಂದು ತಿಳಿದು ಬಂದಿದೆ. ಮುಂಬೈ ಪೊಲೀಸರ ಅಪರಾಧ ವಿಭಾಗದ ಚಾರ್ಜ್‌ಶೀಟ್ ಪ್ರಕಾರ, ಅನ್ಮೋಲ್ ಬಿಷ್ಣೋಯ್ ಇಬ್ಬರು ಶೂಟರ್‌ಗಳಾದ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್‌ಗೆ ನಟನ ನಿವಾಸದ ಮೇಲೆ ದಾಳಿ ಮಾಡಿದಾಗ ಇದೊಂದು “ಹಿಸ್ಟರಿ” ಎಂದು ಹೇಳಿದ್ದ.

ಗುಪ್ತಾ ಮತ್ತು ಪಾಲ್ ಎಂಬ ಇಬ್ಬರು ಬೈಕ್‌ನಲ್ಲಿ ಬಂದ ವ್ಯಕ್ತಿಗಳು. ಏಪ್ರಿಲ್ 14ರ ಬೆಳಗ್ಗೆ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಸಲ್ಮಾನ್‌ ಖಾನ್ ಅವರ ಮನೆಯ ಹೊರಗೆ ಗುಂಡು ಹಾರಿಸಿದ್ದರು. ಆಡಿಯೊ ನೋಟ್‌ ಮೂಲಕ ಅನ್ಮೋಲ್ ಬಿಷ್ಣೋಯ್ ಇಬ್ಬರೂ ಶೂಟರ್‌ಗಳಿಗೆ ತಮ್ಮ ಜೀವನದ “ಉತ್ತಮ ಕೆಲಸ” ಮಾಡಲಿದ್ದೇವೆ ಎಂದು ಹೇಳಿದರು.

ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ 1,735 ಪುಟಗಳ ಚಾರ್ಜ್‌ಶೀಟ್‌ನ ಪ್ರಕಾರ ಅನ್ಮೋಲ್ ಬಿಷ್ಣೋಯ್ ಇಬ್ಬರೂ ಶೂಟರ್‌ಗಳಿಗೆ ಹೇಳಿದ್ದು ಹೀಗೆ. “ಈ ಕೆಲಸವನ್ನು ಚೆನ್ನಾಗಿ ಮಾಡಿ. ಕೆಲಸ ಮುಗಿದ ನಂತರ, ನೀವು ಇತಿಹಾಸ ಪುಟದಲ್ಲಿ ಇರುತ್ತೀರಿʼʼ ಎಂದು ಶೂಟರ್‌ಗಳಿಗೆ ಹೇಳಿದರು. ಮಾತ್ರವಲ್ಲ ಅನ್ಮೋಲ್ ಬಿಷ್ಣೋಯ್, ಗುಪ್ತಾ ಮತ್ತು ಪಾಲ್ ಅವರಿಗೆ ಇದೊಂದು ಧಾರ್ಮಿಕ ಕೆಲಸ ಎಂದು ಪ್ರೋತ್ಸಾಹಿಸಿದ್ದಾರೆ. ಜತೆಗೆ ಈ ಕೆಲಸ ಮಾಡುವಾಗ ಸ್ವಲ್ಪವೂ ಭಯಪಡಬೇಡಿ, ಈ ಕೆಲಸ ಮಾಡುವುದರಿಂದ ಸಮಾಜದಲ್ಲಿ ಬದಲಾವಣೆ ತರಬೇಕು. ಎಂದೂ ಹೇಳಿದ್ದಾನೆ. ನಾವು ಯಾವುದೇ ಕೆಲಸ ಮಾಡಲು ಹೋದಾಗ, ನಾವು ಬಂದೂಕಿನ ಮ್ಯಾಗಜಿನ್ ಅನ್ನು ಖಾಲಿ ಮಾಡುವ ಶೈಲಿಯನ್ನು ಹೊಂದಿರಬೇಕು. ನೀವು ಸಲ್ಮಾನ್ ಖಾನ್ ಅವರ ಮನೆಯಿಂದ ಹೊರಗೆ ಬಂದಾಗ ನೀವು ಮ್ಯಾಗಜಿನ್ ಅನ್ನು ಖಾಲಿ ಮಾಡಿ. ಗುಂಡು ಹಾರಿಸುವುದು ಸಲ್ಮಾನ್ ಖಾನ್‌ಗೆ ಹೆದರಿಕೆ ತರಬೇಕು. ಸಲ್ಮಾನ್ ಖಾನ್‌ಗೆ ಹೆದರುವ ರೀತಿಯಲ್ಲಿ ಗುಂಡಿನ ದಾಳಿ ಆಗಬೇಕುʼʼಎಂದು ಅನ್ಮೋಲ್ ಸಂದೇಶ ನೀಡಿದ್ದ.

