ರಾಜ ಮಾರ್ಗ ಅಂಕಣ : ಶೋಕ ಗೀತೆಗಳ ಸಾಮ್ರಾಟ ಮುಕೇಶ್ 100ರ ನೆನಪು; ಅದು ನೋವಿನಲ್ಲಿ ಅದ್ದಿ ತೆಗೆದ ಧ್ವನಿ Vistara News

ಅಂಕಣ

ರಾಜ ಮಾರ್ಗ ಅಂಕಣ : ಶೋಕ ಗೀತೆಗಳ ಸಾಮ್ರಾಟ ಮುಕೇಶ್ 100ರ ನೆನಪು; ಅದು ನೋವಿನಲ್ಲಿ ಅದ್ದಿ ತೆಗೆದ ಧ್ವನಿ

ರಾಜ ಮಾರ್ಗ ಅಂಕಣ : ಶೋಕ ಗೀತೆಗಳ ಸಾಮ್ರಾಟ ಮುಕೇಶ್‌ ಅವರ ಒಂದೊಂದು ಹಾಡು ಕೂಡಾ ಮಾಸ್ಟರ್‌ ಪೀಸ್‌. ನೋವಿನಲ್ಲಿದ್ದಾಗ ಈ ಹಾಡುಗಳನ್ನು ಕೇಳಿದಾಗ ಕಣ್ಣೀರು ಇಳಿಯಲೇಬೇಕು. ಅಂತ ಅಮರ ಗಾಯಕ ಇದ್ದಿದ್ದರೆ ಈಗ 100 ವರ್ಷ ಆಗುತ್ತಿತ್ತು.

VISTARANEWS.COM


on

singer Mukesh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
RAJAMARGA

ಅವರು ಬದುಕಿದ್ದರೆ ಮೊನ್ನೆ ಜುಲೈ22ಕ್ಕೆ ನೂರು ವರ್ಷಗಳು ತುಂಬಿದ ಸಂಭ್ರಮವು ಇರುತ್ತಿತ್ತು! ಇಂದು ಅಮರ ಗಾಯಕ ಮುಕೇಶ್ (Singer Mukesh) ನಮ್ಮೊಂದಿಗಿಲ್ಲ! ಆದರೆ ಅವರು ಹಾಡಿರುವ 1300 ಮಾಧುರ್ಯದ ಹಾಡುಗಳಿವೆ! ಸಾವಿಲ್ಲದ ಹಾಡುಗಳನ್ನು ಮುಕೇಶ್ ಬಾಲಿವುಡ್ ಜಗತ್ತಿನಲ್ಲಿ ಹಾಡಿ ಸೂತಕದ ಛಾಯೆ ಮೂಡಿಸಿ ಹೊರಟೇ ಹೋದರು (ರಾಜ ಮಾರ್ಗ ಅಂಕಣ)!

ದಿಲ್ ಜಲ್ತಾ ಹೈ ತೋ ಜಲನೇ ದೋ

‘ದಿಲ್ ಜಲ್ತಾ ಹೆ ತೋ’ ಎಂದು ನೋವಿನಲ್ಲಿ ಹಾಡುತ್ತ ನಮ್ಮ ದಿಲ್ ತೊಡಕರ್ ಆತ ಹೊರಟು ಹೋಗಿ 46 ವರ್ಷಗಳೇ ಕಳೆದುಹೋದವು! ಆದ್ರೂ ನಾವು ‘ಜಾನೆ ಕಹಾಂ ಗಯೇ ಓ ದಿನ್’ (Jane kahan Gaye wo din) ಎಂದು ಹಾಡುತ್ತ, ‘ಕಭಿ ಕಭಿ ಮೇರೆ ದಿಲ್ ಮೆ’ (Kabhi Kabhi Mere din me khayal Aata hai) ಎಂದು ಗುನುಗುತ್ತ ಅವನಿಗೆ ಶೃದ್ಧಾಂಜಲಿ ಸಮರ್ಪಣೆ ಮಾಡುತ್ತಾ ಇದ್ದೇವೆ. ಬಾಲಿವುಡ್ಡಿಗೆ ಇನ್ನೊಬ್ಬ ಮುಕೇಶ್ ಮತ್ತೆ ಹುಟ್ಟಿ ಬರಲಿ ಎಂಬ ಹಾರೈಕೆಯೊಂದಿಗೆ!

ಆವಾರಾ ಹೂಂ…ಆವಾರಾ ಹೂಂ!

ಅವರ ಪೂರ್ತಿ ಹೆಸರು ಮುಕೇಶ್ ಚಂದ್ ಮಾಥುರ್. ಹುಟ್ಟಿದ್ದು ದೆಹಲಿ. ಓದಿರುವುದು ಎಸ್ಸೆಸ್ಸೆಲ್ಸಿ. ಉದ್ಯೋಗ ಮಾಡಿದ್ದು ಲೋಕೋಪಯೋಗಿ ಇಲಾಖೆಯಲ್ಲಿ. ಅವನ ಅಕ್ಕ ಸುಂದರ ಪ್ಯಾರಿಗೆ ಸಂಗೀತ ಕಲಿಸಲು ಗುರುಗಳು ಪ್ರತೀ ದಿನ ಮನೆಗೆ ಬಂದಾಗ ಪಕ್ಕದ ಕೋಣೆಯಲ್ಲಿ ಹಾಡು ಗುನುಗುತ್ತ ಕಲಿತವರು ಮುಕೇಶ್. ಅಕ್ಕನ ಮದುವೆಯ ರಸಮಂಜರಿಯ ವೇದಿಕೆಯಲ್ಲಿ ಆತ ಹಾಡುವಾಗ ಕೇಳಿದ್ದ ಹಿಂದಿಯ ಖ್ಯಾತ ನಟ ಮೋತಿಲಾಲ್ ಅವನಿಗೆ ಹೇಳಿದ್ದು ‘ನೀನು ಇರಬೇಕಾದ್ದು ಇಲ್ಲಿ ಅಲ್ಲ! ನಡಿ ಮುಂಬೈಗೆ!’

ಮುಂಬೈಗೆ ಕರೆದುಕೊಂಡು ಬಂದ ಮೋತಿಲಾಲ್ ಅವರು ಮುಕೇಶ್‌ ಸಂಗೀತ ಕಲಿಕೆಗೂ ಅವಕಾಶ ಮಾಡಿಕೊಟ್ಟರು. ಅದರ ನಡುವೆ ಎರಡು ಸಿನಿಮಾದಲ್ಲಿ ಹೀರೋ ಆಗಿ ಅಭಿನಯ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದ ಮುಖೇಶ್! ಸಿನಿಮಾ ಓಡಲಿಲ್ಲ. ಅವನಿಗೆ ತಕ್ಷಣ ಗೊತ್ತಾಯಿತು, ಇದು ನನ್ನ ಕ್ಷೇತ್ರ ಅಲ್ಲ!

ಮತ್ತೆ ಅವಕಾಶಗಳನ್ನು ಹುಡುಕುತ್ತ ಸ್ಟುಡಿಯೋಗಳಿಗೆ ಅಲೆದಾಟ ತಪ್ಪಲಿಲ್ಲ. ಅನಿಲ್ ಬಿಸ್ವಾಸ್ ಕಂಪೋಸ್ ಮಾಡಿದ ‘ಪೇಹ್ಲಿ ನಜರ್’ ಸಿನಿಮಾದ ಸ್ಮರಣೀಯ ಹಾಡು ‘ದಿಲ್ ಜಲ್ತಾ ಹೈ ತೋ ಜಲನೇ ದೋ’ ಮುಕೇಶ್ ಹಾಡಿದ್ದೇ ಹಾಡಿದ್ದು, ಬಂಪರ್ ಹೊಡೆಯಿತು! ಆ ಹಾಡನ್ನು ಕೇಳಿದ ಆಗಿನ ಲೆಜೆಂಡ್ ಸಿಂಗರ್ ಸೈಗಲ್ ಹೇಳಿದರಂತೆ,
‘ಈ ಹಾಡು ನಾನೇ ಹಾಡಿದ್ದಲ್ಲವಾ! ಯಾವಾಗ ಹಾಡಿದ್ದು ಎಂದು ಮರೆತುಹೋಗಿದೆ!’

ಆಗ ಅವರಿಗೆ ತಾನು ಅರಿವಿಲ್ಲದೆ ಸೈಗಲ್ ಅವರ ಅನುಕರಣೆಯನ್ನು ಮಾಡುತ್ತಿರುವೆ ಎಂದು ಅರ್ಥ ಆಗಿತ್ತು!

bollywood singer mukesh

ಮುಕೇಶ್‌ಗೆ ಒಲಿದ ಗುರು ನೌಶಾದ್

ಅನುಕರಣೆಯಿಂದ ಹೊರಬಂದು ಅವನದ್ದೇ ವಾಯ್ಸ್ ಡೆವಲಪ್ ಮಾಡಲು ತರಬೇತಿ ನೀಡಿದವರು ನೌಶಾದ್ ಸಾಬ್. ಅವರನ್ನು ಮುಕೇಶ್ ಕೊನೆತನಕ ಮರೆಯಲಿಲ್ಲ. ಸಂಗೀತ ಕ್ಷೇತ್ರದಲ್ಲಿ ತಾನು ಮಾಡಿದ ಅಷ್ಟೂ ಸಾಧನೆಯನ್ನು ತನ್ನ ಗುರುವಿಗೆ ಸಮರ್ಪಣೆ ಮಾಡಿದ್ದಾರೆ ಮುಕೇಶ್.

ಚಂಚಲ್ ಶೀತಲ್ ಸರಲಾ..!

ಬಾಲಿವುಡ್‌ನಲ್ಲಿ ಗಟ್ಟಿಯಾಗಿ ಕಾಲು ಊರುವ ಮೊದಲೇ ಆತ ಪ್ರೀತಿಯ ಬಲೆಗೆ ಬಿದ್ದಾಗಿತ್ತು. ಅವಳ ಹೆಸರು ಸರಲಾ. ಕೋಟ್ಯಾಧಿಪತಿ ಅಪ್ಪನ ಪ್ರೀತಿಯ ಒಬ್ಬಳೇ ಮಗಳು. ಇವನೋ ‘ಮಾನಾ ಆಪ್ನಿ ಜೇಬ್ ಸೆ ಫಕೀರ್ ಹೆ ‘ಎಂದು ಹಾಡುತ್ತಿದ್ದ ಐಡೆಂಟಿಟಿ ಇಲ್ಲದ ಹಿನ್ನೆಲೆ ಗಾಯಕ! ‘ಮೈನಾ ಭೂಲೂಂಗಾ’ ಎಂದು ಹಾಡುತ್ತ ಮುಖೇಶ್ ಅವಳಿಗೆ ಮೋಡಿಯನ್ನು ಮಾಡಿದ್ದ! ‘ ಚಂಚಲ ಶೀತಲ್ ‘ ಸರಲಾ ಅವನನ್ನು ಬಿಟ್ಟಿರಲು ಆಗದೇ ಒಂದು ದಿನ ‘ಭಾಗ್ ಚಲೇ’ ಎಂದಳು!

Mukesh with Rajkapoor
ರಾಜ್‌ ಕಪೂರ್‌ ಅವರ ನಟನೆಗೆ ಮುಕೇಶ್‌ ಧ್ವನಿ Deadly Combination

ಸಾವನ್ ಕಾ ಮಹೀನಾ..

ಸರಳವಾಗಿ ಒಂದು ‘ಸಾವನ್‌ ಕಾ ಮಹೀನಾ’ ಅವರು ಒಂದು ದೇವಸ್ಥಾನದಲ್ಲಿ ಮದುವೆ ಆದರು. ಕೊನೆಯವರೆಗೂ ಪ್ರೀತಿಯಿಂದ ಬಾಳಿದರು.

1945-1978ರ ಅವಧಿಯಲ್ಲಿ ಅವನು ಹಾಡಿದ್ದು 1300 ಅಮರ ಹಾಡುಗಳನ್ನು! ಅವನ ಸಮಕಾಲೀನ ಗಾಯಕರಾದ ರಫೀ ಮತ್ತು ಕಿಶೋರ್ ಕುಮಾರ್ ಅವರಿಗೆ ಹೋಲಿಸಿದರೆ ಈ ಸಂಖ್ಯೆ ತುಂಬಾ ಕಡಿಮೆ. ಆದರೆ ಮುಕೇಶ್ ಹಾಡಿದ ಹಾಡುಗಳು ಎಲ್ಲವೂ ಸೂಪರ್ ಹಿಟ್. ಮಾಧುರ್ಯದ ಪರಾಕಾಷ್ಠೆ! ಅವನ ಧ್ವನಿಯಲ್ಲಿ ರಫಿಯ ವೈವಿಧ್ಯತೆ ಇರಲಿಲ್ಲ. ಕಿಶೋರ್ ಕುಮಾರನ ಕಶಿಷ್ ಇರಲಿಲ್ಲ. ಆದರೆ ಒಂದು ಹಾಂಟಿಂಗ್ ಮೆಲಡಿಯು ಖಂಡಿತವಾಗಿ ಇತ್ತು. ಅದರಲ್ಲಿ ಕೂಡ ಭಗ್ನಪ್ರೇಮಿಗಳಿಗೆ ಒಂದಿಷ್ಟು ಸಾಂತ್ವನ ನೀಡುವ ವಿಷಾದ ಇತ್ತು. ಅದಕ್ಕೆ ಅವನನ್ನು ‘ಶೋಕ ಗೀತೆಗಳ ಸಾಮ್ರಾಟ’ ಎಂದು ಜನ ಕರೆದರು.

