ʼಆಕಾಸʼಕ್ಕೆ ಮೂರೇ ಗೇಣು! ಕೈಗೆಟಕುವ ದರದಲ್ಲಿ ವಿಮಾನ ಪ್ರಯಾಣ, ಭಾನುವಾರ ಶುರು! - Vistara News

ಪ್ರಮುಖ ಸುದ್ದಿ

ʼಆಕಾಸʼಕ್ಕೆ ಮೂರೇ ಗೇಣು! ಕೈಗೆಟಕುವ ದರದಲ್ಲಿ ವಿಮಾನ ಪ್ರಯಾಣ, ಭಾನುವಾರ ಶುರು!

ಭಾರತದ ವಿಮಾನ ರಂಗದಲ್ಲಿ ಹೊಸ ಭರವಸೆಗಳೊಂದಿಗೆ ಅಗ್ಗದ ದರದಲ್ಲಿ ಜನ ಸಾಮಾನ್ಯರಿಗೆ ವಿಮಾನ ಸೇವೆ ನೀಡಲು ಆಕಾಸ ಏರ್‌, ಆಗಸ್ಟ್‌ 7ರಂದು ತನ್ನ ಚೊಚ್ಚಲ ಹಾರಾಟವನ್ನು ಮುಂಬಯಿ-ಅಹಮದಾಬಾದ್‌ ನಡುವೆ ಆರಂಭಿಸುತ್ತಿದೆ.

VISTARANEWS.COM


on

akasa air
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತದ ಆಕಾಶದಲ್ಲಿ ಹೊಚ್ಚ ಹೊಸ ಏರ್‌ಲೈನ್‌ ಆಕಾಸ ಏರ್ ತನ್ನ ಹಾರಾಟವನ್ನು ‌ ಆಗಸ್ಟ್‌ ೭ರಂದು ಆರಂಭಿಸುತ್ತಿದ್ದು, ಪ್ರಯಾಣಿಕರನ್ನು ಆಕರ್ಷಿಸಲು ಸಜ್ಜಾಗಿದೆ. ಖ್ಯಾತ ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲಾ ಅವರ ಕನಸಿನ ಕೂಸಾಗಿರುವ ಆಕಾಸ ಏರ್‌ಲೈನ್‌, ಭಾರಿ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ! ಹಾಗಾದರೆ ಆಕಾಸ ಏರ್‌ಲೈನ್‌ ಹುಟ್ಟುಹಾಕಿರುವ ನಿರೀಕ್ಷೆಗಳೇನು? ಇದರಿಂದ ಭಾರತದ ವಿಮಾನಯಾನ ರಂಗದಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿವೆ? ಜನ ಸಾಮಾನ್ಯರಿಗೂ ವಿಮಾನದಲ್ಲಿ ಸುಲಭವಾಗಿ ಪ್ರಯಾಣಿಸುವಂತಾಗಲು ಆಕಾಸ ಏರ್‌ ನೆರವಾಗಲಿದೆಯೇ? ಏರ್‌ಟಿಕೆಟ್‌ ವೆಚ್ಚ ಕಡಿಮೆಯಾಗಲಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ವಿಸ್ತಾರ ನ್ಯೂಸ್‌ನ ಬಿಸಿನೆಸ್‌ & ಎಕಾನಮಿ ವಿಭಾಗದ ಕನ್ಸಲ್ಟಿಂಗ್‌ ಎಡಿಟರ್‌ ಆಗಿರುವ ಗಿರಿ ಪ್ರಕಾಶ್‌ ಅವರು ವಿವರಿಸಿದ್ದಾರೆ.

ಆಕಾಸ ಏರ್‌ನ ಮೊದಲ ವಿಮಾನ ಹಾರಾಟ ಆರಂಭ ಆ.೭ರಿಂದ ಶುರುವಾಗುತ್ತಿದೆ. ಹಾಗಾದರೆ ಭಾರತದ ವಿಮಾನಯಾನ ರಂಗದಲ್ಲಿ ಏನಾದರೂ ಹೊಸ ಬದಲಾವಣೆಯನ್ನು ನಿರೀಕ್ಷಿಸಬಹುದೇ?

ಬಹಳ ಬದಲಾವಣೆಯನ್ನು ನಿರೀಕ್ಷಿಸಬಹುದು. ಮೊದಲನೆಯದಾಗಿ ಪ್ರಯಾಣಿಕರಿಗೆ ಹೊಸ ಆಯ್ಕೆ ಸಿಗುತ್ತದೆ. ಏರ್‌ಲೈನ್‌ಗಳ ಸಂಖ್ಯೆ ಹೆಚ್ಚಾದರೆ ಏರ್‌ ಟಿಕೆಟ್‌ ದರ ಇಳಿಕೆಯಾಗಬಹುದು. ಆಕಾಸ ಏರ್‌ ಅಗ್ಗದ ವೆಚ್ಚದ ಏರ್‌ಲೈನ್‌ ವಿಭಾಗದಲ್ಲಿ ಇರುವುದರಿಂದ ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಟಿಕೆಟ್‌ ಸಿಗುವುದರಿಂದ ದೊಡ್ಡಮಟ್ಟಿನ ಅನುಕೂಲವಾಗಲಿದೆ. ಎರಡನೆಯದಾಗಿ ವಿಮಾನಯಾನದ ಸಂಪರ್ಕ ಹೆಚ್ಚುತ್ತದೆ. ಏರ್‌ಲೈನ್‌ಗಳ ನಡುವೆ ಪೈಪೋಟಿ ಉಂಟಾಗುತ್ತದೆ. ಇದು ಇಂಡಸ್ಟ್ರಿಗೂ, ಬಳಕೆದಾರರಿಗೂ ಅನುಕೂಲ.

ಜನ ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ವಿಮಾನಯಾನದ ಕನಸು ನನಸಾಗಲಿದೆಯೇ?

