Shruti Haasan: ನಿರ್ದೇಶಕನ ಜತೆ ಸಖತ್‌ ರೊಮ್ಯಾನ್ಸ್‌ ಮಾಡಿದ ಕಮಲ್ ಹಾಸನ್ ಪುತ್ರಿ - Vistara News

ಕಾಲಿವುಡ್

Shruti Haasan: ನಿರ್ದೇಶಕನ ಜತೆ ಸಖತ್‌ ರೊಮ್ಯಾನ್ಸ್‌ ಮಾಡಿದ ಕಮಲ್ ಹಾಸನ್ ಪುತ್ರಿ

Shruti Haasan: ʻಇನಿಮೆಲ್ʼ ಸಾಂಗ್‌ಗೆ ಲೋಕೇಶ್ ಕನಕರಾಜ್ ಅವರು ನಟರಾಗಿದ್ದಾರೆ. ಕಮಲ್ ಹಾಸನ್ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಸಂಪೂರ್ಣ ವಿಡಿಯೊ ಮಾರ್ಚ್ 25ರಂದು ರಿಲೀಸ್ ಆಗಲಿದೆ.

VISTARANEWS.COM


on

Shruti Haasan romance with lokesh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಇಷ್ಟು ದಿನ ಕಾಲಿವುಡ್‌ನಲ್ಲಿ  ‘ಕೈದಿ’, ‘ಲಿಯೋ’ ಹೀಗೆ ಅನೇಕ ಹಿಟ್‌ ಸಿನಿಮಾಗಳನ್ನು ನೀಡಿದ್ದರು ಲೋಕೇಶ್ ಕನಕರಾಜ್ (Lokesh Kanagaraj) . ಇದೀಗ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Shruti Haasan) ಜತೆ ರೊಮ್ಯಾನ್ಸ್‌ ಮಾಡಿದ್ದಾರೆ ಲೋಕೇಶ್‌. ʻಇನಿಮೆಲ್ʼ ಸಾಂಗ್‌ (video titled Inimel) ಒಂದು ಬಿಡುಗಡೆಯಾಗುತ್ತಿದೆ. ಲೋಕೇಶ್ ಕನಕರಾಜ್ ಅವರು ನಟರಾಗಿದ್ದಾರೆ. ಕಮಲ್ ಹಾಸನ್ (Kamal Haasan) ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಆದರೆ ಈ ಹಾಡಿಗೆ ನಿರ್ದೇಶನ ಇರೋದು ಶ್ರುತಿ ಹಾಸನ್ ಅವರದ್ದು. ಈ ಹಾಡಿನ ಪ್ರೋಮೊ ರಿಲೀಸ್ ಆಗಿದ್ದು, ಸಂಪೂರ್ಣ ವಿಡಿಯೊ ಮಾರ್ಚ್ 25ರಂದು ರಿಲೀಸ್ ಆಗಲಿದೆ.

ಒಂದು ವಾರದ ಹಿಂದೆ, ಶ್ರುತಿ (Shruti Haasan) ತಮ್ಮ ಇನ್‌ಸ್ಟಾದಲ್ಲಿ ಪೋಸ್ಟರ್ ಹಂಚಿಕೊಂಡಿದ್ದರು. ʻಇನಿಮೆಲ್ ರೋಲ್ ರಿವರ್ಸ್ ಹೊಸ ಪದ್ಯ” ಎಂದು ಬರೆದು, ಲೋಕೇಶ್ ನಟರಾಗಿ, ಕಮಲ್ ಗೀತರಚನೆಕಾರರಾಗಿ ಮತ್ತು ಶ್ರುತಿ ಸಂಯೋಜಕಿಯಾಗಿ ಹೊರಹೊಮ್ಮಿದ್ದಾರೆ ಎಂದು ಬರೆದುಕೊಂಡಿದ್ದರು.

ಮಾರ್ಚ್ 25 ರಂದು ಬಿಡುಗಡೆ

ಗುರುವಾರ (ಮಾ.21) ಸಂಜೆ ಹಾಡಿನ ಟೀಸರ್ ಬಿಡುಗಡೆ ಆಗಿದೆ. ಇನಿಮೆಲ್‌ನ ಪೂರ್ಣ ವಿಡಿಯೊವನ್ನು ಮಾರ್ಚ್ 25 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಬರೆದಿದ್ದಾರೆ. ವಿಡಿಯೊದಲ್ಲಿ, ಶ್ರುತಿ ಮತ್ತು ಲೋಕೇಶ್ ಪ್ರೇಮಿಗಳ ಪಾತ್ರವನ್ನು ನಿರ್ವಹಿಸಿದ್ದಾರೆ. ಲೋಕೇಶ್ ಹಾಗೂ ಶ್ರುತಿ ಹಾಸನ್ (Shruti Haasan) ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್ ಕೂಡ ಹಾಡಿನ ಸುಳಿವು ನೀಡಿದ್ದು, ಶ್ರುತಿ ಅವರ ಗಾಯನವಿದೆ.

