Vijay Deverakond Samantha's Teaser of first single Vijay Deverakond: ಸಮಂತಾ-ವಿಜಯ್ ದೇವರಕೊಂಡ ಅಭಿನಯದ ʻಖುಷಿʼ ಸಿನಮಾದಿಂದ ಹೊಸ ಅಪ್‌ಡೇಟ್‌! - Vistara News

South Cinema

Vijay Deverakond: ಸಮಂತಾ-ವಿಜಯ್ ದೇವರಕೊಂಡ ಅಭಿನಯದ ʻಖುಷಿʼ ಸಿನಮಾದಿಂದ ಹೊಸ ಅಪ್‌ಡೇಟ್‌!

ಖುಷಿʼ ಚಿತ್ರದಲ್ಲಿ ಸಮಂತಾ ಮತ್ತು ವಿಜಯ್ ದೇವರಕೊಂಡ (Vijay Deverakond) ಜೋಡಿಯಾಗಿದ್ದಾರೆ. ಚಿತ್ರವು ಸೆಪ್ಟೆಂಬರ್ 1ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.

VISTARANEWS.COM


on

Vijay Deverakond Samantha's Kushi Teaser of first single
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಮಂತಾ ಅಭಿನಯದ ʻಶಾಕುಂತಲಂʼ ಸಿನಿಮಾ ಸೋಲಿನ ಬೆನ್ನಲ್ಲೇ ಸಿಟಾಡೆಲ್ ಸಿರೀಸ್‌ ಚಿತ್ರೀಕರಣದಲ್ಲಿ ತೊಡಗಿದ್ದಾರೆ ನಟಿ. ಇದೀಗ ಅವರ ಮತ್ತೊಂದು ರೊಮ್ಯಾಂಟಿಕ್‌ ಸಿನಿಮಾ ʻಖುಷಿʼ ಈಗಾಗಲೇ ಸೆಟ್ಟೇರಿದ್ದು, ಹೊಸ ಅಪ್‌ಡೇಟ್‌ ನೀಡಿದೆ. ಚಿತ್ರದಲ್ಲಿ ನಟಿ ವಿಜಯ್ ದೇವರಕೊಂಡ (Vijay Deverakond) ಅವರ ಜತೆ ಸಮಂತಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಮೇ 7ರಂದು ಚಿತ್ರದ ಮೊದಲ ರೊಮ್ಯಾಂಟಿಕ್ ಸಾಂಗ್‌ ಟೀಸರ್‌ ಬಿಡುಗಡೆಗೊಂಡಿದೆ.

ʻಖುಷಿʼ ಫಸ್ಟ್ ಸಿಂಗಲ್ ಟೀಸರ್ ಔಟ್!

ʻಖುಷಿʼ ಚಿತ್ರದಲ್ಲಿ ಸಮಂತಾ ಮತ್ತು ವಿಜಯ್ ದೇವರಕೊಂಡ ಜೋಡಿಯಾಗಿದ್ದಾರೆ. ಚಿತ್ರವು ಸೆಪ್ಟೆಂಬರ್ 1ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ʻಖುಷಿʼ ಫಸ್ಟ್ ಸಿಂಗಲ್ ಟೀಸರ್ ತುಣುಕಿನಲ್ಲಿ ವಿಜಯ್‌ ದೇವರಕೊಂಡ ಪ್ರೇಮಕ್ಕೆ ಅರಿಸಿ ನಿಂತರೆ, ಸಮಂತಾ ಹಿಜಾಬ್ ಮತ್ತು ಬುರ್ಖಾ ಧರಿಸಿ ಪ್ರಾರ್ಥನೆಗೆ ಕುಳಿತಿರುವುದು ಕಾಣಬಹುದು. ವಿಜಯ್ ದೇವರಕೊಂಡ ಟೀಸರ್‌ ಹಂಚಿಕೊಂಡು, ಪೂರ್ಣ ಹಾಡು ಮೇ 9ರಂದು ಬಿಡುಗಡೆಯಾಗಿದೆ ಎಂದು ಬರೆದುಕೊಂಡಿದ್ದಾರೆ. ಮೇ 9 ವಿಜಯ್‌ ದೇವರಕೊಂಡ ಅವರ ಜನುಮದಿನ. ಹೀಗಾಗಿ ಖುಷಿ ಚಿತ್ರತಂಡ ಮೊದಲ ಹಾಡನ್ನು ಅವತ್ತೇ ಬಿಡಗಡೆ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಇದೇ ಸೆಪ್ಟೆಂಬರ್‌ 1ರಂದು ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. 2018ರ ಮಹಾನಟಿ ಚಿತ್ರದ ನಂತರ ವಿಜಯ್‌ ಹಾಗೂ ಸ್ಯಾಮ್‌ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಖುಷಿ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸುತ್ತಿದ್ದಾರೆ. ಕಳೆದ ವರ್ಷ ಸಮಂತಾ ಅವರ ಮೈಯೋಸಿಟಿಸ್ ನಿಂದಾಗಿ ಖುಷಿ ಸಿನಿಮಾ ರಿಲೀಸ್‌ ವಿಳಂಬವಾಗಬಹುದು ಎಂಬ ವದಂತಿಗಳು ಹಬ್ಬಿದ್ದವು.

