ಭಾವಲೋಕದೊಳ್‌ ಅಂಕಣ : ಬ್ರೇಕಪ್ ಎಂಬ ಮೂರಕ್ಷರದ ಪದ ನೂರು ಜನುಮ ಸವೆಸಿದರೂ ಮುಗಿಯದ ನೋವಿನ ಹಾದಿ! Vistara News
Connect with us

ಅಂಕಣ

ಭಾವಲೋಕದೊಳ್‌ ಅಂಕಣ : ಬ್ರೇಕಪ್ ಎಂಬ ಮೂರಕ್ಷರದ ಪದ ನೂರು ಜನುಮ ಸವೆಸಿದರೂ ಮುಗಿಯದ ನೋವಿನ ಹಾದಿ!

ಭಾವಲೋಕದೊಳ್‌ ಅಂಕಣ : ಬ್ರೇಕಪ್‌ ಎನ್ನುವುದು ಸರಳ ಪದ. ಆದರೆ, ಅದು ಬದುಕಿನಲ್ಲಿ ಉಂಟು ಮಾಡುವ ಪರಿಣಾಮ ಕಲ್ಪನಾತೀತ. ಯಾಕೆ ಬ್ರೇಕಪ್‌ ಆಗ್ತಿದೆ, ಅದನ್ನು ತಡೆಯಬಹುದಾ?

VISTARANEWS.COM


on

Love break up
Koo
Suri mallesh
Surimallesh

ಪ್ರತಿಯೊಂದರ ಅಂತ್ಯವೂ ಮತ್ತೊಂದರ ಆರಂಭ!
ಬದುಕೆಂಬ ತೂಗುಯ್ಯಾಲೆಯಲ್ಲಿ ಯಾವುದೂ ಕೂಡ ಶಾಶ್ವತವಲ್ಲ. ಒಮ್ಮೆ ತಂಗಾಳಿಯಂತೆ ಬೀಸಿ ಹಿತ ನೀಡಿದರೆ ಮತ್ತೊಮ್ಮೆ ಸುಡುಗಾಳಿಯಂತೆ ಸುಂಟರಗಾಳಿ ಹೊರಡಿಸುತ್ತದೆ. ಅಮ್ಮನ ಒಡಲಿನಿಂದ ಹೊರಬಿದ್ದು ಕರುಳಬಳ್ಳಿಯ ಕಡಿತದಿಂದಲೇ ಆ ಭಾವಸ್ಥಿತಿಗೆ ವಿದಾಯವೆಂಬ ಹೊಸದೊಂದು ಕೊಂಡಿ ಬೆಸೆದುಕೊಂಡಿರುತ್ತದೆ. ಬೆಳಕಿಗೆ ಕಾಲಿಟ್ಟೊಡನೆ ಕತ್ತಲ ಗರ್ಭಕ್ಕೊಂದು ವಿದಾಯ, ಅಂಬೆಗಾಲಿಟ್ಟು ಹೆಜ್ಜೆ ಹಾಕಿದರೆ ತೂಗು ತೊಟ್ಟಿಲಿಗೊಂದು ವಿದಾಯ, ಕೈನಲ್ಲಿ ಪುಸ್ತಕ ಹಿಡಿದರೆ ಅಕ್ಷರ ಕಲಿಸಿದ ಅಂಕಲಿಪಿಗೊಂದು ವಿದಾಯ, ಪ್ರತಿ ವರ್ಷ ಪಾಸಾದಾಗೊಮ್ಮೆ ಹಳೆ ತರಗತಿಯ ಬೆಂಚಿಗೊಂದು ವಿದಾಯ, ಶಾಲೆ ಬದಲಾಯಿಸಿದಂತೆ ಗೆಳೆಯರ ಪಡೆಗೊಂದು ವಿದಾಯ, ಅನ್ನದ ದಾರಿ ಹಿಡಿದು ಬದುಕ ಅರಸಿ ಹೊರಟಾಗ ನೂರಾರು ವೃತ್ತಿಗಳಿಗೆ ವಿದಾಯ, ಸಲಹಿದ ಮಕ್ಕಳೇ ಸೆಟೆದು ಗದರಿದಾಗ ಅಕ್ಕರೆಯ ಮಕ್ಕಳಿಗೊಂದು ವಿದಾಯ, ಸಾಕು ನನ್ನೆಡೆಗೆ ಬಾ ಎಂಬ ಭಗವಂತನ ಕರೆಗೆ ಬದುಕಿಗೊಂದು ವಿದಾಯ.

ವಿದಾಯದಲ್ಲೇ ಸಾಗಿಹೋದ ಬದುಕಿನಲ್ಲಿ ಕೆಲವೊಂದು ವಿದಾಯಗಳು ನೋವಿನ ಸಂಗತಿಯಾದರೆ ಇನ್ನೂ ಕೆಲವು ಬಿಡುಗಡೆಯ ಸಂಭ್ರಮ, ಸ್ವಾತಂತ್ರ್ಯದ ಸಾಕ್ಷಾತ್ಕಾರ. ಆದರೆ ನೂರಾರು ವಿದಾಯಗಳ ನಡುವೆ ಪ್ರೇಮದ ವಿದಾಯ ಮಾತ್ರ ಎದೆಯೊಳಗೆ ಕಟ್ಟಿಕೊಳ್ಳುವ ಶಾಶ್ವತ ಗೂಡು. ಆ ವಿದಾಯಕ್ಕೆ ಮಾತ್ರ ಗುಡ್‌ಬೈ ಎಂಬ ಎರಡಕ್ಷರವನ್ನು ಎದುರು ನಿಂತು ಹೇಳಲೇ ಆಗದು. ಆ ವಿದಾಯದಲ್ಲೊಂದು ಉತ್ತರ ಸಿಗದ ಪ್ರಶ್ನೆಗಳಿವೆ!?
ನೋವಿದೆ, ನರಳಾಟವಿದೆ, ಕೌತುಕವಿದೆ, ಯಾತನೆಯಿದೆ,
ಕಣ್ಣೀರಿದೆ, ಕೆಟ್ಟ ದ್ವೇಷವಿದೆ, ತೋರಿಕೆಯ ಸಂತಸವಿದೆ,
ಕಿರುಚಾಟದ ಕೂಗಿದೆ, ಕಗ್ಗತ್ತಲೆಯ ಮೌನವಿದೆ, ಸಾಕು ನಡೆ ಎಂಬ ಅಸಡ್ಡೆಯಿದೆ,
ಇನ್ನು ಬಾಳು ಸಾಗದು ಎಂಬ ಅಸಹಾಯಕತೆಯಿದೆ, ಕೈ ಮುಗಿದು ಹೊರ ನಡೆವ ಮುಕ್ತಿಯಿದೆ,
ಪ್ರೇಮದೆಡೆಗೆ ಅನುಮಾನವಿದೆ, ಉಳಿಸಿಕೊಳ್ಳಲಾಗಲಿಲ್ಲವಲ್ಲ ಎಂಬ ಅವಮಾನವಿದೆ,
ಅಹಂಕಾರದ ದಡ್ಡತನವಿದೆ….

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು
ಅರಿತೆವೇನು ನಾವು ನಮ್ಮ ಅಂತರಾಳವ …!?
ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ ?
-ಎಚ್ ಎಸ್ ವೆಂಕಟೇಶ್‌ಮೂರ್ತಿ

ಎಲ್ಲವೂ ಹೇಗೆ ನಡೆದುಬಿಡುತಲ್ವಾ !? ಅವನೆಡೆಗೊ/ಅವಳೆಡೆಗೊ ಪ್ರೇಮ ಚಿಗುರಿದ್ದಾದರೂ ಯಾವಾಗ!?
ಆ ಪ್ರೇಮ ಅಂಕುರವಾಗಲೂ ಕಾರಣವೇ ಬೇಕಿಲ್ಲ.
ರಸ್ತೆಯಲ್ಲಿ ನಿಸ್ಸಂಕೋಚವಾಗಿ ಹೆಜ್ಜೆ ಹಾಕುತ್ತಿದ್ದ ಅವಳೆದುರಿಗೆ ಭರ್ರನೆ ಬೈಕ್‌ನಲ್ಲಿ ಎದುರಾದ ಅವನ ನೋಟಕ್ಕೆ ಸೋತಳಾ?
ರಸ್ತೆಯ ಕಾರ್ನರಿನಲ್ಲಿ ನಿಂತು ಟೀ ಕುಡಿದು ಸಿಗರೇಟು ಎಳೆಯುವ ಅವನ ಭಂಗಿಗೆ ಮೆಚ್ಚಿದಳಾ?
ಸೋತೆ ಎಂದು ಕುಗ್ಗಿದಾಗ ಹೆಗಲಾಗಿ ಜೊತೆ ನಿಂತವನ ಅಪ್ಪನ ಗುಣಕ್ಕೆ ಮನಸು ಕೊಟ್ಟಳಾ?
ಗಾಂಭೀರ್ಯದ ಮಾತಿನ ಧಾಟಿಗೆ ಮರಳಾದಳಾ?
ಅವನಾದರೂ ಅವಳೆಡೆಗೆ ಮೋಹಗೊಂಡಿದ್ದು ಯಾವ ಕ್ಷಣಕ್ಕೆ ?
ಗೌರಿಹಬ್ಬದ ಮುಸ್ಸಂಜೆಯಲ್ಲಿ ಅಮ್ಮನ ಹಿಂದೆ ಸೀರೆಯುಟ್ಟು ಬಂದವಳ ನೋಟಕ್ಕೆ ಕಳೆದುಹೋದನಾ?
ಕ್ಲಾಸಿನಲ್ಲಿ ಎಲ್ಲರ ನಡುವೆ ಸೆಳೆಯುತ್ತಿದ್ದ ಅವಳ ಕಾಂತಿಯ ಸೌಂದರ್ಯಕ್ಕೆ ಶರಣಾದನಾ?
ನನ್ನವಳು ಎಂದು ಎದೆತಳದಲ್ಲಿ ಭಾವ ಮೂಡಿದಾಗ ಮನಸ್ಸು ಕೊಟ್ಟನಾ?
ಯಾವುದೇ ಪ್ರೇಮಿಗಳನ್ನು ಕೇಳಿದಾಗಿಯೂ ಈ ರೀತಿಯ ನೂರಾರು ಉತ್ತರ ಸಿಕ್ಕಿದರೂ ಕೂಡ ಅದು ದಿಟವಲ್ಲ.
ಆ ಪ್ರೇಮಕ್ಕೆ ಅಸಲಿಗೆ ಕಾರಣವೇ ಇಲ್ಲ, ಇದ್ದರೂ ಅದು ನಾವು ಕೊಡುವೆ ಸಬೂಬಷ್ಟೆ.
ಕಾರಣದ ಆಧಾರವನ್ನು ಮೀರಿದ್ದು ಪ್ರೇಮ.

ಪ್ರೀತಿಯ ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತಲ್ಲ?

ದಾರಿ ತಪ್ಪಿದ್ದು ಯಾವಾಗ!? ಪ್ರೀತಿ ಶುರುವಾದಾಗ ಇದ್ದ ಹುಮ್ಮಸ್ಸು, ಆಸ್ಥೆ ಅರಿವಿಗೆ ಬಾರದಂತೆ ಕಳೆದುಹೋಗಲು ಶುರು ಮಾಡಿದಾಗಲೇ ಎಲ್ಲವೂ ಬೇರೆ ದಿಕ್ಕಿನೆಡೆ ನಡೆಯಲು ಶುರುವಿಟ್ಟುಬಿಟ್ಟಿರುತ್ತದೆ.
ಏನೋ ಕಾರಣ ಹೇಳಿ ಕದ್ದುಮುಚ್ಚಿ ತಪ್ಪಿಸಿಕೊಳ್ಳುವುದು, ಸುಳ್ಳು ಹೇಳಿ ಸಿಕ್ಕಿಬೀಳುವುದು,
‘ನೀನೆ ಎಲ್ಲ’ ಅನ್ನುವ ಭಾವದಿಂದ ‘ಎಲ್ಲರೂ ನನಗೆ ಬೇಕಾದವರೆ’ ಎಂಬ ಮಾತನಾಡಿ ಎದೆಯಾಳದಲ್ಲಿ ನೋವು ಮೂಡಿದಾಗ, ನಿನ್ನೊಟ್ಟಿಗೆ ಮಾತಾಡಿದರೆ ಸಾಕು ಎಂಬ ಭಾವದಿಂದ ಬರೀ ನಿನ್ನ ಜೊತೆ ಹರಟೋಕೆ ಆಗಲ್ಲ Give me some space ಎಂಬ ಮಾತು ಆಡಿದಾಗ, ಸಣ್ಣ ಹುಸಿ ಕಣ್ಣೀರು ಕೂಡಾ ತಡೆಯಲಾಗದ ಸ್ಥಿತಿಯಿಂದ ಬಿಕ್ಕಳಿಸಿ ಬಿದ್ದು ಒದ್ದಾಡಿದರೂ ಕಾಣದಾದ ಅಸಡ್ಡೆಯಲ್ಲಿ, ನಗುವೊಂದೆ ನಿನ್ನ ಅಂದ ಎನ್ನುತ್ತಿದ್ದವರು ರಸ್ತೆಯ ಪಕ್ಕ ಇನ್ಯಾರನ್ನೋ ಕಣ್ಣಾಡಿಸುವ ಕಲ್ಮಶದಲ್ಲಿ, ಸ್ಪರ್ಶವೊಂದೇ ಸಾನಿಧ್ಯ ಎಂಬ ಭಾವದಿಂದ ದೇಹದೆಡೆಗೆ ಬೆಳೆದು ನಿಂತ ಕಾಮದಲ್ಲಿ, ಕಲ್ಪನೆಯ ಕನಸು ಕಟ್ಟಿದ್ದರಿಂದ ಕನಸುಗಳನ್ನು ಕೈಚೆಲ್ಲಿದ ಹತಾಶೆಯಲ್ಲಿ,
ಪ್ರೇಮ ಗೋಪುರವೆಂಬ ತುತ್ತತುದಿ ತೋರಿಸಿ ಈಗ ಒಂದೆಜ್ಜೆ ಕೂಡ ನಡೆಯಲಾಗದ ತಾತ್ಸರದಲ್ಲಿ,
ಅಕ್ಕಪಕ್ಕದವರ ಚಾಡಿ ಮಾತಿನಲ್ಲಿ, ಮನೆಯವರ ಒತ್ತಡದಲ್ಲಿ, ನಂಬಿಕೆಯಿಲ್ಲದ ಸಂಬಂಧದಲ್ಲಿ, ನನ್ನ ಬಿಟ್ಟು ಎಲ್ಲಿ ಹೋದಾನು ಎಂಬ ಅಲಕ್ಷ್ಯದಲ್ಲಿ, ಪ್ರೀತಿಯೇ ಇಲ್ಲದ ಭಾವದಲ್ಲಿ ಪ್ರೀತಿ ಸತ್ತು ಹೋಗುತ್ತದೆ.
ವರುಷಗಳು ಕಳೆದಂತೆ ಪ್ರೇಮಿಗಳಿಬ್ಬರು ಕೇವಲ ಅನಾಮಿಕರಾಗುತ್ತಾರೆ.

ಪ್ರೀತಿಯಲ್ಲಿ ಯಾವುದು ಸರಿಯಾಗಿಲ್ಲ, ಇದನ್ನು ಗಟ್ಟಿಯಾಗಿ ಬಿಗಿ ಹಿಡಿದು ಸರಿಪಡಿಸಿಕೊಳ್ಳಬೇಕೆಂಬ ಬಯಕೆಯನ್ನೆ ಪ್ರೇಮಿಗಳು ಸಾಯಿಸಿರುತ್ತಾರೆ. ಇದರಿಂದ ಮುಕ್ತಿ ಪಡೆದು ಹೊರನಡೆದರೆ ಸಾಕಪ್ಪಾ ! ಎಂಬ ಧಾವಂತ ಅದಾಗಲೇ ಅವರನ್ನು ಆವರಿಸಿರುತ್ತದೆ. ಎಷ್ಟಾದರೂ ಇವನು‌ ನನ್ನ ಮುದ್ದಿನ‌ ಹುಡುಗನಲ್ಲವೇ? ಕ್ಷಮಿಸಿಬಿಡೋಣ, ಕೋಪಿಷ್ಠನಾದರೂ ಅಪ್ರಮಾಣಿಕನಲ್ಲ ಅನುಸರಿಸಿಕೊಂಡು ಬಿಡೋಣ,
ನನಗಾಗಿ ತನ್ನನ್ನೇ ಬದಲಾಯಿಸಿಕೊಂಡಿದ್ದಾನೆ! ಸ್ವಲ್ಪ ಕಾದರೆ ಬದುಕನ್ನು ಕಟ್ಟಿನಿಲ್ಲಿಸುತ್ತಾನೆ, ಮನೆಯವರನ್ನು ಒಂದಿಷ್ಟು ದಿನ ಸಂತೈಸೋಣ, ಇನ್ನೂ ಎಳೆ ಮನಸ್ಸು ಜವಾಬ್ದಾರಿ ಇಲ್ಲದಿರುವುದರಿಂದ ಈ ನಡವಳಿಕೆ ನನ್ನ ಕುತ್ತಿಗೆಗೊಂದು ತಾಳಿ ಕಟ್ಟಿದರೆ ಸರಿ ಹೋಗುತ್ತಾನೆ, ಇವಳ ಜೊತೆಗಲ್ಲವೆ ಸಪ್ತಪದಿಯ ಕನಸು ಕಂಡಿದ್ದು,
ನನ್ನ ಮಕ್ಕಳಿಗೆ ಮಡಿಲು ನೀಡಬೇಕಾದವಳು ಇವಳಲ್ಲವೇ, ಸೋತಾಗ ನಾನಿದ್ದೇನೆ ಎಂದು ಜೊತೆಗಿದ್ದವಳಲ್ಲವೇ? ಮನೆಯವರೇ ಕೈಬಿಟ್ಟಾಗ ನನ್ನನ್ನು ನಂಬಿದವಳಲ್ಲವೇ? ಅವಳಿಗೆ ಅದೆಷ್ಟು ಪ್ರೇಮಪತ್ರ ಬಂದರೂ ಎಲ್ಲವನ್ನೂ ತಿರಸ್ಕರಿಸಿದವಳಲ್ಲವೇ? ಒಂದಿಷ್ಟು ಹಠಮಾರಿಯಾದರೂ ಕ್ಷಣಮಾತ್ರದಲ್ಲಿ ಮಗುವಾಗುವವಳಲ್ಲವೇ? ಹಣದ ಆಸೆಯಿದ್ದರೂ ಬದುಕು ನೋಡಬೇಕೆಂಬ ಬಯಕೆಯಲ್ಲವೇ!? ಹೀಗೆ ನೂರಾರು ಸಮಾಧಾನಗಳನ್ನು ಒಂದು ಕ್ಷಣ ತಮ್ಮೊಳಗೆ ಕೇಳಿಕೊಂಡಿದ್ದರೆ ಎಲ್ಲವೂ ಸರಿಹೋಗಿರುತ್ತಿತ್ತು. ಕನಿಷ್ಠ ಎಲ್ಲದಕ್ಕೂ ಉತ್ತರವಾದ್ರೂ ಸಿಕ್ಕಿರುತ್ತಿತ್ತು. ಆದರೆ ಆ ಪ್ರಯತ್ನಕ್ಕೆ ಅವರು ಹೋಗಲೇ ಇಲ್ಲ. ಅದೊಂದು ಭಾವವನ್ನೇ ಹಿಡಿದುಕೊಂಡು ಬ್ರೇಕಪ್ ಎಂದು ಗಟ್ಟಿಯಾಗಿ ಹೇಳಿ ಇನ್ನೆಂದೂ ನಿನ್ನೊಟ್ಟಿಗೆ ಬದುಕಲಾಗದು ಎಂದು ಹೊರನಡೆದುಬಿಟ್ಟರು.

