Ram Pothineni: ರಾಮ್ ಪೋತಿನೇನಿ ಅಭಿನಯದ ʻಡಬಲ್ ಇಸ್ಮಾರ್ಟ್ʼ ಬಿಡುಗಡೆಗೆ‌ ಮುಹೂರ್ತ ಫಿಕ್ಸ್! - Vistara News

ಟಾಲಿವುಡ್

Ram Pothineni: ರಾಮ್ ಪೋತಿನೇನಿ ಅಭಿನಯದ ʻಡಬಲ್ ಇಸ್ಮಾರ್ಟ್ʼ ಬಿಡುಗಡೆಗೆ‌ ಮುಹೂರ್ತ ಫಿಕ್ಸ್!

Ram Pothineni: ಈ‌ ಮೊದಲ ಬಂದ ಈ ಚಿತ್ರದ ಮೊದಲ ಸರಣಿ ಸಿನಿಮಾ 2019 ರಲ್ಲಿ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಕರ್ಮಷಿಯಲಿ ಸಕ್ಸಸ್ ಆಗಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ಬರ್ತಿದೆ.

VISTARANEWS.COM


on

Double iSmart to release on August 15
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ನಟ ರಾಮ್ ಪೋತಿನೇನಿ (Ram Pothineni) ಕಾಂಬಿನೇಷನ್ ಮೇಲೆ ಸಿನಿಪ್ರಿಯರಿಗೆ ಭಾರಿ ನಿರೀಕ್ಷೆ ಇದೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆಯೇ ‘ಡಬಲ್ ಇಸ್ಮಾರ್ಟ್’ ಚಿತ್ರದ ಟೀಸರ್​ ಮೂಡಿಬಂದಿದೆ. ಇದೀಗ ಈ ಚಿತ್ರದ ಬಿಡುಗಡೆ ದಿನಾಂಕ‌ ನಿಗದಿಯಾಗಿದೆ. ಆಗಸ್ಟ್ 15ಕ್ಕೆ ಡಬಲ್ ಇಸ್ಮಾರ್ಟ್ ಚಿತ್ರ ತೆರೆಗೆ ಬರಲಿದೆ.

ಸೌತ್​ ಸಿನಿಮಾಗಳಲ್ಲಿ ಖಳನಾಗಿ ಅಬ್ಬರಿಸುತ್ತಿರುವ ಸಂಜಯ್ ದತ್ ಅವರು ‘ಡಬಲ್​ ಇಸ್ಮಾರ್ಟ್​’ ಚಿತ್ರದಲ್ಲೂ ವಿಲನ್​ ಆಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ಕಾವ್ಯಾ ಥಾಪರ್ ನಟಿಸಿದ್ದಾರೆ.

ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಡಬಲ್​ ಇಸ್ಮಾರ್ಟ್​’ ಸಿನಿಮಾ ಬಿಡುಗಡೆ ಆಗಲಿದೆ. ಮಣಿ ಶರ್ಮಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಪುರಿ ಕನೆಕ್ಟ್ಸ್​’ ಬ್ಯಾನರ್ ಮೂಲಕ ಪುರಿ ಜಗನ್ನಾಥ್, ಚಾರ್ಮಿ ಕೌರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಈ‌ ಮೊದಲ ಬಂದ ಈ ಚಿತ್ರದ ಮೊದಲ ಸರಣಿ ಸಿನಿಮಾ 2019 ರಲ್ಲಿ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಕರ್ಮಷಿಯಲಿ ಸಕ್ಸಸ್ ಆಗಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ಬರ್ತಿದೆ. ಟಾಲಿವುಡ್‌ನಲ್ಲಿ ಈಗಲೇ ಒಂದು ನಿರೀಕ್ಷೆಯನ್ನು ಕೂಡ ಹುಟ್ಟುಹಾಕಿದೆ ಅಂತ ಹೇಳಬಹುದು.

ಇದನ್ನೂ ಓದಿ: Ram Pothineni: ಡೈನಾಮಿಕ್ ಸ್ಟಾರ್ ರಾಮ್‌ – ಸಂಜಯ್ ದತ್ ಭರ್ಜರಿ ಜುಗಲ್ಬಂದಿ: `ಡಬಲ್ ಇಸ್ಮಾರ್ಟ್‘ ಟೀಸರ್‌ ಔಟ್‌!

ಕಾವ್ಯಾ ಥಾಪರ್ ನಾಯಕಿಯಾಗಿ ನಟಿಸಿದ್ದು, ಸಂಜಯ್ ದತ್ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಮೂಡಿ ಬರುತ್ತಿದೆ. ಮಣಿ ಶರ್ಮಾ ಸಂಗೀತ ಚಿತ್ರಕ್ಕಿದೆ. ಕ್ರೇಜಿ ಪ್ಯಾನ್ ಇಂಡಿಯನ್ ಪ್ರಾಜೆಕ್ಟ್ ಡಬಲ್ ಇಸ್ಮಾರ್ಟ್ ಸಿನಿಮಾವನ್ನು ಪುರಿ ಕನೆಕ್ಟ್ ಬ್ಯಾನರ್ ನಡಿ ಪೂರಿ ಜಗನ್ನಾಥ್, ಚಾರ್ಮಿ ಕೌರ್ ನಿರ್ಮಾಣದಲ್ಲಿ ಚಿತ್ರ ಅದ್ಧೂರಿಯಾಗಿ ಮೂಡಿಬರುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಟಾಲಿವುಡ್

Ram Pothineni: `ಡಬಲ್ ಇಸ್ಮಾರ್ಟ್’ ಸಿನಿಮಾದ ಎರಡನೇ ಹಾಡು ರಿಲೀಸ್!

