Annayya Serial: 'ಅಣ್ಣಯ್ಯ' ಧಾರಾವಾಹಿಗೆ ರಿಷಬ್ ಶೆಟ್ಟಿ ಸಾಥ್‌; ಕಾರಣವೇನು? - Vistara News

ಕಿರುತೆರೆ

Annayya Serial: ‘ಅಣ್ಣಯ್ಯ’ ಧಾರಾವಾಹಿಗೆ ರಿಷಬ್ ಶೆಟ್ಟಿ ಸಾಥ್‌; ಕಾರಣವೇನು?

Annayya Serial: ಜೀ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಆಗಲಿದ್ದು, ಕೆಲವು ದಿನಗಳಿಂದ ಭರ್ಜರಿ ಪ್ರಚಾರ ಆರಂಭಿಸಿತ್ತು. ‘ಗಟ್ಟಿಮೇಳ’ ಧಾರಾವಾಹಿಯ ನಾಯಕಿ ನಿಶಾ ರವಿಕೃಷ್ಣನ್ ಮತ್ತೆ ‘ಅಣ್ಣಯ್ಯ’ ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.

VISTARANEWS.COM


on

Annayya Serial rishab shetty support
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇತ್ತೀಚೆಗಷ್ಟೇ ‘ಸತ್ಯ’ ಧಾರಾವಾಹಿ (Annayya Serial) ಅಂತ್ಯ ಕಂಡಿತ್ತು. ಈ ಬೆನ್ನಲ್ಲೇ ಮತ್ತೊಂದು ಹೊಸ ಧಾರಾವಾಹಿ ಪ್ರಸಾರಕ್ಕೆ ರೆಡಿಯಾಗಿ ನಿಂತಿದೆ ಅದುವೇ ‘ಅಣ್ಣಯ್ಯ’. ಜೀ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಆಗಲಿದ್ದು, ಕೆಲವು ದಿನಗಳಿಂದ ಭರ್ಜರಿ ಪ್ರಚಾರ ಆರಂಭಿಸಿತ್ತು. ‘ಗಟ್ಟಿಮೇಳ’ ಧಾರಾವಾಹಿಯ ನಾಯಕಿ ನಿಶಾ ರವಿಕೃಷ್ಣನ್ ಮತ್ತೆ ‘ಅಣ್ಣಯ್ಯ’ ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಹಾಗೇ ನಾಗೇಂದ್ರ ಶಾ, ವಿಕಾಶ್ ಉತ್ತಯ್ಯ ಸೇರಿದಂತೆ ಹಲವು ಮಂದಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಈ ಧಾರಾವಾಹಿಗೆ ರಿಷಬ್ ಶೆಟ್ಟಿ ಬೆಂಬಲ ಸೂಚಿಸಿದ್ದಾರೆ.

ʻಅಣ್ಣಯ್ಯ’ ಧಾರಾವಾಹಿಯನ್ನು ರಿಷಬ್ ಗೆಳೆಯ ಪ್ರಮೋದ್ ಶೆಟ್ಟಿ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷ ಪೋಸ್ಟ್ ಕೂಡ ಹಾಕಿದ್ದಾರೆ. ಅವರು ಧಾರಾವಾಹಿ ನೋಡುವಂತೆ ಕೋರಿದ್ದಾರೆ.

‘ನಾನು ನಿಮಗೆ ಒಂದು ಕಥೆ ಹೇಳೋಣ ಎಂದು ಬಂದೆ. ನಮ್ಮ ಶಿವಣ್ಣಂದು. ಕಾಡು ಬೆಟ್ಟದ ಶಿವಣ್ಣ (ಕಾಂತಾರ ಕಥಾ ನಾಯಕನ ಪಾತ್ರ) ಅಲ್ಲ. ಮಾರಿಗುಡಿ ಶಿವಣ್ಣಂದು. ಇವನು ಹ್ಯಾಟ್ರಿಕ್ ಹೀರೋ ಶಿವಣ್ಣನ ರೀತಿಯೇ. ತಂಗಿ ಅಂದ್ರೆ ಪ್ರೀತಿ. ನಾಲ್ಕು ತಂಗಿಯರ ಬದುಕು ಚಂದ ಆಗಬೇಕು ಅನ್ನೋದೆ ಅವನ ದೊಡ್ಡ ಕನಸು. ಶಿವಣ್ಣನ ಕಥೆ ಇಷ್ಟೇ ಅಲ್ಲ, ಭಾರಿ ಉಂಟು. ನೋಡಿ ಮರ್ರೆ’ ಎಂದು ರಿಷಬ್ ಶೆಟ್ಟಿ ಕೋರಿದ್ದಾರೆ.

ಇದನ್ನೂ ಓದಿ: Nanu Mattu Gunda-2: ಬರ್ತಿದೆ ʻನಾನು ಮತ್ತು ಗುಂಡ-2ʼ ಸಿನಿಮಾ; ಡಬ್ಬಿಂಗ್‌ಗೆ ಇಳಿದ ಸಿಂಬ!

ನಾಲ್ಕು ಜನ ತಂಗಿಯರಿಗೆ ತಾಯಿಯ ಮಮತೆ ತೋರುತ್ತಾನೆ. ತಂಗಿಯಂದಿರ ಓದು- ಮದುವೆಯ ಕನಸು ಕಾಣುತ್ತಾನೆ.’ಪಾರು’ ಧಾರಾವಾಹಿಯ ಹನುಮಂತು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಾಗೇಂದ್ರ ಶಾ ಇಲ್ಲಿ ವಿಶಿಷ್ಟ ಅವತಾರ ತಾಳಿದ್ದಾರೆ.

‘ಅಣ್ಣಯ್ಯ’ ಧಾರಾವಾಹಿಯಲ್ಲಿ ರಂಗಭೂಮಿ ಹಿನ್ನೆಲೆಯ ಅನುಭವಿ ಕಲಾವಿದರ ದೊಡ್ಡ ತಂಡವೇ ಇದೆ. ಶಿವಣ್ಣ- ಪಾರ್ವತಿ ಮತ್ತು ನಾಲ್ಕು ತಂಗಿಯರ ಕಥೆ ನಾಳೆಯಿಂದ (ಆಗಸ್ಟ್ 12) ರಾತ್ರಿ 7.30 ಕ್ಕೆ ಪ್ರಸಾರಗೊಳ್ಳಲಿದೆ. 7.30 ಕ್ಕೆ ಪ್ರಸಾರವಾಗುತ್ತಿದ್ದ ‘ಪುಟ್ಟಕ್ಕನ ಮಕ್ಕಳು’ ಇನ್ಮುಂದೆ ಸಂಜೆ 6.30 ಕ್ಕೆ ಹಾಗೂ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Kannada Serials TRP: ʻರಾಮಾಚಾರಿʼ ಧಾರಾವಾಹಿಗೆ ಹೆಚ್ಚಾಯ್ತು ಡಿಮ್ಯಾಂಡ್‌; ಟಾಪ್‌ 5ನಲ್ಲೂ ಇಲ್ಲ ʻಅಮೃತಧಾರೆʼ!

