ವಿಸ್ತಾರ Explainer | 2.30 ಲಕ್ಷ ಕೋಟಿ ರೂ. ಸಾಲದಲ್ಲಿ ಅದಾನಿ ಗ್ರೂಪ್, ಸ್ಫೋಟಕ ವರದಿಗೆ ಷೇರು ದರ ತತ್ತರ ! - Vistara News

EXPLAINER

ವಿಸ್ತಾರ Explainer | 2.30 ಲಕ್ಷ ಕೋಟಿ ರೂ. ಸಾಲದಲ್ಲಿ ಅದಾನಿ ಗ್ರೂಪ್, ಸ್ಫೋಟಕ ವರದಿಗೆ ಷೇರು ದರ ತತ್ತರ !

ಭಾರತದ ಮೂರನೇ ಅತಿ ದೊಡ್ಡ ಉದ್ದಿಮೆ ಸಮೂಹವಾದ ಅದಾನಿ ಗ್ರೂಪ್ ಹೊಂದಿರುವ ಸಾಲದ ಬಗ್ಗೆ ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿ ಫಿಚ್‌ ಸಮೂಹದ ಘಟಕವಾದ ಕ್ರೆಡಿಟ್‌ ಸೈಟ್ಸ್‌ ಬಿಡುಗಡೆಗೊಳಿಸಿರುವ ಸ್ಫೋಟಕ ವರದಿಯ ಪರಿಣಾಮ ಅದಾನಿ ಕಂಪನಿಗಳ ಷೇರುಗಳ ಒಟ್ಟು ಮೌಲ್ಯದಲ್ಲಿ94,000 ಕೋಟಿ ರೂ. ಕರಗಿದೆ. ಹಾಗಾದರೆ ವರದಿಯಲ್ಲಿ ಏನೇನಿದೆ? (ವಿಸ್ತಾರ Explainer) ಅದಾನಿ ಸಾಮ್ರಾಜ್ಯದ ಸಾಲವೆಷ್ಟು? ಮುಂದೇನು? ವಿವರ ಇಲ್ಲಿದೆ.

VISTARANEWS.COM


on

gautham adani
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಖ್ಯಾತ ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹ, ಕಳೆದ ಕೆಲ ವರ್ಷಗಳಿಂದ ಬೃಹತ್‌ ಸಾಲದ ಹೊರೆಯ ಮೇಲೆ ನಿಂತಿದ್ದು, ಆತಂಕ ಹುಟ್ಟಿಸಿದೆ ಎಂದು ಅಮೆರಿಕ ಮೂಲದ ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿ ಫಿಚ್‌ ಸಮೂಹದ ಘಟಕವಾಗಿರುವ ಕ್ರೆಡಿಟ್‌ಸೈಟ್ಸ್‌ ಮಾಡಿರುವ ವರದಿ ಸಂಚಲನ ಸೃಷ್ಟಿಸಿದೆ. (ವಿಸ್ತಾರ Explainer) ಈ ಸ್ಫೋಟಕ ವರದಿಯ ಬೆನ್ನಲ್ಲೇ ಅದಾನಿ ಸಮೂಹದ ಕಂಪನಿಗಳ ಷೇರು ದರಗಳು ಕಳೆದ ಎರಡು ದಿನಗಳಿಂದ ಕುಸಿತಕ್ಕೀಡಾಗಿವೆ. ಸಮೂಹದ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ೯೪,೦೦೦ ಕೋಟಿ ರೂ. ನಷ್ಟವಾಗಿದೆ.

ಅದಾನಿ ಗ್ರೂಪ್‌ನ ಸಾಲ ೨,೩೦,೯೦೦ ಕೋಟಿ ರೂ!

cash

ಅದಾನಿ ಗ್ರೂಪ್‌ ಕಳೆದ ಕೆಲ ವರ್ಷಗಳಲ್ಲಿ ನಾನಾ ಕ್ಷೇತ್ರಗಳಲ್ಲಿ ಭಾರಿ ಬಂಡವಾಳ ಹೂಡಿಕೆ ಮಾಡಿದೆ. ಆದರೆ ಈ ಅನೂಹ್ಯ ವಿಸ್ತರಣೆಗೆ ಭಾರಿ ಮೊತ್ತದ ಸಾಲದ ಹಣವನ್ನು ಬಳಸಿಕೊಳ್ಳಲಾಗಿದೆ. ೨೦೨೨ರ ಮಾರ್ಚ್‌ ೩೧ರ ವೇಳೆಗೆ ಅದಾನಿ ಗ್ರೂಪ್‌ನ ೬ ಪ್ರಮುಖ ಕಂಪನಿಗಳ ಒಟ್ಟು ಸಾಲದ ಹೊರೆ ೨.೩೦ ಲಕ್ಷ ಕೋಟಿ ರೂ.ಗಳಾಗಿವೆ. (೨,೩೦,೯೦೦ ಕೋಟಿ ರೂ.) ಒಂದು ವೇಳೆ ಅದಾನಿ ಸಮೂಹದ ಕಂಪನಿಗಳ ಪರಿಸ್ಥಿತಿ ಬಿಗಡಾಯಿಸಿದರೆ, ಅಂಥ ಕಂಪನಿಗಳು ಸಾಲದ ಬಲೆಯಲ್ಲಿ ಸಿಲುಕಿ ದಿವಾಳಿಯಾಗುವ ಅಪಾಯ ಇದೆ ಎಂದು ಕ್ರೆಡಿಟ್‌ಸೈಟ್ಸ್‌ ಎಚ್ಚರಿಸಿದೆ. ಹಾಗಾದರೆ ಅದಾನಿ ಸಮೂಹದ ಪ್ರಮುಖ ಕಂಪನಿಗಳು ಯಾವುದು? ಯಾವ ಬ್ಯಾಂಕ್‌ಗಳಿಂದ ಸಾಲ ಪಡೆದಿದೆ? ಅದಾನಿ ಸಮೂಹದ ಭವಿಷ್ಯವೇನು? ಕ್ರೆಡಿಟ್‌ಸೈಟ್ಸ್‌ ಬಿಡುಗಡೆಗೊಳಿಸಿರುವ ಸ್ಫೋಟಕ ವರದಿಯಲ್ಲಿ ಏನೇನಿದೆ? ಇಲ್ಲಿದೆ ವಿವರ.

ಕ್ರೆಡಿಟ್‌ ಸೈಟ್ಸ್‌ ವರದಿಯ ಮುಖ್ಯಾಂಶಗಳು:

  • ಭಾರತದ ಅತಿ ದೊಡ್ಡ ಉದ್ದಿಮೆ ಸಮೂಹಗಳಲ್ಲೊಂದಾಗಿರುವ ಅದಾನಿ ಗ್ರೂಪ್‌ನ ಮೂಲಭೂತ ಅಂಶಗಳನ್ನು ಕ್ರೆಡಿಟ್‌ಸೈಟ್ಸ್ ವಿಶ್ಲೇಷಿಸಿದೆ. ಇದರ ಪ್ರಕಾರ ಕಳೆದ ಕೆಲ ವರ್ಷಗಳಿಂದ ಅದಾನಿ ಗ್ರೂಪ್‌, ವ್ಯಾಪಕ ವಿಸ್ತರಣೆ ಯೋಜನೆಯನ್ನು ಕೈಗೊಂಡಿದೆ. ಇದರ ಪರಿಣಾಮ ಅದರ ಸಾಲದ ಮೊತ್ತ ಅನೂಹ್ಯವಾಗಿ ವೃದ್ಧಿಸಿದೆ. ನಗದು ಹರಿವಿನ ಮೇಲೆ ಒತ್ತಡ ಉಂಟಾಗಿದೆ.
  • ಅದಾನಿ ಗ್ರೂಪ್‌ ಈಗ ವ್ಯವಹಾರ ನಡೆಸುತ್ತಿರುವ ಹಾಗೂ ಹೊಸ ಕ್ಷೇತ್ರಗಳಲ್ಲಿ ಭಾರಿ ಹೂಡಿಕೆ ಮಾಡುತ್ತದೆ. ಅವುಗಳಿಗೆ ಭಾರಿ ಬಂಡವಾಳದ ಅಗತ್ಯವೂ ಇದೆ. ಆದರೆ ಯಥಾರ್ಥವಾಗಿ ಇದರ ಅನುಷ್ಠಾನ ಸಾಧ್ಯವೇ ಎಂಬ ಆತಂಕ ಉಂಟಾಗಿದೆ.
  • ಸಮೂಹದ ಕಂಪನಿಗಳಲ್ಲಿ ಸಮೂಹದ ಪ್ರವರ್ತಕರ ಈಕ್ವಿಟಿ ಬಂಡವಾಳ ಹೂಡಿಕೆ ಕಡಿಮೆಯಾಗಿದೆ.
  • ಮಾರುಕಟ್ಟೆಯ ಹಿಡಿತ ಸಾಧಿಸಲು ಅದಾನಿ ಗ್ರೂಪ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಜತೆ ಪ್ರಬಲ ಪೈಪೋಟಿ ನಡೆಸುವ ನಿರೀಕ್ಷೆ ಇದೆ. ಇದರ ಪರಿಣಾಮ ಅಸಮರ್ಪಕ ಹಣಕಾಸು ನಿರ್ಣಯಗಳನ್ನು ಅದಾನಿ ಗ್ರೂಪ್‌ ಕೈಗೊಳ್ಳುವ ಸಾಧ್ಯತೆ ಇದೆ.
  • ಅದಾನಿ ಗ್ರೂಪ್‌ ಆಡಳಿತಾತ್ಮಕ, ಪರಿಸರ, ಸಾಮಾಜಿಕ ಬದಲಾವಣೆಗಳ (ECG) ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ.
  • ಹೀಗಿದ್ದರೂ, ಅದಾನಿ ಗ್ರೂಪ್‌, ದೇಶಿ ಹಾಗೂ ಅಂತಾರಾಷ್ಟ್ರೀಯ ಬ್ಯಾಂಕ್‌ಗಳ ಜತೆಗೆ ಪ್ರಬಲ ಸಂಬಂಧವನ್ನು ಹೊಂದಿದೆ. ಈ ಬ್ಯಾಂಕ್‌ಗಳು ಅದಾನಿ ಗ್ರೂಪ್‌ಗೆ ದೊಡ್ಡ ಮೊತ್ತದ ಸಾಲವನ್ನು ನೀಡುತ್ತಿವೆ. ಹೊಸ ಬಿಸಿನೆಸ್‌ ಮಾಡಲೂ, ಈಗಿನ ಉದ್ದಿಮೆಯನ್ನು ವಿಸ್ತರಿಸಲೂ ಭರಪೂರ ಸಾಲ ವಿತರಿಸುತ್ತಿವೆ.
  • ಅದಾನಿ ಗ್ರೂಪ್‌ ಪ್ರಬಲ ಮತ್ತು ಸ್ಥಿರವಾದ ಕಂಪನಿಗಳನ್ನು ಕಟ್ಟಿರುವ ಇತಿಹಾಸವನ್ನು ಹೊಂದಿದೆ. ಮೂಲಸೌಕರ್ಯ ವಲಯದಲ್ಲಿ ಬೆಳವಣಿಎ ದಾಖಲಿಸಿದೆ. ಇದು ಭಾರತದ ಆರ್ಥಿಕತೆಗೂ ಆರೋಗ್ಯಕರ.
  • ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನೀತಿಗಳು ಪೂರಕವಾಗಿವೆ. ಜತೆಗೆ ಗೌತಮ್‌ ಅದಾನಿ ಅವರು ಆಡಳಿತಾರೂಢ ಮೋದಿ ಸರ್ಕಾರದ ಜತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ.
  • ಒಟ್ಟಾರೆಯಾಗಿ ಭಾರಿ ಸಾಲದ ಹಣದ ಮೂಲಕ ಅದಾನಿ ಗ್ರೂಪ್‌ನ ಬೆಳವಣಿಗೆ ಮತ್ತು ವಿಸ್ತರಣೆ ನಡೆಯುತ್ತಿರುವುದರಿಂದ ಕ್ರೆಡಿಟ್‌ ಸೈಟ್ಸ್‌ ಎಚ್ಚರಿಕೆಯಿಂದ ಗಮನಿಸುತ್ತಿದೆ.

