ರಾಜ ಮಾರ್ಗ ಅಂಕಣ : ಗಾಯಕಿ ಶ್ರೇಯಾ ಘೋಷಾಲ್: 22 ವರ್ಷಗಳಿಂದ ಆಕೆ ಹಾಡಿದ್ದೆಲ್ಲ ಕಮಾಲ್‌! Vistara News

ಅಂಕಣ

ರಾಜ ಮಾರ್ಗ ಅಂಕಣ : ಗಾಯಕಿ ಶ್ರೇಯಾ ಘೋಷಾಲ್: 22 ವರ್ಷಗಳಿಂದ ಆಕೆ ಹಾಡಿದ್ದೆಲ್ಲ ಕಮಾಲ್‌!

ರಾಜ ಮಾರ್ಗ ಅಂಕಣ: ಶ್ರೇಯಾ ಘೋಷಾಲ್‌ ಅವರ ಪ್ರತಿಭೆಯನ್ನು ಗುರುತಿಸಲು ನಾವು ಕೇವಲ ಸಿನಿಮಾ ಹಾಡುಗಳನ್ನು ಕೇಳಿದರೆ ಸಾಲದು. ಅದಕ್ಕಿಂತಲೂ ಅದ್ಭುತವಾಗಿ ಹಾಡಿದ ಯಾವ್ಯಾವುದೋ ಭಾಷೆಗಳ ಸೊಗಡಿನ ಹಾಡುಗಳನ್ನು ಒಂದಿಷ್ಟೂ ತಪ್ಪಿಲ್ಲದ ಹಾಡಿದ್ದಾರೆ ಅವರು. ಇವತ್ತು ಆಕೆಗೆ 39ನೇ ಜನ್ಮದಿನ. ಹ್ಯಾಪಿ ಬರ್ತ್‌ಡೇ ಶ್ರೇಯಾ ಘೋಷಾಲ್‌.

VISTARANEWS.COM


on

Shreya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
RAJAMARGA

2000ನೇ ಇಸವಿಯಲ್ಲಿ ಝೀ ಟಿವಿ ನಡೆಸಿದ ರಾಷ್ಟ್ರಮಟ್ಟದ ರಿಯಾಲಿಟಿ ಶೋ ‘ಸಾರೆಗಮಪ’ ಗೆದ್ದಾಗ ಆಕೆಗೆ ಇನ್ನೂ 16 ವರ್ಷ ವಯಸ್ಸು! ಆಕೆಯ ಧ್ವನಿಯಲ್ಲಿ ಇದ್ದ ಒಂದು ಮುಗ್ಧತೆ ಮತ್ತು ವೈವಿಧ್ಯತೆಗಳು ಇಡೀ ರಾಷ್ಟ್ರದ ಗಮನವನ್ನು ಸೆಳೆದಾಗಿತ್ತು. ಆ ಶೋ ನೋಡುತ್ತಿದ್ದ ನಿರ್ಮಾಪಕ ಸಂಜಯ ಲೀಲಾ ಬನ್ಸಾಲಿ ಅವರ ತಾಯಿ ಮುಂದಿನ ಸಿನಿಮಾದಲ್ಲಿ ಆಕೆಯಿಂದ ಹಾಡಿಸಲೇಬೇಕು ಎಂದು ತಮ್ಮ ಮಗನಿಗೆ ಹೇಳಿದ್ದರು. ತಾಯಿಯ ಮಾತಿಗೆ ಗೌರವ ಕೊಟ್ಟ ಬನ್ಸಾಲಿ ತನ್ನ ಮುಂದಿನ ದೇವದಾಸ್ ಸಿನಿಮಾದ ಐದು ಹಾಡುಗಳನ್ನು ಆಕೆಯಿಂದ ಹಾಡಿಸಲು ಪ್ಲ್ಯಾನ್ ಮಾಡಿದ್ದರು. ಆಗ ಆಕೆಗೆ ಸೆಕೆಂಡ್ ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದವು. ಆಕೆ ವಿಜ್ಞಾನದ ವಿದ್ಯಾರ್ಥಿ ಬೇರೆ!

ಮೊದಲ ಹಾಡಿಗೇ ರಾಷ್ಟ್ರಪ್ರಶಸ್ತಿ!

ಪರೀಕ್ಷೆಗಳ ಒತ್ತಡದಲ್ಲಿ ಕೂಡ ಆಕೆ ಹಾಡಲು ಬಂದರು. ಸ್ಟುಡಿಯೊಕ್ಕೆ ಬರುವಾಗ ಪುಸ್ತಕ ತೆಗೆದುಕೊಂಡು ಬಂದು ಓದುವ ಗುಂಗಿನಲ್ಲಿಯೇ ಇದ್ದರು! ಅದರ ಮಧ್ಯೆ ಕೂಡ ಒಮ್ಮೆ ರಿಹರ್ಸಲ್ ತೆಗೆದುಕೊಂಡು ಒಂದೇ ಉಸಿರಲ್ಲಿ ಕಣ್ಣು ಮುಚ್ಚಿ ಎರಡು ಹಾಡುಗಳನ್ನು ಹಾಡಿ ಮುಗಿಸಿದರು. ಆ ಹಾಡುಗಳೆಂದರೆ ಭೈರೆ ಪಿಯಾ.. ಮತ್ತು ಡೋಲಾರೆ.. ಆಗಿದ್ದವು.

ಆಕೆ ಹಾಡು ಮುಗಿಸಿದಾಗ ಸ್ಟುಡಿಯೋ ಒಳಗೆ ಇದ್ದ ಅಷ್ಟೂ ಸ್ಟಾಫ್, ನಿರ್ಮಾಪಕ ಬನ್ಸಾಲಿ, ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಸೇರಿ ಎಲ್ಲರೂ ಚಪ್ಪಾಳೆ ತಟ್ಟಿ ಅಭಿನಂದನೆಯ ಮಳೆ ಸುರಿದಿದ್ದರು! ಆ ಹೊತ್ತಿಗೆ ಒಬ್ಬ ಮಹಾನ್ ಪ್ರತಿಭೆಯ ಉದಯ ಆಗಿತ್ತು. ಆ ಎರಡೂ ಹಾಡುಗಳಿಗೆ ಫಿಲಂಫೇರ್ ಪ್ರಶಸ್ತಿ ದೊರೆಯಿತು. ಬೆಸ್ಟ್ ಸಿಂಗರ್ ರಾಷ್ಟ್ರಪ್ರಶಸ್ತಿ ಕೂಡ ದೊರೆಯಿತು. ಅದರ ಜೊತೆಗೆ ಉದಯೋನ್ಮುಖ ಗಾಯಕರಿಗೆ ಕೊಡುವ ಆರ್ ಡಿ ಬರ್ಮನ್ ಪ್ರಶಸ್ತಿ ಕೂಡ ಆಕೆಗೆ ಒಲಿಯಿತು. ದೇವದಾಸ್ ಸಿನಿಮಾದ ಐಶ್ವರ್ಯ ರೈಯವರ ಪಾರೋ ಪಾತ್ರದ ಐದೂ ಹಾಡುಗಳು ಸೂಪರ್ ಹಿಟ್ ಆದವು. ಮುಂದೆ ಆಕೆ ಮುಟ್ಟಿದ್ದೆಲ್ಲ ಚಿನ್ನ ಆಯ್ತು. ಆಕೆಯೇ ಶ್ರೇಯಾ ಘೋಷಾಲ್!

ಶ್ರೇಯಾ ಘೋಷಾಲ್

ಬಾಲ್ಯದಲ್ಲಿ ಅಮ್ಮನ ಹಾಡುಗಳೇ ಆಕೆಗೆ ಸ್ಫೂರ್ತಿ!

ಆಕೆಯ ತಾಯಿ ಶರ್ಮಿಷ್ಠಾ ಘೋಷಾಲ್ ಬಂಗಾಳಿ ಮೂಲದವರು. ಆಕೆಯು ಅಡುಗೆ ಕೆಲಸ ಮಾಡುವಾಗ ಬಂಗಾಳಿ ಹಾಡುಗಳನ್ನು ಹಾಡುತ್ತಿದ್ದರು. ಭಜನ್ ತುಂಬಾ ಚೆನ್ನಾಗಿ ಹಾಡುವವರು. ಅವುಗಳನ್ನು ಕೇಳುತ್ತಾ ಬೆಳೆದವರು ಶ್ರೇಯಾ. ಆಕೆಯ ಸಿಂಗಿಂಗ್ ಪ್ರತಿಭೆಯನ್ನು ನಾಲ್ಕನೇ ವಯಸ್ಸಿಗೇ ಗುರುತಿಸಿ ವೇದಿಕೆಯಲ್ಲಿ ಹಾಡಿಸಿದವರು ಅದೇ ಅಮ್ಮ. ಮುಂದೆ ಆರನೇ ವಯಸ್ಸಿನಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ತರಬೇತಿ ಆರಂಭ ಆಯಿತು. ಅದರ ಜೊತೆಗೆ ಲಘು ಸಂಗೀತ, ಭಜನ್, ಘಜಲ್…. ಎಲ್ಲವನ್ನೂ ಆಕೆ ಕಲಿತರು. ಆಕೆ ಮನೆಯಲ್ಲಿ ರಿಯಾಝ್ ಮಾಡಲು ಕುಳಿತಾಗ ಅದೇ ಅಮ್ಮ ತಂಬೂರಾ ಹಿಡಿದು ಕುಳಿತಿದ್ದರು. ತಪ್ಪುಗಳನ್ನು ನೇರವಾಗಿ ಹೇಳುತ್ತಿದ್ದರು. ಎಲ್ಲಿ ಸಂಗೀತ ಸ್ಪರ್ಧೆ ಇದ್ದರೂ ಮಗಳನ್ನು ಸಿದ್ಧತೆ ಮಾಡಿ ಕರೆದುಕೊಂಡು ಹೋಗುತ್ತಿದ್ದರು. ಹಾಗೆ ಮಗಳ ಸಾಧನೆಯಲ್ಲಿ ಸ್ಫೂರ್ತಿ ತುಂಬಿದ ಮೊದಲ ಹೆಸರು ಅದೇ ಅಮ್ಮ ಶರ್ಮಿಷ್ಠಾ ಘೋಷಾಲ್‌

ಶ್ರೇಯಾ ಘೋಷಾಲ್

ಸೆಕೆಂಡ್ ಪಿಯುಸಿ ವಿಜ್ಞಾನ ಓದುತ್ತಿದ್ದ ಶ್ರೇಯಾಗೆ ಅಧ್ಯಯನಕ್ಕೆ ಸಮಯ ಸಿಗದೆ ಹೋದಾಗ ಇಡೀ ಕೋರ್ಸನ್ನು ರಿಜೆಕ್ಟ್ ಮಾಡಿ ಆರ್ಟ್ಸ್ ದಾರಿ ಹಿಡಿದರು. ಇಂಗ್ಲಿಷ್ ಮೇಜರ್ ಜೊತೆಗೆ ಆರ್ಟ್ಸ್ ಪದವಿ ಪಡೆದರು. ಆದರೆ ಸಂಗೀತದ ಕಲಿಕೆ ಮುಂದುವರಿಯಿತು. ಹನ್ನೊಂದು ವರ್ಷ ಆದಾಗ ಹಿಂದೂಸ್ತಾನಿ ಸಂಗೀತ ಕಛೇರಿ ಕೊಡುವಷ್ಟು ಮಟ್ಟಕ್ಕೆ ಆಕೆ ಬೆಳೆದಾಗಿತ್ತು! ಮುಂದೆ ಝೀ ಟಿವಿಯ ಸಾರೆಗಮಪ ಶೋ ಯಶಸ್ಸು ಮತ್ತು ಅದರ ಬೆನ್ನಿಗೆ ದೊರೆತ ದೇವದಾಸ್ ಹಾಡುಗಳ ಕೀರ್ತಿಗಳು ಆಕೆಯನ್ನು ಭಾರೀ ಎತ್ತರಕ್ಕೆ ತೆಗೆದುಕೊಂಡು ಹೋದವು

ಮುಂದೆ ಆಕೆ ಮುಟ್ಟಿದ್ದೆಲ್ಲ ಚಿನ್ನ ಆಯಿತು!

ಮುಂದೆ 22 ವರ್ಷಗಳ ಅವಧಿಯಲ್ಲಿ ಆಕೆ ಸಾವಿರಾರು ಹಾಡುಗಳನ್ನು 17 ಭಾಷೆಗಳಲ್ಲಿ ಹಾಡಿ ಆಗಿದೆ. ಕನ್ನಡದಲ್ಲಿ ಕೂಡಾ ಆಕೆ 400ಕ್ಕಿಂತ ಅಧಿಕ ಹಾಡುಗಳನ್ನು ಹಾಡಿದ್ದಾರೆ. ತುಳು ಭಾಷೆಯಲ್ಲಿ ಕೂಡಾ ಹಾಡಿದ್ದಾರೆ. ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಾಗಿದೆ! ನಾಲ್ಕು ಕೇರಳ ರಾಜ್ಯ ಪ್ರಶಸ್ತಿಗಳು ದೊರೆತಿವೆ. ತಮಿಳುನಾಡು ರಾಜ್ಯದ ಎರಡು ರಾಜ್ಯಪ್ರಶಸ್ತಿ, ಏಳು ಫಿಲ್ಮ್ ಫೇರ್ ಪ್ರಶಸ್ತಿ, ಹತ್ತು ದಕ್ಷಿಣದ ಫಿಲ್ಮ್ ಫೇರ್ ಪ್ರಶಸ್ತಿಗಳು….ಈಗಾಗಲೇ ಆಕೆಯ ಶೋ ಕೇಸಲ್ಲಿ ಇವೆ! ಎಲ್ಲಕಿಂತ ಹೆಚ್ಚಾಗಿ ಲತಾ ಮಂಗೇಷ್ಕರ್ ಆಕೆಯನ್ನು ತನ್ನ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದ್ದಾರೆ!
‘ ನಾನು ಲತಾಜೀ ಅವರ ಮುಂದೆ ಇನ್ನೂ ಸಣ್ಣ ಮಗು. ಅವರಿಂದ ತುಂಬಾ ಕಲಿತಿದ್ದೇನೆ’ ಎನ್ನುವ ಸೌಜನ್ಯ ಕೂಡ ಶ್ರೇಯಾ ಅವರಲ್ಲಿ ಇದೆ.

ಸೌಂದರ್ಯದ ಖನಿ ಈ ಶ್ರೇಯಾ ಘೋಷಾಲ್

ಶ್ರೇಯಾ ಬರೇ ಹಾಡುವ ಪ್ರತಿಭೆ ಮಾತ್ರವಲ್ಲ, ಸೌಂದರ್ಯ ದೇವತೆ ಕೂಡ ಎಂದು ಆಕೆಯ ಅಭಿಮಾನಿಗಳು ಸಂಭ್ರಮ ಪಡುತ್ತಾರೆ. ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಆಕೆಗೆ ದೊರೆತರೂ ಅದು ನನ್ನ ಕಪ್ ಆಫ್ ಟೀ ಅಲ್ಲ ಎಂದು ಅವರು ನಯವಾಗಿ ನಿರಾಕರಿಸಿ ಸಂಗೀತದಲ್ಲಿಯೇ ಮುಂದುವರಿಯುತ್ತಿರುವುದು ಅವರ ಬದ್ಧತೆ!

ಜಗದಗಲ ಹರಡಿದೆ ಶ್ರೇಯಾ ಕೀರ್ತಿ!