ನೋವಿನಲ್ಲಿ ಅದ್ದಿ ತೆಗೆದ ಆ ಧ್ವನಿ ಬೇರೆ ಯಾವ ಗಾಯಕನಲ್ಲೂ ಇರಲಿಲ್ಲ! ಶಂಕರ್ ಜೈಕಿಷನ್, ಕಲ್ಯಾಣ್ ಜಿ ಆನಂದ ಜಿ, ಸಚಿನ್ ದೇವ್ ಬರ್ಮನ್, ಖಯ್ಯಾಂ, ಸಲೀಲ್ ಚೌಧರಿ ಮೊದಲಾದ ಸಂಗೀತ ನಿರ್ದೇಶಕರು ಮುಖೇಶನ ಒಳಗಿದ್ದ ಅದ್ಭುತ ಗಾಯಕನನ್ನು ಕಡೆದು ನಿಲ್ಲಿಸಿದರು. ಆಗಿನ ಕಾಲದಲ್ಲಿ ಸ್ಟುಡಿಯೋ ವ್ಯವಸ್ಥೆ ಹೇಗಿತ್ತು ಎಂದರೆ ಎಲ್ಲಾ ವಾದ್ಯಗಳ ಕಲಾವಿದರು ಸಾಕಷ್ಟು ರಿಹರ್ಸಲ್ ಮಾಡಿ ಲೈವ್ ಆಗಿ ನುಡಿಸಬೇಕಾಗಿತ್ತು. ಹಿನ್ನೆಲೆ ಗಾಯಕರು ರೀ ಟೇಕ್ ಮಾಡಲು ಅವಕಾಶ ಇಲ್ಲದೆ ಒಂದೇ ಉಸಿರಲ್ಲಿ ಹಾಡಿ ಮುಗಿಸಬೇಕು. ಮುಖೇಶ್ ಇಂತಹ ಸವಾಲನ್ನು ಗೆದ್ದು ಬಂದಿದ್ದವರು!

mukesh and Rajkapoor

ಮುಖೇಶ್ ನನ್ನ ಆತ್ಮ ಎಂದರು ರಾಜಕಪೂರ್

ಹಿಂದಿ ಸಿನಿಮಾ ರಂಗದ ಮಹಾನಟ, ಶೋಮ್ಯಾನ್ ರಾಜ್ ಕಪೂರ್ ಅವರ ವ್ಯಕ್ತಿತ್ವಕ್ಕೆ ಮುಕೇಶ್ ಧ್ವನಿಯು ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುತ್ತಿತ್ತು. ಅದರಿಂದ ಹುಟ್ಟಿ ಬಂದದ್ದು ಎವರ್ ಗ್ರೀನ್ ಆದ ನೂರಾರು ಹಾಡುಗಳು! ಆವಾರಾ, ಬರ್ಸಾತ್, ಶ್ರೀ 420, ಸಂಗಂ, ಮೇರಾ ನಾಮ್ ಜೋಕರ್, ಅನಾರಿ, ಆಗ್, ಜಿಸ್ ದೇಶ್ ಮೆ ಗಂಗಾ ಬಹತಿ ಹೈ…… ಈ ಸಿನಿಮಾಗಳ ಹಾಡುಗಳನ್ನು ಕೇಳಿ ನೋಡಿ. ಅಂತಹ ಹಾಡುಗಳಿಗೆ ಸಾವಿಲ್ಲ. ಅದಕ್ಕೆ ಮುಂದೆ ಮುಕೇಶ್ ನಿಧನ ಆದಾಗ ರಾಜಕಪೂರ್ ಹೇಳಿದ್ದು – ನಾನು ನನ್ನ ಆತ್ಮವನ್ನು ಕಳೆದುಕೊಂಡೆ!

ಕಯಿ ಬಾರ್ ಯೂ ಹಿ ದೇಖಾ ಹೈ..

ಮುಖೇಶ್‌ಗೆ ‘ರಜನಿ ಗಂಧಾ’ ಸಿನಿಮಾದ ಹಾಡಿಗೆ ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿಯು ದೊರೆಯಿತು (ಕಯಿ ಬಾರ್ ಯೂ ಹಿ ದೇಖಾ ಹೈ). ನಾಲ್ಕು ಫಿಲ್ಮ್ ಫೇರ್ ಪ್ರಶಸ್ತಿ, ಬೆಂಗಾಲಿ ಪತ್ರಕರ್ತರ ಸಂಘದ ಮೂರು ಪ್ರಶಸ್ತಿಗಳು ಅವರಿಗೆ ದೊರೆತಿವೆ. ಇದೆಲ್ಲಕ್ಕಿಂತ ಹೆಚ್ಚಾಗಿ ಅವರ ಹಾಡುಗಳನ್ನು ಈಗಲೂ ಕೇಳುವ, ಆಸ್ವಾದಿಸುವ, ಫೀಲ್ ಮಾಡಿಕೊಳ್ಳುವ ಬಹು ದೊಡ್ಡ ಅಭಿಮಾನಿಗಳ ಪ್ರೀತಿ ದೊರೆತಿತು. ಮುಖೇಶನಿಗೆ ವಿದೇಶದಲ್ಲಿ ಕೂಡ ಬಹಳ ದೊಡ್ಡ ಸಂಖ್ಯೆಯ ಅಭಿಮಾನಿಗಳ ಬಳಗ ಇದೆ.

‘ದಿಲ್ ಜಲ್ತಾ ಹೈ’ ಮುಖೇಶ್ ಅವರ ಮೊದಲ ಮತ್ತು ಕೊನೆಯ ಹಾಡಾಯಿತು!

1976 ಆಗಸ್ಟ್ 27ರಂದು ಅಮೆರಿಕಾದ ಒಂದು ಆರ್ಕೆಸ್ಟ್ರಾ ಕಾರ್ಯಕ್ರಮಕ್ಕೆ ಹಾಡಲು ಹೋಗಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ಮುಕೇಶ್ ಉಸಿರು ನಿಂತಿತು. ಅಲ್ಲಿ ಕೂಡಾ ಆತ ಹಾಡಿದ ಕೊನೆಯ ಹಾಡು – ದಿಲ್ ಜಲ್ತಾ ಹೈ ತೋ ಜಲನೆ ದೋ! ನೆನಪು ಮಾಡಿಕೊಳ್ಳಿ, ಅದು ಮುಕೇಶ್ ಹಾಡಿದ ಮೊದಲ ಹಾಡು ಕೂಡ ಆಗಿತ್ತು! ಆಗ ಅವರಿಗೆ ಕೇವಲ 53 ವರ್ಷ!

ಅವರ ಹಾಡುಗಳನ್ನು ಆರಾಧಿಸುತ್ತಾ ಅವುಗಳನ್ನು ಕಾಲೇಜಿನ ವೇದಿಕೆಯಲ್ಲಿ, ಸ್ಪರ್ಧೆಗಳಲ್ಲಿ ಆರ್ದ್ರವಾಗಿ ಹಾಡುತ್ತ ಇದ್ದ ನನ್ನ ಹಾಗೆ ಇರುವ ಕೋಟಿ ಕೋಟಿ ಅಭಿಮಾನಿಗಳ ಮೇಲೆ ಆತ ದಟ್ಟವಾದ ಪ್ರಭಾವವನ್ನು ಬಿಟ್ಟು ಹೋಗಿದ್ದಾನೆ. ಆತನ ಟಾಪ್ 12 ಹಾಡುಗಳನ್ನು ಪಟ್ಟಿ ಮಾಡಿ ಇಟ್ಟು ಅವನಿಗೆ ಶ್ರದ್ಧಾಂಜಲಿ ಕೊಡುತ್ತಿರುವೆ. ಅವನ ಸಾವಿರದ ಹಾಡುಗಳಿಗೆ ಕಿವಿ ಆಗಿ ಆಯ್ತಾ!

ಈ ಹಾಡುಗಳನ್ನೊಮ್ಮೆ ಕೇಳಿ

1) ಹೊಂಟೋ ಪೆ ಸಚ್ಚಾಯಿ ರಹತಿ ಹೈ (ಜೀಸ್ ದೇಶ್ ಮೇ ಗಂಗಾ ಬೆಹತೀ ಹೈ)
2) ದೋಸ್ತ್ ದೋಸ್ತ್ ನಾ ರಹಾ (ಸಂಗಮ್)
3) ಸಾವನ್ ಕಾ ಮಹೀನಾ ಪವನ್ ಕರ್‌ ಶೋರ್ (ಮಿಲನ್)
4) ಬಸ್ ಏಹೀ ಅಪರಾಧ್ (ಪೆಹಚಾನ್)
5) ಜಾನೆ ಕಹಾಂ ಗಯೇ ಓ ದಿನ್ (ಮೇರಾ ನಾಮ್ ಜೋಕರ್)
6) ಕಹೀನ್ ದೂರ್ ಜಬ್ ದಿನ್ ಧಲ್ ಜಾಯೆ ( ಆನಂದ್)
7) ಮೈ ನಾ ಭೂಲೂಂಗಾ (ರೋಟಿ ಕಪಡಾ ಔರ್ ಮಕಾನ್)
8) ಏಕ್ ದಿನ್ ಭಿಕ್ ಜಾಯೆಗಾ (ಧರಂ ಕರಂ)
9) ಕಭೀ ಕಭೀ ಮೇರೆ ದಿಲ್ ಮೆ (ಕಭೀ ಕಭಿ)
10) ಮೇರಾ ಜೂತಾ ಹೈ ಜಪಾನಿ (ಆವಾರ)
11) ತಾಲ್ ಮಿಲ್‌ ನದೀ ಕೆ ಜಲ್ ಮೆ (ಅನೋಖಿ ರಾತ್)
12) ದಿಲ್ ತಡಪ್ ತಡಪ್ ಕೆ (ಮಧುಮತಿ).

ಸಹಸ್ರಮಾನದ ಮುಕೇಶ್ ಧ್ವನಿಗೆ ಕೋಟಿ ಪ್ರಣಾಮಗಳು

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಮಾಸ್ಟರ್‌ ಆಫ್‌ ಸೆರೆಮೊನಿ ಎಂಬ ಚತುರ ಗಾರುಡಿಗ ; ನಿರೂಪಣೆ ಅಂದುಕೊಂಡಷ್ಟು ಸುಲಭ ಅಲ್ಲ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

Raja Marga Column : ಕನ್ನಡ ಶಾಲೆಗಳೆಂಬ ಭೂಲೋಕದ ಸ್ವರ್ಗಗಳು!

Raja Marga Column: ಕನ್ನಡ ಶಾಲೆಗಳು ಅಂದರೆ ನಾಲ್ಕು ಗೋಡೆಗಳ ಕಟ್ಟಡ ಮಾತ್ರ ಅಲ್ಲ, ಅದು ಇಮೋಷನ್! ಹಿಂದೆ ಭೂಮಿಯ ಮೇಲಿನ ಸ್ವರ್ಗದಂತಿದ್ದ ಈ ಶಾಲೆಗಳು ಈಗ ಹೇಗಿವೆ ಎನ್ನುವುದನ್ನು ನೀವೇ ಕಲ್ಪಿಸಿಕೊಳ್ಳಿ.

VISTARANEWS.COM


on

Kannada School Children
Koo
RAJAMARGA Rajendra Bhat

ನಾನು ಪ್ರಾಥಮಿಕ ಶಿಕ್ಷಣ (Primary Education) ಪಡೆದದ್ದು ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ (Kannada Medium School) ಅನ್ನೋದನ್ನು ಮೊದಲಾಗಿ ಹೆಮ್ಮೆಯಿಂದ ಹೇಳುತ್ತೇನೆ. ನಾನು ಓದಿದ್ದು ಕಾರ್ಕಳ ತಾಲೂಕಿನ ಕಾಬೆಟ್ಟು ಶಾಲೆಯಲ್ಲಿ. ನಾನು ಕಲಿಯುವಾಗ (1970-77) ನನ್ನ ಪ್ರಾಥಮಿಕ ಶಾಲೆಯಲ್ಲಿ (Primary School) 500+ ಮಕ್ಕಳು ಇದ್ದರು. ಒಂದು ಡಜನ್ ಅತ್ಯದ್ಭುತವಾದ ಶಿಕ್ಷಕರು ಇದ್ದರು. ಶಾಲೆಯಲ್ಲಿ ಎಲ್ಲ ಸಮುದಾಯದ ಮಕ್ಕಳು ಇದ್ದರೂ ಎಲ್ಲರೂ ಕನ್ನಡದಲ್ಲಿ ಮಾತಾಡುತ್ತಿದ್ದರು. ಈಗ ಸರಕಾರವು ಶಾಲೆಯಲ್ಲಿ ಕೊಡುವ ಯಾವ ಉಚಿತ ಸೌಲಭ್ಯವೂ ಆಗ ಇರಲಿಲ್ಲ. ಓದುವ, ಬರೆಯುವ ಪುಸ್ತಕಗಳು, ಯೂನಿಫಾರ್ಮ್, ಮಧ್ಯಾಹ್ನದ ಬಿಸಿ ಊಟ, ಬ್ಯಾಗ್ ಯಾವುದೂ ಉಚಿತ ಇರಲಿಲ್ಲ. ಆದರೆ ಅತ್ಯುತ್ತಮ ಶಿಕ್ಷಕರು ಇದ್ದ ಕಾರಣ ಆ ಉಚಿತಗಳ ಬಗ್ಗೆ ಯಾರೂ ಆಸೆ ಪಡುತ್ತಿರಲಿಲ್ಲ. (Raja Marga Column)

ಜಾನೇ ಕಹಾನ್ ಗಯೇ ಓ ದಿನ್..

ಮಧ್ಯಾಹ್ನ ಎಲ್ಲರೂ ಮನೆಯಿಂದ ಬುತ್ತಿ ಊಟ ತೆಗೆದುಕೊಂಡು ಬರುವುದು ಅಭ್ಯಾಸ. ಹತ್ತಿರ ಮನೆ ಇದ್ದವರು ಓಡಿ ಹೋಗಿ ಮನೆಯಲ್ಲಿ ಊಟ ಮಾಡಿ ಬರುತ್ತಿದ್ದರು. ಒಬ್ಬರ ಬುತ್ತಿಯಲ್ಲಿ ಒಬ್ಬರು ಕೈ ಹಾಕಿ ಕಿತ್ತಾಡಿ ತಿಂದರೆ ಆ ಊಟ ಜೀರ್ಣ ಆಗುತ್ತಿತ್ತು. ನಮ್ಮ ಶಾಲೆಯ ಒಬ್ಬೊಬ್ಬ ಶಿಕ್ಷಕರೂ ಒಂದೊಂದು ಮೌಲ್ಯವೇ ಆಗಿದ್ದರು. ಮಧ್ಯಾಹ್ನ ಊಟ ತಾರದ ಮಕ್ಕಳಿಗೆ ಟೀಚರ್ ತಮ್ಮ ಬುತ್ತಿಯಿಂದ ಕೈ ತುತ್ತು ಕೊಟ್ಟು ಊಟ ಮಾಡಿಸುತ್ತಿದ್ದರು! ಶಾಲೆಯಲ್ಲಿ ಪ್ರತೀ ಶುಕ್ರವಾರ ಭಜನೆ ಇತ್ತು. ಎಲ್ಲ ಸಮುದಾಯದ ಮಕ್ಕಳೂ ಭಜನೆಗೆ ಭಕ್ತಿಯಿಂದ ಕುಳಿತುಕೊಂಡು ಭಜನೆ ಹಾಡುತಿದ್ದರು. ವರ್ಷಕ್ಕೊಮ್ಮೆ ಶಾರದಾ ಪೂಜೆ ಇದ್ದೇ ಇರುತ್ತಿತ್ತು.

