Jote Joteyali | ಆರ್ಯವರ್ಧನ್‌ ಪಾತ್ರದಲ್ಲಿ ಅನಿರುದ್ಧ್ ಇಲ್ಲದೇ ಸೀರಿಯಲ್‌ ನೋಡೋದಿಲ್ಲ: ಪ್ರೇಕ್ಷಕರ ಮುನಿಸು! - Vistara News

ಕಿರುತೆರೆ

Jote Joteyali | ಆರ್ಯವರ್ಧನ್‌ ಪಾತ್ರದಲ್ಲಿ ಅನಿರುದ್ಧ್ ಇಲ್ಲದೇ ಸೀರಿಯಲ್‌ ನೋಡೋದಿಲ್ಲ: ಪ್ರೇಕ್ಷಕರ ಮುನಿಸು!

ನಟ ಅನಿರುದ್ಧ್‌ ಅವರನ್ನು ಎರಡು ವರ್ಷಗಳ ಕಾಲ ಕಿರುತೆರೆಯಿಂದ ಬ್ಯಾನ್‌ ಮಾಡಲು ನಿರ್ಧರಿಸಲಾಗಿದೆ. ಹಾಗಾದರೆ ಜೊತೆಜೊತೆಯಲಿ (Jote Joteyali) ಧಾರಾವಾಹಿಯ ಆರ್ಯವರ್ಧನ್‌ ಪಾತ್ರ ಮಾಡೋರು ಯಾರು? ಈ ಬಗ್ಗೆ ಪ್ರೇಕ್ಷಕರು ಏನೆನ್ನುತ್ತಾರೆ?

VISTARANEWS.COM


on

Jote Joteyali
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಜೊತೆ ಜೊತೆಯಲಿ ಧಾರಾವಾಹಿ (Jote Joteyali) ಖ್ಯಾತಿಯ ನಟ ಅನಿರುದ್ಧ್‌ ಅವರನ್ನು ಕಿರುತೆರೆ ನಿರ್ಮಾಪಕರ ಸಂಘ ಎರಡು ವರ್ಷಗಳ ಕಾಲ ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಆಯ್ಕೆ ಮಾಡಿಕೊಳ್ಳದಿರಲು ತೀರ್ಮಾನಿಸಿರುವ ಬಗ್ಗೆ ವೀಕ್ಷಕ ವಲಯದಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ʻಆರ್ಯವರ್ಧನ್‌ ಪಾತ್ರದಲ್ಲಿ ಅನಿರುದ್ಧ್ ಅವರು ಇಲ್ಲದೆ ಹೋದರೆ ಧಾರಾವಾಹಿಯನ್ನೇ ನೋಡುವುದಿಲ್ಲʼ ಎಂದು ಸೋಷಿಯಲ್‌ ಮೀಡಿಯಾದಲ್ಲಿ‌ ಕೆಲವು ಪ್ರ್ರೇಕ್ಷಕರು ಕಮೆಂಟ್‌ ಮಾಡುತ್ತಿದ್ದಾರೆ.

ನಟ ಅನಿರುದ್ಧ್‌ ಅವರು “ಜೊತೆ ಜೊತೆಯಲಿʼ ಧಾರಾವಾಹಿಯಲ್ಲಿ ಆರ್ಯವರ್ಧನ್‌ ಎಂಬ ಪಾತ್ರದ ಮೂಲಕ ಜನಮನ್ನಣೆ ಪಡೆದಿದ್ದರು. ಇದೀಗ ಅವರನ್ನು ಬ್ಯಾನ್‌ ಮಾಡಿರುವುದು ಕಿರುತೆರೆ ವೀಕ್ಷಕ ವಲಯದಲ್ಲಿ ಸಂಚಲನ ಮೂಡಿಸಿದೆ.

ʻʻಈ ಧಾರಾವಾಹಿಯಲ್ಲಿ ಏನು ಬೆಳವಣಿಗೆ ಆಗಿದೆ ಎನ್ನುವುದು ಗೊತ್ತಿಲ್ಲ. ಆದರೆ ಮೂರು ವರ್ಷಗಳಿಂದ ಈ ಸೀರಿಯಲ್‌ ಬರುತ್ತಿದೆ. ಈ ರೀತಿಯ ಭಿನ್ನಾಭಿಪ್ರಾಯಗಳು ಬರುವುದು ಸಹಜ ಹಾಗೂ ಸ್ವಾಭಾವಿಕ. ಅದನ್ನು ಪ್ರೀತಿಯಿಂದ ಹಾಗೂ ಸಮಾಲೋಚನೆಯಿಂದ ಬಗೆಹರಿಸಿಕೊಳ್ಳುವುದು ಉತ್ತಮ. ಈ ಸೀರಿಯಲ್‌ ಭವಿಷ್ಯದ ಬಗ್ಗೆ ನಮಗೆ ನಂಬಿಕೆ ಇದೆʼʼ ಎಂದು ಪ್ರೇಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Jote Joteyali | ಧಾರಾವಾಹಿ ಖ್ಯಾತಿಯ ಅನಿರುದ್ಧ್‌ ಕಿರುತೆರೆಯಿಂದ ಬ್ಯಾನ್‌ ಆಗುತ್ತಿದ್ದಾರಾ? ಹೇಳಿದ್ದೇನು?