Kannada Serials TRP: ಈ ವಾರ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಉಮಾಶ್ರೀ, ಸಂಜನಾ ಬುರ್ಲಿ ಮೊದಲಾದವರ ನಟನೆ ಗಮನ ಸೆಳೆದಿದೆ. ಹೀಗಾಗಿ ಈ ಕಥೆ ಹಲವು ಟ್ವಿಸ್ಟ್ ಪಡೆದು ಸಾಗುತ್ತಿರುವುದರಿಂದ ಪ್ರೇಕ್ಷಕರು ಕೂಡ ಧಾರಾವಾಹಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಕಲರ್ಸ್ ಕನ್ನಡದ ಧಾರಾವಾಹಿ ‘ರಾಮಾಚಾರಿ’ (Ramachari Serila Kannada) ಐದನೇ ಸ್ಥಾನ ಪಡೆದುಕೊಂಡಿದೆ.

VISTARANEWS.COM


on

Kannada Serials TRP Demand increased for Ramachari serial Amritdhare is not even in the top 5
Koo

31ನೇ ವಾರದ ಟಿಆರ್​ಪಿ ಹೊರ ಬಿದ್ದಿದೆ. ಈ ಪೈಕಿ ‘ಪುಟ್ಟಕ್ಕನ ಮಕ್ಕಳು’ (Kannada Serials TRP) ಧಾರಾವಾಹಿ ಮೊದಲ ಸ್ಥಾನ ಕಾಪಾಡಿಕೊಂಡು ಬಂದಿದೆ. ನಗರ ಹಾಗೂ ಗ್ರಾಮೀಣ ವಿಭಾಗದಲ್ಲಿ ಈ ಧಾರಾವಾಹಿ ಒಂದನೇ ಸ್ಥಾನದಲ್ಲಿ ಇದೆ. ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ.

‘ಪುಟ್ಟಕ್ಕನ ಮಕ್ಕಳು’

ಈ ವಾರ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಉಮಾಶ್ರೀ, ಸಂಜನಾ ಬುರ್ಲಿ ಮೊದಲಾದವರ ನಟನೆ ಗಮನ ಸೆಳೆದಿದೆ. ಹೀಗಾಗಿ ಈ ಕಥೆ ಹಲವು ಟ್ವಿಸ್ಟ್ ಪಡೆದು ಸಾಗುತ್ತಿರುವುದರಿಂದ ಪ್ರೇಕ್ಷಕರು ಕೂಡ ಧಾರಾವಾಹಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಎರಡಂಕಿಯ ಟಿಆರ್​ಪಿ ಪಡೆದಿತ್ತು. ಈಗಲೂ ಧಾರಾವಾಹಿಗೆ ಮತ್ತೆ ಅದೇ ರೀತಿಯ ಬೇಡಿಕೆ ಸೃಷ್ಟಿ ಆಗಿದೆ. ಈ ಧಾರಾವಾಹಿಗೆ ಹಲವು ಟ್ವಿಸ್ಟ್​ಗಳು ಸಿಕ್ಕಿರುವುದರಿಂದ ಧಾರಾವಾಹಿಯನ್ನು ಜನರು ಹೆಚ್ಚೆಚ್ಚು ವೀಕ್ಷಿಸುತ್ತಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಸಂಜೆ 7:30ಕ್ಕೆ ಪ್ರಸಾರ ಕಾಣಲಿದೆ. ಇದೇ ಸಮಯದಲ್ಲಿ ಈಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಹೀಗಾಗಿ, ಈ ಧಾರಾವಾಹಿಯ ಸಮಯ ಬದಲಾಗಲಿದೆ.

‘ಲಕ್ಷ್ಮೀ ನಿವಾಸ’

ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿ ಕೂಡ ಜನ ಮೆಚ್ಚುಗೆ ಪಡೆದಿದೆ. ವಿಶೇಷ ಎಂದರೆ ನಗರ ಭಾಗದ ಟಿಆರ್​ಪಿಯಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಟಿಆರ್​ಪಿಯನ್ನು ಹಿಂದಿಕ್ಕಿದೆ. ಮೂರನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಈ ಧಾರಾವಾಹಿ ಉತ್ತಮ ಟಿಆರ್​ಪಿ ಪಡೆಯುತ್ತಿದೆ.

ಇದನ್ನೂ ಓದಿ: Kannada Serials TRP: ಟಾಪ್‌ 5ನಲ್ಲಿ ‘ಭಾಗ್ಯಲಕ್ಷ್ಮೀ’; ‘ಪುಟ್ಟಕ್ಕನ ಮಕ್ಕಳು’ ನಂಬರ್‌ 1!

ಶ್ರಾವಣಿ ಸುಬ್ರಮಣ್ಯ

ಕೆಲವು ದಿನಗಳ ಹಿಂದೆಯಷ್ಟೇ ಜೀ ಕನ್ನಡ ಧಾರಾವಾಹಿಯಲ್ಲಿ ಶ್ರಾವಣಿ ಸುಬ್ರಮಣ್ಯ ಪ್ರಸಾರ ಕಾಣುತ್ತಿದೆ. ಎರಡನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಈ ಧಾರಾವಾಹಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಸೀತಾ ರಾಮ ಧಾರಾವಾಹಿ ಹಿಂದಿಕ್ಕಿ ಮುಂದೆ ಸಾಗುತ್ತಿದೆ. ಈ ಮೊದಲು ಪ್ರಸಾರ ಕಾಣುತ್ತಿದ್ದ ಬೇಡಿಕೆಯ ಧಾರಾವಾಹಿಗಳ ಟಿಆರ್​ಪಿಯನ್ನು ಈ ಧಾರಾವಾಹಿ ಹಿಂದಿಕ್ಕಿದೆ. ಮನೆಯಲ್ಲಿ ಸಿರಿವಂತಿಕೆಯ ತುಂಬಿದ್ದರೂ ಅಪ್ಪನ ಪ್ರೀತಿಗಾಗಿ ಹಾತೊರೆಯುವ ಮಗಳು ಒಂದೆಡೆಯಾದರೆ ಮನೆಯಲ್ಲಿ ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತರಾಗಿರುವ ಮಧ್ಯಮ ವರ್ಗದ ಕುಟುಂಬದ ಕಥೆಯ ಜತೆ ಎರಡು ಹೃದಯಗಳ ಕಥೆಯನ್ನು ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಚಾನೆಲ್‌ ಪ್ರೇಕ್ಷಕರ ಮುಂದಿಟ್ಟಿದೆ. ಹಿರಿಯ ಕಲಾವಿದರಾದ ಮೋಹನ್‌ ಮತ್ತು ಬಾಲರಾಜ್‌ , ಕಿರುತೆರೆಯ ಖ್ಯಾತ ಕಲಾವಿದೆಯೆರಾದ ಅಪೂರ್ವ ಮತ್ತು ಸ್ನೇಹ ಇವರು ಜೊತೆ ಯುವ ಕಲಾವಿದರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