Ram Pothineni: ಇಸ್ಮಾರ್ಟ್ ಶಂಕರ್ ಸಿನಿಮಾದ ಮುಂದುವರೆದ ಭಾಗವೇ ಈ ಡಬಲ್ ಇಸ್ಮಾರ್ಟ್ ಚಿತ್ರ. ಈ ಮೂಲಕ ಡೈರೆಕ್ಟರ್ ಪೂರಿ ಜಗನ್ನಾಥ್ ಹೊಸ ರೀತಿಯಲ್ಲಿಯೆ ಶಂಕರ್‌ನ ಕಥೆ ಹೇಳಲು ಹೊರಟ್ಟಿದ್ದಾರೆ. 2019ರಲ್ಲಿ ‘ಇಸ್ಮಾರ್ಟ್ ಶಂಕರ್’ ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು.

VISTARANEWS.COM


on

Ram Pothineni double ismart second song out
Koo

ಬೆಂಗಳೂರು: ʻಡಬಲ್ ಇಸ್ಮಾರ್ಟ್ʼ ಸಿನಿಮಾದ ಸ್ಟೆಪ್ಪಮಾರ್ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಚಿತ್ರತಂಡ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ. ʻಮಾರ್ ಮುಂತಾ ಚೋಡ್ ಚಿಂತಾʼ ಎಂಬ ಗಾನಬಜಾನಕ್ಕೆ ನಾಯಕ ಉಸ್ತಾದ್ ರಾಮ್ ಪೋತಿನೇನಿ ಹಾಗೂ ನಾಯಕಿ ಕಾವ್ಯಾ ಥಾಪರ್ (Ram Pothineni) ಸಖತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಕಾಸರ್ಲ ಶ್ಯಾಮ್ ಸಾಹಿತ್ಯದ ದೇಸಿ ನಂಬರ್ ಗೆ ಮಣಿ ಶರ್ಮಾ ಟ್ಯೂನ್ ಹಾಕಿದ್ದು, ರಾಹುಲ್ ಸಿಪ್ಲಿಗುಂಜ್ ಮತ್ತು ಕೀರ್ತನಾ ಶರ್ಮಾ ಧ್ವನಿಯಾಗಿದ್ದಾರೆ. ಮಾರ್ ಮುಂತಾ ಚೋಡ್ ಚಿಂತಾ ಲಿರಿಕಲ್ ವಿಡಿಯೋದ ಜೊತೆಗೆ ಮೇಕಿಂಗ್ ವಿಡಿಯೋ ಕೂಡ ಇರೋದು ವಿಶೇಷವಾಗಿದೆ.

ಇಸ್ಮಾರ್ಟ್ ಶಂಕರ್ ಸಿನಿಮಾದ ಮುಂದುವರೆದ ಭಾಗವೇ ಈ ಡಬಲ್ ಇಸ್ಮಾರ್ಟ್ ಚಿತ್ರ. ಈ ಮೂಲಕ ಡೈರೆಕ್ಟರ್ ಪೂರಿ ಜಗನ್ನಾಥ್ ಹೊಸ ರೀತಿಯಲ್ಲಿಯೆ ಶಂಕರ್‌ನ ಕಥೆ ಹೇಳಲು ಹೊರಟ್ಟಿದ್ದಾರೆ. 2019ರಲ್ಲಿ ‘ಇಸ್ಮಾರ್ಟ್ ಶಂಕರ್’ ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಕರ್ಮಷಿಯಲಿ ಸಕ್ಸಸ್ ಆಗಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ಬರುತ್ತಿದೆ. ಟಾಲಿವುಡ್‌ನಲ್ಲಿ ಈಗಾಗಲೇ ನಿರೀಕ್ಷೆಯನ್ನು ಕೂಡ ಹುಟ್ಟುಹಾಕಿದೆ.

ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಡಬಲ್ ಇಸ್ಮಾರ್ಟ್’ ಸಿನಿಮಾ ಬಿಡುಗಡೆ ಆಗಲಿದೆ. ಮಣಿ ಶರ್ಮಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಪುರಿ ಕನೆಕ್ಟ್ಸ್’ ಬ್ಯಾನರ್ ಮೂಲಕ ಪುರಿ ಜಗನ್ನಾಥ್, ಚಾರ್ಮಿ ಕೌರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಾಮ್‌ ಪೊತೀನೇನಿಗೆ ನಟಿ ಕಾವ್ಯಾ ಥಾಪರ್ ಜೋಡಿ ಆಗಿದ್ದಾದೆ. ಸಂಜಯ್ ದತ್ ಈ ಸಿನಿಮಾದಲ್ಲಿ ಖಡಕ್ ವಿಲನ್ ಆಗಿಯೇ ಕಾಣಿಸುತ್ತಿದ್ದಾರೆ. ಇವರ ಈ ಸಿನಿಮಾ ಬಗ್ಗೆ ಕೂಡ ನಿರೀಕ್ಷೆ ಇದ್ದೇ ಇದೆ.

ಇದನ್ನೂ ಓದಿ: The Birthday Boy: ಹೆಸರು ಬದಲಾಯಿಸಿ ಕದ್ದು ಮುಚ್ಚಿ ಸಿನಿಮಾ ಮಾಡಿ, ಮಾಸ್ಕ್‌ ಧರಿಸಿ ಬಂದ ನಿರ್ದೇಶಕ! ಏನು ಕಥೆ?

ಡಬಲ್ ಇಸ್ಮಾರ್ಟ್ ಸಿನಿಮಾದ ಶೂಟಿಂಗ್ ಇನ್ನು ನಡೆಯುತ್ತಿದೆ. ಭರದಿಂದಲೇ ಚಿತ್ರೀಕರಣ ನಡೆಯುತ್ತಿರೋ ಈ ಸಿನಿಮಾ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ಆಗಸ್ಟ್-15 ರಂದು ಚಿತ್ರ ಎಲ್ಲೆಡೆ ರಿಲೀಸ್ ಮಾಡಲಾಗುತ್ತಿದೆ. ವಿಶ್ವದಾದ್ಯಂತ ಬರ್ತಿರೋ ಈ ಚಿತ್ರದ ಪ್ರಚಾರ ಕೂಡ ಈಗಾಗಲೇ ಶುರು ಆಗಿದೆ.

Continue Reading

ಟಾಲಿವುಡ್

Tharun Sudhir: ದರ್ಶನ್‌ಗೆ ಮದುವೆ ಇನ್ವಿಟೇಶನ್‌ ಕಾರ್ಡ್‌ ಕೊಟ್ಟು, ಆಶೀರ್ವಾದ ಪಡೆಯಲು ಜೈಲಿಗೆ ಭೇಟಿ ಕೊಡಲಿದ್ದಾರಂತೆ ತರುಣ್ ಸುಧೀರ್

Tharun Sudhir: ದರ್ಶನ್ ಜೈಲು ಪಾಲಾದ ನಂತರ ಮೊದಲ ಬಾರಿಗೆ ತರುಣ್ ಸುಧೀರ್ ಭೇಟಿ ಮಾಡುತ್ತಿದ್ದಾರೆ. ತರುಣ್ ಸುಧೀರ್ ಲವ್ ಸ್ಟೋರಿ ಟ್ರ್ಯಾಕ್‌ಗೆ ತಂದಿದ್ದೆ ದರ್ಶನ್. ಸದ್ಯ ಭೇಟಿಯ ವೇಳೆ ಮದುವೆ ವಿಚಾರ ಬಹಿರಂಗ ಪಡಿಸಲಿದ್ದಾರಂತೆ ತರುಣ್‌. ತರುಣ್ ಹಾಗೂ ನಟಿ ಸೋನಲ್ ಮದುವೆಗೆ ದರ್ಶನ್ ಮುದ್ರೆ ಒತ್ತಿದ್ದರು.

VISTARANEWS.COM


on

Tharun Sudhir gives Darshan a wedding invitation card and visits Jail
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ (Actor Darshan) ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ (Tharun Sudhir) ಹಾಗೂ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ನೀಡಿದೆ. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶ ವಿಶ್ವನಾಥ‌ ಸಿ ಗೌಡರ್ ಆದೇಶವಾಗಿದೆ. ಇದೀಗ ಕೊಲೆ ಪ್ರಕರಣದಲ್ಲಿ ಜೈಲನಲ್ಲಿರುವ ದರ್ಶನ್ ಅವರನ್ನು ʻಕಾಟೇರʼ ನಿರ್ದೇಶಕ ತರುಣ್ ಸುಧೀರ್ ಭೇಟಿ ಮಾಡಲಿದ್ದಾರೆ.

