Tejas Aircraft: ಸ್ವದೇಶಿ ʼತೇಜಸ್ʼ ವಿಮಾನದಲ್ಲಿ ಮೋದಿ ಹಾರಾಟ: ಪಾಕಿಸ್ತಾನ, ಚೀನಾಗೆ ನಡುಕ! - Vistara News

ಅಂಕಣ

Tejas Aircraft: ಸ್ವದೇಶಿ ʼತೇಜಸ್ʼ ವಿಮಾನದಲ್ಲಿ ಮೋದಿ ಹಾರಾಟ: ಪಾಕಿಸ್ತಾನ, ಚೀನಾಗೆ ನಡುಕ!

ತೇಜಸ್ ವಿಮಾನ (Tejas Aircraft) ಭಾರತದ ಹೆಮ್ಮೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ತೇಜಸ್ ವಿಮಾನ ಭಾರತದ 140 ಕೋಟಿ ಜನರ ಸಾಮರ್ಥ್ಯ ಮತ್ತು ಕೌಶಲಗಳನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ. ಈ ವಿಮಾನದ ಕುರಿತ ತಾಂತ್ರಿಕ ಮಾಹಿತಿ ಇಲ್ಲಿದೆ.

VISTARANEWS.COM


on

modi tejas viman
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Girish Linganna

ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 25ರಂದು ಭಾರತದ ಸ್ವದೇಶಿ ನಿರ್ಮಾಣದ ಯುದ್ಧ ವಿಮಾನ ‘ತೇಜಸ್’ನಲ್ಲಿ (Tejas Aircraft) 30 ನಿಮಿಷಗಳ ಕಾಲ ಹಾರಾಟ ನಡೆಸಿದರು. ಆ ಮೂಲಕ ತೇಜಸ್ ವಿಮಾನದಲ್ಲಿ (Tejas Aircraft) ಹಾರಾಟ ನಡೆಸಿದ ಭಾರತದ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಈ ಬೆಳವಣಿಗೆ ಭಾರತದ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾಗೆ ನಡುಕ ಮೂಡಿಸಿದೆ. ಮೋದಿಯವರು ಗ್ರೂಪ್ ಕ್ಯಾಪ್ಟನ್ ದೇಬಂಜನ್ ಮಂಡಲ್ ಅವರೊಡನೆ ತೇಜಸ್ ವಿಮಾನದಲ್ಲಿ ಹಾರಾಟ ನಡೆಸಿದರು. ಪ್ರಧಾನಿಯವರನ್ನು ವಾಯುಪಡೆಯ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಸ್ವಾಗತಿಸಿ, ಸನ್ಮಾನಿಸಿದರು. ಗಮನಾರ್ಹ ಅಂಶವೆಂದರೆ, ವಿವಿಐಪಿಗಳು ಸಾಮಾನ್ಯವಾಗಿ ಸು-30ಎಂಕೆಐನಂತಹ ಅವಳಿ ಎಂಜಿನ್ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸುತ್ತಾರೆ. ಪ್ರಧಾನಿ ಮೋದಿಯವರು ತೇಜಸ್ ವಿಮಾನ ಹಾರಾಟದ ಕುರಿತು ತಮ್ಮ ಅನುಭವವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಅವರು ಭಾರತದ ಸ್ವದೇಶೀ ನಿರ್ಮಾಣ ಸಾಮರ್ಥ್ಯದ ಕುರಿತು ಭರವಸೆ ವ್ಯಕ್ತಪಡಿಸಿದ್ದು, ತೇಜಸ್ ವಿಮಾನ ಭಾರತದ ಹೆಮ್ಮೆ ಎಂದು ಶ್ಲಾಘಿಸಿದ್ದಾರೆ. ಅವರು ಈ ವಿಮಾನ ಒಂದು ಆಶಾವಾದವನ್ನು ಒದಗಿಸಿದ್ದು, ತೇಜಸ್ ವಿಮಾನ (Tejas Aircraft) ಭಾರತದ 140 ಕೋಟಿ ಜನರ ಸಾಮರ್ಥ್ಯ ಮತ್ತು ಕೌಶಲಗಳನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.

ತಂತ್ರಜ್ಞರಿಗೆ ಉತ್ತೇಜನ

ಮೋದಿಯವರು ತೇಜಸ್ ವಿಮಾನದ (Tejas Aircraft) ನಿರ್ಮಾಣ ಘಟಕಕ್ಕೆ ಭೇಟಿ ನೀಡಿ, ಎಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ಉತ್ತೇಜಿಸಿದರು. ಎಚ್ಎಎಲ್ ತೇಜಸ್ ಒಂದು ಎಂಜಿನ್ ಮತ್ತು ಡೆಲ್ಟಾ ವಿಂಗ್ ಹೊಂದಿರುವ, ಹಗುರವಾರ ಬಹುಪಾತ್ರಗಳ ಯುದ್ಧ ವಿಮಾನವಾಗಿದ್ದು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಓ) ಎಡಿಎ ಮತ್ತು ಎಚ್ಎಎಲ್‌ಗಳು ಜಂಟಿಯಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿವೆ. ತೇಜಸ್ ತನ್ನ ವರ್ಗದಲ್ಲಿ ಅತ್ಯಂತ ಸಣ್ಣದಾದ, ಹಗುರವಾದ ಸೂಪರ್‌ಸಾನಿಕ್ ಯುದ್ಧ ವಿಮಾನವಾಗಿದ್ದು, ಸ್ವದೇಶೀ ನಿರ್ಮಾಣದ ಫ್ಲೈ ಬೈ ವೈರ್ ವ್ಯವಸ್ಥೆ ಹಾಗೂ ಭಾರತೀಯ ನಿರ್ಮಾಣದ ಸಂಯುಕ್ತ ವಸ್ತುಗಳನ್ನು ಒಳಗೊಂಡಿದೆ. ತೇಜಸ್ 2001ರಲ್ಲಿ ತನ್ನ ಪ್ರಥಮ ಹಾರಾಟ ನಡೆಸಿತು. ಅದಾದ ಬಳಿಕ, 2016ರಲ್ಲಿ ‘ಫ್ಲೈಯಿಂಗ್ ಡ್ಯಾಗರ್ಸ್’ ಎಂಬ ಅದರ ಮೊದಲ ಕಾರ್ಯಾಚರಿಸುವ ಸ್ಕ್ವಾಡ್ರನ್ ನಿರ್ಮಾಣಗೊಂಡಿತು.

 tejas aircraft

ಖರೀದಿಗೆ ಆದೇಶ ಸಲ್ಲಿಕೆ

ಭಾರತೀಯ ವಾಯುಪಡೆ (ಐಎಎಫ್) ಈಗಾಗಲೇ 32 ಎಲ್‌ಸಿಎ ಮಾರ್ಕ್ 1, 73 ಮಾರ್ಕ್ 1ಎ, ಹಾಗೂ 18 ಮಾರ್ಕ್ 1 ಎರಡು ಆಸನಗಳ ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಿದೆ. ಅದರೊಡನೆ, ವಾಯುಪಡೆ ಇನ್ನೂ 97 ಹೆಚ್ಚುವರಿ ಮಾರ್ಕ್ 1ಎ ವಿಮಾನಗಳನ್ನು ಖರೀದಿಸಲು ಉದ್ದೇಶಿಸಿದೆ. ಭವಿಷ್ಯದಲ್ಲಿ ಅಂದಾಜು 200ರಷ್ಟು ಎಲ್‌ಸಿಎ ಮಾರ್ಕ್ 2 ಯುದ್ಧ ವಿಮಾನಗಳು ಬೇಕಾಗಬಹುದೆಂದು ವಾಯುಪಡೆ ಅಂದಾಜಿಸಿದೆ.
ಎಲ್‌ಸಿಎ ಮಾರ್ಕ್1ಎ ವಿಮಾನದ ಆರಂಭಿಕ ಹಾರಾಟ ಮೇ 2022ರಲ್ಲಿ ನೆರವೇರಿತು. ಈ ವಿಮಾನ ಮ್ಯಾಕ್ 1.6ರ ಗರಿಷ್ಠ ವೇಗದಲ್ಲಿ ಚಲಿಸಬಲ್ಲದಾಗಿದ್ದು, 5,300 ಕೆಜಿಯ ತನಕ ಹೊತ್ತು ಸಾಗಬಲ್ಲ ಬಾಹ್ಯ ಹಾರ್ಡ್ ಪಾಯಿಂಟ್‌ಗಳನ್ನು ಹೊಂದಿದೆ. ಇದು ಸ್ಟ್ಯಾಂಡ್ ಆಫ್ ರೇಂಜ್‌ನಿಂದ ವಿವಿಧ ಬಗೆಯ ರಾಕೆಟ್‌ಗಳು, ಕ್ಷಿಪಣಿಗಳು ಮತ್ತು ಬಾಂಬ್‌ಗಳನ್ನು ಹೊತ್ತು ಸಾಗಬಲ್ಲದು. (ಸ್ಟ್ಯಾಂಡ್ ಆಫ್ ರೇಂಜ್ ಎಂದರೆ ಒಂದು ಯುದ್ಧ ವಿಮಾನ ಗುರಿಗೆ ಅತ್ಯಂತ ಸಮೀಪಕ್ಕೆ ತೆರಳದೆ, ಶತ್ರುವಿನ ದಾಳಿಯ ನಿಲುಕಿಗೆ ಒಳಗಾಗದೆ ಶತ್ರುವಿನ ಮೇಲೆ ದಾಳಿ ನಡೆಸಬಲ್ಲ ಸುರಕ್ಷಿತ ಅಂತರವಾಗಿದೆ).

rafale2

ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್

ಎಲ್‌ಸಿಎ ಎಂಕೆ1ಎ ವಿಮಾನದ ಆರಂಭಿಕ ತಂಡಗಳು ಎಲ್ಟಾ ಇಎಲ್/ಎಂ-2052 ರೇಡಾರ್‌ಗಳನ್ನು ಹೊಂದಿದ್ದು, ಅದರ ಬದಲಿಗೆ ದೇಶೀಯ ನಿರ್ಮಾಣದ ಎಲ್ಆರ್‌ಡಿಇ ಉತ್ತಮ್ ರೇಡಾರ್ ಅಳವಡಿಸಲಾಗುತ್ತದೆ. ಇದು ಬಹುತೇಕ 40 ಅಭಿವೃದ್ಧಿಗಳನ್ನು ಹೊಂದಿದ್ದು, ಸಮರ್ಥವಾದ ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್ ಹೊಂದಿದೆ. ಈ ವಿಮಾನ ಅಸ್ತ್ರ ಮತ್ತು ಎಎಸ್ಆರ್‌ಎಎಎಂ ಕ್ಷಿಪಣಿಗಳನ್ನು ಹೊಂದಲಿದ್ದು, ಅವೆಲ್ಲವೂ ದೇಶೀಯ ನಿರ್ಮಾಣದವಾಗಿವೆ. ಇವುಗಳ ಸೇರ್ಪಡೆ 2024ರಲ್ಲಿ ಆರಂಭಗೊಳ್ಳಲಿದೆ.
ತೇಜಸ್ ಎಂಕೆ2 ಅಥವಾ ಮೀಡಿಯಂ ವೆಯ್ಟ್ ಫೈಟರ್ ದೊಡ್ಡ ಗಾತ್ರದ ಯುದ್ಧ ವಿಮಾನವಾಗಿದ್ದು, ಹೆಚ್ಚಿನ ಪೇಲೋಡ್ ಹೊಂದಬಲ್ಲದು. ಇದಕ್ಕೆ ಜನರಲ್ ಇಲೆಕ್ಟ್ರಿಕ್ ಜಿಇ ಎಫ್414 ಐಎನ್ಎಸ್6 ಇಂಜಿನ್ ಶಕ್ತಿ ನೀಡುತ್ತದೆ. ಈ ಎಂಜಿನ್‌ಗಳು ಭಾರತದ ದೇಶೀಯ ನಿರ್ಮಾಣದ ಐದನೇ ತಲೆಮಾರಿನ ಯುದ್ಧ ವಿಮಾನವಾದ ಎಎಂಸಿಎಯಲ್ಲೂ ಬಳಕೆಯಾಗಲಿದೆ.

2024ರಲ್ಲಿ ಹಾರಾಟ ನಡೆಸುವ ನಿರೀಕ್ಷೆ

ತೇಜಸ್ ಎಂಕೆ2 ವಿಮಾನ 2024ರಲ್ಲಿ ಹಾರಾಟ ನಡೆಸುವ ನಿರೀಕ್ಷೆಗಳಿದ್ದು, ಆಧುನಿಕ ಗಾಜಿನ ಕಾಕ್‌ಪಿಟ್, ಆಧುನಿಕ ಎಇಎಸ್ಎ ರೇಡಾರ್, ಹಾಗೂ ಅಂತರ್ಗತ ಇನ್‌ಫ್ರಾರೆಡ್ ಸರ್ಚ್ ಆ್ಯಂಡ್ ಟ್ರ್ಯಾಕ್ (ಐಆರ್‌ಎಸ್‌ಟಿ) ವ್ಯವಸ್ಥೆಗಳನ್ನು ಒಳಗೊಂಡಿದೆ. ಇದರಲ್ಲಿ ಆಮ್ಲಜನಕ ಉತ್ಪಾದನಾ ವ್ಯವಸ್ಥೆ, ಅಂತರ್ಗತ ಇಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್, ಹಾಗೂ ಹೆಚ್ಚಿನ ಕದನ ವ್ಯಾಪ್ತಿಯನ್ನು ಒಳಗೊಂಡಿದೆ. ಈ ವಿಮಾನ ಅಂತಿಮವಾಗಿ ಮಿರೇಜ್-2000, ಜಾಗ್ವಾರ್ ಹಾಗೂ ಮಿಗ್-29 ವಿಮಾನಗಳ ಬದಲಿಗೆ ಕಾರ್ಯ ನಿರ್ವಹಿಸುವ ಸಾಧ್ಯತೆಗಳಿವೆ.

