ಚಿನ್ನದ ದರ
Gold bonds return : ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿದವರಿಗೆ ಕಳೆದ 8 ವರ್ಷಗಳಲ್ಲಿ 13.7% ಆದಾಯ
Gold bonds return ಕೇಂದ್ರ ಸರ್ಕಾರ 2015ರಲ್ಲಿ ಆರಂಭಿಸಿದ ಗೋಲ್ಡ್ ಬಾಂಡ್ ಯೋಜನೆ ಹೂಡಿಕೆದಾರರಿಗೆ ಸರಸರಿ ವಾರ್ಷಿಕ 13.7% ಆದಾಯ ಕೊಟ್ಟಿದೆ. ಉತ್ತಮ ಹೂಡಿಕೆ ಎನ್ನಿಸಿದೆ. ವಿವರ ಇಲ್ಲಿದೆ.
ಸಾವರಿನ್ ಗೋಲ್ಡ್ ಬಾಂಡ್‌ಗಳಲ್ಲಿ (sovereign gold bonds) ಕಳೆದ 8 ವರ್ಷಗಳಲ್ಲಿ ಹೂಡಿದವರಿಗೆ ಸರಾಸರಿ 13.7% ಆದಾಯ ಲಭಿಸಿದೆ. ಇದರೊಂದಿಗೆ ಚಿನ್ನದ ಬಾಂಡ್‌ಗಳು ಹೂಡಿಕೆಗೆ ಉತ್ತಮ ಎಂಬುದು ಸಾಬೀತಾದಂತಾಗಿದೆ ಎಂದು ತಜ್ಞರು ಹೇಳಿದ್ದಾರೆ. ಹಣದುಬ್ಬರದ ಮಟ್ಟಕ್ಕಿಂತಲೂ ಹೆಚ್ಚಿನ ಆದಾಯವನ್ನು ಗೋಲ್ಡ್ ಬಾಂಡ್‌ಗಳು ಕಳೆದ ಎಂಟು ವರ್ಷಗಳಲ್ಲಿ ನೀಡಿರುವುದನ್ನು ಗಮನಿಸಬಹುದು. ಹಣದುಬ್ಬರಕ್ಕಿಂತ ಕಡಿಮೆಯಾದರೆ ನಷ್ಟವಾಗುತ್ತದೆ. ಆದರೆ ಗೋಲ್ಡ್ ಬಾಂಡ್‌ಗಳು (SGBs) ಹೂಡಿಕೆದಾರರ ಕೈ ಹಿಡಿದಿವೆ.
ಸರ್ಕಾರ 2015ರ ನವೆಂಬರ್‌ನಿಂದ 63 tranches ಗಳಲ್ಲಿ ಗೋಲ್ಡ್ ಬಾಂಡ್‌ಗಳನ್ನು ಬಿಡುಗಡೆಗೊಳಿಸಿದ್ದು, ವಾರ್ಷಿಕ ಸರಾಸರಿ 13.7% ಆದಾಯ ನೀಡಿದೆ. ಜಾಗತಿಕ ಆರ್ಥಿಕತೆಯ ಅನಿಶ್ಚಿತತೆಯ ನಡುವೆ ಬಂಗಾರದ ದರವನ್ನು ಆಧರಿಸಿದ ಹೂಡಿಕೆ ಲಾಭದಾಯಕವಾಗಿದೆ ಎಂದು ಹೂಡಿಕೆಯ ತಜ್ಞರು ತಿಳಿಸಿದ್ದಾರೆ.
ಗೋಲ್ಡ್ ಬಾಂಡ್‌ಗಳ 63 issuanceಗಳು ಹೂಡಿಕೆದಾರರಿಗೆ 4.48% ಮತ್ತು 51.89% ರ ನಡುವೆ ಆದಾಯ ನೀಡಿವೆ. ಅಂದರೆ ಅವರವರ ಹೂಡಿಕೆಯ ಅವಧಿಯನ್ನು ಆಧರಿಸಿ ಪ್ರತಿಫಲ ಸಿಕ್ಕಿದೆ. ಇದು ಸರ್ಕಾರ ನೀಡುವ 2.5% ಬಡ್ಡಿಯ ಹೊರತಾದ ಆದಾಯವಾಗಿದೆ.
