Filmfare South 2024: ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್; ತೆಲುಗು, ತಮಿಳು ಹಾಗೂ ಮಲಯಾಳಂ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ - Vistara News

South Cinema

Filmfare South 2024: ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್; ತೆಲುಗು, ತಮಿಳು ಹಾಗೂ ಮಲಯಾಳಂ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Filmfare South 2024: 2023ರಲ್ಲಿ ತೆರೆಕಂಡ ದಕ್ಷಿಣ ಭಾರತದ ಸಿನಿಮಾಗಳಿಗೆ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಕೆಲವು ಸಿನಿಮಾಗಳು ದಕ್ಷಿಣ ಭಾರತದಲ್ಲಿ ಸಿನಿಪ್ರಿಯರ ಮನಗೆದ್ದಿದೆ. ಅಂತಹ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

VISTARANEWS.COM


on

Filmfare South 2024 mollywood tollywood 69th Filmfare Awards
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 2023ರಲ್ಲಿ ತೆರೆಕಂಡು ಜನಪ್ರಿಯತೆ ಗಳಿಸಿದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. 2023ರಲ್ಲಿ ತೆರೆಕಂಡ ದಕ್ಷಿಣ ಭಾರತದ ಸಿನಿಮಾಗಳಿಗೆ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಕೆಲವು ಸಿನಿಮಾಗಳು ದಕ್ಷಿಣ ಭಾರತದಲ್ಲಿ ಸಿನಿಪ್ರಿಯರ ಮನಗೆದ್ದಿದೆ. ಅಂತಹ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಫಿಲ್ಮ್‌ಫೇರ್ ತೆಲುಗು ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ

ಅತ್ಯುತ್ತಮ ಸಿನಿಮಾ – ಬಳಗಂ
ಅತ್ಯುತ್ತಮ ನಿರ್ದೇಶಕ – ವೇಣು ಎಲ್ದಂಡಿ ( ಬಳಗಂ)
ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್)- ಬೇಬಿ ( ಸಾಯಿ ರಾಜೇಶ್)
ಅತ್ಯುತ್ತಮ ನಟ – ನಾನಿ ( ದಸರಾ)
ಅತ್ಯುತ್ತಮ ನಟ (ಕ್ರಿಟಿಕ್ಸ್) – ಪ್ರಕಾಶ್ ರಾಜ್ (ರಂಗ ಮಾರ್ತಾಂಡ)
ನವೀನ್ ಪೋಲಿಶೆಟ್ಟಿ ( ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ)
ಅತ್ಯುತ್ತಮ ನಟಿ – ಕೀರ್ತಿ ಸುರೇಶ್ ( ದಸರಾ)
ಅತ್ಯುತ್ತಮ ನಟಿ (ಕ್ರಿಟಿಕ್ಸ್) – ವೈಷ್ಣವಿ ಚೈತನ್ಯ (ಬೇಬಿ)
ಅತ್ಯುತ್ತಮ ಹೊಸ ಪ್ರತಿಭೆ (Male) – ಸಂಗೀತ್ ಶೋಭನ್ (ಮ್ಯಾಡ್)
ಅತ್ಯುತ್ತಮ ಪೋಷಕ ನಟ – ಬ್ರಹ್ಮಾನಂದಂ ( ರಂಗ ಮಾರ್ತಾಂಡ), ರವಿ ತೇಜಾ ( ವಾಲ್ತೇರು ವೀರಯ್ಯ)
ಅತ್ಯುತ್ತಮ ಪೋಷಕ ನಟಿ – ರೂಪಾ ಲಕ್ಷ್ಮಿ (ಬಳಗಂ)
ಅತ್ಯುತ್ತಮ ಸಂಗೀತ ನಿರ್ದೇಶಕ – ವಿಜಯ್ ಬಲ್ಗನಿನ್ (ಬೇಬಿ)
ಅತ್ಯುತ್ತಮ ಸಾಹಿತ್ಯ – ಅನಂತ ಶ್ರೀರಾಮ್ ( ಓ ರೆಂಡು ಪ್ರೇಮ, ಬೇಬಿ)
ಅತ್ಯುತ್ತಮ ಗಾಯಕ – ಶ್ರೀರಾಮ ಚಂದ್ರ (ಬೇಬಿ)
ಅತ್ಯುತ್ತಮ ಗಾಯಕಿ – ಶ್ವೇತಾ ಮೋಹನ್ ( ಸರ್)