ಹೌದು. ಆಕಾಸ ಏರ್‌ಲೈನ್‌ ಭಾನುವಾರ ಆರಂಭವಾಗುತ್ತಿದೆ. ಬಳಿಕ ಜೆಟ್‌ ಏರ್‌ವೇಸ್‌ ಪುನರಾರಂಭವಾಗುತ್ತದೆ. ಇನ್ನೂ ಒಂದೆರಡು ಏರ್‌ಲೈನ್‌ಗಳು ಅಸ್ತಿತ್ವಕ್ಕೆ ಬರಲಿದೆ. ಇದು ಬಹಳ ಒಳ್ಳೆಯದು. ಮೂಲತಃ ವಿಮಾನಗಳಲ್ಲಿ ಬಳಕೆಯಾಗುವ ಎಟಿಎಫ್‌ ( Aviation Turbine Fuel) ಇಂಧನದ ದರ ಹೆಚ್ಚಳವಾಗಿದೆ. ಎಟಿಎಫ್‌ ಜಿಎಸ್‌ಟಿ ವ್ಯಾಪ್ತಿಗೆ ಸದ್ಯ ಬಂದಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಾಗಿದೆ. ರಾಜ್ಯ ಸರ್ಕಾರಗಳು ಎಟಿಎಫ್‌ ಮೇಲೆ ಅಬಕಾರಿ ಸುಂಕವನ್ನು ವಿಧಿಸುತ್ತವೆ. ಹೀಗಾಗಿ ಏರ್‌ ಟಿಕೆಟ್‌ ವೆಚ್ಚ ದುಬಾರಿಯಾಗಿದೆ. ಅದರ ಬದಲಿಗೆ ಎಟಿಎಫ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ, ಅಥವಾ ರಾಜ್ಯ ಸರ್ಕಾರಗಳೇ ಎಟಿಎಫ್‌ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದರೆ, ಏರ್‌ಲೈನ್‌ಗಳಿಗೆ ಇಂಧನ ವೆಚ್ಚ ಕಡಿಮೆಯಾಗಲಿದೆ. ಹಾಗೂ ಅದನ್ನು ಗ್ರಾಹಕರಿಗೆ ವರ್ಗಾಯಿಸಬಹುದು. ಆಗ ಟಿಕೆಟ್‌ ದರ ಕಡಿಮೆಯಾಗುತ್ತದೆ. ಎರಡನೆಯದಾಗಿ ಹಲವು ಏರ್‌ಪೋರ್ಟ್‌ಗಳು ಖಾಸಗೀಕರಣವಾಗಿವೆ. ದಿಲ್ಲಿ, ಬೆಂಗಳೂರು, ಮುಂಬಯಿ, ಅಲ್ಲಿ ಏರ್‌ಲೈನ್‌ಗಳಿಗೆ ತಗಲುವ ವೆಚ್ಚ ಹೆಚ್ಚುತ್ತದೆ. ವಿಮಾನದ ಲ್ಯಾಂಡಿಂಗ್‌, ಟೇಕಾಫ್‌ಗೆ ತಗಲುವ ಖರ್ಚಿನಲ್ಲಿ ಹೆಚ್ಚಳವಾಗಿದೆ. ಆದರೆ ಇನ್ನೂ ಒಂದೆರಡು ವರ್ಷಗಳಲ್ಲಿ ಜನರಿಗೆ ರೈಲ್ವೆ ಟಿಕೆಟ್‌ನಂತೆ ಏರ್ ಟಿಕೆಟ್‌ ಕಡಿಮೆ ಬೆಲೆಗೆ ಸಿಗುವ ವಿಶ್ವಾಸ ಇದೆ.

ರಾಕೇಶ್‌ ಜುಂಜುನ್‌ವಾಲಾ ಷೇರು ಮಾರುಕಟ್ಟೆಯ ದಿಗ್ಗಜರು. ಏರ್‌ಲೈನ್‌ ಇಂಡಸ್ಟ್ರಿಯಲ್ಲಿ ಅವರಿಂದ ಏನನ್ನು ನಿರೀಕ್ಷಿಸಬಹುದು?

ಆಕಾಸ ಏರ್‌ನಲ್ಲಿ ರಾಕೇಶ್‌ ಜುಂಜುನ್‌ವಾಲಾ ೪೦% ಷೇರುಗಳನ್ನು ಹೊಂದಿದ್ದಾರೆ. ೨೫ ಮಿಲಿಯನ್‌ ಡಾಲರ್‌ ಹೂಡಿಕೆ ಮಾಡಿದ್ದಾರೆ. (ಅಂದಾಜು ೧೯೭ ಕೋಟಿ ರೂ.) ಏರ್‌ಲೈನ್‌ ಕ್ಷೇತ್ರದಲ್ಲಿ ಸುದೀರ್ಘ ವೃತ್ತಿಪರ ಅನುಭವ ಇರುವವರನ್ನು ಆಕಾಸ ಏರ್‌ಗೆ ಕರೆ ತಂದಿದ್ದಾರೆ. ವಿನಯ್‌ ದುಬೆ ಅವರು ಆಕಾಸ್‌ ಏರ್‌ನ ಸಹ ಸಂಸ್ಥಾಪಕ ಮತ್ತು ಸಿಇಒ. ಅವರು ಈ ಹಿಂದೆ ಜೆಟ್‌ ಏರ್‌ವೇಸ್‌ನ ಸಿಇಒ ಆಗಿದ್ದರು. ಆದಿತ್ಯ ಘೋಷ್‌ ಹಲವಾರು ವರ್ಷ ಇಂಡಿಗೊದ ಸಿಇಒ ಆಗಿದ್ದರು. ಇಂಡಿಗೊ ಏರ್‌ಲೈನ್‌ ಈಗ ಮಾರುಕಟ್ಟೆಯಲ್ಲಿ ೫೮% ಪಾಲನ್ನು ಗಳಿಸಿರುವುದರಲ್ಲಿ ಅವರ ಪಾತ್ರ ದೊಡ್ಡದು. ಅವರು ಈಗ ಆಕಾಸ ಏರ್‌ಲೈನ್‌ಗೆ ಸೇರ್ಪಡೆಯಾಗಿದ್ದಾರೆ. ಆಕಾಸ ಏರ್‌ಲೈನ್‌ ಆಡಳಿತ ಮಂಡಳಿಯಲ್ಲಿ ರಾಕೇಶ್‌ ಜುಂಜುನ್‌ವಾಲಾ ಅವರನ್ನು ಪ್ರತಿನಿಧಿಸಲಿದ್ದಾರೆ. ಅದೇ ರೀತಿ ಪ್ರವೀಣ್‌ ನಾಯರ್‌ ಕೂಡ ಸಹ ಸಂಸ್ಥಾಪಕರು. ರಾಕೇಶ್‌ ಜುಂಜುನ್‌ವಾಲಾ ತಾವಾಗಿಯೇ ಆಕಾಸ ಏರ್‌ಲೈನ್‌ನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ವೃತ್ತಿಪರರ ಮೂಲಕ ನಡೆಸುತ್ತಾರೆ. ಅದು ಏರ್‌ಲೈನ್‌ಗೂ ಒಳ್ಳೆಯದು. ಸಾಮಾನ್ಯವಾಗಿ ಬೇರೆ ಏರ್‌ಲೈನ್‌ಗಳಲ್ಲಿ ಸ್ಥಾಪಕರೇ ನಡೆಸುತ್ತಾರೆ. ಅವರಿಗೆ ಏರ್‌ಲೈನ್‌ ನಡೆಸಿ ಅನುಭವ ಇರಲೂಬಹುದು, ಇಲ್ಲದೆಯೂ ಇರಬಹುದು. ಉದಾಹರಣೆಗೆ ವಿಜಯ್‌ ಮಲ್ಯ ಅವರಿಗೆ ಲಿಕ್ಕರ್‌ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದವರು. ಕಿಂಗ್‌ಫಿಶರ್‌ ಚೇರ್ಮನ್‌ ಆಗಿದ್ದರು. ಆದರೆ ಲಿಕ್ಕರ್‌ ಬಿಸಿನೆಸ್‌ ಅನ್ನು ಏರ್‌ಲೈನ್‌ ಬಿಸಿನೆಸ್‌ಗೆ ಹೋಲಿಸಲಾಗದು. ಮದ್ಯದ ಉದ್ದಿಮೆಯಲ್ಲಿ ೪೦ % ಲಾಭ ಸಿಗುತ್ತದೆ. ಆದರೆ ಏರ್‌ಲೈನ್‌ ಇಂಡಸ್ಟ್ರಿಯಲ್ಲಿ ೧೦ ವರ್ಷ ಆದ ಮೇಲೆ ೨% ಲಾಭ ಸಿಗುತ್ತದೆ. ಕಿಂಗ್‌ಫಿಶರ್‌ ವಿಫಲವಾಗಲು ಇದೂ ಒಂದು ಕಾರಣ. ಆಕಾಸ ಏರ್‌ಲೈನ್‌ ನುರಿತ ವೃತ್ತಿಪರರಿಂದ ನಡೆಯಲಿರುವುದರಿಂದ ಸಫಲವಾಗುವ ನಿರೀಕ್ಷೆ ಇದೆ.

