Vasishta Simha | ನಟ ಪ್ರಭುದೇವ 60ನೇ ಸಿನಿಮಾದಲ್ಲಿ ನಟ ವಸಿಷ್ಠ ಸಿಂಹ! Vistara News

ಕಾಲಿವುಡ್

Vasishta Simha | ನಟ ಪ್ರಭುದೇವ 60ನೇ ಸಿನಿಮಾದಲ್ಲಿ ನಟ ವಸಿಷ್ಠ ಸಿಂಹ!

ನಟ ಪ್ರಭುದೇವ ಅವರ 60ನೇ ಸಿನಿಮಾ ‘ವೂಲ್ಫ್ ‘ನಲ್ಲಿ ವಸಿಷ್ಠ ಸಿಂಹ (Vasishta Simha ) ನಟಿಸಿದ್ದು, ಸಿನಿಮಾದ ಟೈಟಲ್ ಲುಕ್ ರಿವೀಲ್ ಮಾಡಲಾಗಿದೆ. ಸ

VISTARANEWS.COM


on

Vasishta Simha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಸ್ಯಾಂಡಲ್‌ವುಡ್‌ ನಟ ವಸಿಷ್ಠ ಸಿಂಹ (Vasishta Simha) ತಮ್ಮ ಮದುವೆ ಸುದ್ದಿ ಬೆನ್ನಲ್ಲೇ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ನಟ ಪ್ರಭುದೇವ ಅವರ 60ನೇ ಸಿನಿಮಾ ‘ವೂಲ್ಫ್ ‘ನಲ್ಲಿ ವಸಿಷ್ಠ ಸಿಂಹ ನಟಿಸಿದ್ದು, ಸಿನಿಮಾದ ಟೈಟಲ್ ಲುಕ್ ರಿವೀಲ್ ಮಾಡಲಾಗಿದೆ. ಸದ್ಯ ಕನ್ನಡದ ʻಲವ್‌ ಲಿʼ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

ತಮಿಳು ಚಿತ್ರರಂಗಕ್ಕೆ ವಸಿಷ್ಠ ಸಿಂಹ ಎಂಟ್ರಿ ಕೊಡುತ್ತಿದ್ದು, ನಟ ಪ್ರಭುದೇವ ಅವರ 60ನೇ ಚಿತ್ರ ವೂಲ್ಫ್‌ನಲ್ಲಿ ನಟಿಸಿರುವುದಾಗಿ ಹೇಳಿದ್ದಾರೆ. ʻವೂಲ್ಫ್ ‘ ಸಿನಿಮಾಗೆ ವಿನೂ ವೆಂಕಟೇಶ್ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವಾಗಿದ್ದು, ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದೆ.

ಸಂದೇಶ್ ಎನ್ ನಿರ್ಮಿಸಿರುವ ಈ ಚಿತ್ರವೂ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ‘ವೂಲ್ಫ್ ‘ ಸಿನಿಮಾದಲ್ಲಿ ವಸಿಷ್ಠ ಸಿಂಹ ಸೇರಿದಂತೆ ಅಂಜು ಕುರಿಯನ್, ಅನುಸೂಯ ಭಾರದ್ವಾಜ್, ರೈ ಲಕ್ಷ್ಮೀ, ಶ್ರೀಗೋಪಿಕಾ ಮತ್ತು ರಮೇಶ್ ತಿಲಕ್ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ‘ವೂಲ್ಫ್ ‘ ಚಿತ್ರವನ್ನು ಪುದುಚೇರಿ, ಚೆನ್ನೈ, ಬೆಂಗಳೂರು, ಅಂಡಮಾನ್ ಮತ್ತು ನಿಕೋಬಾರ್ ನ ವಿಶಿಷ್ಟ ಸ್ಥಳಗಳಲ್ಲಿ 25 ದಿನಗಳ ಕಾಲ ಚಿತ್ರೀಕರಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಮಾರ್ಚ್‌ನಲ್ಲಿ ಈ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

ಇದನ್ನೂ ಓದಿ | Vasishta Simha | ವಸಿಷ್ಠ ಸಿಂಹ ಅಭಿನಯದ ‘ಲವ್ ಲಿ’ ಸಿನಿಮಾದಲ್ಲಿ ಕೋಟಿ ರೂಪಾಯಿ ವೆಚ್ಚದ ಸೆಟ್

