ವಿಸ್ತಾರ 5G Info| 5G ಎಂದರೆ ಸ್ಪೀಡ್‌ ಮಾತ್ರವಲ್ಲ, ಪ್ರಯೋಜನ ಸಾರ್ವತ್ರಿಕ Vistara News

5 G

ವಿಸ್ತಾರ 5G Info| 5G ಎಂದರೆ ಸ್ಪೀಡ್‌ ಮಾತ್ರವಲ್ಲ, ಪ್ರಯೋಜನ ಸಾರ್ವತ್ರಿಕ

ಟೆಲಿಕಾಂ ಕಂಪನಿಗಳು 1.50 ಲಕ್ಷ ಕೋಟಿ ರೂ. ಮೌಲ್ಯದ 5ಜಿ ಸ್ಪೆಕ್ಟ್ರಮ್‌ ಅನ್ನು ಹರಾಜಿನಲ್ಲಿ ಖರೀದಿಸಿರುವುದೇ ಭಾರತದಲ್ಲಿ ಭವಿಷ್ಯದ ದಿನಗಳಲ್ಲಿ 5ಜಿ ಹವಾದ ಮುನ್ಸೂಚನೆ ನೀಡಿದೆ. ಹಾಗಾದರೆ ಏನಿದರ ಲಾಭ? (ವಿಸ್ತಾರ 5G Info) ಇಲ್ಲಿದೆ ವಿವರ.

VISTARANEWS.COM


on

5G
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತದಲ್ಲಿ ೫ಜಿ ಕ್ರಾಂತಿ ಸಮೀಪಿಸುತ್ತಿದೆ. ೪ಜಿಗಿಂತ ೧೦ ಪಟ್ಟು ವೇಗದ ೫ಜಿಯಿಂದ ಇಂಟರ್‌ನೆಟ್‌ ಬಳಕೆದಾರರಿಗೆ ಭಾರಿ ಅನುಕೂಲವಾಗಲಿದೆ. (ವಿಸ್ತಾರ 5G Info) ತಂತ್ರಜ್ಞಾನ ನಮ್ಮ ಜನ ಜೀವನವನ್ನು ಹೇಗೆ ಆವರಿಸಿದೆ ಎಂಬುದಕ್ಕೆ ಬಿಡುಗಡೆಗೆ ಮುನ್ನವೇ ತೀವ್ರ ಕುತೂಹಲ ಮೂಡಿಸಿರುವ ೫ಜಿಯೇ ತಾಜಾ ಉದಾಹರಣೆಯಾದೀತು. ಇಂಟರ್‌ನೆಟ್‌ ಟೆಸ್ಟಿಂಗ್‌ ಸಂಸ್ಥೆ Ookla ಸಮೀಕ್ಷೆಯ ಪ್ರಕಾರ, ೮೯% ಮಂದಿ ಬಳಕೆದಾರರು ೪ಜಿಯಿಂದ ೫ಜಿಗೆ ಬದಲಾಗಲು ಉತ್ಸುಕವಾಗಿದ್ದಾರೆ!

ಯಾವುದೇ ತಂತ್ರಜ್ಞಾನ ಹಲವಾರು ಆಯಾಮಗಳಿಂದ ಜನೋಪಯೋಗಿಯಾದಾಗ, ದಿನ ನಿತ್ಯದ ಬದುಕಿನ ಆಗುಹೋಗುಗಳನ್ನು ಸುಗಮಗೊಳಿಸಿದಾಗ, ಹಲವು ಸಮಸ್ಯೆಗಳನ್ನು ಪರಿಹರಿಸಿದಾಗ ಬಲುಬೇಗ ಜನಪ್ರಿಯವಾಗುತ್ತದೆ. ಇದೇ ಕಾರಣಕ್ಕಾಗಿ ಇದೀಗ ೫ಜಿ ಕ್ರಾಂತಿ ಸದ್ದು ಮಾಡುತ್ತಿದೆ. ಹಾಗಾದರೆ ೫ಜಿಯ ಲಾಭವೇನು? ಎಂಬುದನ್ನು ತಿಳಿಯೋಣ ಬನ್ನಿ.

ಮೊಬೈಲ್‌ ಬಳಕೆದಾರರಿಗೆ

ಈಗಿನ ದಿನಗಳಲ್ಲಿ ಇಂಟರ್‌ನೆಟ್‌ ಸಂಪರ್ಕ ಇರುವ ಸ್ಮಾರ್ಟ್‌ಫೋನ್‌ ಬಳಕೆ ಸರ್ವೇ ಸಾಮಾನ್ಯವಾಗಿದೆ. ಇತರ ದೇಶಗಳಿಗೆ ಹೋಲಿಸಿದರೆ ಕಡಿಮೆ ದರದಲ್ಲಿ ಮೊಬೈಲ್ ಡೇಟಾ ಸಿಗುತ್ತದೆ.‌ ೫ಜಿ ಬಳಿಕ ಡೇಟಾ ಡೌನ್‌ಲೋಡ್‌ನ ಸ್ಪೀಡ್‌ ೪ಜಿಗಿಂತ ೧೦ ಪಟ್ಟು ಹೆಚ್ಚು ವೇಗದಲ್ಲಿ ಲಭ್ಯ. ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಮೆಚ್ಚಿನ ಶೋಗಳನ್ನು ಯಾವುದೇ ವಿಳಂಬ ಇಲ್ಲದೆ ತಕ್ಷಣವೇ ವೀಕ್ಷಿಸಬಹುದು. ಸಿನಿಮಾಗಳನ್ನು ಕೆಲ ನಿಮಿಷಗಳ ಬದಲಿಗೆ ಕೆಲವು ಸೆಕೆಂಡ್‌ಗಳಲ್ಲಿಯೇ ಡೌನ್‌ಲೋಡ್‌ ಮಾಡಿಕೊಳ್ಳಬಹುದು! ಡೌನ್‌ಲೋಡ್‌ ಪ್ರಕ್ರಿಯೆಯಲ್ಲಿ ಸಮಯದ ಉಳಿತಾಯ ಜನತೆಗೆ ಬಹಳ ಪ್ರಯೋಜನ ನೀಡುವುದು ಖಚಿತ.

