Prerane | ಒಂದಾಗುವ ಹಾತೊರೆಯುವಿಕೆಯೇ ಪ್ರೀತಿ, ಒಂದಾಗುವುದೇ ಯೋಗ - Vistara News

ಅಂಕಣ

Prerane | ಒಂದಾಗುವ ಹಾತೊರೆಯುವಿಕೆಯೇ ಪ್ರೀತಿ, ಒಂದಾಗುವುದೇ ಯೋಗ

ಪ್ರೀತಿ ಎಂದರೆ ಯಾರದರೊಂದಿಗಾದರೂ ಅಥವಾ ಯಾವುದರೊಂದಿಗಾದರೂ ಒಂದಾಗುವ ಹಾತೊರೆಯುವಿಕೆ ಎನ್ನುತ್ತಾರೆ ಸದ್ಗುರು. ಪ್ರೀತಿ ಕುರಿತ ಅವರ ವಿಶೇಷ ಲೇಖನ ಇಂದಿನ ಪ್ರೇರಣೆ (Prerane ) ಅಂಕಣದಲ್ಲಿ.

VISTARANEWS.COM


on

Prerane
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸದ್ಗುರು ಜಗ್ಗಿ ವಾಸುದೇವ್‌
ಪ್ರೀತಿ ಪ್ರೇಮದ ಬಗ್ಗೆ ಬಹಳಷ್ಟು ಮಾತುಕತೆಗಳು ನಡೆಯುತ್ತಿರುತ್ತವೆ. ನೀವು ನಿಜವಾಗಿಯೂ ಆನಂದಮಯವಾಗಿದ್ದರೆ, ನೀವು ಪ್ರೀತಿಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಜನರು ಆನಂದವಾಗಿ ಇರಲು ಆಗದಿರುವುದರಿಂದಲೇ ಪ್ರೀತಿಯ ಪ್ರಾಮುಖ್ಯ ಹೆಚ್ಚಿದೆ. ಅದರಲ್ಲಿಯೇ ಅವರಿಗೆ ಸ್ವಲ್ಪ ಆನಂದ ಸಿಗುತ್ತದೆ. ಆನಂದದ ಬಗ್ಗೆ ಗೊತ್ತಿರದ ಜನರೇ ಯಾವಾಗಲೂ ಪ್ರೀತಿಯ ಬಗ್ಗೆ ಮಾತನಾಡುತ್ತಾರೆ.

ಪ್ರೀತಿ ಒಂದು ಭಾವನೆ ಮತ್ತು ಭಾವನೆ ಒಂದು ಒಳ್ಳೆಯ ವಾಹನ. ಆದರೆ ನಿಮ್ಮನ್ನು ಗುರಿಗೆ ತಲುಪಿಸಿದರೆ ಮಾತ್ರವೇ ಅದೊಂದು ಒಳ್ಳೆಯ ವಾಹನ. ಇಲ್ಲದಿದ್ದರೆ ವಾಹನಕ್ಕೆ ಯಾವುದೇ ಉದ್ದೇಶವಿಲ್ಲ. ಚಲಿಸದೆ ಇರುವ ಬಸ್ ಇದ್ದರೆ ನಮಗೆ ಅದು ಬೇಕಿಲ್ಲ. ಅದು ಚಲಿಸುತ್ತಿದ್ದರೆ ಮಾತ್ರ ನಾವು ಅದರ ಶಬ್ದ, ಕುಲುಕಾಟ ಮತ್ತದರ ಅನಾನುಕೂಲಗಳನ್ನು ಸಹಿಸಿಕೊಳ್ಳಬಹುದು. ಏಕೆಂದರೆ ಅದು ನಮ್ಮನ್ನು ಎಲ್ಲಿಗಾದರೂ ಕೊಂಡೊಯ್ಯುತ್ತದೆ. ಇಲ್ಲವಾದರೆ ನಾವು ಆ ಬಸ್ಸಿನ ತಾಪತ್ರಯಗಳನ್ನು ಸಹಿಸುವುದಿಲ್ಲ. 

ಪ್ರೀತಿಯ ವಾಹನ
ಹಾಗೆಯೇ ಪ್ರೀತಿಯೊಂದು ವಾಹನ. ಪ್ರೀತಿ ಎಂದರೆ ಯಾರದರೊಂದಿಗಾದರೂ ಅಥವಾ ಯಾವುದರೊಂದಿಗಾದರೂ ಒಂದಾಗುವ ಹಾತೊರೆಯುವಿಕೆ. ಆದರೆ ಇದನ್ನು ನೀವು ಅರ್ಥೈಸಿಕೊಂಡಿರುವ ಪ್ರಕಾರ, ಅದು ಶಾಶ್ವತವಾಗಿ ಉಳಿದುಬಿಡುವ, ಎಂದಿಗೂ ಆಗದಿರುವ ಮಿಲನ. ನೀವು ಒಂದಾಗಬಹುದು ಅನ್ನುವ ಹಾತೊರೆಯುವಿಕೆ ಮತ್ತು ಆಶಯವೇ ಸುಂದರ. ಆದರೆ ಸ್ವಲ್ಪ ಸಮಯದ ನಂತರ, ನೀವು ಒಂದಾಗಲು ಸಾಧ್ಯವಿಲ್ಲ ಎನ್ನುವ ಹತಾಶೆಯೇ ನಿರಂತರವಾದರೆ, ಜನರಿಗೆ ಅದೊಂದು ನೋವಿನ ಪ್ರಕ್ರಿಯೆ.

ನಾವು ಆನಂದಮಯವಾಗಿಲ್ಲ ಎಂದೇ ಈ ವಾಹನವನ್ನು ಹತ್ತುತ್ತೇವೆ. ಕೆಲವೊಮ್ಮೆ, ವಾಹನ ಸರಿಯಾಗಿ ಕೆಲಸ ಮಾಡುತ್ತಿದ್ದಾಗ ಅದು ನಿಮ್ಮನ್ನು ಆನಂದದ ಗಡಿಯವರೆಗೂ ಒಯ್ಯುತ್ತದೆ. ಅದು ಒಮ್ಮೆ ಆ ರುಚಿಯನ್ನು ತೋರಿಸಿಬಿಟ್ಟರೆ, “ಇಷ್ಟೇ. ನಾನು ಈ ಬಸ್ ಹತ್ತಿಬಿಟ್ಟರೆ ಆನಂದದ ನಾಡಿನೊಳಗೆ ಹೋಗುತ್ತೇನೆ” ಎಂದು ಭಾವಿಸುತ್ತೀರಿ. ಆದರೆ ಅದು ಆಗಲಿಲ್ಲ. ಅದು ಎಂದಿಗೂ ಒಂದು ಆಶಯ ಮತ್ತು ಹಾತೊರೆಯುವಿಕೆಯಾಗಿ ಉಳಿಯಿತು. ಬಹಳ ಜನರಿಗೆ ಅದೊಂದು ದೊಡ್ಡ ಹತಾಶೆಯಾಯಿತು.

ಬಹಳ ಧರ್ಮಗಳು ಪ್ರೀತಿಯ ಬಗ್ಗೆ ಮಾತನಾಡುತ್ತವೆ, ಆನಂದದ ಬಗ್ಗೆಯಲ್ಲ. ಆನಂದವೆಂದರೆ ಹೇಗಿರುತ್ತದೆ ಎಂದು ಅರಿಯ ಹಲವು ಅಜ್ಞಾನಿಗಳೇ ಇದರ ಬಗ್ಗೆ ಮಾತನಾಡಿರುವುದು ಒಂದು ಕಾರಣವಿರಬಹುದು. ಮತ್ತೊಂದು ಕಾರಣವೆಂದರೆ ಯಾರೋ ಬಹಳ ಆಳವಾದ ತಿಳುವಳಿಕೆಯಿಂದ ನುಡಿದಿರಬಹುದು. ಯಾರೋ ಪ್ರೀತಿಯನ್ನು ಒಂದು ಸಾಧನವೆಂದು ಕಂಡಿರಬಹುದು. ಯಾರೋ ದೇವರನ್ನೇ ಒಂದು ಸಾಧನವೆಂದು ಕಂಡು, ದೇವರೇ ಪ್ರೀತಿ ಎಂದಿರಬಹುದು. ಅವರು ದೇವರೇ ಪ್ರೀತಿ ಎಂದಾಗ ಪ್ರೀತಿಯೇ ಅಂತಿಮ ಎಂದು ಅರ್ಥೈಸಿರಲಿಲ್ಲ. ಅವರು, ದೇವರೊಂದು ವಾಹನ; ಪ್ರೀತಿಯೂ ವಾಹನ ಎನ್ನುವಂತೆ ಹೇಳಿದ್ದರು.

ಆದರೆ ದೇವರೇ ಅಂತಿಮ ಎನ್ನುತ್ತಿರುವ ಜನರಿಗೆ, ಪ್ರೀತಿಯೇ ದೇವರು ಎಂದು ಹೇಳುವುದು ದೊಡ್ಡ ತಪ್ಪಾಗುತ್ತದೆ. ಏಕೆಂದರೆ ಯಾವಾಗಲೂ, ಪ್ರೀತಿಸುವುದು ಎಂದರೆ ಒಂದಾಗಲು ಹಾತೊರೆಯುವುದು ಎಂದೇ ಹೊರತು ನಿಜವಾಗಿಯೂ ಒಂದಾಗುವುದಲ್ಲ. ನೀವು ಒಂದಾದರೆ, ನಾವದನ್ನು ಯೋಗ ಎಂದು ಕರೆಯುತ್ತೇವೆ. ನೀವು ಒಂದಾಗಲು ಹಾತೊರೆಯುತ್ತಿದ್ದಾರೆ, ಅದನ್ನು ಪ್ರೀತಿ ಎನ್ನುತ್ತೇವೆ. 

ಪ್ರೀತಿ ಇನ್ನೂ ಒಂದು ಭಾವನೆ. ನಿಮ್ಮ ಯೋಚನೆ, ದೇಹ, ದೈಹಿಕ ಶಕ್ತಿಗಳಂತೆ ಪ್ರೀತಿಯೂ ಮತ್ತೊಂದು ವಾಹನ. ಜನರು ಪ್ರೀತಿಯ ಬಗ್ಗೆ ಏಕೆ ಅಷ್ಟೊಂದು ಮಾತನಾಡುತ್ತಾರೆ ಎಂದರೆ, ಅವರಲ್ಲಿ ಬಹುತೇಕರು ತಮ್ಮ ಜೀವನದಲ್ಲಿ ಅರಿತಿರುವ ಅತಿ ತೀವ್ರವಾದ ಅನಿಸಿಕೆಯೇ ಭಾವನೆ. ಬಹುತೇಕರು ತಮ್ಮಲ್ಲಿ ಅತ್ಯಂತ ತೀವ್ರವಾದ ಯೋಚನೆಯನ್ನು ಹುಟ್ಟಿಸಲು ಅಸಮರ್ಥರು. ತೊಂಭತ್ತೈದು ಪ್ರತಿಶತ ಜನರು ತಮ್ಮ ಜೀವನದಲ್ಲಿ ಮೂರು ಹಂತಗಳಿಗಿಂತ ಹೆಚ್ಚು ಆಲೋಚಿಸ ಲಾರರು.

ಬಹುತೇಕ ಜನರು ತಮ್ಮ ದೇಹದಿಂದಲೂ ತೀವ್ರವಾಗಿರುವುದಿಲ್ಲ. ಅತ್ಯಂತ ಕೆಲವರು ಮಾತ್ರವೇ ತಮ್ಮ ದೇಹವನ್ನು ಬಹಳ ತೀವ್ರವಾಗಿ ಅನುಭವಿಸಿರುತ್ತಾರೆ. ಅವರಿಗೆ ತಮ್ಮ ಶಕ್ತಿಗಳ ಬಗ್ಗೆ ಗೊತ್ತೇ ಇರುವುದಿಲ್ಲ. ಆದರೆ ಅವರ ಭಾವನೆಗಳು ಯಾವಾಗಲೂ ತೀವ್ರವಾಗಿರುತ್ತವೆ. ಅದು ಪ್ರೀತಿಯದೇ ಆಗಿರಬಹುದು, ಹಾತೊರೆಯುವಿಕೆ, ಭಯ, ದ್ವೇಷ ಅಥವಾ ಸಿಟ್ಟಿನವಾಗಿರಬಹುದು. ಬಹುತೇಕರು ತಮ್ಮ ಜೀವನದಲ್ಲಿ ತಿಳಿದಂತಹ ಅತ್ಯಂತ ತೀವ್ರ ಆಯಾಮ ವೆಂದರೆ ಭಾವನೆ. ಹೀಗಾಗಿ, ಕಾಲಾಂತರದಲ್ಲಿ ಹಲವು ಗುರುಗಳು ಬಂದಾಗ ಅವರು ಭಾವನೆಯನ್ನೇ ಬಳಸಲು ಪ್ರಯತ್ನಿಸಿದರು. ಏಕೆಂದರೆ ಜನರಲ್ಲಿ ಅದುವೇ ತೀವ್ರವಾಗಿತ್ತು.