ಇದನ್ನೂ ಓದಿ: Shruti Haasan: ಮಗಳ ಸಿನಿಮಾ ನಿರ್ಮಾಣ ಮಾಡುತ್ತಿರುವ ʻಕಮಲ್ ಹಾಸನ್ʼ; ‘ವಿಕ್ರಮ್’ ಡೈರೆಕ್ಟರ್ ಆ್ಯಕ್ಷನ್ ಕಟ್!

ಶ್ರುತಿ ಹಾಸನ್‌ (Shruti Haasan) ಕೊನೆಯದಾಗಿ ʻಸಲಾರ್ʼನಲ್ಲಿ ಕಾಣಿಸಿಕೊಂಡರು. ಕೆಲವು ದಿನಗಳ ಹಿಂದೆ ಶ್ರುತಿ ತಮ್ಮ ಮುಂಬರುವ ಯೋಜನೆಗಳ ಕುರಿತು ಅಪ್‌ಡೇಟ್ ನೀಡಿ ʻಎರಡು ಚಿತ್ರಗಳಲ್ಲಿ ಏಕಕಾಲದಲ್ಲಿ ಕೆಲಸ ಮಾಡುತ್ತಿದ್ದೇನೆ. ಎರಡೂ ಇನ್ನೂ ಬಿಡುಗಡೆಯಾಗಬೇಕಿದೆʼʼಎಂದು ಹೇಳಿಕೊಂಡಿದ್ದರು. ಶನೈಲ್ ಡಿಯೋ ನಿರ್ದೇಶನದ ಮತ್ತು ಅಡಿವಿ ಶೇಷ್ ಸಹ-ನಟನಾಗಿ ಶ್ರುತಿ ಶೀಘ್ರದಲ್ಲೇ ʻಡಕಾಯತ್‌ʼ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ತೆಲುಗು ಮತ್ತು ಹಿಂದಿಯಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಶ್ರುತಿ ಹೊಸ ಅವತಾರದಲ್ಲಿ ಕಾಣಲಿದ್ದಾರೆ. ಫಿಲಿಪ್ ಜಾನ್ ಅವರ ಚೆನ್ನೈ ಸ್ಟೋರಿಯಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಸಿನಿಮಾ

Parvati Nair : ಸಸ್ಪೆನ್ಸ್ ಥ್ರಿಲ್ಲರ್‌ ʻಊಣ್‌ ಪರವೈಲ್‌ʼ ತಮಿಳು ಚಿತ್ರದಲ್ಲಿ ಪಾರ್ವತಿ ನಾಯರ್‌ ದ್ವಿಪಾತ್ರದಲ್ಲಿ ಮಿಂಚಿಂಗ್‌

Parvati Nair: ಐರ್ಲೆಂಡ್‌ನ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ತಮಿಳು ಥ್ರಿಲ್ಲರ್ “ಊಣ್ ಪರವೈಲ್ ” ಹೆಸರು ಬಿಡುಗಡೆಯಾಗಿದೆ. ಪಾರ್ವತಿ ನಾಯರ್‌ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

VISTARANEWS.COM


on

Parvati Nair to play dual role in suspense thriller un Paravail Tamil film

ಬೆಂಗಳೂರು: ಇತ್ತೀಚೆಗೆ ಐರ್ಲೆಂಡ್, ಡಬ್ಲಿನ್‌ನಲ್ಲಿ ನಡೆದ ಭಾರತೀಯ ಚಲನಚಿತ್ರೋತ್ಸವದಲ್ಲಿ ಬಹುನಿರೀಕ್ಷಿತ ತಮಿಳು ಥ್ರಿಲ್ಲರ್ ಮೂವಿ ” ಊಣ್ ಪರವೈಲ್ ” ಅಧಿಕೃತವಾಗಿ ಬಿಡುಗಡೆಯಾಯಿತು. ತಾಲ್ ಮತ್ತು ಕಹೋ ನಾ ಪ್ಯಾರ್ ಹೈ ಖ್ಯಾತಿಯ ಪ್ರಸಿದ್ಧ ಬಾಲಿವುಡ್ ಛಾಯಾಗ್ರಾಹಕ ಕಬೀರ್ ಲಾಲ್ ನಿರ್ದೇಶಿಸಿದ ಈ ಚಿತ್ರದಲ್ಲಿ ಪಾರ್ವತಿ ನಾಯರ್ (Parvati Nair) ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಸಾಧಾರಣ ನಟನಾ ಕೌಶಲ್ಯವನ್ನು ಪ್ರದ‌ರ್ಶಿಸಿದ್ದಾರೆ. ಊಣ್ ಪರವೈಲ್ ಚಿತ್ರವು ಸಸ್ಪೆನ್ಸ್, ರಹಸ್ಯ ಮತ್ತು ಭಾವನಾತ್ಮಕ ನಾಟಕದ ವಿಶಿಷ್ಟ ಮಿಶ್ರಣವಾಗಿದೆ ಎಂದು ಪಾರ್ವತಿ ನಾಯರ್ ಹೇಳಿದರು.