ಆರ್ಯವರ್ಧನ್‌ ಪಾತ್ರದ ಅನಿರುದ್ಧ ಅವರನ್ನು ಕೈ ಬಿಟ್ಟರೆ ಈ ಧಾರಾವಾಹಿ ಕಳೆಗುಂದುತ್ತದೆ. ನಾವು ಈ ಧಾರಾವಾಹಿ ನೋಡುತ್ತಿರುವುದೇ ಅನಿರುದ್ಧ್‌ ಅವರ ನಟನೆಗಾಗಿ. ಅನಿರುದ್ಧ್‌ ಅವರೇ ಈ ಧಾರಾವಾಹಿಯ ಆಧಾರ ಸ್ತಂಭ. ಇದರಲ್ಲಿ ಬರುವ ಕಥೇ ಅಷ್ಟೇನೂ ಹೇಳುವಂತಿಲ್ಲ. ಕೇವಲ ಅನಿರುದ್ಧ್‌ ಅವರ ನಟನೆಗೆ ಅಂತಲೇ ಧಾರಾವಾಹಿ ನೋಡುತ್ತಿದ್ದೇವೆ ಎಂದು ಕೆಲವು ಪ್ರೇಕ್ಷಕರು ಬರೆದುಕೊಂಡಿದ್ದಾರೆ. ಈ ಪಾತ್ರಕ್ಕೆ ಅನಿರುದ್ಧ್‌ ಅವರನ್ನು ಬಿಟ್ಟರೆ ಬೇರೆ ಯಾರೂ ಸರಿ ಹೊಂದುವುದಿಲ್ಲ ಎಂದೂ ಕೆಲವು ವೀಕ್ಷಕರು ಕಮೆಂಟ್‌ ಮಾಡಿದ್ದಾರೆ.

ಆರೂರು ಜಗದೀಶ್‌ ಹೇಳಿದ್ದೇನು?

ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೂರು ಜಗದೀಶ್‌ ಮಾತನಾಡಿ ʻʻನಮ್ಮ ಮಧ್ಯೆ ಯಾವುದೇ ಮನಸ್ತಾಪ ಇಲ್ಲ. ಅವರಿಂದ ಶೂಟಿಂಗ್‌ಗೆ ತುಂಬಾ ಅಡಚಣೆ ಆಗಿದೆ. ಈ ಧಾರಾವಾಹಿಗೆ ಸಾಕಷ್ಟು ದುಡ್ಡು ಹಾಕಿದ್ದೇನೆ. ಆದರೂ ಅನಿರುದ್ಧಗೆ ನಿರ್ಮಾಪಕರ ಸವಾಲಿಗೆ ಸಾಥ್‌ ಕೊಡಬೇಕು ಎಂದು ಅನಿಸಿಲ್ಲ. ಸಂಬಳದ ವಿಚಾರಕ್ಕೆ ಸೆಟ್‌ನಲ್ಲಿ ಅನಿರುದ್ಧ್ ಕೂಗಾಡಿದ್ದರು. ಈ ಬಗ್ಗೆ ಅವರು ನಮ್ಮ ಜತೆ ಪ್ರತ್ಯೇಕವಾಗಿ ಮಾತನಾಡಬಹುದಿತ್ತುʼʼ ಎಂದಿದ್ದಾರೆ.

ಇದನ್ನೂ ಓದಿ | Jote Joteyali | ಧಾರಾವಾಹಿಯಿಂದ ಅನಿರುದ್ಧ್‌ಗೆ ಗೇಟ್‌ ಪಾಸ್‌, ಎರಡು ವರ್ಷ ಬ್ಯಾನ್‌ಗೆ ನಿರ್ಮಾಪಕರ ನಿರ್ಧಾರ

ಧಾರಾವಾಹಿಯ ಪಾತ್ರದ ಬದಲಾವಣೆ ಸಾಧ್ಯತೆಗಳ ಬಗ್ಗೆ ಅವರು ಪ್ರತಿಕ್ರಿಯಿಸಿ ʻʻಬೇರೆ ಪಾತ್ರ ಬಂದರೆ ಮೊದಮೊದಲು ಪ್ರೇಕ್ಷಕರಿಗೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ನನಗಾಗಿರುವ ನೋವನ್ನು ನಾನು ಚಾನೆಲ್‌ ಗಮನಕ್ಕೆ ತಂದಿದ್ದೇನೆ. ಸೀರಿಯಲ್‌ ಮಧ್ಯ ಭಾಗದಲ್ಲಿ ಟಿಆರ್‌ಪಿ ಕಡಿಮೆ ಆಗಲು ಅವರೇ ಕಾರಣʼʼ ಎಂದು ಆರೋಪಿಸಿದ್ದಾರೆ.

ನಿರ್ಮಾಪಕರ ಸಂಘದ ಅಧ್ಯಕ್ಷರ ಹೇಳಿಕೆ ಏನು?

ಈಗಾಗಲೇ ನಿರ್ಮಾಪಕರ ಸಂಘ ಈ ಕುರಿತು ಎಲ್ಲ ವಾಹಿನಿಗಳಿಗೆ ಪತ್ರ ಬರೆದಿದ್ದು, ಎರಡು ವರ್ಷಗಳ ಕಾಲ ಅನಿರುದ್ಧ್‌ ಅವರನ್ನು ಬ್ಯಾನ್‌ ಮಾಡಬೇಕು ಎಂದು ಕೋರಿದೆ.