ಮದುವೆ ತಯಾರಿಯಲ್ಲಿದೆ ಸಿಂಹಪ್ರಿಯ ಜೋಡಿ
ಜನವರಿ 26ರಂದು ಅದ್ಧೂರಿ ಕಲ್ಯಾಣಕ್ಕೆ ರೆಡಿಯಾಗಿದೆ ಜೋಡಿ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಿಂಹಪ್ರಿಯಾ ವಿವಾಹ ಆಗುತ್ತಿದ್ದಾರೆ. ಜನವರಿ 28 ರಂದು (ಶನಿವಾರ) ಸಂಜೆ 7 ಗಂಟೆಯಿಂದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆರತಕ್ಷತೆ ತುಮಕೂರು ರಸ್ತೆಯ ಗೋಲ್ಡನ್ ಪಾಮ್ಸ್ ರೆಸಾರ್ಟ್‌ನಲ್ಲಿ ಜರುಗಲಿದೆ. ಮದುವೆಯ ಆಮಂತ್ರಣ (Wedding Card) ಕಾರ್ಡ್‌ನಲ್ಲಿ ಸಿಂಹಪ್ರಿಯಾ (Simhapriya) ಎಂಬ ಟ್ಯಾಗ್‌ಲೈನ್ ಇದೆ. ಅಭಿಮಾನಿಗಳು ಪ್ರೀತಿಯಿಂದ ಈ ಜೋಡಿಗೆ ಕೊಟ್ಟಿರುವ ಸಿಂಹ ಪ್ರಿಯಾ ಟ್ಯಾಗ್ ಅನ್ನೇ ಪತ್ರಿಕೆಯಲ್ಲೂ ಮುದ್ರಿಸಲಾಗಿದೆ. ಪತ್ರಿಕೆಯ ಜತೆ ಮೇಣದ ಬತ್ತಿ ಮತ್ತು ವಿಶೇಷವಾಗಿರುವ ಗಿಡವೊಂದನ್ನು ನೀಡಲಾಗಿದೆ.

ಇದನ್ನೂ ಓದಿ | Vasishta Simha and Haripriya | ಲೋಹದ ಹಕ್ಕಿಗಳ ನಿಲ್ದಾಣದಲ್ಲಿ ಸ್ಯಾಂಡಲ್‌ವುಡ್‌ ಲವ್‌ ಬರ್ಡ್ಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

South Cinema

Jagadeesh Prathap Bandari; ಮಹಿಳೆ ಆತ್ಮಹತ್ಯೆ; ‘ಪುಷ್ಪ’ ಚಿತ್ರದ ನಟ ಅರೆಸ್ಟ್​!

Jagadeesh Prathap Bandari ಪೊಲೀಸರ ಪ್ರಕಾರ, ಜಗದೀಶ್ ಮತ್ತು ಆಕೆ ಕಿರುಚಿತ್ರಗಳಲ್ಲಿ ಕೆಲಸ ಮಾಡುವಾಗ ಸ್ನೇಹಿತರಾಗಿದ್ದರು. ಮಹಿಳೆ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಿನಿಮಾದ ಬಗ್ಗೆ ಒಲವು ಹೊಂದಿದ್ದ ಕಾರಣ ಆಕೆಗೆ ಜಗದೀಶನ ಪರಿಚಯವಾಗಿತ್ತು.

VISTARANEWS.COM


on

Pushpa actor Jagadeesh
Koo

ಬೆಂಗಳೂರು: ಅಲ್ಲು ಅರ್ಜುನ್ ಅಭಿನಯದ `ಪುಷ್ಪ’ (agadeesh Prathap Bandari) ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ಟಾಲಿವುಡ್ ನಟ ಜಗದೀಶ್ ಪ್ರತಾಪ್ ಬಂಡಾರಿ ಅವರನ್ನು ಅರೆಸ್ಟ್‌ ಮಾಡಲಾಗಿದೆ. ಮಹಿಳೆಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅಂಜಗುಟ್ಟ ಪೊಲೀಸರು ಬುಧವಾರ (ಡಿ.6) ಬಂಧಿಸಿದ್ದಾರೆ. ಜಗದೀಶ್​ ನೀಡಿದ ಕಿರುಕುಳ ತಾಳಲಾಗದೇ ಆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಜಗದೀಶ್ ಮತ್ತು ಆಕೆ ಕಿರುಚಿತ್ರಗಳಲ್ಲಿ ಕೆಲಸ ಮಾಡುವಾಗ ಸ್ನೇಹಿತರಾಗಿದ್ದರು. ಮಹಿಳೆ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಿನಿಮಾದ ಬಗ್ಗೆ ಒಲವು ಹೊಂದಿದ್ದ ಕಾರಣ ಆಕೆಗೆ ಜಗದೀಶನ ಪರಿಚಯವಾಗಿತ್ತು. ಕೆಲವು ದಿನಗಳ ಕಾಲ ಸಂಬಂಧದಲ್ಲಿದ್ದ ನಂತರ ಅವರು ಬೇರೆಯಾದರು. ಸಹ ನಟಿಯು ಬೇರೆ ಪುರುಷನ ಜತೆ ಖಾಸಗಿಯಾಗಿದ್ದ ಕ್ಷಣದ ಕೆಲವು ಫೋಟೊಗಳನ್ನು ಜಗದೀಶ್​ ಕ್ಲಿಕ್ಕಿಸಿಕೊಂಡಿದ್ದರು. ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್​ಲೋಡ್​ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಮನನೊಂದ ಮಹಿಳೆಯು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಆಕೆಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. ಆಕೆ ಮೃತಪಟ್ಟ ಬಳಿಕ ಜಗದೀಶ್ ತಲೆಮರೆಸಿಕೊಂಡಿದ್ದ ಎಂದು ವರದಿಯಾಗಿದೆ. ಆದರೆ ಬುಧವಾರ (ಡಿಸೆಂಬರ್ 6) ಅವರನ್ನು ಬಂಧಿಸಿ, ಕೋರ್ಟ್​ಗೆ ಹಾಜರುಪಡಿಸಲಾಗಿದೆ. ‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಅವರ ಸ್ನೇಹಿತನಾಗಿ ಕೇಶವ್​ ಎಂಬ ಪಾತ್ರವನ್ನು ಜಗದೀಶ್ ಮಾಡಿದ್ದಾರೆ. ‘ಪುಷ್ಪ 2’ ಸಿನಿಮಾದಲ್ಲೂ ಅವರ ಪಾತ್ರ ಇದೆ.