‘ಸೀತಾ ರಾಮ’ ಧಾರಾವಾಹಿ

ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ಈಗಾಗಲೇ ಸೀತಾ ಹಾಗೂ ರಾಮ್ ಮದುವೆ ನೆರವೇರಿದೆ. ಈ ಕಾರಣಕ್ಕೆ ಧಾರಾವಾಹಿ ಒಳ್ಳೆಯ ಟಿಆರ್​ಪಿ ಪಡೆದು ಮುನ್ನುಗ್ಗುತ್ತಿದೆ. ಈ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ಗೌಡ ನಟಿಸಿದ್ದಾರೆ.

ರಾಮಾಚಾರಿ’

ಕಲರ್ಸ್ ಕನ್ನಡದ ಧಾರಾವಾಹಿ ‘ರಾಮಾಚಾರಿ’ (Ramachari Serila Kannada) ಐದನೇ ಸ್ಥಾನ ಪಡೆದುಕೊಂಡಿದೆ. ಮೌನ, ರುತ್ವಿಕ್ ಕೃಪಾಕರ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದು ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.

‘ಅಮೃತಧಾರೆ’ ಧಾರಾವಾಹಿಯ ಟಿಆರ್​ಪಿ ದಿನ ಕಳೆದಂತೆ ಕುಸಿಯುತ್ತಿದೆ. ಹೊಸ ಧಾರಾವಾಹಿಗಳಾದ ‘ನಿನಗಾಗಿ’, ‘ಕರಿಮಣಿ’ ಹಾಗೂ ಶ್ರೀಗೌರಿ ಒಂದೇ ರೀತಿಯ ಟಿಆರ್​ಪಿ ಪಡೆದು ಸಾಗುತ್ತಿವೆ.

Continue Reading

ಬಿಗ್ ಬಾಸ್

Bigg Boss Kannada: ಈ ಬಾರಿ ʻಬಿಗ್‌ ಬಾಸ್‌ ಕನ್ನಡʼ ಹೋಸ್ಟ್‌ ಮಾಡ್ತಿದ್ದಾರಂತೆ ರಿಷಬ್‌ ಶೆಟ್ಟಿ; ಕಿಚ್ಚ ಸುದೀಪ್ ಔಟ್‌?

Bigg Boss Kannada: ಸೆಪ್ಟೆಂಬರ್‌ನಲ್ಲೇ ಈ ಬಾರಿ ಸೀಸನ್ 11 ಶುರುವಾಗುವ ನಿರೀಕ್ಷೆಯಿದೆ. ಸಿನಿಮಾ ಹಾಗೂ ಕಿರುತೆರೆ ಕಲಾವಿದರ ಜತೆಗೆ ಬೇರೆ ಬೇರೆ ಕ್ಷೇತ್ರಗಳ ಹಲವರು ದೊಡ್ಮನೆ ಪ್ರವೇಶಿಸಲಿದ್ದಾರೆ. ವಿವಾದಾತ್ಮಕ ವ್ಯಕ್ತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ದೊಡ್ಮನೆ ಒಳಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ.

VISTARANEWS.COM


on

Bigg Boss Kannada host by rishab shetty sudeep Out
Koo

ಬೆಂಗಳೂರು: ಈಗಾಗಲೇ ಬಿಗ್‌ ಬಾಸ್‌ (Bigg Boss Kannada) ಹಿಂದಿ ಒಟಿಟಿ ಸೀಸನ್‌ ಮುಕ್ತಾಯವಾಗಿದೆ. ಕನ್ನಡದಲ್ಲಿ ಯಾವಾಗ ಸೀಸನ್‌ ಶುರು ಎಂಬ ಚರ್ಚೆ ಜೋರಾಗಿದೆ. ಇದೀಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೀಘ್ರದಲ್ಲಿಯೇ ಶುರು ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರತಿ ಬಾರಿ ಅಕ್ಟೋಬರ್‌ ತಿಂಗಳಲ್ಲಿ ಶೋ ಆರಂಭವಾಗುತ್ತದೆ. ಈ ಬಾರಿ ಅದೇ ರೀತಿ ಪ್ಲ್ಯಾನ್ ಮಾಡಲಾಗುತ್ತಿದೆ. ತೆರೆಮರೆಯಲ್ಲಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಕೂಡ ನಡೀತಿದೆ ಎನ್ನಲಾಗುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಸಂಭಾವಿತರ ಪಟ್ಟಿ ವೈರಲ್ ಆಗುತ್ತಿದೆ. ಈ ಬಾರಿ ಸುದೀಪ್‌ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿಲ್ಲ ಎಂದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಕಿಚ್ಚ ಸುದೀಪ್‌ ಅವರು ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ರಮೇಶ್ ಅರವಿಂದ್ ಮತ್ತು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಬ್ಬರಲ್ಲಿ ಒಬ್ಬರು ಹೋಸ್ಟ್‌ ಮಾಡಲಿದ್ದಾರೆ ಎನ್ನಲಾಗುತ್ತಿದೆ, ರಮೇಶ್‌ ಅರವಿಂದ ಈಗಾಗಲೇ ಮಹಾನಟಿ ಶೋ ಮೂಲಕ ವೀಕ್ಷಕರನ್ನು ತಲುಪಿದಿದ್ದಾರೆ. ಈಗಾಗಲೆ ಕೋಟ್ಯಾಧಿಪತಿ ಮತ್ತು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರದಲ್ಲಿ ರಮೇಶ್ ಅರವಿಂದ್‌ ಹೋಸ್ಟ್‌ ಮಾಡಿದ್ದಾರೆ.ಇನ್ನು ರಿಷಬ್‌ ಕೂಡ ಮಾಡಬಹುದು ಎನ್ನಲಾಗಿದೆ.

