ಕಿರುತೆರೆ
Weekend With Ramesh: ಮಾರ್ಚ್ 25ರಿಂದ ʻವೀಕೆಂಡ್ ವಿತ್ ರಮೇಶ್’; ಮೊದಲ ಗೆಸ್ಟ್ ಮೋಹಕ ತಾರೆ ರಮ್ಯಾ?
ಈಗ ಕಿರುತೆರೆ ಲೋಕದಲ್ಲಿ ಮೋಹಕತಾರೆ ರಮ್ಯಾ ವೀಕೆಂಡ್ ವಿತ್ ರಮೇಶ್ ಸೀಸನ್ 5ರಲ್ಲಿ (Weekend With Ramesh) ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿ ಓಡಾಡುತ್ತಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಈ ಬಾರಿಯ ಮೊದಲ ಅತಿಥಿ ಆಗಲಿದ್ದಾರೆ ಎನ್ನಲಾಗಿತ್ತು.
ಬೆಂಗಳೂರು: ಈಗಾಗಲೇ ‘ವೀಕೆಂಡ್ ವಿತ್ ರಮೇಶ್’ (Weekend With Ramesh) ಸೀಸನ್ 5 ಗೆ ಅತಿಥಿಗಳ ಪಟ್ಟಿ ಅಂತಿಮಗೊಂಡಿದೆ ಎನ್ನಲಾಗುತ್ತಿದೆ. ಈಗ ಕಿರುತೆರೆ ಲೋಕದಲ್ಲಿ ಮೋಹಕತಾರೆ ರಮ್ಯಾ ವೀಕೆಂಡ್ ವಿತ್ ರಮೇಶ್ ಸೀಸನ್ 5ರಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿ ಓಡಾಡುತ್ತಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಈ ಬಾರಿಯ ಮೊದಲ ಅತಿಥಿ ಆಗಲಿದ್ದಾರೆ ಎನ್ನಲಾಗಿತ್ತು. ಇದೀಗ ಕೆಲವು ಸುದ್ದಿಗಳ ಪ್ರಕಾರ ಮೊದಲ ಎಪಿಸೋಡ್‌ಗೆ ರಿಷಬ್ ಶೆಟ್ಟಿಯ ಬದಲಾಗಿ ರಮ್ಯಾ ಅತಿಥಿಯಾಗಿ ಬರಲಿದ್ದಾರೆ ಎನ್ನಲಾಗಿದೆ. ಇದೀಗ ಕಾರ್ಯಕ್ರಮ ಮಾರ್ಚ್ 25ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9ಗಂಟೆಗೆ ಪ್ರಸಾರವಾಗಲಿದೆ.
ಕಳೆದ ಕೆಲವು ದಿನಗಳಿಂದ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ 5ನೇ ಸೀಸನ್‌ನ ಮೊದಲ ಎಪಿಸೋಡ್ ಪ್ರಸಾರ ಆಗಲಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ‘ವೀಕೆಂಡ್ ವಿತ್ ರಮೇಶ್’ ಸೀಸನ್ 5ರ ಮೊದಲ ಎಪಿಸೋಡ್‌ನಲ್ಲಿ ಮೋಹಕತಾರೆ ರಮ್ಯಾ ಬರುತ್ತಾರೆ ಎಂಬದು ಬಹುತೇಕ ಕನ್ಫರ್ಮ್ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಇದೇ ತಿಂಗಳು ಮಾರ್ಚ್ 21ರಂದು ರಮ್ಯಾ ಅವರ ಎಪಿಸೋಡ್‌ನ ಶೂಟಿಂಗ್ ನಡೆಯಲಿದೆ ಎನ್ನಲಾಗಿದೆ.
ಇದನ್ನೂ ಓದಿ: Weekend With Ramesh: ‘ವೀಕೆಂಡ್ ವಿತ್ ರಮೇಶ್ʼ ಮೊದಲ ಎಪಿಸೋಡ್‌ಗೆ ರಿಷಬ್ ಬದಲು ಬೇರೆ ಅತಿಥಿ ಯಾರು?