ಆಲದ ಮರದ ಬುಡದ ಬಯಲು ತರಗತಿಗಳು

ದಿನಕ್ಕೊಮ್ಮೆ ಶಿಕ್ಷಕರು ಮಕ್ಕಳನ್ನು ಶಾಲೆಯ ಹೊರಗಿರುವ ಅಶ್ವತ್ಥ ವೃಕ್ಷದ ಬುಡದಲ್ಲಿ ಇರುವ ಕಟ್ಟೆಯ ಮೇಲೆ ಕೂರಿಸಿ ಪಾಠವನ್ನು ಮಾಡುತ್ತಿದ್ದರು. ಅದು ವಿದ್ಯಾರ್ಥಿಗಳಿಗೆ ನಿಜವಾದ ಜೀವನ ಪಾಠ ಆಗಿತ್ತು. ಶಿಕ್ಷಣ ಅನ್ನುವುದು ಆಗ ಪರೀಕ್ಷೆಗೆ ತಯಾರಿ ಆಗಿರಲಿಲ್ಲ. ಅದು ಬದುಕಿಗೇ ಸಿದ್ಧತೆ ಆಗಿರುತ್ತಿತ್ತು. ಶಿಕ್ಷಕರು ತಪ್ಪಿಯೂ ತರಗತಿಯಲ್ಲಿ ಪರೀಕ್ಷೆಗಳ ಬಗ್ಗೆ ಮಾತಾಡುತ್ತಿರಲಿಲ್ಲ. ಪರೀಕ್ಷೆಯಲ್ಲಿ ಎಷ್ಟು ಅಂಕ ಬಂದರೂ ಹೆತ್ತವರು ಪ್ರಗತಿ ಪತ್ರದಲ್ಲಿ ಕಣ್ಣು ಮುಚ್ಚಿ ಸಹಿ ಮಾಡುತ್ತಿದ್ದರು. ಶಾಲೆಯಲ್ಲಿ ಅವನು ಫಸ್ಟ್, ಇವನು ಸೆಕೆಂಡ್ ಎಂದು ಯಾರೂ ಮಾತಾಡಿದ್ದು ನನಗೆ ಗೊತ್ತೇ ಇರಲಿಲ್ಲ.

Government School Children

ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕೋತ್ಸವ ಅದು ಅದ್ಭುತ. ಅದು ಇಡೀ ಊರಿನ ಉತ್ಸವ ಆಗಿತ್ತು. ರಾತ್ರಿ ಇಡೀ ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳು. ಪೂರ್ವ ವಿದ್ಯಾರ್ಥಿಗಳ ಸಾಮಾಜಿಕ ನಾಟಕ. ಅದಕ್ಕಾಗಿ ಕನಿಷ್ಠ ಒಂದೂವರೆ ತಿಂಗಳ ರಿಹರ್ಸಲ್ ಇದ್ದೇ ಇರುತ್ತಿತ್ತು. ಏಳು ವರ್ಷಗಳ ಕಾಲ ಏಳು ಪಾತ್ರಗಳು ನಮ್ಮೊಳಗೆ ಇಳಿಯುತ್ತ ಹೋಗಿದ್ದವು. ಲವನಿಂದ ಆರಂಭ ಮಾಡಿ ಸತ್ಯ ಹರಿಶ್ಚಂದ್ರನವರೆಗೆ!

ಸ್ಪರ್ಧೆಯೇ ಇಲ್ಲದ ಮುಕ್ತವಾದ ಕಲಿಕೆಯ ವಾತಾವರಣ

ಒಬ್ಬ ಶಿಕ್ಷಕರೂ ಸಿಲೆಬಸ್ ಮುಗಿಸಲು ತೊಂದರೆ ಆಯ್ತು ಎಂದು ಗೊಣಗಿದ್ದು ನಮಗೆ ಗೊತ್ತೇ ಇಲ್ಲ! ಆದರೂ ಸಿಲೆಬಸ್ ಮುಗಿಯುತ್ತಿತ್ತು. ತರಗತಿಯಲ್ಲಿ ಫಸ್ಟ್ ಬರಬೇಕು ಎಂದು ಯಾವ ವಿದ್ಯಾರ್ಥಿಯೂ ರೇಸಿಗೆ ನಿಲ್ಲುತ್ತಿರಲಿಲ್ಲ. ವರ್ಷಕ್ಕೆ ನೂರಾರು ಸ್ಪರ್ಧೆಗಳು ನಡೆಯುತ್ತಿದ್ದವು. ಅಲ್ಲಿ ಕೂಡ ಭಾಗವಹಿಸುವುದೇ ಖುಷಿ. ಬಹುಮಾನದ ಬಗ್ಗೆ ಯಾರೂ ಯೋಚನೆ ಮಾಡಿದ್ದು ಇಲ್ಲ. ಶಾಲೆಗಳಲ್ಲಿ ಶ್ರೀಮಂತ ಮತ್ತು ಬಡವರ ಮಕ್ಕಳು ಎಲ್ಲರೂ ಇದ್ದರು. ಆದರೆ ಬೇಧ ಭಾವ ಇರಲಿಲ್ಲ. ಸಮಾನತೆಯೇ ಅಲ್ಲಿ ಮೂಲಮಂತ್ರ ಆಗಿತ್ತು.

Kannada School Children

ಶಾಲೆಗಳಲ್ಲಿ ಒಳ್ಳೆಯ ಕನ್ನಡ ಅಧ್ಯಾಪಕರು ಇದ್ದರು. ವಿದ್ಯಾರ್ಥಿಗಳು ದೇವರಾಣೆಗೂ ಯಾವುದನ್ನೂ ಬಾಯಿಪಾಠ ಮಾಡುತ್ತಿರಲಿಲ್ಲ. ಎಲ್ಲವನ್ನೂ ಶಿಕ್ಷಕರು ಅರ್ಥ ಮಾಡಿಸುತ್ತಿದ್ದರು. ಶಿಕ್ಷಕರೇ ಅಭಿನಯ ಮಾಡಿ ಪಾಠ ಮಾಡುವ ವ್ಯವಸ್ಥೆಯು ತುಂಬಾ ಚೆನ್ನಾಗಿತ್ತು. ಶಿಕ್ಷಕರ ಬಗ್ಗೆ ಗೌರವದ ಭಾವನೆ ಹೆಚ್ಚಿತ್ತು. ಶಿಕ್ಷಕರು ತರಗತಿಗೆ ಬರುವಾಗ ಬೆತ್ತವನ್ನು ತರುತ್ತಿದ್ದರು. ಆದರೆ ಹೊಡೆದದ್ದು ಕಡಿಮೆ. ಶಿಕ್ಷಕರು ಒಂದೆರಡು ಪೆಟ್ಟು ಕೊಟ್ಟರೂ ಹೆತ್ತವರು ಶಾಲೆಗೆ ಬಂದು ‘ಯಾಕೆ ಹೊಡೆದದ್ದು?’ ಎಂದು ಕೇಳುತ್ತಿರಲಿಲ್ಲ. ಶಿಕ್ಷಕರಿಗೆ ಹೆಚ್ಚು ದಾಖಲೆಗಳ ನಿರ್ವಹಣೆ ಇರಲಿಲ್ಲ. ತುಂಬಾ ಸುತ್ತೋಲೆ ಇರಲಿಲ್ಲ. ಇಲಾಖೆಗಳ ಟಾರ್ಗೆಟ್ ಇರಲಿಲ್ಲ. ಆದರೆ ವರ್ಷಕ್ಕೊಮ್ಮೆ ತಪಾಸಣೆ ಜೋರಿತ್ತು. ಶಿಕ್ಷಕರು ಆತಂಕ ಇಲ್ಲದೇ ನೆಮ್ಮದಿಯಿಂದ ಪಾಠ ಮಾಡುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಕರಿಗೆ ಶಾಲೆಯೇ ದೇವಸ್ಥಾನ ಆಗಿತ್ತು. ನನ್ನ ಅಮ್ಮ ಅದೇ ಶಾಲೆಯಲ್ಲಿ ಟೀಚರ್ ಆಗಿದ್ದರು. ಕೇವಲ 15 ದಿನ ಹೆರಿಗೆ ರಜೆ ಹಾಕಿ 16ನೆ ದಿನ ಶಾಲೆಗೆ ಬಂದು ಪಾಠ ಮಾಡಿದವರು ಅವರು!

ಶಾಲೆಗೆ ದೊಡ್ಡ ಕ್ರೀಡಾಂಗಣ

ಶಾಲೆಗೆ ದೊಡ್ಡ ಕ್ರೀಡಾಂಗಣ ಇತ್ತು. ದಿನಕ್ಕೊಂದು ಆಟದ ಪೀರಿಯಡ್ ಇರುತ್ತಿತ್ತು. ಪರೀಕ್ಷೆಗಳ ದಿನಗಳಲ್ಲಿ ಕೂಡ ಮಕ್ಕಳು ಆಟ ಆಡ್ತಾ ಇದ್ದರು. ಶಾಲೆಯಲ್ಲಿ ದೊಡ್ಡ ಗ್ರಂಥಾಲಯ, ತರಕಾರಿ ತೋಟ, ವಿಜ್ಞಾನ ಲ್ಯಾಬ್ ಇರುತ್ತಿತ್ತು. ಶಿಕ್ಷಕರು ತುಂಬಾ ಓದುತ್ತಿದ್ದರು. ಅದರಿಂದಾಗಿ ಸಹಜವಾಗಿ ಮಕ್ಕಳು ಓದುತ್ತಿದ್ದರು. ವಿದ್ಯಾರ್ಥಿಗಳು ಯಾವುದನ್ನೂ ಬಾಯಿಪಾಠ ಮಾಡುತ್ತಿರಲಿಲ್ಲ. ಮಕ್ಕಳಿಗೆ ಸ್ವಂತ ಉತ್ತರ ಬರೆಯುವ ಶಕ್ತಿಯನ್ನು ಶಿಕ್ಷಕರು ತುಂಬುತ್ತಿದ್ದರು.

Children playing at Government schools

ಆಗಿನ ಶಾಲೆಗಳಲ್ಲಿ ಪಾಸ್ ಮತ್ತು ಫೇಲ್ ಇರುತ್ತಿತ್ತು. ಫೇಲ್ ಆದರೆ, ಅಥವಾ ಮಾರ್ಕ್ ಕಡಿಮೆ ಬಂದರೆ ಒಬ್ಬ ಹುಡುಗನೂ ದುಃಖ ಪಡುತ್ತಿರಲಿಲ್ಲ. ಆತ್ಮಹತ್ಯೆಯ ಮಾತೇ ಇಲ್ಲ.

ಹೃದಯವಂತ ಕನ್ನಡ ಶಾಲೆಗಳು

ಶಾಲೆಗಳು ಆಗ ನಮಗೆ ಕೇವಲ ನಾಲ್ಕು ಗೋಡೆಗಳ ಕಟ್ಟಡ ಆಗಿರಲಿಲ್ಲ. ಅದೊಂದು ಇಮೋಷನ್ ಆಗಿತ್ತು! ಈಗಲೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದವರಿಗೆ ಅದು ಇಮೋಶನ್ ಆಗಿದೆ.

ಮಾಸಿದ ಗೋಡೆಗಳು, ಹರಿದು ಹೋದ ಚಲ್ಲಣ, ಕಿತ್ತುಹೋದ ಚಪ್ಪಲಿ, ಒಡೆದು ಹೋದ ಸ್ಲೇಟು, ಮುರಿದ ಕಡ್ಡಿಯ ಚೂರು….. ಇವ್ಯಾವುದೂ ಅಪಮಾನ ಎಂಬ ಭಾವನೆಯೇ ನಮಗೆ ಇರಲಿಲ್ಲ. ಶಿಕ್ಷಕರು ತಾರತಮ್ಯ ಮಾಡಿದ್ದು ನಮಗೆ ಗೊತ್ತೇ ಇರಲಿಲ್ಲ. ವಿದ್ಯಾರ್ಥಿಗಳು ಒಬ್ಬರಿಗೆ ಒಬ್ಬರು ಸಹಾಯ ಮಾಡುತ್ತಿದ್ದರು. ಹಂಚಿ ತಿನ್ನುವ ಬುದ್ಧಿ ಇತ್ತು. ಶಾಲೆಯಲ್ಲಿ ತರಕಾರಿ ಮತ್ತು ಹೂವಿನ ತೋಟವನ್ನು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸೇರಿ ಮಾಡಿದ್ದರು. ಮಕ್ಕಳಿಗೆ ಶಾಲೆಯ ಯಾವುದೇ ಕೆಲಸ ಮಾಡಲು ನಾಚಿಕೆ ಇರಲಿಲ್ಲ. ಹೆತ್ತವರು ಅದನ್ನು ಆಕ್ಷೇಪಣೆ ಮಾಡುತ್ತಲೇ ಇರಲಿಲ್ಲ.

Government Schools Children

ಶಾಲೆಯಲ್ಲಿ ಎಲ್ಲ ಮಕ್ಕಳೂ ಭಾಗವಹಿಸುವ ಅಸೆಂಬ್ಲಿ ದಿನವೂ ನಡೆಯುತ್ತಿತ್ತು. ‘ತಾಯಿ ಶಾರದೆ’ ಹಾಡಿನಿಂದ ಆರಂಭ. ನಾಡಗೀತೆ ಆಗ ಇರಲಿಲ್ಲ. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯ. ಅದರ ನಡುವೆ ವಾರ್ತೆಗಳು, ಚಿಂತನ, ಹುಟ್ಟುಹಬ್ಬದ ಶುಭಾಶಯ ವಿನಿಮಯ, ದಿನಕ್ಕೊಂದು ಶಿಕ್ಷಕರ 3-5 ನಿಮಿಷ ಭಾಷಣ. ವಿದ್ಯಾರ್ಥಿಗಳು ಬಿಸಿಲಿಗೆ ನಿಂತು ಇದನ್ನೆಲ್ಲ ಕೇಳುತ್ತಿದ್ದರು. ಅಸೆಂಬ್ಲಿ ಅಂದರೆ ಎಲ್ಲರಿಗೂ ಖುಷಿ. ಯಾಕೆಂದರೆ ಅಲ್ಲಿ ಎಲ್ಲ ತರಗತಿಯ ವಿದ್ಯಾರ್ಥಿಗಳು ಸೇರುತ್ತಿದ್ದರು. ಶಿಕ್ಷಕರು ಶಿಕ್ಷೆ ಕೊಡದಿದ್ದರೂ ಶಾಲೆಯಲ್ಲಿ ಸಹಜ ಶಿಸ್ತು ಇರುತ್ತಿತ್ತು. ಸ್ವಚ್ಛತೆಯ ಬಗ್ಗೆ ಜಾಗೃತಿ ಮಕ್ಕಳಲ್ಲಿ ತುಂಬಾ ಇತ್ತು.