ಆರಂಭದಲ್ಲಿ ಹೂಡಿದವರಿಗೆ ಹೆಚ್ಚು ಲಾಭ:
ಗೋಲ್ಡ್ ಬಾಂಡ್‌ಗಳಲ್ಲಿ (sovereign gold bonds) ಆರಂಭದಲ್ಲಿ ಹೂಡಿಕೆ ಮಾಡಿದವರಿಗೆ ಹೆಚ್ಚು ಲಾಭವಾಗಿದೆ. ಉದಾಹರಣೆಗೆ 2015ರ ನವೆಂಬರ್‌ನಲ್ಲಿ ಮೊದಲ 8 ವರ್ಷದ ಗೋಲ್ಡ್ ಬಾಂಡ್ ಖರೀದಿಸುವಾಗ ಪ್ರತಿ ಗ್ರಾಮ್ ಚಿನ್ನದ ದರ 2,684 ರೂ. ಇತ್ತು. ಈಗ ಗ್ರಾಮ್‌ಗೆ 6,017 ರೂ. ಇದೆ. ಇದು ಈ ವರ್ಷ ನವೆಂಬರ್‌ನಲ್ಲಿ Redemptionಗೆ ಬರಲಿದೆ. ಆಗ ಹೂಡಿದವರಿಗೆ 125% ರಿಟರ್ನ್ ಸಿಕ್ಕಿದಂತಾಗಲಿದೆ. ಅನೇಕ ಶ್ರೀಮಂತ ಹೂಡಿಕೆದಾರರು ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿದ್ದಾರೆ. ಗೋಲ್ಡ್ ಫಂಡ್ ಅಥವಾ ಇಟಿಎಫ್‌ಗೆ ಹೋಲಿಸಿದರೆ ಎಸ್‌ಜಿಬಿಗಳಲ್ಲಿ ತೆರಿಗೆ ಅನುಕೂಲಗಳು ಹೆಚ್ಚು ಇರುವುದು ಇದಕ್ಕೆ ಕಾರಣ.
ಗೋಲ್ಡ್ ಬಾಂಡ್‌ಗಳಲ್ಲಿ 8 ವರ್ಷಗಳ ಹೂಡಿಕೆ ಬಳಿಕ ಸಿಗುವ ಆದಾಯ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಮುಕ್ತವಾಗಿರುತ್ತದೆ. ಜತೆಗೆ ಸರ್ಕಾರ ಕೂಡ ಬಾಂಡ್ ಮೌಲ್ಯಕ್ಕೆ 2.5% ಬಡ್ಡಿಯನ್ನೂ ಕೊಡುತ್ತದೆ. ಚಿನ್ನದ ಇತರ ಹೂಡಿಕೆಗಳ ಆದಾಯದ ಮೇಲೆ ವೈಯಕ್ತಿಕ ಆದಾಯ ತೆರಿಗೆ ಆಧರಿಸಿ ತೆರಿಗೆ ಇರುತ್ತದೆ. ಶ್ರೀಮಂತರಿಗೆ ಗರಿಷ್ಠ 30% ತನಕ ತೆರಿಗೆ ಬರಬಹುದು. ವೈಯಕ್ತಿಕವಾಗಿ ವ್ಯಕ್ತಿಯೊಬ್ಬ ಕನಿಷ್ಠ 1 ಗ್ರಾಂ ಹಾಗೂ ಗರಿಷ್ಠ 4 ಕೆ.ಜಿಗೆ ಸಮವಾಗುವಷ್ಟು ಗೋಲ್ಡ್ ಬಾಂಡ್ ಖರೀದಿಸಬಹುದು.
ಎಲ್ಲಿ ಖರೀದಿಸಬಹುದು?
ಸರ್ಕಾರ ಗೋಲ್ಡ್ ಬಾಂಡ್‌ಗಳ ಕಂತುಗಳನ್ನು ಬಿಡುಗಡೆಗೊಳಿಸಿದ ಬಳಿಕ ಹೂಡಿಕೆದಾರರು ನಿಗದಿತ ಬ್ಯಾಂಕ್ ಶಾಖೆಗಳು, ಅಂಚೆ ಕಚೇರಿ ಶಾಖೆಗಳು, ಷೇರು ವಿನಿಮಯ ಕೇಂದ್ರಗಳಲ್ಲಿ ಗೋಲ್ಡ್ ಬಾಂಡ್‌ಗಳನ್ನು ಖರೀದಿಸಬಹುದು. ಕೆಲ ಬ್ಯಾಂಕ್‌ಗಳ ವೆಬ್ ಸೈಟ್ ಮೂಲಕ ಆನ್‌ಲೈನ್‌ನಲ್ಲೂ ಗೋಲ್ಡ್ ಬಾಂಡ್ ಖರೀದಿಸಬಹುದು.