Prerane

ಭಾವನೆಯೇ ಆವರಿಸಿಕೊಂಡಾಗ 
ಆದರೀಗ ಆಧುನಿಕ ಶಿಕ್ಷಣ ಬಂದು ವಿಜ್ಞಾನವು ಎಲ್ಲರ ಜೀವನವನ್ನು ಪ್ರವೇಶಿಸಿದೆ. ಅದು ಶಾಲೆಯ ಮಗುವಾಗಿ ರಬಹದು ಅಥವಾ ಗೃಹಿಣಿಯಾಗಿರಬಹುದು. ಹಾಗಾಗಿ ಕಳೆದ ಶತಮಾನಗಳಿಗಿಂತಲೂ ಹೆಚ್ಚಾಗಿ ಇಂದು ಆಲೋಚನೆ ಮತ್ತು ಯೋಚನಾ ಪ್ರಕ್ರಿಯೆಯು ಜನರ ಜೀವನದಲ್ಲಿ ಹೆಚ್ಚು ಮಹತ್ವದ್ದಾಗಿದೆ.

ಆದರೆ ಜನರೀಗ ಎಷ್ಟು ಬೆಳೆದಿದ್ದಾರೆಂದರೆ, ಭಾವನೆ ಅಷ್ಟು ಒಳ್ಳೆ ಸಾಧನವಾಗಿಲ್ಲ.  ಭಾವನೆಗಳು ಎಷ್ಟೇ ಬಲಶಾಲಿಯಾಗಿದ್ದರೂ ನಿಮ್ಮ ಯೋಚನೆ ಅವನ್ನು ಅಪಹಾಸ್ಯ ಮಾಡುತ್ತದೆ. ನೀವು ಭಾವೋದ್ರೇಕದಿಂದ ವರ್ತಿಸಿದಾಗ, ಆ ಕ್ಷಣಕ್ಕೆ ಸುಂದರ ಎನಿಸುತ್ತದೆ. ಮರುಕ್ಷಣ ನಿಮ್ಮ ಯೋಚನೆ ಬಂದು, ಅದನ್ನು ಪ್ರಶ್ನಿಸಿ, ಅದು ಪೂರ್ತಿ ಕ್ಷುಲ್ಲಕ ಮತ್ತು ಮೂರ್ಖತನವಾಗಿ ಕಾಣುವಂತೆ ಮಾಡುತ್ತದೆ. 

ಒಮ್ಮೆ ಯೋಚನೆಯು ಬೆಳೆದಾಗ, ಅದನ್ನು ಉದ್ದೇಶಿಸಿ ನೋಡಬೇಕಾಗುತ್ತದೆ. ಅದನ್ನು ನಿರ್ಲಕ್ಷಿಸಿ ನೀವು ಮುಂದೆ ಹೋಗಲಾರಿರಿ. ಅದು ನಿಮ್ಮನ್ನು ಬದುಕಲು ಬಿಡುವುದೇ ಇಲ್ಲ. ಒಂದೋ ನೀವು ಅತ್ಯಂತ ತೀವ್ರವಾದ ಯೋಚನೆಯ ಆಯಾಮಕ್ಕೆ ಹೋಗಬೇಕು, ಇಲ್ಲವೇ ಕನಿಷ್ಟ ಪಕ್ಷ ನಿಮ್ಮ ಬಾಳಿನಲ್ಲಿ ನಿಮಗಿರುವ ಯೋಚನೆಯ ಮಟ್ಟದಲ್ಲಿ ಅದನ್ನು ಉದ್ದೇಶಿಸಬೇಕು. ಉದ್ದೇಶಿಸದೆ ಇದ್ದರೆ, ಕೇವಲ ಭಾವನೆಯ ಬಲದಿಂದ ನೀವು ಮುಂದೆ ಬೆಳೆಯಲಾರಿರಿ. 

ಜನರ ಯೋಚನಾ ಪ್ರಕ್ರಿಯೆಯು ಸರಳವಾಗಿದ್ದಾಗ, ಭಾವನೆಯು ಒಂದು ಉತ್ತಮ ಸಾಧನವಾಗಿತ್ತು. ಆದರೆ ಈಗಿಲ್ಲ. ಅನೇಕ ರೀತಿಗಳಲ್ಲಿ ಇಂದಿನ ಮನುಷ್ಯರು ನಿಧಾನವಾಗಿ ಪ್ರೀತಿಸಲು ಅಸಮರ್ಥರಾಗುತ್ತಿದ್ದರೆ, ದುರಾದೃಷ್ಟವಶಾತ್. ಬುದ್ಧಿವಂತರು ಎಂದು ಹೇಳಿಕೊಳ್ಳುತ್ತಿರುವ ಜನರು ಪ್ರೀತಿಸಲು ಅಸಮರ್ಥರಾಗುತ್ತಿದ್ದರೆ. ಇದು ಬುದ್ಧಿವಂತಿಕೆಯಲ್ಲ, ಪ್ರೀತಿಯಲ್ಲಿ ಅಸಮರ್ಥರಾಗುವುದು ಮೂರ್ಖತನ. ಆದರೆ ತಮ್ಮನ್ನು ತಾವು ಬುದ್ಧಿವಂತರು ಅಂದುಕೊಳ್ಳುವ ಬಹತೇಕ ಜನರು ನಿಧಾನವಾಗಿ ಪ್ರೀತಿಸಲು ಅಸಮರ್ಥರಾಗುತ್ತಿದ್ದಾರೆ. ಏಕೆಂದರೆ ಅವರ ಯೋಚನೆಗಳು ಎಲ್ಲದಕ್ಕೂ ನುಗ್ಗಿ, ಪ್ರಶ್ನಿಸಿ, ಅಪಹಾಸ್ಯ ಮಾಡುತ್ತವೆ. ಅದು ಇನ್ನು ಸುಂದರವಾಗಿ ಉಳಿದಿಲ್ಲ. 

ಹತ್ತಿರದಿಂದ ನೋಡಿ!
ನೀವು ಆನಂದದ ಬಗ್ಗೆ ಮಾತನಾಡುವಾಗ, ಅದು ನಿಮಗೇ ತಿಳಿದಿರದಿದ್ದರೆ ನಾನು ಹೇಗೆ ಹೇಳಲಿ, ಹೇಗೆ ತಿಳಿಸಲಿ? ನನ್ನನ್ನು ಹತ್ತಿರದಿಂದ ನೋಡಿದರೆ ನನಗೆ ಬೇಕಾದಾಗ, ನನ್ನ ಮುಖ ಬಹುಮಟ್ಟಿಗೆ ಗಂಭೀರ ಮತ್ತು ಉಗ್ರವಾಗಿದೆ. ಆದರೆ ನೀವು ಬಹಳ ಹತ್ತಿರದಿಂದ ನೋಡಿದಾಗ ಅಲ್ಲಿ ಆನಂದವಿದೆ. ಕೆಲವೇ ಜನರು ಅದನ್ನು ನೋಡುತ್ತಾರೆ. ಉಳಿದವರೆಲ್ಲರೂ ಬರಿ ಒಬ್ಬ ಅತ್ಯಂತ ಉಗ್ರ ಮನುಷ್ಯನನ್ನು ನೋಡುತ್ತಾರೆ. ಆನಂದವು ನಾನು ಮಾಡುವ ಹಾಸ್ಯ, ವಿನೋದದಲ್ಲಿಲ್ಲ. ನಾನು ನಿಶ್ಚಲವಾಗಿ ಕುಳಿತಾಗ, ಸಂಪೂರ್ಣವಾಗಿ ಆನಂದಮಯವಾಗಿರುತ್ತೇನೆ. ಹಾಗೂ ನಾನು ಯಾವಾಗಲೂ ನಿಶ್ಚಲವಾಗಿರುತ್ತೇನೆ.

ನಾನು ನನ್ನ ಸುತ್ತ ಬೃಹತ್ ಪ್ರಮಾಣದ ಚಟುವಟಿಕೆಯನ್ನು ನಡೆಸುತ್ತೇನೆ. ನನ್ನ ಸುತ್ತ ನಡೆಸುತ್ತಿರುವ ಚಟುವಟಿಕೆಗಳು ಎಂದೂ ನಾನಲ್ಲ. ಅದೊಂದು ಬಹು ದೊಡ್ಡ ಕ್ರಿಯೆಯಷ್ಟೇ. ಜನರು ಅದನ್ನು ಇಷ್ಟ ಪಡುತ್ತಾರೆ ಮತ್ತು ಅದೊಂದೇ ಅವರಿಗೆ ಅರ್ಥವಾಗುವುದು. ಹಾಗಾಗಿ, ನಾನು ಅವರಿಗೆ ಇಷ್ಟವಾದ ರೀತಿಯ ಚಟುವಟಿಕೆ ನಡೆಸುತ್ತೇನೆ. 

ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.

ಇದನ್ನೂ ಓದಿ | Prerane | ನಿಮ್ಮ ಸ್ವಂತಿಕೆ ನಿಮಗಿರಲಿ, ಅದುವೇ ನಿಮಗೆ ದಾರಿಯಾಗಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

ದಶಮುಖ ಅಂಕಣ: ಹುಚ್ಚು ಎನ್ನುವುದನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಇತರರ ಖುಷಿಯನ್ನು ಬಯಸುವವರು ಹುಚ್ಚರೋ ಅಥವಾ ಇತರರ ಖರ್ಚಲ್ಲಿ ಖುಷಿ ಪಡುವವರೋ? ಇದಕ್ಕೆಲ್ಲ ಸಂವೇದನೆಗಳಿಗೆ ತಕ್ಕಂತೆ ಉತ್ತರ ಹುಡುಕುವುದೋ ಕಾಲಕ್ಕೆ ತಕ್ಕಂತೆಯೋ?

VISTARANEWS.COM


on

dashamukha column madness
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ʻಹುಚ್ಚುʼ (madness) ಎಂಬ ಶಬ್ದ ಕಿವಿಗೆ ಬೀಳುತ್ತಿದ್ದಂತೆ ನೆನಪಾಗುವ ಚಿತ್ರಗಳ ಬಗ್ಗೆ ಹೆಚ್ಚು ಹೇಳುವುದು ಬೇಡವಲ್ಲ. ಯಾವುದೇ ದೇಶ, ಭಾಷೆ, ಸಂಸ್ಕೃತಿಗಳಲ್ಲಿ ನೋಡಿದರೂ ʻಹುಚ್ಚಿಗೆʼ ಹೆಚ್ಚಿಗೆ ಅರ್ಥಗಳಿಲ್ಲ… ಅದೊಂದೇ ಅರ್ಥ! ಹಾಗಾಗಿಯೇ ʻಅದೊಂಥರಾ ಹುಚ್ಚು, ಅವನಿಗೊಂದು ಹುಚ್ಚುʼ ಎಂಬಿತ್ಯಾದಿ ಮಾತುಗಳ ಬೆನ್ನಿಗೇ ʻಅಲ್ಲೇನೋ ಒಂದು ಅತಿರೇಕವಿದೆʼ ಎಂಬ ಭಾವ ಬಂದುಬಿಡುತ್ತದೆ. ಅದಕ್ಕಾಗಿಯೇ ʻಹುಚ್ಚು ಸಾಹಸ, ಹುಚ್ಚು ಪ್ರೀತಿʼ ಮುಂತಾದ ಪ್ರಯೋಗಗಳನ್ನು ಮಾಡುತ್ತಾ, ಬೈಯ್ಯುವುದಕ್ಕೆ, ವ್ಯಂಗ್ಯಕ್ಕೆ, ಕುಹಕಕ್ಕೆ, ಟೀಕೆಗೆ, ತಮಾಷೆಗೆ… ಅಥವಾ ಇಂಥದ್ದೇ ಋಣಾತ್ಮಕ ಎನ್ನಬಹುದಾದ ಛಾಯೆಗಳಲ್ಲಿ ಈ ಶಬ್ದವನ್ನು ಬಳಸುತ್ತೇವೆ. ನಿಜಕ್ಕೂ ಈ ಶಬ್ದವನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಬದುಕಿನಲ್ಲಿ ಪ್ರೀತಿ, ಸೌಖ್ಯ, ಖುಷಿಯನ್ನು ಅರಸುವವರಿಗೂ ಇದನ್ನು ಬಳಸಬಹುದೇ? ಸಾಹಿತ್ಯ-ಸಿನೆಮಾಗಳಲ್ಲಿ ಕಾಣುವ ಪ್ರೀತಿ, ಪ್ರೇಮಗಳಿಗೆ ಹುಚ್ಚನ್ನು ಪರ್ಯಾಯವಾಗಿ ಬಳಸುವುದು ಹೊಸದೇನಲ್ಲ. ಆದರೆ ಇಲ್ಲೀಗ ಅಂಥ ಹರೆಯದ ಪ್ರೀತಿಯ ಬಗ್ಗೆಯಲ್ಲ ಹೇಳುತ್ತಿರುವುದು. ಇತರರ ಸೌಖ್ಯದಲ್ಲಿ ತಮ್ಮ ಸ್ವಾಸ್ಥ್ಯವನ್ನು ಅರಸುವವರಿಗೂ ಈ ಶಬ್ದ ಸಲ್ಲುತ್ತದೆಯೇ?