ಕೆಲದಿನಗಳ ಹಿಂದೆ ಜೀ ವಾಹಿನಿ `ವೀಕೆಂಡ್ ವಿತ್ ರಮೇಶ್ʼ ಮತ್ತೆ ಬರುತ್ತಿದೆ ಪ್ರೋಮೊ ಪ್ರಸಾರ ಮಾಡಿತ್ತು. ನಟ ರಮೇಶ್ ಕೂಡ ಪ್ರೋಮೊ ಹಂಚಿಕೊಂಡಿದ್ದರು. ರಾಧಿಕಾ ಚೇತನ್ ಕೂಡ ಕಾಣಿಸಿಕೊಂಡಿದ್ದರು. ಕೆಲ ದಿನಗಳ ಹಿಂದೆ ವಾಹಿನಿಯು ಪ್ರೋಮೊ ರಿಲೀಸ್ ಮಾಡಿ, “ಸ್ಫೂರ್ತಿದಾಯಕ ಕಥೆಗಳೊಂದಿಗೆ ವೀಕೆಂಡ್‌ಗೆ ಸಾರ್ಥಕತೆ ತುಂಬೋಕೆ ಬರ್ತಿದ್ದಾರೆ ನಿಮ್ಮ ರಮೇಶ್ ಅರವಿಂದ್” ಎಂದು ಹೇಳಿಕೆ ನೀಡಿತ್ತು.
2019ರ ಜುಲೈ ತಿಂಗಳಿನಲ್ಲಿ ‘ವೀಕೆಂಡ್ ವಿಥ್ ರಮೇಶ್ʼ 4’ ಕಾರ್ಯಕ್ರಮ ಮುಗಿದಿತ್ತು. ಇದಾದ ಬಳಿಕ ಹೊಸ ಸೀಸನ್ ಶುರುವಾಗಿಲ್ಲ. ‘’ವೀಕೆಂಡ್ ವಿತ್ ರಮೇಶ್ʼ ’ ಮತ್ತೆ ಯಾವಾಗ ಶುರುವಾಗುತ್ತದೆ ಎಂದು ವೀಕ್ಷಕರು ಕೇಳುತ್ತಲೇ ಇದ್ದಾರೆ. ‘’ವೀಕೆಂಡ್ ವಿತ್ ರಮೇಶ್ʼ ’ ಕಾರ್ಯಕ್ರಮದ ಮೊದಲ ಸೀಸನ್ 2014ರಲ್ಲಿ ಪ್ರಸಾರ ಕಂಡಿತ್ತು. ಎರಡನೇ ಸೀಸನ್ 2015-16ರಲ್ಲಿ, ಮೂರನೇ ಸೀಸನ್ 2017ರಲ್ಲಿ, 4ನೇ ಸೀಸನ್ 2019ರಲ್ಲಿ ಪ್ರಸಾರವಾಗಿತ್ತು.
ಕಿರುತೆರೆ
Kannada Serial: 900 ಸಂಚಿಕೆ ಪೂರೈಸಿದ ಜೊತೆ ಜೊತೆಯಲಿ ಧಾರಾವಾಹಿ; ಸಂಭ್ರಮದಲ್ಲಿ ತಂಡ
ಜೀ ಕನ್ನಡದ ಪ್ರಸಿದ್ಧ ಧಾರಾವಾಹಿಯಾದ (Kannada Serial) ʼಜೊತೆ ಜೊತೆಯಲಿʼ 900 ಸಂಚಿಕೆಗಳನ್ನು ಇತ್ತೀಚೆಗೆ ಪೂರೈಸಿದೆ.