ಸೆಪ್ಟೆಂಬರ್‌ನಲ್ಲೇ ಈ ಬಾರಿ ಸೀಸನ್ 11 ಶುರುವಾಗುವ ನಿರೀಕ್ಷೆಯಿದೆ. ಸಿನಿಮಾ ಹಾಗೂ ಕಿರುತೆರೆ ಕಲಾವಿದರ ಜತೆಗೆ ಬೇರೆ ಬೇರೆ ಕ್ಷೇತ್ರಗಳ ಹಲವರು ದೊಡ್ಮನೆ ಪ್ರವೇಶಿಸಲಿದ್ದಾರೆ. ವಿವಾದಾತ್ಮಕ ವ್ಯಕ್ತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ದೊಡ್ಮನೆ ಒಳಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ʼ 10 (Bigg Boss Kannada OTT)ರ ಚಾಂಪಿಯನ್‌ ಆಗಿ ಕಾರ್ತಿಕ್‌ ಮಹೇಶ್‌ ಹೊರ ಹೊಮ್ಮಿದರೆ, ಡ್ರೋನ್‌ ಪ್ರತಾಪ್‌ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ರನ್ನರ್‌ ಅಪ್‌ ಆಗಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 10 ಭರ್ಜರಿ ಟಿಆರ್‌ಪಿಯನ್ನು ಪಡೆದು ವೀಕ್ಷಕರ ಮನ ಸೆಳೆದಿತ್ತು. ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸುದೀಪ್ ಆ್ಯಂಕರಿಂಗ್ ನೋಡಲು ಅನೇಕರು ಕಾದಿದ್ದಾರೆ.. ‘ಡ್ರೋನ್’ ಪ್ರತಾಪ್, ಸೋನು ಶ್ರೀನಿವಾಸ್ ಗೌಡ ಅವರಿಗೆ ಅವಕಾಶ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಇದನ್ನೂ ಓದಿ: Bigg Boss Kannada: ಈ ಬಾರಿ ಬಿಗ್ ಬಾಸ್ ಮನೆಗೆ ʻಪಾರುʼ ಹೋಗ್ತಾರಾ? ನಟಿ ಹೇಳಿದ್ದೇನು?

ಈ ಬಾರಿ ಯಾರು ಯಾರು ಬರಲಿದ್ದಾರೆ ಎಂದು ಕಾದು ನೋಡಬೇಕಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸಾಕಷ್ಟು ವಿವಾದಗಳು ಸೃಷ್ಟಿ ಆಗಿತ್ತು. ಹುಲಿ ಉಗುರು ಧರಿಸಿದ್ದಾರೆ ಎನ್ನುವ ಕಾರಣಕ್ಕೆ ವರ್ತೂರು ಸಂತೋಷ್ ಅವರು ಒಂದಷ್ಟು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ತನಿಷಾ ಕುಪ್ಪಂಡ ಅವರು ಒಂದು ಸಮುದಾಯಕ್ಕೆ ಬೇಸರ ತರಿಸುವ ಮಾತಾಡಿದರು ಎಂಬ ದೂರು ಕೇಳಿ ಬಂತು.

Continue Reading

ಕಿರುತೆರೆ

Bhoomige Banda Bhagavantha: ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಮುಕ್ತಾಯ: ಅಂಕಿತಾ ಜಯರಾಮ್‌  ಭಾವುಕ ಪೋಸ್ಟ್‌!

VISTARANEWS.COM


on

Bhoomige Banda Bhagavantha came to end
Koo

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದ್ದ ‘ಭೂಮಿಗೆ ಬಂದ ಭಗವಂತ’ಒಟ್ಟು 354 ಸಂಚಿಕೆಗಳನ್ನ ಪೂರೈಸಿದೆ. 2023ರ ಮಾರ್ಚ್ 20 ರಂದು ‘ಭೂಮಿಗೆ ಬಂದ ಭಗವಂತ’ (Bhoomige Banda Bhagavantha) ಸೀರಿಯಲ್ ಆರಂಭಗೊಂಡಿತ್ತು. ಕಳೆದ 2024ರ ಆಗಸ್ಟ್ 4 ರಂದು ‘ಭೂಮಿಗೆ ಬಂದ ಭಗವಂತ’ ಅಂತ್ಯವಾಗಿದೆ. ಮಧ್ಯಮ ವರ್ಗದ ವ್ಯಕ್ತಿಯನ್ನು ಶಿವನೇ ಮಾನವ ರೂಪದಲ್ಲಿ ಭೇಟಿಯಾಗಿ ಮಾರ್ಗದರ್ಶನ ಮಾಡುವ ಸಂದೇಶ ಉಳ್ಳ ಧಾರಾವಾಹಿ ಆಗಿತ್ತು. ಇದೀಗ ನಟಿ ಅಂಕಿತಾ ಜಯರಾಮ್‌ ಈ ಬಗ್ಗೆ ಸುದೀರ್ಘವಾಗಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ʻʻಎಲ್ಲರಿಗೂ ನಮಸ್ಕಾರಗಳು ʻಭೂಮಿಗೆಬಂದ ಭಗವಂತʼ ಧಾರವಾಹಿಯ ನಮ್ಮೆಲ್ಲರ ಪಯಣ ಇಂದು ಆಗಸ್ಟ್ 3 ಮತ್ತು ನಾಳೆ 4 ನೇ ತಾರೀಖಿನ ಸಂಚಿಕೆಯೊಂದಿಗೆ ಕೊನೆಗೊಳ್ಳುತ್ತಿದೆ. ಎಂದು ತಿಳಿಸಲು ಮನಸ್ಸು ಬಹಳ ಭಾರವಾಗಿದೆ. ಮಧ್ಯಮ ವರ್ಗದ ಕುಟುಂಬದಲ್ಲಿ ಪ್ರತಿ ನಿತ್ಯ ನಡೆಯುವ ಘಟನೆಗಳನ್ನು ಆಧರಿಸಿ ತುಂಬಾ ಅಚ್ಚುಕಟ್ಟಾದ ನಿರೂಪಣೆಯೊಂದಿಗೆ ಭಗವಂತನ ಸಂದೇಶದೊಂದಿಗೆ ಎಲ್ಲರ ಮನ ಮನೆಗಳ ಮೆಚ್ಚಿನ ಧಾರಾವಾಹಿಯಾಗಿ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಪಡೆದ ಏಕೈಕ ಧಾರಾವಾಹಿ ಯೆಂದು ಹೆಸರು ಪಡೆದದ್ದು ಹೆಮ್ಮೆಯ ವಿಷಯವೆಂದು ಎಲ್ಲರಿಗೂ ತಿಳಿದಿದೆʼ. ಪ್ರಣೀತ ಎಂಬ ಪಾತ್ರಕ್ಕೆ ಹತ್ತಾರು ಮಕ್ಕಳ ಆಡಿಷನ್ ನಂತರದಲ್ಲೂ ಅಂತಿಮವಾಗಿ Ankitha ಈ ಪಾತ್ರಕ್ಕೆ ಸೂಕ್ತ ಎಂದು ಆಯ್ಕೆ ಮಾಡಿದ ನಿದೇ೯ಶಕರಾದ ಆರೂರು ಜಗದೀಶ್ ಸರ್ ರವರಿಗೂ ತುಂಬು ಹೃದಯದ ಧನ್ಯವಾದಗಳುʼʼ.

