ಗ್ಲೋಕಲ್‌ ಲೋಕ ಅಂಕಣ: ಎಐ ಇದೆ, ಚಾಟ್ ಜಿಪಿಟಿ ಬಂದಿದೆ, ಮುಂದೇನು? Vistara News
Connect with us

ಅಂಕಣ

ಗ್ಲೋಕಲ್‌ ಲೋಕ ಅಂಕಣ: ಎಐ ಇದೆ, ಚಾಟ್ ಜಿಪಿಟಿ ಬಂದಿದೆ, ಮುಂದೇನು?

ಯಾವುದೇ ಪ್ರಶ್ನೆಗೆ ಸಮಂಜಸ ಉತ್ತರ ಕೊಡುವ, ಕಥೆ- ಕವನ ಬರೆಯುವ, ಬ್ಯಾಕ್ ಎಂಡ್ ಕೋಡ್ ಕ್ಷಣಾರ್ಧದಲ್ಲಿ ಸೃಷ್ಟಿಸುವ ಚಾಟ್ ಜಿಪಿಟಿ ದಿನದಿಂದ ದಿನಕ್ಕೆ ತನ್ನ ವೈಖರಿಯಿಂದ ಸದ್ದು ಮಾಡುತ್ತಲೇ ಇದೆ. ಆದರೆ ಇದರಿಂದ ಮನುಷ್ಯರ ಉದ್ಯೋಗಗಳು ಹೋಗುತ್ತವೆ ಎಂಬುದಕ್ಕೆ ಆಧಾರವಿಲ್ಲ.

VISTARANEWS.COM


on

ChatGPT AI
Koo
pavan kunch

ಎಲ್ಲರ ವಾಟ್ಸ್ಯಾಪ್ ಗುಂಪುಗಳಲ್ಲಿ, ಚಹಾ ಕಾಫಿ ವಿರಾಮಗಳಲ್ಲಿ ಇತ್ತೀಚಿನ ದಿನಪತ್ರಿಕೆಗಳಲ್ಲೂ ಬಹಳಷ್ಟು ಚರ್ಚಿತ ಸುದ್ದಿ ಚಾಟ್ ಜಿಪಿಟಿ. ಚಾಟ್ ಜಿಪಿಟಿ (ChatGPT) ಎಂದರೇನು? ಅದರ ಸಾಧಕ ಬಾಧಕಗಳು ಎಂತಹವು? ಸಹಜವಾಗಿಯೇ ಭಯದ ವಾತಾವರಣ ಇರುವ ಪ್ರಸ್ತುತ ಸಂದರ್ಭದಲ್ಲಿ ಈ ಅಂಕಣ ಹೇಗೆ ಎಐ ಹಾಗು ಚಾಟ್ ಜಿಪಿಟಿ ಉದ್ಯಮಗಳಲ್ಲಿ ಮಾನವ ಆಧಾರಿತ ಕೆಲಸ ಕಮ್ಮಿ ಮಾಡುವುದಿಲ್ಲ, ಬದಲಿಗೆ ಇನ್ನೂ ಹೆಚ್ಚು ಕೆಲಸ ಸೃಷ್ಟಿಸುತ್ತದೆ ಎಂದು ವಿವರಿಸುವ ಪ್ರಯತ್ನವಿದು.

ಹೌದು, ಚಾಟ್ ಜಿಪಿಟಿ ಒಂದು ಅದ್ಭುತ ಆವಿಷ್ಕಾರ. ಆದರೆ ಇದು ಎಐ ಆಧಾರಿತ ಮೊದಲ ಪ್ಲಾಟ್‌ಫಾರಂ ಅಲ್ಲ, ಕೊನೆಯದಂತೂ ಅಲ್ಲವೇ ಅಲ್ಲ. ಎಲ್ಲಿ ಇದರ ವ್ಯತ್ಯಾಸ ಹೆಚ್ಚು ಪ್ರಶಂಸೆ ಕಂಡಿದೆ ಎಂದರೆ ಇದು ಜನಬಳಕೆಯ ಭಾಷೆಯ ಆಧಾರದ ಮೇಲೆ ಅತ್ಯಂತ ನಿಕಟ ಫಲಿತಾಂಶಗಳನ್ನು ಹೊರಹಾಕುತ್ತದೆ. ಈವರೆಗಿನ ಎಐ ಆವಿಷ್ಕಾರಗಳು ಡೇಟಾ ಮೈನಿಂಗ್ ಹಾಗು ಮೆಷೀನ್ ಲರ್ನಿಂಗ್ ಮೇಲೆ ಹೆಚ್ಚು ಒತ್ತು ಕೊಡುತ್ತಿದ್ದವು. ಆದರೆ ಆಡುಮಾತಿನ ಎಳೆಯಲ್ಲಿ ವಿಷಯ ಮಂಡನೆ ಅತಿ ಕಡಿಮೆ ಪ್ರಮಾಣದಲ್ಲಿ ಆಗುತ್ತಿತ್ತು. ಇದೇ ವಿಷಯಕ್ಕೆ ಚಾಟ್ ಜಿಪಿಟಿ ಅಷ್ಟು ಪ್ರಖ್ಯಾತಗೊಂಡಿರುವುದು ಹಾಗೂ ಕೆಲ ಉದ್ಯಮಗಳಲ್ಲಿ ತಲ್ಲಣ ಉಂಟುಮಾಡಿರುವುದು.

ಯಾವುದೇ ಪ್ರಶ್ನೆಗೆ ಸಮಂಜಸ ಉತ್ತರ, ಇಮೇಲ್ ಬರೆಯುವುದು, ಕವನ ಬರೆಯುವುದು, ಕಥೆ ಹೆಣೆಯುವುದು, ಪ್ರಶ್ನೆ ಪತ್ರಿಕೆಗಳನ್ನು ಸರಾಗವಾಗಿ ಉತ್ತರಿಸುವುದು, ಅಷ್ಟೇ ಏಕೆ ಹಲವಾರು ತಾಸು ಬಳಸಿ ಬ್ಯಾಕ್ ಎಂಡ್ ಕೋಡ್ (ಇದು ಲಕ್ಷಾಂತರ ಆಪ್‌ಗಳ ಜೀವನಾಡಿ) ಇದನ್ನು ಕ್ಷಣಾರ್ಧದಲ್ಲಿ ಕಂಪೈಲ್ ಮಾಡುವುದು- ಹೀಗೆ ದಿನದಿಂದ ದಿನಕ್ಕೆ ಚಾಟ್ ಜಿಪಿಟಿ ತನ್ನ ವೈಖರಿಯಿಂದ ಸದ್ದು ಮಾಡುತ್ತಲೇ ಇದೆ.

ಚಾಟ್‌ ಜಿಪಿಟಿ ಬಗ್ಗೆ ಎನ್.‌ ರವಿಶಂಕರ್ ಅವರ ವಿಡಿಯೋ ಅಂಕಣ ಇದೇ ತಾಣದಲ್ಲಿ ನೀವು ನೋಡಬಹುದು:

ಆತಂಕ ಬೇಡ

ಪ್ರಸ್ತುತ ಅತ್ಯಂತ ದಿಗ್ಗಜ ಕಂಪನಿಗಳು ಎಐ ಅನ್ನು ಅತ್ಯಂತ ಸವಿಸ್ತಾರವಾಗಿ ಬಳಸುತ್ತಿವೆ ಹಾಗು ಆವಿಷ್ಕರಿಸುತ್ತಿವೆ. ಇದಕ್ಕೆ ಉದಾಹರಣೆ ಗೂಗಲ್ ಮೈಕ್ರೋಸಾಫ್ಟ್ ಮೆಟಾ ಹಾಗು ಆಪಲ್. ಹೆಚ್ಚು ಕಂಪನಿಗಳು ಬಳಸಲು ಮುಂದಾಗುವ ಎಲ್ಲ ಸಾಧ್ಯತೆಗಳನ್ನು ಮನಗಂಡು ಹೆಚ್ಚು ಎಐ ಆಧಾರಿತ ಕೋರ್ಸ್‌ಗಳು ಪ್ರಾಮುಖ್ಯತೆ ಪಡೆಯುತ್ತಿವೆ. ಹೀಗಾಗಿ ಕಾಲ ಕ್ರಮೇಣ ಎಐ ಎಲ್ಲ ಉದ್ಯಮಗಳಲ್ಲೂ ಎಲ್ಲ ವಲಯದಲ್ಲೂ ಎಲ್ಲ ಹಂತಗಳಲ್ಲೂ ಅಡಾಪ್ಟ್ ಆಗುವುದು.

ಆ ಸಮಯದಲ್ಲಿ ಡೇಟಾ ಕ್ಯುರೇಟ್ ಮಾಡುವ, ಇರುವ ಡೇಟಾ ಮೂಲಕ ಪರಿಷ್ಕರಿಸುವ ಹಾಗೂ ಸೊಲ್ಯೂಷನ್ ಶಿಫಾರಸು ಮಾಡುವ ಕೆಲಸ ಮಾನವರೇ ಮಾಡಬೇಕು. ಹಾಗಾಗಿ ಹೆಚ್ಚೆಚ್ಚು ಉದ್ಯಮಗಳು ಎಐ ಅಡಾಪ್ಟ್ ಮಾಡಿಕೊಂಡಷ್ಟು ಮತ್ತಷ್ಟು ಮಾನವ ಆಧಾರಿತ ಕೆಲಸಗಳು ಹುಟ್ಟಿಕೊಳ್ಳುತ್ತವೆ ಅಥವಾ ಇರುವ ರೋಲ್ಸ್ ಮತ್ತಷ್ಟು ಡಿಫೈನ್ ಹಾಗು ರಿಫೈನ್ ಆಗುತ್ತಾ ಬರುತ್ತದೆ. ಒಂದು ಅಂದಾಜಿನ ಪ್ರಕಾರ ಸುಮಾರು 2 ಲಕ್ಷ ಎಐ ಆಧಾರಿತ ಪ್ರೊಫೆಶನಲ್ಸ್ ಅವಶ್ಯಕತೆ ಸದ್ಯಕ್ಕಿದೆ ಹಾಗೂ ವರ್ಷದಿಂದ ವರ್ಷಕ್ಕೆ 8% ಹೆಚ್ಚಾಗುತ್ತಿದೆ.

ಮಾನವ ಹಾಗು ಯಂತ್ರದ ನಡುವಿನ ಡೇಟಾ ವ್ಯಾಖ್ಯಾನ

ಡೇಟಾ ಸಂಗ್ರಹಣೆ ಮೊದಲ ಹಂತ. ಹಿಡಿದಿಟ್ಟಿರುವ ಡೇಟಾ ಪರಿಷ್ಕರಣೆ ಮುಂದಿನ ಹಂತ. ಸದ್ಯಕ್ಕೆ ಮೊದಲ ಹಂತ ಹಾಗು ಸ್ವಲ್ಪ ಮಟ್ಟಿಗೆ ಎರಡನೇ ಹಂತ ಮಾತ್ರ ಯಂತ್ರ ಕಲಿಕೆಗೆ ಒಳಪಡುತ್ತದೆ. ಉಳಿದಂತೆ ಡೇಟಾ ಲೇಬಲಿಂಗ್, ಡೇಟಾ ಅನೋಟಷನ್/ಟಿಪ್ಪಣಿ, ಡೇಟಾ ಪ್ರೇರೇಪಣೆ/ ಪ್ರಾಂಪ್ಟ್ ಹಾಗೂ ಅತ್ಯಂತ ನಿಖರ ಡೇಟಾ ಮಾಡೆಲ್ಸ್ ಇವೆಲ್ಲವೂ ಎಐನ ಬಹು ಮುಖ್ಯ ಭಾಗ. ಇವೆಲ್ಲವೂ ಮಾನವರೇ ಮಾಡುವ ಕೆಲಸ ಅಥವಾ ಕೈಗೊಳ್ಳುವ ನಿರ್ಧಾರಗಳಾಗಿವೆ.

ChatGPT may charge for using it

ಹೆಚ್ಚೆಚ್ಚು ಕಂಪನಿಗಳು ಹೆಚ್ಚು ಡೇಟಾ ಗಣಿಗಾರಿಕೆ ತಜ್ಞರು, ಡೇಟಾ ಪ್ರಾಂಪ್ಟ್ ತಜ್ಞರು ಹಾಗು ಡೇಟಾ ಲೇಬಲಿಂಗ್ ವೃತ್ತಿಪರರನ್ನು ಹುಡುಕಿ ನೇಮಕಾತಿಗೊಳಿಸುತ್ತಾರೆ. ಮಷೀನ್ ಒಳಗೆ ಹೊಕ್ಕುವ ಡೇಟಾ ಲಾಜಿಕ್ ಕೂಡ ಮಾನವ ನಿರ್ಮಿತವಾದ್ದರಿಂದ ಹೆಚ್ಚು ನಿಖರ ಪರಿಹಾರ ಮಾದರಿಯ ವೃತ್ತಿಪರರು ಹೆಚ್ಚು ಬೇಡಿಕೆಯಲ್ಲಿರುತ್ತಾರೆ. ಅಂದಹಾಗೆ ಚಾಟ್ ಜಿಪಿಟಿ ಹೊರಹಾಕುವ ಫಲಿತಾಂಶಗಳು ಕೂಡ ಮಾನವ ಆಧಾರಿತ.

ಇದನ್ನೂ ಓದಿ: ChatGPT and Whatsapp: ವಾಟ್ಸಾಪ್‌ನಲ್ಲಿ ಜಾಟ್‌ಜಿಪಿಟಿ ಬಳಸಬಹುದಾ? ಇದರಿಂದ ಏನು ಲಾಭ?

