Sonali Kulkarni APOLOGISES for 'Indian girls are lazy' Sonali Kulkarni: ಭಾರತೀಯ ಹುಡುಗಿಯರು ಸೋಮಾರಿಗಳು ಅಂದಿದಕ್ಕೆ ಕ್ಷಮೆಯಾಚಿಸಿದ ನಟಿ Vistara News
Connect with us

South Cinema

Sonali Kulkarni: ಭಾರತೀಯ ಹುಡುಗಿಯರು ಸೋಮಾರಿಗಳು ಅಂದಿದಕ್ಕೆ ಕ್ಷಮೆಯಾಚಿಸಿದ ನಟಿ

ನಟಿ ಸೋಷಿಯಲ್‌ ಮೀಡಿಯಾ (Sonali Kulkarni) ಮೂಲಕ ಕ್ಷಮೆಯಾಚಿಸಿದ್ದಾರೆ. ʻʻನನ್ನ ಹೇಳಿಕೆಯ ಬಗ್ಗೆ ಅನೇಕ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಿದ್ದೇನೆ. ಪತ್ರಿಕಾ ಮತ್ತು ಮಾಧ್ಯಮಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನೊಬ್ಬ ಮಹಿಳೆಯಾಗಿ, ಇತರರನ್ನು ನೋಯಿಸಬಾರದು ಎಂಬುದೇ ನನ್ನ ಉದ್ದೇಶ ಎಂಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

VISTARANEWS.COM


on

Sonali Kulkarni APOLOGISES for Indian girls are lazy
Koo

ಬೆಂಗಳೂರು: ನಟಿ ಸೋನಾಲಿ ಕುಲಕರ್ಣಿ (Sonali Kulkarni) ಇತ್ತೀಚೆಗೆ ತಮ್ಮ ‘ಭಾರತೀಯ ಹುಡುಗಿಯರು ಸೋಮಾರಿಗಳು’ ಎಂಬ ಹೇಳಿಕೆಯನ್ನು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ʻಹುಡುಗಿಯರು ತಮ್ಮ ಸ್ವಂತ ವೃತ್ತಿಜೀವನದ ಬಗ್ಗೆ ಉತ್ಸುಕರಾಗುವ ಬದಲು ತಮ್ಮ ಅಗತ್ಯಗಳನ್ನು ಪೂರೈಸಲು ಉತ್ತಮ ಬಾಯ್‌ಫ್ರೆಂಡ್ ಅಥವಾ ಗಂಡನನ್ನು ಹುಡುಕುತ್ತಾರೆʼʼಎಂಬ ಹೇಳಿಕೆ ತುಂಬಾ ಚರ್ಚೆಯಾಗಿತ್ತು. ಈ ಹೇಳಿಕೆ ಬಳಿಕ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು, ಸೋನಾಲಿ ವಿರುದ್ಧ ಅನೇಕರು ಆಕ್ರೋಶ ಹೊರಹಾಕಿದ್ದರು. ತನ್ನ ಹೇಳಿಕೆ ದೊಡ್ಡ ಮಟ್ಟದ ವಿವಾದ ಸೃಷ್ಟಿಸುತ್ತಿದ್ದಂತೆ ಕ್ಷಮೆಯಾಚಿಸಿದ್ದಾರೆ.

ಇದೀಗ ನಟಿ ಸೋಷಿಯಲ್‌ ಮೀಡಿಯಾ ಮೂಲಕ ಕ್ಷಮೆಯಾಚಿಸಿದ್ದಾರೆ. ʻʻನನ್ನ ಹೇಳಿಕೆಯ ಬಗ್ಗೆ ಅನೇಕ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಿದ್ದೇನೆ. ಪತ್ರಿಕಾ ಮತ್ತು ಮಾಧ್ಯಮಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನೊಬ್ಬ ಮಹಿಳೆಯಾಗಿ, ಇತರರನ್ನು ನೋಯಿಸಬಾರದು ಎಂಬುದೇ ನನ್ನ ಉದ್ದೇಶ.

“ನಾನು ಈ ಹೇಳಿಕೆ ನೀಡಿದ ನಂತರ ಹಲವು ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಿದ್ದೇನೆ. ನಾನು ನಿಮ್ಮೆಲ್ಲರಿಗೂ, ವಿಶೇಷವಾಗಿ ಇಡೀ ಪತ್ರಿಕಾ ಮತ್ತು ಮಾಧ್ಯಮಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನೊಬ್ಬ ಮಹಿಳೆಯಾಗಿ, ನನ್ನ ಉದ್ದೇಶ ಇತರರನ್ನು ನೋಯಿಸಬಾರದು ಎಂದು. ಪ್ರಶಂಸಿಸಲು ಅಥವಾ ಟೀಕಿಸಲು ವೈಯಕ್ತಿಕವಾಗಿ ನನ್ನನ್ನು ತಲುಪಿದ್ದಕ್ಕೆ ನಾನು ನಿಮ್ಮೆಲ್ಲರಿಗೂ ಕೃತಜ್ಞನಾಗಿದ್ದೇನೆʼʼ ಎಂದು ಹೇಳಿದ್ದಾರೆ.