ಆಗಲೂ ಶಾಲಾಮಟ್ಟದ ವಿದ್ಯಾರ್ಥಿ ಸರಕಾರ ಇರುತ್ತಿತ್ತು. ಚುನಾವಣೆ ನಡೆಯುತ್ತಿತ್ತು. ಆದರೆ ಯೋಗ್ಯರು ಆರಿಸಿ ಬರುತ್ತಿದ್ದರು. ಯಾವ ರಾಜಕೀಯ ಪಕ್ಷಗಳು ಶಾಲೆಯ ಕ್ಯಾಂಪಸ್ ಒಳಗೆ ಬರುತ್ತಿರಲಿಲ್ಲ. ಈಗಿನ ಪ್ರೋಟೋಕಾಲ್ ತೊಂದರೆಗಳು ಆಗ ಇರಲಿಲ್ಲ.

ಕನ್ನಡ ಶಾಲೆಗಳಲ್ಲಿ ಉತ್ತಮವಾಗಿ ಪಾಠ ಮಾಡುವ ಇಂಗ್ಲಿಷ್ ಶಿಕ್ಷಕರು ಇರುತ್ತಿದ್ದರು. ಮಕ್ಕಳು ಕನ್ನಡದಷ್ಟೆ ಸುಲಭವಾಗಿ ಇಂಗ್ಲೀಷ್ ಭಾಷೆ ಮಾತಾಡುತ್ತಿದ್ದರು. ಶಿಕ್ಷಕರ ವರ್ಗಾವಣೆ ಈಗಿನಷ್ಟು ಜಟಿಲ ಆಗಿರಲಿಲ್ಲ. ಆದರೆ ಶಿಕ್ಷಕರು ಒಂದು ಶಾಲೆಯಲ್ಲಿ ಸೇರಿಕೊಂಡರೆ ಬೇರೆಡೆ ವರ್ಗಾವಣೆ ಕೇಳಿಕೊಂಡು ಹೋಗುತ್ತಿರಲಿಲ್ಲ. ಹಾಗೊಮ್ಮೆ ಶಿಕ್ಷಕರಿಗೆ ವರ್ಗಾವಣೆ ಆದರೆ ವಿದ್ಯಾರ್ಥಿಗಳು ಕಣ್ಣೀರು ಸುರಿಸಿ ಅವರನ್ನು ಕಳುಹಿಸಿಕೊಡುವ ದೃಶ್ಯಗಳು ಶಾಲೆಯಲ್ಲಿ ಸಾಮಾನ್ಯ ಆಗಿದ್ದವು. ವರ್ಷದ ಕೊನೆಗೆ ಸೆಂಡಾಫ್ ಕಾರ್ಯಕ್ರಮ ಬಂದಾಗ ಎಲ್ಲರೂ ಅಳುವುದು ಕಾಮನ್.

Kannada Schools

ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಣವು ವ್ಯಾಪಾರ ಆಗಿರಲಿಲ್ಲ

ವಿದ್ಯೆಯನ್ನು ಮಾರಬಾರದು ಎಂದರು ನಮ್ಮ ಹಿರಿಯರು. ಆದರೆ ಇಂದು ಶಿಕ್ಷಣವು ನಮ್ಮ ದೇಶದ ಅತೀ ದೊಡ್ಡ ವ್ಯಾಪಾರ ಅಂದರೆ ನೀವು ನಂಬಲೇ ಬೇಕು!
ಆಗಿನ ಶಿಕ್ಷಕರು ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಲು ಯಾವಾಗಲೂ ಮುಂದೆ ಇರುತ್ತಿದ್ದರು. ಶಿಕ್ಷಕರಿಗೆ ಯಾವ ದುರಭ್ಯಾಸ ಇರಲಿಲ್ಲ. ಆಸಕ್ತಿ ಇದ್ದವರು ಮಾತ್ರ ಶಿಕ್ಷಕ ವೃತ್ತಿಗೆ ಬರುತ್ತಿದ್ದ ಕಾಲ ಅದು. ಯಾವ ಶಿಕ್ಷಕರೂ ಬೇರೆ ಬಿಸಿನೆಸ್ ಮಾಡ್ತಾ ಇರಲಿಲ್ಲ.

ಒತ್ತಡ ಇಲ್ಲದ ಸಂತಸದ ಕಲಿಕೆಗೆ ಪೂರಕವಾಗಿ ಏನೆಲ್ಲ ಬೇಕೋ ಅದನ್ನೆಲ್ಲ ಕನ್ನಡ ಶಾಲೆಗಳು ಖಾತರಿ ಮಾಡುತ್ತಿದ್ದವು. ಕನ್ನಡ ಶಾಲೆಗಳಲ್ಲಿ ಓದಿದವರು ಡಾಕ್ಟರ್, ಲೆಕ್ಚರರ್, ಎಂಜಿನಿಯರ್, ವಿಜ್ಞಾನಿ, ಉದ್ಯಮಿ, ಕಲಾವಿದ, ಶಿಕ್ಷಕ…. ಎಲ್ಲವೂ ಆಗುತ್ತಿದ್ದರು. ಈಗಲೂ ಆಗುತ್ತಿದ್ದಾರೆ.

ಹೃದಯ ಶ್ರೀಮಂತಿಕೆಯಲ್ಲಿ ಆಗಿನ ಕನ್ನಡ ಶಾಲೆಯ ವಿದ್ಯಾರ್ಥಿಗಳು ಸದಾ ಮುಂದೆ ಇರುತ್ತಿದ್ದರು. ಶಿಕ್ಷಕರಿಗೆ ಆಗ ಸಂಬಳ ಕಡಿಮೆ ಇರುತ್ತಿತ್ತು. ಆದರೆ ಸಮಾಜದಲ್ಲಿ ಗೌರವ ಹೆಚ್ಚಿತ್ತು. ಆದರೆ ಈಗ ಉಲ್ಟಾ ಆಗಿದೆ ಅಲ್ವಾ?

ಈಗೆಲ್ಲ ಕನ್ನಡ ಶಾಲೆಗಳು ಹಾಳಾಗಿವೆ ಎಂದು ಹೇಳುವುದು ಈ ಲೇಖನದ ಉದ್ದೇಶ ಅಲ್ಲ.

ಈಗಲೂ ಕನ್ನಡ ಶಾಲೆಗಳು ತುಂಬ ಚೆನ್ನಾಗಿವೆ. ತುಂಬಾ ಪರಿಣತ ಶಿಕ್ಷಕರನ್ನು ಸರಕಾರ ನೇಮಕ ಮಾಡಿದೆ. ಆದರೆ ಎಲ್ಲ ಶಾಲೆಗಳಲ್ಲಿ ಶಿಕ್ಷಕರ ಕೊರತೆಯು ಇದೆ. ತರಗತಿಗೊಬ್ಬ ಶಿಕ್ಷಕರ ನೇಮಕ ಆಗಬೇಕು ಅನ್ನುವುದು ಆಶಯ. ಒಂದು ಅದ್ಭುತವಾದ ದೇವಸ್ಥಾನ ಕಟ್ಟಿ ಗರ್ಭಗುಡಿಯಲ್ಲಿ ದೇವರನ್ನು ಸ್ಥಾಪನೆ ಮಾಡದಿದ್ದರೆ ಹೇಗೆ?

ಇದನ್ನೂ ಓದಿ: Raja Marga Column: ಸಚಿನ್ ‘ಟೆನ್ನಿಸ್ ಎಲ್ಬೋ’ ಗೆದ್ದದ್ದು ಚಿಕಿತ್ಸೆಯಿಂದ ಅಲ್ಲ, ಮತ್ತೆ ಹೇಗೆ?

ಉಳಿದಂತೆ ಸರಕಾರದ ಎಲ್ಲ ಉಚಿತ ಸೌಲಭ್ಯಗಳು ಮಕ್ಕಳಿಗೆ ದೊರೆಯುತ್ತಿವೆ. ಅವುಗಳು ವರ್ಷದ ಮೊದಲೇ ಸಿಕ್ಕಿದರೆ ತುಂಬ ಒಳ್ಳೆಯದು. ಇಂದು ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯು ಪಾತಾಳಕ್ಕೆ ಹೋಗಿದೆ. ಕೆಲವು ಮಾದರಿ ಶಾಲೆಗಳು ಇಂದಿಗೂ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿವೆ. ಅದಕ್ಕೆ ಶಿಕ್ಷಕರ ಪ್ರಭಾವ ಕಾರಣವೇ ಹೊರತು ಬೇರೆ ಏನೂ ಅಲ್ಲ.

ಸರಕಾರವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ತುಂಬಿದರೆ, ಇಂಗ್ಲಿಷ್ ಮಾಧ್ಯಮದ ಶಾಲೆಗಳ ಪರವಾಗಿರುವ ಹೆತ್ತವರ ಮೈಂಡ್‌ಸೆಟ್‌ ಕನ್ನಡ ಮಾಧ್ಯಮ ಶಾಲೆಗಳ ಪರವಾಗಿ ಬದಲಾದರೆ, ನಮ್ಮ ಕನ್ನಡದ ಶಾಲೆಗಳು ಖಂಡಿತವಾಗಿ ಭೂಲೋಕದ ಸ್ವರ್ಗವೇ ಆಗುತ್ತವೆ. ಏನಂತೀರಿ?

Continue Reading

ಅಂಕಣ

Tejas Aircraft: ಸ್ವದೇಶಿ ʼತೇಜಸ್ʼ ವಿಮಾನದಲ್ಲಿ ಮೋದಿ ಹಾರಾಟ: ಪಾಕಿಸ್ತಾನ, ಚೀನಾಗೆ ನಡುಕ!

ತೇಜಸ್ ವಿಮಾನ (Tejas Aircraft) ಭಾರತದ ಹೆಮ್ಮೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ತೇಜಸ್ ವಿಮಾನ ಭಾರತದ 140 ಕೋಟಿ ಜನರ ಸಾಮರ್ಥ್ಯ ಮತ್ತು ಕೌಶಲಗಳನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ. ಈ ವಿಮಾನದ ಕುರಿತ ತಾಂತ್ರಿಕ ಮಾಹಿತಿ ಇಲ್ಲಿದೆ.

VISTARANEWS.COM


on

modi tejas viman
Koo
Girish Linganna

ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 25ರಂದು ಭಾರತದ ಸ್ವದೇಶಿ ನಿರ್ಮಾಣದ ಯುದ್ಧ ವಿಮಾನ ‘ತೇಜಸ್’ನಲ್ಲಿ (Tejas Aircraft) 30 ನಿಮಿಷಗಳ ಕಾಲ ಹಾರಾಟ ನಡೆಸಿದರು. ಆ ಮೂಲಕ ತೇಜಸ್ ವಿಮಾನದಲ್ಲಿ (Tejas Aircraft) ಹಾರಾಟ ನಡೆಸಿದ ಭಾರತದ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಈ ಬೆಳವಣಿಗೆ ಭಾರತದ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾಗೆ ನಡುಕ ಮೂಡಿಸಿದೆ. ಮೋದಿಯವರು ಗ್ರೂಪ್ ಕ್ಯಾಪ್ಟನ್ ದೇಬಂಜನ್ ಮಂಡಲ್ ಅವರೊಡನೆ ತೇಜಸ್ ವಿಮಾನದಲ್ಲಿ ಹಾರಾಟ ನಡೆಸಿದರು. ಪ್ರಧಾನಿಯವರನ್ನು ವಾಯುಪಡೆಯ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಸ್ವಾಗತಿಸಿ, ಸನ್ಮಾನಿಸಿದರು. ಗಮನಾರ್ಹ ಅಂಶವೆಂದರೆ, ವಿವಿಐಪಿಗಳು ಸಾಮಾನ್ಯವಾಗಿ ಸು-30ಎಂಕೆಐನಂತಹ ಅವಳಿ ಎಂಜಿನ್ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸುತ್ತಾರೆ. ಪ್ರಧಾನಿ ಮೋದಿಯವರು ತೇಜಸ್ ವಿಮಾನ ಹಾರಾಟದ ಕುರಿತು ತಮ್ಮ ಅನುಭವವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಅವರು ಭಾರತದ ಸ್ವದೇಶೀ ನಿರ್ಮಾಣ ಸಾಮರ್ಥ್ಯದ ಕುರಿತು ಭರವಸೆ ವ್ಯಕ್ತಪಡಿಸಿದ್ದು, ತೇಜಸ್ ವಿಮಾನ ಭಾರತದ ಹೆಮ್ಮೆ ಎಂದು ಶ್ಲಾಘಿಸಿದ್ದಾರೆ. ಅವರು ಈ ವಿಮಾನ ಒಂದು ಆಶಾವಾದವನ್ನು ಒದಗಿಸಿದ್ದು, ತೇಜಸ್ ವಿಮಾನ (Tejas Aircraft) ಭಾರತದ 140 ಕೋಟಿ ಜನರ ಸಾಮರ್ಥ್ಯ ಮತ್ತು ಕೌಶಲಗಳನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.

