Ajay Banga : ವಿಶ್ವಬ್ಯಾಂಕ್‌ ಅಧ್ಯಕ್ಷ ಹುದ್ದೆಗೆ ಅಜಯ್‌ ಬಾಂಗಾ ಅಮೆರಿಕ ಅಭ್ಯರ್ಥಿ, ಚೀನಾ ಆಕ್ಷೇಪ - Vistara News

ಪ್ರಮುಖ ಸುದ್ದಿ

Ajay Banga : ವಿಶ್ವಬ್ಯಾಂಕ್‌ ಅಧ್ಯಕ್ಷ ಹುದ್ದೆಗೆ ಅಜಯ್‌ ಬಾಂಗಾ ಅಮೆರಿಕ ಅಭ್ಯರ್ಥಿ, ಚೀನಾ ಆಕ್ಷೇಪ

ವಿಶ್ವಬ್ಯಾಂಕ್‌ ಅಧ್ಯಕ್ಷ ಹುದ್ದೆಗೆ ಅಮೆರಿಕದ ಅಭ್ಯರ್ಥಿಯಾಗಿ ಭಾರತೀಯ ಮೂಲದ ಅಜಯ್‌ ಬಾಂಗಾ ಅವರನ್ನು ಕಣಕ್ಕಿಳಿಸಲಾಗಿದೆ. ಆದರೆ ಚೀನಾ ಬೇರೆ ಅಭ್ಯರ್ಥಿಗೆ ಬೆಂಬಲಿಸಲು ಆಸಕ್ತಿ ವಹಿಸಿದೆ. (Ajay Banga) ಏಕೆ? ಇಲ್ಲಿದೆ ವಿವರ.

VISTARANEWS.COM


on

Indian-Origin Ajay Banga Set To Become World Bank President
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ವಿಶ್ವಬ್ಯಾಂಕ್‌ನ ಅಧ್ಯಕ್ಷ ಹುದ್ದೆಗೆ ಭಾರತೀಯ ಮೂಲದ ಅಜಯ್‌ ಬಾಂಗಾ ಅವರನ್ನು ಅಮೆರಿಕದ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ನಾನಾ ದೇಶಗಳ ಬೆಂಬಲ ಗಳಿಸಲು ಬಾಂಗಾ ಇದೀಗ ಹೊರಟಿದ್ದು, ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Ajay Banga) ಮೊದಲಾದವರನ್ನು ಭೇಟಿಯಾಗುತ್ತಿದ್ದಾರೆ. ಈಗಾಗಲೇ ಆಫ್ರಿಕಾ, ಯುರೋಪ್‌ ಪ್ರವಾಸವನ್ನು ಪೂರೈಸಿದ್ದಾರೆ.

ವಿಶ್ವಬ್ಯಾಂಕ್‌, ಜಾಗತಿಕ ಅಭಿವೃದ್ಧಿ ಕುರಿತ ಸವಾಲುಗಳು, ಭಾರತದ ಆದ್ಯತೆಗಳ ಬಗ್ಗೆ ಅಜಯ್‌ ಬಾಂಗಾ ಅವರು ಪ್ರಧಾನಿ ಮೋದಿ ಜತೆ ಚರ್ಚಿಸಲಿದ್ದಾರೆ. ಭಾರತವು ಅಜಯ್‌ ಬಾಂಗಾ ಅವರನ್ನು ಬೆಂಬಲಿಸಿದೆ. ಬಾಂಗ್ಲಾದೇಶ, ಕೊಲಂಬಿಯಾ, ಈಜಿಪ್ತ್‌, ಫ್ರಾನ್ಸ್‌, ಜರ್ಮನಿ, ಘಾನಾ, ಇಟಲಿ, ಜಪಾನ್‌, ಕೀನ್ಯಾ, ಸೌದಿ ಅರೇಬಿಯಾ, ಕೊರಿಯಾ, ಬ್ರಿಟನ್‌ ಈಗಾಗಲೇ ಬಾಂಗಾ ಅವರನ್ನು ಬೆಂಬಲಿಸಿದೆ.

ಅಜಯ್‌ ಬಾಂಗಾ (63) 1959ರಲ್ಲಿ ಪುಣೆಯಲ್ಲಿ ಜನಿಸಿದರು. ಐಐಎಂ ಅಹಮದಾಬಾದ್‌ನಲ್ಲಿ ಎಂಬಿಎ ಮಾಡಿರುವ ಅವರು, 2010-2021 ರ ಅವಧಿಯಲ್ಲಿ ಮಾಸ್ಟರ್‌ ಕಾರ್ಡ್‌ ಕಂಪನಿಯ ಸಿಇಒ ಆಗಿದ್ದರು.

ಚೀನಾ ಆಕ್ಷೇಪ

China Flag

ವಿಶ್ವಬ್ಯಾಂಕ್‌ ಅಧ್ಯಕ್ಷ ಹುದ್ದೆಗೆ ಅಜಯ್‌ ಬಾಂಗಾ ಬದಲಿಗೆ ಬೇರೆ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಚೀನಾ ಹೇಳಿದೆ. ಅಮೆರಿಕದ ಜತೆಗೆ ಚೀನಾದ ಸಂಬಂಧ ಬಿಗಡಾಯಿಸುತ್ತಿರುವುದನ್ನೂ ಇದು ಬಿಂಬಿಸಿದೆ. ಮೆರಿಟ್‌ ಆಧಾರದಲ್ಲಿ ಬೇರೆ ಅಭ್ಯರ್ಥಿಯನ್ನು ಬೆಂಬಲಿಸಲು ಬಯಸಿರುವುದಾಗಿ ಚೀನಾ ಹೇಳಿದೆ.