ಸೋನಾಲಿ ಮುಂದುವರಿಸಿ “ನನ್ನ ಸಾಮರ್ಥ್ಯದಲ್ಲಿ ನಾನು ಮಹಿಳೆಯರೊಂದಿಗೆ ಮಾತ್ರವಲ್ಲದೆ ಇಡೀ ಮನುಕುಲದೊಂದಿಗೆ ಆಲೋಚಿಸಲು, ಬೆಂಬಲಿಸಲು ಪ್ರಯತ್ನಿಸುತ್ತಿದ್ದೇನೆ. ಯಾರಿಗಾದರೂ ನೋವುಂಟು ಮಾಡಿದರೆ ನಾನು ಹೃದಯಪೂರ್ವಕವಾಗಿ ಕ್ಷಮೆ ಕೇಳುತ್ತೇನೆ. ಆಶಾವಾದಿ ಜೀವನ ತುಂಬಾ ಸುಂದರವಾಗಿದೆ ಎಂದು ನಾನು ಬಲವಾಗಿ ನಂಬುತ್ತೇನೆ. ನಿಮ್ಮ ತಾಳ್ಮೆ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಈ ಘಟನೆಯಿಂದ ನಾನು ಬಹಳಷ್ಟು ಕಲಿತಿದ್ದೇನೆ’ ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Michelle Yeoh: ಆಸ್ಕರ್‌ ಗೆದ್ದ ನಟಿಗೆ ಬಾಲಿವುಡ್‌ನ ಈ ನಟನೊಂದಿಗೆ ನಟಿಸುವ ಆಸೆಯಂತೆ

ಸೋನಾಲಿ ಪೋಸ್ಟ್‌

ನಟಿ ಹೇಳಿದ್ದೇನು?

‘ಭಾರತದಲ್ಲಿ ಬಹಳಷ್ಟು ಮಹಿಳೆಯರು ಸೋಮಾರಿಗಳು. ಅವರಿಗೆ ತಮ್ಮ ಬಾಯ್​ಫ್ರೆಂಡ್​ ಅಥವಾ ಪತಿಯಾಗುವವ ಎಷ್ಟು ಚೆನ್ನಾಗಿ ಸಂಪಾದಿಸುತ್ತಾನೆ ಎನ್ನುವುದು ಮುಖ್ಯವಾಗುತ್ತದೆ. ಅವರಿಗೆ ಸ್ವಂತ ಮನೆ ಇರಬೇಕು, ಕಾಲಕಾಲಕ್ಕೆ ಇನ್​ಕ್ರಿಮೆಂಟ್​ ಆಗುತ್ತಿರಬೇಕು. ಇವಿಷ್ಟನ್ನೇ ಬಯಸುವ ಇಂದಿನ ಯುವತಿಯರು, ತಮ್ಮ ನಿಲುವನ್ನು ತಾವೇ ಮರೆತುಬಿಡುತ್ತಾರೆ. ಅವರು ಏನು ಮಾಡುತ್ತಾರೆಂದು ಇವರಿಗೆ ತಿಳಿದಿಲ್ಲ’ ಎಂದಿದ್ದರು. ‘ತಮಗೂ ಸಂಪಾದಿಸುವ ಸಾಮರ್ಥ್ಯ ಇದೆ ಎಂಬುದನ್ನು ಮೊದಲು ಹೆಣ್ಣುಮಕ್ಕಳು ಮನಗಾಣಬೇಕು. ಮನೆಯ ಖರ್ಚುವೆಚ್ಚಗಳನ್ನು ಇಬ್ಬರೂ ಸೇರಿ ಶೇರ್​ ಮಾಡಿಕೊಳ್ಳುವ ಮನೋಭಾವ ಹೊಂದಿರಬೇಕು ಎಂದು ಅಭಿಪ್ರಾಯ ಹಂಚಿಕೊಂಡಿದ್ದರು.

South Cinema

Actor Suriya: ಮುಂಬೈನಲ್ಲಿ 70 ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್‌ ಖರೀದಿಸಿದ ನಟ ಸೂರ್ಯ

ಕಾಲಿವುಡ್‌ ನಟ ಸೂರ್ಯ (Actor Suriya) ಅವರು ಮುಂಬೈನಲ್ಲಿ ಬಹು ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್‌ ಒಂದನ್ನು ಖರೀದಿಸಿದ್ದಾರೆ. ಅದರ ಬೆಲೆ 70 ಕೋಟಿ ರೂ. ಎನ್ನಲಾಗಿದೆ.

VISTARANEWS.COM


on

Edited by

Koo

ಮುಂಬೈ: ಕಾಲಿವುಡ್‌ ನಟ ಸೂರ್ಯ (Actor Suriya) ಬಹುಬೇಡಿಕೆಯ ನಟರಲ್ಲಿ ಒಬ್ಬರು. ಅವರ ಪತ್ನಿ ಜ್ಯೋತಿಕಾ ಅವರೂ ಕೂಡ ಸಿನಿಮಾಗಳಲ್ಲಿ ಮಿಂಚಿದವರೇ. ಇದೀಗ ಈ ದಂಪತಿ ಮಹಾರಾಷ್ಟ್ರದ ಮುಂಬೈನಲ್ಲಿ ಬಹು ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್‌ನ್ನು ಖರೀದಿಸಿರುವುದಾಗಿ ವರದಿಯಾಗಿದೆ. ಅವರು ಖರೀದಿಸಿರುವ ಅಪಾರ್ಟ್‌ಮೆಂಟ್‌ ಬೆಲೆ ಬರೋಬ್ಬರಿ 70 ಕೋಟಿ ರೂ. ಎಂದು ವರದಿಯಿದೆ.