ತಂತ್ರಜ್ಞರಿಗೆ ಉತ್ತೇಜನ

ಮೋದಿಯವರು ತೇಜಸ್ ವಿಮಾನದ (Tejas Aircraft) ನಿರ್ಮಾಣ ಘಟಕಕ್ಕೆ ಭೇಟಿ ನೀಡಿ, ಎಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ಉತ್ತೇಜಿಸಿದರು. ಎಚ್ಎಎಲ್ ತೇಜಸ್ ಒಂದು ಎಂಜಿನ್ ಮತ್ತು ಡೆಲ್ಟಾ ವಿಂಗ್ ಹೊಂದಿರುವ, ಹಗುರವಾರ ಬಹುಪಾತ್ರಗಳ ಯುದ್ಧ ವಿಮಾನವಾಗಿದ್ದು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಓ) ಎಡಿಎ ಮತ್ತು ಎಚ್ಎಎಲ್‌ಗಳು ಜಂಟಿಯಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿವೆ. ತೇಜಸ್ ತನ್ನ ವರ್ಗದಲ್ಲಿ ಅತ್ಯಂತ ಸಣ್ಣದಾದ, ಹಗುರವಾದ ಸೂಪರ್‌ಸಾನಿಕ್ ಯುದ್ಧ ವಿಮಾನವಾಗಿದ್ದು, ಸ್ವದೇಶೀ ನಿರ್ಮಾಣದ ಫ್ಲೈ ಬೈ ವೈರ್ ವ್ಯವಸ್ಥೆ ಹಾಗೂ ಭಾರತೀಯ ನಿರ್ಮಾಣದ ಸಂಯುಕ್ತ ವಸ್ತುಗಳನ್ನು ಒಳಗೊಂಡಿದೆ. ತೇಜಸ್ 2001ರಲ್ಲಿ ತನ್ನ ಪ್ರಥಮ ಹಾರಾಟ ನಡೆಸಿತು. ಅದಾದ ಬಳಿಕ, 2016ರಲ್ಲಿ ‘ಫ್ಲೈಯಿಂಗ್ ಡ್ಯಾಗರ್ಸ್’ ಎಂಬ ಅದರ ಮೊದಲ ಕಾರ್ಯಾಚರಿಸುವ ಸ್ಕ್ವಾಡ್ರನ್ ನಿರ್ಮಾಣಗೊಂಡಿತು.

 tejas aircraft

ಖರೀದಿಗೆ ಆದೇಶ ಸಲ್ಲಿಕೆ

ಭಾರತೀಯ ವಾಯುಪಡೆ (ಐಎಎಫ್) ಈಗಾಗಲೇ 32 ಎಲ್‌ಸಿಎ ಮಾರ್ಕ್ 1, 73 ಮಾರ್ಕ್ 1ಎ, ಹಾಗೂ 18 ಮಾರ್ಕ್ 1 ಎರಡು ಆಸನಗಳ ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಿದೆ. ಅದರೊಡನೆ, ವಾಯುಪಡೆ ಇನ್ನೂ 97 ಹೆಚ್ಚುವರಿ ಮಾರ್ಕ್ 1ಎ ವಿಮಾನಗಳನ್ನು ಖರೀದಿಸಲು ಉದ್ದೇಶಿಸಿದೆ. ಭವಿಷ್ಯದಲ್ಲಿ ಅಂದಾಜು 200ರಷ್ಟು ಎಲ್‌ಸಿಎ ಮಾರ್ಕ್ 2 ಯುದ್ಧ ವಿಮಾನಗಳು ಬೇಕಾಗಬಹುದೆಂದು ವಾಯುಪಡೆ ಅಂದಾಜಿಸಿದೆ.
ಎಲ್‌ಸಿಎ ಮಾರ್ಕ್1ಎ ವಿಮಾನದ ಆರಂಭಿಕ ಹಾರಾಟ ಮೇ 2022ರಲ್ಲಿ ನೆರವೇರಿತು. ಈ ವಿಮಾನ ಮ್ಯಾಕ್ 1.6ರ ಗರಿಷ್ಠ ವೇಗದಲ್ಲಿ ಚಲಿಸಬಲ್ಲದಾಗಿದ್ದು, 5,300 ಕೆಜಿಯ ತನಕ ಹೊತ್ತು ಸಾಗಬಲ್ಲ ಬಾಹ್ಯ ಹಾರ್ಡ್ ಪಾಯಿಂಟ್‌ಗಳನ್ನು ಹೊಂದಿದೆ. ಇದು ಸ್ಟ್ಯಾಂಡ್ ಆಫ್ ರೇಂಜ್‌ನಿಂದ ವಿವಿಧ ಬಗೆಯ ರಾಕೆಟ್‌ಗಳು, ಕ್ಷಿಪಣಿಗಳು ಮತ್ತು ಬಾಂಬ್‌ಗಳನ್ನು ಹೊತ್ತು ಸಾಗಬಲ್ಲದು. (ಸ್ಟ್ಯಾಂಡ್ ಆಫ್ ರೇಂಜ್ ಎಂದರೆ ಒಂದು ಯುದ್ಧ ವಿಮಾನ ಗುರಿಗೆ ಅತ್ಯಂತ ಸಮೀಪಕ್ಕೆ ತೆರಳದೆ, ಶತ್ರುವಿನ ದಾಳಿಯ ನಿಲುಕಿಗೆ ಒಳಗಾಗದೆ ಶತ್ರುವಿನ ಮೇಲೆ ದಾಳಿ ನಡೆಸಬಲ್ಲ ಸುರಕ್ಷಿತ ಅಂತರವಾಗಿದೆ).

rafale2

ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್

ಎಲ್‌ಸಿಎ ಎಂಕೆ1ಎ ವಿಮಾನದ ಆರಂಭಿಕ ತಂಡಗಳು ಎಲ್ಟಾ ಇಎಲ್/ಎಂ-2052 ರೇಡಾರ್‌ಗಳನ್ನು ಹೊಂದಿದ್ದು, ಅದರ ಬದಲಿಗೆ ದೇಶೀಯ ನಿರ್ಮಾಣದ ಎಲ್ಆರ್‌ಡಿಇ ಉತ್ತಮ್ ರೇಡಾರ್ ಅಳವಡಿಸಲಾಗುತ್ತದೆ. ಇದು ಬಹುತೇಕ 40 ಅಭಿವೃದ್ಧಿಗಳನ್ನು ಹೊಂದಿದ್ದು, ಸಮರ್ಥವಾದ ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್ ಹೊಂದಿದೆ. ಈ ವಿಮಾನ ಅಸ್ತ್ರ ಮತ್ತು ಎಎಸ್ಆರ್‌ಎಎಎಂ ಕ್ಷಿಪಣಿಗಳನ್ನು ಹೊಂದಲಿದ್ದು, ಅವೆಲ್ಲವೂ ದೇಶೀಯ ನಿರ್ಮಾಣದವಾಗಿವೆ. ಇವುಗಳ ಸೇರ್ಪಡೆ 2024ರಲ್ಲಿ ಆರಂಭಗೊಳ್ಳಲಿದೆ.
ತೇಜಸ್ ಎಂಕೆ2 ಅಥವಾ ಮೀಡಿಯಂ ವೆಯ್ಟ್ ಫೈಟರ್ ದೊಡ್ಡ ಗಾತ್ರದ ಯುದ್ಧ ವಿಮಾನವಾಗಿದ್ದು, ಹೆಚ್ಚಿನ ಪೇಲೋಡ್ ಹೊಂದಬಲ್ಲದು. ಇದಕ್ಕೆ ಜನರಲ್ ಇಲೆಕ್ಟ್ರಿಕ್ ಜಿಇ ಎಫ್414 ಐಎನ್ಎಸ್6 ಇಂಜಿನ್ ಶಕ್ತಿ ನೀಡುತ್ತದೆ. ಈ ಎಂಜಿನ್‌ಗಳು ಭಾರತದ ದೇಶೀಯ ನಿರ್ಮಾಣದ ಐದನೇ ತಲೆಮಾರಿನ ಯುದ್ಧ ವಿಮಾನವಾದ ಎಎಂಸಿಎಯಲ್ಲೂ ಬಳಕೆಯಾಗಲಿದೆ.

2024ರಲ್ಲಿ ಹಾರಾಟ ನಡೆಸುವ ನಿರೀಕ್ಷೆ

ತೇಜಸ್ ಎಂಕೆ2 ವಿಮಾನ 2024ರಲ್ಲಿ ಹಾರಾಟ ನಡೆಸುವ ನಿರೀಕ್ಷೆಗಳಿದ್ದು, ಆಧುನಿಕ ಗಾಜಿನ ಕಾಕ್‌ಪಿಟ್, ಆಧುನಿಕ ಎಇಎಸ್ಎ ರೇಡಾರ್, ಹಾಗೂ ಅಂತರ್ಗತ ಇನ್‌ಫ್ರಾರೆಡ್ ಸರ್ಚ್ ಆ್ಯಂಡ್ ಟ್ರ್ಯಾಕ್ (ಐಆರ್‌ಎಸ್‌ಟಿ) ವ್ಯವಸ್ಥೆಗಳನ್ನು ಒಳಗೊಂಡಿದೆ. ಇದರಲ್ಲಿ ಆಮ್ಲಜನಕ ಉತ್ಪಾದನಾ ವ್ಯವಸ್ಥೆ, ಅಂತರ್ಗತ ಇಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್, ಹಾಗೂ ಹೆಚ್ಚಿನ ಕದನ ವ್ಯಾಪ್ತಿಯನ್ನು ಒಳಗೊಂಡಿದೆ. ಈ ವಿಮಾನ ಅಂತಿಮವಾಗಿ ಮಿರೇಜ್-2000, ಜಾಗ್ವಾರ್ ಹಾಗೂ ಮಿಗ್-29 ವಿಮಾನಗಳ ಬದಲಿಗೆ ಕಾರ್ಯ ನಿರ್ವಹಿಸುವ ಸಾಧ್ಯತೆಗಳಿವೆ.

ಯಶಸ್ವಿ ಲ್ಯಾಂಡಿಂಗ್‌

ನೌಕಾಪಡೆಯ ಆವೃತ್ತಿಗೆ ಸಂಬಂಧಿಸಿದ ಮಹತ್ತರ ಮೈಲುಗಲ್ಲು ಎಂಬಂತೆ, ಎಲ್‌ಸಿಎ ಐಎನ್ಎಸ್ ವಿಕ್ರಮಾದಿತ್ಯ ನೌಕೆಯ ಮೇಲೆ 2020ರಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ನಡೆಸಿ, ಬಳಿಕ 18 ಬಾರಿ ಟೇಕಾಫ್ ಮತ್ತು ಲ್ಯಾಂಡಿಂಗ್ ಕೈಗೊಂಡಿತ್ತು. ಫೆಬ್ರವರಿ 2023ರಲ್ಲಿ ಎಲ್‌ಸಿಎ ಮಿಗ್-29ಕೆ ವಿಮಾನದ ಜೊತೆಗೆ ಸ್ವದೇಶೀ ನಿರ್ಮಾಣದ ವಿಮಾನ ವಾಹಕ ನೌಕೆಯಾದ ಐಎನ್ಎಸ್ ವಿಕ್ರಾಂತ್ ಮೇಲೆ ಇಳಿಯಿತು.
2022ರ ವೇಳೆಗೆ, ತೇಜಸ್ ಮಾರ್ಕ್ 1 ಯುದ್ಧ ವಿಮಾನ ತನ್ನ ಮೌಲ್ಯದ 59.7% ಮತ್ತು ಬದಲಾಯಿಸಬಲ್ಲ ಭಾಗಗಳ 75.5% ಸ್ವದೇಶೀ ವಸ್ತುಗಳನ್ನು ಹೊಂದಿತ್ತು. ತೇಜಸ್ ಎಂಕೆ 1ಎ ಆರಂಭದಲ್ಲಿ 50% ಸ್ವದೇಶೀ ವಸ್ತುಗಳನ್ನು ಒಳಗೊಂಡು, ಬಳಿಕ ಯೋಜನೆ ಪೂರ್ಣಗೊಳ್ಳುವ ವೇಳೆಗೆ 60% ಸಾಧಿಸುವ ಗುರಿ ಹೊಂದಿದೆ.

ಎಚ್‌ಎಎಲ್‌ನಿಂದ ನೂತನ ಉತ್ಪಾದನಾ ಘಟಕ

ಎಚ್ಎಎಲ್ ಬೆಂಗಳೂರಿನಲ್ಲಿ ವಾರ್ಷಿಕವಾಗಿ 16 ಎಲ್‌ಸಿಎ ಎಂಕೆ-1ಎ ವಿಮಾನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ನಾಶಿಕ್‌ನಲ್ಲಿ ನೂತನ ಉತ್ಪಾದನಾ ಘಟಕವನ್ನು ಆರಂಭಿಸಿದೆ. ಈ ಮೂಲಕ ಎಚ್ಎಎಲ್ ವಾರ್ಷಿಕವಾಗಿ 24 ಜೆಟ್‌ಗಳನ್ನು ಉತ್ಪಾದಿಸಬಲ್ಲದು. ಈ ಹೆಚ್ಚಳದ ಕಾರಣದಿಂದ, ಎಚ್ಎಎಲ್ ಒಪ್ಪಂದ ಮಾಡಿಕೊಂಡಿರುವ 83 ಯುದ್ಧ ವಿಮಾನಗಳನ್ನು ಅವಧಿಗಿಂತಲೂ ಒಂದು ವರ್ಷ ಮೊದಲೇ, ಅಂದರೆ 2027-28ರಲ್ಲಿ ಒದಗಿಸಬಹುದು. ಭಾರತೀಯ ವಾಯುಪಡೆ ಶೀಘ್ರವಾಗಿ ತನ್ನ ಹಳೆಯದಾಗುತ್ತಿರುವ ಮಿಗ್ 21 ಯುದ್ಧ ವಿಮಾನ ಸ್ಕ್ವಾಡ್ರನ್‌ಗಳನ್ನು ನಿವೃತ್ತಿಗೊಳಿಸಿ, ಅವುಗಳ ಬದಲಿಗೆ ನೂತನ ವಿಮಾನಗಳನ್ನು ಹೊಂದಬೇಕಿರುವುದರಿಂದ, ವಿಮಾನಗಳು ಶೀಘ್ರವಾಗಿ ಪೂರೈಕೆಯಾದಷ್ಟೂ ಅನುಕೂಲಕರವಾಗಿರಲಿದೆ.