ಬೆಂಗಳೂರು: ಅದು 2019ರ ಸೆಪ್ಟೆಂಬರ್ 9. ಕನ್ನಡದ ಕಿರುತೆರೆಗೆ ಹೊಸ ಶೈಲಿಯ ಕಥೆಯೊಂದು (Kannada Serial) ಎಂಟ್ರಿ ಕೊಟ್ಟಿತ್ತು. ಅದುವೇ ʼಜೊತೆ ಜೊತೆಯಲಿʼ. ಈ ಧಾರಾವಾಹಿ ಕಿರುತೆರೆಗೆ ಎಂಟ್ರಿ ಕೊಟ್ಟ ಒಂದೇ ವಾರದಲ್ಲಿ ಕನ್ನಡದ ಎಲ್ಲಾ ಧಾರಾವಾಹಿಗಳ ದಾಖಲೆಗಳನ್ನು ಮುರಿದು ಅತಿ ಹೆಚ್ಚು ವೀಕ್ಷಣೆ ಪಡೆದ ಧಾರಾವಾಹಿ ಎನ್ನುವ ಖ್ಯಾತಿ ಪಡೆದುಕೊಂಡಿತು. ಆ ಧಾರಾವಾಹಿಗೆ ಇದೀಗ 900 ಸಂಚಿಕೆಗಳು ಸಂಪೂರ್ಣಗೊಂಡಿವೆ.
ಇದನ್ನೂ ಓದಿ: Jote Joteyali: ಹಸೆಮಣೆ ಏರಲು ಸಜ್ಜಾದ `ಜೊತೆ ಜೊತೆಯಲಿ’ ಧಾರಾವಾಹಿ ನಟಿ ಶಿಲ್ಪಾ ಅಯ್ಯರ್
ಧಾರಾವಾಹಿ 900 ಸಂಚಿಕೆಗಳನ್ನು ಪೂರ್ಣಗೊಳಿಸಿರುವ ಸಂತಸದಲ್ಲಿ ಧಾರಾವಾಹಿಯ ತಂಡವಿದೆ. ಈ 900 ಸಂಚಿಕೆಗಳಲ್ಲಿ ಧಾರಾವಾಹಿ ಹಲವಾರು ತಿರುವುಗಳನ್ನು ಕಂಡಿದೆ. ಅನಿರುದ್ಧ ಅವರನ್ನು ಧಾರಾವಾಹಿ ತಂಡದಿಂದ ಹೊರಹಾಕಿದ ನಂತರ ಅವರ ಸ್ಥಾನಕ್ಕೆ ಹರೀಶ್ ರಾಜ್ ಅವರನ್ನು ಕರೆತರಲಾಗಿದೆ. ಅದಕ್ಕಾಗಿಯೇ ಕೆಲವು ಹೊಸ ಉಪಕಥೆಯನ್ನೂ ಪರಿಚಯಿಸಲಾಗಿದೆ. ಹಾಗೆಯೇ ಜೋಡಿ ಹಕ್ಕಿ ಧಾರಾವಾಹಿ ಖ್ಯಾತಿಯ ಚೈತ್ರ ರಾವ್ ಅವರನ್ನೂ ಸಹ ಆರಾಧನಾ ಹೆಸರಿನಲ್ಲಿ ಧಾರಾವಾಹಿಯಲ್ಲಿ ಪರಿಚಯಿಸಲಾಗಿದೆ.
ಜೊತೆ ಜೊತೆಯಲ್ಲಿ ಧಾರಾವಾಹಿಯು ಮಧ್ಯಮ ವಯಸ್ಸಿನ ಉದ್ಯಮಿ ಆರ್ಯವರ್ಧನ್ ಕಥೆಯಾಗಿದೆ. ಅದರಲ್ಲಿ ಆ ಉದ್ಯಮಿಗೆ ಅನು ಹೆಸರಿನ ಯುವತಿಯೊಂದಿಗೆ ಪ್ರೀತಿ ಹುಟ್ಟಿ ಅವರಿಬ್ಬರು ಮದುವೆಯಾಗುತ್ತಾರೆ. ಇದೀಗ ಅನು ಗರ್ಭಿಣಿಯಾಗಿದ್ದು, ಅದೇ ಸಂಭ್ರಮದಲ್ಲಿ ಆರ್ಯವರ್ಧನ್ ಇದ್ದಾರೆ. ಆದರೆ ಇವರಿಬ್ಬರ ಅನ್ಯೋನ್ಯತೆ ಬಗ್ಗೆ ಆರಾಧನಾ ಅವರಿಗೆ ಅಸಮಾಧಾನ ಇದೆ.