ಗೋಲ್ಡ್ ಬಾಂಡ್ ಹೂಡಿಕೆಯ ಪ್ರಯೋಜನಗಳೇನು?
ಭೌತಿಕ ಬಂಗಾರ (Physical gold) ಖರೀದಿಸುವುದಕ್ಕೆ ಗೋಲ್ಡ್ ಬಾಂಡ್ ಪರ್ಯಾಯ ವಿಧಾನ. ಕೆಳಕಂಡ ಪ್ರಯೋಜನಗಳು ಸಿಗುತ್ತದೆ.
ಗೋಲ್ಡ್ ಬಾಂಡ್‌ಗಳು ಅತ್ಯಂತ ಸುರಕ್ಷಿತ. ನಿರ್ವಹಣೆಯ ಅಪಾಯ ಇರುವುದಿಲ್ಲ
ಹೂಡಿಕೆದಾರರಿಗೆ ಗ್ರಾಮ್ ಚಿನ್ನದ ಮೌಲ್ಯದ ಮೇಲೆ ವಾರ್ಷಿಕ 2.50% ಬಡ್ಡಿಯನ್ನೂ ಸರ್ಕಾರ ನೀಡುತ್ತದೆ.
ಚಿನ್ನದ ದರ ಏರಿಕೆಯಾದಾಗ ಬಾಂಡ್‌ನಲ್ಲಿನ ಹೂಡಿಕೆಯ ರಿಟರ್ನ್ ಕೂಡ ಹೆಚ್ಚುತ್ತದೆ.
ಎಸ್‌ಜಿಬಿಯಲ್ಲಿ ಸಿಗುವ ಆದಾಯಕ್ಕೆ ಟಿಡಿಎಸ್ ಇರುವುದಿಲ್ಲ
ಎಸ್‌ಜಿಬಿ ದರ 999 ಪ್ಯೂರಿಟಿ ಚಿನ್ನದ ದರದ ಜತೆ ಲಿಂಕ್ ಆಗಿರುತ್ತದೆ
ಗೋಲ್ಡ್ ಬಾಂಡ್ ಅಡಮಾನ ಇಟ್ಟು ಸಾಲ ಪಡೆಯಬಹುದು
ಬಾಂಡ್ ಅವಧಿ 8 ವರ್ಷವಾದರೂ, 5 ವರ್ಷದ ಬಳಿಕ ಹಿಂತೆಗೆದುಕೊಳ್ಳಬಹುದು.
ಚಿನ್ನದ ದರ
Gold rate : ಚಿನ್ನ ಖರೀದಿಸುತ್ತಿದ್ದೀರಾ, ಕಳೆದ 2 ದಿನದಲ್ಲಿ 650 ರೂ. ಇಳಿಕೆಯ ಲಾಭ ನಿಮ್ಮದಾಗಿಸಿ
Gold rate ಬಂಗಾರದ ದರದದಲ್ಲಿ ಕಳೆದ ಎರಡು ದಿನಗಳಲ್ಲಿ ಒಟ್ಟು 650 ರೂ. ಇಳಿಕೆಯಾಗೊದೆ. ಗ್ರಾಹಕರು ಇದರ ಲಾಭ ಪಡೆಯಬಹುದು. ವಿವರ ಇಲ್ಲಿದೆ.
ಬೆಂಗಳೂರು: ಕಳೆದ ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಬಂಗಾರದ ದರದಲ್ಲಿ (Gold rate) ಒಟ್ಟು 650 ರೂ. ಇಳಿಕೆಯಾಗಿದೆ. ಬಂಗಾರ ಖರೀದಿಸುವವರು ಇದರ ಲಾಭವನ್ನು ಪಡೆಯಬಹುದು. 24 ಕ್ಯಾರಟ್ ಬಂಗಾರದ ದರ ಬೆಂಗಳೂರಿನಲ್ಲಿ 60,760 ರೂ.ಗಳಾಗಿದ್ದು, ಶುಕ್ರವಾರ 160 ರೂ. ಇಳಿದಿದೆ. ಗುರುವಾರ 450 ರೂ. ಇಳಿದಿತ್ತು ಎಂಬುದನ್ನು ಗಮನಿಸಬಹುದು. ಆಭರಣ ಚಿನ್ನ ಅಥವಾ 22 ಕ್ಯಾರಟ್ ಚಿನ್ನದ ದರದಲ್ಲಿ 150 ರೂ. ತಗ್ಗಿದ್ದು, 55,700 ರೂ.ಗೆ ಇಳಿದಿದೆ. ಪ್ರತಿ ಕೆ.ಜಿ ಬೆಳ್ಳಿ ದರದಲ್ಲಿ 300 ರೂ. ಇಳಿದಿದ್ದು, 76,200 ರೂ.ಗೆ ತಗ್ಗಿದೆ.