ಇದನ್ನೂ ಓದಿ: Childrens Day: ʼಚಾಚಾ ನೆಹರೂʼಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ; ಖರ್ಗೆ, ಸೋನಿಯಾರಿಂದ ಪುಷ್ಪನಮನ

ಕೆಲಸದ ಮುಂಭಾಗದಲ್ಲಿ, ಜಗದೀಶ್ ಕೊನೆಯದಾಗಿ ಮೈತ್ರಿ ಮೂವೀ ಮೇಕರ್ಸ್‌ನ ಸಣ್ಣ ಬಜೆಟ್ ಸಿನಿಮಾ ಸತ್ತಿಗಾನಿ ರೆಂಡು ಯೇಕರಾಲು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.ನಿತಿನ್ ಮತ್ತು ಶ್ರೀಲೀಲಾ ಅವರ ಎಕ್ಸ್‌ಟ್ರಾ ಆರ್ಡಿನರಿ ಮ್ಯಾನ್ ಮತ್ತು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಅಂಬಾಜಿಪೇಟ ಮ್ಯಾರೇಜ್ ಬ್ಯಾಂಡ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Continue Reading

South Cinema

Thug Life Movie: ಕಮಲ್ ಹಾಸನ್ ಸಿನಿಮಾದಲ್ಲಿ ಎಂಟ್ರಿ ಕೊಟ್ಟ ಗೌತಮ್ ಕಾರ್ತಿಕ್!

Thug Life Movie: ಇದಕ್ಕೂ ಮೊದಲು ಗೌತಮ್ ಕಾರ್ತಿಕ್ ಮಣಿರತ್ನಂ ಜತೆಗೆ 2010ರ ಚಲನಚಿತ್ರ ʻಕಡಲ್ʼನಲ್ಲಿ ಕೆಲಸ ಮಾಡಿದ್ದರು. ಇದರಲ್ಲಿ ಗೌತಮ್ ಮತ್ತು ತುಳಸಿ ನಾಯರ್ ನಟಿಸಿದ್ದಾರೆ. ಇದೀಗ ಕಮಲ್‌ ಅವರ ಥಗ್ ಲೈಫ್ ತಾರಾಗಣದಲ್ಲಿ ಗೌತಮ್ ಕೂಡ ಇರುವುದು ಖಚಿತವಾಗಿದೆ.

VISTARANEWS.COM


on

Mani Ratnam-Kamal Haasan film Thug Life
Koo

ಬೆಂಗಳೂರು: ಕಮಲ್ ಹಾಸನ್ (Thug Life Movie) ಮತ್ತು ಮಣಿರತ್ನಂ ಅವರು 1987ರ ʻನಾಯಗನ್ʼ ಚಿತ್ರದ ಬಳಿಕ ಮತ್ತೊಮ್ಮೆ ಕೈಜೋಡಿಸುತ್ತಿದ್ದಾರೆ. ತಮಿಳಿನ ಹಿರಿಯ ನಟ ಕಾರ್ತಿಕ್ ಅವರ ಪುತ್ರ ಗೌತಮ್ ಕಾರ್ತಿಕ್ ಕೂಡ ಕಮಲ್‌ ಸಿನಿಮಾ ಪಾತ್ರವರ್ಗಕ್ಕೆ ಸೇರುತ್ತಿದ್ದಾರೆ. ವರದಿಗಳ ಪ್ರಕಾರ, ಅವರು ನಿರ್ವಹಿಸುತ್ತಿರುವ ಪಾತ್ರ ಬಹು ಮುಖ್ಯವಾದದ್ದು ಎನ್ನಲಾಗಿದೆ.

ಇದಕ್ಕೂ ಮೊದಲು ಗೌತಮ್ ಕಾರ್ತಿಕ್ ಮಣಿರತ್ನಂ ಜತೆಗೆ 2010ರ ಚಲನಚಿತ್ರ ʻಕಡಲ್ʼನಲ್ಲಿ ಕೆಲಸ ಮಾಡಿದ್ದರು. ಇದರಲ್ಲಿ ಗೌತಮ್ ಮತ್ತು ತುಳಸಿ ನಾಯರ್ ನಟಿಸಿದ್ದಾರೆ. ಇದೀಗ ಕಮಲ್‌ ಅವರ ಥಗ್ ಲೈಫ್ ತಾರಾಗಣದಲ್ಲಿ ಗೌತಮ್ ಕೂಡ ಇರುವುದು ಖಚಿತವಾಗಿದೆ.