ಕೇಳುವ ಪ್ರಶ್ನೆಗೆ ಕಡಿಮೆ ಎಂದರೂ ನಾಲ್ಕು, ಐದು ಉತ್ತರ ಸಿದ್ಧವಿದ್ದರೆ ಅದರಲ್ಲಿ ಅತ್ಯಂತ ನಿಖರ ಉತ್ತರ ಒದಗಿಸುವ ಕೆಲಸ ಮಾನವರೇ ಮಾಡುವಂತದು. ಇದನ್ನು ರಿಎನ್‌ಫೋರ್ಸ್‌ಮೆಂಟ್‌ ಲರ್ನಿಂಗ್ ವಿಥ್ ಹ್ಯೂಮನ್ ಫೀಡ್‌ಬ್ಯಾಕ್ ಎಂದು ಟೆಕ್ನಿಕಲ್ ಭಾಷೆಯಲ್ಲಿ ಕರೆಯುವುದು ವಾಡಿಕೆ. ಹೆಚ್ಚು ಡೇಟಾ ಹರಿದಂತೆ ಹೆಚ್ಚು ಉತ್ತರಗಳು ಒದಗಿದಂತೆ ಅದರಲ್ಲಿ ಅತ್ಯಂತ ಸನಿಹದ್ದನ್ನು ಆಯ್ಕೆ ಮಾಡುವ ಜಾಣ್ಮೆ ಸದ್ಯ ಮನುಷ್ಯನಿಗೆ ಮಾತ್ರ ಇದೆ!

ಕೊನೆಯದಾಗಿ…

ರೊಬಾಟಿಕ್ಸ್ ಮೊದಲು ಪ್ರಖ್ಯಾತಿಗೊಂಡಂತೆ ಇದೇ ರೀತಿಯ ಸಹಜ ಆತಂಕ ಉಂಟಾಗಿತ್ತು. ಕಾರು ನಿರ್ಮಿಸುವ ಕಾರ್ಖಾನೆಗಳು ಮುಚ್ಚುತ್ತವೆ, ಉಪಕರಣ ಸಂಸ್ಥೆಗಳು ಕೇವಲ ರೋಬಾಟ್ ಬಳಸುತ್ತವೆ ಎಂಬ ಕೆಲ ಸುದ್ದಿಗಳು ತೀರಾ ಹಳೆಯದ್ದೇನಲ್ಲ. ಆದರೆ ರೊಬಾಟಿಕ್ಸ್ ಉದ್ಯಮದಲ್ಲೇ ಆವಿಷ್ಕಾರಗಳು ಅನೇಕ ವರ್ಷಗಳಿಂದ ಮೂಡುತ್ತಿವೆ ಹಾಗು ಮನುಷ್ಯ ಕೇಂದ್ರಿತ ಕೆಲಸಗಳು ವಿಕಸನಗೊಂಡಿವೆ. ಹಾಗೆಯೇ ರಿಟೇಲ್, ಾರೋಗ್ಯಸೇವೆ, ಬ್ಯಾಂಕಿಂಗ್, ಐಟಿ ಉದ್ಯಮಗಳಲ್ಲಿ ಎಐ ಕೂಡ ಹೆಚ್ಚು ಆವಿಷ್ಕಾರಗಳಿಗೆ ಕಾರಣವಾಗುತ್ತದೆ ಹಾಗು ಹೆಚ್ಚೆಚ್ಚು ಕಂಪನಿಗಳು ಅಡಾಪ್ಟ್ ಆಗುವ ಹೊತ್ತಿನಲ್ಲೇ ಹೆಚ್ಚು ಮಾನವ ಕೇಂದ್ರಿತ ಕೆಲಸಗಳು ವಿಕಸನ ಗೊಳ್ಳುತ್ತವೆ ಹೊರತು ಕ್ಷೀಣಿಸುವುದಿಲ್ಲ.

ಇದನ್ನೂ ಓದಿ: ಬೆಂಗಳೂರಿನ ಕಾಲೇಜುಗಳಲ್ಲಿ ChatGPT Banned! ವಿದ್ಯಾರ್ಥಿಗಳು ಬಳಸುವಂತಿಲ್ಲ ಈ ಎಐ ಟೂಲ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ದಶಮುಖ ಅಂಕಣ: ಕೋಶ ಓದಲಾಗದಿದ್ದರೆ ದೇಶವನ್ನಾದರೂ ಸುತ್ತಿ!

ಯಾಕಷ್ಟು ಆಸಕ್ತಿ ನಮಗೆ ಪ್ರವಾಸ ಹೋಗುವುದೆಂದರೆ? ಪ್ರವಾಸ, ಪ್ರಯಾಣಗಳಿಗಾಗಿ ಅಷ್ಟೊಂದು ಖರ್ಚು ಮಾಡುವುದು ನಮಗೆ ಹೇಗೆ ಹೊರೆ ಎನಿಸುವುದಿಲ್ಲ? ಪ್ರವಾಸದ ಅನುಭವದ ಮೂಲಕ ಏನನ್ನು ನಿರೀಕ್ಷಿಸುತ್ತೇವೆ? ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಹೋಗುವ ತವಕ ಹೀಗೆ ವ್ಯಕ್ತವಾಗುತ್ತದೆಯೇ?

VISTARANEWS.COM


on

Edited by

solo travel
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ಟ್ರಾಫಿಕ್ ಸಿಗ್ನಲ್‌ನಲ್ಲಿದ್ದೆ. ನಾ ಪ್ರಯಾಣಿಸುತ್ತಿದ್ದ ಆಟೋದ ಚಾಲಕ ಸ್ವಲ್ಪ ಸಿಡಿಮಿಡಿ ಮಾಡುತ್ತಿದ್ದ. ಹೇಳುವಂಥ ಟ್ರಾಫಿಕ್ ಇಲ್ಲದ ನಮ್ಮೂರಲ್ಲಿ ಹಬ್ಬದ ವಾರಾಂತ್ಯಗಳು (weekend with festival) ಬಂದರೆ ಇದ್ದಕ್ಕಿದ್ದಂತೆ ರಸ್ತೆಗಳು ತುಂಬಿಬಿಡುತ್ತವೆ. ಹೆಚ್ಚಿನ ಸಾರಿ ಯಾವ್ಯಾವುದೋ ಊರು, ರಾಜ್ಯಗಳ ನೋಂದಣಿ ಹೊಂದಿರುವ ಕಾರುಗಳದ್ದೇ ಕಾರುಭಾರು. ಅದರಲ್ಲೂ ಊರಿನ ನಡುವೆ ಹಾದುಹೋಗುವ ಹೆದ್ದಾರಿಯ ಸಿಗ್ನಲ್‌ಗಳು ಕಳೆಯುವಾಗ ನಾಲ್ಕಾರು ಬಾರಿ ಕೆಂಪುದೀಪ ಬರಬೇಕು. ಆನಂತರವೇ ನಮ್ಮ ಪಾಲಿಗೆ ಮುಂದೆ ಹೋಗಲು ಗ್ರೀನ್ ಸಿಗ್ನಲ್ ಸಿಗುವುದು. ಅಂದೂ ಸಹ ಗಣೇಶ ಚತುರ್ಥಿಯ (Ganesh chaturthi) ವಾರಾಂತ್ಯವಾದ್ದರಿಂದ ಸಿಗ್ನಲ್‌ನಲ್ಲಿ ಸಿಲುಕಿ ಆಟೋದವ ಚಡಪಡಿಸುತ್ತಿದ್ದ. ʻಇನ್ನೂ ದಸರಾ ಬರ್ಲಿ, ಬೇರೆ ಊರ್ಗೊಳಿಂದ ಜನ ಯದ್ವಾತದ್ವಾ ಬತ್ತರೆ. ರಸ್ತೆ ಮೇಲೆ ಗಾಡಿ ಓಡ್ಸದೇ ಹಿಂಸೆʼ ಎಂದು ತನ್ನ ಕಷ್ಟ ಹೇಳಿಕೊಳ್ಳುತ್ತಿದ್ದ.

ಆತನ ಮಾತು ಸುಳ್ಳಲ್ಲ ಬಿಡಿ. ರಜೆ ಬಂತೆಂದರೆ ಎಲ್ಲಿಗೆ ಪ್ರವಾಸ (travel plan) ಹೊರಡುವುದೆಂದೇ ಲೆಕ್ಕ ಹಾಕುತ್ತೇವೆ. ಕೆಲವು ದೇಶಗಳಲ್ಲಿ ವರ್ಷದ ಆರಂಭಕ್ಕೆ ಮಾಡುವ ಮೊದಲ ಕೆಲಸವೆಂದರೆ ಈ ವರ್ಷ ಯಾವ್ಯಾವ ರಜೆಯಲ್ಲಿ ಎಲ್ಲೆಲ್ಲಿ ಪ್ರವಾಸ ಮಾಡುವುದು ಎಂಬ ತಿರುಗಾಟದ ನಿಶ್ಚಯ. ಎಷ್ಟೊ ತಿಂಗಳ ಮೊದಲು ವಿಮಾನ, ಹೊಟೇಲ್‌ಗಳನ್ನೂ ಕಾಯ್ದಿರಿಸಿಬಿಡುತ್ತಾರೆ ಇಂಥವರು. ಅದಕ್ಕಾಗಿಯೇ ಮೀಸಲಾದ ಟ್ರಾವೆಲ್ ವೆಬ್‌ಸೈಟ್‌ಗಳು (Travel website) ಸಿಕ್ಕಾಪಟ್ಟೆ ಇವೆ. ಈ ಪೈಕಿ ಯಾವುದರಲ್ಲಿ ಕಡಿಮೆ ಬೆಲೆಗೆ ವಿಮಾನ, ಕಾರು, ಹೊಟೇಲ್ ಇತ್ಯಾದಿಗಳ ಬುಕಿಂಗ್ ಲಭ್ಯವಿದೆ ಎಂಬುದನ್ನು ಅಳೆದು- ತೂಗಿ ಬದುಕುತ್ತಿರುವ ವೆಬ್‌ಸೈಟ್‌ಗಳಿಗೆ ಬರವಿಲ್ಲ. ಅಂದರೆ ಅಷ್ಟೊಂದು ಉತ್ಸಾಹದಿಂದ ನಾವೆಲ್ಲ ಪ್ರವಾಸ ಹೊರಡುತ್ತೇವೆ ಎಂದರ್ಥವಲ್ಲವೇ?

ಯಾಕಷ್ಟು ಆಸಕ್ತಿ ನಮಗೆ ಪ್ರವಾಸ ಹೋಗುವುದೆಂದರೆ? ಪ್ರವಾಸ, ಪ್ರಯಾಣಗಳಿಗಾಗಿ ಅಷ್ಟೊಂದು ಖರ್ಚು ಮಾಡುವುದು ನಮಗೆ ಹೇಗೆ ಹೊರೆ ಎನಿಸುವುದಿಲ್ಲ? ಪ್ರವಾಸದ ಅನುಭವದ ಮೂಲಕ ಏನನ್ನು ನಿರೀಕ್ಷಿಸುತ್ತೇವೆ? ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಹೋಗುವ ತವಕ ಹೀಗೆ ವ್ಯಕ್ತವಾಗುತ್ತದೆಯೇ? ಹೊಸದೇನನ್ನೋ ಹುಡುಕುವ ತುಡಿತವೇ? ನಂನಮ್ಮ ಆಸಕ್ತಿಗಳನ್ನು ಪೋಷಿಸಿಕೊಳ್ಳುವ ದಾರಿಗಳಲ್ಲಿ ಇದೂ ಒಂದೇ? ಒಂಟಿಯಾಗಿ, ಜಂಟಿಯಾಗಿ, ಗುಂಪಿನಲ್ಲಿ- ಹೇಗೇ ಪ್ರವಾಸ ಹೋದರೂ ಬಂದಿದ್ದಕ್ಕೆಲ್ಲಾ ಹೊಂದಿಕೊಳ್ಳುವ ನಾವು, ಉಳಿದಂತೆ ಬದುಕಿನಲ್ಲಿ ಸಣ್ಣ ಹೊಂದಾಣಿಕೆಗೂ ಸಿಡಿಮಿಡಿ ಮಾಡುತ್ತೇವಲ್ಲ, ಏನಿದರರ್ಥ? ಹಾಗಾದರೆ ಕೋಶ ಓದುವುದಕ್ಕಿಂತ ದೇಶ ಸುತ್ತುವುದೇ ಸೂಕ್ತವೇ?