ಇದನ್ನೂ ಓದಿ: Workshop: ಬೆಂಗಳೂರಿನಲ್ಲಿ ಆ.10ರಂದು ಸಿನಿಮಾಸಕ್ತರಿಗೆ ಕಾರ್ಯಾಗಾರ

ಫಿಲ್ಮ್‌ಫೇರ್ ತಮಿಳು ಪ್ರಶಸ್ತಿ ಗೆದ್ದವರ ಪಟ್ಟಿ

ಅತ್ಯುತ್ತಮ ಸಿನಿಮಾ – ಚಿತ್ತಾ
ಅತ್ಯುತ್ತಮ ನಿರ್ದೇಶಕ – ಎಸ್‌ ಯು ಅರುಣ್ ಕುಮಾರ್ (ಚಿತ್ತಾ)
ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್)- ವಿದುತಲೈ 1,
ವೆಟ್ರಿ ಮಾರನ್ ಅತ್ಯುತ್ತಮ ನಟ – ವಿಕ್ರಮ್ (ಪೊನ್ನಿಯನ್ ಸೆಲ್ವನ್ 2)
ಅತ್ಯುತ್ತಮ ನಟ (ಕ್ರಿಟಿಕ್ಸ್) – ಸಿದ್ಧಾರ್ಥ್ (ಚಿತ್ತಾ)
ಅತ್ಯುತ್ತಮ ನಟಿ – ನಿಮಿಷಾ ಸಂಜಯನ್ (ಚಿತ್ತಾ)
ಅತ್ಯುತ್ತಮ ನಟಿ (ಕ್ರಿಟಿಕ್ಸ್) – ಐಶ್ವರ್ಯಾ ರಾಜೇಶ್‌, ಅಪರ್ಣ ದಾಸ್
ಅತ್ಯುತ್ತಮ ಪೋಷಕ ನಟ – ಫಹಾದ್ ಫಾಸಿಲ್ (ಮಾಮಣ್ಣನ್)
ಅತ್ಯುತ್ತಮ ಪೋಷಕ ನಟಿ – ಅಂಜಲಿ ನಾಯರ್ (ಚಿತ್ತಾ)
ಅತ್ಯುತ್ತಮ ಸಂಗೀತ ನಿರ್ದೇಶಕ – ಧಿಬು ನಿನನ್ ಥಾಮಸ್, ಸಂತೋಷ್ ನಾರಾಯಣನ್ (ಚಿತ್ತಾ)
ಅತ್ಯುತ್ತಮ ಸಾಹಿತ್ಯ – ಇಳಂಗೊ ಕೃಷ್ಣನ್ ( ಪೊನ್ನಿಯನ್ ಸೆಲ್ವನ್ 2)
ಅತ್ಯುತ್ತಮ ಗಾಯಕ – ಹರಿಚರಣ್ ( ಪೊನ್ನಿಯನ್ ಸೆಲ್ವನ್ 2)
ಅತ್ಯುತ್ತಮ ಗಾಯಕಿ – ಕಾರ್ತಿಕಾ ವೈದ್ಯನಾಥನ್ (ಚಿತ್ತಾ)

ಫಿಲ್ಮ್‌ಫೇರ್ ಮಲಯಾಳಂ ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ

ಅತ್ಯುತ್ತಮ ಸಿನಿಮಾ – 2018
ಅತ್ಯುತ್ತಮ ನಿರ್ದೇಶಕ – ಜೂಡ್ ಆಂಥನಿ ಜೋಸೆಫ್ (2018)
ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್)- ಕಾಥಲ್ ದಿ ಕೋರ್
ಅತ್ಯುತ್ತಮ ನಟ – ಮಮ್ಮುಟ್ಟಿ (ನನ್ಪಕಲ್ ನೆರತು ಮಾಯಕ್ಕಂ)
ಅತ್ಯುತ್ತಮ ನಟ (ಕ್ರಿಟಿಕ್ಸ್) – ಜೋಜು ಜಾರ್ಜ್ಅ
ತ್ಯುತ್ತಮ ನಟಿ – ವಿನ್ಸಿ ಅಲೋಶಿಯಸ್ಅತ್ಯುತ್ತಮ ನಟಿ (ಕ್ರಿಟಿಕ್ಸ್) – ಜ್ಯೋತಿಕಾ
ಅತ್ಯುತ್ತಮ ಪೋಷಕ ನಟ – ಜಗದೀಶ್
ಅತ್ಯುತ್ತಮ ಪೋಷಕ ನಟಿ – ಪೂರ್ಣಿಮಾ ಇಂದ್ರಜಿತ್
ಅತ್ಯುತ್ತಮ ಸಂಗೀತ ನಿರ್ದೇಶಕ – ಸ್ಯಾಮ್ ಸಿಎಸ್
ಅತ್ಯುತ್ತಮ ಸಾಹಿತ್ಯ – ಅನ್ವರ್ ಅಲಿ
ಅತ್ಯುತ್ತಮ ಗಾಯಕ – ಕಪಿಲಾ ಕಪಿಲನ್
ಅತ್ಯುತ್ತಮ ಗಾಯಕಿ – ಕೆ. ಎಸ್. ಚಿತ್ರಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Kiran Raj: ಕಿರಣ್‌ರಾಜ್‌ `ರಾನಿ’ ಸಿನಿಮಾಗೆ ಯು/ಎ ಸರ್ಟಿಫಿಕೇಟ್; ತೆರೆಗೆ ಯಾವಾಗ?

Actor Kiran Raj: ಗುರುತೇಜ್‌ ಶೆಟ್ಟಿ (Director Gurutej Shetty) ಅವರು ನಿರ್ದೇಶಿಸುತ್ತಿರುವ ಈ ಚಿತ್ರದ ಬಗ್ಗೆ ಈಗಾಗಲೇ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಟಾಕ್‌ ನಡೆಯುತ್ತಿದೆ. ಈಗ ಬಿಡುಗಡೆಯಾಗಿರುವ ಟೀಸರ್‌ (Ronny Movie Teaser) ಅದನ್ನು ಇನ್ನೊಂದು ಹಂತಕ್ಕೇರಿಸಿದೆ.

VISTARANEWS.COM


on

Kiran Raj Ronny releasing on August 30th
Koo

ಬೆಂಗಳೂರು:ಕನ್ನಡತಿ ಧಾರಾವಾಹಿ (Kannadathi serial) ಮೂಲಕ ಕನ್ನಡ ನಾಡಿನ ಮೂಲೆಮೂಲೆಯಲ್ಲಿ ಅಭಿಮಾನಿಗಳನ್ನು ಪಡೆದ ಕಿರಣ್‌ರಾಜ್‌ (Actor Kiran Raj) ನಾಯಕನಾಗಿ ನಟಿಸುತ್ತಿರುವ ʻರಾನಿʼ  ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಸಿನಿಮಾ ಇದೇ ಆಗಸ್ಟ್ 30ರಂದು ಬಿಡುಗಡೆಯಾಗುತ್ತಿದೆ. ಗುರುತೇಜ್ ಶೆಟ್ಟಿ ನಿರ್ದೇಶನದ ಸ್ಟಾರ್ ಕ್ರಿಯೇಷನ್ ಬ್ಯಾನರ್‌ನಲ್ಲಿ ನಿರ್ಮಾಣವಾದ ಚಿತ್ರ ರಾನಿ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ.