ಕಮಲ್ ಹಾಗೂ ಮಣಿರತ್ನಂ ಜೋಡಿಯ ಸಿನಿಮಾಗೆ ʼಥಗ್ ಲೈಫ್ʼ ಎಂಬ ಶೀರ್ಷಿಕೆ ಇಡಲಾಗಿದೆ. ರಂಗರಾಯ ಸತ್ಯವೇಲ್ ನಾಯಕನ್ ಆಗಿ ಎಂಟ್ರಿ ಕೊಟ್ಟಿರುವ ಕಮಲ್ ಹಾಸನ್ ತಾನೊಬ್ಬ ಗ್ಯಾಂಗ್ ಸ್ಟರ್ ಎಂದು ಪರಿಚಯ ಮಾಡಿಕೊಳ್ಳುತ್ತಾರೆ. ಭರ್ಜರಿ ಆ್ಯಕ್ಷನ್ ಮೂಲಕ ವಿರೋಧಿಗಳಿಗೆ ಟಕ್ಕರ್ ಕೊಡುವ ʼಉಳಗನಾಯಗನ್ʼ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಪಕ್ಕಾ ಆ್ಯಕ್ಷನ್ ಎಂಟರ್ ಟೈನರ್ ಕಥಾನಕ ‘ಥಗ್ ಲೈಫ್’ ಸಿನಿಮಾದಲ್ಲಿ ತ್ರಿಷಾ ಕೃಷ್ಣನ್, ದುಲ್ಕರ್ ಸಲ್ಮಾನ್, ಜಯಂರವಿ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ರಾಜ್ ಕಮಲ್ ಇಂಟರ್ ನ್ಯಾಷನಲ್ ಫಿಲ್ಮ್ಸ್ ಹಾಗೂ ಮದ್ರಾಸ್ ಟಾಕೀಸ್ ನಡಿ ಕಮಲ್ ಹಾಸನ್, ಮಣಿರತ್ನಂ, ಆರ್.ಮಹೇಂದ್ರನ್ ಮತ್ತು ಶಿವ ಅನಂತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: Actor Vinayakan: ‘ಜೈಲರ್‌’ ವಿಲನ್‌ ವಿನಾಯಕನ್‌ ಬಂಧನ; ಕುಡಿದ ಮತ್ತಲ್ಲಿ ನಟನ ಹುಚ್ಚಾಟ?

ಉದಯನಿಧಿ ಸ್ಟಾಲಿನ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಎ.ಆರ್.ರೆಹಮಾನ್ ಚಿತ್ರದ ಸಂಗೀತ ನಿರ್ದೇಶನ, ಶ್ರೀಕರ್ ಪ್ರಸಾದ್ ಸಂಕಲನ, ರವಿ ಕೆ. ಚಂದ್ರನ್ ಛಾಯಾಗ್ರಹಣ ʼಥಗ್ ಲೈಫ್ʼ ಸಿನಿಮಾದಲ್ಲಿದೆ. 1987ರಲ್ಲಿ ಕಮಲ್ ಹಾಸನ್ ನಟನೆಯ, ಮಣಿರತ್ನಂ ನಿರ್ದೇಶನದ ‘ನಾಯಕನ್’ ಸಿನಿಮಾ ರಿಲೀಸ್ ಆಗಿತ್ತು. ಇದಾದ ಬಳಿಕ ಸುಮಾರು 37 ವರ್ಷಗಳ ಬಳಿಕ ಸೂಪರ್ ಹಿಟ್ ಜೋಡಿ ಒಂದಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ.

ಸದ್ಯ ಕಮಲ್‌ ಹಾಸನ್‌ ಎಸ್‌.ಶಂಕರ್‌ ನಿರ್ದೇಶನದ ಇಂಡಿಯನ್‌ 2 ಚಿತ್ರದಲ್ಲಿ ನಿರತರಾಗಿದ್ದಾರೆ. ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಈ ಚಿತ್ರ 2024ರ ಎಪ್ರಿಲ್‌ನಲ್ಲಿ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಅಗರ್ವಾಲ್‌ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್‌, ಎಸ್‌.ಜೆ.ಸೂರ್ಯ, ರಾಕುಲ್‌ ಪ್ರೀತ್‌ ಸಿಂಗ್‌, ಪ್ರಿಯಾ ಭವಾನಿ ಶಂಕರ್‌, ನಡುಮುಡಿ ವೇಣು, ವಿವೇಕ್‌ ಮತ್ತಿತರರು ನಟಿಸಿದ್ದಾರೆ. ಸುಮಾರು 250 ಕೋಟಿ ರೂ. ವೆಚ್ಚದಲ್ಲಿ ಚಿತ್ರ ತಯಾರಾಗಲಿದೆ.

Continue Reading

South Cinema

Dhruva Natchathiram: ಇಂದು ಬಿಡುಗಡೆ ಆಗಲೇ ಇಲ್ಲ ವಿಕ್ರಮ್‌ ಸಿನಿಮಾ; ಬೆಳ್ಳಂಬೆಳಗ್ಗೆ ನಿರ್ದೇಶಕನ ಟ್ವೀಟ್‌!

Dhruva Natchathiram: ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಬಗ್ಗೆ ಹೇಳಿಕೊಂಡಿದ್ದಾರೆ. 2018 ರಿಂದಲೇ ಸಿನಿಮಾ ನಿರ್ಮಾಣವಾಗುತ್ತಿದ್ದು, ಸತತ ಐದು ವರ್ಷಗಳಿಂದ ಸಿನಿಮಾ ಕೆಲಸಗಳು ನಡೆಯುತ್ತಲೇ ಇದ್ದವು.