ಅದಾನಿ ಗ್ರೂಪ್‌ ಮೂರನೇ ಅತಿ ದೊಡ್ಡ ಸಮೂಹ

ಭಾರತದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಟಾಟಾ ಸಮೂಹದ ಬಳಿಕ ಮೂರನೇ ಅತಿ ದೊಡ್ಡ ಉದ್ದಿಮೆ ಸಮೂಹ ಅದಾನಿ ಗ್ರೂಪ್‌ ಆಗಿಎ. ೧೯೮೮ರಲ್ಲಿ ಸ್ಥಾಪನೆಯಾಗಿರುವ ಅದಾನಿ ಗ್ರೂಪ್‌ನ ಮಾರುಕಟ್ಟೆ ಬಂಡವಾಳ ಮೌಲ್ಯ ೨೦೨೨ರ ಆಗಸ್ಟ್‌ ೧೮ರ ವೇಳೆಗೆ ೨೦೦ ಶತಕೋಟಿ ಡಾಲರ್‌ ( ಅಂದಾಜು ೧೫.೮ ಲಕ್ಷ ಕೋಟಿ ರೂ.)

ಷೇರು ಮಾರುಕಟ್ಟೆಯಲ್ಲಿ ನೋಂದಾಯಿತ, ಅದಾನಿ ಗ್ರೂಪ್‌ನ ೬ ಕಂಪನಿಗಳು

ಕಂಪನಿಮಾರುಕಟ್ಟೆ ಬಂಡವಾಳಬಿಸಿನೆಸ್
ಅದಾನಿ ಎಂಟರ್‌ಪ್ರೈಸಸ್‌ (AEL)‌3.5 ಲಕ್ಷ ಕೋಟಿ ರೂ.ಅದಾನಿ ಸಮೂಹದ ಪ್ರಮುಖ ಕಂಪನಿ. ಕಲ್ಲಿದ್ದಲು ಗಣಿಗಾರಿಕೆ, ಏರ್‌ಪೋರ್ಟ್‌, ಆಹಾರ ಎಫ್‌ಎಂಸಿಜಿ, ಡೇಟಾ ಸೆಂಟರ್‌, ಡಿಜಿಟಲ್‌ ಸೇವೆಗಳು
ಅದಾನಿ ಗ್ರೀನ್‌ ಎನರ್ಜಿ (AGEL)3.5 ಲಕ್ಷ ಕೋಟಿ ರೂ.ಭಾರತದ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದಕ. 11 ರಾಜ್ಯಗಳಲ್ಲಿ5.4 ಗಿಗಾವ್ಯಾಟ್‌ ಸಾಮರ್ಥ್ಯದ ವಿದ್ಯುತ್‌ ಯೋಜನೆ. ಸೋಲಾರ್‌ (88%), ಪವನ ಶಕ್ತಿ (12%)
ಅದಾನಿ ಪೋರ್ಟ್ಸ್‌ & ಸ್ಪೆಷಲ್‌ ಎಕನಾಮಿಕ್‌ ಝೋನ್‌ (APSEZ)1.8 ಲಕ್ಷ ಕೋಟಿ ರೂ.ಭಾರತದ ಅತಿ ದೊಡ್ಡ ಖಾಸಗಿ ಬಂದರು ನಿರ್ವಾಹಕ. 13 ಬಂದರುಗಳ ನಿರ್ವಹಣೆ.
ಅದಾನಿ ಪವರ್‌ (APL)1.5 ಲಕ್ಷ ಕೋಟಿ ರೂ.ಭಾರತದ ಅತಿ ದೊಡ್ಡ ಉಷ್ಣ ವಿದ್ಯುತ್‌ ಉತ್ಪಾದಕ. 4 ಉಷ್ಣ ವಿದ್ಯುತ್‌ ಉತ್ಪಾದಕ, 1 ಸೌರ ವಿದ್ಯುತ್‌ ಘಟಕ. ಒಟ್ಟು ಸಾಮರ್ಥ್ಯ-12.5 GW.
ಅದಾನಿ ಟೋಟಲ್‌ ಗ್ಯಾಸ್‌ (ATGL)3.8 ಲಕ್ಷ ಕೋಟಿ ರೂ.ಭಾರತದ ಅತಿ ದೊಡ್ಡ ಖಾಸಗಿ ಅನಿಲ ವಿತರಕಗಳಲ್ಲೊಂದು. 124 ಜಿಲ್ಲೆಗಳಲ್ಲಿ‌ 8,937 ಕಿ.ಮೀ ನೆಟ್‌ವರ್ಕ್‌ ಪೈಪ್‌ಲೈನ್ ಮೂಲಕ ಅನಿಲ ಪೂರೈಕೆ.
ಅದಾನಿ ಟ್ರಾನ್ಸ್‌ಮಿಶನ್‌ (ATL)4 ಲಕ್ಷ ಕೋಟಿ ರೂ.ದೇಶದ ಅತಿ ದೊಡ್ಡ ಖಾಸಗಿ ವಿದ್ಯುತ್‌ ವಿತರಣ ಕಂಪನಿಗಳಲ್ಲಿ ಒಂದು. 6 ರಾಜ್ಯಗಳಲ್ಲಿ 18,795 ಸರ್ಕ್ಯೂಟ್‌ ಕಿ.ಮೀ ಟ್ರಾನ್ಸ್‌ಮಿಶನ್‌ ಲೈನ್‌ಗಳು.

ಅದಾನಿ ಗ್ರೂಪ್‌ನ ಪ್ರಮುಖ ಕಂಪನಿಗಳು ಯಾವೆಲ್ಲ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿವೆ ಮತ್ತು ಅವುಗಳ ಮೌಲ್ಯ ಹಾಗೂ ಉದ್ದೇಶವನ್ನು ಕ್ರೆಡಿಟ್‌ ಸೈಟ್ಸ್‌ ಪಟ್ಟಿ ಮಾಡಿದೆ. ವಿವರ ಇಲ್ಲಿದೆ.

ಅದಾನಿ ಗ್ರೂಪ್‌ ಕಂಪನಿಗಳ ಇತ್ತೀಚಿನ ವರ್ಷಗಳ ಪ್ರಮುಖ ಸಾಲಗಳು:

ಕಂಪನಿದಿನಾಂಕಸಾಲಸಾಲ ವಿತರಕಉದ್ದೇಶ
ಅದಾನಿ ಎಂಟರ್‌ಪ್ರೈಸಸ್ಮಾರ್ಚ್‌ 2212,770 ಕೋಟಿ ರೂಎಸ್‌ಬಿಐನವಿ ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ
ಮೇ 22750 ದಶಲಕ್ಷ ಡಾಲರ್‌ (5,925 ಕೋಟಿ ರೂ.)ಅಪೊಲೊ ಗ್ಲೋಬಲ್‌ ಮ್ಯಾನೇಜ್‌ಮೆಂಟ್ಹಾಲಿ ಸಾಲಗಳ ನಿರ್ವಹಣೆಗೆ ಮರು ಹಣಕಾಸು. ಮುಂಬಯಿ ಏರ್‌ಪೋರ್ಟ್‌ ಅಭಿವೃದ್ಧಿ
ಮೇ-22250 ದಶಲಕ್ಷ ಡಾಲರ್‌ (1,975 ಕೋಟಿ ರೂ.)ಸ್ಟ್ಯಾಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್‌, ಬಾರ್‌ಕ್ಲೇಸ್‌ ಬ್ಯಾಂಕ್ಅದಾನಿ ಏರ್‌ಪೋರ್ಟ್ಸ್‌ ನಡೆಸುತ್ತಿರುವ 6 ಏರ್‌ಪೋರ್ಟ್‌ ಅಭಿವೃದ್ಧಿ
ಜೂನ್-‌226,000 ಕೋಟಿ ರೂ.ಎಸ್‌ಬಿಐಗುಜರಾತ್‌ನಲ್ಲಿ ತಾಮ್ರ ಸಂಸ್ಕರಣೆ ಘಟಕ ನಿರ್ಮಾಣ
ಅದಾನಿ ಗ್ರೀನ್‌ ಎನರ್ಜಿಮಾರ್ಚ್-‌211.35 ಶತಕೋಟಿ ಡಾಲರ್‌ (10,665 ಕೋಟಿ ರೂ.)ಸಂಯೋಜಿತ ಸಾಲ, ವಿತರಕರು-ಬಾರ್‌ಕ್ಲೇಸ್‌, ಬಿಎನ್‌ಪಿ, ಡ್ಯೂಯಿಚ್‌ ಬ್ಯಾಂಕ್‌, ಐಎನ್‌ಜಿ, ರಾಬೊ ಬ್ಯಾಂಕ್‌, ಸಿಮೆನ್ಸ್‌ ಬ್ಯಾಂಕ್‌, ಎಸ್‌ಎಂಬಿಸಿ, ಸ್ಟ್ಯಾಂಡರ್ಡ್ ಚಾರ್ಟರ್ಡ್‌ ಬ್ಯಾಂಕ್ರಾಜಸ್ಥಾನದಲ್ಲಿ 1.7 ಗಿಗಾವ್ಯಾಟ್‌ ಹೈಬ್ರಿಡ್‌ ಸೌರ ಮತ್ತು ಪವನ ವಿದ್ಯುತ್‌ ಯೋಜನೆ
ಅದಾನಿ ಪೋರ್ಟ್ಸ್ಏಪ್ರಿಲ್-‌20600 ದಶಲಕ್ಷ ಡಾಲರ್‌ (4,740 ಕೋಟಿ ರೂ.)ಸ್ಟ್ಯಾಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್ಧಾಮ್ರಾ ಬಂದರಿನಲ್ಲಿ ಎಲ್‌ಎನ್‌ಜಿ ಟರ್ಮಿನಲ್
ಅದಾನಿ ಟ್ರಾನ್ಸ್‌ಮಿಶನ್ಅಕ್ಟೋಬರ್-‌21700 ದಶಲಕ್ಷ ಡಾಲರ್‌ (5,530 ಕೋಟಿ ರೂ.)ಡಿಬಿಎಸ್‌, ಮಿಜುವೊ, ಸಿಮೆನ್ಸ್‌ ಬ್ಯಾಂಕ್‌, ಎಸ್‌ಎಂಬಿಸಿ, ಸ್ಟ್ಯಾಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್4 ವಿದ್ಯುತ್‌ ಸಾಗಣೆ ಯೋಜನೆಗಳ ಅಭಿವೃದ್ಧಿ. ಗ್ರೀನ್‌ ಎನರ್ಜಿ ಕಾರಿಡಾರ್‌ ಯೋಜನೆ.