ವಿಶ್ವಬ್ಯಾಂಕ್‌ ಜಾಗತಿಕ ಮಟ್ಟದಲ್ಲಿ ಪ್ರಭಾವಿ ಹಣಕಾಸು ಸಂಸ್ಥೆಯಾಗಿದ್ದು, ಜಾಗತಿಕ ಬಡತನ ನಿರ್ಮೂಲನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ. ಹಣಕಾಸು ನೆರವು ನೀಡುತ್ತದೆ. ಇದರಲ್ಲಿ ಇದುವರೆಗೆ ಅಮೆರಿಕ ಮೂಲದವರೇ ಅಧ್ಯಕ್ಷರಾಗಿದ್ದಾರೆ. ಅಜಯ್‌ ಬಾಂಗಾ ಭಾರತೀಯ ಮೂಲದವರಾಗಿದ್ದರೂ, ಈಗ ಅಮೆರಿಕದ ನಾಗರಿಕರಾಗಿದ್ದಾರೆ. ಈ ಅಮೆರಿಕದ ಪ್ರಾಬಲ್ಯವನ್ನು ಅಂತ್ಯಗೊಳಿಸಲು ಚೀನಾ ಬಯಸುತ್ತಿದೆ.

ತಾಂತ್ರಿಕವಾಗಿ ವಿಶ್ವಬ್ಯಾಂಕ್‌ ಮಂಡಳಿಯ 25 ಕಾರ್ಯಕಾರಿ ನಿರ್ದೇಶಕರು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ನಾಮ ನಿರ್ದೇಶನ ಪ್ರಕ್ರಿಯೆ ಮಾರ್ಚ್‌ 29ಕ್ಕೆ ಮುಕ್ತಾಯವಾಗುತ್ತಿದೆ. ಜರ್ಮನಿ ಮಹಿಳಾ ಬ್ಯಾಂಕ್‌ ಅಧ್ಯಕ್ಷರನ್ನು ಬಯಸಿದೆ.

ಭಾರತೀಯ ಮೂಲದವರಿಂದ ದೇಶಕ್ಕೆ ಲಾಭವಾಗಿದೆಯೇ?

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಅಜಯ್‌ ಬಾಂಗಾ, ಸುಂದರ್‌ ಪಿಚೈ, ಸತ್ಯ ನಾಡೆಳ್ಳಾ, ಪರಾಗ್‌ ಅಗ್ರವಾಲ್‌, ಇಂದ್ರಾ ನೂಯಿ ಮೊದಲಾದವರು ಭಾರತೀಯ ಮೂಲದವರದರೂ, ಭಾರತೀಯರಲ್ಲ. ದ್ವಿಪೌರತ್ವಕ್ಕೆ ಭಾರತ ಅವಕಾಶ ನೀಡುವುದಿಲ್ಲ. ಹೀಗಿದ್ದರೂ ಅವರನ್ನು ಭಾರತದ ಮಕ್ಕಳೆಂದು ಭಾರತೀಯರು ಆದರಿಸುತ್ತಾರೆ. ಆದರೆ ಅವರಿಂದ ಭಾರತಕ್ಕೆ ಏನಾದರೂ ಲಾಭವಾಗಿದೆಯೇ, ಇಲ್ಲಿ ಉದ್ಯೋಗಗಳನ್ನು ಸೃಷ್ಟಿಸಿದ್ದಾರೆಯೇ ಎಂದರೆ ಉತ್ತರ ಸಿಗುವುದಿಲ್ಲ. ಬದಲಿಗೆ ನಿರಾಸೆಯಾಗುತ್ತದೆ. ಆದ್ದರಿಂದ ಭಾರತ ತನ್ನದೇ ನಾಗರಿಕರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಬೇಕು. ಪ್ರೋತ್ಸಾಹಿಸಬೇಕು ಎನ್ನುತ್ತಾರೆ ವಿಶ್ಲೇಷಕರು.

ಚೀನಾ ಮಾದರಿ: ಚೀನಾ ತನ್ನದೇ ನಾಗರಿಕರನ್ನು ಅಂತಾರಾಷ್ಟ್ರೀಯ ಸಂಸ್ಥೆಗಳ ಉನ್ನತ ಹುದ್ದೆಗೆ ಆಯ್ಕೆ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಉದಾಹರಣೆಗೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಧಾನ ನಿರ್ದೇಶಕರಾಗಿ ಚೀನಾದ ಕ್ಯೂ ಡೊಂಗ್ಯು ನೇಮಕವಾಗಿದ್ದಾರೆ. ಇಂಟರ್‌ ನ್ಯಾಶನಲ್‌ ಸಿವಿಲ್‌ ಏವಿಯೇಶನ್‌ ಆರ್ಗನೈಸೇಶನ್‌ ಅಧ್ಯಕ್ಷರಾಗಿ ಫಾಂಗ್‌ ಲಿಯು, ಇಂಟರ್‌ ನ್ಯಾಶನಲ್ ಟೆಲಿಕಮ್ಯುನಿಕೇಶನ್‌ ಯೂನಿಯನ್‌ ಕಾರ್ಯದರ್ಶಿಯಾಗಿ ಹುಲಿನ್‌ ಜಾವೊ, ಇಂಡಸ್ಟ್ರಿಯಲ್‌ ಡೆವಲಪ್‌ಮೆಂಟ್‌ ಆರ್ಗನೈಸೇಶನ್‌ ಕಾರ್ಯಕಾರಿ ನಿರ್ದೇಶಕರಾಗಿ ಇ ಯಂಗ್‌ ಚೀನಾ ಪ್ರಜೆಗಳಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ನಿರ್ದೇಶಕಿ ಮಾರ್ಗರೇಟ್‌ ಚಾನ್‌ ಅವರು ಹಾಂಕಾಂಗ್‌ ಮೂಲದವರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Lok Sabha Election 2024: ಡಿ.ಕೆ. ಸುರೇಶ್‌ ಆಸ್ತಿ ಮೌಲ್ಯ 598 ಕೋಟಿ ರೂ.; 5 ವರ್ಷದಲ್ಲಿ 259.19 ಕೋಟಿ ರೂ. ಹೆಚ್ಚಳ!

