South Cinema
Leo Kannada Poster: ರಗಡ್ ಲುಕ್‌ನಲ್ಲಿ ದಳಪತಿ ವಿಜಯ್; ಲಿಯೋ ಕನ್ನಡ ಪೋಸ್ಟರ್ ಔಟ್!
Leo Kannada Poster: ಚಿತ್ರದ ಮುಂದಿನ ಸೆಟ್ ಪೋಸ್ಟರ್‌ಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಹಲವು ವರ್ಷಗಳ ನಂತರ ವಿಜಯ್ ಜತೆ ತ್ರಿಷಾ ನಾಯಕಿಯಾಗಿ ಈ ಸಿನಿಮಾ ಮೂಲಕ ಮಿಂಚಲಿದ್ದಾರೆ.
ದಳಪತಿ ವಿಜಯ್ ಹಾಗೂ ಲೋಕೇಶ್ ಕನಕರಾಜ್ (Lokesh Kanakaraj) ಅವರ ಮುಂಬರುವ ಚಿತ್ರ ʻಲಿಯೋʼ (Leo poster) ಸೆ.17ರಂದು ಚಿತ್ರದ ತೆಲುಗು ಪೋಸ್ಟರ್ ಹಂಚಿಕೊಂಡಿತ್ತು. ಇದೀಗ ಕನ್ನಡ ಪೋಸ್ಟರ್ ಶೇರ್ ಮಾಡಿಕೊಂಡಿದೆ. ʼಶಾಂತವಾಗಿರಿ ಮತ್ತು ಯುದ್ಧವನ್ನು ತಪ್ಪಿಸಿʼ ಎಂಬ (Keep calm and avoid the battle) ಶೀರ್ಷಿಕೆ ತೆಲುಗು ಫೋಸ್ಟರ್‌ನಲ್ಲಿ ಇದ್ದಿತ್ತು. ಇದೀಗ ಕನ್ನಡ ಪೋಸ್ಟರ್‌ನಲ್ಲಿ ʻʻಶಾಂತವಾಗಿರಿ ಮತ್ತು ತಪ್ಪಿಸಿಕೊಳ್ಳಲು ಸಂಚು ಮಾಡಿʼʼಎಂದು (Leo Kannada Poster) ಬರೆದುಕೊಂಡಿದೆ.
ಚಿತ್ರದ ಮುಂದಿನ ಸೆಟ್ ಪೋಸ್ಟರ್‌ಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಹಲವು ವರ್ಷಗಳ ನಂತರ ವಿಜಯ್ ಜತೆ ತ್ರಿಷಾ ನಾಯಕಿಯಾಗಿ ಈ ಸಿನಿಮಾ ಮೂಲಕ ಮಿಂಚಲಿದ್ದಾರೆ. ಕೀರ್ತಿ ಸುರೇಶ್, ಅರ್ಜುನ್, ಮಿಶಾ ಘೋಷಾಲ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮತ್ತು ಸಂಜಯ್ ತಾರಾ ಬಳಗವಿದೆ. ಇತ್ತೀಚೆಗೆ ಕಾಶ್ಮೀರ ಮತ್ತು ಚೆನ್ನೈನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿತ್ತು. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಡಬ್ಬಿಂಗ್ ಕೆಲಸಗಳು ಆಗುತ್ತಿವೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಲಿಯೋ ಚಿತ್ರಕ್ಕೆ ಸಂಬಂಧಿಸಿದ ಹೊಸ ಅಪ್‌ಡೇಟ್‌ಗಳ ಲೋಕೇಶ್ ಅವರು ಹೇಳಿಕೊಂಡಿದ್ದರು. ʻʻಚಿತ್ರಕ್ಕಾಗಿ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಅದಕ್ಕಾಗಿಯೇ ನಾವು ಯಾವುದೇ ಅಪ್‌ಡೇಟ್‌ಗಳನ್ನು ನೀಡಿಲ್ಲ. ಕ್ರಮೇಣ ಹೊಸ ಹೊಸ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. ಚಿತ್ರ ಬಿಡುಗಡೆಗೆ 30 ದಿನಗಳ ಮುಂಚೆಯೇ ಚಿತ್ರದ ಬಗ್ಗೆ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಲು ನಾವು ಯೋಜಿಸಿದ್ದೇವೆʼʼ ಎಂದಿದ್ದರು. ಹೇಳಿದಂತೆ ಸೆ. 17ರಂದು ಚಿತ್ರದ ತೆಲುಗು ಪೋಸ್ಟರ್ ಬಿಡುಗಡೆಯಾಗಿದೆ.