ಇದನ್ನೂ ಓದಿ: Actor Suriya: ಸಚಿನ್ ತೆಂಡೂಲ್ಕರ್ ಭೇಟಿ ಮಾಡಿದ ಕಾಲಿವುಡ್‌ ನಟ ಸೂರ್ಯ: ಫೋಟೊ ವೈರಲ್‌

ಇಂಡಿಯಾ ಗ್ಲಿಟ್ಜ್‌ ಈ ಬಗ್ಗೆ ವರದಿ ಮಾಡಿದೆ. ಸೂರ್ಯ ಅವರು ಕೊಂಡುಕೊಂಡಿರುವ ಐಷಾರಾಮಿ ಅಪಾರ್ಟ್‌ಮೆಂಟ್‌ ಸುಮಾರು 9000 ಚದರ ಅಡಿ ಜಾಗಕ್ಕೆ ಹಬ್ಬಿದೆ. ಅದರಲ್ಲಿ ಅತ್ಯಂತ ಸುಂದರವಾದ ಉದ್ಯಾನವನ, ಹಲವಾರು ಪಾರ್ಕಿಂಗ್‌ ಸ್ಥಳಗಳು ಸೇರಿ ಅನೇಕ ಐಷಾರಾಮಿ ಸೌಲಭ್ಯ ಅಪಾರ್ಟ್‌ಮೆಂಟ್‌ನಲ್ಲಿ ಇದೆ ಎಂದು ವರದಿಯಿದೆ. ಅವರ ಅಪಾರ್ಟ್‌ಮೆಂಟ್‌ ಸನಿಹದಲ್ಲಿಯೇ ಹಲವು ಬಾಲಿವುಡ್‌ ತಾರೆಗಳ ಮನೆ ಹಾಗೂ ರಾಜಕಾರಣಿಗಳ ಮನೆಗಳು ಇವೆ ಎನ್ನಲಾಗಿದೆ.‌

ಸೂರ್ಯ ಅವರು ಈಗಾಗಲೇ ಮುಂಬೈನಲ್ಲಿ ಮನೆಯೊಂದನ್ನು ಖರೀದಿಸಿ ಅದರಲ್ಲಿ ಕುಟುಂಬ ಸಮೇತವಾಗಿ ವಾಸವಿದ್ದರೆ. ಇದೀಗ ಖರೀದಿಸಿರುವ ಈ ಅಪಾರ್ಟ್‌ಮೆಂಟ್‌ ಅವರ ಕುಟುಂಬದವರಿಗೆ, ಸಹೋದರರಿಗೆ ಗೆಸ್ಟ್‌ ಹೌಸ್‌ ರೀತಿಯಲ್ಲಿ ಇರಲಿದೆ ಎಂದು ಹೇಳಲಾಗಿದೆ. ಹಾಗೆಯೇ ಮಕ್ಕಳ ಜನ್ಮದಿನ ಸೇರಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಆಚರಿಸುವುದಕ್ಕೆ ಈ ಮನೆಯನ್ನು ಬಳಸಬಹುದು ಎನ್ನಲಾಗಿದೆ.

ಇದನ್ನೂ ಓದಿ: Vijay Antony | ಶೂಟಿಂಗ್‌ ವೇಳೆ ಅಪಘಾತ: ಕಾಲಿವುಡ್‌ ನಟ ವಿಜಯ್ ಆ್ಯಂಟೊನಿ ಗಂಭೀರ

ಸೂರ್ಯ ತಮ್ಮ ಮುಂದಿನ ಸಿನಿಮಾ ʼಸೂರ್ಯ 42ʼಗಾಗಿ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ವೆಂಕಾಟೆರ್‌, ಅರತಾರ್‌, ಮಂದಾಂಕರ್‌, ಮುಕಾತಾರ್, ಪೆರುಮಾನಾಥರ್‌ ಸೇರಿ ಅನೇಕರ ಜತೆಯಲ್ಲಿ ನಟಿಸಲಿದ್ದಾರೆ. ದಿಶಾ ಪಟಾನಿ ಅವರು ಸೂರ್ಯ ಅವರಿಗೆ ಜತೆಯಾಗಿ ನಟಿಸಲಿದ್ದಾರೆ. ಸಿರುತೈ ಶಿವ ನಿರ್ದೇಶನ ಮತ್ತು ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿರಲಿದ್ದು, ವಿಶ್ವದಾದ್ಯಂತ ಒಟ್ಟು 10 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅದಷ್ಟೇ ಅಲ್ಲದೆ ಸೂರ್ಯ ಅವರು ತಮ್ಮ ಸಿನಿಮಾವಾದ ಸೂರರೈ ಪೊಟ್ರುವಿನ ಹಿಂದಿ ರಿಮೇಕ್‌ಗೆ ಬಂಡವಾಳ ಹಾಕಲಿದ್ದಾರೆ.