ಶ್ರೇಯಾ ಹಾಡಿದ ಹಾಡುಗಳು ಎಲ್ಲವೂ ಸೂಪರ್ ಹಿಟ್ ಆಗಿವೆ. ನಿರ್ಮಾಪಕರು ತಮ್ಮ ಸಿನಿಮಾದಲ್ಲಿ ಆಕೆಯಿಂದಲೆ ಹಾಡಿಸಬೇಕು ಎಂದು ಜಿದ್ದಿಗೆ ಬಿದ್ದಿದ್ದಾರೆ. ಎಷ್ಟು ತಿಂಗಳು ಬೇಕಾದರೂ ಕಾಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಆಕೆಗೆ ಸ್ಪರ್ಧೆಯೇ ಇಲ್ಲ ಎಂಬಷ್ಟು ಆಕೆ ಪ್ರಸಿದ್ಧಿ ಪಡೆದಿದ್ದಾರೆ. ವಿದೇಶದ ಆಕೆಯ ಮ್ಯೂಸಿಕಲ್ ನೈಟ್‌ಗಳಿಗೆ ಜನರು ಕಿಕ್ಕಿರಿದು ಸೇರುತ್ತಾರೆ. ಅಮೆರಿಕಾದ ಓಹಿಯೋ ಎಂಬ ಸಂಸ್ಥಾನದ ಗವರ್ನರ್ ಆಕೆಯ ಬಹು ದೊಡ್ಡ ಅಭಿಮಾನಿ. ಆತನು ತನ್ನ ಸಂಸ್ಥಾನದಲ್ಲಿ ಜೂನ್ 26ನ್ನು ಶ್ರೇಯಾ ಘೋಷಾಲ್ ದಿನ ಎಂದು ಘೋಷಣೆ ಮಾಡಿದ್ದಾರೆ! ದೆಲ್ಲಿಯ ತುಸಾಡ್ ಮ್ಯೂಸಿಯಂನಲ್ಲಿ ಆಕೆಯ ಮೇಣದ ಪ್ರತಿಮೆ ಸ್ಥಾಪನೆ ಆಗಿದೆ. ಶ್ರೇಯಾ ಇಂದು ಜಗದಗಲ ಕೀರ್ತಿ ಪಡೆದಿದ್ದಾರೆ.

ಗಂಡ ಮತ್ತು ಪುಟ್ಟ ಮಗುವಿನ ಜತೆ ಶ್ರೇಯಾ

ಆಕೆಯ ಕ್ಲಾಸ್, ಕ್ವಾಲಿಟಿ ಮತ್ತು ಸ್ಟೈಲ್ ಯಾರಲ್ಲೂ ಇಲ್ಲ!

ಇದು ಅಮೆರಿಕನ್ ಪತ್ರಿಕೆ ಆಕೆಯ ಬಗ್ಗೆ ಬರೆದ ಸಾಲುಗಳು. ಕೀರ್ತಿ ಆಕೆಯ ತಲೆ ಕೆಡಿಸಿಲ್ಲ ಅನ್ನುವುದು ತುಂಬಾ ಗ್ರೇಟ್. ಎಲ್ಲ ವಿಧವಾದ ಹಾಡುಗಳಿಗೆ ಬೇಕಾದ ಸ್ವರ ವೈವಿಧ್ಯ ಆಕೆಗೆ ದೇವರು ಕೊಟ್ಟ ವರವೇ ಆಗಿದೆ. ಬೆಂಗಳೂರಿನ ಒಂದು ಗಣೇಶೋತ್ಸವದ ಪೆಂಡಾಲ್ ಆಕೆಯನ್ನು ಕರೆದು ವಿಶೇಷವಾದ ಸಂಗೀತ ಸಂಜೆ ಏರ್ಪಾಡು ಮಾಡಿತ್ತು. ಅಂದು ಆಕೆ ಹಾಡಿದ ಅಷ್ಟೂ ಹಾಡುಗಳು ಕನ್ನಡದ್ದೇ ಹಾಡುಗಳು! ಆಕೆ ಕೆಲವು ಗಣೇಶನ ಭಕ್ತಿಗೀತೆಗಳನ್ನು ಆ ಸಂಗೀತ ಸಂಜೆಗಾಗಿ ಕಲಿತು ಬಂದಿದ್ದರು! ಎಲ್ಲವೂ ಸೂಪರ್ ಹಿಟ್!

ಆಕೆಯ ಸ್ವರ ವೈವಿಧ್ಯ ಮತ್ತು ಕಷಿಷ್ ಆಕೆಯನ್ನು ಗೆಲ್ಲಿಸುವ ಮಂತ್ರಗಳು. ಶಾಸ್ತ್ರೀಯ ಹಾಡುಗಳು, ಮುಜ್ರಾ, ಟುಮ್ರಿ, ಗಝಲ್, ಭಜನ್, ರೊಮ್ಯಾಂಟಿಕ್ ಹಾಡು, ಜೋಗುಳದ ಹಾಡು, ಸೋಲೋ, ಡುಯೆಟ್…ಯಾವ ಹಾಡಾದರೂ ಆಕೆ ಹಾಡು ಮುಗಿಸುವಾಗ ಅದರಲ್ಲಿ ಆಕೆಯದೇ ಸಿಗ್ನೇಚರ್ ಬಿದ್ದಾಗಿರುತ್ತದೆ! ಅದು ಆಕೆಯ ಪ್ರತಿಭೆ.

ಡೋಲಾರೆ ಡೋಲಾರೆ…

ಜೆಹರ್ ಸಿನೆಮಾದ ಅಗರ್ ತುಂ ಮಿಲ್ ಜಾವೋ ಅಂತಹ ಮಾಧುರ್ಯ, ಆಶಿಕ್ ಬನಾಯಾದ ಹಾಂಟಿಂಗ್ ಮೆಲೊಡಿ, ಗುರು ಸಿನೆಮಾದ ಬರ್ಸೋರೆ ಮೇಘಾ ಮೇಘಾ ಅಂತಹ ಮಳೆಯ ಹಾಡು, ಭೂಲ್ ಭೂಲಯ್ಯ ಸಿನೆಮಾದ ಮೇರೆ ಡೋಲನಾದಂತಹ ಶಾಸ್ತ್ರೀಯ ಹಾಡು, ಅಗ್ನಿ ಪಥ್ ಸಿನೆಮಾದ ಚಕ್ನಿ ಚಮೇಲಿಯ ತುಂಟತನ, ಡರ್ಟಿ ಪಿಕ್ಚರ್ ಸಿನೆಮಾದ ಉಲಾಲಾ ಊಲಾಲದ ಮಾದಕತೆ, ಹ್ಯಾಪಿ ನ್ಯೂ ಇಯರ್ ಸಿನೆಮಾದ ಮನ್ವ ಲಾಗೆ ಹಾಡಿನ ರೋಮಾನ್ಸ್, ಪದ್ಮಾವತ್ ಸಿನೆಮಾದ ಘೂಮರ್ ಹಾಡಿನ ಕ್ಲಾಸಿಕ್ ಟಚ್…! ಇವು ಆಕೆಯ ಪ್ರತಿಭೆಯ ಕೆಲವೇ ಕೆಲವು ಉದಾಹರಣೆಗಳು. ಟಿಪ್ ಆಫ್ ದ ಐಸ್ ಬರ್ಗ್ ಅಂದ ಹಾಗೆ!

ಕನ್ನಡದಲ್ಲಿಯೂ ಶ್ರೇಯಾ ಮಿಂಚು!

ಪ್ಯಾರಿಸ್ ಪ್ರಣಯ ಸಿನೆಮಾದ ಕೃಷ್ಣ ನೀ ಬೇಗನೆ ಬಾರೋ ಹಾಡಿನ ಮೂಲಕ ಕನ್ನಡಕ್ಕೆ ಬಂದ ಶ್ರೇಯಾ ಮುಂದೆ ಮುಂಗಾರು ಮಳೆ, ಸಂಜು ವೆಡ್ಸ್ ಗೀತಾ, ಮೈನಾ, ಚಕ್ರವರ್ತಿ, ರಾಬರ್ಟ್, ಮುಸ್ಸಂಜೆ ಮಾತು, ಮೊಗ್ಗಿನ ಮನಸ್ಸು …..ಮೊದಲಾದ ನೂರಾರು ಸಿನೆಮಾಗಳಲ್ಲಿ ಹಾಡಿದ್ದಾರೆ. ಕನ್ನಡಿಗರು ಆಕೆ ನಮ್ಮದೇ ಮನೆ ಹುಡುಗಿ ಎಂಬಂತೆ ಆಕೆಯನ್ನು ಸ್ವೀಕಾರ ಮಾಡಿದ್ದಾರೆ. ಒಂದಕ್ಷರ ಸಾಹಿತ್ಯ ತಪ್ಪಾಗದ ಹಾಗೆ ಅವರು ಭಾವನೆ ತುಂಬಿ ಹಾಡುವ ರೀತಿಗೆ ಕನ್ನಡದ ಮಂದಿ ಫಿದಾ ಆಗಿದ್ದಾರೆ.

ಶ್ರೇಯಾ ಘೋಷಾಲ್‌ ಅವರು ಒಂದಕ್ಷರವೂ ತಪ್ಪಿಲ್ಲದೆ ಕನ್ನಡದ ಕ್ಲಾಸಿಕ್‌ ಹಾಡುಗಳನ್ನು ಹಾಡುತ್ತಾರೆ.. ಇಲ್ಲಿದೆ ಕುವೆಂಪು ಅವರದೊಂದು ಕವನ

ಇಂದು ಕೀರ್ತಿಯ ಶಿಖರದಲ್ಲಿ ಇರುವ ಶ್ರೇಯಾ ಘೋಷಾಲ್ ಅವರಿಗೆ 38 ತುಂಬಿತು. ಆಕೆ ಇನ್ನಷ್ಟು ವರ್ಷ ತನ್ನ ಸ್ಥಾನವನ್ನು ಯಾರಿಗೂ ಬಿಟ್ಟು ಕೊಡುವ ಸಾಧ್ಯತೆ ಇಲ್ಲ!

ಯಾರೇನೇ ಹೇಳಲಿ ನಾನಂತೂ ಆಕೆಯ ಡೈ ಹಾರ್ಡ್ ಫ್ಯಾನ್ ಎನ್ನುವುದೇ ಭರತವಾಕ್ಯ. ಹ್ಯಾಪಿ ಬರ್ತ್ ಡೇ ಟು ದ ಕ್ವೀನ್ ಆಫ್ ಮೆಲೊಡಿ

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಭಾಷಣಕ್ಕೆ ನಿಂತಾಗ ನಿಮಗೆ ಮೈ ನಡುಗುತ್ತದೆಯೇ? ಈ ಸಭಾ ಕಂಪನ ಗೆಲ್ಲಲು ಇಲ್ಲಿವೆ 13 ಟಿಪ್ಸ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

Raja Marga Column : 13 ವರ್ಷದ ನನ್ನ ಮಗಳು ಒಮ್ಮಿಂದೊಮ್ಮೆಗೆ ಮಂಕಾಗಿದ್ದು ಯಾಕೆ?

Raja Marga Column : ಚೆನ್ನಾಗಿಯೇ ಇದ್ದ ಮಗಳು ಒಮ್ಮಿಂದೊಮ್ಮೆಗೆ ಮೌನಕ್ಕೆ ಜಾರಿದಳು. ಚಿಗರೆಯಂತಿದ್ದವಳು ಜಿಗಿಯುವುದನ್ನೇ ಮರೆತಳು. 13 ವರ್ಷದ ಹುಡುಗಿಗೆ ಏನಾಯಿತು.? ನಾನು ಆಕೆಯನ್ನು ಈ ಸಂಕಟದಿಂದ ಹೊರತಂದಿದ್ದು ಹೇಗೆ?

VISTARANEWS.COM


on

Raja Marga Father and Daughter
Koo
RAJAMARGA Rajendra Bhat

ಮೊನ್ನೆ ಮೊನ್ನೆ ತನ್ನ 13ನೆಯ ಹುಟ್ಟುಹಬ್ಬವನ್ನು ಸೆಲೆಬ್ರೇಟ್ (13 year old daughter) ಮಾಡಿದ ನನ್ನ ಮಗಳು ಇಂದಿಗೂ ರಾತ್ರಿ ಮಲಗುವುದು ಅಪ್ಪನ ಕಾಲಿನ ಮೇಲೆಯೇ. ಅಪ್ಪನ ಬಾಯಿಂದ ಅದ್ಭುತವಾದ ಕಾಲ್ಪನಿಕ ಕಥೆಗಳನ್ನು ಕೇಳುತ್ತ, ಜೋಗುಳದ ಹಾಡುಗಳನ್ನು ಕೇಳುತ್ತ ಆಕೆ ದೊಡ್ಡವಳಾದವಳು. ಅವಳೀಗ ಪ್ರೈಮರಿ ಶಿಕ್ಷಣವನ್ನು (Primary Education) ಮುಗಿಸಿ ಹೊಸತೊಂದು ಖಾಸಗಿ ಹೈಸ್ಕೂಲಿಗೆ (Private High school) ಸೇರಿದವಳು. ನನ್ನ ಮಗಳು ಈಗ ಎಂಟನೇ ಕ್ಲಾಸ್ (Raja Marga Column).

ಅವಳೀಗ ಮೊದಲಿನ ಹಾಗೆ
ಮನಸ್ಸು ಬಿಚ್ಚಿ ಮಾತಾಡುವುದಿಲ್ಲ!

ರಾತ್ರಿ ಮಲಗುವ ಮೊದಲು ಅವಳು ಇಡೀ ದಿನ ನಡೆದ ಪ್ರತೀ ಒಂದು ಘಟನೆಯನ್ನೂ ಅಪ್ಪನಿಗೆ ಹೇಳುತ್ತಾಳೆ. ಆಗ ಅವಳಿಗೆ ಯಾವ ಫಿಲ್ಟರ್ ಅಡ್ಡ ಬರುವುದಿಲ್ಲ. ಇದನ್ನು ಹೇಳಬೇಕೋ ಬೇಡವೋ ಎಂಬ ಗೊಂದಲ ಇರುವುದಿಲ್ಲ. ಟೀಚರ್ ಹೊಗಳಿದ್ದು, ಕ್ಲಾಸ್‌ಮೇಟ್ ಗೀರಿದ್ದು, ಆಕೆಯ ಓರಗೆಯ ಹುಡುಗ ಕಣ್ಣು ಹೊಡೆದು ಲವ್ ಯು ಅಂದದ್ದು….ಎಲ್ಲವನ್ನೂ ಅವಳು ಹೇಳಿಯೇ ಹೇಳುತ್ತಾಳೆ.

ಆದರೆ ಇತ್ತೀಚೆಗೆ ಯಾವುದನ್ನೂ ಹೇಳದೆ ಆಕೆ ಮೌನವಾಗಿದ್ದಾಳೆ. ಆಕೆಯ ಕಣ್ಣುಗಳಲ್ಲಿ ಅಗಾಧವಾದ ಭಯ ಹೊರಗೆ ಇಣುಕುತ್ತದೆ. ಉತ್ಸಾಹದ ಚಿಲುಮೆ ಆಗಿದ್ದ ನನ್ನ ಪ್ರಿನ್ಸೆಸ್ ಈಗ ಮಂಕಾಗಿರುವುದು ನನಗೆ ಅಚ್ಚರಿ ತರುತ್ತದೆ. ಆರಂಭದಲ್ಲಿ ಹೊಸ ಶಾಲೆಗೆ ಸೇರಿದ್ದಾಳೆ, ಹೊಂದಾಣಿಕೆ ಕಷ್ಟ ಆಗಿರಬಹುದು ಎಂದು ನಾನು ಭಾವಿಸಿದ್ದೆ. ಅಥವಾ ಪ್ರಾಯಕ್ಕೆ ಬಂದಿದ್ದ ಕಾರಣ ಗೊಂದಲಗಳು ಇರಬಹುದು ಎಂದು ಯೋಚಿಸಿದ್ದೆ. ಆದರೆ ಅವಳ ನೋವಿಗೆ ಅದ್ಯಾವುದೂ ಕಾರಣ ಅಲ್ಲ ಎಂದು ಗೊತ್ತಾದಾಗ ನಾನು ಅವಳ ಬಾಯಿ ಬಿಡಿಸುವುದು ಅನಿವಾರ್ಯ ಆಯಿತು. ಒಮ್ಮೆಗೇ ಅವಳು ನನ್ನ ಕುತ್ತಿಗೆಯ ಸುತ್ತ ಬಳಸಿ ಹಿಡಿದು ಜೋರಾಗಿ ಅಳಲು ಆರಂಭ ಮಾಡಿದಳು! ಎಷ್ಟೋ ದಿನಗಳಿಂದ ಒತ್ತಿ ಹಿಡಿದ ಅಣೆಕಟ್ಟು ಪ್ರವಾಹವಾಗಿ ಹರಿಯಲು ಆರಂಭ ಆಯಿತು.