ʻʻಕುಮಾರ್_ಕೆರಗೋಡು ಸರ್ ಚಿತ್ರೀಕರಣದ ಪ್ರತಿಯೊಂದು ಹಂತದಲ್ಲೂ ನೀವು ನೀಡಿದ ಸಹಕಾರ ಶ್ಲಾಘನೀಯಶಾಲೆಗೆ ತೊಂದರೆಯಾಗದಂತೆ ಹೆಚ್ಚಿಗೆ ರಜಾ ದಿನಗಳಲ್ಲಿ ಚಿತ್ರೀಕರಣದ ಸಮಯವನ್ನು ಹೊಂದಿಸಿಕೊಂಡು ತುಂಬಾ ಅನಿವಾರ್ಯತೆಯ ಸಮಯದಲ್ಲಿ ಮಧ್ಯಾಹ್ನದ ನಂತರ ಡೇಟ್ಸ್ ಹೊಂದಾಣಿಕೆ ಮಾಡಿಕೊಂಡು ನೀವು ನೀಡಿದ ಸಹಕಾರಕ್ಕೆ ತುಂಬು ಹೃದಯದ ಧನ್ಯವಾದಗಳು. ಅಣ್ಣಾವ್ರು ಮಾತಲ್ಲಿ ಹೇಳುವುದಾದರೆ ನಿಮಾ೯ಪಕರು ಕಲಾವಿದರ ಅನ್ನದಾತರು. ತಾಂಡವ ಪ್ರೊಡಕ್ಷನ್ ನ ನಿರ್ಮಾತೃ #ತಾಂಡವರಾಮ್ ರವರು ಈ ಧಾರಾವಾಹಿ ಮುಖಾಂತರ ಹತ್ತಾರು ಕಲಾವಿದರಿಗೆ ತಂತ್ರಜ್ಞರಿಗೆ ನಿಮ್ಮ ನಿರ್ಮಾಣದ ಈ ಧಾರಾವಾಹಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ ಅನ್ನದಾತರಿಗೆ ತುಂಬು ಹೃದಯದ ಧನ್ಯವಾದಗಳು🙏 ಧಾರಾವಾಹಿಯ ನಾಯಕರಾದ ಪ್ರೀತಿಯ ನವೀನ್ಕೃಷ್ಣ ಸರ್ ಸೆಟ್ ನಲ್ಲಿ
ಪ್ರತಿಯೊಂದು ಸಮಯದಲ್ಲೂ ನೀವು ತೋರಿದ ಪ್ರೀತಿ ಕಾಳಜಿ, ಹಾಗೂ ಅಂಕಿತಳ ಕೀಟಲೆಗಳನ್ನೆಲ್ಲ ಸಹಿಸಿಕೊಂಡ ನಿಮ್ಮ ಸಂಯಮಕ್ಕೆ ಶರಣು ಬಹುಶಃ ನಿಮ್ಮ ಮಕ್ಕಳಿಗಿಂತಲೂ ಹೆಚ್ಚಿನ ಸಲುಗೆಯಿಂದ ಮಾತನಾಡುತ್ತಿದ್ದ ಅಂಕಿತಗೆ ನೀವು ನೀಡಿದ ಪ್ರೀತಿಯೇ ಮುಖ್ಯ ಕಾರಣ. (ಕಡೆಯದಾಗಿ ನನಗೆ ಹೆಣ್ಣು ಮಗಳಿಲ್ಲ ವೆಂಬ ಕೊರಗನ್ನು ನಿಮ್ಮ ಮಗಳು ಅಂಕಿತ ನೀಗಿಸಿದ್ದಾಳೆಂಬ ನಿಮ್ಮ ಮಾತು ಕೇಳಿ ಹೃದಯ ತುಂಬಿ ಬಂತು. ನಿಮ್ಮ ಈ ಪ್ರೀತಿಗೆ ಸದಾ ಆಭಾʼʼ ರಿ.

ಇದನ್ನೂ ಓದಿ: Actor Dhanush: ಧನುಷ್ ನಟನೆಯ ʻ50ʼನೇ ಸಿನಿಮಾ ಒಟಿಟಿ ಬಿಡುಗಡೆ ಯಾವಾಗ, ಎಲ್ಲಿ?