ಯಶಸ್ವಿ ಲ್ಯಾಂಡಿಂಗ್‌

ನೌಕಾಪಡೆಯ ಆವೃತ್ತಿಗೆ ಸಂಬಂಧಿಸಿದ ಮಹತ್ತರ ಮೈಲುಗಲ್ಲು ಎಂಬಂತೆ, ಎಲ್‌ಸಿಎ ಐಎನ್ಎಸ್ ವಿಕ್ರಮಾದಿತ್ಯ ನೌಕೆಯ ಮೇಲೆ 2020ರಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ನಡೆಸಿ, ಬಳಿಕ 18 ಬಾರಿ ಟೇಕಾಫ್ ಮತ್ತು ಲ್ಯಾಂಡಿಂಗ್ ಕೈಗೊಂಡಿತ್ತು. ಫೆಬ್ರವರಿ 2023ರಲ್ಲಿ ಎಲ್‌ಸಿಎ ಮಿಗ್-29ಕೆ ವಿಮಾನದ ಜೊತೆಗೆ ಸ್ವದೇಶೀ ನಿರ್ಮಾಣದ ವಿಮಾನ ವಾಹಕ ನೌಕೆಯಾದ ಐಎನ್ಎಸ್ ವಿಕ್ರಾಂತ್ ಮೇಲೆ ಇಳಿಯಿತು.
2022ರ ವೇಳೆಗೆ, ತೇಜಸ್ ಮಾರ್ಕ್ 1 ಯುದ್ಧ ವಿಮಾನ ತನ್ನ ಮೌಲ್ಯದ 59.7% ಮತ್ತು ಬದಲಾಯಿಸಬಲ್ಲ ಭಾಗಗಳ 75.5% ಸ್ವದೇಶೀ ವಸ್ತುಗಳನ್ನು ಹೊಂದಿತ್ತು. ತೇಜಸ್ ಎಂಕೆ 1ಎ ಆರಂಭದಲ್ಲಿ 50% ಸ್ವದೇಶೀ ವಸ್ತುಗಳನ್ನು ಒಳಗೊಂಡು, ಬಳಿಕ ಯೋಜನೆ ಪೂರ್ಣಗೊಳ್ಳುವ ವೇಳೆಗೆ 60% ಸಾಧಿಸುವ ಗುರಿ ಹೊಂದಿದೆ.

ಎಚ್‌ಎಎಲ್‌ನಿಂದ ನೂತನ ಉತ್ಪಾದನಾ ಘಟಕ

ಎಚ್ಎಎಲ್ ಬೆಂಗಳೂರಿನಲ್ಲಿ ವಾರ್ಷಿಕವಾಗಿ 16 ಎಲ್‌ಸಿಎ ಎಂಕೆ-1ಎ ವಿಮಾನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ನಾಶಿಕ್‌ನಲ್ಲಿ ನೂತನ ಉತ್ಪಾದನಾ ಘಟಕವನ್ನು ಆರಂಭಿಸಿದೆ. ಈ ಮೂಲಕ ಎಚ್ಎಎಲ್ ವಾರ್ಷಿಕವಾಗಿ 24 ಜೆಟ್‌ಗಳನ್ನು ಉತ್ಪಾದಿಸಬಲ್ಲದು. ಈ ಹೆಚ್ಚಳದ ಕಾರಣದಿಂದ, ಎಚ್ಎಎಲ್ ಒಪ್ಪಂದ ಮಾಡಿಕೊಂಡಿರುವ 83 ಯುದ್ಧ ವಿಮಾನಗಳನ್ನು ಅವಧಿಗಿಂತಲೂ ಒಂದು ವರ್ಷ ಮೊದಲೇ, ಅಂದರೆ 2027-28ರಲ್ಲಿ ಒದಗಿಸಬಹುದು. ಭಾರತೀಯ ವಾಯುಪಡೆ ಶೀಘ್ರವಾಗಿ ತನ್ನ ಹಳೆಯದಾಗುತ್ತಿರುವ ಮಿಗ್ 21 ಯುದ್ಧ ವಿಮಾನ ಸ್ಕ್ವಾಡ್ರನ್‌ಗಳನ್ನು ನಿವೃತ್ತಿಗೊಳಿಸಿ, ಅವುಗಳ ಬದಲಿಗೆ ನೂತನ ವಿಮಾನಗಳನ್ನು ಹೊಂದಬೇಕಿರುವುದರಿಂದ, ವಿಮಾನಗಳು ಶೀಘ್ರವಾಗಿ ಪೂರೈಕೆಯಾದಷ್ಟೂ ಅನುಕೂಲಕರವಾಗಿರಲಿದೆ.

rafale1

ಸಮರ್ಥ ಯುದ್ಧ ವಿಮಾನವಾಗಿ ಸಾಬೀತು

ಎಲ್‌ಸಿಎ ವಿಮಾನ ಭಾರತದ ಏರೋ ಇಂಡಿಯಾ ಪ್ರದರ್ಶನಗಳಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿ, ತಾನು ಸಮರ್ಥ ಯುದ್ಧ ವಿಮಾನ ಎಂದು ಸಾಬೀತುಪಡಿಸಿದೆ. ಎಚ್ಎಎಲ್ ಈಗ ಎಲ್‌ಸಿಎ ವಿಮಾನದ ಎರಡು ಆಸನಗಳ ಲೀಡ್ ಇನ್ ಫೈಟರ್ ಟ್ರೈನರ್ (ಎಲ್ಐಎಫ್‌ಟಿ) ತರಬೇತಿ ಆವೃತ್ತಿಯನ್ನು ಅಭಿವೃದ್ಧಿ ಪಡಿಸುತ್ತಿದೆ. ಎಚ್ಎಎಲ್ ಈಗಾಗಲೇ ಸಂಭಾವ್ಯ ವಿಮಾನ ರಫ್ತಿಗಾಗಿ ಬೋಟ್ಸ್‌ವಾನಾ ಮತ್ತು ಈಜಿಪ್ಟ್‌ನಂತಹ ದೇಶಗಳೊಡನೆ ಮಾತುಕತೆ ನಡೆಸುತ್ತಿದೆ. ತೇಜಸ್ ರಫ್ತಿನ ಅಂಗವಾಗಿ, ಇಂಡೋನೇಷ್ಯಾ, ಮಲೇಷ್ಯಾ, ಶ್ರೀಲಂಕಾ ಮತ್ತು ವಿಯೆಟ್ನಾಂಗಳಲ್ಲಿ ಸಾಗಾಣಿಕಾ ವ್ಯವಸ್ಥೆಯನ್ನು ಸ್ಥಾಪಿಸಲು ಯೋಚಿಸುತ್ತಿದೆ.
ವಿಮಾನ ಉತ್ಪಾದನೆಗೆ ಆಧುನಿಕ ತಂತ್ರಜ್ಞಾನಗಳು ಅತ್ಯವಶ್ಯಕವಾಗಿರುವುದರಿಂದ, ವೈಮಾನಿಕ ವಲಯ ರಕ್ಷಣಾ ವಿಭಾಗದಲ್ಲಿ ಸ್ವಾವಲಂಬನೆ ಸಾಧಿಸಲು ಹೆಚ್ಚಿನ ಅವಕಾಶ ಕಲ್ಪಿಸುತ್ತದೆ. ತಂತ್ರಜ್ಞಾನಗಳ ಹಂಚಿಕೊಳ್ಳುವಿಕೆ ಅತ್ಯಂತ ಅಪರೂಪವಾಗಿರುವುದರಿಂದ, ಭಾರತ ತನ್ನದೇ ಆದ ಬೌದ್ಧಿಕ ಆಸ್ತಿಯನ್ನು ಅಭಿವೃದ್ಧಿಪಡಿಸಬೇಕು. ವಿಮಾನಗಳು ಬಳಕೆಯಾಗದೆ ಹಳೆಯದಾಗುವುದೂ ಒಂದು ಸವಾಲಾಗಿದ್ದು, ಭಾರತೀಯ ವಾಯುಪಡೆ ಎಲ್‌ಸಿಎ ಯೋಜನೆಗೆ ಸಂಪೂರ್ಣ ಬೆಂಬಲ ನೀಡುತ್ತಿದೆ. ವಾಯುಪಡೆಯ ಮುಖ್ಯಸ್ಥರಾದ ವಿ ಆರ್ ಚೌಧರಿ ಅವರು ಎಲ್‌ಸಿಎ ಯೋಜನೆ ಸ್ವದೇಶೀ ಸಮರ ಪಡೆಗಳನ್ನು ಅಭಿವೃದ್ಧಿ ಪಡಿಸುವ ಭಾರತೀಯ ವಾಯುಪಡೆಯ ಬದ್ಧತೆಯ ಸಂಕೇತವಾಗಿದೆ ಎಂದಿದ್ದಾರೆ. ಎಚ್ಎಎಲ್ ಹಾಗೂ ಡಿಆರ್‌ಡಿಓ ತಂತ್ರಜ್ಞಾನವನ್ನು ಖಾಸಗಿ ಸಂಸ್ಥೆಗಳಿಗೆ ಒದಗಿಸಿದ್ದು, ರಕ್ಷಣಾ ಉಪಕರಣಗಳ ಉತ್ಪಾದನೆಗೆ ಸೂಕ್ತ ಕ್ರಮಗಳನ್ನು ಒದಗಿಸಲಿದೆ. ಪ್ರಧಾನಿ ಮೋದಿಯವರೂ ಈ ಯೋಜನೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿ, ಬೆಂಬಲ ಸೂಚಿಸಿದ್ದು, ಇದರಿಂದ ಎಲ್‌ಸಿಎ ಮತ್ತು ಎಎಂಸಿಎ ಯೋಜನೆಯ ಸ್ಥೈರ್ಯ ಹೆಚ್ಚಿ, ವಿನ್ಯಾಸ, ಅಭಿವೃದ್ಧಿ ಇನ್ನಷ್ಟು ವೇಗ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಅದರೊಡನೆ, ಅವುಗಳ ಭವಿಷ್ಯದ ಹಂತಗಳಿಗೂ ಶೀಘ್ರವಾಗಿ ಅನುಮತಿ ಲಭಿಸಲು ಸಾಧ್ಯವಾಗುತ್ತದೆ. ಚೀನಾ ಮತ್ತು ಪಾಕಿಸ್ತಾನದ ಬೆದರಿಕೆ ಎದುರಿಸುವಲ್ಲಿ ತೇಜಸ್‌ ಮಹತ್ವದ ಪಾತ್ರ ವಹಿಸಲಿದೆ.

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು)

ಇದನ್ನೂ ಓದಿ: LCA Tejas: ವಾಯುಪಡೆ ಬತ್ತಳಿಕೆ ಸೇರಿದ ಲಘು ಯುದ್ಧ ವಿಮಾನ ತೇಜಸ್! 8 ಏರ್‌ಕ್ರಾಫ್ಟ್‌ಗೆ ಎಚ್‌ಎಎಲ್‌ ಜತೆ ಸೇನೆ ಒಪ್ಪಂದ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಫೂರ್ತಿ ಕತೆ

Raja Marga Column : ದೇವರ ಬಗ್ಗೆ ಭಯ ಬೇಕಾಗಿಲ್ಲ, ಅವನು ನಮ್ಮ ಬೆಸ್ಟ್‌ ಫ್ರೆಂಡ್‌!

Raja Marga Column : ನನ್ನ ಮಟ್ಟಿಗೆ ದೇವರು ಭಯ ಹುಟ್ಟಿಸುವ ಭಯೋತ್ಪಾದಕ ಅಲ್ಲ. ದೇವರು ನನ್ನ ಬೆಸ್ಟ್ ಫ್ರೆಂಡ್! ನನ್ನ ದೇವರು ನನ್ನಿಂದ ಏನನ್ನೂ ಬಯಸುವುದಿಲ್ಲ. ನನ್ನ ಪಂಚೇಂದ್ರಿಯಗಳ ವ್ಯಾಪ್ತಿಗೆ ನಿಲುಕುವುದಿಲ್ಲ.

VISTARANEWS.COM


on

Raja Marga Column god existence
Koo
RAJAMARGA

Raja Marga Column : ದೇವರ ಅಸ್ತಿತ್ವವನ್ನೇ (Existance of God) ಪ್ರಶ್ನೆ ಮಾಡುವವರು, ದೇವರೇ ಇಲ್ಲ ಎಂದು ವಾದ ಮಾಡುವವರು ಬಹಳ ಮಂದಿ ಇದ್ದಾರೆ. ಆದರೆ ಅಂತವರಿಗೆ ಕೂಡ ದೇವರ ಅನುಭೂತಿ (Feeling of God) ಬೇರೆ ಬೇರೆ ರೂಪದಲ್ಲಿ ಆಗಿರಬಹುದು! ಅದನ್ನು ಅನುಭವಿಸಲು ಸ್ಟ್ರಾಂಗ್ ಆದ ಆ್ಯಂಟೆನಾ (Strong Antenna) ನಮ್ಮಲ್ಲಿ ಇರಬೇಕು ಅಷ್ಟೇ!