Lok Sabha Election 2024: ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ವೇಳೆ ನೀಡಿದ್ದ ಅಫಿಡವಿಟ್‌ನಲ್ಲಿ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. ಇದರಂತೆ ಡಿ.ಕೆ. ಸುರೇಶ್ ಅವರ ಒಟ್ಟು ಆಸ್ತಿ ಮೌಲ್ಯ 593 ಕೋಟಿ ರೂಪಾಯಿ ಆಗಿದೆ. ಆದರೆ, ಅವರಿಗೆ ಒಟ್ಟು 207 ಕೋಟಿ ರೂಪಾಯಿ ಸಾಲ ಇದೆ ಹೇಳಿಕೊಂಡಿದ್ದಾರೆ. ಜತೆಗೆ ಕುಟುಂಬದವರಿಗೆ 43 ಕೋಟಿ ರೂಪಾಯಿ ಸಾಲವನ್ನೂ ನೀಡಿದ್ದಾರೆ. ಒಂದೂ ಕಾಲು ಕೆಜಿ ಚಿನ್ನ, ಸುಮಾರು 5 ಕೆಜಿಯಷ್ಟು ಬೆಳ್ಳಿಯನ್ನು ಹೊಂದಿರುವ ಇವರು ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಇನ್ನು ಲುಲು ಮಾಲ್‌ಗೆ 3 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವುದಾಗಿ ಡಿ.ಕೆ. ಸುರೇಶ್‌ ಅವರು ತಮ್ಮ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.

VISTARANEWS.COM


on

Lok Sabha Election 2024 DK Shivakumar Suresh assetsworth Rs 598 crore and 259.19 crore Increase in 5 years
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ (Bangalore Rural Lok Sabha constituency) ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್ (DK Suresh) ಅವರು ನಾಮಪತ್ರ ಸಲ್ಲಿಸಿದ್ದು, ಒಟ್ಟು ಆಸ್ತಿ ಮೌಲ್ಯ 598 ಕೋಟಿ ರೂಪಾಯಿ ಎಂದು ಘೋಷಿಸಿದ್ದಾರೆ. ಇವರ ಹೆಸರಲ್ಲಿ ಒಟ್ಟು 207 ಕೋಟಿ ರೂಪಾಯಿ ಸಾಲವಿದ್ದು, ಕಳೆದ 5 ವರ್ಷದಲ್ಲಿ 259.19 ಕೋಟಿ ರೂಪಾಯಿಯಷ್ಟು ಆಸ್ತಿ ಮೌಲ್ಯವು ಹೆಚ್ಚಳಗೊಂಡಿದೆ.

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ವೇಳೆ ನೀಡಿದ್ದ ಅಫಿಡವಿಟ್‌ನಲ್ಲಿ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. ಇದರಂತೆ ಡಿ.ಕೆ. ಸುರೇಶ್ ಅವರ ಒಟ್ಟು ಆಸ್ತಿ ಮೌಲ್ಯ 593 ಕೋಟಿ ರೂಪಾಯಿ ಆಗಿದೆ.

207 ಕೋಟಿ ರೂಪಾಯಿ ಸಾಲದಲ್ಲಿರುವ ಡಿಕೆಸು

ಡಿ.ಕೆ. ಸುರೇಶ್ ಹೆಸರಿನಲ್ಲಿ ಒಟ್ಟು 207 ಕೋಟಿ ರೂಪಾಯಿ ಸಾಲ ಇದೆ ಎಂದು ಅಫಿಡವಿಟ್‌ನಲ್ಲಿ ತೋರಿಸಲಾಗಿದೆ. ಇಷ್ಟಾದರೂ ಇದರಲ್ಲಿ ತಾಯಿ ಗೌರಮ್ಮ, ಅಣ್ಣ ಡಿ.ಕೆ. ಶಿವಕುಮಾರ್‌, ಅಣ್ಣನ ಮಕ್ಕಳಾದ ಐಶ್ವರ್ಯ ಹಾಗೂ ಮಗ ಆಕಾಶ್‌ ಕೆಂಪೇಗೌಡ ಅವರಿಗೂ ಸಾಲವನ್ನು ನೀಡಿದ್ದಾರೆ.