ಇದನ್ನೂ ಓದಿ: Actor Yash: ಯಶ್‌ ನಟನೆಯ ʻಟಾಕ್ಸಿಕ್‌ʼ ಸಿನಿಮಾ ವಿರುದ್ಧ ದೂರು ದಾಖಲು

ಬಿಷ್ಣೋಯ್, ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಅವರಿಗೆ ಹೆಲ್ಮೆಟ್ ಧರಿಸದೇ ಇರಬೇಕು ಮತ್ತು ನಿರ್ಭೀತರಾಗಿ ಕಾಣಿಸಿಕೊಳ್ಳಲು ಸಿಗರೇಟ್ ಸೇದಲು ಬಾರದೂ ಎಂದು ಹೇಳಿದ್ದನಂತೆ. ಗುಂಡಿನ ದಾಳಿಗೂ ಮುನ್ನ ಅನ್ಮೋಲ್ ಬಿಷ್ಣೋಯ್ ಗುಪ್ತಾ ಮತ್ತು ಪಾಲ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ,

ಶೂಟರ್‌ಗಳು ಮತ್ತು ಇತರ ಮೂವರು, ಸೋನುಕುಮಾರ್ ಬಿಷ್ಣೋಯ್, ಮೊಹಮ್ಮದ್ ರಫೀಕ್ ಚೌಧರಿ ಮತ್ತು ಹರ್ಪಾಲ್ ಸಿಂಗ್ ಅವರನ್ನು ಬಂಧಿಸಲಾಗಿದೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಲಾರೆನ್ಸ್ ಬಿಷ್ಣೋಯ್, ಅನ್ಮೋಲ್ ಮತ್ತು ರಾವತರನ್ ಬಿಷ್ಣೋಯ್ ಆರೋಪಪಟ್ಟಿಯಲ್ಲಿ ಬೇಕಾಗಿರುವ ಆರೋಪಿಗಳಾಗಿದ್ದಾರೆ.

ಏನಿದು ಪ್ರಕರಣ?

ಎಪ್ರಿಲ್‌ 14ರಂದು ಮುಂಬೈಯ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು. ಬೈಕ್‌ನಲ್ಲಿ ಬಂದು ದಾಳಿ ನಡೆಸಿದ್ದ ಶೂಟರ್‌ಗಳಾದ ಸಾಗರ್‌ ಪಾಲ್‌ ಮತ್ತು ವಿಕ್ಕಿ ಗುಪ್ತಾ ಎಂಬ ಇಬ್ಬರು ದುಷ್ಕರ್ಮಿಗಳನ್ನು ಬಳಿಕ ಅರೆಸ್ಟ್‌ ಮಾಡಲಾಗಿತ್ತು. ಮುಂಬೈ ಪೊಲೀಸರು ಜೈಲಿನಲ್ಲಿರುವ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಈ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಘೋಷಿಸಿದ್ದರು.