ಇದನ್ನೂ ಓದಿ: Leo poster: ಕಾಮ್ ಲುಕ್‌ನಲ್ಲಿ ದಳಪತಿ ವಿಜಯ್; ʻಲಿಯೋʼ ತೆಲುಗು ಪೋಸ್ಟರ್ ಔಟ್!
ಲಿಯೋʼ ಅಕ್ಟೋಬರ್ 19ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೊದ ಲಲಿತ್ ಕುಮಾರ್ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ʼಲಿಯೋʼ ಚಿತ್ರದಲ್ಲಿ ಸಂಜಯ್ ದತ್ ಅಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಳಪತಿ ವಿಜಯ್ (Thalathy Vijay) ಹಾಗೂ ಲೋಕೇಶ್ ಕನಕರಾಜ್ ʼಲಿಯೋʼ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡುತ್ತಿದೆ. ಈಗಾಗಲೆ ಸಿನಿಮಾದ ಫಸ್ಟ್ ಲುಕ್ ಹಾಗೂ ಮೊದಲ ಸಾಂಗ್ ʻನಾ ರೆಡಿʼ ಬಿಡುಗಡೆಗೊಂಡಿದೆ. ʼಮಾಸ್ಟರ್ʼ ಸಿನಿಮಾ ಬಳಿಕ ವಿಜಯ್ ಮತ್ತು ಲೋಕೇಶ್ ಕನಕರಾಜ್ ಮತ್ತೆ ಈ ಸಿನಿಮಾ ಮೂಲಕ ಒಂದಾಗಿದ್ದಾರೆ. ʼಲಿಯೋʼ ಚಿತ್ರಕ್ಕೆ ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನವಿದೆ.
South Cinema
Sai Pallavi: ಮದುವೆ ವದಂತಿ ಬಗ್ಗೆ ಕೊನೆಗೂ ಬಾಯ್ಬಿಟ್ಟ ಸಾಯಿ ಪಲ್ಲವಿ!
Sai Pallavi: ಆ ಚಿತ್ರ ನೋಡಿದವರೆಲ್ಲ ಸಾಯಿ ಪಲ್ಲವಿ ಮದುವೆಯಾಗಿದ್ದಾರೆ ಎಂದೇ ನಂಬಿಕೊಂಡು ಚಿತ್ರವನ್ನು ಇನ್ನಷ್ಟು ವೈರಲ್ ಮಾಡಿದ್ದರು. ಇದೀಗ ನಟಿ ಈ ಬಗ್ಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ.
ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಹಲವು ದಿನಗಳಿಂದ ಸಾಯಿ ಪಲ್ಲವಿ (Sai Pallavi) ಮದುವೆಯಾಗಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿತ್ತು. ನಟಿ ಖ್ಯಾತ ನಿರ್ದೇಶಕನ ಜತೆ ಸಿಂಪಲ್ ಆಗಿ ಮದುವೆಯಾಗಿದ್ದಾರೆ ಎಂದು ಹೇಳಾಗುತ್ತಿತ್ತು. ಈ ಅನುಮಾನಕ್ಕೆ ಕಾರಣವಾಗಿದ್ದು ಒಂದು ಫೋಟೊ. ಸಾಯಿ ಪಲ್ಲವಿ ಹಾರ ಹಾಕಿಕೊಂಡು ವ್ಯಕ್ತಿಯೊಬ್ಬರ ಪಕ್ಕ ನಿಂತಿದ್ದರು. ಆ ಚಿತ್ರ ನೋಡಿದವರೆಲ್ಲ ಸಾಯಿ ಪಲ್ಲವಿ ಮದುವೆಯಾಗಿದ್ದಾರೆ ಎಂದೇ ನಂಬಿಕೊಂಡು ಚಿತ್ರವನ್ನು ಇನ್ನಷ್ಟು ವೈರಲ್ ಮಾಡಿದ್ದರು. ಇದೀಗ ನಟಿ ಈ ಬಗ್ಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ.