ಇದನ್ನೂ ಓದಿ: Vijay Devarakonda: ವಿಜಯ್ ದೇವರಕೊಂಡ-ಸಮಂತಾ ಅಭಿನಯದ ಖುಷಿ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌

ವಿಜಯ್ ದೇವರಕೊಂಡ, ಸಮಂತಾ, ಜಯರಾಮ್, ಸಚಿನ್ ಖೇಡಕರ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್, ಶರಣ್ ಮುಂತಾದ ಅದ್ಭುತ ನಟ, ನಟಿಯರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಈ ಚಿತ್ರಕ್ಕೆ, ಪೀಟರ್ ಹೆನ್ಸ್ ಸಾಹಸ ನಿರ್ದೇಶನ, ಪ್ರವೀನ್ ಪುಡಿ ಅವರ ಸಂಕಲನ, ಜಿ ಮುರಳಿ ಕ್ಯಾಮೆರಾ ಕೆಲಸ ಮಾಡಿದೆ. ಹೇಶಮ್ ಅಬ್ದುಲ್ ವಹಾಬ್ ಅವರ ಸಂಗೀತವಿದೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Vasishta Simha: ಟ್ರೈಲರ್‌ ಲಾಂಚ್ ವೇಳೆ ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ವಸಿಷ್ಠ ಸಿಂಹ!

Vasishta Simha: ʻಲವ್ ಲಿ’ ಚಿತ್ರದಲ್ಲಿ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ, ಸಾಧುಕೋಕಿಲ, ದತ್ತಣ್ಣ, ಮಾಳವಿಕಾ, ಶೋಭ್ ರಾಜ್, ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ. ಲವ್ ಲಿ ಚಿತ್ರವನ್ನು ರವೀಂದ್ರ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ಕೆನಡಿ ಕ್ಯಾಮೆರಾ ವರ್ಕ್, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

VISTARANEWS.COM


on

Vasishta Simha Lovely Kannada Film Trailer Event
Koo

ಬೆಂಗಳೂರು: ವಸಿಷ್ಠ ಸಿಂಹ ನಟನೆಯ ‘ಲವ್ ಲಿ’ ಚಿತ್ರದ ಟ್ರೈಲರ್‌ ಲಾಂಚ್ ಕಾರ್ಯಕ್ರಮಕ್ಕೆ ರಿಷಬ್ ಆಗಮಿಸಿ ಶುಭ ಕೋರಿದ್ದಾರೆ. ಹರಿಪ್ರಿಯಾ ಹಾಗೂ ರಿಷಬ್ ಶೆಟ್ಟಿ ‘ರಿಕ್ಕಿ’ ಸಿನಿಮಾದಲ್ಲಿ (Rikky Movie) ಒಟ್ಟಾಗಿ ಕೆಲಸ ಮಾಡಿದ್ದರು. ಇವರ ಮಧ್ಯೆ ಒಳ್ಳೆಯ ಪರಿಚಯ ಇದೆ. ‘ಲವ್ ಲಿ’ ಚಿತ್ರವನ್ನು ಚೇತನ್ ಕೇಶವ್ ನಿರ್ದೇಶನ ಮಾಡುತ್ತಿದ್ದು, ವಸಿಷ್ಠ ಸಿಂಹಗೆ ನಾಯಕಿಯಾಗಿ ಜಾರ್ಖಂಡ್‌ ಮೂಲದ ಸ್ಟೆಫಿ ಪಟೇಲ್ ನಟಿಸುತ್ತಿದ್ದಾರೆ. ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಖ್ಯಾತಿಯ ಸಮೀಕ್ಷಾ ಚಿತ್ರದಲ್ಲಿ ಪ್ರಮುಖ ರೋಲ್‌ನಲ್ಲಿ ಮಿಂಚಲಿದ್ದಾರೆ. ಟ್ರೈಲರ್‌ ಲಾಂಚ್ ವೇಳೆ ವೇದಿಕೆಯಲ್ಲಿ ರಿಷಬ್ ಅವರ ಕಾಲಿಗೆ ಬಿದ್ದರು ವಸಿಷ್ಠ ಸಿಂಹ.