ಪಾರ್ವತಿ ನಾಯರ್‌ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. “ಭವ್ಯ ಮತ್ತು ದಿವ್ಯಾ ದ್ವಿಪಾತ್ರಗಳನ್ನು ನಿರ್ವಹಿಸುವುದು ಸವಾಲಾಗಿತ್ತು. ಥ್ರಿಲ್ಲರ್‌ ಸಿನಿಮಾದಲ್ಲಿ ನನ್ನ ಅಭಿಯಾನವನ್ನು ಪ್ರದರ್ಶಿಸಲು ರೋಮಾಂಚನಗೊಂಡಿದ್ದೇನೆ ಎಂದಿದ್ದಾರೆ. ಇನ್ನು “ಊಣ್ ಪರವೈಲ್” ನಲ್ಲಿ ಪಾರ್ವತಿ ನಾಯರ್ ಅದ್ಭುತವಾಗಿ ನಟಿಸಿದ್ದಾರೆ. ಎರಡು ವಿಭಿನ್ನ ಪಾತ್ರಗಳಲ್ಲಿ ದಿವ್ಯಾ, ದೃಢಸಂಕಲ್ಪವುಳ್ಳ ಮತ್ತು ರಕ್ಷಿಸುವ ಸಹೋದರಿ ಮತ್ತು ಭವ್ಯಾ, ನಿಗೂಢ ಸಂದರ್ಭಗಳಲ್ಲಿ ದುರಂತ ಅಂತ್ಯವನ್ನು ಎದುರಿಸುವ ದೃಷ್ಟಿಹೀನ ಹುಡುಗಿಯಾಗಿದ್ದಾಳೆ. 

Parvati Nair to play dual role in suspense thriller un Paravail Tamil film

ದಿವ್ಯಾ ತನ್ನ ಸಹೋದರಿ ಭವ್ಯಳ ಸಾವಿನ ಸುತ್ತಲಿನ ಸತ್ಯವನ್ನು ಆಳವಾಗಿ ಪರಿಶೀಲಿಸಿದಾಗ, ಆಕೆಯ ಹಿಂದಿನ ರಹಸ್ಯಗಳು ಮತ್ತು ಸುಳ್ಳಿನ ಸಂಕೀರ್ಣ ಜಾಲವನ್ನು ಬಹಿರಂಗಪಡಿಸುತ್ತಾರೆ. ಊಣ್ ಪರವೈಲ್ ಮಹಿಳಾ ಪ್ರಧಾನ ಚಿತ್ರವಾಗಿದ್ದು ಅದು ಮಹಿಳೆಯರ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವದ ಮೇಲೆ ಬೆಳಕು ಚೆಲ್ಲುತ್ತದೆ” ಎಂದು ನಿರ್ದೇಶಕ ಕಬೀರ್ ಲಾಲ್ ಹೇಳಿದರು. “ಪಾರ್ವತಿ ನಾಯರ್ ಅವರ ಗಮನಾರ್ಹ ಅಭಿನಯವು ನಿರೂಪಣೆಗೆ ಆಳ ಮತ್ತು ಸೂಕ್ಷ್ಮತೆಯನ್ನು ತರುತ್ತದೆ. ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದುಇಟ್ಟುಕೊಳ್ಳಲಿದೆ. ಐರ್ಲೆಂಡ್‌ನ ಭಾರತೀಯ ಚಲನಚಿತ್ರೋತ್ಸವದಲ್ಲಿ ಚಲನಚಿತ್ರದ ಬಿಡುಗಡೆಯು ಮತ್ತಷ್ಟು ಉತ್ಸಾಹದಿಂದ ಕೂಡಿತ್ತು. ಉದ್ಯಮದ ತಜ್ಞರು ಮತ್ತು ಚಲನಚಿತ್ರ ಉತ್ಸಾಹಿಗಳು ಚಲನಚಿತ್ರದ ವಿಶಿಷ್ಟತೆಯನ್ನು ಶ್ಲಾಘಿಸಿದರು. 