ಅದಾನಿ ಕಂಪನಿಗಳು ದಿವಾಳಿಯಾದರೆ ಎಕಾನಮಿಗೆ ಹೊಡೆತ: ಕ್ರೆಡಿಟ್‌ ಸೈಟ್ಸ್‌ ಎಚ್ಚರಿಕೆ

adani group

ಕ್ರೆಡಿಟ್‌ ಸೈಟ್ಸ್‌ ವರದಿ ಅಂತಿಮವಾಗಿ ಹೇಳುವುದಿಷ್ಟು: ಅದಾನಿ ಗ್ರೂಪ್‌ ತನ್ನ‌ ಸಾಂಪ್ರದಾಯಿಕ ಬಿಸಿನೆಸ್‌ ಹಾಗೂ ಹೊಸ ಉದ್ದಿಮೆಗಳಲ್ಲಿ ವ್ಯಾಪಕವಾಗಿ ಹೂಡಿಕೆ ಮಾಡುತ್ತಿದೆ. ಅವುಗಳು ಭಾರಿ ಬಂಡವಾಳ ಬಯಸುವ ಕ್ಷೇತ್ರಗಳೂ ಹೌದು. ಈ ವಿಸ್ತರಣೆಗೆ ಭಾರಿ ಮೊತ್ತದ ಸಾಲ ಪಡೆಯಲಾಗುತ್ತಿದೆ. ಇದರ ಪರಿಣಾಮ ಇಂದು ವೇಳೆ ಪರಿಸ್ಥಿತಿ ಬಿಗಡಾಯಿಸಿದರೆ, ಅದಾನಿ ಗ್ರೂಪ್‌ನ ಒಂದು ಅಥವಾ ಒಂದಕ್ಕಿಂತ ಹೆಚ್ಚು ಕಂಪನಿಗಳು ಸಾಲದ ಬಲೆಗೆ ಸಿಕ್ಕಿ ದಿವಾಳಿಯಾಗಬಹುದು. ಆದರೆ ಇದರಿಂದ ಭಾರತೀಯ ಮಾರುಕಟ್ಟೆ ಮತ್ತು ಎಕಾನಮಿಯ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ವರದಿ ಎಚ್ಚರಿಸಿದೆ.

ಅದಾನಿ ಗ್ರೂಪ್‌ನ ಬಲ ಯಾವುದರಲ್ಲಿದೆ?

ಹಾಗಂತ ಅದಾನಿ ಸಮೂಹದ ಸಕಾರಾತ್ಮಕ ಅಂಶಗಳನ್ನೂ ವರದಿ ಪ್ರಸ್ತಾಪಿಸಿದೆ. ದೇಶಿ-ವಿದೇಶಿ ಬ್ಯಾಂಕ್‌ ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಫಂಡ್‌ ಪಡೆಯಬಲ್ಲ ಸಾಮರ್ಥ್ಯ, ಮೂಲಸೌಕರ್ಯ ಉದ್ದಿಮೆಯಲ್ಲಿ ಸ್ಥಿರವಾದ ಬೆಳವಣಿಗೆ, ಆರ್ಥಿಕತೆಯ ಪ್ರಮುಖ ಕ್ಷೇತ್ರಗಳಲ್ಲಿ ಅಸ್ತಿತ್ವ, ಭವಿಷ್ಯದಲ್ಲೂ ದೇಶದ ಬೆನ್ನೆಲುಬಾಗಿರುವ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಬೆಳವಣಿಗೆಗೆ ವಿಫುಲ ಅವಕಾಶ ಕಂಪನಿಗೆ ಇರುವುದು ಅದಾನಿ ಗ್ರೂಪ್‌ಗೆ ಸಕಾರಾತ್ಮಕ ಅಂಶಗಳಾಗಿವೆ ಎಂದು ವರದಿ ಹೇಳಿದೆ. ಆದರೆ ಒಟ್ಟಾರೆಯಾಗಿ ಭಾರಿ ಸಾಲದ ದುಡ್ಡಿನಲ್ಲಿ ವಿಸ್ತರಣೆಯಾಗುತ್ತಿರುವುದನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ ಎಂದಿದೆ ವರದಿ.

ಅದಾನಿ ನಿವ್ವಳ ಸಂಪತ್ತು ಅನೂಹ್ಯ ಏರಿಕೆಯಾಗಿದ್ದು ಹೇಗೆ?

adani

ಬ್ಲೂಮ್‌ ಬರ್ಗ್‌ ಬಿಲಿಯನೇರ್‌ ಇಂಡೆಕ್ಸ್‌ ಪ್ರಕಾರ, ಕಳೆದ ಎರಡು ವರ್ಷಗಳ ಹಿಂದೆ ಗೌತಮ್‌ ಅದಾನಿ ಅವರ ಒಟ್ಟು ಸಂಪತ್ತಿನ ಮೌಲ್ಯ ೧೦ ಶತಕೋಟಿ ಡಾಲರ್‌ ಆಗಿತ್ತು. ( ೭೯ ಸಾವಿರ ಕೋಟಿ ರೂ.) ಈಗ ೧೩೬ ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ.( ೧೦.೭೪ ಲಕ್ಷ ಕೋಟಿ ರೂ.) ಹೀಗಾಗಿ ಗೌತಮ್‌ ಅದಾನಿ ಏಷ್ಯಾದ ನಂ.೧ ಶ್ರೀಮಂತರೆನಿಸಿದ್ದಾರೆ. ಆದರೆ ಇದು ಷೇರುಗಳ ಮಾರುಕಟ್ಟೆ ಮೌಲ್ಯ ವೃದ್ಧಿಸಿ ಸೃಷ್ಟಿಯಾಗಿರುವ, ಕಾಗದದ ಮೇಲಿರುವ ಸಂಪತ್ತು (paper wealth) ಎಂದು ವರದಿ ತಿಳಿಸಿದೆ. ೧೯೮೦ರ ಕೊನೆಯಲ್ಲಿ ಸರಕು ಮಾರಾಟದ ಸಣ್ಣ ಕಂಪನಿಯಾಗಿದ್ದ ಅದಾನಿ ಗ್ರೂಪ್‌ ಬಳಿಕ ಗಣಿಗಾರಿಕೆ, ಬಂದರು, ವಿದ್ಯುತ್‌ ಘಟಕ, ವಿಮಾನ ನಿಲ್ದಾಣ, ಡೇಟಾ ಸೆಂಟರ್‌, ರಕ್ಷಣಾ ಉತ್ಪಾದನೆ ಮುಂತಾದ ವಲಯಗಳಲ್ಲಿ ವಹಿವಾಟು ವಿಸ್ತರಿಸಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಜತೆ ಸ್ಪರ್ಧೆ

adani-mukesh ambani

ಅದಾನಿ ಗ್ರೂಪ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ನಡುವಣ ಪೈಪೋಟಿ ಮತ್ತು ಅದರ ಸಂಭವನೀಯ ಪರಿಣಾಮಗಳ ಬಗ್ಗೆ ಕೂಡ ಕ್ರೆಡಿಟ್‌ಸೈಟ್ಸ್‌ ಪ್ರಸ್ತಾಪಿಸಿದೆ. ಗೌತಮ್‌ ಅದಾನಿ, ಮುಕೇಶ್‌ ಅಂಬಾನಿ ಇಬ್ಬರೂ ಗುಜರಾತ್‌ ಮೂಲದ ಉದ್ಯಮಿಗಳು. ಅದಾನಿ ೨೦೧೫ರಲ್ಲಿ ಅದಾನಿ ಗ್ರೀನ್‌ ಎನರ್ಜಿ ಮೂಲಕ ನವೀಕರಿಸಬಹುದಾದ ಇಂಧನ ಬಿಸಿನೆಸ್‌ಗೆ ಪ್ರವೇಶಿಸಿದರು. ೨೦೨೧ರ ಅಕ್ಟೋಬರ್‌ನಲ್ಲಿ ‌ಮುಕೇಶ್‌ ಅಂಬಾನಿಯವರ ರಿಲಯನ್ಸ್‌ ಇಂಡಸ್ಟ್ರೀಸ್ ಕೂಡ ಪ್ರವೇಶಿಸುತ್ತಿರುವುದಾಗಿ ಘೋಷಿಸಿತು. ಈ ದಶಕದೊಳಗೆ ೧೦೦ ಗಿಗಾವ್ಯಾಟ್‌ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಗುರಿಯನ್ನು ಅದು ಹೊಂದಿದೆ. ರಿಲಯನ್ಸ್‌ ೨೦೧೫ರಲ್ಲಿ ರಿಲಯನ್ಸ್‌ ಜಿಯೊ ಮೂಲಕ ಟೆಲಿಕಾಂ ವಲಯವನ್ನು ಪ್ರವೇಶಿಸಿತು. ಅದಾನಿ ಅವರು ೫ಜಿ ಸ್ಪಕ್ಟ್ರಮ್‌ ಹರಾಜಿನಲ್ಲಿ ಭಾಗವಹಿಸುವ ಮೂಲಕ ಹಿಂಬಾಲಿಸುತ್ತಿದ್ದಾರೆ. ಖಾಸಗಿ ಬಳಕೆಗೆ ೫ಜಿ ಎಂಟರ್‌ಪ್ರೈಸಸ್‌ ನೆಟ್‌ ವರ್ಕ್‌ ಸಲ್ಯೂಷನ್ಸ್‌ (ಬಿ೨ಬಿ) ಅಳವಡಿಸುವುದಾಗಿ ಹೇಳಿದ್ದರೂ, ಕನ್‌ಸ್ಯೂಮರ್‌ ಮೊಬೈಲ್‌ ವಲಯಕ್ಕೆ ಪ್ರವೇಶಿಸುವ ಸಾಧ್ಯತೆಯನ್ನು ಅಲ್ಲಗಳೆಯುವುದು ಕಷ್ಟ. ಹೀಗೆ ಎರಡು ಮೆಗಾ ಸಮೂಹಗಳು ನವೀಕರಿಸಬಹುದಾದ ಇಂಧನ, ಟೆಲಿಕಾಂ ಮತ್ತಿತರ ಉದ್ದಿಮೆಗಳಲ್ಲಿ ಜಿದ್ದಿಗೆ ಬಿದ್ದರೆ, ಉಭಯ ಬಣಗಳೂ ಆರ್ಥಿಕ ದೃಷ್ಟಿಯಿಂದ ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ಕ್ರೆಡಿಟ್‌ಸೈಟ್ಸ್‌ ವರದಿಯ ಬೆನ್ನಲ್ಲೇ ಅದಾನಿ ಗ್ರೂಪ್‌ನ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ೯೪,೦೦೦ ಕೋಟಿ ರೂ. ನಷ್ಟವಾಗಿರುವುದು ಗಮನಾರ್ಹ ಎನ್ನುತ್ತಾರೆ ತಜ್ಞರು. ಜತೆಗೆ ಭಾರಿ ಸಾಲದ ಹೊರೆಯನ್ನು ಮುಂಬರುವ ವರ್ಷಗಳಲ್ಲಿ ಅದಾನಿ ಗ್ರೂಪ್‌ ಹೇಗೆ ನಿರ್ವಹಿಸಲಿದೆ? ಸಾಲ ಮುಕ್ತವಾಗಲಿದೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಮಾತ್ರವಲ್ಲದೆ ಅದಾನಿ ಗ್ರೂಪ್‌ಗೆ ಈ ಮಟ್ಟದಲ್ಲಿ ಬೃಹತ್‌ ಮೊತ್ತದ ಸಾಲ ಪಡೆಯಲು ಹೇಗೆ ಸಾಧ್ಯವಾಯಿತು ಎಂಬುದು ಮಾರುಕಟ್ಟೆ ತಜ್ಞರಲ್ಲಿ ಯಕ್ಷಪ್ರಶ್ನೆಯಾಗಿ ಉಳಿದಿದೆ.