ರಿಷಬ್ ಅವರ ಕಾಲಿಗೆ ಬಿದ್ದ ಬಳಿಕ ವಸಿಷ್ಠ ಅವರು ಮಾತನಾಡಿ ʻʻನಾಡಿಗೆ ಹಮ್ಮೆ ತಂದು ಕೊಟ್ಟ ಕಾಂತಾರ ಸಿನಿಮಾವನ್ನು ನೀಡಿದವರು ರಿಷಬ್‌. ನನ್ನ ಮೇಲೆ ಸಿನಿಮಾ ಪ್ರಭಾವ ಬೀರಿದೆ. ಅನುಭವ ಕೂಡ ಕೊಟ್ಟಿದೆ. ಕಾಂತಾರ 1 ಕೂಡ ಆಗ್ತಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಬೇಕುʼʼ ಎಂದರು.

ಟ್ರೈಲರ್‌ ಲಾಂಚ್‌ಗೆ ಆಗಮಿಸಿ ರಿಷಬ್ ಮಾತನಾಡಿ ʻʻರಾಜಾಹುಲಿಯಿಂದ ಇಲ್ಲಿವರೆಗೂ ವಸಿಷ್ಠ ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದೇನೆ. ಗೋಧಿ ಬಣ್ಣದಲ್ಲಿ ಇವರ ಬೇಸ್‌ ವಾಯ್ಸ್‌ ಕೇಳಿ, ಯಾವಾಗಲೂ ಮಿಮಿಕ್ರಿ ಮಾಡುತ್ತಿದ್ದೆ. ಚಿಟ್ಟೆ, ಕೆಜಿಎಫ್‌ ಆಯ್ತು. ಈಗ ಲವ್‌ಲಿ ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದಾರೆ. ಇದು ಮಾಸ್‌ ಸಿನಿಮಾ. ನನ್ನ ಮೊದಲ ನಿರ್ದೇಶನದಲ್ಲಿ ಹರಿಪ್ರಿಯಾ ಮೊದಲ ನಾಯಕಿ ಆಗಿದ್ದರು. ಕನ್ನಡ ಚಿತ್ರರಂಗಕ್ಕೆ ವಸಿಷ್ಠ ಆಸ್ತಿ ಆಗ್ತಾರೆ.ಜೂನ್ 14ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಥಿಯೇಟರ್ ಅಲ್ಲೇ ಸಿನಿಮಾ ನೋಡಿʼʼ ಎಂದರು.

ಇದನ್ನೂ ಓದಿ: Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!

ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಅವರು ಹರಿಪ್ರಿಯಾ ಅವರಿಗೆ ಚಾಕೊಲೇಟ್ ಗಿಫ್ಟ್ ನೀಡಿದ್ದಾರೆ. ಇನ್ನು ಲವ್‌ಲಿ ತಂಡ ರಿಷಬ್ ಅವರಿಗೆ ಪಾದರಕ್ಷೆಗಳನ್ನು ಬಿಟ್ಟು ವರಾಹ ವಿಗ್ರಹ ಗಿಫ್ಟ್ ಕೂಡ ನೀಡಿದ್ದಾರೆ. ಈ ವೇಳೆ ವಸಿಷ್ಠ ಪತ್ನಿ ಹರಿಪ್ರಿಯಾ ಮಾತನಾಡಿದ್ದಾರೆ. ‘ನನ್ನ ಸಿನಿಮಾಗೂ ನಾನು ಇಷ್ಟು ನರ್ವಸ್ ಆಗಿರಲಿಲ್ಲ. ನನ್ನ ಗಂಡನ ಸಿನಿಮಾಗೆ ನರ್ವಸ್ ಆಗ್ತಿದೆ’ ಎಂದರು ಹರಿಪ್ರಿಯಾ.

ಲವ್ ಲಿ’ ಚಿತ್ರದಲ್ಲಿ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ, ಸಾಧುಕೋಕಿಲ, ದತ್ತಣ್ಣ, ಮಾಳವಿಕಾ, ಶೋಭ್ ರಾಜ್, ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ. ಲವ್ ಲಿ ಚಿತ್ರವನ್ನು ರವೀಂದ್ರ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ಕೆನಡಿ ಕ್ಯಾಮೆರಾ ವರ್ಕ್, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಇದೊಂದು ಕಮರ್ಶಿಯಲ್ ಲವ್ ಸ್ಟೋರಿ ಸಿನಿಮಾ. ರೌಡಿಸಂ ಕಥಾಹಂದರ ಕೂಡ ಇದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದು ಅದನ್ನು ಸಿನಿಮೀಯ ರೀತಿಯಲ್ಲಿ ಹೇಳ ಹೊರಟಿದೆ ಚಿತ್ರತಂಡ. ಎಂಟರಿಂದ ಹತ್ತು ಭಾವನೆಗಳನ್ನು ಒಮ್ಮೆಲೆ ಕ್ಯಾರಿ ಮಾಡುವ ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ ಎಂದು ಹಿಂದೊಮ್ಮೆ ವಸಿಷ್ಠ ಸಿಂಹ ಹೇಳಿಕೊಂಡಿದ್ದರು.

