Nannamma Super Star: ವೇದಿಕೆ ರೆಡಿ ಆಯ್ತು; ʻನನ್ನಮ್ಮ ಸೂಪರ್ ಸ್ಟಾರ್-3ʼ ಯಾವಾಗ? - Vistara News

ಕಿರುತೆರೆ

Nannamma Super Star: ವೇದಿಕೆ ರೆಡಿ ಆಯ್ತು; ʻನನ್ನಮ್ಮ ಸೂಪರ್ ಸ್ಟಾರ್-3ʼ ಯಾವಾಗ?

Nannamma Super Star: ‘ನನ್ನಮ್ಮ ಸೂಪರ್ ಸ್ಟಾರ್’ ಸೀಸನ್- 3ರ ಪ್ರೋಮೊ ಹೊರ ಬಂದಿದೆ. ಕಾರ್ಯಕ್ರಮ ಯಾವಾಗಿನಿಂದ ಪ್ರಸಾರವಾಗುತ್ತದೆ ಎಂಬುದನ್ನು ವಾಹಿನಿ ಬಹಿರಂಗಪಡಿಸಿಲ್ಲ. ಇಷ್ಟರಲ್ಲೇ ‘ನನ್ನಮ್ಮ ಸೂಪರ್ ಸ್ಟಾರ್’ ಶೋ ಮಕ್ಕಳೊಂದಿಗೆ ತಾಯಂದಿರಿರುವ ವೀಕ್ಷಕರನ್ನು ವೀಕೆಂಡ್‌ಗಳಲ್ಲಿ ರಂಜಿಸಲು ಬರುತ್ತಿದ್ದಾರೆ.

VISTARANEWS.COM


on

Nannamma Super Star season 3 promo Out
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ʻನನ್ನಮ್ಮ ಸೂಪರ್ ಸ್ಟಾರ್ʼ (Nannamma Super Star) ಮತ್ತೆ ಬರುತ್ತಿದೆ. ಮಕ್ಕಳ ಮುದ್ದು ಮಾತುಗಳು , ಅವರ ಆಟಗಳು ನೋಡುರನ್ನು ರಂಜಿಸುತ್ತಲೇ ಬರುತ್ತಿದೆ. ಎರಡು ಸೀಸನ್‌ ಪ್ರಸಾರವಾದ ಬಳಿಕ ಈಗ ಮೂರನೇ ಸೀಸನ್‌ ಶುರುವಾಗುತ್ತಿದೆ. ಸದ್ದಿಲ್ಲದೇ ಕಲರ್ಸ್‌ ಕನ್ನಡ ಮೂರನೇ ಸೀಸನ್‌ ಬರುತ್ತಿದೆ ಎಂದು ಪ್ರೋಮೊ ಹಂಚಿಕೊಂಡಿದೆ. ಮೊದಲ ಸೀಸನ್‍ನಲ್ಲಿ ವನ್ಷಿಕಾ ಮತ್ತು ಯಶಸ್ವಿನಿ ಭಾಗವಹಿಸಿದ್ದರು. ವಿಜೇತರಾಗಿ ಹೊರಹೊಮ್ಮಿದ್ದರು. ಎರಡನೇ ಸೀಸನ್‌ನಲ್ಲಿ ಗ್ರಾಮೀಣ ಭಾಗದ ಪ್ರತಿಭೆಗೆ ಅಂದರೆ ಚೈತ್ರಾ ಮತ್ತು ಅವರ ಅವಳಿ ಮಕ್ಕಳು ಚಿರಂತ್-ಚಿನ್ಮಯ್ ವಿಜೇತರಾಗಿದ್ದರು.

ಎರಡನೇ ಸೀಸನ್‌ನಲ್ಲಿ ನಮ್ಮಮ್ಮ ಸೂಪರ್‌ ಸ್ಟಾರ್ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಅಮ್ಮ ಮಕ್ಕಳ ಜತೆಗೆ ಕಿರುತೆರೆಯ ಚಿನಕುರುಳಿ ಎಂತಲೇ ಖ್ಯಾತಿ ಪಡೆದ ವನ್ಷಿಕಾ ನಿರೂಪಕಿಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೇ ಎರಡನೇ ಸೀಸನ್‌ನಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ಶೋ ಬಹಳ ವಿಶೇಷವಾಗಿತ್ತು. ಏಕೆಂದರೆ ಶೋನಲ್ಲಿ ಸಾಮಾನ್ಯರಿಗೂ ಅವಕಾಶ ನೀಡಲಾಗಿತ್ತು. `ನನ್ನಮ್ಮ ಸೂಪರ್ ಸ್ಟಾರ್’ ಸೀಸನ್ 2 ಗ್ರ್ಯಾಂಡ್ ಫಿನಾಲೆಗೆ 6 ಜೋಡಿಗಳು ಸೆಲೆಕ್ಟ್ ಆಗಿದ್ದರು. ಅದರಲ್ಲಿ ಎಲ್ಲರನ್ನೂ ಹಿಂದಿಕ್ಕಿ ಚೈತ್ರಾ ನನ್ನಮ್ಮ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದರು. ನಟಿ ತಾರಾ, ಅನು ಪ್ರಭಾಕರ್ , ರವಿಚಂದ್ರನ್‌ ಈ ಶೋನ ನಿರೂಪಕರು, ಅನುಪಮಾ ಗೌಡ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ:Nannamma Super Star: ʻನಮ್ಮಮ್ಮ ಸೂಪರ್‌ ಸ್ಟಾರ್‌ʼ ವಿನ್ನರ್‌ ಚೈತ್ರಾ- ಅವಳಿ ಮಕ್ಕಳು: ಗ್ರಾಮೀಣ ಭಾಗದ ಪ್ರತಿಭೆಗೆ ಗೌರವ ಎಂದ ಪ್ರೇಕ್ಷಕರು!