Lok Sabha Election 2024 DK Brothers hold roadshow in Ramanagara and DK Suresh file nomination

ಕುಟುಂಬದವರಿಗೆ ನೀಡಿದ ಸಾಲು ಎಷ್ಟು?

  • ತಾಯಿ ಗೌರಮ್ಮಗೆ ನಾಲ್ಕೂ ಮುಕ್ಕಾಲು ಕೋಟಿ ರೂಪಾಯಿ ಸಾಲ
  • ಅಣ್ಣ ಡಿಕೆ ಶಿವಕುಮಾರ್‌ಗೆ 30 ಕೋಟಿ ರೂಪಾಯಿ ಸಾಲ ಕೊಟ್ಟಿರುವ ಸುರೇಶ್
  • ಅಣ್ಣನ ಮಗಳು ಐಶ್ವರ್ಯಾಗೆ 8 ಕೋಟಿ ರೂಪಾಯಿ ಸಾಲ ನೀಡಿರುವ ಸುರೇಶ್
  • ಡಿಕೆಶಿ ಮಗ ಆಕಾಶ್‌ ಕೆಂಪೇಗೌಡಗೆ 1 ಕೋಟಿ ರೂಪಾಯಿ ಸಾಲವನ್ನು ಡಿ.ಕೆ. ಸುರೇಶ್ ನೀಡಿದ್ದಾರೆ

ಡಿ.ಕೆ. ಸುರೇಶ್‌ ಬಳಿ ಇದೆ ಒಂದೂ ಕಾಲು ಕೆಜಿ ಚಿನ್ನ!

ಚರಾಸ್ತಿ 106.71 ಕೋಟಿ ರೂಪಾಯಿ, ಸ್ಥಿರಾಸ್ತಿ 486.33 ಕೋಟಿ ರೂಪಾಯಿ, ಒಂದೂ ಕಾಲು ಕೆಜಿ ಚಿನ್ನ, ಸುಮಾರು 5 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ.

ರಾಮನಗರ ಜಿಲ್ಲಾಧಿಕಾರಿಗೆ ಸಂಸದ ಡಿ.ಕೆ. ಸುರೇಶ್‌ ಸಲ್ಲಿಸಿರುವ ಅಫಿಡವಿಟ್‌ ಪ್ರತಿ ಇಲ್ಲಿದೆ. ಪೂರ್ಣ ವಿವರ ಓದಲು ಡೌನ್ಲೋಡ್‌ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

ಇವರ ಬಳಿ ಸ್ವಂತ ಕಾರೂ ಇಲ್ಲ!

ತಮ್ಮ ಬಳಿ ಸ್ವಂತ ಕಾರು ಸಹ ಇಲ್ಲ ಎಂಬ ಮಾಹಿತಿಯನ್ನು ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್ ಹೇಳಿದ್ದಾರೆ. 70 ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣವನ್ನು ಸುರೇಶ್ ಹೊಂದಿದ್ದಾರೆ.

5 ವರ್ಷಗಳಲ್ಲಿ 259.19 ಕೋಟಿ ರೂ. ಹೆಚ್ಚಳ

2019ರಲ್ಲಿ ಸುರೇಶ್ ಆಸ್ತಿ ಮೌಲ್ಯ 333.86 ಕೋಟಿ ರೂಪಾಯಿ ಆಗಿತ್ತು. 5 ವರ್ಷಗಳಲ್ಲಿ 259.19 ಕೋಟಿ ರೂಪಾಯಿಯಷ್ಟು ಆಸ್ತಿ ಮೌಲ್ಯ ಹೆಚ್ಚಳವಾಗಿದೆ. ಈ ವೇಳೆ ಲುಲು ಮಾಲ್‌ಗೆ 3 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವುದಾಗಿ ಡಿ.ಕೆ. ಸುರೇಶ್‌ ಉಲ್ಲೇಖಿಸಿದ್ದಾರೆ. ಇನ್ನು ಅವರು ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾಗಿ ತಿಳಿಸಿದ್ದಾರೆ.

Continue Reading

ಉದ್ಯೋಗ

Job Alert: ಗುಡ್‌ನ್ಯೂಸ್‌; 93 ಬ್ಯಾಂಕ್‌ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ

Job Alert: ಬೆಂಗಳೂರಿನಲ್ಲೇ ಉದ್ಯೋಗ ಹೊಂದಬೇಕು ಇಲ್ಲಿದೆ ಗುಡ್‌ನ್ಯೂಸ್‌. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವ 93 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಏಪ್ರಿಲ್‌ 6.

VISTARANEWS.COM


on

job alert
Koo

ಬೆಂಗಳೂರು: ಬೆಂಗಳೂರಿನಲ್ಲೇ ಉದ್ಯೋಗ ಹೊಂದಬೇಕು ಎನ್ನುವ ಕನಸು ಕಾಣುವವರಿಗೆ ಇಲ್ಲಿದೆ ಸುವರ್ಣಾವಕಾಶ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ (The Karnataka State Co-Operative Apex Bank Ltd)ದ ಬೆಂಗಳೂರು ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 93 ಬ್ಯಾಂಕ್‌ ಸಹಾಯಕ ಹುದ್ದೆ ಇದಾಗಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಏಪ್ರಿಲ್‌ 6 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಸಾಮಾನ್ಯ 85, ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ 8 ಹುದ್ದೆಗಳಿವೆ. ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಭಾಷಾ ವಿಷಯಗಳು ಸೇರಿದಂತೆ ಕ್ರೋಢೀಕೃತ ಶೇ. 55ರಷ್ಟು ಅಂಕ ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಮತ್ತು ಅಂಗವಿಕಲ ಅಭ್ಯರ್ಥಿಗಳು ಕನಿಷ್ಠ ಶೇ. 50ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