‘ಶೂಟಿಂಗ್‌ ಸೆಟ್‌ನಲ್ಲಿ ನಿರ್ದೇಶಕರಿಗೆ ಅನಿರುದ್ಧ್‌ ಅವರು ನಿಂದಿಸಿ ಸೆಟ್‌ನಿಂದ ಹೊರಗೆ ನಡೆದಿದ್ದಾರೆ. ಸೆಟ್‌ನಲ್ಲಿ ಸ್ಕ್ರಿಪ್ಟ್‌ ವಿಚಾರಕ್ಕೆ ಅವರು ಪದೇಪದೆ ಜಗಳವಾಡುತ್ತಿದ್ದರು. ಇದರಿಂದಾಗಿ ನಿರ್ಮಾಪಕ ಆರೂರು ಜಗದೀಶ್‌ ತೀವ್ರ ನೊಂದಿದ್ದಾರೆ’ ಎಂದು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್‌ ಹೇಳಿಕೆ ನೀಡಿದ್ದಾರೆ.

ಇದೀಗ ನಿರ್ಮಾಪಕರ ಸಂಘ ಎರಡು ವರ್ಷಗಳ ಕಾಲ ಅವರನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಈ ನಿರ್ಧಾರ ಅನಿರುದ್ಧ್‌ ವೃತ್ತಿ ಬದುಕಿನ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಹಾಗೂ ಧಾರಾವಾಹಿಯಲ್ಲಿ ಪಾತ್ರ ಬದಲಾವಣೆ ಒಂದು ವೇಳೆ ಆದರೆ ವೀಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.

ಇದನ್ನೂ ಓದಿ | Jote Joteyali | 3000 ಕೋಟಿ ಒಡೆಯನನ್ನು ಈ ಥರ ತೋರಿಸೋದಾ? ನಿರ್ದೇಶಕರ ವಿರುದ್ಧ ಅನಿರುದ್ಧ್‌ ಆಕ್ರೋಶ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Gurucharan Singh: ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಖ್ಯಾತಿಯ ನಟ ನಿಗೂಢ ನಾಪತ್ತೆ

Gurucharan Singh: ಕೆಲ ವರ್ಷಗಳ ಹಿಂದೆ ಗುರುಚರಣ್ ಸಿಂಗ್ ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರವಾಹಿಯಿಂದ ಹೊರಬಂದಿದ್ದರು. ತಂದೆಯ ಅನಾರೋಗ್ಯ, ಕುಟುಂಬದ ನಿರ್ವಹಣೆ ಕಾರಣದಿಂದ ಸೀರಿಯಲ್‌ನಿಂದ ಹೊರಬಂದು ಕುಟುಂಬದ ಜತೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರಾವಾಹಿ 2022 ಜುಲೈ 2ಕ್ಕೆ 3500 ಸಂಚಿಕೆಗಳನ್ನು ಕಂಡಿದೆ.

VISTARANEWS.COM


on

Gurucharan Singh Taarak Mehta Ka Ooltah Chashmah actor missing
Koo

ಬೆಂಗಳೂರು: ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ (Taarak Mehta Ka Ooltah Chashmah) ಧಾರಾವಾಹಿಯ ನಟ ಗುರುಚರಣ್ ಸಿಂಗ್ (Gurucharan Singh ) ನಾಪತ್ತೆಯಾಗಿದ್ದಾರೆ. ಕೆಲಸದ ನಿಮಿತ್ತ ದೆಹಲಿಯಿಂದ ಮುಂಬೈ ತೆರಳಿದ ನಟ ನಾಪತ್ತೆಯಾಗಿದ್ದಾರೆ ಎಂದು ಗುರುಚರಣ್ ಸಿಂಗ್ ತಂದೆ ಹರ್ಜಿತ್ ಸಿಂಗ್ ದೂರು ದಾಖಲಿಸಿದ್ದಾರೆ.

ಎಪ್ರಿಲ್ 22ರಂದು ಗುರುಚರಣ್ ಸಿಂಗ್ ಶೂಟಿಂಗ್ ಸೇರಿದಂತೆ ಇತರ ಕೆಲಸದ ನಿಮಿತ್ತ ದೆಹಲಿಯ ತಮ್ಮ ನಿವಾಸದಿಂದ ಮುಂಬೈಗೆ ತೆರಳಲು ವಿಮಾನ ನಿಲ್ದಾಕ್ಕೆ ತೆರಳಿದ್ದಾರೆ. 50 ವರ್ಷದ ಗುರುಚರಣ್ ಸಿಂಗ್ ಬೆಳಗ್ಗೆ 8.30ಕ್ಕೆ ಮನೆಯಿಂದ ತೆರಳಿದ್ದಾರೆ. ನಟ ಮುಂಬೈಗೆ ತಲುಪಿಲ್ಲ ಎನ್ನಲಾಗಿದೆ. ʻʻಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಮನೆಗೂ ಕೂಡ ಹಿಂತಿರುಗಿಲ್ಲ. ಗುರುಚರಣ್ ಸಿಂಗ್ ಸಂಪರ್ಕಕ್ಕೆ ಸಿಕ್ಕಿಲ್ಲʼʼ ಎಂದು ತಂದೆ ಹರ್ಜಿತ್ ಸಿಂಗ್ ದೂರು ದಾಖಲಿಸಿದ್ದಾರೆ.

