ಕಿರುತೆರೆ
Kannada Serials TRP: ಈ ವಾರ ಗಟ್ಟಿಮೇಳಕ್ಕೆ ಮೊದಲ ಸ್ಥಾನ; ಟಾಪ್ 5 ಸ್ಥಾನದಲ್ಲಿ ಯಾವೆಲ್ಲ ಧಾರಾವಾಹಿಗಳು ಇವೆ?
Kannada Serials TRP: ಕಳೆದ ವಾರ (ಮೇ 13-19) ಟಿಆರ್‌ಪಿ ಲಿಸ್ಟ್ ಹೊರಬಿದ್ದಿದೆ. ಹಿಂದಿನ ವಾರದಂತೆ ಈ ವಾರವೂ ಗಟ್ಟಿಮೇಳ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಎರಡನೇ ಸ್ಥಾನ ಪುಟ್ಟಕ್ಕನ ಮಕ್ಕಳು ಪಡೆದಿದೆ.
ಬೆಂಗಳೂರು: ಈ ವಾರದ ಕನ್ನಡ ಕಿರುತೆರೆಯ (Kannada Serials TRP) ಟಿಆರ್‌ಪಿ ಹೊರಬಿದ್ದಿದೆ. ಕಲರ್ಸ್ ಕನ್ನಡ ಹಾಗೂ ಜೀ ವಾಹಿನಿಯಲ್ಲಿ ಹಲವು ಹೊಸ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಕಳೆದ ವಾರ (ಮೇ 13-19) ಟಿಆರ್‌ಪಿ ಲಿಸ್ಟ್ ಹೊರಬಿದ್ದಿದೆ. ಹಿಂದಿನ ವಾರದಂತೆ ಈ ವಾರವೂ ಗಟ್ಟಿಮೇಳ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಎರಡನೇ ಸ್ಥಾನ ಪುಟ್ಟಕ್ಕನ ಮಕ್ಕಳು ಪಡೆದಿದೆ.
ಮೊದಲ ಸ್ಥಾನ ‘ಗಟ್ಟಿಮೇಳ’
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಗಟ್ಟಿಮೇಳ’ ಧಾರಾವಾಹಿ 1000 ಎಪಿಸೋಡ್ ಪೂರೈಸಿದೆ. ಇಷ್ಟಾದರೂ ತನ್ನ ಸ್ಥಾನವನ್ನು ಹಾಗೇ ಉಳಿಸಿಕೊಂಡಿದೆ. ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ಇದರಲ್ಲಿ ಇದ್ದಾರೆ. ಈ ಮಧ್ಯಮ ವರ್ಗದ ಮನೆಯ ಹೆಣ್ಣು ಮಕ್ಕಳನ್ನು ಹೇಗೆ ಪರಿಮಳಾ ಹಾಗೂ ಮಂಜುನಾಥ್ ದಂಪತಿ ಮದುವೆ ಮಾಡುತ್ತಾರೆ ಎಂಬುದು ಒನ್‌ಲೈನ್ ಸ್ಟೋರಿ.
ಎರಡನೇ ಸ್ಥಾನ ಪುಟ್ಟಕ್ಕನ ಮಕ್ಕಳು.
ಈ ಧಾರಾವಾಹಿ ಹಾಗೂ ಗಟ್ಟಿಮೇಳ ಆಗಾಗ ಪೈಪೋಟಿಗೆ ಇಳಿಯುತ್ತವೆ. ಈ ಧಾರಾವಾಹಿ ಎರಡನೇ ಸ್ಥಾನಕ್ಕೆ ಇಳಿದಿದೆ. ರಮೇಶ್ ಪಂಡಿತ್, ಉಮಾಶ್ರೀ, ಅಕ್ಷರಾ, ಸಂಜನಾ ಬುರ್ಲಿ, ಮಂಜು ಭಾಷಿಣಿ, ಹಂಸ, ಧನುಷ್, ಸೂರಜ್ ಹೊಳ್ಳ, ಪವನ್ ಕುಮಾರ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಉಮಾಶ್ರೀ ಅವರು ನಟನೆ ಮೂಲಕ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: Kannada Serials TRP: ಈ ವಾರ ಟಿಆರ್‌ಪಿಯಲ್ಲಿ ನಂಬರ್ 1 ಸ್ಥಾನ ಪಡೆದ ಧಾರಾವಾಹಿ ಯಾವುದು?
ಮೂರನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮೀ’
ಕಲರ್ಸ್ ಕನ್ನಡದ ‘ಲಕ್ಷ್ಮೀ ಬಾರಮ್ಮ’ ಹಾಗೂ ‘ಭಾಗ್ಯಲಕ್ಷ್ಮೀ’ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಇದು ಅಕ್ಕ ತಂಗಿ ಕಥೆ. ಈ ಎರಡೂ ಧಾರಾವಾಹಿಗಳು ಹಿಂದಿನ ವಾರ ಒಂದೇ ಟಿಆರ್‌ಪಿ ಪಡೆದು ಮೂರನೇ ಸ್ಥಾನದಲ್ಲಿತ್ತು. ಆದರೆ ಈ ವಾರ ಭಾಗ್ಯಲಕ್ಷ್ಮೀ ಮೂರನೇ ಸ್ಥಾನ ಪಡೆದುಕೊಂಡಿದೆ. ಸುದರ್ಶನ್ ರಂಗಪ್ರಸಾದ್, ಸುಷ್ಮಾ ಕೆ ರಾವ್, ಪದ್ಮಜಾ ರಾವ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಲಕ್ಷ್ಮೀ ಬಾರಮ್ಮ
ಕಲರ್ಸ್ ಕನ್ನಡದ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಜನಮನ್ನಣೆ ಪಡೆದಿದೆ. ಈ ಧಾರಾವಾಹಿಯನ್ನು ಜನರು ಇಷ್ಟಪಡುತ್ತಿದ್ದಾರೆ. ಟಾಪ್ ಐದರಲ್ಲಿ ಈ ಧಾರಾವಾಹಿಗೆ ನಾಲ್ಕನೇ ಸ್ಥಾನ ಇದೆ. ಶಮಂತ್ ಬ್ರೋ ಗೌಡ ಮೊದಲಾದವರು ಇದ್ದಾರೆ.
ಶ್ರೀರಸ್ತು ಶುಭಮಸ್ತು
ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿ (Shrirasthu Shubhamasthu Serial) ಧಾರಾವಾಹಿಯ ಪ್ರತಿ ಪಾತ್ರವನ್ನು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಟ್ಟಿದ್ದಾರೆ. ತುಳಸಿ ಹೆಸರಿನ ಪಾತ್ರವನ್ನು ಅವರು ಮಾಡಿದ್ದಾರೆ. ಮಾಧವ್ ಆಗಿ ಅಜಿತ್ ಹಂದೆ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಗೆ ಐದನೇ ಸ್ಥಾನ ಇದೆ.ಸುಧಾರಾಣಿ ಅವರು ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ಸೊಸೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ತುಳಸಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
South Cinema
Kollam Sudhi: ಮಲಯಾಳಂ ಖ್ಯಾತ ಕಿರುತೆರೆ ನಟ ಕಾರು ಅಪಘಾತದಲ್ಲಿ ನಿಧನ; ಕಾರು ನಜ್ಜುಗುಜ್ಜು!
ಮಲಯಾಳಂನಲ್ಲಿ ಹಾಸ್ಯ ಪಾತ್ರಗಳ ಮೂಲಕ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದ, ಸ್ಟಾರ್ ಮ್ಯಾಜಿಕ್ ಖ್ಯಾತಿಯ ಕೊಲ್ಲಂ ಸುಧಿ (Kollam Sudhi) ಕಾರು ಅಪಘಾತದಲ್ಲಿ ಜೂನ್ 5ರ ಬೆಳಗ್ಗೆ ಮೃತಪಟ್ಟಿದ್ದಾರೆ.