Raja Marga Father and Daughter

ಅಪ್ಪಾ, ನನಗೆ ಈ ಶಾಲೆ ಬೇಡ!

ನನ್ನ ಪ್ರಿನ್ಸೆಸ್ ಹಾಗೆಂದು ಹಠ ಹಿಡಿದು ಅಳುವಾಗ ನನಗೆ ಏನು ಹೇಳಬೇಕು ಎಂದು ಗೊತ್ತಾಗಲಿಲ್ಲ. ಅವಳು ಸೇರಿದ ಹೈಸ್ಕೂಲ್‌ ನಮ್ಮೂರಲ್ಲಿಯೆ ಪ್ರಸಿದ್ಧವಾದ ಶಾಲೆ. ಒಳ್ಳೆಯ ಅಧ್ಯಾಪಕರು ಇದ್ದಾರೆ. ಚಂದ ಪಾಠ ಮಾಡುವ ಶಾಲೆ ಅದು. ಪರೀಕ್ಷೆಯ ರಿಸಲ್ಟ್ ತುಂಬ ಚೆನ್ನಾಗಿದೆ. ಸೌಲಭ್ಯಗಳು ಚೆನ್ನಾಗಿವೆ. ಹಾಗಿರುವಾಗ ಅವಳು ಯಾಕೆ ಆ ಶಾಲೆ ಬೇಡ ಅಂತಾಳೆ? ನನಗೆ ಅರ್ಥ ಆಗಲಿಲ್ಲ.

ಆಗ ಅವಳ ಅಳು ನಿಯಂತ್ರಣಕ್ಕೆ ಬಂದಿತ್ತು. ನನ್ನ ಪ್ರಿನ್ಸೆಸ್ ಈಗ ಒಂದೊಂದಾಗಿ ಕಾರಣವನ್ನು ಹೇಳುತ್ತಾ ಹೋದಂತೆ ನಾನು ಬೆಚ್ಚಿ ಬಿದ್ದೆ.

ಓವರ್ ಟು ಮೈ ಪ್ರಿನ್ಸೆಸ್….

ಅಪ್ಪ, ನಾನು ಓದಿದ ಪ್ರೈಮರಿ ಶಾಲೆಯಲ್ಲಿ ನನಗೆ ಯಾವ ಒತ್ತಡವೂ ಇರಲಿಲ್ಲ. ತುಂಬಾ ಗೆಳೆಯರು, ನೂರಾರು ಚಟುವಟಿಕೆಗಳು, ಚಂದ ಚಂದ ಕನಸುಗಳು, ಆಟಗಳು, ನೃತ್ಯಗಳು, ಹಾಡುಗಳು ಎಲ್ಲವೂ ಇದ್ದವು. ಒಂದು ದಿನವೂ ನಮ್ಮ ಅಧ್ಯಾಪಕರು ಪರೀಕ್ಷೆಗಳ ಬಗ್ಗೆ ಮಾತಾಡಿರಲಿಲ್ಲ. ನಮ್ಮ ಓರಗೆಯ ಗೆಳೆಯರು ಒಬ್ಬರಿಗೆ ಒಬ್ಬರು ಸಪೋರ್ಟ್ ಮಾಡುತ್ತಿದ್ದರು. ಚಂದ ಕಲಿಯುವ ವಾತಾವರಣ ಇತ್ತು. ನಮ್ಮ ಮಧ್ಯೆ ಸ್ಪರ್ಧೆ ಇರಲೇ ಇಲ್ಲ. ಶಿಕ್ಷಕರು ತಾರತಮ್ಯ ಮಾಡಿದ್ದೇ ಇಲ್ಲ.

ಈಗ ಎಲ್ಲವನ್ನೂ ಬಾಯಿಪಾಠ ಮಾಡಿಸುತ್ತಾರೆ!

ಆದರೆ ಈಗ ನಮ್ಮ ಹೈಸ್ಕೂಲ್ ಅದಕ್ಕೆ ವಿರುದ್ಧವಾಗಿದೆ. ಅಧ್ಯಾಪಕರು ಚಂದ ಪಾಠ ಮಾಡುತ್ತಾರೆ. ಆದರೆ ಪ್ರತೀ ದಿನವೂ ಪರೀಕ್ಷೆ, ಪರೀಕ್ಷೆ ಎಂದು ಗೋಳು ಹೊಯ್ದುಕೊಳ್ಳುತ್ತಾರೆ. ಅನಾವಶ್ಯಕವಾಗಿ ಬಾಯಿಪಾಠ ಮಾಡಲು ಒತ್ತಾಯ ಮಾಡುತ್ತಾರೆ. ನಾನು ಪ್ರೈಮರಿ ಶಾಲೆಯಲ್ಲಿ ಎಂದಿಗೂ ಬಾಯಿಪಾಠ ಮಾಡಿದ್ದು ಇಲ್ಲ. ಎಲ್ಲವನ್ನೂ ನಮ್ಮ ಅಧ್ಯಾಪಕರು ಅರ್ಥ ಮಾಡಿ ಬಿಡುತ್ತಿದ್ದರು. ಬಾಯಿಪಾಠದ ಅಗತ್ಯವೇ ಬೀಳಲಿಲ್ಲ. ಆದರೆ ಈಗ ಇಲ್ಲಿನ ಅಧ್ಯಾಪಕರು ಬಲವಂತವಾಗಿ ಬಾಯಿಪಾಠ ಮಾಡಿಸುತ್ತಾರೆ. ನಮ್ಮದೇ ವಾಕ್ಯ ಮಾಡಿ ಉತ್ತರ ಬರೆದರೆ ಮಾರ್ಕ್ ಕೊಡುವುದೇ ಇಲ್ಲ! ಒಂದೊಂದು ಉತ್ತರವನ್ನು ಹತ್ತು ಸಲ ಬರೆಸುತ್ತಾರೆ. ಅದರಿಂದ ನಮಗೇನು ಲಾಭ? ನಾನು ಬಾಲ್ಯದಿಂದಲೂ ಕ್ರಿಯೇಟಿವ್ ಆಗಿ ಕಲಿತವಳು. ಯಾಂತ್ರಿಕವಾಗಿ ಕಲಿಯುವುದು ನನ್ನಿಂದ ಆಗೋದಿಲ್ಲ ಅಪ್ಪ. ಅವರು ಕೊಟ್ಟ ನೋಟ್ಸ್ ಬಾಯಿಪಾಠ ಮಾಡಿ ಉತ್ತರ ಬರೆಯುವುದು ಅದ್ಯಾವ ಬುದ್ಧಿವಂತಿಕೆ?

ನನಗೆ ಒಮ್ಮೆ ಹೇಳಿದರೆ ಎಲ್ಲವೂ ಅರ್ಥ ಆಗುತ್ತದೆ ಅಪ್ಪ. ಮತ್ತೆ ಅವರು ಯಾಕೆ ಒಂದೊಂದು ವಾಕ್ಯ ಮೂರು ಮೂರು ಬಾರಿ ಹೇಳುತ್ತಾರೆ?

Raja Marga Father and Daughter

ಶಿಕ್ಷಕರು ನಮಗೆ ಚುಚ್ಚಿ ನೋವು ಕೊಟ್ಟು ಮಾತಾಡ್ತಾರೆ

ನಮ್ಮ ಶಿಕ್ಷಕರು ತರಗತಿಯಲ್ಲಿ ಅನಾವಶ್ಯಕವಾಗಿ ಕಂಪೇರ್ ಮಾಡ್ತಾರೆ. ಅವಳನ್ನು ನೋಡಿ ಕಲಿ, ಇವನನ್ನು ನೋಡಿ ಕಲಿ ಎಂದೆಲ್ಲ ಹೇಳುತ್ತಾರೆ. ನನಗದು ಇಷ್ಟ ಆಗೋದಿಲ್ಲ ಅಪ್ಪ. ನಾನು ನಾನೇ ಆಗಿರೋದು ನನಗೆ ಇಷ್ಟ. ನಾನ್ಯಾಕೆ ಅವನ ಹಾಗೆ, ಅವಳ ಹಾಗೆ ಇರಬೇಕು? ಮಾತು ಮಾತಿಗೂ ಚುಚ್ಚಿ ಮಾತಾಡ್ತಾರೆ.

ಮೊನ್ನೆ ನಮ್ಮ ಗಣಿತ ಮ್ಯಾಮ್ ಬೋರ್ಡ್ ಮೇಲೆ ಒಂದು ಲೆಕ್ಕ ತಪ್ಪು ಮಾಡಿದರು. ನಾನು ಎದ್ದು ನಿಂತು ಅದು ತಪ್ಪು ಅಂತ ಹೇಳಿದ್ದೆ. ಆಗ ಆ ಮ್ಯಾಮ್ ಗಟ್ಟಿಯಾಗಿ ‘ಕೂತ್ಕೋ ಕೂತ್ಕೋ. ನೀನು ಗಣಿತ ಮೇಷ್ಟ್ರ ಮಗಳು ಎಂದು ಗೊತ್ತಿದೆ!’ ಎಂದರು. ನನಗೆ ಅಳು ಬಂತು ಅಪ್ಪ. ನಾನೇನು ತಪ್ಪು ಹೇಳಿದ್ದೇನೆ? ಅವರ್ಯಾಕೆ ನಿಮ್ಮ ಬಗ್ಗೆ ಹಗುರವಾಗಿ ಮಾತಾಡಬೇಕು? ನನಗದು ಇಷ್ಟ ಆಗೋದಿಲ್ಲ ಅಪ್ಪ.

ಶಿಕ್ಷಕರು ಇಲ್ಲಿ ತಾರತಮ್ಯ ಮಾಡ್ತಾರೆ ಅಪ್ಪ

ನಮ್ಮ ಶಾಲೆಯಲ್ಲಿ ಬಡವರ ಮಕ್ಕಳು, ಶ್ರೀಮಂತರ ಮಕ್ಕಳು ಎಂಬ ತಾರತಮ್ಯ ಇದೆ ಅಪ್ಪ. ಶ್ರೀಮಂತರ ಮಕ್ಕಳು ಶಾಲೆಗೆ ಹೆಚ್ಚು ಡೊನೇಶನ್ ಕೊಡುವ ಕಾರಣ ಅವರಿಗೆ ಹೆಚ್ಚು ಮಾರ್ಕ್, ಅವರಿಗೆ ಹೆಚ್ಚು ಬಹುಮಾನ, ಅವರಿಗೆ ಹೆಚ್ಚು ಹೊಗಳಿಕೆ. ನನಗದು ಇಷ್ಟ ಆಗೋದಿಲ್ಲ ಅಪ್ಪ.

ಮೊನ್ನೆ ಒಂದು ಸಣ್ಣ ಸ್ಪೆಲ್ಲಿಂಗ್ ತಪ್ಪು ಮಾಡಿದ್ದಕ್ಕೆ ಬೈದರು. ನೂರು ಸಲ ಬರೆಯಲು ಹೇಳಿದರು. ನಾನೇನಾದರೂ ಬೇಕೆಂದೇ ತಪ್ಪು ಮಾಡುತ್ತೇನಾ? ತಪ್ಪು ಮಾಡಲು ಅವಕಾಶ ಇಲ್ಲದ ಶಾಲೆ ನನಗೆ ಬೇಡ. ನನ್ನ ಕ್ರಿಯೇಟಿವ್ ಟ್ಯಾಲೆಂಟ್ ಅವರಿಗೆ ಬೇಡ ಅಂದರೆ ನನಗೆ ಶಾಲೆಯೇ ಬೇಡ!‌ ನಮ್ಮದು ಶಾಲೆ ಎಂಬ ಭಾವನೆ ಬರುವುದಿಲ್ಲ ಅಪ್ಪ.

Raja Marga Father and Daughter

ಅದು ರ‍್ಯಾಂಕ್ ಪಡೆಯುವ ಒಂದು ಕಾರ್ಖಾನೆ!

ಒಂದೇ ಒಂದು ಬದುಕಿನ ಪಾಠ ಇಲ್ಲ. ಎಲ್ಲರೂ ಮಾರ್ಕ್, ಮಾರ್ಕ್ ಎಂದು ಅರಚುತ್ತಾರೆ. ರ‍್ಯಾಂಕ್ ಪಡೆಯುವ ಮಕ್ಕಳಿಗೆ ಸಪರೇಟ್ ಕ್ಲಾಸಸ್ ಮಾಡ್ತಾರೆ. ಕಡಿಮೆ ಮಾರ್ಕ್ ತೆಗೆದುಕೊಳ್ಳುವ ಮಕ್ಕಳಿಗೆ ಬೇರೆ ಅಧ್ಯಾಪಕರು ಪಾಠ ಮಾಡ್ತಾರೆ. ಪರೀಕ್ಷೆಗೆ ಬರುವ ಪ್ರಶ್ನೆಗಳನ್ನು ಮಾತ್ರ ಹೇಳಿಕೊಡುತ್ತಾರೆ. ನಾವೇನಾದರೂ ಕುತೂಹಲಕ್ಕೆ ಪ್ರಶ್ನೆ ಕೇಳಿದರೆ ಅಧಿಕ ಪ್ರಸಂಗಿ ಎಂದು ಬೈತಾರೆ. ನನಗೆ ಈ ಶಾಲೆ ಬೇಡ ಅಪ್ಪ.

ಓರಗೆಯ ಗೆಳೆಯರಲ್ಲ ಅವರು‌, ಸ್ಪರ್ಧಿಗಳು!

ಇನ್ನು ನಮ್ಮ ಓರಗೆಯ ಇತರರು ನನಗೆ ಗೆಳೆಯರಾಗಿ ಕಾಣುತ್ತಿಲ್ಲ. ಅವರು ನನ್ನ ಜೊತೆಗೆ ರೇಸಿಗೆ ನಿಂತ ಹಾಗೆ ವರ್ತಿಸುತ್ತಾರೆ. ಅವರಿಗಿಂತ ನನಗೆ ಒಂದು ಮಾರ್ಕ್ ಹೆಚ್ಚು ಬಂದರೂ ಉರಿದು ಸಾಯುತ್ತಾರೆ. ಯಾವುದೇ ಸ್ಪರ್ಧೆಯಲ್ಲಿ ನನಗೆ ಬಹುಮಾನ ಬಂದರೆ ಪಾರ್ಶಿಯಾಲಿಟಿ ಎಂದು ಬೊಬ್ಬೆ ಹೊಡೆಯುತ್ತಾರೆ. ನನ್ನ ವಿರುದ್ಧ ಶಿಕ್ಷಕರ ಬಳಿ ಹೋಗಿ ಚಾಡಿ ಹೇಳುತ್ತಾರೆ. ನಾನು ಓದಬಾರದು ಎಂದು ನಾನು ಕಷ್ಟ ಪಟ್ಟು ಬರೆದ ನೋಟ್ಸ್ ಪುಟಗಳನ್ನು ಹರಿಯುತ್ತಾರೆ. ಹಿಂಸೆ ಕೊಡುತ್ತಾರೆ. ಶಿಕ್ಷಕರಿಗೆ ಗಿಫ್ಟ್ ತಂದುಕೊಟ್ಟು ಪ್ಲೀಸ್ ಮಾಡ್ತಾರೆ.