ಡಿಸಿಪಿ ರೋಹಿತ್ ಮೀನಾ ಈ ಬಗ್ಗೆ ಮಾಹಿತಿ ಹಂಚಿಕೊಂಡು ʻʻಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಪ್ರಮುಖ ಸುಳಿವುಗಳು ಸಿಕ್ಕಿವೆʼʼ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಗುರುಚರಣ್ ಅವರ ತಂದೆ ಪೊಲೀಸರಿಗೆ ಮಗ ಮಾನಸಿಕವಾಗಿ ಸ್ಥಿರವಾಗಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Snake Bite: ತೋಟದ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಕಚ್ಚಿದ ಹಾವು; ಕ್ಷಣಾರ್ಧದಲ್ಲೆ ಹಾರಿಹೋಯ್ತು ಪ್ರಾಣ

ಕೆಲ ವರ್ಷಗಳ ಹಿಂದೆ ಗುರುಚರಣ್ ಸಿಂಗ್ ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರವಾಹಿಯಿಂದ ಹೊರಬಂದಿದ್ದರು. ತಂದೆಯ ಅನಾರೋಗ್ಯ, ಕುಟುಂಬದ ನಿರ್ವಹಣೆ ಕಾರಣದಿಂದ ಸೀರಿಯಲ್‌ನಿಂದ ಹೊರಬಂದು ಕುಟುಂಬದ ಜತೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರಾವಾಹಿ 2022 ಜುಲೈ 2ಕ್ಕೆ 3500 ಸಂಚಿಕೆಗಳನ್ನು ಕಂಡಿದೆ.

Continue Reading

ಕಿರುತೆರೆ

Krishna Mukherjee: ಮೇಕಪ್‌ ರೂಮ್‌ನಲ್ಲಿ ಕೂಡಿ ಹಾಕಿದ್ರು, ಬಟ್ಟೆ ಬದಲಿಸಲೂ ಬಿಡಲಿಲ್ಲ; ʻನಾಗಿಣ್-3′ ಖ್ಯಾತ ನಟಿಯ ಅಳಲು!

Krishna Mukherjee: ಕೃಷ್ಣಾ ಮುಖರ್ಜಿ ಹಲವು ವರ್ಷಗಳಿಂದ ಹಲವು ವರ್ಷಗಳಿಂದ ಆಕೆ ಹಿಂದಿ ಕಿರುತೆರೆ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಜನಪ್ರಿಯ ‘ನಾಗಿಣ್-3’ ಧಾರಾವಾಹಿಯಲ್ಲಿ ಕೂಡ ನಟಿಸಿ ಗೆದ್ದಿದ್ದಾರೆ.ಶುಭ್ ಶಗುನ್ʼ ಧಾರಾವಾಹಿ (Shubh Shagun) ನಿರ್ಮಾಪಕ ʻಕುಂದನ್ ಸಿಂಗ್ʼ (Kundan Singh) ಅವರನ್ನು ಟ್ಯಾಗ್ ಮಾಡಿ ನಟಿ ಕೃಷ್ಣ ಮುಖರ್ಜಿ ತಮಗಾದ ಕಿರುಕುಳದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

VISTARANEWS.COM


on

Krishna Mukherjee accuses Shubh Shagun producer
Koo

ಬೆಂಗಳೂರು: ಜನಪ್ರಿಯ ಟಿವಿ ಶೋ `ಯೇ ಹೈ ಮೊಹಬತೇನ್’ (Yeh Hai Mohabaatein) ಮೂಲಕ ಖ್ಯಾತಿ ಪಡೆದ ನಟಿ ಕೃಷ್ಣಾ ಮುಖರ್ಜಿ(Krishna Mukherjee) ನಿರ್ಮಾಪಕರು, ನಿರ್ದೇಶಕರು ತಮ್ಮೊಟ್ಟಿಗೆ ಅನುಚಿತವಾಗಿ ವರ್ತಿಸಿದ ಬಗ್ಗೆ ಹೇಳಿಕೊಂಡಿದ್ದಾರೆ. ಹಿಂದಿ ಜನಪ್ರಿಯ ಕಿರುತೆರೆ ನಟಿ ಕೃಷ್ಣ ಮುಖರ್ಜಿ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತ ಹೆಸರು. ‘ಯೇ ಹೈ ಮೊಹಬ್ಬತೇನ್‌’ ಧಾರಾವಾಹಿಯಲ್ಲಿ ಆಲಿಯಾ ರಾಘವ್ ಭಲ್ಲಾ ಪಾತ್ರದಲ್ಲಿ ಅವರ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಜನಪ್ರಿಯ ‘ನಾಗಿಣ್-3’ ಧಾರಾವಾಹಿಯಲ್ಲಿ ಕೂಡ ನಟಿಸಿ ಗೆದ್ದಿದ್ದಾರೆ.

ʻಶುಭ್ ಶಗುನ್ʼ ಧಾರಾವಾಹಿ (Shubh Shagun) ನಿರ್ಮಾಪಕ ʻಕುಂದನ್ ಸಿಂಗ್ʼ (Kundan Singh) ಅವರನ್ನು ಟ್ಯಾಗ್ ಮಾಡಿ ನಟಿ ಕೃಷ್ಣ ಮುಖರ್ಜಿ ಈ ಪೋಸ್ಟ್ ಮಾಡಿದ್ದಾರೆ. ಕಾರ್ಯಕ್ರಮವನ್ನು ತೊರೆಯುವುದರ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದರು. ಶುಭ್ ಶಗುನ್ ತಮ್ಮ ಸಂಭಾವನೆಯನ್ನು ಇನ್ನೂ ನೀಡಿಲ್ಲ ಎಂಬುದರ ಬಗ್ಗೆಯೂ ಹೇಳಿಕೊಂಡಿದ್ದಾರೆ. ಮೇಕಪ್‌ ರೂಮ್‌ನಲ್ಲಿ ನಿರ್ಮಾಪಕ ʻಕುಂದನ್ ಸಿಂಗ್ʼ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದಾರೆ. ಒಂದೂವರೆ ವರ್ಷದಿಂದ ತಾವು ಈ ರೀತಿ ಕಿರುಕುಳ ಅನುಭವಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Parkinson’s disease: ಪಾರ್ಕಿನ್ಸನ್ ರೋಗಿಗಳಲ್ಲಿ ಡಿಬಿಎಸ್ ಚಿಕಿತ್ಸೆಗಾಗಿ ಹೊಸ ತಂತ್ರಜ್ಞಾನ- ಇದು ದೇಶದಲ್ಲೇ ಮೊದಲು