ಇದನ್ನೂ ಓದಿ: NDTV | ಅದಾನಿಗೆ RRPR ಷೇರು ಖರೀದಿಗೆ ಸೆಬಿ ಅನುಮತಿ ಅಗತ್ಯ: ಎನ್‌ಡಿಟಿವಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

EXPLAINER

Dubai Airport : ದುಬೈನಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ದೊಡ್ಡ ಏರ್​ಪೋರ್ಟ್​​; ಏನಿದರ ವಿಶೇಷತೆ? ಎಲ್ಲ ಮಾಹಿತಿ ಇಲ್ಲಿದೆ

Dubai Airport: ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಅತಿದೊಡ್ಡ ಸಾಮರ್ಥ್ಯವನ್ನು ಹೊಂದಿರುತ್ತದೆ, 2.6 ಕೋಟಿ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸಲಿದೆ. ಇದು ಪ್ರಸ್ತುತ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗಾತ್ರಕ್ಕಿಂತ ಐದು ಪಟ್ಟು ದೊಡ್ಡದಾಗಿರುತ್ತದೆ.

VISTARANEWS.COM


on

Dubai Airport
Koo

ನವದೆಹಲಿ: 2.92 ಲಕ್ಷ ಕೋಟಿ ರೂಪಾಯಿ (35 ಬಿಲಿಯನ್ ಡಾಲರ್) ವೆಚ್ಚದಲ್ಲಿ 400 ಗೇಟ್ ಗಳು ಮತ್ತು ಐದು ಸಮಾನಾಂತರ ರನ್ ವೇಗಳಿರುವ ವಿಶ್ವದ ಅತ್ಯಂತ ದೊಡ್ಡ ಏರ್​ಪೋರ್ಟ್​​ ನಿರ್ಮಾಣ (Dubai Airport) ಮಾಡುವುದಾಗಿ ದುಬೈ ಆಡಳಿತ ಭಾನುವಾರ ಪ್ರಕಟಿಸಿದೆ. ಅದಕ್ಕೆ ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ ಎಂದು ಹೆಸರಿಡುವುದಾಗಿ ಹೇಳಿದೆ.

“ಇಂದು, ನಾವು ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಪ್ರಯಾಣಿಕರ ಟರ್ಮಿನಲ್​ಗಳ ವಿನ್ಯಾಸಗಳನ್ನು ಅನುಮೋದಿಸಿದ್ದೇವೆ. ದುಬೈ ಏವಿಯೇಷನ್ ಕಾರ್ಪೊರೇಷನ್​​ನ ಕಾರ್ಯತಂತ್ರದ ಭಾಗವಾಗಿ 128 ಬಿಲಿಯನ್ ಡಾಲರ್ ವೆಚ್ಚದಲ್ಲಿ ಕಟ್ಟಡದ ನಿರ್ಮಾಣವನ್ನು ಪ್ರಾರಂಭಿಸಿದ್ದೇವೆ” ಎಂದು ದುಬೈ ಆಡಳಿತಗಾರ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಪ್ರಕಟಿಸಿದ್ದಾರೆ.

“ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಅತಿದೊಡ್ಡ ಸಾಮರ್ಥ್ಯವನ್ನು ಹೊಂದಿರುತ್ತದೆ, 2.6 ಕೋಟಿ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸಲಿದೆ. ಇದು ಪ್ರಸ್ತುತ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗಾತ್ರಕ್ಕಿಂತ ಐದು ಪಟ್ಟು ದೊಡ್ಡದಾಗಿರುತ್ತದೆ. ಮುಂಬರುವ ವರ್ಷಗಳಲ್ಲಿ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಎಲ್ಲಾ ಕಾರ್ಯಾಚರಣೆಗಳನ್ನು ಅದಕ್ಕೆ ವರ್ಗಾಯಿಸಲಾಗುವುದು” ಎಂದು ಪೋಸ್ಟ್​​ನಲ್ಲಿ ಬರೆಯಲಾಗಿದೆ.

ಈ ವಿಮಾನ ನಿಲ್ದಾಣ ವಿಶ್ವದ ಅತಿ ದೊಡ್ಡ ನಿಲ್ದಾಣವಾಗುವ ವೇಳೆ ಅಲ್ಲಿ ಇರಬಹುದಾದ ಕೆಲವೊಂದು ಸೌಲಭ್ಯಗಳು ಹಾಗೂ ಇನ್ನಿತರ ಮಾಹಿತಿಗಳ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ. ಆ ಕುರಿತು ಇಲ್ಲಿದೆ ಸಂಕ್ಷಿಪ್ತ ವಿವರ ಇಲ್ಲಿದೆ.

ಸಾಮರ್ಥ್ಯ ಎಷ್ಟು?


ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಹೆಚ್ಚು ಸಾಮರ್ಥ್ಯ ಹೊಂದಿರುವ ವಿಮಾನ ನಿಲ್ದಾಣವಾಗಲಿದೆ. ವಾರ್ಷಿಕವಾಗಿ 2.6 ಕೋಟಿ (260 ಮಿಲಿಯನ್) ಪ್ರಯಾಣಿಕರು ಈ ವಿಮಾನದ ಮೂಲಕ ಪ್ರಯಾಣ ಮಾಡಲಿದ್ದಾರೆ.

ಗಾತ್ರ ಎಷ್ಟು?
ಇದು ಪ್ರಸ್ತುತ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಂತ ಐದು ಪಟ್ಟು ದೊಡ್ಡದಾಗಿರುತ್ತದೆ.

ಮೂಲಸೌಕರ್ಯ ಹೇಗಿರುತ್ತದೆ?

ವಿಮಾನಗಳ ಸುಗಮ ಕಾರ್ಯಾಚರಣೆಗೆ ಅನುಕೂಲವಾಗುವಂತೆ ವಿಮಾನ ನಿಲ್ದಾಣವು 400 ವಿಮಾನ ಗೇಟ್ ಗಳನ್ನು ಹೊಂದಿರುತ್ತದೆ. ಏಕಕಾಲಕ್ಕೆ ಇಲ್ಲಿ ಅಷ್ಟೊಂದು ವಿಮಾನಗಳು ಪ್ರವೇಶಿಸಬಹುದು.

ರನ್ ವೇಗಳು ಎಷ್ಟು?

ವಿಮಾನಗಳ ಸಂಚಾರವನ್ನು ಸಮರ್ಥವಾಗಿ ನಿರ್ವಹಿಸಲು ಇದು ಐದು ಸಮಾನಾಂತರ ರನ್ ವೇಗಳನ್ನು ಹೊಂದಿರುತ್ತದೆ. ಒಂದೇ ಬದಿಯಲ್ಲಿ ಅಷ್ಟೊಂದು ವಿಮಾನಗಳು ಏಕಕಾಲಕ್ಕೆ ಟೇಕ್​ಆಫ್​ ಅಥವಾ ಲ್ಯಾಂಡಿಂಗ್ ಆಗಬಹುದು.

ಹೊಸತೇನು?

ಈ ವಿಮಾನ ನಿಲ್ದಾಣದಲಲಿ ಹೊಸ ವಾಯುಯಾನ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತದೆ ಎಂದು ಅವರು ಹೇಳದಿ್ದಾರೆ. ಇದು ವಾಯುಯಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಎಂದು ಹೇಲಾಗಿದೆ.

ವೆಚ್ಚ ಎಷ್ಟು?

ಈ ಯೋಜನೆಗೆ ಸುಮಾರು 2.9 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ.

ಮುಗಿಯುವುದು ಯಾವಾಗ?

ವರ್ಷಕ್ಕೆ 150 ಮಿಲಿಯನ್ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸುವ ಸಾಮರ್ಥ್ಯವಿರುವ ಮೊದಲ ಹಂತವು 10 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಮುಂದುವರಿದ ಭಾಗವು ಆ ಬಳಿಕ ಸಾಗಲಿದೆ.

ಇದನ್ನೂ ಓದಿ: Pro-Khalistan slogan : ಕೆನಡಾ ಪ್ರಧಾನಿ ಟ್ರುಡೊ ಕಾರ್ಯಕ್ರಮದಲ್ಲಿ ಖಲಿಸ್ತಾನ ಪರ ಘೋಷಣೆ!

ಲಾಜಿಸ್ಟಿಕ್ಸ್ ಮತ್ತು ವಾಯು ಸಾರಿಗೆ ಕ್ಷೇತ್ರಗಳಲ್ಲಿ ವಿಶ್ವದ ಪ್ರಮುಖ ಕಂಪನಿಗಳಿಗೆ ಆತಿಥ್ಯ ವಹಿಸುವ “ದುಬೈ ದಕ್ಷಿಣದ ವಿಮಾನ ನಿಲ್ದಾಣದ ಸುತ್ತಲೂ” ಅವರು ಇಡೀ ನಗರವನ್ನು ನಿರ್ಮಿಸುತ್ತಿದ್ದಾರೆ. ಒಂದು ಮಿಲಿಯನ್ ಜನರಿಗೆ ಉಳಿದುಕೊಳ್ಳುವುದಕ್ಕೂ ಅವಕಾಶ ಮಾಡಿಕೊಡುತ್ತೇವೆ ಎಂದು ಆಡಳಿತಗಾರ ಹೇಳಿದ್ದರೆ.

“ನಾವು ಭವಿಷ್ಯದ ಪೀಳಿಗೆಗಾಗಿ ಹೊಸ ಯೋಜನೆಯನ್ನು ನಿರ್ಮಿಸುತ್ತಿದ್ದೇವೆ ನಮ್ಮ ಮಕ್ಕಳು ಮತ್ತು ಅವರ ಮಕ್ಕಳಿಗೆ ನಿರಂತರ ಮತ್ತು ಸ್ಥಿರ ಅಭಿವೃದ್ಧಿಯನ್ನು ಖಾತ್ರಿಪಡಿಸುತ್ತಿದ್ದೇವೆ. ದುಬೈ ವಿಶ್ವದ ವಿಮಾನ ನಿಲ್ದಾಣ, ಅದರ ಬಂದರು, ಅದರ ನಗರ ಕೇಂದ್ರ ಮತ್ತು ಅದರ ಹೊಸ ಜಾಗತಿಕ ಕೇಂದ್ರವಾಗಲಿದೆ.

Continue Reading

Lok Sabha Election 2024

Lok Sabha Election 2024: ಜೈಲಿನಲ್ಲಿರುವ ಅಮೃತಪಾಲ್ ಚುನಾವಣೆಗೆ ಸ್ಪರ್ಧಿಸಬಹುದು, ಕೇಜ್ರಿವಾಲ್ ಮತ ಚಲಾಯಿಸುವಂತಿಲ್ಲ! ಏನಿದು ನಿಯಮ?

