Vijayananda Film | ನ.6ರಂದು ವಿಜಯ ಸಂಕೇಶ್ವರ ಜೀವನ ಆಧಾರಿತ ವಿಜಯಾನಂದ ಚಿತ್ರದ ಆಡಿಯೊ ಲಾಂಚ್ - Vistara News

ಪ್ರಮುಖ ಸುದ್ದಿ

Vijayananda Film | ನ.6ರಂದು ವಿಜಯ ಸಂಕೇಶ್ವರ ಜೀವನ ಆಧಾರಿತ ವಿಜಯಾನಂದ ಚಿತ್ರದ ಆಡಿಯೊ ಲಾಂಚ್

‘ವಿಜಯಾನಂದ’ ಚಿತ್ರದ ಆಡಿಯೊ (Vijayananda Film) ನವೆಂಬರ್‌ 6ರಂದು ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ.
‘ಹಾಗೆ ಆದ ಆಲಿಂಗನ’ ಎಂದು ಸಾಗುವ ರೊಮ್ಯಾಂಟಿಕ್ ಸಾಂಗ್ ಇದಾಗಿದೆ.

VISTARANEWS.COM


on

Vijayananda-Film-3
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ (Vijayananda Film) ಚಿತ್ರವು ಪ್ರಾರಂಭದಿಂದಲೂ ಸ್ಟಾರ್ ಕಾಸ್ಟ್, ಕಲಾವಿದರ ಲುಕ್, ಮೇಕಿಂಗ್, ಕುತೂಹಲ ಮೂಡಿಸುವ ಟೀಸರ್, ಬಹುಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಬಿಡುಗಡೆ ಯೋಜನೆ ಸೇರಿ ಹಲವು ಕಾರಣಕ್ಕೆ ಸುದ್ದಿ ಮಾಡುತ್ತಿದೆ. ಈಗ ಸಿನಿಮಾ ಕುರಿತು ಮತ್ತೊಂದು ಅಪ್‌ಡೇಟ್‌ ಸಿಕ್ಕಿದ್ದು, ‘ವಿಜಯಾನಂದ’ ಚಿತ್ರದ ಆಡಿಯೊ ನವೆಂಬರ್‌ 6ರಂದು ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ. ‘ಹಾಗೆ ಆದ ಆಲಿಂಗನ’ ಎಂದು ಸಾಗುವ ರೊಮ್ಯಾಂಟಿಕ್ ಸಾಂಗ್ಅನ್ನು ಬಿಡುಗಡೆ ಮಾಡಲಾಗುತ್ತಿದೆ.

ನಿಹಾಲ್‌ ನಾಯಕನಾಗಿ, ಸಿರಿ ಪ್ರಹ್ಲಾದ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ, ಹಳೇಬೀಡು, ಬೇಲೂರು ಸೇರಿದಂತೆ 10ಕ್ಕೂ ಹೆಚ್ಚು ಪ್ರೇಕ್ಷಣೀಯ ಸ್ಥಳಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಹೆಸರಾಂತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಧನಂಜಯ್ ರಂಜನ್ ಸಾಹಿತ್ಯ ರಚಿಸಿದ್ದಾರೆ. ಒರಾಯನ್ ಮಾಲ್‌ನಲ್ಲಿ ನಡೆಯಲಿರುವ ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ಗೋಪಿ ಸುಂದರ್ ಹಾಡಿನ ಪ್ರದರ್ಶನ ನೀಡಲಿದ್ದಾರೆ. ಶರಣ್, ಹರ್ಷಿಕಾ ಪೂಣಚ್ಚ ಸೇರಿ ಸ್ಯಾಂಡಲ್‌ವುಡ್‌ನ ನಟ, ನಟಿಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಯಶಸ್ವಿ ಮತ್ತು ಮಾದರಿ ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರ ಕುರಿತ ‘ವಿಜಯಾನಂದ’ ಚಿತ್ರವನ್ನು ವೀಕ್ಷಿಸಲು ನಾಡಿನ ಜನ ಕಾತರದಿಂದ ಕಾಯುತ್ತಿದ್ದಾರೆ. ಭಾನುವಾರ ಇದರ ಹಾಡುಗಳ ಆಡಿಯೊ ಬಿಡುಗಡೆ ಆಗುತ್ತಿರುವುದು ಸಂತಸದ ಸಂಗತಿ. ಈ ಚಿತ್ರದ ಟ್ರೇಲರ್ ಸೂಪರ್ ಹಿಟ್ ಆದಂತೆ, ಹಾಡುಗಳೂ ಜನ ಮೆಚ್ಚುಗೆ ಗಳಿಸಲಿವೆ.
ಹರಿಪ್ರಕಾಶ್ ಕೋಣೆಮನೆ, ಸಿಇಒ ಮತ್ತು ಪ್ರಧಾನ ಸಂಪಾದಕ, ವಿಸ್ತಾರ ನ್ಯೂಸ್

ಇದನ್ನೂ ಓದಿ | ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ 2ನೇ ಮದುವೆ ಚರ್ಚೆ ಜೋರು; ನಟಿ ಜತೆಗಿನ ಫೋಟೋ ವೈರಲ್


ಪದ್ಮಶ್ರೀ ಡಾ. ವಿಜಯ ಸಂಕೇಶ್ವರರ ಬಯೋಪಿಕ್‌ಅನ್ನು ವಿಆರ್‌ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಡಾ. ಆನಂದ ಸಂಕೇಶ್ವರ ನಿರ್ಮಿಸುತ್ತಿದ್ದಾರೆ. ‘ಟ್ರಂಕ್’ ಖ್ಯಾತಿಯ ನಿರ್ದೇಶಕಿ ರಿಷಿಕಾ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಡಾ. ವಿಜಯ ಸಂಕೇಶ್ವರರ ಪಾತ್ರದಲ್ಲಿ ನಿಹಾಲ್ ರಜಪೂತ್, ಶ್ರೀಮತಿ ಲಲಿತಾ ಸಂಕೇಶ್ವರರ ಪಾತ್ರದಲ್ಲಿ ಸಿರಿ ಪ್ರಹ್ಲಾದ್, ಡಾ. ವಿಜಯ ಸಂಕೇಶ್ವರರ ತಂದೆ ಬಿ.ಜಿ. ಸಂಕೇಶ್ವರರ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್, ಡಾ. ಆನಂದ ಸಂಕೇಶ್ವರರ ಪಾತ್ರದಲ್ಲಿ ಭರತ್ ಬೋಪಣ್ಣ ಹಾಗೂ ವಿಜಯ ಸಂಕೇಶ್ವರರ ಗುರುಗಳ ಪಾತ್ರದಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ.

ಡಾ. ವಿಜಯ ಸಂಕೇಶ್ವರ ಅವರ ಜೀವನ ಮತ್ತು ಸಾಧನೆ‌ಯ ಕತೆ ಎಲ್ಲರಿಗೂ ಪ್ರೇರಣಾದಾಯಕ. ಶೀಘ್ರವೇ ಬಿಡುಗಡೆ ಆಗಲಿರುವ ‘ವಿಜಯಾನಂದ’ ಚಿತ್ರ ಸ್ಫೂರ್ತಿದಾಯಕ ಆಗಲಿದೆ. ಭಾನುವಾರ ನ.6ರಂದು ಬಿಡುಗಡೆ ಆಗಲಿರುವ ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಲಿ.
-ಎಚ್ ವಿ ಧರ್ಮೇಶ್, ಚೇರ್ಮನ್ ಮತ್ತು ಎಂಡಿ, ವಿಸ್ತಾರ ನ್ಯೂಸ್ ಪ್ರೈ.ಲಿ.

    ‘ವಿಜಯಾನಂದ’ ಚಿತ್ರ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.

    Vijayananda Film
    Vijayananda Film

    ಇದನ್ನೂ ಓದಿ | Vijay Sankeshwar | ಇತಿಹಾಸ ಸೃಷ್ಟಿಸಿದವರೆಲ್ಲರೂ ಅಪ್ಪನ ವಿರುದ್ಧ ಹೋದವರು!: ವಿಜಯಾನಂದ ಟೀಸರ್‌ ವೈರಲ್‌

    ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
    ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
    Continue Reading
    Click to comment

    Leave a Reply

    Your email address will not be published. Required fields are marked *

    ಮಂಡ್ಯ

    Road Accident : ಮಂಡ್ಯದಲ್ಲಿ ಕಾರು ಹಾಗೂ ಗೂಡ್ಸ್ ಆಟೋ ನಡುವೆ ಡಿಕ್ಕಿ; 20ಕ್ಕೂ ಹೆಚ್ಚು ಮಂದಿಗೆ ಗಾಯ

    Road Accident : ಮಂಡ್ಯದಲ್ಲಿ ಕಾರು ಹಾಗೂ ಗೂಡ್ಸ್ ಆಟೋ ನಡುವೆ ಡಿಕ್ಕಿಯಾಗಿ 20ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. ಉಡುಪಿಯಲ್ಲಿ ವೇಗವಾಗಿ ಬಂದ ಶಾಲಾವಾಹನ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ.