ಅಂತಹ ಮಕ್ಕಳನ್ನು ನಮ್ಮ ಟೀಚರ್ಸ್ ತಲೆಯ ಮೇಲೆ ಹೊತ್ತು ಪೂಜೆ ಮಾಡ್ತಾರೆ. ಸ್ಕೂಲ್ ಡೇನಲ್ಲಿಯೂ ಅಂತಹ ಮಕ್ಕಳಿಗೆ ಮಾತ್ರ ವೇದಿಕೆ. ಅವರಿಗೆ ಸಾಲು ಸಾಲು ಬಹುಮಾನಗಳು! ಉಳಿದವರಿಗೆ ಏನೂ ಇಲ್ಲ.

ನಮ್ಮ ಶಾಲೆಯಲ್ಲಿ ಮಾರ್ಕ್ ಪಡೆಯುವುದು ಮಾತ್ರ ಟ್ಯಾಲೆಂಟ್!

ಬೇರೆ ಯಾವ ಟ್ಯಾಲೆಂಟ್ ಕೂಡ ನಮ್ಮ ಶಿಕ್ಷಕರಿಗೆ ಬೇಡ. ಸ್ಪೋರ್ಟ್ಸ್, ಗೇಮ್ಸ್, ನಾಟಕ, ಸ್ಕಿಟ್, ಹಾಡು, ಡ್ಯಾನ್ಸ್ ಇದ್ಯಾವುದಕ್ಕೂ ನಮ್ಮ ಶಾಲೆಯಲ್ಲಿ ವೇದಿಕೆ ಇಲ್ಲ. ಗೇಮ್ಸ್ ಪೀರಿಯಡ್ ಇದ್ದಾಗಲೂ ಟೀಚರ್ಸ್ ಬಂದು ಗಣಿತ, ವಿಜ್ಞಾನ, ಇಂಗ್ಲಿಷ್ ಪಾಠ ಮಾಡ್ತಾರೆ. ನಮ್ಮ ಇಂಗ್ಲಿಷ್ ಟೀಚರ್ ಇವತ್ತಿಗೂ ಭಾಷಾಂತರ ವಿಧಾನದಲ್ಲಿ ಪಾಠ ಮಾಡ್ತಾರೆ. ನಮಗೆ ಇಂಗ್ಲೀಷ್ ಭಾಷೆಯಲ್ಲಿಯೇ ಮಾತಾಡಬೇಕು ಅನ್ನುತ್ತಾರೆ. ಅವರು ಸ್ಟಾಫ್ ರೂಂನಲ್ಲಿ ಇಂಗ್ಲಿಷ್‌ ಬಿಟ್ಟು ಬೇರೆಲ್ಲಾ ಭಾಷೆ ಮಾತಾಡುತ್ತಾರೆ! ನನಗೆ ಈ ಶಾಲೆ ಬೇಡವೇ ಬೇಡ ಅಪ್ಪ. ಪ್ಲೀಸ್ ಬೇರೆ ಕಡೆ ಸೇರಿಸಿ.

ಇದನ್ನೂ ಓದಿ : Raja Marga Column : ಗಂಡ, ಮಕ್ಕಳ ಕೊಂದವರ ಕ್ಷಮಿಸಿದ್ದೇನೆ ಎಂದು ಹೇಳಿದ್ದರು ಆಕೆ!

ಭರತವಾಕ್ಯ

ನನ್ನ ಮಗಳ ನಿರ್ಧಾರ ಸರಿ ಇತ್ತು. ನಾಳೆಯೇ ಅವಳನ್ನು ಬೇರೆ ಶಾಲೆಗೆ ಸೇರಿಸುವ ಭರವಸೆ ಕೊಟ್ಟೆ. ಅವಳು ಥ್ಯಾಂಕ್ಸ್ ಅಪ್ಪ ಎಂದು ನನ್ನ ಕೆನ್ನೆಗೆ ಮುತ್ತು ಕೊಟ್ಟು ನಿದ್ದೆಗೆ ಜಾರಿದಳು.

Continue Reading

ಅಂಕಣ

Raja Marga Column : ಗಂಡ, ಮಕ್ಕಳ ಕೊಂದವರ ಕ್ಷಮಿಸಿದ್ದೇನೆ ಎಂದು ಹೇಳಿದ್ದರು ಆಕೆ!

Raja Marga Column : ಕ್ಷಮೆ ನೀಡಿ ಸೋತವರು ಯಾರೂ ಇಲ್ಲ. ನೀವು ಗ್ರಹಾಂ ಸ್ಟೈನ್ಸ್‌ ಕೊಲೆ ಮತ್ತು ಆತನ ಹೆಂಡತಿ ನಡೆದುಕೊಂಡ ರೀತಿ ಗಮನಿಸಿದರೆ ಕ್ಷಮೆಯ ಶಕ್ತಿ ಅರ್ಥವಾಗುತ್ತದೆ.

VISTARANEWS.COM


on

Grahan staines Raja Marga
ಗ್ರಹಾಂ ಸ್ಟೇನ್ಸ್‌ ಕುಟುಂಬ
Koo
RAJAMARGA Rajendra Bhat

1999ರಲ್ಲಿ ಒರಿಸ್ಸಾದಲ್ಲಿ ನಡೆದ ಒಂದು ಘಟನೆಯು ಭಾರಿ ಸುದ್ದಿ ಮಾಡಿತ್ತು. ಅಲ್ಲಿ ದಟ್ಟವಾದ ಕಾಡಿನ ನಡುವೆ ಒಂದು ಸಣ್ಣ ಗುಡಿಸಲು ಕಟ್ಟಿಕೊಂಡು ಒಬ್ಬ ಆಸ್ಟ್ರೇಲಿಯಾದ ಧರ್ಮಗುರು (Australian priest) ವಾಸವಾಗಿದ್ದನು. ಆತನ ಹೆಸರು ಗ್ರಹಾಂ ಸ್ಟೈನ್ಸ್ (Graham Staines). ಆತನ ಹೆಂಡತಿಯ ಹೆಸರು ಗ್ಲಾಡಿಸ್ ಸ್ಟೈನ್ಸ್‌ (Gladis Staines) . ಅವರಿಗೆ ಮೂರು ಮುದ್ದು ಮುದ್ದಾದ ಮಕ್ಕಳು. ಕಾಡಿನಲ್ಲಿ ವಾಸವಾಗಿದ್ದ ಆದಿವಾಸಿಗಳ ಸೇವೆ ಮಾಡುವುದು ಆ ಕುಟುಂಬಕ್ಕೆ ತುಂಬಾ ಖುಷಿ ಕೊಡುವ ಕಾಯಕ. ಆ ಆದಿವಾಸಿಗಳನ್ನು ಶಿಕ್ಷಿತರಾಗಿ ಮಾಡಲು, ಅವರ ಕುಷ್ಠ ರೋಗಕ್ಕೆ ಶುಶ್ರೂಷೆ ನೀಡಲು ಆ ಕುಟುಂಬವು ಶ್ರಮಿಸುತ್ತಿತ್ತು (Raja Marga Column).

ದಾರಾಸಿಂಗ್ ಎಂಬ ಮತಾಂಧ ಮಾಡಿದ್ದೇನು?

ಆ ಧರ್ಮಗುರು ಮತಾಂತರ (Accusation of Conrversion) ಮಾಡುತ್ತ ಇದ್ದಾರೆ ಎಂಬ ಆರೋಪವು ಕೆಲವು ಮತಾಂಧ ವ್ಯಕ್ತಿಗಳಿಂದ ಮೊದಲ ಬಾರಿ ಕೇಳಿ ಬಂದಿತು. ಧರ್ಮಗುರುವಿನ ಕುಟುಂಬಕ್ಕೆ ರಾತ್ರಿ ಹೊತ್ತು ಬೆದರಿಕೆಯ ಕರೆಗಳು ಬರಲು ಆರಂಭ ಆದವು. ಅದಕ್ಕೆಲ್ಲ ಆ ಕುಟುಂಬವು ಸೊಪ್ಪು ಹಾಕದೆ ತಮ್ಮ ಕಾಯಕವನ್ನು ಮುಂದುವರೆಸಿತು. ಆಗ ದಾರಾ ಸಿಂಗ್ ಎಂಬ ಮತಾಂಧ ಅಲ್ಲಿಗೆ ಬಂದು ಆ ಧರ್ಮಗುರುವಿನ ಕುಟುಂಬದ ಮೇಲೆ ಆಕ್ರಮಣ ಮಾಡುತ್ತಾನೆ. ಧರ್ಮಗುರುವನ್ನು ಕೊಂದು ಹಾಕುತ್ತಾನೆ. ಆತನ ಇಬ್ಬರು ಮಕ್ಕಳನ್ನು ಗುಡಿಸಲ ಒಳಗೆ ಬಂಧಿಸಿ ಆ ಗುಡಿಸಲಿಗೆ ಬೆಂಕಿ ಕೊಡುತ್ತಾನೆ. ಕೆಲವೇ ಕ್ಷಣದಲ್ಲಿ ಆ ಮುಗ್ಧ ಮಕ್ಕಳ ಮಾರಣ ಹೋಮ ನಡೆದು ಹೋಯಿತು. ಇದೆಲ್ಲವೂ ನಡೆದದ್ದು ಪತ್ನಿ ಗ್ಲಾಡಿಸ್ ಕಣ್ಣ ಮುಂದೆ! ಆಕೆಯ ಗಂಡ ಮತ್ತು ಇಬ್ಬರು ಗಂಡು ಮಕ್ಕಳು ಅರ್ಧ ಕ್ಷಣದಲ್ಲಿ ಸಜೀವ ದಹನ ಆಗಿದ್ದರು.

ಆತನನ್ನು ಕ್ಷಮಿಸಿದ್ದೇನೆ ಎಂದರು ಆ ಗ್ಲಾಡಿಸ್!

ಒರಿಸ್ಸಾದ ಪೊಲೀಸರು ಕೂಡಲೇ ಕೇಸ್ ದಾಖಲಿಸಿ ಆ ದಾರಾ ಸಿಂಗ್‌ನನ್ನು ಬಂಧಿಸುತ್ತಾರೆ. ಸಾಕ್ಷಿ ಸಂಗ್ರಹ ಮಾಡಲು ಪೊಲೀಸರು ಗ್ಲಾಡಿಸ್ ಮುಂದೆ ಬಂದು ನಿಲ್ಲುತ್ತಾರೆ. ಆಗ ಆಕೆ ಹೇಳಿದ ಮಾತು – ನಾನು ಆ ಕೊಲೆಗಾರರನ್ನು ಕ್ಷಮಿಸಿದ್ದೇನೆ. ಕ್ಷಮೆಯೆ ನಾನು ಆತನಿಗೆ ಕೊಡುವ ಅತೀ ದೊಡ್ಡ ಶಿಕ್ಷೆ!

Gladi staines raja marga

ಮುಂದೆ ಐದು ವರ್ಷ ಗ್ಲಾಡಿಸ್ ಭಾರತದಲ್ಲಿಯೇ ಇದ್ದು ತನ್ನ ಗಂಡನ ಕಾಯಕವನ್ನು ಮುಂದುವರೆಸಿದರು. 2004ರಲ್ಲಿ ಗ್ಲಾಡಿಸ್ ತನ್ನ ಮಗಳ ಜೊತೆಗೆ ಭಾರವಾದ ಹೃದಯದಿಂದ ಆಸ್ಟ್ರೇಲಿಯಾಕ್ಕೆ ಹಿಂದಿರುಗಿದರು.

ಮುಂದೆ ಕೋರ್ಟಿನಲ್ಲಿ ದೀರ್ಘ ಕಾಲ ವಿಚಾರಣೆ ನಡೆದು ದಾರಾ ಸಿಂಗ್ ತೀವ್ರ ಶಿಕ್ಷೆಯನ್ನು ಪಡೆದ. ಆದರೆ ಆ ಗ್ಲಾಡಿಸ್ ಹೇಳಿದ ಆ ಮಾತು ಯಾವ ಮಾಧ್ಯಮದಲ್ಲಿ ಕೂಡ ಹೆಚ್ಚು ಪ್ರಚಾರ ಪಡೆಯಲಿಲ್ಲ!

ಹಿಲರಿ ಕ್ಲಿಂಟನ್ ತನ್ನ ಗಂಡನ ಅಪರಾಧವನ್ನು ಕ್ಷಮಿಸಿದ್ದೇಕೆ?

ಅಮೆರಿಕಾದ ಅಧ್ಯಕ್ಷ ಆಗಿದ್ದ ಬಿಲ್ ಕ್ಲಿಂಟನ್ ತನ್ನ ಅಧ್ಯಕ್ಷಾವಧಿಯಲ್ಲಿ ಒಂದು ಲೈಂಗಿಕ ಶೋಷಣೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಮೋನಿಕಾ ಲೆವೆನ್ ಸ್ಕೀ ಎಂಬ ಸುಂದರವಾದ ಯುವತಿ ಅಮೆರಿಕಾದ ಅಧ್ಯಕ್ಷರ ಮೇಲೆ ಅತ್ಯಾಚಾರದ ಕೇಸ್ ಹಾಕಿದ್ದಳು ಮತ್ತು ಅದು ಸಾಬೀತು ಕೂಡ ಆಯಿತು. ಆಗ ಬಿಲ್ ಕ್ಲಿಂಟನ್ ಅಮೆರಿಕನ್ ಟಿವಿಯ ಕ್ಯಾಮೆರಾದ ಮುಂದೆ ಬಂದು ‘ಅಮೆರಿಕಾದ ನಾಗರಿಕರೇ, ನನ್ನನ್ನು ಕ್ಷಮಿಸಿ!’ ಎಂದು ಅಳಲು ಆರಂಭ ಮಾಡುತ್ತಾರೆ. ಆಗ ಒಬ್ಬಳು ಮಹಿಳೆ ಆತನ ಪಕ್ಕ ನಿಂತು ತಲೆ ಸವರುತ್ತಾ ‘ಅಳಬೇಡ ಬಿಲ್ ‘ಎಂದು ಕಣ್ಣೀರು ಒರೆಸುತ್ತಾ ಆತನನ್ನು ಪುಟ್ಟ ಮಗುವಿನಂತೆ ಸಮಾಧಾನ ಮಾಡುತ್ತಿದ್ದಳು. ಆಕೆ ಬೇರೆ ಯಾರೂ ಅಲ್ಲ. ಬಿಲ್ ಕ್ಲಿಂಟನ್ ಹೆಂಡತಿ ಹಿಲರಿ ಕ್ಲಿಂಟನ್! ಗಂಡನ ತಪ್ಪನ್ನು ಕ್ಷಮಿಸಿ ಆತನ ಬಿಕ್ಕಟ್ಟಿನ ಸಂದರ್ಭದಲ್ಲಿ ಆತನ ಜೊತೆಗೆ ನಿಂತ ಹಿಲರಿ ಕ್ಲಿಂಟನ್ ನನಗೆ ಅಂದು ದೇವತೆಯಾಗಿ ಕಂಡು ಬಂದಿದ್ದಳು.

Hilari and Bill Clionton

ದ್ವೇಷಕ್ಕೆ ಕೊನೆಯೇ ಇಲ್ಲ!

ರಷ್ಯನ್ ಲೇಖನ ಲಿಯೋ ಟಾಲ್‌ಸ್ಟಾಯ್‌ ಬರೆದ A Spark niglected burns the house ಎಂಬ ಕತೆಯು ನಮಗೆ ಇಂಗ್ಲಿಷ್ ಪಠ್ಯಪುಸ್ತಕದ ಭಾಗವಾಗಿತ್ತು. ಒಂದು ಸಣ್ಣ ಹಳ್ಳಿಯಲ್ಲಿ ಅನ್ಯೋನ್ಯವಾಗಿದ್ದ ಅಕ್ಕಪಕ್ಕದ ಎರಡು ಮನೆಯವರ ಮಧ್ಯೆ ಉಂಟಾದ ಒಂದು ಸಣ್ಣ ಕೋಳಿ ಮೊಟ್ಟೆಯ ಜಗಳ ಹೇಗೆ ಮುಂದೆ ಬೆಳೆದು ಕಾಡ್ಗಿಚ್ಚಿನ ಹಾಗೆ ಹರಡಿ ಇಡೀ ಗ್ರಾಮವನ್ನು ಸುಟ್ಟಿತ್ತು ಎಂದು ತಿಳಿಸುವ ಕಥೆ ಅದು.