ಇತ್ತೀಚೆಗೆ ಭೇಟಿ ಮಾಡಿದ ಒಂದಿಬ್ಬರು ವ್ಯಕ್ತಿಗಳು ಇಂಥದ್ದೊಂದು ಮಂಥನವನ್ನು ಹುಟ್ಟು ಹಾಕಿದ್ದು ಹೌದು. ಎಲ್ಲರಿಗಿಂತ ಭಿನ್ನವಾದ ಬದುಕನ್ನು ಆಯ್ದುಕೊಳ್ಳುವವರು, ತಮ್ಮ ಜೀವನದ ರೀತಿ-ನೀತಿಗಳನ್ನು ಅಥವಾ ಧ್ಯೇಯ-ಆದರ್ಶಗಳನ್ನು ʻಹುಚ್ಚುʼ ಎನ್ನುವಷ್ಟು ಪ್ರೀತಿಸದಿದ್ದರೆ, ಖುಷಿಯಿಂದ ಬದುಕುವುದು ಸಾಧ್ಯವೇ? ಎಷ್ಟೇ ಸುಭಿಕ್ಷವಾದ ಬದುಕನ್ನೂ ಹಳಿಯುತ್ತಲೇ ಬದುಕುವ ಇಂದಿನ ದಿನಗಳಲ್ಲಿ, ಇರುವ ಬದುಕಲ್ಲಿ ಸುಭಿಕ್ಷವನ್ನು ಸೃಷ್ಟಿಸುವ ಅವರನ್ನು ಹುಚ್ಚರೆಂದರೆ ಅತಿರೇಕವಾದೀತೇ? ಬದುಕನ್ನು ಕೊರಗಿನಲ್ಲೇ ಕಳೆಯುವುದು ಹುಚ್ಚೋ ಅಥವಾ ಇತರರ ಕೊರಗನ್ನು ಕಳೆಯುವುದು ಹುಚ್ಚೋ?

ಹೀಗೆನ್ನುವಾಗ ಅನಂತ್‌ ಸರ್‌ ನೆನಪಾಗುತ್ತಾರೆ. ಬದುಕಲ್ಲಿ ವಿದ್ಯೆ ದೊರೆಯದ ಮಕ್ಕಳನ್ನು ಶಿಕ್ಷಣದ ಹಾದಿಗೆ ಹಚ್ಚಿ, ನೆಲೆ ಕಾಣಿಸುವ ಅವರ ಸಾಹಸವನ್ನು ವರ್ಣಿಸುವುದಕ್ಕೆ ಬೇರೆ ಪದಗಳಿಗೆ ಸಾಧ್ಯವಿಲ್ಲ. ಮನೆ ಇದ್ದೂ ಇಲ್ಲದಂತಾದವರು, ಮನೆಯೇ ಇಲ್ಲದವರು, ಪಾಲಕರು ಇಲ್ಲದವರು, ಪಾಲಕರು ಯಾಕಾದರೂ ಇದ್ದಾರೋ ಎನ್ನುವಂಥ ಹಲವು ನಮೂನೆಯ ವಾತಾವರಣದಿಂದ ಬಂದ ಮಕ್ಕಳಿಗೆ ಊಟ, ವಸತಿಯ ಜೊತೆಗೆ ವಿದ್ಯೆ ನೀಡುವುದನ್ನೇ ಧ್ಯೇಯವಾಗಿಸಿಕೊಂಡವರು. ಹತ್ತು-ಹನ್ನೆರಡು ವರ್ಷಗಳವರೆಗೆ ಶಾಲೆಯ ಮುಖವನ್ನೂ ಕಾಣದವರು, ಎಂದೊ ಶಾಲೆಗೆ ಹೋಗಿ ನಡುವಲ್ಲೇ ಕಳೆದುಹೋದವರು- ಇಂಥ ನೂರಾರು ಮುಖಗಳಲ್ಲಿ ನಗು ಅರಳಿಸುವುದಕ್ಕೆ ಇರಬೇಕಾದ ಅದಮ್ಯ ಪ್ರೀತಿಯೂ ಒಂದು ಬಗೆಯ ಹುಚ್ಚೇ ತಾನೇ? ಹಾಗಿಲ್ಲದಿದ್ದರೆ, ಇಂಥ ಸಾಹಸಿಗಳು ಲೋಕದಲ್ಲಿ ನಮಗೆ ವಿರಳವಾಗಿ ಕಾಣುವುದೇಕೆ?

ಆರೇಳು ವರ್ಷದವರನ್ನು ಒಂದನೇ ಕ್ಲಾಸಿಗೆ ಕೂರಿಸುವಲ್ಲಿ ಅಷ್ಟೇನು ಸಮಸ್ಯೆಯಾಗಲಿಕ್ಕಿಲ್ಲ. ವರ್ಷದ ಆಧಾರದ ಮೇಲೆಯೇ ತಾನೆ ನಮ್ಮ ಶಿಕ್ಷಣ ವ್ಯವಸ್ಥೆ ರೂಪುಗೊಂಡಿರುವುದು. ಆದರೆ ಹದಿಹರೆಯಕ್ಕೆ ಕಾಲಿಟ್ಟವರು ಇನ್ನೂ ಶಾಲೆಯ ಮೆಟ್ಟಿಲನ್ನೇ ಹತ್ತದಿರುವಾಗ ಅವರನ್ನೂ ಒಂದನೇ ಕ್ಲಾಸಿಗೆ ಕೂರಿಸುವುದು ಹೇಗೆ? ʻಹಾಗಾಗಿಯೇ ದೈಹಿಕ ವಯಸ್ಸಿನ ಆಧಾರದ ಮೇಲಲ್ಲದೆ, ಮಕ್ಕಳ ಬೌದ್ಧಿಕ ವಯಸ್ಸಿಗೆ ಅನುಗುಣವಾಗಿ ಕಲಿಯುವ ಗುಂಪುಗಳನ್ನಾಗಿ ವಿಂಗಡಿಸಿಕೊಳ್ಳುತ್ತೇವೆ. ಹಾಗೆಯೇ ಅವರ ಕಲಿಕೆ ಮುಂದುವರಿಯುತ್ತದೆʼ ಎನ್ನುವುದು ಅನಂತ್‌ ಸರ್‌ ಹೇಳುವ ಮಾತು. ದೂರದ ಅಸ್ಸಾಂ, ಬಿಹಾರಗಳಿಂದ ಬಂದ ಮಕ್ಕಳಿಗೆ ಶಾಲೆಯ ಕಲ್ಪನೆಯೂ ಇಲ್ಲದಿರುವಾದ, ಇವರ ಭಾಷೆ ಅವರಿಗೆ-ಅವರ ಭಾಷೆ ಇವರಿಗೆ ತಿಳಿಯದಿರುವಾಗ, ವಿದ್ಯೆಯ ಶ್ರೀಕಾರ ಆಗುವುದು ಹೇಗೆ? ʻಇದೊಂಥರಾ ಹುಚ್ಚು. ಇದೂ ಆಗತ್ತೆʼ ಎನ್ನುವಾಗಿನ ಇವರ ಮುಖದ ನಗುವನ್ನು ಏನೆಂದು ಅರ್ಥ ಮಾಡಿಕೊಳ್ಳುವುದು?

ಈ ಚೌಕಟ್ಟಿನಾಚೆಯ ಮನೆಯಲ್ಲಿ ಕಲಿತು ಹೊರಬಿದ್ದು, ದುಡಿದು ಸಂಪಾದಿಸಿ ಬದುಕುತ್ತಿರುವ ತಮ್ಮ ಮಕ್ಕಳ ಬಗ್ಗೆ ಹೇಳುವಾಗ ಅವರ ಮುಖದ ನಗುವಿಗಿರುವ ಅರ್ಥದ ಅರಿವಾಗುತ್ತದೆ ನಮಗೆ. ಹುಚ್ಚಿಗೂ ಎಷ್ಟೊಂದು ಸುಂದರ, ಸಲ್ಲಕ್ಷಣಗಳಿವೆ ಎಂಬುದನ್ನು ತಿಳಿಯುವುದಕ್ಕೆ ಅದೊಂದು ನಗು ಸಾಕು. ಕೊರಗಿ ಕಳೆಯುವುದಕ್ಕಿಂತ, ಹೀಗೆ ಕೊರಗು ಕಳೆಯುವ ಹುಚ್ಚು ಒಳ್ಳೆಯದಲ್ಲವೇ? ನಮಗಿರುವ ಹುಚ್ಚು ಯಾವುದು ಎಂದು ಎಂದಾದರೂ ಯೋಚಿಸಿದ್ದೇವೆಯೇ?

ಈ ಎಲ್ಲ ಮಾತಿನ ನಡುವೆ ಪ್ರದೀಪ ಎನ್ನುವ ಆ ವ್ಯಕ್ತಿ ನೆನಪಾಗುತ್ತಾನೆ. ಕಪ್ಪು ಬಣ್ಣದ ಸಾಧಾರಣ ಮೈಕಟ್ಟಿನ ಆತ ಪುಟ್ಟ ದ್ವೀಪ ರಾಷ್ಟ್ರವೊಂದರ ನಿವಾಸಿ. ಅರಳಿದಂತಿರುವ ಕನ್ನಡಿಗಣ್ಣು, ಅವನದ್ದೇ ಆದ ವಿಶಿಷ್ಟ ಲಯದ ಇಂಗ್ಲಿಷ್‌ ಭಾಷೆಯ ಆತ ನಮಗೆ ಪರಿಚಯವಾಗಿದ್ದು ಪ್ರವಾಸವೊಂದರ ಭಾಗವಾಗಿ. ಅಲೆಯುವ ಹುಚ್ಚಿರುವ ಜನ ಲೋಕದಲ್ಲಿ ಎಷ್ಟೋ ಮಂದಿ ಇದ್ದಾರೆ. ಆದರೆ ಜೊತೆಗೆ ತಿರುಗಾಡುವವರ ಸೌಖ್ಯವೇ ತನಗೆ ಪ್ರೀತಿ ಎನ್ನುವವರೂ ಇದ್ದಾರೆಂಬುದು ತಿಳಿದಿದ್ದು ಆಗಲೇ. ಈತ ವೃತ್ತಿಯಲ್ಲಿ ಪ್ರವಾಸಿ ಗೈಡ್‌. ನಮ್ಮ ಯಾವುದೇ ಪ್ರವಾಸಿ ತಾಣಗಳಿಗೆ ಹೋದರೆ ಅಲ್ಲಿ ʻಗೈಡ್‌ ಬೇಕೆ?ʼ ಎಂದು ಮುತ್ತಿಗೆ ಹಾಕುವ ಗುಂಪಿನಲ್ಲಿ ಆತನೂ ಇರಬಹುದಾಗಿದ್ದವ. ಆದರೆ ತಮಗೆ ತಿಳಿದಷ್ಟನ್ನು ತೋಚಿದಂತೆ ಒದರಿ, ಬಂದವರಿಂದ ದುಡ್ಡು ಕಿತ್ತು ಕಳಿಸುವ ಗೈಡ್‌ಗಳ ಸಾಲಿನಿಂದ ಗಾವುದಗಟ್ಟಲೆ ದೂರದಲ್ಲಿ ಇರುವವ ಈತ.

