South Cinema
Spandana Vijay Raghavendra: ಸ್ಪಂದನಾ ಬಗ್ಗೆ ಅಪ್ರಪಚಾರ ಮಾಡಬೇಡಿ ಎಂದ ಮೇಘನಾ ರಾಜ್!
Spandana Vijay Raghavendra: ಶೋಕಸಾಗರದಲ್ಲಿ ಚಿನ್ನಾರಿಮುತ್ತ ಕುಟುಂಬಕ್ಕೆ ಧೈರ್ಯ ಹೇಳಲು ಸಾರ್ವಜನಿಕರು ಕೂಡ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದೀಗ ನಟಿ ಮೇಘನಾ ರಾಜ್ ಸ್ಪಂದನಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು: ಸ್ಪಂದನಾ ವಿಜಯ್ ರಾಘವೇಂದ್ರ (Spandana Vijay Raghavendra) ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಚಿತ್ರರಂಗದ ಇನ್ನಷ್ಟು ಗಣ್ಯರು, ಸ್ಪಂದನಾ ಕುಟುಂಬ ಬಳಗದವರು ಹಾಗೂ ಸ್ನೇಹಿತರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಶೋಕ ಸಾಗರದಲ್ಲಿ ಚಿನ್ನಾರಿ ಮುತ್ತ ಕುಟುಂಬಕ್ಕೆ ಧೈರ್ಯ ಹೇಳಲು ಸಾರ್ವಜನಿಕರು ಕೂಡ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದೀಗ ನಟಿ ಮೇಘನಾ ರಾಜ್ ಸ್ಪಂದನಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಮಾಧ್ಯಮದ ಮುಂದೆ ನಟಿ ಮಾತನಾಡಿ ʻರಾಘು- ಸ್ಪಂದನಾ ನನ್ನ ಫಾಮಿಲಿ ಇದ್ದಂತೆ. ಅವರೂ ನಮ್ಮ ಕುಟುಂಬವೇ. ನನ್ನ ಕುಟುಂಬಕ್ಕೆ ಆಗಿರುವ ನೋವಿದು. ರಾಘು-ಸ್ಪಂದನಾ ನಮಗೆ ಬಹಳ ಆತ್ಮೀಯರಾಗಿದ್ದರು. ಏನು ನಡೆದಿದೆ, ಏನು ಆಗಿದೆ ಎನ್ನುವುದು ಅವರ ಕುಟುಂಬಕ್ಕೆ ತಿಳಿದಿರುತ್ತದೆ. ಸ್ಪಂದನಾ ಬಗ್ಗೆ ಅಪಪ್ರಚಾರ ಮಾಡಬೇಡಿ. ಆಕೆಗೆ ಮರ್ಯಾದೆ ಕೊಡಿ. ಸೋಷಿಯಲ್ ಮೀಡಿಯಾದಲ್ಲಿ ಇಲ್ಲದೇ ಇರುವ ಸುದ್ದಿಗಳನ್ನು ಹರಡಬೇಡಿ. ಅವರ ಕುಟುಂಬಕ್ಕೆ ಸ್ಪೆಸ್ ಕೊಡಿ .ರಾಘು- ಸ್ಪಂದನಾ ಅನ್ಯೋನ್ಯವಾಗಿ ಬದುಕುತ್ತಿದ್ದರುʼʼ ಎಂದರು.
ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಧ್ರುವ ಸರ್ಜಾ ಕೂಡ ಆಗಮಿಸಿದ್ದಾರೆ. ನಟಿ ರಕ್ಷಿತಾ, ಪ್ರೇಮ್ ದಂಪತಿ ಆಗಮಿಸಿ ಪ್ರೀತಿಯ ರಾಘುಗೆ ಸಾಂತ್ವನ ಹೇಳಿದರು.