ನಟಿ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ ʻಇದರ ಬಗ್ಗೆ ಬರೆಯುವಾಗ ನನ್ನ ಕೈಗಳು ಇನ್ನೂ ನಡುಗುತ್ತಿವೆ. ನಾನು ಆತಂಕದಲ್ಲಿ ಇದ್ದೇನೆ. ಖಿನ್ನತೆಯಿಂದ ಬಳಲುತ್ತಿದ್ದೇನೆ. ಈ ಪ್ರಕರಣದ ಬಗ್ಗೆ ಪೋಸ್ಟ್‌ ಮಾಡಬೇಡ ಎಂದು ನನ್ನ ಕುಟುಂಬದವರು ಹೇಳುತ್ತಲೇ ಇದ್ದರು. ಆದರೆ ನಾನೇಕೆ ಹೆದರಬೇಕು? ಇದು ನನ್ನ ಹಕ್ಕು ಮತ್ತು ನನಗೆ ನ್ಯಾಯ ಬೇಕು. ನಾನು ತುಂಬ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇನೆ. ಕಳೆದ ಒಂದೂವರೆ ವರ್ಷ ನನಗೆ ಸುಲಭವಾಗಿರಲಿಲ್ಲ. ನಾನು ಖಿನ್ನತೆಗೆ ಒಳಗಾಗಿದ್ದೆ. ನಾನು ಒಬ್ಬಂಟಿಯಾಗಿರುವಾಗ ಅಳುತ್ತಿದ್ದೆ. ನಾನು ‘ದಂಗಲ್’ ಟಿವಿಗಾಗಿ ‘ಶುಭ್ ಶಗುನ್’ ಧಾರಾವಾಹಿಯಲ್ಲಿ ನಟಿಸಲು ಆರಂಭಿಸದ ಬಳಿಕ ಇದೆಲ್ಲಾ ಶುರುವಾಯಿತು” ಎಂದು ಆಕೆ ಬರೆದುಕೊಂಡಿದ್ದಾರೆ.

ʻʻಈ ಧಾರಾವಾಹಿಗೆ ಒಪ್ಪಿಕೊಂಡಿದ್ದು ನನ್ನ ಜೀವನದ ಅತ್ಯಂತ ಕೆಟ್ಟ ನಿರ್ಧಾರ. ಮೊದಲಿಗೆ ಇಷ್ಟವಿರಲಿಲ್ಲ. ಬಳಿಕ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರೊಡಕ್ಷನ್ ಹೌಸ್ ಮತ್ತು ನಿರ್ಮಾಪಕ ಕುಂದನ್ ಸಿಂಗ್ ನನಗೆ ಹಲವು ಬಾರಿ ಕಿರುಕುಳ ನೀಡಿದ್ದಾರೆ. ನಾನು ಅಸ್ವಸ್ಥನಾಗಿದ್ದರಿಂದ ಅವರು ಒಮ್ಮೆ ನನ್ನನ್ನು ಮೇಕಪ್ ರೂಮ್‌ ಒಳಗೆ ಕೂಡಿ ಹಾಕಿದ್ದರು. ಸಂಭಾವನೆ ನೀಡದ ಕಾರಣ ನಾನು ಚಿತ್ರೀಕರಣ ಮಾಡದಿರಲು ನಿರ್ಧರಿಸಿದೆ. ಒಮ್ಮೆ ನಾನು ಬಟ್ಟೆ ಬದಲಿಸುವಾಗ ನನ್ನ ಮೇಕಪ್ ರೂಂ ಬಾಗಿಲು ಜೋರಾಗಿ ಬಡಿಯುತ್ತಿದ್ದರು” ಎಂದು ನೋವು ತೋಡಿಕೊಂಡಿದ್ದಾರೆ.

”ಹಲವು ಬಾರಿ ಧಮಕಿಯನ್ನೂ ನನಗೆ ಹಾಕಿದರು. ನನಗೆ ಅಸುರಕ್ಷಿತ ಅನಿಸುತ್ತಿದೆ. ನಾನು ತುಂಬಾ ಜನರ ಸಹಾಯ ಕೇಳಿದೆ ಆದರೆ ಏನೂ ಪ್ರಯೋಜನ ಆಗಿಲ್ಲ. ನಾನು ಯಾಕೆ ಯಾವುದೇ ಶೋ ಮಾಡುತ್ತಿಲ್ಲ ಎಂದು ಜನರು ನನ್ನನ್ನು ಕೇಳುತ್ತಾರೆ? ಇದೇ ಕಾರಣ. ಮತ್ತೆ ಇದೇ ರೀತಿ ಆದರೆ ಹೇಗೆ? ಎನ್ನುವ ಭಯ ನನಗೆ. ನನಗೆ ನ್ಯಾಯಬೇಕು” ಎಂದು ಕೃಷ್ಣ ಮುಖರ್ಜಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kiran Rao: ಆಮೀರ್ ಖಾನ್ ಮಾಜಿ ಪತ್ನಿ ಸಿನಿಮಾ ಒಟಿಟಿಗೆ ಬಂದೇ ಬಿಡ್ತು! ಎಲ್ಲಿ ಸ್ಟ್ರೀಮಿಂಗ್?