ವಿಮಾನಯಾನದ ಸುರಕ್ಷತೆ ಕುರಿತ ಸ್ಥಿತಿ ಗತಿ ಹೇಗಿದೆ?

ಬೋಯಿಂಗ್‌ನ ಎರಡು ೭೩೭ ಮ್ಯಾಕ್ಸ್‌ ವಿಮಾನಗಳು ೨೦೧೮-೨೦೨೦ರ ಅವಧಿಯಲ್ಲಿ ಭೀಕರ ಅಪಘಾತಕ್ಕೀಡಾಯಿತು. ಬೋಯಿಂಗ್‌ ಸಂಸ್ಥೆ ವಿಮಾನದ ಉತ್ಪಾದನೆಯನ್ನೇ ಸ್ಥಗಿತಗೊಳಿಸಿತ್ತು. ಈಗ ಆಕಾಸ ಏರ್‌, ೭೨ ಬೋಯಿಂಗ್‌ ೭೩೭ ಮ್ಯಾಕ್ಸ್‌ ೮ ವಿಮಾನಗಳನ್ನು ಖರೀದಿಸುತ್ತಿದೆ. ಇದರ ಬೆಲೆ ೯ ಶತಕೋಟಿ ಡಾಲರ್‌ (ಅಂದಾಜು ೭೧,೧೦೦ ಕೋಟಿ ರೂ.). ಬಹಳ ಧೈರ್ಯ ಮಾಡಿ ಆಕಾಸ ಏರ್‌ ಈ ಮೆಗಾ ಆರ್ಡರ್‌ ಅನ್ನು ಮಾಡಿದೆ. ಮೊದಲ ಬಾರಿಗೆ ಬಾಡಿಗೆ ವಿಮಾನಗಳ ಬದಲಿಗೆ ಹೊಸ ವಿಮಾನಗಳನ್ನೇ ರಾಕೇಶ್‌ ಜುಂಜುನ್‌ವಾಲಾ ಖರೀದಿಸಿದ್ದಾರೆ. ಸಾಮಾನ್ಯವಾಗಿ ಹೊಸ ಏರ್‌ಲೈನ್‌ಗಳು ೪-೫ ವರ್ಷ ಹಳೆಯ ವಿಮಾನಗಳನ್ನು ಲೀಸ್‌ಗೆ ಪಡೆದು ಹಾರಾಟ ಆರಂಭಿಸುತ್ತಾರೆ. ಆದರೆ ಜುಂಜುನ್‌ವಾಲಾ ಹೊಸ ವಿಮಾನಗಳನ್ನೇ ಖರೀದಿಸುತ್ತಿದ್ದಾರೆ. ಮಾತ್ರವಲ್ಲದೆ ಬೋಯಿಂಗ್‌ ೭೩೭ ಮ್ಯಾಕ್ಸ್‌ನಂಥ ೧೮೯ ಪ್ರಯಾಣಿಕರನ್ನು ಕರೆದೊಯ್ಯಬಲ್ಲ ವಿಮಾನವನ್ನೇ ಖರೀದಿಸುತ್ತಿದ್ದಾರೆ. ಇದು ದೊಡ್ಡ ಸಾಹಸವೇ ಸರಿ. ಭಾರತದಲ್ಲಿ ಏರ್‌ಲೈನ್‌ ಯಶಸ್ವಿಯಾಗಬೇಕಾದ ಅಗತ್ಯ ಇದೆ.

ಆಕಾಸ ಏರ್‌ಗೆ ಮುಂದಿರುವ ಸವಾಲುಗಳೇನು?

ಆಕಾಸ ಏರ್‌ಗೆ ಸಹಜವಾಗಿ ದೊಡ್ಡ ಸವಾಲು ಇದೆ. ಇಂಡಿಗೊ ಏರ್‌ಲೈನ್‌ ಮಾರುಕಟ್ಟೆ ಪಾಲು ೫೮% ಇದೆ. ಪ್ರಯಾಣಿಕರಿಗೆ ಹೊಸ ವಿಮಾನಯಾನದ ಅನುಭವ ನೀಡುವುದಾಗಿ ಹೇಳಿದ್ದಾರೆ. ಅದು ಹೇಗೆ ಎಂಬುದು ಗೊತ್ತಿಲ್ಲ. ೧.೯ ಕೋಟಿ ಪ್ರಯಾಣಿಕರು ಭಾರತದಲ್ಲಿ ವಿಮಾನಗಳನ್ನು ಬಳಸುತ್ತಿದ್ದಾರೆ. ಅದು ಹೆಚ್ಚಿದರೆ ಆಕಾಸ ಏರ್‌ಗೆ ಅನುಕೂಲವಾಗಲಿದೆ. ಈಗ ಹಲವು ಮಂದಿ ಏರ್‌ ಟಿಕೆಟ್‌ ದರ ದುಬಾರಿಯಾದ್ದರಿಂದ ಪ್ರಯಾಣ ಮಾಡದಿರಬಹುದು. ಆಕಾಸ್‌ ಏರ್‌ ಎರಡು ಮಹತ್ವದ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿದೆ. ಅವೆಂದರೆ ಮುಂಬಯಿ-ಅಹಮದಾಬಾದ್‌ ಮತ್ತು ಬೆಂಗಳೂರು-ಕೊಚ್ಚಿನ್‌ ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸುತ್ತಿದ್ದಾರೆ. ಆದರೆ ಈ ಮಾರ್ಗದಲ್ಲಿ ಪೈಪೋಟಿಯೂ ಇದೆ.

ಬೆಂಗಳೂರಿಗರಿಗೆ ಆಕಾಸ ಏರ್‌ಲೈನ್‌ನಿಂದ ಪ್ರಯೋಜನ ಏನು?