Raja Marga Column :ನಮ್ಮಜ್ಜ ಬಾಲ್ಯದಲ್ಲಿ ಹೇಳುತ್ತಿದ್ದ ಕತೆ

ನಮ್ಮಜ್ಜ ಎಂದಿಗೂ ಸುಳ್ಳು ಹೇಳುವವರೇ ಅಲ್ಲ ಎಂಬಲ್ಲಿಗೆ ಇದನ್ನು ನೀವು, ನಾವು ನಂಬಲೇ ಬೇಕು. ಅವರು ಕಾಪು ಪುರಾತನ ಮಾರಿಗುಡಿಯ ಸ್ಥಾಪಕರು ಮತ್ತು ಅರ್ಚಕರು ಆಗಿದ್ದರು. ಮಾರಿಯಮ್ಮನಿಗೆ ತುಂಬಾ ಚಿನ್ನದ ಆಭರಣಗಳು ಇದ್ದವು. ಅವುಗಳನ್ನು ಇಡಲು ಆಗ ಭದ್ರತೆ ಇರಲಿಲ್ಲ. ಕಳ್ಳರ ಕಾಟ ಬೇರೆ!

ಅದಕ್ಕಾಗಿ ಆ ಆಭರಣಗಳನ್ನು 15-16 ಕಿಲೋಮೀಟರ್ ದೂರದ ಮಣಿಪಾಲ್ ಸಿಂಡಿಕೇಟ್ ಬ್ಯಾಂಕಿನಲ್ಲಿ ಆಗಿನ ಲಾಕ‍ರ್‌ನಲ್ಲಿ ಇಡುವ ವ್ಯವಸ್ಥೆ ಆಗಿತ್ತು. ಅಲ್ಲಿಂದ ಮಾರಿಪೂಜೆಯ ಹೊತ್ತಿಗೆ ಅಜ್ಜ ತಲೆಯ ಮೇಲೆ ಬಂಗಾರದ ಬುಟ್ಟಿ ಹೊತ್ತುಕೊಂಡು ನಡೆದೇ ಕಾಪುವಿಗೆ ಬರಬೇಕಾಗಿತ್ತು. ಮತ್ತೆ ಮಾರಿ ಪೂಜೆ ಮುಗಿದ ನಂತರ ಪುನಃ ಆ ಬಂಗಾರವನ್ನು ಅದೇ ಮಣಿಪಾಲಕ್ಕೆ ಹಿಂತಿರುಗಿಸುವ ವ್ಯವಸ್ಥೆ ಮಾಡುತ್ತಿದ್ದರು ನಮ್ಮ ಅಜ್ಜ.

ಒಮ್ಮೆ ಅಜ್ಜ ಮಣಿಪಾಲದಿಂದ ಚಿನ್ನದ ಬುಟ್ಟಿಯನ್ನು ತಲೆಯ ಮೇಲೆ ಇಟ್ಟುಕೊಂಡು ಕಾಪುವಿನ ಕಡೆಗೆ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಕಟಪಾಡಿ ದಾಟಿದ ನಂತರ ಕಾಡಿನ ದಾರಿ. ಆಗಲೇ ಕತ್ತಲು ಆವರಿಸಿತ್ತು. ಅಜ್ಜನಿಗೆ ಭಯ ಆರಂಭ ಆಯಿತು.

Raja Marga Column  god

ಅದು ಪ್ರಾಣ ಭಯ ಅಲ್ಲ. ಅಜ್ಜ ಹೆದರಿದ್ದು ಮಾರಿಯಮ್ಮನ ಆಭರಣದ ಆಸೆಗೆ ಕಳ್ಳರು ಬಂದು ಕದ್ದುಕೊಂಡು ಹೋದರೆ ಅಪವಾದ ಎದುರಿಸಬೇಕಲ್ಲ ಎಂಬ ಕಾರಣಕ್ಕೆ! ಇನ್ನೂ ಸುಮಾರು ದೂರ ಇದೆ ಕಾಪು. ರಸ್ತೆ ಕಾಣದಷ್ಟು ಕತ್ತಲೆ. ಆಗ ಅಜ್ಜ, ” ಅಮ್ಮ, ನಿನ್ನದೇ ಆಭರಣ. ನೀನೇ ಕಾಪಾಡು!” ಎಂದು ಒಮ್ಮೆ ಕಣ್ಣು ಮುಚ್ಚಿ ಪ್ರಾರ್ಥನೆ ಮಾಡಿ ಮುನ್ನಡೆದರು.

ಅಲ್ಲಿಂದ ಆರಂಭವಾಗಿ ಘಲ್ ಘಲ್ ಎಂಬ ಗೆಜ್ಜೆಯ ಶಬ್ದವು ಅಜ್ಜನ ಕಿವಿಗೆ ಕೇಳಲು ಆರಂಭವಾಯಿತು! ಮೂಗಿಗೆ ಮಲ್ಲಿಗೆ ಸುವಾಸನೆ ಅಡರಿತು! ಕಾಪು ಮಾರಿಗುಡಿ ತಲುಪಿ ಆ ಬಂಗಾರ ಒಳಗಿಡುವತನಕ ಆ ಘಲ್ ಘಲ್ ಶಬ್ದ ನಿಲ್ಲಲೇ ಇಲ್ಲ. ಮಲ್ಲಿಗೆಯ ಸುವಾಸನೆ ಕಡಿಮೆ ಆಗಲೇ ಇಲ್ಲ! ಅಲ್ಲಿಗೆ ಅಜ್ಜ ನಿಟ್ಟುಸಿರು ಬಿಟ್ಟಿದ್ದರು.

ಈ ಘಟನೆಯನ್ನು ಅಜ್ಜ ನಮಗೆ ರಸವತ್ತಾಗಿ ವರ್ಣಿಸುವಾಗ ಅವರ ಕಣ್ಣಲ್ಲಿ ಏನೋ ಅವ್ಯಕ್ತವಾದ ಬೆಳಕು ಕಾಣುತ್ತಿತ್ತು. ಅಜ್ಜ ಬದುಕಿದ್ದೇ ಹಾಗೆ! ಅದು ಸತ್ಯದ ಕಾಲ ಆಗಿತ್ತು. ಆದ್ದರಿಂದ ದೇವರ ಅಸ್ತಿತ್ವವು ಯಾವ್ಯಾವುದೋ ರೂಪದಲ್ಲಿ ಆಗಿನ ಕಾಲದವರಿಗೆ ಅನುಭವ ಆಗುತ್ತಿತ್ತು. ಆದರೆ ಮುಂದೆ ಆ ಕಾಲವು ಸರಿದು ಹೋಗಿ ಇಂದಿನ ಕಾಲಕ್ಕೆ ಬಂದಾಗ ದೇವರನ್ನು ಪ್ರಶ್ನೆ ಮಾಡುವವರಿಗೆ ಆ ಅನುಭವ ಆಗುವುದು ಕಡಿಮೆ. ಅದಕ್ಕೆ ಕಾರಣ ಏನೆಂದರೆ ನಮ್ಮ ಆ್ಯಂಟೆನಾ ವೀಕ್ ಆಗಿರುವುದು ಹೊರತು ಬೇರೇನೂ ಅಲ್ಲ!

ನನ್ನ ಮಟ್ಟಿಗೆ ದೇವರ ನಂಬಿಕೆ!

ನಾನು ದೇವರ ಪೂಜೆ, ಪುನಸ್ಕಾರ ಇವುಗಳ ಬಗ್ಗೆ ಹೆಚ್ಚು ಗೊಡವೆ ಮಾಡದಿದ್ದರೂ ದೇವರ ಅಸ್ತಿತ್ವವನ್ನು ಗಾಢವಾಗಿ ನಂಬುತ್ತೇನೆ. ನಾನು ಮಾಡುವ ಕೆಲಸದಲ್ಲಿ ದೇವರನ್ನು ಕಾಣುವುದು ನನ್ನ ನಂಬಿಕೆ! ನನಗೆ ಸಣ್ಣ ಸಣ್ಣ ಉಪಕಾರ ಮಾಡುವ ಜನರಲ್ಲಿ ಕೂಡ ದೇವರನ್ನು ಕಾಣುವುದು ನನ್ನ ನಂಬಿಕೆ! ನನಗೆ ಸಣ್ಣ ಪುಟ್ಟ ಸಮಸ್ಯೆಗಳು ಬಂದಾಗ ಎದುರಿಸಿ ನಿಲ್ಲುತ್ತೇನೆ. ದೊಡ್ಡ, ಎದುರಿಸಲಾಗದ ಸಮಸ್ಯೆಗಳು ಬಂದಾಗ ಒಂದು ಕ್ಷಣ ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥನೆ ಮಾಡಿ ನೀನೇ ಪರಿಹಾರ ಮಾಡು ಎಂದು ಬೇಡಿಕೊಂಡು ದೇವರಿಗೆ ಶರಣಾಗುತ್ತೇನೆ. ಮತ್ತೆ ಆ ಸಮಸ್ಯೆಯ ಬಗ್ಗೆ ಯೋಚನೆ ಮಾಡುವುದಿಲ್ಲ. ಆದರೆ ಆ ಸಮಸ್ಯೆ ಹೂವು ಎತ್ತಿದ್ದಷ್ಟೆ ಸಲೀಸಾಗಿ ಪರಿಹಾರ ಆಗಿರುವುದು ನಾನು ನಂಬಿದ ದೇವರ ಪವರ್!

ನನ್ನ ಮಟ್ಟಿಗೆ ದೇವರು ನನ್ನ ಬೆಸ್ಟ್ ಫ್ರೆಂಡ್!

ನನ್ನ ಮಟ್ಟಿಗೆ ದೇವರು ಭಯ ಹುಟ್ಟಿಸುವ ಭಯೋತ್ಪಾದಕ ಅಲ್ಲ. ದೇವರು ನನ್ನ ಬೆಸ್ಟ್ ಫ್ರೆಂಡ್!
ನನ್ನ ದೇವರು ನನ್ನಿಂದ ಏನನ್ನೂ ಬಯಸುವುದಿಲ್ಲ. ನನ್ನ ಪಂಚೇಂದ್ರಿಯಗಳ ವ್ಯಾಪ್ತಿಗೆ ನಿಲುಕುವುದಿಲ್ಲ.

Raja Marga column god

ನಾನು ಮಾನವೀಯ ಅಂತಃಕರಣದಲ್ಲಿ, ನಾನು ಮಾಡುವ ಕರ್ತವ್ಯದಲ್ಲಿ, ನಾನು ಮಾಡುವ ಸಣ್ಣ ಪುಟ್ಟ ಸಮಾಜಸೇವೆಗಳಲ್ಲಿ, ನನ್ನನ್ನು ಪ್ರಶ್ನಾತೀತವಾಗಿ ಪ್ರೀತಿಸುವ ನಿಷ್ಕಲ್ಮಶ ಹೃದಯಗಳಲ್ಲಿ, ನನ್ನ ತರಗತಿಯಲ್ಲಿ ಕೂತು ಪಾಠ ಕೇಳುವ ಮುಗ್ಧ ಹೃದಯದ ಮಕ್ಕಳಲ್ಲಿ, ನನ್ನ ತರಬೇತಿಯಲ್ಲಿ ಕುಳಿತು ನನ್ನಲ್ಲಿ ಅವರ ಅಣ್ಣನನ್ನೋ, ಅವರ ಗೆಳೆಯನನ್ನೋ, ಅವರ ಅಪ್ಪನನ್ನೋ ಕಾಣುವ ಪವಿತ್ರವಾದ ಮನಸುಗಳಲ್ಲಿ ದೇವರಿದ್ದಾನೆ ಎಂದು ನನ್ನ ನಂಬಿಕೆ! ಪ್ರತಿಯೊಬ್ಬ ಮನುಷ್ಯನಲ್ಲಿ ಏನು ಒಳ್ಳೆಯದು ಇದೆಯೋ ಅದೇ ದೇವರು ಎಂದು ನಂಬುವವನು ನಾನು. ನನ್ನ ಜೀವನದ ನಿರ್ಣಾಯಕ ಘಟ್ಟದಲ್ಲಿ ನನಗೆ ಧೈರ್ಯ ತುಂಬಿಸಿ ನನ್ನ ನೆರವಿಗೆ ನಿಂತವರು ನನ್ನ ದೇವರು. ಅಳು ಬಂದಾಗ ನನ್ನ ಕಣ್ಣೀರು ಒರೆಸುವವರು ನನ್ನ ದೇವರು.

ನಿಮ್ಮ ಭಾಷಣಗಳಿಂದ, ತರಬೇತಿಗಳಿಂದ, ಲೇಖನಗಳಿಂದ ನನ್ನಲ್ಲಿ ಬದಲಾವಣೆ ಆಗಿದೆ ಎಂದು ಭಾವಿಸುವವರು ನನ್ನ ದೇವರು! ದೂರದಲ್ಲಿ ಕೂತು ನನ್ನ ಸಾಧನೆಗಳನ್ನು ಕಂಡು ಹೊಟ್ಟೆಕಿಚ್ಚು ಪಡುವವರು ಕೂಡ ನನ್ನ ದೇವರೇ! ಏಕೆಂದರೆ ನಾನಿಂದು ಏನಾದರೂ ಸಾಧಿಸಿದ್ದರೆ ಅದಕ್ಕೆ ಅವರೇ ಪ್ರೇರಣೆ! ನನ್ನಿಂದ ಎಲ್ಲ ಪ್ರಯೋಜನ ಪಡೆದು ನನಗೆ ಅವರ ತುರ್ತು ಅಗತ್ಯ ಇದ್ದಾಗ ಬಿಟ್ಟು ಹೋದವರು ಕೂಡ ನನ್ನ ದೇವರೇ! ಏಕೆಂದರೆ ಯಾರಿಲ್ಲದೆ ಕೂಡ ಬದುಕಿ ತೋರಿಸು ಎಂದು ಸವಾಲು ಹಾಕಿದವರು ಅವರು! ನನ್ನ ಆತ್ಮವಿಶ್ವಾಸ ಹೆಚ್ಚಿಸಿದ ದೇವರು ಅವರು.