love 2

ಭರತನ ಭೂಮಿಯಲ್ಲಿ ಅದೆಷ್ಟೋ ಬದಲಾವಣೆಯಾದರೂ ಭಾವನೆಗಳಿನ್ನು ಬದುಕಿದೆ. ಸೀತೆ ಇಲ್ಲದ ರಾಮ ಪ್ರತಿಮೆಯನ್ನೇ ಮಡದಿಯಾಗಿಸಿ ಅಶ್ವಮೇಧ ಯಾಗ ಮಾಡಿದ. ಸಾವಿರಾರು ಸಖಿಯರು ಅವನೆಡೆಗೆ ಅರಸಿ ಬಂದರೂ ಕೃಷ್ಣ ಮಾತ್ರ ಅವನೆಲ್ಲ ಪ್ರೀತಿಯನ್ನು ರಾಧೆಗೆ ಮೀಸಲಿಟ್ಟಿದ್ದ. ಸಾಕು ನಡೆ ಎಂದು ಎದ್ದುಹೋಗಲು ಇದು ಎಂಜಲೆಲೆಯ ಅನ್ನವಲ್ಲ! ಅಮೂರ್ತ ಪ್ರೇಮದ ಬದುಕು. ಇವಳು ಸರಿಯಲ್ಲ ಇನ್ನೊಬ್ಬಳು, ಇನ್ನೊಬ್ಬಳಲ್ಲಿ ಬೇಕಾದುದಿಲ್ಲ ಮತ್ತೊಬ್ಬಳು, ಮತ್ತೊಬ್ಬಳ ಜೊತೆ ಬದುಕಿಲ್ಲ, ಮಗದೊಬ್ಬಳು ಎಂದು ಹುಡುಕುತ್ತಾ ಹೋದಂತೆ ಚಾರಿತ್ರ್ಯದ ಜೊತೆಜೊತೆಗೆ ಆಂತರ್ಯದ ಅಂತರಾಳವೆ ಸಾಯುವುದಿಲ್ಲವೇ!? ಯಾರೊಂದಿಗೂ ಬದುಕಲಾಗದು ಎನಿಸಿದರೆ ಹುಡುಕಬೇಕಿರುವುದು ಹೊರಗೋ ಅಥವಾ ತಿದ್ದಿಕೊಳ್ಳಬೇಕಿರುವುದು ನಮ್ಮೊಳಗೋ? ನೀನಿಲ್ಲದಿದ್ದರೆ ಇನ್ನೊಬ್ಬ ಎಂದು ಬದುಕನ್ನು ಆಯ್ಕೆಗೆ ಮೀಸಲಿಡುವುದಲ್ಲ.
Relationship is a beautiful creature.

80 ವರುಷಗಳು ಅಜ್ಜನ ಜೊತೆಗೆ ಬಾಳಿ ಬದುಕಿದ ಮೂಲೆಯ ಅಜ್ಜಿ ನಮಗೆ ಕಾಣುವುದೇ ಇಲ್ಲ.
ಅವಳು ಅನುಸರಿಕೊಂಡು ಹೋಗಿದ್ದು ಅವಳ ಅಸಹಾಯಕತೆಯಲ್ಲ, ಸಂಬಂಧದ ಮೌಲ್ಯ ತಿಳಿದವಳು ಎಂಬ ಭಾವ ಗೊತ್ತೇ ಆಗುವುದಿಲ್ಲ. ಮುರಿದುಕೊಳ್ಳುವುದು ಸುಲಭ, ಕಡಿದುಕೊಳ್ಳುವುದು ಸಲೀಸು, ಬೆಸೆದು ಬೆಳೆಸಲು ಬದುಕೇ ಸಾಲದು. ಸಾಧ್ಯವಾದರೆ ಮತ್ತೊಮ್ಮೆ ಕಾಲು ಹಿಡಿದು ಬೇಡಿ ಉಳಿಸಿಕೊಳ್ಳಿ, ಎಲ್ಲವನ್ನೂ ಕೊಟ್ಟ, ಕಲಿಸಿಕೊಟ್ಟ ಪ್ರೇಮ ಕಳೆದುಹೋಗಬಾರದು. ಕೊಂಚ ಅಹಂ ಬಿಟ್ಟು ಪ್ರಯತ್ನಿಸಿದರೆ ಜೊತೆಗಿರುತ್ತಿದ್ದರೇನೋ ಎಂಬ ಕೊರಗು ಉಳಿಸಿಕೊಳ್ಳಬೇಡಿ. ಕಳೆದುಕೊಳ್ಳಲೇ ಬೇಕೆಂದುಕೊಂಡರೆ ಮುಪ್ಪಾದರೂ ಮರೆಯದ ನೋವು ನಿಮ್ಮನ್ನು ಬೆನ್ನಟ್ಟಿ ಕಾಡುತ್ತದೆ‌ ಎಂಬುದನ್ನು ಮರೆಯಬೇಡಿ.
ಬ್ರೇಕಪ್ ಎಂಬ ಮೂರಕ್ಷರದ ಪದ ನೂರು ಜನುಮಕ್ಕಾಗುವಷ್ಟು ಯಾತನೆಯ ಹಾದಿ.

ಇದನ್ನೂ ಓದಿ : ಭಾವಲೋಕದೊಳ್‌ ಅಂಕಣ : ಕೊನೆಯದೊಂದು ಸಹಿ ಹಾಕಿ ಹೋಗುತ್ತೇನೆ, ನಿನ್ನ ಬಾಳು ಇನ್ನಾದರೂ ಸಿಹಿಯಾಗಿರಲಿ..

ಕ್ಷಣ ಕ್ಷಣದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಫೇಸ್ ಬುಕ್ ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ವೈವಿಧ್ಯಮಯ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಟ್ವಿಟರ್ ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ಧವಳ ಧಾರಿಣಿ ಅಂಕಣ: ರಾಮನೆನ್ನುವ ನಿತ್ಯ ಆದರ್ಶ

ಪ್ರಜಾವತ್ಸಲ ರಾಮನೆನ್ನುವ ಬಿರುದು ರಾಮನಿಗೆ ಸಿಕ್ಕಿರುವುದು ಪ್ರಜೆಗಳ ಮೇಲೆ ಆತನಿಗಿರುವ ಕಾಳಜಿಗಳಿಂದಾಗಿ. ರಾಮ ಕುಟುಂಬವತ್ಸಲ, ಸಮರ್ಥ ರಾಜ ಆಗಿರುವ ಜೊತೆಗೆ ಆತ ಆದರ್ಶ ಪುರುಷನೂ ಆಗಿದ್ದಾನೆ. ಇಂಥ ಪುರುಷೋತ್ತಮ ಸ್ವರೂಪಿಯ ಬಗ್ಗೆ ಒಂದು ವಿಶ್ಲೇಷಣೆ.

VISTARANEWS.COM


on

Edited by

rama narayana yaji
Koo

ಋಣದ ಅರಿವಿನಲ್ಲಿ ಹೊಣೆಗಾರಿಕೆ ನಿಭಾಯಿಸಿದ ಕರ್ತವ್ಯ ಪ್ರಜ್ಞೆ

dhavala dharini

ರಾಮನಾಮೈವ ನಾಮೈವ ನಾಮೈವ ಮಮ ಜೀವನಮ್ I
ಕಲೌ ನಾಸ್ತ್ಯೇವ ನಾಸ್ತ್ಯೇವ ನಾಸ್ತ್ಯೇವ ಗತಿರನ್ಯಥಾ II

“ಶ್ರೀ ರಾಮನಾಮವೇ ಜಯರಾಮನಾಮವೇ ಜಯ ಜಯ ರಾಮನಾಮವೇ ನನ್ನ ಜೀವನವು. ಕಲಿಯುಗದಲ್ಲಿ ಪರಮಗತಿಯನ್ನು ಹೊಂದಲು ಬೇರೆ ಯಾವ ಉಪಾಯವೂ ಇಲ್ಲ, ಇಲ್ಲ, ಇಲ್ಲವೇ ಇಲ್ಲ”

ವಾಲ್ಮೀಕಿ ರಾಮಾಯಣದ ಮೊದಲು ಬರುವ ರಾಮಾಯಣದ ಮಹಿಮೆಯಲ್ಲಿ ಬರುವ ಶ್ಲೋಕವಿದು. ರಾಮನೆನ್ನುವ ಶಬ್ದ ಒಂದು ಪ್ರಜ್ಞಾ ಪ್ರವಾಹವಾಗಿ ಯುಗ ಯುಗಗಳಿಂದ ಹರಿದು ಬಂದಿದೆ. ಈ ವಾಚಕಶಬ್ದ ಬದುಕಿಗೊಂದು ಸ್ಫೂರ್ತಿಯಾಗಿದೆ. ರಾಮನೆಂದಾಗ ಆತನನ್ನು ಕುಟುಂಬವತ್ಸಲನೆಂದೋ, ಸಮರ್ಥ ರಾಜನೆಂದೋ ಹೇಳುವುದರ ಜೊತೆಗೆ ಆತನು ಆದರ್ಶ ಪುರುಷನೂ ಆಗಿದ್ದಾನೆ. ಕನ್ನಡಿಗೂ ಆದರ್ಶವೆನ್ನುವ ಹೆಸರಿದೆ. ಆದರ್ಶವೆಂದರೆ ನಮ್ಮ ಮುಖಾವಲೋಕನವನ್ನು ಮಾಡಿಕೊಳ್ಳುವುದು.

ರಾಮ ಕಾಡಿಗೆ ಹೋಗುವಾಗ ತಂದೆಯಾದ ದಶರಥ ತನ್ನ ಸಂಗಡ ಒಂದು ಹೊತ್ತಿನ ಊಟವನ್ನಾದರೂ ಮಾಡಿ ಹೋಗು ಎಂದರೆ, ಯಾವಾಗ ಕೈಕೆಯಿ ನ್ಯಾಸವಾಗಿಟ್ಟ ವರಗಳನ್ನು ಪಡೆದುಕೊಂಡಳೋ, ಆ ಕ್ಷಣದಿಂದಲೇ ತಾನು ಈ ರಾಜ್ಯದಲ್ಲಿರುವುದು ಉಚಿತವಲ್ಲವೆಂದು ನಯವಾಗಿಯೇ ತಿರಸ್ಕರಿಸಿ ವನಕ್ಕೆ ಹೊರಟವನ ಮನಸ್ಸಿನಲ್ಲಿ ಇದ್ದಿರುವುದು ಕರ್ತವ್ಯದ ಕುರಿತು ನಿಷ್ಠೆಯೇ ಹೊರತು ಬೇರೇನೂ ಅಲ್ಲ. ಭರತನಿಗೆ ರಾಜ್ಯವನ್ನು ಕೊಡಬೇಕು ಮತ್ತು ನೀನು ಅರಣ್ಯಕ್ಕೆ ಹೋಗಬೇಕೆಂದು ಹೇಳಿದಾಗ ಆತ ಮೊದಲು ಆತಂಕಿತನಾಗಿದ್ದು ತನ್ನ ತಂದೆ ಆಘಾತದಿಂದ ಕುಳಿತಿರುವುದರ ಕುರಿತು. ಆ ಹೊತ್ತಿನಲ್ಲಿ ತನ್ನ ತಂದೆ ಕಳವಳಗೊಂಡು ತಲೆತಗ್ಗಿಸಿ ಮೌನವಾಗಿ ಕುಳಿತಿರುವ ಘಟನೆ ಆತನಿಗೆ ಎಲ್ಲವನ್ನೂ ಹೇಳಿತ್ತು. ರಾಮ ಕೈಕೆಯಿಗೆ “ಅಮ್ಮಾ ನೀನು ನನ್ನ ಸ್ವಭಾವವನ್ನು ಈ ಮೊದಲು ಕಂಡಿಲ್ಲವೇ. ನೀನು ಈ ಮಾತುಗಳನ್ನು ನನಗೇ ನೇರವಾಗಿ ಹೇಳಬಹುದಿತ್ತಲ್ಲ. ನಿನಗೆ ಅಧಿಕಾರವಿತ್ತಲ್ಲವೆ? ನೀನು ಈ ವಿಷಯದಲ್ಲಿ ರಾಜನಾಗಿರುವ ನನ್ನ ತಂದೆಯನ್ನು ನಿರ್ಬಂಧಿಸಿ ಕೇಳಬೇಕಾದ ಅವಶ್ಯಕತೆಯೇನಿತ್ತು” ಎನ್ನುತ್ತಾ ಮುಂದುವರೆದು “ನೂನಂ ಮಯಿ ಕೈಕಯಿ! ಕಿಞ್ಚಿದಾಶಂಸಸೇ ಗುಣಮ್”. ನಿಸ್ಸಂಶಯವಾಗಿ ಇಷ್ಟು ವರ್ಷ ನಿನ್ನ ಹತ್ತಿರ ಇದ್ದರೂ ನಿನ್ನಲ್ಲಿರುವ ಈ ಗುಣಗಳು ನನಗೆ ತಿಳಿಯದೇ ಹೋಯಿತು!” ಎನ್ನುವ ಮಾತುಗಳು ಬಹುಶಃ ಕೈಕೆಯ ಎದೆಯಲ್ಲಿಯೂ ನಡುಕ ಹುಟ್ಟಿಸಿರಲೂ ಸಾಕು.

ರಾಮನ ಬದುಕಿನ ಆದರ್ಶವೇನೆಂದರೆ ಆತನ ಕರ್ತವ್ಯ ಪರಾಯಣತೆ. ಹಿರಿಯ ಮಗನಾಗಿ ತಾನು ತನ್ನ ತಂದೆಯನ್ನು ನೋಡಿಕೊಳ್ಳಬೇಕಾದ ಹೊಣೆಗಾರಿಕೆಯನ್ನೂ ಆತ ಬಲ್ಲ. ಹಾಗಾಗಿ ಕೈಕೆಯಿಯ ಈ ಬೇಡಿಕೆಯನ್ನು ಅರಿತ ಮೇಲೆ ತನ್ನ ತಂದೆ ತಾಯಿಯ ಯೋಗಕ್ಷೇಮದ ಚಿಂತೆ ಅವನಿಗೆ ಸಹಜವಾಗಿಯೇ ಬಾಧಿಸಿದೆ. ಒಂದು ವೇಳೆ ಈ ತಾಯಿ ಮತ್ತು ಮಗ ಅವರನ್ನು ನಿರ್ಲಕ್ಷಿಸಿದರೆ ಎನ್ನುವ ಚಿಂತೆ ಆತನನ್ನು ಕಾಡಿದೆ. ಆಗ ಆತ ಕಠೋರವಾಗಿ ಕೈಕೆಯಿಗೆ ತನ್ನ ತಂದೆಯನ್ನು ನೋಡಿಕೊಳ್ಳಬೇಕಾದ ಆಕೆಯ ಕರ್ತವ್ಯದ ಕುರಿತು ಎಚ್ಚರಿಸುತ್ತಾನೆ. “ಭರತಃ ಪಾಲಯೇದ್ರಾಜ್ಯಂ ಶುಶ್ರೂಷೇಚ್ಚ ಪಿತುರ್ಯಥಾ৷ ತಥಾ ಭವತ್ಯಾ ಕರ್ತವ್ಯಂ ಸ ಹಿ ಧರ್ಮ ನಾತನಃ৷৷2.19.26৷৷ “ತನ್ನ ತಂದೆಯನ್ನು ಭರತ ಸರಿಯಾದ ಕ್ರಮದಲ್ಲಿ ಶುಶ್ರೂಷೆ ಮಾಡುವಂತೆ ನೋಡಿಕೊಳ್ಳಬೇಕಾದುದು ನಿನ್ನ ಹೊಣೆ. ಪಿತೃಶುಶ್ರೂಷೆಯೆನ್ನುವದಕ್ಕಿಂತ ಸನಾತನವಾದ ಧರ್ಮ ಮತ್ಯಾವುದೂ ಇಲ್ಲ” ಎನ್ನುವ ಮಾತುಗಳು ಬಲು ಮಹತ್ವದ್ದು.