VISTARANEWS.COM


on

Vikram Dhruva Natchathiram won't release today
Koo

ಬೆಂಗಳೂರು: ನಟ ವಿಕ್ರಮ್‌ ಮುಖ್ಯ ಭೂಮಿಕೆಯ (Dhruva Natchathiram) ತಮಿಳು ಚಿತ್ರ `ಧ್ರುವ ನಚ್ಚತಿರಂ ‘ಇಂದು (ನವೆಂಬರ್ 24) ರಿಲೀಸ್ ಆಗಬೇಕಿತ್ತು. ಆದರೆ, ಸಿನಿಮಾ ರಿಲೀಸ್ ವಿಳಂಬ ಆಗಿದೆ. ಈ ಬಗ್ಗೆ ನಿರ್ದೇಶಕ ಗೌತಮ್ ಮೆನನ್ ಮಾಹಿತಿ ನೀಡಿದ್ದಾರೆ. ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಬಗ್ಗೆ ಹೇಳಿಕೊಂಡಿದ್ದಾರೆ. 2018 ರಿಂದಲೇ ಸಿನಿಮಾ ನಿರ್ಮಾಣವಾಗುತ್ತಿದ್ದು, ಸತತ ಐದು ವರ್ಷಗಳಿಂದ ಸಿನಿಮಾ ಕೆಲಸಗಳು ನಡೆಯುತ್ತಲೇ ಇದ್ದವು.

“ಕ್ಷಮಿಸಿ. ಧ್ರುವ ನಚ್ಚತಿರಂ ಇಂದು ತೆರೆಗೆ ಬರಲು ಸಾಧ್ಯವಾಗಿಲ್ಲ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ, ಆದರೆ ನಮಗೆ ಇನ್ನೂ ಒಂದು ಅಥವಾ ಎರಡು ದಿನ ಬೇಕು ಎಂದು ತೋರುತ್ತದೆ. ವಿಶ್ವಾದ್ಯಂತ ಪ್ರಿ ಬುಕಿಂಗ್‌ಗಳು ಮತ್ತು ಸರಿಯಾದ ಸ್ಕ್ರೀನ್‌ಗಳೊಂದಿಗೆ ಎಲ್ಲರಿಗೂ ಉತ್ತಮ ಅನುಭವವನ್ನು ಒದಗಿಸುವ ಆಶಯದೊಂದಿಗೆ ಈ ನಿರ್ಧಾರ. ಚಿತ್ರಕ್ಕೆ ನೀಡಿದ ಬೆಂಬಲವು ಹೃದಯಸ್ಪರ್ಶಿಯಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಬರುತ್ತೇವೆʼʼಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ ಗೌತಮ್ ಮೆನನ್.

ಸಿನಿಮಾ ರಿಲೀಸ್‌ ವಿಳಂಬಕ್ಕೆ ಅಭಿಮಾನಿಗಳು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಗೌತಮ್ ಅವರ ಟ್ವೀಟ್‌ಗೆ ಒಬ್ಬರು “ಈ ವಿಳಂಬಕ್ಕೆ ಕಾರಣ ನನಗೆ ತಿಳಿದಿದೆ. ಹಣ ಶೀಘ್ರದಲ್ಲೇ ಅರೇಂಜ್ ಆಗಲಿ ಎಂದು ನಾನು ಕೋರುತ್ತೇನೆ. ಈ ಚಿತ್ರವನ್ನು ದೊಡ್ಡ ಪರದೆಯಲ್ಲಿ ನೋಡಲು ನಾವು ಕಾದಿದ್ದೇವೆʼʼಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು “ನಿಮ್ಮ ಸಮಯ ತೆಗೆದುಕೊಳ್ಳಿ ಸಾರ್.. ಯಾವಾಗ ಸಿನಿಮಾ ರಿಲೀಸ್‌ ಆಗುತ್ತೋ ಅಂದು ನೋಡುತ್ತೇವೆʼʼಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Vikram Actor: ಚಿಯಾನ್ ವಿಕ್ರಮ್ ನಟನೆಯ `ಧ್ರುವ ನಚ್ಚತಿರಂ’ ಎರಡನೇ ಸಾಂಗ್‌ ಔಟ್‌!

ಧ್ರುವ ನಚ್ಚತಿರಂ ಚಿತ್ರದಲ್ಲಿ ವಿಕ್ರಮ್ ನಾಯಕನಾಗಿ ರಿತು ವರ್ಮಾ, ಪಾರ್ತಿಬನ್, ಐಶ್ವರ್ಯ ರಾಜೇಶ್, ಸಿಮ್ರಾನ್, ರಾಧಿಕಾ, ಅರ್ಜುನ್ ದಾಸ್ ಮತ್ತು ದಿವ್ಯದರ್ಶಿನಿ ನಟಿಸಿದ್ದಾರೆ. ಚಿತ್ರಕ್ಕೆ ಹ್ಯಾರಿಸ್ ಜಯರಾಜ್ ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿತ್ತು. 2011ರಲ್ಲಿ ನಡೆದ ಮುಂಬೈ ಬ್ಲಾಸ್ಟ್ ಬಗ್ಗೆ ಸಿನಿಮಾ ಹೇಳಿದೆ ಎನ್ನಲಾಗುತ್ತಿದೆ.