ಇದನ್ನೂ ಓದಿ: Anirudh Jatkar: ʻಜೊತೆ ಜೊತೆಯಲಿʼ ಖ್ಯಾತಿಯ ಅನಿರುದ್ಧ ಮುಂಬರುವ ಧಾರಾವಾಹಿಗೆ ನಾಯಕಿ ಯಾರು?
ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಈ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ.
ಕಿರುತೆರೆ
Vaishnavi Gowda: ಕಾನೂನು ಪದವಿ ಪಡೆದ ಕಿರುತೆರೆ ನಟಿ ವೈಷ್ಣವಿ ಗೌಡ ತಾಯಿ
ಅಮ್ಮನ (Vaishnavi Gowda) ಕುರಿತಾದ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ವೈಷ್ಣವಿ ಅವರ ತಾಯಿ ಭಾನು ರವಿಕುಮಾರ್ ಈಗ ಲಾ ಪದವಿ ಮುಗಿಸಿ ಕಪ್ಪು ಕೋಟ್ ಧರಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೊ ಕೂಡ ಹಂಚಿಕೊಂಡಿದ್ದಾರೆ.
ಬೆಂಗಳೂರು: ʻಅಗ್ನಿ ಸಾಕ್ಷಿʼ ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ (Vaishnavi Gowda) ಸೀತಾರಾಮ ಧಾರಾವಾಹಿ ಮೂಲಕ ಮತ್ತೆ ಅಭಿನಯಿಸುತ್ತಿದ್ದಾರೆ. ಪ್ರೋಮೊಗಳ ಮೂಲಕ ವೀಕ್ಷಕರ ಗಮನ ಸೆಳೆದಿದ್ದಾರೆ. ಶೀಘ್ರದಲ್ಲಿಯೇ ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇದೀಗ ಅವರ ಅಮ್ಮನ ಕುರಿತಾದ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ವೈಷ್ಣವಿ ಅವರ ತಾಯಿ ಭಾನು ರವಿಕುಮಾರ್ ಈಗ ಲಾ ಪದವಿ ಮುಗಿಸಿ ಕಪ್ಪು ಕೋಟ್ ಧರಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೊ ಕೂಡ ಹಂಚಿಕೊಂಡಿದ್ದಾರೆ.
ಇನ್‌ಸ್ಟಾದಲ್ಲಿ ಫೋಟೊ ಹಂಚಿಕೊಂಡು ʻʻ’ಮನೆಯಲ್ಲೀಗ ವಕೀಲರು ಇದ್ದಾರೆ. ನೀವು ಯಾವಾಗಲೂ ವಯಸ್ಸು ಕೇವಲ ನಂಬರ್ ಎಂದು ಕಲಿಸಿದ್ದೀರಿ. ಈ ವಯಸ್ಸಿನಲ್ಲಿ ನೀವು ಏನು ಸಾಧನೆ ಮಾಡಿದ್ದೀರ. ಅದನ್ನು ನೋಡಿ ಹೆಮ್ಮೆ ಪಡುವೆ’ ಎಂದು ವೈಷ್ಣವಿ ಬರೆದುಕೊಂಡಿದ್ದಾರೆ. ವೈಷ್ಣವಿ ಅವರ ತಾಯಿ ಮಗಳಿಗೆ ಸದಾ ಬೆಂಬಲ ನೀಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ವೈಷ್ಣವಿ ತಾಯಿ ಇದ್ದಕ್ಕಿದ್ದಂತೆ ತೂಕ ಇಳಿಸಿಕೊಂಡ ವಿಚಾರ ದೊಡ್ಡ ಸುದ್ದಿ ಆಗಿತ್ತು. ನನ್ನ ತಾಯಿ ಯೋಗ ಮಾಡಿ ತೂಕ ಇಳಿಸಿಕೊಂಡಿದ್ದಾರೆ ಎಂದು ಈ ಹಿಂದೆ ವೈಷ್ಣವಿ ಹೇಳಿದ್ದರು. ಅಷ್ಟೇ ಅಲ್ಲದೇ ಮನೆಯ ಗೃಪ್ರವೇಶದ ಫೋಟೊ ಕೂಡ ಹಂಚಿಕೊಂಡು ಸುದ್ದಿಯಾಗಿದ್ದರು.