ಇದೀಗ ‘ನನ್ನಮ್ಮ ಸೂಪರ್ ಸ್ಟಾರ್’ ಸೀಸನ್- 3ರ ಪ್ರೋಮೊ ಹೊರ ಬಂದಿದೆ. ಕಾರ್ಯಕ್ರಮ ಯಾವಾಗಿನಿಂದ ಪ್ರಸಾರವಾಗುತ್ತದೆ ಎಂಬುದನ್ನು ವಾಹಿನಿ ಬಹಿರಂಗಪಡಿಸಿಲ್ಲ. ಇಷ್ಟರಲ್ಲೇ ‘ನನ್ನಮ್ಮ ಸೂಪರ್ ಸ್ಟಾರ್’ ಶೋ ಮಕ್ಕಳೊಂದಿಗೆ ತಾಯಂದಿರಿರುವ ವೀಕ್ಷಕರನ್ನು ವೀಕೆಂಡ್‌ಗಳಲ್ಲಿ ರಂಜಿಸಲು ಬರುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Sathya serial kannada: ಶೀಘ್ರದಲ್ಲೇ ಅಂತ್ಯ ಹಾಡಲಿದೆಯಂತೆ ʻಸತ್ಯʼ ಧಾರಾವಾಹಿ; ಬರ್ತಿದೆ ಹೊಸ ಸೀರಿಯಲ್‌!

Sathya serial kannada: ಸತ್ಯ ಧಾರಾವಾಹಿಯಲ್ಲಿ  ಸತ್ಯ ಪೊಲೀಸ್ ಅಧಿಕಾರಿಯಾಗಿ ಒಂದಲ್ಲ ಒಂದು ಕೇಸ್‌ಗಳನ್ನು ಪರಿಹಾರ ಮಾಡುತ್ತಾಳೆ. , ಕಾರ್ತಿಕ್‌ನನ್ನು ಮದುವೆಯಾಗಬೇಕಿದ್ದ ಸತ್ಯಾಳ ಅಕ್ಕ ದಿವ್ಯಾ ಮದುವೆ ದಿನ ಬೇರೊಬ್ಬನ ಜತೆ ಓಡಿ ಹೋದ ಕಾರಣ, ತಾನೇ ಮದುವೆಯಾಗುವಂತಹ ಸ್ಥಿತಿ ನಿರ್ಮಾಣ ಆಗಿ, ಕೊನೆಗೆ ಮದುವೆಯಾಗಿ, ಗಂಡ, ಅತ್ತೆ ಹಾಗೂ ಮನೆಯವರೆಲ್ಲರ ತಾತ್ಸಾರಕ್ಕೆ ಗುರಿಯಾಗಿ ಎಲ್ಲವನ್ನೂ ಎದುರಿಸಿ, ಒಳ್ಳೆಯ ಗೃಹಿಣಿಯಾಗಿ ಬಾಳುತ್ತಾಳೆ. ಇದೀಗ ಸತ್ಯ ಗರ್ಭಿಣಿ.

VISTARANEWS.COM


on

Sathya serial kannada end soon A new serial has arrived
Koo

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸತ್ಯ ಧಾರಾವಾಹಿ ಇನ್ನೇನು ಕೊನೆಯಾಗಲಿದೆ ಎನ್ನುವ ಸುದ್ದಿ ಬಂದಿದೆ.

ಈಗಾಗಲೇ ‘ಅಣ್ಣಯ್ಯ’ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಲಿದ್ದು, ಆದಷ್ಟು ಬೇಗ ಹೊಸ ಧಾರಾವಾಹಿ ಪ್ರಸಾರ ಆಗಲಿದೆ. ‘ಸತ್ಯ’ ಧಾರಾವಾಹಿಯು ಅಂತ್ಯ ಆಗಲಿದೆ ಎನ್ನಲಾಗಿದೆ.

2020 ಡಿಸೆಂಬರ್‌ನಿಂದ ಈ ಧಾರಾವಾಹಿ ಪ್ರಸಾರ ಆಗುತ್ತಿದ್ದು, ಆರಂಭದ ವಾರಗಳಲ್ಲಿ ಈ ಧಾರಾವಾಹಿ ಟಾಪ್ 5 ಸ್ಥಾನದಲ್ಲಿತ್ತು. ಇತ್ತೀಚೆಗೆ ಈ ಧಾರಾವಾಹಿಯ ಟಿಆರ್‌ಪಿ ಕಡಿಮೆ ಆಗಿತ್ತು.

ಇದನ್ನೂ ಓದಿ: Kannada New Movie: ಭಾರಿ ಮೊತ್ತಕ್ಕೆ ಮಾರಾಟವಾಯ್ತು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಸಿನಿಮಾ ಆಡಿಯೊ ಹಕ್ಕು

 ಗೌತಮಿ ಜಾದವ್ ಅಥವಾ ಸಾಗರ್ ಬಿಳಿ ಗೌಡ ಬಿಗ್‌ಬಾಸ್‌ಗೆ ತೆರಳಲಿದ್ದಾರೆ ಹಾಗಾಗಿ ಸೀರಿಯಲ್ ಕಥೆ ಮುಗಿಸಲಿದ್ದಾರೆ ಎಂದು ಸಹ ಹೇಳಿದ್ದಾರೆ. ಆದರೆ ಯಾವುದೂ ಅಧಿಕೃತವಾಗಿ ಹೇಳಿಕೆ ಬಂದಿಲ್ಲ. 