ಭಾರತವು ಶೀಘ್ರದಲ್ಲಿಯೇ ಯುಎಇಯಿಂದ (Gold import) ರಿಯಾಯಿತಿ ಸುಂಕದಲ್ಲಿ 140 ಟನ್ ಬಂಗಾರವನ್ನು ಖರೀದಿಸಲು ಚಿಂತನೆ ನಡೆಸಿದೆ. ಆಮದು ಕೋಟಾ ವ್ಯವಸ್ಥೆಯ ಅಡಿಯಲ್ಲಿ (Tariff rate quota) ರಿಯಾಯಿತಿ ಸುಂಕದಲ್ಲಿ ಚಿನ್ನ ಆಮದಿಗೆ ಪ್ರಸ್ತಾಪಿಸಲಾಗಿದೆ. ಉಭಯ ದೇಶಗಳ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ಇದು ನಡೆಯುವ ನಿರೀಕ್ಷೆ ಇದೆ.
ಇದರಿಂದ ಸರ್ಕಾರಕ್ಕೆ ಕಂದಾಯ ನಷ್ಟವಾಗದಂತೆ ನೋಡಿಕೊಳ್ಳಲಾಗುವುದು. ಉತ್ಪಾದಕರು ಮತ್ತು ಜ್ಯುವೆಲರ್ಸ್ ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಮದು ಕೋಟಾ ವ್ಯವಸ್ಥೆಯಲ್ಲಿ ಆಮದುದಾರರಿಗೆ ಅರ್ಹತೆಯ ನಿಯಮಗಳು ಸಡಿಲವಾಗಿರುತ್ತವೆ. ಭಾರತ ಮತ್ತು ಯುಎಇ ನಡುವಣ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಅಡಿಯಲ್ಲಿ ಇದು ಸಾಧ್ಯವಾಗಲಿದೆ (India-UAE Comprehensive Economic Partnership Agreement) 2023-24ರ ಆರ್ಥಿಕ ಸಾಲಿಗೆ ಇದು ಅನ್ವಯವಾಗಲಿದೆ.
ಭಾರತ ವಿಶ್ವದಲ್ಲಿಯೇ ಎರಡನೆಯ ಅತಿ ದೊಡ್ಡ ಬಂಗಾರದ ( Gold rate ) ಮಾರುಕಟ್ಟೆಯಾಗಿದೆ. ಚೀನಾ ಬಿಟ್ಟರೆ ಅತಿ ಹೆಚ್ಚು ಚಿನ್ನ ಕೊಳ್ಳುವ ದೇಶ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜನ ಸಂಖ್ಯೆಯ ಹೆಚ್ಚಳ, ವಿವಾಹ ಸಮಾರಂಭಗಳ ಏರಿಕೆ, ಹಬ್ಬಗಳ ಸಂಭ್ರಮ, ಜನರ ಆದಾಯದಲ್ಲಿ ಏರಿಕೆ, ನಗರೀಕರಣ ಮೊದಲಾದ ಕಾರಣಗಳಿಂದ ಚಿನ್ನದ ಖರೀದಿ ಗಣನೀಯ ಏರಿಕೆಯಾಗುತ್ತಿದೆ. ಈ ಟ್ರೆಂಡ್ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತನ್ನ ವರದಿಯಲ್ಲಿ ತಿಳಿಸಿದೆ. ಈ ವರದಿ ಹಲವು ಸ್ವಾರಸ್ಯಕರ ಅಂಶಗಳನ್ನು ಬಹಿರಂಗಪಡಿಸಿದೆ.