    VISTARANEWS.COM


    on

    By

    Road Accident
    Koo

    ಮಂಡ್ಯ: ಕಾರು ಹಾಗೂ ಗೂಡ್ಸ್ ಆಟೋ ನಡುವೆ ಡಿಕ್ಕಿಯಾಗಿದ್ದು, ಟಾಟಾ ಏಸ್ ನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಅಪಘಾತದಲ್ಲಿ (Road Accident) ಯಾವುದೇ ಪ್ರಾಣಾಪಾಯವಾಗಿಲ್ಲ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಣಿಗೆರೆ ಗ್ರಾಮದಲ್ಲಿ ನಡೆದಿದೆ. ತೋರೆಬೊಮ್ಮನಹಳ್ಳಿ ಗ್ರಾಮದ 22 ಮಂದಿಗೆ ಗಾಯವಾಗಿದೆ. ಗೂಡ್ಸ್ ಆಟೋ ಮಳವಳ್ಳಿ ಕಡೆಗೆ, ಕಾರು ಬೆಂಗಳೂರು ಕಡೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

    ಡಿಕ್ಕಿ ರಭಸಕ್ಕೆ ಟಾಟಾ ಏಸ್ ಟೆಂಪೋ ಉರುಳಿ ಬಿದ್ದಿದೆ. ಟೆಂಪೋದಲ್ಲಿದ್ದ 22 ಜನರಿಗೆ ಗಾಯವಾಗಿದ್ದು, ಗಾಯಾಳುಗಳನ್ನ ಕೆ.ಎಂ.ದೊಡ್ಡಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಮಿಮ್ಸ್‌ಗೆ ದಾಖಲು ಮಾಡಲಾಗಿದೆ. ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಡಿಸಿ, ಎಸ್ಪಿ ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳುಗಳ ಆರೋಗ್ಯವನ್ನು ಡಿಸಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ವಿಚಾರಿಸಿದರು.

    ಮಣಿಗೆರೆ ಬಳಿ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಮಿಮ್ಸ್‌ಗೆ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ ನೀಡಿದರು. ಗಾಯಾಳುಗಳ ಆರೋಗ್ಯ ವಿಚಾರಿಸಿ ಬಳಿಕ ಮಾತನಾಡಿದ ಅವರು, ಕಾರು-ಗೂಡ್ಸ್ ಗಾಡಿ ನಡುವೆ ಡಿಕ್ಕಿಯಾಗಿ 28 ಜನರಿಗೆ ಗಂಭೀರ ಗಾಯವಾಗಿದೆ. ಎಲ್ಲರಿಗೂ ಸೂಕ್ತ ಚಿಕಿತ್ಸೆ ಕೊಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದಾರೆ, ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲ. ಗ್ರಾಮೀಣ ಭಾಗದ ಜನರು ಟೆಂಪೋ ಹಾಗೂ ಗೂಡ್ಸ್ ಗಾಡಿಗಳಲ್ಲಿ ಹೋಗುವುದನ್ನ ನಿಲ್ಲಿಸಬೇಕು. ಹೆಚ್ಚು ಜನರು ಗೂಡ್ಸ್ ಗಾಡಿಗಳಲ್ಲಿ ಪ್ರಯಾಣಿಬಾರದು ಎಂದು ನಿಷೇಧ ಇದೆ. ಜನರು ಎಚ್ಚರಿಕೆ ವಹಿಸಬೇಕು. ಇದರ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದರು.

    ವೇಗವಾಗಿ ಬಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಶಾಲಾವಾಹನ

    ಅತೀ ವೇಗದ ವಾಹನ ಚಾಲನೆ ಮಾಡಿದ ಶಾಲಾವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಉಡುಪಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೆಕ್ಕಟ್ಟೆ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಶಾಲಾ ವಾಹನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಚಾಲಕನ ತಲೆಗೆ ಗಂಭೀರ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ವಾಹನದಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯಗೊಂಡಿದ್ದಾರೆ. ಕುಂದಾಪುರ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ಶಾಲಾವಾಹನ ಇದಾಗಿದೆ. ಹೆದ್ದಾರಿಯಲ್ಲಿ ಅಡ್ಡ ಬಂದ ಬೈಕ್‌ವೊಂದನ್ನು ತಪ್ಪಿಸುವ ಭರದಲ್ಲಿ ನಿಯಂತ್ರಣ ಕಳೆದುಕೊಂಡ ಶಾಲಾ ವಾಹನವು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ವಾಹನ ಬ್ರಹ್ಮಾವರದಿಂದ ಹೆಮ್ಮಾಡಿ ಕಡೆಗೆ ಬರುತ್ತಿದ್ದಾಗ ನಡೆದಿದೆ. ಹೆದ್ದಾರಿಯಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್ ನಿರ್ಲಕ್ಷಿಸಿ ಅತೀ ವೇಗದ ವಾಹನ ಚಾಲನೆಯಿಂದ ಅಪಘಾತ ನಡೆದಿದೆ.

    ದೇವನಹಳ್ಳಿಯಲ್ಲಿ ಹೊತ್ತಿ ಉರಿದ ಕ್ಯಾಂಟರ್‌

    ಅಂಗಡಿಗಳಿಗೆ ಬಟ್ಟೆ‌ ಹಾಗೂ ದಿನಸಿ ಪದಾರ್ಥಗಳು ಡಂಪ್ ಮಾಡಲು‌ ಬಂದಿದ್ದ ಕ್ಯಾಂಟರ್‌ಗೆ ಆಕಸ್ಮಿಕ ಬೆಂಕಿ ತಗುಲಿದೆ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಪಟ್ಟಣದ ಹಳೇಯ ಬಸ್ ನಿಲ್ದಾಣ ಇಂದಿರಾ ಕ್ಯಾಂಟಿನ್ ಬಳಿ‌ ಘಟನೆ ನಡೆದಿದೆ. ಬೆಳಗಿನ ಜಾವ 3 ಗಂಟೆಗೆ ಪಟ್ಟಣದ ಅಂಗಡಿಗಳಿಗೆ ಸಾಮಾಗ್ರಿಗಳು ಹಾಗೂ ಬಟ್ಟೆಗಳು ಡಂಪ್ ಮಾಡಲು‌ ಬಂದಿದ್ದ ಕ್ಯಾಂಟರ್‌ ಬಜಾರ್ ರಸ್ತೆಗೆ ತೆರಳಲು ಹೋಗುತ್ತಿದ್ದಾಗ, ವಿದ್ಯುತ್ ತಂತಿ ತಗುಲಿರುವ ಶಂಕೆ ಇದೆ.

    ಅಗ್ನಿಶಾಮದಳದ ಸಿಬ್ಬಂದಿ ಹಾಗೂ ಪೊಲೀಸರಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿಯಿಲ್ಲ. ಬೆಂಕಿ ಬಿದ್ದ ಪರಿಣಾಮ ಕ್ಯಾಂಟರ್ ಸಂಪೂರ್ಣ ಬೆಂಕಿಗಾಹುತಿ ಆಗಿದೆ. ಕ್ಯಾಂಟರ್‌ನಲ್ಲಿದ್ದ ಲಕ್ಷಾಂತರ ಮೌಲ್ಯದ ಬಟ್ಟೆ ಹಾಗೂ ದಿನಸಿ ಅಂಗಡಿಯ ಪದಾರ್ಥಗಳು ಸುಟ್ಟು ಕರಕಲಾಗಿದೆ. ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಲಾರಿ ಡಿಕ್ಕಿಗೆ ಬೈಕ್‌ ಸವಾರ ಗಂಭೀರ

    ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕು ಸಂತೆಮಾಳದ ಬಳಿ ಟಿ.ವಿ.ಎಸ್. ಮೊಪೆಡ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ. ಕರುಹಟ್ಟಿಯ ಮಹದೇವಪ್ಪ ಎಂಬುವವರಿಗೆ ಗಂಭೀರ ಗಾಯವಾಗಿದೆ. ಅಪಘಾತದ ನಂತರ ಲಾರಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳು ಮಹದೇವಪ್ಪಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಟಿ ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

    Continue Reading

    ಬೆಂಗಳೂರು

    MLA Muniratna: ಬಿಜೆಪಿ ಪಕ್ಷದ ಒಬ್ಬೊಬ್ಬ ನಾಯಕನೂ ಮುನಿರತ್ನನಂತಹ ಮುತ್ತು ರತ್ನಗಳೇ! ಕಾಂಗ್ರೆಸ್‌ ಟೀಕೆ

    MLA Muniratna: ಬಿಜೆಪಿ ಪಕ್ಷದ ಒಬ್ಬೊಬ್ಬ ನಾಯಕನೂ ಮುನಿರತ್ನನಂತಹ ಮುತ್ತು ರತ್ನಗಳೇ! ಈ ಎಲ್ಲಾ ವಿಕೃತ ವಿದ್ಯೆಗಳು ಆರ್‌ಎಸ್ಎಸ್ ಶಾಖೆಯಲ್ಲಿ ಟ್ರೈನಿಂಗ್ ಕೊಡಲಾಗುತ್ತಿದೆಯೇ? ಎಂದು ಪ್ರಶ್ನಿಸಿ ಕಾಂಗ್ರೆಸ್‌ ಪಕ್ಷ ಟೀಕಿಸಿ ಪ್ರಶ್ನಿಸಿದೆ.

    VISTARANEWS.COM


    on

    By

    Congress expresses displeasure over BJP MLA Munirathnas rape case
    Koo

    ಬೆಂಗಳೂರು: ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಆರೋಪದಡಿ ಜೈಲುಪಾಲಾಗಿರುವ ಶಾಸಕ ಮುನಿರತ್ನ (MLA Muniratna) ವಿರುದ್ಧ ಅತ್ಯಾಚಾರ ಹಾಗೂ ಹನಿಟ್ರ್ಯಾಪ್‌ ಪ್ರಕರಣಗಳು ದಾಖಲಾಗಿವೆ. ಇದರ ಬೆನ್ನೆಲ್ಲೇ ಟ್ವೀಟ್‌ (ಎಕ್ಸ್) ಮೂಲಕ ಬಿಜೆಪಿ ಹಾಗೂ ಶಾಸಕ ಮುನಿರತ್ನ ವಿರುದ್ಧ ಕಾಂಗ್ರೆಸ್ ಪಕ್ಷ ಕಿಡಿಕಾರಿದೆ.