ಚಿತ್ರದ ತಂಡ ಜುಲೈ 20ರಂದು ಎರಡನೇ ಹಾಡು ಹಿಸ್‌ ನೇಮ್‌ ಈಸ್‌ ಜಾನ್‌ (Dhruva Natchathiram second single) ಅನಾವರಣಗೊಳಿಸಿತ್ತು. ಈ ಹಾಡನ್ನು ಹ್ಯಾರಿಸ್ ಜಯರಾಜ್ ಸಂಯೋಜಿಸಿದ್ದಾರೆ ಮತ್ತು ರಾಪರ್ ಪಾಲ್ ಡಬ್ಬಾ ಬರೆದು ಹಾಡಿದ್ದಾರೆ. ತಮಿಳಿನ ನಿರ್ದೇಶಕ ಲೋಕೇಶ್ ಕನಕರಾಜ್ ಟ್ರ್ಯಾಕ್‌ವನ್ನು ಟ್ವಿಟರ್‌ನಲ್ಲಿ ಅನಾವರಣಗೊಳಿಸಿದ್ದರು. ಈ ಹಾಡಿನಲ್ಲಿ ಆಧುನಿಕ ಬೀಟ್‌ಗಳೊಂದಿಗೆ ರ‍್ಯಾಂಪ್‌ ಜತೆಗೆ ಮತ್ತು ತಮಿಳು ಜಾನಪದ ಸಂಗೀತದ ಮಿಶ್ರಣವಾಗಿದೆ. ಹಾಡು ತಮಿಳಿನಲ್ಲಿದ್ದರೂ, ರ‍್ಯಾಂಪ್‌ ಇಂಗ್ಲಿಷ್‌ನಲ್ಲಿದೆ. ಗೌತಮ್ ಮತ್ತು ಹ್ಯಾರಿಸ್ ಈ ಹಿಂದೆ ವಾರಣಂ ಆಯಿರಂ, ಮತ್ತು ವೆಟ್ಟೈಯಾಡು ವಿಲೈಯಾಡು ಮುಂತಾದ ಅನೇಕ ಹಿಟ್ ಆಲ್ಬಂಗಳನ್ನು ನೀಡಿದ್ದರು.

Continue Reading

South Cinema

Actor Suriya: ಸೆಟ್‌ನಲ್ಲಿ ಅವಘಡ; ಆರೋಗ್ಯದ ಬಗ್ಗೆ ಅಪ್​ಡೇಟ್ ಕೊಟ್ಟ ನಟ ಸೂರ್ಯ

Actor Suriya: ಪಾಂಡಿರಾಜ್ ನಿರ್ದೇಶನದ ‘ಎತರ್ಕ್ಕುಂ ತೂನಿಂಧವನ್’ ಚಿತ್ರದಲ್ಲಿ ಸೂರ್ಯ ಕೊನೆಯದಾಗಿ ಕಾಣಿಸಿಕೊಂಡಿದ್ದರು. ‘ಸೂರ್ಯ 43’ ಚಿತ್ರದಲ್ಲಿ ದುಲ್ಕರ್ ಸಲ್ಮಾನ್, ವಿಜಯ್ ವರ್ಮಾ ಮತ್ತು ನಜ್ರಿಯಾ ಫಹಾದ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

Suriya gets injured on Kanguva sets, shares health update
Koo

ಬೆಂಗಳೂರು: ತಮಿಳು ನಟ ಸೂರ್ಯ (Actor Suriya) ತಮ್ಮ ಮುಂಬರುವ ಚಿತ್ರ ‘ಕಂಗುವ’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಶೂಟಿಂಗ್ ವೇಳೆ ನಟ ಸೂರ್ಯ ಅವರಿಗೆ ಗಾಯಗಳಾಗಿವೆ. ಈ ಕಾರಣದಿಂದ ಶೂಟಿಂಗ್​ನ ಅರ್ಧಕ್ಕೆ ನಿಲ್ಲಿಸಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಫೈಟಿಂಗ್‌ ದೃಶ್ಯದ ಚಿತ್ರೀಕರಣದ ವೇಳೆ, ರೋಪ್ ಕ್ಯಾಮೆರಾ ನಿಯಂತ್ರಣ ಕಳೆದುಕೊಂಡು ನಟನ ಮೇಲೆ ಬಿದ್ದಿದೆ. ಮಾಧ್ಯಮ ವರದಿಗಳ ಪ್ರಕಾರ, ಕ್ಯಾಮೆರಾ ಸೂರ್ಯ ಅವರ ಭುಜಕ್ಕೆ ತಗುಲಿತು ನಟನಿಗೆ ಗಾಯಗಳಾಗಿವೆ. ಇದೀಗ ಸೂರ್ಯ ಅವರು ಈ ಬಗ್ಗೆ ಟ್ವೀಟ್‌ನಲ್ಲಿ ಅಪ್‌ಡೇಟ್‌ ಹಂಚಿಕೊಂಡಿದ್ದಾರೆ.