Continue Reading

ಕಾಲಿವುಡ್

Actor Suriya: ರೆಟ್ರೋ ಲುಕ್‌ನಲ್ಲಿ ಕಂಡ ನಟ ಸೂರ್ಯ; ಸಖತ್‌ ಥ್ರಿಲ್ ಆದ್ರು ಫ್ಯಾನ್ಸ್‌!

Actor Suriya: ಈ ಸಿನಿಮಾವನ್ನು ತಮಿಳಿನ ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಲಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಾದ ‘ಜಿಗರ್​ಥಂಡಾ’, ರಜನೀಕಾಂತ್ ನಟನೆಯ ‘ಪೆಟ್ಟಾ’, ‘ಜಿಗರ್ ಥಂಡಾ ಡಬಲ್ ಎಕ್ಸ್’, ‘ಮಹಾನ್’ ಇನ್ನಿತರೆ ಸಿನಿಮಾಗಳನ್ನು ಇವರು ನಿರ್ದೇಶಿಸಿದ್ದಾರೆ.2022 ರಲ್ಲಿ ಬಿಡುಗಡೆ ಆದ ‘ಆಚಾರ್ಯ’ ಸಿನಿಮಾ ಬಳಿಕ ಪೂಜಾ ಹೆಗ್ಡೆ ಯಾವುದೇ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದೀಗ ‘ಸೂರ್ಯ 44’ ಸಿನಿಮಾ ಮೂಲಕ ಪೂಜಾ ಕಮ್ ಬ್ಯಾಕ್ ಮಾಡಿದ್ದಾರೆ

VISTARANEWS.COM


on

Actor Suriya retro look from his next film with Karthik Subbaraj
Koo

ಬೆಂಗಳೂರು: ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಮತ್ತು ನಟ ಸೂರ್ಯ (Actor Suriya) ʻಸೂರ್ಯ 44ʼ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ನಟ ಮತ್ತು ನಿರ್ದೇಶಕ ಇಬ್ಬರೂ ಶೂಟಿಂಗ್ ಪ್ರಾರಂಭವಾಗಿದೆ ಎಂದು ವಿಡಿಯೊ ಮೂಲಕ ಘೋಷಿಸಿದ್ದಾರೆ. ಸೂರ್ಯ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿರುವುದನ್ನು ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಚಿತ್ರಕ್ಕಾಗಿ ತೆಗೆದ ಮೊದಲ ಶಾಟ್‌ವನ್ನು ನಟ ಬಹಿರಂಗಪಡಿಸಿದರು.

ಸೂಟ್‌ಕೇಸ್‌ ಜತೆಗೆ ಕುಳಿತುಕೊಂಡು ಸಮುದ್ರದ ಕಡೆಗೆ ನೋಡುತ್ತಿರುವ ಸೂರ್ಯ ಅವರ ಲುಕ್‌ ಬಹಿರಂಗಗೊಂಡಿದೆ. ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಚಿತ್ರದ ಚಿತ್ರೀಕರಣಕ್ಕೆ ಸೆಟ್‌ ಸಿದ್ಧಪಡಿಸಿದೆ ಎನ್ನಲಾಗಿದೆ.ಚಿತ್ರದಲ್ಲಿ ಉರಿಯಾಡಿ ವಿಜಯ್ ಕುಮಾರ್ ಪ್ರತಿಸ್ಪರ್ಧಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿದ್ದು, ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ನಟರಾದ ಜಯರಾಮ್ ಮತ್ತು ಜೋಜು ಜಾರ್ಜ್ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದ ತಾರಾಗಣದ ಬಗ್ಗೆ ಅಧಿಕೃತ ಮಾಹಿತಿ ಚಿತ್ರತಂಡ ಹಂಚಿಕೊಂಡಿಲ್ಲ.

ಇದನ್ನೂ ಓದಿ: Actor Suriya: ಹೊಸ ಸಿನಿಮಾ ಶೂಟಿಂಗ್‌ ಶುರು ಮಾಡಿದ ನಟ ಸೂರ್ಯ!