ಇದನ್ನೂ ಓದಿ: Vaishnavi Gowda | ʻಸೀತಾರಾಮʼ ಧಾರಾವಾಹಿ ಮೂಲಕ ಮಿಂಚಲಿದ್ದಾರೆ ವೈಷ್ಣವಿ ಗೌಡ
ವೈಷ್ಣವಿ ಪೋಸ್ಟ್
ಮತ್ತೆ ಬಣ್ಣದ ಲೋಕಕ್ಕೆ ವೈಷ್ಣವಿ
ಅಗ್ನಿಸಾಕ್ಷಿʼ ಧಾರಾವಾಹಿ ನಂತರ ವೈಷ್ಣವಿ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಅಲ್ಲಿ ಸಾಕಷ್ಟು ಪ್ರಶಂಸೆಯನ್ನು ಪಡೆದುಕೊಂಡರು. ಸ್ವಪ್ನ ಕೃಷ್ಣ ನಿರ್ದೇಶನದ ಸೀತಾರಾಮ ಧಾರಾವಾಹಿಯಲ್ಲಿ ನಾಯಕಿಯಾಗಿಯಾಗುತ್ತಿದ್ದಾರೆ ವೈಷ್ಣವಿ ಗೌಡ. ಈ ಹಿಂದೆ ಅಷ್ಟೇ ವೈಷ್ಣವಿ ಅವರು ಉದ್ಯಮಿ ವಿದ್ಯಾಭರಣ್ ಜತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾದ ಫೋಟೊವೊಂದು ವೈರಲ್ ಆಗಿತ್ತು. ಬಳಿಕ ಕಾರಣಾಂತರಗಳಿಂದ ಆ ಸಂಬಂಧ ಮುರಿದು ಬಿದ್ದಿದೆ. ಈಗ ವೈಷ್ಣವಿಗೌಡ ಸ್ವಲ್ಪ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.
ಕಿರುತೆರೆ
Shivangi Joshi: ರಿಶ್ತಾ ಕ್ಯಾ ಕೆಹ್ಲಾತಾ ಹೈ ಧಾರಾವಾಹಿ ಖ್ಯಾತಿಯ ಶಿವಾಂಗಿ ಜೋಶಿಗೆ ಕಿಡ್ನಿ ಸಮಸ್ಯೆ, ಆಸ್ಪತ್ರೆಗೆ ದಾಖಲು
ಶಿವಾಂಗಿ ಜೋಶಿ (Shivangi Joshi) ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಗುಣಮುಖನಾವಾಗಿ ಬರುತ್ತೇನೆ ಎಂದು ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ.
ಬೆಂಗಳೂರು: ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ (Yeh Rishta Kya Kehlata Hai) ಧಾರಾವಾಹಿ ಖ್ಯಾತಿಯ ನಟಿ ಶಿವಾಂಗಿ ಜೋಶಿ (Shivangi Joshi) ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಗುಣಮುಖನಾಗಿ ಬರುತ್ತೇನೆ ಎಂದು ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ಶಿವಾಂಗಿ ಅವರು ಆಸ್ಪತ್ರೆಗೆ ದಾಖಲಾದ ಫೋಟೊ ಹಂಚಿಕೊಂಡಿದ್ದಾರೆ.
ಇನ್‌ಸ್ಟಾದಲ್ಲಿ ʻʻಎಲ್ಲರಿಗೂ ನಮಸ್ಕಾರ, ಒಂದೆರಡು ದಿನಗಳಿಂದ ನನಗೆ ಕಿಡ್ನಿ ಸೋಂಕಿತ್ತು. ನನ್ನ ಕುಟುಂಬ, ಸ್ನೇಹಿತರು, ವೈದ್ಯರ ಬೆಂಬಲ,ಆಸ್ಪತ್ರೆಯ ಸಿಬ್ಬಂದಿ ಮತ್ತು ದೇವರ ಕೃಪೆಯಿಂದ ಆರೋಗ್ಯವಾಗಿದ್ದೇನೆ. ಶೀಘ್ರದಲ್ಲೇ ಗುಣಮುಖಳಾಗಿ ಬರುತ್ತೇನೆʼʼ ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅವರ ಅಭಿಮಾನಿಗಳು, ಸ್ನೇಹಿತರು ಮತ್ತು ಸಹೋದ್ಯೋಗಿಗಳು ಶಿವಾಂಗಿಗೆ ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ: Prithvi Shaw : ನಟಿ ಸಪ್ನಾ ಗಿಲ್ ವಿರುದ್ಧ ಕೊಲೆ ಕೇಸ್ ಕೂಡ ದಾಖಲು, ಮತ್ತೊಮ್ಮೆ ಜೈಲು ಸೇರುವ ಸಾಧ್ಯತೆ?