Lok Sabha Election 2024: ಜೈಲಿನಲ್ಲಿರುವ ಇಬ್ಬರು ಖೈದಿಗಳಲ್ಲಿ ಒಬ್ಬರಿಗೆ 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ, ಇನ್ನೊಬ್ಬರಿಗೆ ಮತದಾನ ಮಾಡಲು ಅವಕಾಶ ನೀಡಲಾಗುತ್ತಿಲ್ಲ. ಏನಿದು ಚುನಾವಣೆ ಆಯೋಗದ ನಿಯಮ? ಇಲ್ಲಿದೆ ವಿಸ್ತೃತ ವಿವರಣೆ.

VISTARANEWS.COM


on

By

Lok Sabha Election-2024
Koo

ನವದೆಹಲಿ: ಪ್ರಪಂಚದಾದ್ಯಂತ ಚುನಾವಣೆಗಳಲ್ಲಿ (election) ವಿರೋಧಾಭಾಸಗಳು ಎದುರಾಗುತ್ತವೆ. ಇದರಲ್ಲಿ ಭಾರತವೂ ಹೊರತಾಗಿಲ್ಲ. ಇದೀಗ ಜೈಲಿನಲ್ಲಿರುವ (jail) ಇಬ್ಬರು ಕೈದಿಗಳಲ್ಲಿ (locked up) ಒಬ್ಬರಿಗೆ ಚುನಾವಣೆಗೆ ಸ್ಪರ್ಧಿಸಲು ಅನುಮತಿ ಸಿಕ್ಕಿದ್ದರೆ, ಇನ್ನೊಬ್ಬರಿಗೆ ಮತದಾನ (voting) ಮಾಡಲೂ ಅವಕಾಶ ನೀಡಲಾಗಿಲ್ಲ.

2024ರ ಲೋಕಸಭಾ ಚುನಾವಣೆಯ (Lok Sabha Election‌ 2024) ವೇಳೆ ಭಾರತದಲ್ಲಿ (india) ಅಂತಹ ಒಂದು ವಿರೋಧಾಭಾಸ ಕಾಣಿಸಿಕೊಂಡಿದೆ. 2,300 ಕಿ.ಮೀ. ದೂರದಲ್ಲಿರುವ ಎರಡು ವಿಭಿನ್ನ ಜೈಲುಗಳಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಇವರಲ್ಲಿ ಒಬ್ಬರಿಗೆ ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡಿದ್ದರೆ, ಇನ್ನೊಬ್ಬರಿಗೆ ಮತದಾನ ಮಾಡಲು ಅವಕಾಶ ಸಿಕ್ಕಿಲ್ಲ.

ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ (Amritpal Singh) ಅಸ್ಸಾಂನ ದಿಬ್ರುಗಢ್ ಜೈಲಿನಲ್ಲಿದ್ದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ತಿಹಾರ್ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: Lok Sabha Election 2024: ದೇಶ, ರಾಜ್ಯಕ್ಕೆ ಬಿಜೆಪಿಯಿಂದ ಖಾಲಿ ಚೊಂಬು ಕೊಟ್ಟಿದ್ದಾರೆ: ರಾಹುಲ್‌ ಗಾಂಧಿ

ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾನೂನು ಅನುಮತಿ ನೀಡಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಂತಹ ಲಕ್ಷಾಂತರ ವಿಚಾರಣಾಧೀನ ಕೈದಿಗಳು ಮತ ಚಲಾಯಿಸಲು ಅನುಮತಿ ನೀಡಲಾಗಿಲ್ಲ. ಯಾಕೆಂದರೆ ಭಾರತ ಕಾನೂನು ಪ್ರಕಾರ ಭಾರತದಲ್ಲಿ ಜನರು ಜೈಲಿನಲ್ಲಿ ಇದ್ದು ಚುನಾವಣೆಗೆ ಸ್ಪರ್ಧಿಸಬಹುದು. ಆದರೆ ಜೈಲಿನಿಂದ ಮತ ಚಲಾಯಿಸಲು ಸಾಧ್ಯವಿಲ್ಲ!


ಅಮೃತ್ ಪಾಲ್ ಸ್ಪರ್ಧೆ

2023ರ ಏಪ್ರಿಲ್ 23ರಿಂದ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಅವರು ಪಂಜಾಬ್‌ನ ಖಾದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ದಿಬ್ರುಗಢ ಕೇಂದ್ರ ಕಾರಾಗೃಹದಲ್ಲಿ ಭಾಯಿ ಸಾಹೇಬ್ ಅಮೃತಪಾಲ್ ಅವರನ್ನು ನಾನು ಭೇಟಿ ಮಾಡಿದ್ದೇನೆ. ಖಾಲ್ಸಾ ಪಂಥ್‌ನ ಹಿತಾಸಕ್ತಿಯಿಂದ ಅವರು ಈ ಬಾರಿ ಸಂಸದರಾಗಲು ಖದೂರ್ ಸಾಹಿಬ್‌ನಿಂದ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ನಾನು ಅವರಿಗೆ ವಿನಂತಿಸಿದೆ ಎಂದು ಅಮೃತಪಾಲ್ ಅವರ ವಕೀಲ ರಾಜದೇವ್ ಸಿಂಗ್ ಖಾಲ್ಸಾ ಈ ಹಿಂದೆ ಹೇಳಿದ್ದು, ಭಾಯಿ ಸಾಹೇಬ್ ಒಪ್ಪಿದ್ದಾರೆ ಮತ್ತು ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಅವರು ಹೇಳಿದರು.

ಬಂಧನಕ್ಕೆ ಒಳಗಾಗಿರುವುದು ಏಕೆ?

ಅಮೃತಪಾಲ್ ಸಿಂಗ್ ಅವರನ್ನು ಪಂಜಾಬ್‌ನ ಮೋಗಾ ಜಿಲ್ಲೆಯ ರೋಡ್ ಗ್ರಾಮದಲ್ಲಿ ವರ್ಷದ ಹಿಂದೆ ಬಂಧಿಸಲಾಗಿತ್ತು. ಅಮೃತ್‌ಪಾಲ್ ಸಿಂಗ್ ಅವರು ಬೆಂಬಲಿಗರೊಂದಿಗೆ ಬಂದೂಕು ಮತ್ತು ಕತ್ತಿಗಳನ್ನು ಹಿಡಿದುಕೊಂಡು ಅಮೃತಸರದ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದರಿಂದ ಅವರನ್ನು ಬಂಧಿಸಲಾಯಿತು. ಪ್ರತ್ಯೇಕತಾವಾದಿ ಈತ.

ಜೈಲಿನಿಂದ ಸ್ಪರ್ಧಿಸಿದವರು, ಗೆದ್ದವರಿವರು

1996 ರಲ್ಲಿ, ಡಾನ್- ಟರ್ನ್ಡ್ ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರು ಜೈಲಿನಲ್ಲಿದ್ದಾಗ ಬಿಎಸ್ಪಿ ಟಿಕೆಟ್‌ನಲ್ಲಿ ಉತ್ತರ ಪ್ರದೇಶದ ಮೌ ಅಸೆಂಬ್ಲಿ ಸ್ಥಾನಕ್ಕೆ ಸ್ಪರ್ಧಿಸಿದರು. ಕಳೆದ ತಿಂಗಳು ನಿಧನರಾದ ಅನ್ಸಾರಿ ಅವರು ಜೈಲಿನಿಂದಲೇ ಚುನಾವಣೆಯಲ್ಲಿ ಗೆದ್ದಿದ್ದರು.

2005ರಲ್ಲಿ ಸೆರೆವಾಸದಲ್ಲಿದ್ದ ಮುಖ್ತಾರ್ ಅನ್ಸಾರಿ ಅವರು ಜೈಲಿನಿಂದ 2007, 2012 ಮತ್ತು ಮತ್ತೆ 2017 ರಲ್ಲಿ ಒಟ್ಟು ಮೂರು ಬಾರಿ ಮೌ ಅಸೆಂಬ್ಲಿ ಸ್ಥಾನವನ್ನು ಗೆದ್ದರು.

ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ 1998ರ ಲೋಕಸಭೆ ಚುನಾವಣೆ ವೇಳೆ ಮೇವು ಹಗರಣದಲ್ಲಿ ಜೈಲು ಸೇರಿದ್ದರು. ಬಿಹಾರದ ಮಾಧೇಪುರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಜೈಲಿನಲ್ಲಿದ್ದೇ ಗೆದ್ದಿದ್ದರು.


ಕೇಜ್ರಿವಾಲ್ ಮತದಾನ ಸಾಧ್ಯವಿಲ್ಲ

ಅಪರಾಧಗಳ ಆರೋಪ ಹೊತ್ತಿರುವ ಜನರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ, ಅಪರಾಧಿಗಳೆಂದು ಸಾಬೀತಾಗದ ವಿಚಾರಣಾಧೀನ ಕೈದಿಗಳು ತಮ್ಮ ಮತವನ್ನು ಚಲಾಯಿಸಲು ಸಾಧ್ಯವಿಲ್ಲ.

ತಪ್ಪಿತಸ್ಥರೆಂದು ಸಾಬೀತಾಗದವರಿಗೂ ಭಾರತದಲ್ಲಿ ಜೈಲುಗಳಿಂದ ಮತದಾನ ಮಾಡಲು ಯಾವುದೇ ಅವಕಾಶವಿಲ್ಲ. 2019 ರ ಪ್ರವೀಣ್ ಕುಮಾರ್ ಚೌಧರಿ ವಿರುದ್ಧ ಭಾರತ ಚುನಾವಣಾ ಆಯೋಗದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಕೈದಿಗಳಿಗೆ ಮತದಾನದ ಹಕ್ಕನ್ನು ಹೊಂದಿಲ್ಲ ಎಂದು ಪುನರುಚ್ಚರಿಸಿದೆ.

ಮೇ 25ರಂದು ದೆಹಲಿ ಮತದಾನ ನಡೆಯಲಿದೆ. ಏಪ್ರಿಲ್ 29 ರಂದು ಸುಪ್ರೀಂ ಕೋರ್ಟ್‌ ನೀಡುವ ತೀರ್ಪಿನ ಮೇಲೆ ಕೇಜ್ರಿವಾಲ್ ಮತ ಚಲಾಯಿಸಬಹುದೇ ಅಥವಾ ಇಲ್ಲವೇ ಎಂಬುದು ನಿರ್ಧಾರವಾಗಲಿದೆ.

ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ಕೇಜ್ರಿವಾಲ್, ಬಹು ಕಸ್ಟಡಿ ವಿಸ್ತರಣೆಗಳು ಮತ್ತು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ಅನಂತರ ಅವರನ್ನು ನವದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

ಬಿಡುಗಡೆಯಾಗದೆ ಇದ್ದರೆ ಹೇಮಂತ್ ಸೊರೆನ್ ಗೂ ಅವಕಾಶ ಇಲ್ಲ

ಭಾರತದಲ್ಲಿ ಐದು ಲಕ್ಷಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳಿದ್ದು, ಅವರಿಗೂ ಮತ ಚಲಾಯಿಸಲು ಸಾಧ್ಯವಿಲ್ಲ. ಅಂತೆಯೇ, ಭೂ ಹಗರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅವರನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸದಿದ್ದರೆ ಮತದಾನ ಮಾಡಲಾಗುವುದಿಲ್ಲ.