rafale1

ಸಮರ್ಥ ಯುದ್ಧ ವಿಮಾನವಾಗಿ ಸಾಬೀತು

ಎಲ್‌ಸಿಎ ವಿಮಾನ ಭಾರತದ ಏರೋ ಇಂಡಿಯಾ ಪ್ರದರ್ಶನಗಳಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿ, ತಾನು ಸಮರ್ಥ ಯುದ್ಧ ವಿಮಾನ ಎಂದು ಸಾಬೀತುಪಡಿಸಿದೆ. ಎಚ್ಎಎಲ್ ಈಗ ಎಲ್‌ಸಿಎ ವಿಮಾನದ ಎರಡು ಆಸನಗಳ ಲೀಡ್ ಇನ್ ಫೈಟರ್ ಟ್ರೈನರ್ (ಎಲ್ಐಎಫ್‌ಟಿ) ತರಬೇತಿ ಆವೃತ್ತಿಯನ್ನು ಅಭಿವೃದ್ಧಿ ಪಡಿಸುತ್ತಿದೆ. ಎಚ್ಎಎಲ್ ಈಗಾಗಲೇ ಸಂಭಾವ್ಯ ವಿಮಾನ ರಫ್ತಿಗಾಗಿ ಬೋಟ್ಸ್‌ವಾನಾ ಮತ್ತು ಈಜಿಪ್ಟ್‌ನಂತಹ ದೇಶಗಳೊಡನೆ ಮಾತುಕತೆ ನಡೆಸುತ್ತಿದೆ. ತೇಜಸ್ ರಫ್ತಿನ ಅಂಗವಾಗಿ, ಇಂಡೋನೇಷ್ಯಾ, ಮಲೇಷ್ಯಾ, ಶ್ರೀಲಂಕಾ ಮತ್ತು ವಿಯೆಟ್ನಾಂಗಳಲ್ಲಿ ಸಾಗಾಣಿಕಾ ವ್ಯವಸ್ಥೆಯನ್ನು ಸ್ಥಾಪಿಸಲು ಯೋಚಿಸುತ್ತಿದೆ.
ವಿಮಾನ ಉತ್ಪಾದನೆಗೆ ಆಧುನಿಕ ತಂತ್ರಜ್ಞಾನಗಳು ಅತ್ಯವಶ್ಯಕವಾಗಿರುವುದರಿಂದ, ವೈಮಾನಿಕ ವಲಯ ರಕ್ಷಣಾ ವಿಭಾಗದಲ್ಲಿ ಸ್ವಾವಲಂಬನೆ ಸಾಧಿಸಲು ಹೆಚ್ಚಿನ ಅವಕಾಶ ಕಲ್ಪಿಸುತ್ತದೆ. ತಂತ್ರಜ್ಞಾನಗಳ ಹಂಚಿಕೊಳ್ಳುವಿಕೆ ಅತ್ಯಂತ ಅಪರೂಪವಾಗಿರುವುದರಿಂದ, ಭಾರತ ತನ್ನದೇ ಆದ ಬೌದ್ಧಿಕ ಆಸ್ತಿಯನ್ನು ಅಭಿವೃದ್ಧಿಪಡಿಸಬೇಕು. ವಿಮಾನಗಳು ಬಳಕೆಯಾಗದೆ ಹಳೆಯದಾಗುವುದೂ ಒಂದು ಸವಾಲಾಗಿದ್ದು, ಭಾರತೀಯ ವಾಯುಪಡೆ ಎಲ್‌ಸಿಎ ಯೋಜನೆಗೆ ಸಂಪೂರ್ಣ ಬೆಂಬಲ ನೀಡುತ್ತಿದೆ. ವಾಯುಪಡೆಯ ಮುಖ್ಯಸ್ಥರಾದ ವಿ ಆರ್ ಚೌಧರಿ ಅವರು ಎಲ್‌ಸಿಎ ಯೋಜನೆ ಸ್ವದೇಶೀ ಸಮರ ಪಡೆಗಳನ್ನು ಅಭಿವೃದ್ಧಿ ಪಡಿಸುವ ಭಾರತೀಯ ವಾಯುಪಡೆಯ ಬದ್ಧತೆಯ ಸಂಕೇತವಾಗಿದೆ ಎಂದಿದ್ದಾರೆ. ಎಚ್ಎಎಲ್ ಹಾಗೂ ಡಿಆರ್‌ಡಿಓ ತಂತ್ರಜ್ಞಾನವನ್ನು ಖಾಸಗಿ ಸಂಸ್ಥೆಗಳಿಗೆ ಒದಗಿಸಿದ್ದು, ರಕ್ಷಣಾ ಉಪಕರಣಗಳ ಉತ್ಪಾದನೆಗೆ ಸೂಕ್ತ ಕ್ರಮಗಳನ್ನು ಒದಗಿಸಲಿದೆ. ಪ್ರಧಾನಿ ಮೋದಿಯವರೂ ಈ ಯೋಜನೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿ, ಬೆಂಬಲ ಸೂಚಿಸಿದ್ದು, ಇದರಿಂದ ಎಲ್‌ಸಿಎ ಮತ್ತು ಎಎಂಸಿಎ ಯೋಜನೆಯ ಸ್ಥೈರ್ಯ ಹೆಚ್ಚಿ, ವಿನ್ಯಾಸ, ಅಭಿವೃದ್ಧಿ ಇನ್ನಷ್ಟು ವೇಗ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಅದರೊಡನೆ, ಅವುಗಳ ಭವಿಷ್ಯದ ಹಂತಗಳಿಗೂ ಶೀಘ್ರವಾಗಿ ಅನುಮತಿ ಲಭಿಸಲು ಸಾಧ್ಯವಾಗುತ್ತದೆ. ಚೀನಾ ಮತ್ತು ಪಾಕಿಸ್ತಾನದ ಬೆದರಿಕೆ ಎದುರಿಸುವಲ್ಲಿ ತೇಜಸ್‌ ಮಹತ್ವದ ಪಾತ್ರ ವಹಿಸಲಿದೆ.

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು)

ಇದನ್ನೂ ಓದಿ: LCA Tejas: ವಾಯುಪಡೆ ಬತ್ತಳಿಕೆ ಸೇರಿದ ಲಘು ಯುದ್ಧ ವಿಮಾನ ತೇಜಸ್! 8 ಏರ್‌ಕ್ರಾಫ್ಟ್‌ಗೆ ಎಚ್‌ಎಎಲ್‌ ಜತೆ ಸೇನೆ ಒಪ್ಪಂದ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಅಂಕಣ

Raja Marga Column: ಸಚಿನ್ ‘ಟೆನ್ನಿಸ್ ಎಲ್ಬೋ’ ಗೆದ್ದದ್ದು ಚಿಕಿತ್ಸೆಯಿಂದ ಅಲ್ಲ, ಮತ್ತೆ ಹೇಗೆ?

Raja Marga Column : ಎಲ್ಲರೂ ಆತನ ಕ್ರಿಕೆಟ್ ಭವಿಷ್ಯ ಮುಗಿಯಿತು ಎನ್ನುವಾಗ ಆತ ಬೂದಿಯಿಂದ ಎದ್ದು ಬಂದಿದ್ದ! ಇದು ಟೆನ್ನಿಸ್‌ ಎಲ್ಬೋ ಎಂಬ ಘಾತಕ ನೋವಿನಿಂದ ಸಚಿನ್‌ ತೆಂಡೂಲ್ಕರ್‌ ಮೇಲೆದ್ದು ಬಂದ ಕಥೆ. ಇಲ್ಲಿ ವರ್ಕ್‌ ಮಾಡಿದ್ದು ಸರ್ಜರಿ ಒಂದೇ ಅಲ್ಲ.. ಮತ್ತೇನು?

VISTARANEWS.COM


on

Sachin Tendulkar Tennis Elbow
Koo
RAJAMARGA Rajendra Bhat

‘ಗಾಡ್ ಆಫ್ ಕ್ರಿಕೆಟ್’ ಎಂದು ಎಲ್ಲರಿಂದ ಕರೆಸಿಕೊಂಡ ಸಚಿನ್ ತೆಂಡೂಲ್ಕರ್ (Sachin Tendulkar) 24 ವರ್ಷ ಭಾರತಕ್ಕಾಗಿ ಆಡಿದ್ದು, ಶತಕಗಳ ಶತಕವನ್ನು ಪೂರ್ತಿ ಮಾಡಿದ್ದು, ಕ್ರಿಕೆಟಿನ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆ ಬರೆದದ್ದು ನಮಗೆ ಗೊತ್ತೇ ಇದೆ. ಅದೇ ಸಚಿನ್ ಸಾಧನೆಯ ಉತ್ತುಂಗದಲ್ಲಿ ಇದ್ದಾಗ ಸಂಭವಿಸಿದ ಒಂದು ತೀವ್ರವಾದ ದೈಹಿಕ ನೋವು, ಅದನ್ನು ಆತ ಗೆದ್ದ ರೀತಿ ಅದು ಕೂಡಾ ಅದ್ಭುತವೇ ಆಗಿದೆ (Raja Marga Column).
ಅದು ಟೆನ್ನಿಸ್ ಎಲ್ಬೋ (Tennis Elbow) ಎಂಬ ಮಹಾ ನೋವಿನ ಸಮಸ್ಯೆ!
ಆ ಕಾಯಿಲೆ ಬಂತು ಅಂದರೆ ಒಬ್ಬ ಕ್ರಿಕೆಟ್ ಆಟಗಾರನ ಕ್ರಿಕೆಟ್ ಜೀವನ ಮುಗಿದೇ ಹೋಯಿತು ಅನ್ನೋದು ವೈದ್ಯಕೀಯ ವಿಜ್ಞಾನದ ಸತ್ಯ. ಅದೇ ಕಾಯಿಲೆಯು ಸಚಿನ್ ಬಲಗೈ ಮೊಣಗಂಟಿಗೆ ಅಮರಿತ್ತು. ಒಂದು ಕ್ರಿಕೆಟ್ ಬಾಲನ್ನು ಎತ್ತಲು ಸಾಧ್ಯವಾಗದೆ ಸಚಿನ್ ನೋವಿನಲ್ಲಿ ನರಳಿದರು. ಎದುರಿನ ವ್ಯಕ್ತಿಗೆ ಶೇಕ್ ಹ್ಯಾಂಡ್ ಮಾಡಲು ಕೂಡ ಆಗದ ಪರಿಸ್ಥಿತಿ. ದೇಶದಾದ್ಯಂತ ಕ್ರಿಕೆಟ್ ಪ್ರೇಮಿಗಳಿಗೆ ಸಿಡಿಲು ಬಡಿದ ಅನುಭವ. ನಮ್ಮ ಕ್ರಿಕೆಟ್ ದೇವರು ಇನ್ನು ಮುಂದೆ ಆಡುವುದಿಲ್ಲವಂತೆ ಎಂಬ ಸುದ್ದಿ ಭಾರತೀಯರಿಗೆ ತುಂಬಾ ನೋವು ಕೊಟ್ಟಿತ್ತು. ಹಲವು ಕಡೆ ಯುವಕರು ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳು ಬಂದವು.

ಇಂಗ್ಲೆಂಡಿನಲ್ಲಿ ನಡೆಯಿತು ಸಂಕೀರ್ಣ ಶಸ್ತ್ರಚಿಕಿತ್ಸೆ

ಸಚಿನ್ ಇಂಗ್ಲೆಂಡಿಗೆ ಹೋಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಬಂದರು. ಅದು ತೀವ್ರ ಯಾತನಾಮಯ ಸರ್ಜರಿ. ವೈದ್ಯರು ಇನ್ನು ಕ್ರಿಕೆಟ್ ಆಡುವುದು ಬೇಡ ಎಂಬ ಸಲಹೆ ಕೊಟ್ಟರು. ಸಚಿನ್ ಅದಕ್ಕೆ ಏನೂ ಹೇಳಲಿಲ್ಲ. ಭಾರತಕ್ಕೆ ಮರಳಿದ ನಂತರ ರಿಹ್ಯಾಬಿಲಿಟೇಷನ್‌ ದಿನಗಳು ಇನ್ನಷ್ಟು ಯಾತನಾಮಯ ಆಗಿದ್ದವು. ತುಂಬಾ ಶಕ್ತಿಶಾಲಿ ಆಗಿದ್ದ ವ್ಯಕ್ತಿಯೊಬ್ಬ ಸುಮ್ಮನೆ ಮಲಗಿ ವಿಶ್ರಾಂತಿ ಪಡೆಯಬೇಕು ಎಂದರೆ ಹೇಗೆ? ಸಚಿನ್ ಪೂರ್ತಿಯಾಗಿ ಬಸವಳಿದು ಹೋದ ದಿನಗಳು ಅವು.

Sachin Tendulkar Tennis Elbow

ಬೆಂಗಳೂರಿನಲ್ಲಿ ಕಠಿಣ ತರಬೇತು ಆರಂಭ

ರಿಹ್ಯಾಬಿಲಿಟೇಷನ್ ಅವಧಿಯು ಮುಗಿಯುವುದನ್ನೆ ಕಾಯುತ್ತಿದ್ದ ಸಚಿನ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಬಂದರು. ಅವರ ಒಳಗಿನ ಬೆಂಕಿ ಅವರನ್ನು ಬೆಳಗ್ಗೆ ಆರು ಘಂಟೆಗೆ ಮೈದಾನಕ್ಕೆ ಕರೆದುಕೊಂಡು ಬರುತ್ತಿತ್ತು. ಸಚಿನ್ ಮೊದಲಿಗಿಂತ ಹೆಚ್ಚು ಭಾರವಾದ ಬ್ಯಾಟ್ ಹಿಡಿದು ಆಡಲು ಆರಂಭ ಮಾಡಿದರು. ಆ ತರಬೇತು ಹೇಗಿತ್ತು ಅಂದರೆ ಅಲ್ಲಿದ್ದ ಹುಡುಗರು ಎರಡು ಬಕೆಟ್ ಚೆಂಡು ತಂದು ಆತನ ಮುಂದೆ ಇಡುತ್ತಿದ್ದರು. ಸಚಿನ್ ಬಾಲನ್ನು ಎತ್ತಿಕೊಂಡು ಎಡಗೈಯಲ್ಲಿ ತೂರೋದು, ಬಲಗೈಯಲ್ಲಿ ಭಾರವಾದ ಬ್ಯಾಟ್ ಮೂಲಕ ಆ ಬಾಲನ್ನು ಎತ್ತಿ
ಹೊಡೆಯುವುದು ಮಾಡುತ್ತಿದ್ದರು. ಇದು ತುಂಬಾ ಕಠಿಣವಾದ ತರಬೇತು. ಒಂದು ಘಂಟೆ ಸಚಿನ್ ಇದನ್ನು ಪೂರ್ತಿ ಮಾಡುವಾಗ ಬೆವೆತು ಚಂಡಿ ಆಗುತ್ತಿದ್ದರು. ನಂತರ ಒಳಗೆ ಹೋಗಿ ಟೀ ಶರ್ಟ್ ಬದಲಾಯಿಸಿ ಸಚಿನ್ ಮತ್ತೆ ಮೈದಾನಕ್ಕೆ ಬರುತ್ತಿದ್ದರು.

Sachin Tendulkar Tennis Elbow

ಮೈದಾನದಲ್ಲಿ 20 ರೌಂಡ್ ಜಾಗ್ಗಿಂಗ್

ಆ ದೊಡ್ಡ ಮೈದಾನದ ಸುತ್ತ ಸಚಿನ್ ಅವರ ಜಾಗ್ಗಿಂಗ್ ಆರಂಭ ಆಗುತ್ತಿತ್ತು. ಸತತವಾಗಿ 20 ರೌಂಡ್ ಓಡದೇ ಸಚಿನ್ ಜಾಗ್ಗಿಂಗ್ ನಿಲ್ಲಿಸಿದ್ದೇ ಇಲ್ಲ. ಮಧ್ಯೆ ವಿಶ್ರಾಂತಿ ಕೂಡ ಪಡೆಯುತ್ತಿರಲಿಲ್ಲ.