ಆಕಾಸ ಏರ್‌ ಬೆಂಗಳೂರು-ಕೊಚ್ಚಿನ್‌ ನಡುವೆ ವಿಮಾನ ಹಾರಾಟ ಆರಂಭಿಸುತ್ತಿದೆ. ಮುಂಬಯಿ-ಅಹಮದಾಬಾದ್‌ ಬಳಿಕ ಎರಡನೇ ಮಾರ್ಗವಾಗಿ ಬೆಂಗಳೂರು-ಕೊಚ್ಚಿನ್‌ ಅನ್ನು ಆಯ್ಕೆ ಮಾಡಿರುವುದು ಗಮನಾರ್ಹ. ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಮಾರ್ಗಗಳಲ್ಲಿ ಇದೂ ಒಂದು. ಕಿಂಗ್‌ಫಿಶರ್‌ ಆರಂಭವಾದಾಗ ಮೊದಲ ವಿಮಾನ ಮುಂಬಯಿ-ಬೆಂಗಳೂರು ನಡುವೆ ಹಾರಿತ್ತು. ಬೆಂಗಳೂರಿಗೆ ಆಕಾಸ ಏರ್‌ ಭಾರಿ ಮಹತ್ವ ನೀಡಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ಟರ್ಮಿನಲ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್‌ನಲ್ಲಿ ಉದ್ಘಾಟಿಸಲಿದ್ದಾರೆ. ದಕ್ಷಿಣ ಏಷ್ಯಾದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಏರ್‌ಪೋರ್ಟ್‌ಗಳಲ್ಲಿ ಇದೂ ಒಂದಾಗಿದೆ. ಸ್ಪೈಸ್‌ ಜೆಟ್‌, ಏರ್‌ ವಿಸ್ತಾರ, ಗೋ ಫಸ್ಟ್, ಇಂಡಿಗೊ, ಏರ್‌ ಏಷ್ಯಾ, ಏರ್‌ ಇಂಡಿಯಾ, ಮುಂಬರಲಿರುವ ಆಕಾಸ ಏರ್‌ ಸೇರಿದಂತೆ ಏಳೆಂಟು ಏರ್‌ಲೈನ್‌ಗಳಿಂದ ಭಾರತದ ವೈಮಾನಿಕ ರಂಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಭವಿಷ್ಯದಲ್ಲಿ ನಿರೀಕ್ಷಿಸಬಹುದು.

ಆಕಾಸ ಏರ್‌ ಹಾರಾಟ ಯಾವಾಗ? ಎಲ್ಲಿಂದ ಎಲ್ಲಿಗೆ?

  • ಆಕಾಸ ಏರ್‌ನ ಮೊದಲ ವಿಮಾನ ಹಾರಾಟ ಆಗಸ್ಟ್‌ ೭ರಂದು ಮುಂಬಯಿನಿಂದ ಅಹಮದಾಬಾದ್‌ಗೆ.
  • ಆಗಸ್ಟ್‌ ೧೩ರಿಂದ ಬೆಂಗಳೂರಿನಿಂದ ಕೊಚ್ಚಿನ್‌ಗೆ ವಿಮಾನ ಹಾರಾಟ.
  • ಆಗಸ್ಟ್‌ ೨೩ರಿಂದ ಬೆಂಗಳೂರು-ಅಹಮದಾಬಾದ್‌ಗೆ ಹಾರಾಟ.
  • ಆಗಸ್ಟ್‌ ೩೦ರಿಂದ ಬೆಂಗಳೂರು-ಮುಂಬಯಿಗೆ ಹಾರಾಟ
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Team India Srilanka Tour : ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಸೂರ್ಯಕುಮಾರ್​ಗೆ ಟಿ20 ನಾಯಕತ್ವ

Team India Srilanka Tour : ಮುಂಬರುವ ಪ್ರವಾಸವು ನೂತನ ಕೋಚ್​ ಗೌತಮ್ ಗಂಭೀರ್ ಅವರಿಗೆ ಮೊದಲ ಸವಾಲಾಗಿದೆ. ಈ ಸರಣಿಯೊಂದಿಗೆ ತಮ್ಮ ತರಬೇತಿಯನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ಟಿ 20 ತಂಡಕ್ಕೆ ಶುಭ್​ಮನ್ ಗಿಲ್ ಉಪನಾಯಕರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಕೂಡ ಸರಣಿಗೆ ಲಭ್ಯರಾಗಿದ್ದಾರೆ. ವಾಷಿಂಗ್ಟನ್ ಸುಂದರ್​, ಖಲೀಲ್​ ಅಹಮದ್​ ಅವಕಾಶ ಪಡೆದಿದ್ದಾರೆ. ರಿಷಭ್ ಪಂತ್ ಜತೆ ಸಂಜು ಸ್ಯಾಮ್ಸನ್ ವಿಕೆಟ್​ ಕೀಪರ್ ಆಗಿ ಅವಕಾಶ ಪಡೆದಿದ್ದಾರೆ.

VISTARANEWS.COM


on

Team India Srilanka Tour
Koo

ಬೆಂಗಳೂರು: ಜುಲೈ 27ರಿಂದ ಆರಂಭವಾಗಲಿರುವ ಶ್ರೀಲಂಕಾ ಪ್ರವಾಸಕ್ಕೆ (Team India Srilanka Tour) ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಕಟಿಸಿದೆ. ಈ ಪ್ರವಾಸವು ಮೂರು ಪಂದ್ಯಗಳ ಟಿ 20 ಐ ಸರಣಿಯನ್ನು ಒಳಗೊಂಡಿರುತ್ತದೆ ಮತ್ತು ನಂತರ ಮೂರು ಪಂದ್ಯಗಳ ಏಕದಿನ ಸರಣಿಯೂ ಆಯೋಜನೆಗೊಂಡಿದೆ. ಟಿ20 ತಂಡಕ್ಕೆ ಸೂರ್ಯಕುಮಾರ್​ ಯಾದವ್​​ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆಯ್ಕೆ ಸಮಿತಿ ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್​ಗೆ ಪಟ್ಟಕಟ್ಟಿದ್ದಾರೆ. ಇದೇ ವೇಳೆ ಏಕ ದಿನ ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗಿ ಮುಂದುವರಿಸಿದ್ದಾರೆ.

ಮುಂಬರುವ ಪ್ರವಾಸವು ನೂತನ ಕೋಚ್​ ಗೌತಮ್ ಗಂಭೀರ್ ಅವರಿಗೆ ಮೊದಲ ಸವಾಲಾಗಿದೆ. ಈ ಸರಣಿಯೊಂದಿಗೆ ತಮ್ಮ ತರಬೇತಿಯನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ಟಿ 20 ತಂಡಕ್ಕೆ ಶುಭ್​ಮನ್ ಗಿಲ್ ಉಪನಾಯಕರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಕೂಡ ಸರಣಿಗೆ ಲಭ್ಯರಾಗಿದ್ದಾರೆ. ವಾಷಿಂಗ್ಟನ್ ಸುಂದರ್​, ಖಲೀಲ್​ ಅಹಮದ್​ ಅವಕಾಶ ಪಡೆದಿದ್ದಾರೆ. ರಿಷಭ್ ಪಂತ್ ಜತೆ ಸಂಜು ಸ್ಯಾಮ್ಸನ್ ವಿಕೆಟ್​ ಕೀಪರ್ ಆಗಿ ಅವಕಾಶ ಪಡೆದಿದ್ದಾರೆ.