Continue Reading

South Cinema

Actress Kajal Aggarwal : ನಂದಮುರಿ ಬಾಲಕೃಷ್ಣಗೆ ಜೋಡಿಯಾಗಲಿದ್ದಾರೆ ನಟಿ ಕಾಜಲ್‌ ಅಗರ್ವಾಲ್‌

ನಂದಮುರಿ ಬಾಲಕೃಷ್ಣ ಅವರ ಎನ್‌ಬಿಕೆ 108 ಸಿನಿಮಾದಲ್ಲಿ ನಟಿ ಕಾಜಲ್‌ ಅಗರ್ವಾಲ್‌ (Actress Kajal Aggarwal) ನಾಯಕ ನಟಿಯಾಗಿ ನಟಿಸಲಿದ್ದಾರೆ. ಈ ವಿಚಾರವನ್ನು ಸಿನಿ ತಂಡ ಅಧಿಕೃತಗೊಳಿಸಿದೆ.

VISTARANEWS.COM


on

Edited by

Koo

ಹೈದರಾಬಾದ್‌: ವೀರ ಸಿಂಹ ರೆಡ್ಡಿ ಸಿನಿಮಾ ಹಿಟ್‌ ಆದ ಸಂತಸದಲ್ಲಿ ನಟ ನಂದಮುರಿ ಬಾಲಕೃಷ್ಣ ಅವರಿದ್ದಾರೆ. ಅದರ ಬೆನ್ನಲ್ಲೇ ನಟ ಅನಿಲ್‌ ರವಿಪುಡಿ ಅವರ ಇನ್ನೂ ಹೆಸರಿಡದ ʼಎನ್‌ಬಿಕೆ 108ʼ ಸಿನಿಮಾ ನಟನೆಯಲ್ಲೂ ಬಿಜಿಯಾಗಿದ್ದಾರೆ. ಬಹುನಿರೀಕ್ಷಿತ ಸಿನಿಮಾವಾದ ಇದರಲ್ಲಿ ಬಾಲಯ್ಯ ಅವರಿಗೆ ಜತೆಯಾಗಿ ಯಾರು ನಟಿಸಲಿದ್ದಾರೆ ಎನ್ನುವ ಕುತೂಹಲ ಇಲ್ಲಿಯವರೆಗಿತ್ತು. ಆದರೆ ಇದೀಗ ಚಿತ್ರತಂಡ ಆ ಕುತೂಹಲಕ್ಕೆ ತೆರೆ ಎಳೆದಿದ್ದು, ನಟಿ ಕಾಜಲ್‌ ಅಗರ್ವಾಲ್‌ (Actress Kajal Aggarwal) ಅವರನ್ನು ಸಿನಿಮಾ ತಂಡಕ್ಕೆ ಕರೆತಂದಿರುವುದಾಗಿ ಘೋಷಿಸಿದೆ.

ಇದನ್ನೂ ಓದಿ: South Indian Cinema | ನಯನತಾರಾರಿಂದ ಕಾಜಲ್ ಅಗರ್ವಾಲ್‌ವರೆಗೆ: 2022ರಲ್ಲಿ ತಾಯಿಯಾದ ಸೆಲೆಬ್ರೆಟಿಗಳಿವರು!
ಈ ಬಗ್ಗೆ ತಮಿಳಿನ ಸಿನಿಮಾಗಳ ಪಿಆರ್‌ ಆಗಿರುವ ವಂಶಿ ಶೇಖರ್‌ ಅವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ಎನ್‌ಬಿಕೆ 108 ಸಿನಿ ತಂಡ ಪ್ರತಿಭಾನ್ವಿತ ನಟಿ ಕಾಜಲ್‌ ಅಗರ್ವಾಲ್‌ ಅವರನ್ನು ಚಿತ್ರಕ್ಕೆ ಬರಮಾಡಿಕೊಂಡಿದೆ. ಸಿನಿಮಾ ಬಗ್ಗೆ ಇನ್ನೂ ಹೆಚ್ಚಿನ ಸುದ್ದಿಗಳು ಸದ್ಯದಲ್ಲೇ ಹೊರಬೀಳಲಿವೆ” ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಬಾಲಕೃಷ್ಣ ಅವರು ಈಗಾಗಲೇ ಎನ್‌ಬಿಕೆ 108 ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯದಲ್ಲೇ ನಟಿ ಕಾಜಲ್‌ ಕೂಡ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಎಂದು ಮಾಹಿತಿಯಿದೆ.‌


ಎನ್‌ಬಿಕೆ 108 ಸಿನಿಮಾ ಕಳೆದ ಆಗಸ್ಟ್‌ನಲ್ಲೇ ಘೋಷಣೆಯಾಗಿತ್ತು. ಈ ಬಗ್ಗೆ ನಿರ್ದೇಶಕ ಅನಿಲ್‌ ಅವರೇ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಅದಲ್ಲದೆ ಸಿನಿಮಾಕ್ಕೆ ಎಸ್‌.ಥಾಮನ್‌ ಅವರ ಸಂಗೀತ ನಿರ್ದೇಶನವಿರಲಿದೆ ಎಂದೂ ಅವರು ತಿಳಿಸಿದ್ದರು.