ʻತಿರುಗಾಡಿದಷ್ಟೇ, ತಿರುಗಾಡಿಸುವುದೂ ನನಗಿಷ್ಟʼ ಎನ್ನುವ ಈತ, ತನ್ನ ಕಾರು ಓಡುವ ಪ್ರತಿಯೊಂದು ರಸ್ತೆಯ ಪರಿಚಯವನ್ನೂ ಮಾಡಿಕೊಡಬಲ್ಲ. ಯಾವ ಊರಿನ ಮಳೆ-ಬೆಳೆ ಹೇಗೆ ಎಂಬುದರಿಂದ ಹಿಡಿದು ಅಲ್ಲಿನ ಡೆಮಗ್ರಾಫಿಕ್‌ ವಿಶ್ಲೇಷಣೆಯನ್ನೂ ನೀಡಬಲ್ಲ. ʻಈ ಭಾಗದಲ್ಲಿ ತುಂಬಾ ಎಮ್ಮೆ ಸಾಕುತ್ತಾರೆ. ಮಣ್ಣಿನ ಗಡಿಗೆಯಲ್ಲಿ ಹಾಲು ಹೆಪ್ಪಾಕಿ, ಮೊಸರು ಮಾರುತ್ತಾರೆ. ಅದನ್ನೊಮ್ಮೆ ತಿನ್ನದಿದ್ದರೆ ಈ ರಸ್ತೆಯಲ್ಲಿ ಪ್ರಯಾಣ ಮಾಡಿದ್ದೇ ವ್ಯರ್ಥʼ ಎಂದು ಸರಕ್ಕನೆ ಗಾಡಿ ನಿಲ್ಲಿಸಿ, ಎರಡು ಪುಟ್ಟ ಗಡಿಗೆಗಳನ್ನು ಹಿಡಿದು ತರುತ್ತಾನೆ. ʻಇಷ್ಟು ದೂರ ಬಂದವರು ಈ ಸಿಹಿ ತಿನ್ನದಿದ್ದರೆ, ನಿಮ್ಮ ತಿರುಗಾಟವೇ ಅಪೂರ್ಣʼ ಎನ್ನುತ್ತಾ ಯಾವುದೋ ಸಿಹಿ ಎದುರಿಗಿಡುತ್ತಾನೆ. ʻಇಲ್ಲಿ ಭರಪೂರ ತರಕಾರಿ ಬೆಳೆಯುತ್ತಾರೆ. ಇದರಲ್ಲೊಂದು ಸಲಾಡ್‌ ಮಾಡುತ್ತೇನೆ ನೋಡಿ, ತಿನ್ನುವುದಕ್ಕೆ ಪುಣ್ಯ ಬೇಕುʼ ಎಂದು ಉಪಚಾರ ಮಾಡುತ್ತಾನೆ. ಇಂಥ ಯಾವುದನ್ನೂ ಮಾಡಬೇಕಾದ ಅಗತ್ಯ ಆತನಿಗಿಲ್ಲ. ನಮ್ಮ ಜಾಗಕ್ಕೆ ಕರೆದೊಯ್ದರೆ ಅವನ ಕೆಲಸ ಮುಗಿಯಿತು; ಅವನ ದುಡ್ಡು ಅವನ ಕೈ ಸೇರುತ್ತದೆ. ʻತಿರುಗಾಡುವುದು, ತಿರುಗಾಡಿಸುವುದು ನಂಗೊಂಥರಾ ಹುಚ್ಚು. ಹೊಸ ಜನರೊಂದಿಗೆ ನಂಟು ಬೆಸೆಯುವುದು, ಅವರನ್ನು ಖುಷಿಯಾಗಿಡುವುದು ನಂಗಿಷ್ಟʼ ಎನ್ನುತ್ತಾ ಹಿಂದಿ ನಟ ದೇವಾನಂದ್‌ ರೀತಿಯಲ್ಲಿ ನಗೆ ಬೀರುತ್ತಾನೆ.

ಇದನ್ನೂ ಓದಿ: ದಶಮುಖ ಅಂಕಣ: ಮೌನವೆಂಬ ಭಾವಸೇತು

ಗುರಿ ತಲುಪುವುದಕ್ಕಿಂತ ಖುಷಿ ನೀಡುವುದು ಗಮ್ಯದೆಡೆಗಿನ ದಾರಿಗಳಲ್ಲವೇ? ಯಾವುದೇ ದಾರಿಯಲ್ಲಿ ಎದುರಾಗುವ ಊರೊಂದರ ಹೆಸರಿನ ಹಿಂದಿನ ಗಮ್ಮತ್ತು ತಿಳಿಸುವುದು, ಯಾವುದೋ ದೇಶದಿಂದ ಬರುವ ಚಿತ್ರವಿಚಿತ್ರ ಅಲೆಮಾರಿಗಳ ಜಾಯಮಾನ ವಿಸ್ತರಿಸುವುದು- ಇವೆಲ್ಲ ತನ್ನ ಪ್ರಯಾಣಿಕರ ದಾರಿಯನ್ನು ಬೋರಾಗದಂತೆ ಕಳೆಯುವ ಮತ್ತು ಅವರೊಂದಿಗೆ ನಂಟು ಬೆಸೆಯುವ ಆತನ ಉದ್ದೇಶಕ್ಕೆ ಒದಗುವಂಥವು. ವಿಹಾರಕ್ಕೆ, ವಿರಾಮಕ್ಕೆ, ಅಧ್ಯಯನಕ್ಕೆ ಮುಂತಾದ ಹಲವು ಕಾರಣಗಳನ್ನು ಹೊತ್ತು ಬರುವ ಜನರ ಕಥೆಗಳು ಆತನ ಸಂಚಿಯಲ್ಲಿವೆ. ಎಲ್ಲರಿಗೂ ಅವರವರ ಉದ್ದೇಶ ಈಡೇರುವಂತೆ ಶ್ರಮಿಸುವುದು ತನಗೆ ಪ್ರಿಯವಾದ ಸಂಗತಿ ಎನ್ನುವ ಇಂಥವರು ಜೊತೆಗಿದ್ದರೆ, ಅಲ್ಲಾವುದ್ದೀನನ ಮಾಂತ್ರಿಕ ಚಾಪೆಯ ಮೇಲೆ ತೇಲಿದಂತೆ ದಾರಿ ಸಾಗುತ್ತದೆ. ಇಂಥವರನ್ನು ನೋಡಿದಾಗ, ಇನ್ನೊಬ್ಬರ ಸೌಖ್ಯದಲ್ಲಿ ತಮ್ಮ ಸ್ವಾಸ್ಥ್ಯವನ್ನು ಅರಸುವ ಸ್ವಭಾವದ ಬಗ್ಗೆ ಬೇರೆ ಶಬ್ದಗಳು ನೆನಪಾಗುತ್ತಿಲ್ಲ.

ಹಣ, ಸಂಪತ್ತು, ಖ್ಯಾತಿ, ಅಧಿಕಾರಗಳ ಹುಚ್ಚು ಅಂಟಿಸಿಕೊಂಡವರು ನಮ್ಮೆದುರಿಗೆ ಮೆರವಣಿಗೆ ಹೊರಟಿದ್ದಾರೆ ಈಗ. ಚುನಾವಣೆಯ ಕಣದಲ್ಲಿಳಿದು ಅಧಿಕಾರ ದಕ್ಕಿಸಿಕೊಳ್ಳಲು, ದಕ್ಕದಿದ್ದರೆ ಯಾವ ಮಟ್ಟಕ್ಕೂ ಇಳಿಯುವಷ್ಟು ಹುಚ್ಚರಾಗಿದ್ದಾರೆ ಇಂದು. ಯಾರಿಗಾಗಿ ತಾವು ಆಯ್ಕೆಯಾಗುತ್ತಿದ್ದೇವೆಯೋ ಅವರ ಸೌಖ್ಯವನ್ನು ಗಮನಿಸುವುದೇ ಮರುಳು ಎನಿಸುತ್ತಿದೆ ಅಭ್ಯರ್ಥಿಗಳಿಗೆ. ಇಂಥವುಗಳನ್ನು ನೋಡಿದಾಗ ಮತ್ತದೇ ಪ್ರಶ್ನೆಗಳು ಮೂಡುತ್ತವೆ. ಹುಚ್ಚು ಎನ್ನುವುದನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಇತರರ ಖುಷಿಯನ್ನು ಬಯಸುವವರು ಹುಚ್ಚರೋ ಅಥವಾ ಇತರರ ಖರ್ಚಲ್ಲಿ ಖುಷಿ ಪಡುವವರೋ? ಇದಕ್ಕೆಲ್ಲ ಸಂವೇದನೆಗಳಿಗೆ ತಕ್ಕಂತೆ ಉತ್ತರ ಹುಡುಕುವುದೋ ಕಾಲಕ್ಕೆ ತಕ್ಕಂತೆಯೋ? ಹುಚ್ಚಿಗೆ ಹೆಚ್ಚಿಗೆ ಅರ್ಥಗಳಿಲ್ಲವೆಂದು ಈಗಲೂ ಹೇಳಬಹುದೇ?

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

Continue Reading

ಅಂಕಣ

ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

ರಾಜಮಾರ್ಗ ಅಂಕಣ: ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದು ನಿಂತು ಆತ ಇಡೀ ಜಗತ್ತಿನ ಕಣ್ಮಣಿಯಾಗಿ ಮೂಡಿ ಬಂದಿದ್ದಾನೆ. ವಿಶ್ವನಾಥನ್ ಆನಂದ್ ನಂತರ ಆ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯನಾಗಿ ಆತ ಇತಿಹಾಸಕ್ಕೆ ಸೇರಿ ಹೋಗಿದ್ದಾನೆ. ಆ ಹುಡುಗನ ಹೆಸರು ಡಿ.ಗುಕೇಶ್.

VISTARANEWS.COM


on

gukesh dommaraju rajamarga column
Koo

17ರ ಹರೆಯದ ಈ ಹುಡುಗನ ಸಾಧನೆಗೆ ವಿಶ್ವವೇ ತಲೆದೂಗುತ್ತಿದೆ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಚೆನ್ನೈ ಮೂಲದ ಗುಕೇಶ್ (Gukesh Dommaraju) ವಿಶ್ವ ಚಾಂಪಿಯನ್ (World Champion) ಆಗಲು ಇನ್ನೊಂದೇ ಮೆಟ್ಟಿಲು ಬಾಕಿ ಇದೆ! ಈತನ ವಯಸ್ಸು ಇನ್ನೂ 17 ವರ್ಷ. ಮೌನದ ಮೂಲಕ ಜಗತ್ತನ್ನು ಗೆಲ್ಲಲು ಹೊರಟ ಆತನ ತೀಕ್ಷ್ಣ ಕಣ್ಣುಗಳು ಈಗಲೇ ವಿಶ್ವ ವಿಜಯಿಯಾಗುವ ಕನಸಿನಿಂದ ತುಂಬಿವೆ. ಹಿಂದೊಮ್ಮೆ ವಿಶ್ವ ಚಾಂಪಿಯನ್ ಚೆಸ್ ಆಟಗಾರ (Chess) ಮ್ಯಾಗ್ನಸ್ ಕಾರ್ಲಸನ್ (Magnus Carlson) ಅವರನ್ನು ಇದೇ ಹುಡುಗ ಸೋಲಿಸಿದಾಗ ಇಡೀ ಜಗತ್ತು ನಿಬ್ಬೆರಗಾಗಿ ಆತನನ್ನು ಗಮನಿಸಿತ್ತು.

ಈಗ ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದು ನಿಂತಾಗ ಆತ ಇಡೀ ಜಗತ್ತಿನ ಕಣ್ಮಣಿಯಾಗಿ ಮೂಡಿ ಬಂದಿದ್ದಾನೆ. ವಿಶ್ವನಾಥನ್ ಆನಂದ್ ನಂತರ ಆ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯನಾಗಿ ಆತ ಇತಿಹಾಸಕ್ಕೆ ಸೇರಿ ಹೋಗಿದ್ದಾನೆ.

ಆ ಹುಡುಗನ ಹೆಸರು ಡಿ.ಗುಕೇಶ್

ಆತ ಚೆನ್ನೈಯ ಪ್ರತಿಭೆ. ವಿಶ್ವನಾಥನ್ ಆನಂದ್ ಐದು ಬಾರಿ ವಿಶ್ವ ಚಾಂಪಿಯನ್ ಆದ ನಂತರ ನಿವೃತ್ತಿ ಪಡೆದು ಚೆನ್ನೈಯಲ್ಲಿ ವಿಶ್ವನಾಥನ್ ಆನಂದ ಚೆಸ್ ಆಕಾಡೆಮಿ (WACA)ಯನ್ನು ಸ್ಥಾಪನೆ ಮಾಡಿದ್ದರು. ಅದರಿಂದ ಸ್ಫೂರ್ತಿ ಪಡೆದು ಚೆನ್ನೈಯಲ್ಲಿ ಈಗ 60ಕ್ಕಿಂತ ಅಧಿಕ ಚೆಸ್ ಅಕಾಡೆಮಿಗಳು ಇವೆ. ಅದರ ಪರಿಣಾಮವಾಗಿ ಇದೀಗ ಚೆನ್ನೈ ನಗರವು ಭಾರತದ ಚೆಸ್ ರಾಜಧಾನಿ ಆಗಿ ಬೆಳೆದಿದೆ. ಅತೀ ಸಣ್ಣ ವಯಸ್ಸಿನಲ್ಲಿ ಗ್ರಾನ್ ಮಾಸ್ಟರ್ ಆದ ಆರ್ ಪ್ರಜ್ಞಾನಂದ, ಆರ್ ವೈಶಾಲಿ, ಸುಬ್ಬರಾಮನ್ ವಿಜಯಲಕ್ಷ್ಮಿ ಇವರೆಲ್ಲರೂ ಚೆನ್ನೈಯವರು. ಈ ಪಟ್ಟಿಗೆ ಈಗ ಹೊಳೆಯುವ ಪ್ರತಿಭೆ ಸೇರ್ಪಡೆ ಆಗಿದೆ. ಆತ ಡಿ ಗುಕೇಶ್. ಭಾರತದ ಒಟ್ಟು ಚೆಸ್ ಗ್ರಾನ್ ಮಾಸ್ಟರಗಳಲ್ಲಿ 35% ಆಟಗಾರರು ಚೆನ್ನೈಗೆ ಸೇರಿದವರು ಅನ್ನುವಾಗ ಆ ನಗರದ ಬಗ್ಗೆ ಹೆಮ್ಮೆ ಮೂಡುತ್ತದೆ.