ಸತ್ಯ ಧಾರಾವಾಹಿಯಲ್ಲಿ  ಸತ್ಯ ಪೊಲೀಸ್ ಅಧಿಕಾರಿಯಾಗಿ ಒಂದಲ್ಲ ಒಂದು ಕೇಸ್‌ಗಳನ್ನು ಪರಿಹಾರ ಮಾಡುತ್ತಾಳೆ. , ಕಾರ್ತಿಕ್‌ನನ್ನು ಮದುವೆಯಾಗಬೇಕಿದ್ದ ಸತ್ಯಾಳ ಅಕ್ಕ ದಿವ್ಯಾ ಮದುವೆ ದಿನ ಬೇರೊಬ್ಬನ ಜತೆ ಓಡಿ ಹೋದ ಕಾರಣ, ತಾನೇ ಮದುವೆಯಾಗುವಂತಹ ಸ್ಥಿತಿ ನಿರ್ಮಾಣ ಆಗಿ, ಕೊನೆಗೆ ಮದುವೆಯಾಗಿ, ಗಂಡ, ಅತ್ತೆ ಹಾಗೂ ಮನೆಯವರೆಲ್ಲರ ತಾತ್ಸಾರಕ್ಕೆ ಗುರಿಯಾಗಿ ಎಲ್ಲವನ್ನೂ ಎದುರಿಸಿ, ಒಳ್ಳೆಯ ಗೃಹಿಣಿಯಾಗಿ ಬಾಳುತ್ತಾಳೆ. ಇದೀಗ ಸತ್ಯ ಗರ್ಭಿಣಿ.

 ‘ಸಿಂಧುರಾ’ ಧಾರಾವಾಹಿಯ ಅಧಿಕೃತ ರಿಮೇಕ್ ಇದಾಗಿದೆ. ಇನ್ನು ಈ ಧಾರಾವಾಹಿಯು ಆ ನಂತರದಲ್ಲಿ 6 ಭಾಷೆಗಳಲ್ಲಿ ರಿಮೇಕ್ ಆಗಿದೆ. 

ಗೌತಮಿ ಜಾಧವ್, ಸಾಗರ್ ಬಿಳಿಗೌಡ, ರಶ್ಮಿ, ಶಾಲಿನಿ, ಮಾಲತಿ ಸರ್‌ದೇಶಪಾಂಡೆ, ಪ್ರಿಯಾಂಕಾ ಶಿವಣ್ಣ, ಗಿರಿಜಾ ಲೋಕೇಶ್, ಶ್ರೀನಿವಾಸ್ ಪ್ರಭು ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಸ್ವಪ್ನಾ ಕೃಷ್ಣ ಅವರು ಈ ಧಾರಾವಾಹಿಯ ನಿರ್ದೇಶನ, ನಿರ್ಮಾಣ ಮಾಡಿದ್ದಾರೆ.  ಸತ್ಯಾಗೆ ಮಗುವಾಗುವ ಮೂಲಕ ಸೀರಿಯಲ್‌ಗೆ ಹ್ಯಾಪಿ ಎಂಡಿಂಗ್ ಕೊಡುತ್ತಾರೆ ಎಂದು ವರದಿಯಾಗಿದೆ.

Continue Reading

ಸ್ಯಾಂಡಲ್ ವುಡ್

Actor Darshan: ರೇಣುಕಾಸ್ವಾಮಿ ಕುಟುಂಬಕ್ಕೆ ಹಣ ಸಹಾಯ ಮಾಡಿ, ದರ್ಶನ್‌ ಪರವಾಗಿ ವಾದ ಮಾಡಿದ ನಟ ಗಣೇಶ್ ರಾವ್!

Actor Darshan: ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ರಾಜಕಾರಣಿ ಶಂಕರೇಗೌಡ ಪಾತ್ರದಲ್ಲಿ ನಟ ಗಣೇಶ್ ರಾವ್ ರೇಣುಕಾಸ್ವಾಮಿ ಅವರ ಮನೆಗೆ ಭೇಟಿ ನೀಡಿ ದರ್ಶನ್ ಪರವಾಗಿ ಮಾತನಾಡಿದರು. ಜತೆಗೆ ರೇಣುಕಾಸ್ವಾಮಿ ಕುಟುಂಬಕ್ಕೆ ಗಣೇಶ್ ರಾವ್ ಹಣ ಸಹಾಯ ಮಾಡಿದರು.ಮೃತ ರೇಣುಕಾಸ್ವಾಮಿ ಅವರ ಮನೆಗೆ ನಟ ಗಣೇಶ್ ರಾವ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ರೇಣುಕಾಸ್ವಾಮಿ ಅವರ ಮನೆಗೆ ಭೇಟಿ ನೀಡಿದ ನಟ ಗಣೇಶ್ ರಾವ್‌, ರೇಣುಕಾಸ್ವಾಮಿ ಅವರ ಕುಟುಂಬಸ್ಥರ ಮುಂದೆಯೇ ದರ್ಶನ್ ಪರವಾಗಿ ಮಾತನಾಡಿದರು.