Continue Reading

South Cinema

Viral News : ಕಪಲ್‌ ಗೋಲ್‌ ಎಂದರೆ ಹೀಗಿರಬೇಕು ಎನ್ನುತ್ತಿದೆ ಈ ಸ್ಟಾರ್‌ ಜೋಡಿ; ನೆಟ್ಟಿಗರು ಫುಲ್ ಫಿದಾ

ತಮಿಳು ನಟ ಅಜಿತ್ ಕುಮಾರ್‌ ಹಾಗೂ ಅವರ ಪತ್ನಿ ಶಾಲಿನಿ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ (Viral News) ಆಗಿವೆ.

VISTARANEWS.COM


on

Edited by

Koo

ಬೆಂಗಳೂರು: ಮದುವೆಯಾದವರ ಆಗದಿರುವವರು ಎಲ್ಲರೂ ಕಾಣುವ ಕನಸೆಂದರೆ ಅದು ಕಪಲ್‌ ಗೋಲ್‌. ಬಾಳ ಸಂಗಾತಿ ಜತೆ ಹೀಗೇ ಇರಬೇಕು, ಇಷ್ಟೇ ಅನ್ಯೋನ್ಯವಾಗಿರಬೇಕು ಎಂದು ಎಲ್ಲರೂ ಎಂದುಕೊಳ್ಳುತ್ತಾರೆ. ಸಿನಿಮಾ ತಾರಾ ಜೋಡಿಗಳೂ ಕೂಡ ಅದೇ ರೀತಿ ಗೋಲ್‌ ಸೆಟ್‌ ಮಾಡುವಂತಹ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುತ್ತಾರೆ. ಇದೀಗ ಆ ಸಾಲಿಗೆ ತಮಿಳಿನ ಅಜಿತ್‌ ಕುಮಾರ್‌-ಶಾಲಿನಿ ದಂಪತಿ ಕೂಡ ಸೇರಿಕೊಂಡಿದ್ದಾರೆ. ಅವರ ಕಪಲ್‌ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ (Viral News) ಆಗಿದೆ.

ಇದನ್ನೂ ಓದಿ: NSA Ajit Doval: ಅಜಿತ್‌ ದೋವಲ್‌ ಲಂಡನ್‌ ಭೇಟಿ: ಖಲಿಸ್ತಾನ್‌, ಬಿಬಿಸಿ, ಭಯೋತ್ಪಾದನೆ ವಿಚಾರದಿಂದಾಗಿ ಈ ಬಾರಿ ಮಾತುಕತೆ ಕಠಿಣ

ನಟ ಅಜಿತ್‌ ಕುಮಾರ್‌, ಶಾಲಿನಿ ಮತ್ತು ಅವರ ಇಬ್ಬರು ಮಕ್ಕಳಾದ ಅನುಷ್ಕಾ ಹಾಗೂ ಆದ್ವಿಕ್‌ ಇತ್ತೀಚೆಗೆ ಪ್ರವಾಸ ಹೋಗಿ ಬಂದಿದ್ದಾರೆ. ಆ ಪ್ರವಾಸದಲ್ಲಿ ಪೂರ್ತಿ ಕುಟುಂಬ ಸಾಕಷ್ಟು ಎಂಜಾಯ್‌ ಮಾಡಿದೆ. ಪ್ರವಾಸದಲ್ಲಿ ಅಜಿತ್‌ ಜತೆಗೆ ತಾವು ಇರುವ ಫೋಟೋಗಳನ್ನು ನಟಿ ಶಾಲಿನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಮುದ್ರದ ಮಧ್ಯೆ ಇರುವ ಯಾಚ್‌ ಒಂದರಲ್ಲಿ ಅಜಿತ್‌ಗೆ ಒರಗಿ ತಾವು ಕುಳಿತಿರುವ ಫೋಟೋ ಹಾಗೆಯೇ ಅಜಿತ್‌ ಪಕ್ಕದಲ್ಲಿ ನಿಂತಿರುವ ಫೋಟೋವನ್ನು ನಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.