ಪಾರ್ವತಿ ನಾಯರ್ ಅವರ ಅದ್ವಿತೀಯ ಅಭಿನಯದ ಕಥಾಹಂದರ ಹೊಂದಿರುವ ಈ ಚಿತ್ರ ಭಾರತದಲ್ಲಿ ಡಿಸೆಂಬರ್ 2024 ರೊಳಗೆ ಬಿಡುಗಡೆಗೊಳ್ಳಲಿದೆ. ಊಣ್ ಪರವೈಲ್ ಬಗ್ಗೆ” ಊಣ್ ಪರವೈಲ್” ಅಜಯ್ ಕುಮಾರ್ ಸಿಂಗ್ ಮತ್ತು ರೇಖಾ ಸಿಂಗ್ ನಿರ್ಮಿಸಿದ ತಮಿಳು ಥ್ರಿಲ್ಲರ್ ಆಗಿದೆ. ಚಿತ್ರದ ಹಿಡಿತದ ನಿರೂಪಣೆ ಮತ್ತು ಪಾರ್ವತಿ ನಾಯರ್ ಅವರ ಅಸಾಧಾರಣ ಅಭಿನಯವು ಪ್ರೇಕ್ಷಕರನ್ನು ಅವರ ಆಸನಗಳ ತುದಿಯಲ್ಲಿ ಇರಿಸುವ ಭರವಸೆ ನೀಡುತ್ತದೆ.

Continue Reading

ಸಿನಿಮಾ

Actor Rajinikanth: ಸೂಪರ್‌ ಸ್ಟಾರ್‌ ರಜನಿಕಾಂತ್‌ ಆರೋಗ್ಯದಲ್ಲಿ ಏರುಪೇರು; ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು

Actor Rajinikanth: ಸೂಪರ್‌ ಸ್ಟಾರ್‌ ರಜನಿಕಾಂತ್‌ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಧ್ಯರಾತ್ರಿಯೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.

VISTARANEWS.COM


on

Superstar Rajinikanth is unwell Family members admitted to hospital in the middle of the night

ಸೂಪರ್‌ ಸ್ಟಾರ್‌ ರಜನಿಕಾಂತ್ (Actor Rajinikanth) ಆರೋಗ್ಯದಲ್ಲಿ ಏರುಪೇರಾಗಿದೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಜನಿಕಾಂತ್ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿನ್ನೆ (ಸೆ.30) ಮಧ್ಯರಾತ್ರಿ ತಲೈವಾ ರಜನಿಕಾತ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈದ್ಯ ಡಾ. ಸಾಯಿ ಸತೀಶ್ ಅವರು ರಜನಿಕಾಂತ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ರಜನಿಕಾಂತ್​ಗೆ ಕಾರ್ಡಿಯಾಕ್​ ಕ್ಯಾಥ್​ ಲ್ಯಾಬ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೂ ದಾಖಲಾಗುವುದಕ್ಕೂ ಮುನ್ನ ರಜನಿಕಾಂತ್‌ ಅಭಿನಯಿಸಿರುವ ವೆಟ್ಟೈಯನ್​​​ ಸಿನಿಮಾದ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ರಜನಿಕಾಂತ್‌ಗೆ 73 ವರ್ಷ ವಯಸ್ಸು ಆಗಿದೆ. ಇಂದು ಸಂಜೆ ಅಥವಾ ನಾಳೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Mallikarjun Kharge: ಭಾಷಣ ಮಾಡುತ್ತಲೇ ವೇದಿಕೆ ಮೇಲೆ ಅಸ್ವಸ್ಥಗೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ

ಕೂಲಿ ಚಿತ್ರದಲ್ಲಿ ಸೂಪರ್‌ ಸ್ಟಾರ್‌ ತಲೈವಾ ಜತೆಗೆ ರಿಯಲ್ ಸ್ಟಾರ್

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಹೊಸ ಸಿನಿಮಾ ಕೂಲಿಯಲ್ಲಿ ಕನ್ನಡದ ರಿಯಲ್‌ ಸ್ಟಾರ್‌ ಉಪೇಂದ್ರ ಅಭಿನಯಿಸಲಿದ್ದಾರೆ. ಈ ಕುರಿತು ಉಪೇಂದ್ರ ಅವರು ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದಾರೆ.