ದರ್ಶನ್ ಜೈಲು ಪಾಲಾದ ನಂತರ ಮೊದಲ ಬಾರಿಗೆ ತರುಣ್ ಸುಧೀರ್ ಭೇಟಿ ಮಾಡುತ್ತಿದ್ದಾರೆ. ತರುಣ್ ಸುಧೀರ್ ಲವ್ ಸ್ಟೋರಿ ಟ್ರ್ಯಾಕ್‌ಗೆ ತಂದಿದ್ದೆ ದರ್ಶನ್. ಸದ್ಯ ಭೇಟಿಯ ವೇಳೆ ಮದುವೆ ವಿಚಾರ ಬಹಿರಂಗ ಪಡಿಸಲಿದ್ದಾರಂತೆ ತರುಣ್‌. ತರುಣ್ ಹಾಗೂ ನಟಿ ಸೋನಲ್ ಮದುವೆಗೆ ದರ್ಶನ್ ಮುದ್ರೆ ಒತ್ತಿದ್ದರು. ದರ್ಶನ್ ಇಲ್ಲದೆ ಮದುವೆಯನ್ನು ಮುಂದಕ್ಕೆ ಹಾಕಲು ತರುಣ್ ಸಜ್ಜಾಗಿದ್ದರು ಎನ್ನಲಾಗಿತ್ತು. ಹಿರಿಯರ ಸಲಹೆ ನಂತರ ತರುಣ್‌ ಮುದುವೆಗೆ ಮುಂದಾಗಿದ್ದಾರೆ. ಅಗಸ್ಟ್ 10,11ಕ್ಕೆ ತರುಣ್ ,ಸೋನಾಲ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ.

ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನ ದರ್ಶನ್‌ಗೆ ಕೊಡಲು ತರುಣ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇಂದು 11 ಗಂಟೆ ವೇಳೆಗೆ ಪರಪ್ಪನ ಅಗ್ರಹಾರದ ಜೈಲಿಗೆ ಭೇಟಿ ನೀಡಲಿದ್ದಾರಂತೆ ತರುಣ್‌. ಜೈಲಿನಲ್ಲೆ ದರ್ಶನ್ ಗೆ ಮದುವೆ ಇನ್ವಿಟೇಶನ್‌ ಕೊಟ್ಟು, ಆಶೀರ್ವಾದ ಪಡೆಯಲಿದ್ದಾರಂತೆ. ಸೋನಲ್‌ ಕೂಡ ಬರುವರಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Tharun Sudhir: ಮದುವೆ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ತರುಣ್ ಸುಧೀರ್; ಹುಡುಗಿ ಹೇಗಿರಬೇಕು ಅಂದ್ರೆ….

ನಟಿ ಸೋನಾಲ್ ಮಂಥೆರೊ (sonal monteiro) ಹಾಗೂ ನಿರ್ದೇಶಕ ತರುಣ್ ಸುಧೀರ್ (Tharun Sudhir) ಮದುವೆಯಾಗಲಿದ್ದಾರೆ ಎಂದು ಬಹಳ ದಿನಗಳಿಂದ ಸುದ್ದಿ ಆಗುತ್ತಲೇ ಇದೆ. ಈ ಮುಂಚೆ ತರುಣ್‌ ಸುಧೀರ್‌ ಅವರ ತಾಯಿ ಮದುವೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದಿದ್ದಾರೆ. ಈಗ ಆಷಾಢ ಬಂತು. ಮಾತಾಡಲು ಆಗಲ್ಲ. ಆಷಾಢ ಮುಗಿದ್ಮೇಲೆ ಮಾತುಕತೆ ಮಾಡಬೇಕು ಅಂದಿದ್ದರು. 

ರಾಬರ್ಟ್’ ಚಿತ್ರದಲ್ಲಿ ಸೋನಲ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಶೂಟಿಂಗ್ ಸಮಯದಲ್ಲೇ ತರುಣ್- ಸೋನಲ್ ನಡುವೆ ಪ್ರೀತಿ ಹುಟ್ಟಿತ್ತು ಎಂದು ಹೇಳಲಾಗುತ್ತಿದೆ. ಇನ್ನು ದರ್ಶನ್‌ ಕೂಡ ಆಗಾಗ ತರುಣ್‌ಗೆ ಮದುವೆ ಮಾಡಿಸಬೇಕು ಎನ್ನುತ್ತಿದ್ದರಂತೆ. ಹಾಗಾಗಿ ಶೂಟಿಂಗ್‌ ಸೆಟ್‌ನಲ್ಲಿ ತರುಣ್- ಸೋನಲ್ ಇಬ್ಬರನ್ನು ತಮಾಷೆಯಾಗಿ ರೇಗಿಸುತ್ತಿದ್ದರು, ಇದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿರಬಹುದು ಎನ್ನಲಾಗಿದೆ.

ಚೌಕ’ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ತರುಣ್ ಮುಂದೆ ಒಂದರ ಹಿಂದೆಯಂತೆ ಎರಡು ಹಿಟ್ ಸಿನಿಮಾಗಳನ್ನು ಕೊಟ್ಟರು. ಇದೀಗ ತರುಣ್ 4ನೇ ಸಿನಿಮಾ ತಯಾರಿಯಲ್ಲಿದ್ದಾರೆ. 

Continue Reading

ಟಾಲಿವುಡ್

The Birthday Boy: ಹೆಸರು ಬದಲಾಯಿಸಿ ಕದ್ದು ಮುಚ್ಚಿ ಸಿನಿಮಾ ಮಾಡಿ, ಮಾಸ್ಕ್‌ ಧರಿಸಿ ಬಂದ ನಿರ್ದೇಶಕ! ಏನು ಕಥೆ?