ರಾಮ ಮಿತಭಾಷಿ, ಹೆಚ್ಚಿಗೆ ವಿವರಣೆ ಆತನಲ್ಲಿಲ್ಲ. ಅದನ್ನು ಮೀರಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆನ್ನುವ ಎಚ್ಚರಿಕೆ ಈ ಮಾತಿನಲ್ಲಿದೆ. ರಾಮನ ಬಾಯಲ್ಲಿ ವಾಲ್ಮೀಕಿ ಆಡಿಸುವ ಇಂತಹ ಮಾತುಗಳ ಮೂಲಕ ರಾಮನ ವ್ಯಕ್ತಿತ್ವವನ್ನು ಬೆಳೆಸುತ್ತಾ ಹೋಗುತ್ತಾರೆ. ವಿಶ್ವಾಮಿತ್ರರು “ಕರ್ತವ್ಯವೇ ನಿನ್ನ ಮುಂದಿನ ದೇವಪೂಜೆ. ಅದೇ ನಿನ್ನ ಧರ್ಮ” ಎಂದು ಉಪದೇಶಿಸಿರುವುದನ್ನು ಕಾಯಾ ವಾಚಾ ಮನಸಾ ಪಾಲಿಸುತ್ತಿರುವವ ಆತ. ಈ ಆದರ್ಶವೇ ಆತ ದೇವರಾಗಲು ಕಾರಣ.

ವಾಲ್ಮೀಕಿಯ ರಾಮ ಪ್ರಜೆಗಳಿಗೂ ಪ್ರೀತಿಪಾತ್ರನಾಗಿದ್ದ. ಅದರ ನಾಡಿಮಿಡಿತ ಅರಿತ ಧಶರಥ ಬಲು ದೀರ್ಘಕಾಲ ಈ ರಾಜ್ಯವನ್ನು ಆಳಿದ. ತನಗಿನ್ನು ಸಾಕು ಈ ಅಧಿಕಾರ, ಇನ್ನು ಮುಂದೆ ರಾಮನಿಗೆ ಪಟ್ಟಕಟ್ಟುವೆ ಎಂದು ನಿಶ್ಚಯಿಸುತ್ತಾನೆ. ಅಯೋಧ್ಯೆಯ ಜನಪದ ರಾಮನನ್ನು ಅಕ್ಕರೆಯಿಂದ ನೋಡುತ್ತಿದ್ದರು. ರಾಜಕುಟುಂಬದೊಡನೆ ಭಾವನಾತ್ಮಕವಾದ ಸಂಬಂಧವನ್ನು ಹೊಂದಿದ ಪ್ರಜೆಗಳು ಬಹುಕಾಲವರೆಗೆ ಮಕ್ಕಳಿಲ್ಲದ ಅರಮನೆಯಲ್ಲಿ ಜನಿಸಿದ ಮೊದಲ ಮಗನ ಕುರಿತು ಒಂದು ಭಾವನಾತ್ಮಕವಾದ ಪ್ರೀತಿಯನ್ನು ಹೊಂದಿರುತ್ತಾರೆ. ಈತ ತಮ್ಮನ್ನು ಮುಂದೆ ಆಳುವವ ಎನ್ನುವ ಒಂದು ಪ್ರಭಾವಳಿ ಆ ರಾಜಕುಮಾರನ ಮೇಲೆ ಬೆಳೆದಿರುತ್ತದೆ. ಭಾವನೆಯೆನ್ನುವುದು ಜಂಗಮ, ಅದು ಸ್ಥಾಯಿಯಾಗಬೇಕಾದರೆ ಸಮಾಜದ ಶೃತಿಗೆ ಸ್ಪಂದಿಸುವ ಶೃತಿ ನಿರಂತರವಾಗಿ ಮೀಟುತ್ತಲೇ ಇರಬೇಕಾಗುತ್ತದೆ.

ರಾಮನಲ್ಲಿಯೂ ಪ್ರಜೆಗಳ ಕುರಿತು ಅಷ್ಟೇ ವಾತ್ಸಲ್ಯವಿತ್ತು. ಅಯೋಧ್ಯೆಯ ಪ್ರಜೆಗಳ ವಿಶೇಷವೆಂದರೆ ರಾಜ ತಪ್ಪುಮಾಡಿದರೆ ಅದನ್ನು ನಿರ್ಭೀತಿಯಿಂದ ಹೇಳಲು ಹಿಂದೆಮುಂದೆ ನೋಡುತ್ತಿರಲಿಲ್ಲ. ಸೂರ್ಯವಂಶದ ರಾಜಮನೆತನ ನಿರಂತರವಾಗಿ ಕೋಸಲದೇಶವನ್ನು ಆಳುತ್ತಾ ಬಂದಿದ್ದರೂ ಅವರು ನಿರಂಕುಶರಾಗಿರಲಿಲ್ಲ. ಅರಮನೆಯಿಂದ ತಪ್ಪುಗಳು ಘಟಿಸಿದಾಗ ನೇರವಾಗಿ ರಾಜನಿಗೇ ದೂರು ಕೊಡಬಹುದಾಗಿತ್ತು. ಮಾಂಧಾತನ ಮಗ ದಂಡಕ, ಇಕ್ಷ್ವಾಕುವಿನ ಮಗ ಶಶಾದ ಇವರೆಲ್ಲರೂ ತಪ್ಪು ಮಾಡಿದಾಗ ಅವರನ್ನು ನಿರ್ದಾಕ್ಷಿಣ್ಯವಾಗಿ ಕಾಡಿಗೆ ಅಟ್ಟಿರುವುದನ್ನು ಗಮನಿಸಬಹುದಾಗಿದೆ. ಸಗರನ ಮಗ ‘ಅಸಮಞ್ಜ’ ಎನ್ನುವವ ಕ್ರೂರಿಯಾಗಿದ್ದ. ಆತ ಅಯೋಧ್ಯೆಯ ಚಿಕ್ಕಮಕ್ಕಳನ್ನು ಸರಯೂ ನದಿಯಲ್ಲಿ ಮುಳುಗಿಸಿ ಅವರು ಅಳುವುದನ್ನು ನೋಡಿ ವಿಕೃತಾನಂದವನ್ನು ಹೊಂದುತ್ತಿದ್ದ. ಈ ಕ್ರೌರ್ಯವನ್ನು ಸಹಿಸಲಾರದ ಅಯೋಧ್ಯೆಯ ಪ್ರಜೆಗಳು ಸಗರನಿಗೆ ದೂರು ಕೊಟ್ಟು ಅವನನ್ನು ಶಿಕ್ಷಿಸಲು ಹೇಳಿದಾಗ ತಡಮಾಡದೇ ದೊರೆ ಆತನನ್ನು ತ್ಯಜಿಸಿ ಅರಣ್ಯಕ್ಕೆ ಕಳುಹಿಸಿದ. ಈ ಪರಂಪರೆ ರಾಮನ ಕಾಲದಲ್ಲಿಯೂ ಇತ್ತು. ಸೀತೆ ರಾವಣನಲ್ಲಿ ಇದ್ದು ಬಂದಿರುವ ಕಾರಣದಿಂದ ಜನಸಾಮಾನ್ಯರು ನಗರಗಳಲ್ಲಿ, ಹಳ್ಳಿಗಳಲ್ಲಿ, ಓಣಿ ಓಣಿಗಳಲ್ಲಿ ಆಕೆಯ ಶೀಲದ ಕುರಿತು ಆಡಿಕೊಳ್ಳುತ್ತಿದ್ದರು. ರಾಮನ ಗೂಢಚಾರರಲ್ಲಿ ಓರ್ವನಾದ ಭದ್ರನೆನ್ನುವವ ತನ್ನ ಇತರ ಸಂಗಾತಿಗಳೊಡನೆ ಈ ಸಂಗತಿಯನ್ನು ರಾಮನಿಗೆ ತಿಳುಹಿದ. ನಂತರ ಇದೇ ವಿಷಯವನ್ನು ವಿಜಯ, ಮಧುಮತ್ತ, ಕಾಶ್ಯಪ, ಪಿಂಗಲ, ಕುಟಿ, ಸುರಾಜ, ಕಾಲಿಯ ದಂತವಕ್ತ್ರ ಮತ್ತು ಸುಮಾಗಧರೆನ್ನುವ ಇತರರೂ ರಾಮನಿಗೆ ಅರುಹುತ್ತಾರೆ. ಈ ಸಾರ್ವತ್ರಿಕ ಜನಪವಾದದ ಕಾರಣ ರಾಮ ಸೀತೆಯನ್ನು ತ್ಯಜಿಸಿದ. ಇಲ್ಲಿ ರಾಮ ಸೀತೆಯನ್ನು ಬಿಟ್ಟಿರುವುದನ್ನು ಸಮರ್ಥನೆಗೂ ಅಥವಾ ವಿರೋಧಕ್ಕೂ ಈ ಸಂಗತಿಗಳನ್ನು ಪ್ರಸ್ತಾಪಿಸಿಲ್ಲ. ಆ ಕಾಲದಲ್ಲಿ ಅಯೋಧ್ಯೆಯ ಪ್ರಜೆಗಳಿಗೆ ರಾಜಮನೆತನವನ್ನೂ ಟೀಕಿಸುವಷ್ಟು ವಾಕ್-ಸ್ವಾತಂತ್ರ್ಯವಿತ್ತೆನ್ನುವುದನ್ನು ತಿಳಿಸಲಿಕ್ಕಷ್ಟೇ ಈ ಸಂಗತಿಯನ್ನು ಪ್ರಸ್ತಾಪಿಸಿರುವುದು.

Sri Ramachandra

ಇನ್ನೇನು ನಾಳೆ ರಾಮನ ಪಟ್ಟಾಭಿಷೇಕ, ತಮ್ಮ ದೊರೆಯಾಗಬೇಕಾಗಿದ್ದವ ತಮ್ಮ ವಿಶ್ವಾಸಕ್ಕೆ ಮತ್ತು ಒಲವಿಗೆ ಪಾತ್ರನಾದವ ಅರಣ್ಯಕ್ಕೆ ಹೋಗುತ್ತಿದ್ದಾನೆಂದು ತಿಳಿದಾಗ ಸಹಜವಾಗಿ ಅವರಲ್ಲಿ ಭಾವಾವೇಶದ ಕಟ್ಟೆ ಒಡೆಯಿತು. ರಾಮನಿಲ್ಲದ ಅಯೋಧ್ಯೆ ತಮಗೂ ಬೇಡವೆನ್ನುತ್ತಾ ಪ್ರಜೆಗಳು ರಾಮನನ್ನು ಅನುಸರಿಸಿ ಅರಣ್ಯಕ್ಕೆ ಬರುತ್ತೇವೆ ಎನ್ನುವ ಸಮೂಹ ಸನ್ನಿ ಪಟ್ಟಣದಲ್ಲಿ ಹರಡಿತು. ಅವರೆಲ್ಲರೂ ರಾಮನನ್ನು ನೋಡಬೇಕೆಂದು ಹಾತೊರೆಯುತ್ತಿದ್ದರಂತೆ. ವಾಲ್ಮೀಕಿ ಅವರ ಈ ಭಾವಾವೇಶವನ್ನು ವರ್ಣಿಸುವುದು ಹೀಗೆ:

ಸಂಯುಚ್ಛ ವಾಜಿನಾಂ ರಶ್ಮೀನ್ಸೂತ ಯಾಹಿ ಶನ್ಯೆಃ ಶನ್ಯೇಃ ৷
ಮುಖಂ ದ್ರಕ್ಷ್ಯಾಮ ರಾಮಸ್ಯ ದುರ್ದಶಂ ನೋ ಭವಿಷ್ಯತಿ ৷৷2.40-22৷৷

“ಸೂತ! ಕುದುರೆಗಳ ಕಡಿವಾಣವನ್ನು ಎಳೆದು ಬಿಗಿಯಾಗಿ ಹಿಡಿದುಕೊ. ಮೆಲ್ಲ ಮೆಲ್ಲಗೆ ಹೋಗು. ಶ್ರೀರಾಮನ ಮುಖವನ್ನು ನೋಡುತ್ತೇವೆ. ಮುಂದೆ ಬಹಳ ಕಾಲದವರೆಗೆ ಇವನ ಸುಂದರವಾದ ಮುಖಾರವಿಂದವು ನೋಡಲು ಲಭಿಸದು”. ರಾಮನಿಗೆ ಈ ದುಃಸ್ಥಿತಿಯನ್ನು ತಂದ ದಶರಥನನ್ನು ಕೈಕೆಯಿಯನ್ನು ಬಯ್ಯುತ್ತಿದ್ದರು. ಹೆಚ್ಚೇನು, ಆತನ ತಾಯಿಯಾದ ಕೌಸಲ್ಯೆಯನ್ನೂ ಸಹ ಇಂತಹ ಮಗನನ್ನು ಕಾಡಿಗೆ ಕಳುಹಿಸುವ ಮನಸ್ಸು ಆ ತಾಯಿಗೆ ಬಂತೆಂದರೆ ಅವಳ ಹೃದಯ ನಿಸ್ಸಂಶಯವಾಗಿ ಕಬ್ಬಿಣದ್ದೇ ಆಗಿರಬೇಕೆಂದು ದೂಷಿಸುತ್ತಿದ್ದರು. ಆದರೆ ರಾಮ ಮಾತ್ರ ನಿರ್ಲಿಪ್ತನಾಗಿ “ಯಾಹಿ ಸೂತ! ಶೀಘ್ರಂ ಯಾಹಿ- ಸೂತನೇ ಬೇಗ ಹೋಗು, ತಡಮಾಡಬೇಡ” ಎನ್ನುತ್ತಾ ರಥವನ್ನು ಹಾರಿಸಿಕೊಂಡು ಹೋದನಂತೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಮಾವಿನ ಬೇವಿನ ಬೆಲ್ಲದ ನೋಂಪಿನ ಹೊಸ ಹರುಷದ ಹಬ್ಬ

ದಶರಥ, ಕೌಸಲ್ಯೆ ಮತ್ತು ಸುಮಿತ್ರೆಯನ್ನು ಬಿಟ್ಟುಬರುವಾಗ ರಾಮ ಕಠಿಣಹೃದಯಿಯಾಗಿ ಕಾಣಿಸಿದರೂ ಅವನಿಗೆ ಅವರ ಸ್ಥಿತಿಯನ್ನು ನೆನೆದು ದುಃಖ ಒಳಗೊಳಗೇ ಇತ್ತು. ಅದನ್ನು ಹೊರಗೆ ತೋರಿಸಿಕೊಂಡಿಲ್ಲ. ಅವರು ತಮಸಾ ನದಿತೀರಕ್ಕೆ ಬಂದು ಅಲ್ಲಿ ರಾತ್ರಿಯನ್ನು ಕಳೆಯಲು ನಿರ್ಧರಿಸುತ್ತಾರೆ. ರಾಮನ ರಥ ಎಷ್ಟೇ ವೇಗವಾಗಿ ಚಲಿಸಲಿ, ಅವನನ್ನು ಅನುಸರಿಸಿಕೊಂಡು ಅನೇಕ ಪ್ರಜಾವರ್ಗದವರೂ ಓಡುತ್ತಾ, ಕುದುರೆಯನ್ನೇರಿ, ಹೇಗೋ ಹೇಗೋ ಬಂದುಬಿಟ್ಟಿದ್ದರು. ಅವರೆಲ್ಲರೂ ರೋದಿಸುತ್ತಿದ್ದರು. ಆಗ ರಾಮನಿಗೆ ತನ್ನ ತಂದೆ, ತಾಯಿಯನ್ನು ನೆನೆದು ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಅಯೋಧ್ಯೆಯ ಪ್ರಜೆಗಳು ಸದ್ಗುಣ ಸಂಪನ್ನನಾದ ತಮ್ಮ ರಾಜನನ್ನು ಬಹಳವಾಗಿ ಪ್ರೀತಿಸುತ್ತಾರೆ. ಹಾಗಾಗಿ ತನಗೆ ತನ್ನ ತಮ್ಮಂದಿರಾದ ಭರತ ಮತ್ತು ಶತ್ರುಘ್ನರ ಕುರಿತು ಚಿಂತೆಯಿಲ್ಲ ಎಂದು ಸಮಾಧಾನ ಮಾಡಿಕೊಳ್ಳುತ್ತಿರುವಾಗ ಅವನಿಗೆ ತನ್ನ ತಂದೆ ಮತ್ತು ತಾಯಿಯ ನೆನಪಾಗುತ್ತದೆ. “ಏನು ಮಾಡಲಿ ಹೇಳು, ನನಗೆ ನನ್ನ ತಂದೆ ಮತ್ತು ಯಶಸ್ವಿನಿಯಾದ ನನ್ನ ಅಮ್ಮ ಕೌಸಲ್ಯೆಯ ನೆನಪಾಗುತ್ತದೆ. ನಮ್ಮ ಅಗಲುವಿಕೆಯ ನೋವಿನಿಂದ ಅವರು ಬಾರಿ ಬಾರಿಗೂ ಅತ್ತೂ ಅತ್ತೂ ವಿರಹದ ವ್ಯಥೆಯಲ್ಲಿ ಕಣ್ಣು ಇಂಗಿ ಕುರುಡರಾಗಿಬಿಡುತ್ತಾರೇನೋ” ಎನ್ನುತ್ತಾ ಬಿಕ್ಕುತ್ತಾನೆ.