ಇದನ್ನೂ ಓದಿ : Raja Marga Column : ಹೂವಿಗಿಂತ ಮೃದು ವಜ್ರಕ್ಕಿಂತ ಕಠೋರ ಆಗೋದು ಹೇಗೆ?

ದೇವರ ಮೇಲಿನ ನನ್ನ ನಂಬಿಕೆಯು ಎಷ್ಟೋ ಬಾರಿ ದೇವರಿಗಿಂತ ಸ್ಟ್ರಾಂಗ್ ಆಗಿರುತ್ತದೆ! ಆ ನಂಬಿಕೆ ಎಂದಿಗೂ ಮೋಸ ಹೋಗಿಲ್ಲ. ನನಗೆ ಸಹಾಯ ಬೇಕಾದಾಗ, ಉಸಿರು ಕಟ್ಟುವ ಸಂದರ್ಭ ಬಂದಾಗ ದೇವರು ಯಾರ್ಯಾರದೋ, ಯಾವ್ಯಾವುದೋ ರೂಪದಲ್ಲಿ ಬಂದು ನನಗೆ ಸಹಾಯ ಮಾಡಿ ಹೋಗುತ್ತಾರೆ! ಹಾಗಿರುವಾಗ ನಾನು ದೇವರಿಲ್ಲ ಎಂದು ವಾದ ಮಾಡುವುದು ಹೇಗೆ?

ಯಾವುದೋ ಕಷ್ಟದಲ್ಲಿ ಸಿಲುಕಿಕೊಂಡಾಗ, ದಾರಿ ಮಧ್ಯೆ ಯಾರೂ ಸಿಗದೆ ಕಂಗಾಲಾದಾಗ,‌ ಇನ್ನೇನು ಮಾಡುವುದು ಎಂದು ದಿಕ್ಕೇ ತೋಚದೆ ಹೋದಾಗಲೆಲ್ಲ ಯಾರಾದರೂ ಯಾವುದೋ ರೂಪದಲ್ಲಿ ಬಂದು ಬೆಂಗಾವಲಿಗೆ ನಿಲ್ಲುತ್ತಾರಲ್ಲಾ.. ಅವರು ಕೂಡಾ ಒಂಥರಾ ದೇವರೇ ಅಲ್ವಾ?

ನನ್ನ ಅಜ್ಜ ಹೇಳಿದ ಒಂದು ಮಾತು ನನಗೆ ಮರೆತುಹೋಗುವುದಿಲ್ಲ. ಮಧ್ಯಾಹ್ನ ಊಟದ ಹೊತ್ತಿನಲ್ಲಿ ಯಾರೋ ಭಿಕ್ಷುಕನು ಮನೆ ಬಾಗಿಲಿಗೆ ಬಂದು ಅಮ್ಮಾ ಹಸಿವು ಅಂದಾಗ ನಾವು ಊಟ ಹಾಕದೆ ಕಳುಹಿಸಬಾರದು. ಏಕೆಂದರೆ ದೇವರು ಆ ಭಿಕ್ಷುಕನ ರೂಪದಲ್ಲಿಯೂ ಬಂದಿರಬಹುದು!

Continue Reading

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ಸೈಬರ್ ಕ್ರೈಮ್ – ತಡೆಗಟ್ಟುವುದು ಹೇಗೆ?

ನಿಮಗೆ ಸೈಬರ್‌ ಅಪರಾಧ ಸಂಭವಿಸಿದಾಗ ಯಾರ ಸಹಾಯ ಪಡೆಯಬೇಕು? ಏನು ಮಾಡಬೇಕು? ಕಾನೂನಿನಲ್ಲಿ ಇದಕ್ಕೆ ಇರುವ ದಾರಿಗಳೇನು? ಎನ್ನುವ ಪ್ರಶ್ನೆಗಳಿಗೆ ಸೈಬರ್ ಕ್ರೈಮ್ ಪುಸ್ತಕದಲ್ಲಿ ಉತ್ತರವಿದೆ.

VISTARANEWS.COM


on

cyber safety column cyber crime book
Koo
cyber safty logo

ಸೈಬರ್‌ ಸೇಫ್ಟಿ ಅಂಕಣ: ಸೈಬರ್ (cyber world) ಜಗತ್ತಿನಲ್ಲಿ ಸರ್ವೈವ್ ಆಗಲು ಅರಿವೊಂದೇ ದಾರಿ. ಜಾಣರಾಗಿ ಮತ್ತು ಜಾಗ್ರತರಾಗಿರಿ ಎಂದು ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ (RBI) ಕೂಡ ಹೇಳೋದು ಇದನ್ನೇ. ಈ ರೀತಿಯ ಎಚ್ಚರಿಕೆಯನ್ನು ಸರ್ಕಾರ, ವಿವಿಧ ವಾಣಿಜ್ಯ ವಲಯಗಳ ನಿಯಂತ್ರಕರು, ಕಾನೂನು ಪಾಲಕರೂ ಹೇಳುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ ಕನ್ನಡದಲ್ಲಿ ಸಾವಣ್ಣ ಎಂಟರ್‌ಪ್ರೈಸರ್ಸ್ ಪ್ರಕಾಶನದಲ್ಲಿ ಇತ್ತೀಚೆಗೆ ಬಂದ ಪುಸ್ತಕ ಸತೀಶ್ ವೆಂಕಟಸುಬ್ಬು ಅವರ ʼಸೈಬರ್ ಕ್ರೈಮ್- ತಡೆಗಟ್ಟುವುದು ಹೇಗೆʼ ಎಂಬ ಉಪಶೀರ್ಷಿಕೆಯನ್ನು ಹೊಂದಿರುವ ಈ ಪುಸ್ತಕಕ್ಕೆ ಖ್ಯಾತ ಲೇಖಕ, ಅಂಕಣಕಾರ ಮತ್ತು ಆರ್ಥಿಕ ಸಲಹೆಗಾರರಾದ ರಂಗಸ್ವಾಮಿ ಮೂಕನಹಳ್ಳಿಯವರ ಬೆನ್ನುಡಿ ಇದೆ.

ಅವರು ಹೇಳ್ತಾರೆ “ಇಂದಿನ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆಗಳು ಕಳ್ಳತನದ ವ್ಯಾಖ್ಯಾನವನ್ನು ಬದಲಿಸಿದೆ. ಹಿಂದೆ ಕಳ್ಳರು ಮನೆಗೆ ನುಗ್ಗಿ ಅಥವಾ ದಾರಿಯಲ್ಲಿ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಈಗ ನಮ್ಮ ಅಜಾಗರೂಕತೆಯಿಂದ ಕೊಟ್ಟ ಅನುಮತಿಯಿಂದ, ಅಥವಾ ನಮ್ಮ ಅನುಮತಿಯಿಲ್ಲದೆ ಕ್ರೈಮ್ ಸಂಭವಿಸುತ್ತಿದೆ. ನಮ್ಮ ಗಳಿಕೆ, ಉಳಿಕೆಗಳು ಕ್ಷಣಾರ್ಧದಲ್ಲಿ ಮಾಯವಾಗುತ್ತಿದೆ. ಹೀಗೆ ಆದಾಗ ಯಾರ ಸಹಾಯ ಪಡೆಯಬೇಕು? ಏನು ಮಾಡಬೇಕು? ಕಾನೂನಿನಲ್ಲಿ ಇದಕ್ಕೆ ಇರುವ ದಾರಿಗಳೇನು? ಕಳೆದುಕೊಂಡಿರುವುದನ್ನು ಮರಳಿ ಪಡೆಯಬಹುದೇ? ಎನ್ನುವ ಪ್ರಶ್ನೆಗಳಿಗೆ ಸೈಬರ್ ಕ್ರೈಮ್ ಪುಸ್ತಕದಲ್ಲಿ ಉತ್ತರವಿದೆ. ಕನ್ನಡಿಗರಿಗೆ ಸೈಬರ್ ಕ್ರೈಮ್‌ಗೆ ಸಂಬಂಧಿಸಿದ ಒಂದು ಅತ್ಯವಶ್ಯಕ ಕೈಪಿಡಿಯಂತಿದೆ ಈ ಪುಸ್ತಕ.

ವಿವಿಧ ದೇಶಗಳಲ್ಲಿ ಸುಮಾರು 20 ವರ್ಷಗಳ ಕಾಲ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಇರುವ ಸತೀಶ್‌ ವೆಂಕಟಸುಬ್ಬು ಸ್ವಯಂ ನಿವೃತ್ತಿ ಪಡೆದು ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ. ಅವರು ನ್ಯಾಷನಲ್‌ ಲಾ ಸ್ಕೂಲಿನ ಸೈಬರ್ ಲಾ ಮತ್ತು ಸೈಬರ್‌ ಫೋರೆನ್ಸಿಕ್ಸ್ ಡಿಪ್ಲೊಮಾ ಮಾಡಿದ್ದಾರೆ. ಜೊತೆಗೆ ಮೈಸೂರಿನ JSS ಕಾನೂನು ಕಾಲೇಜಿನಲ್ಲಿ LLB ಕೋರ್ಸನ್ನು ಮುಗಿಸಿದ್ದಾರೆ. ಈ ಸಂಬಂಧವಾಗಿ ಮೈಸೂರಿನ ಸೈಬರ್, ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ (CEN) ಪೊಲೀಸ್‌ಠಾಣೆಯಲ್ಲಿ ಇಂಟರ್ನ್‌ಶಿಪ್‌ ಮಾಡಿ ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದ್ದಾರೆ. ಜೊತೆಯಲ್ಲಿ ಇವರು ಕನ್ನಡದ ಪ್ರಮುಖ ದಿನಪತ್ರಿಕೆಯಲ್ಲಿ ‘ಸೈಬರ್‌ಮಿತ್ರ’ ಎಂಬ ಅಂಕಣವನ್ನೂ ಬರೆಯುತ್ತಾರೆ. ವಿವಿಧ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸುವ ಅಂಕಣಬರಹಗಳ ಗುಚ್ಛವನ್ನು ಸೈಬರ್ ಕ್ರೈಮ್ ಪುಸ್ತಕವನ್ನಾಗಿ ಕನ್ನಡಿಗರಿಗೆ ಕೊಟ್ಟಿದ್ದಾರೆ.

ಸೈಬರ್ ಅಪರಾಧಗಳ ಕಿರು ಪರಿಚಯದೊಂದೆಗೆ ಪ್ರಾರಂಭವಾಗುವ ಈ ಪುಸ್ತಕದಲ್ಲಿ ಸೋಶಿಯಲ್‌ ಇಂಜಿನಿಯರಿಂಗ್, ರಾನ್ಸಮ್‌ವೇರ್ ದಾಳಿ, ಆನ್‌ಲೈನ್‌ ಸಾಲದ ಆ್ಯಪ್‌ ವಂಚನೆ, ಸಿಮ್-ಸ್ವಾಪ್‌ ಅಪರಾಧಗಳು, ಆಧಾರ್ ಬಳಸಿಕೊಂಡು ನಡೆಯುತ್ತಿರುವ ಅಪರಾಧಗಳು, ಪ್ಯಾನ್ (PAN) ಬಳಸಿಕೊಂಡು ನಡೆಯುತ್ತಿರುವ ವಂಚನೆಗಳು, ಸೆಕ್ಸ್‌ಟಾರ್ಶನ್‌, ಆನ್‌ಲೈನ್‌ ಆಟಗಳ ಮೂಲಕ ಆಗುತ್ತಿರುವ ಮೋಸ, ಸೋಗು ಹಾಕುವಿಕೆ (impersonation), ಗುರುತಿನ ಕಳ್ಳತನ (identity theft), ಕ್ಯೂಆರ್ ಕೋಡು ಅಪರಾಧಗಳು, ಮನೆಯಿಂದಲೇ ಕೆಲಸ, ಆನ್ಲೈನ್ ಕೆಲಸದ ಆಮಿಷದ ಮೂಲಕ ನೆಡೆಯುತ್ತಿರುವ ಸೈಬರ್ ವಂಚನೆಗಳು, ಗ್ರಾಹಕ ಸಹಾಯವಾಣಿ, ಕೊರಿಯರ್ ಸಂಬಂಧಿತ ಅಪರಾಧಗಳು, ಮಹಿಳೆಯರು, ಹುಡುಗಿಯರು ಮತ್ತು ಮಕ್ಕಳನ್ನು ಗುರಿಯಾಗಿಸಿ ನೆಡೆಸುವ ಸೈಬರ್ ಕ್ರೈಮ್‌ಗಳು, ಡೀಪ್‌ಫೇಕ್, ಕ್ರಿಪ್ಟೋಕರೆನ್ಸಿ ಅಥವಾ ಬಿಟ್‌ಕಾಯಿನ್ ವಂಚನೆಗಳು, ಮುಂತಾದ ವೈವಿಧ್ಯಮಯ ಅಪರಾಧಗಳ ಬಗ್ಗೆ ಸರಳವಾಗಿ ಅರಿವು ಮೂಡಿಸಿದ್ದಾರೆ. ಲೇಖಕರು ಈ ಪುಸ್ತಕದಲ್ಲಿ ಜನಸಾಮಾನ್ಯರ ಮೇಲೆ ನೆಡೆಯುವ ಸೈಬರ್ ಅಪರಾಧಗಳನ್ನು ಅರ್ಥ ಮಾಡಿಕೊಳ್ಳುವ ಮಾಹಿತಿ ನೀಡಿದ್ದಾರೆ.