ಇದನ್ನೂ ಓದಿ: Gold rate : ಚಿನ್ನದ ದರದಲ್ಲಿ 330 ರೂ. ಇಳಿಕೆ, ಪ್ರಮುಖ ನಗರಗಳಲ್ಲಿ ದರ ಎಷ್ಟು? ಇಲ್ಲಿದೆ ಡಿಟೇಲ್ಸ್
ಚಿನ್ನದ ದರ
Gold Rate : ಖರೀದಿದಾರರೇ ಗಮನಿಸಿ, ಚಿನ್ನದ ದರದಲ್ಲಿ 490 ರೂ. ಇಳಿಕೆ, ಬೆಳ್ಳಿ 1,000 ರೂ. ಅಗ್ಗ
Gold Rate ಚಿನ್ನದ ದರದಲ್ಲಿ ಗುರುವಾರ 490 ರೂ. ಇಳಿಕೆ ದಾಖಲಾಗಿದೆ. ಬೆಳ್ಳಿ 1,000 ರೂ. ಅಗ್ಗವಾಗಿದೆ. ಪ್ರಮುಖ ನಗರಗಳಲ್ಲಿ ಚಿನ್ನದ ದರದ ವಿವರ ಇಲ್ಲಿದೆ.
ಬೆಂಗಳೂರು: ಚಿನ್ನದ ದರದಲ್ಲಿ ಗುರುವಾರ 490 ರೂ. ಇಳಿಕೆಯಾಗಿದ್ದರೆ, ಬೆಳ್ಳಿ 1000 ರೂ. ಅಗ್ಗವಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್‌ನ 10 ಗ್ರಾಮ್ ಬಂಗಾರದ ದರ 60,920 ರೂ.ನಷ್ಟಿತ್ತು. ಆಭರಣ ಚಿನ್ನ ಅಥವಾ 22 ಕ್ಯಾರಟ್ ಚಿನ್ನದ ದರ 55,850 ರೂ.ಗೆ ಇಳಿಕೆಯಾಗಿತ್ತು. (450 ರೂ. ಅಗ್ಗ) ಬೆಳ್ಳಿ ದರ ಪ್ರತಿ ಕೆ.ಜಿಗೆ 76,500 ರೂ.ಗೆ ತಗ್ಗಿತ್ತು.
ಪ್ರಮುಖ ನಗರಗಳಲ್ಲಿ ಮೇ 19, 2023ರಂದು ಚಿನ್ನದ ದರ ( 10 ಗ್ರಾಮ್‌ಗೆ, ರೂ.ಗಳಲ್ಲಿ)
ನಗರ | 22 ಕ್ಯಾರಟ್ | 24 ಕ್ಯಾರಟ್ |
ಬೆಂಗಳೂರು | 55,850 | 60,920 |
ದಿಲ್ಲಿ | 55,950 | 61,020 |
ಮುಂಬಯಿ | 55,800 | 60,870 |
ಕೋಲ್ಕೊತಾ | 55,800 | 60,870 |
ಲಖನೌ | 55,950 | 61,020 |
ಜೈಪುರ | 55,950 | 61,020 |
ಪಟನಾ | 55,850 | 60,920 |
ಭುವನೇಶ್ವರ್ | 55,800 | 60,870 |
ಹೈದರಾಬಾದ್ | 55,800 | 60,870 |
ಬಂಗಾರದ ದರ 2023ರಲ್ಲಿ ನಾಗಾಲೋಟದಲ್ಲಿದ್ದು, 2023-24ರಲ್ಲಿ ದರ 68,000 ರೂ.ಗೆ ಜಿಗಿಯುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಹಣದುಬ್ಬರದ ಪರಿಣಾಮ ಬಂಗಾರದ ಮೇಲಿನ ಹೂಡಿಕೆಗೆ 10-15% ಆದಾಯ ಸಿಗುವ ಸಾಧ್ಯತೆ ಇದೆ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ಜತೀನ್ ತ್ರಿವೇದಿ (Gold Price Outlook) ತಿಳಿಸಿದ್ದಾರೆ.
ಒಂದು ವೇಳೆ ಬಂಗಾರದ ದರ 15-20% ಪ್ರಮಾಣದಲ್ಲಿ ಏರಿಕೆಯಾದರೆ 64,500 ರೂ. ಮತ್ತು 66,800 ರೂ. ಶ್ರೇಣಿಯಲ್ಲಿ ಏರಿಕೆಯಾಗಲಿದೆ. 2024ರಲ್ಲಿ 68,000 ರೂ. ತನಕ ಹಚ್ಚಳವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್ (28 ಗ್ರಾಮ್) ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1869 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 68,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್. 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು.
ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:
ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.