Leo tolstoy raja Marga A spark Neglected burns the house

ಒಂದು ತಲೆಮಾರಿಗೆ ಆರಂಭವಾದ ಸಣ್ಣ ಜಗಳ ಮುಂದೆ ದೊಡ್ಡ ದ್ವೇಷವಾಗಿ ಬೆಳೆಯುತ್ತ ಹೋಗಿ ಕೋರ್ಟ್‌ಗಳಲ್ಲಿಯೂ ವರ್ಷಾನುಗಟ್ಟಲೆ ಇತ್ಯರ್ಥ ಆಗದೇ ಹಲವು ತಲೆಮಾರುಗಳ ನೆಮ್ಮದಿಯನ್ನು ಕೆಡಿಸಿದ ಹಲವು ನಿದರ್ಶನಗಳನ್ನು ನಾನು ನೋಡಿದ್ದೇನೆ. ಅದು ಮುಗಿಯುವ ದ್ವೇಷ ಅಲ್ಲವೇ ಅಲ್ಲ. ಹಾಗೆ ದ್ವೇಷ ಸಾಧಿಸಿ ಉಳಿಯುವುದಾದರೂ ಏನು ಎಂಬ ಪ್ರಶ್ನೆಗೆ ಉತ್ತರ ಇಬ್ಬರಲ್ಲಿಯೂ ಇರುವುದಿಲ್ಲ.

ಇದನ್ನೂ ಓದಿ: Raja Marga Column : ಅನ್ನಕ್ಕಾಗಿ ಕಲ್ಲು ಒಡೆಯೋ ಕೆಲಸ ಮಾಡ್ತಿದ್ದ ಆಕೆ ಈಗ ಅಮೆರಿಕನ್‌ ಕಂಪನಿ ಸಿಇಓ!

ಕ್ಷಮೆ ಒಂದು ಶಕ್ತಿಶಾಲಿ ಆದ ಆಯುಧ

ನಿಮ್ಮ ಜೀವನದಲ್ಲಿ ಕೂಡ ನಿಮಗೆ ಸಾಯುವಷ್ಟು ನೋವುಗಳನ್ನು ಕೊಟ್ಟು ತುಂಬಾ ಜನರು ಬೆನ್ನು ಹಾಕಿ ಹೋಗಿರಬಹುದು. ಬೆನ್ನ ಹಿಂದೆ ಚೂರಿ ಹಾಕಿದ ಮಂದಿ ಕೂಡ ಹಲವರು ಇರಬಹುದು. ನಿಮ್ಮ ಎಲ್ಲಾ ಒಳ್ಳೆತನವನ್ನು ಹೀರಿ ನಿಮ್ಮನ್ನು ಖಾಲಿ ಮಾಡಿದವರೂ ಇರಬಹುದು. ಅವರು ನಿಮ್ಮ ಅತ್ಯುತ್ತಮ ಗೆಳೆಯರೂ, ಹತ್ತಿರದ ಸಂಬಂಧಿಗಳೂ ಆಗಿರಬಹುದು. ಎಲ್ಲರನ್ನೂ ದ್ವೇಷ ಮಾಡುತ್ತ ಮುಂದುವರಿದರೆ ಎಲ್ಲಿಯವರೆಗೆ ಹೋಗುತ್ತೀರಿ?

Jesus christ Raja Marga

ಅದಕ್ಕಿಂತ ಅವರನ್ನು ಕ್ಷಮಿಸಿ ನಿಮ್ಮ ಭಾವಲೋಕದಿಂದ ಅವರನ್ನು ಕಿತ್ತುಹಾಕಿ ಮುಂದುವರೆಯುವುದು ಕ್ಷೇಮ. ಅದರಿಂದ ಅವರು ಬದಲಾದರೆ ಸಮಾಜಕ್ಕೆ ಲಾಭ. ಆಗದಿದ್ದರೆ ನಿಮಗಂತೂ ನಷ್ಟ ಇಲ್ಲ.

ಏಸು ಕ್ರಿಸ್ತ ತನ್ನನ್ನು ಶಿಲುಬೆಗೆ ಏರಿಸಿದ ವ್ಯಕ್ತಿಗಳ ಬಗ್ಗೆ ಹೇಳಿದ ಮಾತು – ದೇವರೇ, ಏನು ಮಾಡುತ್ತಿದ್ದಾರೆ ಎಂದವರು ಅರಿಯರು. ಅವರನ್ನು ಕ್ಷಮಿಸಿಬಿಡು! ಏಸು ಕ್ರಿಸ್ತ ದೇವರಾದದ್ದು ಇದೇ ಕಾರಣಕ್ಕೆ!

Continue Reading

ಅಂಕಣ

ದಶಮುಖ ಅಂಕಣ: ಬೆಳಗೆಂಬ ಬೆರಗು!

ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ ಎಂಬ ಮಾತಿನಂತೆ, ಮುಂಜಾನೆಯ ಮೆಲುಗಾಳಿಯಲ್ಲಿ, ಎಳೆಕಿರಣದ ಬಿಸುಪಿನಲ್ಲಿ, ಇಬ್ಬನಿಯ ತಬ್ಬುಗೆಯಲ್ಲೇ ಅನಂತನನ್ನು ಅರಸಿದವರು ನಮ್ಮ ಕವಿಗಳು.

VISTARANEWS.COM


on

winter morning
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ಈ ಮಾಗಿಯ ಬೆಳಗುಗಳು (winter mornings) ಎಂದಿಗೂ ಮಾಗುವುದೇ ಇಲ್ಲ! ಕಾರಣ, ಪ್ರತಿ ಬೆಳಗ್ಗೆಯೂ ನಿದ್ದೆ ಮಾಗುವ ಮುನ್ನವೇ ಏಳಬೇಕು. ಇದರರ್ಥ ನಾವೇನು ನಸುಕಿನ ನಾಲ್ಕಕ್ಕೆ ಏಳುತ್ತೇವೆಂದಲ್ಲ, ಬೆಳಗ್ಗೆ ಏಳಕ್ಕೆ ಎದ್ದರೂ ನಿದ್ದೆ ಹರಿಯುವುದಿಲ್ಲ. ಬಲಿತು ಹಣ್ಣಾಗದ, ಅಪಕ್ವ ನಿದ್ದೆಯನ್ನು ಒದ್ದು ಏಳುವ ಸಾಹಸ ಸಣ್ಣದಲ್ಲ. ಬೆಚ್ಚನೆಯ ಹೊದಿಕೆಯನ್ನು ನಾವೇ ಅಪ್ಪಿ ಹಿಡಿದಿರುತ್ತೇವೋ, ಅದೇ ನಮ್ಮನ್ನು ಬಿಡುವುದಿಲ್ಲವೋ ಎಂಬ ಗೊಂದಲದ ನಡುವೆ ಏಳುವುದೆಂದರೆ, ನಮ್ಮ ಇಚ್ಛಾಶಕ್ತಿಯ ಪರೀಕ್ಷೆಯ ಕಾಲವೇ ತಾನೆ? ಕಿರುಚುವ ಅಲರಾಂನ ಬಾಯಿಗೆ ಬಡಿಯುವಾಗ ಮುಂಬೆಳಗೂ ಗೋಚರಿಸದಿದ್ದರೆ, ಗಂಟೆಯನ್ನು ಮತ್ಮತ್ತೆ ಪರಾಂಬರಿಸಬೇಕಾಗುತ್ತದೆ. ʻಈಗಿನ್ನೂ ನಡುರಾತ್ರಿ!ʼ ಎಂಬ ಹುಸಿ ಭಾವವನ್ನು ಕೊಡವಿಕೊಂಡು ಒಮ್ಮೆ ಕಿಟಕಿಯಾಚೆಗೆ ಹಣುಕಿದರೆ ಕಾಣುವುದು- ʻ…ಬರಿ ಬೆಳಗಲ್ಲೋ ಅಣ್ಣಾʼ!

ದಿನವೂ ಅದೇ ಬೆಳಗು, ಅದೇ ಬೈಗು… ಒಮ್ಮೆಯಾದರೂ ಸಾಕೆನಿಸಿದ್ದು ಉಂಟೇ? ನವನವೋನ್ಮೇಷಶಾಲಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ? ಪ್ರತಿ ಋತುವಿಗೆ, ಪ್ರತಿ ದಿನಕ್ಕೆ, ಪ್ರತಿ ಸ್ಥಳಕ್ಕೆ, ಪ್ರತಿ ಜೀವಕ್ಕೆ, ಭಾವಕ್ಕೆ, ಭಕುತಿಗೆ ಪ್ರತಿಯೊಂದು ಸೂರ್ಯೋದಯವೂ (Sunrise) ಭಿನ್ನ, ಅನನ್ಯ. ಸೂರ್ಯನ ಹುಟ್ಟಿನ ಹೊರತಾಗಿ ಜಗತ್ತಿನ ಇನ್ಯಾವ ಹುಟ್ಟೂ ಈ ಪರಿಯಲ್ಲಿ ಶುದ್ಧ ಆನಂದದ ಅನುಭೂತಿಯನ್ನು ನೀಡಲಿಕ್ಕಿಲ್ಲ. ಇಷ್ಟೊಂದು ನಿತ್ಯನೂತನ ಎನಿಸಿದ ಸೃಷ್ಟಿಕ್ರಿಯೆಯೊಂದು ಕವಿಗಳ ಕಣ್ಣಿಗೆ ಗೋಚರಿಸಿದ್ದು ಹೇಗೆ (sunrise in poetry) ಎಂಬ ಸಹಜ ಕುತೂಹಲವಿದು. ಇದೇ ಹಿನ್ನೆಲೆಯಲ್ಲಿ, ಕವಿ ಕಣ್ಣಿನಲ್ಲಿ ರವಿ ಮೂಡಿದ ಬಿಂಬಗಳನ್ನು ಅರಸುತ್ತಾ ಹೊರಟಿದ್ದಾಗಿದೆ.

ಬೇಂದ್ರೆ ಕಾವ್ಯದ ಅನುಸಂಧಾನದಲ್ಲಿ ಶಬ್ದಕ್ಕೆ ಅರ್ಥಗಳನ್ನು ಹುಡುಕುವುದು ರಸಾವಿಷ್ಕಾರದ ಮಿತಿ. ವಾಚ್ಯದಿಂದ ಚಿತ್ತವೃತ್ತಿಯತ್ತ ಸಾಗಿದಾಗಲೇ ಕಾವ್ಯ ದಕ್ಕುವುದು. ಆದಾಗ್ಯೂ ಶಬ್ದಗಳಲ್ಲಿ ಹಿಡಿಯುವುದಕ್ಕೆ ಇದೊಂದು ಪ್ರಯತ್ನ. ಬೆಳಗು ಎನ್ನುವುದು ಬೇಂದ್ರೆಯವರನ್ನು ಭಾವಸಮಾಧಿಗೆ ದೂಡಿದ್ದು ಎಷ್ಟು ಬಾರಿಯೊ! ಈ ಸಮಯವು ಅವರಿಗೆ ಒಮ್ಮೆ ಮುತ್ತಿನ ನೀರಿನ ಎರಕದಂತೆ ಕಂಡರೆ, ಇನ್ನೊಮ್ಮೆ ಬೆಳಕೆಂಬ ಬೇಟೆಗಾರನಂತೆ ಕಾಣುತ್ತದೆ. ಈ ನಿತ್ಯ ನಾಟಕರಂಗಕ್ಕಾಗಿ ಅವರೊಮ್ಮೆ ʻಉಷಾಸೂಕ್ತʼವನ್ನು ಹಾಡಿದರೆ ಇನ್ನೊಮ್ಮೆ ʻಸೂರ್ಯನ ಹೊಳಿʼಯನ್ನೇ ಹರಿಸುತ್ತಾರೆ. ಅವರ ʻವಸಂತ ಮುಖʼ ಎನ್ನುವ ಕವನದಲ್ಲಿ, “ಉದಿತ ದಿನ! ಮುದಿತ ವನ/ ವಿಧವಿಧ ವಿಹಗಸ್ವನ/ ಇದುವೆ ಜೀವ, ಇದು ಜೀವನ/ ಪವನದಂತೆ ಪಾವನ” ಎಂದು ಬಣ್ಣಿಸುತ್ತಾರೆ. ಇದೀಗ ಬೆಳಕು ಒಡೆದ ಕ್ಷಣದಲ್ಲಿ ಸುತ್ತಲಿನ ವನ, ವನವಾಸಿಗಳೆಲ್ಲ ಸಚೇತನರಾಗುತ್ತಾ, ಜೀವ-ಜೀವನದ ನಡುವಿನ ಸಾಮರಸ್ಯವೆಂಬುದು ಉಷಾಕಾಲದ ಗಾಳಿಯಷ್ಟೇ ಶುದ್ಧವಾಗಿ ಭಾಸವಾಗುತ್ತಿದೆ ಅವರಿಗೆ.

ಇನ್ನೊಂದು ಕವನದಲ್ಲಿ ಬೆಳಗು- ರಾತ್ರಿಗಳ ನಡುವಿನ ಅನನ್ಯ ನಂಟು ಅವರನ್ನು ಸೆಳೆಯುತ್ತದೆ. “ಬೆಳಗು ಗಾಳಿ ತಾಕಿ ಚಳಿತು/ ಇರುಳ ಮರವು ಒಡೆದು ತಳಿತು/ ಅರುಣ ಗಂಧ ಹರಹಿ ಒಳಿತು/ ನಸುಕು ಬಂತು” ಎಂದು ಸಂಭ್ರಮಿಸುತ್ತಾರೆ. ಉದಯಕಾಲದ ವರ್ಣನೆಯನ್ನು ಹೊತ್ತ ಮತ್ತೊಂದು ಕವನದಲ್ಲಿ, “ಜೇನ್ನೊಣದ ಹೆದೆಗೆ ಹೂಬಾಣ ಹೂಡಿ ಝುಮ್‌ ಎಂದು ಬಿಟ್ಟ ಮಾರ/ ಗುಡಿಗೋಪುರಕ್ಕು ಬಲೆ ಬೀಸಿ ಬಂದ, ಅಗೊ ಬೆಳಕು ಬೇಟೆಗಾರ” ಎನ್ನುವ ಕುಶಲ ಉಪಮೆಯನ್ನು ಚಿತ್ರಿಸುತ್ತಾರೆ. “ಸೂರ್ಯನ ಹೊಳಿ” ಎನ್ನುವ ಕವನದಲ್ಲಿ ಒಡನಾಟಕ್ಕಾಗಿ ಹಂಬಲಿಸುತ್ತದೆ ಕವಿಮನ. “ಬಂದದ ಸೂರ್ಯನ ಹೊಳಿ/ ನಡೀ ಮೈತೊಳಿ, ನೀರಿನ್ಯಾಗಿಳಿ/ ಬಾ ಗೆಣೆಯಾ, ಯಾಕ ಮೈಛಳೀ” ಎಂದು ಬಿಸಿಲಲ್ಲೇ ತೋಯಿಸಿಬಿಡುತ್ತಾರೆ. ಅವರ ಪಾಲಿಗೆ ಬೆಳಗೆಂದರೆ ಕೇವಲ ದೃಶ್ಯವೈಭವವಲ್ಲ, ಇಡೀ ಲೋಕವನ್ನು ಸಚೇತನಗೊಳಿಸುವ ಕ್ರಿಯೆ. ಹಾಗಾಗಿಯೇ ಬೆಳಗೆನ್ನುತ್ತಿದ್ದಂತೆ ಅಷ್ಟೊಂದು ವೈವಿಧ್ಯಮಯ ಭಾವಗಳ ಸಂಚಾರ ಅವರ ಕವನಗಳಲ್ಲಿ. “ಅರಿಯದು ಆಳವು ತಿಳಿಯದು ಮನವು/ ಕಾಣದೋ ಬಣ್ಣಾ/ ಕಣ್ಣಿಗೆ ಕಾಣದೋ ಬಣ್ಣಾ” ಎಂದು ಬೆಳಗಿನ ಬಣ್ಣವನ್ನು ಕಾಣಲೆಂದು ಭಾವತೀವ್ರತೆಯಿಂದ ಕಣ್ಮುಚ್ಚುತ್ತಾರೆ.