ಈ ಸಿನಿಮಾವನ್ನು ತಮಿಳಿನ ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಲಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಾದ ‘ಜಿಗರ್​ಥಂಡಾ’, ರಜನೀಕಾಂತ್ ನಟನೆಯ ‘ಪೆಟ್ಟಾ’, ‘ಜಿಗರ್ ಥಂಡಾ ಡಬಲ್ ಎಕ್ಸ್’, ‘ಮಹಾನ್’ ಇನ್ನಿತರೆ ಸಿನಿಮಾಗಳನ್ನು ಇವರು ನಿರ್ದೇಶಿಸಿದ್ದಾರೆ.2022 ರಲ್ಲಿ ಬಿಡುಗಡೆ ಆದ ‘ಆಚಾರ್ಯ’ ಸಿನಿಮಾ ಬಳಿಕ ಪೂಜಾ ಹೆಗ್ಡೆ ಯಾವುದೇ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದೀಗ ‘ಸೂರ್ಯ 44’ ಸಿನಿಮಾ ಮೂಲಕ ಪೂಜಾ ಕಮ್ ಬ್ಯಾಕ್ ಮಾಡಿದ್ದಾರೆ

ಸದ್ಯ ಸೂರ್ಯ ಅವರು ಶಿವ ನಿರ್ದೇಶನದ ‘ಕಂಗುವ’ ಚಿತ್ರದ ಬಿಡುಗಡೆಗಾಗಿ ಸೂರ್ಯ ಕಾಯುತ್ತಿದ್ದಾರೆ. ತಮಿಳು ಚಿತ್ರರಂಗದ (Tamil Cinema) ಖ್ಯಾತ ನಟ ಸೂರ್ಯ (Actor Surya) ಅವರ ಬಹು ನಿರೀಕ್ಷಿತ `ಕಂಗುವ’ (Kanguva Film) ಚಿತ್ರದ ಟೀಸರ್ ಔಟ್‌ ಆಗಿತ್ತು. ಬಾಲಿವುಡ್​ ನಟ ಬಾಬಿ ಡಿಯೋಲ್​ ಕೂಡ ಹೊಸ ಅವತಾರ ತಾಳಿದ್ದರು. ಬಾಬಿ ಡಿಯೋಲ್ ಒಳಗೊಂಡಿರುವ ಬೃಹತ್ ಯುದ್ಧದ ದೃಶ್ಯವನ್ನು ದೊಡ್ಡ ಪ್ರಮಾಣದಲ್ಲಿ ಚಿತ್ರೀಕರಿಸಲಾಗಿತ್ತು. ನಟ ಸೂರ್ಯ (Actor Suriya) ಅವರು ಸಿರುತೈ ಶಿವ ನಿರ್ದೇಶನದ ಬಹು ನಿರೀಕ್ಷಿತ ಪ್ರಾಜೆಕ್ಟ್ ʻಕಂಗುವʼ ಚಿತ್ರವನ್ನು 38 ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ ಚಿತ್ರದ ನಿರ್ಮಾಪಕ ಕೆ.ಇ.ಜ್ಞಾನವೇಲ್ ರಾಜಾ ಅವರು ಹೇಳಿದ್ದರು. ‘ಕಂಗುವ’ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಮಾಡುವ ಆಲೋಚನೆಯನ್ನು ನಿರ್ಮಾಪಕರು ಹಾಕಿಕೊಂಡಿದ್ದರು.

ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ನಟ ಐದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇರ್, ಅರತಾರ್, ಮಂದಾಂಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಎಂಬ ಐದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರಲ್ಲಿ ಕೋವೈ ಸರಳಾ, ಯೋಗಿ ಬಾಬು, ಆನಂದ್ ರಾಜ್, ರೆಡಿನ್ ಕಿಂಗ್ಸ್ಲಿ, ರವಿ ರಾಘವೇಂದ್ರ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

Continue Reading

ಮಾಲಿವುಡ್

Parvathi Menon: ಸದ್ದಿಲ್ಲದೇ ಮದುವೆಯಾದ್ರಾ ʻಮಿಲನʼ ನಾಯಕಿ ಪಾರ್ವತಿ ಮೆನನ್?