ಕಂಪ್ಯೂಟರ್‌ ಜ್ಞಾನ ಕಡ್ಡಾಯ

ಅಭ್ಯರ್ಥಿಗಳು ಕನ್ನಡ ಓದುವ ಜತೆಗೆ ಬರೆಯಲು, ಸ್ಪಷ್ಟವಾಗಿ ಮಾತನಾಡಲು ಮತ್ತು ಅರ್ಥ ಮಾಡಿಕೊಳ್ಳುವಂತಿರಬೇಕು. ಕಂಪ್ಯೂಟರ್ ಅಪರೇಷನ್ ಮತ್ತು ಅಪ್ಲಿಕೇಷನ್‌ನಲ್ಲಿ ಉತ್ತಮ ಜ್ಞಾನ ಹೊಂದಿರಬೇಕು. ಸಹಕಾರ ವಿಷಯದಲ್ಲಿ ವಿದ್ಯಾರ್ಹತೆ ಮತ್ತು ಅನುಭವವನ್ನು ಹೊಂದಿರುವವರಿಗೆ ಆದ್ಯತೆ ಎಂದು ಪ್ರಕಟಣೆ ತಿಳಿಸಿದೆ.

ವಯೋಮಿತಿ

ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-Iರ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ಜಾತಿ, ಹಿಂದುಳಿದ ವರ್ಗಗಳ ಅಂದರೆ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳು 500 ರೂ. + ಜಿಎಸ್‌ಟಿ, ಸಾಮಾನ್ಯ ವರ್ಗ ಮತ್ತು ಇತರ ಹಿಂದುಳಿದ ಜಾತಿ, ಹಿಂದುಳಿದ ವರ್ಗಗಳ ಅಂದರೆ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು 1,000 ರೂ. + ಜಿಎಸ್‌ಟಿಯನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಅರ್ಜಿ ಪರಿಶೀಲನೆಯ ನಂತರ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಮೌಖಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ 28,425 ರೂ.- 87,125 ರೂ. ಮಾಸಿಕ ವೇತನ ಸಿಗಲಿದೆ. ಗಮನಿಸಿ ಅಭ್ಯರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಒಂದು ಹಾಳೆಯ ಮೇಲಿಟ್ಟು ಆದರ ಕೆಳಗೆ ಕಪ್ಪು ಶಾಹಿಯ ಸ್ಕೆಚ್/ ಮಾರ್ಕರ್ ಪೆನ್‌ನಲ್ಲಿ ಸಹಿಯನ್ನು ಸ್ಕ್ಯಾನ್ ಮಾಡಿ ಅರ್ಜಿ ಜತೆಗೆ ಅಪ್‌ಲೋಡ್‌ ಮಾಡಬೇಕು. ಭಾವಚಿತ್ರ ಹಾಗೂ ಸಹಿಯನ್ನು ಅಪ್‌ಲೋಡ್‌ ಮಾಡದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಆಗ್ನೇಯ ಮಧ್ಯ ರೈಲ್ವೆಯಿಂದ 733 ಅಪ್ರೆಂಟಿಸ್‌ಗಳ ನೇಮಕಕ್ಕೆ ಅರ್ಜಿ ಆಹ್ವಾನ; ಐಟಿಐ ಪಾಸಾದವರು ಅಪ್ಲೈ ಮಾಡಿ

Continue Reading

ಪ್ರಮುಖ ಸುದ್ದಿ

IPL 2024 : ಅಪ್ಪನ ಸಿಕ್ಸರ್​​ಗೆ ಚಿಯರ್ಸ್ ಹೇಳಿದ ಕ್ಲಾಸೆನ್ ಪುತ್ರಿ, ಇಲ್ಲಿದೆ ವಿಡಿಯೊ

IPL 2024 : ಪಂದ್ಯದಲ್ಲಿ ಹೆನ್ರಿಚ್ ಕ್ಲಾಸೆನ್​ 34 ಎಸೆತಗಳಲ್ಲಿ 80 ರನ್ ಬಾರಿಸುವ ಮೂಲಕ ದೊಡ್ಡ ಮೊತ್ತ ಪೇರಿಸಲು ನೆರವಾಗಿದ್ದರು.