ಈ ಅಪರಾಧಗಳ ಕಾರ್ಯತಂತ್ರ, ಅದರಿಂದ ಪಾರಾಗುವ ಬಗೆ ಮತ್ತು ಅಕಸ್ಮಾತ್ತಾಗಿ ಆ ಸೈಬರ್ ಕ್ರೈಮಿನ ವಿಕ್ಟಿಮ್‌ ಆಗಿದ್ದರೆ ಕೈಗೊಳ್ಳಬೇಕಾದ ಕ್ರಮಗಳು ಜೊತೆಗೆ ಭಾರತದಲ್ಲಿ ಕಾನೂನುಬದ್ಧವಾಗಿ ಲಭ್ಯವಿರುವ ಪರಿಹಾರಗಳನ್ನೂ ಕೊಟ್ಟಿದ್ದಾರೆ.

ಲೇಖಕರು ಇದನ್ನು ಸಂಪೂರ್ಣ ಕೈಪಿಡಿ ಅಲ್ಲ ಎಂದಿರುವುದು ಅವರ ನಮ್ರತೆಯನ್ನು ತೋರಿಸುತ್ತದೆ. ನಮ್ಮ ತಿಳುವಳಿಕೆ, ಅನುಭವವನ್ನು ಮೀರಿ ಬೆಳೆಯುತ್ತಿರುವ ತಂತ್ರಜ್ಞಾನ ಕ್ಷೇತ್ರ ಮತ್ತು ಅದಕ್ಕನುಗುಣವಾಗಿ ರೂಪುಗೊಳ್ಳುವ ಕ್ರಿಮಿನಲ್‌ಗಳ ಕುತಂತ್ರಗಳು ಹೊಸ ಬಗೆಯ ಸವಾಲುಗಳನ್ನು ಒಡ್ಡುತ್ತಿರುತ್ತದೆ. ಹಾಗಾಗಿ ಎಲ್ಲಾ ಪ್ರಕರಣಗಳಿಗೂ ಈ ಪುಸ್ತಕ ಒಂದನ್ನೇ ನೆಚ್ಚಿಕೊಳ್ಳುವುದು ಸಾಕಾಗಲಿಕ್ಕಿಲ್ಲ ಎಂದು ಡಿಸ್ಕ್‌ಕ್ಲೈಮರ್‌ ಕೂಡ ಕೊಟ್ಟಿದ್ದಾರೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಅಂತರ್ಜಾಲದ ಅಲೆದಾಟದಲ್ಲಿ ಜಾಗರೂಕತೆಯಿಲ್ಲದಿದ್ದರೆ ಪರದಾಟ

ಮುಖ್ಯವಾಗಿ ಈ ಪುಸ್ತಕದಲ್ಲಿ ತಿಳಿಸಿರುವುದೇನೆಂದರೆ ನೀವು ಸೈಬರ್ ವಂಚನೆಗೆ ಒಳಗಾಗಿದ್ದರೆ ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ https://cybercrime.gov.in/ ನಲ್ಲಿ ದೂರು ಸಲ್ಲಿಸಿ. ಮೋಸದಿಂದ ಕಳೆದುಕೊಂಡ ಹಣವನ್ನು ಫ್ರೀಜ್‌ ಮಾಡಲು ಸಂಬಂಧಿಸಿದ ಬ್ಯಾಂಕ್‌ಗೆ ಕರೆ ಮಾಡಿ ತಿಳಿಸಿ. ನಿಮ್ಮ ಆಧಾರ್ ಕಾರ್ಡ್‌ನ್ನು ಲಾಕ್‌ಮಾಡಿ. ನಿಮ್ಮ ಖಾತೆಗಳ ಪಾಸ್‌ವರ್ಡ್/ಪಿನ್‌ಗಳನ್ನು ಬದಲಾಯಿಸಿ. ನಿಮ್ಮ ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ಗೆ ಏನಾದರೂ ಮಾಲ್‌ವೇರ್ ಅಥವಾ ವೈರಸ್‌ ದಾಳಿಯ ಅನುಮಾನವಿದ್ದರೆ ಫಾರ್ಮ್ಯಾಟ್‌ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್‌ ಮಾಡಿ.

ಸೈಬರ್ ಕಾನೂನುಗಳ ಬಗ್ಗೆಯೇ ಒಂದು ಪ್ರತ್ಯೇಕ ಅಧ್ಯಾಯವನ್ನು ಕೊಟ್ಟಿರೋದು ಎಲ್ಲರಿಗೂ ಭಾರತೀಯ ಸೈಬರ್ ಕಾನೂನುಗಳ ಬಗ್ಗೆ ಒಂದು ಅವಲೋಕನವನ್ನು ಕೊಡುವುದರ ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯಿದೆ 2000 – 2008, ಭಾರತೀಯ ದಂಡ ಸಂಹಿತೆ ಅಥವಾ ಇಂಡಿಯನ್ ಪೀನಲ್‌ ಕೋಡ್‌ 1860 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ, 1872 ಬಗ್ಗೆ ಸರಳವಾಗಿ ವಿವರಿಸಿದ್ದಾರೆ.

ಅಂತರ್ಜಾಲದಲ್ಲಿ ಅಂತರ್ಗತವಾಗಿರುವ ವಿವಿಧ ಮೋಸ ವಂಚನೆಗಳ ಕಾರ್ಯತಂತ್ರ ಮತ್ತು ಅದರ ಪರಿಹಾರಗಳನ್ನು ನಿಮಗೆ ಒಂದೇ ಕಡೆ ಸಿಗುವಂತೆ ಈ ಪುಸ್ತಕದಲ್ಲಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಕ್ರಿಪ್ಟೋಗ್ರಫಿ ಮತ್ತು ಸೈಬರ್ ಭದ್ರತೆ

Continue Reading

ಸ್ಫೂರ್ತಿ ಕತೆ

Raja Marga Column : ಬ್ರಿಟಿಷ್ ವಿಜ್ಞಾನಿಗಳು ವಿಷ ಎಂದು ಕೊಟ್ಟ ದ್ರಾವಣವನ್ನು ಆ ವಿಜ್ಞಾನಿ ಗಟಗಟ ಕುಡಿದಿದ್ದರು!

Raja Marga Column : ಸಸ್ಯಗಳಿಗೆ ಜೀವವಿದೆ, ಸಂವೇದನೆಗಳಿವೆ ಎಂದು ತೋರಿಸಿದ ವಿಜ್ಞಾನಿ ನಿಮಗೆ ಗೊತ್ತೇ ಇದೆ. ಅವರೊಮ್ಮೆ ಸಸ್ಯಗಳು ವಿಷಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ ಎನ್ನುವ ಪ್ರಯೋಗವನ್ನು ಮಾಡಿದಾಗ ಬ್ರಿಟಿಷ್‌ ವಿಜ್ಞಾನಿಗಳು ಕಿತಾಪತಿ ಮಾಡಿದರು. ಆ ಕಿತಾಪತಿಯನ್ನು ಇವರು ಹೇಗೆ ಮೆಟ್ಟಿ ನಿಂತರು? ಇಲ್ಲಿದೆ ಸ್ಟೋರಿ.

VISTARANEWS.COM


on

Raja Marga Column Jagadish Chandra Bose
Koo
RAJAMARGA Rajendra Bhat

Raja Marga Column : 1910ರ ಇಸವಿ ಮೇ 10ನೇ ತಾರೀಕು. ಲಂಡನ್ನಿನ ಅತ್ಯಂತ ವೈಭವದ ರಾಯಲ್ ಸೊಸೈಟಿಯ (London Royal Society) ಸಭಾಂಗಣ. ಇಂಗ್ಲೆಂಡಿನ ಶ್ರೇಷ್ಠ ವಿಜ್ಞಾನಿಗಳು ಅಲ್ಲಿ ಸೇರಿ ಭಾರತೀಯ ವಿಜ್ಞಾನಿ (Indian Scientist) ಒಬ್ಬರ ಪ್ರಯೋಗದ ಪ್ರಾತ್ಯಕ್ಷಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಕುಳಿತಿದ್ದರು. ಸಭಾಂಗಣದಲ್ಲಿ ಗಾಢ ಮೌನವು ಆವರಿಸಿತ್ತು.

ಅವರು ತಾವೇ ಶೋಧಿಸಿದ್ದ ಕ್ರೆಸ್ಕೊಗ್ರಾಫ್ (Crescograph) ಎಂಬ ಯಂತ್ರದ ಮೂಲಕ ಸಸ್ಯಗಳಿಗೆ ಜೀವ ಮತ್ತು ಸಂವೇದನೆಗಳು ಇವೆ ಎಂದು ತೋರಿಸುವ ಪ್ರಯೋಗವನ್ನು ಮಾಡುತ್ತಿದ್ದರು. ಎಲ್ಲ ಸಸ್ಯಗಳು ಸಂಗೀತ, ಬೆಳಕಿನ ಕಿರಣ, ವಯರ್‌ಲೆಸ್ ಕಿರಣ, ವಿದ್ಯುತ್ಕಾಂತೀಯ ಕಿರಣ ಮೊದಲಾದುವುಗಳ ಸೂಕ್ಷ್ಮವಾದ ಸಂವೇದನೆಗಳಿಗೆ ಕೂಡ ಸ್ಪಂದಿಸುತ್ತವೆ (Planats reacts to stimulations) ಎಂದು ಅವರು ಭಾರತದಲ್ಲಿ ಸಾಬೀತು ಮಾಡಿ ತೋರಿಸಿಯಾಗಿತ್ತು. ಅದೇ ರೀತಿ ವಿಷವನ್ನು ಹಾಕಿದರೆ ಸಸ್ಯಗಳು ಮನುಷ್ಯರಂತೆ ನರಳಿ ಸಾಯುತ್ತವೆ ಎಂದು ಕೂಡ ಅವರು ಸಾಬೀತು ಮಾಡಿದ್ದರು.

Raja Marga Column Cescograph

ಅದೇ ಪ್ರಯೋಗವನ್ನು ಅವರು ಇಂಗ್ಲೆಂಡಿನಲ್ಲಿ ಪ್ರಾತ್ಯಕ್ಷಿಕೆ ಮಾಡುತ್ತಿದ್ದರು. ಅವರು ಒಂದು ಹಸಿರು ಗಿಡವನ್ನು ತಮ್ಮ ಯಂತ್ರಕ್ಕೆ ಕನೆಕ್ಟ್ ಮಾಡಿ ಅಲ್ಲಿನ ವಿಜ್ಞಾನಿಗಳಿಗೆ ಬ್ರೋಮೈಡ್ ದ್ರಾವಣ (Bromide solution) ತರಲು ಹೇಳಿದರು. ಅದು ವಿಷದ ದ್ರಾವಣ.

Raja Marga Column : ಬ್ರಿಟಿಷ್ ವಿಜ್ಞಾನಿಗಳು ಬಿಸಿ ದ್ರಾವಣವನ್ನು ತಂದುಕೊಟ್ಟರು

ಆಗ ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಕಾಲ. ಒಬ್ಬ ಭಾರತೀಯ ವಿಜ್ಞಾನಿಯು ಕೀರ್ತಿ ಪಡೆಯುವುದು ಅಲ್ಲಿದ್ದ ಆಂಗ್ಲ ವಿಜ್ಞಾನಿಗಳಿಗೆ ಒಂದಿಷ್ಟೂ ಇಷ್ಟ ಇರಲಿಲ್ಲ. ಅವರನ್ನು ಅಪಮಾನ ಮಾಡಲು ಅವರು ಸೇರಿ ಒಂದು ಉಪಾಯ ಮಾಡಿದರು. ಬಿಸಿ ಸಕ್ಕರೆಯ ದ್ರಾವಣವನ್ನು ತಂದು ಅವರ ಕೈಯ್ಯಲ್ಲಿ ಕೊಟ್ಟು ಬ್ರೋಮೈಡ್ ದ್ರಾವಣ ಅಂದರು.

ಅದನ್ನು ಸಸ್ಯಗಳ ಮೇಲೆ ಬೋಸರು ಪ್ರಯೋಗ ಮಾಡುತ್ತ ಹೋದಂತೆ ಸಸ್ಯವು ಯಾವ ಸ್ಪಂದನೆಯನ್ನೂ ಕೊಡಲಿಲ್ಲ. ಹಸಿರು ಗಿಡವು ನರಳುವುದು ಗೋಚರ ಆಗಲೇ ಇಲ್ಲ.

ಆ ವಿಜ್ಞಾನಿಯು ಹಿಂದೆ ಮುಂದೆ ನೋಡದೆ ದ್ರಾವಣವನ್ನು ಗಟಗಟನೆ ಕುಡಿದೇ ಬಿಟ್ಟರು!