Real Star Upendra Acting with Superstar Rajinikanth Coolie Movie

ಕೂಲಿ ಸಿನಿಮಾವು ತಮಿಳು, ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರಲಿದೆ. ಲೋಕೇಶ್ ಕನಕರಾಜ್‌ ಡೈರೆಕ್ಷನ್‌ನಲ್ಲಿ ಕೂಲಿ ಸಿನಿಮಾ ಮೂಡಿಬರುತ್ತಿದೆ.

Real Star Upendra Acting with Superstar Rajinikanth Coolie Movie

ತಲೈವಾ ರಜನಿಕಾಂತ್‌ ಅವರ 171ನೇ ಸಿನಿಮಾ ಕೂಲಿ ಆಗಿದೆ. ಜೈಲರ್‌ನಂತಹ ಬ್ಲಾಕ್ ಬಸ್ಟರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸನ್ ಪಿಕ್ಚರ್ಸ್ ಕೂಲಿಯನ್ನು ನಿರ್ಮಿಸಲಿದೆ.

Real Star Upendra Acting with Superstar Rajinikanth Coolie Movie

ರಜನಿಕಾಂತ್‌ ಮತ್ತು ಲೋಕೇಶ್ ಕನಕರಾಜ್‌ ಕಾಂಬಿನೇಷನ್‌ನ ‘ಕೂಲಿ’ ಸಿನಿಮಾದಲ್ಲಿ ಕನ್ನಡದ ಸೂಪರ್‌ ಸ್ಟಾರ್‌ ಉಪೇಂದ್ರ ನಟಿಸಲಿದ್ದಾರೆ.

ಈ ಕುರಿತು ಉಪೇಂದ್ರ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಕೂಲಿ ಸಿನಿಮಾದ ಪೋಸ್ಟರ್‌ ಹಾಕಿ ತಿಳಿಸಿದ್ದಾರೆ. ತಲೈವಾ ರಜಿನಿಕಾಂತ್‌ ನಟನೆಯ ಕೂಲಿ ಚಿತ್ರದಲ್ಲಿ ಉಪೇಂದ್ರ ಕಲೀಷ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

Real Star Upendra Acting with Superstar Rajinikanth Coolie Movie

ನಿಮ್ಮ ಆಶೀರ್ವಾದದಿಂದ ನನ್ನ ಗುರು ನನ್ನ ಸೂಪರ್‌ ಸ್ಟಾರ್‌ ರಜಿನಿ ಸರ್‌ ಜತೆಗೆ ಕೂಲಿ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಫೀಲಿಂಗ್‌‌ ಬ್ಲೆಸ್ಡ್ ಅಂತ ಲೋಕೇಶ್‌ ಕನಕರಾಜ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

Continue Reading

ಸ್ಯಾಂಡಲ್ ವುಡ್

Actor Upendra : ಕೂಲಿ ಚಿತ್ರದಲ್ಲಿ ಸೂಪರ್‌ ಸ್ಟಾರ್‌ ತಲೈವಾ ಜತೆಗೆ ರಿಯಲ್ ಸ್ಟಾರ್; ಕಲೀಷ ಪಾತ್ರದಲ್ಲಿ ಮಿಂಚಲಿರುವ ಉಪೇಂದ್ರ

Actor Upendra : ಸೂಪರ್‌ ಸ್ಟಾರ್‌ ತಲೈವಾ ರಜಿನಿಕಾಂತ್‌ ಜತೆಗೆ ರಿಯಲ್ ಸ್ಟಾರ್ ಉಪೇಂದ್ರ ಮಿಂಚಲಿದ್ದಾರೆ. ಕೂಲಿ ಚಿತ್ರದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

Real Star Upendra Acting with Superstar Rajinikanth Coolie Movie

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಹೊಸ ಸಿನಿಮಾ ಕೂಲಿಯಲ್ಲಿ ಕನ್ನಡದ ರಿಯಲ್‌ ಸ್ಟಾರ್‌ ಉಪೇಂದ್ರ ಅಭಿನಯಿಸಲಿದ್ದಾರೆ. ಈ ಕುರಿತು ಉಪೇಂದ್ರ ಅವರು ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದಾರೆ.

Real Star Upendra Acting with Superstar Rajinikanth Coolie Movie

ಕೂಲಿ ಸಿನಿಮಾವು ತಮಿಳು, ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರಲಿದೆ. ಲೋಕೇಶ್ ಕನಕರಾಜ್‌ ಡೈರೆಕ್ಷನ್‌ನಲ್ಲಿ ಕೂಲಿ ಸಿನಿಮಾ ಮೂಡಿಬರುತ್ತಿದೆ.