ʻʻನಾನು ವದಂತಿಗಳಿಗೆ ಹೆದರುವುದಿಲ್ಲ. ಆದರೆ ಕುಟುಂಬ ಸ್ನೇಹಿತರ ವಿಚಾರಕ್ಕೆ ಬಂದಾಗ ಇಂತಹ ವಿಚಾರಗಳಿಗೆ ಪ್ರತಿಕ್ರಿಯೆ ನೀಡಲೇ ಬೇಕು. ಆ ಫೋಟೊ ನನ್ನ ಮದುವೆಯದ್ದಲ್ಲ. ಸಿನಿಮಾ ಮುಹೂರ್ತ ವೇಳೆ ತೆಗೆದ ಫೋಟೊ. ಸಮಾರಂಭದ ಫೋಟೊವನ್ನು ಈ ರೀತಿ ಉಪಯೋಗಿಸಿಕೊಂಡು ಕೆಟ್ಟ ಉದ್ದೇಶದಿಂದ ಆ ಚಿತ್ರವನ್ನು ವೈರಲ್ ಮಾಡಲಾಗಿದೆ. ನನ್ನ ಕೆಲಸದ ಬಗ್ಗೆ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳಬೇಕಾದ ಸಮಯದಲ್ಲಿ, ಈ ರೀತಿಯ ಅನಾವಶ್ಯಕ ವಿಷಯಗಳ ಬಗ್ಗೆ ವಿವರಿಸುವ ಸನ್ನಿವೇಶ ಸೃಷ್ಟಿಯಾಗಿರುವ ಬಗ್ಗೆ ಬೇಸರವಿದೆʼʼಎಂದು ಟ್ವೀಟ್ ಮಾಡಿದ್ದಾರೆ.
ಸಾಯಿ ಸಾಂಪ್ರದಾಯಿಕ ಅವತಾರದಲ್ಲಿ ಬಿಳಿ ಕುರ್ತಾ ಮತ್ತು ಗೋಲ್ಡನ್-ಕಂದು ಬಣ್ಣದ ದುಪಟ್ಟಾವನ್ನು ಧರಿಸಿರುವ ಚಿತ್ರವು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಾಗ ವದಂತಿ ಶುರುವಾಯಿತು. ಅವರ ಪಕ್ಕದಲ್ಲಿ ನಿಂತಿರುವ ವ್ಯಕ್ತಿ ಚಿತ್ರದ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ. ಚಿತ್ರದ ಕ್ಲ್ಯಾಪ್ ಬೋರ್ಡ್ ಹಿಡಿದು ನಿಂತಿದ್ದರು. ಈವೆಂಟ್‌ನ ಇತರ ಚಿತ್ರಗಳಲ್ಲಿ, SK21 ಚಿತ್ರದ ನಾಯಕ ನಟ ಶಿವಕಾರ್ತಿಕೇಯನ್ ಮತ್ತು ಹಿರಿಯ ನಟ ಕಮಲ್ ಹಾಸನ್ ಕೂಡ ನಿಂತಿದ್ದಾರೆ. ಇಬ್ಬರೂ ಮಹೂರ್ತ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿದ್ದರು. ಕಳೆದ ವರ್ಷ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ ಗಾರ್ಗಿ ಚಿತ್ರದಲ್ಲಿ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡರು.
ಇದನ್ನೂ ಓದಿ: Sai Pallavi: ಮತ್ತೆ ಒಂದಾದ ‘ಲವ್ ಸ್ಟೋರಿ’ ಜೋಡಿ; ಸಾಯಿ ಪಲ್ಲವಿ ಫ್ಯಾನ್ಸ್‌ಗೆ ಗುಡ್ ನ್ಯೂಸ್!
ಸಾಯಿ ಪಲ್ಲವಿ ಟ್ವೀಟ್
Honestly, I don’t care for Rumours but when it involves friends who are family, I have to speak up.
— Sai Pallavi (@Sai_Pallavi92) September 22, 2023
An image from my film’s pooja ceremony was intentionally cropped and circulated with paid bots & disgusting intentions.
When I have pleasant announcements to share on my work…
The picture that is circulating on social media platforms is from Saipallavi's new movie #SK21 POOJA OPENING CEREMONY PIC!#SaiPallavi @Sai_Pallavi92 pic.twitter.com/N8SWTiojCA
— Sai Pallavi FC™ (@SaipallaviFC) September 20, 2023
ಇದನ್ನೂ ಓದಿ: Sai Pallavi: ಮತ್ತೆ ಒಂದಾದ ‘ಲವ್ ಸ್ಟೋರಿ’ ಜೋಡಿ; ಸಾಯಿ ಪಲ್ಲವಿ ಫ್ಯಾನ್ಸ್‌ಗೆ ಗುಡ್ ನ್ಯೂಸ್!