VISTARANEWS.COM


on

Actor Darshan Ganesh Rao Visits Renukaswamy Family and spport In Chitradurga
Koo

ಬೆಂಗಳೂರುಚಾಲೆಂಜಿಂಗ್ ಸ್ಟಾರ್‌ ದರ್ಶನ್ (Actor Darshan) ಜೈಲು ಸೇರಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನು ಹಲವು ನಾಯಕರು, ಸೆಲೆಬ್ರಿಟಿಗಳು ರೇಣುಕಾ ಸ್ವಾಮಿ ಕುಟುಂಬಕ್ಕೆ ಸಹಾಯವನ್ನು ಮಾಡಿದ್ದಾರೆ. ನಿನ್ನೆಯಷ್ಟೇ ವಿನೋದ್‌ ರಾಜ್‌ ಅವರು ಚಿತ್ರದುರ್ಗಕ್ಕೆ ಹೋಗಿ ಸಂತ್ರಸ್ತ ರೇಣುಕಾ ಸ್ವಾಮಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳುವ ಜತೆಗೆ 1 ಲಕ್ಷ ರೂಪಾಯಿ ಹಣ ಸಹಾಯವನ್ನು ಸಹ ಮಾಡಿದ್ದರು. ಇದೀಗ   ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ರಾಜಕಾರಣಿ ಶಂಕರೇಗೌಡ ಪಾತ್ರದಲ್ಲಿ ನಟ ಗಣೇಶ್ ರಾವ್ (Ganesh Rao) ರೇಣುಕಾಸ್ವಾಮಿ ಅವರ ಮನೆಗೆ ಭೇಟಿ ನೀಡಿ ದರ್ಶನ್ ಪರವಾಗಿ ಮಾತನಾಡಿದರು. ಜತೆಗೆ ರೇಣುಕಾಸ್ವಾಮಿ ಕುಟುಂಬಕ್ಕೆ ಗಣೇಶ್ ರಾವ್ ಹಣ ಸಹಾಯ ಮಾಡಿದರು.

ಮೃತ ರೇಣುಕಾಸ್ವಾಮಿ ಅವರ ಮನೆಗೆ ನಟ ಗಣೇಶ್ ರಾವ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ರೇಣುಕಾಸ್ವಾಮಿ ಅವರ ಮನೆಗೆ ಭೇಟಿ ನೀಡಿದ ನಟ ಗಣೇಶ್ ರಾವ್‌, ರೇಣುಕಾಸ್ವಾಮಿ ಅವರ ಕುಟುಂಬಸ್ಥರ ಮುಂದೆಯೇ ದರ್ಶನ್ ಪರವಾಗಿ ಮಾತನಾಡಿದರು.

ಗಣೇಶ್ ರಾವ್ ಮಾತನಾಡಿ ʻʻನಾವು ಯಾರನ್ನೂ ಸಮರ್ಥಿಸಿಕೊಳ್ಳುತ್ತಿಲ್ಲ. ದರ್ಶನ್‌ ಜತೆ ನಾವು 13 ಸಿನಿಮಾಗಳನ್ನು ಮಾಡಿದ್ದೇವೆ. ಆ ಮನುಷ್ಯ ಅಷ್ಟು ಕ್ರೂರಿ ಅಲ್ಲ. ಸೆಲೆಬ್ರಿಟಿ ಆದ ಕಾರಣ ಹೆಸರು ಮುನ್ನಲೆಗೆ ಬರುತ್ತಿದೆ. ನನಗೆ ಆತ್ಮ ಸಾಕ್ಷಿ ಹೇಳುತ್ತ ಇದೆ. ದರ್ಶನ್‌ ಅವರು ಆ ಮಟ್ಟಕ್ಕೆ ಇಳಿಯಲು ಸಾಧ್ಯವಿಲ್ಲ. ಅವರ ಜತೆ ಇದ್ದ ಸಂಗಡಿಗರು ಹೀಗೆ ಮಾಡಿದ್ದರಿಂದ ಅಪವಾಧ ಅವರ ಮೇಲೆ ಹೀಗೆ ಬಂದಿದೆ. ಇಲ್ಲಿ ಬಿಂಬಿಸುತ್ತಿರುವುದು ದರ್ಶನ್‌ ಅವರನ್ನು. ನ್ಯಾಯಾಲಕ್ಕೆ ಮುಂಚೆನೆ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಬಿಟ್ಟಿದ್ದಾರೆ. ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲಿ. ಆದರೆ ತಪ್ಪು ಮಾಡದೇನೇ ಅಪವಾಧ ಹೊರಿಸುವುದು ಸರಿಯಲ್ಲ. ಕೆಲವರು ಅವರೇ ಕಣ್ಣಾರೆ ನೋಡಿರೋ ತರ ಮಾತನಾಡುತ್ತಾರೆ. ಈ ದುರ್ಘಟನೆ ನಡೆಯಬಾರದಿತ್ತು. ರೇಣುಕಾಸ್ವಾಮಿ ಮನೆಯವರು ನೋವು ಅನುಭವಿಸುತ್ತಿದ್ದಾರೆ. ಅವರಿಗೆ ದುಃಖ ಭರಿಸುವ ಶಕ್ತಿಯನ್ನ ದೇವರು ಕೊಡಲಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಮಾನವೀಯತೆ ದೃಷ್ಟಿಯಿಂದ ನೊಂದಿರುವ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ವಿʼʼ ಎಂದರು.