Parvathi Menon: ಪುನೀತ್ ರಾಜ್ ಕುಮಾರ್ ಅಭಿನಯದ ”ಮಿಲನ” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಆ ನಂತರ ”ಮಳೆ ಬರಲಿ ಮಂಜೂ ಇರಲಿ’,. ”ಪೃಥ್ವಿ”, ”ಅಂದರ್ ಬಾಹರ್‌” ಚಿತ್ರಗಳಲ್ಲಿ ನಟಿಸಿದರು. ಪಾರ್ವತಿ ಮೆನನ್ (Parvathi Menon) ಸದ್ದಿಲ್ಲದೇ ಮದುವೆಯಾದರಾ ಅನ್ನುವ ಅನುಮಾನ ನಟಿಯ ಅಭಿಮಾನಿಗಳನ್ನು ಕಾಡುತ್ತಿದೆ.

VISTARANEWS.COM


on

Parvathi Menon secretly marry prashant murali
Koo

ಪುನೀತ್ ರಾಜ್ ಕುಮಾರ್ ಅಭಿನಯದ ”ಮಿಲನ” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಮೆನನ್ (Parvathi Menon) ಸದ್ದಿಲ್ಲದೇ ಮದುವೆಯಾದರಾ ಅನ್ನುವ ಅನುಮಾನ ನಟಿಯ ಅಭಿಮಾನಿಗಳನ್ನು ಕಾಡುತ್ತಿದೆ.

ಪಾರ್ವತಿ ಇನ್ನೂ ಮದುವೆಯಾಗಿಲ್ಲ. ಈ ನಡುವೆ ಪಾರ್ವತಿ ಮೆನನ್ ಗುಟ್ಟುಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ವದಂತಿ ಹಬ್ಬಿದೆ. ಕಾರಣ ವೈರಲ್‌ ಆಗಿರುವ ಫೋಟೊ. ಆದರೆ ಸತ್ಯ ಸಂಗತಿ ಏನೆಂದರೆ ವೈರಲ್ ಆದ ಈ ಫೋಟೋಗಳು ಪಾರ್ವತಿ ಮೆನನ್ ಅವರ ಖಾಸಗಿ ಬದುಕಿನದ್ದಲ್ಲ ಬದಲಿಗೆ ಸಿನಿಮಾಗೆ ಸಂಬಂಧಿಸಿದ್ದು.

ಇದನ್ನೂ ಓದಿ: Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!

ಪಾರ್ವತಿ ಮೆನನ್ ”ಉಲ್ಲೋಜುಕ್ಕು” ಎಂಬ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಪ್ರಶಾಂತ್ ಮುರಳಿ ಈ ಚಿತ್ರದ ನಾಯಕ. ಈ ಸಿನಿಮಾ ಪ್ರೋಮೊ ಈ ಮದುವೆ ಸೀನ್‌. ರೀಲ್‌ನಲ್ಲಿ ಆಗಷ್ಟೇ ಮದುವೆಯಾದ ಹಿನ್ನೆಲೆ ದೋಣಿಯಲ್ಲಿ ಕುಳಿತು ಕ್ಯಾಮರಾಗಳಿಗೆ ಫೋಸ್ ನೀಡಿದ್ದಾರೆ. ಹೀಗೆ ತೆಗೆಯಲಾದ ಈ ಫೋಟೋಗಳೇ ಇದೀಗ ವೈರಲ್ ಆಗಿವೆ.

ಪುನೀತ್ ರಾಜ್ ಕುಮಾರ್ ಅಭಿನಯದ ”ಮಿಲನ” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಆ ನಂತರ ”ಮಳೆ ಬರಲಿ ಮಂಜೂ ಇರಲಿ’,. ”ಪೃಥ್ವಿ”, ”ಅಂದರ್ ಬಾಹರ್‌” ಚಿತ್ರಗಳಲ್ಲಿ ನಟಿಸಿದರು.

Continue Reading

ಕಾಲಿವುಡ್

Kamal Haasan: ತಮಿಳಿಗನೊಬ್ಬ ದೇಶ ಆಳುವ ದಿನ ಏಕೆ ಬರಬಾರದು? ಕಮಲ್‌ ಹಾಸನ್‌ ಪ್ರಶ್ನೆ!

Kamal Haasan: ಜುಲೈ 12ಕ್ಕೆ ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ. ಹೀಗಾಗಿ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.