ಮನೆ-ಮನರಂಜನೆಗೆ ಏನು?

ಮನೆಗಳಲ್ಲಿ ೪K ಮತ್ತು ೮K High-end, High definition ಟಿ.ವಿಗಳನ್ನು ಹೊಂದಿದವರಿಗೆ ( ೭,೬೮೦ x4,320) ೫Gಯಿಂದ ಅಲ್ಟ್ರಾ ಹೈ ಡೆಫಿನಿಶನ್‌ ಪಡೆಯಬಹುದು. ವರ್ಚುವಲ್‌ ರಿಯಾಲಿಟಿ ಗೇಮ್‌ ಜನಪ್ರಿಯವಾಗಬಹುದು. ಇದಕ್ಕೆ ಬೇಕಾಗುವ ಭಾರಿ ಪ್ರಮಾಣದ ಡೇಟಾ ವರ್ಗಾವಣೆ ತ್ವರಿತವಾಗಿ ಆಗಲಿದೆ.

ಆರೋಗ್ಯ: ವೈದ್ಯಕೀಯ ಕ್ಷೇತ್ರದಲ್ಲಿ ೫ಜಿ ಉಪಯೋಗಕ್ಕೆ ಬರಲಿದೆ. ಪಾಯಿಂಟ್‌ -ಆಫ್-ಕೇರ್‌ ಡಯಾಗ್ನಸ್ಟಿಕ್ಸ್‌ (point of care diagnostics) ಪದ್ಧತಿಯಲ್ಲಿ, ಲ್ಯಾಬೊರೇಟರಿಯ ಹೊರಗೆ, ಅಂದರೆ ರೋಗಿ ಇರುವ ಸ್ಥಳದಲ್ಲಿಯೇ ವೈದ್ಯಕೀಯ ಪರೀಕ್ಷೆಗೆ ಅನುಕೂಲವಾಗಲಿದೆ. ಹಿಂದುಳಿದ ಪ್ರದೇಶಗಳಲ್ಲಿಯೂ ರೋಗಿಯ ತ್ವರಿತ ವೈದ್ಯಕೀತ ತಪಾಸಣೆಗೆ ಇದು ಸಹಕಾರಿಯಾಗಲಿದೆ. ಭವಿಷ್ಯದ ದಿನಗಳಲ್ಲಿ ರೊಬಾಟಿಕ್ ಆರ್ಮ್ಸ್‌ ಬಳಸಿಕೊಂಡು ಶಸ್ತ್ರ ಚಿಕಿತ್ಸೆ ಮಾಡಬಹುದು. ರೋಗಿಯನ್ನು ಆಸ್ಪತ್ರೆಗೆ ದಾಖಲಿಸದೆಯೂ ಆಪರೇಷನ್‌ ನಡೆಸಬಹುದು.

ಬ್ಯಾಂಕಿಂಗ್:‌ ಡಿಜಿಟಲೀಕರಣದ ಪರಿಣಾಮ ಈಗಾಗಲೇ ಭಾರತದಲ್ಲಿ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಬೇಕಾದ ಅಗತ್ಯವನ್ನು ಕಡಿಮೆ ಮಾಡಿದೆ. ಎಟಿಎಂಗಳ ಸಂಖ್ಯೆಯೂ ಇಳಿಯುತ್ತಿದೆ. ಇನ್ನೂ ಹಲವು ಅನುಕೂಲಗಳು ಗ್ರಾಹಕರಿಗೆ ಸಿಗಲಿದೆ.

ಶಿಕ್ಷಣ: ಆನ್‌ಲೈನ್‌ ಶಿಕ್ಷಣದ ಗುಣಮಟ್ಟ ಮತ್ತು ಆಯ್ಕೆ ಹೆಚ್ಚಲಿದೆ. ಹೀಗಾಗಿ ಯಾವುದೇ ಪ್ರದೇಶದಲ್ಲಿರುವವರಿಗೂ ತಮ್ಮ ಕೌಶಲಾಭಿವೃದ್ಧಿಗೆ, ಯಾವುದಾದರೂ ಕೋರ್ಸ್‌ ಕಲಿಕೆಗೆ ಅನುಕೂಲ ಆಗಲಿದೆ.