ಪ್ರವಾಸಕ್ಕೆ ಸುದೀರ್ಘ ಇತಿಹಾಸವಿದೆ. ಭಾರತಕ್ಕೆ ಬಂದ ಪ್ರವಾಸಿಗರ ಚರಿತ್ರೆ ಪ್ರಾರಂಭವಾಗುವುದು ಕ್ರಿಸ್ತ ಪೂರ್ವದಲ್ಲಿ. ಗ್ರೀಕ್ ದೊರೆ ಸೆಲ್ಯೂಕಸ್ ನಿಕೇಟರ್ನ ರಾಯಭಾರಿ ಮೆಗಾಸ್ತನೀಸ್ನು ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ ಭೇಟಿ ನೀಡಿದ್ದ. ನಂತರ ಚಂದ್ರಗುಪ್ತನ ಮಗ ಬಿಂದುಸಾರನ ಕಾಲದಲ್ಲಿ ಡಿಮಾಕಸ್, ಗುಪ್ತ ಸಾಮ್ರಾಜ್ಯದ ಚಂದ್ರಗುಪ್ತ ವಿಕ್ರಮಾದಿತ್ಯನ ಕಾಲದಲ್ಲಿ ಫಾಹಿಯಾನ್, ಹರ್ಷವರ್ಧನನ ಕಾಲದಲ್ಲಿ ಹ್ಯೂಯೆನ್ ತ್ಸಾಂಗ್… ಹೀಗೆ ಅರಬ್, ಪರ್ಷಿಯಾ, ಗ್ರೀಸ್, ಪೋರ್ಚುಗಲ್ ಮುಂತಾದ ಹಲವಾರು ದೇಶಗಳ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದರು. ಭಾರತಕ್ಕೆ ಬರುವುದಕ್ಕೆ ಪ್ರತಿಯೊಬ್ಬರಿಗೂ ಅವರವರದ್ದೇ ಕಾರಣಗಳಿದ್ದರೂ, ಅವರು ತಮ್ಮ ಭಾರತ ಭೇಟಿಯನ್ನು ವರ್ಣಿಸಿದ ಪುಸ್ತಕಗಳಿಂದು ಆ ಕಾಲಘಟ್ಟದ ಚಾರಿತ್ರಿಕ ದಾಖಲೆಗಳಾಗಿ ಮಹತ್ವ ಪಡೆದಿವೆ. ವ್ಯಾಪಾರದ ನೆವದಲ್ಲಿ ಭಾರತಕ್ಕೆ ಬಂದವರು ಮಾಡಿದ ಅನಾಹುತಗಳನ್ನಂತೂ ಮರೆಯಲೇ ಸಾಧ್ಯವಿಲ್ಲ.

ಇವೆಲ್ಲಾ ಯಾರಾರೋ ಪ್ರವಾಸಿಗರ ಮಾತಾಯಿತು. ನಮ್ಮದೂಂತ ಒಂದಿಷ್ಟು ಅನುಭವಗಳು ಇರಬೇಡವೇ? ಮಕ್ಕಳಿದ್ದಾಗ ಹೆತ್ತವರ ಮಡಿಲಲ್ಲಿ ಕೂತು ಲೋಕ ನೋಡಿದ್ದು ಬಿಟ್ಟರೆ, ನಮ್ಮದೇ ಅನುಭವಗಳು ಬಿಚ್ಚಿಕೊಳ್ಳುವುದು ಸಾಮಾನ್ಯವಾಗಿ ಶಾಲೆಯ ಪ್ರವಾಸದ ದಿನಗಳಲ್ಲಿ. ಶಾಲೆಯ ಪ್ರವಾಸವೆಂದರೆ ಅಂದಿನ ಕಾಲದ ಕೆಂಪು ಬಸ್ಸಿನ ಸವಾರಿ. ಡಿಸೆಂಬರ್ ಚಳಿಯಲ್ಲಿ ನಡುಗುತ್ತ ಬೆಳಗ್ಗೆ ಬೇಗ ಆರಂಭವಾಗುತ್ತಿದ್ದ ಬಸ್ ಪ್ರಯಾಣ, ಕಿಟಕಿ ಪಕ್ಕದ ಜಾಗಕ್ಕೆ ಜಗಳಾಟ, ಪ್ರಯಾಣದ ಮೋಜು-ಮಸ್ತಿ, ಜಗಳದಲ್ಲಿ ಅಂತ್ಯವಾಗುತ್ತಿದ್ದ ಅಂತ್ಯಾಕ್ಷರಿ, ಇಂಥ ಜಗಳವನ್ನೆಲ್ಲಾ ಮರೆಸುತ್ತಿದ್ದ ಗುಬ್ಬಿ ಎಂಜಲಿನ ತಿನಿಸುಗಳು, ಬಿಸಿಬೇಳೆಭಾತ್-ಮೊಸರನ್ನದ ಬುತ್ತಿಯೂಟ, ಇವೆಲ್ಲ ಮುಗಿದು ದಿನವಿಡೀ ತಿರುಗಿ ಸುಸ್ತಾಗಿ ರಾತ್ರಿ ಎನ್ನುವಾಗ ಒಬ್ಬರ ಮೇಲೊಬ್ಬರು ಒರಗಿ ಬಿದ್ದಾಗಿರುತ್ತಿತ್ತು. ನಡುರಾತ್ರಿಗೆ ಮನೆ ಸೇರುವಷ್ಟರಲ್ಲಿ ನಿದ್ದೆಗಣ್ಣಲ್ಲೇ ನಡೆಯುತ್ತಿದ್ದೇವೆ ಎಂಬ ಭಾವ ಬರುತ್ತಿತ್ತು. ಮಾರನೇ ದಿನಕ್ಕೆ ಒಂದಿಷ್ಟು ಮಕ್ಕಳಿಗೆ ಕೈನೋವು- ಕಾಲು ನೋವು, ಥಂಡಿ, ಕೆಮ್ಮು, ಜ್ವರ ಬಂದರೆ ಪ್ರವಾಸದ ಅನುಭವ ಪೂರ್ಣಗೊಂಡಂತೆ.

ಕಾಲೇಜಿಗೆ ಬರುತ್ತಿದ್ದಂತೆ ಈ ಅನುಭವಗಳು ಇನ್ನಷ್ಟು ವಿಸ್ತಾರವಾಗುತ್ತಿದ್ದವು. ವಾರ್ಷಿಕ ಪ್ರವಾಸ, ಶೈಕ್ಷಣಿಕ ಪ್ರವಾಸ, ಸಾಂಸ್ಕೃತಿಕ ವಿನಿಮಯ ಮುಂತಾದ ನಾನಾ ಹೆಸರಿನ ಪ್ರವಾಸಗಳು ಹಲವಾರು ದಿನಗಳ ಮಟ್ಟಿಗೆ ಇರುತ್ತಿದ್ದವು. ಶಾಲೆಯ ಮುಗ್ಧ ಜಗತ್ತಿನ ಬದಲಿಗೆ ಕಾಲೇಜಿನಲ್ಲಿ ಕಾಣುತ್ತಿದ್ದ ರಂಗಿನ ಜಗತ್ತು ಈ ಪ್ರವಾಸಗಳ ಮೇಲೂ ಪರಿಣಾಮ ಬೀರುತ್ತಿತ್ತಲ್ಲ. ಆದರೆ ತರಗತಿಯಲ್ಲಿನ ಸ್ಪರ್ಧೆ, ಮತ್ಸರ, ಜಗಳ, ಮುನಿಸು ಮುಂತಾದವೆಲ್ಲಾ ಒಂದಿಷ್ಟು ಹಿಂದಾಗಿ ಸ್ನೇಹಿತರು, ಗೆಳೆತನ, ಆತ್ಮೀಯತೆ, ಅಲ್ಲೊಂದಿಲ್ಲೊಂದು ಪ್ರೀತಿ- ಇಂಥವೆಲ್ಲಾ ಗರಿಗೆದರುವುದು ಪ್ರವಾಸಗಳಲ್ಲೇ. ಶಾಖಾಹಾರಿ ಎನಿಸಿಕೊಂಡವರು ಚಿಕನ್ ಜಗಿಯುವುದು, ಗೌರಮ್ಮನಂತಿದ್ದವರು ಮಿನಿ ಹಾಕುವುದು, ʻಗಾಂಧಿʼ ಎಂಬ ಬಿರುದಾಂಕಿತರು ಅಮಲ್ದಾರರಾಗುವುದು- ಈ ರೀತಿಯ ಅಚ್ಚರಿಗಳೆಲ್ಲ ಸಂಭವಿಸುವುದಕ್ಕೆ ಇಂಥ ಸಂದರ್ಭಗಳೇ ಬೇಕು. ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದ ನೆಪದಲ್ಲಿ ಕನ್ನಡ ಓದುಗರ ಜ್ಞಾನದ ಮಟ್ಟವನ್ನೇ ಏರಿಸಿದ ಅದ್ಭುತ ಕೃತಿ ʻಹಸಿರುಹೊನ್ನುʼನ್ನು ಇಲ್ಲಿ ನೆನಪಿಸಿಕೊಳ್ಳದಿದ್ದರೆ ಹೇಗೆ? ಈ ಕೃತಿಯ ಲೇಖಕ ಬಿ.ಜಿ.ಎಲ್. ಸ್ವಾಮಿ ಅವರ ಹಲವಾರು ದಶಕಗಳ ಹಿಂದಿನ ಶೈಕ್ಷಣಿಕ ಪ್ರವಾಸದ ವಿವರಣೆಗಳು ಇಂದಿಗೂ ನಗೆಯುಕ್ಕಿಸುತ್ತವೆ.

solo travel

ಮಕ್ಕಳ ಕಥೆಗಳಲ್ಲಿ, ಗೊತ್ತಿಲ್ಲದ ಅನೂಹ್ಯ ಲೋಕಕ್ಕೆ ಕರೆದೊಯ್ಯುವ ಸರಣಿಗಳು ಎಷ್ಟೊಂದು ಹುಚ್ಚು ಹಿಡಿಸಿದ್ದವಲ್ಲ. ಗಲಿವರನ ಸಾಹಸ ಯಾತ್ರೆ, ಮ್ಯಾಜಿಕ್ ಟ್ರೀ ಹೌಸ್, ಫೇಮಸ್ ಫೈವ್ ಮುಂತಾದ ಸರಣಿಗಳಲ್ಲಿ ಎಲ್ಲೆಲ್ಲೋ ಅಲೆಯುತ್ತಾ ಏನೇನೋ ಸಾಹಸ ಮಾಡುವ ಮಕ್ಕಳ ವಿವರಗಳು ಎಳೆಯ ಮನಸ್ಸುಗಳ ತುಂಬಾ ಬಣ್ಣದ ಚಿತ್ತಾರ ಮೂಡಿಸುತ್ತಿರಲಿಲ್ಲವೇ. ಲೋಕ ಸುತ್ತುತ್ತಲೇ ಕಥೆ ಹೇಳುತ್ತಿದ್ದ ಪೂರ್ಣಚಂದ್ರ ತೇಜಸ್ವಿ (Purnachandra Tejaswi) ಅವರ ಸಾಹಿತ್ಯವನ್ನು ಎದೆಗವಚಿಕೊಳ್ಳದೇ ಇರುವವರು ಯಾರು? ಭಾರತಕ್ಕೆ ಮರಳಿದ ಆರಂಭದ ದಿನಗಳಲ್ಲಿ ದೇಶದ ಉದ್ದಗಲ ಸಂಚರಿಸಿದ್ದರಲ್ಲ ಗಾಂಧೀಜಿ… ಪ್ರವಾಸದ ಹರವು ವಿಸ್ತರಿಸಿದಂತೆ, ಅರಿವೂ ವಿಸ್ತರಿಸುತ್ತದೆ ಎಂದರ್ಥವೇ?

ಪ್ರವಾಸಗಳೆಂದರೆ ಎಲ್ಲವೂ ಒಂದೇ ಅಲ್ಲ; ನಾನಾ ಬಗೆಯುಂಟು. ಕೃಷಿ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ, ಆರೋಗ್ಯ- ಸಂಬಂಧೀ ಪ್ರವಾಸಗಳು, ಆಹಾರ ಸವಿಯಲೆಂದು, ಪರಂಪರೆಯ ದರ್ಶನಕ್ಕೆ, ಧಾರ್ಮಿಕ ಕಾರಣಗಳಿಗಾಗಿ- ಹೀಗೆ ಬಹಳಷ್ಟು ಇವೆ. ಒಂಟಿಯಾಗಿ ಲೋಕ ಸುತ್ತುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದಂತೆಯೇ, ಸೈಕಲ್, ಬೈಕ್‌ಗಳ ಮೇಲೆ ವಿಶ್ವ ಪರ್ಯಟನೆ (world tour) ಮಾಡುವ ಉಮೇದುವಾರರ ಬಳಗ ಬೆಳೆದಿದೆ. ತೀರ್ಥಯಾತ್ರೆಯೆಂದರೆ ತಿರುಗಿಬಾರದ ಯಾತ್ರೆ ಎಂದೇ ಹೇಳಲಾಗುತ್ತಿದ್ದ ಕಾಶಿ- ರಾಮೇಶ್ವರದಂಥ ಯಾತ್ರೆಗಳು ಈಗ ಪಕ್ಕದ ಮನೆಗೆ ಹೋದಷ್ಟೇ ಸುಲಭವಾಗಿವೆ. ತಿರುಗಾಟದ ಕಾರಣ ಏನೇ ಇರಲಿ, ಪ್ರವಾಸದ ಪ್ರಯಾಸ, ಪ್ರಹಸನ ಇತ್ಯಾದಿ ಯಾವುದಕ್ಕೂ ಜಗ್ಗದೆ ಬ್ಯಾಕ್ಪ್ಯಾಕ್ ಬೆನ್ನಿಗೇರಿಸುವವರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಿರುವುದಂತೂ ನಿಜ.