ಬಾಲ್ಯದಿಂದಲೇ ಚೆಸ್ ಆಟಕ್ಕೆ ಸಮರ್ಪಣೆ ಆಗಿ ಬೆಳೆದ ಹುಡುಗ ಆತ .ಅದಕ್ಕಾಗಿ ತನ್ನ ಬಾಲ್ಯದ ಆಟ, ಶಾಲೆ, ತುಂಟಾಟ ಎಲ್ಲವನ್ನೂ ಬದಿಗೆ ಇಟ್ಟು ಹೋರಾಟಕ್ಕೆ ಇಳಿದವನು.

ಮಗನಿಗಾಗಿ ಅಪ್ಪ, ಅಮ್ಮ ಮಾಡಿದ ತ್ಯಾಗ

ಅವನ ತಂದೆ ಡಾ.ರಜಿನಿಕಾಂತ್ ನಗರದ ಪ್ರಸಿದ್ಧ ENT ಸರ್ಜನ್. ತಾಯಿ ಡಾ. ಪದ್ಮಕುಮಾರಿ ಕೂಡ ಮೈಕ್ರೋಬಯೊಲಜಿ ತಜ್ಞರು. ಇಬ್ಬರೂ ತಮ್ಮ ಮಗನಿಗಾಗಿ ತಮ್ಮ ಪ್ರಾಕ್ಟೀಸ್ ಮರೆತು ಜಗತ್ತಿನಾದ್ಯಂತ ಓಡಾಡಿದ್ದಾರೆ. ತರಬೇತಿಗಾಗಿ ತುಂಬಾ ದುಡ್ಡು ಖರ್ಚು ಮಾಡಿದ್ದಾರೆ. ತುಂಬಾ ಸಮಯ ಕೊಟ್ಟಿದ್ದಾರೆ. ಮಗನ ಚೆಸ್ ಭವಿಷ್ಯಕ್ಕಾಗಿ ಯಾವ ತ್ಯಾಗಕ್ಕೂ ಸಿದ್ದರಾಗಿ ನಿಂತಿದ್ದಾರೆ.

ಹುಡುಗನೂ ನಾಲ್ಕನೇ ತರಗತಿಯಿಂದ ಶಾಲೆಗೇ ಹೋಗದೇ ಚೆಸ್ ಆಟದಲ್ಲಿ ಮೈ ಮರೆತಿದ್ದಾನೆ. ಶಾಲಾ ಶಿಕ್ಷಣಕ್ಕೆ ಸಮಯ ದೊರೆಯದ ಬಗ್ಗೆ ಹೆತ್ತವರಿಗೆ ಬೇಸರ ಇದೆ. ಆದರೆ ಆತನು 12ನೆಯ ವಯಸ್ಸಿಗೇ ಚೆಸ್ ಗ್ರಾನ್ ಮಾಸ್ಟರ್ ಹುದ್ದೆಗೆ ಏರಿದಾಗ ಅವರು ಆನಂದ ಭಾಷ್ಪ ಸುರಿಸಿದ್ದಾರೆ. ಮುಂದೆ ಚೆಸ್ ವಿಶ್ವ ಚಾಂಪಿಯನ್ ಮ್ಯಾಗ್ನೆಸ್ ಕಾರ್ಲಸನ್ ಅವರನ್ನು ಆತನು ಸೋಲಿಸಿದಾಗ ತುಂಬಾ ಖುಷಿ ಪಟ್ಟಿದ್ದಾರೆ. ಮ್ಯಾಗ್ನೆಸನನ್ನು ಸೋಲಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಗುಕೇಶ್ ಅನ್ನುವುದು ಸದ್ಯಕ್ಕೆ ಅಳಿಸಲಾಗದ ದಾಖಲೆ!

ಸಾಂಪ್ರದಾಯಕ ಚೆಸ್ ಕಲಿಕೆ, ಅಹಂಕಾರದಿಂದ ದೂರ!

ಸಾಮಾನ್ಯವಾಗಿ ಇತ್ತೀಚಿನ ಚೆಸ್ ಕಲಿಯುವ ಮಕ್ಕಳು ಕಂಪ್ಯೂಟರ್ ಜೊತೆ ಕೂತು ಚೆಸ್ ಆಡುತ್ತಾರೆ. ಆದರೆ ಗುಕೇಶ್ ಚೆಸ್ ಕಲಿತದ್ದು ಸಾಂಪ್ರದಾಯಿಕ ವಿಧಾನದಲ್ಲಿ. ಗುರುಗಳು ಹೇಳಿದ್ದನ್ನು ನೂರಕ್ಕೆ ನೂರರಷ್ಟು ಪಾಲಿಸುವ ಅವನ ಶ್ರದ್ಧೆ, ಏಕಾಗ್ರತೆ, ಬದ್ಧತೆ ಅವನನ್ನು ಪ್ರತೀ ಹೆಜ್ಜೆಯಲ್ಲಿಯೂ ಗೆಲ್ಲಿಸುತ್ತಿವೆ. ಯಾರಾದರೂ ಸನ್ಮಾನಕ್ಕೆ, ಸಂವಾದಕ್ಕೆ ಕರೆದರೆ ಆತನು ನಯವಾಗಿ ನೋ ಅನ್ನುವುದನ್ನು ಕಲಿತಿದ್ದಾನೆ. ಪ್ರಚಾರದಿಂದ ಆತ ಗಾವುದ ದೂರ ಓಡುತ್ತಾನೆ. ತಾನಾಯಿತು, ತನ್ನ ಅಭ್ಯಾಸವಾಯಿತು ಎಂದು ಚೆಸ್ ಆಟದಲ್ಲಿ ಮುಳುಗಿ ಬಿಡುವ ನಾಚಿಕೆಯ ಹುಡುಗ ಗುಕೇಶ್.

ಪ್ರಶಸ್ತಿ ಗೆದ್ದಾಗ ನಿನಗೆ ಹೇಗನ್ನಿಸಿತು ಹುಡುಗ? ಎಂದು ಕೇಳಿದಾಗ “ನನ್ನ ಗೆಲುವಿಗಿಂತ ದೇಶವನ್ನು ರೆಪ್ರೆಸೆಂಟ್ ಮಾಡುವ ಅವಕಾಶ ದೊರೆತದ್ದು ನನಗೆ ಹೆಚ್ಚು ಖುಷಿ ಕೊಟ್ಟಿದೆ” ಅನ್ನುತ್ತಾನೆ.

ನಿನ್ನ ಭವಿಷ್ಯದ ಗುರಿ ಏನು ಎಂದು ಯಾರೋ ಕೇಳಿದಾಗ “ನನಗೆ ವಿಶಿ ಸರ್ (ವಿಶ್ವನಾಥನ್ ಆನಂದ್) ಅವರು ಏನು ಹೇಳುತ್ತಾರೆಯೋ ಆ ಪ್ರಕಾರ ಮಾಡುತ್ತೇನೆ. ನನಗೆ ಏನು ಬೇಕು ಎಂದು ಅವರಿಗೆ ಚೆನ್ನಾಗಿ ಗೊತ್ತಿದೆ” ಅನ್ನುತ್ತಾನೆ.

ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ತನಗೆ ಈಗ ಒಳ್ಳೆಯ ಶಿಷ್ಯ ದೊರೆತ ಖುಷಿಯಲ್ಲಿ ಇದ್ದಾರೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

Continue Reading

ಅಂಕಣ

ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

ರಾಜಮಾರ್ಗ ಅಂಕಣ: ಪುಸ್ತಕಗಳು ಜ್ಞಾನವನ್ನು ಉದ್ದೀಪನ ಮಾಡುವ ದೀಪಸ್ತಂಭಗಳು ಮಾತ್ರವಲ್ಲ, ಸ್ಫೂರ್ತಿ ನೀಡುವ ಮಾಧ್ಯಮಗಳು. ಗಾಂಧೀಜಿಯವರು ಬಾಲ್ಯದಲ್ಲಿ ಓದಿದ ಜಾನ್ ರಸ್ಕಿನ್ ಬರೆದ ‘ಆನ್ ಟು ದ ಲಾಸ್ಟ್ ‘ ಪುಸ್ತಕವು ತನ್ನ ಬದುಕಿನ ಗತಿಯನ್ನೇ ಬದಲಾವಣೆ ಮಾಡಿತು ಎಂದು ಹೇಳಿದ್ದಾರೆ.

VISTARANEWS.COM


on

reading rajamarga column
Koo
Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಏಪ್ರಿಲ್ 23 – ಇಂದು ವಿಶ್ವ ಪುಸ್ತಕ ದಿನ (World book day). ಓದುವ (Reading) ಸುಖಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹಾಗೆಯೇ ಇಂದು ಖ್ಯಾತ ನಾಟಕಕಾರ ಶೇಕ್ಸ್‌ಪಿಯರ್ (Shakespeare) ಹುಟ್ಟಿದ ದಿನ ಕೂಡ. ಹಾಗೆಯೇ ಆತ ಮೃತಪಟ್ಟ ದಿನ ಕೂಡ ಇದೇ ಏಪ್ರಿಲ್ 23!

ಓದುವ ಸುಖಕ್ಕೆ ಬೆಲೆ ಕಟ್ಟಲು ಸಾಧ್ಯವೇ?

ಪುಸ್ತಕಗಳು ಜ್ಞಾನವನ್ನು ಉದ್ದೀಪನ ಮಾಡುವ ದೀಪಸ್ತಂಭಗಳು ಮಾತ್ರವಲ್ಲ, ಸ್ಫೂರ್ತಿ ನೀಡುವ ಮಾಧ್ಯಮಗಳು. ಗಾಂಧೀಜಿಯವರು ಬಾಲ್ಯದಲ್ಲಿ ಓದಿದ ಜಾನ್ ರಸ್ಕಿನ್ ಬರೆದ ‘ಆನ್ ಟು ದ ಲಾಸ್ಟ್ ‘ ಪುಸ್ತಕವು ತನ್ನ ಬದುಕಿನ ಗತಿಯನ್ನೇ ಬದಲಾವಣೆ ಮಾಡಿತು ಎಂದು ಹೇಳಿದ್ದಾರೆ. ಹಾಗೆಯೇ ಅವರು ರಷ್ಯನ್ ಲೇಖನ ಲಿಯೋ ಟಾಲ್ಸ್ಟಾಯ್ ಅವರ ಪುಸ್ತಕಗಳನ್ನು ಓದಿ ಪ್ರಭಾವಿತರಾದರು.

ಭಗತ್ ಸಿಂಗ್ ಅವರು ಲೆನಿನ್ ಬರೆದ ‘ಸ್ಟೇಟ್ ಆಂಡ್ ರಿವೊಲ್ಯುಶನ್’ ಪುಸ್ತಕವನ್ನು ಓದಿ ಸ್ಫೂರ್ತಿ ಪಡೆದೆ ಎಂದು ಹೇಳಿದ್ದಾರೆ. ಹೀಗೆ ಮಹಾಪುರುಷರು ಒಂದಲ್ಲ ಒಂದು ಪುಸ್ತಕಗಳಿಂದ ಪ್ರಭಾವಿತರಾದವರು .ಯಾವುದೇ ವ್ಯಕ್ತಿಯ ಬದುಕಿನ ಗತಿಯಲ್ಲಿ ಪ್ರಮುಖವಾದ ತಿರುವನ್ನು ತರುವ ಶಕ್ತಿಯು ಪುಸ್ತಕಗಳಿಗೆ ಇವೆ ಎಂದು ನೂರಾರು ಬಾರಿ ಸಾಬೀತು ಆಗಿದೆ.

ನನ್ನ ಬಾಲ್ಯದ ವಿಳಾಸ ಹೀಗೆ ಇತ್ತು – c/o ಲೈಬ್ರೆರಿ!