    ಮುನಿರತ್ನರ ಹಗರಣಗಳು ಕುಕೃತ್ಯಗಳ ಬಂಡಾರ ಬಗೆದಷ್ಟೂ ಹೊರಬರುತ್ತಿವೆ. ಮಹಿಳೆಯರನ್ನು ಮಂಚಕ್ಕೆ ಕಳಿಸಿ ಎಂದಿದ್ದಲ್ಲದೆ, ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಹಿಳೆಯರನ್ನು ಬ್ಲ್ಯಾಕ್‌ಮೇಲ್‌ ಮಾಡಿ ಹನಿಟ್ರಾಪ್‌ಗೆ ಬಳಸಿಕೊಂಡಿದ್ದು, ವಿರೋಧಿಗಳಿಗೆ ಏಡ್ಸ್ ಹಬ್ಬಿಸಲು ಯತ್ನಿಸಿದ್ದು. ಎಂತೆಂತಹ ವಿಕಾರ, ವಿಕೃತ ಕೃತ್ಯಗಳನ್ನು ಎಸಗಿದ್ದಾರೆ ಎಂದು ಜನಸಾಮಾನ್ಯರು ಊಹಿಸಲೂ ಸಾಧ್ಯವಿಲ್ಲ. ಈ ಎಲ್ಲಾ ವಿಕೃತ ವಿದ್ಯೆಗಳು ಆರ್‌ಎಸ್ಎಸ್ ಶಾಖೆಯಲ್ಲಿ ಟ್ರೈನಿಂಗ್ ಕೊಡಲಾಗುತ್ತಿದೆಯೇ? ಎಂದು ಪ್ರಶ್ನಿಸಿ ಟ್ವೀಟ್‌ ಮಾಡಲಾಗಿದೆ.

    ಬೆದರಿಕೆ, ಕಮಿಷನ್ ವಸೂಲಿ, ಭ್ರಷ್ಟಾಚಾರ, ದಲಿತರ ಜಾತಿ ನಿಂದನೆ ಹಾಗೂ ಮಹಿಳೆಯರ ಘನತೆಗೆ ಧಕ್ಕೆ ಬಿಜೆಪಿ ಶಾಸಕ ಮುನಿರತ್ನರ ಕುಕೃತ್ಯಗಳು ಒಂದೆರಡಲ್ಲ, ಈಗ ಹೊಸದಾಗಿ ಅತ್ಯಾಚಾರ, ಹನಿಟ್ರ್ಯಾಪ್ ನಂತಹ ಪ್ರಕರಣಗಳೂ ಹೊರಬಂದಿವೆ. ಬಿಜೆಪಿ ಪಕ್ಷದ ಒಬ್ಬೊಬ್ಬ ನಾಯಕನೂ ಮುನಿರತ್ನನಂತಹ ಮುತ್ತು ರತ್ನಗಳೇ! ಎಂದು ವ್ಯಂಗ್ಯ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಬಾರದ ಕೆಲಸ ಮಾಡಿದ್ದರೂ ಬಿಜೆಪಿ ನಾಯಕರು ಕೊಳಕ ಮುನಿರತ್ನನನ್ನು ಸಮರ್ಥಿಸುವುದು ನಾಚಿಕೆಗೇಡಿನ ಪರಮಾವಧಿ ಎಂದು ಟೀಕಿಸಿದ್ದಾರೆ.

    ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

    Continue Reading

    ರಾಜಕೀಯ

    MLA Muniratna: ಎದುರಾಳಿಗಳ ಮಟ್ಟ ಹಾಕಲು ಶಾಸಕ ಮುನಿರತ್ನರಿಂದ ಏಡ್ಸ್‌ ಟ್ರ್ಯಾಪ್‌! ಎಫ್‌ಐಆರ್‌ನಲ್ಲಿದೆ ಬೆಚ್ಚಿಬೀಳಿಸುವ ಅಂಶ

    MLA Muniratna: ತನ್ನ ಎದುರಾಳಿಗಳ ಮಟ್ಟ ಹಾಕಲು ಶಾಸಕ ಮುನಿರತ್ನ ನೇರವಾಗಿ ಫೈಟ್ ಮಾಡದೆ ಹನಿಟ್ರ್ಯಾಪ್ ಬಲೆಗೆ ಬೀಳಿಸುತ್ತಿದ್ದ. ಸಂತ್ರಸ್ತೆ ನೀಡಿದ ಎಫ್‌ಐಆರ್‌ನಲ್ಲಿ ಬೆಚ್ಚಿಬೀಳಿಸುವ ಅಂಶವಿದೆ.

    VISTARANEWS.COM


    on

    Honeytrap by MLA Munirathna
    Koo

    ಬೆಂಗಳೂರು: ಜಾತಿ ನಿಂದನೆ ಆರೋಪದಡಿ ಜೈಲು ಪಾಲಾಗಿರುವ ಶಾಸಕ ಮುನಿರತ್ನ (MLA Muniratna) ವಿರುದ್ಧ ಅತ್ಯಾಚಾರ ಪ್ರಕರಣವು ದಾಖಲಾಗಿದೆ. ಸಂತ್ರಸ್ತೆ ನೀಡಿರುವ ದೂರಿನಲ್ಲಿ ಭಯಾನಕ ಅಂಶ ಬೆಚ್ಚಿಬೀಳಿಸುವಂತಿದೆ.‌ ಸಂತ್ರಸ್ತೆಯನ್ನು ಮುಂದಿಟ್ಟುಕೊಂಡು ಮುನಿರತ್ನ ಹನಿಟ್ರ್ಯಾಪ್‌ ಮಾಡಿಸುತ್ತಿದ್ದನಂತೆ. ತನಗೆ ಆಗದವರನ್ನು ಮಟ್ಟ ಹಾಕಲು ಹನಿಟ್ರ್ಯಾಪ್‌ ಮಾಡಿ ಅವರಿಗೆ ಏಡ್ಸ್‌ ಸೋಂಕಿತರ ರಕ್ತ ಇಂಜೆಕ್ಟ್‌ ಮಾಡಿಸುತ್ತಿದ್ದ ಎನ್ನಲಾಗಿದೆ. ಮುನಿರತ್ನನ ಈ ಭಯಾನಕ ಕೃತ್ಯಕ್ಕೆ ಹಲವರು ಬಲಿಯಾಗಿದ್ದಾರೆ. ತನ್ನ ಎದುರಾಳಿ ಸ್ಥಳೀಯ ಕಾರ್ಪೋರೇಟರ್‌ಗಳನ್ನು ಸೈಲೆಂಟ್ ಮಾಡಿಸಿದ್ದು ಹೀಗೆ, ಅದರಲ್ಲಿ ಮಾಗಡಿ ಎಂಎಲ್‌ಎ ಸಹ ಒಬ್ಬರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹನಿಟ್ರ್ಯಾಪ್, ಏಡ್ಸ್ ಹರಡಿಸುವ ಕೃತ್ಯ, ಡ್ರಗ್ಸ್ ದಂಧೆ ಬಗ್ಗೆಯೂ ಎಫ್ಐಆರ್‌ನಲ್ಲಿದೆ.

    ಇಷ್ಟಕ್ಕೂ ಎಫ್‌ಐಆರ್‌ನಲ್ಲಿ ಏನಿದೆ?

    ನಾನು (ಸಂತ್ರಸ್ತೆ) ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುತ್ತೇನೆ. ಕೋವಿಡ್‌ ಸಂದರ್ಭದಲ್ಲಿ ನಮ್ಮ ಏರಿಯಾದ ಕಾರ್ಪೋರೇಟರ್ ನನಗೆ ಪರಿಚಯವಿದ್ದು, ಕೋವಿಡ್‌ನಿಂದ ಬಳಲುತ್ತಿರುವ ಜನರಿಗಾಗಿ ಮಾಸ್ ವಿತರಣೆ ಮಾಡಲು 5,000 ಕ್ಕೂ ಹೆಚ್ಚು ಮಾಸ್ಕ್‌ಗಳನ್ನುಕಾರ್ಪೋರೇಟರ್‌ರಿಗೆ ನೀಡಿದ್ದೆ. ಇದನ್ನು ತಿಳಿದ ಶಾಸಕ ಮುನಿರತ್ನಂ ನಾಯ್ದು ನನಗೆ ವಾಟ್ಸ್ ಆಪ್‌ ಮುಖಾಂತರ ಕರೆ ಮಾಡಿ ನಮಸ್ತೆ ಲೀಡರ್ ನಾನು ಈ ಭಾಗದ ಶಾಸಕ ನಮ್ಮ ಕ್ಷೇತ್ರದಲ್ಲಿ, ನೀವು ಮಾಸ್ಕ್ ವಿತರಣೆ ಮಾಡುತ್ತೀರಿ, ನಿಮ್ಮ ಬಗ್ಗೆ ಕೇಳಿದ್ದೀನಿ ನನ್ನನ್ನು ಭೇಟಿ ಮಾಡಿ ಎಂದು ತಿಳಿಸಿರುತ್ತಾರೆ.