ಈಗಾಗಲೇ ಟೀಸರ್ ಮತ್ತು ಹಾಡು ಬಿಡುಗಡೆ ಯಾಗಿ ಬಾರಿ ಸದ್ದು ಮಾಡಿದೆ. ಹಿಂದಿ ಟೀಸರ್‌ ಬಿಡುಗಡೆಯಾಗಿದ್ದು (Hindi teaser Release) ಭರ್ಜರಿ ರೆಸ್ಪಾನ್ಸ್‌ (Good Response) ಪಡೆದುಕೊಂಡಿದೆ. ಗುರುತೇಜ್‌ ಶೆಟ್ಟಿ (Director Gurutej Shetty) ಅವರು ನಿರ್ದೇಶಿಸುತ್ತಿರುವ ಈ ಚಿತ್ರದ ಬಗ್ಗೆ ಈಗಾಗಲೇ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಟಾಕ್‌ ನಡೆಯುತ್ತಿದೆ. ಈಗ ಬಿಡುಗಡೆಯಾಗಿರುವ ಟೀಸರ್‌ (Ronny Movie Teaser) ಅದನ್ನು ಇನ್ನೊಂದು ಹಂತಕ್ಕೇರಿಸಿದೆ.

ಕನ್ನಡತಿಯಲ್ಲಿ ಪಕ್ಕದ ಮನೆ ಹುಡುಗನಂತಿದ್ದ ಕಿರಣ್‌ ರಾಜ್‌ನೊಳಗೆ ಇಷ್ಟೊಂದು ಬೆಂಕಿ ಎಲ್ಲಿತ್ತು ಎಂದು ಅಚ್ಚರಿಪಡುವಂತಿದೆ ಟೀಸರ್‌. ರಾನಿ ಚಿತ್ರ ಭೂಗತ ಜಗತ್ತಿನ ಕಥೆಯನ್ನು ಹೊಂದಿದೆ ಎನ್ನುವುದು ಟೀಸರ್‌ ನೋಡಿದಾಗಲೇ ಗೊತ್ತಾಗುತ್ತದೆ. ʻನಾನು ಮನುಷ್ಯನಾಗಬಯಸುತ್ತೇನೆ, ಡಾನ್‌ ಅಲ್ಲʼ ಎಂದು ಕಿರಣ್‌ರಾಜ್‌ ಅಬ್ಬರಿಸುವ ದೃಶ್ಯವೊಂದು ಇದರಲ್ಲಿದೆ. ಇದರೊಂದಿಗೆ ಇದು ಆಕಸ್ಮಿಕವಾಗಿ ಭೂಗತ ಜಗತ್ತು ಪ್ರವೇಶಿಸಿದ ಅಮಾಯಕ ಯುವಕನೊಬ್ಬನ ಕಥೆಯಂತೆ ಕಾಣಿಸುತ್ತದೆ. ಜತೆಗೆ ಸಖತ್‌ ರೊಮ್ಯಾನ್ಸ್‌ ಕೂಡಾ ಕಾಣಿಸುತ್ತದೆ.

ಇದನ್ನೂ ಓದಿ: Actor Kiran Raj: ʻರಾನಿʼ ಸಿನಿಮಾ ಸಾಂಗ್‌ ಔಟ್‌; ಇದೇ ಭಾನುವಾರ ಕಿರಣ್ ರಾಜ್‌ ʻರೀಲ್ಸ್ with ಫ್ಯಾನ್ಸ್ʼ!

ಟೀಸರ್‌ನಲ್ಲಿ ಕಿರಣ್‌ರಾಜ್‌ ಅವರ ಆಕ್ಷನ್‌, ರವಿಶಂಕರ್‌ ಅವರ ಅಬ್ಬರ ಕಣ್ಮನ ತಣಿಸುತ್ತದೆ. ಕಿರಣ್‌ ಅಂತೂ ಕಿಲ್ಲರ್‌ ಲುಕ್‌ನಿಂದ ಕೊಲ್ಲುತ್ತಾರೆ. ಮಣಿಕಾಂತ್‌ ಕದ್ರಿ ಅವರ ಹಿನ್ನೆಲೆ ಸಂಗೀತವೂ ಟೀಸರ್‌ಗೆ ಹೊಸ ರೂಪ ನೀಡಿದೆ.

ಈ ಚಿತ್ರದಲ್ಲಿ ಕಿರಣ್‌ ರಾಜ್‌ ಜತೆಗೆ ರವಿಶಂಕರ್‌, ಮೈಕೋ ನಾಗರಾಜ್‌, ನಾಗತಿಹಳ್ಳಿ ಚಂದ್ರಶೇಖರ್‌, ಬಿ ಸುರೇಶ್‌, ಉಗ್ರಂ ಮಂಜು, ಉಗ್ರಂ ರವಿ, ಧರ್ಮಣ್ಣ, ಸೂರ್ಯ ಕುಂದಾಪುರ, ಗಿರೀಶ್‌ ಹೆಗ್ಡೆ, ಪ್ರಥ್ವೀರಾಜ್‌, ಯಶ್‌ ಶೆಟ್ಟಿ, ಉಮೇಶ್‌, ಸುಜಯ್‌ ಶಾಸ್ತ್ರಿ, ಲಕ್ಷ್ಮಿ ಸಿದ್ದಯ್ಯ, ಸಂದೀಪ್‌ ಮಲಾನಿ, ಅನಿಲ್‌, ಧರ್ಮೇಂದ್ರ ಅರಸ್‌, ಮನಮೋಹನ ರೈ ಮೊದಲಾದವರು ಇದ್ದಾರೆ. ಪ್ರಮೋದ್‌ ಮರವಂತೆ ಈ ಚಿತ್ರದ ನಾಲ್ಕು ಹಾಡುಗಳನ್ನು ಬರೆದಿದ್ದಾರೆ. ಮಣಿಕಾಂತ್‌ ಕದ್ರಿ ಟ್ಯೂನ್‌ ಹಾಕಿದ್ದಾರೆ.