ನನಗೆ ಬಾಲ್ಯದಿಂದಲೂ ಓದುವ ಅನಿವಾರ್ಯ ವ್ಯಸನವನ್ನು ಅಂಟಿಸಿದವರು ನನ್ನ ಕನ್ನಡ ಶಾಲೆಯ ಅಧ್ಯಾಪಕರು. ಅವರು ತರಗತಿಯಲ್ಲಿ ಪಾಠವನ್ನು ಮಾಡುವಾಗ ಒಂದಲ್ಲ ಒಂದು ಪುಸ್ತಕದ ರೆಫರೆನ್ಸ್ ಕೊಡುತ್ತಿದ್ದರು. ಮತ್ತು ಸ್ಟಾಫ್ ರೂಮಿಗೆ ನಾವು ಹೋದಾಗ ಅದೇ ಪುಸ್ತಕವು ಅವರ ಟೇಬಲ್ ಮೇಲೆ ಸಿಂಗಾರಗೊಂಡು ಕೂತಿರುತಿತ್ತು. ನಾವು ಕೈಗೆ ಎತ್ತಿಕೊಂಡರೆ ‘ ಓದಿ ಹಿಂದೆ ಕೊಡು ಪುಟ್ಟ ‘ಎಂಬ ಮಾತು ತುಂಬ ಖುಷಿ ಕೊಡುತ್ತಿತ್ತು. ಹಾಗೆ ನಮ್ಮ ಕನ್ನಡ ಶಾಲೆಯ ಅಧ್ಯಾಪಕರಿಂದ ಆರಂಭವಾದ ನನ್ನ ಓದಿನ ವ್ಯಸನ ಇಂದಿನವರೆಗೂ ಮುಂದುವರೆದಿದೆ! ಈವರೆಗೆ ಸಾವಿರಾರು ಪುಸ್ತಕಗಳನ್ನು ಓದಿ ಮುಗಿಸಿದ್ದೇನೆ ಎನ್ನುವುದು ಅಭಿಮಾನದ ಮಾತು. ಈ ಓದು ನನ್ನ ಭಾಷೆ ಮತ್ತು ಚಿಂತನೆಯನ್ನು ಶ್ರೀಮಂತವಾಗಿ ಮಾಡಿತು.

ನನ್ನ ಬಾಲ್ಯ ಮತ್ತು ಯೌವ್ವನದ ಎಲ್ಲ ರಜೆಗಳು, ಸಂಜೆಗಳು ಕಳೆದದ್ದು ಕಾರ್ಕಳದ ವಿಸ್ತಾರವಾದ ಗ್ರಂಥಾಲಯದಲ್ಲಿ. ಹಾಗೆ ನನ್ನ ಗೆಳೆಯರು ನನ್ನನ್ನು C/O ಲೈಬ್ರೆರಿ ಎಂದು ತಮಾಷೆ ಮಾಡುತ್ತಿದ್ದರು.

ವಯಸ್ಸಿಗೆ ಸರಿಯಾದ ಪುಸ್ತಕಗಳ ಆಯ್ಕೆ

ನಮ್ಮ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಬಾಲ್ಯದಲ್ಲಿ ಮೂಡಿಸುವುದು ಹೆತ್ತವರ ಮತ್ತು ಶಿಕ್ಷಕರ ಹೊಣೆ. ನಮ್ಮ ಕೈಯ್ಯಲ್ಲಿ ಪುಸ್ತಕಗಳು ಇದ್ದರೆ ಮಕ್ಕಳಿಗೆ ಓದು ಓದು ಎಂದು ಹೇಳುವ ಅಗತ್ಯ ಬೀಳುವುದಿಲ್ಲ. ಆದರೆ ಮಕ್ಕಳ ವಯಸ್ಸಿಗೆ ಅನುಗುಣವಾದ ಪುಸ್ತಕಗಳನ್ನು ನೀಡಿ ಓದಿಸುವುದು ಅಗತ್ಯ. ಅದರ ಬಗ್ಗೆ ಒಂದಿಷ್ಟು ಸೂತ್ರಗಳು ಇಲ್ಲಿವೆ.

Book Reading Habit in Children

ಬಾಲ್ಯದ 5-8 ವರ್ಷ – ಕಲ್ಪನಾ ಲೋಕ

ಈ ವಯಸ್ಸು ಮಕ್ಕಳಲ್ಲಿ ರಚನಾತ್ಮಕ ಯೋಚನೆಗಳು ಮತ್ತು ಕಲ್ಪನೆಗಳು ಮೂಡುವ ಅವಧಿ. ಆ ವಯಸ್ಸಿನ ಮಕ್ಕಳಿಗೆ ಕಾಲ್ಪನಿಕವಾದ ಪ್ರಾಣಿ, ಪಕ್ಷಿಗಳ ಕಥೆ ಹೊಂದಿರುವ ಚಿತ್ರ ಪುಸ್ತಕಗಳು ( ಕಾಮಿಕ್ಸ್) ಹೆಚ್ಚು ಉಪಯುಕ್ತ. ಪಂಚತಂತ್ರದ ಕಥೆಗಳು, ಕಾಕೋಲುಕೀಯ, ಈಸೋಪನ ಕಥೆಗಳು ಈ ವಯಸ್ಸಿನ ಮಕ್ಕಳಿಗೆ ಸೂಕ್ತ. ರಾಷ್ಟ್ರೋತ್ಥಾನ ಪರಿಷತ್ ಹೊರತಂದಿರುವ ‘ಭಾರತ ಭಾರತೀ ‘ ಸರಣಿಯ ಸಾವಿರಾರು ಕಿರು ಪುಸ್ತಕಗಳು ಈ ವಯಸ್ಸಿನ ಮಕ್ಕಳಿಗೆ ಓದಲು ಚಂದ.

ಬಾಲ್ಯದ 9-12 ವರ್ಷ – ಕುತೂಹಲದ ಪರ್ವಕಾಲ

ಈ ವಯಸ್ಸಿನ ವಿದ್ಯಾರ್ಥಿಗಳು ಸೃಜನಶೀಲವಾಗಿ ಯೋಚನೆ ಮಾಡುತ್ತಾರೆ ಮತ್ತು ನೈತಿಕ ಮೌಲ್ಯಗಳನ್ನು ನಿಧಾನವಾಗಿ ಜೀರ್ಣ ಮಾಡಿಕೊಳ್ಳುತ್ತಾರೆ. ಅವರಿಗೆ ವಿಜ್ಞಾನಿಗಳ ಕಥೆಗಳು, ಸಿಂದಬಾದನ ಸಾಹಸದ ಕಥೆಗಳು, ರಾಮಾಯಣ, ಮಹಾಭಾರತದ ಕಿರು ಪುಸ್ತಕಗಳು ಹೆಚ್ಚು ಇಷ್ಟವಾಗುತ್ತವೆ. ಆ ಪುಸ್ತಕಗಳಲ್ಲಿ ಹೆಚ್ಚು ಚಿತ್ರಗಳು ಇದ್ದರೆ ಮಕ್ಕಳು ಖುಷಿಪಟ್ಟು ಓದುತ್ತಾರೆ.

ಹದಿಹರೆಯದ 12-15 ವರ್ಷ – ಸಣ್ಣ ಸಣ್ಣ ಕನಸು ಮೊಳೆಯುವ ವಯಸ್ಸು

ಸಣ್ಣ ಕತೆಗಳು ಹೆಚ್ಚು ಇಷ್ಟ ಆಗುವ ವಯಸ್ಸದು. ಸ್ಫೂರ್ತಿ ನೀಡುವ ವಿಕಸನದ ಲೇಖನಗಳು ಅವರಿಗೆ ಹೆಚ್ಚು ಇಷ್ಟವಾಗುತ್ತವೆ. ಎಡಿಸನ್ ತನ್ನ ಬಾಲ್ಯದ ಸಮಸ್ಯೆಗಳನ್ನು ಹೇಗೆ ಗೆದ್ದನು? ಅಬ್ರಹಾಂ ಲಿಂಕನ್ ಕಡುಬಡತನವನ್ನು ಮೆಟ್ಟಿ ಅಮೇರಿಕಾದ ಅಧ್ಯಕ್ಷ ಆದದ್ದು ಹೇಗೆ? ಮೊದಲಾದ ಸ್ಫೂರ್ತಿ ಆಧಾರಿತ ಕಥೆಗಳನ್ನು ಆ ವಯಸ್ಸಿನ ವಿದ್ಯಾರ್ಥಿಗಳು ಖುಶಿ ಪಟ್ಟು ಓದುತ್ತಾರೆ. ಹಾಗೆಯೇ ರಾಷ್ಟ್ರ ಪ್ರೇಮದ ಪುಸ್ತಕಗಳನ್ನು ಓದಲು ಆರಂಭ ಮಾಡಬೇಕಾದ ವಯಸ್ಸು ಇದು. ನಾನು ಒಂಬತ್ತನೇ ತರಗತಿಯಲ್ಲಿ ಓದಿದ ಬಾಬು ಕೃಷ್ಣಮೂರ್ತಿ ಅವರ ‘ ಅಜೇಯ ‘ ಪುಸ್ತಕವು ನನ್ನ ಬದುಕಿನಲ್ಲಿ ಭಾರೀ ಬದಲಾವಣೆ ತಂದಿತ್ತು. ಅದು ಖ್ಯಾತ ಕ್ರಾಂತಿಕಾರಿ ಚಂದ್ರಶೇಖರ್ ಆಝಾದ್ ಅವರ ಬದುಕಿನ ಪುಸ್ತಕ ಆಗಿದೆ.

15-18 ವಯಸ್ಸು – ಹುಚ್ಚು ಖೋಡಿ ಮನಸ್ಸು

ಈ ವಯಸ್ಸಿನ ವಿದ್ಯಾರ್ಥಿಗಳು ಸ್ವಲ್ಪ ಕುತೂಹಲ ಮತ್ತು ಹೆಚ್ಚು ಉಡಾಫೆ ಹೊಂದಿರುತ್ತಾರೆ. ಈ ವಯಸ್ಸಿನವರಿಗೆ ಹೆಚ್ಚು ಆಪ್ತವಾಗುವುದು ವಿಕಸನದ ಸ್ಫೂರ್ತಿ ನೀಡುವ ಲೇಖನಗಳೇ ಆಗಿವೆ. ಸಾಹಸ, ಪ್ರವಾಸ, ಸಂಶೋಧನೆ, ಸ್ವಲ್ಪ ರೋಮಾನ್ಸ್ ಇರುವ ಕತೆಗಳನ್ನು ಹೊಂದಿರುವ ಪುಸ್ತಕಗಳು ಅವರಿಗೆ ಹೆಚ್ಚು ಇಷ್ಟವಾಗುತ್ತವೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಣ್ಣ ಕತೆಗಳು, ಪೂರ್ಣಚಂದ್ರ ತೇಜಸ್ವಿ ಅವರ ರಂಜನೆ ಕಡಿಮೆ ಇರುವ ಕಥೆಗಳ ಪುಸ್ತಕಗಳನ್ನು ಅವರಿಗೆ ಕೊಟ್ಟು ನೋಡಿ. ಡುಂಡಿರಾಜರ ಹನಿಗವನಗಳು ಈ ವಯಸ್ಸಿನ ಓದುಗರಿಗೆ ತುಂಬ ಇಷ್ಟ ಆಗುತ್ತವೆ.

20-24 ವಯಸ್ಸು – ಯೌವ್ವನದ ಕಚಗುಳಿ

ಕಾಲೇಜು ಹಂತದ ವಿದ್ಯಾರ್ಥಿಗಳು ಭ್ರಮೆಯಿಂದ ಹೊರಬಂದು ವಾಸ್ತವದ ನೆಲೆಗಟ್ಟಿನ ಚಿಂತನೆಗಳನ್ನು ಹೊಂದಿರುತ್ತಾರೆ. ಕುವೆಂಪು, ಕಾರಂತ, ಭೈರಪ್ಪ, ರವೀ ಬೆಳಗೆರೆ…….ಮೊದಲಾದವರ ಗಂಭೀರ ಚಿಂತನೆ ಹೊಂದಿರುವ ಮತ್ತು ವಾಸ್ತವದ ನೆಲೆಗಟ್ಟಿನ ಕಾದಂಬರಿಗಳನ್ನು ಈ ವಯಸ್ಸಿನಲ್ಲಿ ಓದಲು ಆರಂಭ ಮಾಡಬೇಕು. ಹಾಗೆಯೇ ಆತ್ಮಚರಿತ್ರೆಯ ಪುಸ್ತಕಗಳನ್ನು ಓದಲು ಆರಂಭಿಸಬೇಕಾದ ವಯಸ್ಸು ಇದು. ಅಬ್ದುಲ್ ಕಲಾಂ ಅವರ ಅಗ್ನಿಯ ರೆಕ್ಕೆಗಳು ಮತ್ತು ಪ್ರಜ್ವಲಿಸುವ ಮನಸುಗಳು ಇವೆರಡು ಪುಸ್ತಕಗಳನ್ನು ಈ ವಯಸ್ಸಿನ ವಿದ್ಯಾರ್ಥಿಗಳಿಗೆ ಉಡುಗೊರೆಯಾಗಿ ಕೊಟ್ಟರೆ ಅವರು ತುಂಬಾ ಖುಷಿ ಪಡುತ್ತಾರೆ. ಷಡಕ್ಷರಿ ಅವರ ‘ ಕ್ಷಣ ಹೊತ್ತು ಆಣಿ ಮುತ್ತು ‘ ಅಂಕಣಗಳು ಮತ್ತು ಪ್ರತಾಪ ಸಿಂಹ ಅವರ ‘ಬೆತ್ತಲೆ ಜಗತ್ತು ‘ ಅಂಕಣಗಳು ಹೆಚ್ಚು ಖುಷಿ ಕೊಡುವ ವಯಸ್ಸು ಅದು.