    ಅದರಂತೆ ನಾನು ಮರುದಿನ ಸಂಜೆಯವರೆಗೆ ವಾಟ್ಸ್ ಆಫ್ ಮುಖಾಂತರ ಕಾಲ್ ಮಾಡಿ ಸಿಗುವುದಾಗಿ ತಿಳಿಸಿದಾಗ, ನಾನು ಕ್ಷೇತ್ರದ ಕೆಲಸದಲ್ಲಿ ತೊಡಗಿಕೊಂಡಿರುತ್ತೇನೆ. ಇದನ್ನು ಮುಗಿಸಿ 20 ನಿಮಿಷಗಳ ನಂತರ ರಾಮಯ್ಯ ಸಮಾಧಿ ಹತ್ತಿರವಿರುವ ಅವರ ಆಫೀಸ್ ಹತ್ತಿರ ಬರಲು ತಿಳಿಸಿದರು. ಅದರಂತೆ ನಾನು ಅವರ ಹೇಳಿದ ಸಮಯಕ್ಕೆ ಅವರನ್ನು ಭೇಟಿ ಮಾಡಿ ಪರಿಚಯ ಮಾಡಿಕೊಂಡೆನು. ಆ ಸಮಯದಲ್ಲಿ, ನನಗೆ ಪರಿಚಯವಿರುವ ಕಾರ್ಪೋರೇಟರ್ ಅವರ ಗಂಡ 3-4 ಬಾರಿ ಕರೆ ಮಾಡಿರುತ್ತಾರೆ. ನಾನು ಅದನ್ನು ಸೈಲೆಂಟ್ ಮಾಡಲು ಹೋದಾಗ ಇದು ಯಾರು ಎಂದು ಮುನಿರತ್ನಂ ಪ್ರಶ್ನಿಸುತ್ತಾರೆ. ಅದಕ್ಕೆ ನಾನು ಸ್ಥಳೀಯ ಕಾರ್ಪೋರೇಟರ್ ಗಂಡ ಎಂದು ಹೇಳಿದೆ.

    ಅದಕ್ಕೆ ಮುನಿರತ್ನ ಮೇಡಮ್ ನಾನು ನಿಮಗೆ ಒಂದು ಸಹಾಯ ಕೇಳುತ್ತೇನೆ, ನೀವು ಸಹಾಯ ಮಾಡುತ್ತೀರೆಂದು ನಂಬಿರುತ್ತೇನೆ, ಈಗ ಬೇಡ ಮುಂದೊಂದು ದಿನ ಕೇಳುವುದಾಗಿ ತಿಳಿಸಿರುತ್ತಾರೆ. ಹಾಗೂ ನನ್ನನ್ನು ತುಂಬಾ ಹತ್ತಿರದಿಂದ ಸ್ನೇಹ ಬಳಸಿ ಗುಡ್ ಮಾರ್ನೀಂಗ್, ಗುಡ್ ನೈಟ್ ಹಾಗೂ ಪ್ರೇಮಗೀತೆ ಕಳುಹಿಸುತ್ತಿದ್ದ, ಹಾಗೂ ವಿಡಿಯೋ ಕಾಲ್ ಮುಖಾಂತರ ನನಗೆ ಕರೆ ಮಾಡಿ ವಿಚಾರಿಸುತ್ತ ನನ್ನ ಬಳಿ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳುತ್ತಿದ್ದ.

    ಒಂದು ದಿನ 10ಕ್ಕೂ ಹೆಚ್ಚು ಬಾರಿ ವಿಡಿಯೋ ಕಾಲ್ ಮಾಡುತ್ತಿದ್ದ. ಆಗ ನಾನು ಆ ದಿನ ಸ್ನಾನಕ್ಕೆ ಹೋಗುವ ಸಂದರ್ಭದಲ್ಲಿ ವಿಡಿಯೋ ಕಾಲ್ ಮಾಡಿದ್ದ. ಸ್ನಾನದ ನಂತರ ನನ್ನ ಮೊಬೈಲ್ ಗಮನಿಸಿದಾಗ ಮುನಿರತ್ನ ಕಾಲ್ ಮಾಡಿರುವ ಬಗ್ಗೆ ತಿಳಿದು ಮತ್ತೆ ನಾನು ವಾಟ್ಸ್ ಆಫ್ ಕಾಲ್ ಮಾಡಿದಾಗ ಮುನಿರತ್ನ ಏಕೆ ಕಾಲ್ ರಿಸೀವ್ ಮಾಡಿಲ್ಲ ಎಂದಾಗ ಸರ್ ನಾನು ಸ್ನಾನಕ್ಕೆ ಹೋಗಿದ್ದೆ. ಈಗ ನನ್ನ ಮೊಬೈಲ್ ಗಮನಿಸಿದಾಗ ನೀವು ಕಾಲ್ ಮಾಡಿರುವ ಬಗ್ಗೆ, ತಿಳಿಯಿತು. ಅದಕ್ಕೆ ಈಗ ಕಾಲ್ ಮಾಡಿದೆ ಎಂದೆ. ಆಗ ಮುನಿರತ್ನ, ಈಗ ನೀನು ಎಲ್ಲಿರುವೆ ಎಂದು ಕೇಳಿದಾಗ, ನಾನು ರೂಮ್‌ನಲ್ಲಿ ಇದ್ದೀನಿ ಎಂದು ತಿಳಿಸಿರುತ್ತೇನೆ. ಆಗ ಮುನಿರತ್ನ ನೀನು ನನಗೆ ವಿಡಿಯೋ ಕಾಲ್ ಮಾಡಿ ನನಗೆ ನಗ್ನವಾಗಿ ದೇಹವನ್ನು ತೋರಿಸು ಎಂದು ಹೇಳುತ್ತಾರೆ. ಇದಕ್ಕೆ ನಾನು ಒಪ್ಪುವುದಿಲ್ಲ.

    ನಂತರ ಮುನಿರತ್ನ ರವರು ನನ್ನನ್ನು ಗೋಡನ್ ಹತ್ತಿರ ಬಾ ಎಂದು ಕರೆಯುತ್ತಾನೆ. 3-4 ದಿನಗಳ ನಂತರ ಅದರಂತೆ ನಾನು ಆ ಗೋಡನ್‌ಗೆ ಭೇಟಿ ಮಾಡಲು ಹೋದ ಸಂದರ್ಭದಲ್ಲಿ ಗನ್ ಮ್ಯಾನ್ ವಿಜಯಕುಮಾರ ಮತ್ತು ಮುನಿರತ್ನ ನನಗಾಗಿ ಕಾಯುತ್ತಿರುತ್ತಾರೆ. ನಾನು ದ್ವಿಚಿಕ್ರ ವಾಹನದಲ್ಲಿ ಅವರಿರುವ ಸ್ಥಳಕ್ಕೆ ಭೇಟಿ ನೀಡಿದಾಗ ಮುನಿರತ್ನ ಸ್ವತಃ ತನ್ನ 2ನೇ ಫ್ಲೋರ್‌ಗೆ ಕರೆದುಕೊಂಡು ಹೋಗುತ್ತಾರೆ. ನಿಮ್ಮನ್ನು ನೋಡಿದರೆ ನನ್ನ ಮೈ ಜುಂ ಎನಿಸುತ್ತದೆ ಎಂದು ಕಾಮುಕನಾಗಿ ವರ್ತಿಸುತ್ತಾರೆ. ನಿಮ್ಮನ್ನು ಒಂದು ಬಾರಿ ತಬ್ಬಿಕೊಳ್ಳಲು ಎಂದು ಕೇಳುತ್ತಾರೆ. ಅದಕ್ಕೆ ನಾನು ವಿರೋಧ ಮಾಡಿದಾಗ, ರಾಜಕೀಯಕ್ಕೆ ಬರಬೇಕಾದರೆ ಇವೆಲ್ಲ ಕಾಮನ್ ಎಂದು ನಿಧಾನಕ್ಕೆ ಹೇಳುತ್ತಾ ತನ್ನ ಗನ್ ಮ್ಯಾನ್ ವಿಜಯಕುಮಾರನನ್ನು ಹೊರಗೆ ಹೋಗಲು ಸನ್ನೆಯ ಮುಖಾಂತರ ತಿಳಿಸುತ್ತಾನೆ. ಮತ್ತು ಅವನಿಗೆ ಯಾರನ್ನು ಮೇಲಕ್ಕೆ ಬಿಡಬೇಡ ಎಂದು ಹೇಳುತ್ತಾನೆ. ನಂತರ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ನೀನಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ತಿಳಿಸುತ್ತಾನೆ. ಇವನ ವರ್ತನೆಯಿಂದ ಗಾಬರಿಗೊಂಡ ನಾನು ಕಿರುಚುತ್ತೇನೆಂದು ಹೇಳುತ್ತೇನೆ, ಅದಕ್ಕೆ ಮುನಿರತ್ನ ನಾನು ಶಾಸಕ ನನಗೆ ಅಪರ ಜನ ಸಮೂಹ ಬೆಂಬಲವಿದೆ. ನಿನ್ನ ವಿರುದ್ಧವೆ ಕಂಪ್ಲೇಂಟ್ ಮಾಡಿಸುತ್ತೇನೆ, ಸುಮ್ಮನಿದ್ದರೆ ಸರಿ ಎಂದು ನನ್ನ ಮೇಲೆ ಅತ್ಯಾಚಾರ ಮಾಡುತ್ತಾನೆ.