ʻʻನಮ್ಮ ಕಾರ್ತಿಕ್ ಸಮಾಗ ರವರು ಚಿತ್ರೀಕರಣದಲ್ಲಿ ಅಪರೂಪಕ್ಕೆ ಒಮ್ಮೆ ಭೇಟಿಯಾದ ಸಮಯದಲ್ಲೆಲ್ಲ ಪ್ರೀತಿಯಿಂದ ಕಂದಮ್ಮ ಅಂತ ಕರೆಯುತ್ತಾ ಬಾಯಿ ಸಿಹಿ ಮಾಡ್ಕೋ ಅಂತ ಕ್ಯಾಟ್ಬರಿ ಚಾಕಲೇಟ್ ನೀಡಿ ನೀವು ತೋರುತ್ತಿದ್ದ ನಿಷ್ಕಲ್ಮವಾದ ಮಗುವಿನ ಪ್ರೀತಿಗೆ ಹಾಗೂ ಭಗವಂತನ ಪಾತ್ರಕ್ಕೆ ನೀವು ನಿಮ್ಮದೇ ಆದ ಕೆಲವು ನಿಯಮ ನಿಷ್ಠೆಗಳನ್ನು ಅಳವಡಿಸಿಕೊಂಡು ಶಿವನ ಪಾತ್ರಕ್ಕೆ ಮತ್ತಷ್ಟು ಮೆರಗು ನೀಡಿದ್ದಿರಿ. ಅಭಿಮಾನಿಗಳ ಪಾಲಿಗೆ ನೀವು ಸಾಕ್ಷಾತ್ ಪರಮೇಶ್ವರ. ನಿಮ್ಮ ಜೊತೆಯಲ್ಲಿ ಅಭಿನಯಿಸುವ ಅವಕಾಶ ನೀಡಿದ ಶಿವನ ಪಾದಕ್ಕೆ ನಮೋ ನಮಃ.
ಕೃತಿಕಾ ತಮಗೆ ನೀಡಿದ ಪಾತ್ರದಲ್ಲಿ ಅತ್ಯಂತ ಸಹಜಾಭಿನಯವಾಗಿ ನಟಿಸಿ ಎಲ್ಲರ ಮನಗೆದ್ದು ,ಅಂಕಿತಳಿಗೆ ಗಿರಿಜಮ್ಮ ಳಾಗಿ ತಾಯಿಯ ಪ್ರೀತಿಯನ್ನು ತೋರಿ, ಧಾರಾವಾಹಿಯ ಪ್ರೇಕ್ಷಕರ ವರ್ಗ
(ಅಮ್ಮ ಮಗಳ ರೀಲ್ಸ್ ನೋಡೋದೇ ತುಂಬಾ ಖುಷಿಯಾಗುತ್ತೆ ಅಂತ ಹೇಳಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಕೆಲವೊಮ್ಮೆ ಸರಿ ತಪ್ಪುಗಳ ಬಗ್ಗೆ ತಿಳಿ ಹೇಳುತ್ತಾ ‘ ಸದಾ ಕಾಲ ಪ್ರೀತಿ ತೋರಿ. ಕೆಲವು ಸಲಹೆ ಸೂಚನೆಗಳನ್ನು ನೀಡುತ್ತಿದ್ದನಿಮಗೆ ತುಂಬು ಹೃದಯದ ಧನ್ಯವಾದಗಳು ಸಿಸ್ಟರ್. ಧಾರವಾಹಿಯ ಹಿರಿಯ ಕಲಾವಿದರಾದ #ಉಮೇಶ್ ಸರ್ ರವರು ಅಂಕಿತಗೆ #ತಾತನಿಲ್ಲ ವೆಂಬ ಕೊರಗನ್ನು ನೀಗಿಸಿದ್ದ ನಿಮಗೆ ಶರಣು🙏🙏🙏
ಚಿಕ್ಕಮ್ಮ ಚಿಕ್ಕಪ್ಪ ಪಾತ್ರದಾರಿಗಳಾದ #ಅಶ್ವಿನಿಬಬ್ಲೂ ಹಾಗೂ #ಶೋಧನ್ ಸರ್ ರವರಿಗೂ ತುಂಬು ಹೃದಯದ ಧನ್ಯವಾದಗಳು.
ʻʻಧಾರಾವಾಹಿಯ ಪುಟ್ಟ ತಮ್ಮನ ಪಾತ್ರಧಾರಿ ಅನುರಾಗ್ (ಸ್ಕಂದ) ಹೊರಗಡೆ ಎಲ್ಲಾ ಅಂಕಿತಳಿಗೆ ನಿಜವಾದ ತಮ್ಮನೆಂದೇ ಭಾವಿಸುವಷ್ಟು ಅಂದರೆ (ಮಹಾಥ೯ ಜೊತೆಗಿದ್ದರೂ ಸಹ) ನಿನ್ನ ತಮ್ಮ ಎಲ್ಲಿ ಎಂದು ಎಲ್ಲರೂ ಕೇಳುವಷ್ಟರ ಮಟ್ಟಿಗೆ ನಿಮ್ಮ ಪ್ರೀತಿಯ ಬಾಂಧವ್ಯ ಮೂಡಿ ಬಂದಿದೆ. ನಿನ್ನ ಮುಂದಿನ ಭವಿಷ್ಯ ಉಜ್ಬಲವಾಗಿರಲಿ.
ಪರದೆಯ ಮೇಲೆ ಚಂದವಾಗಿ ಕಾಣುವಂತೆ ಮಾಡಿದ ಮಾಡಿದ ನಾಗೇಂದ್ರ ಸರ್ ಹಾಗೂ ಸಂಧ್ಯಾ ದಂಪತಿಗಳಿಗೂ ತುಂಬು ಹೃದಯದ ಧನ್ಯವಾದಗಳು. ಅಸೋಸಿಯೇಟ್ directors ಸೂರ್ಯ ರಾಕೇಶ್ ಶ್ರವಣ ಪ್ರತಿಯೊಬ್ಬರು ಪ್ರೀತಿಯಿಂದ ತಂಗ್ಯಮ್ಮ ಎಂದು ಕರೆಯುತ್ತಾ scene explain ಮಾಡುತ್ತಿದ್ದ ರೀತಿ ನಿಮ್ಮ ಆತ್ಮೀಯತೆಗೆ ಅಪರೂಪದ ತಂಡಕ್ಕೆ. ಪ್ರತಿಯೊಂದು ಕುಂದು ಕೊರತೆಗಳನ್ನು ನಿಭಾಯಿಸಿದ ಮ್ಯಾನೇಜರ್ ಮಂಜುನಾಥ್ ರವರಿಗೂ
ನಮ್ಮ ಚಾಲಕ ತಂಡದ. ನಾಗರಾಜ್ ಸರ್ ನೀವು ತೋರಿದ ಪ್ರೀತಿಗೆ. ಪ್ರೊಡಕ್ಷನ್ ಡಿಪಾಟ್ ಮೆಂಟ್ ನ ಪ್ರವೀಣ್. ಮತ್ತು ಶಂಕರ್ ಹಾಗೂ ಮಮತ ರವರು ಅಚ್ಚುಕಟ್ಟಾಗಿ ಊಟ ಉಪಚಾರ ನೋಡಿಕೊಂಡ ನಿಮಗೆ ಧನ್ಯವಾದಗಳು
ಕಡೆಯ ದಿನ ಒಟ್ಟಾಗಿ ನಿಮ್ಮನ್ನೆಲ್ಲನ್ನೆಲ್ಲ ಬಿಟ್ಟು ಬರುವಾಗ ಮನಸ್ಸು ನಮ್ಮವರನ್ನೆಲ್ಲ ಬಿಟ್ಟು ದೂರ ಹೋಗುತ್ತಿರುವ ಭಾವನೆಗಳಿಂದ ಭಾರವಾಗಿತ್ತು.
ಜೀಕನ್ನಡ ಆಯೋಜಿಸುತ್ತಿದ್ದ ಇವೆಂಟ್‌ ಗಳಲ್ಲಿ ಸಮಯಕ್ಕೆ ಸರಿಯಾಗಿ ಕರೆಸಿಕೊಂಡು, ಸೂಕ್ತವಾದ ವ್ಯವಸ್ಥೆಯೊಂದಿಗೆ ಎಲ್ಲೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದ ಕ್ಲಸ್ಟರ್ ಹೆಡ್ ಆದಂತಹ ಪೃಥ್ವಿ ಸರ್ ರವರ ಕಾಯ೯ ವೈಖರಿ ನಿಜಕ್ಕೂ ಶ್ಲಾಘನೀಯ. ಕಿರು ಪರದೆಯ ಮೇಲೆ ಅತ್ಯಂತ ಸುಂದರವಾಗಿ ಫ್ರೆಂಮ್ ಟು ಫ್ರೆಂ ಮ್ ಕಾಣುವಂತೆ ಮಾಡಿದ ನಮ್ಮ ಕ್ಯಾಮರಾಮ್ಯಾನ್ ಕಾಂತರಾಜು ಹಾಗೂ ರಘು ರವರಿಗೂ ತುಂಬು ಹೃದಯದ ಧನ್ಯವಾದಗಳು.
ಅಪರೂಪಕ್ಕೆ ಭೇಟಿಯಾಗುತ್ತಿದ್ದ.