Real Star Upendra Acting with Superstar Rajinikanth Coolie Movie

ತಲೈವಾ ರಜನಿಕಾಂತ್‌ ಅವರ 171ನೇ ಸಿನಿಮಾ ಕೂಲಿ ಆಗಿದೆ. ಜೈಲರ್‌ನಂತಹ ಬ್ಲಾಕ್ ಬಸ್ಟರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸನ್ ಪಿಕ್ಚರ್ಸ್ ಕೂಲಿಯನ್ನು ನಿರ್ಮಿಸಲಿದೆ.

Real Star Upendra Acting with Superstar Rajinikanth Coolie Movie

ರಜನಿಕಾಂತ್‌ ಮತ್ತು ಲೋಕೇಶ್ ಕನಕರಾಜ್‌ ಕಾಂಬಿನೇಷನ್‌ನ ‘ಕೂಲಿ’ ಸಿನಿಮಾದಲ್ಲಿ ಕನ್ನಡದ ಸೂಪರ್‌ ಸ್ಟಾರ್‌ ಉಪೇಂದ್ರ ನಟಿಸಲಿದ್ದಾರೆ.

ಈ ಕುರಿತು ಉಪೇಂದ್ರ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಕೂಲಿ ಸಿನಿಮಾದ ಪೋಸ್ಟರ್‌ ಹಾಕಿ ತಿಳಿಸಿದ್ದಾರೆ. ತಲೈವಾ ರಜಿನಿಕಾಂತ್‌ ನಟನೆಯ ಕೂಲಿ ಚಿತ್ರದಲ್ಲಿ ಉಪೇಂದ್ರ ಕಲೀಷ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

Real Star Upendra Acting with Superstar Rajinikanth Coolie Movie

ನಿಮ್ಮ ಆಶೀರ್ವಾದದಿಂದ ನನ್ನ ಗುರು ನನ್ನ ಸೂಪರ್‌ ಸ್ಟಾರ್‌ ರಜಿನಿ ಸರ್‌ ಜತೆಗೆ ಕೂಲಿ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಫೀಲಿಂಗ್‌‌ ಬ್ಲೆಸ್ಡ್ ಅಂತ ಲೋಕೇಶ್‌ ಕನಕರಾಜ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

Continue Reading

ಸಿನಿಮಾ

Bijili Ramesh: ತಮಿಳು ಹಾಸ್ಯ ನಟ ಬಿಜಿಲಿ ರಮೇಶ್ ನಿಧನ

ಅತಿಯಾದ ಆಲ್ಕೋಹಾಲ್ ಸೇವನೆಯಿಂದಾಗಿ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ತಮಿಳು ಚಿತ್ರದ ಹಾಸ್ಯ ನಟ ಬಿಜಿಲಿ ರಮೇಶ್ (Bijili Ramesh) ಚೆನ್ನೈನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದೆರಡು ವಾರಗಳಲ್ಲಿ ಅವರ ಸ್ಥಿತಿ ಹದಗೆಟ್ಟಿತ್ತು. ಎರಡು ದಿನಗಳ ಹಿಂದೆಯಷ್ಟೇ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಆಸ್ಪತ್ರೆಯಿಂದ ಮನೆಗೆ ಮರಳಿದ್ದು, ಮನೆಯಲ್ಲಿ ಸೋಮವಾರ ರಾತ್ರಿ ನಿಧನರಾಗಿದ್ದಾರೆ.

VISTARANEWS.COM


on

By

Bijili Ramesh

ಚೆನ್ನೈ: ತಮಿಳು ನಟ (Tamil Actor) ಬಿಜಿಲಿ ರಮೇಶ್ (Bijili Ramesh) ಅವರು ದೀರ್ಘಕಾಲದ ಅನಾರೋಗ್ಯದಿಂದ ಆಗಸ್ಟ್ 26ರಂದು ರಾತ್ರಿ ಚೆನ್ನೈನಲ್ಲಿ (chennai) ನಿಧನರಾದರು. ಲಿವರ್ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ 46 ವಯಸ್ಸಾಗಿತ್ತು ಎಂದು ಅವರ ಕುಟುಂಬ ಮಂಗಳವಾರ ತಿಳಿಸಿದೆ.