ನಂತರ ಮತ್ತೆ ಒಳಗೆ ಬಂದು ಸಚಿನ್ ಸ್ನಾನ ಮಾಡಿ, ಉಪಾಹಾರ ಮುಗಿಸಿ ಗ್ರೌಂಡಿಗೆ ಬಂದರೆ ನೆಟ್ ಪ್ರಾಕ್ಟೀಸ್ ಆರಂಭ. ಅದೇ ಭಾರವಾದ ಬ್ಯಾಟ್ ಹಿಡಿದು ಸಚಿನ್ ಅಲ್ಲಿದ್ದ ಎಲ್ಲ ನೆಟ್ ಬೌಲರ್‌ಗಳ ಬಾಲ್ ಎದುರಿಸಿ ಆಡುತ್ತಿದ್ದರು. ಆ ನೆಟ್ ಪ್ರಾಕ್ಟೀಸ್ ಮಧ್ಯಾಹ್ನ 12 ಘಂಟೆಯವರೆಗೆ ನಿಲ್ಲುತ್ತಲೇ ಇರಲಿಲ್ಲ. ಏಕಾಗ್ರತೆಯಿಂದ ಪ್ರತೀ ಬಾಲ್ ಎದುರಿಸಿ ನಿಲ್ಲುವುದು, ತೀವ್ರವಾದ ಬಿಸಿಲಿಗೆ ಬೆವರು ಬಸಿಯುವುದು…ಇದ್ಯಾವುದೂ ಸುಲಭ ಅಲ್ಲ. ಭಾರತೀಯ ಕ್ರಿಕೆಟ್ ತಂಡಕ್ಕೆ ಮತ್ತೆ ಮರಳಬೇಕು ಎನ್ನುವ ತುಡಿತ, ತೀವ್ರವಾದ ಸಾಧನೆಯ ಹಸಿವು ಅವರನ್ನು ಪ್ರತೀ ದಿನವೂ ಮೈದಾನಕ್ಕೆ ಎಳೆದು ತರುತ್ತಿತ್ತು.

ಮಧ್ಯಾಹ್ನ ಒಂದಷ್ಟು ಹೊತ್ತು ವಿಶ್ರಾಂತಿ ತೆಗೆದುಕೊಂಡು ಸಂಜೆ ಮತ್ತೆ ನೆಟ್ ಪ್ರಾಕ್ಟೀಸ್ ಆರಂಭ. ಕತ್ತಲಾಗುವವರೆಗೂ ಸಚಿನ್ ಆಡುತ್ತಲೇ ಇರುತ್ತಿದ್ದರು. ಮಬ್ಬು ಕತ್ತಲಲ್ಲಿ ಆಡುವುದರಿಂದ ದೃಷ್ಟಿ ಸೂಕ್ಷ್ಮ ಆಗುತ್ತದೆ ಎನ್ನುವುದು ಅವರ ನಂಬಿಕೆ.

ರಾತ್ರಿ ಮಲಗುವ ಮೊದಲು ಲಗಾನ್, ಚಕ್ ದೇ ಇಂಡಿಯಾ, ಮೊದಲಾದ ಪ್ರೇರಣಾದಾಯಕ ಸಿನೆಮಾ ನೋಡಿ ಮಲಗುವುದು. ಮತ್ತೆ ಬೆಳಿಗ್ಗೆ ಬೇಗ ಎದ್ದು ಯೋಗ, ಧ್ಯಾನ ಮೊದಲಾದ ಚಟುವಟಿಕೆಗಳ ಮೂಲಕ ಮಾನಸಿಕವಾಗಿ ಬಲಿಷ್ಠ ಆಗುವುದು ನಿರಂತರ ನಡೆಯುತ್ತಿತ್ತು.

ಅವರ ಅಭ್ಯಾಸದ ತೀವ್ರತೆ ನೋಡಿ ಅವರ ಫಿಸಿಯೋ ಎಷ್ಟೋ ಬಾರಿ ಬೆಚ್ಚಿ ಬೀಳುತ್ತಿದ್ದರು. ಹಲವು ತಿಂಗಳ ಕಾಲ ಈ ತಪಸ್ಸಿನ ಹಾಗೆ ತರಬೇತಿಯಲ್ಲಿ ಮುಳುಗಿದ್ದ ಸಚಿನ್ ಭಾರತೀಯ ಕ್ರಿಕೆಟ್ ತಂಡಕ್ಕೆ ಮರಳುವುದು ಕಷ್ಟ ಆಗಲಿಲ್ಲ.

ಇದನ್ನೂ ಓದಿ : Raja Marga Column : ನಿಮ್ಮ 10-14 ವಯಸ್ಸಿನ ಮಕ್ಕಳು ಓದಬೇಕಾದ ಪುಸ್ತಕಗಳು ಇವು!

Sachin Tendulkar Tennis Elbow

ಅದೇ ಭಾರವಾದ ಬ್ಯಾಟ್, ಇನ್ನಷ್ಟು ಅಗ್ರೆಸ್ಸಿವ್ ಆದ ಸಚಿನ್!

ಟೆನ್ನಿಸ್ ಎಲ್ಬೋ ಕಾರಣಕ್ಕೆ ಸಚಿನ್ ಅವರ ಎರಡು ವರ್ಷಗಳ (2004-2006) ಕ್ರಿಕೆಟ್ ಜೀವನ ನಷ್ಟ ಆಗಿತ್ತು. ಮುಂದೆ
ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಮರಳಿದ ಸಚಿನ್ ಮೊದಲಿಗಿಂತ ಭಾರವಾದ ಬ್ಯಾಟ್ ಹಿಡಿದು ಬ್ಯಾಟಿಂಗ್ ಮಾಡಲು ತೊಡಗಿದರು. ಮೊದಲಿಗಿಂತ ಹೆಚ್ಚು ಆಕ್ರಮಣಕಾರಿ ಆಗಿತ್ತು ಅವರ ಆಟ. ಸಚಿನ್ ಅವರ ಹೆಚ್ಚಿನ ದಾಖಲೆಗಳು ಉಂಟಾದದ್ದು ಈ ಕಾಯಿಲೆಯನ್ನು ಗೆದ್ದ ನಂತರವೇ!

ಏಕದಿನ ಕ್ರಿಕೆಟನ ದ್ವಿಶತಕ ಅವರ ಬ್ಯಾಟಿನಿಂದ ಸ್ಫೋಟ ಆಯಿತು. ಆಗ ವೀಕ್ಷಕ ವಿವರಣೆ ಮಾಡುತ್ತಿದ್ದ ರವಿ ಶಾಸ್ತ್ರಿ ಅವರ ಮುಂದೆ ಮೈಕ್ ಹಿಡಿದು ಅದು ಹೇಗೆ ಸಾಧ್ಯ ಆಯಿತು ಎಂದು ಹೇಳಿದ್ದರು.

ಆಗ ಸಚಿನ್ ಹೇಳಿದ ಮಾತು ತುಂಬ ಮುಖ್ಯವಾದದ್ದು. ‘ನಾವು ಚೆನ್ನಾಗಿ ಆಡದೆ ಹೋದಾಗ ಜನರು ನಮ್ಮ ಕಡೆಗೆ ಕಲ್ಲು ಎಸೆಯುತ್ತಾರೆ. ನಾವು ಆ ಕಲ್ಲುಗಳನ್ನು ಎತ್ತಿಕೊಂಡು ನಮ್ಮ ಕನಸಿನ ಸೌಧವನ್ನು ಪೂರ್ತಿ ಮಾಡಬೇಕು!’ ಎಂದಿದ್ದರು. ಸಚಿನ್ ತೆಂಡೂಲ್ಕರ್ ಭಾರತರತ್ನ ಆದದ್ದು ಸುಮ್ಮನೆ ಅಲ್ಲ!

Continue Reading

ಅಂಕಣ

ವಿಧಾನಸೌಧ ರೌಂಡ್ಸ್‌: ಕಂಬಳದಲ್ಲಿ ಡಿಕೆಶಿ ಕೋಣ! ವಿಜಯೇಂದ್ರ ಆಯ್ಕೆಯಾಗುತ್ತಿದ್ದಂತೆ ತಣ್ಣಗಾದ ಕಾಂಗ್ರೆಸ್‌ ಕದನ!

Vidhana Soudha Rounds: ಸಿದ್ದರಾಮಯ್ಯ – ಡಿಕೆಶಿ ನಡುವೆ ರಾಜಕೀಯ ಸಂಬಂಧ ಸುಧಾರಿಸುತ್ತಿರುವುದು ಬಿಜೆಪಿಗರ ನಿದ್ದೆಗೆಡಿಸಿದೆ. ಜಾತಿಗಣತಿ ವರದಿ ವಿಚಾರದಲ್ಲಿ ಆಡಳಿತ ಪಕ್ಷದಲ್ಲಿ ಭಿನ್ನ ನಿಲವು ಇರೋದು ಜಗಜ್ಜಾಹೀರಾಗಿದೆ. ಈ ನಡುವೆ ವರದಿಯ ಮೂಲ ಪ್ರತಿ ಸಿಕ್ಕಿಲ್ಲ ಅನ್ನೋ ಸರ್ಕಾರದ ಹೇಳಿಕೆ ನೋಡಿದರೆ ಬೇಲಿಯೇ ಎದ್ದು ಹೊಲ ಮೇಯ್ದ ಕತೆ ನೆನಪಾಗುತ್ತದೆ.

VISTARANEWS.COM


on

Vidhana Soudha Rounds column, BY Vijayendra appointed as BJP state president and Congress dissent minimized
Koo
Vidhana Soudha Rounds

-ಮಾರುತಿ ಪಾವಗಡ
ಕಡಲ ತೀರದ ಊರುಗಳಲ್ಲಿ ನಡೆಯುತ್ತಿದ್ದ ಕಂಬಳ (Kambal Sport) ಈಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಭುತವಾಗಿ ನಡೆಯುತ್ತಿದೆ. ಬೆಂಗಳೂರಿನ ಜನ ಕಂಬಳ ನೋಡಲು ಮುಗಿಬಿದ್ದಿದ್ದಾರೆ. ಅಷ್ಟೇ ಚೆನ್ನಾಗಿ ಆಯೋಜಕರು ವ್ಯವಸ್ಥೆ ಮಾಡಿದ್ದಾರೆ. ಈ ನಡುವೆ ಕಂಬಳಕ್ಕೆ ನಾ ಮುಂದು ತಾ ಮುಂದು ಎಂಬಂತೆ ರಾಷ್ಟ್ರೀಯ ಪಕ್ಷಗಳ ನಾಯಕರು ಬೆಂಬಲ ನೀಡಿದ್ದಾರೆ. ಈ ನಡುವೆ ಡಿ ಕೆ ಶಿವಕುಮಾರ್ (DK Shivakumar) ಕೂಡ ಒಂದು ಜತೆ ಕೋಣ ಕಟ್ಟಿದ್ದಾರೆ ಅನ್ನೋದು ಭಾರಿ ಚರ್ಚೆ ಆಗುತ್ತಿದೆ. ಇತ್ತ ಸಿದ್ದರಾಮಯ್ಯ (CM Siddaramaiah) – ಡಿಕೆಶಿ ನಡುವೆ ರಾಜಕೀಯ ಸಂಬಂಧ ಸುಧಾರಿಸುತ್ತಿರುವುದು ಬಿಜೆಪಿಗರ (BJP Party) ನಿದ್ದೆಗೆಡಿಸಿದೆ. ಡಿಕೆಶಿ ಮೇಲಿನ ಸಿಬಿಐ ಕೇಸ್ (CBI Case) ವಾಪಸು ಪಡೆದಿದ್ದು ಬಿಜೆಪಿ, ಜೆಡಿಎಸ್‌ಗೆ ಪ್ರಮುಖ ಅಸ್ತ್ರವಾಗಿದೆ. ಇನ್ನು ಜಾತಿಗಣತಿ ವರದಿ ಕಳೆದು ಹೋಗಿದೆ ಅಂತಿರುವ ಸರ್ಕಾರ ಅದೇ ವರದಿ ಆಧರಿಸಿ ರೆಡಿ ಮಾಡಿದ ಭಕ್ತ ವತ್ಸಲ ಕಮಿಟಿ ರಿಪೋರ್ಟ್ ಅಂಗೀಕಾರ ಮಾಡಿದ್ದು ಹೇಗೆ ಅನ್ನೋ ಸಂಶಯ ಕಾಡುತ್ತಿದೆ(Vidhana Soudha Rounds).

ಬೆಂಗಳೂರಲ್ಲಿ ಅಭೂತಪೂರ್ವ ಕಂಬಳ

ಕರಾವಳಿಗೆ ಸೀಮಿತವಾಗಿದ್ದ ಕಂಬಳ ಕ್ರೀಡೆಯನ್ನು ರಾಜ್ಯ ರಾಜಧಾನಿ ಬೆಂಗಳೂರಿನವರಿಗೂ ತಂದಿದ್ದು ಅಚ್ಚರಿಯ ಬೆಳವಣಿಗೆ. ಎರಡು ದಿನ ನಡೆದ ಕಂಬಳ ಕ್ರೀಡೆಯಲ್ಲಿ 200ಕ್ಕೂ ಅಧಿಕ ಕೋಣಗಳು ಭಾಗವಹಿಸಿದ್ದು ವಿಶೇಷ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಮೂರೂ ಪಕ್ಷಗಳ ನಾಯಕರು ಇದನ್ನು ಕಣ್ತುಂಬಿಕೊಂಡಿದ್ದು ಗಮನ ಸೆಳೆಯಿತು. ಹಿರಿಯ ಕಾಂಗ್ರೆಸಿಗರೊಬ್ಬರು ವ್ಯಂಗ್ಯದ ಧಾಟಿಯಲ್ಲಿ ಹೀಗೆಂದರು: ಬೆಂಗಳೂರಿಗೆ ಕರಾವಳಿಯಿಂದ ಕಂಬಳದ ಕೋಣಗಳನ್ನು ತಂದಿದ್ದು ಸರಿ. ಆದರೆ ಅಲ್ಲಿಯ ಕೋಮುವಾದವನ್ನು ಇಲ್ಲಿಗೆ ತರದಿದ್ದರೆ ಸಾಕು.