ಇದನ್ನೂ ಓದಿ: Spandana Vijay Raghavendra: ಹೋದವರು ಹೊರಟು ಹೋಗ್ತಾರೆ, ಇರೋರ ಕಷ್ಟ ನೋಡಿ! ಎಂದು ರಾಘಣ್ಣ ಭಾವುಕ
ಭಾವುಕರಾದ ಬಿ.ಕೆ ಹರಿಪ್ರಸಾದ್
ಸ್ಪಂದನಾ ಅಂತ್ಯಕ್ರಿಯೆ ಬಗ್ಗೆ ವಿವರ ನೀಡುತ್ತಾ ಬಿ.ಕೆ ಹರಿಪ್ರಸಾದ್ ಭಾವುಕರಾದರು. ʼಸ್ಪಂದನಾ ಅವರ ಪಾರ್ಥಿವ ಶರೀರ 2 ಗಂಟೆ ತನಕ ಇಲ್ಲೇ ಇರುತ್ತದೆ. ಅಂತಿಮ ಯಾತ್ರೆ 2 ಗಂಟೆಗೆ ಆರಂಭ ಮಾಡುತ್ತೇವೆ. ಅವರ ಅಂತ್ಯಕ್ರಿಯೆಯನ್ನು ಹರಿಶ್ಚಂದ್ರ ಘಾಟ್‌ನಲ್ಲಿ 2.30ರಿಂದ 3.30ರ ಒಳಗೆ ಮಾಡುತ್ತೇವೆʼ ಎಂದು ಹರಿಪ್ರಸಾದ್ ನುಡಿದರು.
ರಂಗಾಯಣ ರಘು ಈ ಬಗ್ಗೆ ಮಾತನಾಡಿ ʻʻಚಿತ್ರರಂಗದಲ್ಲಿ ಕಣ್ಣೀರು ಜಾಸ್ತಿ ಆಗುತ್ತಿದೆ. ಈ ನೋವಿನ ಮೆರವಣಿಗೆ ಯಾರಿಗೇ ಆಗಲಿ ಹಿಂಸೆಯಾಗುತ್ತದೆ. ರಾಘು ಅಂತೂ ಹಸುಗೂಸು. ಭಗವಂತನಲ್ಲಿ ಸಾಕು ಮಾಡಪ್ಪ ಎಂದು ಕೇಳಬಹುದು. ರಾಜ್ ಕುಟುಂಬಕ್ಕೆ ಸಾಕಷ್ಟು ಪರೀಕ್ಷೆ ಬಂದೋಯ್ತುʼʼ ಎಂದು ಭಾವುಕರಾದರು.
South Cinema
Pooja Hegde: ಖ್ಯಾತ ಕ್ರಿಕೆಟಿಗನ ಜತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಪೂಜಾ ಹೆಗ್ಡೆ?
Pooja Hegde: ಮದುವೆಗೆ ಎಲ್ಲ ಸಿದ್ಧತೆ ನಡೆಯುತ್ತಿದೆ ಎಂತಲೂ ವರದಿಯಾಗಿದೆ.ಆ ಖ್ಯಾತ ಕ್ರಿಕೆಟಿಗ ಯಾರು ಎಂಬುದರ ಬಗ್ಗೆ ಎಲ್ಲೂ ರಿವೀಲ್ ಆಗಿಲ್ಲ.
ಇದನ್ನೂ ಓದಿ: Pooja Hegde: ಕೆಂಪು ಉಡುಪಿನಲ್ಲಿ ಸಖತ್ ಹಾಟ್ ಆಗಿ ಕಂಡ ಪೂಜಾ ಹೆಗ್ಡೆ
South Cinema
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ
Darshan Thoogudeepa: ನಟ ದರ್ಶನ್ ಅವರ ಬೇಜವಾಬ್ದಾರಿತನದ ಹೇಳಿಕೆ ವಿರುದ್ಧ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಆಕ್ರೋಶ ಹೊರ ಹಾಕಿದೆ.
ಮಂಡ್ಯ: ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್ 26ರಂದು (ಮಂಗಳವಾರ) ಕರೆ ನೀಡಲಾಗಿರುವ ಬೆಂಗಳೂರು ಬಂದ್‌ಗೆ (Bangalore bandh on September 26) ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸ್ಯಾಂಡಲ್‌ವುಡ್ ಕಲಾವಿದರೂ ಕೂಡ ರೈತರಿಗೆ ಬೆಂಬಲ ನೀಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa) ಕೂಡ ರೈತರ ಬೆಂಬಲಕ್ಕೆ ನಿಂತಿದ್ದರು. ಈ ವೇಳೆ ಕನ್ನಡ ಸಿನಿಮಾ ಕಲಾವಿದರು ಅದಕ್ಕೆ ಬರಲಿಲ್ಲ, ಇದಕ್ಕೆ ಬರಲಿಲ್ಲ ಎಂದು ಹೇಳುತ್ತೀರಲ್ಲ ಕರ್ನಾಟಕದಲ್ಲಿ ತಮಿಳು ಸಿನಿಮಾವೊಂದು 36 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ತಮಿಳು ನಟರು ಹಾಗೂ ಅವರ ಸಿನಿಮಾಗಳ ಬಗ್ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದರು. ಇದೀಗ ನಟ ದರ್ಶನ್ ಅವರ ಬೇಜಾವಬ್ದಾರಿತನದ ಹೇಳಿಕೆ ವಿರುದ್ಧ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಆಕ್ರೋಶ ಹೊರ ಹಾಕಿದೆ.