    ನಂತರ ಅಳುತ್ತಿದ್ದಾಗ ಇಲ್ಲಿ ನಡೆದ ಬಗ್ಗೆ ಯಾರಿಗಾದರೂ ತಿಳಿಸಿದರೆ ಈ ಗೋಡೌನ್‌ನಲ್ಲಿ ಹಲವಾರು ಕ್ಯಾಮೆರಾಗಳನ್ನು ಫೀಟ್ ಮಾಡಿರುತ್ತೇನೆ. ಇದನ್ನೆಲ, ಕೆಲವೊಂದು ವಿಡಿಯೊ ಎಡಿಟ್‌ ಮಾಡಿ ನಿನ್ನದು ಮಾತ್ರ ನಗ್ನ ಚಿತ್ರವನ್ನು ಬಿಡುಗಡೆ ಮಾಡುತ್ತೇನೆಂದು ಬೆದರಿಸುತ್ತಾನೆ. ಇದನ್ನೇ ಬಳಸಿಕೊಂಡು ನನ್ನನ್ನು ಹಲವಾರು ಬಾರಿ ಅತ್ಯಾಚಾರ ಮಾಡುತ್ತಾನೆ. ಅದರ ವಿಡಿಯೋ ಚಿತ್ರವನ್ನು ನನಗೆ ಟಿವಿಯಲ್ಲಿ ಹಾಕಿ ತೋರಿಸುತ್ತಾನೆ. ಇದನ್ನು ನೋಡಿ ನನಗೆ ಗಾಬರಿಯಾಯಿತು. ದಯಮಾಡಿ ಇದನ್ನು ಡಿಲೀಟ್ ಮಾಡಿ ಎಂದು ಕಾಲು ಹಿಡಿದು ಪರಿಪರಿಯಾಗಿ ಕೇಳಿಕೊಳ್ಳುತ್ತೇನೆ. ನಂತರ ಮುನಿರತ್ನ ರವರು ಇದನ್ನೇ ಬಂಡವಾಳ ಮಾಡಿಕೊಂಡು ನನಗೆ ಪ್ರಾಣ ಬೆದರಿಕೆ ಒಡ್ಡಿ ಬೆದರಿಸಿದ್ದಾರೆ.

    ನಾನು ಹೇಳಿದ ಎಲ್ಲಾ ಕೆಲಸಗಳನ್ನು ಮಾಡಲೇಬೇಕೆಂದು ಬಲವಂತ ಮಾಡುತ್ತಾನೆ. ನಂತರ ನಿಮ್ಮ ಏರಿಯಾ ಕಾರ್ಪೋರೇಟರ್‌ ಪತಿ ನಿನ್ನ ಬಳಿ ಯಾವ ರೀತಿ ಇದ್ದಾನೆ ಎಂದು ಕೇಳುತ್ತಾನೆ. ಅದಕ್ಕೆ ನಾನು ಅವನು ಸಹ ನಿಮ್ಮಂತೆಯೇ ನನ್ನನ್ನು ಬಳಸಿಕೊಳ್ಳಲು ಬಲವಂತ ಮಾಡುತ್ತಾನೆ. ಅದಕ್ಕೆ ನಾನು ಒಪ್ಪದೆ ಅಂತರ ಕಾಯ್ದು ಕೊಳ್ಳುತ್ತೇನೆ ಎಂದಾಗ ಬೇಡ ಅವನು ಹೇಳಿದಂತೆ ಕೇಳು, ನೀನು ಕೇಳಿ ವಿಡಿಯೋ ಮಾಡಿಕೊಂಡು ನನಗೆ ಕೊಡಬೇಕೆಂದು ಕೇಳುತ್ತಾನೆ. ಇವರ ಬೆದರಿಕೆಗೆ ಒಡ್ಡಿ ಬೇರೆ ಯಾವ ದಾರಿಯಿಲ್ಲದೆ ನಾನು ಮಾಡಿಸಿಕೊಳ್ಳಲು ಒಪ್ಪುತ್ತೇನೆ. ಅದಕ್ಕೆ ಮುನಿರತ್ನ ರವರು ಈ ಕೆಲಸವನ್ನು ನಿನ್ನ ಕೈಯಲಿ ಆಗದಿದ್ದರೆ, ನನಗೆ ಪರಿಚಯವಿರುವ ರಾಧ ಎಂಬ ಮಹಿಳೆಯನ್ನು ಕಳುಹಿಸಿಕೊಡುತ್ತೇನೆ. ಈ ಬಗ್ಗೆ ಅವಳಿಗೆ ಎಲ್ಲವೂ ತಿಳಿದಿರುತ್ತದೆ. ಹಾಗೂ ಕ್ಯಾಮೆರಾ ಬಗ್ಗೆಯೂ ಎಲ್ಲ ಗೊತ್ತು ಅವರೊಂದಿಗೆ ನೀನು ಸಹಕರಿಸು ಸಾಕು ಎಂದು ಹೇಳುತ್ತಾನೆ.

    ಅವನು ಹೇಳಿದ ನಂತರ ರಾಧ ಮತ್ತು ನಾನು ರಾಮಯ್ಯ ಸಮಾಧಿ ಬಳಿ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಮುನಿರತ್ನ ಸಂಬಂಧಿ ಸುಧಾಕರ್ ಕ್ಯಾಮೆರಾ ಫಿಟ್ ಮಾಡಲು ನಮ್ಮಿಬ್ಬರ ಜತೆ ಕಳುಹಿಸಿಕೊಡುತ್ತಾನೆ. ನಂತರ ಕಾರ್ಪೋರೇಟರ್‌ ಪತಿಗೆ ಮುನಿರತ್ನ ಕಳುಹಿಸಿಕೊಟ್ಟ ರಾಧ ಎಂಬ ಮಹಿಳೆಯನ್ನು ಪರಿಚಯಿಸಿ ಅವರಿಬ್ಬರು ನಡೆಸಿದ ಅಶ್ಲೀಲ ಚಿತ್ರವನ್ನು ಸುಧಾಕರ್ ಫಿಕ್ಸ್ ಮಾಡಿಸಿದ ಕ್ಯಾಮೆರಾವನ್ನು ತೆಗೆದುಕೊಂಡು ಮತ್ತು ನನ್ನ ಮೊಬೈಲ್ ಕೂಡ ತೆಗೆದುಕೊಂಡು, ಲ್ಯಾಪ್ಟಾಪ್ ಗಳಲ್ಲಿ, ಸ್ಟೋರೇಜ್ ಮಾಡಿಕೊಂಡು ಮತ್ತು ಆ ವಿಡಿಯೋ ಡೈರೆಕ್ಟರ್ ಆಗಿ ನೋಡಲು ಮುನಿರತ್ನ ರವರು ACT wifi ಕೂಡ ಹಾಕಿಸಿಕೊಂಡಿರುತ್ತಾರೆ.

    ಸುಧಾಕರ್ ಕಡೆಯಿಂದ ಡೈರೆಕ್ಟ್ ಲೈವ್ ನೋಡಲು ಮುಂದೊಂದು ದಿನ ಇದು ಯಾವ ರೀತಿ ತಿರುವು ಪಡೆಯುತ್ತದೆ ಎಂದು ಭಯಬಿದ್ದು ರೂಮ್ ನಲ್ಲಿ ಫೀಟ್ ಮಾಡಿದ್ದ ಕ್ಯಾಮಾರಗಳು ಮತ್ತು ಫೀಟ್ ಮಾಡಿದ್ದ ವ್ಯಕ್ತಿಯ ಚಿತ್ರವನ್ನು ನನ್ನ ಮೊಬೈಲ್ ನಲ್ಲಿ, ಪೋಟೋ ತಗೊಂಡು ಅಲ್ಲಿಂದ ಹೊರಟೆ, ತದನಂತರ 3-4 ದಿನ ಬಿಟ್ಟು ನನಗೆ ಮುನಿರತ್ನ ನನಗೆ ಕಾಲ್ ಮಾಡಿ ಬಹಳ ಖುಷಿಯಾಯಿತು ಲೀಡರ್ ನಿನಗೆ ಏನು ಬೇಕೆಂದು ಕೇಳಿದಾಗ ಸಾಕಪ್ಪ ನಿನ್ನ ಸಹವಾಸ ದಯವಿಟ್ಟು ನನ್ನ ವಿಡಿಯೋವನ್ನು ಡಿಲೀಟ್ ಮಾಡು ಎಂದು ಬೇಡಿದೆ. ಆಯ್ತು ನನ್ನ ಕಛೇರಿಗೆ ಬಾ ಎಂದು ಹೇಳುತ್ತಾನೆ. ನಾನು ನಿರಾಕರಿಸಿದಾಗ ನನ್ನ ಮನೆಯ ಬಳಿ ಇರುವ ಫ್ಲೈ ಓವರ್ ಮೇಲೆ ಬಂದು ಮೇಲಿಂದ ಮೇಲೆ ಕಾಲ್ ಮಾಡುತ್ತಾನೆ. ನೀನು ಬರದೆ ಇದ್ದರೆ, ನಾನು ನಿನ್ನ ಮನೆಗೆ ಬರುತ್ತೇನೆ, ನಿನ್ನ ವಿಡಿಯೋವನ್ನು ನಿನ್ನ ಗಂಡ ಮಕ್ಕಳಿಗೆ ತೋರಿಸುತ್ತೇನೆ ಎಂದು ಬೆದರಿಸಿದಾಗ ಅನಿವಾರ್ಯವಾಗಿ ಹೆದರಿ ನಾನು ಹೋಗಿ ಅವನನ್ನು ಭೇಟಿ ಮಾಡುತ್ತೇನೆ.