ಬೆಂಗಳೂರು: ಮಲಯಾಳಂನಲ್ಲಿ ಹಾಸ್ಯ ಪಾತ್ರಗಳ ಮೂಲಕ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದ, ಸ್ಟಾರ್ ಮ್ಯಾಜಿಕ್ ಖ್ಯಾತಿಯ ಕೊಲ್ಲಂ ಸುಧಿ (Kollam Sudhi) ಕಾರು ಅಪಘಾತದಲ್ಲಿ ಜೂನ್ 5ರ ಬೆಳಗ್ಗೆ ಮೃತಪಟ್ಟಿದ್ದಾರೆ. ಕೈಪಮಂಗಲದಲ್ಲಿ ಟ್ರಕ್ಗೆ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದು 39 ವರ್ಷದ ನಟ ಮೃತಪಟ್ಟಿದ್ದಾರೆ. ಇನ್ನು ಮೂವರು ಮಿಮಿಕ್ರಿ ಕಲಾವಿದರಾದ ಬಿನು ಅಡಿಮಲಿ, ಉಲ್ಲಾಸ್ ಮತ್ತು ಮಹೇಶ್ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ವರದಿಯ ಪ್ರಕಾರ, ಸುಧಿ ಮತ್ತು ಇತರ ಕಲಾವಿದರು ತಮ್ಮ ಟಿವಿ ಕಾರ್ಯಕ್ರಮದ ನಂತರ ಮನೆಗೆ ಹಿಂತಿರುಗುತ್ತಿದ್ದರು. ಸುಧಿಯವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ತಲೆಗೆ ತೀವ್ರ ಪೆಟ್ಟಾಗಿರುವ ಕಾರಣದಿಂದ ಉಳಿಸಿಕೊಳ್ಳಲಾಗಲಿಲ್ಲ ಎಂದು ವರದಿಯಾಗಿದೆ. ಟ್ರಕ್ ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.
ಮಿಮಿಕ್ರಿ ಕಲಾವಿದ ಕೊಲ್ಲಂ ಸುಧಿ ಅವರು ಈ ಹಿಂದೆ ನಟ ಜಗದೀಶ್ ಅವರ ಅನುಕರಣೆ ಮೂಲಕ ಅದೆಷ್ಟೋ ಹೃದಯಗಳನ್ನು ಗೆದ್ದಿದ್ದರು.
ಸ್ಟಾರ್ ಮ್ಯಾಜಿಕ್‌ಗೆ ಪ್ರವೇಶಿಸಿದ ನಂತರ ಮಲಯಾಳಂ ಟಿವಿ ವೀಕ್ಷಕರಲ್ಲಿ ಮನೆಮಾತಾದರು. ನಟನ ಸಾವಿಗೆ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಅವರ ಅಕಾಲಿಕ ಮರಣವು ಕುಟುಂಬದವರಿಗೆ ಹಾಗೂ ಫ್ಯಾನ್ಸ್ಗೆ ಅತೀವ ದುಃಖ ತಂದಿದೆ.
ಇದನ್ನೂ ಓದಿ: Gufi Paintal : ಮಹಾಭಾರತದ ‘ಶಕುನಿ ಮಾಮಾ’ ಇನ್ನಿಲ್ಲ
ಸ್ಟೇಜ್ ಶೋಗಳು ಮತ್ತು ಟಿವಿ ಕಾರ್ಯಮಗಳ ಜತೆಗೆ, ಸುಧಿ ಚಲನಚಿತ್ರಗಳಲ್ಲಿಯೂ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. 2015ರಲ್ಲಿ ‘ಕಾಂತಾರಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ‘ಕಟ್ಟಪ್ಪಣ್ಣ’, ‘ಆ್ಯನ್ ಇಂಟರ್ನ್ಯಾಷನಲ್ ಲೋಕಲ್ ಸ್ಟೋರಿ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಕಿರುತೆರೆ
Gufi Paintal : ಮಹಾಭಾರತದ ‘ಶಕುನಿ ಮಾಮಾ’ ಇನ್ನಿಲ್ಲ