ಇದೊಂದು ಪಕ್ಕಾ ಆಕ್ಷನ್‌ ಚಿತ್ರವಾಗಿದೆ. ಆದರೆ, ಅತ್ಯಂತ ಸೂಕ್ಷ್ಮ ಅಂಶಗಳನ್ನು ಬೆಸೆದುಕೊಂಡು ಕಟ್ಟಿದ ದೃಶ್ಯ ಕಾವ್ಯ ಎಂಬುದು ಟೀಸರ್‌ನಿಂದ ಸ್ಪಷ್ಟವಾಗುತ್ತದೆ. ರಾನಿ ಸಿನಿಮಾದಲ್ಲಿ ಆರು ಆಕ್ಷನ್‌ ಸೀನ್‌ಗಳಿವೆ ಎಂದು ಚಿತ್ರತಂಡ ಹೇಳಿದೆ.

Continue Reading

ಟಾಲಿವುಡ್

Ram Gopal Varma: ʻದಿ ಕೇರಳ ಸ್ಟೋರಿʼ ನಾನು ನೋಡಿದ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದು ಎಂದ ರಾಮ್ ಗೋಪಾಲ್ ವರ್ಮಾ!

Ram Gopal Varma: ಕೇರಳದಿಂದ ಕಾಣೆಯಾದ ಹುಡುಗಿಯರ ನಿಜ ಜೀವನದ ಅನುಭವವನ್ನು ಆಧರಿಸಿದೆ ಈ ಸಿನಿಮಾ. ನರ್ಸ್ ಆಗುವ ಕನಸು ಹೊತ್ತ ಶಾಲಿನಿ ಉನ್ನಿಕೃಷ್ಣನ್ ಎಂಬ ಗ್ರಾಮೀಣ ಹುಡುಗಿ, ವಿದೇಶದಲ್ಲಿರುವ ಐಸಿಸ್ ಭಯೋತ್ಪಾದಕ ಶಿಬಿರಕ್ಕೆ ಸೇರಿಹೋದ, ಅಲ್ಲಿಂದ ಹೊರಬರಲಾಗದೆ ಪರಿತಪಿಸುವ ಕತೆಯನ್ನು ಕೇರಳ ಸ್ಟೋರಿ ಹೊಂದಿದೆ. ಕೇರಳದ ಹಿಂದು ಯುವತಿಯರನ್ನು ಕಳ್ಳಸಾಗಣೆ ಮಾಡಿ, ಮತಾಂತರಿಸಿ, ಭಯೋತ್ಪಾದಕ ಶಿಬಿರಗಳಿಗೆ ಕಳುಹಿಸಲಾಗುತ್ತಿದೆ ಎಂಬ ಸುದ್ದಿಗಳು ಸಾಕಷ್ಟಿವೆ. ಅಂಥ ನೈಜ ಪ್ರಕರಣಗಳೂ ವರದಿಯಾಗಿವೆ. ಅದೇ ಹಿನ್ನೆಲೆಯಲ್ಲಿ ಈ ಚಿತ್ರ ಹುಟ್ಟಿಕೊಂಡಿದೆ ಎನ್ನಲಾಗಿದೆ.

VISTARANEWS.COM


on

Ram Gopal Varma calls The Kerala Story one of the best films
Koo

ಬೆಂಗಳೂರು: ಕಳೆದ ವರ್ಷ ಥಿಯೇಟರ್‌ಗಳಲ್ಲಿ ಬಂದ ಅದಾ ಶರ್ಮಾ ಅಭಿನಯದ `ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ (The Kerala Story) ಹಲವಾರು ವಿವಾದಗಳ ನಡುವೆ ಚಿತ್ರಮಂದಿರಗಳಿಗೆ ಅಪ್ಪಳಿಸಿತು. ಕೇರಳದಿಂದ ಕಾಣೆಯಾದ ಹುಡುಗಿಯರ ನಿಜ ಜೀವನದ ಅನುಭವವನ್ನು ಆಧರಿಸಿದೆ ಈ ಸಿನಿಮಾ (Ram Gopal Varma). ಇದೀಗ ಸಂದರ್ಶನದಲ್ಲಿ, ರಾಮ್ ಗೋಪಾಲ್ ವರ್ಮಾ ಅವರು ಈ ಸಿನಿಮಾವನ್ನು ಶ್ಲಾಘಿಸಿದರು. ಬಾಕ್ಸ್‌ ಆಫೀಸ್‌ನಲ್ಲಿ ‘ದಿ ಕೇರಳ ಸ್ಟೋರಿ ₹ 300 ಕೋಟಿ ಗಳಿಸಿದೆ’ ಎಂದು ಅವರು ಹೇಳಿದರು.

ರಾಮ್ ಗೋಪಾಲ್ ವರ್ಮಾ ಮಾತನಾಡಿ ʻʻ ಬಹಳ ಹಿಂದೆ, (ಸಂಗೀತ ಸಂಯೋಜಕ) ಎಆರ್ ರೆಹಮಾನ್ ಅವರು ಟ್ಯೂನ್ ಮಾಡುವಾಗ, ಅದು ವರ್ಷದ ಬ್ಲಾಕ್ಬಸ್ಟರ್ ಆಗಲಿದೆ ಎಂದು ಜನ ಭಾವಿಸುತ್ತಾರೆ. ಆದರೆ ಹಾಡು ಬಂದಾಗ ಜನ ನಿರ್ಲಕ್ಷಿಸುತ್ತಾರೆ. ಆದರೆ ಆಹಾಡನ್ನು ಕೆಟ್ಟದ್ದಾಗಿದೆ ಎಂದು ಕರೆಯುವುದಿಲ್ಲ. ಇದನ್ನು ಸಾಬೀತುಪಡಿಸಲು ಹಲವಾರು ಉದಾಹರಣೆಗಳಿವೆ. ನನ್ನ ಎಲ್ಲಾ ಹಿಟ್ ಚಿತ್ರಗಳು , ನನ್ನ ಫ್ಲಾಪ್‌ಗಳು ಉದ್ದೇಶಪೂರ್ವಕವಾಗಿವೆʼʼಎಂದರು.