VISTARANEWS.COM


on

Henrich Klasen- IPL
Koo

ಹೈದರಾಬಾದ್​: ಬುಧವಾರ ನಡೆದ ಸನ್​ರೈಸರ್ಸ್​​ ಹೈದರಾಬಾದ್ (Sun Risers Hyderabad​​) ಮತ್ತು ಮುಂಬೈ ಇಂಡಿಯನ್ಸ್ (Mumbai Indians ) ನಡುವಿನ ಐಪಿಎಲ್ 2024 ರ 8 ನೇ ಪಂದ್ಯವು ಹಲವು ದಾಖಲೆಗಳಿಗೆ ಕಾರಣವಾಗಿದ್ದವು. ಇದು ಟಿ20 ಮಾದರಿಯಲ್ಲಿ ತಂಡವೊಂದರ ಗರಿಷ್ಠ ಸ್ಕೋರ್​, ಐಪಿಎಲ್​ನಲ್ಲಿ (IPL 2024) ಪಂದ್ಯವೊಂದರ ಒಟ್ಟು ಅತ್ಯಧಿಕ ಸ್ಕೋರ್ ಸೇರಿದಂತೆ ಹಲವು ದಾಖಲೆಗಳಿಗೆ ಕಾರಣವಾದರು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್​ ಹೆನ್ರಿಚ್ ಕ್ಲಾಸೆನ್​ 34 ಎಸೆತಗಳಲ್ಲಿ 80 ರನ್​ ಬಾರಿಸಿದ್ದರು. ಆದಾಗ್ಯೂ, ಎಲ್ಲಾ ಕ್ರಿಕೆಟ್ ಚಟುವಟಿಕೆಗಳ ನಡುವೆ, ಕ್ಲಾಸೆನ್ ಅವರ 14 ತಿಂಗಳ ಪುತ್ರಿ ಲಯಾ ಸ್ಟ್ಯಾಂಡ್​ನಲ್ಲಿ ತಂದೆಯವನ್ನು ಬೆಂಬಲಿಸುವ ಅಪರೂಪದ ಕ್ಷಣ ವೈರಲ್ ಆಗಿದೆ.

ಎಸ್ಆರ್​ಎಚ್​ನ ಬ್ಯಾಟರ್​ಗಳು ಆರು ಹೊಡೆತಗಳ ಉತ್ಸಾಹದಲ್ಲಿದ್ದಾಗ ಕ್ಲಾಸೆನ್ ಕೇವಲ 34 ಎಸೆತಗಳಲ್ಲಿ ನಾಲ್ಕು ಬೌಂಡರಿಗಳು ಮತ್ತು ಏಳು ಅತ್ಯುನ್ನತ ಸಿಕ್ಸರ್​ಗಳನ್ನು ಒಳಗೊಂಡಂತೆ 80* ರನ್ ಗಳಿಸಿದ್ದರು. ಆದಾಗ್ಯೂ, ದಕ್ಷಿಣ ಆಫ್ರಿಕಾದ ಆಟಗಾರನನ್ನು ಸ್ಥಳೀಯ ಅಭಿಮಾನಿಗಳು ಹುರಿದುಂಬಿಸುವ ನಡುವೆ ಅವರ ಮಗಳು ಎಸ್​ಆರ್​ಎಚ್​ ಬಾವುಟ ಬೀಸಿ ಅವರಿಗೆ ಬೆಂಬಲ ನೀಡಿದರು.

ಎಸ್​ಆರ್​​ಎಚ್​ ಅಪರೂಪದ ದಾಖಲೆ

ಸನ್​ರೈಸರ್ಸ್​ ಹೈದರಾಬಾದ್​ ತಂಡ ಐಪಿಎಲ್​ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದೆ. ಐಪಿಎಲ್​(IPL 2024) ಇತಿಹಾಸದಲ್ಲೇ ಅತ್ಯಧಿಕ ರನ್​ ಪೇರಿಸಿದ ಮೊದಲ ತಂಡ ಎನಿಸಿಕೊಂಡಿದೆ. ಈ ಮೂಲಕ ಆರ್​ಸಿಬಿ ಹೆಸರಿನಲ್ಲಿದ ದಾಖಲೆಯನ್ನು ಮುರಿದಿದೆ.

ಇದನ್ನೂ ಓದಿ : IPL 2024 : ಕೊಹ್ಲಿ- ಗಂಭೀರ್ ಮುಖಾಮುಖಿಯಲ್ಲಿ ವಿಜಯ ಯಾರಿಗೆ?

ಇಲ್ಲಿನ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ನಡೆಯುತ್ತಿರುವ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್​ ನಡೆಸಿ 20 ಓವರ್​ಗಳಲ್ಲಿ 3 ವಿಕೆಟ್​ಗೆ 277 ರನ್​ ಬಾರಿಸಿದೆ. ಈ ಮೂಲಕ ಆರ್​ಸಿಬಿ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದೆ. ಆರ್​ಸಿಬಿ 2013ರಲ್ಲಿ ಪುಣೆ ವಾರಿಯರ್ಸ್​ ವಿರುದ್ಧ 5 ವಿಕೆಟ್​ಗೆ 263 ರನ್​ ಬಾರಿಸಿತ್ತು. ಇದೀಗ ಈ ದಾಖಲೆಯನ್ನು ಹೈದರಾಬಾದ್​ 11 ವರ್ಷಗಳ ಬಳಿಕ ಮೀರಿ ನಿಂತಿದೆ.
10 ಓವರ್​ನಲ್ಲಿ ಗರಿಷ್ಠ ಮೊತ್ತ

ಹೈದರಾಬಾದ್​ ತಂಡ 10 ಓವರ್​ಗಳಲ್ಲಿ ಕೇವಲ 2 ವಿಕೆಟ್​ಗೆ 148 ರನ್​ ಬಾರಿಸುವ ಮೂಲಕ ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿಯೇ 10 ಓವರ್​ಗೆ ಅ್ಯಧಿಕ ಮೊತ್ತ ಗಳಿಸಿದ ಮೊದಲ ತಂಡ ಹೆಗ್ಗಳಿಕೆಗೆ ಪಾತ್ರವಾಯಿತು. ಇದುವರೆಗೂ ಈ ದಾಖಲೆ ಮುಂಬೈ ತಂಡದ ಪರವಾಗಿತ್ತು. ಮುಂಬೈ 2021 ರಲ್ಲಿ ಹೈದರಾಬಾದ್​ ವಿರುದ್ಧವೇ 131/3 ಬಾರಿಸಿತ್ತು. ಇದೀಗ ಹೈದರಾಬಾದ್​ ಈ ದಾಖಲೆಯನ್ನು ಮುಂಬೈ ವಿರುದ್ಧವೇ ಆಡಿ ಸೇಡು ತೀರಿಸಿಕೊಂಡಿದೆ.