ಮತ್ತೆ ಒಂದಾದ ‘ಲವ್ ಸ್ಟೋರಿ’ ಜೋಡಿ
ಟಾಲಿವುಡ್ ಯುವ ಸಾಮ್ರಾಟ ನಾಗಚೈತನ್ಯ 23ನೇ ಸಿನಿಮಾಗೆ ನಾಯಕಿಯಾಗಿ ಸಾಯಿ ಪಲ್ಲವಿ (Sai Pallavi:) ಆಯ್ಕೆಯಾಗಿದ್ದಾರೆ. ʻಲವ್ ಸ್ಟೋರಿʼ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಮತ್ತೆ ಒಂದಾಗುತ್ತಿರುವುದು ನಿರೀಕ್ಷೆ ಹೆಚ್ಚಿಸಿದೆ. ಕಾರ್ತಿಕೇಯ-2ನಂತಹ ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರುವ ಚಂದು ಮೊಂಡೇಟಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ NC23 ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿದೆ. ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಈ ಸಿನಿಮಾವನ್ನು ಪ್ರಸ್ತುತಪಡಿಸ್ತಿದ್ದು, ಬನ್ನಿ ವಾಸ್ ಗೀತಾ ಆರ್ಟ್ಸ್ ಬ್ಯಾನರ್‌ನಡಿ ನಿರ್ಮಾಣ ಮಾಡುತ್ತಿದ್ದಾರೆ.ಮೀನುಗಾರರ ಸಮುದಾಯದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ಇದಾಗಿದೆ.
South Cinema
Atlee Kumar: ಲೋಕೇಶ್, ಕಾರ್ತಿಕ್ ಸುಬ್ಬರಾಜ್‌ಕ್ಕಿಂತ ನಾನು ಭಿನ್ನ ಎಂದ ಅಟ್ಲೀ!
Atlee Kumar: ಅಟ್ಲಿ ತಮ್ಮ ಮತ್ತು ಇತರ ಜನಪ್ರಿಯ ನಿರ್ದೇಶಕರ ನಡುವಿನ ವ್ಯತ್ಯಾಸಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಬೆಂಗಳೂರು: ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ನಿರ್ದೇಶಕರಲ್ಲಿ ಈಗ ಅಟ್ಲೀ (Atlee Kumar) ಕೂಡ ಒಬ್ಬರು. ಅಟ್ಲೀ ʻಜವಾನ್ʼ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಇತರ ಯಶಸ್ವಿ ನಿರ್ದೇಶಕರ ನಡುವೆ ಹೋಲಿಕೆ ಮಾಡಲು ಈಗಾಗಲೇ ಶುರುವಾಗಿದೆ. ಅಟ್ಲಿ ತಮ್ಮ ಮತ್ತು ಇತರ ಜನಪ್ರಿಯ ನಿರ್ದೇಶಕರ ನಡುವಿನ ವ್ಯತ್ಯಾಸಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಅಟ್ಲೀ ತಮ್ಮ ಮತ್ತು ಇತರ ಜನಪ್ರಿಯ ನಿರ್ದೇಶಕರ ನಡುವಿನ ವ್ಯತ್ಯಾಸಗಳ ಬಗ್ಗೆ ಸಂವಾದದಲ್ಲಿ ಮಾತನಾಡಿ ʻʻಕಾರ್ತಿಕ್ ಸುಬ್ಬರಾಜ್, ಲೋಕೇಶ್ ಕನಕರಾಜ್, ಮತ್ತು ಪಾ ರಂಜಿತ್ ಅವರಂತಹ ಇತರ ಫೇಮಸ್ ತಮಿಳು ನಿರ್ದೇಶಕರಿಗಿಂತ ನಾನು ಭಿನ್ನ. ನೋಡಿದ ದೈಶ್ಯಗಳನ್ನೇ ಮತ್ತೆ ಮತ್ತೆ ತರುತ್ತಾರೆ ಎಂದು ಜನರು ಹಲವು ಬಾರಿ ನನ್ನನ್ನು ಟೀಕೆ ಮಾಡಿದ್ದುಂಟು. ಕಾರ್ತಿಕ್ ಸುಬ್ಬರಾಜ್, ಲೋಕೇಶ್ ಮತ್ತು ಪಾ ರಂಜಿತ್ ಅವರಂತಹ ನನ್ನ ಸ್ನೇಹಿತರನ್ನು ನೋಡಿದರೆ ಅವರ ಸಿನಿಮಾ, ಚಿತ್ರನಿರ್ಮಾಣ, ಸಾಮಾಜಿಕ ಸಮಸ್ಯೆಗಳು, ಇತ್ಯಾದಿ ಕಟೆಂಟ್‌ಗಳು ಒಳಗೊಂಡಿರುತ್ತದೆ. ನಾನು ಮಾಡುವ ಸಿನಿಮಾಗಿಂತ ಭಿನ್ನವಾಗಿರುತ್ತದೆ. ನಾನು ಮಾತ್ರ ಕಮರ್ಷಿಲ್ ಸಿನಿಮಾ ಮಾಡುವಲ್ಲಿ ನಂಬುವವನು. ಮಾಸ್ ಸಿನಿಮಾವಾಗಿಯೇ ಮಾಡಬೇಕು ಎಂದು ಹೇಳುವವನು. ನನ್ನ ಉದ್ದೇಶ ಪ್ರೇಕ್ಷಕರನ್ನು ರಂಜಿಸಲು ಮತ್ತು ನನ್ನ ಪಾತ್ರಗಳಿಗೆ ಅವರಿಗೆ ಭಾವನೆ ಮೂಡಿಸಲು. ನಾನು ಇಲ್ಲಿಯವರೆಗೆ ಯಶಸ್ವಿಯಾಗಿದ್ದೇನೆ ಎಂದು ನಾನು ಭಾವಿಸುತ್ತೇನೆʼʼಎಂದು ಹೇಳಿಕೊಂಡರು. ತಮಿಳಿನ ಇತರ ಪ್ರಮುಖ ನಿರ್ದೇಶಕರೊಂದಿಗೂ ತಾನು ಸ್ನೇಹಿತನಾಗಿದ್ದೇನೆ ಎಂದು ಅಟ್ಲೀ ಸ್ಪಷ್ಟಪಡಿಸಿದ್ದಾರೆ.