ಶಿವಾಂಗಿ ಜೋಶಿ ಅವರು 2013ರಲ್ಲಿ ಖೇಲ್ತಿ ಹೈ ಜಿಂದಗಿ ಆಂಖ್ ಮಿಚೋಲಿ ( Khelti Hai Zindagi Aankh Micholi) ಧಾರಾವಾಹಿ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದರು. 2016ರಲ್ಲಿ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ (Yeh Rishta Kya Kehlata Hai) ಮೂಲಕ ಮನೆಮಾತರಾದರು. ಕಳೆದ ವರ್ಷ, ರೋಹಿತ್ ಶೆಟ್ಟಿ ಅವರ ರಿಯಾಲಿಟಿ ಶೋ ʻಖತ್ರೋನ್ ಕೆ ಖಿಲಾಡ-12 ನಲ್ಲಿ ಭಾಗವಹಿಸಿದ್ದರು.
ಕಿರುತೆರೆ
Fashion Interview: ಕಿರುತೆರೆಯ ಸ್ಟೈಲಿಶ್ ಐಕಾನ್‌ಗಳ ಟಾಪ್ ಲಿಸ್ಟ್‌ಗೆ ಸೇರಿದ ನಿರಂಜನ್ ದೇಶಪಾಂಡೆ
ನಟ ಹಾಗೂ ಜನಪ್ರಿಯ ನಿರೂಪಕರಾಗಿರುವ ನಿರಂಜನ್ ದೇಶಪಾಂಡೆ (Fashion Interview) ಸದ್ಯಕ್ಕೆ ಟೆಲಿವಿಷನ್ ಲೋಕದ ಸ್ಟೈಲಿಶ್ ಐಕಾನ್ ಎಂದೇ ಖ್ಯಾತಿ ಗಳಿಸಿದ್ದಾರೆ. ತಮ್ಮದೇ ಆದ ಫ್ಯಾಷನ್ ಲುಕ್‌ಗೆ ಹೆಸರಾಗಿದ್ದಾರೆ. ಈ ಬಗ್ಗೆ ಅವರು ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ.
ಸಂದರ್ಶನ: ಶೀಲಾ ಸಿ. ಶೆಟ್ಟಿ
ಕಿರುತೆರೆಯಲ್ಲಿ ಸದ್ಯಕ್ಕೆ ಸ್ಟೈಲಿಶ್ ಹಾಗೂ ಆಕರ್ಷಕವಾಗಿ ಕಾಣಿಸುವವರ ಸಾಲಿನಲ್ಲಿ ನಟ ಹಾಗೂ ನಿರೂಪಕ ನಿರಂಜನ್ ದೇಶಪಾಂಡೆ ಮೊದಲ ಸ್ಥಾನದಲ್ಲಿದ್ದಾರೆ. ಪ್ರತಿ ಕಾರ್ಯಕ್ರಮಗಳಲ್ಲೂ ಸಖತ್ ಫ್ಯಾಷೆನಬಲ್ ಆಗಿ ಕಾಣಿಸಿಕೊಳ್ಳುವ ಯುವ ನಿರೂಪಕ ನಿರಂಜನ್ (niranjan deshpande) ಅವರು ಫ್ಯಾಷನ್ ವಿಮರ್ಶಕರ ಫೇವರೇಟ್ ಕೂಡ ಹೌದು. ಆ ಮಟ್ಟಿಗೆ ಟ್ರೆಂಡಿಯಾಗಿ ಕಾಣಿಸಿಕೊಳ್ಳುತ್ತಾರೆ. ಜತೆಗೆ ತಮ್ಮದೇ ಆದ ಯೂನಿಕ್ ಫ್ಯಾಷನ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಉದ್ಯಾನನಗರಿಯ ವೆಲ್ಹೋಜ್ಹ್ ಇವ್ ಸಂಸ್ಥೆ ಆಯೋಜಿಸಿದ್ದ ವಿಮೆನ್ಸ್ ಆಚಿವರ್ಸ್ ಆವಾರ್ಡ್ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದ ನಿರಂಜನ್ ದೇಶಪಾಂಡೆ, ವಿಸ್ತಾರ ನ್ಯೂಸ್‌ನೊಂದಿಗೆ ತಮ್ಮ ಫ್ಯಾಷನಬಲ್ ಲೈಫ್‌ಸ್ಟೈಲ್ ಬಗ್ಗೆ ಮಾತನಾಡಿದ್ದಾರೆ.