ಕಂಬಳದಲ್ಲಿ ಕೋಣ ಕಟ್ಟಿದ್ರಾ ಡಿ ಕೆ ಶಿವಕುಮಾರ್?

ಕಂಬಳ ಆಯೋಜನೆ ಟೀಮ್ ನಲ್ಲಿ ಇರೋ ಒಬ್ಬ ವ್ಯಕ್ತಿ ಡಿ ಕೆ ಶಿವಕುಮಾರ್ ಅತ್ಯಾಪ್ತರು. ಕಳೆದ ಒಂದು ತಿಂಗಳಿಂದ ತಯಾರಿ ನೋಡಿದ ಡಿ ಕೆ ಶಿವಕುಮಾರ್, ನನ್ನ ಹೆಸರಲ್ಲಿ ಒಂದು ಜೋಡಿ ಕೋಣ ಇರಲಿ ಎಂದು ಖರೀದಿ ಮಾಡಿದರಂತೆ. ಅಲ್ಲದೇ ಆ ಕೋಣ ಜೋಡಿ ಗೆಲ್ಲುವ ಜೋಡಿ ಆಗಬೇಕು ಅಂತ ಟಾಸ್ಕ್ ಕೊಟ್ಟಿದ್ದಾರಂತೆ. ವಿಧಾನಸೌಧದ ಕೆಂಗಲ್ ಗೇಟ್ ಬಳಿ ಸಿಕ್ಕಿದ್ದ ಡಿಕೆಶಿ ಆಪ್ತರೊಬ್ಬರು “”ನಮಗೆ ನಮ್ಮ ಸಾಹೇಬರು ಕೋಣ ಓಡಿಸೋ ಟಾಸ್ಕ್ ಕೊಟ್ಟಿದ್ದಾರೆ ಗುರು. ಅವರ ಕೋಣಗಳು ಹೇಗೆ ಓಡುತ್ತೆ ನೋಡಬೇಕುʼʼ ಎಂದು ಟೆನ್ಞನ್‌ನಲ್ಲೇ ಹೇಳಿದರು.

ಸಿದ್ದರಾಮಯ್ಯ ರಾಜಿಯಾದ್ರಾ?:

ಡಿ ಕೆ ಶಿವಕುಮಾರ್ ಮೇಲೆ ಇದ್ದ ಸಿಬಿಐ ಪ್ರಕರಣವನ್ನು ರಾಜ್ಯ ತನಿಖಾ ಸಂಸ್ಥೆಗೆ ವಾಪಸ್‌ ಪಡೆಯುವ ಕ್ಯಾಬಿನೆಟ್ ನಿರ್ಧಾರದ ಬಳಿಕ ಇಂತಹ ಅನುಮಾನ ಸಿದ್ದರಾಮಯ್ಯ ಮೇಲೆ ರಾಜ್ಯಾದ್ಯಂತ ವ್ಯಕ್ತವಾಗಿದೆ. ಸಿದ್ದರಾಮಯ್ಯ ಕೆಲ ವಿಚಾರಗಳಲ್ಲಿ ಭಾರಿ ಕಡಕ್. ಯಾರು ಹೇಳಿದರೂ ಕೇಳಲ್ಲ. ಅದ್ರಲ್ಲೂ ಕಾನೂನು ವಿಚಾರದಲ್ಲಿ ಅಳೆದುತೂಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಡಿ ಕೆ ಶಿವಕುಮಾರ್ ಮೇಲಿನ ಕೇಸ್ ಸಿಬಿಐ ಸಂಸ್ಥೆಯ ತನಿಖೆಯಿಂದ ಹಿಂಪಡೆಯುವ ನಿರ್ಧಾರ ಮಾಡಿದ ಮೇಲೆ ಕೆಲ ವಿಚಾರಗಳಲ್ಲಿ ಕಾಂಪ್ರೋಮೈಸ್ ಆದಂತೆ ಕಾಣಿಸುತ್ತಿದೆ. ಅಂದರೆ 2013ರಷ್ಟು ಸ್ವತಂತ್ರವಾಗಿ ಸಿದ್ದರಾಮಯ್ಯ ಈಗ ಇಲ್ಲ. ಅತ್ತ ಹೈಕಮಾಂಡ್, ಇತ್ತ ಡಿಕೆಶಿ ನಡುವೆ ನಡೆಯುತ್ತಿರುವ ಮಾತುಕತೆ ಬಳಿಕ ಬರುವ ಅಂತಿಮ ತೀರ್ಮಾನಗಳಂತೆ ನಡೆದುಕೊಂಡು ನನಗೆ ನೀನು, ನಿನಗೆ ನಾನು ಅನ್ನೋ ರೀತಿ ಇಬ್ಬರೂ ಸದ್ಯ ಒಂದಾಗಿದ್ದಾರೆ ಅನ್ನೋ ಚರ್ಚೆ ನಡೆಯುತ್ತಿದೆ. ಇನ್ನು ಸಿದ್ದರಾಮಯ್ಯ ಪುತ್ರ ಯತೀಂದ್ರ ವಿರುದ್ಧ ವರ್ಗಾವಣೆ ದಂಧೆ ಆರೋಪವನ್ನು ಎಚ್ಡಿಕೆ, ಬಿಜೆಪಿ ಮಾಡಿದಾಗ ಅದಕ್ಕೆ ಸಮರ್ಥವಾಗಿ ತಿರುಗೇಟು ಕೊಟ್ಟಿದ್ದು ಡಿ ಕೆ ಶಿವಕುಮಾರ್. ಸಿದ್ದರಾಮಯ್ಯ ಅವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಅವರು ಯತೀಂದ್ರ ಅವರ ಸಮರ್ಥನೆಗೆ ನಿಂತರು.

ಸಚಿವ ನಾಗೇಂದ್ರ ಮೇಲಿನ ಸಿಬಿಐ ಕೇಸ್ ವಾಪಸ್‌ ಪಡೆಯಲು ಒತ್ತಾಯ

ಡಿ ಕೆ ಶಿವಕುಮಾರ್ ಮೇಲಿನ ಕೇಸ್ ವಾಪಸ್‌ ಪಡೆದ ಬೆನ್ನಲ್ಲೇ ಇಂತಹದೊಂದು ಚರ್ಚೆ ಆಡಳಿತ ಪಕ್ಷದಲ್ಲಿ ಶುರುವಾಗಿದೆ. ಕೇಸ್ ಒಮ್ಮೆ ಸಿಬಿಐ ಇಂದ ವಾಪಸ್‌ ಬಂದರೆ ರಾಜ್ಯ ತನಿಖಾ ಸಂಸ್ಥೆಗಳಿಂದ ಕ್ಲೀನ್ ಚಿಟ್ ಪಡೆಯಬಹುದು ಅನ್ನೋ ಲೆಕ್ಕಾಚಾರ ಕಾಂಗ್ರೆಸ್ ನಾಯಕರಲ್ಲಿ ಶುರುವಾಗಿದೆ. ಆದರೆ ಈ ನಡೆಯನ್ನ ಬಿಜೆಪಿ, ಜೆಡಿಎಸ್ ಕಟುವಾಗಿ ವಿರೋಧ ವ್ಯಕ್ತಪಡಿಸಿವೆ. ಮುಂದೆ ಬರುವ ಬೆಳಗಾವಿ ಅಧಿವೇಶನದಲ್ಲಿ ಇದೇ ವಿಚಾರವನ್ನು ಸದನದ ಹೊರಗೆ ಮತ್ತು ಒಳಗೆ ಹೋರಾಟದ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧಾರ ಮಾಡಿವೆ.

ಜಾತಿ ಗಣತಿ ವರದಿ ಕಳೆದು ಹೋಗಿದೆ ಅನ್ನೋದೇ ಒಂದು ದೊಡ್ಡ ಸುಳ್ಳು!

ಜಾತಿಗಣತಿ ವರದಿ ವಿಚಾರದಲ್ಲಿ ಆಡಳಿತ ಪಕ್ಷದಲ್ಲಿ ಬಿನ್ನ ನಿಲವು ಇರೋದು ಜಗಜ್ಜಾಹೀರಾಗಿದೆ. ಈ ನಡುವೆ ವರದಿಯ ಮೂಲ ಪ್ರತಿ ಸಿಕ್ಕಿಲ್ಲ ಅನ್ನೋ ಸರ್ಕಾರದ ಹೇಳಿಕೆ ನೋಡಿದರೆ ಬೇಲಿಯೇ ಎದ್ದು ಹೊಲ ಮೇಯ್ದ ಕತೆ ನೆನಪಾಗುತ್ತದೆ. ಆದರೆ ಎಚ್‌ ಆಂಜನೇಯ ಸಚಿವರಾಗಿದ್ದಾಗಲೇ ಈ ವರದಿಯ ಪ್ರತಿ ಪ್ರಿಂಟ್ ಆಗಿದೆ. ಆ ಪ್ರತಿಗಳು ಅಲ್ಲೊಂದು ಇಲ್ಲೊಂದು ಓಡಾಡುತ್ತಿವೆ. ಆದರೆ ಈಗ ಸರ್ಕಾರ ಮೂಲ ಪ್ರತಿ ಇಲ್ಲ ಅಂತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಅವಧಿಯನ್ನ ಎರಡು ತಿಂಗಳ ಕಾಲ ಮುಂದೂಡಿಕೆ ಮಾಡಿರುವುದರ ಹಿಂದೆ ಅನುಮಾನಗಳು ಶುರುವಾಗಿವೆ. ಅಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಜಾತಿ ಮೀಸಲಾತಿ ಸಂಬಂಧ ನೇಮಕ ಮಾಡಿದ್ದ ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ರಿಪೋರ್ಟ್ ಸಹ ಇದೇ ವರದಿ ಮೇಲೆ ಮಾಡಲಾಗಿದೆ. ಹಾಗಾದರೆ ಕಳೆದು ಹೋಗಿರುವುದು ಸರ್ಕಾರದ ಬಳಿ ಇದ್ದ ಪ್ರತಿಯೋ ಅಥಚಾ ಇಚ್ಛಾ ಶಕ್ತಿಯೋ ಅನ್ನೋ ಪ್ರಶ್ನೆ ಈಗ ಕಾಡುತ್ತಿದೆ.

ಈ ಸುದ್ದಿಯನ್ನೂ ಓದಿ: ವಿಧಾನಸೌಧ ರೌಂಡ್ಸ್: ಅಶೋಕ್‌ ವಿಪಕ್ಷ ನಾಯಕರಾಗಿದ್ದರಿಂದ ಸಿದ್ದರಾಮಯ್ಯಗೆ ಖುಷಿ! ಸರ್ಕಾರಕ್ಕೆ ಕಾದಿದೆ ಅಧಿವೇಶನದ ಬಿಸಿ

Continue Reading
Advertisement
PM Narendra Modi phone call to workers, who rescued from collapsed tunnel
ದೇಶ17 seconds ago

ಸುರಂಗದಿಂದ ರಕ್ಷಿಸಲಾದ ಕಾರ್ಮಿಕರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ!

mantralaya mutt
ಕರ್ನಾಟಕ33 mins ago

ಮಂತ್ರಾಲಯ ಮಠಕ್ಕೆ ಭಕ್ತರೊಬ್ಬರಿಂದ ಹೆಲಿಕಾಪ್ಟರ್‌ ಕೊಡುಗೆ

Uttarakhand CM announces rs 1 lakh rupees to trapped labourers Who rescued after 17 days
ದೇಶ1 hour ago

ಬದುಕುಳಿದು ಬಂದ ಕಾರ್ಮಿಕರಿಗೆ 1 ಲಕ್ಷ ಪರಿಹಾರ ಎಂದ ಉತ್ತರಾಖಂಡ ಸಿಎಂ ಧಾಮಿ

Maxwell
ಕ್ರಿಕೆಟ್1 hour ago

Ind vs Aus : ಮ್ಯಾಕ್ಸ್​ವೆಲ್​ ಸ್ಫೋಟಕ ಶತಕ; 3ನೇ ಪಂದ್ಯದಲ್ಲಿ ಭಾರತಕ್ಕೆ ಸೋಲು

Siddaramaiah
ಕರ್ನಾಟಕ2 hours ago

ಕಾರ್ಮಿಕರಿಗೆ ಮರುಹುಟ್ಟು ನೀಡಿದ ರಕ್ಷಣಾ ಸಿಬ್ಬಂದಿಗೆ ಸಿದ್ದರಾಮಯ್ಯ ಧನ್ಯವಾದ

Uttarkashi Tunnel Rescue and Makeshift hospital
ದೇಶ2 hours ago

ಸುರಂಗದಿಂದ 41 ಕಾರ್ಮಿಕರ ರಕ್ಷಣೆ; ಮುಂದೇನಾಗುತ್ತದೆ ಎಂಬುದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Top 10 news
ಕರ್ನಾಟಕ2 hours ago

VISTARA TOP 10 NEWS: ಸುರಂಗದಲ್ಲಿ ಸಿಲುಕಿದ್ದ ಎಲ್ಲ ಕಾರ್ಮಿಕರ ರಕ್ಷಣೆ, ಮಕ್ಕಳ ಮಾರಾಟ ಬೃಹತ್​ ಜಾಲ ಪತ್ತೆ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Uttarakhand Tunnel Collapse
EXPLAINER3 hours ago

150 ಮೀಟರ್‌ ಸುರಂಗ ಕುಸಿತ, 57 ಮೀಟರ್‌ ಕೊರೆತ! 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ?

Uttarkashi Tunnel rescue success makes us emotional says PM Narendra Modi
ದೇಶ3 hours ago

ಕಾರ್ಮಿಕರ ರಕ್ಷಣೆಯ ಯಶಸ್ಸು ನಮ್ಮನ್ನೆಲ್ಲ ಭಾವುಕರನ್ನಾಗಿಸಿದೆ ಎಂದ ಪ್ರಧಾನಿ ಮೋದಿ

Ruturaj Gaikwad
ಕ್ರಿಕೆಟ್3 hours ago

Ruturaj Gaikwad : ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿ ವಿಶೇಷ ಸಾಧನೆ ಮಾಡಿದ ಋತುರಾಜ್​

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ19 hours ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ1 day ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ1 day ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ1 day ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ1 day ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ1 day ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ1 day ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ2 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ2 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

BY Vijayendra and HD Kumarswamy
ಕರ್ನಾಟಕ2 days ago

BJP JDS Alliance: ಎಚ್‌ಡಿಕೆ-ವಿಜಯೇಂದ್ರ ಭೇಟಿ; 28ಕ್ಕೆ 28 ಸ್ಥಾನ ಗೆಲ್ಲುವ ಪಣ!

ಟ್ರೆಂಡಿಂಗ್‌