ನಟಿಯ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕೂಡಲೇ, ಸಲೆಬ್ರಿಟಿಗಳು ನಟಿಯ ಫಾಲೋವರ್ಸ್‌ಗಳು ಅವರಿಗೆ ಬೆಂಬಲ ನೀಡಿದರು. ಪೂಜಾ ಬ್ಯಾನರ್ಜಿ, ಸಿಂಪಲ್ ಕೌಲ್, ಶ್ವೇತಾ ಗುಲಾಟಿ ಮತ್ತು ಪವಿತ್ರಾ ಪುನಿಯಾ ಮುಂತಾದ ನಟ, ನಟಿಯರು ಕಮೆಂಟ್‌ ಮೂಲಕ ನಟಿಗೆ ಸಾಥ್‌ ಕೊಟ್ಟಿದ್ದಾರೆ.

Continue Reading

ಕಿರುತೆರೆ

Dhanush Gowda:  ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಗೀತಾʼ ಧಾರಾವಾಹಿ ನಟ

Dhanush Gowda: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ ಸೀರಿಯಲ್‌ ನಾಯಕ ನಟ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂಜನಾ ಎಂಬುವವರ ಜತೆಗೆ ಧನುಷ್‌ ಸಪ್ತಪದಿ ತುಳಿದಿದ್ದಾರೆ. ಕುಟುಂಬದವರು, ಆಪ್ತರ ಸಮ್ಮುಖದಲ್ಲಿ ಈ ವಿವಾಹ ಜರುಗಿದೆ.ಧನುಷ್ ಅವರ ಆರತಕ್ಷತರೆ ಕಾರ್ಯಕ್ರಮದಲ್ಲಿ ಭವ್ಯಾ ಗೌಡ ಸೇರಿ ಅನೇಕರು ಆಗಮಿಸಿದ್ದರು.

VISTARANEWS.COM


on

Dhanush Gowda Wedding With Sanjana Photos
Koo

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ ಸೀರಿಯಲ್‌ (geetha serial) ನಾಯಕ ನಟ ಧನುಷ್ ಗೌಡ (Dhanush Gowda) ಅವರು ‘ಗೀತಾ’ ಧಾರಾವಾಹಿಯಲ್ಲಿ ಹೀರೊ ಆಗಿ ನಟಿಸಿದ್ದರು. ಧನುಷ್ ಗೌಡ ಅವರ ಮದುವೆ ಈಗ ಅದ್ಧೂರಿಯಾಗಿ ನಡೆದಿದೆ.

ಸಂಜನಾ ಎಂಬುವವರ ಜತೆಗೆ ಧನುಷ್‌ ಸಪ್ತಪದಿ ತುಳಿದಿದ್ದಾರೆ. ಕುಟುಂಬದವರು, ಆಪ್ತರ ಸಮ್ಮುಖದಲ್ಲಿ ಈ ವಿವಾಹ ಜರುಗಿದೆ.

ಈಗಾಗಲೇ ಗೀತಾ ಧಾರಾವಾಹಿ ಪೂರ್ಣಗೊಂಡಿದೆ.

ಆಪ್ತರ ಜತೆ ಸಂಜನಾ-ಧನುಷ್‌ ಪೋಸ್‌ ಕೊಟ್ಟಿದ್ದು ಹೀಗೆ.

ಇದನ್ನೂ ಓದಿ: Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

ಧನುಷ್ ಅವರ ಆರತಕ್ಷತರೆ ಕಾರ್ಯಕ್ರಮದಲ್ಲಿ ಭವ್ಯಾ ಗೌಡ ಸೇರಿ ಅನೇಕರು ಆಗಮಿಸಿದ್ದರು.
Continue Reading

ಕಿರುತೆರೆ

Kannada Serials TRP: ಈ ವಾರ ಟಿಆರ್‌ಪಿಯಲ್ಲಿ ʻಲಕ್ಷ್ಮೀ ನಿವಾಸʼಕ್ಕೆ ಎರಡನೇ ಸ್ಥಾನ: ಟಾಪ್‌ 5ನಲ್ಲಿ ʻಅಮೃತಧಾರೆʼ!

Kannada Serials TRP: ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.ಸೀತಾ ರಾಮ’ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ಕಲರ್ಸ್ ಕನ್ನಡದ ಧಾರಾವಾಹಿ ‘ರಾಮಾಚಾರಿ’ (Ramachari Serila Kannada) ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

VISTARANEWS.COM


on

Kannada Serials TRP Lakshmi Nivasa In Top Amruthadhaare in Top 5
Koo

ಬೆಂಗಳೂರು: ಪ್ರತಿ ಬಾರಿ ಜೀ ಕನ್ನಡ ವಾಹಿನಿ ಧಾರಾವಾಹಿಯ (Kannada Serials TRP) ʻಲಕ್ಷ್ಮೀ ನಿವಾಸʼ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿತ್ತು. ಆದರೆ ಈ ವಾರ ಈ ವಾರ ʻಪುಟ್ಟಕನ ಮಕ್ಕಳುʼ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಕಲರ್ಸ್‌ ಕನ್ನಡದ ʻರಾಮಾಚಾರಿʼ ಸಿನಿಮಾ ಕೂಡ ಟಾಪ್‌ 5ನಲ್ಲಿ ಇದೆ.