ಈ ಮಧ್ಯೆ ಗುಂಡಿನ ದಾಳಿ ನಡೆಸಿದ್ದ ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಅನೂಜ್‌ ಥಾಪನ್‌ ಕೆಲವು ದಿನಗಳ ಹಿಂದೆ ಪೊಲೀಸ್‌ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದ. ಅನುಜ್ ಥಾಪನ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಆತನ ಕುಟುಂಬ ಇದರ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಲಾಕಪ್‌ನಲ್ಲಿ ಥಾಪನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದರೆ ಆತನ ತಾಯಿ ಇದು ಕೊಲೆ ಎಂದು ಆರೋಪಿಸಿದ್ದರು.

ಕಾರಣವೇನು?

ಹಲವು ವರ್ಷಗಳ ಹಿಂದಿನ ಕೃಷ್ಣಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್‌ ಅವರನ್ನು ಕೊಲ್ಲುವುದಾಗಿ 2018 ರಲ್ಲಿ ಬೆದರಿಕೆ ಹಾಕಿದ ನಂತರ ಬಿಷ್ಣೋಯ್ ಅವರ ಸಹಾಯಕರಲ್ಲಿ ಒಬ್ಬನನ್ನು ಬಂಧಿಸಲಾಯಿತು. ಜೋಧಪುರ್​ನ ಬಿಷ್ಣೋಯ್​ಗಳು ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಹೀಗಾಗಿ ಕೃಷ್ಣಮೃಗ ಕೊಲ್ಲುವುದನ್ನು ಬಿಷ್ಣೋಯ್​ಗಳು ಎಂದಿಗೂ ಸಹಿಸುವುದಿಲ್ಲ. ಈ ಕಾರಣಕ್ಕೆ ಸಲ್ಮಾನ್ ಖಾನ್ ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯ್ ನಿರ್ಧರಿಸಿದ್ದ. ಎಬಿಪಿ ನ್ಯೂಸ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ʻʻಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ನನ್ನ ಜೀವನದ ಗುರಿ. ಸಲ್ಮಾನ್‌ ಅವರು ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ವಿಷಯ ಕೊನೆಗೊಳ್ಳುತ್ತದೆʼʼ ಎಂದು ಹೇಳಿದ್ದ.

Continue Reading

ದೇಶ

PM Narendra Modi Live: ಕಾರ್ಗಿಲ್‌ ಯುದ್ಧ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ, ವೀರ ಯೋಧರಿಗೆ ಗೌರವ ನಮನ-ಲೈವ್‌ ಇಲ್ಲಿ ವೀಕ್ಷಿಸಿ

PM Narendra Modi Live:ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಲಡಾಕ್ ನಲ್ಲಿರುವ ಡ್ರಾಸ್ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಕಾರ್ಗಿಲ್ ಯುದ್ಧದಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ವೀರರಿಗೆ ಗೌರವ ಸಲ್ಲಿಸಲಿದ್ದಾರೆ.

VISTARANEWS.COM


on

PM Narendra Modi Live
Koo

ಹೊಸದಿಲ್ಲಿ: ಇಂದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ಕಾರ್ಗಿಲ್‌ ವಿಜಯ್‌ ದಿವಸ್‌(Kargil Vijay Diwas 2024). ಇಂದಿಗೆ ಕೆಣಕಿದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತ್ಯಾಗ ಬಲಿದಾನವನ್ನು ಲೆಕ್ಕಿಸದೇ ದಿಟ್ಟ ಉತ್ತರ ಕೊಟ್ಟು 25ವರ್ಷಗಳು ಸಂದಿವೆ. ಪಾಕಿಸ್ತಾನದೊಂದಿಗಿನ (india- pakistan war) 1999ರ ಸಂಘರ್ಷದಲ್ಲಿ ಭಾರತದ ವಿಜಯದ ಸ್ಮರಣಾರ್ಥವಾಗಿ ಜುಲೈ 26ರಂದು ಆಚರಿಸಲಾಗುತ್ತದೆ. ಈ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ(PM Narendra Modi Live) ಅವರು ಲಡಾಕ್ ನಲ್ಲಿರುವ ಡ್ರಾಸ್ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಕಾರ್ಗಿಲ್ ಯುದ್ಧದಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ವೀರರಿಗೆ ಗೌರವ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಭೇಟಿಯ ಲೈವ್‌ ಇಲ್ಲಿ ವೀಕ್ಷಿಸಿ.