ಇದನ್ನು ಉದಾಹರಣೆಯೊಂದಿಗೆ ವಿವರಿಸಿದ ರಾಮ್ ಗೋಪಾಲ್ ವರ್ಮಾ ʻʻಕೇರಳ ಸ್ಟೋರಿ ವರ್ಷಗಳಲ್ಲಿ ನೋಡಿದ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದಾಗಿದೆ. ಆದರೆ ಅದೇ ತಂಡ ಮತ್ತೊಂದು ಸಿನಿಮಾ ಮಾಡಿ ಪ್ಲಾಪ್‌ ಆಯ್ತು ಎಂದು ತಿಳಿದು ಆಘಾತವಾಯಿತುʼʼಎಂದರು.

“ಈ ಚಿತ್ರವು ಕೇರಳದ ಕಥೆ ಎಂದು ನನಗೆ ತುಂಬಾ ಸಂತೋಷವಾಯಿತು. ಹಲವು ವರ್ಷಗಳಿಂದ ನಾನು ನೋಡಿದ ಅತ್ಯುತ್ತಮ ಚಿತ್ರಗಳಲ್ಲಿ ಇದೂ ಒಂದು. ನಾನು ನಿರ್ದೇಶಕ (ಸುದೀಪ್ತೋ ಸೇನ್) ಜೊತೆ ಮಾತನಾಡಿದೆ, ನಾನು ನಿರ್ಮಾಪಕ (ವಿಪುಲ್ ಶಾ), ನಟಿ (ಆದಾ ಶರ್ಮಾ) ಜೊತೆ ಮಾತನಾಡಿದೆ. ನಂತರ, ಮುಂದಿನ ಚಿತ್ರ (ಬಸ್ತರ್: ದಿ ನಕ್ಸಲ್ ಸ್ಟೋರಿ) ಬಂದಿತು. ಬಿಡುಗಡೆಯಾಯಿತು ಮತ್ತು ಹೋಯಿತು. ಅದರ ಬಗ್ಗೆ ನನಗೆ ತಿಳಿದಿರಲಿಲ್ಲʼʼಎಂದರು.

ಇದನ್ನೂ ಓದಿ: Wayanad Tragedy: ವಯನಾಡ್ ಭೂಕುಸಿತ; ದಕ್ಷಿಣ ಭಾರತದ ಸಿನಿಮಾ ನಟರಿಂದ ಸಂತ್ರಸ್ತರಿಗೆ ನೆರವಿನ‌ ಮಹಾಪೂರ

ಕೇರಳದಿಂದ ಕಾಣೆಯಾದ ಹುಡುಗಿಯರ ನಿಜ ಜೀವನದ ಅನುಭವವನ್ನು ಆಧರಿಸಿದೆ ಈ ಸಿನಿಮಾ. ನರ್ಸ್ ಆಗುವ ಕನಸು ಹೊತ್ತ ಶಾಲಿನಿ ಉನ್ನಿಕೃಷ್ಣನ್ ಎಂಬ ಗ್ರಾಮೀಣ ಹುಡುಗಿ, ವಿದೇಶದಲ್ಲಿರುವ ಐಸಿಸ್ ಭಯೋತ್ಪಾದಕ ಶಿಬಿರಕ್ಕೆ ಸೇರಿಹೋದ, ಅಲ್ಲಿಂದ ಹೊರಬರಲಾಗದೆ ಪರಿತಪಿಸುವ ಕತೆಯನ್ನು ಕೇರಳ ಸ್ಟೋರಿ ಹೊಂದಿದೆ. ಕೇರಳದ ಹಿಂದು ಯುವತಿಯರನ್ನು ಕಳ್ಳಸಾಗಣೆ ಮಾಡಿ, ಮತಾಂತರಿಸಿ, ಭಯೋತ್ಪಾದಕ ಶಿಬಿರಗಳಿಗೆ ಕಳುಹಿಸಲಾಗುತ್ತಿದೆ ಎಂಬ ಸುದ್ದಿಗಳು ಸಾಕಷ್ಟಿವೆ. ಅಂಥ ನೈಜ ಪ್ರಕರಣಗಳೂ ವರದಿಯಾಗಿವೆ. ಅದೇ ಹಿನ್ನೆಲೆಯಲ್ಲಿ ಈ ಚಿತ್ರ ಹುಟ್ಟಿಕೊಂಡಿದೆ ಎನ್ನಲಾಗಿದೆ.

Continue Reading

ಟಾಲಿವುಡ್

Adivi Sesh: ʻಗೂಢಚಾರಿʼಗೆ ಆರು ವರ್ಷದ ಸಂಭ್ರಮ; ನಟ ಅಡಿವಿ ಶೇಷ್ ಹೇಳಿದ್ದೇನು?

Adivi Sesh: ಸೂಪರ್ ಹಿಟ್ ಸಿನಿಮಾ ಗೂಢಚಾರಿ ಸೀಕ್ವೆಲ್‌ಗೆ ಸ್ವತಃ ಅಡಿವಿ ಶೇಷ್ ಕಥೆ ಬರೆದಿದ್ದು, ‘ಕಾರ್ತೀಕೇಯ- 2’, ‘ಮೇಜರ್’ ಹಾಗೂ ‘ಕಾಶ್ಮೀರಿ ಫೈಲ್ಸ್’ನಂತ ಸೂಪರ್ ಹಿಟ್ ಸಿನಿಮಾ ನಿರ್ಮಾಣ ಮಾಡಿರೋ ದೊಡ್ಡ ನಿರ್ಮಾಣ ಸಂಸ್ಥೆಗಳು ‘ಗೂಢಚಾರಿ- 2’ಗೆ ಬಂಡವಾಳ ಹೂಡುತ್ತಿವೆ. ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು AK ಎಂಟಟೈನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬ್ಯಾನರ್ ನಡಿ ಟಿಜಿ. ವಿಶ್ವಪ್ರಸಾದ್ ಮತ್ತು ಅಭಿಷೇಕ್ ಅಗರ್ ವಾಲ್ ಜಂಟಿಯಾಗಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