ಮೂಗೂರು ಸುಂದರ್ ಸರ್ . ಕಾತಿ೯ಕ್ ಜಯರಾಂ . ಪವನ್ ಸರ್ . ದೇಶಪಾಂಡೆ . ದಾನಪ್ಪ. ಚಕ್ರವತಿ೯, ಮಹೇಶ್ ಆಚಾರ್ಯ. ಸುಮತಿ ಹಾಗೂ ಅತಿಥಿ ಪಾತ್ರಧಾರಿಗಳಾಗಿ ಬಂದ ಎಲ್ಲ ಕಲಾವಿದರಿಗೂ ಪ್ರೀತಿಸಿ, ಸಹಕರಿಸಿ, ಪ್ರೋತ್ಸಾಹಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ʼʼಎಂದು ಬರೆದುಕೊಂಡಿದ್ದಾರೆ.

Continue Reading

ಕಿರುತೆರೆ

Bigg Boss Tamil 8: ಬಿಗ್​ ಬಾಸ್​ ಸೀಸನ್ 8​ರ ಹೋಸ್ಟ್​ ನಾನಲ್ಲ ಎಂದ ಕಮಲ್‌ ಹಾಸನ್‌; ಕಾರಣ ಬಿಚ್ಚಿಟ್ಟ ನಟ!

Bigg Boss Tamil 8: ಕಿರುತೆರೆಯ ಮೂಲಕ ನಿಮ್ಮ ಮನೆ ಮತ್ತು ಮನಗಳನ್ನು ತಲುಪಲು ಸಹಕಾರವನ್ನೂ ನೀಡಿದ ವಿಜಯ್ ಟಿವಿಗೆ ಧನ್ಯವಾದ ಎಂದಿರುವ ಕಮಲ್ ಹಾಸನ್,ಕೆಲಸದ ಒತ್ತಡ ಮತ್ತು ಒಪ್ಪಿಕೊಂಡಿರುವ ಕೆಲಸಗಳನ್ನು ಮುಗಿಸಲೇಬೇಕಾದ ಕಾರಣದಿಂದ ನಿರೂಪಣೆ ಮಾಡುತ್ತಿಲ್ಲ ಎಂದಿದ್ದಾರೆ

VISTARANEWS.COM


on

Bigg Boss Tamil 8 Kamal Haasan Bids Farewell As Host
Koo

ಬೆಂಗಳೂರು: ಈಗಾಗಲೇ ತಮಿಳು ಬಿಗ್‌ ಬಾಸ್‌ ಶೀಘ್ರದಲ್ಲಿ ಬರಲಿದೆ ಎಂದು ವರದಿಯಾಗಿದೆ. ಆದರೆ ಈ ಬಾರಿ ಬಿಗ್ ಬಾಸ್‌ ನಿರೂಪಣೆ ಕಮಲ್‌ ಹಾಸನ್‌ (Bigg Boss Tamil 8) ಮಾಡುತ್ತಿಲ್ಲ. ಈ ವರ್ಷ ಬಿಗ್ ಬಾಸ್ ಕಾರ್ಯಕ್ರಮದ ಹೊಣೆ ಹೊರಲು ಸಾಧ್ಯ ಇಲ್ಲ ಅಂದಿದ್ದಾರೆ. ಕಿರುತೆರೆಯ ಮೂಲಕ ನಿಮ್ಮ ಮನೆ ಮತ್ತು ಮನಗಳನ್ನು ತಲುಪಲು ಸಹಕಾರವನ್ನೂ ನೀಡಿದ ವಿಜಯ್ ಟಿವಿಗೆ ಧನ್ಯವಾದ ಎಂದಿರುವ ಕಮಲ್ ಹಾಸನ್,ಕೆಲಸದ ಒತ್ತಡ ಮತ್ತು ಒಪ್ಪಿಕೊಂಡಿರುವ ಕೆಲಸಗಳನ್ನು ಮುಗಿಸಲೇಬೇಕಾದ ಕಾರಣದಿಂದ ನಿರೂಪಣೆ ಮಾಡುತ್ತಿಲ್ಲ ಎಂದಿದ್ದಾರೆ

“ಆತ್ಮೀಯ ವೀಕ್ಷಕರೇ, ಭಾರವಾದ ಹೃದಯದಿಂದ, 7 ವರ್ಷಗಳ ಹಿಂದೆ ಪ್ರಾರಂಭವಾದ ನಮ್ಮ ಪ್ರಯಾಣದಿಂದ ನಾನು ಸಣ್ಣ ವಿರಾಮವನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಸಿನಿಮಾಗಳ ಕಮಿಟ್‌ಮೆಂಟ್‌ನಿಂದಾಗಿ ಬಿಗ್ ಬಾಸ್ ತಮಿಳಿನ ಮುಂಬರುವ ಸೀಸನ್‌ಗೆ ಹೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ. .”
ನಿಮ್ಮ ಮನೆಗಳಲ್ಲಿ ತಲುಪುವ ಸೌಭಾಗ್ಯ ನನಗೆ ಸಿಕ್ಕಿದೆ. ನಿಮ್ಮ ಪ್ರೀತಿ ಮತ್ತು ವಾತ್ಸಲ್ಯವನ್ನು ನೀವು ನನಗೆ ಧಾರೆ ಎರೆದಿದ್ದೀರಿ, ಅದಕ್ಕಾಗಿ ನಿಮಗೆ ನನ್ನ ಚಿರ ಕೃತಜ್ಞತೆ ಇದೆ. ಇಲ್ಲಿ ನಾನು ನನ್ನ ಕಲಿಕೆಯನ್ನು ಪ್ರಾಮಾಣಿಕವಾಗಿ ಹಂಚಿಕೊಂಡಿದ್ದೇನೆ. ಈ ಕಲಿಕೆಯ ಅನುಭವಕ್ಕಾಗಿ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ. ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಮತ್ತು ಸ್ಪರ್ಧಿಗಳಿಗೂ ನಾನು ಪ್ರಾಮಾಣಿಕವಾಗಿ ಧನ್ಯವಾದಗಳು. ಕೊನೆಯದಾಗಿ, ವಿಜಯ್ ಟಿವಿಯಲ್ಲಿನ ಅದ್ಭುತ ತಂಡಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ, ಜೊತೆಗೆ ಈ ಉದ್ಯಮವನ್ನು ಒಂದು ದೊಡ್ಡ ಯಶಸ್ಸನ್ನು ಮಾಡುವಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬ ಸಿಬ್ಬಂದಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Martin Trailer: ಪ್ಯಾನ್‌ ವರ್ಲ್ಸ್‌ ಮಾರ್ಟಿನ್‌ ಸಿನಿಮಾ ಟ್ರೈಲರ್‌ ಔಟ್;‌ ಪಾಕ್‌ನಲ್ಲಿ ಧ್ರುವ ಸರ್ಜಾ ಆ್ಯಕ್ಷನ್‌ಗೆ ಫ್ಯಾನ್ಸ್‌ ಫಿದಾ!