ಕ್ಯಾಶಿಯರ್‌ಲೆಸ್‌ ಸ್ಟೋರ್

ಭಾರತದಲ್ಲಿ ಪ್ರಮುಖ ಕಂಪನಿಗಳು ದುಬಾರಿ 5ಜಿ ಸ್ಪೆಕ್ಟ್ರಮ್‌ ಹರಾಜಿನಲ್ಲಿ ಭಾಗವಹಿಸಲು ಕಾರಣ, ಭವಿಷ್ಯದ ದಿನಗಳಲ್ಲಿ ಅದು ಜನಜೀವನದ ಮೇಲೆ ಬೀರಬಹುದಾದ ಪ್ರಭಾವ. ತಂತ್ರಜ್ಞಾನದ ಆವಿಷ್ಕಾರ ಹೊರತಾಗಿ ಬೆಳವಣಿಗೆ ಅಸಾಧ್ಯ ಎಂಬ ವಾಸ್ತವ.

ಉತ್ಪಾದನೆಯ ವಲಯದಲ್ಲಿ ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ (IoT) ಸೆನ್ಸರ್‌, ಸಾಧನಗಳ ಬಳಕೆ ವೃದ್ಧಿಸಲಿದೆ. ಇದು ದಕ್ಷತೆ ಹೆಚ್ಚಿಸುವ ಮೂಲಕ ಪರಿಸರಸ್ನೇಹಿ ಉತ್ಪಾದನೆಗೂ ಸಹಕಾರಿಯಾಗಲಿದೆ. ಶಾಪಿಂಗ್‌ನಲ್ಲಿ ವಾಯ್ಸ್‌ ಕಮಾಂಡ್‌ ಆಧಾರಿತ ಪೇಮೆಂಟ್‌, ಕ್ಯಾಶಿಯರ್‌ ಲೆಸ್‌ ಸ್ಟೋರ್‌ ಬರಲಿದೆ.

ಆಡಳಿತ, ಸಾರಿಗೆ: ೫ಜಿಯಿಂದ ಸಾರ್ವಜನಿಕ ಸೇವೆಗಳ ಗುಣಮಟ್ಟ ವೃದ್ಧಿಗೆ ನೆರವಾಗಲಿದೆ. ಸಾರಿಗೆ ವಲಯದಲ್ಲಿ FASTag ವ್ಯವಸ್ಥೆಗೆ ಪುಷ್ಟಿ ಸಿಗಲಿದೆ. ಎಲೆಕ್ಟ್ರಿಕ್‌ ವಾಹನಗಳ ಮೂಲಸೌಕರ್ಯ, ಚಾರ್ಜಿಂಗ್‌ ಸ್ಟೇಷನ್‌ ಜತೆ ಸಂಪರ್ಕ ವೃದ್ಧಿಗೆ ನೆರವಾಗಲಿದೆ.

ಸೂಪರ್‌ ಆ್ಯಪ್:‌ ಭವಿಷ್ಯದ ದಿನಗಳಲ್ಲಿ ಸೂಪರ್‌ ಆ್ಯಪ್‌ಗಳು ಜನತೆಗೆ ಒಂದೇ ಆ್ಯಪ್‌ನಲ್ಲಿ ಹಲವಾರು ಸೇವೆಗಳನ್ನು ಒದಗಿಸಲಿವೆ. ಉದಾಹರಣೆಗೆ ಚೀನಾದ ವಿಚಾಟ್‌ ಆರಂಭದಲ್ಲಿ ಮೆಸೇಜಿಂಗ್‌ ಆ್ಯಪ್‌ ಆಗಿತ್ತು. ಬಳಿಕ ಪೇಮೆಂಟ್ಸ್‌, ಕ್ಯಾಬ್ಸ್‌, ಶಾಪಿಂಗ್‌, ಆಹಾರದ ಆನ್‌ಲೈನ್‌ ಆರ್ಡರ್‌ ಸೇವೆಗಳನ್ನು ವಿತರಿಸುವ ಸೂಪರ್‌ ಆ್ಯಪ್‌ ಆಯಿತು.

ಇದನ್ನೂ ಓದಿ: ವಿಸ್ತಾರ 5G Info| ನಿಮ್ಮ ಮೊಬೈಲ್‌ 5G ಸಪೋರ್ಟ್‌ ಮಾಡುತ್ತಿದೆಯೇ ಎಂದು ತಿಳಿಯುವುದು ಹೇಗೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

5 G

Team India : ಭಾರತ ತಂಡ 2024ರ ಮಾರ್ಚ್​ ತನಕವೂ ಬ್ಯುಸಿ; ಇಲ್ಲಿದೆ ಟೂರ್ನಿಗಳ ವಿವರ

ಮುಂದಿನ ನಾಲ್ಕು ತಿಂಗಳಲ್ಲಿ ಭಾರತವು (Team India) ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿಗಳನ್ನು ಆಡಲಿದೆ.

VISTARANEWS.COM


on

Cricket news
Koo

ಬೆಂಗಳೂರು: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್​ಗಳಿಂದ ಸೋತ ನಂತರ ಬೇಸರದಲ್ಲಿದೆ. ಆದರೆ, ಹೆಚ್ಚು ದಿನ ಅದೇ ಮೂಡ್​ನಲ್ಲಿ ಇರಲು ಅವಕಾಶವಿಲ್ಲ. ಟೀಮ್ ಇಂಡಿಯಾ ಮುಂದಿನ ಮೂರು ತಿಂಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರಲಿದೆ. ನಿರಂತರ ವೇಳಾಪಟ್ಟಿಯನ್ನು ಹೊಂದಿರುವುದರಿಂದ ತ್ವರಿತವಾಗಿ ಮರು ಸಂಘಟನೆಗೊಳ್ಳಬೇಕಾಗಿಎ. ವಿಶ್ವಕಪ್ ಬಳಿಕ ಟೀಂ ಇಂಡಿಯಾ ನವೆಂಬರ್ 23ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಅದಕ್ಕೀಗ ತಂಡ ಪ್ರಕಟಗೊಂಡಿದೆ.