ತನ್ನ ಬಂಧನವನ್ನು ಪ್ರಶ್ನಿಸಿ ಹೇಮಂತ್ ಸೊರೆನ್ ಬುಧವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಯಾಕೆ ಈ ತಾರತಮ್ಯ?

2021 ರ ರಾಷ್ಟ್ರೀಯ ಅಪರಾಧ ವರದಿಗಳ ಬ್ಯೂರೋ (NCRB) ವರದಿಯ ಪ್ರಕಾರ, ಭಾರತದಾದ್ಯಂತ ವಿವಿಧ ಜೈಲುಗಳಲ್ಲಿ ಒಟ್ಟು 5,54,034 ಕೈದಿಗಳನ್ನು ಬಂಧಿಸಲಾಗಿದೆ. ಅಮೃತಪಾಲ್ ಸಿಂಗ್ ಅವರಿಗೆ ಇನ್ನೂ ಶಿಕ್ಷೆಯಾಗದ ಕಾರಣ ಅವರು ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಶಿಕ್ಷೆಗೊಳಗಾದವರು ಕೂಡ ಜೈಲು ಶಿಕ್ಷೆ ಮುಗಿದ ಆರು ವರ್ಷಗಳ ಬಳಿಕ ಚುನಾವಣೆಗೆ ಸ್ಪರ್ಧಿಸಬಹುದು.

ಅಮೃತಪಾಲ್ ಸಿಂಗ್ ಅವರಂತಹ ಜೈಲಿನಲ್ಲಿರುವ ವ್ಯಕ್ತಿಗಳು ತಮ್ಮ ಪ್ರತಿನಿಧಿಯ ಸಹಾಯದಿಂದ ಜೈಲಿನಿಂದಲೇ ನಾಮಪತ್ರ ಸಲ್ಲಿಸಬಹುದು. ಒಂದು ವೇಳೆ ಜೈಲಿನಲ್ಲಿರುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದರೆ, ತಜ್ಞರ ಪ್ರಕಾರ ಜೈಲಿನೊಳಗೆ ಪ್ರಮಾಣ ವಚನ ಬೋಧಿಸಲು ಅವಕಾಶವಿಲ್ಲದ ಕಾರಣ, ಪ್ರಮಾಣ ವಚನ ಸ್ವೀಕರಿಸಲು ಜೈಲಿನಿಂದ ಬಿಡುಗಡೆ ಮಾಡಬಹುದು.

ಆದರೆ ಜೈಲಿನಲ್ಲಿರುವ ವ್ಯಕ್ತಿಯ ಪರವಾಗಿ ಬೇರೆಯವರು ಮತವನ್ನು ಚಲಾಯಿಸಲು ಸಾಧ್ಯವಿಲ್ಲ. ಪತಿ ಅರವಿಂದ್ ಕೇಜ್ರಿವಾಲ್ ಬಂಧನದ ಅ ನಂತರ ಗಮನ ಸೆಳೆದಿರುವ ಸುನೀತಾ ಕೇಜ್ರಿವಾಲ್, ಎಎಪಿ ಪರ ಪ್ರಚಾರ ಮಾಡಲಿದ್ದಾರೆ.

ಪ್ರಜಾಪ್ರತಿನಿಧಿ ಕಾಯಿದೆ 1951ರ ಸೆಕ್ಷನ್ 62 (5) ಪ್ರಕಾರ ಯಾವುದೇ ವ್ಯಕ್ತಿ ಪೊಲೀಸರ ಕಾನೂನುಬದ್ಧ ವಶದಲ್ಲಿದ್ದರೆ ಅಥವಾ ಜೈಲಿನಲ್ಲಿ ಬಂಧಿಯಾಗಿದ್ದಲ್ಲಿ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ.

Continue Reading

ಆರೋಗ್ಯ

 Ayushman Bharat Yojana: ಆಪತ್ಕಾಲದಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

Ayushman Bharat Yojana: ಆಯುಷ್ಮಾನ್ ಭಾರತ್ ಯೋಜನೆಯು ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯತ್ತ ಮಹತ್ವದ ಹೆಜ್ಜೆ. ದುರ್ಬಲ ಕುಟುಂಬಗಳಿಗೆ ಹೆಚ್ಚು ಅಗತ್ಯವಿರುವ ಆರ್ಥಿಕ ರಕ್ಷಣೆಯನ್ನು ನೀಡುತ್ತದೆ. ಇದರ ನೋಂದಣಿ ಪ್ರಕ್ರಿಯೆ ಹೇಗಿರುತ್ತದೆ, ಇದರಿಂದ ಸಿಗುವ ಪ್ರಯೋಜನಗಳ ಮಾಹಿತಿ ಇಲ್ಲಿದೆ.

VISTARANEWS.COM


on

By

Ayushman Bharat Yojana
Koo

ಲಕ್ಷಾಂತರ ಭಾರತೀಯರಿಗೆ (indian) ಆರೋಗ್ಯ (health) ಸೇವೆಯನ್ನು (service) ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವ ಗುರಿ ಹೊಂದಿರುವ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Yojana) ಪ್ರಯೋಜನ ಪಡೆಯುವುದು ಇನ್ನೂ ಹಲವಾರು ಮಂದಿಗೆ ಸವಾಲಾಗಿ ಪರಿಣಮಿಸಿದೆ. 2018ರಲ್ಲಿ ಜಾರಿಯಾಗಿರುವ ಆಯುಷ್ಮಾನ್ ಯೋಜನೆ ಇನ್ನೂ ಹಲವು ಮಂದಿಗೆ ಸರಿಯಾಗಿ ಅರ್ಥವೇ ಆಗಿಲ್ಲ. ಇದರಿಂದ ಸಾಕಷ್ಟು ಪರಿಣಾಮಕಾರಿಯಾಗಿ ಎಲ್ಲರನ್ನು ತಲುಪುವುದು ಸಾಧ್ಯವಾಗಿಲ್ಲ. ಭಾರತದಂತಹ ವಿಶಾಲ ಮತ್ತು ವೈವಿಧ್ಯಮಯವಾದ ದೇಶದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದು ಸವಾಲಾಗಿದೆ. ಇದನ್ನು ಗುರುತಿಸಿ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಾರಂಭಿಸಿತು. ಆಯುಷ್ಮಾನ್ ಭಾರತ್ ಯೋಜನೆಯು ಏನನ್ನು ಒಳಗೊಳ್ಳುತ್ತದೆ, ಆಯುಷ್ಮಾನ್ ಕಾರ್ಡ್ ಸೇರಿದಂತೆ ಅದರ ಪ್ರಯೋಜನಗಳಿಗಾಗಿ ಹೇಗೆ ನೋಂದಾಯಿಸಿಕೊಳ್ಳುವುದು ಎಂಬುದರ ಮಾಹಿತಿ ಇಲ್ಲಿದೆ.


ಏನಿದು ಆಯುಷ್ಮಾನ್ ಭಾರತ್ ಯೋಜನೆ?

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (PMJAY) ಎಂದು ಕರೆಯಲ್ಪಡುವ ಆಯುಷ್ಮಾನ್ ಭಾರತ್ ಯೋಜನೆಯು ಭಾರತ ಸರ್ಕಾರವು ಪರಿಚಯಿಸಿದ ಪ್ರಮುಖ ಆರೋಗ್ಯ ಯೋಜನೆಯಾಗಿದೆ. ದುರಂತದ ಆರೋಗ್ಯ ವೆಚ್ಚಗಳ ವಿರುದ್ಧ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ನೀಡುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಈ ಯೋಜನೆಯಡಿಯಲ್ಲಿ, ಅರ್ಹ ಫಲಾನುಭವಿಗಳು ನಿಗದಿತ ಆಸ್ಪತ್ರೆಗಳಲ್ಲಿ ನಿರ್ದಿಷ್ಟ ಮೊತ್ತದವರೆಗೆ ನಗದು ರಹಿತ ಆರೋಗ್ಯ ಸೇವೆಗಳನ್ನು ಪಡೆಯಬಹುದು.

ಇದನ್ನೂ ಓದಿ: ORS: ಒಆರ್‌ಎಸ್‌ ಜೀವಜಲ; ಯಾರು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?

ನೋಂದಣಿ ಹೇಗೆ?

ಆಯುಷ್ಮಾನ್ ಭಾರತ್ ಯೋಜನೆಗೆ ನೋಂದಾಯಿಸಲು ಮೊದಲು ಅದರ ಬಗ್ಗೆ ತಿಳಿದುಕೊಳ್ಳಿ.

ಅರ್ಹತೆಯನ್ನು ಪರಿಶೀಲಿಸಿ

ಆಯುಷ್ಮಾನ್ ಭಾರತ್ ಯೋಜನೆಗೆ ನೋಂದಣಿ ನಡೆಸುವ ಮೊದಲು ಆಯುಷ್ಮಾನ್ ಭಾರತ್ ಯೋಜನೆ ಪಡೆಯುವ ಅರ್ಹತೆ ನಿಮಗಿದೆಯೇ ಎಂಬುದನ್ನು ತಿಳಿದುಕೊಳ್ಳಿ. ಇದು ಪ್ರಾಥಮಿಕವಾಗಿ ಸಾಮಾಜಿಕ ಆರ್ಥಿಕ ಅಂಶಗಳು ಮತ್ತು ಮನೆಯ ಆದಾಯವನ್ನು ಆಧರಿಸಿರುತ್ತದೆ.


ಸಾಮಾನ್ಯ ಸೇವಾ ಕೇಂದ್ರ, ನೆಮ್ಮದಿ ಕೇಂದ್ರ

ಆಯುಷ್ಮಾನ್ ಭಾರತ್ ಯೋಜನೆಗಾಗಿ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸಾಮಾನ್ಯ ಸೇವಾ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ನಿಮ್ಮ ಪ್ರದೇಶದಲ್ಲಿ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ, ನೆಮ್ಮದಿ ಕೇಂದ್ರಗಳನ್ನು ಪತ್ತೆ ಮಾಡಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಲ್ಲಿಗೆ ಭೇಟಿ ಮಾಡಿ.

ಅಗತ್ಯ ದಾಖಲೆಗಳನ್ನು ಒದಗಿಸಿ

ನೋಂದಣಿ ಪ್ರಕ್ರಿಯೆಯಲ್ಲಿ ನಿಮ್ಮ ಅರ್ಹತೆಯನ್ನು ಸ್ಥಾಪಿಸಲು ನೀವು ಕೆಲವು ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಇವುಗಳು ಗುರುತಿನ ಪುರಾವೆ, ವಿಳಾಸ ಪುರಾವೆ ಮತ್ತು ಆದಾಯ ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ.

ಸಂಪೂರ್ಣ ನೋಂದಣಿ ಅರ್ಜಿ

ಒದಗಿಸಿದ ಮಾಹಿತಿಯ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯ ಸೇವಾ ಕೇಂದ್ರದಲ್ಲಿ ಒದಗಿಸಲಾದ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ. ನಿಮ್ಮ ಕುಟುಂಬದ ಸದಸ್ಯರು, ಆದಾಯ ಮತ್ತು ಇತರ ಸಂಬಂಧಿತ ಮಾಹಿತಿಯ ಕುರಿತು ವಿವರಗಳನ್ನು ಒದಗಿಸಿ.