ನಟಿ ಈ ಫೋಟೋಗಳಿಗೆ ಯಾವುದೇ ಕ್ಯಾಪ್ಶನ್‌ ಕೊಟ್ಟಿಲ್ಲ. ಆದರೆ ಅವರ ಅಭಿಮಾನಿಗಳೇ ಈ ಫೋಟೋಗಳಿಗೆ ತರೇವಾರು ಕ್ಯಾಪ್ಶನ್‌ಗಳನ್ನು ಕೊಡಲಾರಂಭಿಸಿದ್ದಾರೆ. “ಕಪಲ್‌ ಗೋಲ್‌ ಎಂದರೆ ಇದೇ ನೋಡಿ”, “ಮುದ್ದಾದ ಅಣ್ಣ ಅತ್ತಿಗೆ”, “ಬದುಕಿದರೆ ನಿಮ್ಮಂತೆ ಬದುಕಬೇಕು” ಎನ್ನುವಂತಹ ಹಲವಾರು ಕಾಮೆಂಟ್‌ಗಳು ಫೋಟೋಗಳಿಗೆ ಬಂದಿವೆ.
ಇದಕ್ಕೂ ಮೊದಲು ಈ ಜೋಡಿಯ ಇನ್ನೊಂದು ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ದಂಪತಿಯು ಮಗ ಆದ್ವಿಕ್‌ನೊಂದಿಗೆ ಫುಟ್‌ಬಾಲ್‌ ಗ್ರೌಂಡ್‌ನಲ್ಲಿ ಇದ್ದ ಫೋಟೋ ಅದಾಗಿತ್ತು. ಆ ಫೋಟೋಗೆ ಕೂಡ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಕುಟುಂಬವೆಂದರೆ ಹೀಗಿರಬೇಕು” ಎಂದು ಹೇಳಿದ್ದರು.

ಇದನ್ನೂ ಓದಿ: Ajith Kumar | ಅಜಿತ್‌ ಕುಮಾರ್‌ ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ ʻತುನಿವುʼ ಹೊಸ ಪೋಸ್ಟರ್‌ ಔಟ್‌ !
ನಟ ಅಜಿತ್‌ ಕುಮಾರ್‌ ಅವರು ಎಚ್‌.ವಿನೋಥ್‌ ನಿರ್ದೇಶನದ ಥುನಿವು ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ವರ್ಷಕ್ಕೂ ಮೊದಲು ಅಜಿತ್‌ ಅವರ ಎಕೆ 62 ಸಿನಿಮಾವನ್ನು ನಿರ್ದೇಶಕ ವಿಘ್ನೇಶ್‌ ಶಿವನ್‌ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಮಗೀಜ್‌ ಥಿರುಮೇನಿ ಅವರು ಈ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರಲಿದೆ. ಈ ಸಿನಿಮಾ ಚಿತ್ರೀಕರಣ ನಂತರ ಅಜಿತ್‌ ಅವರು ಬೈಕ್‌ನಲ್ಲಿ ವಿಶ್ವ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

Continue Reading

South Cinema

Dhruva Sarja: ʻಕೆಡಿʼ ಚಿತ್ರಕ್ಕೆ ಶಿಲ್ಪಾ ಶೆಟ್ಟಿ ಸತ್ಯವತಿಯಾಗಿ ಎಂಟ್ರಿ ಕೊಡಲಿದ್ದಾರಾ?

ಯುಗಾದಿ (Dhruva Sarja) ಹಬ್ಬಕ್ಕೆ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಡಲು ಚಿತ್ರತಂಡ ನಿರ್ಧರಿಸಿದೆ. ಸಿನಿಮಾದ ಪವರ್‌ಫುಲ್‌ ಪಾತ್ರ ಸತ್ಯವತಿಯ ಫಸ್ಟ್ ಲುಕ್ ರಿವೀಲ್ ಮಾಡುತ್ತಿದೆ ಚಿತ್ರತಂಡ. ಆದರೆ ಸತ್ಯವತಿ ಯಾರೆಂಬ ಕುತೂಹಲ ಸಿನಿ ಪ್ರೇಕ್ಷಕರಲ್ಲಿ ಇತ್ತು. ಇದೀಗ ಶಿಲ್ಪಾ ಶೆಟ್ಟಿ ಎಂದು ವರದಿಯಾಗಿದೆ.

VISTARANEWS.COM


on

Edited by

Dhruva Sarja KD Film Shilpa shetty Entry as Satyavathi
Koo

ಬೆಂಗಳೂರು: ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಹಾಗೂ ನಿರ್ದೇಶಕ ಪ್ರೇಮ್‌ ಕಾಂಬಿನೇಶನ್‌ ಸಿನಿಮಾ ʻಕೆಡಿ’ ಸಿನಿಮಾ ಹೊಸ ಅಪಡೇಟ್‌ ಶೇರ್‌ ಮಾಡಿಕೊಂಡಿದೆ. ಯುಗಾದಿ ಹಬ್ಬಕ್ಕೆ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಡಲು ಚಿತ್ರತಂಡ ನಿರ್ಧರಿಸಿದೆ. ಸಿನಿಮಾದ ಪವರ್‌ಫುಲ್ ಪಾತ್ರ ಸತ್ಯವತಿಯ ಫಸ್ಟ್ ಲುಕ್ ರಿವೀಲ್ ಮಾಡುತ್ತಿದೆ ಚಿತ್ರತಂಡ. ಆದರೆ, ಸತ್ಯವತಿ ಯಾರೆಂಬ ಕುತೂಹಲ ಸಿನಿ ಪ್ರೇಕ್ಷಕರಲ್ಲಿ ಇತ್ತು. ಇದೀಗ ಶಿಲ್ಪಾ ಶೆಟ್ಟಿ ಎಂದು ವರದಿಯಾಗಿದೆ.