ಆ ಭಾರತೀಯ ವಿಜ್ಞಾನಿಗೆ ತಾನು ಮೋಸ ಹೋಗಿರುವುದು ಕೂಡಲೇ ಗೊತ್ತಾಯ್ತು. ಅವರು ಮೈಕ್ ತೆಗೆದುಕೊಂಡು ಸಿಡಿಗುಂಡಿನ ಹಾಗೆ ನುಡಿದೇ ಬಿಟ್ಟರು. ‘ನನಗೆ ನನ್ನ ಸಂಶೋಧನೆಯ ಮೇಲೆ ನಂಬಿಕೆ ಇದೆ. ನೀವು ಕೊಟ್ಟ ವಿಷವು ನನ್ನ ಸಸ್ಯವನ್ನು ಸಾಯಿಸಿಲ್ಲ ಅಂದಾದರೆ ಅದು ನನ್ನನ್ನೂ ಏನೂ ಮಾಡದು’ ಎಂದು ಆ ಬಿಸಿ ದ್ರಾವಣವನ್ನು ಎಲ್ಲರ ಮುಂದೆ ಗಟಗಟನೆ ಕುಡಿದೇ ಬಿಟ್ಟರು! ಅದು ಬಿಸಿ ಸಕ್ಕರೆಯ ದ್ರಾವಣ ಆಗಿತ್ತು.

“ಇನ್ನು ಮುಂದೆ ಯಾವುದೇ ಭಾರತೀಯ ವಿಜ್ಞಾನಿಯನ್ನೂ ಕೂಡ ಮೋಸ ಮಾಡಲು ಹೋಗಬೇಡಿ!” ಎಂದು ಹೇಳಿ ಅವರು ತಮ್ಮ ಪ್ರಯೋಗವನ್ನು ಮುಂದುವರೆಸಿದರು ಮತ್ತು ತನ್ನ ಶ್ರೇಷ್ಠವಾದ ಸಂಶೋಧನೆಯು ಎಷ್ಟು ಗಟ್ಟಿ ಇದೆ ಎಂದು ಜಗತ್ತಿಗೆ ತೋರಿಸಿಕೊಟ್ಟರು. ಮುಂದೆ ಅದೇ ಇಂಗ್ಲೆಂಡಿನ ರಾಯಲ್ ಸೊಸೈಟಿ ಅವರಿಗೆ ತನ್ನ ಫೆಲೋಶಿಪ್ ಗೌರವ ನೀಡಿತ್ತು ಅಂದರೆ ಅದು ಭಾರತದ ಗೆಲುವು ಆಗಿತ್ತು.

ಅವರೇ ಭಾರತದ ಶ್ರೇಷ್ಠ ಸಸ್ಯ ವಿಜ್ಞಾನಿ ಡಾಕ್ಟರ್ ಜಗದೀಶ್ ಚಂದ್ರ ಬೋಸ್ (Jagadish Chandra Bose). ಅವರು ನಿಜವಾಗಿ ಭಾರತದ ಹೆಮ್ಮೆ.

ಕೇಂಬ್ರಿಜ್ ವಿವಿಯಲ್ಲಿ ಅವರು ಕಲಿತು ಬಂದಿದ್ದರು!

ಡಾಕ್ಟರ್ ಜಗದೀಶ್ ಚಂದ್ರ ಬೋಸರು ಹುಟ್ಟಿದ್ದು 1858ನೇ ಇಸವಿ ನವೆಂಬರ್ 30ರಂದು. ವೈದ್ಯಕೀಯ ಪದವಿಯನ್ನು ಪಡೆಯಲು ಕೇಂಬ್ರಿಜ್ ವಿವಿಯಲ್ಲಿ ಓದಲು ಲಂಡನ್ನಿಗೆ ಹೋಗಿದ್ದ ಅವರು ಅನಾರೋಗ್ಯದ ಕಾರಣ ತಮ್ಮ ಕೋರ್ಸ್ ಬದಲಾವಣೆ ಮಾಡಬೇಕಾಯಿತು. ಅವರು ಸ್ನಾತಕೋತ್ತರ ವಿಜ್ಞಾನದ ಪದವಿಯನ್ನು ಪಡೆದು ಭಾರತಕ್ಕೆ ಮರಳಿದರು. ಬ್ರಿಟಿಷ್ ಆಡಳಿತವಿದ್ದ ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓರ್ವ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಅವರು ನೇಮಕವನ್ನು ಪಡೆದರು. ಒಳ್ಳೆಯ ಪ್ರಾಧ್ಯಾಪಕ ಎಂಬ ಕೀರ್ತಿಯನ್ನು ಕೂಡ ಪಡೆದರು.

Raja Marga Column plants

ಸ್ವಾಭಿಮಾನಿ ಪ್ರತಿಭಟನೆ ಮಾಡಿದ್ದರು ಬೋಸ್

ಆದರೆ ಆ ಕಾಲೇಜಿನಲ್ಲಿ ಬ್ರಿಟಿಷ್ ಅಧ್ಯಾಪಕರಿಗೆ ಕೊಡುತ್ತಿದ್ದ ವೇತನದ 2/3 ವೇತನವನ್ನು ಭಾರತೀಯ ಪ್ರಾಧ್ಯಾಪಕರಿಗೆ ಅಲ್ಲಿ ನೀಡಲಾಗುತ್ತಿತ್ತು. ಸ್ವಾಭಿಮಾನಿ ಆಗಿದ್ದ ಬೋಸರು ಇದನ್ನು ಪ್ರತಿಭಟಿಸಿ ವೇತನ ಪಡೆಯದೇ ದುಡಿಯಲು ಆರಂಭ ಮಾಡಿದರು. ಮೂರು ವರ್ಷಗಳ ತನಕ ಅವರ ಈ ಪ್ರತಿಭಟನೆಯು ಮುಂದುವರೆಯಿತು. ಕೊನೆಗೆ ಕಾಲೇಜು ಆಡಳಿತ ಮಂಡಳಿ ಅವರಿಗೆ ಸರೆಂಡರ್ ಆಗಿ ಬ್ರಿಟಿಷ್ ಶಿಕ್ಷಕರಿಗೆ ಸಮಾನವಾದ ವೇತನ ನೀಡಲು ಒಪ್ಪಿತು, ಮಾತ್ರವಲ್ಲ ಅವರ ಮೂರು ವರ್ಷಗಳ ವೇತನವನ್ನು ಬಡ್ಡಿ ಸಹಿತ ಪಾವತಿ ಮಾಡಿತು.

ಇದನ್ನೂ ಓದಿ : Raja Marga Column : ಯಾರು ಏನೇ ಹೇಳಲಿ, ನೀವು ಕೇಕೆ ಹಾಕಿ ನಗೋದನ್ನು ಮರೀಬೇಡಿ!

ವಯರ್ ಲೆಸ್ ಸಂಶೋಧನೆ ಅವರು ಮಾಡಿದರೂ ಪೇಟೆಂಟ್ ಪಡೆಯಲಿಲ್ಲ!

ಬೋಸರು 1895ದಲ್ಲಿ ‘ವಯರ್‌ಲೆಸ್ ತಂತ್ರಜ್ಞಾನದ’ ಸಂಶೋಧನೆ ಮಾಡಿದ್ದರು. ಆದರೆ ಅದನ್ನು ಪೇಟೆಂಟ್ ಮಾಡಲಿಲ್ಲ.

ಯಾವುದೇ ವಿಜ್ಞಾನದ ಸಂಶೋಧನೆ ದುಡ್ಡು ಮಾಡಲು ಅಲ್ಲ. ಅದು ಲೋಕ ಕಲ್ಯಾಣಕ್ಕಾಗಿ ಇರಬೇಕು ಎಂದವರು ಹೇಳಿದ್ದರು. ಮುಂದೆ ಎರಡು ವರ್ಷಗಳ ನಂತರ ಅಂದರೆ 1897ರಲ್ಲಿ ಗೂಗ್ಲಿಮೋ ಮಾರ್ಕೊನಿ ಅದೇ ವಯ‌ರ್‌ಲೆಸ್ ತಂತ್ರಜ್ಞಾನವನ್ನು ಸಂಶೋಧಿಸಿ ಪೇಟೆಂಟ್ ಪಡೆದರು. ಅದರಿಂದಾಗಿ ಒಬ್ಬ ಭಾರತೀಯ ವಿಜ್ಞಾನಿಗೆ ದೊರಕಬೇಕಿದ್ದ ವಿಶ್ವಮಟ್ಟದ ಕೀರ್ತಿಯು ಸಿಗದೇ ಹೋಯಿತು! ಆದರೆ ಇದರಿಂದ ಬೋಸರು ಒಂದು ಎಳ್ಳಿನ ಮೊನೆಯಷ್ಟು ಕೂಡ ಬೇಸರ ಪಡಲಿಲ್ಲ!

‘ಪ್ರಯೋಗಶಾಲೆಯೇ ನನ್ನ ದೇವಾಲಯ’ ಎಂದು ಹೇಳಿದ ಮತ್ತು ಅದರಂತೆ ಬದುಕಿದ ಬೋಸರು 1937 ನವೆಂಬರ್ 23ರಂದು ಈ ಲೋಕದಿಂದ ನಿರ್ಗಮಿಸಿದರು. ಅವರ ಕೊಡುಗೆಗಳನ್ನು ಗಟ್ಟಿಯಾಗಿ ಸ್ಮರಿಸೋಣ.

Continue Reading

ಅಂಕಣ

ವಿಸ್ತಾರ ಅಂಕಣ: ಈಗ ಇರುವುದು ಕಾಂಗ್ರೆಸ್‌ ದೇಹ, ಕಮ್ಯುನಿಸ್ಟ್‌ ಆತ್ಮ!

ವಿಸ್ತಾರ ಅಂಕಣ: ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಲೇ ಸಂವಿಧಾನ ಉಳಿಸಿ ಎಂದು ಹೋರಾಡುವುದು ಎಂದರೆ ಏನು? ಇದೆಲ್ಲವೂ ಪರದೆಯ ಹಿಂದೆ ಕಮ್ಯುನಿಸ್ಟರು ಆಡುತ್ತಿರುವ, ಆಡಿಸುತ್ತಿರುವ ಆಟ. ಕಾಂಗ್ರೆಸ್‌ ಕೇವಲ ದೇಹವಷ್ಟೆ.

VISTARANEWS.COM


on

communist congress
Koo
Vistara Column @ Hariprakash Konemane

ವಿಸ್ತಾರ ಅಂಕಣ: ಕಾಂಗ್ರೆಸ್‌ ಪಕ್ಷ ಇತ್ತೀಚೆಗೆ ಸಂವಿಧಾನದ (constitution) ಜಪ ಮಾಡುತ್ತಿದೆ. ಕೇಂದ್ರದಲ್ಲಿ ಹತ್ತು ವರ್ಷದಿಂದ ಅಧಿಕಾರ ನಡೆಸುತ್ತಿರುವ ಕೇಂದ್ರ ಸರ್ಕಾರ (central government) ಸಂವಿಧಾನವನ್ನು ಬುಡಮೇಲು ಮಾಡುತ್ತಿದೆ, ಅದನ್ನು ಉಳಿಸಬೇಕಿದೆ ಎಂದು ಬೊಬ್ಬೆ ಹಾಕುತ್ತಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಬೃಹತ್‌ ʼಅಂತಾರಾಷ್ಟ್ರೀಯ ಸಮಾವೇಶʼವನ್ನೇ ನಡೆಸಿದೆ.

ಅಷ್ಟಕ್ಕೂ ಕಾಂಗ್ರೆಸ್‌ ಹೇಳುತ್ತಿರುವಂತೆ ಕೇಂದ್ರ ಸರ್ಕಾರ ಸಂವಿಧಾನವನ್ನು ಬುಡಮೇಲು ಮಾಡಿದೆ ಎಂದೇ ಇಟ್ಟುಕೊಂಡರೂ ಸರ್ಕಾರದ ವಿರುದ್ಧ ಇಷ್ಟೆಲ್ಲ ಆರೋಪ ಮಾಡುತ್ತಿರುವವರನ್ನೆಲ್ಲ ಬಂಧಿಸಿರಬೇಕಿತ್ತಲ್ಲ? ಪ್ರಧಾನಿ ನರೇಂದ್ರ ಮೋದಿಯವರು ನ್ಯಾಯಾಂಗವನ್ನೂ ತಮ್ಮ ಕಪಿಮುಷ್ಠಿಗೆ ತೆಗೆದುಕೊಂಡಿದ್ದಾರೆ ಎಂದು ಇವರೆಲ್ಲ ಆರೋಪಿಸುತ್ತಿರುವುದು ನಿಜವೇ ಆಗಿದ್ದರೆ ಈ ಕೇಂದ್ರ ಸರ್ಕಾರವೇ ಜಾರಿ ಮಾಡಿದ್ದ ಎಲೆಕ್ಟೆರೋಲ್ ಬಾಂಡ್‌ಗಳನ್ನು ಸುಪ್ರೀಂ ಕೋರ್ಟ್‌ ಹೊಡೆದುಹಾಕಬಾರದಿತ್ತಲ್ಲ? ದಿನನಿತ್ಯ ಕೇಂದ್ರ ಸರ್ಕಾರವನ್ನು, ಪ್ರಧಾನಿಯವರನ್ನು ತೆಗಳಿಕೊಂಡೇ ಇವರ ಆಸ್ತಿಗಳೂ ಹೆಚ್ಚಾಗುತ್ತಿವೆ ಎಂದರೆ ಈ ದೇಶದಲ್ಲಿ ಸಂವಿಧಾನ ಎನ್ನುವುದು ಸಜೀವವಾಗಿದೆ ಎಂದೇ ಅರ್ಥ. ಹಾಗೂ ಸರ್ಕಾರದ ವಿರುದ್ಧ ಇರುವವರಿಗೆ ಒಳ್ಳೆಯ ʼಆದಾಯʼವೂ ಇದೆ ಎನ್ನುವುದನ್ನೂ ನಾವು ತಿಳಿಯಬಹುದಾಗಿದೆ.