ಪರಿಶೀಲನೆ ಪ್ರಕ್ರಿಯೆ

ನೋಂದಣಿ ಫಾರ್ಮ್ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಅನಂತರ ಅಧಿಕಾರಿಗಳು ಆಯುಷ್ಮಾನ್ ಭಾರತ್ ಯೋಜನೆಗೆ ನಿಮ್ಮ ಅರ್ಹತೆಯನ್ನು ಪರಿಶೀಲಿಸುತ್ತಾರೆ. ಈ ಪರಿಶೀಲನಾ ಪ್ರಕ್ರಿಯೆಯು ಸರ್ಕಾರಿ ಡೇಟಾಬೇಸ್‌ಗಳೊಂದಿಗೆ ಒದಗಿಸಲಾದ ಮಾಹಿತಿಯನ್ನು ಕ್ರಾಸ್-ಚೆಕ್ ಮಾಡುವುದನ್ನು ಒಳಗೊಂಡಿರುತ್ತದೆ.

ಆಯುಷ್ಮಾನ್ ಕಾರ್ಡ್ ಸ್ವೀಕರಿಸಿ

ಅರ್ಹತೆಯ ಯಶಸ್ವಿ ಪರಿಶೀಲನೆಯ ಅನಂತರ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಿರುವ ಆಯುಷ್ಮಾನ್ ಕಾರ್ಡ್ ಅನ್ನು ನಿಮಗೆ ನೀಡಲಾಗುತ್ತದೆ. ಈ ಕಾರ್ಡ್ ಯೋಜನೆಯಲ್ಲಿ ನಿಮ್ಮ ದಾಖಲಾತಿಗೆ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಎಂಪನೆಲ್ಡ್ ಆಸ್ಪತ್ರೆಗಳಲ್ಲಿ ನಗದು ರಹಿತ ಆರೋಗ್ಯ ಸೇವೆಗಳನ್ನು ಪ್ರವೇಶಿಸಲು ಅನುಮತಿ ನೀಡುತ್ತದೆ.

doctor

ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಿ

ಆಯುಷ್ಮಾನ್ ಕಾರ್ಡ್‌ನೊಂದಿಗೆ ನೀವು ಇದೀಗ ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಯಾವುದೇ ಎಂಪನೆಲ್ ಮಾಡಲಾದ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳನ್ನು ಪಡೆಯಬಹುದು. ನಗದು ರಹಿತ ಚಿಕಿತ್ಸಾ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿಮ್ಮ ಕಾರ್ಡ್ ಅನ್ನು ಆಸ್ಪತ್ರೆಯ ಸ್ವಾಗತ ವಿಭಾಗದಲ್ಲಿ ನೀಡಿ.

ಪ್ರಯೋಜನಗಳು ಏನೇನು?

ಆಯುಷ್ಮಾನ್ ಕಾರ್ಡ್‌ ಹೊಂದಿರುವುದರಿಂದ ಪ್ರಮುಖ ಪ್ರಯೋಜನಗಳು ಇಂತಿವೆ.

ದುರ್ಬಲ ಕುಟುಂಬಗಳಿಗೆ ರಕ್ಷಣೆ

ಆಯುಷ್ಮಾನ್ ಭಾರತ್ ಯೋಜನೆಯು ಭಾರತದಾದ್ಯಂತ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹೆಚ್ಚಿನ ಆರೋಗ್ಯ ವೆಚ್ಚಗಳ ವಿರುದ್ಧ ಆರ್ಥಿಕ ರಕ್ಷಣೆ ನೀಡುತ್ತದೆ.

ನಗದು ರಹಿತ ಚಿಕಿತ್ಸೆ

ಯೋಜನೆಯ ಫಲಾನುಭವಿಗಳು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ ನಿಗದಿತ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದು.

ವ್ಯಾಪಕ ಆಸ್ಪತ್ರೆ ನೆಟ್‌ವರ್ಕ್

ಅಯುಷ್ಮಾನ್ ಯೋಜನೆಯು ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳನ್ನು ಒಳಗೊಂಡಂತೆ ನಿಗದಿತ ಆಸ್ಪತ್ರೆಗಳ ವ್ಯಾಪಕ ಜಾಲವನ್ನು ಹೊಂದಿದೆ. ಇದು ದೇಶದಾದ್ಯಂತ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯಲು ಸಹಕರಿಸುತ್ತದೆ.

Ayushman Card

ಆಯುಷ್ಮಾನ್ ಕಾರ್ಡಗೆ ಅಗತ್ಯವಿರುವ ದಾಖಲೆಗಳು

1. ನಿವಾಸದ ಗುರುತು ಪತ್ರ
2. ವಯಸ್ಸು ಮತ್ತು ಗುರುತಿನ ಪುರಾವೆ- ಉದಾಹರಣೆಗೆ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್
3. ಜಾತಿ ಪ್ರಮಾಣಪತ್ರ
4. ಸಂಪರ್ಕ ಮಾಹಿತಿ- ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಇತ್ಯಾದಿ
5. ಆದಾಯ ಪ್ರಮಾಣ ಪತ್ರ
6. ಪ್ರಸ್ತುತ ಕುಟುಂಬದ ಸ್ಥಿತಿಯನ್ನು ಸೂಚಿಸುವ ದಾಖಲೆಗಳು

Continue Reading

ವಾಣಿಜ್ಯ

Donkey milk: ಕತ್ತೆ ಹಾಲು ಲೀಟರ್‌ಗೆ 7000 ರೂ! ಈ ಹಾಲಿಗೆ ಏಕಿಷ್ಟು ಡಿಮ್ಯಾಂಡ್‌?

Donkey milk: ಹಾಲು ಉದ್ಯಮದಲ್ಲಿ ಕತ್ತೆಯ ಹಾಲು ಇಂದು ಬಿಳಿ ಚಿನ್ನವಾಗಿದೆ. ಗುಜರಾತ್‌ನಲ್ಲಿ ಧೀರೇನ್ ಸೋಲಂಕಿ ಅವರು ಕತ್ತೆಯ ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಅವರು ಅದರ ಹಾಲನ್ನು ಗೋವಿನ ಪ್ರತಿಸ್ಪರ್ಧಿಗಳು ಉತ್ಪಾದಿಸುವ ಹಾಲಿನ 70 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇಷ್ಟಕ್ಕೂ ಈ ಕತ್ತೆ ಹಾಲಿಗೆ ಏಕಿಷ್ಟು ಡಿಮ್ಯಾಂಡ್‌? ಇದರ ಹಿನ್ನೆಲೆ ಏನು? ಇಲ್ಲಿದೆ ಕುತೂಹಲಕರ ಮಾಹಿತಿ.

VISTARANEWS.COM


on

By

donkey milk
Koo

ಹಾಲು (milk) ಮಾರಾಟ ಮಾಡಿ ತಿಂಗಳಿಗೊಂದು ಎಷ್ಟು ಆದಾಯ ಗಳಿಸಬಹುದು? ಅಬ್ಬಬ್ಬಾ ಎಂದರೆ 10 ಸಾವಿರ ರೂ. ಗಡಿ ದಾಟಿದರೆ ಬಹುದೊಡ್ಡದು. ಆದರೆ ಇಲ್ಲೊಬ್ಬರು ಹಾಲು ಮಾರಾಟದಿಂದಲೇ ತಿಂಗಳಿಗೆ 2- 3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಆದರೆ ಇವರು ಮಾರುತ್ತಿರುವ ಹಾಲು ಹಸುವಿನದಲ್ಲ (cow) ಕತ್ತೆಯದ್ದು (Donkey milk).

ಹಾಲು ಉದ್ಯಮದಲ್ಲಿ ಕತ್ತೆಯ ಹಾಲು ಇಂದು ಬಿಳಿ ಚಿನ್ನವಾಗಿದೆ (white gold). ಗುಜರಾತ್‌ನಲ್ಲಿ (gujarat) ಧೀರೇನ್ ಸೋಲಂಕಿ ( Dhiren Solanki) ಅವರು ಕತ್ತೆಯ ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಅವರು ಅದರ ಹಾಲನ್ನು ಗೋವಿನ ಪ್ರತಿಸ್ಪರ್ಧಿಗಳು ಉತ್ಪಾದಿಸುವ ಹಾಲಿನ 70 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಪಟಾನ್ ಜಿಲ್ಲೆಯಲ್ಲಿ 42 ಕತ್ತೆಗಳಿರುವ ಫಾರ್ಮ್ ಹೊಂದಿರುವ ಧೀರೇನ್ ಸೋಲಂಕಿ, ದಕ್ಷಿಣ ಪ್ರದೇಶಗಳಲ್ಲಿನ ಗ್ರಾಹಕರಿಗೆ ಬೆಲೆಬಾಳುವ ಹಾಲನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ 2- 3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಇದನ್ನೂ ಓದಿ: Tech Mahindra: ಫ್ರೆಶರ್‌ಗಳಿಗೆ ಗುಡ್‌ ನ್ಯೂಸ್;‌ 6 ಸಾವಿರ ಜನರನ್ನು ನೇಮಕ ಮಾಡಲಿದೆ ಮಹೀಂದ್ರಾ!

ಸುಮಾರು ಎಂಟು ತಿಂಗಳ ಹಿಂದೆ ಕೇವಲ 20 ಕತ್ತೆಗಳೊಂದಿಗೆ 22 ಲಕ್ಷ ರೂ.ಗಳ ಆರಂಭಿಕ ಹೂಡಿಕೆ ಮಾಡಿರುವ ಸೋಲಂಕಿ ಈಗ ಕೋಟ್ಯಂತರ ಮೌಲ್ಯದ ಹಾಲು ವ್ಯಾಪಾರ ನಡೆಸುತ್ತಿದ್ದಾರೆ.

ಪ್ರಾರಂಭದಲ್ಲಿ ಸವಾಲು

ಗುಜರಾತ್‌ ನಲ್ಲಿ ಕತ್ತೆ ಹಾಲಿಗೆ ಹೆಚ್ಚು ಬೇಡಿಕೆ ಇಲ್ಲದ ಕಾರಣ ಪ್ರಾರಂಭಿಸಿದ ಐದು ತಿಂಗಳು ಸೋಲಂಕಿ ಅವರು ತುಂಬಾ ಕಷ್ಟ ಪಟ್ಟಿದ್ದರು. ಅದರ ಅನಂತರ ಅವರು ದಕ್ಷಿಣ ಭಾರತದಲ್ಲಿ ಕತ್ತೆ ಹಾಲಿನ ಹೆಚ್ಚಿನ ಅಗತ್ಯತೆ ಇರುವಲ್ಲಿ ತಮ್ಮ ವ್ಯಾಪ್ತಿಯನ್ನು ಬೆಳೆಸುವ ನಿರ್ಧಾರವನ್ನು ಮಾಡಿದರು.

ಪ್ರಸ್ತುತ ಅವರು ಕತ್ತೆ ಹಾಲನ್ನು ಹೆಚ್ಚಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಒದಗಿಸುತ್ತಿದ್ದಾರೆ. ಅವರ ಕೆಲವು ಗ್ರಾಹಕರು ಕತ್ತೆಗಳ ಹಾಲನ್ನು ಬಳಸುವ ಸೌಂದರ್ಯವರ್ಧಕ ಸಂಸ್ಥೆಗಳಾಗಿವೆ.