ನಟಿ ಶಿಲ್ಪಾ ಶೆಟ್ಟಿ ಸದ್ದಿಲ್ಲದೇ ತಮ್ಮ ಭಾಗದ ಶೂಟಿಂಗ್‌ ಮುಗಿಸಿದ್ದಾರೆ. ಇದೀಗ ಶಿಲ್ಪಾ ಶೆಟ್ಟಿ ಪಾತ್ರದ ಫಸ್ಟ್ ಲುಕ್ ಚಿತ್ರತಂಡ ಅನಾವರಣ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ರವಿಚಂದ್ರನ್‌ ಅವರ ಲುಕ್‌ ರಿವೀಲ್‌ ಮಾಡಿದೆ ಚಿತ್ರತಂಡ. ರವಿಚಂದ್ರನ್ ಅವರ ಸಿನಿಮಾ ಫಸ್ಟ್ ಲುಕ್‌ನಲ್ಲಿ ಹಣೆಯಲ್ಲಿ ವಿಭೂತಿ, ಕಪ್ಪು ಶರ್ಟ್ ಮತ್ತು ಫ್ಯಾಂಟ್‌ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಬಲಗಾಲಿನಲ್ಲಿ ಕಾರಿನ ಡೋರ್ ಓಪನ್ ಮಾಡಿ ಪೋಸ್ ಕೊಟ್ಟಿದ್ದರು. ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರವಿಚಂದ್ರನ್ ಮಿಂಚಿದ್ದರು. ಅಷ್ಟೇ ಅಲ್ಲದೇ ಧ್ರುವ ಸರ್ಜಾ ಅವರು 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದರು.

ಈ ಚಿತ್ರದ ಕಥೆ 1970ರ ದಶಕದಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಟೈಟಲ್‌ ಟೀಸರ್‌ನಲ್ಲಿ ಧ್ರುವ ಸರ್ಜಾ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ. ಟೀಸರ್‌ ಪಂಚ ಭಾಷೆಯಲ್ಲಿ ಬಿಡುಗಡೆಗೊಂಡಿರುವುದು ವಿಶೇಷ. ಸದ್ಯ ಧ್ರುವ ಸರ್ಜಾ ʻಮಾರ್ಟಿನ್‌ʼ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ಎ.ಪಿ ಅರ್ಜುನ್‌ ಮಾರ್ಟಿನ್‌ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ನಿರ್ದೇಶಕ ಪ್ರೇಮ್‌ ಪೋಸ್ಟ್‌

ಇದನ್ನೂ ಓದಿ: Dhruva Sarja: ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ʻಮಾರ್ಟಿನ್‌ʼ ಸಿನಿಮಾದ ಬಿಗ್‌ ಅಪ್‌ಡೇಟ್‌ ಇಲ್ಲಿದೆ!

ಮಾರ್ಟಿನ್‌ ಸಿನಿಮಾ

ಮಾರ್ಟಿನ್‌ ಸಿನಿಮಾ ಟೀಸರ್‌ ಕೂಡ ಬಿಡುಗಡೆಗೊಂಡಿದ್ದು ಸಖತ್‌ ಹವಾ ಕ್ರಿಯೇಟ್‌ ಮಾಡಿತ್ತು. ಅದ್ಧೂರಿ ಬಜೆಟ್‌ ಮತ್ತು ಮೇಕಿಂಗ್‌ನಿಂದಾಗಿ ಸದ್ದು ಮಾಡುತ್ತಿರುವ ಸಿನಿಮಾ ‘ಮಾರ್ಟಿನ್ (‘MARTIN’ TEASER), ಕ್ಲೈಮ್ಯಾಕ್ಸ್‌ನ ಆ್ಯಕ್ಷನ್‌ ದೃಶ್ಯಗಳಿಗೆ ರಾಮ್‌-ಲಕ್ಷ್ಮಣ್‌ ಮತ್ತು ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಒಂದು ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿ ಮೂರು ಸಾಹಸ ನಿರ್ದೇಶಕರು ಕೆಲಸ ಮಾಡಿರುವುದು ಎಂದು ಹೇಳಲಾಗಿತ್ತು.

ಮಾರ್ಟಿನ್ ಚಿತ್ರಕ್ಕೆಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ.ಮಾರ್ಟಿನ್‌ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್‌ ಕುಮಾರ್‌, ನಿಕಿತನ್‌ ಧೀರ್‌, ನವಾಬ್‌ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್‌ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್‌ ಪಾಠಕ್‌ ಸಹ ‘ಮಾರ್ಟಿನ್‌’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರಿಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ.

Continue Reading
Advertisement
CM Basavaraja Bommai Science gallery
ಕರ್ನಾಟಕ11 mins ago

Panchamasali Reservation : ಮಾ. 24ರಂದು ಪಂಚಮಸಾಲಿ ಸಮುದಾಯಕ್ಕೆ GOOD NEWS ಕೊಡ್ತಾರಂತೆ ಸಿಎಂ ಬೊಮ್ಮಾಯಿ

Donald Trump failed to disclose 17 gifts from India, including Narendra Modi Gift
ದೇಶ17 mins ago

Donald Trump Gifts: ಮೋದಿ ಕೊಟ್ಟಿದ್ದು ಸೇರಿ 2 ಕೋಟಿ ರೂ. ಮೌಲ್ಯದ ಉಡುಗೊರೆಗಳ ಮಾಹಿತಿ ನೀಡದ ಟ್ರಂಪ್‌

Actress Haripriya gave good news at last; Didn't say the name though!
ಸಿನಿಮಾ21 mins ago

Sandalwood Actor : ಕೊನೆಗೂ ಗುಡ್​ ನ್ಯೂಸ್ ಕೊಟ್ಟ ನಟಿ ಹರಿಪ್ರಿಯಾ; ಆದರೂ ಹೆಸರು ಹೇಳಲಿಲ್ಲ!