ರೋಹಿತ್ ಶರ್ಮಾ ನೇತೃತ್ವದ ತಂಡವು ಡಿಸೆಂಬರ್​ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಮೂರು ಟಿ 20 ಮತ್ತು ಅನೇಕ ಏಕದಿನ ಪಂದ್ಯಗಳನ್ನು ಆಡಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದಾರೆ. ಇದಲ್ಲದೆ, ಭಾರತವು ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ 20 ಐ ಸರಣಿಯೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸಲಿದೆ. ನಂತರ ಜನವರಿ ಕೊನೆಯ ವಾರದಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ.

ಟಿ20ಗೆ ಆದ್ಯತೆ

ಮುಂಬರುವ ಪ್ರವಾಸಗಳು ಟಿ 20 ಪಂದ್ಯಗಳಿಂದಲೇ ತುಂಬಿರುತ್ತವೆ. ಏಕೆಂದರೆ ತಂಡದ ಪ್ರಮುಖ ಗಮನವು ಯುಎಸ್ ಮತ್ತು ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2024 ರ ಮೇಲೆ ಇರುತ್ತದೆ. ಇದಲ್ಲದೆ, ನಿರ್ಣಾಯಕ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಸೆಣಸಲಿರುವ ಭಾರತ ಟೆಸ್ಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶೀಪ್​ (ಡಬ್ಲ್ಯುಟಿಸಿ) ಪಾಯಿಂಟ್ಸ್ ಟೇಬಲ್​​ನಲ್ಲಿ ನಿರ್ಣಾಯಕ ಅಂಕಗಳನ್ನು ಸಂಗ್ರಹಿಸಲು ಸಜ್ಜಾಗಿದೆ.

ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ ಟೀಮ್ ಇಂಡಿಯಾ ಪ್ರಸ್ತುತ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಒಂದು ಡ್ರಾದೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಂದ್ಯಾವಳಿಯ ಹಿಂದಿನ ಎರಡು ಆವೃತ್ತಿಗಳಲ್ಲಿ ರನ್ನರ್ ಅಪ್ ಸ್ಥಾನ ಪಡೆದ ಭಾರತ ತಂಡ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ಅಪೇಕ್ಷಿತ ಗದೆ ರೂಪದ ಟ್ರೋಫಿಗೆ ಗೆಲ್ಲಲು ಸಿದ್ಧವಾಗಬೇಕಿದೆ.

ಇದನ್ನೂ ಓದಿ: Team India : ಜನವರಿಯಲ್ಲಿ ನಡೆಯಲಿದೆ ಅಫಘಾನಿಸ್ತಾನ ವಿರುದ್ಧ ಕ್ರಿಕೆಟ್​ ಸರಣಿ

ಪಂತ್​ಗಾಗಿ ಕಾಯುವಿಕೆ

ಪ್ಯಾಕ್ ಆಗಿರುವ ವೇಳಾಪಟ್ಟಿಯ ಹೊರತಾಗಿ, 2022 ರ ಡಿಸೆಂಬರ್​ನಲ್ಲಿ ಭೀಕರ ಕಾರು ಅಪಘಾತದ ಬಳಿಕ ಸುಧಾರಿಸಿಕೊಳ್ಳುತ್ತಿರುವ ಮತ್ತು ಸುಮಾರು ಒಂದು ವರ್ಷದಿಂದ ಆಟದಿಂದ ಹೊರಗುಳಿದಿದ್ದ ರಿಷಭ್ ಪಂತ್ ಮತ್ತೆ ಭಾರತೀಯ ತಂಡಕ್ಕೆ ಮರಳಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕ ಸೌರವ್ ಗಂಗೂಲಿ ಅವರು ಪಂತ್ ಐಪಿಎಲ್ 2024 ರಲ್ಲಿ ಭಾಗವಹಿಸುತ್ತಾರೆ ಎಂದು ಖಚಿತಪಡಿಸಿದ್ದಾರೆ ಮತ್ತು ಅವರ ಅಂತಾರಾಷ್ಟ್ರೀಯ ಪುನರಾಗಮನವು ಫೆಬ್ರವರಿ 2023 ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯ ಸಮಯದಲ್ಲಿ ನಡೆಯುವ ಸಾಧ್ಯತೆಯಿದೆ.