ಇದನ್ನೂ ಓದಿ: Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

ಇದಕ್ಕೂ ಮುಂಚೆ ಮುಂಚೆ ಚಿತ್ರದುರ್ಗಕ್ಕೆ ತೆರಳಿದ ನಟ ವಿನೋದ್ ರಾಜ್ ಮಾತನಾಡಿ, ‘ಮನೆಗೆ ಆಧಾರ ಸ್ತಂಭವಾದ ಮಗನನ್ನು ಕಳೆದುಕೊಂಡಿದ್ದಾರೆ. ಕುಟುಂಬ ಪರಿತಪಿಸುತ್ತಿರುವ ಸ್ಥಿತಿ ಕಂಡು ಕರಳುಕಿತ್ತು ಬರುತ್ತಿದೆ. ಜೀವನದಲ್ಲಿ ಮನುಷ್ಯ ಹೇಗೆ ಬಾಳಬೇಕು, ಹೇಗೆ ನಡೆದುಕೊಳ್ಳಬೇಕು, ಯಾವ ದಿಕ್ಕಿನಲ್ಲಿ ಮಾನವೀಯತೆ, ಮನುಷತ್ವ ಸಾಗುತ್ತಿದೆ, ಮನುಷ್ಯತ್ವ ಇದೆಯಾ ಎನ್ನುವುದು ನಮ್ಮನ್ನೇ ಮುಟ್ಟಿಕೊಂಡು ನೋಡುವಂತಹ ಕಾಲ ಬಂದಿದೆ. ಜೀವನ ಇಡೀ ಸಂಪದಾನೆ, ಹೆಸರು ಮಾಡುವುದು ಅಲ್ಲವೇ ಅಲ್ಲ. ಜೀವನ ಇಡಿ ಜೀವಗಳ ಬಗ್ಗೆ ಕಾಳಜಿ ತೆಗೆದುಕೊಂಡು ಬದುಕಬೇಕು. ಪ್ರತಿಯೊಬ್ಬರ ಜೀವನದಲ್ಲೂ ಜೀವಗಳಿವೆ. ಜೀವರಾಶಿಗಳನ್ನ ಭಗವಂತ ತಂದೆ ತಾಯಿ ರೂಪದಲ್ಲಿ ಸೃಷ್ಟಿ ಮಾಡಿರುತ್ತಾನೆ. ಅವರೂ ಕೂಡ ಚೆನ್ನಾಗಿ ಇರಬೇಕು ಎಂದು ಬೆಳೆಸುತ್ತಾರೆ. ಎಲ್ಲೋ ಒಂದು ಅತಾಚುರ್ಯ, ಕೆಟ್ಟದ್ದು ನಡೆಯುತ್ತೆ. ಕೆಟ್ಟದ್ದು ಜಾಸ್ತಿ ಆದಾಗ ಇಂತಹ ಪರಿಸ್ಥಿತಿ ಬರುತ್ತದೆ. ಆದರೆ ಇದು ಹೆಚ್ಚಾಗಬಾರದು. ಸಮಾಜದಲ್ಲಿ ಉನ್ನತವಾದ ಸ್ಥಾನ ಎತ್ತರದ ಮಟ್ಟದಲ್ಲಿರುವವರು ವಿವೇಕ ಮರೆಯಬಾರದು, ಅಚಾತುರ್ಯ‌ ನಡೆಯುತ್ತವೆ, ಮುಂದಿನ ತಲೆಮಾರುಗಳು ಹೀಗೆ ಆಗದಂತೆ ಎಚ್ಚರವಹಿಸಬೇಕು, ಮಾಧ್ಯಮ ತಿದ್ದಿಬುದ್ದಿ ಹೇಳಿದಂತೆ ಅನುಸರಿಸಿಕೊಂಡು ಸಾಗಬೇಕು’ ಎಂದು ವಿನೋದ್ ರಾಜ್​ಕುಮಾರ್ ಹೇಳಿದ್ದರು. .

Continue Reading

ಬಿಗ್ ಬಾಸ್

Drone Prathap: ನುಡಿದಂತೆ ನಡೆದ ‘ಬಿಗ್ ಬಾಸ್’ ಡ್ರೋನ್ ಪ್ರತಾಪ್; ಸ್ವಂತ ಹಣದಿಂದ ವೃದ್ಧೆಗೆ ಕಣ್ಣು ಆಪರೇಷನ್ !

Drone Prathap: , ತಾನು ಬಿಗ್​ಬಾಸ್​ ಗೆದ್ದರೆ ಬರುವ ಹಣ, ಇನ್ನಿತರ ಉಡುಗೊರೆಗಳನ್ನು ಅರ್ಹರಿಗೆ ದಾನ ಮಾಡುವುದಾಗಿ ಹೇಳಿದ್ದರು. ರನ್ನರ್ ಅಪ್ ಆಗಿದ್ದ ಪ್ರತಾಪ್​ಗೆ 10 ಲಕ್ಷ ರೂ. ಬಹುಮಾನದ ಜತೆಗೆ ಒಂದು ಎಲೆಕ್ಟ್ರಿಕ್ ಸ್ಕೂಟರ್‌ ಉಡುಗೊರೆಯಾಗಿ ನೀಡಲಾಗಿತ್ತು. ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಪ್ರತಾಪ್ ಅಗತ್ಯವಿರುವ ಯುವಕನೊಬ್ಬನಿಗೆ ದಾನ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಆರ್ಥಿಕವಾಗಿ ಹಿಂದುಳಿದಿದ್ದು, ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡುವೆ ಎಂದು ಡ್ರೋನ್ ಪ್ರತಾಪ್ ಅವರು ಹೇಳಿದ್ದರು. ಅದರಂತೆ ಅವರು ನಡೆದುಕೊಂಡಿದ್ದಾರೆ.