ಪಿತರಂ ಚಾನುಶೋಚಾಮಿ ಮಾತರಂ ಚ ಯಶಸ್ವಿನೀಮ್৷
ಅಪಿ ವಾನ್ಧೌ ಭವೇತಾಂ ತು ರುದನ್ತೌ ತಾವಭೀಕ್ಷ್ಣಶಃ৷৷2.46.6৷৷

ಕೌಸಲ್ಯೆಯನ್ನು ‘ಯಶಸ್ವಿನಿ’ ಎಂದು ಕರೆಯುತ್ತಾನೆ. ಆ ಮಹಾತಾಯಿಯ ಕುರಿತು ರಾಮನ ಭಾವನೆಗಳೆಲ್ಲವೂ ಇದೊಂದೇ ಮಾತುಗಳಲ್ಲಿ ವ್ಯಕ್ತವಾಗಿವೆ. ಅಯೋಧ್ಯೆಯ ಭಾಗ್ಯಲಕ್ಷ್ಮಿ ಆಕೆ ಎನ್ನುತ್ತಾನೆ, ಕೊನೆಗೆ ಭರತ ದಯಾಗುಣದಿಂದ ಕೂಡಿದವನಾಗಿರುವುದರಿಂದ ಅತ ತಂದೆ ಮತ್ತು ತಾಯಿಯಯರನ್ನು ಧರ್ಮಾರ್ಥಕಾಮಸಹಿತವಾದ ಮಾತುಗಳಿಂದ ಸಂತೈಸುತ್ತಾನೆಂದು ತನ್ನಲ್ಲೇ ತಾನು ಸಮಾಧಾನ ಮಾಡಿಕೊಳ್ಳುತ್ತಾನೆ. ಹೊರಗಡೆ ನಿಷ್ಕರುಣೆಯಿಂದ ಕಾಣುವ ರಾಮನಲ್ಲಿ ಒಳಗಡೆ ದಯಾರ್ದೃವಾದ ಹೃದಯವಿತ್ತು. ಇನ್ನು ಅವನಿಗೆ ಬಂದಿರುವ ಸಮಸ್ಯೆಯೆಂದರೆ ತನ್ನನ್ನು ಅನುಸರಿಸಿಕೊಂಡು ಬಂದ ಪ್ರಜೆಗಳ ವಿಷಯದಲ್ಲಿ ಏನು ಮಾಡಬೇಕೆನ್ನುವುದು. ಮುಂದಿನ ನಿರ್ಜನವಾದ ಅರಣ್ಯಪ್ರದೇಶದಲ್ಲಿ ರಾಕ್ಷಸರು ಮತ್ತು ಕ್ರೂರ ಮೃಗಗಳ ಕಾಟವಿದೆ. ಇಂತಹ ಸನ್ನಿವೇಶದಲ್ಲಿ ಅವರೆಲ್ಲರ ರಕ್ಷಣೆ ಸುಲಭವೂ ಅಲ್ಲ. ಅದೂ ಅಲ್ಲದೇ ಅಲ್ಲಿ ತಪಸ್ಸನ್ನಾಚರಿಸುತ್ತಿರುವ ಋಷಿಮುನಿಗಳ ತಪಸ್ಸು ಭಂಗವಾಗಿಬಿಡುವ ಅಪಾಯವುಂಟು. ಮೊದಲೇ ಕೈಕೆಯಿ, ಪ್ರಜೆಗಳಿಲ್ಲದ ರಾಜ್ಯವೆಂದರೆ ಅದು “ಸುರೆಯನ್ನೆಲ್ಲ ಕುಡಿದು ಬಿಸಾಡುವ ಸೋರೆ ಬುರುಡೆಯಂತೆ” ಅಂತಹ ರಾಜ್ಯ ತನಗೆ ಬೇಡವೆಂದು ಹೇಳಿಬಿಟ್ಟಿದ್ದಾಳೆ. ಇಲ್ಲಿ ರಾಮ ಹೇಳುವ ರಾಜನೀತಿ ಮಾರ್ಮಿಕವಾಗಿದೆ. “ರಾಜನಾದವನು ಪ್ರಜೆಗಳನ್ನು ದೈವಿಕವಾದ (ಪ್ರಕೃತಿಯ ವಿಕೋಪಗಳು), ಅಥವಾ ತಾವಾಗಿಯೇ ಉಂಟುಮಾಡಿಕೊಂಡ ಅಂದರೆ ರೋಗರುಜಿನಗಳಿಂದ ತೊಂದರೆಯಾಗದಂತೆ ಕಾಪಾಡಬೇಕು. ಅಂದರೆ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಿದರೆ ಇವೆಲ್ಲವನ್ನೂ ತಡೆಯಬಹುದೆನ್ನುವುದು ಇಲ್ಲಿನ ಮರ್ಮ. ಮತ್ತೆ ಒಂದು ವೇಳೆ ರಾಜನಿಗೇ ತೊಂದರೆ ಉಂಟಾದರೆ ಅದನ್ನು ಪ್ರಜೆಗಳಿಗೆ ಹಂಚಬಾರದು, ತಾನೊಬ್ಬನೇ ಅನುಭವಿಸಬೇಕು” ಎನ್ನುವ ಈ ಮಾತುಗಳು ಆದರ್ಶ ರಾಜ ಹೇಗಿರಬೇಕೆನ್ನುವುದಕ್ಕೆ ಉದಾಹರಣೆಯಾಗಿದೆ.

Ram Navami 2023
Ram Navami 2023

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸುವರ್ಚಲೆ: ಮದುವೆ ಎನ್ನುವುದು ಕನ್ಯೆಯದೇ ಆಯ್ಕೆ

ಈ ಎಲ್ಲಾ ಕಾರಣನಳಿಗಾಗಿ ಬಿಟ್ಟೂ ಬಿಡದೇ ಬೆನ್ನುಹತ್ತಿದ ಅಯೋಧ್ಯೆಯ ಜನರ ಕಣ್ತಪ್ಪಿಸಿ ಕಾಡಿಗೆ ಹೋಗಬೇಕಾಗಿದೆ. ಇದೀಗ ಕಾಡಿನ ಅಂಚಿನಲ್ಲಿದ್ದಾನೆ. ದಶರಥ ಸುಮಂತ್ರನ ಹತ್ತಿರ ರಥವನ್ನು ಕಾಡಿನವರೆಗೆ ಬಿಟ್ಟುಬರಲು ತಿಳಿಸಿದ್ದಾನೆ. ತಮಸಾ ನದಿಯ ದಡದಲ್ಲಿ ಪುರಜನರೆಲ್ಲರೂ ಆಯಾಸದಿಂದ ನಿದ್ರೆ ಮಾಡುತ್ತಿದ್ದಾರೆ. ರಾಮನೊಟ್ಟಿಗೆ ತಾವೂ ಕಷ್ಟಗಳನ್ನು ಸಹಿಸಲು ಅವರೆಲ್ಲರೂ ಅಡವಿಗೆ ಬರಲು ಸಿದ್ಧರಾಗಿಯೇ ಬಂದಿದ್ದಾರೆ. ಅಯೋಧ್ಯೆಯ ಹಿತದ ಮತ್ತು ಪ್ರಜೆಗಳ ಸುರಕ್ಷತಾ ದೃಷ್ಟಿಯಿಂದ ರಾಮ ಹೇಳಿದ ಮಾತುಗಳನ್ನು ಕೇಳಿದ ಕೂಡಲೇ ಇಂಗಿತಜ್ಞನಾದ ಲಕ್ಷ್ಮಣ ರಾಮನಿಗೆ “ಪ್ರಾಜ್ಞನೇ ನನಗೂ ಈ ವಿಚಾರ ಸರಿ ಎನಿಸುತ್ತಿದೆ. ಕೂಡಲೇ ರಥವನ್ನು ಹತ್ತು” ಎಂದು ಸುಮಂತ್ರನನ್ನು ಎಬ್ಬಿಸಿ ರಭಸದಿಂದ ಕೂಡಿದ ತಮಸಾ ನದಿಯ ಸುಳಿಗಳನ್ನು ತಪ್ಪಿಸಿ ನದಿಯನ್ನು ದಾಟಿದರು. ಹಾಗೇ ದಾಟಿದ ರಾಮ ಸುಮಂತ್ರನ ಹತ್ತಿರ “ರಥವನ್ನು ಉತ್ತರ ದಿಕ್ಕಿಗೆ ತೆಗೆದುಕೊಂಡು ಹೋಗಿ ಮತ್ತೆ ಆಚೇ ಈಚೇ ತಿರುಗಿಸಿ ನಾವು ಯಾವ ದಿಕ್ಕಿನ ಕಡೆ ಹೋದೆವೆಂದು ಭ್ರಾಂತಿಯುಂಟಾಗುವಂತೆ ಮಾಡಿಕೊಂಡು ಬಾ” ಎಂದು ಕಳಿಸಿ ಆತ ಹಾಗೇ ಮಾಡಿದ ಮೇಲೆ ರಥವನ್ನು ಕಾಡಿನೊಳಗೆ ತಿರುಗಿಸಿ ಒಳಹೊಕ್ಕನು. ಬೆಳಗಾದ ಮೇಲೆ ತಮಸಾನದಿ ತೀರದಲ್ಲಿ ಮಲಗಿರುವ ಪಟ್ಟಣಿಗರು ರಾಮನನ್ನು ಕಾಣಲಾರದೇ ಅವನಿಗಾಗಿ ಶೋಕಿಸುತ್ತಾ ತಮಸಾ ನದಿಯನ್ನು ದಾಟಿ ಅಲ್ಲಿ ರಥದ ಚಕ್ರದ ಗುರುತು ಅಳಿಸಿಹೋಗಿರುವುದನ್ನು ಕಂಡು ನಿರಾಸೆಗೊಂಡರಂತೆ. ರಾಮನಿಂದ ತಾವು ದೂರವಾಗುವುದಕ್ಕೆ ಕಾರಣವಾದ ತಮ್ಮ ನಿದ್ರೆಗೆ ಧಿಕ್ಕಾರವಿರಲಿ ಎನ್ನುತ್ತಾ ಅಳುತ್ತಾ ಪುನಃ ಅಯೋಧ್ಯೆಯೆಡೆಗೆ ಮರಳಿದರಂತೆ.

ಇಲ್ಲಿ ರಾಮನ ಪ್ರಜ್ಞೆಯ ದೂರದೃಷ್ಟಿಯನ್ನು ಕಾಣಬಹುದಾಗಿದೆ. ಹಾಗಂತ ರಾಮ ತನ್ನ ಈ ಕಾರ್ಯಕ್ಕಾಗಿ ಸಂತಸ ಪಟ್ಟಿಲ್ಲ. ಅಯೋಧ್ಯೆಯ ಪ್ರಜಾಸಮೂಹದ ರಾಜನಿಷ್ಟೆಯನ್ನು ಕಂಡು ಒಳಗೋಳಗೇ ಹೆಮ್ಮೆಪಟ್ಟಿದ್ದ. ಅಂತಹ ನಿಸ್ಪೃಹ ಪ್ರಜೆಗಳನ್ನು ವಂಚಿಸಿ ತಾನು ಅರಣ್ಯಕ್ಕೆ ಬರಬೇಕಾಯಿತೆಂದು ಅವನಿಗೆ ದುಃಖ ಉಮ್ಮಳಿಸಿಬಂತು ಎಂದು ವಾಲ್ಮೀಕಿ ವರ್ಣಿಸುತ್ತಾರೆ. ಪ್ರಜಾವತ್ಸಲ ರಾಮನೆನ್ನುವ ಬಿರುದು ರಾಮನಿಗೆ ಸಿಕ್ಕಿರುವುದು ಪ್ರಜೆಗಳಮೇಲೆ ಆತನಿಗಿರುವ ಇಂತಹ ಕಾಳಜಿಗಳಿಂದಾಗಿ.

ಕಾವ್ಯವೆಂಬ ಟೊಂಗೆಯ ಮೇಲೆ ಕುಳಿತು ರಾಮ ರಾಮ ಎಂದು ಸುಮಧುರವಾಗಿ ಕೂಗುವ ವಾಲ್ಮೀಕಿ ಎಂಬ ಕೋಗಿಲೆಗೆ ನಮಸ್ಕಾರ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸೃಷ್ಟಿಯ ಹಿಂದಿರುವ ಪೂರ್ಣತೆಯೇ ಅರ್ಧನಾರೀಶ್ವರತ್ವ

Continue Reading

ಅಂಕಣ

ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಭಾಗ-6, ನಿಮ್ಮದೂ ಒಂದು ಯಶೋಗಾಥೆ ಯಾಕಾಗಬಾರದು?

ರಾಜ ಮಾರ್ಗ ಅಂಕಣ: ಇಲ್ಲಿರುವ ಒಂದೊಂದು ಯಶೋಗಾಥೆಯೂ ಸಾಧನೆಯಿಂದ ಅದ್ದಿ ತೆಗೆದದ್ದು. ಎಂಥೆಂಥ ಕಷ್ಟದ ಸನ್ನಿವೇಶಗಳಲ್ಲಿದ್ದರೂ ಸಾಧನೆ ಮಾಡಿದವರ ಕಥೆಗಳಿವು. ನಮಗೂ ಇವು ಸ್ಪೂರ್ತಿಯಾಗಲಿ.

VISTARANEWS.COM


on

Edited by

Koushik Acharya
ಕಾಲಿನಲ್ಲಿ ಪರೀಕ್ಷೆ ಬರೆದು 625ರಲ್ಲಿ 424 ಅಂಕ ಗಳಿಸಿದ ಬಂಟ್ವಾಳ ಕೌಶಿಕ್‌ ಆಚಾರ್ಯ.
Koo
RAJAMARGA

ಪ್ರೀತಿಯ ವಿದ್ಯಾರ್ಥಿಗಳೇ,
ರ‍್ಯಾಂಕ್ ಪಡೆದವರಿಗೆ ಹತ್ತು ತಲೆ, ಹತ್ತು ಮೆದುಳು ಖಂಡಿತವಾಗಿ ಇರುವುದಿಲ್ಲ! ದಿನಕ್ಕೆ 48 ಘಂಟೆಗಳೂ ಇರುವುದಿಲ್ಲ! ಅವರು ನಿಮ್ಮ, ನಮ್ಮ ಹಾಗೆ ಸಾಮಾನ್ಯ ವಿದ್ಯಾರ್ಥಿಗಳು. ಆದರೆ ಅವರು ಬೇಗನೇ ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳುತ್ತಾರೆ. ಒತ್ತಡವನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತಾರೆ. ಪ್ರಶ್ನೆಗಳನ್ನು ಚೆನ್ನಾಗಿ ಓದುವ ಸಾಮರ್ಥ್ಯ ಹೊಂದಿರುತ್ತಾರೆ. ಪರೀಕ್ಷಾ ಕೊಠಡಿಯ ಒತ್ತಡವನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತಾರೆ. ಪ್ರಶ್ನೆಗಳಿಗೆ ಟು ದ ಪಾಯಿಂಟ್ ಉತ್ತರ ಬರೆಯುತ್ತಾರೆ. ಬರೆದಾದ ನಂತರ ತುಂಬಾನೇ ಜಾಗರೂಕತೆಯಿಂದ ಉತ್ತರವನ್ನು ಚೆಕ್ ಮಾಡುತ್ತಾರೆ. ಪರೀಕ್ಷಾ ಕೊಠಡಿಯಲ್ಲಿ ತುಂಬಾ ಚೆನ್ನಾಗಿ ಸಮಯ ನಿರ್ವಹಣೆ ಮಾಡುತ್ತಾರೆ. ತುಂಬಾ ಅದ್ಭುತವಾದ ಆತ್ಮವಿಶ್ವಾಸ ಹೊಂದಿರುತ್ತಾರೆ ಅಷ್ಟೇ!

ಇದು ನಿಮ್ಮಿಂದಲೂ ಸಾಧ್ಯ ಇದೆ ಅಂದರೆ ನೀವು ನನ್ನ ಮುಂದಿನ ವರ್ಷಗಳ ತರಬೇತಿಯಲ್ಲಿ ಎಸ್ಸೆಸ್ಸೆಲ್ಸಿ ಯಶೋಗಾಥೆಗಳಾಗಿ ಸ್ಥಾನ ಪಡೆಯುತ್ತೀರಿ.

ಇನ್ನಷ್ಟು ಯಶೋಗಾಥೆಗಳು ನಿಮ್ಮ ಮುಂದೆ…..

11) ಅವರೆಲ್ಲ ನೃತ್ಯ, ಸಂಗೀತ, ನಾಟಕ ಎಲ್ಲದರಲ್ಲೂ ಇದ್ದರು.. ಕಲಿಕೆಯಲ್ಲೂ!
ಕಳೆದ ವರ್ಷ ಮೂಡಬಿದ್ರೆಯ ಆಳ್ವಾಸ್ ಪ್ರೌಢಶಾಲೆಯಿಂದ ಐದು ವಿದ್ಯಾರ್ಥಿಗಳು 625/625 ಅಂಕ ಪಡೆದರು. ಅವರೆಲ್ಲರೂ ಇಡೀ ವರ್ಷ ನೃತ್ಯ, ಸಂಗೀತ, ಯಕ್ಷಗಾನ, ನಾಟಕ ಮೊದಲಾದ ಸಾಂಸ್ಕೃತಿಕ ವಿಭಾಗಗಳಲ್ಲಿ ಸಕ್ರಿಯರಾಗಿ ಇದ್ದವರು. ಕ್ರೀಡೆಯಲ್ಲಿಯೂ ಸಾಧನೆ ಮಾಡಿದ್ದರು. ಅದ್ಯಾವುದೂ ಅವರಿಗೆ ಅಂಕ ಪಡೆಯಲು ಹಿನ್ನಡೆ ಆಗಲಿಲ್ಲ!