ಬಿಜಿಲಿ ರಮೇಶ್ ಅವರು ಮಲಗಿದ್ದಾಗ ಹಠಾತ್ತನೆ ನಿಧನರಾದರು. ಅತಿಯಾದ ಆಲ್ಕೋಹಾಲ್ ಸೇವನೆಯಿಂದಾಗಿ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚೆನ್ನೈನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದೆರಡು ವಾರಗಳಲ್ಲಿ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಎರಡು ದಿನಗಳ ಹಿಂದೆಯಷ್ಟೇ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಆಸ್ಪತ್ರೆಯಿಂದ ಮನೆಗೆ ಮರಳಿದ್ದರು. ಬಿಜಿಲಿ ರಮೇಶ್ ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಚೆನ್ನೈನ ಎಂಜಿಆರ್ ನಗರದ ಬಳಿ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ.

ಜನಪ್ರಿಯ ಯೂಟ್ಯೂಬರ್‌ಗಳಾದ ವಿಜೆ ಸಿದ್ದು ಮತ್ತು ರಾಮ್ ನಿಶಾಂತ್ ಅವರನ್ನು ಒಳಗೊಂಡ ಹಾಸ್ಯ ವಿಡಿಯೋ ಅವರಿಗೆ ಜನಪ್ರಿಯತೆ ತಂದುಕೊಟ್ಟತ್ತು. ಇದು ಅಂತಿಮವಾಗಿ ಕೆಲವು ಚಿತ್ರಗಳಲ್ಲಿ ಅವರಿಗೆ ಪಾತ್ರಗಳನ್ನು ನೀಡಿತು.
ನಯನತಾರಾ ನಟಿಸಿದ ನೆಲ್ಸನ್ ದಿಲೀಪ್‌ಕುಮಾರ್ ಅವರ ಚೊಚ್ಚಲ ಚಿತ್ರ ಕೊಲಮಾವು ಕೋಕಿಲದ ಪ್ರಚಾರ ಗೀತೆ ‘ಕಬಿಸ್ಕಬಾ ಕೋಕೋ’ ಸಂಗೀತ ವಿಡಿಯೋದ ಮೂಲಕ ಬಿಜಿಲಿ ರಮೇಶ್ ಚಿತ್ರರಂಗಕ್ಕೆ ಪ್ರವೇಶಿಸಿದರು.

ಹಲವಾರು ಟಿವಿ ಶೋಗಳ ಜೊತೆಗೆ ಸಿವಪ್ಪು ಮಂಜಲ್ ಪಚೈ (2019), ಆದೈ (2019) ಮತ್ತು ಕಾತು ವಾಕುಲಾ, ಕಾದಲ್ (2022) ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದ ಅವರ ಚಿಕಿತ್ಸೆಗಾಗಿ ಕೆಲವು ದಿನಗಳ ಹಿಂದೆ ಅವರ ಕುಟುಂಬವು ಚಲನಚಿತ್ರ ಸಮುದಾಯದಿಂದ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿತು. ಬಳಿಕ ಸಹೋದ್ಯೋಗಿಗಳಿಂದ ಹಣಕಾಸಿನ ನೆರವು ಪಡೆದಿದ್ದರು.

ಇದನ್ನೂ ಓದಿ: Mohanlal: ʼಅಮ್ಮʼ ಅಧ್ಯಕ್ಷ ಸ್ಥಾನಕ್ಕೆ ನಟ ಮೋಹನ್‌ಲಾಲ್ ರಾಜೀನಾಮೆ

Bijili Ramesh

ಯೂಟ್ಯೂಬ್‌ನಲ್ಲಿ ಸಂದರ್ಶನವೊಂದರಲ್ಲಿ ಅವರು ತಮ್ಮ ಕಾಯಿಲೆಯ ಬಗ್ಗೆ ಕೆಲವು ತಿಂಗಳ ಹಿಂದೆಯಷ್ಟೇ ಬಹಿರಂಗಪಡಿಸಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿಮಾನಿಯಾಗಿದ್ದ ಬಿಜಿಲಿ ರಮೇಶ್ ಅವರಿಗೆ ರಜನಿಕಾಂತ್ ಜತೆಗೆ ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಎನ್ನುವ ಹಂಬಲವಿತ್ತು. ಕೊನೆಗೂ ಅವರ ಈ ಕನಸು ನನಸಾಗಲೇ ಇಲ್ಲ.

ಕಾಯಿಲೆಯ ಬಗ್ಗೆ ಪತ್ನಿ ಹೇಳಿದ್ದೇನು?