VISTARANEWS.COM


on

Drone Prathap Eye surgery for an old woman with her own money
Koo

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10 (Bigboss kannada season 10)ರ ಪ್ರಬಲ ಸ್ಪರ್ಧಿಯಾಗಿದ್ದ ಡ್ರೋನ್‌ ಪ್ರತಾಪ್‌ (Drone Prathap) ರನ್ನರ್‌ ಅಪ್‌ ಆಗಿ ಹೊರ ಹೊಮ್ಮಿದ್ದರು. ಬಿಗ್​ಬಾಸ್ ವೇದಿಕೆ ಮೇಲೆ ಮಾತನಾಡಿದ್ದ ಪ್ರತಾಪ್, ತಾನು ಬಿಗ್​ಬಾಸ್​ ಗೆದ್ದರೆ ಬರುವ ಹಣ, ಇನ್ನಿತರ ಉಡುಗೊರೆಗಳನ್ನು ಅರ್ಹರಿಗೆ ದಾನ ಮಾಡುವುದಾಗಿ ಹೇಳಿದ್ದರು. ರನ್ನರ್ ಅಪ್ ಆಗಿದ್ದ ಪ್ರತಾಪ್​ಗೆ 10 ಲಕ್ಷ ರೂ. ಬಹುಮಾನದ ಜತೆಗೆ ಒಂದು ಎಲೆಕ್ಟ್ರಿಕ್ ಸ್ಕೂಟರ್‌ ಉಡುಗೊರೆಯಾಗಿ ನೀಡಲಾಗಿತ್ತು. ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಪ್ರತಾಪ್ ಅಗತ್ಯವಿರುವ ಯುವಕನೊಬ್ಬನಿಗೆ ದಾನ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಆರ್ಥಿಕವಾಗಿ ಹಿಂದುಳಿದಿದ್ದು, ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡುವೆ ಎಂದು ಡ್ರೋನ್ ಪ್ರತಾಪ್ ಅವರು ಹೇಳಿದ್ದರು. ಅದರಂತೆ ಅವರು ನಡೆದುಕೊಂಡಿದ್ದಾರೆ. ಅಜ್ಜಿಯೋರ್ವರಿಗೆ ಆಪರೇಶನ್ ಮಾಡಿಸಿದ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಮುಂಚೆ ತಮ್ಮ ಹುಟ್ಟುಹಬ್ಬದ ಬಗ್ಗೆ ಮಾತನಾಡಿ ತಾವು ಮಾಡಲು ಹೊರಟಿರುವ ಸಮಾಜ ಸೇವಾ ಕಾರ್ಯದ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದರು. ಡ್ರೋನ್‌ ಪ್ರತಾಪ್‌ ಇನ್‌ಸ್ಟಾದಲ್ಲಿ ವಿಡಿಯೊ ಪೋಸ್ಟ್‌ ಮಾಡಿ ʻʻಎಲ್ಲರಿಗೂ ನಮಸ್ಕಾರಗಳು. ಡಾ. ರಾಜ್‌ಕುಮಾರ್‌ ಅವರು ಹೇಳ್ತಾರೆ. ನೇತ್ರದಾನ ಮಹಾದಾನ ಎಂದು. ಮುಂಬರುವ ಜೂನ್‌ 11ಕ್ಕೆ ನನ್ನ ಹುಟ್ಟು ಹಬ್ಬ ಇದೆ ಸ್ನೇಹಿತರೆ. ನನಗೆ ತುಂಬ ಕುತೂಹಲ ಇದೆ. ನನ್ನ ಹುಟ್ಟು ಹಬ್ಬವನ್ನು ಈ ಬಾರಿ ವಿಶೇಷವಾಗಿ ಆಚರಿಸಿಸಬೇಕು ಎಂದು ನಿರ್ಧಾರ ಮಾಡಿದ್ದೇನೆ. ಹಾಗಾಗಿ ಯಾರಿಗಾದರೂ ಬಡವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಬೇಕು ಎಂದು ತೀರ್ಮಾನ ಮಾಡಿದ್ದೇನೆ.  ಯಾರಾದರೂ ಬಡವರಿದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಹಣ ಭರಿಸಲು ಸಾಧ್ಯವಾಗದೇ ಇರುವವರು ಇದ್ದರೆ ದಯವಿಟ್ಟು ನಮಗೆ ತಿಳಿಸಿ. ನಮಗೆ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಕಳಿಸಿ ಅಥವಾ ಕಮೆಂಟ್ ಸೆಕ್ಷನ್​ನಲ್ಲಿ ಅವರನ್ನು ಮೆನ್ಷನ್ ಮಾಡಿ, ನಾವು ಅಗತ್ಯವಿರುವ ಐದು ಮಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸುತ್ತೇವೆ’ ಎಂದಿದ್ದರು.

ಅದರಂತೆ ಇಬ್ಬರು ಮಕ್ಕಳಿದ್ದರೂ ಕೂಡ ಗುಡಿಸಿಲಿನಲ್ಲಿ ಇದ್ದುಕೊಂಡು ವಾಸ ಮಾಡುತ್ತಿದ್ದ ಬಡ ಅಜ್ಜಿಯ ಕಣ್ಣಿನ ಆಪರೇಶನ್ ಮಾಡಿಸಿದ್ದಾರೆ. ಆ ಅಜ್ಜಿಯು ಪ್ರತಾಪ್ ಅವರನ್ನು ಹರಿಸಿದ್ದು, ನನಗೆ ಈಗ ಸರಿಯಾಗಿ ಕಣ್ಣು ಕಾಣುತ್ತಿದೆ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಡ್ರೋನ್ ಪ್ರತಾಪ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ಇಷ್ಟುದಿನ ನನಗೆ ಒಬ್ಬ ಮೊಮ್ಮಗ ಇದ್ದನು, ಈಗ ಇನ್ನೊಬ್ಬ ಮೊಮ್ಮಗನಾಗಿ ನೀನು ಇದ್ದೀಯಾ. ನನಗೆ ನಿಜವಾಗಿಯೂ ಖುಷಿಯಾಗಿದೆ, ನಿನಗೆ ದೇವರು ಆಯುಷ್ಯ, ಆರೋಗ್ಯ ಕೊಟ್ಟು ಒಳ್ಳೆಯದನ್ನು ಮಾಡಲಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