VISTARANEWS.COM


on

Kamal Haasan gives a fiery speech at Indian 2 event
Koo

ಚೆನ್ನೈ: ಕಮಲ್‌ ಹಾಸನ್‌ (Kamal Haasan) ಅಭಿನಯದ ʻಇಂಡಿಯನ್ 2ʼ ಸಿನಿಮಾ ಆಡಿಯೊ ಲಾಂಚ್‌ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ನಿರ್ದೇಶಕ ಶಂಕರ್, ಕಮಲ್ ಹಾಸನ್, ಅನಿರುದ್ಧ್ ರವಿಚಂದರ್, ರಕುಲ್ ಪ್ರೀತ್ ಸಿಂಗ್ ಮತ್ತು ಕಾಜಲ್ ಅಗರ್ವಾಲ್, ಸಿಲಂಬರಸನ್ ಟಿಆರ್, ಲೋಕೇಶ್ ಕನಕರಾಜ್, ನೆಲ್ಸನ್ ದಿಲೀಪ್‌ಕುಮಾರ್, ಬಾಬಿ ಸಿಂಹ ಮತ್ತು ಬ್ರಹ್ಮಾನಂದಂ ಹಾಜರಿದ್ದರು. ಕಾರ್ಯಕ್ರಮದಲ್ಲಿ ಅತ್ಯಂತ ಖಡಕ್‌ ಆಗಿ ಭಾಷಣ ಮಾಡಿದರು ಕಮಲ್‌ ಹಾಸನ್‌.

ಕಮಲ್‌ ಭಾಷಣದಲ್ಲಿ ʻʻನಾನು ತಮಿಳಿಗ ಮತ್ತು ಭಾರತೀಯ. ನಾನು ಒಮ್ಮೆ ತಮಿಳಿಗ ಹಾಗೂ ಒಮ್ಮೆ ಭಾರತೀಯ ಎರಡೂ ಆಗಬಲ್ಲೆ. ಒಡೆದು ಆಳುವುದು ಬ್ರಿಟಿಷ್ ಪರಿಕಲ್ಪನೆಯಾಗಿತ್ತು. ಅವರು ಹಾಗೆ ಮಾಡಿದರು. ಏಕೆಂದರೆ ಭಾರತೀಯರು ಒಗ್ಗಟ್ಟಾದಾಗ ಓಡಿಹೋಗಲು ಅವರಿಗೆ ಒಂದು ಮನೆ ಎಂಬುದಿತ್ತು. ಆದರೆ ಇಂದು ಒಡೆದು ಆಳುತ್ತಿರುವವರು ಎಲ್ಲಿಗೆ ಓಡಿಹೋಗುತ್ತಾರೆ?’ ಎಂದು ಅವರು ಪ್ರಶ್ನೆ ಮಾಡಿದರು. ಭಾರತವನ್ನು ಒಡೆದು ಆಳುತ್ತಿರುವವರ ವಿರುದ್ಧ ಭಾರತೀಯರು ಒಂದಲ್ಲ ಒಂದು ದಿನ ದಂಗೆ ಏಳುತ್ತಾರೆ ಎಂದರು.

“ಪ್ರತಿಯೊಂದು ನಗರವೂ ​​ನಿಮ್ಮ ನಗರವೇ, ಎಲ್ಲರೂ ನಿಮ್ಮ ಬಂಧುಗಳೇ. ನಮ್ಮ ಈ ತಮಿಳು ರಾಜ್ಯಕ್ಕೆ ಬಂದವರಿಗೆ ನಾವು ಜೀವ ಕೊಡುವುದರಲ್ಲಿಯೂ ಹೆಸರುವಾಸಿಯಾಗಿದ್ದೇವೆ. ತಮಿಳಿಗನೊಬ್ಬ ದೇಶವನ್ನು ಆಳುವ ದಿನ ಏಕೆ ಬರಬಾರದು? ಇದು ನನ್ನ ದೇಶ, ಮತ್ತು ನಾವು ಏಕತೆಯನ್ನು ಕಾಪಾಡಬೇಕುʼʼಎಂದರು.  ಕಮಲ್ ಹಾಸನ್ ನಟರಾಗಿರುವ ಜೊತೆಗೆ ರಾಜಕಾರಣಿಯೂ ಹೌದು, ‘ಮಕ್ಕಳ್ ನಿಧಿ ಮಯಂ’ ಹೆಸರಿನ ಪಕ್ಷ ಕಟ್ಟಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!

ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ `ಇಂಡಿಯನ್ 2‘ (Indian 2 Audio Launch) ಬಿಡುಗಡೆಗೆ ಮುಂಚಿತವಾಗಿ, ಜೂನ್ 1ರಂದು ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಮೆಗಾ ಆಡಿಯೊ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.

ಜುಲೈ 12ಕ್ಕೆ ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ. ಹೀಗಾಗಿ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.

ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ಜವಾಬ್ದಾರಿ ಹೊತ್ತಿದ್ದು, ರವಿವರ್ಮನ್ ಹಾಗೂ ರತ್ನವೇಲು ಅವರು ಛಾಯಾಗ್ರಹಣ ಮಾಡಿದ್ದಾರೆ. ಎ. ಶ್ರೀಕರ್ ಪ್ರಸಾದ್ ಸಂಕಲನದ ಕೆಲಸ ನಿಭಾಯಿಸಿದ್ದಾರೆ.