ಅಟ್ಲೀ ಅವರು ಅಲ್ಲು ಅರ್ಜುನ್ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ವದಂತಿಗಳು ಇತ್ತು. ಈ ಬಗ್ಗೆ ಅಟ್ಲೀ ಮಾತನಾಡಿ ʻʻಅಲ್ಲು ಸರ್ ತುಂಬಾ ಒಳ್ಳೆಯ ಸ್ನೇಹಿತ. ನಾವಿಬ್ಬರೂ ಕಲೆಯನ್ನು ಪ್ರೀತಿಸುತ್ತೇವೆ. ಸಹಜವಾಗಿ, ನಾವು ಏನು ಸಿನಿಮಾ ಮಾಡಬೇಕು ಮತ್ತು ಹೇಗೆ ಸಿನಿಮಾ ಮಾಡಬೇಕು ಎಂಬ ಕಲ್ಪನೆಯನ್ನು ಹೊಂದಿದ್ದೇವೆ. ಚಿತ್ರವು ದೇವರ ಆಶೀರ್ವಾದದೊಂದಿಗೆ ಸರಿಯಾದ ಸ್ಕ್ರಿಪ್ಟ್ ರೂಪದಲ್ಲಿ ಸಿಗಬೇಕು. ಆದ್ದರಿಂದ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೇ ಖಂಡಿತ ಮಾಡುತ್ತೇವೆʼʼಎಂದು ಹೇಳಿದರು.
ಇದನ್ನೂ ಓದಿ: Coming Movies 2023: Top 5 Most expected Upcoming movies on 2023
ವಿಜಯ್ ಜತೆ ಸಿನಿಮಾ ಮಾಡುವುದು ಪಕ್ಕಾ!
ಥೇರಿ, ಮೆರ್ಸಲ್ ಮತ್ತು ಬಿಗಿಲ್ ಈ ಜೋಡಿಯ ಈ ಎಲ್ಲ ಸಿನಿಮಾಗಳೂ ಹಿಟ್ ಆಗಿವೆ. ಈ ಜೋಡಿ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿದೆ. ಇದೀಗ ಮತ್ತೆ ಹೊಸ ಸಿನಿಮಾ ಮೂಲಕ ದಳಪತಿ ವಿಜಯ್ ಮತ್ತು ಅಟ್ಲೀ ಒಂದಾಗುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಜವಾನ್ ನಿರ್ದೇಶಕ ಅಟ್ಲೀ ನಾಲ್ಕನೇ ಬಾರಿಗೆ ವಿಜಯ್ ಜತೆ ಮತ್ತೆ ಸಿನಿಮಾ ಮಾಡುವುದಾಗಿ ಸುಳಿವು ಕೊಟ್ಟಿದ್ದಾರೆ.
ಈ ಬಗ್ಗೆ ಅಟ್ಲೀ ಮಾಧ್ಯಮವೊಂದರಲ್ಲಿ ಮಾತನಾಡಿ ʻನಾನು ಕೇವಲ 5 ಸಿನಿಮಾಗಳನ್ನು ಮಾಡಿದ್ದು, ಅದರಲ್ಲಿ 3 ವಿಜಯ್ ಅವರೊಂದಿಗೆ ಮಾಡಿರುವುದಾಗಿದೆ. ಹಾಗಾಗಿ, ಸಮಯ ಬಂದಾಗ ಮತ್ತೆ ಅವರ ಜತೆ ಸಿನಿಮಾ ಮಾಡುತ್ತೇನೆʼʼ ಎಂದು ಖಚಿತಪಡಿಸಿದ್ದಾರೆ.