Continue Reading

5 G

BSNL 5G : ಗ್ರಾಹಕರಿಗೆ ಸಿಹಿ ಸುದ್ದಿ, ವರ್ಷಾಂತ್ಯಕ್ಕೆ ದೇಶಾದ್ಯಂತ ಸಿಗಲಿದೆ ಬಿಎಸ್ಸೆನ್ನೆಲ್‌ 5ಜಿ

VISTARANEWS.COM


on

BSNL 5G: Good news for customers, BSNL 5G will be available across the country by the end of the year
Koo

ನವ ದೆಹಲಿ: ಬಿಎಸ್ಸೆನ್ನೆಲ್‌ನ (BSNL 5G) 4ಜಿ ನೆಟ್‌ ವರ್ಕ್‌ 2023ರ ವರ್ಷಾಂತ್ಯದ ವೇಳೆಗೆ 5ಜಿಗೆ ಮೇಲ್ದರ್ಜೆಗೇರಲಿದೆ ಎಂದು ಕೇಂದ್ರ ದೂರಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. (BSNL 5G) ಕಂಪನಿಯು ಪಂಜಾಬ್-ಫಿರೋಜ್‌ಪುರ್‌, ಪಠಾಣ್‌ ಕೋಟ್‌ ಮತ್ತು ಅಮೃತ್‌ಸರದಲ್ಲಿ 200 ಟವರ್‌ಗಳ ಸ್ಥಳಗಳಲ್ಲಿ 4ಜಿಯನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದು, ಮೂರು ತಿಂಗಳ ಕಾಲ ನಡೆಯಲಿದೆ. ಬಳಿಕ ದಿನಕ್ಕೆ 200 ಸೈಟ್ಸ್‌ಗಳ ಲೆಕ್ಕದಲ್ಲಿ 4ಜಿ ನೆಟ್‌ ವರ್ಕ್‌ ವಿಸ್ತರಣೆಯಾಗಲಿದೆ. ಹಾಗೂ ನವೆಂಬರ್-ಡಿಸೆಂಬರ್‌ ವೇಳೆಗೆ 5ಜಿಗೆ ಅಪ್‌ಗ್ರೇಡ್‌ ಆಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಬಿಎಸ್ಸೆನ್ನೆಲ್‌ ಈಗಾಗಲೇ ಟಿಸಿಎಸ್‌ ಮತ್ತು ಐಟಿಐ ಲಿಮಿಟೆಡ್‌ ಜತೆಗೆ 4ಜಿ ನೆಟ್‌ ವರ್ಕ್‌ ಅಳವಡಿಕೆಗೆ ಸಂಬಂಧಿಸಿ 19,000 ಕೋಟಿ ರೂ.ಗಳ ಖರೀದಿ ಆರ್ಡರ್‌ಗೆ ಮುಂಗಡವನ್ನು ನೀಡಿದೆ (advance purchase order) ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಬಿಎಸ್ಸೆನ್ನೆಲ್‌ ನೆಟ್‌ ವರ್ಕ್‌ ಆರಂಭದಲ್ಲಿ 4ಜಿಯಲ್ಲಿ ಇರಲಿದೆ. ಬಳಿಕ ನವೆಂಬರ್-ಡಿಸೆಂಬರ್‌ ವೇಳೆಗೆ ಸಾಫ್ಟ್‌ವೇರ್‌ನಲ್ಲಿ ಸಣ್ಣ ಬದಲಾವಣೆಯೊಂದಿಗೆ 5ಜಿಗೆ ಅಪ್‌ಡೇಟ್‌ ಆಗಲಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ವಿವರಿಸಿದ್ದಾರೆ.

ಅಮೆರಿಕಕ್ಕೆ ಭಾರತದ ಟೆಲಿಕಾಂ ತಂತ್ರಜ್ಞಾನ ರಫ್ತು:

ಭಾರತದ ಟೆಲಿಕಾಂ ತಂತ್ರಜ್ಞಾನವನ್ನು ಅಮೆರಿಕಕ್ಕೂ ಈಗ ರಫ್ತು ಮಾಡಲಾಗುತ್ತಿದೆ. 18 ದೇಶಗಳು ಭಾರತದ 4ಜಿ ಮತ್ತು 5ಜಿ ತಂತ್ರಜ್ಞಾನವನ್ನು ಅಳವಡಿಸಲು ಉತ್ಸುಕವಾಗಿವೆ. ದೇಶ ದೂರಸಂಪರ್ಕ ತಂತ್ರಜ್ಞಾನದಲ್ಲಿ ಬೆಳೆಯುತ್ತಿರುವುದಕ್ಕೆ ಇದು ಸಾಕ್ಷಿ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಇದನ್ನೂ ಓದಿ: BSNL OTT : ಬಿಎಸ್ಸೆನ್ನೆಲ್‌ನಿಂದ OTT ಸೇವೆ ಸಿನಿಮಾಪ್ಲಸ್‌ ಆರಂಭ

Continue Reading

5 G

Jio True 5G | ಜಿಯೋದಿಂದ ಹೊಸ ವರ್ಷದ ಕೊಡುಗೆ; ಮೈಸೂರಿನಲ್ಲಿ ಟ್ರೂ 5ಜಿ ಸೇವೆ ಪ್ರಾರಂಭ

ದೇಶದ ವಿವಿಧ ನಗರಗಳಲ್ಲಿ 5ಜಿ ಸೇವಯನ್ನು ಒದಗಿಸುತ್ತಿರುವ ರಿಲಯನ್ಸ್ ಜಿಯೋ ಇದೀಗ ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಿಯೋ ಟ್ರೂ 5ಜಿ (Jio True 5G) ಸೇವೆಯನ್ನು ಆರಂಭಿಸಿದೆ.