ಇದನ್ನೂ ಓದಿ: Dashamukha Column: ದಶಮುಖ ಅಂಕಣ: ಅಗಲುವಿಕೆಯೆಂಬ ಅಳು-ನಗುವಿನ ರಸಪಾಕ

ಪ್ರವಾಸದ ಹಿನ್ನೆಲೆಯಲ್ಲಿ ಸೃಷ್ಟಿಯಾದ ಸಾಹಿತ್ಯಗಳು ಯಾವುದೇ ಭಾಷೆಯ ದೊಡ್ಡ ಆಸ್ತಿ. ಕನ್ನಡದಲ್ಲಿ ಪ್ರವಾಸ ಸಾಹಿತ್ಯಕ್ಕೆ ದೀರ್ಘ ಇತಿಹಾಸವೇ ಇದೆ. ೧೮೯೦ರಲ್ಲಿ ಪ್ರಕಟವಾದ, ಕರ್ಕಿ ವೆಂಕಟರಮಣ ಶಾಸ್ತ್ರಿ ಅವರ ʻದಕ್ಷಿಣ ಭಾರತ ಯಾತ್ರೆʼ ಎಂಬ ಪ್ರವಾಸ ಗ್ರಂಥ ಈ ನಿಟ್ಟಿನಲ್ಲಿ ನಾಂದಿ ಹಾಡಿರಬಹುದು. ವಿ. ಸೀತಾರಾಮಶಾಸ್ತ್ರಿ ಅವರ ʻಪಂಪಾಯಾತ್ರೆʼ, ವಿ.ಕೃ. ಗೋಕಾಕರ ʻಸಮುದ್ರದೀಚೆಯಿಂದʼ, ಶಿವರಾಮ ಕಾರಂತರ ʻಅಪೂರ್ವ ಪಶ್ಚಿಮʼ, ದಿನಕರ ದೇಸಾಯಿಯವರ ʻನಾ ಕಂಡ ಪಡುವಣʼ, ಬಿ. ಜಿ. ಎಲ್. ಸ್ವಾಮಿ ಅವರ ʻಅಮೆರಿಕೆಯಲ್ಲಿ ನಾನುʼ, ಶ್ರೀರಂಗ ಅವರ ʻಶ್ರೀರಂಗಯಾತ್ರೆʼ ಎ. ಎನ್. ಮೂರ್ತಿರಾಯರ ʻಅಪರವಯಸ್ಕನ ಅಮೆರಿಕಾ ಯಾತ್ರೆʼ, ಗೊರೂರು ರಾಮಸ್ವಾಮಿ ಅಯ್ಯಂಗಾರರ ʻಅಮೆರಿಕಾದಲ್ಲಿ ಗೊರೂರುʼ- ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ಕುರಿತ ಪುಸ್ತಕ ಮತ್ತು ಬಿಡಿ ಲೇಖನಗಳನ್ನು ಸೇರಿಸಿದರೆ- ಲೆಕ್ಕ ಇಡುವುದಕ್ಕೇ ಸಾಧ್ಯವಿಲ್ಲದಷ್ಟಿದೆ ಪ್ರವಾಸ ಸಾಹಿತ್ಯ.

ಇವೆಲ್ಲಾ ಗದ್ಯ ಸಾಹಿತ್ಯದ ಮಾತಾಯಿತು. ಈ ಬಗ್ಗೆ ಮುದ ನೀಡುವಂಥ ಪದ್ಯಗಳೂ ದೊರೆಯಬಹುದು. ಪು.ತಿ.ನ ಅವರ ಪಯಣಿಗರ ಹಾಡನ್ನು ಮರೆಯಲಾಗದು. “ಗುಡಿಯಾಚೆ ಗಡಿಯಾಚೆ ಗಿಡದಾಚೆಗೆ/ ಹೋಗೋಣ ಬನ್ನಿರೋ ಹೊಸನಾಡಿಗೆ/ ಹೊಚ್ಚಹೊಸ ನೋಟಕ್ಕೆ ಅಚ್ಚ ಬಾಳಾಟಕ್ಕೆ/ ನೆಚ್ಚುಗೆಯ ಕೆಳೆಯರೇ ಹೊಸ ನಾಡಿಗೆ/ … ಒಂದು ಯಾದವಗಿರಿ ನಾಳೆ ಹಳೆಬೀಡು/ ಮುಂದೆ ಜಗದಚ್ಚರಿ ಗೊಮ್ಮಟನ ಮೇಡು/ ಕಡಲು ಕರೆಯಲು ಹಿರಿಯ ಕಮರಿಯನೆ ನೆಗೆವ/ ಪ್ರಣಯ ರುದ್ರೆಯ ಕಂಡು ಸೋಜಿಗವ ಪಡುವ” – ಹೀಗೆ ಕೂತಲ್ಲೇ ಬಹಳಷ್ಟು ಕಂಡರಿಸುವ ಕಾಣ್ಕೆ ಈ ಸಾಲುಗಳಿಗಿವೆ.

ಅಂದಹಾಗೆ, ನಾಳೆ ವಿಶ್ವ ಪ್ರವಾಸೋದ್ಯಮ ದಿನ (world tourism day). ಆ ನೆವದಲ್ಲಿ ಕೂತಲ್ಲೇ ಲೋಕ ಸುತ್ತಿದ್ದಾಯ್ತು. ಇದರಿಂದ ತಿರುಗಾಟದ ಉತ್ಸಾಹ ಬಂದರೆ, ತಡ ಮಾಡಬೇಡಿ; ಏಳಿ… ಹೊರಡಿ!

ಇದನ್ನೂ ಓದಿ: ದಶಮುಖ ಅಂಕಣ: ತರ್ಕ ಮೀರಿದ ಭಾವಗಳ ಆಪ್ತಗೊಳಿಸುವುದೇ ಹಬ್ಬ!

Continue Reading

ಅಂಕಣ

Raja Marga Column : ನಿಮ್ಮ ಮಕ್ಕಳನ್ನು ಸೂಪರ್‌ ಹೀರೊ ಮಾಡಲು ಹೋಗ್ಬೇಡಿ; ರಿಯಾಲಿಟಿ ಶೋಗಳಿಗೆ ಬೇಕು ಬ್ರೇಕ್!

Raja Marga Column‌ : ಟಿವಿ ವಾಹಿನಿಗಳ ಮಕ್ಕಳ ರಿಯಾಲಿಟಿ ಶೋಗಳಿಗೆ ಸ್ವಲ್ಪ ಬ್ರೇಕ್ ಬೇಕಿದೆ! ಯಾಕೆಂದರೆ ಅವು ಮಕ್ಕಳ ಬಾಲ್ಯವನ್ನು ಕಸಿಯುತ್ತಿವೆ. ದುಡ್ಡಿನ ದಂಧೆಯಾಗುತ್ತಿವೆ. ಈ ಬಗ್ಗೆ ಎಚ್ಚರವಿರಲಿ.

VISTARANEWS.COM


on

Edited by

Reality Shows neads a break
ಇಲ್ಲಿ ಬಳಸಿದ ಎಲ್ಲ ಮಕ್ಕಳ ಚಿತ್ರಗಳು ಕೇವಲ ಪ್ರಾತಿನಿಧಿಕ
Koo
RAJAMARGA

ಪ್ರಣವ್ ಧನವಾಡೇ : ಈ ಹೆಸರನ್ನು ಎಲ್ಲೋ ಕೇಳಿದ ನೆನಪು ನಿಮಗಿದೆಯಾ?
ಹೌದು! 2016ರಲ್ಲಿ ಮುಂಬೈಯ ಈ 16 ವರ್ಷದ ಹುಡುಗ (Pranav Dhanawade) ಒಂದು ಕ್ಲಾಸ್ ಒನ್ ಕ್ರಿಕೆಟ್ ಪಂದ್ಯದಲ್ಲಿ ಬರೋಬ್ಬರಿ 1000+ ರನ್ ಬಾರಿಸಿ ಮಿಂಚಿದ್ದ! ಅವನಿಗೆ ಆ ದಿನಗಳಲ್ಲಿ ಜಾಗತಿಕ ಮಟ್ಟದ ಪ್ರಚಾರ ಸಿಕ್ಕಿತ್ತು. ಸಚಿನ್ ತೆಂಡುಲ್ಕರ್ (Sachin Tendulkar) ಜೊತೆಗೆ ಆತನ ಭರ್ಜರಿ ಹೋಲಿಕೆಯು ಕೂಡ ನಡೆಯಿತು.ನೂರಾರು ಸನ್ಮಾನಗಳು ಮತ್ತು ನಗದು ಬಹುಮಾನಗಳು ಆತನಿಗೆ ದೊರೆತವು!

ಆದರೆ ಅವನು ಅದೇ ವೇಗದಲ್ಲಿ ಮುಂದೆ ಹೋಗಿರುತ್ತಿದ್ದರೆ ಅವನಿಗೆ ಈಗ 23 ವರ್ಷ ಆಗಿರಬೇಕಿತ್ತು! ಅವನು ಕನಿಷ್ಠ ಪಕ್ಷ ರಣಜಿ ಪಂದ್ಯ ಆದರೂ ಆಡಬೇಕಿತ್ತು! ಆದರೆ ಅವನು ಈಗ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಎನ್ನುವುದು ನಮಗೆ ಯಾರಿಗೂ ಗೊತ್ತಿಲ್ಲ! (Raja Marga Column)

ನಮ್ಮ ಹೆಚ್ಚಿನ ಟಿವಿ ರಿಯಾಲಿಟಿ ಶೋ (Reality Show) ಹೀರೋಗಳ ಕಥೆ ಕೂಡ ಹೀಗೆಯೇ ಇದೆ!

ಖಾಸಗಿ ಟಿವಿಯ ವಾಹಿನಿಗಳಲ್ಲಿ (Private TV Channels) ಇಂದು ಪ್ರಸಾರ ಆಗುತ್ತಿರುವ ನೂರಾರು ರಿಯಾಲಿಟಿ ಶೋಗಳು ಮತ್ತು ಸ್ಪರ್ಧೆಗಳು ಹೆಚ್ಚು ಪ್ರಚಾರದಲ್ಲಿವೆ. ಅಂತ ಹಲವು ಟಿವಿ ಶೋಗಳು ಹಿಂದೆ ಕೂಡ ನಡೆದಿವೆ. ಅದರ ಎಲ್ಲ ವಿಜೇತರ ಪ್ರತಿಭೆಯ ಮೇಲೆ ಗೌರವ ಇರಿಸಿಕೊಂಡು ನಾನು ಕೇಳುವ ಒಂದೇ ಪ್ರಶ್ನೆ — ಅದರ ಸಾವಿರಾರು ವಿಜೇತರು ಮುಂದೆ ಎಲ್ಲಿಗೆ ಹೋಗುತ್ತಾರೆ? ಅವರ ಅನನ್ಯ ಪ್ರತಿಭೆಗಳನ್ನು ಅವರು ಎಷ್ಟು ಬೆಳೆಸಿದ್ದಾರೆ? ಅದರಿಂದ ನಾಡಿನ ಸಂಸ್ಕೃತಿಗೆ ಎಷ್ಟು ಲಾಭ ಆಗಿದೆ?

Pranav Dantwade
ಪ್ರಣವ್‌ ದಂತವಾಡೆ

ಶಾಲಾ ಮಟ್ಟದಲ್ಲಿ ನೂರಾರು ಸಾಂಸ್ಕೃತಿಕ ಸ್ಪರ್ಧೆಗಳು, ಪ್ರತಿಭಾ ಸ್ಪರ್ಧೆಗಳು ನಿರಂತರವಾಗಿ ನಡೆಯುತ್ತಿವೆ. ಅಲ್ಲಿ ವಿಜೇತರ ಘೋಷಣೆ ಆಗುತ್ತದೆ. ಅದರಲ್ಲಿ ಎಷ್ಟು ಜನರು ಮುಂದೆ ಅವರ ಪ್ರತಿಭೆಯನ್ನು ತಮ್ಮ ಹೊಟ್ಟೆಪಾಡಾಗಿ ಮಾಡಿಕೊಳ್ಳುತ್ತಾರೆ? ಎಷ್ಟು ಮಂದಿ ತಮ್ಮ ಕಲೆಯನ್ನು ಪ್ರೀತಿಸುತ್ತಾರೆ? ತಮ್ಮ ಕಲೆಯಿಂದ ಸಮಾಜವನ್ನು ಬೆಳಗುತ್ತಾರೆ? ಕನಿಷ್ಠ ಪಕ್ಷ ಆತ್ಮ ಸಂತೋಷಕ್ಕಾಗಿ ಆದರೂ ಆ ಕಲೆಯನ್ನು ಮುಂದೆ ಕಲಿಯುತ್ತಾರಾ?

ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದಾಗ ನಮಗೆ ಹಲವು ಕಡೆ ನಿರಾಸೆಯೇ ಆಗುತ್ತದೆ ಮತ್ತು ಕಹಿ ಸತ್ಯಗಳು ಗೋಚರ ಆಗುತ್ತವೆ.

ಹಾಗಾದರೆ ಟಿವಿ ವಾಹಿನಿಗಳಿಂದ, ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಿಂದ ಪ್ರತಿಭಾ ಶೋಧ ಆಗ್ತಾ ಇಲ್ಲವೇ ಎನ್ನುವ ಪ್ರಶ್ನೆ ನೀವು ಕೇಳಬಹುದು. ಖಂಡಿತ ಆಗುತ್ತಿದೆ! ಆದರೆ ಅದರ ಅಡ್ಡ ಪರಿಣಾಮಗಳ ಬಗ್ಗೆ ಇದುವರೆಗೆ ಯಾರೂ ಯೋಚನೆ ಮಾಡಿದ ಹಾಗಿಲ್ಲ.