South Cinema
Shiva Rajkumar: ʻಘೋಸ್ಟ್ʼ ಸಿನಿಮಾ ಹಾಡಿಗೆ ಶಿವಣ್ಣನ ಫ್ಯಾನ್ಸ್ ಫಿದಾ!
Shiva Rajkumar: ಹಾಡು ಸಖತ್ ಆಗಿದೆ ಎಂದು ಶಿವಣ್ಣನ ಫ್ಯಾನ್ಸ್ (GHOST OGM) ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರತಂಡ ‘ಒಎಂಜಿ ಮ್ಯೂಸಿಕ್’ ರಿಲೀಸ್ ಮಾಡಿದೆ. ಒಂದೇ ವಿಡಿಯೊದಲ್ಲಿ ಕನ್ನಡ, ಮಲಯಾಳಂ, ತಮಿಳಿನ ಲಿರಿಕ್ಸ್ ಇದೆ.
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್ (Shiva Rajkumar) ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ “ಘೋಸ್ಟ್” ಚಿತ್ರದ ಸಾಂಗ್ ರಿಲೀಸ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ಹಾಡನ್ನು ಅರ್ಜುನ್ ಜನ್ಯಾ ಕಂಪೋಸ್ ಮಾಡಿದ್ದು, ಹಾಡು ಸಖತ್ ಆಗಿದೆ ಎಂದು ಶಿವಣ್ಣನ ಫ್ಯಾನ್ಸ್ (GHOST OGM) ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರತಂಡ ‘ಒಎಂಜಿ ಮ್ಯೂಸಿಕ್’ ರಿಲೀಸ್ ಮಾಡಿದೆ. ಒಂದೇ ವಿಡಿಯೊದಲ್ಲಿ ಕನ್ನಡ, ಮಲಯಾಳಂ, ತಮಿಳಿನ ಲಿರಿಕ್ಸ್ ಇದೆ.
ಈಗಾಗಲೇ ಸಿನಿಮಾದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸಿರುವ, ಶ್ರೀನಿ ನಿರ್ದೇಶನದ ಈ ಸಿನಿಮಾ ಮತ್ತೆ ಸುದ್ದಿಯಲ್ಲಿದೆ .”ಆರ್ ಆರ್ ಆರ್”, “ಜವಾನ್” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಪೆನ್ ಸ್ಟುಡಿಯೊ ಸಂಸ್ಥೆ ಈಗ “ಘೋಸ್ಟ್” ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದೆ.
ಈಗ ‘ಘೋಸ್ಟ್’ ಚಿತ್ರದ ತೆಲುಗು ಹಾಗೂ ಹಿಂದಿಯ ವಿತರಣಾ ಹಕ್ಕನ್ನು ಪಡೆದುಕೊಂಡಿದೆ ಎಂದು ಸಂದೇಶ್ ತಿಳಿಸಿದ್ದಾರೆ. ಅಂದಹಾಗೆ, ಎಷ್ಟು ಕೋಟಿ ಬಿಸ್ನೆಸ್ ಆಗಿದೆ ಎನ್ನುವ ಲೆಕ್ಕಾಚಾರವನ್ನು ತಂಡದವರು ನೀಡಿಲ್ಲ. ಇತ್ತೀಚೆಗೆ ಪೆನ್ ಸ್ಟುಡಿಯೊ ಸಂಸ್ಥೆ ಮುಖ್ಯಸ್ಥರಾದ ಜಯಂತಿ ಲಾಲ್ ಗಡ ಹಾಗೂ ನಿರ್ಮಾಪಕ ಸಂದೇಶ್ ಈ ಕುರಿತು ಮಾತನಾಡಿದ್ದರು. ಅಕ್ಟೋಬರ್ ಮೊದಲವಾರ “ಘೋಸ್ಟ್” ಚಿತ್ರದ ಪ್ರಚಾರಕ್ಕಾಗಿ ಶಿವ ರಾಜ್‌ಕುಮಾರ್ ಮುಂಬೈ, ದೆಹಲಿ ಮುಂತಾದ ಕಡೆ ತೆರಳುತ್ತಿದ್ದಾರೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ.