ಇನ್ನು ಇದೇ ಸಂದರ್ಭದಲ್ಲಿ ಅವರು ವರ್ಚುವಲ್ ಮೂಲಕ ಶಿಂಕುನ್ ಲಾ ಸುರಂಗ ಯೋಜನೆಯ ಮೊದಲ ಸ್ಫೋಟಕ ನಡೆಸಿಕೊಡಲಿದ್ದಾರೆ. ಇದಕ್ಕೂ ಮುನ್ನ ಲಡಾಖ್‌ನ ನಿವೃತ್ತ ಲೆಫ್ಟಿನೆಂಟ್ ಗವರ್ನರ್ ಬ್ರಿಗ್ ಬಿ.ಡಿ. ಮಿಶ್ರಾ ಅವರು ಸೆಕ್ರೆಟರಿಯೇಟ್‌ನಲ್ಲಿ ಸಭೆ ನಡೆಸಿದ್ದಾರೆ. ಡ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಪ್ರಧಾನಿ ಭೇಟಿಯ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ಬಿ. ಡಿ. ಮಿಶ್ರಾ ಅವರು ಲೆಫ್ಟಿನೆಂಟ್ ಗವರ್ನರ್ ಸೆಕ್ರೆಟರಿಯೇಟ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರ್ಗಿಲ್ ಯುದ್ಧ ಸ್ಮಾರಕ ಡ್ರಾಸ್‌ಗೆ ಭೇಟಿ ನೀಡುವ ಕುರಿತು ಚರ್ಚಿಸಿದ್ದಾರೆ. ಈ ಕುರಿತು ಲೆಫ್ಟಿನೆಂಟ್ ಗವರ್ನರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ ಎಲ್‌ಜಿ ಮಿಶ್ರಾ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

2022ರಲ್ಲಿ ಪ್ರಧಾನಿ ಮೋದಿ ಅವರು ಕಾರ್ಗಿಲ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು. ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಸಮರ್ಪಿಸಿದ್ದರು. ಬಳಿಕ 1999ರಲ್ಲಿ ಇಲ್ಲಿ ಪ್ರಾಣ ಕಳೆದುಕೊಂಡ ಸೇನಾ ಸಿಬ್ಬಂದಿಗೆ ಗೌರವ ಸಲ್ಲಿಸಿದ್ದರು. ಭಾರತದಲ್ಲಿ ವಾರ್ಷಿಕವಾಗಿ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಾಗುತ್ತದೆ. 1999ರಲ್ಲಿ ಆಪರೇಷನ್ ವಿಜಯ್ ವಿಜಯವನ್ನು ಇದು ನೆನಪಿಸುತ್ತದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾರ್ಗಿಲ್ ಯುದ್ಧದ ಮುಕ್ತಾಯವನ್ನು ಇದು ಸೂಚಿಸುತ್ತದೆ. ಈ ಯುದ್ಧ 1999ರ ಮೇ ತಿಂಗಳಲ್ಲಿ ಪ್ರಾರಂಭವಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಸೈನಿಕರು ಮತ್ತು ಭಯೋತ್ಪಾದಕರು ಒಳನುಸುಳಿದ್ದು, ಅವರನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೈನಿಕರು ಯಶಸ್ವಿಯಾಗಿದ್ದರು.

ಇದನ್ನೂ ಓದಿ: Kargil Vijay Diwas 2024: ಗುಂಡುಗಳು ದೇಹ ತೂರಿದ್ದರೂ ಹಿಂದೆ ಸರಿಯದೆ ಶತ್ರುಗಳನ್ನು ಹಿಮ್ಮೆಟ್ಟಿಸಿದರು!