Childrens reality Shows

ಉದಾಹರಣೆಗೆ ಇಂದು ಬಾಲಿವುಡನ ಹಿನ್ನೆಲೆ ಗಾಯನ ಲೋಕದ ಸೂಪರ್ ಸ್ಟಾರ್‌ಗಳಾದ ಸುನಿಧಿ ಚೌಹಾಣ್, ಶ್ರೇಯಾ ಘೋಷಾಲ್, ಸೋನು ನಿಗಮ್ ಇವರೆಲ್ಲರೂ ಬೇರೆ ಬೇರೆ ರಿಯಾಲಿಟಿ ಶೋಗಳ ಮೂಲಕ ಬೆಳಕಿಗೆ ಬಂದವರು. ಕನ್ನಡದಲ್ಲಿಯೂ ಅಂತವರು ತುಂಬಾ ಮಂದಿ ಇದ್ದಾರೆ. ಆದರೆ ಅವರಲ್ಲಿ ಹೆಚ್ಚಿನ ಸ್ಟಾರ್‌ಗಳು ಒಳ್ಳೆಯ ನಿರ್ಣಾಯಕರ ಮೂಲಕ ಆಯ್ಕೆ ಆದವರು. ಇನ್ನೂ ವಿವರವಾಗಿ ಹೇಳಬೇಕೆಂದರೆ ಸುನಿಧಿ ಚೌಹಾಣ್, ಶ್ರೇಯಾ ಘೋಷಾಲ್, ಸೋನು ನಿಗಮ್ ಆಯ್ಕೆ ಆಗುವಾಗ ಲತಾ ಮಂಗೇಶ್ಕರ್ ಅಂತವರು ನಿರ್ಣಾಯಕರಾಗಿದ್ದರು!

ಪ್ರತಿಭೆಗಳಿಗೆ ಆಗ ಒಂದಿಷ್ಟೂ ಅನ್ಯಾಯ ಆಗುತ್ತಾ ಇರಲಿಲ್ಲ.

Shreya Ghoshal

ಅಪಾಯಕಾರಿ ಆದ ಇಂಟರ್ನೆಟ್ ವೋಟಿಂಗ್!

ಆದರೆ ಮುಂದೆ ಯಾವಾಗ ಇಂಟರ್ನೆಟ್ ಮೆಸೇಜ್‌ಗಳ ಮೂಲಕ ವೋಟಿಂಗ್ ಆರಂಭ ಆಯಿತೋ ಅಲ್ಲಿಗೆ ದುಡ್ಡು, ಪ್ರಭಾವ ಇದ್ದವರು ವೋಟುಗಳನ್ನು ಖರೀದಿ ಮಾಡುವುದು ಆರಂಭ ಆಯಿತು. ನಮಗೆ ವೋಟ್ ಮಾಡಿ ಎಂದು ಕೈ ಮುಗಿದು ಭಿಕ್ಷೆ ಬೇಡುವ ದೈನ್ಯತೆಯು ಆ ಪ್ರತಿಭೆಗಳಿಗೆ ಬರಬಾರದಿತ್ತು.

ಕನ್ನಡದಲ್ಲಿ ಕೂಡ ಆರಂಭದ ಎದೆ ತುಂಬಿ ಹಾಡುವೆನು, ಕಾಮಿಡಿ ಕಿಲಾಡಿ, ಮಜಾ ಟಾಕೀಸ್, ಡ್ರಾಮಾ ಜೂನಿಯರ್ ರಿಯಾಲಿಟಿ ಶೋನಲ್ಲಿ ಗೆದ್ದವರು ಮುಂದೆ ನೂರಾರು ಅವಕಾಶಗಳನ್ನು ಪಡೆದರು. ಅವರ ಪ್ರತಿಭೆಯನ್ನು ನಾಡು ಗುರುತಿಸಿ ಬೆಳೆಸಿತು.

Childrens reality Shows

ಆದರೆ ಇಲ್ಲಿ ಕೂಡ ಇತ್ತೀಚಿನ ವರ್ಷಗಳಲ್ಲಿ ಯಾವಾಗ ಇಂಟರ್ನೆಟ್ ವೋಟಿಂಗ್ ಆರಂಭ ಆಯಿತೋ ಅಲ್ಲಿಂದ ವೋಟ್ ಖರೀದಿಗಳು, ಪ್ರಭಾವಗಳು ಆರಂಭ ಆದವು. ಆ ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳಿಗೆ ತರಬೇತು ಕೊಡುವ ಹಲವು ಶಾಲೆಗಳು ಮಹಾನಗರಗಳಲ್ಲಿ ನಾಯಿಕೊಡೆಗಳ ಹಾಗೆ ಆರಂಭ ಆದವು. ಹೆತ್ತವರು ತಮ್ಮ ಮಕ್ಕಳನ್ನು ಸೂಪರ್ ಹೀರೋ ಮಾಡುವ ಜಿದ್ದಿಗೆ ಬಿದ್ದು ಅಂತಹ ಶಾಲೆಗಳಿಗೆ ದುಡ್ಡು ಸುರಿಯಲು ತೊಡಗಿದರು.

ಆದರೆ ಇಲ್ಲಿ ಕೂಡ ಬಡವರ ಮಕ್ಕಳು, ಗ್ರಾಮಾಂತರ ಭಾಗದ ಪ್ರತಿಭೆಗಳು ನಿಜವಾಗಿಯೂ ಅವಕಾಶಗಳಿಂದ ವಂಚಿತರಾದರು!

ಒಂದು ಸಮೀಕ್ಷೆ ಮಾಡಿ ನೋಡಿ. ಇತ್ತೀಚಿನ ರಿಯಾಲಿಟಿ ಶೋಗಳಲ್ಲಿ ಗೆದ್ದವರಲ್ಲಿ ಎಷ್ಟು ಮಂದಿ ಹಳ್ಳಿಯ ಮಕ್ಕಳು ಇದ್ದಾರೆ? ಎಷ್ಟು ಮಂದಿ ಬಡವರ ಮಕ್ಕಳಿದ್ದಾರೆ? ಎಷ್ಟು ಮಂದಿ ಕನ್ನಡ ಮಾಧ್ಯಮದ ಮಕ್ಕಳಿದ್ದಾರೆ?
ಖಂಡಿತ ಇದ್ದಾರೆ. ಆದರೆ ಅವರ ಪ್ರಮಾಣ ತುಂಬಾ ಕಡಿಮೆ ಇದೆ!

ಜಗತ್ತಿನ ಪ್ರತೀ ಮಗುವೂ ಪ್ರತಿಭಾವಂತ ಮಗುವೇ!

ಈ ಜಗತ್ತಿನ ಪ್ರತೀ ಮಕ್ಕಳೂ ಪ್ರತಿಭಾವಂತರೇ ಆಗಿದ್ದಾರೆ. ಅವರಲ್ಲಿ ಒಂದಲ್ಲ ಒಂದು ಪ್ರತಿಭೆಯನ್ನು ಲೋಡ್ ಮಾಡಿ ಭಗವಂತ ಈ ಜಗತ್ತಿಗೆ ಅವರನ್ನು ಕಳುಹಿಸಿರುತ್ತಾನೆ. ನೀವು ಯಾವ ಮಕ್ಕಳನ್ನು ವಿಶೇಷ ಚೇತನ ಮಕ್ಕಳು ಎಂದು ಕರೆಯುತ್ತೀರೋ ಅವರಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಆ ಪ್ರತಿಭೆಯ ಪೋಷಣೆಗೆ ವೇದಿಕೆ ಬೇಕು. ತರಬೇತು ಬೇಕು. ಹೆತ್ತವರ, ಶಿಕ್ಷಕರ, ಸಮಾಜದ ಪ್ರೋತ್ಸಾಹ ಬೇಕು.

Childrens reality Shows

ಅವರ ಶಾಪ ಆದರೆ ನಮ್ಮ ಮಕ್ಕಳು ಎಷ್ಟು ಪ್ರತಿಭೆ ಹೊಂದಿದ್ದಾರೆ ಎಂದರೆ ಅವರು ಸ್ಪರ್ಧೆಯ ಸೋಂಕಿಲ್ಲದೆ ಕೂಡ ತಮ್ಮ ಅಗಾಧವಾದ ಪ್ರತಿಭೆಯನ್ನು ಬೆಳೆಸುವ ಸಾಮರ್ಥ್ಯವನ್ನು ಖಂಡಿತವಾಗಿ ಹೊಂದಿರುತ್ತಾರೆ! ಅವರನ್ನು ರೇಸಿನ ಕುದುರೆ ಮಾಡಿ ರೇಸಿಗೆ ನಿಲ್ಲಿಸುವ ಅಗತ್ಯ ಖಂಡಿತ ಇಲ್ಲ!

ಸ್ಪರ್ಧೆಗಳ ಬಗ್ಗೆ ಸಾಹಿತಿ ಶಿವರಾಮ ಕಾರಂತರು ಹೇಳಿದ್ದೇನು?

ಖ್ಯಾತ ಸಾಹಿತಿ ಮತ್ತು ಶಿಕ್ಷಣ ತಜ್ಞರಾದ ಕೋಟ ಶಿವರಾಮ ಕಾರಂತರು ಚಿಕ್ಕ ಮಕ್ಕಳನ್ನು ಸ್ಪರ್ಧೆಗೆ ನಿಲ್ಲಿಸಬೇಡಿ ಎಂದು ಹೇಳುತ್ತಿದ್ದರು. 12 ವರ್ಷಗಳವರೆಗೆ ಮಕ್ಕಳಿಗೆ ಯಾವ ಸ್ಪರ್ಧೆಯನ್ನು ಕೂಡ ಮಾಡಬಾರದು ಎನ್ನುವುದು ಅವರ ಖಚಿತ ಅಭಿಪ್ರಾಯ. ಸ್ಪರ್ಧೆ ಮಾಡಿದರೂ ಎಲ್ಲ ಮಕ್ಕಳಿಗೂ ಸಮಾನ ಬಹುಮಾನ ಕೊಡಿ ಎನ್ನುತ್ತಿದ್ದರು ಕಾರಂತರು.

Kota Shivarama Karant

ಆದರೆ ಇಂದು ಆಗುತ್ತಿರುವುದೆನು?

ಆದರೆ ಸ್ಪರ್ಧೆಯ ಗೆಲುವನ್ನು ತಮ್ಮ ಪ್ರತಿಷ್ಠೆಯನ್ನಾಗಿ ಮಾಡಿಕೊಂಡ ಶಿಕ್ಷಕರು ಮತ್ತು ಹೆತ್ತವರು ಮಕ್ಕಳನ್ನು ರೇಸಿನ ಕುದುರೆ ಮಾಡಿ ಈಗಾಗಲೇ ನಿಲ್ಲಿಸಿ ಆಗಿದೆ! ಈ ಸ್ಪರ್ಧೆಯಲ್ಲಿ ಸೋತವರ ಕಣ್ಣೀರನ್ನು ಮತ್ತು ಗೆದ್ದು ಬೀಗಿದವರ ಆನಂದ ಬಾಷ್ಪವನ್ನು ತಮ್ಮ ಟಿ ಆರ್ ಪಿ ಸರಕನ್ನಾಗಿ ಮಾಡಿಕೊಂಡ ಟಿವಿ ವಾಹಿನಿಗಳಿಗೆ ಈ ಸ್ಪರ್ಧೆಗಳು ಬೇಕೇ ಬೇಕು! ಮಕ್ಕಳ ಗೆಲುವನ್ನು ತಮ್ಮ ಪ್ರತಿಷ್ಠೆ ಎಂದು ಭಾವಿಸುವ ಹೆತ್ತವರು ಇರುವವರೆಗೆ ಈ ಮಕ್ಕಳ ರಿಯಾಲಿಟಿ ಶೋಗಳು ಖಂಡಿತ ನಿಲ್ಲುವುದಿಲ್ಲ. ಈ ಸ್ಪರ್ಧೆಗಳು ಮೆಗಾ ಮನರಂಜನೆಯ ಭಾಗ ಎಂದು ಪರಿಗಣಿಸುವ ವೀಕ್ಷಕರು ಕೂಡ ರಿಯಾಲಿಟಿ ಶೋ ಬೇಕು ಅಂತಾರೆ!

ತಮ್ಮ ಮಕ್ಕಳನ್ನು ಸೂಪರ್ ಹೀರೋ ಅಥವ ಸೂಪರ್ ಹೀರೋಯಿನ್ ಮಾಡಲು ಹೊರಟ ಹೆತ್ತವರು ಮಕ್ಕಳ ಬಾಲ್ಯವನ್ನು ಬರಿದು ಮಾಡುತ್ತಿದ್ದಾರೆ. ತಮ್ಮ ಮಕ್ಕಳು ಒಮ್ಮೆ ಟಿವಿಯಲ್ಲಿ ಕಂಡರೆ ಸಾಕು ಎಂದು ತೆವಲಿಗೆ ಪೋಷಕರು ಬಿದ್ದಿರುವ ಈ ದಿನಗಳಲ್ಲಿ ಅವರು ಬುದ್ಧಿ ಕಲಿಯುವುದು ಯಾವಾಗ?

Reality Shows in TV

ಇಲ್ಲೊಬ್ಬರು ತಾಯಿ ತನ್ನ ಎರಡನೇ ಕ್ಲಾಸಿನ ಮುಗ್ಧವಾದ ಮಗಳನ್ನು ದಿನವೂ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಲಘು ಸಂಗೀತ, ಕರಾಟೆ, ಚೆಸ್, ಕ್ರಿಕೆಟ್, ಯಕ್ಷಗಾನ, ಬ್ಯಾಡ್ಮಿಂಟನ್, ಸ್ವಿಮ್ಮಿಂಗ್ ಕೋಚಿಂಗ್ ಎಂದೆಲ್ಲ ಉಸಿರು ಬಿಗಿ ಹಿಡಿದು ಓಡುತ್ತಿರುವಾಗ ಆ ಮುಗ್ಧ ಮಗುವಿನ ಮೇಲಾಗುತ್ತಿರುವ ಒತ್ತಡವನ್ನು ನನಗೆ ಊಹೆ ಮಾಡಲು ಕಷ್ಟ ಆಗುತ್ತಾ ಇದೆ! ಯಾವುದೇ ಕಲಿಕೆಯು ಮಕ್ಕಳಿಗೆ ಹೊರೆ ಆಗಬಾರದು ಎಂಬ ಸಾಮಾನ್ಯ ಪ್ರಜ್ಞೆಯು ಅಂತಹ ಹೆತ್ತವರಿಗೆ ಬೇಡವಾ?