Man killed in attack with deadly weapons near Kaveripatnam
ಕರ್ನಾಟಕ33 mins ago

Murder Case: ಕಾವೇರಿಪಟ್ಟಣಂ ಬಳಿ ಹಾಡಹಗಲೇ ತಲ್ವಾರ್‌ನಿಂದ ಕೊಚ್ಚಿ ಯುವಕನ ಕೊಲೆ

smartphone
ವಾಣಿಜ್ಯ40 mins ago

Smartphone Export : ಭಾರತದಿಂದ 2 ತಿಂಗಳಲ್ಲಿ ದಾಖಲೆಯ 16,500 ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ ರಫ್ತು

vistara-top-10-news-siddaramaiah-constituency-confusion-continues-to-congress-first-list-on-wednesday-and-more-news
ಕರ್ನಾಟಕ45 mins ago

ವಿಸ್ತಾರ TOP 10 NEWS: ಸಿದ್ದರಾಮಯ್ಯ ಕ್ಷೇತ್ರ ಗೊಂದಲದಿಂದ, ಕೇಂದ್ರ ಸರ್ಕಾರಕ್ಕೆ 155 ಲಕ್ಷ ಕೋಟಿ ರೂ. ಸಾಲದವರೆಗಿನ ಪ್ರಮುಖ ಸುದ್ದಿಗಳಿವು

Jio True 5G service launched in 41 cities including KGF's robertsonpet
ಕರ್ನಾಟಕ53 mins ago

ಕೆಜಿಎಫ್‌ನ ರಾಬರ್ಟಸನ್ ಪೇಟೆ ಸೇರಿ 41 ನಗರಗಳಲ್ಲಿ Jio True 5G ಸೇವೆ ಶುರು

Had Kohli not appealed, he would not have applied for the post of head coach
ಕ್ರಿಕೆಟ್1 hour ago

Team India : ಕೊಹ್ಲಿ ಮನವಿ ಮಾಡದೇ ಹೋಗಿದ್ದರೆ ಹೆಡ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸುತ್ತಿರಲಿಲ್ಲ​

Man Dips Leafy Vegetables In Chemical Solution, Here is a video
ದೇಶ1 hour ago

Viral Video: ನೀವು ತಿನ್ನುವ ‘ತಾಜಾ’ ತರಕಾರಿ ರಾಸಾಯನಿಕಯುಕ್ತ, ಹೇಗೆ ಅಂತೀರಾ? ಇಲ್ಲಿದೆ ವಿಡಿಯೊ

ಸಿನಿಮಾ1 hour ago

Rashmika Mandanna: ದ್ವೇಷಿಸುವವರನ್ನು ಹೇಗೆ ಎದುರಿಸಬೇಕೆಂದು ಪಾಠ ಹೇಳಿಕೊಟ್ಟ ನಟಿ ರಶ್ಮಿಕಾ ಮಂದಣ್ಣ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ1 month ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ1 month ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ16 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Paid leave for govt employees involved in the strike
ನೌಕರರ ಕಾರ್ನರ್3 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ4 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ1 month ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ3 hours ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ8 hours ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ8 hours ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ1 day ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ1 day ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ2 days ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Auto services to be stopped from Sunday midnight, Drivers protest against whiteboard bike taxi
ಕರ್ನಾಟಕ2 days ago

Bengaluru Auto Bandh: ಬೈಕ್‌ ಟ್ಯಾಕ್ಸಿಗೆ ವಿರೋಧ; ಭಾನುವಾರ ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ

Organizing our Power Run Marathon in the name of puneeth rajkumar
ಕರ್ನಾಟಕ2 days ago

Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

Due to heavy rains, motorists struggle on Bengaluru-Mysuru dashapatha
ಕರ್ನಾಟಕ3 days ago

Karnataka Rain: ಸರಾಗವಾಗಿ ಹರಿಯದ ಮಳೆ ನೀರು, ಕೈಕೊಟ್ಟ ವಾಹನ; ಬೆಂಗಳೂರು-ಮೈಸೂರು ದಶಪಥದಲ್ಲಿ ದಿಕ್ಕೆಟ್ಟ ಪ್ರಯಾಣಿಕರು!

ಕರ್ನಾಟಕ6 days ago

Karnataka Election 2023: ಧ್ರುವನಾರಾಯಣ ಪುತ್ರ ದರ್ಶನ್‌ಗಾಗಿ ನಂಜನಗೂಡು ಟಿಕೆಟ್ ತ್ಯಾಗ ಮಾಡಿದ ಎಚ್.ಸಿ. ಮಹದೇವಪ್ಪ

ಟ್ರೆಂಡಿಂಗ್‌

error: Content is protected !!