ಇದನ್ನೂ Shiva Rajkumar: ನಿಖಿಲ್ ಸಿನಿಮಾ ಸೆಟ್‌ಗೆ ಸಡನ್ ಭೇಟಿ ಕೊಟ್ಟ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್!ಓದಿ:
ಬಾಲಿವುಡ್ ನಟ ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.ಕೆಜಿಎಫ್ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಕಾಣಿಸಿಕೊಳ್ಳಲಿದ್ದಾರೆ. ಟೋಪಿವಾಲ, ಶ್ರೀನಿವಾಸ ಕಲ್ಯಾಣ, ಓಲ್ಡ್ ಮಾಂಕ್ ಸಿನಿಮಾ ಖ್ಯಾತಿಯ ಎಂ.ಜಿ.ಶ್ರೀನಿವಾಸ್ ಅವರು ಘೋಸ್ಟ್ ಸಿನಿಮಾನವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾಗೆ ಅರ್ಜುನ್ ಜನ್ಯಾ ಸಂಗೀತ ಇದ್ದರೆ, ಸಂದೇಶ್ ನಾಗರಾಜ್ ನಿರ್ಮಾಪಕರಾಗಿದ್ದಾರೆ.ಅಕ್ಟೋಬರ್ 19ರಂದು ಸಿನಿಮಾ ರಿಲೀಸ್ ಆಗಲಿದೆ.
South Cinema
Actress Nayanthara: ನಿರ್ದೇಶಕ ಅಟ್ಲೀ ಜತೆ ಇರುವ ಫೋಟೊ ಹಂಚಿಕೊಂಡ ನಯನತಾರಾ; ಮುನಿಸಿಗೆ ತೆರೆ ಎಳೆದರೆ?
Actress Nayanthara: ನಯನತಾರಾ ದಕ್ಷಿಣದ ಪ್ರಮುಖ ನಟಿ, ಆದ್ದರಿಂದ ಅವರು ಜವಾನ್ ಸಿನಿಮಾ ಬಗ್ಗೆ ಸಂತೋಷವಾಗಿರಲಿಲ್ಲ. ಇನ್ನು ಮುಂದೆ ಯಾವುದೇ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸುವುದಿಲ್ಲ ಎಂದು ನಯನತಾರಾ ಅಸಮಾಧಾನ ಹೊರ ಹಾಕಿದ್ದಾರೆ ಎಂದು ವರದಿಯಾಗಿತ್ತು.
ಬೆಂಗಳೂರು: ನಯನತಾರಾ ಮತ್ತು ಅಟ್ಲೀ (Actress Nayanthara) ನಡುವೆ ವೈಮನಸ್ಸಿದೆ ಎಂದು ವರದಿಯಾಗಿತ್ತು. ಆದರೀಗ ನಟಿ ಅಟ್ಲೀ ಅವರ ಜನುಮದಿನಕ್ಕೆ (Atlee on birthday) ಶುಭ ಹಾರೈಸುವ ಮೂಲಕ ಈ ವದಂತಿಗಳಿಗೆ ಅವರು ತೆರೆ ಎಳೆದಿದ್ದಾರೆ. ನಯನತಾರಾ ಅವರು ಇನ್‌ಸ್ಟಾ ಸ್ಟೋರಿಯಲ್ಲಿ ಜವಾನ್‌ನ (Jawan Set) ಸೆಟ್‌ಗಳಲ್ಲಿ ತೆರೆಮರೆಯ ಸ್ಟಿಲ್‌ಗಳ ಕೊಲಾಜ್ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಸ್ಟಿಲ್ ಒಂದರಲ್ಲಿ ಅಟ್ಲೀ ಹಾಗೂ ನಯನತಾರಾ ಒಟ್ಟಿಗೆ ನಗುತ್ತಿರುವುದನ್ನೂ ಕಾಣಬಹುದು. ನಯನತಾರಾ ಅವರು ಶೀರ್ಷಿಕೆಯಲ್ಲಿ “ಜನ್ಮದಿನದ ಶುಭಾಶಯಗಳು ಅಟ್ಲೀ . ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆʼʼ ಎಂದು ಬರೆದುಕೊಂಡಿದ್ದಾರೆ.
ಅಸಮಾಧಾನದ ವದಂತಿಗಳು ಹಬ್ಬಿದ್ದೇಕೆ?
ಶಾರುಖ್ ಖಾನ್ (Shah Rukh Khan) ಅವರ ಬ್ಲಾಕ್‌ಬಸ್ಟರ್ ಸಿನಿಮಾ ʻಜವಾನ್ʼನಲ್ಲಿ ನಟಿ ನಯನತಾರಾ(Nayanthara) ಏಜೆಂಟ್ ನರ್ಮದಾ ರಾಯ್ ಪಾತ್ರವನ್ನು ನಿರ್ವಹಿಸಿದ್ದಾರೆ. ಶಾರುಖ್-ನಯನತಾರಾ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಆದರೆ, ನಯನತಾರಾ ಅವರಿಗೆ ಅಟ್ಲಿ ಕುರಿತು ಅಸಮಾಧಾನ ಇದೆ ಎಂದು ವರದಿಯಾಗಿತ್ತು. ಚಿತ್ರದಲ್ಲಿ ತಮ್ಮ ಪಾತ್ರವನ್ನು ಹಲವು ಕಡೆ ಕತ್ತರಿಸಿದ್ದರಿಂದ ಅಟ್ಲಿಯೊಂದಿಗೆ ನಯನತಾರಾ ತುಂಬಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿತ್ತು. ಅಲ್ಲದೆ, ದೀಪಿಕಾ ಅವರ ಪಾತ್ರವನ್ನು ಹೆಚ್ಚು ಹೈಲೈಟ್ ಮಾಡಿರುವ ಬಗ್ಗೆ ನಟಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದೂ ವರದಿಯಾಗಿತ್ತು.