ಇದನ್ನೂ ಓದಿ: Raja Marga Column : ನೀವು ಜ್ಯೂಲಿ ನೋಡಿದ್ದೀರಾ? ಇದು KGFಗೂ ಮೊದಲು ಬಾಲಿವುಡ್‌ನ ಅಹಂ ಮುರಿದ ಸಿನಿಮಾ

ಡ್ಯಾಡಿ ನಂಬರ್ ಒನ್, ಮಮ್ಮಿ ನಂಬರ್ ಒನ್ ಮೊದಲಾದ ನಾನಸೆನ್ಸ್ ಸ್ಪರ್ಧೆಯ ಮೂಲಕ ಅಪ್ಪ, ಅಮ್ಮನ ಪ್ರೀತಿಯು ಅಳೆಯಲ್ಪಡಬೇಕಾ?

ನನ್ನ ಸಲಹೆ ಏನೆಂದರೆ ಮುಂದಿನ ಕೆಲವು ವರ್ಷಗಳ ಕಾಲ ಎಲ್ಲ ಟಿವಿ ವಾಹಿನಿಗಳ ಸ್ಪರ್ಧಾತ್ಮಕವಾದ ರಿಯಾಲಿಟಿ ಶೋಗಳನ್ನು ನಿಲ್ಲಿಸುವುದು ಒಳ್ಳೆಯದು! ಅಥವಾ ಅವುಗಳಿಗೆ ಒಂದು ಸಣ್ಣ ಬ್ರೇಕ್ ಆದರೂ ಬೇಕು. ವರ್ಷಾನುಗಟ್ಟಲೆ ಈ ಸ್ಪರ್ಧೆಗಳು ಮುಂದುವರಿದರೆ ಆ ಮಕ್ಕಳ ಶಿಕ್ಷಣದ ಮೇಲೆ ಆಗುವ ಕರಾಳತೆಯ ಬಗ್ಗೆ ಕೂಡ ನಾವು ಯೋಚನೆ ಮಾಡಬೇಕು ಅಲ್ಲವೇ?

ರಿಯಾಲಿಟಿ ಶೋಗಳ ಹಂಗಿಲ್ಲದೆ ಇಂದು ಸ್ಟಾರ್ ಆಗಿ ಮಿಂಚುತ್ತಿರುವ ನೂರಾರು ಪ್ರತಿಭೆಗಳು ನನ್ನ ಪಟ್ಟಿಯಲ್ಲಿ ಇವೆ. ಅವರೆಲ್ಲರಿಗೂ ನನ್ನ ಅಭಿನಂದನೆಗಳು.

Continue Reading

ಅಂಕಣ

ವಿಧಾನಸೌಧ ರೌಂಡ್ಸ್‌: ಜೆಡಿಎಸ್‌ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್‌ ಅಚ್ಚರಿ ಅಭ್ಯರ್ಥಿ?

ವಿಧಾನಸೌಧ ರೌಂಡ್ಸ್‌: ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾತುಕತೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರಿಂದ ಯಾವ ಪಕ್ಷಕ್ಕೆ ಲಾಭ? ಯಾವ ಪಕ್ಷಕ್ಕೆ ನಷ್ಟ ಎಂಬ ಚರ್ಚೆ ಶುರುವಾಗಿದೆ.

VISTARANEWS.COM


on

Edited by

HD Kumaraswamy And BS Yediyurappa
Koo
Vidhana Soudha Rounds

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೂರು ಪಕ್ಷಗಳಲ್ಲೂ ಸಂಘಟನೆ ಚುರುಕಾಗಿದೆ. ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಗೆಲ್ಲುವ ಅನಿವಾರ್ಯತೆ ಇದೆ. ಇತ್ತ ಬಿಜೆಪಿಯು ಜೆಡಿಎಸ್ ಜತೆ ಸಖ್ಯ ಬೆಳೆಸಿ ಕಾಂಗ್ರೆಸ್‌ಗೆ ತಿರುಗೇಟು ಕೊಡಲು ದೆಹಲಿ ವರಿಷ್ಠರು ನಿರ್ಧಾರ ಮಾಡಿದ್ದಾರೆ. ಆದರೆ ಈ ಮೈತ್ರಿಗೆ ರಾಜ್ಯ ಬಿಜೆಪಿ ನಾಯಕರನ್ನು ದೂರವಿಟ್ಟಿದ್ದು ಸ್ಥಳೀಯ ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ. ಇನ್ನು ಈ ಮೈತ್ರಿ ಮೂಲಕ ಸುಮಲತಾ ಅವರನ್ನು ಮಂಡ್ಯದಿಂದ ಎತ್ತಂಗಡಿ ಮಾಡಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಬಹುದು. ಸುಮಲತಾಗೆ ಕ್ಷೇತ್ರ ಹುಡುಕಿಕೊಡುವ ಜವಾಬ್ದಾರಿ ರಾಜ್ಯ ಬಿಜೆಪಿ ನಾಯಕರ ಹೆಗಲಿಗೇರಲಿದೆ. ಈ ನಡುವೆ, ಬೆಂಗಳೂರು ದಕ್ಷಿಣದಿಂದ ಈ ಬಾರಿ ತೇಜಸ್ವಿ ಅನಂತಕುಮಾರ್ ಅವರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಈ ನಡುವೆ, ವಲಸಿಗ ಬಿಜೆಪಿ ಶಾಸಕರ ನಡೆಯನ್ನು ಎಲ್ಲರೂ ಕಾತುರದಿಂದ ನೋಡಲಾರಂಭಿಸಿದ್ದಾರೆ.

ರಾಜಕೀಯ ಮೈತ್ರಿ ಮದುವೆ ಫಿಕ್ಸ್!

ಗ್ಯಾರಂಟಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಯುದ್ಧ ಮಾಡಲು ನಿರ್ಧಾರ ಮಾಡಿವೆ. ಹೀಗಾಗಿ ಕಳೆದ ವಾರ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ದೆಹಲಿಯಲ್ಲಿ ಸುದೀರ್ಘ ಚರ್ಚೆ ನಡೆಸಿ ಬಿಜೆಪಿ ವರಿಷ್ಠರ ಮುಂದೆ ಮೈತ್ರಿ ಸೂತ್ರ ಇಟ್ಟಿದ್ದಾರೆ. ದೊಡ್ಡ ಗೌಡರ ಕುಟುಂಬ ಇಟ್ಟ ಬಹುದೊಡ್ಡ ಬೇಡಿಕೆ ಈಡೇರಿಕೆ ಕಷ್ಟಸಾಧ್ಯ ಎನ್ನುವುದು ಮನವರಿಕೆ ಆಗಿದೆ. ಬಿಜೆಪಿ ನಾಯಕರುಗಳ ಪ್ರಕಾರ ಜೆಡಿಎಸ್ ಯೋಗ್ಯತೆಗೆ ಎರಡು ಲೋಕಸಭಾ ಕ್ಷೇತ್ರಗಳು ಕೊಟ್ಟರೆ ಅದೇ ಹೆಚ್ಚು. ಒಂದು ಸ್ಥಾನ ಹೆಚ್ಚುವರಿ ಕೊಟ್ಟರೆ ಅದು ಬೋನಸ್. ಆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡಿದ್ದನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಪಡೆದುಕೊಳ್ಳಬೇಕು ಅನ್ನೋದು ದೊಡ್ಡ ಗೌಡರ ಪ್ಲಾನ್. ಹೀಗಾಗಿ ಗೋವಾ ಸಿಎಂ ಮುಂದೆ ಐದು ಲೋಕಸಭಾ ಕ್ಷೇತ್ರಗಳು, ಎರಡು ಪರಿಷತ್ ಹಾಗೂ ಪರಿಷತ್‌ನಲ್ಲಿ ವಿಪಕ್ಷ ನಾಯಕ ಸ್ಥಾನ, ಒಂದು ರಾಜ್ಯಸಭೆ ಸ್ಥಾನ, ಜತೆಗೆ ಕೇಂದ್ರದಲ್ಲಿ ಮಂತ್ರಿಗಿರಿ ಕೊಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಕೇಳಿದ ಬಿಜೆಪಿ ವರಿಷ್ಠರು ಮೈತ್ರಿ ಓಕೆ, ಆದ್ರೆ ಸೀಟ್ ಹಂಚಿಕೆ ವಿಚಾರವನ್ನ ನಿಧಾನವಾಗಿ ಮಾಡೋಣ ಎಂದು ಹೇಳಿ ಕಳಿಸಿದ್ದಾರೆ.

HD Kumaraswamy Meets Amit Shah

ಟೀಮ್ ಚೇಂಜ್ ಮಾಡಿದ ವಲಸಿಗ ಬಿಜೆಪಿ ಶಾಸಕರು

ರಾಜ್ಯ ಬಿಜೆಪಿಯಲ್ಲಿ ವಲಸಿಗ ಶಾಸಕರನ್ನು ಇಂದಿಗೂ ಅನುಮಾನದಿಂದಲೇ ನೋಡಲಾಗುತ್ತಿದೆ. ‌ಕಾರಣ ಅವರು ಅಂದು ಸಮ್ಮಿಶ್ರ ಸರ್ಕಾರ ಬೀಳಿಸಿ ಬಂದಿದ್ದು ಸಿದ್ಧಾಂತ್ಕಕ್ಕೋ ಅಭಿವೃದ್ಧಿಗಾಗಿಯೋ ಅಲ್ಲ, ಹಣಕ್ಕಾಗಿ ಅನ್ನೋ ಅಭಿಪ್ರಾಯ ರಾಜ್ಯ ಬಿಜೆಪಿಯಲ್ಲಿ ಇದೆ. ಅದೇ ರೀತಿ ಇವರು ಸಹ ಹಲವು ವಿಚಾರಗಳಲ್ಲಿ ಬಿಜೆಪಿ ನಾಯಕರಿಗೆ ಅನುಮಾನ ಬರುವಂತೆ ನಡೆದುಕೊಂಡಿದ್ದಾರೆ‌. ಯಡಿಯೂರಪ್ಪ ಇದ್ದಾಗ ಅವರಿಗೆ ಜೈ ಅಂದ್ರು. ಬಳಿಕ ಬೊಮ್ಮಾಯಿ ಸಮಯದಲ್ಲಿ ಬೊಮ್ಮಾಯಿ ಸುತ್ತಲೂ ಇದ್ದಿದ್ದು ಇವರೇ. ಈಗ ಮೈತ್ರಿ ಮಾತುಕತೆ ನಡೆಯುತ್ತಿರುವಾಗ ಕುಮಾರಸ್ವಾಮಿ ಭೇಟಿ ಮಾಡಲು ಸುಧಾಕರ್ ದೆಹಲಿಗೆ ತೆರಳಿದ್ರು. ದೆಹಲಿಯಿಂದ ಎಚ್ಡಿ ಕುಮಾರಸ್ವಾಮಿ ಬೆಂಗಳೂರಿಗೆ ಎಂಟ್ರಿ ಆದ ಕ್ಷಣದಿಂದಲೂ ಮುನಿರತ್ನ ಅವರು ಎಚ್ಡಿಕೆ ಕಾರಿನೊಳಗೆ ಜಿಗಿದಿದ್ದಾರೆ! ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಪಡೆಯಲು ಬಿಜೆಪಿಗಿಂತಲೂ ಮೈತ್ರಿ ನಾಯಕರ ಬೆಂಬಲ ಸಂಪರ್ಕ ಮಾಡ್ತಿರುವುದು ಮೂಲ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.

ಪ್ರಾಣಪಕ್ಷಿ ಹಾರಿ ಹೋಗ್ತಿದ್ದ ಜೆಡಿಎಸ್‌ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ

ಸದ್ಯ ಮಹಿಳೆ ತಲೆ ಮೇಲೆ ಇರೋ ತೆನೆ ದಿನೇದಿನೇ ಒಣಗಿ ಇನ್ನೇನು ಸುಟ್ಟು ಹೋಗುವ ಹಂತದಲ್ಲಿದ್ದಾಗ ಬಿಜೆಪಿ ಸಂಜೀವಿನಿಯಾಗಿ ಪರಿಣಮಿಸಿದೆ. ಕೇವಲ 19 ಸ್ಥಾನಗಳನ್ನ ಗೆಲ್ಲಲಷ್ಟೇ ಸಾಧ್ಯವಾದ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ನಾಲ್ಕು ಸ್ಥಾನ ಬಿಡಲು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬಹುದು. ಅಷ್ಟೇ ಅಲ್ಲದೇ ಪರಿಷತ್‌ನಲ್ಲೂ ಜೆಡಿಎಸ್ ಗೆ ಅವಕಾಶ ಸಿಗಬಹುದು. ಹೀಗಾಗಿ ಈ ಆರು ವರ್ಷ ಪರಿಷತ್‌ನಲ್ಲಿ ಒಂದು ಸ್ಥಾನ ಗೆಲ್ಲಲು ಆಗದ ಜೆಡಿಎಸ್ ಗೆ ಬಿಜೆಪಿ ಸ್ನೇಹ ಭಾರಿ ಲಾಭ ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ ಬಿಜೆಪಿಗೆ ಇದರಿಂದ ನಷ್ಟ ಆದ್ರೂ ಅಚ್ಚರಿ ಇಲ್ಲ. ಯಾಕೆಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ನಾಯಕರು ಕೈ ಮೇಲೆತ್ತಿದ್ದರೂ, ಬೂತ್ ಮಟ್ಟದ ಕಾರ್ಯಕರ್ತರು ತಮ್ಮ ನಡುವೆ ಇದ್ದ ಮನಸ್ತಾಪ ಮರೆತು ವೋಟ್ ಹಾಕಿರಲಿಲ್ಲ. ಹೀಗಾಗಿ ಬಿಜೆಪಿ 25+1 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ ಕಾಂಗ್ರೆಸ್‌ಗೆ ಇಷ್ಟು ದೊಡ್ಡ ಮಟ್ಟದ ಲಾಭ ಸಿಗದಿದ್ದರೂ ಕನಿಷ್ಠ 12-15 ಸ್ಥಾನ ಗೆಲ್ಲುವ ವಾತಾವರಣವನ್ನು ಈ ಮೈತ್ರಿ ಸೃಷ್ಟಿ ಮಾಡಬಹುದು.