12) ಅಮ್ಮನ ಹೆಣ ಡಿಕ್ಕಿಯಲ್ಲಿತ್ತು, ಅಪ್ಪ ಕಾರಿನಲ್ಲಿ ಸುತ್ತಾಡಿಸುತ್ತಿದ್ದ!
ಶಿವಮೊಗ್ಗದ ಒಬ್ಬ ಅದ್ಭುತ ಹುಡುಗಿ 625/625 ಅಂಕಗಳನ್ನು ಪಡೆದು ಭಾರಿ ದೊಡ್ಡ ಸಾಧನೆ ಮಾಡಿದ್ದಳು. ದೊಡ್ಡ ಸಾಧನೆ ಏನೆಂದರೆ ಅವಳ ಜೀವನದಲ್ಲಿ ಆ ವರ್ಷ ದುರಂತ ಒಂದು ನಡೆದು ಹೋಗಿತ್ತು. ಅವಳ ಅಪ್ಪ ಆ ಊರಿನ ಬಹಳ ದೊಡ್ಡ ಸರ್ಜನ್ ಆಗಿದ್ದವನು ತನ್ನ ಹೆಂಡತಿಯನ್ನು ಯಾವುದೋ ಕಾರಣಕ್ಕೆ ಕೊಲೆ ಮಾಡಿದ್ದನು. ಹೆಂಡತಿಯ ಹೆಣವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿ ಹಾಸ್ಟೆಲಿನಿಂದ ಮಗಳನ್ನು ಕರೆದುಕೊಂಡು ಇಡೀ ರಾತ್ರಿ ಕಾರಿನಲ್ಲಿ ಸುತ್ತಾಡಿಸಿದ್ದಾನೆ. ಡಿಕ್ಕಿಯಲ್ಲಿ ಅಮ್ಮನ ಹೆಣ ಇರುವುದು ಮಗಳಿಗೆ ಗೊತ್ತೇ ಇರಲಿಲ್ಲ! ಬೆಳಿಗ್ಗೆ ಅಪ್ಪ ಅರೆಸ್ಟ್ ಆಗಿದ್ದಾನೆ!
ಅಮ್ಮನ ಹೆಣವನ್ನು ಅಂಗಳದಲ್ಲಿ ಇಟ್ಟುಕೊಂಡು ಇಡೀ ಕುಟುಂಬ ಕಣ್ಣೀರು ಹಾಕಿತ್ತು. ಹುಡುಗಿ ಚೇತರಿಸಿಕೊಳ್ಳಲು ಮೂರು ದಿನಗಳು ಬೇಕಾದವು. ಮುಂದೆ ಅಜ್ಜಿಯ ಪ್ರೀತಿ ಪಡೆದ ಆ ಹುಡುಗಿ ಅಮ್ಮನ ಫೋಟೋವನ್ನು ದೇವರ ಫೋಟೋದ ಪಕ್ಕ ಇಟ್ಟುಕೊಂಡು ನಮಸ್ಕಾರ ಮಾಡಿ ಓದಲು ಆರಂಭ ಮಾಡಿದ್ದಳು. ಆಕೆಗೂ 625/625 ಅಂಕ ಬಂತು! ನಾನು ನೋಡಿದ್ದ ಅತೀ ದೊಡ್ಡ ಮಿರಾಕಲ್ ಅದು!

13) ಅವನಿಗೆ ಕಣ್ಣೇ ಕಾಣುತ್ತಿರಲಿಲ್ಲ! ಆದರೆ ರಾಜ್ಯಕ್ಕೆ 10ನೇ ರ‍್ಯಾಂಕ್‌!
ಇನ್ನೊಬ್ಬ ಮಿರಾಕಲ್ ನಿಮಗೆ ಪರಿಚಯ ಮಾಡಬೇಕು. ಆತ ನನ್ನ ಟಿವಿ ಕಾರ್ಯಕ್ರಮಕ್ಕೆ ಸಂದರ್ಶನಕ್ಕೆ ಬಂದಿದ್ದ. 615/625 ಅಂಕಗಳು. ರಾಜ್ಯಕ್ಕೆ ಹತ್ತನೇ ರ‍್ಯಾಂಕ್. ಆಶ್ಚರ್ಯ ಅಂದರೆ ಅವನಿಗೆ ಎರಡೂ ಕಣ್ಣು ಕಾಣುತ್ತಲೇ ಇರಲಿಲ್ಲ. ಆತ ಹುಟ್ಟು ಕುರುಡ. ಆತನ ತಂಗಿ ಕೂಡ ಕುರುಡಿ. ಅಮ್ಮ ಆ ಇಬ್ಬರು ಮಕ್ಕಳನ್ನು ಬಹಳ ಕಷ್ಟದಲ್ಲಿ ಬೆಳೆಸಿದವರು. ಆಗ ಡಾಕ್ಟರ್ ಮೋಹನ್ ಆಳ್ವ ಆ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುತ್ತಿದ್ದರು.

ಇವನ ಕಷ್ಟಗಳ ಮುಂದೆ ನಮ್ಮದೇನೂ ಇಲ್ಲ ಆದರೆ ಅವನಿಗೆ ಇದು ಏನೂ ಅಲ್ಲ

ಅವನು ಹೇಳುವ ಪ್ರಕಾರ ಆತನಿಗೆ ಬೋರ್ಡ್ ಕಾಣಿಸುತ್ತಿರಲಿಲ್ಲ. ಅವನು ಮೊದಲ ಬೆಂಚಿನಲ್ಲಿ ಕೂತು ಪಾಠವನ್ನು ಕೇಳುತ್ತ ಬ್ರೈಲ್ ಲಿಪಿಯಲ್ಲಿ ನೋಟ್ಸ್ ಮಾಡುತ್ತಿದ್ದನು. ಆಗಲೇ ಅವನು ಟೇಪ್ ರೆಕಾರ್ಡರ್ ಬಳಸಿಕೊಂಡು ಅವನು ಅಧ್ಯಾಪಕರ ಪಾಠವನ್ನು ಪೂರ್ತಿ ರೆಕಾರ್ಡಿಂಗ್ ಮಾಡಿಕೊಳ್ಳುತ್ತಿದ್ದ. ಹಾಸ್ಟೆಲ್ ರೂಮಿಗೆ ಹೋಗಿ ಆ ಪಾಠವನ್ನು ಮತ್ತೆ ಮತ್ತೆ ಕೇಳುತ್ತಾ ಲಾಪ್‌ಟಾಪ್ ನಲ್ಲಿ ಬ್ರೈಲ್ ಲಿಪಿಯಲ್ಲಿ ನೋಟ್ಸ್ ಮಾಡುತ್ತಿದ್ದನು. ಸತತ ಸಾಧನೆಯ ಮೂಲಕ ಅವನು ರಾಜ್ಯಕ್ಕೆ ಹತ್ತನೇ ರ‍್ಯಾಂಕ್ ಪಡೆದಿದ್ದಾನೆ!

14) ಅವಳಿಗೆ ಅಪ್ಪ ಇಲ್ಲ. ಅಮ್ಮನ ಮಾನಸಿಕ ಆರೋಗ್ಯವೇ ಸರಿ ಇಲ್ಲ
ಉಡುಪಿಯ ಕೋಟಾ ವಿವೇಕ ಪದವಿಪೂರ್ವ ಕಾಲೇಜಿನ ಒಬ್ಬಳು ಹುಡುಗಿ 623/625 ಅಂಕ ಪಡೆದು ರಾಜ್ಯಕ್ಕೆ ಮೂರನೇ ರ‍್ಯಾಂಕ್‌ ಪಡೆದಿದ್ದಳು. ನನ್ನ ಟಿವಿ ಕಾರ್ಯಕ್ರಮಕ್ಕೆ ಬಂದಿದ್ದಳು. ಅವಳಿಗೆ ಅಪ್ಪ ಇಲ್ಲ. ಅಮ್ಮ ಹಲವು ಮನೆಗಳಲ್ಲಿ ಕೆಲಸ ಮಾಡಿ ಮಗಳನ್ನು ಸಾಕುತ್ತಿದ್ದಾರೆ. ಸಣ್ಣ ಒಂದು ಬಾಡಿಗೆ ಮನೆ ಅವರದ್ದು. ಅವಳ ಅಮ್ಮ ಜೀವನದಲ್ಲಿ ಹೆಚ್ಚು ನೋವನ್ನು ತೆಗೆದುಕೊಂಡು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ನನಗೆ ಆ ಕಾಲೇಜಿನ ಪ್ರಾಂಶುಪಾಲರು ಹೇಳಿದ್ದರು. ಅವರ ಮನೆಯವರಿಗೆ ಅಧ್ಯಾಪಕರು ಬಿಟ್ಟರೆ ಬೇರೆ ಯಾರೂ ಸಪೋರ್ಟ್ ಇಲ್ಲ. ಆದರೂ ಆ ಹುಡುಗಿ ರಾಜ್ಯಕ್ಕೆ ಮೂರನೇ ರ‍್ಯಾಂಕ್‌ ಪಡೆದಿದ್ದಾಳೆ!

15) ಅವಳಿಗೆ ಒಂದು ವಾಕ್ಯ ಮಾತನಾಡಲು ಎರಡು ನಿಮಿಷ ಬೇಕು.. ಆದರೆ,
ಇನ್ನೊಬ್ಬ ಹುಡುಗಿ ಅಂಕೋಲಾ ತಾಲೂಕಿನವಳು. ಅತ್ಯಂತ ಸುಂದರವಾದ ಹುಡುಗಿ. ಪ್ರೈಮರಿ ಶಾಲೆಯ ಶಿಕ್ಷಕಿಯ ಮಗಳು. 616/625 ಅಂಕ ಪಡೆದ ಅವಳು ರಾಜ್ಯಕ್ಕೇ ಒಂಬತ್ತನೇ ರಾಂಕ್. ಆಶ್ಚರ್ಯ ಅಂದರೆ ಅವಳಿಗೆ ಎರಡೂ ಕಿವಿಗಳು ಕೇಳುವುದಿಲ್ಲ! ತುಂಬಾ ಉಗ್ಗುವಿಕೆ ಇರುವ ಕಾರಣ ಮಾತು ತುಂಬಾ ನಿಧಾನ! ಒಂದು ವಾಕ್ಯ ಪೂರ್ತಿ ಮಾಡಲು ಅವಳು ಕನಿಷ್ಠ ಒಂದೆರಡು ನಿಮಿಷ ತೆಗೆದುಕೊಳ್ಳುತ್ತಾಳೆ! ಆದರೆ ಸಮಸ್ಯೆ ಇರುವುದು ಕಿವಿಯದ್ದು. ಅವಳ ಅಮ್ಮ ಹೇಳುವ ಪ್ರಕಾರ ಅವಳಿಗೆ 10% ಮಾತ್ರ ಕಿವಿ ಕೇಳುತ್ತದೆ. ಸ್ಪೆಷಲ್ ಇಯರ್ ಫೋನ್ ಹಾಕಿದಾಗ 20-30% ಮಾತ್ರ ಕೇಳುತ್ತದೆ! ಅದಕ್ಕಾಗಿ ಅವಳು ಮುಂದಿನ ಬೆಂಚಿನಲ್ಲಿ ಕುಳಿತು ಮೊಬೈಲಿನಲ್ಲಿ ಶಿಕ್ಷಕರು ಮಾಡಿದ ಪಾಠ ರೆಕಾರ್ಡ್ ಮಾಡಿಕೊಳ್ಳುತ್ತಾಳೆ. ಮನೆಗೆ ಹೋಗಿ ಆ ಪಾಠವನ್ನು ಹಲವಾರು ಬಾರಿ ಕೇಳಿ ನೋಟ್ಸ್ ಮಾಡುತ್ತಾಳೆ. ಮುದ್ದಾದ ಅಕ್ಷರ ಅವಳದ್ದು. ಆ ಹುಡುಗಿಯನ್ನು ಕೂಡ ನಾನು ಮಿರಾಕಲ್ ಎಂದು ಕರೆಯುತ್ತೇನೆ!

ಕಿವಿ ಕೇಳದಿದ್ದರೇನಂತೆ ಬದುಕಿನ ಗುರಿ ಸ್ಪಷ್ಟವಿದೆ

16) ಕುರಿ ಮೇಯಿಸುತ್ತಿದ್ದ ಹುಡುಗ ಶಾಲೆ ಆರಂಭಿಸಿದ್ದೇ ಮೂರನೇ ಕ್ಲಾಸಿಂದ!
ಇನ್ನೊಬ್ಬ ಹುಡುಗ ಬಯಲು ಸೀಮೆಯವನು. ಅವನ ಅಪ್ಪ ಅಮ್ಮ ಇಬ್ಬರೂ ಅನಕ್ಷರಸ್ಥರು. ಅವನೂ ಒಂಬತ್ತು ವರ್ಷಗಳವರೆಗೆ ಕುರಿಗಳನ್ನು ಮೇಯಿಸಿಕೊಂಡು ಇದ್ದವನು. ಮುಂದೆ ಯಾರೋ ಅವನನ್ನು ಶಾಲೆಗೆ ಕರೆದುಕೊಂಡು ಮೂರನೇ ತರಗತಿಗೆ ಸೇರಿಸುತ್ತಾರೆ. ಅದು ಸರಕಾರಿ ಶಾಲೆ, ಕನ್ನಡ ಮಾಧ್ಯಮ. ಆದರೆ ಆ ಹುಡುಗ ಅದ್ಭುತವಾಗಿ ಚೇತರಿಸಿಕೊಂಡ. ಕಲಿಯುವ ಸಾಮರ್ಥ್ಯವು ಹೆಚ್ಚಾಯಿತು. ಅಧ್ಯಾಪಕರ ಪ್ರೋತ್ಸಾಹ ದೊರೆಯಿತು. ಆ ಹುಡುಗನು 618/625 ಅಂಕ ತೆಗೆದುಕೊಂಡ ವರದಿ ಬಂದಿದೆ!

17) ಕನಿಷ್ಠ ಪರೀಕ್ಷೆ ಬರೆಯಲೂ ಅವನಿಗೆ ಕೈಗಳೇ ಇರಲಿಲ್ಲ!
ಕರಾವಳಿ ಜಿಲ್ಲೆಯ ಒಬ್ಬ ಹುಡುಗನಿಗೆ ಎರಡೂ ಕೈಗಳು ಇಲ್ಲದೆ ಹೋದಾಗ ಅವನು ತನ್ನ ಕಾಲಿನ ಬೆರಳುಗಳ ನಡುವೆ ಪೆನ್ನು ಹಿಡಿದು ಎಸೆಸೆಲ್ಸಿ ಪರೀಕ್ಷೆಗೆ ಬರೆದು ಉತ್ತಮ ಅಂಕ ಪಡೆದಿದ್ದ. ಎಲ್ಲ ಪತ್ರಿಕೆಗಳಲ್ಲಿಯು ಅದು ಮುಖಪುಟ ನ್ಯೂಸ್ ಆಗಿತ್ತು. ಸ್ವತಃ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ಅವರು ಆತನ ಮನೆಗೆ ಬಂದು ಆತನನ್ನು ಅಭಿನಂದನೆ ಮಾಡಿ ಹೋಗಿದ್ದರು.

ಭರತವಾಕ್ಯ – ನನ್ನ ಹತ್ತಿರ ಈ ರೀತಿಯ ನೂರಾರು ಯಶೋಗಾಥೆಗಳು ಇವೆ. ನನ್ನ ತರಬೇತಿ ಕಾರ್ಯಕ್ರಮದಲ್ಲಿ ನನಗೆ ಪ್ರತೀ ಊರಲ್ಲಿಯೂ ಇಂತಹ ಪ್ರತಿಭೆಗಳು ದೊರೆಯುತ್ತವೆ. ಅವರಿಗೆಲ್ಲ ನಮ್ಮದೊಂದು ಸೆಲ್ಯೂಟ್ ಇರಲಿ. ಮುಂದಿನ ವರ್ಷದ ನನ್ನ ತರಬೇತಿಯಲ್ಲಿ ನಿಮ್ಮ ಸಾಧನೆಯೂ ಒಂದು ಅದ್ಭುತ ಯಶೋಗಾಥೆಯಾಗಿ ಸ್ಥಾನವನ್ನು ಪಡೆಯಲಿ!
(ಮುಂದುವರಿಯುವುದು)

ಇವುಗಳನ್ನೂ ಓದಿ: ಸರಣಿಯ ಹಿಂದಿನ ಲೇಖನಗಳು

Continue Reading

ಅಂಕಣ

ರಾಜ ಮಾರ್ಗ ಅಂಕಣ: ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಭಾಗ-5, ನೀವೂ ಈ ಯಶೋಗಾಥೆಗಳ ಗುಂಪಿಗೆ ಸೇರಬಹುದು!

ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ಮಕ್ಕಳ ಮುಂದೆ, ಅವರ ಹೆತ್ತವರ ಮುಂದೆ ಕೆಲವೊಂದು ಯಶೋಗಾಥೆಗಳನ್ನು ತೆರೆದಿಟ್ಟಿದ್ದಾರೆ ಲೇಖಕರು. ನಿಮ್ಮ ಮಗ/ಮಗಳೂ ಈ ಪಟ್ಟಿ ಸೇರಲು ಎಲ್ಲ ಅವಕಾಶಗಳಿವೆ.

VISTARANEWS.COM


on

Edited by

Ranjan Bhadravati
ಎಸ್ಸೆಸೆಲ್ಸಿ ಬೋರ್ಡಿನ ಇತಿಹಾಸದಲ್ಲಿ ಮೊದಲ ಬಾರಿಗೆ 625/625 ಅಂಕ ಪಡೆದ ಭದ್ರಾವತಿಯ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ವಿದ್ಯಾರ್ಥಿ ರಂಜನ್‌ಗೆ ಅಮ್ಮನ ಸಿಹಿಮುತ್ತು (2016).
Koo

ನಾವು ಸಣ್ಣವರಿದ್ದಾಗ ಎಸ್ಸೆಸ್ಸೆಲ್ಸಿ, ಪಿಯುಸಿಗಳ ರ‍್ಯಾಂಕ್‌ ಘೋಷಣೆ ಆದಾಗ ಅವರನ್ನು ಬೆರಗು ಕಣ್ಣುಗಳಿಂದ ನೋಡುವುದೇ ಒಂದು ಸಂಭ್ರಮ! ಆಗೆಲ್ಲ ದೂರದರ್ಶನದಲ್ಲಿ ಅಂತಹ ಒಂದೆರಡು ಮಕ್ಕಳ ಸಂದರ್ಶನಗಳು ಪ್ರಸಾರ ಆಗುತ್ತಿದ್ದವು. ಮರುದಿನದ ಎಲ್ಲ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳ ಫೋಟೊಸ್, ಅವರ ಹೆತ್ತವರು ಸಿಹಿ ತಿನಿಸುವ ಭಾವಚಿತ್ರಗಳು ನಮಗಂತೂ ಭಾರೀ ಕ್ರೇಜ್‌ ಹುಟ್ಟಿಸುತ್ತಿದ್ದವು! ಆಗ ಎಸ್ಸೆಸ್ಸೆಲ್ಸಿ, ಪಿಯುಸಿ ಬೋರ್ಡಿನವರು ಕೇವಲ ಹತ್ತು ರ‍್ಯಾಂಕ್‌ ಕೊಡುತ್ತಿದ್ದರು ಮತ್ತು ಅವುಗಳಲ್ಲಿ ಸಿಂಹಪಾಲು ರ‍್ಯಾಂಕ್‌ಗಳನ್ನು ಬೆಂಗಳೂರಿನ ಎರಡು ಪ್ರತಿಷ್ಠಿತವಾದ ಕಾಲೇಜುಗಳು ಬಾಚಿಕೊಳ್ಳುತ್ತಿದ್ದವು!