ಭಾರತ ವಿಶ್ವದಲ್ಲಿಯೇ ಎರಡನೆಯ ಅತಿ ದೊಡ್ಡ ಬಂಗಾರದ ( Gold rate ) ಮಾರುಕಟ್ಟೆಯಾಗಿದೆ. ಚೀನಾ ಬಿಟ್ಟರೆ ಅತಿ ಹೆಚ್ಚು ಚಿನ್ನ ಕೊಳ್ಳುವ ದೇಶ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜನ ಸಂಖ್ಯೆಯ ಹೆಚ್ಚಳ, ವಿವಾಹ ಸಮಾರಂಭಗಳ ಏರಿಕೆ, ಹಬ್ಬಗಳ ಸಂಭ್ರಮ, ಜನರ ಆದಾಯದಲ್ಲಿ ಏರಿಕೆ, ನಗರೀಕರಣ ಮೊದಲಾದ ಕಾರಣಗಳಿಂದ ಚಿನ್ನದ ಖರೀದಿ ಗಣನೀಯ ಏರಿಕೆಯಾಗುತ್ತಿದೆ. ಈ ಟ್ರೆಂಡ್ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತನ್ನ ವರದಿಯಲ್ಲಿ ತಿಳಿಸಿದೆ. ಈ ವರದಿ ಹಲವು ಸ್ವಾರಸ್ಯಕರ ಅಂಶಗಳನ್ನು ಬಹಿರಂಗಪಡಿಸಿದೆ.
ಚಿನ್ನದ ದರ
Gold rate : ಖರೀದಿಗೆ ಸಕಾಲ, ಬಂಗಾರದ ದರದಲ್ಲಿ 310 ರೂ. ಇಳಿಕೆ, ಬೆಳ್ಳಿ 600 ರೂ. ಅಗ್ಗ
Gold rate ಬಂಗಾರದ ದರದಲ್ಲಿ ಮಂಗಳವಾರ 310 ರೂ. ಇಳಿಕೆಯಾಗಿದೆ. ಪ್ರತಿ ಕೆ.ಜಿ ಬೆಳ್ಳಿಯ ದರದಲ್ಲಿ 600 ರೂ. ಇಳಿದಿದೆ. ವಿವರ ಇಲ್ಲಿದೆ.
ಬೆಂಗಳೂರು: ಬಂಗಾರದ ದರದಲ್ಲಿ (Gold rate) ಮಂಗಳವಾರ 310 ರೂ. ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ 10 ಗ್ರಾಮ್, 24 ಕ್ಯಾರಟ್ ಬಂಗಾರದ ದರ 61,150 ರೂ.ನಷ್ಟಿತ್ತು. 22 ಕ್ಯಾರಟ್ ಅಥವಾ ಆಭರಣ ಚಿನ್ನದ ದರದಲ್ಲಿ 290 ರೂ. ಇಳಿದಿದ್ದು, 56,050 ರೂ.ಗೆ ತಗ್ಗಿದೆ. ಪ್ರತಿ ಕೆ.ಜಿ ಬೆಳ್ಳಿಯ ದರದಲ್ಲಿ 600 ರೂ. ತಗ್ಗಿದ್ದು, 78,000 ರೂ.ನಷ್ಟಿತ್ತು.
ಭಾರತವು ಶೀಘ್ರದಲ್ಲಿಯೇ ಯುಎಇಯಿಂದ (Gold import) ರಿಯಾಯಿತಿ ಸುಂಕದಲ್ಲಿ 140 ಟನ್ ಬಂಗಾರವನ್ನು ಖರೀದಿಸಲು ಚಿಂತನೆ ನಡೆಸಿದೆ. ಆಮದು ಕೋಟಾ ವ್ಯವಸ್ಥೆಯ ಅಡಿಯಲ್ಲಿ (Tariff rate quota) ರಿಯಾಯಿತಿ ಸುಂಕದಲ್ಲಿ ಚಿನ್ನ ಆಮದಿಗೆ ಪ್ರಸ್ತಾಪಿಸಲಾಗಿದೆ. ಉಭಯ ದೇಶಗಳ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ಇದು ನಡೆಯುವ ನಿರೀಕ್ಷೆ ಇದೆ.
ಇದರಿಂದ ಸರ್ಕಾರಕ್ಕೆ ಕಂದಾಯ ನಷ್ಟವಾಗದಂತೆ ನೋಡಿಕೊಳ್ಳಲಾಗುವುದು. ಉತ್ಪಾದಕರು ಮತ್ತು ಜ್ಯುವೆಲರ್ಸ್ ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಮದು ಕೋಟಾ ವ್ಯವಸ್ಥೆಯಲ್ಲಿ ಆಮದುದಾರರಿಗೆ ಅರ್ಹತೆಯ ನಿಯಮಗಳು ಸಡಿಲವಾಗಿರುತ್ತವೆ. ಭಾರತ ಮತ್ತು ಯುಎಇ ನಡುವಣ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಅಡಿಯಲ್ಲಿ ಇದು ಸಾಧ್ಯವಾಗಲಿದೆ (India-UAE Comprehensive Economic Partnership Agreement) 2023-24ರ ಆರ್ಥಿಕ ಸಾಲಿಗೆ ಇದು ಅನ್ವಯವಾಗಲಿದೆ.