The Birthday Boy: ವಿಸ್ಕಿ ನಿರ್ದೇಶನದ ಸಿನಿಮಾಗಳನ್ನು ಅವರ ಮನೆಯವರು ಇಷ್ಟಪಡುವುದಿಲ್ಲ. ಹೀಗಾಗಿ ಅವರಿಗೆ ಗೊತ್ತಾಗದಂತೆ ವೇಷ ಬದಲಿಸಿ ತಿರುಗಾಡುತ್ತಿದ್ದಾರೆ. ನನಗೆ ಪ್ರಚಾರದ ಅವಶ್ಯಕತೆಯಿಲ್ಲ. ನಾನು ಬರೀ ಸಿನಿಮಾ ನಿರ್ದೇಶನ ಮಾಡಿ ಹೋಗೊಕೆ ಬಂದೆ ಅಷ್ಟೆ. ನನಗೆ ಕ್ಯಾಮೆರಾ ಮುಂದೆ ಬಂದು ಮಾತನಾಡುವುದಕ್ಕೆ ಇಷ್ಟವಿಲ್ಲ.

VISTARANEWS.COM


on

The Birthday Boy Director Whisky Real Life Story
Koo

ಬೆಂಗಳೂರು: ಸಾಮಾನ್ಯವಾಗಿ ಅನೇಕರು ಸಿನಿಮಾ ನಿರ್ದೇಶನದ ಮೂಲಕವೇ ಜನಪ್ರಿಯರಾಗಬೇಕೆಂದು ಯೋಚಿಸುತ್ತಾರೆ. ಆದರೆ ತೆಲುಗು (The Birthday Boy) ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ನಿರ್ದೇಶಕರೊಬ್ಬರು ತಮ್ಮ ಹೆಸರನ್ನು “ವಿಸ್ಕಿ’ ಎಂದು ಬದಲಾಯಿಸಿಕೊಂಡು ಸಿನಿಮಾ ನಿರ್ದೇಶಿಸಿದ್ದಾರೆ. ಪ್ರತಿ ಸಿನಿಮಾದ ಪ್ರಚಾರ ವೇಳೆ ಮುಖ ಕಾಣದಂತೆ ಮಾಸ್ಕ್‌ ಧರಿಸುತ್ತಾರೆ. ನಿರ್ದೇಶಕ ಈ ರೀತಿ ಇರೋದ್ಯಾಕೆ ಎಂದು ತಿಳಿಯಲು ಮುಂದೆ ಓದಿ.

ವಿಸ್ಕಿ ನಿರ್ದೇಶನದ ಸಿನಿಮಾಗಳನ್ನು ಅವರ ಮನೆಯವರು ಇಷ್ಟಪಡುವುದಿಲ್ಲ. ಹೀಗಾಗಿ ಅವರಿಗೆ ಗೊತ್ತಾಗದಂತೆ ವೇಷ ಬದಲಿಸಿ ತಿರುಗಾಡುತ್ತಿದ್ದಾರೆ. ನನಗೆ ಪ್ರಚಾರದ ಅವಶ್ಯಕತೆಯಿಲ್ಲ. ನಾನು ಬರೀ ಸಿನಿಮಾ ನಿರ್ದೇಶನ ಮಾಡಿ ಹೋಗೊಕೆ ಬಂದೆ ಅಷ್ಟೆ. ನನಗೆ ಕ್ಯಾಮೆರಾ ಮುಂದೆ ಬಂದು ಮಾತನಾಡುವುದಕ್ಕೆ ಇಷ್ಟವಿಲ್ಲ. ನಿಜ ಹೇಳಬೇಕು ಅಂದರೆ ನಾನು ಚಿತ್ರರಂಗಕ್ಕೆ ಬಂದಿರುವುದು ನಮ್ಮ ಮನೆಯವರಿಗೆ ಗೊತ್ತಿಲ್ಲ. ಕದ್ದು ಮುಚ್ಚಿ ಬಂದಿದ್ದೀನಿ. ಆ ವಿಚಾರ ಅವರಿಗೆ ಗೊತ್ತಾದರೆ ನೋವಾಗುತ್ತದೆ ಎನ್ನುತ್ತಿದ್ದಾರೆ. ಮಾಸ್ಕ್ ಹಾಕಿಕೊಂಡು ಸಿನಿಮಾ ಸುದ್ದಿಗೋಷ್ಠಿ, ಸಂದರ್ಶನದಲ್ಲಿ ಭಾಗಿ ಆಗುತ್ತಿದ್ದಾರೆ.

ಇದೀಗ ರ‌ವಿಕೃಷ್ಣ, ಸ‌ಮೀರ್ ಮ‌ಲ್ಲಾ ಮುಖ್ಯಭೂಮಿಕೆಯಲ್ಲಿರುವ ‘ದಿ ಬರ್ತ್‌ಡೇ ಬಾಯ್‌’ ತೆಲುಗು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಕ್ಕೆ ವಿಸ್ಕಿ ಎಂಬುವವರು ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ಇದು ಅವರ ನಿಜವಾದ ಹೆಸರಲ್ಲ, ಚಿತ್ರಕ್ಕಾಗಿ ಬದಲಿಸಿಕೊಂಡಿದ್ದಾರೆ.