ಕಮಲ್ ಹಾಸನ್ ಅವರು 2007 ರಲ್ಲಿ ‘ಬಿಗ್ ಬಾಸ್ ತಮಿಳು’ ನಿರೂಪಣೆ ಮಾಡಿದರು.ನಟ ‘ಬಿಗ್ ಬಾಸ್ ತಮಿಳು’ ನ ಪ್ರತಿ ಸೀಸನ್ ಅನ್ನು ನಿರಂತರವಾಗಿ ಹೋಸ್ಟ್ ಮಾಡಿದ್ದಾರೆ. ‘ಬಿಗ್ ಬಾಸ್ ತಮಿಳು 8’ ಹೊಸ ಹೋಸ್ಟ್ ಯಾರೆಂದು ಇನ್ನೂ ಘೋಷಿಸಲಾಗಿಲ್ಲ.

ಕಳೆದ ಸೀಸನ್‌ನಲ್ಲಿ ವಿಶೇಷ ಎಂದರೆ ಅರ್ಚನಾ ರವಿಚಂದ್ರನ್ ಅವರು ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದರು. ಇದೀಗ ವೈಲ್ಡ್ ಕಾರ್ಡ್ ಮೂಲಕ ಬಂದು ಚಾಂಪಿಯನ್‌ ಆಗುವ ಮೂಲಕ ಅವರು ಅಪರೂಪದ ಸಾಧನೆ ಮಾಡಿದ್ದರು.  ಇನ್ನು ಡ್ಯಾನ್ಸರ್‌ ಮಾಯಾ ಕೃಷ್ಣನ್‌ ರನ್ನರ್‌ ಅಪ್‌ ಆಗಿ ಆಯ್ಕೆಯಾಗಿದ್ದರು. ಮತ್ತೋರ್ವ ವೈಲ್ಡ್ ಕಾರ್ಡ್ ಎಂಟ್ರಿ ದಿನೇಶ್ ಮೂರನೇ ರನ್ನರ್ ಅಪ್ ಆಗಿದ್ದರು.

Continue Reading
Advertisement
Rent Agreement
ವಾಣಿಜ್ಯ7 mins ago

Rent Agreement: ಬಾಡಿಗೆ ಒಪ್ಪಂದ 11 ತಿಂಗಳ ಅವಧಿಗೆ ಮಾತ್ರ ಯಾಕೆ ಅನ್ನೋದು ಗೊತ್ತಾ?

NIRF 2024 Rank
ಶಿಕ್ಷಣ25 mins ago

NIRF 2024 Rank: ದೇಶದಲ್ಲೇ ಮದ್ರಾಸ್ ಐಐಟಿ ಬೆಸ್ಟ್; ಬೆಂಗಳೂರಿನ ಐಐಎಸ್‌ಸಿ ನೆಕ್ಸ್ಟ್;‌ ಇಲ್ಲಿದೆ ಪೂರ್ಣ ಪಟ್ಟಿ

Rakshabandhan Shopping 2024
ಫ್ಯಾಷನ್33 mins ago

Rakshabandhan Shopping 2024: ವಾರಕ್ಕೆ ಮುನ್ನವೇ ಶುರುವಾಯ್ತು ರಕ್ಷಾ ಬಂಧನದ ಶಾಪಿಂಗ್‌!

Viral News
Latest35 mins ago

Viral News : ಪತ್ನಿಯ ಮರ್ಮಾಂಗದೊಳಗೆ ಲಟ್ಟಣಿಗೆ ತುರುಕಿ ಭೀಕರವಾಗಿ ಕೊಂದ ಪತಿ

Teachers Recruitment
ಕರ್ನಾಟಕ36 mins ago

Teachers Recruitment: ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌; ಶೀಘ್ರವೇ 12 ಸಾವಿರ ಶಿಕ್ಷಕರ ನೇಮಕಾತಿ

Hindenburg Report
ಪ್ರಮುಖ ಸುದ್ದಿ48 mins ago

Hindenburg Report : ಭಾರತೀಯ ಷೇರು ಮಾರುಕಟ್ಟೆಗೆ ಘಾಸಿ ಮಾಡುವ ಸಂಚು ವಿಫಲ; ಠುಸ್​ ಆದ ಹಿಂಡೆನ್​ಬರ್ಗ್ ವರದಿ

Independence Day 2024
ದೇಶ1 hour ago

Independence Day 2024: ಈ ಬಾರಿ ಆಚರಿಸುತ್ತಿರುವುದು ಎಷ್ಟನೇ ಸ್ವಾತಂತ್ರ್ಯೋತ್ಸವ? 77 or 78?

KSET updates
ಬೆಂಗಳೂರು1 hour ago

KSET Updates: ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಆ.17ಕ್ಕೆ ದಾಖಲೆ ಪರಿಶೀಲನೆ

Indian Dessert 2024
Latest1 hour ago

Indian Dessert 2024: ವಿಶ್ವದ ಪ್ರಸಿದ್ಧ ʼಸಿಹಿತಿಂಡಿ ತಾಣʼಗಳ ಪಟ್ಟಿಯಲ್ಲಿ ಸ್ಥಾನ ಪಡೆದ 10 ಭಾರತೀಯ ಸ್ವೀಟ್‌ ಸ್ಟಾಲ್‌ಗಳಿವು

Teachers Protest
ಕರ್ನಾಟಕ1 hour ago

Teachers Protest: ಶಿಕ್ಷಕರ ಪ್ರತಿಭಟನೆ; ಬಡ್ತಿ, ವರ್ಗಾವಣೆ, ಸೇವಾ ಜ್ಯೇಷ್ಠತೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಲು ಆಗ್ರಹ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ4 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು6 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ6 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