ಚಿತ್ರದಲ್ಲಿ ವಿಕ್ರಮ್ ರಾಥೋಡ್ (ಶಾರುಖ್) ಪತ್ನಿಯಾಗಿ ದೀಪಿಕಾ ಪಡುಕೋಣೆ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಮೂಲ ಪ್ರಕಾರ ದೀಪಿಕಾ ಅವರದ್ದು ಅತಿಥಿ ಪಾತ್ರವಲ್ಲ. ಬದಲಿಗೆ ಜವಾನ್ ಅನ್ನು “ಶಾರುಖ್-ದೀಪಿಕಾ” ಚಿತ್ರದಂತೆ ಕಾಣುವಂತೆ ಮಾಡಲಾಗಿದೆ ಎಂದು ಹೇಳಿದೆ. ಇದು ಅತಿಥಿ ಪಾತ್ರವಾಗಿರಲಿಲ್ಲ. ಜವಾನ್ ಅನ್ನು ಬಹುತೇಕ ಶಾರುಖ್-ದೀಪಿಕಾ ಚಿತ್ರದಂತೆ ಕಾಣುವಂತೆ ಮಾಡಲಾಗಿದೆ. ನಯನತಾರಾ ದಕ್ಷಿಣದ ಪ್ರಮುಖ ನಟಿ, ಆದ್ದರಿಂದ ಅವರು ಜವಾನ್ ಸಿನಿಮಾ ಬಗ್ಗೆ ಸಂತೋಷವಾಗಿರಲಿಲ್ಲ. ಇನ್ನು ಮುಂದೆ ಯಾವುದೇ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸುವುದಿಲ್ಲ ಎಂದು ನಯನತಾರಾ ಅಸಮಾಧಾನ ಹೊರ ಹಾಕಿದ್ದಾರೆ ಎಂದು ವರದಿಯಾಗಿತ್ತು.
ಇದನ್ನೂ ಓದಿ: Actress Nayanthara: ದೀಪಿಕಾ ಹೈಲೈಟ್ ಆಗಿದ್ದಕ್ಕೆ ಬಾಲಿವುಡ್ ಸಿನಿಮಾ ಮಾಡದಿರಲು ನಯನತಾರಾ ನಿರ್ಧಾರ?
ಇತ್ತೀಚೆಗೆ ಮುಂಬೈನಲ್ಲಿ ‘ಜವಾನ್’ ಸಿನಿಮಾದ ಸಕ್ಸಸ್ ಮೀಟ್ ಆಯೋಜನೆ ಮಾಡಲಾಗಿತ್ತು. ಆದರೆ, ಇದರಲ್ಲಿ ನಯನತಾರಾ ಅವರು ಭಾಗಿ ಆಗಿರಲಿಲ್ಲ. ಶಾರುಖ್ ಖಾನ್, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಅನಿರುದ್ಧ್ ರವಿಚಂದರ್, ಅಟ್ಲಿ, ಸಾನ್ಯಾ ಮಲ್ಹೋತ್ರಾ ಹಾಗೂ ರಿಧಿ ದೋಗ್ರಾ ಭಾಗವಹಿಸಿದ್ದರು. ಜವಾನ್ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ. ಮತ್ತು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 900 ಕೋಟಿ ರೂ. ಗಳಿಕೆ ದಾಟಿದೆ.
-
ಪ್ರಮುಖ ಸುದ್ದಿ21 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ12 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ18 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ2 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಗ್ಯಾಜೆಟ್ಸ್14 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ದೇಶ13 hours ago
Prisoners Escape: ವ್ಯಾನ್ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಕ್ರೈಂ13 hours ago
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
-
ಉತ್ತರ ಕನ್ನಡ14 hours ago
ದೇವಾಲಯದ ಅವಶೇಷಕ್ಕೆ ಕಲ್ಲೆಸೆದ ಅನ್ಯಕೋಮಿನ ಯುವಕರು; ಹಿಂದು ಸಂಘಟನೆಗಳು ಕಿಡಿ