ಅಂಬರೀಶ್ ಬಳಿಕ ಸಿನಿಮಾದವರಿಗೆ ಮಂಡ್ಯದಲ್ಲಿ ಡಬಲ್ ಚಾನ್ಸ್ ಸಿಕ್ತಿಲ್ಲ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಿನಿಮಾದವರನ್ನ ಜನ ಎರಡನೇ ಬಾರಿ ಆರಿಸಿದ್ದಿಲ್ಲ. 2013ರ ಮಧ್ಯಂತರ ಚುನಾವಣೆಯಲ್ಲಿ ಗೆದ್ದ ನಟಿ ರಮ್ಯ ಅವರನ್ನ ಬಳಿಕ ನಡೆದ ಚುನಾವಣೆಯಲ್ಲಿ ಸೋಲಿಸಿ ಜನ ಮನೆಗೆ ಕಳುಹಿಸಿದ್ರು. ಬಳಿಕ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನ ಗೆಲ್ಲಿಸಿ ಕಳುಹಿಸಿದ್ರು. ಆದ್ರೆ ಈ ಬಾರಿ ಬಿಜೆಪಿಗೆ ಹೋಗಿ ಟಿಕೆಟ್ ಪಡೆಯಬೇಕು ಅನ್ನೋ ಸುಮಲತಾ ಆಸೆ ಈಡೇರುತ್ತಿಲ್ಲ. ಈ ಬಾರಿ ಮಂಡ್ಯ ಮೈತ್ರಿಯಿಂದ ಜೆಡಿಎಸ್ ಪಾಲಾಗುವುದು ಕನ್ಫರ್ಮ್. ಹೀಗಾಗಿ ನಟಿ ಸುಮಲತಾಗೂ ಈ ಬಾರಿ ಮಂಡ್ಯದ ಜನ ಸೆಂಡ್ಆಪ್ ಕೊಡಲು ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ: ವಿಧಾನಸೌಧ ರೌಂಡ್ಸ್‌: ಬಯಲಾಯ್ತು ಎಲೆಕ್ಷನ್‌ ಟಿಕೆಟ್‌ ಒಳ ಆಟ; ಕಾಂಗ್ರೆಸ್‌ಗೆ ಶೀತಲಸಮರದ ಸಂಕಟ

Tejaswini Ananth Kumar meets DK Shivakumar

ಬೆಂಗಳೂರು ದಕ್ಷಿಣಕ್ಕೆ ಕೈಗೆ ಅಭ್ಯರ್ಥಿ ಕೊರತೆ, ತೇಜಸ್ವಿ ಅನಂತಕುಮಾರ್‌ರನ್ನು ಆಹ್ವಾನಿಸಿದ ಡಿಕೆಶಿ

ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಸ್ಪರ್ಧೆ ಮಾಡಿದ್ದ ಕ್ಷೇತ್ರ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯಿಂದ ಯಾರನ್ನ ನಿಲ್ಲಿಸಿದರೂ ಗೆಲುವು ಖಚಿತ. ಆದರೆ ಕಳೆದ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದ ತೇಜಸ್ವಿ ಅನಂತಕುಮಾರ್‌ಗೆ ಅವಕಾಶ ಕೊಡದೆ, ಬಿಜೆಪಿ ವರಿಷ್ಠರು ಸಂಪ್ರದಾಯ ಮುರಿದು ಯುವ ನಾಯಕನಿಗೆ ಮಣೆ ಹಾಕಿದ್ರು. ಆದ್ರೆ ಈಗ ಪರಿಸ್ಥಿತಿ ವಿಭಿನ್ನವಾಗಿದೆ. ತೇಜಸ್ವಿ ಅನಂತಕುಮಾರ್ ಪರ ಕೈ ನಾಯಕರು ಮಾತನಾಡುತ್ತಿದ್ದಾರೆ. ಅನಂತ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿ ಕೆ ಶಿವಕುಮಾರ್, ನಿಮ್ಮನ್ನ ನಂಬಿದ ದೊಡ್ಡ ಕಾರ್ಯಕರ್ತರ ಗುಂಪು ಇದೆ. ಅವರನ್ನ ತಬ್ಬಲಿ ಮಾಡಬೇಡಿ. ಚುನಾವಣೆಗೆ ಧುಮುಕಿ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಬಿಜೆಪಿ ಟಿಕೆಟ್ ಕೊಡದಿದ್ರೆ ನಾವು ರೆಡಿ ಇದ್ದೇವೆ ಅನ್ನೋ ಸಂದೇಶ ರವಾನೆ ಮಾಡಿದ್ದಾರೆ!

Continue Reading

ಅಂಕಣ

Raja Marga Column : ನೀವು ಜ್ಯೂಲಿ ನೋಡಿದ್ದೀರಾ? ಇದು KGFಗೂ ಮೊದಲು ಬಾಲಿವುಡ್‌ನ ಅಹಂ ಮುರಿದ ಸಿನಿಮಾ

Raja Marga Column: ನೀವು ಜ್ಯೂಲಿ ಸಿನಿಮಾವನ್ನು ನೋಡಿರದಿದ್ದರೆ ಯಾವತ್ತಾದರೂ ಫ್ರೀ ಮಾಡಿಕೊಂಡು ನೋಡಿ. ಇದು ಕೇವಲ ಸಿನಿಮಾ ಅಲ್ಲ. ಆವತ್ತಿನ ಕಾಲದಲ್ಲಿ ಬಾಲಿವುಡ್‌ನ ಅಹಂಕಾರವನ್ನು ಮುರಿದ ಮೊದಲ ದಕ್ಷಿಣ ಭಾರತೀಯ ಚಿತ್ರ. ಸಿದ್ಧ ಸೂತ್ರಗಳನ್ನು ಮೀರಿದ ಸಿನಿಮಾ.

VISTARANEWS.COM


on

Edited by

Julie film Lakshmi
Koo
RAJAMARGA

1975ರ ವರ್ಷ ಹಲವು ಕಾರಣಕ್ಕೆ ನಮ್ಮ ನೆನಪಲ್ಲಿ ಗಟ್ಟಿ ಹೆಜ್ಜೆಗುರುತು ಮೂಡಿಸಿತ್ತು. ದೇಶದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ತುರ್ತು ಪರಿಸ್ಥಿತಿ ಘೋಷಣೆ (Emergency 1975) ಮಾಡಿದ್ದರು. ಅದೇ ವರ್ಷ ಶತಮಾನದ ಸಿನಿಮಾಗಳಾದ ಶೋಲೆ (Sholay Movie), ದೀವಾರ್ (Deewar Movie), ಧರ್ಮಾತ್ಮಾ (Dharmatma Movie), ಮಿಲಿ (Mili Movie), ಆಂಧಿ (Aandhi Movie) ಮೊದಲಾದವುಗಳು ಬಿಡುಗಡೆ ಆಗಿದ್ದವು. ಶೋಲೆ ಸಿನಿಮಾದ ‘ಮೇರೆ ಪಾಸ್ ಮಾ ಹೈ’ (Mere paas Maa hai) ಸಂಭಾಷಣೆ ಪ್ರತೀ ಒಬ್ಬರ ಬಾಯಲ್ಲಿ ಇತ್ತು. ಅದೇ ವರ್ಷ ಬಿಡುಗಡೆ ಆದ ಒಂದು ಹಿಂದಿ ಸಿನಿಮಾ ದಕ್ಷಿಣ ಭಾರತದ ಪ್ರತಿಭೆಗಳಿಂದ ಕೂಡಿದ್ದು ಆ ಕಾಲಕ್ಕೆ ಭಾರಿ ದೊಡ್ಡ ಕ್ರಾಂತಿ ಮಾಡಿತ್ತು (Raja Marga Column). ಒಂದು ರೀತಿಯಲ್ಲಿ ಉತ್ತರ ಭಾರತದ ಪಾರಮ್ಯಕ್ಕೆ (North Indian Dominance) ಸವಾಲು ಎಸೆದಿತ್ತು. ಆ ಸಿನಿಮಾವೇ ಜ್ಯೂಲಿ (Julie Cinema).

ಜ್ಯೂಲಿಯನ್ನು ಶತಮಾನದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು ಎಂದು ಕರೆಯಲಾಗಿತ್ತು!

1975ರ ಏಪ್ರಿಲ್ 18ರಂದು ಬಾಲಿವುಡನಲ್ಲಿ ರಿಲೀಸ್ ಆದ ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ ಉಂಟುಮಾಡಿದ ಧಮಾಕಾ ಅದು ಅದ್ಭುತವೇ ಆಗಿತ್ತು. ಆ ಸಿನಿಮಾದ ನಾಯಕ, ನಾಯಕಿ, ಕಥೆಯನ್ನು ಬರೆದವರು, ನಿರ್ದೇಶಕರು, ನಿರ್ಮಾಪಕರು ಮತ್ತು ಹೆಚ್ಚಿನ ಸಹನಟರು ದಕ್ಷಿಣ ಭಾರತದವರೇ ಆಗಿದ್ದರು. ತಾವೇ ಶ್ರೇಷ್ಠ ಎಂಬ ಉತ್ತರ ಭಾರತದ ಧಿಮಾಕಿಗೆ ಉತ್ತರ ಕೊಟ್ಟ ಹಾಗೆ ಈ ಚಿತ್ರ ಬಂದಿತ್ತು. ಆ ಕಾಲಕ್ಕೆ ದಿಟ್ಟ ಎನಿಸುವ ಕಥೆ, ಸರಳವಾದ ನಿರೂಪಣೆ, ಲಕ್ಷ್ಮೀ (Julie Lakshmi) ಅವರ ಬೋಲ್ಡ್ ಆದ ಅಭಿನಯ, ಇವತ್ತಿಗೂ ನೆನಪಲ್ಲಿ ಉಳಿದಿರುವ ಪದ್ಯಗಳು ಆ ಸಿನಿಮಾವನ್ನು ಗೆಲ್ಲಿಸಿದವು.

Julie film Lakshmi

ಚಟ್ಟಕ್ಕಾರಿ ಮಲಯಾಳಂ ಸಿನಿಮಾದ ರಿಮೇಕ್ ಇದು

ಮಲಯಾಳಂ ಸಾಹಿತಿ ಪರಮೇಶ್ವರ ಮೆನನ್ ಬರೆದ ಕಾದಂಬರಿ ಚಟ್ಟಕ್ಕಾರಿ (Chattakkari Movie). ಅದನ್ನು ಸಿನಿಮಾಕ್ಕೆ ಅಳವಡಿಸಿ ಮಲಯಾಳಂನಲ್ಲಿ ನಿರ್ದೇಶನ ಮಾಡಿದವರು ಕೆ.ಎಸ್ ಸೇತುಮಾಧವನ್ (KS Sethumadhavan). ಅದು ಹಿಟ್ ಆದ ನಂತರ ಅದೇ ಸಿನಿಮಾವನ್ನು ಜ್ಯೂಲಿ ಎಂಬ ಹೆಸರಲ್ಲಿ ಹಿಂದಿಗೆ ರಿಮೇಕ್ ಮಾಡಿದವರು ಕೂಡ ಅದೇ ಸೇತುಮಾಧವನ್. ಚಿತ್ರಕತೆ ಬರೆದವರು ಅಲ್ಲೂರಿ ಚಕ್ರಪಾಣಿ ಅವರು. ಚಟ್ಟಕ್ಕಾರಿ ಸಿನಿಮಾದಲ್ಲಿ ನಾಯಕಿಯಾಗಿದ್ದ ಲಕ್ಷ್ಮಿ ಹಿಂದೀ ಸಿನಿಮಾದಲ್ಲಿಯು ಮಿಂಚಿದರು. ಅದು ಆಕೆಯ ಮೊದಲ ಹಿಂದಿ ಸಿನಿಮಾ (Lakshmis Firs Hindi Movie) ಆಗಿತ್ತು.

Julie film Lakshmi

ಸಿನೆಮಾ ಸೂಪರ್ ಹಿಟ್ ಆಗಲು ಕಾರಣ ಏನು?

ಲಕ್ಷ್ಮಿ ಅವರ ಮುಗ್ಧ ಮತ್ತು ಸ್ನಿಗ್ಧ ಸೌಂದರ್ಯವೇ ಸಿನಿಮಾದ ಟ್ರಂಪ್ ಕಾರ್ಡ್. ಅವರಿಗೆ ಆಗ 23 ವರ್ಷ. ಆಗಲೇ ಅವರಿಗೆ ಮದುವೆ ಆಗಿ ಮೂರು ವರ್ಷದ ಮಗಳು ಐಶ್ವರ್ಯ ಇದ್ದಳು. ಆದರೆ ಆ ಸಿನಿಮಾದಲ್ಲಿ ಲಕ್ಷ್ಮಿ ತೋರಿದ ಗ್ಲಾಮರ್ ಲುಕ್, ಭಾವ ತೀವ್ರತೆಯ ಅಭಿನಯ ವೀಕ್ಷಕರ ಮನಸಿನಲ್ಲಿ ಭಾರೀ ಇಂಪ್ಯಾಕ್ಟ್ ಮಾಡಿದ್ದವು.