‘ಪುಟ್ಟಕ್ಕನ ಮಕ್ಕಳು’

ಈ ವಾರ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿ ಈ ಮೊದಲು ಎರಡಂಕಿ ಟಿಆರ್​ಪಿ ಪಡೆಯುತ್ತಿತ್ತು. ಆದರೆ, ಇತ್ತೀಚೆಗೆ ಟಿಆರ್​ಪಿ ಕುಸಿಯುತ್ತಿತ್ತು. ಪಾಯಿಂಟ್ ಒಂದು ಅಂಕಗಳ ಅಂತರದಲ್ಲಿ ಈ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಲಕ್ಷ್ಮೀ ನಿವಾಸ

ಸಾಯಿ ನಿರ್ಮಲ ಪ್ರೊಡಕ್ಷನ್‌ ಸಂಸ್ಥೆಯ ನಿರ್ಮಾಣ, ಆದರ್ಶ್ ಉಮೇಶ್ ಹೆಗಡೆ ನಿರ್ದೇಶನ ಈ ಧಾರಾವಾಹಿಗೆ (lakshmi nivasa kannada serial) ಇದೆ. ಕಿರುತೆರೆಯಲ್ಲಿ ಈ ಹಿಂದೆ ಹೀರೊ ಹೀರೋಯಿನ್‌ಗಳಾಗಿ‌ ಮಿಂಚಿದ್ದ ಹಲವು ಅನುಭವಿ ಕಲಾವಿದರು ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಬೇಕು ಎಂದು ಕಷ್ಟಪಡುವ ತಂದೆಯ ಕಥೆ-ವ್ಯಥೆಯ ಜೊತೆ ಸಾಕಷ್ಟು ಭಾವನಾತ್ಮಕ ವಿಚಾರಗಳನ್ನು ಈ ಧಾರಾವಾಹಿಯಲ್ಲಿ (Kannada Serials TRP) ತೋರಿಸಲಾಗಿದೆ. ಸದ್ಯ ಜಯಂತ್‌ನ ಅಸಲಿ ಮುಖ ಜಾಹ್ನವಿ ತಿಳಿಯಬೇಕಿದೆ. ಈ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಅದ್ಧೂರಿ ಬಜೆಟ್​ನಲ್ಲಿ ಈ ಧಾರಾವಾಹಿ ಸಿದ್ಧವಾಗಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.ಎರಡನೇ ಸ್ಥಾನದಲ್ಲಿ ಈ ಬಾರಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ.

ಇದನ್ನೂ ಓದಿ: Kannada Serials TRP: ಐಪಿಎಲ್​ ಎಫೆಕ್ಟ್‌: ಯಾವ ಧಾರಾವಾಹಿ ಈ ವಾರ ಟಾಪ್‌?

ಸೀತಾ ರಾಮ

‘ಸೀತಾ ರಾಮ’ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ಈ ಧಾರಾವಾಹಿ ಟಿಆರ್​ಪಿಯಲ್ಲಿ ಮುನ್ನಡೆ ಸಾಧಿಸಿದೆ. ಧಾರಾವಾಹಿ ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

‘ರಾಮಾಚಾರಿ’

ಕಲರ್ಸ್ ಕನ್ನಡದ ಧಾರಾವಾಹಿ ‘ರಾಮಾಚಾರಿ’ (Ramachari Serila Kannada) ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಮೌನ, ರುತ್ವಿಕ್ ಕೃಪಾಕರ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಿಟ್ಟಿಯ ಪಾತ್ರ ಕೂಡ ಜನ ಮೆಚ್ಚಿದ್ದಾರೆ. ಈ ಧಾರಾವಾಹಿಯ ಟಿಆರ್​ಪಿಯಲ್ಲಿ ಏರಿಳಿತ ಆಗುತ್ತಲೇ ಇದೆ. ಇದು ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.

ಐದನೇ ಸ್ಥಾನದಲ್ಲಿ ಈ ಬಾರಿ ಎರಡು ಧಾರಾವಾಹಿಗಳು ಸ್ಥಾನ ಪಡೆದಿವೆ. ಇತ್ತೀಚೆಗೆ ಆರಂಭ ಆಗಿರುವ ‘ಶ್ರಾವಣಿ ಸುಬ್ರಮಣ್ಯ’ ಹಾಗೂ ‘ಅಮೃತಧಾರೆ’ ಧಾರಾವಾಹಿ ಇದೆ. ಎರಡೂ ಧಾರಾವಾಹಿಗಳಿಗೆ ಈ ಬಾರಿ ಐದನೇ ಸ್ಥಾನ ಸಿಕ್ಕಿದೆ. ಮನೆಯಲ್ಲಿ ಸಿರಿವಂತಿಕೆಯ ತುಂಬಿದ್ದರೂ ಅಪ್ಪನ ಪ್ರೀತಿಗಾಗಿ ಹಾತೊರೆಯುವ ಮಗಳು ಒಂದೆಡೆಯಾದರೆ ಮನೆಯಲ್ಲಿ ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತರಾಗಿರುವ ಮಧ್ಯಮ ವರ್ಗದ ಕುಟುಂಬದ ಕಥೆಯ ಜತೆ ಎರಡು ಹೃದಯಗಳ ಕಥೆಯನ್ನು ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಚಾನೆಲ್‌ ಪ್ರೇಕ್ಷಕರ ಮುಂದಿಟ್ಟಿದೆ. ಹಿರಿಯ ಕಲಾವಿದರಾದ ಮೋಹನ್‌ ಮತ್ತು ಬಾಲರಾಜ್‌ , ಕಿರುತೆರೆಯ ಖ್ಯಾತ ಕಲಾವಿದೆಯೆರಾದ ಅಪೂರ್ವ ಮತ್ತು ಸ್ನೇಹ ಇವರು ಜೊತೆ ಯುವ ಕಲಾವಿದರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