ನಟ ದರ್ಶನ್ ವಿರುದ್ಧ ಭುಗಿಲೆದ್ದ ಆಕ್ರೋಶ
ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಹೋರಾಟ ನಡೆಸಿದೆ. ಕಾವೇರಿ ವಿಚಾರವಾಗಿ ನಟ ದರ್ಶನ್ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ʻʻನಟ ದರ್ಶನ್ ಅವರು ಕೂಡಲೇ ರೈತರಲ್ಲಿ ಕ್ಷಮೆ ಕೇಳಬೇಕು. ನಾವು ಒಂದು ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ದರ್ಶನ್ ಬಂದರೆ ಬಲ ಸಿಗುತ್ತದೆ ಎಂದು ಭಾವಿಸಿದ್ದೇವು. ಅದಕ್ಕಾಗಿಯೇ ನಾವು ಆಹ್ವಾನಿಸಿದ್ದೇವು. ಕಾವೇರಿ ಕೊಳ್ಳದ ಜಿಲ್ಲೆಯವರಾಗಿ ಹೋರಾಟಗಾರರ ಬಗ್ಗೆ ಕೇವಲವಾಗಿ ಮಾತನಾಡಬಾರದು. ಜವಾಬ್ದಾರಿಯುತ ನಟನಾಗಿ ಹೋರಾಟಕ್ಕೆ ದನಿಗೂಡಿಸಿಬೇಕಿತ್ತುʼʼ ಎಂದು ರೈತರು ದರ್ಶನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇದನ್ನೂ ಓದಿ: Darshan Thoogudeepa: ತಮಿಳು ಸಿನಿಮಾ ಯಾಕೆ ನೋಡಿದ್ರಿ? ಕಾವೇರಿ ವಿಚಾರದಲ್ಲಿ ದರ್ಶನ್ ಕೆಂಡ
ಚಾಲೆಂಜಿಂಗ್ ಸ್ಟಾರ್ @dasadarshan BOSS
— DBoss Cult (@ItzDBOSSCult) September 25, 2023
with @nagaraj_rachaiya Anna 🥰❤️#DBoss𓃰 #D56 #Kaatera #Darshanthoogudeepa #ChallengingStarDarshan pic.twitter.com/4maJ32Ny3l
ದರ್ಶನ್ ಹೇಳಿದ್ದೇನು?
ಕಾವೇರಿ ಗಲಾಟೆ ಆರಂಭ ಆಗುತ್ತಿದ್ದಂತೆ ಸ್ಯಾಂಡಲ್‌ವುಡ್ ನಟರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಕನ್ನಡ ಚಿತ್ರರಂಗದ ತಾರೆಗಳು ಧ್ವನಿ ಎತ್ತುತ್ತಿಲ್ಲ ಎಂಬಂತಹ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ನಟ ದರ್ಶನ್ ಖಾರವಾಗಿಯೇ ಮಾತನಾಡಿದ್ದರು. ʻʻಕರ್ನಾಟಕದಲ್ಲಿ ತಮಿಳು ಸಿನಿಮಾವೊಂದು 36 ಕೋಟಿ ರೂ. ಕಲೆಕ್ಷನ್ ಮಾಡಿದೆ. ದರ್ಶನ್, ಶಿವಣ್ಣ, ಸುದೀಪ್, ಯಶ್ ಮಾತ್ರ ನಿಮಗೆ ಕಾಣುತ್ತಾರಾ? ಅವರು ಯಾರೂ ಕಾಣಿಸೋದಿಲ್ಲವೇ?ʼʼ ಎಂದು ಕನ್ನಡ ಕಲಾವಿದರ ಬಗ್ಗೆ ಟೀಕೆ ಮಾಡಿದವರಿಗೆ ದರ್ಶನ್ ತಿರುಗೇಟು ನೀಡಿದ್ದರು.