VISTARANEWS.COM


on

Jio True 5G @ Mysuru
Koo

ಮೈಸೂರು: ರಿಲಯನ್ಸ್ ಜಿಯೋ ಮೈಸೂರಿನಲ್ಲಿ ಟ್ರೂ 5ಜಿ ಸೇವೆಗಳಿಗೆ (Jio True 5G) ಚಾಲನೆ ನೀಡಿತು. ಅಷ್ಟೇ ಅಲ್ಲ, ಲಖನೌ, ತಿರುವನಂತಪುರಂ, ನಾಸಿಕ್, ಔರಂಗಾಬಾದ್, ಚಂಡೀಗಢ, ಮೊಹಾಲಿ, ಪಂಚಕುಲ, ಜಿರಾಕ್‌ಪುರ, ಖರಾರ್ ಮತ್ತು ದೇರಾಬಸ್ಸಿಗಳಲ್ಲಿ ಕೂಡ ತನ್ನ ಟ್ರೂ 5ಜಿ ಸೇವೆಗಳ ಪ್ರಾರಂಭದ ಬಗ್ಗೆ ಘೋಷಣೆ ಮಾಡಿತು. ಅಂದಹಾಗೆ, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸುವ ಮೊದಲ ಮತ್ತು ಏಕೈಕ ಆಪರೇಟರ್ ರಿಲಯನ್ಸ್ ಜಿಯೋ ಆಗಿದೆ.

ಬುಧವಾರದಿಂದಲೇ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್‌+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಮೈಸೂರಿನಲ್ಲಿರುವ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಯೋ ವಕ್ತಾರರು, ಮೈಸೂರು ನಗರದಲ್ಲಿ 5ಜಿ ಆರಂಭಿಸುವುದಕ್ಕೆ ನಾವು ಹೆಮ್ಮೆಪಡುತ್ತೇವೆ ಮತ್ತು ನಾವು ಟ್ರೂ 5ಜಿ ಸೇವೆಗಳನ್ನು ಹೊರತರಲು ಪ್ರಾರಂಭಿಸಿದಾಗಿನಿಂದ ನಮ್ಮ ಅತಿದೊಡ್ಡ ಆರಂಭದಲ್ಲಿ ಇದು ಒಂದಾಗಿದೆ. ಜಿಯೋ ಟ್ರೂ 5ಜಿ ತಂತ್ರಜ್ಞಾನದ ವೇರಿಯಂಟ್‌ ಪ್ರಯೋಜನಗಳನ್ನು ಆನಂದಿಸುವ ಮೂಲಕ ಈಗ 2023ರಿಂದ ಪ್ರಾರಂಭ ಆಗುವುದರೊಂದಿಗೆ ಲಕ್ಷಾಂತರ ಜಿಯೋ ಬಳಕೆದಾರರಿಗೆ ಇದು ಗೌರವವಾಗಿದೆ.

“ಮೈಸೂರು ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರ ಮತ್ತು ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ದೂರಸಂಪರ್ಕ ಜಾಲವನ್ನು ಮಾತ್ರವಲ್ಲ, ಜತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಸಣ್ಣ ಮತ್ತು ಮಧ್ಯಮ ಸಂಸ್ಥೆಗಳು ಅಮೋಘ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತಾರೆ. “ಈ ಪ್ರದೇಶವನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನದಲ್ಲಿ ನಿರಂತರ ಬೆಂಬಲ ನೀಡುತ್ತಿರುವ ಕರ್ನಾಟಕ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ” ಎಂದು ಅವರು ಹೇಳಿದರು.

ಇದನ್ನೂ ಓದಿ | Jio True 5G | ಮಹಾಕಾಲ ಮಹಾಲೋಕ, ಮಹಾಕಾಲೇಶ್ವರ ದೇವಸ್ಥಾನದಲ್ಲಿ ಜಿಯೋ ಟ್ರೂ 5ಜಿ ಸೇವೆ

Continue Reading

5 G

5G Service Launch | ಮೊದಲ ಹಂತದಲ್ಲಿ ಬೆಂಗಳೂರಲ್ಲೂ 5ಜಿ ಲಭ್ಯ ಇದೆಯಾ?

ಭಾರತದಲ್ಲಿ 5ಜಿ ಸೇವೆಗೆ (5G Service Launch) ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದು, ಬೆಂಗಳೂರು ಸೇರಿದಂತೆ 13 ನಗರಗಳಲ್ಲಿ ಈ ಸೇವೆ ದೊರೆಯಲಿದೆ.