ಏಕ ದಿನ ತಂಡಕ್ಕೆ ವಿರಾಟ್ ಕೊಹ್ಲಿ ಮರಳಿದ್ದಾರೆ. ಕೆ. ಎಲ್ ರಾಹುಲ್ ಇಲ್ಲಿ ವಿಕೆಟ್ ಕೀಪರ್ ಕೋಟಾದಲ್ಲಿ ಅವಕಾಶ ಪಡೆದಿದ್ದಾರೆ. ವಾಷಿಂಗ್ಟನ್ ಸುಂದರ್​, ಖಲೀಲ್ ಅಹಮದ್​​ , ಹರ್ಷಿತ್​ ರಾಣಾ ಬೌಲಿಂಗ್​​ನಲ್ಲಿ ಅವಕಾಶ ಪಡೆದಿದ್ದಾರೆ. ರಿಯಾನ್ ಪರಾಗ್​ ಏಕ ದಿನ ಮಾದರಿಯಲ್ಲಿ ತಂಡ ಸೇರಿದ್ದಾರೆ. ಎರಡೂ ತಂಡಗಳಿಗೆ ಜಸ್​ಪ್ರಿತ್ ಬುಮ್ರಾ ಅಲಭ್ಯರಾಗಿದ್ದಾರೆ.

ಇದನ್ನೂ ಓದಿ: International Cricket Council: ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್ ನಿಂದ ಐಸಿಸಿಗೆ 167 ಕೋಟಿ ರೂ. ನಷ್ಟ

ತಂಡ ಈ ಕೆಳಗಿನಂತಿದೆ

ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷ್ದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಶಮಿ. ಸಿರಾಜ್ .

ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ. ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷ್ದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

ಸರಣಿಯ ವೇಳಾಪಟ್ಟಿ

  • ಮೊದಲ ಟಿ20 ಪಂದ್ಯ: ಜುಲೈ 27, 2024 – ಸಂಜೆ 7 ಗಂಟೆಗೆ – ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
  • 2ನೇ ಟಿ20 ಪಂದ್ಯ- ಜುಲೈ 28, 2024 – ಸಂಜೆ 7 ಗಂಟೆಗೆ – ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
  • 3ನೇ ಟಿ20 ಪಂದ್ಯ- ಜುಲೈ 30, 2024 – ಸಂಜೆ 7 ಗಂಟೆಗೆ – ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
  • ಮೊದಲ ಏಕದಿನ ಪಂದ್ಯ- ಆಗಸ್ಟ್ 2, 2024 – ಮಧ್ಯಾಹ್ನ 2:30 – ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಕೊಲಂಬೊ
  • 2ನೇ ಏಕದಿನ ಪಂದ್ಯ- ಆಗಸ್ಟ್ 4, 2024 – ಮಧ್ಯಾಹ್ನ 2:30 – ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಕೊಲಂಬೊ
  • 3ನೇ ಏಕದಿನ ಪಂದ್ಯ- ಆಗಸ್ಟ್ 7, 2024 – ಮಧ್ಯಾಹ್ನ 2:30 – ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಕೊಲಂಬೊ
Continue Reading

Latest

Viral Video: ಬಸ್‌ ಡ್ರೈವರ್‌ನ ರೀಲ್ಸ್‌ ಕ್ರೇಜ್‌ಗೆ 2 ಎತ್ತುಗಳು ಬಲಿ; ರೈತನ ಸ್ಥಿತಿ ಗಂಭೀರ

Viral Video: ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿ ಇರುವ ಬಸ್ ಡ್ರೈವರ್‌ಗಳೂ ರೀಲ್ಸ್ ಕ್ರೇಜ್‌ಗೆ ಒಳಗಾಗಿರುವುದು ಆತಂಕ ಮೂಡಿಸಿದೆ. ಬಸ್ ಡ್ರೈವ್ ಮಾಡುತ್ತಾ ರೀಲ್ಸ್‌ನ ಗುಂಗಿನೊಳಗೆ ಬಿದ್ದ ಡ್ರೈವರ್‌ನೊಬ್ಬ ಮಾಡಿದ ಅವಾಂತರದಿಂದ ಒಂದು ಕುಟುಂಬವೇ ಸಂಕಷ್ಟಕ್ಕೆ ಸಿಲುಕಿದೆ. ಜೀವನ ನಡೆಸುವುದಕ್ಕೆ ಆಧಾರವಾಗಿದ್ದ ಎರಡು ಎತ್ತುಗಳನ್ನು ರೈತ ಕಳೆದುಕೊಂಡಿದ್ದಾನೆ. ಅಪಘಾತದಿಂದ ರೈತನ ಸ್ಥಿತಿ ಕೂಡ ಗಂಭೀರವಾಗಿದೆ.

VISTARANEWS.COM


on

Viral Video
Koo

ಹುಬ್ಬಳ್ಳಿ: ವಾಹನಗಳನ್ನು ವೇಗವಾಗಿ ಚಲಾಯಿಸುವುದರಿಂದ ಎಷ್ಟೊಂದು ಅಪಘಾತದ ಘಟನೆಗಳು ನಡೆದು ಅನೇಕ ಸಾವು ನೋವುಗಳಾದರೂ ಕೂಡ ಚಾಲಕರಿಗೆ ಇನ್ನೂ ಈ ಬಗ್ಗೆ ಅರಿವು ಮೂಡಿಲ್ಲ. ಇದೀಗ ಹುಬ್ಬಳ್ಳಿಯಲ್ಲಿ ಎತ್ತಿನ ಗಾಡಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎರಡು ಎತ್ತುಗಳು ಸ್ಥಳದಲ್ಲೇ ಮೃತಪಟ್ಟಿದೆ. ಅಲ್ಲದೇ ಎತ್ತಿನ ಗಾಡಿಯಯಲ್ಲಿದ್ದ ರೈತ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ, ಸಹಾಯಕ ರೀಲ್ ತಯಾರಿಸುವಾಗ ಬಸ್ ಚಾಲಕ ತನ್ನ ಸೀಟ್‌ನಲ್ಲಿ ಕುಳಿತು ಡ್ರೈವ್ ಮಾಡುತ್ತಿರುವುದನ್ನು ಕಾಣಬಹುದು. ಕೆಲವು ಕ್ಷಣಗಳ ನಂತರ, ಬಸ್ ಮುಂದೆ ಹೋಗುತ್ತಿದ್ದ ಎತ್ತಿನ ಗಾಡಿಗೆ ಹಿಂದಿನಿಂದ ಡಿಕ್ಕಿ ಹೊಡೆಯುವುದನ್ನು ವಿಡಿಯೊ ತೋರಿಸುತ್ತದೆ. ವರದಿ ಪ್ರಕಾರ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಬಾಗಲಕೋಟೆ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಎತ್ತುಗಳು ಕೆಳಗೆ ಬಿದ್ದು ರಕ್ತ ಸೋರಿ, ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿವೆ. ಎತ್ತಿನ ಗಾಡಿಯಲ್ಲಿದ್ದ ರೈತ ತೀವ್ರವಾಗಿ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈತನ ಸ್ಥಿತಿ ಗಂಭೀರವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಗಾಯಗೊಂಡ ರೈತ ಮಂಜುನಾಥ್ ಆರ್. ವಗ್ಗೇನವರ್ (40) ಎಂಬುದಾಗಿ ತಿಳಿದು ಬಂದಿದೆ. ಮಂಗಳವಾರ ರಾತ್ರಿ ಮಂಜುನಾಥ್ ಕೆರೆಸೂರು ಗ್ರಾಮದ ತನ್ನ ಕೃಷಿ ಭೂಮಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಎತ್ತಿನ ಗಾಡಿಗೆ ಡಿಕ್ಕಿ ಹೊಡೆದಾಗ ಬಸ್ ಚಾಲಕ ರೀಲ್ ತಯಾರಿಸುತ್ತಿದ್ದ. ತಂಬಾಕು ತಿನ್ನುತ್ತಿದ್ದ. ಹಾಗಾಗಿ ಚಾಲಕನಿಗೆ ತನ್ನ ಮುಂದೆ ಇದ್ದ ಗಾಡಿಯನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