ದರ್ಶನ್ ವಿಡಿಯೊದಲ್ಲಿ ʻʻನೋಡಿ ಸ್ವಾಮಿ ಮೊನ್ನೆ ಮೊನ್ನೆಯಷ್ಟೇ ಒಂದು ತಮಿಳು ಸಿನಿಮಾ ರಿಲೀಸ್ ಆಯ್ತು. ಒಬ್ಬ ವಿತರಕ 6 ಕೋಟಿಗೆ ಸಿನಿಮಾ ತಗೊಂಡ. 35, 36 ಕೋಟಿ ರೂ. ಮಾಡಿದ. ಆ ಸಿನಿಮಾವನ್ನು ಇಲ್ಲಿ ತಮಿಳಿನವರು ನೋಡಿದ್ರಾ ಸ್ವಾಮಿ? ಎಲ್ಲೋ ಇದ್ದು ಏನೋ ಮಾಡಿದವರಿಗೆ ನೂರಾರು ಕೋಟಿ ಕೊಡ್ತೀರಾ? ಯಾಕೆ ನೀವು ಕನ್ನಡ ಸಿನಿಮಾಗೆ ಕೊಡಲ್ಲ?.” ಎಂದು ಪ್ರಶ್ನೆ ಮಾಡಿದ್ದರು. ನೀವು ಕನ್ನಡ ಸಿನಿಮಾ ನೋಡೋದಿಲ್ಲ, ನಾವೇಕೆ ಬೆಂಬಲ ನೀಡಬೇಕು ಎಂಬರ್ಥದಲ್ಲಿ ಮಾತನಾಡಿದ್ದರು.
South Cinema
Dhruva Sarja: ಸಮಾಜಮುಖಿ ಕಾರ್ಯದಲ್ಲಿ ಕಾರುಣ್ಯ ರಾಮ್: ಅಶ್ವಿನಿ ಪುನೀತ್, ಧ್ರುವ ಸರ್ಜಾ ಸಾಥ್!
ಈ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (ashwini puneeth rajkumar) ಹಾಗೂ ಧ್ರುವ ಸರ್ಜಾ (Dhruva Sarja) ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು.
ಬೆಂಗಳೂರು: ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಕಾರುಣ್ಯ ರಾಮ್ (Karunya Ram) ಸದ್ಯ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕರ್ನಾಟಕ ಸಿಂಡಿಕೇಟ್ ಫೌಂಡೇಶನ್ ಹಾಗೂ ಕಿಮ್ಸ್ ಆಸ್ಪತ್ರೆಯ ಸಹಯೋಗದಲ್ಲಿ ಅಂಗಾಂಗ ದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (ashwini puneeth rajkumar) ಹಾಗೂ ಧ್ರುವ ಸರ್ಜಾ (Dhruva Sarja) ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು.
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ನಟಿ ಕಾರುಣ್ಯ ರಾಮ್, ‘ಅಂಗಾಂಗ ದಾನ ಮಾಡುವುದರಿಂದ ನಾವು ಸತ್ತ ಬಳಿಕವೂ ನಮ್ಮ ಉಪಯೋಗ ಆಗುತ್ತದೆ. ಅಂಗಾಂಗ ದಾನದಿಂದ ಪುಣ್ಯ ಸಿಗುತ್ತದೆ. ಎಲ್ಲರೂ ಅಂಗಾಂಗ ದಾನ ಮಾಡಿ’ ಎಂದು ಮನವಿ ಮಾಡಿದರು.