ರ‍್ಯಾಂಕ್‌ ಪಡೆದವರು ರಾತ್ರಿ ಹಗಲಾಗುವ ಹೊತ್ತಿಗೆ ಸೆಲೆಬ್ರಿಟಿ ಆಗುತ್ತಿದ್ದರು!

ಯಾರಾದ್ರೂ ಒಬ್ಬ ರ‍್ಯಾಂಕ್‌ ಪಡೆದನು/ ಪಡೆದಳು ಎಂದಾದರೆ ಅವರು ರಾತ್ರಿ ಹಗಲು ಆಗುವುದರೊಳಗೆ ಸೆಲೆಬ್ರಿಟಿ ಆಗಿ ಬಿಡುತ್ತಿದ್ದರು! ಅದರಲ್ಲಿ ಕೂಡ ಎಸೆಸೆಲ್ಸಿ ರ‍್ಯಾಂಕ್‌ ಪಡೆಯುವವರು ಎಲ್ಲರೂ ಆಂಗ್ಲ ಮಾಧ್ಯಮದ ಮಕ್ಕಳೇ ಆಗಿರುತ್ತಿದ್ದರು! ಈ ಅಪವಾದವನ್ನು ನಿವಾರಣೆ ಮಾಡಲು ಬೋರ್ಡು ಇಂಗ್ಲಿಷ್ ಮಾಧ್ಯಮಕ್ಕೆ ಹತ್ತು, ಕನ್ನಡ ಮಾಧ್ಯಮಕ್ಕೆ ಹತ್ತು.. ಹೀಗೆ ಇಪ್ಪತ್ತು ರ‍್ಯಾಂಕ್‌ಗಳನ್ನು ನೀಡಲು ಆರಂಭ ಮಾಡಿತು. ಮುಂದೆ ಕನ್ನಡ ಮಾಧ್ಯಮಕ್ಕೆ 20 ಮತ್ತು ಇಂಗ್ಲಿಷ್ ಮಾಧ್ಯಮಕ್ಕೆ 20 ಹೀಗೆ ರ‍್ಯಾಂಕ್‌ ಕೊಡಲು ಆರಂಭ ಮಾಡಿತು. ಆಗೆಲ್ಲ ನಮ್ಮ ಸುತ್ತಮುತ್ತಲಿನ ವಿದ್ಯಾರ್ಥಿಗಳು ರ‍್ಯಾಂಕ್‌ ಪಡೆಯಲು ಆರಂಭ ಮಾಡಿದರು. ಆಗೆಲ್ಲ ರ‍್ಯಾಂಕ್‌ ಪಡೆಯಲು ಅಡ್ಡ ದಾರಿಗಳು ಆರಂಭವಾದವು ಎನ್ನುವ ಕೂಗಿನ ನಡುವೆ ಕೂಡ ಮಕ್ಕಳ ಪ್ರತಿಭೆಗಳ ಬಗ್ಗೆ ಇರುವ ನಮ್ಮ ಉತ್ಕಟ ಅಭಿಮಾನ ಕಡಿಮೆ ಆಗಲೇ ಇಲ್ಲ. ಅದು ಕಡಿಮೆ ಆಗುವ ಕ್ರೇಜ್ ಅಲ್ಲವೇ ಅಲ್ಲ!

ಮುಂದೊಂದು ದಿನ ಎಸೆಸೆಲ್ಸಿ, ಪಿಯುಸಿ ರ‍್ಯಾಂಕ್‌ಗಳು ರದ್ದಾದವು!

ಈ ರ‍್ಯಾಂಕ್‌ ಪಡೆಯುವ ರೇಸಲ್ಲಿ ಮಕ್ಕಳ ಮೇಲೆ ಒತ್ತಡ ಹೆಚ್ಚಾಗುತ್ತಾ ಇದೆ ಮತ್ತು ಶಾಲೆಗಳು ಅಡ್ಡ ದಾರಿಯನ್ನು ಹಿಡಿಯುತ್ತಾ ಇವೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಎರಡೂ ಬೋರ್ಡ್‌ಗಳು ರ‍್ಯಾಂಕ್‌ ಪದ್ಧತಿ ಕೈಬಿಟ್ಟವು. ಆದರೆ ಶಾಲೆಗಳು ರಾಜ್ಯಕ್ಕೆ ಪ್ರಥಮ, ರಾಜ್ಯಕ್ಕೆ ದ್ವಿತೀಯ, ಜಿಲ್ಲೆಗೆ ಪ್ರಥಮ, ತಾಲೂಕಿಗೆ ಪ್ರಥಮ…….ಹೀಗೆಲ್ಲ ಘೋಷಿಸಿಕೊಳ್ಳುವುದನ್ನು ಬಿಡಲೇ ಇಲ್ಲ! ನಮ್ಮ ಶಾಲೆಗಳಿಗೆ ಅವರ ಮಕ್ಕಳ ಪ್ರತಿಭೆಗಳಿಗಿಂತ ತಮ್ಮ ಶಾಲೆಗಳನ್ನು ಮಾರ್ಕೆಟ್ ಮಾಡೋದೇ ಆದ್ಯತೆ ಆಗಿತ್ತು ಅನ್ನುವುದನ್ನು ಒಪ್ಪಲೇ ಬೇಕು. ಏನಿದ್ದರೂ ರ‍್ಯಾಂಕ್‌ ಪಡೆಯುವುದು ಕೂಡ ಒಂದು ಅನನ್ಯ ಪ್ರತಿಭೆ ಎಂದು ನಾನು ಒಪ್ಪಿಕೊಳ್ಳುತ್ತೇನೆ.

2016ರಲ್ಲಿ ಭದ್ರಾವತಿಯ ರಂಜನ್ ಧೂಳೆಬ್ಬಿಸಿದ!

ಆ ವರ್ಷ ಎಸೆಸೆಲ್ಸಿ ಫಲಿತಾಂಶ ಘೋಷಣೆ ಆದಾಗ ಇಡೀ ರಾಜ್ಯಕ್ಕೇ ಒಂದು ಶಾಕ್ ಕಾದಿತ್ತು! ಭದ್ರಾವತಿಯ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಆಗಿದ್ದ ರಂಜನ್ ಎಸ್ಸೆಸೆಲ್ಸಿ ಬೋರ್ಡಿನ ಇತಿಹಾಸದಲ್ಲಿ ಮೊದಲ ಬಾರಿಗೆ 625/625 ಅಂಕ ಪಡೆದಿದ್ದ! ಆಗ ನಾನು ಸ್ಪಂದನ ಟಿವಿ ಸ್ಟುಡಿಯೋದಿಂದ ಅವನ ಜೊತೆಗೆ ಲೈವಲ್ಲಿ ಕಾಲ್ ಮಾಡಿ ಮಾತಾಡಿದ್ದೆ! ಮರುದಿನ ಕರ್ನಾಟಕದ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ರಂಜನ್ ಫೋಟೊ ವಿಜೃಂಭಿಸಿತ್ತು! ಅವನನ್ನು ಮುಖ್ಯಮಂತ್ರಿಗಳು ಬೆಂಗಳೂರಿಗೆ ಕರೆಸಿ ಸನ್ಮಾನ ಮಾಡಿದ್ದು ಆ ಕಾಲಕ್ಕೆ ಬಹಳ ದೊಡ್ಡ ಸುದ್ದಿ! ಸಾಕಷ್ಟು ಕುಹಕಿಗಳು ಅದು ಹೇಗೆ ಸಾಧ್ಯ? ಎಂದು ಪ್ರಶ್ನೆಗಳನ್ನು ಮಾಡಿದ್ದರು.

ಕೋರ್ ವಿಷಯಗಳಲ್ಲಿ ಓಕೆ, ಆದರೆ ಭಾಷೆಗಳಲ್ಲಿ ಹೇಗೆ ಪೂರ್ತಿ ಅಂಕ ಕೊಡುತ್ತಾರೆ? ಎಂದೆಲ್ಲ ಕೇಳಿದಾಗ ಎಸ್ಸೆಸೆಲ್ಸಿ ಬೋರ್ಡ್ ಅವನ ಆರೂ ವಿಷಯಗಳ ಉತ್ತರ ಪತ್ರಿಕೆಗಳನ್ನು ತನ್ನ ಜಾಲತಾಣದಲ್ಲಿ ಪಬ್ಲಿಷ್ ಮಾಡಿತ್ತು! ಅವನ ಉತ್ತರ ಪತ್ರಿಕೆಯಲ್ಲಿ ಒಂದು ಅಂಕ ಕೂಡ ಕಟ್ ಮಾಡುವ ಅವಕಾಶವೇ ಇರಲಿಲ್ಲ! ಅನಿಲ್ ಕುಂಬ್ಳೆ ಹತ್ತಕ್ಕೆ ಹತ್ತು ವಿಕೆಟ್ ಪಡೆದಂತೆ ಇತ್ತು ರಂಜನ್ ಯಶೋಗಾಥೆ!

ಮುಂದೆ ಅದೇ ಬೆಂಚ್ ಮಾರ್ಕ್ ಆಯ್ತು!

ಮುಂದೆ ಎಸೆಸೆಲ್ಸಿ ಬೋರ್ಡ್ ರ‍್ಯಾಂಕ್‌ ಘೋಷಣೆ ಮಾಡಲಿ ಅಥವಾ ಬಿಡಲಿ ಮುಂದಿನ ವರ್ಷಗಳಲ್ಲಿ 625/625 ಅಂಕ ಪಡೆಯುವುದೇ ಒಂದು ಸಂಪ್ರದಾಯ ಆಗಿ ಹೋಯಿತು! ಮುಂದಿನ ವರ್ಷ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅದೇ ಸಾಧನೆ ರಿಪೀಟ್ ಮಾಡಿದರು. 2021ರಲ್ಲಿ 157 ವಿದ್ಯಾರ್ಥಿಗಳು, 2022ರಲ್ಲಿ 145 ವಿದ್ಯಾರ್ಥಿಗಳು ಔಟ್ ಆಫ್ ಔಟ್ ಸ್ಕೋರ್ ಪಡೆದಿದ್ದಾರೆ. ಇದು ಮೊದಲ ಫಲಿತಾಂಶ ಘೋಷಣೆ ಆದಾಗ ಪಡೆದ ಸಂಖ್ಯೆ ಆಗಿದೆ (ಮರುಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕ ಪಡೆದು ಈ ಸಾಧನೆ ಮಾಡಿದವರ ಸಂಖ್ಯೆ ಅಷ್ಟೇ ಇದೆ!). ಈಗ ನಮ್ಮ ಸುತ್ತಮುತ್ತಲಿನ ಶಾಲೆಯ ಮಕ್ಕಳೂ ಈ ಸಾಧನೆ ಮಾಡುವುದನ್ನು ನೋಡುವಾಗ ಮಕ್ಕಳ ಪ್ರತಿಭೆಗೆ ನಾವು ಸೆಲ್ಯೂಟ್ ಹೊಡೆಯದೆ ಇರಲು ಸಾಧ್ಯವೇ ಇಲ್ಲ!

ಕೊರೊನಾದ ವರ್ಷದಲ್ಲಿ ಸಾವಿರಾರು ಮಂದಿ ಫುಲ್ ಮಾರ್ಕ್ಸ್ ಪಡೆದರು!

ಒಂದು ವರ್ಷ ಕೊರೊನಾ ತೀವ್ರವಾಗಿದ್ದ ಸಂದರ್ಭದಲ್ಲಿ ಎಲ್ಲ ಪ್ರಶ್ನೆಗಳನ್ನು MCQ ಕೊಟ್ಟು ಬೋರ್ಡು ಪ್ರಯೋಗಾತ್ಮಕವಾಗಿ ಪರೀಕ್ಷೆ ಮಾಡಿತು. ಆ ವರ್ಷ ಪರೀಕ್ಷೆಯನ್ನು ಬರೆದ ಎಲ್ಲ ಮಕ್ಕಳೂ (ತಾಂತ್ರಿಕ ಕಾರಣಕ್ಕೆ ಒಬ್ಬನನ್ನು ಬಿಟ್ಟು) ಪಾಸಾದರು! ಅದಕ್ಕಿಂತ ಹೆಚ್ಚಾಗಿ ಆ ವರ್ಷ ಸಾವಿರಾರು ಮಕ್ಕಳು 625/625 ಅಂಕ ಪಡೆದರು ಮತ್ತು ಕೊರೊನಾಕ್ಕೆ ಥ್ಯಾಂಕ್ಸ್ ಹೇಳಿದರು!

ಇಂತಹ ಸಾಧನೆ ಮಾಡಿದ ನೂರಾರು ವಿದ್ಯಾರ್ಥಿಗಳನ್ನು ನಾನು ಟಿವಿಯಲ್ಲಿ ಸಂದರ್ಶನ ಮಾಡಿದ್ದು ಅವರಲ್ಲಿ ಕೆಲವರ ಮನೆಗಳಿಗೂ ಹೋಗಿದ್ದೇನೆ. ಅಂತಹವರ ಕೆಲವು ಯಶೋಗಾಥೆಗಳು ನಿಮ್ಮ ಮುಂದೆ……..
(ಕೆಲವರ ಹೆಸರು ನನಗೆ ಮರೆತುಹೋಗಿದೆ. ಇನ್ನೂ ಕೆಲವರ ಹೆಸರನ್ನು ಉದ್ದೇಶಪೂರ್ವಕ ಬಿಟ್ಟಿದ್ದೇನೆ)

ಎಸ್ಸೆಸ್ಸೆಲ್ಸಿಯ ಯಶೋಗಾಥೆಗಳು..

1) ರಾಯಚೂರಿನ ಕೃಷಿ ಕಾರ್ಮಿಕನ ಮಗಳು 625/625 ಅಂಕಗಳನ್ನು ಪಡೆದಳು. ಆಕೆ ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದವಳು!

2) ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಟ್ರಂಕ್ ಹೊರುವ ಹಮಾಲಿಯ ಮಗ 625/625 ಅಂಕ ಪಡೆದಿದ್ದ. ಅವನೂ ಸರಕಾರಿ ಶಾಲೆಯ ಕನ್ನಡ ಮಾಧ್ಯಮದ ಹುಡುಗ. ಯಾವ ಟ್ಯೂಷನ್ ಕ್ಲಾಸ್ ಕೂಡ ಹೋದವನು ಅಲ್ಲ!

3) ನನ್ನ ಟಿವಿ ಕಾರ್ಯಕ್ರಮಕ್ಕೆ ಬಂದಿದ್ದ ಅತ್ಯುತ್ತಮ ಶ್ರೇಣಿ ಪಡೆದಿದ್ದ ಹುಡುಗಿಯ ಮನೆಯಲ್ಲಿ ಕರೆಂಟ್ ಇರಲಿಲ್ಲ! ಆಕೆ ಕೂಡ ಕನ್ನಡ ಮಾಧ್ಯಮದ ಸರಕಾರಿ ಶಾಲೆಯ ಹುಡುಗಿ!

4) ನಾನು ಭೇಟಿ ಮಾಡಿದ ಶಿರಸಿಯ ಮುಸ್ಲಿಂ ಕುಟುಂಬದ ಹುಡುಗಿ ಕೂಡ 625/625 ಅಂಕ ಪಡೆದಿದ್ದಳು. ಆಕೆಯ ಅಪ್ಪ ಒಬ್ಬ ಸಾಮಾನ್ಯ ರಿಕ್ಷಾ ಚಾಲಕ ಆಗಿದ್ದರು. ಆಕೆ ಸರಕಾರಿ ಶಾಲೆಯ ಹುಡುಗಿ!

5) ಕುಮಟಾದ ಒಬ್ಬ ಟೆಂಪೋ ಚಾಲಕನ ಮಗಳು ಹಠ ಹಿಡಿದು ಓದಿ 625/625 ಅಂಕ ಪಡೆದು ಲೆಜೆಂಡ್ ಆಗಿದ್ದಳು. ಆಕೆ ಕೂಡ ಟ್ಯೂಶನ್ ಕ್ಲಾಸಿಗೆ ಹೋದವಳು ಅಲ್ಲ!

6) ದಕ್ಷಿಣ ಕನ್ನಡದ ಸುಬ್ರಹ್ಮಣ್ಯದ ಸಮೀಪದ ಒಬ್ಬ ಹುಡುಗ ಪ್ರತೀ ದಿನವೂ 4-5 ಕಿಲೋಮೀಟರ್ ಬೈಸಿಕಲ್ ತುಳಿದು ಶಾಲೆಗೆ ಬರುತ್ತಿದ್ದ ಮತ್ತು ಮನೆಯಿಂದ ಟಿಫಿನ್ ಬಾಕ್ಸ್ ತೆಗೆದುಕೊಂಡು ಬಂದು ಮಧ್ಯಾಹ್ನದ ಊಟ ಮಾಡುತ್ತಿದ್ದ! ಆತನು ಕೂಡ 625/625 ಅಂಕ ಪಡೆದು ಸ್ಟಾರ್ ಆಗಿದ್ದ!