ಬಿ ಆರ್ ಚೋಪ್ರಾ ಅವರ ಧಾರಾವಾಹಿ ಮಹಾಭಾರತದಲ್ಲಿ ʻಶಕುನಿ ಮಾಮಾʼ ಆಗಿ ಕಾಣಿಸಿಕೊಂಡಿರುವ ಹಿರಿಯ ನಟ ಗುಫಿ ಪೈಂಟಲ್ (Gufi Paintal) ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರು; 1988ರಿಂದ 1990ರವರೆಗೆ ದೂರದರ್ಶನದಲ್ಲಿ ಬರುತ್ತಿದ್ದ ಬಿ ಆರ್ ಚೋಪ್ರಾ ಅವರ ಜನಪ್ರಿಯ ಧಾರಾವಾಹಿ ಮಹಾಭಾರತದಲ್ಲಿ ʻಶಕುನಿ ಮಾಮಾʼ ಆಗಿ ಕಾಣಿಸಿಕೊಂಡಿದ್ದ ಹಿರಿಯ ನಟ ಗುಫಿ ಪೈಂಟಲ್ (Gufi Paintal) ಜೂನ್ 5ರಂದು ನಿಧನರಾಗಿದ್ದಾರೆ. ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 78 ವರ್ಷ ವಯಸ್ಸಾಗಿತ್ತು. ಜೂನ್ 5ರ ಸೋಮವಾರ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮಹಾಭಾರತದಲ್ಲಿ ʻಶಕುನಿ ಮಾಮಾʼ ಕುಳ್ಳಗಿನ ದೇಹ, ಒಂದು ಕಣ್ಣನ್ನು ಸಣ್ಣಗೆ ಮಾಡಿಕೊಂಡು ಕುಂಟುತ್ತಾ ಬರುವ ಆ ಪಾತ್ರವನ್ನು ಮರೆಯುವುದು ಅಸಾಧ್ಯವೆಂದೇ ಹೇಳಬೇಕು. ಇದೀಗ ಗುಫಿ ಪೈಂಟಲ್ ಬಾರದ ಲೋಕಕ್ಕೆ ಹೋಗಿದ್ದಾರೆ. ನಟ ಗುಫಿ ಪೈಂಟಲ್ ಅವರ ಸೋದರಳಿಯ ಹಿತೇನ್ ಪೈಂಟಲ್ ಮಾಧ್ಯಮಕ್ಕೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ “ ಗುಫಿ ಪೈಂಟಲ್ ದುರದೃಷ್ಟವಶಾತ್ ಜೂನ್ 5ರ ಬೆಳಗ್ಗೆ 9ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹೃದಯ ಮತ್ತು ಮೂತ್ರಪಿಂಡದ ಸಂಬಂಧಿತ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರುʼʼ ಎಂದು ಮಾಹಿತಿ ನೀಡಿದ್ದಾರೆ.
ಗುಫಿ ಪೈಂಟಲ್ ಅವರು ರಕ್ತದೊತ್ತಡ ಮತ್ತು ಹೃದಯ ಸಮಸ್ಯೆ ಕಾಯಿಲೆಯಿಂದ ಬಳಲುತ್ತಿದ್ದರು. ಏಳೆಂಟು ದಿನಗಳಿಂದ ಆಸ್ಪತ್ರೆಯಲ್ಲಿದ್ದರು ಎಂದು ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಇದೀಗ ಇಂದು ಸಂಜೆ 4 ಗಂಟೆಗೆ ಮುಂಬಯಿ ಉಪನಗರ ಅಂಧೇರಿಯಲ್ಲಿರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
RIP Gufi Paintal
— કૃષ્ણમ 🇮🇳 (@OsmKrishh) June 5, 2023
💐💐💐💐💐#Mahabharat #GufiPaintal pic.twitter.com/EFKCBm0dP4
ಗುಫಿ ಪೈಂಟಲ್ ಹಿಂದಿ ಚಲನಚಿತ್ರಗಳ ಹೊರತಾಗಿ, 1980ರ ದಶಕದಲ್ಲಿ ಕೆಲವು ಟಿವಿ ಧಾರಾವಾಹಿಗಳಲ್ಲಿ (Serials) ಕಾಣಿಸಿಕೊಂಡಿದ್ದರು. ನಟನೆಯ ಮೊದಲು ಎಂಜಿನಿಯರ್ ಆಗಿದ್ದರು. ಅವರು ತಮ್ಮ ವೃತ್ತಿಜೀವನವನ್ನು ಎಂಜಿನಿಯರಿಂಗ್‌ನಲ್ಲಿ ಪ್ರಾರಂಭಿಸಿದರು. 1975ರ ʻರಫೂ ಚಕ್ಕರ್ʼ ಸಿನಿಮಾ ಮೂಲಕ ಸಿನಿರಂಗಕ್ಕೆ ಪ್ರವೇಶ ಮಾಡಿದರು. ಶ್ರೀ ಚೈತನ್ಯ ಮಹಾಪ್ರಭು ಎಂಬ ಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ.
ಕಿರುತೆರೆ
Sharmitha Gowda: ಭಾನುಮತಿ ಕೊರಳಲ್ಲಿ ಹೆಬ್ಬಾವು! ಜೋಪಾನ ಅಂದ್ರು ಫ್ಯಾನ್ಸ್!