ಅಲ್ಲದೇ ಮಂಜುನಾಥ್ ಒಬ್ಬ ಬಡ ರೈತನಾಗಿದ್ದು, ಎರಡು ಎಕರೆ ಭೂಮಿಯಲ್ಲಿ ಯಾವುದೇ ಲಾಭಾಂಶ ಸಿಗುತ್ತಿರಲಿಲ್ಲ ಎಂದು ಸಂತ್ರಸ್ತ ರೈತನ ಸ್ನೇಹಿತರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಇತ್ತೀಚೆಗೆ, ಮಂಜುನಾಥ್ ಸಾಲ ಪಡೆದು ಎರಡು ಎತ್ತುಗಳನ್ನು ಖರೀದಿಸಿ ಅದನ್ನು ಇತರ ಹೊಲಗಳಲ್ಲಿ ಉಳುಮೆ ಮಾಡಲು ಬಳಸುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ: ಪುಟ್ಟ ಮಗುವನ್ನು ಮುಂದೆ ಕೂರಿಸಿಕೊಂಡು ಬೈಕ್‌ ಸ್ಟಂಟ್‌! ಒದ್ದು ಒಳಗೆ ಹಾಕಿ ಅಂತಿದ್ದಾರೆ ನೆಟ್ಟಿಗರು

Continue Reading

ಪ್ರಮುಖ ಸುದ್ದಿ

Bangalore News : ಬೆಂಗಳೂರಲ್ಲಿ ಆಘಾತಕಾರಿ ಘಟನೆ; ಗಾಂಜಾ ನಶೆಯಲ್ಲಿ ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ಬಾಲಕಿಯರನ್ನು ಬೆದರಿಸಿದ ಪುಂಡರು

Crime News : ಸಾರ್ವಜನಿಕರು ಪ್ರಶ್ನೆ ಮಾಡಿದಾಗ ಅವರ ಮೇಲೆ ದರ್ಪ ತೋರಿದ್ದಾರೆ. ಪ್ರಶ್ನೆ ಮಾಡಿದ ಸಾರ್ವಜನಿಕನ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದರು. ತಕ್ಷಣ ಪೊಲೀಸ್​ ಕಂಟ್ರೋಲ್ ರೂಂಗೆ ಕರೆ ಮಾಡಿದ್ದ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹೊಯ್ಸಳ ವಾಹನ ಬರುವಷ್ಟರಲ್ಲಿ ಕಾರಿನಲ್ಲಿದ್ದವು ಪರಾರಿಯಾಗಿದ್ದಾರೆ. ಗಾಂಜಾ ನಶೆ ಹಾಗು ಕುಡಿತದ ಅಮಲಿನಲ್ಲಿ ಕೃತ್ಯ ಎಸಗಿರುವ ಸಾಧ್ಯತೆ ಎಂದು ಸ್ಥಳೀಯರ ಶಂಕಿಸಿದ್ದಾರೆ. ಎಚ್​​ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

VISTARANEWS.COM


on

Crime News
Koo

ಬೆಂಗಳೂರು: ಕಾರಿನಲ್ಲಿ ಬಂದ ಮದ್ಯ ಹಾಗೂ ಗಾಂಜಾ ಮತ್ತಿನಲ್ಲಿ ಬಂದ ಪುಂಡರ ಗುಂಪೊಂದು, ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಶಾಲಾ ಬಾಲಕಿಯರಿಗೆ ಕಿರುಕುಳ ನೀಡಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ (Bangalore News). ಇನ್ನೋವಾ ಕಾರಿನಲ್ಲಿ ಬಂದಿದ್ದ ಪುಂಡರು ಕೃತ್ಯ ಎಸಗಿದ್ದು ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀರ ಮೇಲೂ ದಾಳಿ ಮಾಡಿದ್ದಾರೆ. ಬೆಂಗಳೂರಿನ ಎಚ್​ಎಎಲ್ ಬಳಿಯಿರುವ ಇರುವ ಖಾಸಗಿ ಶಾಲೆಯ ಮಕ್ಕಳ ಜೊತೆ ಅಸಭ್ಯ ವರ್ತನೆ ತೋರಲಾಗಿದೆ.

ಶಾಲಾ ಮಕ್ಕಳು ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾರನ್ನು ಫುಟ್​ಪಾತ್ ಮೇಲೆ ಹತ್ತಿಸಿದ್ದರು. ಬಳಿಕ ಮಕ್ಕಳಿಗೆ ಹೆದರಿಸಲು ಯತ್ನಿಸಿದ್ದ. ಈ ವೇಳೆ ಕಾರಿನಲ್ಲಿದ್ದ ಒಬ್ಬ ನಶೆಯಲ್ಲಿ ತೂರಾಡಿ ಕೆಳಗೆ ಬಿದ್ದಿದ್ದಾನೆ. ಅಲ್ಲದೆ ಮಕ್ಕಳ ಮುಂದೆಯೇ ಅಸಭ್ಯ ವರ್ತನೆ ತೋರಿದ್ದಾನೆ. ಸಾರ್ವಜನಿಕರು ಪ್ರಶ್ನೆ ಮಾಡಿದಾಗ ಅವರ ಮೇಲೆ ದರ್ಪ ತೋರಿದ್ದಾರೆ. ಪ್ರಶ್ನೆ ಮಾಡಿದ ಸಾರ್ವಜನಿಕನ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದರು. ತಕ್ಷಣ ಪೊಲೀಸ್​ ಕಂಟ್ರೋಲ್ ರೂಂಗೆ ಕರೆ ಮಾಡಿದ್ದ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹೊಯ್ಸಳ ವಾಹನ ಬರುವಷ್ಟರಲ್ಲಿ ಕಾರಿನಲ್ಲಿದ್ದವು ಪರಾರಿಯಾಗಿದ್ದಾರೆ. ಗಾಂಜಾ ನಶೆ ಹಾಗು ಕುಡಿತದ ಅಮಲಿನಲ್ಲಿ ಕೃತ್ಯ ಎಸಗಿರುವ ಸಾಧ್ಯತೆ ಎಂದು ಸ್ಥಳೀಯರ ಶಂಕಿಸಿದ್ದಾರೆ. ಎಚ್​​ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