VISTARANEWS.COM


on

Adivi Sesh Goodachari Turns 6 unveils six stunning looks
Koo

ಬೆಂಗಳೂರು: ತೆಲುಗು ಚಿತ್ರರಂಗದಲ್ಲಿ ದಾಖಲೆ ಬರೆದ ಸೂಪರ್ ಹಿಟ್ ಸಿನಿಮಾ ‘ಗೂಢಚಾರಿ’ಗೆ ಆರು ವರ್ಷದ ಸಂಭ್ರಮ. ಶಶಿ ಕಿರಣ್ ಟಿಕ್ಕಾ ನಿರ್ದೇಶನದ ಈ ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಅಡಿವಿ ಶೇಷ್ (Adivi Sesh) ಹೀರೊ ಆಗಿ ನಟಿಸಿದ್ದರು. ಯಾವುದೇ ನಿರೀಕ್ಷೆ ಇಲ್ಲದೇ ಬಂದ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಅಂದಾಜು 6 ಕೋಟಿ ರೂ. ಬಜೆಟ್ ಸಿನಿಮಾ 25-30 ಕೋಟಿ ರೂ. ದೋಚಿತ್ತು. ಈಗ ‘ಗೂಢಚಾರಿ’-2 ಸಿನಿಮಾ ನಿರ್ಮಾಣವಾಗುತ್ತಿದೆ. ಈ ಚಿತ್ರ 40ರಷ್ಟು ಮುಕ್ತಾಯಗೊಂಡಿದೆ. ಬಹಳ ಅದ್ಧೂರಿಯಾಗಿ ಗೂಢಚಾರಿ 2 ನಿರ್ಮಾಣ ಮಾಡಲಾಗುತ್ತಿದೆ. ಗೂಢಚಾರಿಗೆ ಆರು ವರ್ಷದ ಸಂಭ್ರಮದಲ್ಲಿ ಗೂಢಚಾರಿ 2 ಸಿನಿಮಾದ ಆರು ಸ್ಟನ್ನಿಂಗ್ ಲುಕ್ ಬಿಡುಗಡೆ ಮಾಡಲಾಗಿದೆ.

ಗೂಢಚಾರಿ 2 ಬಗ್ಗೆ ಮಾತಾನಾಡಿದ ನಾಯಕ ಅಡಿವಿ ಶೇಷ್, ʻʻಗೂಢಚಾರಿ ಹಲವು ಕಾರಣಗಳಿಂದ ವಿಶೇಷ ಚಿತ್ರವಾಗಿದೆ. ಕಳೆದ ಆರು ವರ್ಷಗಳಲ್ಲಿ ನಾನು ಮೆಚ್ಚುಗೆ ಕೇಳದ ಒಂದು ವಾರವೂ ಇರಲಿಲ್ಲ. ಸದ್ಯ ಗೂಢಚಾರಿ 2 ದೊಡ್ಡ ಮಟ್ಟದಲ್ಲಿ ಮೂಡಿ ಬರುತ್ತಿದೆ. G2 ಅಭಿಮಾನಿಗಳಿಗೆ ಸಖತ್ ಟ್ರೀಟ್ ನೀಡಲಿದೆʼʼ ಎಂದು ತಿಳಿಸಿದರು.

ಸೂಪರ್ ಹಿಟ್ ಸಿನಿಮಾ ಗೂಢಚಾರಿ ಸೀಕ್ವೆಲ್‌ಗೆ ಸ್ವತಃ ಅಡಿವಿ ಶೇಷ್ ಕಥೆ ಬರೆದಿದ್ದು, ‘ಕಾರ್ತೀಕೇಯ- 2’, ‘ಮೇಜರ್’ ಹಾಗೂ ‘ಕಾಶ್ಮೀರಿ ಫೈಲ್ಸ್’ನಂತ ಸೂಪರ್ ಹಿಟ್ ಸಿನಿಮಾ ನಿರ್ಮಾಣ ಮಾಡಿರೋ ದೊಡ್ಡ ನಿರ್ಮಾಣ ಸಂಸ್ಥೆಗಳು ‘ಗೂಢಚಾರಿ- 2’ಗೆ ಬಂಡವಾಳ ಹೂಡುತ್ತಿವೆ. ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು AK ಎಂಟಟೈನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬ್ಯಾನರ್ ನಡಿ ಟಿಜಿ. ವಿಶ್ವಪ್ರಸಾದ್ ಮತ್ತು ಅಭಿಷೇಕ್ ಅಗರ್ ವಾಲ್ ಜಂಟಿಯಾಗಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

ಇದನ್ನೂ ಓದಿ: Wayanad Tragedy: ವಯನಾಡ್ ಭೂಕುಸಿತ; ದಕ್ಷಿಣ ಭಾರತದ ಸಿನಿಮಾ ನಟರಿಂದ ಸಂತ್ರಸ್ತರಿಗೆ ನೆರವಿನ‌ ಮಹಾಪೂರ

‘ಗೂಢಚಾರಿ’ ಚಿತ್ರದಲ್ಲಿ ಅಡಿವಿ ಶೇಷ್ ಜೊತೆ ಶೋಬಿತಾ ಧೂಲಿಪಾಲ, ಜಗಪತಿ ಬಾಬು, ಪ್ರಕಾಶ್ ರಾಜ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದರು. ಸೂಪರ್ ಸಿನಿಮಾ ಸೀಕ್ವೆಲ್‌ನಲ್ಲೇ ನಟಿಸಿ ಮತ್ತೊಮ್ಮೆ ಗೆಲ್ಲುವ ಉತ್ಸಾಹದಲ್ಲಿ ಅಡಿವಿ ಶೇಷ್ ಇದ್ದಾರೆ. ಅಡಿವಿ ಶೇಷ್ ನಟನೆಯ ‘ಮೇಜರ್’ ಚಿತ್ರದ ಎಡಿಟರ್ ವಿನಯ್ ಕುಮಾರ್ ಸಿರಿಗಿನೀದಿ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. 2025ರಲ್ಲಿ ಗೂಢಚಾರಿ 2 ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Continue Reading