ನಟನ ಮುಂಬರುವ ಚಿತ್ರ ‘ಕಂಗುವ’ ಗಾಗಿ ಸೂರ್ಯ ಅಭಿಮಾನಿಗಳು ಉತ್ಸುಕತೆಯಿಂದ ಕಾಯುತ್ತಿದ್ದಾರೆ,. ಸೂರ್ಯ ಅವರು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕ್ಯಾಮೆರಾ ಬಿದ್ದಿದ್ದರಿಂದ ನಟನಿಗೆ ಸ್ವಲ್ಪ ಗಾಯವಾದರೂ, ಸದ್ಯಕ್ಕೆ ಚಿತ್ರದ ಚಿತ್ರೀಕರಣವನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಸೂರ್ಯ ಅವರು ಟ್ವೀಟ್‌ನಲ್ಲಿ ಹಂಚಿಕೊಂಡು ʻ ಆತ್ಮೀಯ ಸ್ನೇಹಿತರೇ ನನ್ನ ಅಭಿಮಾನಿಗಳೇ, ಬೇಗ ಗುಣಮುಖರಾಗಿ ಎಂಬ ನಿಮ್ಮ ಸಂದೇಶಗಳಿಗೆ ಧನ್ಯವಾದ. ಈಗ ಸ್ವಲ್ಪ ಚೇತರಿಸಿಕೊಂಡಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ಸದಾ ಕೃತಜ್ಞ’ ಎಂದು ಸೂರ್ಯ ಅವರು ಬರೆದುಕೊಂಡಿದ್ದಾರೆ. ಮೂಲಗಳ ಪ್ರಕಾರ, ಇವಿಪಿ ಫಿಲ್ಮ್ ಸಿಟಿಯಲ್ಲಿ ಮಧ್ಯರಾತ್ರಿ 1.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಚಿತ್ರೀಕರಣವನ್ನು ಮುಂದೂಡಲಾಗಿದೆ. ನಸರತ್‌ಪೇಟೆ ಪೊಲೀಸರು ಈ ಬಗ್ಗೆ ಪರಿಶೀಲಿಸುತ್ತಿದ್ದಾರೆ.

ಪಾಂಡಿರಾಜ್ ನಿರ್ದೇಶನದ ‘ಎತರ್ಕ್ಕುಂ ತೂನಿಂಧವನ್’ ಚಿತ್ರದಲ್ಲಿ ಸೂರ್ಯ ಕೊನೆಯದಾಗಿ ಕಾಣಿಸಿಕೊಂಡಿದ್ದರು. ‘ಸೂರ್ಯ 43’ ಚಿತ್ರದಲ್ಲಿ ದುಲ್ಕರ್ ಸಲ್ಮಾನ್, ವಿಜಯ್ ವರ್ಮಾ ಮತ್ತು ನಜ್ರಿಯಾ ಫಹಾದ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಯುವಿ ಕ್ರಿಯೇಷನ್ಸ್ ಸಹಯೋಗದಲ್ಲಿ ಸ್ಟುಡಿಯೋ ಗ್ರೀನ್ ನಿರ್ಮಾಣ ಸಂಸ್ಥೆಯು ಸೂರ್ಯ ಮತ್ತು ದಿಶಾ ಪಟಾನಿ ಅಭಿನಯದ ‘ಕಂಗುವ’ ಚಿತ್ರವನ್ನು ನಿರ್ಮಿಸುತ್ತಿದೆ. ಇದು ಸಾಹಸಮಯ ಚಿತ್ರವಾಗಿದ್ದು, 2024ರ ಆರಂಭದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ‘ಮಲಂಗ್’ ನಟಿ ದಿಶಾ ಪಟಾನಿ ಕೂಡ ನಟಿಸಿರುವ ಚಿತ್ರಕ್ಕೆ ಕಂಗುವ ಎಂದು ನಾಮಕರಣ ಮಾಡಲಾಗಿದೆ.

ಇದನ್ನೂ ಓದಿ: Actor Surya: ‘ಕಂಗುವ’ ಚಿತ್ರದ ಶೂಟಿಂಗ್ ವೇಳೆ ನಟ ಸೂರ್ಯಗೆ ಗಾಯ!

38 ಭಾಷೆಗಳಲ್ಲಿ ಕಂಗುವ ಬಿಡುಗಡೆಗೆ ಪ್ಲ್ಯಾನ್

ಖ್ಯಾತ ಕಾಲಿವುಡ್ ನಟ ಸೂರ್ಯ (Actor Suriya) ಅವರು ಸಿರುತೈ ಶಿವ ನಿರ್ದೇಶನದ ಬಹು ನಿರೀಕ್ಷಿತ ಪ್ರಾಜೆಕ್ಟ್ ʻಕಂಗುವʼ ಚಿತ್ರವನ್ನು 38 ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ ಚಿತ್ರದ ನಿರ್ಮಾಪಕ ಕೆ.ಇ.ಜ್ಞಾನವೇಲ್ ರಾಜಾ ಅವರು ಹೇಳಿದ್ದಾರೆ. ‘ಕಂಗುವ’ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಮಾಡುವ ಆಲೊಚನೆಯನ್ನು ನಿರ್ಮಾಪಕರು ಹಾಕಿಕೊಂಡಿದ್ದಾರೆ.