ಇದನ್ನೂ ಓದಿ: GT World Mall : ಜಿಟಿ ಮಾಲ್​ ಏಳು ದಿನಗಳ ಕಾಲ ಬಂದ್​, ಮಾಲೀಕರಿಂದಲೇ ಸ್ವಯಂಪ್ರೇರಿತ ಕ್ರಮ

ಎಕ್ಸಾಂನಲ್ಲಿ ಫೇಲ್‌ ಆಗಿದ್ದಕ್ಕೆ ಮನನೊಂದು ಕಾಲೇಜು ವಿದ್ಯಾರ್ಥಿನಿ ಸೂಸೈಡ್‌

ಪರೀಕ್ಷೆಯಲ್ಲಿ ‌ಫೇಲ್ (Failed in Exam) ಆಗಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ (Self Harming) ಶರಣಾಗಿದ್ದಾಳೆ. ಹುಬ್ಬಳ್ಳಿಯ ಉಣಕಲ್‌ ಕೆರೆಗೆ ಹಾರಿ ಮೃತಪಟ್ಟಿದ್ದಾಳೆ. ಸವಿತಾ ನರಗುಂದ (22) ಆತ್ಮಹತ್ಯೆ ಮಾಡಿಕೊಂಡವಳು.

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹೂವಿನಶಿಗ್ಲಿ ಗ್ರಾಮದ ಸವಿತಾ ಧಾರವಾಡದ ಜೆಎಸ್ಎಸ್ ಕಾಲೇಜಿನಲ್ಲಿ ಬಿಎಸ್‌ಸಿ 5ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಳು. ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೆರೆಯಿಂದ ಶವವನ್ನು ಹೊರೆತೆಗೆದು ಕಿಮ್ಸ್‌ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

Continue Reading

Latest

Lady Police Officer: ಗೂಂಡಾಗಿರಿ ಮಾಡಿದರೆ ಹುಷಾರ್‌! ಪುಂಡರಿಗೆ ಲೇಡಿ ಪೊಲೀಸ್ ವಾರ್ನಿಂಗ್‌; ವಿಡಿಯೊ ವೈರಲ್

Lady Police Officer: ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವುದೇ ಈಗಿನವರ ಶೋಕಿ. ಎಲ್ಲಿದ್ದೇವೆ, ಇದು ತಪ್ಪಾ, ಸರಿನಾ ಒಂದೂ ಕೂಡ ಯೋಚಿಸದೇ ರೀಲ್ಸ್ ಮಾಡುತ್ತಾ ತಿರುಗುತ್ತಾರೆ. ಹೀಗೆ ಧಾರ್ಮಿಕ ಸ್ಥಳವೊಂದರಲ್ಲಿ ಕಾರಿನ ಸನ್‌ರೂಫ್‌ ತೆರೆದುಕೊಂಡು ರೀಲ್ಸ್ ಮಾಡುತ್ತಿದ್ದ ಗುಂಪೊಂದನ್ನು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಸಖತ್ ಆಗಿ ಬೆಂಡೆತ್ತಿದ್ದಾರೆ. ಇನ್ನು ಮಹಿಳಾ ಅಧಿಕಾರಿಗೆ ಆಮಿಷವೊಡ್ಡಲು ಬಂದಾಗ ಅದಕ್ಕೆ ಸೊಪ್ಪು ಹಾಕದೇ, ವಾಹನವನ್ನು ವಶಪಡಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

Lady Police Officer
Koo

ಕೆಲವೊಂದು ಧಾರ್ಮಿಕ ಸ್ಥಳಗಳಲ್ಲಿ (Lady Police Officer) ಮೊಬೈಲ್ ಬಳಸಲು, ವಿಡಿಯೊ ಶೂಟ್ ಮಾಡಲು ಅನುಮತಿ ಇರುವುದಿಲ್ಲ. ಹಿಮಾಚಲ ಪ್ರದೇಶದ ಧಾರ್ಮಿಕ ಪ್ರದೇಶದಲ್ಲಿ ಪುರುಷರ ಗುಂಪೊಂದು ಅನುಮತಿಯಿಲ್ಲದೆ ಕಾರು ಚಲಾಯಿಸುತ್ತ, ಕಾರಿನ ಟಾಪ್‌ ಮೇಲಿಂದ ಕೈ ಬೀಸುತ್ತ ರೀಲ್ಸ್‌ (Reels Obesession) ಮಾಡಿದ್ದಾರೆ. ಆಗ ಮಹಿಳಾ ಪೊಲೀಸರೊಬ್ಬರು ಅವರನ್ನು ಸಖತ್ತಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ವಿಡಿಯೊವನ್ನು ‘ಘರ್ ಕೆ ಕಾಲೇಶ್’ ಎಂಬ ಹೆಸರಿನಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ವಿಡಿಯೊ ಪೊಲೀಸರು ವಾಹನವನ್ನು ನಿಲ್ಲಿಸುವ ಮೂಲಕ ಪ್ರಾರಂಭವಾಗಿದೆ. ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ತಮ್ಮ ವಾಹನವನ್ನು ನಿಲ್ಲಿಸಿ ಇನ್ನೊಂದು ಕಾರಿನಲ್ಲಿದ್ದ ಇಬ್ಬರು ಪುರುಷರು ಸನ್ ರೂಫ್‌ನಿಂದ ಹೊರಬಂದು ನಿಂತಿರುವುದನ್ನು ತೋರಿಸಿದರು. ಹಾಗೇ ಅವರ ರೀಲ್ಸ್‌ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸನ್ ರೂಫ್ ಅನ್ನು ಮುಚ್ಚಿ ಕಾರಿನೊಳಗೆ ಕುಳಿತುಕೊಳ್ಳುವಂತೆ ಅವರಿಗೆ ಪಾಠ ಹೇಳಿದ್ದಾರೆ.

ನಂತರ ಧಾರ್ಮಿಕ ಸ್ಥಳದ ಪಕ್ಕದ ಪ್ರದೇಶದಲ್ಲಿ ಶೂಟಿಂಗ್ ಮಾಡಲು ಅನುಮತಿ ನೀಡಲಾಗಿದೆಯೇ ಎಂದು ಅಧಿಕಾರಿ ಪುರುಷರ ಗುಂಪನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅವರಲ್ಲಿ ಒಬ್ಬರು ಇದು ಶೂಟಿಂಗ್ ಅಲ್ಲ ಎಂದು ಉತ್ತರಿಸಿದ್ದಾರೆ. ಆದರೆ ಅವರು ಸೋಶಿಯಲ್ ಮೀಡಿಯಾಗಳಿಗಾಗಿ ರೀಲ್ಸ್ ಮಾಡುತ್ತಿರುವುದಾಗಿ ಹೇಳಿದ್ದಾರೆ.