Latest

Wayanad Tragedy: ವಯನಾಡ್ ಭೂಕುಸಿತ; ದಕ್ಷಿಣ ಭಾರತದ ಸಿನಿಮಾ ನಟರಿಂದ ಸಂತ್ರಸ್ತರಿಗೆ ನೆರವಿನ‌ ಮಹಾಪೂರ

Wayanad Tragedy: ಭಾರೀ ಮಳೆಯಿಂದಾಗಿ ಕೇರಳದ ವಯನಾಡ್ ಗುಡ್ಡಗಾಡು ಪ್ರದೇಶಗಳಲ್ಲಿ ಮುಂಜಾನೆ ಭಾರಿ ಭೂಕುಸಿತ ಉಂಟಾಗಿದೆ. ಇದರಿಂದ ಮುನ್ನೂರಕ್ಕೂ ಹೆಚ್ಚು ಜನರು ಸಾವನಪ್ಪಿದ್ದಾರೆ. ನೂರಾರು ಜನ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಚಲನಚಿತ್ರೋದ್ಯಮದ ಸೆಲೆಬ್ರಿಟಿಗಳಾದ ಮೋಹನ್‌‌ಲಾಲ್, ನಟಿ ಜ್ಯೋತಿಕಾ, ನಟ ಕಾರ್ತಿ ಮತ್ತು ಸೂರ್ಯ, ಫಹಾದ್ ಫಾಸಿಲ್ ಮತ್ತು ನಜ್ರಿಯಾ ನಜೀಮ್, ನಟ ವಿಕ್ರಮ್, ಮಮ್ಮುಟ್ಟಿ ಮತ್ತು ಅವರ ಪುತ್ರ ಮತ್ತು ದುಲ್ಕರ್ ಸಲ್ಮಾನ್, ರಶ್ಮಿಕಾ ಮಂದಣ್ಣ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

VISTARANEWS.COM


on

Wayanad Tragedy
Koo

ಭಾರೀ ಮಳೆಯಿಂದಾಗಿ ಕೇರಳದ ವಯನಾಡ್ ಜಿಲ್ಲೆಯ (Wayanad Tragedy )ಗುಡ್ಡಗಾಡು ಪ್ರದೇಶಗಳಲ್ಲಿ ಮಂಗಳವಾರ (ಜುಲೈ 30) ಮುಂಜಾನೆ ಭಾರಿ ಭೂಕುಸಿತ ಉಂಟಾಗಿದೆ. ಇದರಿಂದ ಹಲವು ಜನರು ಸಾವನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಬದುಕುಳಿದವರಲ್ಲಿ ಅನೇಕ ಜನರು ತಮ್ಮ ಮನೆ, ಕುಟುಂಬದವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಚಲನಚಿತ್ರೋದ್ಯಮದ ಹಲವಾರು ಸೆಲೆಬ್ರಿಟಿಗಳು ಸಂತ್ರಸ್ತರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಅದಕ್ಕಾಗಿ ತಮ್ಮ ಕೈಲಾದಷ್ಟು ಸಹಾಯ ಹಸ್ತ ನೀಡಿದ್ದಾರೆ.

ಖ್ಯಾತ ನಟ ಮೋಹನ್ ಲಾಲ್ 3 ಕೋಟಿ ರೂ. ನೆರವು ನೀಡಿದ್ದಾರೆ. ನಟಿ ಜ್ಯೋತಿಕಾ, ನಟ ಕಾರ್ತಿ ಮತ್ತು ನಟ ಸೂರ್ಯ ಅವರು ಕೇರಳದ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಹಾಗೇ ಮಲಯಾಳಂ ನಟ ದಂಪತಿ ಫಹಾದ್ ಫಾಸಿಲ್ ಮತ್ತು ನಜ್ರಿಯಾ ನಜೀಮ್ ಕೂಡ ಸಂತ್ರಸ್ತರಿಗೆ ಸಹಾಯ ಮಾಡಲು 25 ಲಕ್ಷ ರೂ. ನೀಡಿದ್ದಾರೆ. ಅವರು ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿ, “ನಾವು ಸಿಎಂಡಿಆರ್ ಎಫ್ ಗೆ 25 ಲಕ್ಷ ರೂ.ಗಳ ದೇಣಿಗೆ ನೀಡುತ್ತಿದ್ದೇವೆ. ಇದನ್ನು ತೀವ್ರ ಅಗತ್ಯವಿರುವವರಿಗೆ ಅಗತ್ಯತೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ” ಎಂಬುದಾಗಿ ತಿಳಿಸಿದ್ದಾರೆ.

ಹಾಗೇ ಪೊನ್ನಿಯಿನ್ ಸೆಲ್ವನ್ ಪಾರ್ಟ್ 1 ಮತ್ತು ರಾವಣನ್‍ನಂತಹ ಚಿತ್ರಗಳಲ್ಲಿ ನಟಿಸಿದ ಖ್ಯಾತ ತಮಿಳು ನಟ ವಿಕ್ರಮ್ ಭೂಕುಸಿತದ ಸಂತ್ರಸ್ತರಿಗೆ 20 ಲಕ್ಷ ರೂ. ನೀಡಿದ್ದಾರೆ. ಈ ವಿಚಾರವನ್ನು ಅವರ ಮ್ಯಾನೇಜರ್ ಯುವರಾಜ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: ತಬ್ಬಲಿ ಶಿಶುಗಳಿಗೆ ಎದೆಹಾಲು ನೀಡಿ ಪೋಷಿಸಿದ ʼಮಹಾತಾಯಿʼಗೆ ವ್ಯಾಪಕ ಪ್ರಶಂಸೆ