ಅತಿ ಕಡಿಮೆ ಓವರ್​ನಲ್ಲಿ 100 ರನ್​​

7 ಓವರ್​ನಲ್ಲಿ 100 ರನ್​ ಗಡಿ ದಾಟುವ ಮೂಲಕ ಐಪಿಎಲ್​ ಇತಿಹಾಸದ ಅತಿ ಕಡಿಮೆ ಓವರ್​ನಲ್ಲಿ 100 ರನ್​ ಬಾರಿಸಿದ ತಂಡಗಳ ದಾಖಲೆಪಟ್ಟಿಯಲ್ಲಿ ಹೈದರಾಬಾದ್​ 4ನೇ ಸ್ಥಾನ ಪಡೆದುಕೊಂಡಿತು. ದಾಖಲೆ ಮುಂಬೈ ತಂಡದ ಹೆಸರಿನಲ್ಲಿದೆ. 2014ರಲ್ಲಿ ಪಂಜಾಬ್​ ವಿರುದ್ಧ ಮುಂಬೈ ಕೇವಲ 6 ಓವರ್​ನಲ್ಲಿ ಈ ಸಾಧನೆ ಮಾಡಿತ್ತು. ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಗಳಿಸಿದ ಮೊದಲ ತಂಡ ಎಂಬ ದಾಖಲೆ ಕೂಡ ಮುಂಬೈ ಪರವೇ ಇದೆ.

Continue Reading

ದೇಶ

Actor Govinda: ಶಿವಸೇನೆ ನಾಯಕನ ಜತೆ ನಟ ಗೋವಿಂದಾ ಚರ್ಚೆ; ಚುನಾವಣಾ ಕಣಕ್ಕೆ ಎಂಟ್ರಿ?

Actor Govinda: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಚರ್ಚಿಸಲು ನಟ ಗೋವಿಂದ ಅವರು ಶಿವಸೇನೆ (ಏಕನಾಥ್‌ ಶಿಂಧೆ ಬಣ) ನಾಯಕರೊಬ್ಬರ ಜತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Actor Govinda
Koo

ಮುಂಬೈ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ದಿನಗಳು ಬಾಕಿ ಇದ್ದು, ರಾಜಕೀಯ ಪಕ್ಷಗಳು ನಟ, ನಟಿಯರು, ಸಮಾಜ ಸೇವಕರು ಸೇರಿ ಹಲವರನ್ನು ಕಣಕ್ಕೆ ಇಳಿಸುತ್ತಿವೆ. ಇದರ ಬೆನ್ನಲ್ಲೇ, ಬಾಲಿವುಡ್‌ ನಟ ಗೋವಿಂದ (Actor Govinda) ಅವರು ಶಿವಸೇನೆ (ಏಕನಾಥ್‌ ಶಿಂಧೆ) (Shiv Sena) ನಾಯಕರೊಬ್ಬರನ್ನು ಭೇಟಿಯಾಗಿದ್ದು, ಮುಂಬೈ ವಾಯವ್ಯ ಕ್ಷೇತ್ರದಿಂದ (North West Mumbai) ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾರ್ಚ್‌ ತಿಂಗಳ ಆರಂಭದಲ್ಲಿ ನಟ ಗೋವಿಂದ ಅವರು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರನ್ನು ಭೇಟಿಯಾಗಿದ್ದರು. ಇದಾದ ಬಳಿಕವೇ, ನಟ ಗೋವಿಂದ ಅವರು ಕೂಡ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಮತ್ತೆ ಶಿವಸೇನೆ ನಾಯಕರೊಬ್ಬರನ್ನು ಗೋವಿಂದ ಅವರು ಭೇಟಿಯಾಗಿದ್ದು, ವದಂತಿಗಳ ತೀವ್ರತೆ ಇನ್ನೂ ಜಾಸ್ತಿಯಾಗಿದೆ. ಆದಾಗ್ಯೂ, ಸ್ಪರ್ಧೆ ಕುರಿತು ಗೋವಿಂದ ಅವರಾಗಲಿ, ಶಿವಸೇನೆಯಾಗಿ ಇದುವರೆಗೆ ಯಾವುದೇ ಘೋಷಣೆ ಮಾಡಿಲ್ಲ.

ಮೂಲಗಳ ಪ್ರಕಾರ, ನಟ ಗೋವಿಂದ ಅವರು ಜುಹುವಿನಲ್ಲಿ ಶಿವಸೇನೆ ನಾಯಕ ಕೃಷ್ಣ ಹೆಗಡೆ ಅವರನ್ನು ಭೇಟಿಯಾಗಿ, ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Rekha Patra: ಸಂದೇಶ್‌ಖಾಲಿ ಸಂತ್ರಸ್ತೆಗೆ ಟಿಕೆಟ್‌ ನೀಡಿದ ಬಿಜೆಪಿ; ಯಾರಿವರು ರೇಖಾ ಪಾತ್ರಾ?