VISTARANEWS.COM


on

Karnataka Election Results- 217 Crorepatis In 224 Member Karnataka Assembly
Koo

ನವ ದೆಹಲಿ: ಇಲ್ಲಿನ ಪ್ರಗತಿ ಮೈದಾನದಲ್ಲಿ ಆರಂಭವಾಗಿರುವ ಇಂಡಿಯನ್ ಮೊಬೈಲ್ ಕಾಂಗ್ರೆಸ್‌ನಲ್ಲಿ 5G ಸೇವೆ(5G Service Launch)ಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು. ರಿಮೋಟ್‌ ಬಟನ್‌ ಒತ್ತುವ ಮೂಲಕ ಅವರು ಸೇವೆಗಳನ್ನು ಉದ್ಘಾಟಿಸಿದರು. ಏತನ್ಮಧ್ಯೆ, ಮೊದಲ ಹಂತದಲ್ಲಿ ಬೆಂಗಳೂರು ನಗರದಲ್ಲೂ 5ಜಿ ಸೇವೆ ದೊರೆಯಲಿದೆ. ಈ ಮೊದಲು ಬೆಂಗಳೂರು ಆರಂಭದಲ್ಲಿ ಈ ಸೇವೆ ದೊರೆಯುವಿುದಿಲ್ಲ ಎಂದು ಹೇಳಲಾಗುತ್ತಿತ್ತು.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಬೆಂಗಳೂರು ಸೇರಿದಂತೆ ಮೊದಲ ಹಂತದಲ್ಲಿ 13 ನಗರಗಳಲ್ಲಿ 5ಜಿ ತಂತ್ರಜ್ಞಾನ ಬಳಕೆಗೆ ಸಿಗಲಿದೆ. ಮುಂದಿನ ಎರಡು ವರ್ಷಗಳಲ್ಲಿ ದೇಶದ ಎಲ್ಲ ಕಡೆ 5ಜಿ ಸೇವ ದೊರೆಯಲಿದೆ. ಸದ್ಯಕ್ಕೆ ಬೆಂಗಳೂರು, ಚಂಡೀಗಢ, ಅಹ್ಮದಾಬಾದ್, ಗಾಂಧಿನಗರ, ಗುರುಗ್ರಾಮ್, ಹೈದ್ರಾಬಾದ್, ಜಾಮನಗರ್, ಚೆನ್ನೈ, ದಿಲ್ಲಿ, ಕೋಲ್ಕೊತಾ, ಮುಂಬೈ, ಪುಣೆ ಮತ್ತು ಲಖನೌ ನಗರಗಲ್ಲಿ 5ಜಿ ಸೇವೆ ದೊರೆಯಲಿದೆ.

ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಕಂಪನಿಗಳು ಈ 5ಜಿ ಸೇವೆಯನ್ನು ಒದಗಿಸಲಿವೆ. ಈಗಾಗಲೇ ಈ ಬಗ್ಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಈ ಕಂಪನಿಗಳು ಮಾಡಿಕೊಂಡಿವೆ.

ಹೊಸ ಯುಗ ಆರಂಭ- ಮೋದಿ
5ಜಿ ಸಂಪರ್ಕದೊಂದಿಗೆ, ದೇಶದಲ್ಲಿ ಆಧುನಿಕತೆಯ ಹೊಸ ಯುಗವೊಂದು ಆರಂಭವಾಗಲಿದೆ. ಯುವಜನತೆಗೆ ನೂತನ ಅವಕಾಶಗಳು ತೆರೆದುಕೊಳ್ಳಲಿವೆ. ಶಕ್ತಿದೇವತೆಯನ್ನು ಪೂಜಿಸುವ ನವರಾತ್ರಿಯ ಶುಭಪರ್ವದ ಸಂದರ್ಭದಲ್ಲಿ ಶಕ್ತಿಯ ಇನ್ನೊಂದು ಮಾಧ್ಯಮವೆನಿಸಿದ 5G ದೇಶದ ಜನತೆಗೆ ಅರ್ಪಿಸುವುದಕ್ಕೆ ನನಗೆ ಆನಂದವೆನಿಸುತ್ತದೆ. ಇದೊಂದು ಐತಿಹಾಸಿಕ ದಿನ, ಕ್ಷಣ. ಭಾರತದ ಇದರ ಮೂಲಕ ಟೆಲಿಕಾಂ ಜಗತ್ತಿನಲ್ಲಿ ಜಗತ್ತಿಗೇ ಮಾದರಿಯನ್ನು ಕಲ್ಪಿಸಲಿದೆ ಎಂದು ನರೇಂದ್ರ ಮೋದಿ ಅವರು 5ಜಿ ಸೇವೆಯನ್ನು ಉದ್ಘಾಟಿಸಿ ಹೇಳಿದರು.

ಗುಜರಾತ್‌ನಲ್ಲಿ 24 ಗಂಟೆ ವಿದ್ಯುತ್‌ ಒದಗಿಸಿದಂತೆ ವಿದ್ಯುತ್‌ ಅವಲಂಬಿಸಿ ಮಾಡಬಹುದಾದ ಕೆಲಸಗಳು ಹಾಗೂ ಉಪಕರಣಗಳ ಮಾರುಕಟ್ಟೆಯೂ ವರ್ಧಿಸಿತು. ಹಾಗೆಯೇ 5G ಅವಂಬಿಸಿಯೂ ಜೀವನಶೈಲಿಯಲ್ಲಿ ದೊಡ್ಡ ಮಾರ್ಪಾಡು ಆಗಲಿದೆ. 5G ಎಂದರೆ ಕೇವಲ ಮನರಂಜನೆಯ ಹೆಚ್ಚಳ ಮಾತ್ರ ಆಗುವುದಿಲ್ಲ. ಅದು ಬಡವರೂ ಸೇರಿದಂತೆ ಎಲ್ಲ ವಲಯದ ಜೀವನವನ್ನು ಸುಧಾರಿಸಲಿದೆ. ನಾವು ನೇರ ಪಾವತಿ ಕಾರ್ಯಕ್ರಮವನ್ನು ಆರಂಭಿಸಿದಾಗ ತುಂಬಾ ಮಂದಿ ಅದರ ಪರಿಣಾಮಕಾರತ್ವದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಜಗತ್ತಿನ ಬೇರೆ ಬೇರೆ ಮುಂದುವರಿದ ದೇಶಗಳು ಕೂಡ ಇದನ್ನು ಒದಗಿಸುವಲ್ಲಿ ಸೋತಿದ್ದವು. ಆದರೆ ಭಾರತ ಅದನ್ನು ಒಂದೇ ಕ್ಲಿಕ್‌ನಲ್ಲಿ ಸಾಧಿಸಬಹುದು ಎಂಬುದನ್ನು ತೋರಿಸಿತು. 5G ವಿಷಯದಲ್ಲೂ ಹೀಗೇ ಆಗಲಿದೆ ಎಂದರು.