ಫ್ಯಾಷನಬಲ್ ನಿರೂಪಕರ ಟಾಪ್ ಲಿಸ್ಟ್‌ನಲ್ಲಿದ್ದಿರಲ್ಲ! ನಿಮ್ಮ ಫ್ಯಾಷನ್ ಮಂತ್ರ ಏನು ?
ಧನ್ಯವಾದಗಳು. ನಾನು ಆದಷ್ಟೂ ಸೀಸನ್‌ವೈಸ್ ಫ್ಯಾಷನ್ ಅಳವಡಿಸಿಕೊಳ್ಳುತ್ತೇನೆ. ಉದಾಹರಣೆಗೆ., ಬೇಸಿಗೆ ತಕ್ಕಂತೆ ನನ್ನ ಡ್ರೆಸ್‌ಕೋಡ್ ಇರುತ್ತದೆ. ಬಿಸಿಲಿಗೆ ಸನ್‌ಗ್ಲಾಸ್, ಇನ್ನು ಚಳಿಗಾಲಕ್ಕೆ ಲೆಯರ್ ಲುಕ್ ನೀಡುವ ಜಾಕೆಟ್ಸ್ ಹೀಗೆ ಬದಲಾಗುತ್ತಿರುತ್ತದೆ.
ನಿಮ್ಮ ಸಿಗ್ನೇಚರ್ ಸ್ಟೈಲ್ ಬಗ್ಗೆ ಹೇಳಿ?
ನನಗೆ ಚೈನಾ ಕಾಲರ್ಸ್ ಇರುವಂತಹ ಶರ್ಟ್ಸ್, ಟೋರ್ನ್ ಜೀನ್ಸ್ ಹಾಗೂ ಸನ್‌ಗ್ಲಾಸ್ ನನ್ನ ಸಿಗ್ನೇಚರ್ ಸ್ಟೈಲ್ ಲಿಸ್ಟ್‌ನಲ್ಲಿದೆ.
ನಿಮ್ಮ ಸ್ಟೈಲ್‌ಸ್ಟೇಟ್‌ಮೆಂಟ್‌ಗೆ ಸಾಥ್ ನೀಡುವ ಅಂಶಗಳ್ಯಾವುವು?
ಮುಗುಳ್ನಗೆ. ಹೌದು. ಮುಖದ ಮೇಲಿನ ಒಂದು ಮುಗುಳ್ನಗೆ ಇಡೀ ಲುಕ್‌ಗೆ ಕಿರೀಟವಿದ್ದಂತೆ. ನೋಡಲು ಆಕರ್ಷಕವಾಗಿ ಕಾಣಲು ಇದು ಪ್ಲಸ್ ಪಾಯಿಂಟ್. ಹುಡುಗಿಯರೇ ಆಗಲಿ ಹುಡುಗರೇ ಆಗಲಿ, ಎಷ್ಟೆಲ್ಲಾ ಫ್ಯಾಷನಬಲ್ ಆಗಿ ರೆಡಿಯಾಗಿದ್ದರೂ ಕೊನೆಗೆ ಮುಖದ ಮೇಲಿನ ನಗು ಮತ್ತಷ್ಟು ಸುಂದರವಾಗಿ ಕಾಣುವಂತೆ ಬಿಂಬಿಸುತ್ತದೆ. ನಗು ಇಲ್ಲದಿದ್ದರೇ ಎಷ್ಟು ದುಬಾರಿ ಉಡುಪು ಧರಿಸಿದರೂ ಸಪ್ಪೆಯೆಂದೆನಿಸಬಹುದು.