ನಟ ಗೋವಿಂದಗೆ ಇದು 2ನೇ ಇನ್ನಿಂಗ್ಸ್‌

ಹೀರೋ ನಂಬರ್‌ 1 ಖ್ಯಾತಿಯ ನಟ ಗೋವಿಂದ ಅವರು ಮತ್ತೆ ಚುನಾವಣಾ ರಾಜಕೀಯಕ್ಕೆ ಇಳಿದರೆ, ಇದು ಅವರಿಗೆ ಎರಡನೇ ಇನ್ನಿಂಗ್ಸ್‌ ಆಗಲಿದೆ. ಗೋವಿಂದ ಅವರು 2004ರಲ್ಲಿ ಮುಂಬೈ ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಅಷ್ಟೇ ಅಲ್ಲ, ಬಿಜೆಪಿಯ ರಾಮ್‌ ನಾಯಕ್‌ ಅವರನ್ನು ಗೋವಿಂದ ಸೋಲಿಸಿದ್ದರು. ಆದರೆ, ಕಾರಣಾಂತರಗಳಿಂದ ಗೋವಿಂದ ಅವರು ಬಳಿಕ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಈಗ ಶಿವಸೇನೆ ಮೂಲಕ ಅವರು ಮತ್ತೆ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂದೇ ಹೇಳಲಾಗುತ್ತಿದೆ.

ನಸೀಬ್‌, ಹೀರೋ ನಂಬರ್‌ 1, ಪಾರ್ಟ್‌ನರ್‌, ರಾಜು ಬಾಬು, ಕೂಲಿ ನಂಬರ್‌ 1, ಧುಲೆ ರಾಜ ಸೇರಿ ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Prithviraj Sukumaran
ಸಿನಿಮಾ8 mins ago

Prithviraj Sukumaran: ಪೃಥ್ವಿರಾಜ್ ಸುಕುಮಾರನ್‌ ಅಭಿನಯದ ‘ಆಡುಜೀವಿತಂ’ ಚಿತ್ರಕ್ಕೆ ಪ್ರೇಕ್ಷಕರು ಫಿದಾ!

Lok Sabha Election 2024 DK Shivakumar Suresh assetsworth Rs 598 crore and 259.19 crore Increase in 5 years
Lok Sabha Election 202413 mins ago

Lok Sabha Election 2024: ಡಿ.ಕೆ. ಸುರೇಶ್‌ ಆಸ್ತಿ ಮೌಲ್ಯ 598 ಕೋಟಿ ರೂ.; 5 ವರ್ಷದಲ್ಲಿ 259.19 ಕೋಟಿ ರೂ. ಹೆಚ್ಚಳ!

Summer Fashion
ಫ್ಯಾಷನ್15 mins ago

Summer Fashion: ಸಮ್ಮರ್‌ ಸೀಸನ್‌ನಲ್ಲಿ ಸಿಂಪಲ್‌ ಸ್ಲಿವ್‌ಲೆಸ್‌ ಗೌನ್‌ಗಳ ಹಂಗಾಮ!

job alert
ಉದ್ಯೋಗ16 mins ago

Job Alert: ಗುಡ್‌ನ್ಯೂಸ್‌; 93 ಬ್ಯಾಂಕ್‌ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ

Aditi Rao Hydari engaged to Siddharth
ಟಾಲಿವುಡ್23 mins ago

Aditi Rao Hydari: ಎಂಗೇಜ್‌ ಆಗಿರುವ ಫೋಟೊ ಶೇರ್‌ ಮಾಡಿದ ಅದಿತಿ ರಾವ್ ಹೈದರಿ!

Henrich Klasen- IPL
ಪ್ರಮುಖ ಸುದ್ದಿ25 mins ago

IPL 2024 : ಅಪ್ಪನ ಸಿಕ್ಸರ್​​ಗೆ ಚಿಯರ್ಸ್ ಹೇಳಿದ ಕ್ಲಾಸೆನ್ ಪುತ್ರಿ, ಇಲ್ಲಿದೆ ವಿಡಿಯೊ

Actor Govinda
ದೇಶ28 mins ago

Actor Govinda: ಶಿವಸೇನೆ ನಾಯಕನ ಜತೆ ನಟ ಗೋವಿಂದಾ ಚರ್ಚೆ; ಚುನಾವಣಾ ಕಣಕ್ಕೆ ಎಂಟ್ರಿ?

SSLC Students Fighting
ಬೆಂಗಳೂರು34 mins ago

SSLC Students Fight: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಹೊಡಿಬಡಿ; ಮೂವರಿಗೆ ಚಾಕು ಇರಿತ

RCB team
ಕ್ರೀಡೆ55 mins ago

IPL 2024 : ಕೊಹ್ಲಿ- ಗಂಭೀರ್ ಮುಖಾಮುಖಿಯಲ್ಲಿ ವಿಜಯ ಯಾರಿಗೆ?

toll hike
ಬೆಂಗಳೂರು1 hour ago

Toll Hike: ಮತ್ತೆ ಟೋಲ್‌ ಬರೆ; ಬೆಂಗಳೂರು-ಮೈಸೂರು ಓಡಾಟ ಇನ್ನಷ್ಟು ದುಬಾರಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20243 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20245 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ12 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