ಬಂಗಾರದ ದರ 2023ರಲ್ಲಿ ನಾಗಾಲೋಟದಲ್ಲಿದ್ದು, 2023-24ರಲ್ಲಿ ದರ 68,000 ರೂ.ಗೆ ಜಿಗಿಯುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಹಣದುಬ್ಬರದ ಪರಿಣಾಮ ಬಂಗಾರದ ಮೇಲಿನ ಹೂಡಿಕೆಗೆ 10-15% ಆದಾಯ ಸಿಗುವ ಸಾಧ್ಯತೆ ಇದೆ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ಜತೀನ್ ತ್ರಿವೇದಿ (Gold Price Outlook) ತಿಳಿಸಿದ್ದಾರೆ.
ಇದನ್ನೂ ಓದಿ: Gold rate : ಬಂಗಾರದ ದರದಲ್ಲಿ 490 ರೂ. ಇಳಿಕೆ, ಬೆಳ್ಳಿ 600 ರೂ. ಅಗ್ಗ
ಒಂದು ವೇಳೆ ಬಂಗಾರದ ದರ 15-20% ಪ್ರಮಾಣದಲ್ಲಿ ಏರಿಕೆಯಾದರೆ 64,500 ರೂ. ಮತ್ತು 66,800 ರೂ. ಶ್ರೇಣಿಯಲ್ಲಿ ಏರಿಕೆಯಾಗಲಿದೆ. 2024ರಲ್ಲಿ 68,000 ರೂ. ತನಕ ಹಚ್ಚಳವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್ (28 ಗ್ರಾಮ್) ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1869 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 68,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್. 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು.
ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:
ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.
ಭಾರತ ವಿಶ್ವದಲ್ಲಿಯೇ ಎರಡನೆಯ ಅತಿ ದೊಡ್ಡ ಬಂಗಾರದ ( Gold rate ) ಮಾರುಕಟ್ಟೆಯಾಗಿದೆ. ಚೀನಾ ಬಿಟ್ಟರೆ ಅತಿ ಹೆಚ್ಚು ಚಿನ್ನ ಕೊಳ್ಳುವ ದೇಶ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜನ ಸಂಖ್ಯೆಯ ಹೆಚ್ಚಳ, ವಿವಾಹ ಸಮಾರಂಭಗಳ ಏರಿಕೆ, ಹಬ್ಬಗಳ ಸಂಭ್ರಮ, ಜನರ ಆದಾಯದಲ್ಲಿ ಏರಿಕೆ, ನಗರೀಕರಣ ಮೊದಲಾದ ಕಾರಣಗಳಿಂದ ಚಿನ್ನದ ಖರೀದಿ ಗಣನೀಯ ಏರಿಕೆಯಾಗುತ್ತಿದೆ. ಈ ಟ್ರೆಂಡ್ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತನ್ನ ವರದಿಯಲ್ಲಿ ತಿಳಿಸಿದೆ. ಈ ವರದಿ ಹಲವು ಸ್ವಾರಸ್ಯಕರ ಅಂಶಗಳನ್ನು ಬಹಿರಂಗಪಡಿಸಿದೆ.