    ಆಗ ಕಾರ್ಪೋರೇಟರ್‌ ಪತಿಗೆ ನಾನು ಕಳುಹಿದ್ದು ಏಡ್ಸ್ (ಹೆಚ್.ಐ.ವಿ) ಪೇಶೆಂಟ್ ಗೊತ್ತಾ ಎಂದು ಹೇಳಿದಾಗ ನನಗೆ ಶಾಕ್ ಆಗುತ್ತೆ, ಮತ್ತು ನೀನು ಇನ್ನೊಂದು ಕೆಲಸ ಮಾಡಬೇಕು, ಕಾರ್ಪೋರೇಟರ್‌ ಮಗ ಕರಣ್‌ (ಹೆಸರು ಬದಲಾಯಿಸಲಾಗಿದೆ) ಅವನಿಗೂ ಸಹ ಹೆಚ್.ಐ.ವಿ ಪೇಶೆಂಟ್‌ ಅನ್ನು ಕಳುಹಿಸಬೇಕು, ಇಲ್ಲ ಯಾರನ್ನಾದರೂ ಕಳುಹಿಸುತ್ತೇನೆ, ಇಂಜೆಕ್ಟ್ ಮಾಡುವುದಕ್ಕೆ ಹೆಲ್ಪ್‌ ಮಾಡು ಎಂದು ಹೇಳುತ್ತಾನೆ. ಆಗ ನಾನು ಯಾವುದೇ ಕಾರಣಕ್ಕು ಇದು ಸಾದ್ಯವಿಲ್ಲ. ಆ ಮಗು ನನ್ನ ಮಗನ ಜತೆಯವನು, ಯಾವುದೇ ಕಾರಣಕ್ಕು ಸಾಧ್ಯವಿಲ್ಲ, ಎಂದು ಹೇಳಿ ಹೊರಟು ಹೋಗಿ ಫೋನ್ ಸ್ವಿಚ್ ಆಫ್ ಮಾಡಿಕೊಂಡೆ.

    ನಂತರ ಇನ್ನೂ 3-4 ಹುಡುಗಿಯರನ್ನು ಬಿಟ್ಟು ಕಾರ್ಪೋರೇಟರ್‌ ಪತಿಯ ವಿಡಿಯೋ ಮಾಡಿಸಿಕೊಂಡು ಈ ಎಲ್ಲ ವಿಡಿಯೋಗಳನ್ನು ತನ್ನ ಸಂಜಯ್ ನಗರ ಆಫೀಸ್‌ನಲ್ಲಿ ಟಿ.ವಿ ಗೆ ಕನೆಕ್ಟ್ ಮಾಡಿ ನನ್ನನ್ನು ಕೂರಿಸಿಕೊಂಡು ತೋರಿಸಿ ವಿಕೃತಿ ಮೆರೆಯುತ್ತಿದ್ದ, ಮತ್ತು ಗಂಗಣ್ಣ ಎಂಬ ವ್ಯಕ್ತಿಯ ವಿಡಿಯೋ ಮಾಡಬೇಕು ಎಂದು ಬಲವಂತದಿಂದ ನನ್ನ ಬಳಿ ಮಾಡಿಸಿ ಎಲೆಕ್ಷನ್ ಟೈಮ್ ನಲ್ಲಿ ಅದನ್ನು ತೋರಿಸಿ ಬೆದರಿಸಿದ. ಹಾಗೂ ಪೊಲೀಸರ ವಿಡಿಯೋಗಳನ್ನು ಕೂಡ ಅವರ ಬಳಿ ಇರಿಸಿಕೊಂಡು ಅವರಿಗೆಲ್ಲ, ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ. ನನಗೂ ಸಹ ತೋರಿಸುತ್ತಾನೆ. ಮತ್ತು ಮಾಗಡಿ ಎಂ.ಎಲ್.ಎ ನನ್ನ ಜೊತೆ ಸಲುಗೆಯಿಂದ ಮಾತನಾಡುವ ಹಾಗೇ ಮಾಡಿ ಅದನ್ನು ಕೂಡ ಇಟ್ಟುಕೊಂಡು ಬೆದರಿಸಿದ್ದ. ನನ್ನ ಮಗ ಕಾಲೇಜಿಗೆ ಹೋಗುವಾಗ ನನ್ನ ಮಗನನ್ನು ಕಿಡ್ಡಾಫ್ ಮಾಡುತ್ತೇನೆಂದು ಅವರ ಗನ್ ಮಾನ್ ಶ್ರೀನಿವಾಸ ರವರಿಂದ ಹೇಳಿಸಿದ.

    ಇದೆಲ್ಲದರ ನಂತರ ಒಂದು ವಾರ ನನಗೆ ಕಾಲ್ ಮಾಡಿರುವುದಿಲ್ಲ. ಒಂದು ದಿನ ರಾತ್ರಿ ನನಗೆ ಕಾಲ್ ಮಾಡಿ ಅಜೇಂಟ್ ಆಗಿ ನನಗೆ ಮನೆಯ ಹತ್ತಿರ ಬರಲು ಹೇಳುತ್ತಾರೆ. ನಾನು ನನ್ನ ಯಜಮಾನರನ್ನು ಕರೆದುಕೊಂಡು ರಾತ್ರಿ 9.30 ಕ್ಕೆ ಅವರ ಮನೆಯ ಹತ್ತಿರ ಹೋಗುತ್ತೇನೆ. ಆಗ ಅವರು ಊಟ ಮಾಡುತ್ತಿರುತ್ತಾರೆ, ನಂತರ ನನ್ನನ್ನು ಲಾನ್ ನಲ್ಲಿ ಕರೆದುಕೊಂಡು ಹೋಗಿ ಇದೊಂದು ನನಗೆ ಕೆಲಸ ಮಾಡಿಕೊಡು ಇನ್ನು ಲೈಫ್‌ನಲ್ಲಿ, ನಿನ್ನ ಹತ್ತಿರ ಏನೂ ಕೇಳುವುದಿಲ್ಲ ಎಂದು ಪ್ರಾಮೀಸ್ ಮಾಡಿದ ಆಗ ನಾನು ಏನೂ ಎಂತ ಕೇಳಿದಾಗ ಒಂದು ಹೆಂಗಸು ನನ್ನ ರಿಲೇಟೀವ್ ಮಗು 8 ವರ್ಷ, ಅವಳಿಗೆ ರೇಪ್ ಮಾಡಿಸುತ್ತೇನೆಂದು ಹೇಳುತ್ತಿದ್ದಾಳೆ ಅದಕ್ಕೆ ಅವಳನ್ನು ಕೆಟ್ಟವಳು ಎಂದು ಬಿಂಬಿಸಬೇಕು ಅಷ್ಟೆ ಎಂದರು. ಆಗ ನೀವು ಒಬ್ಬರೇ ಆಗುವುದಿಲ್ಲ… ಇದಕ್ಕೆ ಒಂದು ಟೀಮ್ ಸೆಟ್ ಆಫ್ ಮಾಡಬೇಕು ಎಂದು ಕಿರಣ್ ಕುಮಾರ್ ಎಂಬ ಅವರ ರಿಲೇಟೀವ್ ಹುಡುಗನನ್ನು ಕರೆಸಿಕೊಂಡ. ಆತ ನನಗೂ ಫ್ಯಾಮಿಲಿ ಫ್ರೆಂಡ್ ಆಗಿರುತ್ತಾನೆ. ನೀವೆಲ್ಲ, ಒಂದು ಟೀಮ್ ಮಾಡಿಕೊಂಡು ಈ ಕೆಲಸ ಮಾಡಿಕೊಡಿ ಎಂದು ಕಣ್ಣೀರು ಹಾಕುತ್ತಾನೆ. ಸರಿ ಎಂದಾಗ ಸ್ವಾತಿ ಹೊಟೇಲ್ ರಾಜಾಜಿನಗರ ಅಲ್ಲಿ, ಒಂದು ಬರ್ತಾಡೆ ಪಾರ್ಟಿ ಆರೇಂಜ್ ಮಾಡುತ್ತಾರೆ.

    ನಾನು ನನ್ನ ಸ್ನೇಹಿತೆ ಯಶೋಧರವರನ್ನು ಕರೆದುಕೊಂಡು ಹೋಗುತ್ತೇನೆ. ಅಲ್ಲಿಗೆ ಕಿರಣ್ ಕೂಡ ಬಂದಿರುತ್ತಾನೆ. ಗನ್ ಮ್ಯಾನ್ ವಿಜಯ ಕುಮಾರ ನಮ್ಮನ್ನು ರಿಸೀವ್ ಮಾಡುತ್ತಾರೆ, ಲಕ್ಷ್ಮೀ ರವರ ಬರ್ತಾಡೆ ಪಾರ್ಟಿ ಆದಾಗಿರುತ್ತದೆ, ಲಗ್ಗೆರೆ ವಾರ್ಡ್‌(ಗೊರಗುಂಟೆಪಾಳ್ಯ). ಅವಳನ್ನು ವರ್ಕರ್, ಅಲ್ಲಿ ನಮಗೆ ವಿದ್ಯಾ ಹಿರೇಮಠ ಎಂಬುವವರನ್ನು ಎಲ್ಲಾರು ಪರಿಚಯ ಮಾಡಿಕೊಂಡು ಡಿನ್ನರ್ ಮುಗಿಸಿ ಪೋನ್ ನಂಬರ್ ಎಕೆಂಜ್ ಮಾಡಿಕೊಂಡು ಹೊರಡುತ್ತೇವೆ. ಇನ್ನು ಕಾಲ್ ಮೆಸೇಜ್ ಎಲ್ಲವೂ ಸ್ಮಾರ್ಟ್ ಆಗುತ್ತೆ, ಎಲ್ಲರೂ ಒಂದು ಗ್ರೂಪ್ ಮಾಡಿಕೊಂಡು ಮಾತನಾಡುತ್ತಿರುತ್ತೇವೆ. ಎಲ್ಲವನ್ನೂ ರೆಕಾರ್ಡ್ ಮಾಡಿಕೊಂಡು ಮುನಿರತ್ನ ರವರಿಗೆ ಕಳುಹಿಸಿಕೊಟ್ಟಿರುತ್ತೇವೆ. ನಂತರ ಒನ್‌ ಡೇ ಟ್ರಿಪ್ ಅಂತ ಗುಹಾಂತರ ರೆಸಾರ್ಟ್ ಗೆ ಎಲ್ಲರೂ ಹೋಗುತ್ತೇವೆ. ಅಲ್ಲಿ ಕಿರಣ್ ಫ್ರೆಂಡ್ಸ್‌ ಆದ ಲೋಹಿತ್ ಗೌಡ(ಲೋಕಿ) ಮತ್ತು ಮಂಜುನಾಥ್ ಇವರು ಜಾಯಿನ್‌ ಆಗುತ್ತಾರೆ. ಎಲ್ಲರೂ ಕಪಲ್ಸ್ ಅಂತೇಳಿ ಹೋಗುತ್ತೇವೆ.