Continue Reading
Advertisement
Amrita Pandey
ಸಿನಿಮಾ7 mins ago

Amrita Pandey: ಭೋಜ್‌ಪುರಿ ಜನಪ್ರಿಯ ನಟಿ ಅಮೃತಾ ಪಾಂಡೆ ಆತ್ಮಹತ್ಯೆ; ಸಾವಿಗೆ ಮುನ್ನ ಬರೆದ ವಾಟ್ಸಾಪ್ ಸ್ಟೇಟಸ್‌ನಲ್ಲಿ ಏನಿದೆ?

PM Narendra Modi
ಕರ್ನಾಟಕ12 mins ago

PM Narendra Modi: ಪುಕ್ಕಲ ನಾಯಕ ದೇಶ ಆಳಬಲ್ಲನೇ? ರಾಹುಲ್‌ ಗಾಂಧಿಗೆ ಮೋದಿ ಟಾಂಗ್!

Narendra Modi
Lok Sabha Election 202431 mins ago

Narendra Modi: ನಿಮ್ಮ ಸೇವೆಗೆಂದೇ ಭಗವಂತ ನನ್ನನ್ನು ಈ ಭೂಮಿಗೆ ಕಳುಹಿಸಿದ್ದಾನೆ, ಈ ಜೀವ ದೇಶಕ್ಕಾಗಿ ಎಂದ ಮೋದಿ

RCB vs GT
ಕ್ರೀಡೆ45 mins ago

RCB vs GT: ವಿಲ್​ ಜ್ಯಾಕ್ಸ್ ಅಜೇಯ ಶತಕ; ಆರ್​ಸಿಬಿಗೆ 9 ವಿಕೆಟ್​ ಭರ್ಜರಿ ಗೆಲುವು

PM Narendra Modi
ಕರ್ನಾಟಕ56 mins ago

PM Narendra Modi: ನೇಹಾ ಹಿರೇಮಠ ಹತ್ಯೆ ಆತಂಕಕಾರಿ; ಹೊಸಪೇಟೆಯಲ್ಲಿ ಕಾಂಗ್ರೆಸ್‌ಗೆ ಮೋದಿ ಚಾಟಿ!

Hassan Pen Drive Case
ಕರ್ನಾಟಕ1 hour ago

Hassan Pen Drive Case: ಪ್ರಜ್ವಲ್‌ ರೇವಣ್ಣ ವಿರುದ್ಧ ದಾಖಲಾದ ಸೆಕ್ಷನ್‌ಗಳು ಏನು ಹೇಳುತ್ತವೆ? ಆರೋಪ ಸಾಬೀತಾದ್ರೆ ಶಿಕ್ಷೆ ಏನು?

KKR vs DC
ಕ್ರಿಕೆಟ್2 hours ago

KKR vs DC: ಮೊದಲ ಸೋಲಿಗೆ ಸೇಡು ತೀರಿಸಿಕೊಂಡೀತೇ ಡೆಲ್ಲಿ?; ಕೆಕೆಆರ್​ ಎದುರಾಳಿ

Karnataka Drought Relief HDK accuses Congress government of lying says HD Kumarswamy
ರಾಜಕೀಯ2 hours ago

Karnataka Drought: ಬರ ಪರಿಹಾರ ಬಗ್ಗೆ ಸುಳ್ಳು ಹೇಳಿದ ಕಾಂಗ್ರೆಸ್‌; ಯುಪಿಎ ಕೊಟ್ಟಿದ್ದು ಅತಿ ಕಡಿಮೆ ಎಂದ ಎಚ್‌ಡಿಕೆ

Parliament Flashback
Lok Sabha Election 20242 hours ago

Parliament Flashback: ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ಮತ್ತು ಸುಷ್ಮಾ ಸ್ವರಾಜ್‌ ಮಧ್ಯೆ ನಡೆದಿತ್ತು ಐತಿಹಾಸಿಕ ಕದನ!

Hassan Pen Drive Case
ಕರ್ನಾಟಕ2 hours ago

Hassan Pen Drive Case: ಪ್ರಜ್ವಲ್‌ ಜತೆಗೆ ಎಚ್‌.ಡಿ.ರೇವಣ್ಣ ಮೇಲೂ ಎಫ್‌ಐಆರ್‌; ದೂರಿನಲ್ಲಿದೆ ಭಯಾನಕ ಡಿಟೇಲ್ಸ್‌!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Congress fears defeat over EVMs Congress will not win a single seat in Karnataka says PM Narendra Modi
Lok Sabha Election 20243 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20247 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20248 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ11 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ15 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20241 day ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ1 day ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

ಟ್ರೆಂಡಿಂಗ್‌