ನಿಮಗೆ ಎಥ್ನಿಕ್ ಅಥವಾ ವೆಸ್ಟರ್ನ್ ಯಾವ ಬಗೆಯ ಫ್ಯಾಷನ್‌ವೇರ್‌ಗಳಿಷ್ಟ?
ಹಾಗೇನಿಲ್ಲ! ಕಂಫರ್ಟಬಲ್ ಹಾಗೂ ಗುಡ್ ಲುಕ್ಕಿಂಗ್ ಕಾಣುವಂತಹ ಯಾವುದೇ ಉಡುಪಾದರೂ ಸರಿಯೇ!
ಟೆಲಿವಿಷನ್‌ನಲ್ಲಿ ನೀವು ಧರಿಸುವ ಫ್ಯಾಷನ್‌ವೇರ್‌ಗೂ ಅಭಿಮಾನಿಗಳು ಇದ್ದಾರಂತಲ್ಲ! ಸೋ, ಪ್ರತಿಬಾರಿ ಸ್ಟೈಲಿಶ್ ಲುಕ್ ಹೇಗೆ ನಿರ್ಧರಿಸುತ್ತೀರಿ?
ಹೌದು. ಅಭಿಮಾನಿಗಳಿದ್ದಾರೆ. ಖುಷಿಯಾಗುತ್ತದೆ. ಕೆಲವೊಂದು ಸ್ಟೈಲಿಶ್ ಲುಕ್‌ಗಳನ್ನು ಖುದ್ದು ನಿರ್ಧರಿಸುತ್ತೀನಿ. ಆದರೆ, ಇದೀಗ ಆಯಾ ಕಾರ್ಯಕ್ರಮಗಳಿಗೆ ತಕ್ಕಂತೆ ಚಾನೆಲ್‌ಗಳೇ ಹೀಗಿರಬೇಕೆಂದು ತೀರ್ಮಾನಿಸಿ ಆಪ್ಷನ್ ನೀಡುತ್ತವೆ. ಪರಿಣಾಮ, ಎಲ್ಲರ ಅಭಿಪ್ರಾಯಗಳು ಒಟ್ಟಿಗೆ ಸೇರಿ ಸ್ಟೈಲಿಶ್ ಲುಕ್ ನನ್ನದಾಗುತ್ತದೆ.
ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿರುವ ನೀವು ನೆಟ್ಟಿಗರಿಗೆ ಯಾವ ಬಗೆಯ ಫ್ಯಾಷನ್ ಟಿಪ್ಸ್ ನೀಡುತ್ತೀರಾ?
ಫ್ಯಾಷನ್ ಲುಕ್ ನಿಮಗೆ ಹೊಂದುವಂತಿರಲಿ, ಬೇರೆಯವರ ಫ್ಯಾಷನ್ ಫಾಲೋ ಮಾಡಲು ಹೋಗಿ ನಗೆಪಾಟಲಿಗೀಡಾಗಬೇಡಿ. ಆದಷ್ಟೂ ನಿಮ್ಮ ಬಾಡಿ ಟೈಪ್‌ಗೆ ಹೊಂದುವಂತದ್ದನ್ನು ಧರಿಸಿ. ಸ್ಮಾರ್ಟ್ ಆಗಿ ಕಾಣಿಸಿಕೊಳ್ಳಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ21 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಆಟೋಮೊಬೈಲ್22 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್6 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ10 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ9 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ10 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ
-
ಕರ್ನಾಟಕ11 hours ago
Drugs Mafia : ಸಾಗರದಲ್ಲಿ ಡ್ರಗ್ಸ್ ಮಾರಾಟ ಯತ್ನ: ಲಾಂಗ್ ಸಹಿತ ಇಬ್ಬರ ಅರೆಸ್ಟ್, ಕೊಲೆ ಸಂಚೂ ಬಯಲು