ಧ್ರುವ ಸರ್ಜಾ ಮಾತನಾಡಿ ʻʻಅನೇಕರಿಗೆ ನಾವು ಯೂಸ್ ಲೆಸ್ ಅಂತ ಹೇಳುತ್ತಿರುತ್ತೇವೆ. ಆದರೆ ಉಪಯೋಗಕ್ಕೆ ಬರದೇ ಇರುವವರಲ್ಲ. ಯೂಸ್ಡ್ ಲೆಸ್ ಅಷ್ಟೇ. ಅಂಗಾಂಗ ದಾನ ಮಾಡಿ ಇನ್ನೊಬ್ಬರಿಗೆ ಉಪಯೋಗ ಆಗುತ್ತದೆ. ನಾವು ಸತ್ತ ಮೇಲೂ ಇನ್ನೊಬ್ಬರಿಗೆ ಉಪಯೋಗ ಆಗುತ್ತದೆ ಎಂದರೆ ಯಾಕೆ ಮಾಡಬಾರದು. ಎಲ್ಲರೂ ದಯವಿಟ್ಟು ಇದಕ್ಕೆ ಕೈ ಜೋಡಿಸಿ. ನಿಮ್ಮ ಪಕ್ಕದವರಿಗೂ ಹೇಳಿ. ಇಂಥ ಶಿಬಿರಗಳನ್ನು ಎಲ್ಲಾ ಕಡೆ ಮಾಡಬೇಕು, ಹೆಚ್ಚು ಹೆಚ್ಚು ಇಂತಹ ಶಿಬಿರಗಳು ಆಗಬೇಕು’ ಎಂದರು.
ಇದನ್ನೂ ಓದಿ: Dhruva Sarja: ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ ಧ್ರುವ ಸರ್ಜಾ, ಕಾರುಣ್ಯ ರಾಮ್!
ಕಾರ್ಯಕ್ರಮದಲ್ಲಿ ಸುಮಾರು 700 ರಿಂದ 1000 ಮಂದಿ ಅಂಗಾಂಗ ದಾನ ಪ್ರತಿಗೆ ಸಹಿ ಮಾಡಿದರು. ಈ ಕಾರ್ಯಕ್ರಮದಲ್ಲಿ ಹೆಲ್ತ್ ಅಂಡ್ ವೆಲ್ತ್ ಜಾಯಿಂಟ್ ಡೈರೆಕ್ಟರ್, ಕಿಮ್ಸ್ ಅಧ್ಯಕ್ಷರು, ಆರ್ಗನ್ ಡೊನೇಷನ್ ಡಿಪಾರ್ಟ್ಮೆಂಟ್ ಭಾಗಿಯಾಗಿತ್ತು.
South Cinema
Film Chamber Karnataka: ನಾಳೆ ಚಿತ್ರಮಂದಿರಗಳು ತೆರೆಯಲ್ಲ; ಬೆಂಗಳೂರು ಬಂದ್‌ಗೆ ಚಿತ್ರೋದ್ಯಮ ಸಾಥ್!
ಕಾವೇರಿ ನದಿ ನೀರು ವಿಚಾರವಾಗಿ ಹೋರಾಟ ಮಾಡುತ್ತಿರುವ ರೈತರ ಪರ ನಿಲ್ಲಲು ಕರ್ನಾಟಕ ಚಲನಚಿತ್ರ ವಾಣಿಜ್ಯ (Film Chamber Karnataka) ಮಂಡಳಿ ನಿರ್ಧರಿಸಿದೆ. ಈಗಾಗಲೇ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.
ಬೆಂಗಳೂರು: ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್ 26ರಂದು (ಮಂಗಳವಾರ) ಕರೆ ನೀಡಲಾಗಿರುವ ಬೆಂಗಳೂರು ಬಂದ್‌ಗೆ (Bangalore bandh on September 26) ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕಾವೇರಿ ನದಿ ನೀರು ವಿಚಾರವಾಗಿ ಹೋರಾಟ ಮಾಡುತ್ತಿರುವ ರೈತರ ಪರ ನಿಲ್ಲಲು ಕರ್ನಾಟಕ ಚಲನಚಿತ್ರ ವಾಣಿಜ್ಯ (Film Chamber Karnataka) ಮಂಡಳಿ ನಿರ್ಧರಿಸಿದೆ. ಈಗಾಗಲೇ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.
ಕನ್ನಡ ಚಿತ್ರರಂಗದ ಪ್ರದರ್ಶಕ ಸಂಘದ ಅಧ್ಯಕ್ಷರಾದ ಕೆ.ವಿ.ಚಂದ್ರಶೇಖರ್ ಈ ಬಗ್ಗೆ ಮಾತನಾಡಿ ʻʻಅಧ್ಯಕ್ಷರು ಪಧಾಧಿಕಾರಿಗಳ ಜತೆ ಕೂತು ಚರ್ಚೆ ಮಾಡಿದ್ದೇವೆ. ನೀರಿನ ವಿಚಾರದಲ್ಲಿ ಕರೆ ನೀಡಿದ ಬಂದ್‌ಗೆ ಚಿತ್ರಮಂದಿರಗಳು ಬೆಂಬಲಕ್ಕೆ ಸದಾ ಸಿದ್ಧ. ನಾಡಿನ ಹಿತಕ್ಕಾಗಿ ಚಿತ್ರೋದ್ಯಮ ಯಾವತ್ತೂ ಇರುತ್ತದೆʼʼಎಂದರು.
ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಮ್. ಸುರೇಶ್ ಮಾತನಾಡಿ ʻʻಕಾವೇರಿ ವಿಚಾರ ಗಂಭೀರವಾದ ವಿಚಾರ. ನಮ್ಮ ಅಂಗ ಸಂಸ್ಥೆಗಳ ಜತೆ ಚರ್ಚೆ ಮಾಡಬೇಕು. ಕಲಾವಿದರನ್ನು ಭೇಟಿ ಮಾಡಬೇಕು. ಸಮಯದ ಅಭಾವ ಇದೆ. ಹೀಗಾಗಿ ರೂಪುರೇಷೆಯನ್ನು ಸಾಯಂಕಾಲ ತಿಳಿಸುತ್ತೇವೆ. ರೈತರ ನೀರಿನ ಸಮಸ್ಯೆ ಆ ಸಮಸ್ಯೆಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಸರ್ಕಾರಕ್ಕೆ ಮನದಟ್ಟು ಆಗಬೇಕಂದರೆ ಸಮಯವಕಾಶ ಬೇಕು. ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಚಿತ್ರಮಂದಿರಗಳನ್ನು ಬಂದ್ ಮಾಡುತ್ತೇವೆ’ ಎಂದರು.
ಬಂದ್ ಬಗ್ಗೆ ಹೋಟೆಲ್ ಅಸೋಸಿಯೇಷನ್ ಯೂಟರ್ನ್#hotelassociation #KarnatakaBandh pic.twitter.com/BoHlh1dD5G
— Vistara News (@VistaraNews) September 25, 2023
ನಾಳೆಯ ಬೆಂಗಳೂರು ಬಂದ್‌ಗೆ ಬೆಂಬಲವನ್ನೂ ಸೂಚಿಸಿರುವ ವಾಣಿಜ್ಯ ಮಂಡಳಿ, ಬೆಂಗಳೂರು ಸಿಟಿಯಲ್ಲಿ ಶೂಟಿಂಗ್ ನಡೆಯುವುದಿಲ್ಲ. ಬೆಂಗಳೂರು ಬಿಟ್ಟು ಹೊರಗೆ ಶೂಟಿಂಗ್ ಮಾಡುತ್ತಿರುವವರಿಗೆ ತೊಂದರೆ ಇಲ್ಲ ಎಂದಿದೆ.
ಹಿರಿಯ ನಟಿ ಲೀಲಾವತಿ ಸಾಥ್
ಈಗಾಗಲೇ ವಿವಿಧ ರೈತ ಹಾಗೂ ಸಂಘಟನೆಗಳು ಹೋರಾಟ ನಡೆಸುತಿದ್ದು, ಕಾವೇರಿ ಹೋರಾಟಕ್ಕೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಹಿರಿಯ ನಟಿ ಎಂ.ಲೀಲಾವತಿ ಕೂಡ ಬೆಂಬಲ ನೀಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಮನೆಯಲ್ಲಿ ಮಾತನಾಡಿದ ಅವರು ʻʻನಾನು ಸಹ ಕಾವೇರಿ ಹೋರಾಟಕ್ಕೆ ಹೊರಡುವೆ. ನಮ್ಮ ಜಲ, ನಮ್ಮ ನೆಲ, ನಮ್ಮ ನುಡಿ, ಎಲ್ಲಾ ಕನ್ನಡಕೊಸ್ಕರ. ಕಾವೇರಿ ನೀರಿಗಾಗಿ ನಾನು ಹೋರಾಟಕ್ಕೆ ಬರುವೆ’ ಎಂದಿದ್ದಾರೆ. ನೆಲಮಂಗಲದ ಮನೆಯಿಂದ ಮಂಡ್ಯ ಪ್ರತಿಭಟನೆ ಸ್ಥಳಕ್ಕೆ ಮಗ ವಿನೋದ್ ರಾಜ್ ಜತೆಗೆ ಹೊರಟಿದ್ದಾರೆ.