ಈ ಚಿತ್ರ ಇದೇ ತಿಂಗಳ 19 ರಂದು ಬಿಡುಗಡೆಯಾಗಲಿದೆ. ಭರತ್ ಇಮ್ಮಲರಾಜು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರವಿಕೃಷ್ಣ ಮತ್ತು ರಾಜೀವ್ ಕಣಕಾಲ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. “ವಿಸ್ಕೀ” (ನಿರ್ದೇಶಕ ವಿಸ್ಕಿ) ಎಂಬ ಹೆಸರನ್ನು ಇಟ್ಟುಕೊಳ್ಳಲು ಕಾರಣವೆಂದರೆ ಅವರು ಒಂದು ನಾಯಿಮರಿಯನ್ನು ಸಾಕಿದ್ದರು. ನಾಯಿ ಕರೋನಾ ಸಮಯದಲ್ಲಿ ಸತ್ತು ಹೋಯ್ತು. ಅವರು ಅದಕ್ಕೆ ವಿಸ್ಕಿ ಎಂದು ಹೆಸರಿಟ್ಟಿದ್ದರು. ಹೀಗಾಗಿ ತಮ್ಮನ್ನು ಈ ರೀತಿ ಪರಿಚಯಿಸಿಕೊಂಡಿದ್ದಾರೆ.

ಇದನ್ನೂ ಓದಿ: Kannada New Movie: ಹೊಸಬರ ತಂಡ ಸಿದ್ದಪಡಿಸಿರುವ ಹೊಸತನದ ಸಿನಿಮಾ; ಲೈಫ್ ಆಫ್ ಮೃದುಲ ಹಾಡು ಬಿಡುಗಡೆ!

ಐವರು ಅನಿವಾಸಿ ಭಾರತೀಯರ ಬದುಕಿನ ಮೂಲ ಕಥೆಗೆ ಸಿನಿಮಾ ಅಂಶಗಳನ್ನು ಸೇರಿಸಿ ಸಿನಿಮಾ ಮಾಡಲಾಗಿದೆ. ನನ್ನ ಎರಡು ಸಿನಿಮಾಗಳು ಫ್ಲಾಪ್ ಆದರೆ ಚಿತ್ರರಂಗ ಬಿಟ್ಟುಬಿಡುತ್ತೇನೆ ಎಂದು ನಿರ್ದೇಶಕ ವಿಸ್ಕಿ ಹೇಳಿದ್ದಾರೆ. ಸದ್ಯ ಮಾಸ್ಕ್ ಹಾಕಿಕೊಂಡು ಆತ ಸಿನಿಮಾ ಪ್ರಚಾರ ಮಾಡುತ್ತಿರುವುದು ವೈರಲ್ ಆಗುತ್ತಿದೆ.


Continue Reading

ಟಾಲಿವುಡ್

Sudha Murty: ಅಂಬಾನಿ ಮದುವೆಗೆ ಮಂಗಳ ಸೂತ್ರ ಮಾತ್ರವೇ ಧರಿಸಿ ಬಂದ ಸುಧಾ ಮೂರ್ತಿ; ಶೋ-ಆಫ್ ಇಲ್ಲ ಅಂದ್ರು ನೆಟ್ಟಿಗರು!

Sudha Murty: ಸುಧಾ ಮೂರ್ತಿ ಅವರು ವಿವಾಹ ಸಮಾರಂಭದಲ್ಲಿ ನೇರಳೆ ಬಣ್ಣದ ಸೀರೆಯನ್ನು ಧರಿಸಿ, ಕೇವಲ ಮಂಗಳಸೂತ್ರ ಮತ್ತು ಸ್ಮಾರ್ಟ್ ವಾಚ್‌ನೊಂದಿಗೆ ಸಿಂಪಲ್‌ ಆಗಿ ಬಂದಿದ್ದರು. ಅವರ ಸರಳತೆಗೆ ಹೆಚ್ಚು ಪ್ರಶಂಸೆಯನ್ನು ಗಳಿಸಿದರು. ನಮ್ರತಾ ಶಿರೋಡ್ಕರ್ ಅವರು ಸುಧಾ ಮೂರ್ತಿ ಅವರೊಂದಿಗಿನ ಚಿತ್ರವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