ಈ ಎಲ್ಲದಕ್ಕೂ ಮುಂಚೆ ಮೇ 13ರಂದು ಸಂಗೀತಾ ಶೃಂಗೇರಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೀಗಾಗಿ ಡ್ರೋನ್‌ ಪ್ರತಾಪ್‌ ತಮ್ಮ ಮೆಚ್ಚಿನ ದೀದಿ ಸಂಗೀತಾ ಅವರಿಗೆ ​ ವಿಶೇಷ ಗಿಫ್ಟ್​ ನೀಡಿದ್ದರು. ಹುಟ್ಟುಹಬ್ಬದ ಸಂಭ್ರಮದಲ್ಲಿ ನೀತು ವನಜಾಕ್ಷಿ, ಡ್ರೋನ್ ಪ್ರತಾಪ್, ಬುಲೆಟ್ ರಕ್ಷಕ್ ಕೂಡ ಸಾಕ್ಷಿಯಾಗಿದ್ದರು.

Continue Reading

ಸಿನಿಮಾ

Soniya Bansal: ಪ್ರಶಸ್ತಿ ಸಮಾರಂಭದ ವೇಳೆ ಖ್ಯಾತ ʻಬಿಗ್ ಬಾಸ್ʼ ಸ್ಪರ್ಧಿಗೆ ಪ್ಯಾನಿಕ್ ಅಟ್ಯಾಕ್‌; ಆಸ್ಪತ್ರೆಗೆ ದಾಖಲು

Soniya Bansal: ಜನಪ್ರಿಯ ರಿಯಾಲಿಟಿ ಶೋ, ಬಿಗ್ ಬಾಸ್‌ನ 17 ನೇ ಸೀಸನ್‌ನಲ್ಲಿ ಕಾಣಿಸಿಕೊಂಡಾಗ ಸೋನಿಯಾ ಬನ್ಸಾಲ್ ಸಾಕಷ್ಟು ಫೇಮ್‌ ಪಡೆದರು. ಆ ಸೀಸನ್‌ನಲ್ಲಿ ಹಾಸ್ಯನಟ ಮುನಾವರ್ ಫರೂಕಿ ಗೆದ್ದರು ಮತ್ತು ಅಭಿಷೇಕ್ ಕುಮಾರ್ ರನ್ನರ್ ಅಪ್ ಆಗಿದ್ದರು. ಮೂಲಗಳ ಪ್ರಕಾರ ನಟಿ, ಕಳೆದ ನಾಲ್ಕು ತಿಂಗಳಿನಿಂದ ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ನಟಿ ಮಾನಸಿಕ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದರೂ ಎಂದೂ ಹೇಳಲಾಗುತ್ತಿದೆ.

VISTARANEWS.COM


on

Soniya Bansal Suffers Panic Attack Bigg Boss 17 Fame Hospitalised
Koo

ಬೆಂಗಳೂರು: ಕಿರುತೆರೆ ನಟಿ, ಹಿಂದಿ ಬಿಗ್ ಬಾಸ್ 17 ರ ಸ್ಪರ್ಧಿ ಸೋನಿಯಾ ಬನ್ಸಾಲ್ ಅವರು (Soniya Bansal) ಜುಲೈ 2 ರಂದು ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಿ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಜುಲೈ 21 ರ ರಾತ್ರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಸೋನಿಯಾ ಬಂದಿದ್ದರು. ಅಲ್ಲಿ ಚೆನ್ನಾಗಿಯೇ ಓಡಾಡಿಕೊಂಡಿದ್ದ ನಟಿಗೆ ಏಕಾಏಕಿ ಆರೋಗ್ಯ ಹದಗೆಟ್ಟಿತು. ಮೂಲಗಳ ಪ್ರಕಾರ ನಟಿಗೆ ಹೃದಯಾಘಾತ ಕೂಡ ಆಗಿದೆ ಎನ್ನಲಾಗಿದೆ.

ಪ್ರಶಸ್ತಿ ಸಮಾರಂಭದಲ್ಲಿ ನಟಿ ಆರೋಗ್ಯ ಸಮಸ್ಯೆಯ ಬಗ್ಗೆ ದೂರು ನೀಡಿದ್ದರು. ಮೂಲಗಳ ಪ್ರಕಾರ ನಟಿ, ಕಳೆದ ನಾಲ್ಕು ತಿಂಗಳಿನಿಂದ ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ನಟಿ ಮಾನಸಿಕ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದರೂ ಎಂದೂ ಹೇಳಲಾಗುತ್ತಿದೆ. ಸೋನಿಯಾ ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಟಿಗೆ ಅನೇಕ ದಿನಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎನ್ನಲಾಗಿದೆ. ಈ ಮೊದಲು ಕೂಡ ಆರೋಗ್ಯ ಹದಗೆಡುತ್ತಿತ್ತು. ಆದರೆ ಇದೀಗ ಅದು ತೀವ್ರಗೊಂಡಿತು ಎಂದು ವರದಿಗಳು ಹೇಳುತ್ತಿವೆ.  

ಜನಪ್ರಿಯ ರಿಯಾಲಿಟಿ ಶೋ, ಬಿಗ್ ಬಾಸ್‌ನ 17 ನೇ ಸೀಸನ್‌ನಲ್ಲಿ ಕಾಣಿಸಿಕೊಂಡಾಗ ಸೋನಿಯಾ ಬನ್ಸಾಲ್ ಸಾಕಷ್ಟು ಫೇಮ್‌ ಪಡೆದರು. ಆ ಸೀಸನ್‌ನಲ್ಲಿ ಹಾಸ್ಯನಟ ಮುನಾವರ್ ಫರೂಕಿ ಗೆದ್ದರು ಮತ್ತು ಅಭಿಷೇಕ್ ಕುಮಾರ್ ರನ್ನರ್ ಅಪ್ ಆಗಿದ್ದರು.