7) ಮೂಡಬಿದ್ರೆಯ ಒಬ್ಬ ವಿದ್ಯಾರ್ಥಿ ಔಟ್ ಆಫ್ ಮಾರ್ಕ್ಸ್ ತೆಗೆದುಕೊಂಡಿದ್ದ. ಆತನು ಎಂಟನೇ ತರಗತಿಯಿಂದ ಕೂಡ ಪ್ರತೀ ಪರೀಕ್ಷೆಯಲ್ಲಿ ಒಂದು ಮಾರ್ಕ್ ಕಡಿಮೆ ತೆಗೆದುಕೊಂಡದ್ದೇ ಇಲ್ಲ ಎಂದು ಅವನ ಪ್ರಿನ್ಸಿಪಾಲ್ ನನಗೆ ಹೇಳಿದ್ದರು!

8) ಶಿವಮೊಗ್ಗದ ಒಬ್ಬ ಹುಡುಗ ಪರೀಕ್ಷೆ ಮುಗಿಸಿ ಬಂದವನೇ ತನಗೆ ಫುಲ್ ಮಾರ್ಕ್ ಎಂದು ಘೋಷಣೆ ಮಾಡಿದ್ದ. ಆತನು ಪ್ರತಿಭಾವಂತ ಆಗಿದ್ದರೂ ಆತನ ಮಾತು ಯಾರೂ ನಂಬಲಿಲ್ಲ! ರಿಸಲ್ಟ್ ಹಿಂದಿನ ದಿನವೇ 5 ಕಿಲೋ ಸ್ವೀಟ್ ತಂದು ಇಟ್ಟುಕೊಂಡಿದ್ದನು. ಅವನಿಗೂ ರಿಸಲ್ಟ್ ಬಂದಾಗ 625 ಅಂಕ ಬಂದಿತ್ತು!

9) ಮಲ್ಪೆಯ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕಳೆದ ವರ್ಷ ರಾಜ್ಯ ಮಟ್ಟದಲ್ಲಿ ಸುದ್ದಿ ಆದನು. ಅದಕ್ಕೆ ಕಾರಣ ಅವನು ಪ್ರತೀ ದಿನವೂ (ಎಸೆಸೆಲ್ಸಿ ವರ್ಷವೂ ಸೇರಿದಂತೆ) ತನ್ನ ಅಪ್ಪನ ಜೊತೆ ಬೋಟಲ್ಲಿ ಹೋಗಿ ಫಿಶಿಂಗ್ ಮಾಡುತ್ತಿದ್ದ! ಬೆಳಿಗ್ಗೆ ಎರಡು ಘಂಟೆ ಮತ್ತು ಸಂಜೆ ಒಂದು ಘಂಟೆ! ಅದೂ ಸರಕಾರಿ ಶಾಲೆಯ ಹಿನ್ನೆಲೆಯ ಹುಡುಗ!

10) ಮತ್ತೊಬ್ಬಳು ನಮ್ಮೂರಿನ ಪ್ರತಿಭಾವಂತ ವಿದ್ಯಾರ್ಥಿನಿ ಎಸೆಸೆಲ್ಸಿ ಪರೀಕ್ಷೆಯ ಹಿಂದಿನ ದಿನ ಬೆಂಗಳೂರಿಗೆ ಹೋಗಿ ಒಂದು ಖಾಸಗಿ ಸಂಸ್ಥೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದು ಇಡೀ ರಾತ್ರಿ ಜರ್ನಿ ಮಾಡಿಬಂದು ಪರೀಕ್ಷೆ ಬರೆದಿದ್ದಳು. ಆಕೆ ಪಡೆದ ಅಂಕಗಳು 623/625!

(ಮುಂದುವರಿಯುವುದು)

ಇವುಗಳನ್ನೂ ಓದಿ: ಸರಣಿಯ ಹಿಂದಿನ ಲೇಖನಗಳು

Continue Reading

ಅಂಕಣ

ದಶಮುಖ ಅಂಕಣ: ʻತಿರುತಿರುಗಿಯು ಹೊಸತಾಗಿರಿ ಎನುತಿದೆ ಋತುಗಾನ…ʼ

ಬೇಸಿಗೆಯ ತಾಪವನ್ನೆಲ್ಲಾ ಒಮ್ಮೆ ತಣ್ಣಗೆ ಕೂರಿಸಿ, ಅದರ ಮತ್ತೊಂದು ಮುಖದತ್ತ ದೃಷ್ಟಿ ಹರಿಸಿದರೆ ಕಾಣುವುದು, ವಸಂತನೆಂಬ ಅನಂಗ ಸಖ! ಹೊಸ ಹೊಳಪಿನಿಂದ ನಳನಳಿಸುವುದೇ ಈಗ ಪ್ರಕೃತಿಯ ನಿಯಮ!

VISTARANEWS.COM


on

Edited by

bangalore flowers
Koo

ಈ ಅಂಕಣವನ್ನು ಇಲ್ಲಿ ಕೇಳಿ:

alaka column

ʻಬಂದಿತಿದಿಗೋ ಬೇಸಿಗೆ, ಸಂದ ಸಮಯದ ಕೊರಗ ಕಳೆಯುತ ಮಂದಿಯೆಲ್ಲರ ಲೇಸಿಗೆʼ ಎಂಬ ಬೇಸಿಗೆಯ ತಂಪನ್ನು ವರ್ಣಿಸುವ ಕವಿವಾಣಿಯನ್ನು ಕೇಳಿದವರು, ಈಗಾಗಲೇ ಸೂರ್ಯ ಝಳಪಿಸುತ್ತಿರುವ ತಾಪದ ಮೊನೆಯನ್ನು ತೋರಿಸಿ ಹುಬ್ಬು ಗಂಟಿಕ್ಕಿದರೆ ತಪ್ಪಲ್ಲ. ಬೇಸಿಗೆ ಎನ್ನುತ್ತಿದ್ದಂತೆ ಬಿಸಿಲು, ಬೇಗೆ, ಬವಣೆ, ಬೆವರು, ಬಾಯಾರಿಕೆ, ಬಳಲಿಕೆ, ಬರ ಮುಂತಾದ ʻಬʼರ-ಪೂರವನ್ನೇ ಹರಿಸಬಹುದು. ಆದರೆ ಬೇಸಿಗೆಯ ತಾಪವನ್ನೆಲ್ಲಾ ಒಮ್ಮೆ ತಣ್ಣಗೆ ಕೂರಿಸಿ, ಅದರ ಮತ್ತೊಂದು ಮುಖದತ್ತ ದೃಷ್ಟಿ ಹರಿಸಿದರೆ ಕಾಣುವುದು, ವಸಂತನೆಂಬ ಅನಂಗ ಸಖ! ಚೈತ್ರಮಾಸ, ಮಧುಮಾಸ, ಶೃಂಗಾರಮಾಸ ಮುಂತಾದ ಹೆಸರುಗಳೆಲ್ಲಾ ಈ ಚತುರ ವಸಂತನ ಸಹವರ್ತಿಗಳದ್ದೇ. ಅರವಿಂದ, ಅಶೋಕ, ಚೂತ, ನವಮಲ್ಲಿಕೆ ಮತ್ತು ನೀಲೋತ್ಪಲಗಳೆಂಬ ಅನಂಗನ ಬಾಣ ಪಂಚಕಗಳು ಪರಿಣಾಮ ಬೀರುವುದಕ್ಕೆ ವಸಂತ ಆಗಮಿಸಲೇ ಬೇಕು- ಎಂಬಲ್ಲಿಗೆ ಪ್ರಕೃತಿಯ ಮೇಲೆ ಆತನ ಪ್ರಭಾವವೇನು ಎಂಬುದು ಸ್ಫುಟವಾಗುತ್ತದೆ.

ಈ ಬಾರಿ ಎಂದಿನಂತೆ ಇಲ್ಲದಿದ್ದರೂ, ಸಾಮಾನ್ಯವಾಗಿ ವಸಂತವೆಂದರೆ ಹಿತವಾದ ಕಾಲ. ಚಳಿಯ ಆರ್ಭಟವೆಲ್ಲಾ ಮುಗಿದಿದೆ, ಆದರೆ ಬಿಸಲಿನ ಪ್ರಕೋಪವಿನ್ನೂ ಜೋರಾಗಿಲ್ಲ ಎಂಬಂಥ ದಿನಗಳು. ಹಾಗೆಂದೇ ಈಗ ಸುಲಿಯುವ ತುಟಿಗಳು, ಒಡೆಯುವ ಹಿಮ್ಮಡಿಗಳು, ಬಿರಿಯುವ ಕೈಕಾಲುಗಳೆಲ್ಲಾ ಮಾರ್ಪಾಡಾಗಿ, ಪ್ರಕೃತಿಯ ನಿಯಮದಂತೆ ಹೊಸ ಹೊಳಪಿನಿಂದ ನಳನಳಿಸುತ್ತವೆ. ಉದುರಿ ಬೋಳಾಗಿ ಬೋಳುಗಳಚಿ ನಿಂತಿದ್ದ ಭೂಮಿಯೂ ಹಸಿರುಡುವ ಹೊತ್ತು. ಹಸಿರೆಂದರೇನು ಒಂದೇ ಬಣ್ಣವೇ? ಎಳೆ ಹಸಿರು, ತಿಳಿ ಹಸಿರು, ಗಿಳಿ ಹಸಿರು, ಸುಳಿ ಹಸಿರು, ಪಾಚಿ ಹಸಿರು, ಪಚ್ಚೆ ಹಸಿರು, ಅಚ್ಚ ಹಸಿರು, ಹಳದಿ ಮಿಶ್ರಿತ ನಿಂಬೆ ಹಸಿರು, ನೀಲಿ ಮಿಶ್ರಿತ ವೈಢೂರ್ಯದ ಹಸಿರು- ಒಂದೇ ವರ್ಣದಲ್ಲಿ ಎಷ್ಟೊಂದು ಛಾಯೆಗಳು! ಈ ಪರಿಯ ಹಸಿರಿನ ನಡುವೆ ನಾನಾ ವರ್ಣ ಮತ್ತು ವಿನ್ಯಾಸಗಳ ಹೂ-ಮಿಡಿಗಳ ವೈಭೋಗ. ಶಿಶಿರ ಸುರಿಯುವ ಕಸಿವಿಸಿಯನ್ನು ಸಂಪೂರ್ಣವಾಗಿ ತೊಡೆದು, ಎಲ್ಲೆಡೆ ಆಹ್ಲಾದ, ಉತ್ಸಾಹ, ಉಲ್ಲಾಸಗಳನ್ನು ಚೆಲ್ಲುವುದರಲ್ಲಿ ನಮ್ಮ ವಸಂತ ಬಲು ಉದಾರಿ.

ಚೈತ್ರ ಮಾಸದ ಮೊದಲ ದಿನವಾದ ಯುಗಾದಿ ಬರುವಷ್ಟರಲ್ಲಿ, ವ್ಯಾಯಾಮದ ಉತ್ಸಾಹಿಗಳಿಗೆ ಬೆಳಗ್ಗೆ ಏಳಲಾರದೆ ಮುದುರಿ ಮಲಗುವ ತಾಪತ್ರಯವಿಲ್ಲ. ಹಗಲು ನಿಧಾನವಾಗಿ ದೀರ್ಘವಾಗುವತ್ತ ಸಾಗುವುದರಿಂದ, ಮುಂಜಾನೆ ನಿರುಮ್ಮಳವಾಗಿ ಎದ್ದು ಬೆವರು ಹರಿಸಬಹುದು. (ವೈಶಾಖ ಬರುವಷ್ಟರಲ್ಲಿ ಶಾಖ ಹೆಚ್ಚಿ, ಬೆವರು ಹರಿಸುವ ಕಷ್ಟವೂ ಇಲ್ಲ, ತಾನಾಗಿ ಹರಿಯುತ್ತಿರುತ್ತದೆ!) ಚಾರಣ, ಪ್ರಯಾಣ ಇತ್ಯಾದಿಗಳಿಗೆ ಹೇಳಿ ಮಾಡಿಸಿದ ಕಾಲವಿದು. ಎಷ್ಟೋ ದೇಶಗಳಲ್ಲಿ ಸ್ಪ್ರಿಂಗ್‌ ಡ್ರೈವ್‌ ಅತ್ಯಂತ ಜನಪ್ರಿಯ. ಕಾರಣ, ಎಷ್ಟೋ ದೂರದವರೆಗೆ ಸಾಲಾಗಿ ಹೂ ಬಿಟ್ಟು ನಿಂತ ಮರಗಳ ನಡುವೆ ಜುಮ್ಮನೆ ಡ್ರೈವ್‌ ಮಾಡುವ ಸುಖ- ಸುಮ್ಮನೆ ಹೇಳುವುದಲ್ಲ, ಮಾಡಿಯೇ ಅರಿಯಬೇಕು. ಯುರೋಪ್‌ನ ಹಲವಾರು ದೇಶಗಳಿಗೆ ಹೂ ಬಿಡುವ ಕಾಲವನ್ನು ಕಣ್ತುಂಬಿಕೊಳ್ಳುವುದಕ್ಕಾಗಿಯೇ ಪ್ರಯಾಣಿಸುವವರ ಸಂಖ್ಯೆ ಲೆಕ್ಕವಿಲ್ಲದಷ್ಟು. ಫ್ರಾನ್ಸ್‌ ದೇಶದ ಘಮಘಮಿಸುವ ಲಾವೆಂಡರ್‌ ಹೂವುಗಳು ಮತ್ತು ಸೂರ್ಯಕಾಂತಿಗಳು, ಜರ್ಮನಿಯ ಚೆರ್ರಿ ಹೂಗಳ ಚಪ್ಪರ, ಇಟಲಿಯ ಮನ ಸೆಳೆಯುವ ಆರ್ಕಿಡ್‌ಗಳು, ಹಾಲೆಂಡ್‌ನ ಟುಲಿಪ್‌ಗಳ ವರ್ಣಲೋಕ, ಬ್ರಿಟನ್‌ನ ಬ್ಲೂಬೆಲ್‌ಗಳು, ಸ್ಪೇನ್‌ನಲ್ಲಿ ಹಿಮ ಹೊತ್ತಂತೆ ಕಾಣುವ ಬಾದಾಮಿ ಮರಗಳ ಬಿಳಿ ಹೂವುಗಳು- ಹೇಳುತ್ತಾ ಹೋದಷ್ಟಕ್ಕೂ ಮುಗಿಯುವುದೇ ಇಲ್ಲ ಹೂವುಗಳ ವೈಭವ.

bangalore flowers

ಯಾವುದೋ ದೇಶಗಳ ಮಾತೇಕೆ? ಅಗ್ದಿ ನಮ್ಮ ಕನ್ನಡದ ಕವಿ ಹರಿಹರನ ಪುಷ್ಟರಗಳೆಯಲ್ಲಿ ಪರಿಮಳಿಸುವ ಹೂವುಗಳೇನು ಕಡಿಮೆಯೇ? ಬೆಳ್ಳಂಬೆಳಗ್ಗೆ ಶಿವನನ್ನು ಪೂಜಿಸಲು ಹೊರಡುವ ಭಕ್ತನೊಬ್ಬ, ಹೂದೋಟಕ್ಕೆ ಹೋಗಿ, ಹೂವುಗಳನ್ನು ಕೊಯ್ದು, ಕಟ್ಟಿ ದೇವರಿಗೆ ಅರ್ಚಿಸುವ ವರ್ಣನೆಯನ್ನು ಹೊತ್ತ ರಗಳೆಯಿದು. ಇಡೀ ಕಾವ್ಯದುದ್ದಕ್ಕೂ ಶಿವನ ಭಕ್ತಿಯೇ ಪ್ರಧಾನವಾಗಿದ್ದರೂ, ಇಡೀ ಪ್ರಕ್ರಿಯೆಯ ನಿರೂಪಣೆ ಸುಂದರವಾಗಿದೆ, ಪುಷ್ಪಮಯವಾಗಿದೆ. ಶಿವನಿಗೆ ಸೇವಂತಿಗೆಯ ಅರಲ ಪನ್ನೀರಿನಿಂದ ಮುಖ ತೊಳೆಸುವ ಆ ಭಕ್ತ, ಪರಾಗದಿಂದ ವಿಭೂತಿಯ ತಿಲಕವನ್ನಿಕ್ಕಿ, ಜಟೆಯಲ್ಲಿರುವ ಸೋಮ ಮತ್ತು ಸುರನದಿಯರಿಗೆ ತೊಂದರೆಯಾಗದಂತೆ ಕೇತಕಿ, ಇರುವಂತಿ ಮತ್ತು ಸೇವಂತಿಯನ್ನು ಮುಡಿಸಿ, ಮರುಗ ಮತ್ತು ಸಂಪಿಗೆಗಳನ್ನೇ ಗಜ ಹಾಗೂ ಹುಲಿ ಚರ್ಮವಾಗಿ ಉಡಿಸುತ್ತಾನೆ ಎಂಬಂತೆ ನಾನಾ ರೀತಿಯ ವಿವರಗಳು ಶಿವ-ಭಕ್ತ-ಹೂವುಗಳ ಸುತ್ತ ಇಡೀ ಕಾವ್ಯದಲ್ಲಿ ಹರಡಿಕೊಂಡಿವೆ.