    ರೂಮ್‌ನಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿಸಿ, ಎಲ್ಲರೂ ಸ್ವಿಮ್ಮಿಂಗ್ ಮಾಡಿ ಡ್ರೆಸ್ ಚೆಂಜ್ ಮಾಡುವ ದೃಶ್ಯಾಗಳನ್ನು ಚಿತ್ರೀಸಿಕೊಳ್ಳುತ್ತಾರೆ. ಲಕ್ಷ್ಮೀ, ಯಶೋಧದು ಕೂಡ, ಇದು ಸಾಕಾಗಲ್ಲ, ಅಂತ ಹೇಳಿ ನೆಕ್ಸ್ ಚಿಕ್ಕಬಳ್ಳಾಪುರದ ರೆಸಾರ್ಟ್ ಗೆ ಹೋಗುತ್ತೇವೆ. ನಾನು ಲೋಕಿ, ಕಿರಣ್, ಯಶೋಧ, ಮಂಜು, ಲಕ್ಷ್ಮಿ, ವಿದ್ಯಾ, ಹಿರೇಮಠ್‌ ಎಲ್ಲರೂ ಅಲ್ಲಿ ಅವಳಿಗೆ ಸ್ಲೀಪಿಂಗ್ ಟಾಬ್ಲೆಟ್ ಹಾಕಿರುವ ಓ.ಆರ್.ಎಸ್ ಅನ್ನು ಕುಡಿಸಿ ಲೋಕಿ, ಕಿರಣ್, ಮಂಜು ಅವಳೊಂದಿಗೆ ಕೆಟ್ಟ ವಿಡಿಯೋಸ್, ಪೋಟೋಸ್ ತೆಗೆದುಕೊಂಡು. ನಂತರ ಇದು ಸಾಕಾಗಲ್ಲ ಅಂತ ಹೇಳಿ 3 ದಿನ ಟ್ರಿಪ್ ಹೋಗಿ ಅಲ್ಲಿ, ಅವಳಿಗೆ ನ್ಯೂಡಲ್ಸ್ ,, ಡ್ರಿಂಕ್ಸ್ ಎಲ್ಲಾ ಕೊಟ್ಟು ಡ್ಯಾನ್ಸ್ ಮಾಡಿಸಿ ವಿಡಿಯೋ ಮಾಡಿಕೊಳ್ಳುತ್ತಾನೆ.

    ಆ ನಂತರ 3ನೇ ದಿನ ರಾತ್ರಿ ಮುನಿರತ್ನ ಗನ್ ಮ್ಯಾನ್ ವಿಜಿಯ ಕುಮಾರ ಬಂದು ಬ್ಯಾಗ್ ಅಲ್ಲಿ ಡ್ರಗ್ಸ್ ಎಲ್ಲವನ್ನು ಕಿರಣ್ ಕೈಯಲ್ಲಿ ತಂದುಕೊಟ್ಟು ಅದನ್ನು ವಿದ್ಯಾ ಹಿರೇಮ‌ಠ ರೂಮ್ ಅಲ್ಲಿ ಇಡುವಂತೆ ಹೇಳುತ್ತಾರೆ, ಮತ್ತು ನಮ್ಮನ್ನೆಲ್ಲ ಅವಳೊಂದಿಗೆ ಜಗಳ ಮಾಡಿ ಅವಳನ್ನು ಅಲ್ಲಿಯೇ ಬಿಟ್ಟು ಹೊರಡಲು ಮುನಿರತ್ನ ಹೇಳುತ್ತಾರೆ, ನಾವು ಹೊರಡಲು ನಮಗೆ ಹೊಯ್ಸಳದಲ್ಲಿ ಎಸ್ಮಾರ್ಟ್ ಮಾಡುತ್ತಾರೆ ಪೊಲೀಸ್‌ನವರು, ನಾವು ಹೊರಡುತ್ತೇವೆ ಬೆಂಗಳೂರಿಗೆ ನಂತರ ಲೋಕಿಯಿಂದ ಅನ್ನಪೂರ್ಣೇಶ್ವರಿ ಲೇಔಟ್ ಪೊಲೀಸ್ ಸ್ಟೇಷನ್ ನಲ್ಲಿ ವಿದ್ಯಾ ಮೇಲೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆಂದು ಕಂಪ್ಲೆಂಟ್ ಕೊಡಿಸಿ ಅವಳನ್ನು ಅರೆಸ್ಟ್ ಮಾಡಿಸಿ ರೇಡ್ ಮಾಡಿ ನಂತರ ಕಂಪ್ಲೇಂಟ್ ವಾಪಸ್ ತಗೋತಾರೆ, ಈ ವಿಷಯವಾಗಿ ರಾಮನಗರ ಕಮಿಷಿನರ್ ಆಫೀಸ್‌ನಲ್ಲಿ, ದೂರು ಸಹ ಸಲ್ಲಿಸಿರುತ್ತೇನೆ.

    ಇದನ್ನು ತಿಳಿದ ಮುನಿರತ್ನ ರವರು ನನಗೆ ನೀನು ಇದನ್ನು ಮುಂದುವರಿಸಿದರೆ, ನಿನಗೂ ಮತ್ತು ಕುಟುಂಬದವರ ಜೀವ ಹಾಗೂ ಮಾನ ಮಾರ್ಯದೆ ಕಳೆಯುವುದಾಗಿ ಹಾಗೂ ನನ್ನ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತೇನೆಂದು ಬೆದರಿಕೆ ಹಾಕಿದರು. ಅದರಿಂದ ನಾನು ನಿಮ್ಮ ನೊಟೀಸ್ ಗೆ ಹಾಜರು ಆಗಿರುವುದಿಲ್ಲ,. ಈಗ ಮುನಿರತ್ನ ಕಾನೂನಿನ ಬಂಧನದಲ್ಲಿರುವುದರಿಂದ ಮತ್ತೆ ಹೊರಗೆ ಬಂದು ನನಗೆ ಮತ್ತು ನನ್ನ ಕುಟುಂಬಕ್ಕೆ ತೊಂದರೆ ಮಾಡಬಹುದೆಂದು ತಿಳಿದು ನಿಮಗೆ ಈ ಮೂಲಕ ನನ್ನನ್ನು ಅನೇಕ ಬಾರಿ ಗೋಡನ್, ಕಾರ್ ಗಳಲ್ಲಿ, ಅತ್ಯಾಚಾರಗೈದು ಅವನ ದುಷ್ಟಾತ್ಮಗಳಿಗೆ ಜೀವ ಬೆದರಿಕೆ ಹಾಕಿ ನನ್ನನ್ನು ಬಳಸಿಕೊಂಡಿರುತ್ತಾನೆ. ತಾವು ನನಗೆ ಮುನಿರತ್ನರಿಂದ ಆದ ಅನ್ಯಾಯಕ್ಕೆ ಕಾನೂನಿನ ಮೂಲಕ ನ್ಯಾಯ ಮತ್ತು ರಕ್ಷಣೆ ಕೊಡಬೇಕೆಂದು ಮನವಿ ಮಾಡಿದ್ದಾರೆ.

    ಪೊಲೀಸರಿಂದ ಮಹಜರ್‌

    ಶಾಸಕ ಮುನಿರತ್ನ ಮೇಲೆ‌ ಅತ್ಯಾಚಾರ ಆರೋಪ ಹಿನ್ನೆಲೆಯಲ್ಲಿ ಜೆಪಿ ಪಾರ್ಕ್ ಬಳಿಯ ಗೋಡಾನ್‌ನಲ್ಲಿ ಸಂತ್ರಸ್ತೆಯನ್ನು ಕರೆತಂದು ಕಗ್ಗಲಿಪುರ ಪೊಲೀಸರಿಂದ ಸ್ಥಳ ಮಹಜರ್‌ಗೆ ಮುಂದಾದರು. ಗೋಡಾನ್ ಕೀ ಇಲ್ಲದೇ ಹೊರಗೆ ನಿಲ್ಲುವಂತಾಯಿತು. ಸ್ಥಳಕ್ಕೆ ಎಫ್.ಎಸ್.ಎಲ್ ತಂಡದ ಹಾಗೂ ಸೋಕೊ ಟೀಂ ಹಾಜರಿತ್ತು.

    ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

    Continue Reading

    ಬೆಳಗಾವಿ

    Siddhagiri Hospital : ರೋಗಿ ಕೊಳಲು ನುಡಿಸುವಾಗಲೇ ಮೆದುಳು ಶಸ್ತ್ರಚಿಕಿತ್ಸೆ; ಸಿದ್ದಗಿರಿ ಆಸ್ಪತ್ರೆ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ

    Siddhagiri Hospital : ರೋಗಿ ಕೈಗೆ ಕೊಳಲು ಕೊಟ್ಟ ವೈದ್ಯರು ಕೊಳಲು ಊದುತ್ತಿರುವಾಗಲೇ ಮೆದುಳು ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ. ಸಿದ್ದಗಿರಿ ಆಸ್ಪತ್ರೆ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

    VISTARANEWS.COM


    on

    By

    Doctors at Siddagiri Hospital perform brain surgery on patient while playing flute
    ಸಾಂದರ್ಭಿಕ ಚಿತ್ರ
    Koo

    ಬೆಳಗಾವಿ: ರೋಗಿಯ ಕೈಗೆ ಕೊಳಲು ಕೊಟ್ಟು ಊದಲು ಹೇಳಿ ವೈದ್ಯರು ಯಶಸ್ವಿ ಮೆದುಳು ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಬೆಳಗಾವಿಯ ಕೊಲ್ಲಾಪುರದ ಕನ್ಹೇರಿ ಮಠದ ಸಿದ್ದಗಿರಿ ಆಸ್ಪತ್ರೆ (Siddhagiri Hospital) ವೈದ್ಯರು ರೋಗಿಯು ಕೊಳಲು ಊದುವಾಗಲೇ ಮೆದುಳು ಆಪರೇಷನ್ ಮಾಡಿದ್ದಾರೆ.

    ವ್ಯಕ್ತಿಯ ಬ್ರೇನ್‌ನಲ್ಲಿ ಬೆಳೆದ ಟ್ಯೂಮರ್‌ ಅನ್ನು ಸುಮಾರು 5 ಗಂಟೆಗಳ ಕಾಲ ಆಪರೇಷನ್ ಮಾಡಿ ಗಡ್ಡೆ ಹೊರ ತೆಗೆದಿದ್ದಾರೆ. ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಡಾ.ಶಿವಶಂಕರ್ ಮರಜಕ್ಕೆ ಹಾಗೂ ಅರವಳಿಗೆ ತಜ್ಞ ಪ್ರಕಾಶ ಭರಮಗೌಡರಿಂದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದೆ.

    ವೈದ್ಯರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ವೈದ್ಯರ ತಂಡ ಈವರೆಗೂ ಒಟ್ಟು ಮಂದಿಗೆ 103 ಮೆದುಳು ಶಸ್ತ್ರ‌ಚಿಕಿತ್ಸೆ ಮಾಡಿದೆ. ಸಿದ್ದಗಿರಿ ಆಸ್ಪತ್ರೆ ಅವೇಕ್ ಕ್ರೇನಿಯೊಟಮಿ ಶಸ್ತ್ರಚಿಕಿತ್ಸೆಗೆ ಹೆಸರುವಾಸಿಯಾಗಿದೆ. ವೈದ್ಯರ ಸಾಧನೆಗೆ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಶ್ಲಾಘಿಸಿದ್ದಾರೆ.

    ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

    Continue Reading
    Advertisement
    MCC Seat Retention, Opportunity to Cancel KEA Seat Deadline to Cancel Seats by 11 AM on September 20
    ಬೆಂಗಳೂರು2 hours ago

    KEA : ಎಂಸಿಸಿ ಸೀಟು ಉಳಿಸಿಕೊಂಡು, ಕೆಇಎ ಸೀಟು ರದ್ದತಿಗೆ ಅವಕಾಶ; ಸೀಟು ರದ್ದು ಪಡಿಸಿಕೊಳ್ಳಲು ನಾಳೆವರೆಗೂ ಗಡುವು

    Innovative technologies have revolutionized patients with heart valve disorder
    ಬೆಂಗಳೂರು2 hours ago

    World Heart Day: ಹೃದಯ ಕವಾಟ ಅಸ್ವಸ್ಥತೆ ಹೊಂದಿರುವ ರೋಗಿಗಳ ಪಾಲಿಗೆ ನವೀನ ತಂತ್ರಜ್ಞಾನಗಳು ವರದಾನ

    Dr JG Manjunatha has been ranked among the world's top scientists for the fifth time in a row
    ಕೊಡಗು2 hours ago

    KM Cariappa College : ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸತತ 5ನೇ ಬಾರಿ ಸ್ಥಾನ ಪಡೆದ ಡಾ.ಜೆ.ಜಿ.ಮಂಜುನಾಥ

    Muslims light aarti to Lord Ganesha Basavakalyana witnessed the confluence of unity
    ಬೀದರ್‌3 hours ago

    Ganesh Chaturthi: ಗಣೇಶನಿಗೆ ಆರತಿ ಬೆಳಗಿ ಸೌರ್ಹಾದತೆ ಮೆರೆದ ಮುಸ್ಲಿಂರು; ಭಾವೈಕತ್ಯೆಯ ಸಮಾಗಮಕ್ಕೆ ಸಾಕ್ಷಿಯಾದ ಬಸವಕಲ್ಯಾಣ

    Breast cancer
    ಬೆಂಗಳೂರು3 hours ago

    Breast cancer : ಸ್ತನ ಕ್ಯಾನ್ಸರ್‌ ರೋಗಿಗೆ ರೊಬೋಟ್‌ ನೆರವಿನಿಂದ ತನ್ನದೆ ದೇಹದ ಮತ್ತೊಂದು ಭಾಗ ಬಳಸಿ ಸ್ತನ ಪುನರ್‌ ನಿರ್ಮಾಣ; ಫೋರ್ಟಿಸ್‌ ಆಸ್ಪತ್ರೆ ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆ

    Road Accident
    ಮಂಡ್ಯ3 hours ago

    Road Accident : ಮಂಡ್ಯದಲ್ಲಿ ಕಾರು ಹಾಗೂ ಗೂಡ್ಸ್ ಆಟೋ ನಡುವೆ ಡಿಕ್ಕಿ; 20ಕ್ಕೂ ಹೆಚ್ಚು ಮಂದಿಗೆ ಗಾಯ

    Congress expresses displeasure over BJP MLA Munirathnas rape case
    ಬೆಂಗಳೂರು4 hours ago

    MLA Muniratna: ಬಿಜೆಪಿ ಪಕ್ಷದ ಒಬ್ಬೊಬ್ಬ ನಾಯಕನೂ ಮುನಿರತ್ನನಂತಹ ಮುತ್ತು ರತ್ನಗಳೇ! ಕಾಂಗ್ರೆಸ್‌ ಟೀಕೆ

    RDPR Protest
    ಬೆಂಗಳೂರು5 hours ago

    RDPR Protest: ಅಕ್ಟೋಬರ್ 4ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಸೇವೆ ಸಂಪೂರ್ಣ ಬಂದ್!

    Honeytrap by MLA Munirathna
    ರಾಜಕೀಯ7 hours ago

    MLA Muniratna: ಎದುರಾಳಿಗಳ ಮಟ್ಟ ಹಾಕಲು ಶಾಸಕ ಮುನಿರತ್ನರಿಂದ ಏಡ್ಸ್‌ ಟ್ರ್ಯಾಪ್‌! ಎಫ್‌ಐಆರ್‌ನಲ್ಲಿದೆ ಬೆಚ್ಚಿಬೀಳಿಸುವ ಅಂಶ

    Doctors at Siddagiri Hospital perform brain surgery on patient while playing flute
    ಬೆಳಗಾವಿ8 hours ago

    Siddhagiri Hospital : ರೋಗಿ ಕೊಳಲು ನುಡಿಸುವಾಗಲೇ ಮೆದುಳು ಶಸ್ತ್ರಚಿಕಿತ್ಸೆ; ಸಿದ್ದಗಿರಿ ಆಸ್ಪತ್ರೆ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ

    Kannada Serials
    ಕಿರುತೆರೆ11 months ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Sharmitha Gowda in bikini
    ಕಿರುತೆರೆ12 months ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Bigg Boss- Saregamapa 20 average TRP
    ಕಿರುತೆರೆ11 months ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    Kannada Serials
    ಕಿರುತೆರೆ12 months ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    Kannada Serials
    ಕಿರುತೆರೆ12 months ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    galipata neetu
    ಕಿರುತೆರೆ10 months ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Bigg Boss' dominates TRP; Sita Rama fell to the sixth position
    ಕಿರುತೆರೆ11 months ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ9 months ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    Kannada Serials
    ಕಿರುತೆರೆ1 year ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    varun
    ಕಿರುತೆರೆ10 months ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    Sudeep's birthday location shift
    ಸ್ಯಾಂಡಲ್ ವುಡ್3 weeks ago

    Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

    Actor Darshan
    ಸ್ಯಾಂಡಲ್ ವುಡ್3 weeks ago

    Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

    ಮಳೆ4 weeks ago

    Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

    karnataka Weather Forecast
    ಮಳೆ1 month ago

    Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

    Bellary news
    ಬಳ್ಳಾರಿ1 month ago

    Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

    Maravoor bridge in danger Vehicular traffic suspended
    ದಕ್ಷಿಣ ಕನ್ನಡ1 month ago

    Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

    Wild Animals Attack
    ಚಿಕ್ಕಮಗಳೂರು1 month ago

    Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

    Karnataka Weather Forecast
    ಮಳೆ1 month ago

    Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

    assault case
    ಬೆಳಗಾವಿ2 months ago

    Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

    karnataka rain
    ಮಳೆ2 months ago

    Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

    ಟ್ರೆಂಡಿಂಗ್‌