ವಿಯೆಟ್ನಾಂನ ಪ್ರೇಕ್ಷಣೀಯ ಸ್ಥಳಗಳಿಗೆ ವ ‘ಗೀತಾ’ ಧಾರಾವಾಹಿಯಲ್ಲಿ ಭಾನುಮತಿ ಪಾತ್ರವನ್ನು ನಿಭಾಯಿಸುತ್ತಿರುವವರು ನಟಿ ಶರ್ಮಿತಾ ಗೌಡ (Sharmitha Gowda) ತನ್ನ ಗೆಳತಿಯರ ಜತೆ ತೆರಳಿದ್ದರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಗೀತಾ’ ಧಾರಾವಾಹಿಯಲ್ಲಿ ಭಾನುಮತಿ ಪಾತ್ರವನ್ನು ನಿಭಾಯಿಸುತ್ತಿರುವವರು ನಟಿ ಶರ್ಮಿತಾ ಗೌಡ (Sharmitha Gowda) ತನ್ನ ಗೆಳತಿಯರ ಜತೆ ವಿಯೆಟ್ನಾಂಗೆ ತೆರಳಿದ್ದರು.
ಶರ್ಮಿತಾ ಶೇರ್ ಮಾಡಿರುವ ಪೋಟೊಗಳಲ್ಲಿ ಮೈ ಮೇಲೆ ಹೆಬ್ಬಾವು ಹಾಕಿಕೊಂಡಿದ್ದಾರೆ. ಹೆಬ್ಬಾವಿನ ಜತೆ ಇರುವ ಶರ್ಮಿತಾ ಫೋಟೊ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ.
ವಿಯೆಟ್ನಾಂನ ಪ್ರೇಕ್ಷಣೀಯ ಸ್ಥಳಗಳಲ್ಲಿ ಮಾರ್ಬಲ್ ಮೌಂಟೇನ್ ಕೂಡ ಒಂದು. ಮಾರ್ಬಲ್ ಮೌಂಟೇನ್‌ನಲ್ಲಿ ಶರ್ಮಿತಾ ಗೌಡ ಪೋಸ್ ಕೊಟ್ಟಿದ್ದಾರೆ.
‘ಗೀತಾ’ ಸೀರಿಯಲ್‌ನಲ್ಲಿ ಅತ್ತೆ ಪಾತ್ರ ಮಾಡುತ್ತಿದ್ದರೂ, ಶರ್ಮಿತಾ ಗೌಡ ಸಖತ್ ಯಂಗ್ ಆಗಿ ಕಾಣುತ್ತಾರೆ.
ಬಾ ನಾ ಹಿಲ್ಸ್‌ನಲ್ಲಿ ಶರ್ಮಿತಾ ಗೌಡ ಸ್ಟನ್ನಿಂಗ್ ಲುಕ್!
ಕಿರುತೆರೆ
Amruthadhare Kannada Serial : ʻಅಮೃತಧಾರೆʼಗೂ ಮುಂಚೆ ಅಣ್ಣ-ತಂಗಿಯಾಗಿ ನಟಿಸಿದ್ರಂತೆ ರಾಜೇಶ್-ಛಾಯಾ!
Amruthadhare Kannada Serial: ನಾಯಕ ಗೌತಮ್ ದಿವಾನ್ ಪಾತ್ರದ ರಾಜೇಶ್ ಹಾಗೂ ಛಾಯಾ ಸಿಂಗ್ ಅವರು ಭೂಮಿಕಾ ಸದಾಶಿವ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಆದರೆ ಇವರಿಬ್ಬರ ಜೋಡಿ ಕಿರುತೆರೆಗೆ ಹೊಸತೇನಲ್ಲ. ಈ ಮುಂಚೆ ಇಬ್ಬರೂ ಅಣ್ಣತಂಗಿಯಾಗಿ ನಟಿಸಿದ್ದರು. ಇದರ ಬಗ್ಗೆ ರಾಜೇಶ್ ಹೇಳಿದ್ದು ಹೀಗೆ.