ವಸಂತ ಎಂದರೆ ಸಂತಸ ಮಾತ್ರವೇ? ಈ ಹೂವು, ಹಣ್ಣು, ಹಸಿರು, ಚಿಗುರು ಮುಂತಾದವೆಲ್ಲ ಯಾಕಿಷ್ಟು ಮುಖ್ಯವೆನಿಸುತ್ತವೆ ನಮಗೆ? ಏನೆಲ್ಲಾ ಭಾವಗಳು ಬೆರೆತಿವೆ ಇದೊಂದು ಋತುವಿನೊಂದಿಗೆ? ಏಳಿಗೆ, ಸಮೃದ್ಧಿ, ನಿರೀಕ್ಷೆ, ಭರವಸೆ, ಹರುಷ, ಹೊಸವರುಷ, ಪ್ರೀತಿ, ಒಲವು, ಶೃಂಗಾರ, ಝೇಂಕಾರ, ಕವಿಸಮಯ- ಇನ್ನೂ ಎಷ್ಟೊಂದು ಹೇಳುವುದಕ್ಕೆ ಇದೆಯಲ್ಲ. ಕೆಲವರಿಗೆ ಕೋಗಿಲೆ, ದುಂಬಿಗಳು ನೆನಪಾದರೆ, ಹಲವರು ಮಾವಿನ ಹಣ್ಣನ್ನೇ ಧೇನಿಸಬಹುದು. ಈ ವಿಷಯಗಳಲ್ಲಿ ಮೊದಲು ನೆನಪಾಗುವುದು ನಮ್ಮ ಪಂಪ. ʻನೀನೇ ಭುವನಕ್ಕಾರಾಧ್ಯನೈ ಚೂತರಾಜ, ತರುಗಳ್‌ ನಿನ್ನಂತೆ ಚೆನ್ನಂಗಳೇʼ ಎಂದು ಮಾವಿನ ಮರವನ್ನು ಕೊಂಡಾಡುತ್ತಾ, ಬನವಾಸಿಯಲ್ಲಿ ಮರಿದುಂಬಿಯಾಗಿ, ಕೋಗಿಲೆಯಾಗಿ ಹುಟ್ಟಲು ಹಂಬಲಿಸುತ್ತಾನೆ. ಇಂಥ ಘನಕವಿಯಿಂದ ಹಿಡಿದು, ʻಮಧುಮಾಸ ಬಂದಿಹುದು/ ಮಧುಕರಿಗಳೇ ಬನ್ನಿʼ ಎನ್ನುವ ಕುವೆಂಪು ಅವರು, ʻಬಾ ಭೃಂಗವೇ ಬಾ, ವಿರಾಗಿಯಂದದಿ ಭ್ರಮಿಸುವೆ ನೀನೇಕೆ?/ ಕಂಪಿನ ಕರೆಯಿದು ಸರಾಗವಾಗಿರೆ ಬೇರೆಯ ಕರೆ ಬೇಕೆ?ʼ ಎಂಬ ಬೇಂದ್ರೆಯವರು, ʻಇಮ್ಮಾವಿನ ಮಡಿಲಲ್ಲಿದೆ ದುಂಬಿಯ ಝೇಂಕಾರ/ ತರುಲತೆಗಳ ಮೈಗೊಪ್ಪಿದೆ ಕೆಂಪಿನಲಂಕಾರʼ ಎನ್ನುವ ಕೆ. ಎಸ್.‌ ನರಸಿಂಹಸ್ವಾಮಿಗಳರವರೆಗೆ ಮಾವು, ದುಂಬಿ, ಕೋಗಿಲೆಗಳ ಬಗ್ಗೆ ಸೃಷ್ಟಿಯಾದ ಕವಿಸಮಯಗಳಿಗೆ ಲೆಕ್ಕವೇ ಇಲ್ಲ.

bangalore flowers

ನಿಸರ್ಗದೊಂದಿಗೆ ನಿಕಟವಾಗಿ ಬೆರೆತು ಬದುಕುತ್ತಿದ್ದ ಹಿಂದಿನವರ ರೀತಿ-ನೀತಿಗಳನ್ನು ಹಳೆಗನ್ನಡ ಕಾವ್ಯ ಪರಂಪರೆಯಲ್ಲೂ ಕಾಣಬಹುದು. ಸೀತೆಯನ್ನು ಅರಸುತ್ತಾ ಹೋಗುವ ರಾಮ, ʻತಳಿರೇ ತಾಮರೆಯೇ ಮೃಗಾಳಿ ಸಂಕುಲಮೇ ಮತ್ತ ಕೋಕಿಲಮೇ ಕಂಡಿರೇ ಪಲ್ಲವಾಧರೆಯʼ ಎಂದು ಸುತ್ತಲಿನ ಪ್ರಕೃತಿಯನ್ನು ಕೇಳುತ್ತಾ ಹೋಗುವ ವರ್ಣನೆ ನಾಗಚಂದ್ರನ ರಾಮಚಂದ್ರಚರಿತ ಪುರಾಣದಲ್ಲಿದೆ. ʻಕಂಡಿರೇ ಚೆನ್ನಮಲ್ಲಿಕಾರ್ಜುನನʼ ಎನ್ನುವ ಅಕ್ಕನೂ ಪ್ರಕೃತಿಯೊಂದಿಗೆ ಸಂವಾದಿಸುವುದನ್ನು ವಚನಗಳಲ್ಲಿ ಕಾಣಬಹುದು. ನಾಡೊಂದು ಸುಭಿಕ್ಷವಾಗುವುದು ಹೇಗೆ ಎನ್ನುವುದನ್ನು, ʻಫಲವಿಲ್ಲದ ಮಾವು ಮಾವಿಲ್ಲದ ಮಲ್ಲಿಗೆ ಮಲ್ಲಿಕಾಲತಿಕೆ ಇಲ್ಲದ ವನ ವನವಿಲ್ಲದ ಭೋಗಿಗಳಿಲ್ಲ ದೇಶದೆಡೆಯೊಳುʼ ಎಂದು ವರ್ಣಿಸುತ್ತಾನೆ ನಂಜುಂಡ ಕವಿ.

ಇದನ್ನೂ ಓದಿ: ದಶಮುಖ ಅಂಕಣ: ಏನು ಹೇಳುತ್ತಿವೆ ಈ ಪ್ರತಿಮೆಗಳು?

ನಿಸರ್ಗದೊಂದಿಗಿನ ಅನುಸಂಧಾನ ಹೀಗಾದರೆ, ವಸಂತನ ಬಗ್ಗೆ ಹರಿದು ಬಂದ ಕವಿಸಾಲುಗಳಿಗೆ ತುದಿ-ಮೊದಲು ಉಂಟೇ? ʻಪಸರಿಸಿತು ಮಧುಮಾಸ ತಾವರೆ/ ಎಸಳ ದೋಣಿಯ ಮೇಲೆ ಹಾಯ್ದವು/ ಕುಸುಮ ರಸದ ಉಬ್ಬರ ತೆರೆಯನು ಕೂಡ ದುಂಬಿಗಳುʼ ಎಂದು ರಸವನ್ನೇ ಹರಿಸುತ್ತಾನೆ ರೂಪಕಗಳ ರಾಜ ಕುಮಾರವ್ಯಾಸ. ಶೃಂಗಾರ ರಸವೆಂಬುದು ವಸಂತನೊಂದಿಗೆ ಸ್ಥಾಯಿ ಎನ್ನುವಷ್ಟು ನಿಕಟವಾದ್ದರಿಂದ, ʻಲಲಿತ ಲವಂಗ ಲತಾ ಪರಿಶೀಲನ ಕೋಮಲ ಮಲಯ ಸಮೀರೆ/ ಮಧುಕರ ನಿಕರ ಕರಂಬಿತ ಕೋಕಿಲ ಕೂಜಿತ ಕುಂಜ ಕುಟೀರೆʼ (ಸ್ಥೂಲವಾಗಿ ಹೇಳುವುದಾದರೆ, ಪ್ರಕೃತಿಯಲ್ಲಿ ಅರಳಿ ನಿಂತ ಹೂಗಿಡ ಬಳ್ಳಿಗಳ ಕುಸುಮಗಳ ಸುಗಂಧವನ್ನು ಕೋಮಲವಾದ ಮರುತ ಹೊತ್ತು ತರುತ್ತಿದ್ದಾನೆ. ಕುಟೀರದ ಸುತ್ತೆಲ್ಲ ದುಂಬಿಗಳು ಝೇಂಕರಿಸುತ್ತಿವೆ) ಎನ್ನುವ ಜಯದೇವ ಕವಿಯ ವರ್ಣನೆಯಿಂದ, ಕೃಷ್ಣ-ಗೋಪಿಕೆಯರ ಇನ್ನೊಂದು ಲೋಕವೇ ತೆರೆದುಕೊಳ್ಳುತ್ತದೆ. ಹೊಸಗನ್ನಡದ ಹಾದಿಗಳೂ ವಸಂತನಿಂದ ಸಿಂಗಾರಗೊಂಡಂಥವೇ. ಬಿಎಂಶ್ರೀ ಅವರ ʻವಸಂತ ಬಂದ, ಋತುಗಳ ರಾಜ ತಾ ಬಂದʼ ಎನ್ನುವ ಸಾಲುಗಳಿಂದ ಮೊದಲ್ಗೊಂಡರೆ, ʻಗಿಡದಿಂದುದುರುವ ಎಲೆಗಳಿಗೂ ಮುದ, ಚಿಗುರುವಾಗಲೂ ಒಂದೇ ಹದ/ ನೆಲದ ಒಡಲಿನೊಳಗೇನು ನಡೆವುದೋ, ಎಲ್ಲಿ ಕುಳಿತಿಹನೋ ಕಲಾವಿದ!ʼ ಎಂಬ ಅಚ್ಚರಿ ಚನ್ನವೀರ ಕಣವಿಯವರದ್ದಾದರೆ, ʻಋತು ವಸಂತ ಬಂದನಿದೋ, ಉಲ್ಲಾಸವ ತಂದನಿದೋ/ ಬತ್ತಿದೆದೆಗೆ ಭರವಸೆಗಳ ಹೊಸ ಬಾವುಟವೇರಿಸಿ/ ಹಳೆಗಾಡಿಗೆ ಹೊಸ ಕುದುರೆಯ ಹೊಸಗಾಲಿಯ ಜೋಡಿಸಿʼ ಎಂದು ಸಂಭ್ರಮ ಪಲ್ಲವಿಸುವ ಬಗೆಯನ್ನು ಜಿ.ಎಸ್.ಶಿವರುದ್ರಪ್ಪನವರು ವರ್ಣಿಸುತ್ತಾರೆ. ಇದಿಷ್ಟೇ ಅಲ್ಲ, ಕುವೆಂಪು, ಬೇಂದ್ರೆ, ಪುತಿನ, ಅಡಿಗರು- ಹೀಗೆ ವಸಂತನ ಸೌಂದರ್ಯಕ್ಕೆ ಸೋಲದ ಕವಿಗಳೇ ಇಲ್ಲ.

ಇಷ್ಟೆಲ್ಲಾ ಬೆಡಗಿನೊಂದಿಗೆ ಇದೀಗ ಬಂದಿರುವ ವಸಂತನೇನೂ ನಿಲ್ಲುವವನಲ್ಲ, ಉಳಿದೆಲ್ಲರಂತೆಯೇ ಅವನೂ ಋತುಚಕ್ರದೊಂದಿಗೆ ಉರುಳುವವನೇ. ಇಂದು ಚೆಲುವಾಗಿ ಹಬ್ಬಿನಿಂತ ವಲ್ಲರಿ ಮುಂದೊಮ್ಮೆ ಎಲೆ ಉದುರಿಸಲೇಬೇಕು, ಒಣಗಲೇಬೇಕು, ಮತ್ತೆ ಚಿಗುರಲೇಬೇಕು. ಹಳತೆಲ್ಲ ಮಾಗಿ, ಹೋಗಿ, ಹೊಸದಕ್ಕೆ ಹಾದಿ ಬಿಡುವ ಈ ನೈಸರ್ಗಿಕ ಕ್ರಿಯೆಯನ್ನು ಸಹಜವಾಗಿ ಒಪ್ಪಿಕೊಂಡವರು ಮಾತ್ರವೇ ಕಾಲಪ್ರವಾಹದಲ್ಲಿ ದಡ ಸೇರಲು ಸಾಧ್ಯ. ಹಾಗಾಗಿ ಕಾಲಕ್ಕೆ ತಕ್ಕಂತೆ ಮಾಗಲಿ, ಸಾಗಲಿ ನಮ್ಮೆಲ್ಲರ ಜೀವನಚಕ್ರ.

ಇದನ್ನೂ ಓದಿ: ದಶಮುಖ ಅಂಕಣ: ವೈಜ್ಞಾನಿಕತೆ ಮತ್ತು ಭ್ರಮರ-ಕೀಟ ನ್ಯಾಯ!

Continue Reading
Advertisement
Man commits suicide after wife commits suicide in Srirangapatna
ಕರ್ನಾಟಕ2 hours ago

Suicide Case: ಕೌಟುಂಬಿಕ ಕಲಹ; ಪತ್ನಿ ಆತ್ಮಹತ್ಯೆ ಕಂಡು ಪತಿಯೂ ನೇಣಿಗೆ ಶರಣು

Amid wedding rumours, AAP MP Raghav Chadha picks up Parineeti Chopra from Delhi airport
ದೇಶ2 hours ago

Raghav-Parineeti: ಮತ್ತೆ ಒಟ್ಟಿಗೆ ಕಾಣಿಸಿದ ರಾಘವ್‌, ಪರಿಣೀತಿ; ವಾರದಲ್ಲಿ 3ನೇ ಭೇಟಿ, ಸ್ನೇಹಾನಾ? ಪ್ರೀತಿನಾ?

Do you know how much marks Virat Kohli got in iron pea maths?
ಕ್ರಿಕೆಟ್2 hours ago

Virat Kohli : ಕಬ್ಬಿಣದ ಕಡಲೆ ಗಣಿತದಲ್ಲಿ ವಿರಾಟ್​ ಕೊಹ್ಲಿ ಪಡೆದ ಮಾರ್ಕ್​ ಎಷ್ಟು ಗೊತ್ತಾ?

Manmohan Lalwani says Solar powered system best tool to cross digital gap
ಕರ್ನಾಟಕ2 hours ago

SELCO India: ಡಿಜಿಟಲ್ ಕಂದಕ ದಾಟಲು ಸೌರಚಾಲಿತ ವ್ಯವಸ್ಥೆ ಅತ್ಯುತ್ತಮ ಸಾಧನ: ಮನಮೋಹನ್ ಲಾಲ್ವಾನಿ

Four farmers seriously injured in lathi charge by forest department personnel
ಕರ್ನಾಟಕ2 hours ago

Tumkur News: ಒತ್ತುವರಿ ತೆರವಿಗೆ ಆಕ್ಷೇಪಿಸಿದ್ದಕ್ಕೆ ಲಾಠಿ ಚಾರ್ಜ್ ಮಾಡಿದ ಅರಣ್ಯ ಸಿಬ್ಬಂದಿ; 4 ರೈತರಿಗೆ ಗಂಭೀರ ಗಾಯ

Bengaluru company to gift ChatGPT Plus subscription to employees after seeing rise in productivity
ಕರ್ನಾಟಕ2 hours ago

ChatGPT Subscription: ದಕ್ಷತೆ ಹೆಚ್ಚಳ; ನೌಕರರಿಗೆ ಚಾಟ್‌ಜಿಪಿಟಿ ಉಚಿತ ಸಬ್‌ಸ್ಕ್ರಿಪ್ಶನ್‌ ನೀಡಿದ ಬೆಂಗಳೂರು ಕಂಪನಿ

No prejudice about Hindi, such imposition is not worth it
ಪ್ರಮುಖ ಸುದ್ದಿ3 hours ago

ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು

Google Layoffs: Some employees may get up to Rs 2.60 crore in severance pay
ದೇಶ3 hours ago

Google Layoffs: ಗೂಗಲ್‌ನಿಂದ ವಜಾಗೊಂಡ ನೌಕರರಿಗೆ ಸಿಗಲಿದೆ 2.6 ಕೋಟಿ ರೂ., ಇವರಿಗೆ ಬೇರೆ ನೌಕರಿಯೇ ಬೇಕಿಲ್ಲ

Former bowler of Rajasthan Royals who joined Chennai Super Kings
ಕ್ರಿಕೆಟ್3 hours ago

IPL 2023 : ಚೆನ್ನೈ ಸೂಪರ್​ ಕಿಂಗ್ಸ್​ ಬಳಗ ಸೇರಿದ ರಾಜಸ್ಥಾನ್​ ರಾಯಲ್ಸ್​ನ ಮಾಜಿ ಬೌಲರ್​

ಕರ್ನಾಟಕ4 hours ago

Prof. Madhav Kulkarni: ಖ್ಯಾತ ಲೇಖಕ, ವಿಮರ್ಶಕ ಪ್ರೊ. ಮಾಧವ ಕುಲಕರ್ಣಿ ಇನ್ನಿಲ್ಲ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ2 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ2 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್4 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

Post Office Recruitment 2023
ಉದ್ಯೋಗ2 months ago

India Post GDS Recruitment 2023 : ಅಂಚೆ ಇಲಾಖೆಯಲ್ಲಿ 40,889 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ

ಕರ್ನಾಟಕ8 hours ago

Ram Navami 2023: ಕರುನಾಡಿನೆಲ್ಲೆಡೆ ಶ್ರೀರಾಮ ನಾಮಸ್ಮರಣೆ; ಕಲಬುರಗಿಯಲ್ಲಿ ಮಜ್ಜಿಗೆ, ಪಾನಕ ವಿತರಿಸಿದ ಮುಸ್ಲಿಮರು

Siddalinga Swamiji of Siddaganga Mutt saw a cow and came running away Video goes viral
ಕರ್ನಾಟಕ14 hours ago

Sri Siddalinga Swamiji: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಂಡು ಓಡೋಡಿ ಬಂದ ಹಸು; ವಿಡಿಯೊ ವೈರಲ್‌

amit shah convoy
ಕರ್ನಾಟಕ3 days ago

Amit Shah: ಬೆಂಗಳೂರಿನಲ್ಲಿ ಅಮಿತ್‌ ಶಾ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ; ಇಬ್ಬರು ವಿದ್ಯಾರ್ಥಿಗಳ ವಿಚಾರಣೆ

rapido bike vs auto-Bike taxi drivers go on strike against auto drivers harassment
ಕರ್ನಾಟಕ4 days ago

Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

ಕರ್ನಾಟಕ1 week ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ1 week ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ1 week ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ2 weeks ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ2 weeks ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ2 weeks ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

ಟ್ರೆಂಡಿಂಗ್‌

error: Content is protected !!