Sudha Murty praised for simplicity at Ambani wedding
Koo

ಮುಂಬೈ: ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ಅದ್ದೂರಿ ವಿವಾಹದಲ್ಲಿ ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಮತ್ತು ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಪಾಲ್ಗೊಂಡಿದ್ದರು.   (Sudha Murty) ಅವರ ಜತೆ ಮಹೇಶ್‌ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಸುಧಾ ಮೂರ್ತಿ ಜೊತೆಗಿನ ಫೋಟೊ ಶೇರ್ ಮಾಡಿ, ಈ ಕ್ಷಣವನ್ನು ಎಂದಿಗೂ ಮರೆಯುವುದಿಲ್ಲ ಎಂದು ನಮ್ರತಾ ಶಿರೋಡ್ಕರ್ ಬರೆದುಕೊಂಡಿದ್ದಾರೆ. ಜತೆಗೆ ಸುಧಾ ಮೂರ್ತಿ ಅವರ ಸರಳತೆಗೆ ನೆಟ್ಟಿಗರು ಹಾಡಿ ಹೊಗಳಿದ್ದಾರೆ. ಮಾತ್ರವಲ್ಲ ಕೊರಳಲ್ಲಿ ಮಂಗಳ ಸೂತ್ರ ಮಾತ್ರ ಧರಿಸಿ ಸಿಂಪಲ್‌ ಆಗಿ ಕಂಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಸುಧಾ ಮೂರ್ತಿ ಅವರು ವಿವಾಹ ಸಮಾರಂಭದಲ್ಲಿ ನೇರಳೆ ಬಣ್ಣದ ಸೀರೆಯನ್ನು ಧರಿಸಿ, ಕೇವಲ ಮಂಗಳಸೂತ್ರ ಮತ್ತು ಸ್ಮಾರ್ಟ್ ವಾಚ್‌ನೊಂದಿಗೆ ಸಿಂಪಲ್‌ ಆಗಿ ಬಂದಿದ್ದರು. ಅವರ ಸರಳತೆಗೆ ಹೆಚ್ಚು ಪ್ರಶಂಸೆಯನ್ನು ಗಳಿಸಿದರು. ನಮ್ರತಾ ಶಿರೋಡ್ಕರ್ ಅವರು ಸುಧಾ ಮೂರ್ತಿ ಅವರೊಂದಿಗಿನ ಚಿತ್ರವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಈ ಬುದ್ಧಿವಂತ ಮಹಿಳೆಯ ಬಗ್ಗೆ ತುಂಬಾ ಕೇಳಿದ್ದೆ, ಅವರನ್ನು ಭೇಟಿಯಾದ ನಂತರ ನನ್ನ ನಂಬಿಕೆಯು ನಿಜವಾಯಿತು. ರೋಮಾಂಚಕ, ಜೀವನದಲ್ಲಿ ನೀಡಲು ತುಂಬಾ ಪ್ರೀತಿಯಿದೆ ಎನಿಸಿತು ಎಂದು ಮಹೇಶ್ ಬಾಬು ಪತ್ನಿ ನಮ್ರತಾ ಬಣ್ಣಿಸಿದ್ದಾರೆ.

ಇದನ್ನೂ ಓದಿ: Sudha Murty: ಸುಧಾ ಮೂರ್ತಿ 30 ವರ್ಷಗಳಿಂದ ಒಂದೇ ಒಂದು ಸೀರೆ ಖರೀದಿಸಿಲ್ಲ; ಇದಕ್ಕೆ ಕಾರಣ ಕಾಶಿಯಂತೆ!

ಇನ್ನು ಈ ಫೋಟೊ ವೈರಲ್‌ ಆಗುತ್ತಿದ್ದಂತೆ ಸುಧಾ ಮೂರ್ತಿ ಅವರನ್ನು ನೆಟ್ಟಿಗರು ಹೊಗಳಿದ್ದಾರೆ. ʻʻಬಿಲಿಯನೇರ್ ಮಹಿಳೆ ಕೇವಲ ಮಂಗಳಸೂತ್ರದೊಂದಿಗೆ ಹಾಜರಾಗುವುದನ್ನು ನೋಡಲು ಖುಷಿ ಆಗುತ್ತೆʼʼಎಂದು ಒಬ್ಬರು ಕಮೆಂಟ್‌ ಮಾಡಿದರೆ, ʻಸರಳ ಮತ್ತು ವಿನಮ್ರʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ʻಸ್ಫೂರ್ತಿದಾಯಕ ಮಹಿಳೆ. ಶೋ-ಆಫ್ ಇಲ್ಲʼʼಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

ತಮ್ಮ ಸರಳತೆಯಿಂದಲೇ ಸುದ್ದಿಯಲ್ಲಿರುವ ರಾಜ್ಯಸಭೆಯ ನೂತನ (Rajya Sabha) ಸದಸ್ಯೆ (MP), ಲೇಖಕಿ, ಇನ್ಫೋಸಿಸ್‌ನ ಸಂಸ್ಥಾಪಕ (Infosys chairman) ನಾರಾಯಣ ಮೂರ್ತಿ (Narayana Murthy) ಅವರ ಪತ್ನಿ ಸುಧಾ ಮೂರ್ತಿ (Sudha Murty) ಅವರು ಕಳೆದ 30 ವರ್ಷಗಳಿಂದ ಒಂದೇ ಒಂದು ಸೀರೆಯನ್ನೂ ಖರೀದಿ ಮಾಡಿಲ್ಲವಂತೆ! ಇತ್ತೀಚಿಗೆ ಅವರು ನೀಡಿರುವ ಸಂದರ್ಶನವೊಂದರಲ್ಲಿ ಈ ವಿಚಾರ ಬಹಿರಂಗಪಡಿಸಿದ್ದರು.