ಚಿನ್ನದ ದರ
Gold rate today : ಬೆಂಗಳೂರಿನಲ್ಲಿ ಬಂಗಾರದ ದರ ಅಲ್ಪ ಇಳಿಕೆ, ಬೆಳ್ಳಿ 400 ರೂ. ಅಗ್ಗ
Gold rate today ಬಂಗಾರದ ದರದಲ್ಲಿ ಸೋಮವಾರ ಅಲ್ಪ ಇಳಿಕೆಯಾಗಿದೆ. ಬೆಳ್ಳಿ 400 ರೂ. ತಗ್ಗಿದೆ. ವಿವರ ಇಲ್ಲಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಬಂಗಾರದ ದರದಲ್ಲಿ ಸೋಮವಾರ ಅಲ್ಪ ಇಳಿಕೆಯಾಗಿದೆ. 24 ಕ್ಯಾರಟ್ ಚಿನ್ನದ ದರದಲ್ಲಿ 10 ರೂ. ತಗ್ಗಿದ್ದು, 61,460 ರೂ.ಗೆ ಇಳಿದಿದೆ. (Gold rate today) ಆಭರಣ ಚಿನ್ನ ಅಥವಾ 22 ಕ್ಯಾರಟ್ ಚಿನ್ನದ ದರ 10 ರೂ. ಇಳಿದಿದ್ದು, 56,340 ರೂ.ಗೆ ಇಳಿಕೆಯಾಗಿದೆ. ಬೆಳ್ಳಿಯ ದರದಲ್ಲಿ 400 ರೂ. ಇಳಿದಿದ್ದು, ಪ್ರತಿ ಕೆ.ಜಿ ಬೆಳ್ಳಿ ದರ 78,600 ರೂ.ಗೆ ತಗ್ಗಿದೆ.
ಬಂಗಾರದ ದರ 2023ರಲ್ಲಿ ನಾಗಾಲೋಟದಲ್ಲಿದ್ದು, 2023-24ರಲ್ಲಿ ದರ 68,000 ರೂ.ಗೆ ಜಿಗಿಯುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಹಣದುಬ್ಬರದ ಪರಿಣಾಮ ಬಂಗಾರದ ಮೇಲಿನ ಹೂಡಿಕೆಗೆ 10-15% ಆದಾಯ ಸಿಗುವ ಸಾಧ್ಯತೆ ಇದೆ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ಜತೀನ್ ತ್ರಿವೇದಿ (Gold Price Outlook) ತಿಳಿಸಿದ್ದಾರೆ.
ಇದನ್ನೂ ಓದಿ: Gold import : ಚಿನ್ನದ ದರ ಇಳಿಯಲಿದೆಯೇ? ರಿಯಾಯಿತಿ ಸುಂಕದಲ್ಲಿ 140 ಟನ್ ಬಂಗಾರ ಆಮದಿಗೆ ಚಿಂತನೆ
ಒಂದು ವೇಳೆ ಬಂಗಾರದ ದರ 15-20% ಪ್ರಮಾಣದಲ್ಲಿ ಏರಿಕೆಯಾದರೆ 64,500 ರೂ. ಮತ್ತು 66,800 ರೂ. ಶ್ರೇಣಿಯಲ್ಲಿ ಏರಿಕೆಯಾಗಲಿದೆ. 2024ರಲ್ಲಿ 68,000 ರೂ. ತನಕ ಹಚ್ಚಳವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್ (28 ಗ್ರಾಮ್) ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1869 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 68,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್. 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು.
ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:
ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.
ಭಾರತ ವಿಶ್ವದಲ್ಲಿಯೇ ಎರಡನೆಯ ಅತಿ ದೊಡ್ಡ ಬಂಗಾರದ ( Gold rate ) ಮಾರುಕಟ್ಟೆಯಾಗಿದೆ. ಚೀನಾ ಬಿಟ್ಟರೆ ಅತಿ ಹೆಚ್ಚು ಚಿನ್ನ ಕೊಳ್ಳುವ ದೇಶ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜನ ಸಂಖ್ಯೆಯ ಹೆಚ್ಚಳ, ವಿವಾಹ ಸಮಾರಂಭಗಳ ಏರಿಕೆ, ಹಬ್ಬಗಳ ಸಂಭ್ರಮ, ಜನರ ಆದಾಯದಲ್ಲಿ ಏರಿಕೆ, ನಗರೀಕರಣ ಮೊದಲಾದ ಕಾರಣಗಳಿಂದ ಚಿನ್ನದ ಖರೀದಿ ಗಣನೀಯ ಏರಿಕೆಯಾಗುತ್ತಿದೆ. ಈ ಟ್ರೆಂಡ್ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತನ್ನ ವರದಿಯಲ್ಲಿ ತಿಳಿಸಿದೆ. ಈ ವರದಿ ಹಲವು ಸ್ವಾರಸ್ಯಕರ ಅಂಶಗಳನ್ನು ಬಹಿರಂಗಪಡಿಸಿದೆ.
-
ಕರ್ನಾಟಕ16 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ19 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ16 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ15 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ10 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕಿರುತೆರೆ17 hours ago
Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಅತಿಥಿಗಳು ಇವರು!
-
ಕರ್ನಾಟಕ7 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
-
ಕ್ರಿಕೆಟ್6 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