Continue Reading
Advertisement
Sundar Pichai
ದೇಶ11 mins ago

Sundar Pichai: ಗೂಗಲ್‌ ಸಿಇಒ ಸುಂದರ್‌ ಪಿಚೈಗೆ ಗೌರವ ಡಾಕ್ಟರೇಟ್‌ ಪ್ರದಾನ-ಫೋಟೋ ವೈರಲ್‌

Sai Pallavi Dating a Married Actor Who Has Two Kids
ಸಿನಿಮಾ16 mins ago

Sai Pallavi: ಮದುವೆಯಾಗಿ ಮಕ್ಕಳಿರುವ ಸಹ ನಟನೊಂದಿಗೆ ಸಾಯಿ ಪಲ್ಲವಿ ಡೇಟಿಂಗ್‌?

Nissan SUV X-TRAIL
ಆಟೋಮೊಬೈಲ್26 mins ago

Nissan SUV X-TRAIL : ನಿಸ್ಸಾನ್ ನ ಹೊಚ್ಚ ಹೊಸ 4 ಜನರೇಷನ್ ಪ್ರೀಮಿಯಂ ಅರ್ಬನ್ ಎಸ್‌ಯುವಿ ಎಕ್ಸ್-ಟ್ರಯಲ್ ಬಿಡುಗಡೆ

CM Siddaramaiah muda scam
ಪ್ರಮುಖ ಸುದ್ದಿ28 mins ago

MUDA Scam: ಮುಡಾ ಜಮೀನಿನ ಸಂಪೂರ್ಣ ದಾಖಲೆಗಳನ್ನು ತೆರೆದಿಟ್ಟ ಸಿಎಂ ಸಿದ್ದರಾಮಯ್ಯ; ಇಲ್ಲಿದೆ ವಿವರ

Vinod Raj Visited Renuka Swamy Family Gave Them 1 Lakh Rs and shares Opinion
ಸ್ಯಾಂಡಲ್ ವುಡ್34 mins ago

Actor Darshan: ರೇಣುಕಾ ಸ್ವಾಮಿ ಕುಟುಂಬ ಭೇಟಿಯಾಗಿ ಧನ ಸಹಾಯ ಮಾಡಿದ ವಿನೋದ್‌ ರಾಜ್‌ !

Viral News
Latest34 mins ago

Viral News: ಸಾಯುವ ಮುನ್ನ ವಿದ್ಯಾರ್ಥಿಗಳ ಜೀವ ಕಾಪಾಡಿದ ಶಾಲಾ ಬಸ್ ಚಾಲಕ!

Cylinder blast in Hulimavu
ಬೆಂಗಳೂರು35 mins ago

Cylinder Blast: ಅಕ್ರಮ ರೀ ಫಿಲ್ಲಿಂಗ್‌ ಅಡ್ಡೆಯಾದ ಹುಳಿಮಾವು;ಸಿಲಿಂಡರ್ ಸ್ಫೋಟಕ್ಕೆ ಪಾತ್ರೆ ಅಂಗಡಿ ಛಿದ್ರ ಛಿದ್ರ

Actor Darshan
ಕರ್ನಾಟಕ38 mins ago

Actor Darshan: ಜೈಲಲ್ಲಿ ದರ್ಶನ್ ಭೇಟಿಯಾದ ಟಾಲಿವುಡ್ ಖ್ಯಾತ ನಟ ನಾಗಶೌರ್ಯ

Maharaja Trophy Squads
ಕ್ರೀಡೆ46 mins ago

Maharaja Trophy Squads: ಹರಾಜಿನ ಬಳಿಕ ಎಲ್ಲ ತಂಡಗಳ ಆಟಗಾರರ ಪಟ್ಟಿ ಹೀಗಿದೆ

cm siddaramaiah pressmeet
ಪ್ರಮುಖ ಸುದ್ದಿ59 mins ago

MUDA Scam: ಬಿಜೆಪಿಯವರದು ಮನೆಮುರುಕ ರಾಜಕೀಯ; ಮುಡಾ ಜಮೀನಿನಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ: ಸಿಎಂ ಸಿದ್ದರಾಮಯ್ಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ21 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್1 day ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ1 day ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ1 day ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ3 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ3 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ3 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ6 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

ಟ್ರೆಂಡಿಂಗ್‌