ಜೂಲಿ ಸಿನಿಮಾ ಆ ಕಾಲದ ಮಡಿವಂತಿಕೆಯನ್ನು ಧಿಕ್ಕರಿಸಿ ನಿಂತಿತ್ತು!

ಒಂದು ರೀತಿಯ ಮಡಿವಂತಿಕೆಯಲ್ಲಿ ಮುಳುಗಿದ್ದ ಸಿನಿಮಾರಂಗದಲ್ಲಿ ಲಕ್ಷ್ಮಿ ಅವರ ಮಾಡರ್ನ್ ಲುಕ್, ಬೋಲ್ಡ್ ಆದ ಅಭಿನಯ ಹುಚ್ಚು ಹಿಡಿಸಿದ್ದವು. ಮುಂದೆ ಲಕ್ಷ್ಮಿ ಅವರು ‘ಜ್ಯೂಲಿ ಲಕ್ಷ್ಮಿ’ ಎಂದೇ ತನ್ನ ಅಭಿಮಾನಿಗಳಿಂದ ಕರೆಯಲ್ಪಟ್ಟರು.

Julie film Lakshmi 1975

ಉಕ್ಕಿ ಹರಿಯುವ ಅಮೇಜಾನ್ ಪ್ರೀತಿ

ಒಂದು ಆಂಗ್ಲೋ ಇಂಡಿಯನ್ ಕುಟುಂಬ ಮತ್ತು ಸಂಪ್ರದಾಯಸ್ಥ ಹಿಂದೂ ಕುಟುಂಬದ ನಡುವೆ ಹುಟ್ಟುವ ಅಂತರ್ಜಾತೀಯ ಪ್ರೀತಿ, ಅಮೇಜಾನ್ ನದಿಯ ಹಾಗೆ ಎಗ್ಗಿಲ್ಲದೆ ಹರಿಯುವ ಪ್ರೇಮ, ನಂಬಿದ ಹುಡುಗನಿಗೆ ಮದುವೆಯ ಮೊದಲೇ ಸಮರ್ಪಣೆ ಆಗಿ ಗರ್ಭ ಧರಿಸುವ ಹುಡುಗಿಯ ಮುಗ್ಧತೆ, ಆ ಮಗುವನ್ನು ಗರ್ಭದಲ್ಲಿ ಸಾಯಿಸದೇ ಹೆರುವ ಸಂಕಲ್ಪ, ಮುಂದೆ ಅನಾಥಾಶ್ರಮದಲ್ಲಿ ಆ ಮಗುವನ್ನು ಬಿಟ್ಟು ಬರುವ ಸಂದಿಗ್ಧತೆ ಎಲ್ಲವನ್ನೂ ಲಕ್ಷ್ಮಿ ತುಂಬಾ ಚೆನ್ನಾಗಿ ತೆರೆದು ತೋರಿದ್ದರು.

julie director sethumadhavan
ಜ್ಯೂಲಿ ನಿರ್ದೇಶಕ ಸೇತುಮಾಧವನ್

ಒಂದು ಕಡೆ ತಾಯ್ತನದ ತುಡಿತವನ್ನು ಮೆಟ್ಟಿ ನಿಲ್ಲಲು ಆಗದೆ ಆಕೆ ಪಡುವ ವೇದನೆ, ಮತ್ತೊಂದು ಕಡೆ ಸಮಾಜವನ್ನು ಎದುರಿಸಲು ಆಗದೆ ಆಕೆ ಪಡುವ ಆತಂಕಗಳು, ಕೊನೆಯಲ್ಲಿ ಮನೆಯವರ ಬೆಂಬಲ ಪಡೆದು ಪ್ರೀತಿಯನ್ನು ಗೆಲ್ಲಿಸಲು ಆಕೆ ಮಾಡುವ ಹೋರಾಟ….ಎಲ್ಲವೂ ಆ ಸಿನೆಮಾದಲ್ಲಿ ಅದ್ಭುತವಾಗಿ ಡಿಪಿಕ್ಟ್ ಆಗಿದ್ದವು. ಆ ಸಿನಿಮಾದ ನಾಯಕನಾಗಿ ನಟಿಸಿದ ವಿಕ್ರಂ ಮಕಂದಾರ್ ಮೂಲತಃ ಹುಬ್ಬಳ್ಳಿಯವರು.

ಮುಂದೆ ನಿಜ ಜೀವನದಲ್ಲಿಯೂ ಲಕ್ಷ್ಮಿ ಅವರನ್ನು ಎರಡನೇ ಮದುವೆ ಆಗುತ್ತಾರೆ. ಲಕ್ಷ್ಮಿಯ ತಂಗಿ ಆಗಿ ನಟಿಸಿದ ಶ್ರೀದೇವಿ ಮುಂದೆ ಭಾರತದ ಸೂಪರ್ ಸ್ಟಾರ್ ಆದರು. ಆ ಸಿನಿಮಾ ಆಗುವಾಗ ಶ್ರೀದೇವಿಗೆ ಕೇವಲ ಹನ್ನೊಂದು ವರ್ಷ ಆಗಿತ್ತು.

Julie Lakshmi

ಜ್ಯೂಲಿ ಸಿನಿಮಾದ ಹೈಲೈಟ್ ಅದರ ಸಂಗೀತ

ಈಗಲೂ ಚಿರಂಜೀವಿ ಆಗಿರುವ ಈ ಸಿನಿಮಾದ ‘My heart is beeting’ ಹಾಡು ಆಗಿನ ಯುವಜನತೆಯ ಹಾರ್ಟ್ ಥ್ರೋಬ್ ಆಗಿತ್ತು. ಭೂಲ್ ಗಯಾ ಸಬ್ ಕುಚ್, ದಿಲ್ ಕ್ಯಾ ಕರೇ ಜಬ್ ಕಿಸೀಸೆ ಈ ಹಾಡುಗಳನ್ನು ಮರೆಯಲು ಸಾಧ್ಯವೇ ಇಲ್ಲ. ಈ ಸಿನಿಮಾಕ್ಕೆ ಸಂಗೀತ ನೀಡಿದವರು ರಾಜೇಶ್ ರೋಷನ್. ಆಗ ಅವರಿಗೆ ಕೇವಲ 19 ವರ್ಷ ಆಗಿತ್ತು! ಆನಂದ್ ಭಕ್ಷಿ ಬರೆದ ಅಷ್ಟೂ ಹಾಡುಗಳನ್ನು ಕಿಶೋರ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ಅದ್ಭುತವಾಗಿ ಹಾಡಿದ್ದರು.

ಲಕ್ಷ್ಮಿ ಆ ಸಿನಿಮಾದ ಮೂಲಕ ಕೀರ್ತಿಯ ಶಿಖರವನ್ನು ಏರಿದರು. ಅವರು ಹಿಂದೀ ಸೇರಿದಂತೆ ಕನ್ನಡ, ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿಯೂ ನಟಿಸಿ ಪಂಚಭಾಷಾ ತಾರೆ ಎಂಬ ಕೀರ್ತಿ ಪಡೆದರು. ಆ ಎಲ್ಲ ಭಾಷೆಗಳಲ್ಲಿಯೂ ಆಕೆ ತನ್ನ ಸಂಭಾಷಣೆಯನ್ನು ತಾನೇ ಡಬ್ ಮಾಡಿದ್ದು ವಿಶೇಷ. ಅದೇ ರೀತಿ ಐದೂ ಭಾಷೆಗಳಲ್ಲಿಯೂ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಮೊದಲ ಮತ್ತು ಏಕೈಕ ನಟಿ ಎಂದರೆ ಅದು ಲಕ್ಷ್ಮಿ ಮಾತ್ರ! ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ದಕ್ಷಿಣ ಭಾರತದ ನಟಿ ಅದು ಲಕ್ಷ್ಮಿ.

Julie Lakshmi

ಆ ವರ್ಷದ ಫಿಲ್ಮ್ ಫೇರ್ ಪ್ರಶಸ್ತಿಗಳ ರೇಸಲ್ಲಿ ಶೋಲೆ ಮತ್ತು ಜೂಲಿ ಸಿನಿಮಾಗಳು ಭಾರೀ ಸ್ಪರ್ಧೆ ಮಾಡಿದವು. ಶೋಲೆ ಸಿನಿಮಾಕ್ಕೆ ಒಂದೇ ಪ್ರಶಸ್ತಿ ಬಂದರೆ ಜ್ಯೂಲಿಗೆ ಮೂರು ಪ್ರಶಸ್ತಿಗಳು ಬಂದು ಬಾಲಿವುಡ್ ಅಹಂ ಮುರಿದಿತ್ತು. ಲಕ್ಷ್ಮಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯು ಕೂಡ ದೊರಕಿತ್ತು.

ಇದನ್ನೂ ಓದಿ: Raja Marga Column : ಮೊದಲು ನಿಮ್ಮ ಹೃದಯವನ್ನು ನೀವು ಪ್ರೀತಿಸಿ, ಬೇರೆಯವರ ಹೃದಯ ಆಮೇಲೆ ನೋಡ್ಕೊಳೋಣ!

ನಾನು ಜನರ ಕಣ್ಣಲ್ಲಿ ಜ್ಯೂಲಿ ಆಗಿಯೇ ಇರಲು ಬಯಸುತ್ತೇನೆ!

2012ರಲ್ಲಿ ಸೇತು ಮಾಧವನ್ ಅವರ ಮಗ ಸಂತೋಷ್ ಅವರು ಜೂಲಿ ಸಿನಿಮಾವನ್ನು ಮರು ಸೃಷ್ಟಿ ಮಾಡಲು ಹೊರಟರು. ಆಗ ಲಕ್ಷ್ಮಿ ಅವರನ್ನು ಸಂಪರ್ಕ ಮಾಡಿ ಜ್ಯೂಲಿಯ ತಾಯಿಯ ಪಾತ್ರವನ್ನು ಅಭಿನಯಿಸಲು ಕೇಳಿಕೊಂಡರು. ಆಗ ಲಕ್ಷ್ಮಿ ಅದನ್ನು ನಿರಾಕರಿಸಿ ಹೇಳಿದ ಮಾತು – ನಾನು ಜನರ ಕಣ್ಣಲ್ಲಿ ಜ್ಯೂಲಿಯಾಗಿಯೇ ಇರಲು ಬಯಸುತ್ತೇನೆ!

Continue Reading
Advertisement
MLA BY Vijayendra
ಕರ್ನಾಟಕ5 hours ago

Cauvery Water Dispute: ಜನರ ಸಂಕಷ್ಟದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟ: ಬಿ.ವೈ.ವಿಜಯೇಂದ್ರ

jai shankar
ದೇಶ5 hours ago

UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!

Raja Three yakshagana
ಕಲೆ/ಸಾಹಿತ್ಯ5 hours ago

Yakshagana Show: ಅ.7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷನೂಪುರ ʼರಾಜಾ ತ್ರೀʼ ಪ್ರದರ್ಶನ

What did they wrong, Why they are murdered asked Parents Of Manipur Teens
ದೇಶ5 hours ago

Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ

Vaidyanath Co-operative sugar factory
ದೇಶ6 hours ago

GST Evasion: ಜಿಎಸ್‌ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!

Dale stain
ಕ್ರಿಕೆಟ್6 hours ago

Rohit Sharma : ರೋಹಿತ್ ಶರ್ಮಾ ಪಾಲಿನ ಭಯಾನಕ ಬೌಲರ್ ಯಾರು ಗೊತ್ತೇ? ಅವರೇ ಹೇಳಿದ್ದಾರೆ ಕೇಳಿ

MLA Dr N T Srinivas drives the foot and mouth disease vaccination campaign at Kudligi
ವಿಜಯನಗರ7 hours ago

Vijayanagara News: ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಚಾಲನೆ

Death News Prajna Basavanyappa passed away
ಶಿವಮೊಗ್ಗ7 hours ago

Death News: ಹಿರಿಯ ಸಾಹಿತಿ ಪ್ರಾಜ್ಞ ಬಸವಣ್ಯಪ್ಪ ನಿಧನ

ಕ್ರೈಂ7 hours ago

Vijayanagara News: ಗೋಡೆ ಕಲ್ಲು ಬಿದ್ದು ಮಗು ಸಾವು; ಎಮ್ಮೆ ಗುದ್ದಿದ್ದರಿಂದ ನಡೆಯಿತು ಅನಾಹುತ!

Top 10 news kannada
ಕ್ರೀಡೆ7 hours ago

VISTARA TOP 10 NEWS : ಕಾವೇರಿ ಹೋರಾಟಕ್ಕೆ ಸ್ವಯಂಪ್ರೇರಿತ ಬೆಂಬಲ, ಮತ್ತೆ ಕೇಂದ್ರ-ಸುಪ್ರೀಂ ಜಟಾಪಟಿ ಮತ್ತಿತರ ದಿನದ ಪ್ರಮುಖ ಸುದ್ದಿಗಳು

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina Bhavishya
ಪ್ರಮುಖ ಸುದ್ದಿ24 hours ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ1 day ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ2 days ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ2 days ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ2 days ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ3 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

ಟ್ರೆಂಡಿಂಗ್‌