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಂಘಟನೆ ಮಂಗಳವಾರ ನಡೆಯಲಿರುವ ಬೆಂಗಳೂರು ಬಂದ್‌ಗೆ ಬೆಂಬಲ ನೀಡಿದೆ. ಮಂಗಳವಾರದಂದು ಕಿರುತೆರೆಗೆ ಸಂಬಂಧಿಸಿದ ಯಾವುದೇ ಚಿತ್ರೀಕರಣ ನಡೆಯುವುದಿಲ್ಲ ಎಂದು ಸಂಘದ ಅಧ್ಯಕ್ಷ ಗಣೇಶ್ ರಾವ್ ಕೇಸರ್ಕರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬೆಂಗಳೂರು ಬದಲು ಕರ್ನಾಟಕ ಬಂದ್‌ಗೆ ಬೆಂಬಲ #olauberassociation #KarnatakaBandh pic.twitter.com/gZ7RVQyyXp
— Vistara News (@VistaraNews) September 25, 2023
ಬಂದ್ ದಿನ ಏನು ಇರಲ್ಲ?
ಆಟೋ, ಕ್ಯಾಬ್, ಗೂಡ್ಸ್ ವಾಹನಗಳು, ಖಾಸಗಿ ಬಸ್‌ಗಳು, ಥಿಯೇಟರ್, ಸೂಪರ್ ಮಾರ್ಕೆಟ್, ಪೆಟ್ರೋಲ್ ಬಂಕ್, ಶಾಲಾ -ಕಾಲೇಜ್‌ಗಳು, ಅಂಗಡಿಗಳು, ಬೀದಿಬದಿ ಅಂಗಡಿಗಳು, ಜ್ಯುವೆಲ್ಲರಿ ಶಾಪ್‌ಗಳು, ಕೈಗಾರಿಕೆಗಳು ಹೋಟೆಲ್‌ಗಳು, ಮಾಲ್‌ಗಳು.
ಎಲ್ಲ ಬಿಎಂಟಿಸಿ ಬಸ್ ಘಟಕಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ ಬಿಎಂಟಿಸಿ ಬಸ್‌ಗಳನ್ನು ಹೊರತರದಿರಲು ನೌಕರರು ನಿರ್ಧರಿಸಿದ್ದಾರೆ. ಖಾಸಗಿ ಶಾಲೆಗಳಿಗೆ ಬಹುತೇಕ ರಜೆ ಘೋಷಣೆಯಾಗಿದ್ದು, ಪರೀಕ್ಷೆಗಳು ನಡೆಯುವ ಕಡೆ ನೌಕರರು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿ ಬಂದ್‌ಗೆ ಬೆಂಬಲ ಸೂಚಿಸಲಿದ್ದಾರೆ.
-
ಕ್ರಿಕೆಟ್23 hours ago
IND vs AUS: ಸರಣಿ ವಶಪಡಿಸಿಕೊಂಡ ಭಾರತ; ದ್ವಿತೀಯ ಪಂದ್ಯದಲ್ಲಿ 99 ರನ್ ಗೆಲುವು
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ವಿದೇಶ8 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ದೇಶ22 hours ago
Viral News: ಎಲ್ಕೆಜಿ ಬಾಲಕನಿಗೆ ಕಾಲು ಮುರಿಯುವ ಹಾಗೆ ಬಡಿದ ಮೇಷ್ಟ್ರು , ಗಾಯಗಳನ್ನು ನೋಡಿ ಬೆಚ್ಚಿದ ಅಮ್ಮ
-
ದೇಶ22 hours ago
India Canada Row : ಖಲಿಸ್ತಾನಿ ಉಗ್ರರ ಕಡೆಗೆ ಮೃದು ಧೋರಣೆ; ಟ್ರುಡೊ ವಿರುದ್ಧ ಆರ್ಯ ಮತ್ತೆ ವಾಗ್ದಾಳಿ
-
ಕರ್ನಾಟಕ6 hours ago
PSI Scam : ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ಅಂಕಣ8 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
-
ಕರ್ನಾಟಕ12 hours ago
BJP-JDS Alliance: ಬಿಜೆಪಿ- ಜೆಡಿಎಸ್ ಮೈತ್ರಿ; ಮುಸ್ಲಿಂ ನಾಯಕರು ಜೆಡಿಎಸ್ಗೆ ಗುಡ್ಬೈ?