ಬೆಂಗಳೂರು: ರಾಜೇಶ್ ನಟರಂಗ (Rajesh nataranga) ಹಾಗೂ ಛಾಯಾ ಸಿಂಗ್ (Chaya Singh) ನಟನೆಯ ‘ಅಮೃತಧಾರೆ’ ಧಾರಾವಾಹಿ (Amruthadhare Kannada Serial) ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಈಗಾಗಲೇ ಧಾರಾವಾಹಿಯನ್ನು ಪ್ರೇಕ್ಷಕರು ಮೆಚ್ಚು ಹೊಗಳುತ್ತಿದ್ದಾರೆ. ನಾಯಕ ಗೌತಮ್ ದಿವಾನ್ ಪಾತ್ರದ ರಾಜೇಶ್ ಹಾಗೂ ಛಾಯಾ ಸಿಂಗ್ ಅವರು ಭೂಮಿಕಾ ಸದಾಶಿವ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಆದರೆ ಇವರಿಬ್ಬರ ಜೋಡಿ ಕಿರುತೆರೆಗೆ ಹೊಸತೇನಲ್ಲ. ಈ ಮುಂಚೆ ಇಬ್ಬರೂ ಅಣ್ಣತಂಗಿಯಾಗಿ ನಟಿಸಿದ್ದರು. ಇದರ ಬಗ್ಗೆ ರಾಜೇಶ್ ಹೇಳಿದ್ದು ಹೀಗೆ.
ಇಬ್ಬರೂ ಒಟ್ಟಿಗೆ ನಟಿಸಿದ್ದು 23 ವರ್ಷಗಳ ಹಿಂದಿನ ಕಥೆ. ‘ಈಟಿವಿ ಕನ್ನಡ ಆಗತಾನೇ (2000) ಆರಂಭ ಆಗಿತ್ತು. ಆಗ ಮಧ್ಯಾಹ್ನ ಒಂದು ಧಾರಾವಾಹಿ ಪ್ರಸಾರ ಕಾಣುತ್ತಿತ್ತು. ಈ ಧಾರಾವಾಹಿಯಲ್ಲಿ ನಾನು, ವೈಶಾಲಿ ಕಾಸರವಳ್ಳಿ, ದತ್ತಣ್ಣ, ಛಾಯಾ ಮೊದಲಾದವರು ನಟಿಸಿದ್ದೆವು. ಛಾಯಾ ನನ್ನ ತಂಗಿ ಪಾತ್ರ ಮಾಡಿದ್ದರು. ಆ ಬಳಿಕ ಅವರು ಹಲವು ಸಿನಿಮಾ ಮಾಡಿದರು. ಅವರು ಅದ್ಭುತ ನಟಿ’ ಎಂದಿದ್ದಾರೆ ರಾಜೇಶ್ ನಟರಂಗ.
ನಟ ರಾಜೇಶ್ ನಟರಂಗ ಅವರಿಗೆ ಕಿರುತೆರೆ ಹೊಸದೇನಲ್ಲ. ʻತ್ರಿವೇಣಿ ಸಂಗಮʼ ʻಮುಕ್ತ’, ‘ಬದುಕು’, ‘ಶಕ್ತಿ’, ‘ಗುಪ್ತಗಾಮಿನಿʼ ಹೀಗೆ ಹಲವು ಧಾರಾವಾಹಿಗಳಲ್ಲಿ ಛಾಪು ಮೂಡಿಸಿದ್ದರು. ‘ತ್ರಿವೇಣಿ ಸಂಗಮ’ ಧಾರಾವಾಹಿಯಲ್ಲಿಯೂ ನಾಯಕ ತ್ರಿವಿಕ್ರಮ್ ಆಗಿ ರಾಜೇಶ್ ನಟರಂಗ ನಟಿಸಿದ್ದರು. ಅವರಿಗೆ ಜೋಡಿಯಾಗಿ ಸ್ಯಾಂಡಲ್‌ವುಡ್ ನಟಿ ಅನುಪ್ರಭಾಕರ್ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಗೆ ಜನಮೆಚ್ಚುಗೆ ಲಭಿಸಿತ್ತು.
ಇದನ್ನೂ ಓದಿ: Amruthadhare Kannada Serial: ಕಿರುತೆರೆಗೆ ರಾಜೇಶ್ ನಟರಂಗ ಗ್ರ್ಯಾಂಡ್ ಎಂಟ್ರಿ; ಒಲವಿನ ಅಮೃತಧಾರೆಯ ಹರಿವು ಆರಂಭ!
ಭೂಮಿಕಾ-ಗೌತಮ್ ಪ್ರಪಂಚ ಬೇರೆ ಬೇರೆ ಇದ್ದರೂ ಭಾವ ಒಂದೇ!