25-28 ವಯಸ್ಸು – ಬದುಕಿನ ಸೌಂದರ್ಯದ ವಸಂತ ಕಾಲ

ಮನಸ್ಸು ಮಾಗಿ ಪ್ರಬುದ್ಧತೆಯು ಮೂಡುವ ಈ ವಯಸ್ಸಲ್ಲಿ ಬದುಕಿನ ಸೌಂದರ್ಯದ ಅನುಭೂತಿ ಮೂಡಿಸುವ ತ್ರಿವೇಣಿ, ಸಾಯಿಸುತೆ, ಅನಕೃ, ದೇವುಡು, ತರಾಸು, ನಾ ಡಿಸೋಜಾ ಅವರ ಕಾದಂಬರಿಗಳು ಹೆಚ್ಚು ಆಪ್ತವಾಗುತ್ತವೆ. ಭಾವಗೀತೆಗಳ ಓದು ಖುಷಿ ಕೊಡುತ್ತದೆ. ಸೋತವರ ಕಥೆಗಳು ಹೆಚ್ಚು ಆಪ್ತವಾಗುತ್ತವೆ. ಕಾದಂಬರಿಯ ಓದು ಹೆಚ್ಚು ತಾಳ್ಮೆಯನ್ನು ಬೇಡುತ್ತದೆ. ಆದರೂ ಒಮ್ಮೆ ಅವರು ಓದುವ ಅಭಿರುಚಿ ರೂಢಿಸಿಕೊಂಡರೆ ಅವರು ಅಂತಹ ಪುಸ್ತಕಗಳನ್ನು ಪ್ರೀತಿ ಮಾಡಲು ತೊಡಗುತ್ತಾರೆ.

ಭರತ ವಾಕ್ಯ

ನನ್ನಂತಹ ಭಾಷಣಕಾರ ಮತ್ತು ತರಬೇತಿದಾರನನ್ನು ಜೀವಂತ ಆಗಿಡುವುದೇ ಪುಸ್ತಕಗಳು ಮತ್ತು ಪುಸ್ತಕಗಳು! ಸಾಮಾಜಿಕ ಜಾಲತಾಣಗಳ ಕಾರಣಕ್ಕೆ ಓದುಗರ ಸಂಖ್ಯೆ ಕಡಿಮೆ ಆಗಿದೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಅದು ಪೂರ್ತಿ ನಿಜವಲ್ಲ.

ವಿಶ್ವ ಪುಸ್ತಕ ದಿನವಾದ ಇಂದು ನೀವು ನಿಮ್ಮ ಮಕ್ಕಳಲ್ಲಿ ಓದುವ ಸಂಕಲ್ಪ ಹುಟ್ಟಿಸಿದಿರಿ ಅಂತಾದರೆ ಅದು ಸಾರ್ಥಕ ಹೆಜ್ಜೆ ಆಗುತ್ತದೆ. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಸಿನೆಮಾ ಜಗತ್ತಿನ ಮೊದಲ ಸೂಪರ್ ಸ್ಟಾರ್ ಚಾರ್ಲಿ ಚಾಪ್ಲಿನ್!

Continue Reading

ಅಂಕಣ

ರಾಜಮಾರ್ಗ ಅಂಕಣ: ಸೆಲೆಬ್ರಿಟಿಗಳು ಆಗೋದು ಅಷ್ಟು ಸುಲಭನಾ?

ರಾಜಮಾರ್ಗ ಅಂಕಣ: ಇತ್ತೀಚೆಗೆ ಬರುವ ಎಲ್ಲ ಭಾಷೆಯ ಸಿನೆಮಾಗಳಲ್ಲಿ ಹೀರೋ ಅಥವಾ ವಿಲನ್ ಪಾತ್ರದ ವೈಭವೀಕರಣ ಮಾಡಲು ಕುಡಿತ, ಹೊಗೆ ಬಿಡುವುದು, ಅಶ್ಲೀಲ ಪದ ಬಳಕೆ ಮೊದಲಾದವುಗಳನ್ನು ಒಂದಿಷ್ಟೂ ಸಂಕೋಚ ಮಾಡದೆ ಮಾಡುತ್ತಿದ್ದಾರೆ.

VISTARANEWS.COM


on

ranveer smoking rajamarga column
Koo

ಸಿನಿಮಾಗಳಲ್ಲಿ ಪಾತ್ರಗಳ ವೈಭವೀಕರಣಕ್ಕೆ ಹೊಗೆ, ಹೆಂಡ, ಡ್ರಗ್ಸ್ ಅನಿವಾರ್ಯವೇ?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಕನ್ನಡದ ವರನಟ ಡಾಕ್ಟರ್ ರಾಜಕುಮಾರ್ (Dr. Raj Kumar) ಇನ್ನೂರಕ್ಕಿಂತ ಹೆಚ್ಚು ಸಿನೆಮಾಗಳಲ್ಲಿ ಹೀರೋ ಆಗಿ ಅಭಿನಯಿಸಿದ್ದರು. ಅವರ ಸಿನೆಮಾಗಳು ಮಾಡಿದ ಭಾರೀ ದೊಡ್ಡ ದಾಖಲೆಗಳು ಒಂದೆಡೆ ಆದರೆ ಅವರ ಅಸದೃಶ ವ್ಯಕ್ತಿತ್ವವು ಅದಕ್ಕಿಂತ ಹೆಚ್ಚು ಅನುಕರಣೀಯ!

ಡಾಕ್ಟರ್ ರಾಜ್ ಕೆಲವು ಸಿನೆಮಾಗಳಲ್ಲಿ ಪ್ರತಿನಾಯಕನ ಪಾತ್ರಗಳಲ್ಲಿ ನಟಿಸಿದ್ದು ಇದೆ. ಆದರೆ ಅವರು ತಮ್ಮ ಒಂದು ಸಿನೆಮಾದಲ್ಲಿ ಕೂಡ ಕುಡಿಯುವ, ಸಿಗರೇಟನ್ನು ಸೇದುವ, ಪಾನ್ ಜಗಿಯುವ ಅಭಿನಯವನ್ನು ಮಾಡಲೆ ಇಲ್ಲ! ತಪ್ಪಿ ಕೂಡ ಒಂದು ಹೆಣ್ಣನ್ನು ಅಪಮಾನ ಮಾಡುವ ಪಾತ್ರಗಳನ್ನು ಮಾಡಲೆ ಇಲ್ಲ. ಡಬ್ಬಲ್ ಮೀನಿಂಗ್ ಡೈಲಾಗ್, ಕೆಟ್ಟ ಶಬ್ದಗಳ ಬಳಕೆ ಯಾವುದೂ ಇಲ್ಲ!

ಪಾತ್ರಗಳ ಆಯ್ಕೆಯಲ್ಲಿ ಕೂಡ ಅವರು ತುಂಬಾ ಎಚ್ಚರ ವಹಿಸುತ್ತಿದ್ದರು. ಅವರು ತುಂಬಾ ವೇದಿಕೆಯಲ್ಲಿ ಹೇಳುತ್ತಿದ್ದ ಮಾತುಗಳು ನನಗೆ ಹೆಚ್ಚು ತಟ್ಟಿವೆ.

ನುಡಿದಂತೆ ನಡೆದ ಕನ್ನಡದ ವರನಟ!‌

“ನಾವು ಬೇಡ ಅಂದರೂ ನಮ್ಮನ್ನು ಸಾವಿರಾರು ಜನರು ಅನುಕರಣೆ ಮಾಡುತ್ತಾರೆ. ಹೆಚ್ಚಿನವರು ಯುವಜನರು. ಅವರು ನಮ್ಮನ್ನು ಅನುಕರಣೆ ಮಾಡಿ ಸಿಗರೇಟ್, ಹೆಂಡ ಅಭ್ಯಾಸ ಮಾಡಿದರೆ ಸಾಮಾಜಿಕ ಆರೋಗ್ಯವು ಹಾಳಾಗುತ್ತದೆ. ಒಬ್ಬ ಹೀರೋನನ್ನು ವಿಜೃಂಭಣೆ ಮಾಡಲು ಹೋಗಿ ನಾವು ಸಮಾಜವನ್ನು ಖಂಡಿತ ಕೆಡಿಸಬಾರದು. ನಾವು ಸಾಧ್ಯ ಆದರೆ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಬೇಕು!” ಅನ್ನುತ್ತಿದ್ದರು ರಾಜ್.

Dr. Rajkumar

ಎಷ್ಟು ಅರ್ಥಗರ್ಭಿತ ಮಾತು ಅಲ್ಲವೇ. ಡಾಕ್ಟರ್ ರಾಜ್ ಮಾತು ಮಾತ್ರವಲ್ಲ ತಮ್ಮ ಮಾತಿನಂತೆಯೇ ಬದುಕಿ ತೋರಿಸಿದ್ದರು.

ಅಮಿತಾಭ್ ಒಡ್ಡಿದ ಆಮಿಷಕ್ಕೂ ರಾಜ್ ಬಗ್ಗಲಿಲ್ಲ!

ಒಮ್ಮೆ ಎಂಬತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಅಮಿತಾಭ್ ಬಚ್ಚನ್ ತನ್ನ ABCL ಕಂಪೆನಿಯ ಮೂಲಕ ‘ವಿಶ್ವಸುಂದರಿ’ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಆಗ ರಾಜ್ಯದಲ್ಲಿ ಪೂರ್ತಿ ತೀವ್ರ ನೀರಿನ ಕ್ಷಾಮವು ಇತ್ತು. ಕರ್ನಾಟಕದ ರೈತರು ಪ್ರತಿಭಟನೆ ಮಾಡಿ ಬೀದಿಗೆ ಇಳಿದಿದ್ದರು. ಅವರ ಆಕ್ರೋಶವು ವಿಶ್ವಸುಂದರಿ ಸ್ಪರ್ಧೆಯ ವಿರುದ್ಧವೂ ತಿರುಗಿತ್ತು. ರಾಜ್ಯದಲ್ಲಿ ಭಾರೀ ಪ್ರತಿಭಟನೆಯೂ ನಡೆಯಿತು. ಆಗ ಅದನ್ನು ಶಮನ ಮಾಡಲು ಬೇರೆ ದಾರಿಯೆ ಇಲ್ಲದೆ ಅಮಿತಾಭ್‌, ರಾಜ್ ಅವರ ಮನೆಗೆ ಬಂದು ನೀವು ಉದ್ಘಾಟನೆಗೆ ಬರಬೇಕು ಎಂದು ಕೇಳಿಕೊಂಡಿದ್ದರು.

ಆ ಸೌಂದರ್ಯ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮವು ಜಗತ್ತಿನ ಇನ್ನೂರಕ್ಕಿಂತ ಅಧಿಕ ಸಂಖ್ಯೆಯ ರಾಷ್ಟ್ರಗಳಲ್ಲಿ ಟಿವಿ ನೇರ ಪ್ರಸಾರ ಆಗುತ್ತದೆ ಎಂದೆಲ್ಲ ಹೇಳಿ ಆಮಿಷವನ್ನು ಒಡ್ಡಿದ್ದರು. ರಾಜ್ ಅವರ ಮಕ್ಕಳೂ ಕೂಡ ನೀವು ಹೋಗಿ ಅಪ್ಪ ಎಂದು ಹೇಳಿದ್ದರು.

ಆದರೆ ರಾಜಕುಮಾರ್ ಅವರು ಅಮಿತಾಭ್ ಆಮಂತ್ರಣ ನಯವಾಗಿ ನಿರಾಕರಿಸಿ “ಸಾರಿ. ನನ್ನ ರಾಜ್ಯದ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ನಾನು ಉದ್ಘಾಟನೆಗೆ ಬರಲಾರೆ!”ಎಂದು ಹೇಳಿದ್ದರು.