ಇಂದು ನಾವು ಆತ್ಮನಿರ್ಭರ ಭಾರತ, ಡಿಜಿಟಲ್‌ ಭಾರತ ಆಗಿದ್ದೇವೆ. ಸರ್ಕಾರ ಸರಿಯಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಇದನ್ನು ಸಾಧಿಸಬಹುದು ಎಂದು ತೋರಿಸಿದ್ದೇವೆ. ಇದೇ 2G ನಿಯತ್ತಿಗೂ 5G ನಿಯತ್ತಿಗೂ ಇರುವ ವ್ಯತ್ಯಾಸ ಎಂದು ಪ್ರಧಾನಿ ಯುಪಿಎ ಸರ್ಕಾರದ ʻ2G ಹಗರಣʼಕ್ಕೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ಇದನ್ನೂ ಓದಿ | 5G Services Launch | ಭಾರತದಲ್ಲಿ 5ಜಿ ಜಮಾನಾ ಶುರು; ಏನಿದು ಇಂಟರ್‌ನೆಟ್‌ ಕ್ರಾಂತಿ? ಏನಿದರ ಅನುಕೂಲ?

Continue Reading
Advertisement
girl students fall ill
ಕರ್ನಾಟಕ34 mins ago

Raichur News: ಮಾನ್ವಿ ಹಾಸ್ಟೆಲ್‌ನಲ್ಲಿ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ

Fans brave the dampness, waiting for India's tour of South Africa to kick off
ಕ್ರಿಕೆಟ್45 mins ago

IND vs SA: ಮಳೆಗೆ ಕೊಚ್ಚಿ ಹೋದ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ

Gautam Gambhir
ಕ್ರಿಕೆಟ್1 hour ago

Gautam Gambhir: ಮತ್ತೆ ಪಾಕ್​ ಆಟಗಾರನ ಬೆಂಬಲಕ್ಕೆ ನಿಂತ ಗೌತಮ್​ ಗಂಭೀರ್

Shakti Scheme
ಕರ್ನಾಟಕ1 hour ago

Shakti Scheme: ಒಂದೇ ಆಧಾರ್‌ ಕಾರ್ಡ್‌ ಬಳಸಿ ಇಬ್ಬರ ಪ್ರಯಾಣ; ಸಿಕ್ಕಿಬಿದ್ದ ಬುರ್ಕಾಧಾರಿ ಮಹಿಳೆಯರು!

Supreme Court verdict on Article 370 and Know about this article
ದೇಶ2 hours ago

ನಾಳೆ ಆರ್ಟಿಕಲ್ 370 ರದ್ದು ತೀರ್ಪು; ಅದಕ್ಕೂ ಮೊದಲು ಈ ಸಂಗತಿ ತಿಳಿದುಕೊಂಡಿರಿ

WPL 2024 Auction
ಕ್ರಿಕೆಟ್2 hours ago

ಬಿಡ್ಡಿಂಗ್​ ಹಣದಲ್ಲಿ ತಂದೆ-ತಾಯಿಗೆ ವಿಶೇಷ ಉಡುಗೊರೆ ನೀಡಲು ಮುಂದಾದ ಕರ್ನಾಟಕದ ​ ವೃಂದಾ ದಿನೇಶ್​

Naveen Ammembala
ದಕ್ಷಿಣ ಕನ್ನಡ2 hours ago

ಹೈಪರ್ ಲೋಕಲ್ ಸುದ್ದಿಗೂ ಅಭ್ಯುದಯ ಪತ್ರಿಕೋದ್ಯಮಕ್ಕೂ ಅವಿನಾಭಾವ ಸಂಬಂಧ: ನವೀನ್ ಅಮ್ಮೆಂಬಳ

Chhattisgarh to be CM Vishnu has two deputies and Raman Singh Speaker
ದೇಶ3 hours ago

ಛತ್ತೀಸ್‍‌ಗಢ ಸಿಎಂ ವಿಷ್ಣುಗೆ ಇಬ್ಬರು ಡೆಪ್ಯುಟಿಗಳು; ರಮಣ್ ಸಿಂಗ್ ಸ್ಪೀಕರ್

Rambhapuri seer and MB Patil
ಕರ್ನಾಟಕ3 hours ago

ಎಂ.ಬಿ. ಪಾಟೀಲ್‌ಗೆ ನೀರಾವರಿ ಖಾತೆ ಸಿಗಬೇಕಿತ್ತು; ಡಿಕೆಶಿಗೆ ಕೊಟ್ಟಿದ್ದಕ್ಕೆ ರಂಭಾಪುರಿ ಶ್ರೀ ಬೇಸರ!

India U19 vs Pakistan U19
ಕ್ರಿಕೆಟ್3 hours ago

U19 Asia Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ 8 ವಿಕೆಟ್​ ಸೋಲು

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ7 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ10 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ18 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