ಭಾರತದಲ್ಲಿ ಈಗ ಅಳವಡಿಸಿಕೊಂಡಿರುವ ಸಂವಿಧಾನಕ್ಕೆ ಸುಮಾರು 70 ವರ್ಷಗಳಾಗಿರಬಹುದು. ಆದರೆ ಭಾರತೀಯರಲ್ಲಿ ಸಾಂವಿಧಾನಿಕ ಅರಿವು ಅದಕ್ಕೂ ಹಿಂದಿನಿಂದಲೂ ಇದೆ. ಸಾಂವಿಧಾನಿಕ ಹಾಗೂ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಜೀವನ ಮಾಡಬೇಕು ಎಂಬ ಕಾರಣಕ್ಕೇ ಸ್ವಾತಂತ್ರ್ಯ ಹೋರಾಟ ನಡೆದಿದ್ದು. ಸುಮ್ಮನೆ ಸುಖೀಜೀವನ ನಡೆಸೋಣ, ಅದು ಯಾವ ಮಾದರಿಯ ಸರ್ಕಾರವಾದರೇನು? ಎಂದು ಭಾರತೀಯರು ಭಾವಿಸಿದ್ದರೆ ಬ್ರಿಟಿಷ್‌ ಸರ್ಕಾರವನ್ನೇ ಉಳಿಸಿಕೊಳ್ಳುತ್ತಿದ್ದರು. ಹಾಗಾಗಿ ಯಾವುದೇ ಸರ್ಕಾರಗಳು ಬಂದರೂ ಭಾರತದಲ್ಲಿ ಸಂವಿಧಾನವನ್ನಾಗಲಿ, ಸಾಂವಿಧಾನಿಕ ವ್ಯವಸ್ಥೆಯನ್ನಾಗಲಿ ಉರುಳಿಸಲು ಸಾಧ್ಯವೇ ಇಲ್ಲ ಎನ್ನುವುದು ಸತ್ಯ.

ಭಾರತದಲ್ಲಿ ಸಂವಿಧಾನವನ್ನು ಉರುಳಿಸುವ ಪ್ರಯತ್ನಗಳು ಸಾಕಷ್ಟು ನಡೆದಿವೆ. ಅವೆಲ್ಲವೂ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಎನ್ನುವುದು ಪ್ರಮುಖ ಸಂಗತಿ. 1953ರಿಂದ ಮೊದಲುಗೊಂಡು 2009ರವರೆಗೆ ಭಾರತದಲ್ಲಿ ಕೇಂದ್ರದ ಕಾಂಗ್ರೆಸ್‌ ಸರ್ಕಾರವು ಬರೊಬ್ಬರಿ 41 ರಾಜ್ಯ ಸರ್ಕಾರಗಳನ್ನು ಕೆಡವಿ ರಾಷ್ಟ್ರಪತಿ ಆಳ್ವಿಕೆ ಹೇರಿದೆ. ಇನ್ನು 1975ರಲ್ಲಿ ಸಂವಿಧಾನದ ಆಶಯಗಳನ್ನೇ ಬುಡಮೇಲು ಮಾಡಿ ತುರ್ತು ಪರಿಸ್ಥಿತಿ ಹೇರಿದ್ದೇ ಕಾಂಗ್ರೆಸ್‌. ಇದೇ ಅವಧಿಯಲ್ಲಿ ಸಂಸತ್‌ ಅಸ್ತಿತ್ವದಲ್ಲೇ ಇಲ್ಲದಿರುವಾಗ ಸಂವಿಧಾನದ ತಿದ್ದುಪಡಿ ಮಾಡಿ ʼಜಾತ್ಯತೀತʼ ಪದವನ್ನು ಪೀಠಿಕೆಯಲ್ಲಿ ತುರುಕಿದ್ದೂ ಕಾಂಗ್ರೆಸ್‌.

ಸಂವಿಧಾನ ಉಳಿಸುವುದು ಎಂದರೆ, ಕೇವಲ ಒಂದು ಮಹಾ ಸಮ್ಮೇಳನ ನಡೆಸಿ ಅಲ್ಲಿ ತಮಗಿಷ್ಟ ಬಂದವರಿಗೆ ವೇದಿಕೆ ನೀಡಿ ಭಾಷಣ ಮಾಡಿಸುವುದಲ್ಲ. ಭಾರತ ಬದುಕಿರುವುದು ಹೇಗೆ ಸಮಾಜದಲ್ಲೋ, ಸಂವಿಧಾನ ಬದುಕಿರುವುದೂ ಸಮಾಜದಲ್ಲೆ. ಸಮಾಜದ ಆರೋಗ್ಯವನ್ನು ಸರಿಪಡಿಸುವುದರ ಹೊರತಾಗಿ ಸಂವಿಧಾನವನ್ನು ರಕ್ಷಿಸುವುದು ಅಸಾಧ್ಯ.

ಸಮಾಜದಲ್ಲಿ ಆರೋಗ್ಯ ಸರಿಯಾಗಿರುವುದು ಎಂದರೆ ಏನರ್ಥ? ಎಲ್ಲರೂ ಸಂತೋಷದಿಂದಿರುವುದು ಎಂದೇ? ಹೌದು ಎನ್ನುವುದು ಬಹುಶಃ ಇದು ಅಧ್ಯಾತ್ಮಕ ಉತ್ತರ ಆಗಬಹುದು. ಅಧ್ಯಾತ್ಮದ ಪ್ರಕಾರ ಯೋಚಿಸಿದರೆ ಈ ಪ್ರಪಂಚದಲ್ಲಿರುವ ಎಲ್ಲ ಆತ್ಮಗಳೂ ʼPotentially Devine’. ಹಾಗಾದರೆ ಈಗಲೂ ಸಮಾಜದಲ್ಲಿ ಅತ್ಯಾಚಾರ, ಆನಾಚಾರ, ಕೊಲೆ, ಸುಲಿಗೆ, ದಂಗೆಗಳು ನಡೆಯುತ್ತಲೇ ಇರುತ್ತವೆಯಲ್ಲಾ ? ಯಾಕೆ , ಇವೆಲ್ಲವುಗಳನ್ನೂ ಅನ್ಯಗ್ರಹ ಜೀವಿಗಳು ಬಂದು ಮಾಡುತ್ತವೆಯೇಯೇ? ಇಲ್ಲ. ಇಲ್ಲಿನ ಸಮಾಜದಲ್ಲಿರುವ ಕೆಲವು ʼಆತ್ಮʼಗಳೇ ಈ ಕೃತ್ಯಗಳನ್ನೂ ಮಾಡುತ್ತವೆ ಎನ್ನುವುದು ವಾಸ್ತವ. ಹಾಗಾಗಿ ಸಮಾಜದಲ್ಲಿರುವ ಎಲ್ಲರನ್ನೂ ಖುಷಿಪಡಿಸುವುದು ಅಸಾಧ್ಯ.

ಹೆಚ್ಚಿನ ಜನರನ್ನು ಖುಷಿಯಾಗಿರಿಸಬೇಕು. ಅದಕ್ಕಾಗಿ ಕಡಿಮೆ ಸಂಖ್ಯೆಯಲ್ಲಿರುವ ಕಿಡಿಗೇಡಿಗಳನ್ನು ಅಂಕೆಯಲ್ಲಿರಬೇಕು. ಅಂಕೆಯಲ್ಲಿಡಬೇಕು ಎಂದರೆ ಅದಕ್ಕೆ ಸೂಕ್ತ ಕಾನೂನು, ಸುವ್ಯವಸ್ಥೆ ಕಾಪಾಡುವ ಸಂಸ್ಥೆಗಳಿರಬೇಕು. ಈ ಸಂಸ್ಥೆಗಳು ದುಷ್ಟರಿಗೆ ಶಿಕ್ಷೆ ನೀಡುತ್ತ ಹೋದಂತೆಲ್ಲ ಮತ್ತಷ್ಟು ದುಷ್ಟರು ಹುಟ್ಟುವುದನ್ನು ತಡೆಯಬಹುದು. ಹಾಗಾಗಿಯೇ, ಎಲ್ಲರೂ ಪರಬ್ರಹ್ಮನ ಸ್ವರೂಪ ಎಂದ ಹಿಂದೂ ಧರ್ಮವೇ, ʼದುಷ್ಟ ಶಿಕ್ಷಣ-ಶಿಷ್ಟ ರಕ್ಷಣʼ ಎಂಬ ಮಾತನ್ನೂ ಹೇಳಿದೆ. ಸಮಾಜದಲ್ಲಿರುವ ಎಲ್ಲರನ್ನೂ ಖುಷಿಪಡಿಸುತ್ತೇವೆ ಎಂದು ಹೇಳುತ್ತ ಕಾಂಗ್ರೆಸ್‌ ಪಕ್ಷವು ಅದಕ್ಕೆ ತುಷ್ಟೀಕರಣದ ʼಪರಿಹಾರʼವನ್ನು ಕಂಡುಕೊಂಡಿದೆ. ಯಾವುದೇ ದೇಶದಲ್ಲಿ ಒಂದು ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ ಎಂದರೆ ಆ ಸಮುದಾಯ ಇತರೆ ಸಮುದಾಯಗಳ ಮೇಲೆ ಸವಾರಿ ಮಾಡುತ್ತದೆ ಎನ್ನುವುದು ಪಾಶ್ಚಾತ್ಯ ಸಮಾಜಗಳಿಗೆ ಅನ್ವಯವಾಗುವ ಥಿಯರಿ. ಆ ದೇಶಗಳಲ್ಲೆಲ್ಲ ನಡೆದಿದ್ದು ಅದೇ. ಯಹೂದಿಗಳು, ಕ್ರೈಸ್ತರು, ಮುಸ್ಲಿಮರು ಹೆಚ್ಚಿನ ಸಂಖ್ಯೆಗೆ ಹೊರಳಿದ ಕೂಡಲೆ ನಡೆಸಿದ್ದು ನರಮೇಧಗಳನ್ನೆ. ಅಲ್ಲಿನ ಸಂದರ್ಭಕ್ಕೆ ಅನುಗುಣವಾಗಿ ಈ ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಎಂಬ ಪರಿಕಲ್ಪನೆ ಮೂಡಿತು. ಈ ಎಲ್ಲ ನರಮೇಧಗಳೂ ನಡೆದದ್ದು ʼಮತʼದ ಆಧಾರದಲ್ಲಿಯೆ. ಹಾಗಾಗಿ ಕಮ್ಯುನಿಸ್ಟ್‌ ಸಿದ್ಧಾಂತದ ಪಿತಾಮಹ ಕಾರ್ಲ್‌ ಮಾರ್ಕ್ಸ್‌, ʼರಿಲೀಜನ್‌ ಎಂದರೆ ಅಫೀಮುʼ ಎಂದ. ಇನ್ನೊಂದೆಡೆ ಕ್ರಿಶ್ಚಿಯನ್‌ ಚರ್ಚುಗಳು ಹೇರುತ್ತಿದ್ದ ಒತ್ತಡಗಳನ್ನು ಸಹಿಸಲಾಗದೆ ರಾಜಕಾರಣಿಗಳು ಚರ್ಚುಗಳಿಂದ ಅಂತರ ಕಾಯ್ದುಕೊಳ್ಳುವ ಸಲುವಾಗಿ ʼಜಾತ್ಯತೀತತೆʼ ಎಂಬ ಸಿದ್ಧಾಂತವನ್ನು ಹುಟ್ಟುಹಾಕಿಕೊಂಡರು.