ಡಾಕ್ಟರ್ ರಾಜ್ ಅವರು ಗ್ರೇಟ್ ಆಗುವುದು ಇಂತಹ ನೂರಾರು ಕಾರಣಕ್ಕೆ!

ಹೊಗೆ, ಹೆಂಡ ಇಲ್ಲದ ಸಿನಿಮಾಗಳೇ ಇಲ್ಲ!

ಇಷ್ಟೆಲ್ಲ ಹೇಳಲು ಕಾರಣ ಏನೆಂದರೆ ಇತ್ತೀಚೆಗೆ ಬರುವ ಎಲ್ಲ ಭಾಷೆಯ ಸಿನೆಮಾಗಳಲ್ಲಿ ಹೀರೋ ಅಥವಾ ವಿಲನ್ ಪಾತ್ರದ ವೈಭವೀಕರಣ ಮಾಡಲು ಕುಡಿತ, ಹೊಗೆ ಬಿಡುವುದು, ಅಶ್ಲೀಲ ಪದ ಬಳಕೆ ಮೊದಲಾದವುಗಳನ್ನು ಒಂದಿಷ್ಟೂ ಸಂಕೋಚ ಮಾಡದೆ ಮಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ KGF ಪಾರ್ಟ್ 2 ಸಿನೆಮಾದಲ್ಲಿ ಹೀರೋ ಐವತ್ತು ಶೇಕಡಾಕ್ಕಿಂತ ಅಧಿಕ ದೃಶ್ಯಗಳಲ್ಲಿ ಹೊಗೆ ಮತ್ತು ನಷೆಗಳಲ್ಲಿ ಮುಳುಗಿರುತ್ತಾನೆ! ಈ ವರ್ಷದ ಹಿಟ್ ಯುವ ಸಿನೆಮಾದ ಮೊದಲರ್ಧ ಭಾಗದಲ್ಲಿ ಹೆಂಡ, ಕ್ರೌರ್ಯ ಮತ್ತು ಹೊಗೆ ಆವರಿಸಿದ್ದು ನಾವೆಲ್ಲರೂ ನೋಡಿದ್ದೇವೆ. ಇದು ಒಂದೆರಡು ಸಿನೆಮಾಗಳ ಕಥೆ ಅಲ್ಲ. ಭಾಷೆಗಳ ಬೇಧವಿಲ್ಲದೆ ಹೆಚ್ಚಿನ ಸಿನೆಮಾಗಳಲ್ಲಿ ಡ್ರಗ್ಸ್, ಹೊಗೆ ಮತ್ತು ಹೆಂಡಗಳ ವೈಭವೀಕರಣ ನಡೆಯುತ್ತಾ ಇರುತ್ತದೆ. ಕಳೆದ ವರ್ಷ ಬಿಡುಗಡೆಯಾದ ಅನಿಮಲ್ ಸಿನೆಮಾವನ್ನು ಗೆಲ್ಲಿಸಿದ್ದು ಅದೇ ಮೂರು ಅಂಶಗಳು!

ಆಗೆಲ್ಲ ಪರದೆಯ ಮೂಲೆಯಲ್ಲಿ ‘ಸ್ಮೋಕಿಂಗ್ ಆಂಡ್ ಡ್ರಿಂಕಿಂಗ್ ಆರ್ ಇಂಜುರಿಯಸ್ ಟು ಹೆಲ್ತ್ ‘ ಎಂಬ ಎಚ್ಚರಿಕೆಯ ಸಣ್ಣ ಕ್ಯಾಪ್ಶನ್ ಇದ್ದೇ ಇರುತ್ತದೆ. ಅದು ಮಾತ್ರ ಯಾರ ಕಣ್ಣಿಗೂ ಕಾಣುವುದೇ ಇಲ್ಲ! ಸೆನ್ಸಾರ್ ಮಂಡಳಿ ಅಂತಹ ದೃಶ್ಯಗಳ ಬಗ್ಗೆ ಯಾವ ಗಂಭೀರ ಕ್ರಮವನ್ನು ಇದುವರೆಗೆ ತೆಗೆದುಕೊಂಡ ಉದಾಹರಣೆ ಇಲ್ಲ! ರಜನೀಕಾಂತ್, ವಿಜಯ್, ಶಿವರಾಜ್ ಕುಮಾರ್…… ಮೊದಲಾದ ಸೂಪರ್ ಸ್ಟಾರ್ ನಟರು ಸುರುಳಿ ಸುರುಳಿಯಾಗಿ ಹೊಗೆ ಬಿಡುವುದನ್ನು ಅಚ್ಚರಿಯಿಂದ ನೋಡುತ್ತ ಅನುಕರಣೆ ಮಾಡುವ ಯುವಜನತೆಯ ಸಂಖ್ಯೆ ಹೆಚ್ಚಾಗುತ್ತಿದೆ.

ಡಾ. ರಾಜ್ ಸಿನೆಮಾ ಮಾತ್ರವಲ್ಲ ತಾನು ಅಭಿನಯಿಸುವ ಜಾಹೀರಾತುಗಳಲ್ಲಿ ಕೂಡ ಅಂತಹ ಪ್ರಮಾದಗಳನ್ನು ಮಾಡುತ್ತಿರಲಿಲ್ಲ.

ಗಬ್ಬೆಬ್ಬಿಸಿದ ಪಾನ್ ಪರಾಗ್ ಜಾಹೀರಾತು!

ಕಳೆದ ವರ್ಷ ಒಂದು ಪಾನ್ ಪರಾಗ್ ಜಾಹೀರಾತಿನಲ್ಲಿ ಮಹಾ ನಟರಾದ ಅಜಯ್ ದೇವಗನ್, ಅಕ್ಷಯ್ ಕುಮಾರ್ ಮತ್ತು ಶಾರುಖ್ ಖಾನ್ ದೊಡ್ಡ ಮೊತ್ತವನ್ನು ಕಂಪೆನಿಯಿಂದ ಪಡೆದುಕೊಂಡು ಅಭಿನಯ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಅದರಲ್ಲಿಯೂ ಒಂದು ಕಾಲದಲ್ಲಿ ಎಷ್ಟು ದುಡ್ಡು ಕೊಟ್ಟರೂ ಅಂತಹ ಜಾಹೀರಾತಲ್ಲಿ ನಟಿಸುವುದೇ ಇಲ್ಲ ಅಂತ ಹೇಳಿಕೆ ಕೊಟ್ಟಿದ್ದ ಅಕ್ಷಯಕುಮಾರ್ ಎಂಬ ಸೆಲೆಬ್ರಿಟಿ ನಟ (ನಾನು ಅತನ ಬಗ್ಗೆ ಕಳೆದ ವರ್ಷ ಒಂದು ಲೇಖನ ಬರೆದು ಒಂದಿಷ್ಟು ಹೊಗಳಿ ಬರೆದಿದ್ದೆ!) ಆ ಜಾಹೀರಾತಲ್ಲಿ ಅಭಿನಯ ಮಾಡಿದ್ದು ತಪ್ಪು ಎಂದು ಜನರು ನೇರವಾಗಿ ಖಂಡಿಸಿದ್ದಾರೆ. ಅದಕ್ಕೆ ಅಕ್ಷಯ್ ತನ್ನ ಅಭಿಮಾನಿಗಳಲ್ಲಿ ಕ್ಷಮೆಯನ್ನು ಕೇಳಿ ತನ್ನ ಒಪ್ಪಂದದಿಂದ ಹೊರಬಂದಿದ್ದಾನೆ.

ಉಳಿದ ಇಬ್ಬರು ಸೆಲೆಬ್ರಿಟಿಗಳು ಕ್ಷಮೆ ಕೇಳಿದ್ದು ಕೂಡ ಇಲ್ಲ. ಒಪ್ಪಂದದಿಂದ ವಿಮುಖ ಆದದ್ದೂ ಇಲ್ಲ. ಆ ಜಾಹೀರಾತು ಮಾತ್ರ ಐಪಿಎಲ್ ಪಂದ್ಯಗಳು ಮುಗಿಯುವ ತನಕ ಓವರಗಳ ನಡುವೆ ಟಿವಿ ಪರದೆಯಲ್ಲಿ ಹೊಗೆ ಬಿಡುತ್ತಾ ಇರುತ್ತದೆ ಮತ್ತು ಯುವಜನತೆಯನ್ನು ದಾರಿ ತಪ್ಪಿಸುತ್ತಾ ಇರುತ್ತದೆ. ಸಿನೆಮಾಗಳಲ್ಲಿ ಇಂತಹ ದೃಶ್ಯಗಳ ಬಗ್ಗೆ ಸೆನ್ಸಾರ್ ಮಂಡಳಿ ಬಿಗಿ ಧೋರಣೆ ತೋರಿಸಬೇಕು, ಜಾಹೀರಾತುಗಳಿಗೂ ಸೆನ್ಸಾರ್ ಇರಬೇಕು ಎಂದು ನನ್ನ ಭಾವನೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಆತ್ಮಾಹುತಿ ದಾಳಿಗೆ ಎದೆಕೊಟ್ಟು ಆಕೆ ಬಂಡೆಯಂತೆ ನಿಂತಿದ್ದರು!

Continue Reading
Advertisement
Patanjali Case
ದೇಶ3 mins ago

Patanjali Case: ಪತಂಜಲಿ ಕೇಸ್‌; ಜಾಹೀರಾತು ಮೂಲಕ ಕ್ಷಮೆ ಕೋರಿದ ಬಾಬಾ ರಾಮ್‌ದೇವ್‌

Road accident in Ankola The biker was burnt to death
ಕ್ರೈಂ4 mins ago

Road Accident: ಅಂಕೋಲಾದಲ್ಲಿ ಭೀಕರ ಅಪಘಾತ; ಬೈಕ್‌ ಸವಾರ ಸುಟ್ಟು ಕರಕಲು!

Sachin Tendulkar Net Worth Assets Owned
ಕ್ರಿಕೆಟ್24 mins ago

Sachin Birthday: ಸಚಿನ್ ತೆಂಡೂಲ್ಕರ್ ಬಳಿ ಇರುವ ಅತ್ಯಂತ ದುಬಾರಿ ಆಸ್ತಿಗಳಿವು!

gold model
ಚಿನ್ನದ ದರ25 mins ago

Gold Rate Today: ಚಿನ್ನದ ಬೆಲೆ ಇಂದು ತುಸು ಏರಿಕೆ; 22K, 24K ಬಂಗಾರದ ಬೆಲೆಗಳನ್ನು ಇಲ್ಲಿ ಖಚಿತಪಡಿಸಿಕೊಳ್ಳಿ

Lok Sabha Election 2024 ID raid in Bengaluru South Lok Sabha constituency 21.15 crore Gold ornaments seized in 2 days
ಕರ್ನಾಟಕ39 mins ago

Lok Sabha Election 2024: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಐಡಿ ರೇಡ್;‌ 2 ದಿನದಲ್ಲಿ 21.15 ಕೋಟಿ ರೂ. ಚಿನ್ನಾಭರಣ ವಶ!

Train Ticket Cancellation
ದೇಶ49 mins ago

Train Ticket Cancellation: ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಆರ್‌ಎಸಿ ಟಿಕೆಟ್‌ ರದ್ದು ಪಡಿಸಿದರೆ ಇನ್ನು ಮುಂದೆ ಕೇವಲ 60 ರೂ. ಕಡಿತ

sam pitroda narendra modi
ಪ್ರಮುಖ ಸುದ್ದಿ55 mins ago

Wealth Redistribution: ಸಂಪತ್ತು ಮರು ಹಂಚಿಕೆ ವಿವಾದದ ಬೆಂಕಿಗೆ ತುಪ್ಪ ಸುರಿದ ಸ್ಯಾಮ್ ಪಿತ್ರೊಡಾ; ಕಾಂಗ್ರೆಸ್‌ಗೆ ಫಜೀತಿ!

Rajkumar Birth Anniversary Dodmane family visited Rajkumar Samadhi
ಸಿನಿಮಾ1 hour ago

Rajkumar Birth Anniversary: ರಾಜ್ ಕುಮಾರ್ ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬ

Zero Shadow Day
ವಿಜ್ಞಾನ2 hours ago

Zero Shadow Day: ಇಂದು ಬೆಂಗಳೂರಿನಲ್ಲಿ ನೆರಳೇ ಮೂಡುವುದಿಲ್ಲ; ಅದ್ಯಾಕೆ? ಏನಿದು ʼಶೂನ್ಯ ನೆರಳಿನ ದಿನʼ ?

Karan Johar receives Director of the Year award from Vice President of India
ಬಾಲಿವುಡ್2 hours ago

Karan Johar: ಉಪ ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದ ಕರಣ್ ಜೋಹರ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ8 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