ಕುವೆಂಪು ಅವರ ಕಾವ್ಯಗಳಲ್ಲಿ ರವಿದರ್ಶನ ಹೇಗಿದೆ ಎಂಬ ಬಗ್ಗೆ ಪಿಎಚ್‌ಡಿಗಳನ್ನು ಮಾಡಿದ್ದರೆ ಅಚ್ಚರಿಯಿಲ್ಲ. ʻಉದಯರವಿʼ ಎನ್ನುವ ಅವರ ಮನೆಯ ಹೆಸರೇ ಸೂರ್ಯೋದಯದ ಬಗೆಗೆ ಅವರಿಗಿದ್ದ ಅಸೀಮ ಪ್ರೀತಿಯನ್ನು ಸೂಚಿಸುತ್ತದೆ. ಪ್ರತಿಯೊಂದು ಮಾಸ, ಋತುಗಳಲ್ಲಿ ʻಶಿಶುರವಿʼಯ ಬೆಳವಣಿಗೆ ಚೋದ್ಯಗಳನ್ನು ಹೃದ್ಯವಾಗಿ ಚಿತ್ರಿಸುತ್ತಾರವರು. ಅವರ ʻಶರತ್ಕಾಲದ ಸೂರ್ಯೋದಯʼ ಎಂಬ ಕವನದಲ್ಲಿ, “ಹಚ್ಚನೆ ಪಚ್ಚನೆ ವೇದಿಕೆಯಲ್ಲಿ/ ಸಾಸಿರಗಟ್ಟಲೆ ಮುತ್ತನು ಚೆಲ್ಲಿ/ ರನ್ನದ ಕಿರುಹಣತೆಗಳಲ್ಲಿ/ ಶ್ಯಾಮಲ ತೈಲದಿ ಹೊನ್ನಿನ ಬತ್ತಿ/ ಕಾಮನಬಿಲ್ಲಿನ ಬೆಂಕಿಯು ಹೊತ್ತಿ/ ಸೊಡರುರಿಯುತ್ತಿದೆ ಅಲ್ಲಲ್ಲಿ!” ಎಂದು ಹುಲ್ಲಿನ ತಲೆಯ ಇಬ್ಬನಿಯ ಮೇಲೆ ಶಿಶುರವಿಯ ಕಿರಣಗಳು ಮೂಡಿಸಿದ ಕಾಮನಬಿಲ್ಲಿನ ಸೊಡರುಗಳ ಅನೂಹ್ಯ ವರ್ಣನೆಯನ್ನು ಕಟ್ಟಿಕೊಡುತ್ತಾರೆ.

ಅವರ ಕಾವ್ಯ ಪ್ರಪಂಚದಲ್ಲಿ ಸುಮ್ಮನೊಂದು ಸುತ್ತು ಹೊಡೆದರೆ ಹೆಜ್ಜೆಹೆಜ್ಜೆಗೆ ಬಾಲರವಿ ಎದುರಾಗುತ್ತಾನೆ. ʻಬಾ ಫಾಲ್ಗುಣ ರವಿ ದರ್ಶನಕೆ, ಆನಂದಮಯ ಈ ಜಗಹೃದಯ, ನೋಡು ತಳಿತ ತಳಿರ ನಡುವೆ ಅರುಣ ಕಿರಣ ಸರಿಯ ಸುರಿಸಿ, ಈ ಸುಂದರ ಪ್ರಾತಃಕಾಲದಿ, ಏನಿದೀ ದಿವ್ಯ ದೃಶ್ಯʼ ಎಂದು ಜಗದ ಸುತ್ತುಗಟ್ಟಿ ಪ್ರಾತಃಕಾಲವನ್ನು ಬಣ್ಣಿಸುತ್ತಾರವರು. ʻಉಷೆಯು ನಿಶೆಯ ಚುಂಬಿಸುವʼ ಆ ಘಳಿಗೆಯಲ್ಲಿ, “ಉದಯಿಸಿ ಬರೆ ಬಾಲರವಿ, ಉದಯಗಿರಿ ಲಲಾಟದಿ/ ಧ್ಯಾನಲೀನನಾಗೆ ಕವಿ ಶೈಲ ಶಿಲಾ ಪೀಠದಿ” ಎಂದು ಕವಿಮನ ಧ್ಯಾನಕ್ಕೆ ಜಾರುತ್ತದೆ. ʻಪ್ರಾತಃಕಾಲʼ ಎಂಬ ಕವಿತೆಯಲ್ಲಿ, “ಆಹ! ನಾಕವೆ ನಮ್ಮ ಲೋಕಕೆ ಕಳಚಿ ಬಿದ್ದಿದೆ ಬನ್ನಿರಿ! ತುಂಬಿಕೊಳ್ಳಲು ನಿಮ್ಮ ಹೃದಯದ ಹೊನ್ನ ಬಟ್ಟಲ ತನ್ನಿರಿ” ಎಂದು ಸಂಭ್ರಮಿಸುತ್ತಾರೆ.

ಭಾದ್ರಪದದ ಸುಪ್ರಭಾತ, ಫಾಲ್ಗುಣ ಮಾಸದ ಸೂರ್ಯೋದಯ, ಶರತ್ಕಾಲದ ಸೂರ್ಯೋದಯ, ಆಷಾಢ ಸುಪ್ರಭಾತ, ವೈಶಾಖದ ಸೂರ್ಯೋದಯ- ಹೀಗೆ ಕಾಲಕಾಲಕ್ಕೆ ಉದಯರವಿಯ ಸೌಂದರ್ಯವನ್ನವರು ವರ್ಣಿಸಿದ್ದಾರೆ. ಎಲ್ಲಿಯವರೆಗೆಂದರೆ ರವಿಯನ್ನು ತನ್ನ ಕೆಳೆಯನಂತೆ ಕಂಡು ಕಾಲೆಳೆಯುವ ಸಾಲುಗಳೂ ಇವೆ. “ಬರಿ ಬಣಗು ಬ್ರಹ್ಮಚಾರಿಯೊ ನೀನು ಹಾಗಿದ್ದರೆ/ ಬುದ್ಧಿ ಹೇಳುವೆ ಕೇಳು, ಬೇಗನೆ ಮದುವೆಯಾಗು/ ಉಷೆಯ ಊರೊಳು ಇನಿತು ತಳುವಿ/ ಬರಬಹುದಂತೆ” ಎಂದು ಸೂರ್ಯನನ್ನು ಛೇಡಿಸುತ್ತಾರೆ.

Morning Vastu Tips

ಜಿ.ಎಸ್.‌ ಶಿವರುದ್ರಪ್ಪನವರ ಕವಿತೆಯಲ್ಲಿ ರವಿ ಮತ್ತು ಕವಿಯ ನಡುವಿಗೊಂದು ಸುಂದರ ಆಟ ನಡೆಯುತ್ತಿದೆ. “ಯಾರವರು ಯಾರವರು ಯಾರು?/ ಬಾಗಿಲಲಿ ಬಂದವರು ನಿಂದವರು ಯಾರು? ಒಳಗೆಲ್ಲಾ ಬೆಳಕನ್ನು ಚೆಲ್ಲಿದವರಾರು? ತುಂಬಿದ್ದ ಕತ್ತಲನು ಕಳೆದವರು ಯಾರು?” ಎಂದು ಬಾಗಿಲಾಚೆಗೆ ಇರುವವನ ಬಗ್ಗೆ ಗೊತ್ತಿದ್ದೂ ಸೋಜಿಗ ತೋರುತ್ತಾರೆ. ಅವರ ಇನ್ನೊಂದು ಕವನದಲ್ಲಿ, “ಬಾಂದಳ ಚುಂಬಿತ ಶುಭ್ರ ಹಿಮಾವೃತ/ ತುಂಗ ಶೃಂಗದಲಿ ಗೃಹವಾಸಿ/ ದೀನ ಅನಾಥರ ದುಃಖಿ ದರಿದ್ರರ/ ಮುರುಕು ಗುಡಿಸಲಲಿ ಉಪವಾಸಿ!” ಎನ್ನುತ್ತ ಸೂರ್ಯನಿಗೆ ಉಪ್ಪರಿಗೆ ಮನೆ, ಮುರುಕು ಗುಡಿಸಲು- ಎಲ್ಲ ಒಂದೇ ಎಂಬ ಸತ್ಯವನ್ನು ಬಿಚ್ಚಿಡುತ್ತಾರೆ. ಇನ್ನು, ಮಾಸ್ತಿ ವೆಂಕಟೇಶ ಅಯ್ಯಂಗಾರರ ನೇಸರನೂ ನಾಡನ್ನು ಬೆಳಗಿಸಲೆಂದೇ ಬಂದವ. “ಮೂಡಣ ಬೈಲಿಂದ ಮೇಲಕ್ಕೆ ಹಾರಿ/ ದೂರದ ಮಲೆಯ ತಲೆಯನೆ ಏರಿ” ಇರುಳನ್ನು ಹೊರಳಿಸುವವ.

ಇದನ್ನೂ ಓದಿ: ದಶಮುಖ ಅಂಕಣ: ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ!

ನಮ್ಮ ಇಳೆವೆಣ್ಣಿನೊಂದಿಗೆ ನೇಸರನ ಪ್ರೇಮದಾಟ ಹೊಸದೇನಲ್ಲ. ಯಾವುದೇ ಬಂಧನಗಳಿಗೆ ಸಿಲುಕದೆಯೂ ಅವಿಚ್ಛಿನ್ನವಾಗಿ ಸಾಗಿಬಂದ ಅನಂತ ಪ್ರಣಯಿಗಳಿವರು. ಹಸಿರು ಸೀರೆಗೊಪ್ಪುವ ಹೂ ಕುಬಸವನ್ನು ತೊಟ್ಟು ಇಬ್ಬನಿಯ ಮಾಲೆ ಧರಿಸಿ ಕಾದವಳ ನಿರೀಕ್ಷೆ ಬಿ.ಆರ್.‌ ಲಕ್ಷ್ಮಣರಾಯರ ಕವನದಲ್ಲಿ ಹುಸಿ ಹೋಗಲಿಲ್ಲ. “ಕಂಡೊಡನೆ ನೇಸರನ ಕೆಂಪಾದವು ಕೆನ್ನೆ/ ಪುಲಕಿಸಿ ನಸು ಬಿಸಿಯೇರಿತು ಒಡಲು/ ಅವನು ಸೋಕಿದೊಡನೆ/ ನಾಚಿಕೆಯ ಮಂಜುತೆರೆ ಸರಿಸುತ್ತ ಪ್ರಿಯತಮನು/ ಇಳೆಯ ಚುಂಬಿಸಿದನು!” ಎಂಬಂತೆ ಕಾಣುತ್ತದೆ ಕವಿ ಕಣ್ಣಿಗೆ.

ಸೂರ್ಯೋದಯದ ರಂಗಿನಷ್ಟೇ ವೈವಿಧ್ಯಮಯ ಅದರ ವರ್ಣನೆಗಳು. ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರ ʻಬಾ ಬಾ ಓ ಬೆಳಕೇ, ಕರುಣಿಸಿ ಈ ನೆಲಕೆʼ ಕವನದಲ್ಲಿ ಸೂರ್ಯನೆಂಬಾತ ಗೆಳೆಯ, ಪ್ರೇಮಿಯೆಲ್ಲಾ ಅಲ್ಲ. “ವಿಶ್ವದೆದೆಯ ಪದಕವೆ/ ಬಾಂದಳದ ತಿಲಕವೆ/ ನಿನ್ನೊಳಗಿರುವ ಸತ್ಯ ತೋರು/ ಬಂಗಾರದ ಫಲಕವೇ” ಎಂದು ವಿಶ್ವಕ್ಕೆಲ್ಲಾ ಸತ್ಯದರ್ಶನ ಮಾಡಿಸುವವನಂತೆ ಗೋಚರಿಸುತ್ತಾನೆ. ʻಚೆಲುವೆ ಯಾರೊ ನನ್ನ ತಾಯಿಯಂತೆʼ ಎಂಬ ಇನ್ನೊಂದು ಕವನದಲ್ಲಿ, ಉದಯರವಿಯು ಕೆಂಪಗೆ, ದುಂಡಗೆ ಭೂತಾಯಿಯ ಹಣೆಗಿಟ್ಟ ಬೊಟ್ಟಿನಂತೆ ಕಾಣುತ್ತಾನೆ ಕವಿಗೆ.

ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ ಎಂಬ ಮಾತಿನಂತೆ, ಮುಂಜಾನೆಯ ಮೆಲುಗಾಳಿಯಲ್ಲಿ, ಎಳೆಕಿರಣದ ಬಿಸುಪಿನಲ್ಲಿ, ಇಬ್ಬನಿಯ ತಬ್ಬುಗೆಯಲ್ಲೇ ಅನಂತನನ್ನು ಅರಸಿದವರು ನಮ್ಮ ಕವಿಗಳು. ಮುಂಬೆಳಗಿನ ಹೊಂಬಣ್ಣದ ಎಳೆಯೊಂದೇ ಸಾಕು, ಅವರ ಮಾನಸ ಸರಸಿಯಲ್ಲಿ ತಿರೆ ಸಗ್ಗವಾಗುವುದಕ್ಕೆ; ಲೋಕ ಮೀರಿದ ಮೋಹದಲ್ಲಿ ಆ ನಾಕವನ್ನೂ ಮರೆಯುವುದಕ್ಕೆ! ಹಾಗಾಗಿ ಮಾಗಿಯ ಚಳಿ ಇದ್ದರಿರಲಿ, ಏಳಿ ಬೇಗ, ಕಾಣಿ ಬೆಳಗೆಂಬ ಬೆರಗ!

ಇದನ್ನೂ ಓದಿ: ದಶಮುಖ ಅಂಕಣ: ಶುಭಾಶಯ ಪತ್ರಗಳೆಂಬ ಚಿತ್ರ-ಕಾವ್ಯಗಳು

Continue Reading

ಅಂಕಣ

Prerane Column : ವಿದ್ಯಾಭ್ಯಾಸ ಎಂದರೆ ದುಡ್ಡು ಮಾಡುವ ದಂಧೆಯ ಅಡಿಪಾಯವೇ?

Prerane Column : ವಿದ್ಯೆ ಎಂದರೆ ನಾಳೆ ದುಡ್ಡು ಮಾಡಲು ಇರುವ ದಾರಿ ಎಂದು ಕೆಲವರು ತಿಳಿದುಕೊಂಡಿದ್ದಾರೆ. ಆದರೆ, ನಿಜವಾದ ವಿದ್ಯೆಯ ಉದ್ದೇಶ ಅದಲ್ಲವೇ ಅಲ್ಲ.