ಕೆ.ಇ.ಜ್ಞಾನವೇಲ್ ರಾಜಾ ಮಾತನಾಡಿ ʻʻ38 ಭಾಷೆಗಳಲ್ಲಿ ʼಕಂಗುವʼ ಸಿನಿಮಾ ಬಿಡುಗಡೆ ಮಾಡುತ್ತೇವೆ. ಈ ಪ್ರಯತ್ನವು ಯಶಸ್ವಿಯಾದರೆ, ತಮಿಳು ಚಿತ್ರರಂಗದಲ್ಲಿ ಒಂದು ಅದ್ಭುತ ಬೆಳವಣಿಗೆಯಾಗಲಿದೆ. ‘ಕಂಗುವ’ ಸಿನಿಮಾವನ್ನು 3ಡಿ ಹಾಗೂ ಐಮ್ಯಾಕ್ಸ್ ಮಾದರಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ನಾವು ಭಿನ್ನ ಮಾದರಿಯ ಮಾರುಕಟ್ಟೆ ಸ್ಟ್ರಾಟೆಜಿಗಳನ್ನು ಬಳಸಲಿದ್ದೇವೆ’ ಎಂದಿದ್ದಾರೆ.

ತಾತ್ಕಾಲಿಕವಾಗಿ ʻಸೂರ್ಯ 42ʼ ಎಂದು ಹೆಸರಿಸಲಾದ ಸೂರ್ಯ ಅವರ ಮುಂಬರುವ ಬಹು ನಿರೀಕ್ಷಿತ ಈ ಚಿತ್ರವು ಇದೀಗ ʻಕಂಗುವʼ ಎಂಬ ಹೆಸರನ್ನು ಪಡೆದುಕೊಂಡಿದೆ. ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ನಟ ಐದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇರ್, ಅರತಾರ್, ಮಂದಾಂಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಎಂಬ ಐದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರಲ್ಲಿ ಕೋವೈ ಸರಳಾ, ಯೋಗಿ ಬಾಬು, ಆನಂದ್ ರಾಜ್, ರೆಡಿನ್ ಕಿಂಗ್ಸ್ಲಿ, ರವಿ ರಾಘವೇಂದ್ರ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

Continue Reading
Advertisement
girl students fall ill
ಕರ್ನಾಟಕ32 mins ago

Raichur News: ಮಾನ್ವಿ ಹಾಸ್ಟೆಲ್‌ನಲ್ಲಿ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ

Fans brave the dampness, waiting for India's tour of South Africa to kick off
ಕ್ರಿಕೆಟ್43 mins ago

IND vs SA: ಮಳೆಗೆ ಕೊಚ್ಚಿ ಹೋದ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ

Gautam Gambhir
ಕ್ರಿಕೆಟ್1 hour ago

Gautam Gambhir: ಮತ್ತೆ ಪಾಕ್​ ಆಟಗಾರನ ಬೆಂಬಲಕ್ಕೆ ನಿಂತ ಗೌತಮ್​ ಗಂಭೀರ್

Shakti Scheme
ಕರ್ನಾಟಕ1 hour ago

Shakti Scheme: ಒಂದೇ ಆಧಾರ್‌ ಕಾರ್ಡ್‌ ಬಳಸಿ ಇಬ್ಬರ ಪ್ರಯಾಣ; ಸಿಕ್ಕಿಬಿದ್ದ ಬುರ್ಕಾಧಾರಿ ಮಹಿಳೆಯರು!

Supreme Court verdict on Article 370 and Know about this article
ದೇಶ2 hours ago

ನಾಳೆ ಆರ್ಟಿಕಲ್ 370 ರದ್ದು ತೀರ್ಪು; ಅದಕ್ಕೂ ಮೊದಲು ಈ ಸಂಗತಿ ತಿಳಿದುಕೊಂಡಿರಿ

WPL 2024 Auction
ಕ್ರಿಕೆಟ್2 hours ago

ಬಿಡ್ಡಿಂಗ್​ ಹಣದಲ್ಲಿ ತಂದೆ-ತಾಯಿಗೆ ವಿಶೇಷ ಉಡುಗೊರೆ ನೀಡಲು ಮುಂದಾದ ಕರ್ನಾಟಕದ ​ ವೃಂದಾ ದಿನೇಶ್​

Naveen Ammembala
ದಕ್ಷಿಣ ಕನ್ನಡ2 hours ago

ಹೈಪರ್ ಲೋಕಲ್ ಸುದ್ದಿಗೂ ಅಭ್ಯುದಯ ಪತ್ರಿಕೋದ್ಯಮಕ್ಕೂ ಅವಿನಾಭಾವ ಸಂಬಂಧ: ನವೀನ್ ಅಮ್ಮೆಂಬಳ

Chhattisgarh to be CM Vishnu has two deputies and Raman Singh Speaker
ದೇಶ3 hours ago

ಛತ್ತೀಸ್‍‌ಗಢ ಸಿಎಂ ವಿಷ್ಣುಗೆ ಇಬ್ಬರು ಡೆಪ್ಯುಟಿಗಳು; ರಮಣ್ ಸಿಂಗ್ ಸ್ಪೀಕರ್

Rambhapuri seer and MB Patil
ಕರ್ನಾಟಕ3 hours ago

ಎಂ.ಬಿ. ಪಾಟೀಲ್‌ಗೆ ನೀರಾವರಿ ಖಾತೆ ಸಿಗಬೇಕಿತ್ತು; ಡಿಕೆಶಿಗೆ ಕೊಟ್ಟಿದ್ದಕ್ಕೆ ರಂಭಾಪುರಿ ಶ್ರೀ ಬೇಸರ!

India U19 vs Pakistan U19
ಕ್ರಿಕೆಟ್3 hours ago

U19 Asia Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ 8 ವಿಕೆಟ್​ ಸೋಲು

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ7 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ10 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ18 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