ಇದಕ್ಕೆ ಮುಖ್ಯ ಕಾರಣ ಕಾಶಿಗೆ ಪ್ರವಾಸ ಮಾಡಿರುವುದು ಎಂಬುದಾಗಿ ಅವರು ತಿಳಿಸಿದ್ದರು. ಅಪಾರ ಸಂಪತ್ತು ಇದ್ದರೂ ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರು ತಮ್ಮ ಸರಳವಾದ ಉಡುಗೆ ತೊಡುಗೆಗಳಿಂದ, ಸಾಮಾನ್ಯ ಜೀವನ ಶೈಲಿಯಿಂದ ಎಲ್ಲರಿಗೂ ಸ್ಫೂರ್ತಿಯಾಗಿದ್ದರು ದಿ ವಾಯ್ಸ್ ಆಫ್ ಫ್ಯಾಶನ್‌ಗೆ ನೀಡಿದ ಸಂದರ್ಶನದಲ್ಲಿ ಸುಧಾ ಮೂರ್ತಿ ಅವರು ಈ ವಿಚಾರವನ್ನು ಹೀಗೆ ಹಂಚಿಕೊಂಡಿದ್ದರು

Continue Reading
Advertisement
Cargo container ship
ದೇಶ54 mins ago

Cargo container ship: ಕಾರ್ಗೋ ಶಿಪ್‌ನಲ್ಲಿ ಭಾರೀ ಅಗ್ನಿ ಅವಘಡ; ಸುಟ್ಟು ಕರಕಲಾದ ಸರಕುಗಳು-ವಿಡಿಯೋ ಇದೆ

Reliance Industries Announces First Quarter Results 17448 crore rs profit declaration
ವಾಣಿಜ್ಯ58 mins ago

Reliance Industries: ರಿಲಯನ್ಸ್ ಇಂಡಸ್ಟ್ರೀಸ್‌ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟ; 17,448 ಕೋಟಿ ರೂ. ಲಾಭ

Ben Stokes
ಕ್ರೀಡೆ2 hours ago

Ben Stokes : ದೊಡ್ಡ ಮೊತ್ತ ಪಡೆದು ಮುಂಬೈ ತಂಡ ಸೇರಲಿದ್ದಾರೆ ಬೆನ್ ಸ್ಟೋಕ್ಸ್​​

Sexual harassment
ದೇಶ2 hours ago

Sexual Harassment: ಪೋರ್ನ್‌ ವಿಡಿಯೋ ತೋರಿಸಿ ಕಿರುಕುಳ; ಜಿಂದಾಲ್‌ ಕಂಪನಿಯ ಹಿರಿಯ ಅಧಿಕಾರಿ ವಿರುದ್ಧ ಮಹಿಳೆ ಆರೋಪ

Vastu Tips
ಧಾರ್ಮಿಕ3 hours ago

Vastu Tips: ಮನೆಯಲ್ಲಿ ಸಂಪತ್ತು ಸದಾ ತುಂಬಿರಬೇಕೆ? ಈ ನಿಯಮ ಪಾಲಿಸಿ

Women's Asia Cup 2024
ಪ್ರಮುಖ ಸುದ್ದಿ3 hours ago

Women’s Asia Cup 2024 : ಪಾಕಿಸ್ತಾನ ವಿರುದ್ಧ ಭರ್ಜರಿ 7 ವಿಕೆಟ್​ ವಿಜಯ ಸಾಧಿಸಿದ ಭಾರತದ ಮಹಿಳೆಯರು

GT World Mall
ಕರ್ನಾಟಕ3 hours ago

GT World Mall: ರೈತ ಫಕೀರಪ್ಪರನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ ಜಿ.ಟಿ.ಮಾಲ್‌ ಮಾಲೀಕ

Viral Video
Latest3 hours ago

Viral Video: ಮಗಳೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗುಪ್ತಾಂಗ ತೋರಿಸಿದ ವಿಕೃತ ಕಾಮಿ!

Sadageri village free from gas leakage risk says DC Lakshmipriya
ಕರ್ನಾಟಕ3 hours ago

Uttara Kannada News: ಭೂಕುಸಿತದಿಂದ ಕೊಚ್ಚಿ ಹೋದ ಟ್ಯಾಂಕರ್‌; ಗ್ರಾಮಸ್ಥರೀಗ ಗ್ಯಾಸ್ ಸ್ಫೋಟ ಅಪಾಯದಿಂದ ಪಾರು

Reliance Jio first quarter profit at Rs 5445 crore
ದೇಶ3 hours ago

Reliance Jio: ರಿಲಯನ್ಸ್ ಜಿಯೋಗೆ ಮೂರೇ ತಿಂಗಳಲ್ಲಿ ಎಷ್ಟು ಲಾಭ ನೋಡಿ; 5,445 ಕೋಟಿ ರೂ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ11 hours ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ12 hours ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ1 day ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ1 day ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ3 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ4 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ5 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ5 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

ಟ್ರೆಂಡಿಂಗ್‌