VISTARANEWS.COM


on

sadghuru with students
Koo
Sadhuru Jaggi Vasudev

ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್‌
(Sadguru Jaggi Vasudev, Isha Foundation)

ಇಂದಿನ ವಿದ್ಯಾಭ್ಯಾಸದ ಉದ್ದೇಶ (Education System), ಇಲ್ಲಿರುವುದೆಲ್ಲವನ್ನೂ ನಮಗೆ ಉಪಯೋಗವಾಗುವಂತೆ ಬಳಸಿಕೊಳ್ಳುವುದು ಹೇಗೆ ಎಂಬುದಾಗಿದೆ. ಒಂದು ಎಲೆಯನ್ನೂ ತಮ್ಮ ಲಾಭಕ್ಕಾಗಿ ಉಪಯೋಗಿಸುವ ಸ್ವಾರ್ಥದ ಮನೋಭಾವನೆ (Selfish mind) ಮನುಷ್ಯರಿಗೆ ಬಂದುಬಿಟ್ಟಿದೆ. ಮರ, ಗಾಳಿ, ಭೂಮಿಯ ತಳದಲ್ಲಿ ಹುದುಗಿಸುವ ಪ್ರಕೃತಿ ಸಂಪತ್ತು, ಕಡೆಗೆ ಕಣ್ಣಿಗೆ ಕಾಣದ ಸೂಕ್ಷ್ಮವಾದ ವೈರಸ್‌ನಲ್ಲೂ ತಮಗೆ ಏನು ಆದಾಯ ದೊರೆಯಬಹುದೆಂಬುದೇ ಅವರ ಯೋಚನೆ (Prerane Column).

ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ತನ್ನದೇ ಆದ ಒಂದು ಪ್ರಪಂಚವಿದೆ. ಪ್ರಕೃತಿಗೆ ಸಂಬಂಧಿಸಿದಂತೆ ಮನುಷ್ಯರೂ ಬೇರೆ ಜೀವಿಗಳಂತೆಯೇ ಒಂದು ಜೀವಿ, ಎಲ್ಲವನ್ನೂ ಒಳಗೂಡಿಸಿಕೊಳ್ಳುವುದೇ ನಿಜವಾದ ವಿದ್ಯೆ..
ಆದರೆ, ಮನುಷ್ಯರು ಮಾತ್ರ ತಮ್ಮ ಬಗೆಗೆ ಏನನ್ನು ಯೋಚಿಸುತ್ತಾರೆಂದು ನಿಮಗೆ ಗೊತ್ತೇ?

ಕಾಗೆ, ಜೇನ್ನೊಣ ಮತ್ತು ಮನುಷ್ಯ ಸ್ವರ್ಗಕ್ಕೆ ಹೋದಾಗ..

ಒಂದು ಕಾಗೆ, ಒಂದು ಜೇನ್ನೊಣ, ಒಬ್ಬ ಮನುಷ್ಯ ಒಂದೇ ಸಮಯದಲ್ಲಿ ಮರಣವನ್ನಪ್ಪಿದರು. ದೇವಲೋಕಕ್ಕೆ ಅವರನ್ನು ಕರೆದುಕೊಂಡು ಹೋಗಿ ವಿಚಾರಣೆಗೆ ನಿಲ್ಲಿಸಿದರು. ಅಲ್ಲಿ ಅವರಿಗೆ ಎಲ್ಲಿ ಜಾಗ ಬೇಕೆಂದು ದೇವರು ಕೇಳಿದರು.
1. ಜೇನ್ನೊಣವು, ಭೂಮಿಯ ಮೇಲಿದ್ದಾಗ ಹಲವು ಬಗೆಯ ಮಕರಂದವನ್ನು ಶೇಖರಿಸಿದೆ. ನನಗೆ ಸ್ವರ್ಗ ದೊರೆತರೆ ಸಂತೋಷವಾಗುತ್ತದೆ ಎಂದಿತು.

2.ಕಾಗೆ, ಹಲವಾರು ಬಗೆಯ ಬೀಜಗಳನ್ನು ನಾನು ಬೇರೆ ಬೇರೆ ಸ್ಥಳಗಳಲ್ಲಿ ಉಗುಳಿದ ಕಾರಣ ಅರಣ್ಯ ಅಭಿವೃದ್ಧಿಯಾಯಿತು. ಪ್ರಕೃತಿಗೆ ಸಹಾಯಮಾಡಿದ ನನಗೂ ಸ್ವರ್ಗದಲ್ಲಿ ಸ್ಥಳ ಬೇಕು ಎಂದಿತು.

3.ಆದರೆ ಮನುಷ್ಯ, “ಏ ಹಲೋ? ನೀನು ಕುಳಿತಿರುವುದು ನನ್ನ ಕುರ್ಚಿ, ಎದ್ದೇಳು” ಎಂದನು.

ದೇವರು ತನ್ನ ಆಕಾರದಂತೆಯೇ ಇರುವುದಾಗಿ ಮನುಷ್ಯರ ಕಲ್ಪನೆಯಿರುವುದರಿಂದ ನಮಗೆ ಮಿತಿಮೀರಿದ ಅಹಂಭಾವ. ಬೇರೆ ಜೀವರಾಶಿಗಳಿಗಿಂತ ಹೆಚ್ಚಿನ ಬುದ್ಧಿವಂತಿಕೆಯಿದೆ ಎಂದುಕೊಂಡಿರುವುದರಿಂದ ತಮ್ಮನ್ನು ದೇವರನ್ನಾಗಿಯೇ ಭಾವಿಸಿ, ತಮ್ಮ ಸುಖವನ್ನು ಮಾತ್ರ ಸದಾಕಾಲ ಯೋಚಿಸುತ್ತಾ ತಮಗೆ ಹೊಂದಿಕೆಯಾಗದ ಎಲ್ಲವನ್ನೂ ಈ ಪ್ರಪಂಚದಿಂದಲೇ ಅಳಿಸಿಹಾಕಲು ಮುಂದಾಗಿದ್ದಾರೆ ಜನರು.

ಈ ಮನೋಭಾವಕ್ಕೆ ಜತೆಗೂಡುವಂತೆ ರಚಿತವಾಗಿವುದೇ ಇಂದಿನ ವಿದ್ಯಾಭ್ಯಾಸದ ದೊಡ್ಡ ಕೊರತೆ. ಒಬ್ಬ ವಿಜ್ಞಾನಿ ತನ್ನ ಸಂಶೋಧನಾ ಲೇಖನಗಳನ್ನು ಜೋಡಿಸಿಕೊಳ್ಳಲು ಒಂದು ಜೆಮ್ ಕ್ಲಿಪ್ಪನ್ನು ಹುಡುಕಾಡಿದಾಗ ಒಂದು ಬಾಗಿದ ಕ್ಲಿಪ್ ದೊರಕಿತು. ಅದನ್ನು ಸರಿಪಡಿಸಲು ಒಂದು ಉಪಕರಣವನ್ನು ಹುಡುಕುತ್ತಿದ್ದಾಗ ಜೆಮ್ ಕ್ಲಿಪ್‌ಗಳ ಪೆಟ್ಟಿಗೆಯೇ ಸಿಕ್ಕಿತು. ವಿಜ್ಞಾನಿಯು, ಸರಿಯಾಗಿದ್ದ ಹೊಸ ಕ್ಲಿಪ್ಪಿನಿಂದ ಬಾಗಿದ್ದ ಕ್ಲಿಪ್ಪನ್ನು ಸರಿಮಾಡಲು ಪ್ರಾರಂಭಿಸಿದ. ಇದರಿಂದ ಆಶ್ಚರ್ಯಗೊಂಡ ಸಹಾಯಕನನ್ನು ನೋಡಿದ ವಿಜ್ಞಾನಿಗೆ ತನ್ನ ತಪ್ಪಿನ ಅರಿವಾಯಿತು.

ನಿಜವಾದ ವಿದ್ಯಾಭ್ಯಾಸ ಅಂದರೆ ಏನು?

ನಿಜವಾದ ವಿದ್ಯಾಭ್ಯಾಸವೆಂದರೆ ಗಂಡು, ಹೆಣ್ಣು ಎಂಬ ಭೇದ ಭಾವ ಕೂಡದು. ಇಬ್ಬರಿಗೂ ಶ್ರೇಯಸ್ಸು ಒದಗಿಸುವಂತೆ ಅದು ಸಾಮಾನ್ಯವಾಗಿರಬೇಕು. ಬೇರೆಯವರ ಕಣ್ಣಿಗೆ ಮಿಂಚುವಂತೆ ಕಾಣಬೇಕೆಂಬ ಕಾರಣಕ್ಕಾಗಿ ಅದು ರೂಪಿತವಾದರೆ ಕುಟುಂಬಗಳು ಮಾತ್ರವಲ್ಲ ಸಂಬಂಧಗಳು ಹಾಗೂ ಸಮುದಾಯಗಳಲ್ಲಿಯೂ ತೊಂದರೆಗಳು ಕಂಡುಬರುತ್ತವೆ.

sadghuru with students

ಹಿಂದೆ ನಮ್ಮ ದೇಶದಲ್ಲಿದ್ದ ಶಿಕ್ಷಣವು ಕೇವಲ ಒಬ್ಬ ವ್ಯಕ್ತಿಯನ್ನು ರೂಪಿಸುವಲ್ಲಿ ಮಾತ್ರ ನಿಲ್ಲದೆ, ಅವರೊಂದಿಗೆ ಸೇರಿದವರೆಲ್ಲರನ್ನೂ ಸೇರಿಸಿಕೊಂಡು ಮುನ್ನಡೆಯುವ ಸಲುವಾಗಿ ರೂಪುಗೊಂಡಿತ್ತು. ಇತರರನ್ನೂ ತನ್ನಂತೆಯೇ ಭಾವಿಸುವಂತೆ ಅದು ರೂಪುಗೊಂಡಿತ್ತು.

ಆದರೆ, ಇಂಗ್ಲಿಷ್ ಆಳ್ವಿಕೆಯಡಿಯಲ್ಲಿ ರೂಢಿಗೆ ಬಂದ ವಿದ್ಯಾಭ್ಯಾಸ, ನಾವು ಎಂದು ಹೇಳುವುದರ ಬದಲಾಗಿ ನಾನು ಎಂದು ಪರಿಗಣಿಸುವಂತೆ ಮಾಡಿತು. ನಾನು, ನನ್ನದು ಎಂಬುದನ್ನು ಮಾತ್ರ ಗಮನದಲ್ಲಿರಿಸಿಕೊಂಡಿರುವ ವಿದ್ಯಾಭ್ಯಾಸವು, ಸಮಾಜಕ್ಕೆ, ಕುಟುಂಬಕ್ಕೆ ಎಂದಿಗೂ ಉಪಯೋಗವಾಗುವಂತಹುದಲ್ಲ.

ನಾವು ಜೀವಿಸುವ ಮನೆಯನ್ನು ಇಲ್ಲವೆ ದೇಶವನ್ನು ಕಡೆಗಣಿಸಿ ನಮ್ಮದೇ ಆದ ದೇಶದಲ್ಲಿ ಅನ್ಯದೇಶದವರಂತೆ ಭಾವನೆಯನ್ನು ಉಂಟುಮಾಡುವ ವಿದ್ಯಾಭ್ಯಾಸ ಸರಿಯಾದುದಲ್ಲ. ಬದುಕಲು ಮರ‍್ಗವನ್ನು ಮಾತ್ರ ತೋರಿಸಿ ಅಲ್ಲಿಗೆ ನಿಂತುಬಿಡದೆ, ವಿದ್ಯಾವಂತರು ತಮ್ಮ ದೃಷ್ಟಿಯನ್ನು ಬೇರೆ ಕೋನಗಳಿಂದ ನೋಡಲು ಅವಕಾಶ ನೀಡುವಂತಹ ಸಮಗ್ರ ವಿದ್ಯಾಭ್ಯಾಸದ ಅಗತ್ಯವಿದೆ.

ನಮ್ಮ ಗ್ರಾಮಗಳಲ್ಲಿ ಲಕ್ಷಗಟ್ಟಲೆ ಜನರು ಹಲವು ತಲೆಮಾರುಗಳಿಂದ ಅದೇ ರೀತಿಯಲ್ಲಿ ದೀನರಾಗಿ ಜೀವನವನ್ನು ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಸಮೃದ್ಧಿಯಾಗಿ, ಸುರಕ್ಷತೆಯಿಂದ ಅತ್ಯಂತ ಶಕ್ತಿಶಾಲಿಗಳಾಗಿದ್ದ ಸಮಾಜದ ಪ್ರಜೆಗಳು ಇಂದು ಆಧಾರ ಕಳೆದುಕೊಂಡಂತೆ ಕಂಡುಬರುತ್ತಿದ್ದಾರೆ. ಸಾರ್ವತ್ರಿಕ ಅಭಿವೃದ್ಧಿಯಲ್ಲಾಗಲಿ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಾಗಲಿ, ಭೂಮಿಯನ್ನು ಬಳಸಿಕೊಳ್ಳುವುದರಲ್ಲಾಗಲಿ ಅವರ ಜೀವನ-ವಿಧಾನ ಸ್ವಲ್ಪವೂ ಮುನ್ನಡೆ ಸಾಧಿಸುತ್ತಿಲ್ಲ. ಅವರ ಮುತ್ತಾತಂದಿರು, ತಾತಂದಿರು, ತಂದೆತಾಯಿಯರು ಸಿಕ್ಕಿಹಾಕಿಕೊಂಡಿದ್ದ ಕೆಸರಿನಿಂದ ಇಂದಿನ ಹೊಸ ತಲೆಮಾರು ಹೊರಗೆ ಬರಲು ಸಾಧ್ಯವಾಗಬೇಕಾದರೆ ಅದಕ್ಕೆ ಮುಖ್ಯ ಮೆಟ್ಟಲಾದ ವಿದ್ಯಾಕ್ಷೇತ್ರದ ಅಭಿವೃದ್ಧಿಯಾಗಬೇಕು. ಆದರೆ ಇಂದಿನ ವಿದ್ಯಾಭ್ಯಾಸ ಅದರಿಂದ ಬಿಡುಗಡೆ ಮಾಡುವುದಕ್ಕೆ ಬದಲಾಗಿ ಮತ್ತಷ್ಟು ಗೊಂದಲಕ್ಕೆ ಕೆಡವಿ ಅವರ ಜೀವನವನ್ನೊಂದು ಹೋರಾಟವನ್ನಾಗಿ ಮಾಡಿದೆ.

ಮೂರು ಶತಕಗಳ ಹಿಂದೆ ಇಲ್ಲಿನ ಪ್ರಜೆಗಳೆಲ್ಲರೂ ಓದಲು ಬರೆಯಲು ಕಲಿತವರಾಗಿದ್ದರು. ವಿದ್ಯಾಭ್ಯಾಸ ಮತ್ತು ಸಂಸ್ಕೃತಿಗಳು ಭಾರತದ ಎರಡು ಅಡಿಗಲ್ಲುಗಳಾಗಿ, ಶಕ್ತಿಯುತವಾಗಿ ಮುಂದುವರಿಯುತ್ತಿರುವವರೆಗೂ, ಅವರನ್ನು ಸ್ವಾಧೀನಪಡಿಸಿಕೊಳ್ಳಲು ಇರುವ ಅಡೆತಡೆಗಳನ್ನು, ಮೆಕಾಲೆಯು ಬ್ರಿಟಿಷ್ ಸರಕಾರಕ್ಕೆ ವಿವರಿಸಿದನು. ಈ ಮಹಾನ್ ಶಕ್ತಿಗಳನ್ನು ಬಗ್ಗುಬಡಿಯಲು ಬೇಕಾದ ಯೋಜನೆಗಳನ್ನು ಅವರು ರೂಪಿಸತೊಡಗಿದರು. ಅದರಲ್ಲಿ ಮುಖ್ಯವಾಗಿ ನಡೆದಿದ್ದು, ಇನ್ನೂರು ವರ್ಷಗಳ ಅವಧಿಯಲ್ಲಿ, ಭಾರತದ ಪ್ರಜೆಗಳಲ್ಲಿ ಸುಮಾರು ಶೇಕಡಾ ಎಪ್ಪತ್ತರಷ್ಟು ಜನರು ಅನಕ್ಷರಸ್ಥರಾಗಿದ್ದು!