ನಂತರ ಈ ವಿಷಯವನ್ನು ಪರಿಶೀಲಿಸಲು ಮಹಿಳಾ ಪೊಲೀಸ್ ಜೀಪಿನಿಂದ ಕೆಳಗಿಳಿದು ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ವಿಡಿಯೊ ಮಾಡಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ತೆರೆದ ಸನ್ ರೂಫ್‌ನೊಂದಿಗೆ ಸವಾರಿ ಮಾಡುವುದು ಮಾತ್ರವಲ್ಲದೆ ನಂಬರ್ ಪ್ಲೇಟ್ ಇಲ್ಲದ ವಾಹನವನ್ನು ಓಡಿಸುವ ಮೂಲಕ ದುಷ್ಕರ್ಮಿಗಳು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಹೇಗೆ ಉಲ್ಲಂಘಿಸಿದ್ದಾರೆ ಎಂಬುದನ್ನು ಅವರು ತೋರಿಸಿದರು.

ಕರ್ತವ್ಯದಲ್ಲಿದ್ದ ಪೋಲೀಸ್ ಅಧಿಕಾರಿ ಪುರುಷರನ್ನು ತಮ್ಮ ವಾಹನದೊಳಗೆ ಕುಳಿತು ಸುರಕ್ಷಿತವಾಗಿ ಪ್ರಯಾಣಿಸುವಂತೆ ಸೂಚಿಸಿದ್ದಾರೆ. “ಗೂಂಡಾಗಿರಿ ಮಾಡಬೇಡಿ. ಇದು ಧಾರ್ಮಿಕ ಸ್ಥಳವಾಗಿದೆ. ಪವಿತ್ರ ಸ್ಥಳಕ್ಕೆ ಸಂಬಂಧಿಸಿದ ಭಾವನೆಗಳನ್ನು ನೋಯಿಸಬೇಡಿ” ಎಂದು ಅವರು ಪುಂಡು ಪುರುಷರಿಗೆ ತಿಳಿ ಹೇಳಿದ್ದಾರೆ.

ಇದನ್ನೂ ಓದಿ:  ನೀತಾ ಅಂಬಾನಿ ಪ್ರಸ್ತುತಪಡಿಸಿದ್ದಾರೆ ವಿಷ್ಣುವಿನ ‘ದಶಾವತಾರ’ದ ಚಿತ್ರಣ; ವಿಡಿಯೊ ನೋಡಿ

ಅಲ್ಲದೇ ವಿಡಿಯೊದಲ್ಲಿ, ಅವರಲ್ಲಿ ಕೆಲವರು ಪೊಲೀಸ್ ಅಧಿಕಾರಿಗೆ ಲಂಚ ನೀಡಲು ಅಥವಾ ಕೆಲವು ಪ್ರಭಾವ ಬೀರುವ ಕಾರ್ಡ್ ಅನ್ನು ಪ್ರದರ್ಶಿಸಲು ಪ್ರಯತ್ನಿಸಿದ್ದು ಕಂಡು ಬಂದಿದೆ. ಆದರೆ ಪೊಲೀಸ್ ಅಧಿಕಾರಿ ಈ ರೀತಿ ಮಾಡಿದರೆ ವಾಹನವನ್ನು ವಶಪಡಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Continue Reading
Advertisement
International Cricket Council
ಕ್ರಿಕೆಟ್5 mins ago

International Cricket Council : ಟಿ20 ವಿಶ್ವಕಪ್ ಆಯೋಜನೆಯಲ್ಲಿ ಐಸಿಸಿಗೆ 167 ಕೋಟಿ ರೂಪಾಯಿ ನಷ್ಟ

Team India Srilanka Tour
ಪ್ರಮುಖ ಸುದ್ದಿ14 mins ago

Team India Srilanka Tour : ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಸೂರ್ಯಕುಮಾರ್​ಗೆ ಟಿ20 ನಾಯಕತ್ವ

Viral Video
Latest42 mins ago

Viral Video: ಬಸ್‌ ಡ್ರೈವರ್‌ನ ರೀಲ್ಸ್‌ ಕ್ರೇಜ್‌ಗೆ 2 ಎತ್ತುಗಳು ಬಲಿ; ರೈತನ ಸ್ಥಿತಿ ಗಂಭೀರ

Train Accident
ದೇಶ43 mins ago

Train Derail: ಹಳಿ ತಪ್ಪಿದ ರೈಲು; ಅಪಘಾತದ ಹಿಂದೆ ಇದ್ಯಾ ವಿಧ್ವಂಸಕ ಕೃತ್ಯ?

Crime News
ಪ್ರಮುಖ ಸುದ್ದಿ52 mins ago

Bangalore News : ಬೆಂಗಳೂರಲ್ಲಿ ಆಘಾತಕಾರಿ ಘಟನೆ; ಗಾಂಜಾ ನಶೆಯಲ್ಲಿ ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ಬಾಲಕಿಯರನ್ನು ಬೆದರಿಸಿದ ಪುಂಡರು

Lady Police Officer
Latest1 hour ago

Lady Police Officer: ಗೂಂಡಾಗಿರಿ ಮಾಡಿದರೆ ಹುಷಾರ್‌! ಪುಂಡರಿಗೆ ಲೇಡಿ ಪೊಲೀಸ್ ವಾರ್ನಿಂಗ್‌; ವಿಡಿಯೊ ವೈರಲ್

kiccha sudeep‌ Fans
ಸಿನಿಮಾ1 hour ago

Kiccha Sudeep: ಸೆಲ್ಫಿಗಾಗಿ 2 ಗಂಟೆ ಕಾದ ಅಭಿಮಾನಿಗೆ ಕಿಚ್ಚ ಸುದೀಪ್ ಅವಮಾನ! ವಿಡಿಯೊ ನೋಡಿ

Ratna Bhandar
ದೇಶ2 hours ago

Ratna Bhandar: ಒಂದೇ ವಾರದಲ್ಲಿ ಎರಡನೇ ಬಾರಿ ತೆರೆದ ಪುರಿ ಜಗನ್ನಾಥನ ʼರತ್ನ ಭಂಡಾರʼ

GT World Mall
ಪ್ರಮುಖ ಸುದ್ದಿ2 hours ago

GT World Mall : ಜಿಟಿ ಮಾಲ್​ ಏಳು ದಿನಗಳ ಕಾಲ ಬಂದ್​, ಮಾಲೀಕರಿಂದಲೇ ಸ್ವಯಂಪ್ರೇರಿತ ಕ್ರಮ

Viral Video
Latest2 hours ago

Viral Video: ಗರ್ಭಗುಡಿಗೆ ನುಗ್ಗಿ ದೇವರ ಕಿರೀಟಕ್ಕೇ ಕನ್ನ ಹಾಕಿದ ಕಳ್ಳ! ಪರಾರಿಯಾಗುವಾಗ ಮಾಡಿದ್ದೇನು? ವಿಡಿಯೊ ನೋಡಿ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ5 hours ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ4 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

ಟ್ರೆಂಡಿಂಗ್‌