1996ರಲ್ಲಿ ತೆರೆಕಂಡ ಎಸ್‌. ಶಂಕರ್‌ ನಿರ್ದೇಶನದ ʼಇಂಡಿಯನ್‌ʼ ತಮಿಳು ಚಿತ್ರದಲ್ಲಿ ಕಮಲ್‌ ಹಾಸನ್‌ ಜತೆಗೆ ಮನೀಶಾ ಕೊಯಿರಾಲ, ಊರ್ಮಿಳಾ ಮಾತೋಂಡ್ಕರ್‌, ಸುಕನ್ಯಾ, ಮನೋರಮಾ, ನೆಡುಮುಡಿ ವೇಣು, ಕಸ್ತೂರಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಭಾರತದ ಕ್ಲಾಸಿಕ್‌ ಚಿತ್ರಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗುತ್ತದೆ. ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಯ ನಾಮನಿರ್ದೇಶನಕ್ಕೂ ಇದನ್ನು ಪರಿಗಣಿಸಲಾಗಿತ್ತು. ಮಾತ್ರವಲ್ಲ ಕಮಲ್‌ ಹಾಸನ್‌ ತಮ್ಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಎ.ಆರ್‌.ರೆಹಮಾನ್‌ ಅವರ ಸಂಗೀತವೂ ಸಿನಿಪ್ರಿಯರ ಗಮನ ಸೆಳೆದಿತ್ತು.

Continue Reading
Advertisement
Self Harming
ಕ್ರೈಂ3 mins ago

Self Harming: ಐಎಎಸ್‌ ದಂಪತಿ ಪುತ್ರಿ ಬಹುಮಹಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

mlc election nomination
ಪ್ರಮುಖ ಸುದ್ದಿ10 mins ago

MLC Election: ಕಾಂಗ್ರೆಸ್‌ನ 7, ಬಿಜೆಪಿಯ 3, ಜೆಡಿಎಸ್‌ನ ಒಬ್ಬ ಅಭ್ಯರ್ಥಿಯಿಂದ ಮೇಲ್ಮನೆಗೆ ನಾಮಪತ್ರ ಸಲ್ಲಿಕೆ

Snake Rescue Snakes spotted in heavy rain
ಮಳೆ11 mins ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Riyan Parag
ಕ್ರಿಕೆಟ್25 mins ago

Riyan Parag: ಟಿ20 ವಿಶ್ವಕಪ್​ ನೋಡಲಾರೆ ಎಂದ ‘ಹಾಟ್​ ಫೇವರಿಟ್’ ರಿಯಾನ್​ ಪರಾಗ್

Actor Chetan Ahimsa
ಪ್ರಮುಖ ಸುದ್ದಿ30 mins ago

Actor Chetan Ahimsa: ಬಿಜೆಪಿ ಸಂವಿಧಾನ ಬದಲಿಸಲ್ಲ; ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಏನೂ ಕಮ್ಮಿ ಇಲ್ಲ ಎಂದ ನಟ ಚೇತನ್!

World Bicycle Day
ಆರೋಗ್ಯ48 mins ago

World Bicycle Day: ಸೈಕಲ್‌ ಹೊಡೆಯುವುದರ ಲಾಭಗಳು ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು!

Battery Life Tips
ಗ್ಯಾಜೆಟ್ಸ್49 mins ago

Battery Life Tips: ಈ 5 ಸಲಹೆ ಪಾಲಿಸಿ; ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಿ!

MP Renukacharya
ಕ್ರೈಂ56 mins ago

MP Renukacharya : ಎಂ.ಪಿ ರೇಣುಕಾಚಾರ್ಯ, ಪುತ್ರನಿಗೆ ಫೋನ್‌ನಲ್ಲಿ ಕೊಲೆ ಬೆದರಿಕೆ

Nataša Stanković
ಕ್ರೀಡೆ1 hour ago

Nataša Stanković: ಹಾರ್ದಿಕ್ ಪಾಂಡ್ಯ ಜತೆ ವಿಚ್ಛೇದನ?; ಅನುಮಾನಕ್ಕೆ ತೆರೆ ಎಳೆದ ಪತ್ನಿ ನತಾಶಾ

Drowns in Lake
ಕರ್ನಾಟಕ1 hour ago

Drowns in Lake: ಕೆರೆಯಲ್ಲಿ ಮುಳುಗಿ ಯುವಕ ಸಾವು; ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Snake Rescue Snakes spotted in heavy rain
ಮಳೆ11 mins ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

ಟ್ರೆಂಡಿಂಗ್‌