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬಿಜಿಲಿ ರಮೇಶ್ ಅವರ ಪತ್ನಿ, ಮದ್ಯಪಾನದಿಂದಾಗಿ ಅವರ ಲಿವರ್ ಸಂಪೂರ್ಣವಾಗಿ ವಿಫಲವಾಗಿದೆ. ಕಳೆದ ತಿಂಗಳವರೆಗೆ ಚೆನ್ನಾಗಿಯೇ ಇದ್ದರು. ಮೊದಲು ಓಮಂದೂರಾರ್ ಆಸ್ಪತ್ರೆಗೆ ಕರೆದೊಯ್ದಿದ್ದೇವೆ. ಆಗ ಯಕೃತ್ತು ಮತ್ತು ಕಾಮಾಲೆ ಇರುವುದು ಪತ್ತೆಯಾಯಿತು. ಅನಂತರ ಅವರನ್ನು 10 ದಿನಗಳ ಕಾಲ ಚಿಕಿತ್ಸೆಗಾಗಿ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಜೀವವನ್ನು ಉಳಿಸಲು ವೈದ್ಯರಿಗೆ ಬೇಡಿಕೊಂಡೆವು. ಎಷ್ಟು ಸಾಧ್ಯವೋ ಅಷ್ಟು ನೋಡುತ್ತಿದ್ದೇವೆ. ದೇವರನ್ನು ಹೆಚ್ಚು ಪ್ರಾರ್ಥಿಸಿ. ಲಿವರ್ ಕಸಿ ಮಾಡಬೇಕು. ಇನ್ನೊಂದು ಲಿವರ್ ಸಿಕ್ಕರೂ ಬದುಕುವುದು ಕಷ್ಟ ಎಂದು ವೈದ್ಯರು ಹೇಳಿದ್ದರು. ಖಾಸಗಿಯಾಗಿ ಮಾಡಿದರೆ 60 ಲಕ್ಷ ರೂ. ವರೆಗೆ ಬಿಲ್ ಬರುತ್ತಿತ್ತು. ಆ ಮಟ್ಟಿಗೆ ನಮಗೆ ಯಾವುದೇ ಸೌಲಭ್ಯವಿಲ್ಲ. ಅವರಿಲ್ಲದೆ ಹೇಗೆ ಬದುಕಬೇಕು ಎಂಬುದು ಗೊತ್ತಾಗುತ್ತಿಲ್ಲ. ಮಗನನ್ನ ನಾನೇ ನೋಡಿಕೊಳ್ಳಬೇಕು ಎಂದಿದ್ದರು.

Continue Reading
Advertisement
Latest2 ಗಂಟೆಗಳು ago

ಶ್ರೀ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿ ಅವರಿಂದ PNS ವಿಸ್ತಾರ ನ್ಯೂಸ್ ಕಚೇರಿ ಉದ್ಘಾಟನೆ

ಪ್ರಮುಖ ಸುದ್ದಿ3 ಗಂಟೆಗಳು ago

ವಿಭಿನ್ನ ಕಾರ್ಯಯೋಜನೆಯೊಂದಿಗೆ ಸಮಾಜದ ಪ್ರತಿನಿಧಿ ರೂಪದಲ್ಲಿ ಸಿದ್ಧಗೊಳ್ಳುತ್ತಿದೆ ಪಿಎನ್‌ಎಸ್‌ ವಿಸ್ತಾರ ನ್ಯೂಸ್-ಹೆಚ್.ಜಿ ಪವಿತ್ರ ಗೌಡ

ಸುವಚನ4 ಗಂಟೆಗಳು ago

ಕರುನಾಡಿನ ಜನಧ್ವನಿಯಾಗಿ ಶುಭಾರಂಭಗೊಳ್ಳುತ್ತಿದೆ ಪಿಎನ್‌ಎಸ್‌ ವಿಸ್ತಾರ ನ್ಯೂಸ್‌ -ಶ್ರೀ ಶ್ರೀ ಡಾ. ಪ್ರಕಾಶನಾಥ ಗುರೂಜಿ

Kodava Family Hockey Tournament Website Launched
ಕೊಡಗು1 ವರ್ಷ ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು1 ವರ್ಷ ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ1 ವರ್ಷ ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ1 ವರ್ಷ ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ1 ವರ್ಷ ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ1 ವರ್ಷ ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು1 ವರ್ಷ ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

galipata neetu
ಕಿರುತೆರೆ2 ವರ್ಷಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 ವರ್ಷಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 ವರ್ಷಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 ವರ್ಷಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 ವರ್ಷಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ವರ್ಷಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ವರ್ಷಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ವರ್ಷಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ವರ್ಷಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ವರ್ಷಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ವರ್ಷಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ವರ್ಷಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ವರ್ಷಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ವರ್ಷಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ವರ್ಷಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