ಅಲ್ಲದೇ ಮಲಯಾಳಂ ನಟ ಮಮ್ಮುಟ್ಟಿ ಮತ್ತು ಅವರ ಪುತ್ರ ಮತ್ತು ನಟ ದುಲ್ಕರ್ ಸಲ್ಮಾನ್ ಕೂಡ ಪರಿಹಾರ ನಿಧಿಗೆ 35 ಲಕ್ಷ ರೂ. ನೀಡಿದ್ದಾರೆ. ಈ ವಿಚಾರವನ್ನು ನಟ ಮುಮ್ಮಟಿ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಅವರ ಚಾರಿಟಬಲ್ ಟ್ರಸ್ಟ್ ತೀವ್ರ ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದೆ ಮತ್ತು ಸಂತ್ರಸ್ತರಿಗೆ ಅಗತ್ಯ ವಸ್ತುಗಳಾದ ಆಹಾರ ಪದಾರ್ಥಗಳು, ಔಷಧಿಗಳು, ಬಟ್ಟೆಗಳು ಮತ್ತು ಇತರ ಪ್ರಮುಖ ವಸ್ತುಗಳನ್ನು ಪೂರೈಸುತ್ತಿದೆ ಎಂಬುದಾಗಿ ತಿಳಿದುಬಂದಿದೆ. ಹಾಗೇ ನಟಿ ರಶ್ಮಿಕಾ ಮಂದಣ್ಣ ಕೂಡ ಸಂತ್ರಸ್ತರಿಗೆ 10 ಲಕ್ಷ ರೂ. ದೇಣಿಗೆ ನೀಡಿರುವುದಾಗಿ ತಿಳಿದುಬಂದಿದೆ.

Continue Reading
Advertisement
Parul Chaudhary
ಕ್ರೀಡೆ3 seconds ago

Parul Chaudhary : ಸ್ಟೀಪಲ್​ ಚೇಸ್​​ ಫೈನಲ್​ಗೆ ಅರ್ಹತೆ ಪಡೆಯಲು ಪಾರುಲ್ ಚೌಧರಿ ವಿಫಲ

Karnataka Weather Forecast
ಮಳೆ12 mins ago

Karnataka Weather : ನಿರಂತರ ಮಳೆಗೆ ಸೋರುತ್ತಿದೆ ಸರಕಾರಿ ಶಾಲೆ ಕಟ್ಟಡ; ಮುಂದಿನ ವಾರ ಹೇಗಿರಲಿದೆ ಅಬ್ಬರ

Priyanka Goswami
ಪ್ರಮುಖ ಸುದ್ದಿ21 mins ago

Priyanka Goswami : ರೀಲ್ಸ್​ ಮಾಡೋದಲ್ಲ, ಸ್ಪರ್ಧೆಯಲ್ಲಿ ಓಡಿ ಪದಕ ಗೆಲ್ಲು; ಪ್ರಿಯಾಂಕ ಗೋಸ್ವಾಮಿಗೆ ನೆಟ್ಟಿಗರ ತಪರಾಕಿ

Health tips for Over 40 supplimnt
ಆರೋಗ್ಯ37 mins ago

Health tips for Over 40: ನಿಮಗೆ 40 ದಾಟಿತೇ? ಹಾಗಾದರೆ ಈ ಸಪ್ಲಿಮೆಂಟ್‌ಗಳು ನಿಮಗೆ ಬೇಕಾಗಬಹುದು!

Marriage
ವೈರಲ್ ನ್ಯೂಸ್37 mins ago

ಮದುವೆಯಾದ ಮೇಲೂ ಪತ್ನಿಗೆ ಹಳೇ ಲವ್ವರ್‌ ಮೇಲೆ ಮೋಹ; ಆತನೊಂದಿಗೇ ಮದುವೆ ಮಾಡಿಸಿದ ಪತಿ!

Government Job
ಕರ್ನಾಟಕ44 mins ago

Government Job: ಅಂತಾರಾಷ್ಟ್ರೀಯ ಕ್ರೀಡಾಕೂಟ ಪದಕ ಗೆದ್ದ 12 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ

Paris Olympics
ಕ್ರೀಡೆ45 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್‌ ಪದಕ ಗೆಲುವಿಗೆ ಹಿನ್ನಡೆಯಾದ ಮೊಣಕಾಲಿನ ಗಾಯ; ಕಣ್ಣೀರು ಸುರಿಸುತ್ತಾ ಸೆಮಿಯಿಂದ ಹಿಂದೆ ಸರಿದ ಮರಿನ್‌

Money Guide
ಮನಿ-ಗೈಡ್55 mins ago

Money Guide: ನೆರೆ, ಭೂಕುಸಿತದಿಂದ ನಿಮ್ಮ ಮನೆಯನ್ನು ರಕ್ಷಿಸಲು ಜಸ್ಟ್‌ ಹೀಗೆ ಮಾಡಿ ಸಾಕು

Kiran Raj Ronny releasing on August 30th
ಸ್ಯಾಂಡಲ್ ವುಡ್59 mins ago

Actor Kiran Raj: ಕಿರಣ್‌ರಾಜ್‌ `ರಾನಿ’ ಸಿನಿಮಾಗೆ ಯು/ಎ ಸರ್ಟಿಫಿಕೇಟ್; ತೆರೆಗೆ ಯಾವಾಗ?

Paris Olympics 2024
ಪ್ರಮುಖ ಸುದ್ದಿ60 mins ago

Bikini vs : Hijab : ಸ್ಪೇನ್​, ಈಜಿಪ್ಟ್​ ನಡುವಿನ ಬೀಚ್ ವಾಲಿಬಾಲ್ ಪಂದ್ಯದ ವೇಳೆ ಕಿಡಿ ಹಚ್ಚಿದ ಬಿಕಿನಿ ವರ್ಸಸ್ ಹಿಜಾಬ್​ ಚರ್ಚೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ4 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 day ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