ಇದನ್ನೂ ಓದಿ: Actor Suriya: ಕಾಲಿವುಡ್‌ ನಟ ಸೂರ್ಯ ಸಿನಿಮಾಗಾಗಿ ಈ ಕನ್ನಡ   ಸ್ಟಾರ್ ಹೀರೋಗೆ ಬಂದಿತ್ತು ಆಫರ್‌!

ನಟನೆಗೂ ಮುಂಚೆ ಸೋನಿಯಾ ಬನ್ಸಾಲ್ ಮಾಡೆಲ್‌ ಆಗಿದ್ದರು. ಬಳಿಕ ಸಂಗೀತ ವೀಡಿಯೊಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು.  ‘ಗೇಮ್ 100 ಕೋಟಿ ಕಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನಟಿ, ನಂತರ ‘ನಾಟಿ ಗ್ಯಾಂಗ್’, ‘ಡಬ್ಕಿ’ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇವರ ನಟನೆಯ  ‘ಶೂರ್ವೀರ್’ ವೆಬ್ ಸರಣಿಯಲ್ಲಿ ಶೀಘ್ರದಲ್ಲಿಯೇ ತೆರೆ ಕಾಣಲಿದೆ. ಇಷ್ಟೇ ಅಲ್ಲದೇ ನಟಿ, ಈ ವರ್ಷ ತೆಲುಗು ಚಿತ್ರಗಳಾದ  ತೆಲುಗಿನ ‘ಧೀರ’ ಮತ್ತು ‘ಯೆಸ್ ಬಾಸ್’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

Continue Reading
Advertisement
Infosys
ಕರ್ನಾಟಕ5 mins ago

Infosys: ಇನ್ಫೋಸಿಸ್‌ನಿಂದ 32 ಸಾವಿರ ಕೋಟಿ ರೂ. ತೆರಿಗೆ ವಂಚನೆ; ಜಿಎಸ್‌ಟಿ ನೋಟಿಸ್‌ ರವಾನೆ

Paris Olympics
ಕ್ರೀಡೆ26 mins ago

Paris Olympics: ಪ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಮುಗ್ಗರಿಸಿದ ಮಣಿಕಾ ಬಾತ್ರಾ

Indians spend 15 billion hours waiting for customer service time in 2023 ServiceNow information
ದೇಶ42 mins ago

Servicenow: ಭಾರತೀಯರು ಗ್ರಾಹಕ ಸೇವೆ ಪಡೆಯಲು ವರ್ಷದಲ್ಲಿ 15 ಶತಕೋಟಿ ಗಂಟೆ ಕಳೆಯುತ್ತಾರೆ! ಅಧ್ಯಯನ ವರದಿ

Former MLA Rupali Nayka appeals to DC to resolve various issues under Karwara Ankola Assembly Constituency
ಉತ್ತರ ಕನ್ನಡ44 mins ago

Uttara Kannada News: ಕ್ಷೇತ್ರದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕರಿಂದ ಡಿಸಿಗೆ ಮನವಿ

Kolluru bridge inundation by Krishna river flood Chalavadi Narayanaswamy visits the flood damaged area
ಮಳೆ45 mins ago

Yadgiri News: ಕೃಷ್ಣಾ ನದಿ ಪ್ರವಾಹದಿಂದ ಕೊಳ್ಳುರು ಸೇತುವೆ ಮುಳುಗಡೆ; ನೆರೆ ಹಾನಿ ಪ್ರದೇಶಕ್ಕೆ ಛಲವಾದಿ ನಾರಾಯಣಸ್ವಾಮಿ ಭೇಟಿ

Successful complex surgery at Fortis Hospital for a boy who had a hole in his intestine due to a road accident
ಕರ್ನಾಟಕ46 mins ago

Fortis Hospital: ರಸ್ತೆ ಅಪಘಾತದಿಂದ ಕರುಳಿನಲ್ಲಿ ರಂಧ್ರ; 10 ವರ್ಷದ ಬಾಲಕನಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

New Rules
ದೇಶ47 mins ago

New Rules: ಕ್ರೆಡಿಟ್‌ ಕಾರ್ಡ್‌ನಿಂದ ಎಲ್‌ಪಿಜಿ ದರ; ನಾಳೆಯಿಂದ ಯಾವೆಲ್ಲ ನಿಯಮ, ದರ ಬದಲು? ಜೇಬಿಗೆ ಹೊರೆಯೇ?

Pakistani Labours
ವಿದೇಶ48 mins ago

Pakistani Labours: ಭಿಕ್ಷಾಟನೆ, ಅಪರಾಧ ಕೃತ್ಯ; ಪಾಕಿಸ್ತಾನಿಯರನ್ನು ಒದ್ದು ಓಡಿಸುತ್ತಿರುವ ಗಲ್ಫ್‌ ರಾಷ್ಟ್ರಗಳು!

Star Monsoon gym fashion
ಫ್ಯಾಷನ್51 mins ago

Star Monsoon Gym Fashion: ನಟ ಕಾರ್ತಿಕ್‌ ಜಯರಾಮ್‌ ಮಾನ್ಸೂನ್‌ ಜಿಮ್‌ ಫ್ಯಾಷನ್‌ ಮಂತ್ರ ಹೀಗಿದೆ!

Crocodile Attack
Latest1 hour ago

Crocodile Attack: ತಂದೆಯ ಜೀವ ಉಳಿಸಲು ಮೊಸಳೆ ಬಾಯಿಗೆ ಕೈ ಹಾಕಿದ ಬಾಲಕ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 day ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