ಅಮೃತಧಾರೆ ಧಾರಾವಾಹಿ ʻಬಡೇ ಅಚ್ಚೇ ಲಗತೇ ಹೈʼ(Bade Acche Lagte Hain) ಹಿಂದಿ ಧಾರಾವಾಹಿಯ ರಿಮೇಕ್ ಆಗಿದೆ. ಈಗಾಗಲೇ ಪ್ರೇಕ್ಷಕರು ಮೊದಲ ಎಪಿಸೋಡ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ನಟಿ ಛಾಯಾ ಸಿಂಗ್ ಜತೆ ನಟ ರಾಜೇಶ್ ಕಾಣಿಸಿಕೊಂಡಿದ್ದಾರೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೌತಮ್ ಹಾಗೂ ಭೂಮಿಕಾ ಬದುಕು ಬೇರೆಬೇರೆ. ಗೌತಮ್ನದ್ದು ಐಷಾರಾಮಿ ಜೀವನ. ಭೂಮಿಕಾ ಮಧ್ಯಮ ವರ್ಗದ ಹುಡುಗಿ. ಗೌತಮ್ ದೊಡ್ಡ ಉದ್ಯಮಿ. ಭೂಮಿಕಾ ಟ್ಯೂಷನ್ನಲ್ಲಿ ಪಾಠ ಹೇಳಿಕೊಡುವವಳು. ಇಬ್ಬರ ಮಧ್ಯೆ ಅನೇಕ ಸಾಮ್ಯತೆ ಇದೆ. ಇವರು ಕುಟುಂಬದಲ್ಲಿ ಹಿರಿ ಮಕ್ಕಳು. ಇಬ್ಬರಿಗೂ ಮದುವೆ ಆಗಿಲ್ಲ. ಎಲ್ಲಕಿಂತ ಮುಖ್ಯವಾಗಿ ಇವರು ಕುಟುಂಬಕ್ಕೆ ಎಷ್ಟೇ ಪ್ರೀತಿ ತೋರಿಸಿದರೂ ಕುಟುಂಬ ಇವರಿಗೆ ಪ್ರೀತಿ ತೋರಿಸುತ್ತಿಲ್ಲ. ಇದೀಗ ಇವರಿಬ್ಬರು ಒಂದಾಗುತ್ತಾರಾ ಎಂಬುದೇ ಪ್ರೇಕ್ಷಕರಿಗೆ ಕುತೂಹಲವಾಗಿದೆ.
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ20 hours ago
Odisha Train Accident: ಅಪಘಾತ ನಡೆದು 51 ಗಂಟೆಯಲ್ಲೇ ಹಳಿ ಸಿದ್ಧ, ರೈಲು ಸಂಚಾರ; 36 ತಾಸು ಸ್ಥಳದಲ್ಲೇ ಇದ್ದ ಸಚಿವ
-
ಕರ್ನಾಟಕ21 hours ago
Ullal News: ಆಪ್ತನ ಸಹೋದರನ ಅಂತಿಮಯಾತ್ರೆಗೆ ಹೆಗಲುಕೊಟ್ಟ ಸ್ಪೀಕರ್ ಯು.ಟಿ. ಖಾದರ್
-
ಕರ್ನಾಟಕ20 hours ago
Shivamogga News: ಶಿಕಾರಿಪುರದಲ್ಲಿ ರಾಷ್ಟ್ರಕೂಟರ ಕಾಲದ ಪ್ರಾಚ್ಯಾವಶೇಷಗಳು ಪತ್ತೆ
-
ಕರ್ನಾಟಕ13 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ11 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕ್ರಿಕೆಟ್24 hours ago
Team India : ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸುದ್ದಿ; ಭಾರತಕ್ಕೆ ಅಫಘಾನಿಸ್ತಾನ ಕ್ರಿಕೆಟ್ ತಂಡದ ಪ್ರವಾಸ ರದ್ದು!
-
ದೇಶ24 hours ago
Bihar Bridge Collapse: ರೈಲು ದುರಂತ ಬೆನ್ನಲ್ಲೇ ಬಿಹಾರದಲ್ಲಿ ಸೇತುವೆ ಕುಸಿತ; 1,700 ಕೋಟಿ ರೂ. ಗಂಗಾ ನದಿ ಪಾಲು