ಯೋಜನೆಯನ್ನು ರೂಪಿಸಿಕೊಂಡು ಏನನ್ನಾದರೂ ನಾಶ ಮಾಡಲು ನಮಗೆ ಸಾಧ್ಯವಿರುವಾಗ ಹಾಗೆಯೇ ನಿರ್ಮಿಸಲು ಏಕೆ ಸಾಧ್ಯವಾಗುವುದಿಲ್ಲ? ಇದನ್ನು ಅರ್ಥ ಮಾಡಿಕೊಳ್ಳದೆ ಇಂದಿನ ಸನ್ನಿವೇಶವನ್ನು ದೂರುತ್ತಾ, ಬದುಕನ್ನು ನೂಕುತ್ತಾ ಇದ್ದರೆ ಏನನ್ನೂ ಬದಲಾಯಿಸಲಾಗುವುದಿಲ್ಲ.

ವ್ಯವಸ್ಥಿತವಾದ ವಿದ್ಯಾಭ್ಯಾಸ, ಒಗ್ಗಟ್ಟು, ಆರೋಗ್ಯ, ಒಂದು ಮುನ್ನೋಟ ಅಥವಾ ಉದ್ದೇಶ, ಇಂತಹ ಯಾವುದೂ ಇಲ್ಲದೆ ಕೋಟಿಗಟ್ಟಲೆ ಜನರು ಬಳಲಿ ಬೆಂಡಾಗುತ್ತಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಯಾವ ದೇಶವೂ ಮುನ್ನಡೆಯಲು ಸಾಧ್ಯವಾಗುವುದಿಲ್ಲ.

ಅದೇ ಕೋಟಿಗಟ್ಟಲೆ ಜನರು ಕಲಿತವರಾಗಿದ್ದು, ಒಳ್ಳೆಯ ನೀತಿವಂತರಾಗಿದ್ದು, ಉತ್ತಮ ಆರೋಗ್ಯಶಾಲಿಗಳಾಗಿದ್ದುಕೊಂಡು, ರ‍್ಪಣಾ ಮನೋಭಾವವನ್ನು ಹೊಂದಿದ್ದು, ಸಮರ್ಥವಾಗಿ ಕೆಲಸಗಳನ್ನು ನಿರ್ವಹಿಹಿಸಿದರೆ, ಎಂಥೆಂಥ ಅದ್ಭುತಗಳನ್ನು ಸಾಧಿಸಬಹುದೆಂಬುದನ್ನು ಯೋಚಿಸಿ.

ವಿದ್ಯೆ ಎಂಬುದು ಒಂದು ಶಕ್ತಿಯುತವಾದ ಆಯುಧ. ಬೇರೆ ಜೀವರಾಶಿಗಳೊಂದಿಗೆ ಅನ್ಯೋನ್ಯವಾಗಿರುವಂತಹವರಿಗೆ ಮಾತ್ರ ಅದನ್ನು ನೀಡಬೇಕು. ಉನ್ನತಮಟ್ಟದ ವಿದ್ಯಾಭ್ಯಾಸ ನೀಡುವುದರ ಮೂಲಕ ವಿಶ್ವದ ಯಾವುದೇ ಒಂದು ಸಣ್ಣ ಬಿಂದುವಿನಿಂದಲೂ ಅವರು ತಮ್ಮ ಜೀವನವನ್ನು ಬುದ್ಧಿವಂತಿಕೆಯಿಂದ ಅಳವಡಿಸಿಕೊಳ್ಳಲು ಅವರು ಸಿದ್ಧರಾಗಿರಬೇಕೆಂಬುದೇ ನನ್ನ ಅಭಿಲಾಷೆ.

ಈಜು ತರಬೇತಿಯಲ್ಲಿ ಸಾಲಿನ ಕೊನೆಗೆ ನಿಲ್ಲುತ್ತಿದ್ದ ಶಿಷ್ಯ

ಒಂದು ಗುರುಕುಲದಲ್ಲಿ ಬೆಳೆದ ಶಿಷ್ಯರು ಈಜುವ ತರಬೇತಿಗಾಗಿ ಹೊರಟರು. ಪ್ರತಿಯೊಬ್ಬರೂ ನದಿಯಲ್ಲಿ ಕುಪ್ಪಳಿಸುತ್ತಾ ಈಜಿಕೊಂಡು ಬಂದು ದಡವನ್ನು ಸೇರಬೇಕೆಂಬುದು ನಿಯಮ. ಅವರಲ್ಲಿ ಒಬ್ಬನು ಮಾತ್ರ ಯಾವಾಗಲೂ ಸಾಲಿನಲ್ಲಿ ಕೊನೆಗೆ ನಿಲ್ಲುತ್ತಿದ್ದುದನ್ನು ಅವರ ಗುರುಗಳು ಹಲವಾರು ಬಾರಿ ಗಮನಿಸಿದರು.
ಒಂದು ದಿನ ಅವನನ್ನು ಕರೆದು, ಈವತ್ತಿನಿಂದ ನೀನೇ ಮೊದಲನೆಯದಾಗಿ ಗೆದ್ದು ಬರಬೇಕು ಎಂದರು. ನಡುಗುತ್ತಾ ನಿಂತಿದ್ದ ಅವನನ್ನು ನೀರಿನೊಳಕ್ಕೆ ನೂಕಿದರು. ಏನಾಶ್ಚರ್ಯ! ಶಿಷ್ಯನು ಅನಾಯಾಸದಿಂದ ಈಜಿದನು. ಅವನಿಗೆ ಇದ್ದಕ್ಕಿದ್ದಂತೆ ಭಯವೆಲ್ಲವೂ ತೊಲಗಿಹೋಗಿ ಧೈರ್ಯ ತುಂಬಿಕೊಂಡಿತು.

ಗುರುಗಳು ಶಿಷ್ಯನಿಗೆ ಹೇಳಿದರು, ತುರ್ತಾಗಿ ಜವಾಬ್ದಾರಿ ವಹಿಸಿ, ಕೂಡಲೇ ಗಮನ ಹರಿಸಿ ಮಾಡಬೇಕಾದ ಕೆಲಸಗಳಿರುತ್ತವೆ. ಅಂತಹ ಸಂರ‍್ಭದಲ್ಲಿ ತಡಮಾಡಿದರೆ ಕೆಲಸ ಹಾಳಾಗುತ್ತದೆ. ಗಾಬರಿಯನ್ನು ದೂರವಿರಿಸಿ ಕೂಡಲೇ ಕರ‍್ಯಗತವಾಗಲು ಬೇಕಾದ ತರಬೇತಿ ಇಂದು ನಿನಗೆ ದೊರೆಯಿತು ಎಂದರು.

ನಮ್ಮಿಂದ ಆಗದ ಕೆಲಸ ಮಾಡದಿದ್ದರೆ ತಪ್ಪಾಗುವುದಿಲ್ಲ. ನಮ್ಮಿಂದ ಆಗುವ ಕೆಲಸವನ್ನು ಮಾಡದಿರುವುದು ಬಹು ದೊಡ್ಡ ಅಪರಾಧ. ನಾವು ತಡಮಾಡದೆ ನಿರ್ವಹಿಸಬೇಕಾದ ಕರ್ತವ್ಯ ಇದು.

ಗ್ರಾಮ ಪ್ರದೇಶಗಳಲ್ಲಿ ಪ್ರಾಥಮಿಕ ಪಾಠಶಾಲೆಗಳಾಗಿ ಈಶ ವಿದ್ಯಾ ನಡೆಸುತ್ತಿರುವ ಶಾಲೆಗಳ ವಾರ್ಷಿಕ ಸಮಾರಂಭಗಳು ನಡೆದಾಗ, ನಾವು ಕೆಲವು ಶಾಲೆಗಳನ್ನು ಪ್ರಾರಂಭಿಸಿರುವುದನ್ನು ತಿಳಿದ ಜನರು ಚಪ್ಪಾಳೆ ತಟ್ಟುತ್ತಾರೆ. ಒಂದು ಲಕ್ಷ ಮರಗಳನ್ನು ನೆಟ್ಟಿರುವುದನ್ನು, ಸಾವಿರಕ್ಕೆ ಮೇಲ್ಪಟ್ಟ ಹಳ್ಳಿಗಳಿಗೆ ವೈದ್ಯಕೀಯ ನೆರವನ್ನು ಕಲ್ಪಿಸಿದುದನ್ನು ತಿಳಿದು ಜನರು ಆಶ್ಚರ್ಯಪಡುತ್ತಾರೆ.

ಇಂತಹ ಸಣ್ಣ ಪುಟ್ಟ ಕಾರ್ಯಗಳಿಗಾಗಿ ಜನರು ತೃಪ್ತಿಗೊಂಡು ಚಪ್ಪಾಳೆ ಹಾಕಿದಾಗಲೆಲ್ಲಾ ನನಗೆ ಮನಸ್ಸಿನಲ್ಲಿ ನೋವುಂಟಾಗುತ್ತದೆ. ಕೆಲವು ಪಾಠಶಾಲೆಗಳು ನಮಗೆ ಏತೇತಕ್ಕೂ ಸಾಕಾಗುವುದಿಲ್ಲ. ಸಾವಿರಗಟ್ಟಲೆ ಶಾಲೆಗಳು ಪ್ರಾರಂಭವಾಗಬೇಕು, ಲಕ್ಷ ಮರಗಳೂ ಸಾಕಾಗುವುದಿಲ್ಲ; ಕೋಟಿಗಟ್ಟಲೆ ಮರಗಳನ್ನು ನೆಡಬೇಕು, ಬೆಳಸಬೇಕು. ತಮ್ಮ ದೇಹದ ಬಗೆಗೆ ಸ್ವಲ್ಪವೂ ತಿಳುವಳಿಕೆಯಿಲ್ಲದ, ಹಳ್ಳಿಯ ಜನರಿಗೆ ಆರೋಗ್ಯದ ಬಗೆಗೆ ತಿಳುವಳಿಕೆ ಬರುವಂತಾಗಬೇಕು. ಅವರಿಗೆ ಮೂಲಭೂತ ವೈದ್ಯಕೀಯ ಸೌಲಭ್ಯಗಳು ದೊರೆಯವಂತಾಗಬೇಕು.

ಜವಾಬ್ದಾರಿಯಿಲ್ಲದ ತಿಳುವಳಿಕೆಯೇ ಪ್ರಪಂಚದಲ್ಲಿ ಇಂದು ಅನೇಕ ವಿನಾಶಗಳಿಗೆ ಮೂಲ ಕಾರಣವಾಗಿದೆ. ನಮ್ಮ ಹೊಣೆಗಾರಿಕೆಯ ಬಗೆಗೆ ತೀವ್ರವಾದ ಆಸಕ್ತಿ, ಇತರರ ಬಗೆಗೆ ಅನುಕಂಪ, ಎಲ್ಲರ ಬಗೆಗೂ ಪ್ರೀತಿ ಇವುಗಳನ್ನು ನಮ್ಮಲ್ಲಿ ಬೆಳೆಸದ ಯಾವುದೇ ವಿದ್ಯಾಭ್ಯಾಸ ಅಪಾಯಕಾರಿ.

ಇದನ್ನೂ ಓದಿ: Prerane Column : ನೀವು ಆಹಾರವನ್ನು ಅನುಭವಿಸುತ್ತಾ ತಿಂತೀರಾ? ಇಲ್ಲ ಸುಮ್ನೆ ನುಂಗ್ತೀರಾ?

ಮಾನವ ಇತಿಹಾಸದಲ್ಲಿ ಇದಕ್ಕೆ ಮುಂಚೆ ಇಂತಹ ಸಾಧಕವಾದ, ಅನುಕೂಲಕರವಾದ ಪರಿಸ್ಥಿತಿ ಎಂದೂ ಒದಗಿ ಬಂದಿರಲಿಲ್ಲ. ಅಗತ್ಯವಿರುವ ಮೂಲ ವಸ್ತು, ಔದ್ಯೋಗಿಕ ಕೌಶಲ್ಯ, ಕಾರ್ಯ ನಿರ್ವಹಣಾ ಸಾಮರ್ಥ್ಯ ಇದಾವುದಕ್ಕೂ ಈಗ ಕೊರತೆಯಿಲ್ಲ. ಬೇಕಾಗಿರುವುದು ಮನೋನಿಶ್ಚಯ, ಮುನ್ನಡೆ ಇವುಗಳು ಮಾತ್ರ. ಸಮರ್ಪಣಾ ಮನೋಭಾವದಿಂದ ಮುನ್ನಡೆದರೆ ಮುಂದಿನ ಇಪ್ಪತ್ತು ವರ್ಷಗಳಲ್ಲಿ ನಾವು ಕನಸಿನಲ್ಲಿ ಕಾಣುವ ಅದ್ಭುತವಾದ ಸನ್ನಿವೇಶವನ್ನು ಇಲ್ಲಿ ಕಾಣಲು ಸಾಧ್ಯವಾಗುತ್ತದೆ.


ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn
ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – [email protected]

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ ಮೂಲಕ ತಿಳಿಸಿ

Continue Reading
Advertisement
dengue flue
ಆರೋಗ್ಯ22 mins ago

Dengue Fever: ಸೊಳ್ಳೆಗಳಿಂದ ದೂರವಿರಿ! ಹೆಚ್ಚುತ್ತಿರುವ ಡೆಂಗ್ಯೂ ಜ್ವರ, 15 ಸಾವಿರ ಪ್ರಕರಣ ದಾಖಲು

Vistara Editorial, Government should conduct exam without any lapse
ಕರ್ನಾಟಕ43 mins ago

Cabinet Meeting: ಕೃಷಿಕರಲ್ಲದವರಿಂದ ಕೃಷಿ ಭೂಮಿ ಖರೀದಿಗೆ ಖೊಕ್‌, ವಿಧೇಯಕ ವಾಪಸ್ ಪಡೆಯಲು ಸಂಪುಟ ತೀರ್ಮಾನ

Raja Marga Father and Daughter
ಅಂಕಣ56 mins ago

Raja Marga Column : 13 ವರ್ಷದ ನನ್ನ ಮಗಳು ಒಮ್ಮಿಂದೊಮ್ಮೆಗೆ ಮಂಕಾಗಿದ್ದು ಯಾಕೆ?

Hair Care Tips
ಆರೋಗ್ಯ1 hour ago

Hair Care Tips: ಕೂದಲು ಚೆನ್ನಾಗಿರಬೇಕೆಂದರೆ ಯಾವ ಆಹಾರ ಸೇವಿಸಬೇಕು?

Heavy Rain warning In karnataka
ಉಡುಪಿ2 hours ago

Karnataka Weather : ಬಟ್ಟೆ ತೊಳೆಯೋಕೆ ವೀಕೆಂಡ್‌ವರೆಗೂ ಕಾಯ್ಬೇಡಿ; ಇನ್ನೊಂದು ವಾರ ಭಾರಿ ಮಳೆ!

Vistara editorial, Let's take precautions for pneumonia infection
ಆರೋಗ್ಯ2 hours ago

ವಿಸ್ತಾರ ಸಂಪಾದಕೀಯ: ನ್ಯುಮೋನಿಯಾ ಸೋಂಕಿನ ಬಗ್ಗೆ ಈಗಲೇ ಎಚ್ಚರ ವಹಿಸೋಣ

How To Remove Tea Stains From Clothes
ಲೈಫ್‌ಸ್ಟೈಲ್2 hours ago

How To Remove Tea Stains From Clothes: ಬಟ್ಟೆಯ ಮೇಲಿನ ಚಹಾ ಕಲೆಯನ್ನು ತೆಗೆಯುವ ಸುಲಭದ ಉಪಾಯ ಇದು!

Dina Bhavishya
ಪ್ರಮುಖ ಸುದ್ದಿ3 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Vistara News impact, Governmet to scrap 7 d rule of SCSP and TSP act
ಕರ್ನಾಟಕ9 hours ago

ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ‌ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ

WPL Auction 2024
ಕ್ರಿಕೆಟ್9 hours ago

WPL Auction 2024: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ 2 ದಿನ ಬಾಕಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ3 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ14 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ14 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ20 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ1 day ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

ಟ್ರೆಂಡಿಂಗ್‌