congress party

ಪಾಶ್ಚಾತ್ಯ ವಿದ್ವಾಂಸರು ರೂಪಿಸಿದ್ದ ಪುಸ್ತಕಗಳನ್ನೇ ಮಕ್ಕಿ ಕಾ ಮಕ್ಕಿ ಕಂಠಪಾಠ ಮಾಡುವ ನಮ್ಮ ಬುದ್ಧಿಜೀವಿಗಳು ಅದನ್ನೇ ಸೆಮಿನಾರುಗಳಲ್ಲಿ ರೇಡಿಯೋ ರೀತಿ ಹೇಳುತ್ತಾ, ಅದೇ ನಿಜ ಎನ್ನುವ ಭಾವನೆ ಮೂಡಿಸಿದ್ದಾರೆ. ಪಶ್ಚಿಮದಲ್ಲಿದ್ದ ಮೆಜಾರಿಟಿ-ಮೈನಾರಿಟಿ ವಾದವನ್ನು ಭಾರತದಲ್ಲಿ ಹಿಂದೂಗಳು-ಮುಸ್ಲಿಮರು ಹಾಗೂ ಕ್ರೈಸ್ತರು ಎಂದು ಓದಿಕೊಂಡರು. ರಿಲೀಜನ್‌ ಎನ್ನುವುದು ಅಫೀಮು ಎನ್ನುವುದಕ್ಕೆ ಹಿಂದೂ ಧರ್ಮವು ಅಫೀಮು ಎಂದು ಓದಿಕೊಂಡರು. ಕೊನೆಗೆ, ಜಾತ್ಯತೀತತೆಯನ್ನು, ಹಿಂದೂ ಧರ್ಮದಿಂದ ರಾಜ್ಯಾಡಳಿತ ಅಂತರ ಕಾಯ್ದುಕೊಳ್ಳುವುದೇ ಜಾತ್ಯತೀತತೆ ಎಂದು ಓದಿಕೊಂಡರು. ಅಲ್ಲಿಗೆ ಇಡೀ ಭಾರತವನ್ನು ಪಶ್ಚಿಮದ ಕನ್ನಡಕದಿಂದ ನೋಡಿದರು. ಈ ಎಲ್ಲ ವಿಚಾರಗಳನ್ನೂ ಭಾರತದಲ್ಲಿ ಪ್ರತಿಪಾದಿಸಿದವರು ಕಮ್ಯುನಿಸ್ಟ್‌ ಸಿದ್ಧಾಂತ ಪ್ರೇರಿತ ಬುದ್ಧಿಜೀವಿಗಳು. ಆದರೆ ಅವರಾರಿಗೂ ಭಾರತದಲ್ಲಿ ನೆಲೆಯೇ ಇರಲಿಲ್ಲ. ಭಾರತದಲ್ಲಿ ಪಾಶ್ಚಿಮಾತ್ಯ ಸಿದ್ಧಾಂತವನ್ನು ಅಳವಡಿಸುವ ಕಮ್ಯುನಿಸ್ಟ್‌ ʼಆತ್ಮʼಕ್ಕೆ ದೇಹವೊಂದು ಬೇಕಾಗಿತ್ತು. ಹಾಗೂ ಹೀಗೂ ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸಂ ರಾಜಕೀಯ ನಡೆಯಿತಾದರೂ ಅದನ್ನು ದೇಶಾದ್ಯಂತ ವಿಸ್ತರಿಸಲು ಆಗಲಿಲ್ಲ. ಈಗಂತೂ ಪಶ್ಚಿಮ ಬಂಗಾಳದಲ್ಲೂ ನೆಲೆ ಕಳೆದುಕೊಂಡಿದ್ದು, ಕೇರಳದಲ್ಲಿ ಕೊನೆಯ ಕೊಂಡಿ ಇದೆ. ಹಾಗಾಗಿ ಕಮ್ಯುನಿಸ್ಟ್‌ ಸಿದ್ಧಾಂತದ ʼಆತ್ಮʼಕ್ಕೆ ದೇಹವಾಗಿ ಸಿಕ್ಕಿದ್ದೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಎಂಬ ಪಕ್ಷ.

ಇದನ್ನೂ ಓದಿ: ವಿಸ್ತಾರ ಅಂಕಣ: ಬ್ರಿಟಿಷ್ ಮಾನಸಿಕತೆಯ ಪಳೆಯುಳಿಕೆ, ಕಾಂಗ್ರೆಸ್

ತಮ್ಮೆಲ್ಲ ಸಿದ್ಧಾಂತಗಳನ್ನೂ ಕಾಂಗ್ರೆಸ್‌ ಪಕ್ಷದ ಮೇಲೆ ಹೊರಿಸುತ್ತಾ, ಹೀಗೆ ಸರ್ಕಾರ ನಡೆಸಿದರೇನೇ ಅದು ಸರ್ಕಾರ, ಇಲ್ಲದಿದ್ದರೆ ಅನಾಚಾರ ಎಂದು ತಲೆಗೆ ತುಂಬಿದರು. ಕಾಂಗ್ರೆಸ್‌ ಪಕ್ಷವಂತೂ ಒಡೆದು ಚೂರು ಚೂರಾಗಿ ತನಗೊಂದು ಭದ್ರ ಸೈದ್ಧಾಂತಿಕ ನೆಲೆಯೇ ಇಲ್ಲದಂತಾಗಿತ್ತು. ಹೆಸರಿನಲ್ಲಿ ರಾಷ್ಟ್ರೀಯ ಎಂದಿದ್ದರೂ ತನ್ನಲ್ಲಿರುವ ರಾಷ್ಟ್ರೀಯತೆಯನ್ನು ಮರೆತು ಆರ್ಯ-ದ್ರಾವಿಡ ಸಿದ್ಧಾಂತದ ಕಮ್ಯುನಿಸಂ ಬಲೆಗೆ ಸಿಕ್ಕಿ ಈಗಲೂ ನರಳಾಡುತ್ತಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಂವಿಧಾನ, ಐಕ್ಯತೆ ಸಮಾವೇಶಕ್ಕೆ ನಿತಾಶಾ ಕೌಲ್‌ರಂಥವರನ್ನು ಕರೆಸಿ ಭಾಷಣ ಮಾಡಿಸಲು ಕಾಂಗ್ರೆಸ್‌ ಸರ್ಕಾರ ಮುಂದಾಗುತ್ತದೆ. ನಿತಾಶಾ ಕೌಲ್‌ ಯಾರು? ಕಾಶ್ಮೀರವು ಭಾರತಕ್ಕೆ ಸೇರಿದ್ದು ಎನ್ನುವುದನ್ನು ಒಪ್ಪದಿರುವಾಕೆ. ದೇಶವನ್ನು ಒಡೆಯಲು ಸಂಚು ರೂಪಿಸುತ್ತಿರುವ ಪ್ರತ್ಯೇಕತಾವಾದಿಗಳು ಹಾಗೂ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವಾಕೆ. ದೇಶ ಒಡೆಯುವ ಸಂಚು ಎಂದರೆ ಏನು? ದೇಶವಿರೋಧಿ ಕೃತ್ಯ. ಅಂದರೆ ಇದು ದೇಶದ ಸಾರ್ವಭೌಮತ್ವವನ್ನು ಪ್ರಶ್ನಿಸಿದಂತಾಗುತ್ತದೆ. ಅಂತಿಮವಾಗಿ ಇದು, ದೇಶದ ಸಾರ್ವಭೌಮತೆಯನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡುವ ಭಾರತೀಯ ಸಂವಿಧಾನಕ್ಕೆ ವಿರುದ್ಧವಾದ ನಡೆ. ಹಾಗಾದರೆ, ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಲೇ ಸಂವಿಧಾನ ಉಳಿಸಿ ಎಂದು ಹೋರಾಡುವುದು ಎಂದರೆ ಏನು? ಇದೆಲ್ಲವೂ ಪರದೆಯ ಹಿಂದೆ ಕಮ್ಯುನಿಸ್ಟರು ಆಡುತ್ತಿರುವ, ಆಡಿಸುತ್ತಿರುವ ಆಟ. ಕಾಂಗ್ರೆಸ್‌ ಕೇವಲ ದೇಹವಷ್ಟೆ.

ಹಾಂ, ಸಂವಿಧಾನವನ್ನೇ ಬುಡಮೇಲು ಮಾಡಲು ಯತ್ನಿಸಿದ ಇಂದಿರೆಯ ತುರ್ತುಪರಿಸ್ಥಿತಿಯನ್ನೇ ನಮ್ಮ ಸಂವಿಧಾನ ಅರಗಿಸಿಕೊಂಡಿದೆ. ಅದು ಅಷ್ಟೊಂದು ಬಲಶಾಲಿ. ಮಾನ್ಯ ಪ್ರಧಾನಿಯವರು ಈ ಸಂವಿಧಾನದ ಆಸರೆಯಲ್ಲೇ ಚುನಾವಣೆ ಗೆಲ್ಲುತ್ತಿರುವುದು, ದೇಶ ಆಳುತ್ತಿರುವುದು. ಸಂವಿಧಾನದ ಬಗ್ಗೆ ಅವರಿಗಿರುವ ಬದ್ಧತೆ ಕಾಂಗ್ರೆಸ್‌ಗೂ ಇಲ್ಲ !

ಕಡೆಮಾತು:
ನಿತಾಶಾ ಕೌಲ್‌ ಅವರು ಮಾತನಾಡಲು ಅವಕಾಶ ನೀಡಬೇಕಿತ್ತು. ಆಕೆಯ ವಾಕ್ ಸ್ವಾತಂತ್ರ್ಯವನ್ನೇ ಭಾರತ ಸರಕಾರ ಹರಣ ಮಾಡಿದೆ ಎಂದೇ ಕಮ್ಯುನಿಸ್ಟ್ ಆತ್ಮಗಳು ಕಥೆ ಕಟ್ಟುತ್ತಿವೆ, ದೇಹ ಹೊತ್ತಿರುವ ಕಾಂಗ್ರೆಸ್ – ಈ ಮಾತನ್ನು ಅನುಮೋದಿಸುತ್ತದೆ !

ಸತ್ಯ ಏನೆಂದರೆ, ನರೇಂದ್ರ ಮೋದಿ ಅವರು ಹೊರದೇಶದಲ್ಲಿ ಕಾಲಿಡಬಾರದು, ಭಾಷಣ ಮಾಡಬಾರದು ಎಂದು ಹೊರನೆಲದಲ್ಲಿ ಪ್ರತಿಪಾದಿಸಿದ ಮಹಿಳೆ ಈ ತಾಯಿ ! ಇಂಥವರ ಪರವಾಗಿ ವಾಕ್ ಸ್ವಾತಂತ್ರ್ಯದ ಮಾತನ್ನು ಗುರಾಣಿಯಾಗಿ ಬಳಸಲಾಗಿದೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಮಥುರಾದಲ್ಲೂ ಗತವೈಭವ ಮರುಕಳಿಸುವ ದಿನಗಳು ದೂರವಿಲ್ಲ

Continue Reading
Advertisement
Nathan Lyon
ಕ್ರೀಡೆ6 mins ago

Nathan Lyon: ಬ್ಯಾಟಿಂಗ್​ನಲ್ಲಿ ವಿಶ್ವ ದಾಖಲೆ ಬರೆದ ಬೌಲರ್​ ನಥಾನ್​ ಲಿಯೋನ್

Murder Case Son kills Mother
ಕ್ರೈಂ7 mins ago

Murder Case: ಹಣಕ್ಕಾಗಿ ತಾಯಿಯನ್ನೇ ಪೀಡಿಸುತ್ತಿದ್ದ ಧೂರ್ತ; ಕೊನೆಗೆ ಅಮ್ಮನ ಕೊಂದು ತಾನೂ ಸತ್ತ

Murder Case _ Shootout
ಉಡುಪಿ18 mins ago

Murder Case : ಒಂಟಿ ಮನೆಯಲ್ಲಿ ಫೈರಿಂಗ್‌ ಸೌಂಡ್‌, ನಿಗೂಢವಾಗಿ ಕೊಲೆ ಮಾಡಿ ಹೋದವರು ಯಾರು?

Pawan Singh
ಪ್ರಮುಖ ಸುದ್ದಿ25 mins ago

BJP candidate list : ಬಿಜೆಪಿ ಟಿಕೆಟ್ ತಿರಸ್ಕರಿಸಿದ ಭೋಜಪುರಿ ಗಾಯಕ ಪವನ್ ಸಿಂಗ್​

Mother attack to child
ಬೆಂಗಳೂರು54 mins ago

Bengaluru News : ಛೇ.. ಇವಳೆಂಥಾ ತಾಯಿ? ಬುದ್ಧಿ ಕಲಿಸಲು 3 ವರ್ಷದ ಮಗುವನ್ನು ಕೂಡಿಹಾಕಿದ್ದಳಂತೆ!

Robin Minz
ಪ್ರಮುಖ ಸುದ್ದಿ56 mins ago

Accident News : 3.6 ಕೋಟಿ ರೂ. ಪಡೆದ ಬುಡಕಟ್ಟು ಸಮುದಾಯದ ಐಪಿಎಲ್ ಆಟಗಾರನಿಗೆ ಬೈಕ್ ಅವಘಡದಲ್ಲಿ ಗಾಯ

Elephant Attack New
ಕೊಡಗು1 hour ago

Elephant Attack : ನಿಶಾನಿ ಬೆಟ್ಟದಲ್ಲಿ ಆನೆ ದಾಳಿಗೆ ವೃದ್ಧ ಬಲಿ; ಟ್ರೆಕಿಂಗ್‌ಗೆ ಹೋದವರಿಗೆ ಕಂಡಿತು ಶವ

Yuva Rajkumar And Shiva Rajkumar Dance Together obbane shiva song
ಸ್ಯಾಂಡಲ್ ವುಡ್1 hour ago

Yuva Movie: ಡ್ಯಾನ್ಸ್ ಮೂವ್ಸ್‌ನಲ್ಲಿ ಕಿಚ್ಚು ಹಚ್ಚಿದ ದೊಡ್ಮನೆ ಕುಡಿಗಳು: ಯಾರು ಬೆಸ್ಟ್?

Team India
ಕ್ರೀಡೆ1 hour ago

WTC Ranking : ಭಾರತ ತಂಡವೀಗ ನಂಬರ್​ 1

BY Vijayendra
ಬೆಂಗಳೂರು2 hours ago

BY Vijayendra : ಬಿಜೆಪಿ ಸಂಕಲ್ಪ ಪತ್ರಕ್ಕಾಗಿ ರಾಜ್ಯದಲ್ಲಿ3 ಲಕ್ಷ ಜನರ ಅಭಿಪ್ರಾಯ ಸಂಗ್ರಹ; ಬಿ.ವೈ ವಿಜಯೇಂದ್ರ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for march 3rd 2024
ಭವಿಷ್ಯ10 hours ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು22 hours ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು1 day ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು2 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು2 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ2 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ3 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ5 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

ಟ್ರೆಂಡಿಂಗ್‌