ಲೀಟರ್‌ಗೆ 5ರಿಂದ 7 ಸಾವಿರ ರೂ.

ಸೋಲಂಕಿ ಪ್ರಕಾರ ಕತ್ತೆ ಹಾಲು ಮಾರುಕಟ್ಟೆಯಲ್ಲಿ ಪ್ರತಿ ಲೀಟರ್‌ಗೆ 5,000 ರಿಂದ 7,000 ರೂ. ಗೆ ಮಾರಾಟವಾಗುತ್ತಿದೆ. ಹಸುವಿನ ಹಾಲಿಗೆ ಹೋಲಿಸಿದರೆ ಲೀಟರ್‌ಗೆ 65 ರೂ. ಗೆ ಮಾರಾಟವಾಗುತ್ತದೆ. ಹಾಲಿನ ತಾಜಾತನವನ್ನು ಕಾಪಾಡಲು ರೆಫ್ರಿಜರೇಟರ್‌ಗಳಲ್ಲಿ ಇರಿಸಲಾಗುತ್ತದೆ.

ದುಬಾರಿಯಾಗಲು ಕಾರಣ

ಕತ್ತೆಯ ಹಾಲಿನ ಬಗ್ಗೆ ಜನಪ್ರಿಯತೆ ಈಗಷ್ಟೇ ಬೆಳೆಯುತ್ತಿದೆ. ಬಹುತೇಕ ಫಾರ್ಮ್‌ಗಳು ಚಿಕ್ಕದಾಗಿದ್ದು, ಐದರಿಂದ 30 ಹಾಲು ಕರೆಯುವ ಕತ್ತೆಗಳನ್ನು ಒಳಗೊಂಡಿರುತ್ತದೆ. ಪ್ರತಿ ದಿನವೂ ಸರಿಸುಮಾರು ನಾಲ್ಕು ಕಪ್ ಅಂದರೆ ಒಂದು ಲೀಟರ್ ಹಾಲನ್ನು ಮಾತ್ರ ಉತ್ಪಾದಿಸಲಾಗುತ್ತದೆ. ಹೀಗಾಗಿ ಹಾಲು ಸ್ವಲ್ಪ ದುಬಾರಿಯಾಗಿದೆ ಮತ್ತು ಪಡೆಯುವುದು ಕಷ್ಟವಾಗುತ್ತದೆ.

ಕತ್ತೆ ಹಾಲಿನ ಪ್ರಯೋಜನಗಳು

ಕತ್ತೆ ಹಾಲಿನ ಬಳಕೆ ಸುಮಾರು 10 ಸಾವಿರ ವರ್ಷಗಳಿಂದಲೂ ಇದೆ. ಅದರ ಪೌಷ್ಟಿಕಾಂಶ ದಿಂದಾಗಿ ಸೌಂದರ್ಯವರ್ಧಕಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಹಲವಾರು ಆರೋಗ್ಯ ಪ್ರಯೋಜನಗಳಿಂದಾಗಿ ಇದು ಇತ್ತೀಚಿನ ದಿನಗಳಲ್ಲಿ ಇದಕ್ಕೆ ಮತ್ತೆ ಬೇಡಿಕೆ ಹೆಚ್ಚಾಗುತ್ತಿದೆ.

ಕತ್ತೆ ಹಾಲಿನ ಇತಿಹಾಸ

ಹಿಂದಿನ ಕಾಲದಲ್ಲಿ ಶಿಶುಗಳ ಆಹಾರಕ್ಕಾಗಿ ಕತ್ತೆ ಹಾಲನ್ನು ಬಳಸುವುದು ಸಾಮಾನ್ಯವಾಗಿತ್ತು. ಈಜಿಪ್ಟಿನ ರಾಣಿ ಕ್ಲಿಯೋಪಾತ್ರ ಕೂಡ ಅದನ್ನು ಇಷ್ಟಪಟ್ಟಿದ್ದಳು. ಅವಳು ತನ್ನ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ಕತ್ತೆ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳು. ದಂತಕಥೆಯ ಪ್ರಕಾರ ಅವಳಿಗೆ ನಿತ್ಯ ಅಗತ್ಯವಾದ ಹಾಲು ಒದಗಿಸಲು ಸುಮಾರು 700 ಕತ್ತೆಗಳು ಬೇಕಾಗಿದ್ದವು ಎನ್ನಲಾಗುತ್ತದೆ.

ಕತ್ತೆ ಹಾಲು ಮುಖದ ಚರ್ಮದಿಂದ ಸುಕ್ಕುಗಳನ್ನು ನಿವಾರಿಸುತ್ತದೆ. ಚರ್ಮವನ್ನು ಮೃದು ಮತ್ತು ಬಿಳಿಯನ್ನಾಗಿ ಮಾಡುತ್ತದೆ ಎಂದು ನಂಬಲಾಗಿದೆ. ರೋಮನ್ ಚಕ್ರವರ್ತಿ ನೀರೋನ ಹೆಂಡತಿ ಪೊಪ್ಪಿಯಾ ಸ್ನಾನಕ್ಕೂ ಸಹ ಕತ್ತೆ ಬಳಸುತ್ತಿದ್ದಳು. ಈ ಕಾರಣಕ್ಕಾಗಿ, ಅವಳು ಪ್ರಯಾಣ ಮಾಡುವಾಗ ಕತ್ತೆಗಳ ಹಿಂಡುಗಳನ್ನು ಜೊತೆಗೆ ಕೊಂಡೊಯ್ಯುತ್ತಿದ್ದಳು.

ಕತ್ತೆ ಹಾಲಿನ ವಿಶೇಷತೆ

ಕತ್ತೆ ಹಾಲು ಹಸುವಿನ ಹಾಲು ಮತ್ತು ಮಾನವ ಎದೆ ಹಾಲು ಹಲವಾರು ಪೌಷ್ಟಿಕಾಂಶಗಳನ್ನು ಹೊಂದಿದೆ. ಪ್ರೋಟೀನ್ ಜೊತೆಗೆ ಇದು ಜೀವಸತ್ವ, ವಿಶೇಷವಾಗಿ ವಿಟಮಿನ್ ಡಿ ಮತ್ತು ಖನಿಜಗಳನ್ನು ಒಳಗೊಂಡಿರುತ್ತದೆ. ಕತ್ತೆ ಹಾಲು ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿದ್ದು, ಇವುಗಳಲ್ಲಿ ಹೆಚ್ಚಿನವು ಕಾರ್ಬೋಹೈಡ್ರೇಟ್‌ಗಳಿಂದ ಲ್ಯಾಕ್ಟೋಸ್ ಹಾಲಿನಲ್ಲಿರುವ ಸಕ್ಕರೆಯ ರೂಪದಲ್ಲಿರುತ್ತದೆ.

ಹಸುವಿನ ಹಾಲಿನ ಪ್ರೋಟೀನ್ ಅಲರ್ಜಿಯನ್ನು ಹೊಂದಿರುವ ಅನೇಕ ಜನರು ಕತ್ತೆ ಹಾಲನ್ನು ಅದರ ಕಡಿಮೆ ಕ್ಯಾಸೀನ್ ಮಟ್ಟದಿಂದ ಸೇವಿಸಬಹುದು. ಏಕೆಂದರೆ ಕತ್ತೆ ಹಾಲು ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುವುದಿಲ್ಲ.


ಕತ್ತೆ ಹಾಲಿನಲ್ಲಿ ಲ್ಯಾಕ್ಟೋಸ್, ಕ್ಯಾಲ್ಸಿಯಂ ಅನ್ನು ಒಳಗೊಂಡಿದ್ದು, ಬಲವಾದ ಮೂಳೆಗಳಿಗೆ ಅಗತ್ಯವಾದ ಖನಿಜಾಂಶವನ್ನು ಇದು ಒಳಗೊಂಡಿದೆ.

2010ರ ಪ್ರಯೋಗಾಲಯದ ಅಧ್ಯಯನದ ಪ್ರಕಾರ ಕತ್ತೆ ಹಾಲು ಸೈಟೊಕಿನ್‌ಗಳ ಬಿಡುಗಡೆಯನ್ನು ಹೆಚ್ಚಿಸುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಪ್ರೋಟೀನ್‌ಗಳಾಗಿವೆ. ಹಾಲು ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸಲು ಜೀವಕೋಶಗಳಿಗೆ ಕಾರಣವಾಗುತ್ತದೆ. ಇದು ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಿ ರಕ್ತದ ಹರಿವನ್ನು ಸುಧಾರಿಸುತ್ತದೆ.

Continue Reading
Advertisement
Puttakkana Makkalu Serial puttakka daughter Sahana left home
ಕಿರುತೆರೆ20 mins ago

Puttakkana Makkalu Serial: ಅವ್ವನಂತೆ ಯಾರ ಹಂಗಿಲ್ಲದೆ ಬದುಕಲು ಮನೆ ಬಿಟ್ಟು ಹೊರಟೇ ಬಿಟ್ಟಳು ಸಹನಾ!

Mosquito controle
ಲೈಫ್‌ಸ್ಟೈಲ್30 mins ago

Mosquito control: ಸೊಳ್ಳೆ ಕಾಟಕ್ಕೆ ಬೇಸತ್ತಿದ್ದೀರಾ? ಹಾಗಿದ್ರೆ ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ!

Health Plan
ಮನಿ-ಗೈಡ್30 mins ago

Money Guide: ಕಾರ್ಪೊರೇಟ್- ವೈಯಕ್ತಿಕ ಆರೋಗ್ಯ ವಿಮೆಯ ನಡುವಿನ ವ್ಯತ್ಯಾಸ ತಿಳಿದಿರಲಿ

New Food Rules
ಪ್ರಮುಖ ಸುದ್ದಿ38 mins ago

New Food Rules: ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಪಾಕ್‌ ಹೈರಾಣು-ಹೊಸ ಭಕ್ಷ್ಯ ನೀತಿ ಜಾರಿ

MS Dhoni
ಕ್ರೀಡೆ42 mins ago

MS Dhoni: ರನ್​ ಓಡದೆ ಸ್ವಾರ್ಥ ತೋರಿದ ಧೋನಿ; ನೆಟ್ಟಿಗರಿಂದ ಭಾರೀ ಟೀಕೆ

Google Layoff
ವಿದೇಶ44 mins ago

Google Layoff: ಮತ್ತಷ್ಟು ಉದ್ಯೋಗ ಕಡಿತಗೊಳಿಸಿದ ಗೂಗಲ್‌; ಕಾರಣವೇನು?

Tobacco use
ಆರೋಗ್ಯ45 mins ago

Tobacco Use: ತಂಬಾಕು ಸೇವನೆ; ವಿಶ್ವದಲ್ಲೇ ಭಾರತಕ್ಕೆ ಎರಡನೇ ಸ್ಥಾನ

Jammu Tour
ಪ್ರವಾಸ54 mins ago

Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

Uma Ramanan dies in Chennai
ಕಾಲಿವುಡ್1 hour ago

Uma Ramanan: ಖ್ಯಾತ ಹಿನ್ನೆಲೆ ಗಾಯಕಿ ಉಮಾ ರಮಣನ್ ಇನ್ನಿಲ್ಲ

CoWin Certificates
ದೇಶ1 hour ago

CoWIN Certificates: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್‌; ಕೇಂದ್ರ ಹೇಳೋದೇನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