ಪ್ರಮುಖ ಸುದ್ದಿ
Union Budget 2023: ಬಜೆಟ್ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
ಕೇಂದ್ರ ಸರ್ಕಾರದ 2023-24 ಸಾಲಿನ ಬಜೆಟ್ ಅನ್ನು ಡೌನ್‌ಲೋಡ್ (Union Budget 2023) ಮಾಡಿಕೊಳ್ಳುವ ವಿಧಾನದ ವಿವರ ಇಲ್ಲಿದೆ.
ನವ ದೆಹಲಿ: ಸಂಸತ್ತಿನಲ್ಲಿ ಮಂಡನೆಯಾಗುತ್ತಿರುವ 2023-24 ಸಾಲಿನ ಕೇಂದ್ರ ಬಜೆಟ್ ಪ್ರತಿಯನ್ನು (Union Budget 2023) ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. (February 1, 2023) ಈ ಕುರಿತು ವಿವರ ಇಲ್ಲಿದೆ. (Full text of FM Sitharaman speech)
ಕೇಂದ್ರ ಬಜೆಟ್ ಡಿಜಿಟಲ್ ಪ್ರತಿಯನ್ನು www.indiabudget.gov.in ವೆಬ್ ಸೈಟ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣ ಪೂರ್ಣಗೊಳಿಸಿದ ಬಳಿಕ ವೆಬ್‌ಸೈಟ್‌ನಲ್ಲಿ ಡಿಜಿಟಲ್ ಪ್ರತಿ ದೊರೆಯಲಿದೆ.
ಪ್ರಮುಖ ಸುದ್ದಿ
Dina Bhavishya : ನಿಮಗೆ ಆಗದವರು ಪಿತೂರಿ ಮಾಡ್ಬಹುದು ಎಚ್ಚರ!
Dina Bhavishya : ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ ತ್ರಯೋದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಚಂದ್ರನು ಬುಧವಾರ ಕುಂಭ ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ಕನ್ಯಾ, ಧನಸ್ಸು, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರಿಗೆ ಆರೋಗ್ಯದಲ್ಲಿ ಏರುಪೇರಾಗಲಿದೆ ಎಚ್ಚರಿಕೆ ವಹಿಸಿ. ಮಿಥುನ ರಾಶಿಯವರು ಹತಾಶೆಯ ಭಾವನೆಯಿಂದ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಸಿಂಹ ರಾಶಿಯವರಿಗೆ ಬಹಳ ದಿನಗಳಿಂದ ಕಾಡುತ್ತಿರುವ ಸಮಸ್ಯೆಗೆ ಪರಿಹಾರ ಸಿಗಲಿದೆ. ಭವಿಷ್ಯದ ಹೂಡಿಕೆ ವ್ಯವಹಾರದ ಕುರಿತಾಗಿ ಆಲೋಚನೆ ಮಾಡುವಿರಿ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.
ಇಂದಿನ ಪಂಚಾಂಗ (kannada panchanga) (27-09-2023)
ಮೇಷ: ಆರೋಗ್ಯದಲ್ಲಿ ಏರುಪೇರಾಗಲಿದೆ ಎಚ್ಚರಿಕೆ ವಹಿಸಿ. ಅಗತ್ಯ ವಸ್ತುಗಳ ಖರೀದಿಯಿಂದ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಆಪ್ತರು ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ ಇದೆ. ಅನಗತ್ಯ ಒತ್ತಡ ನಿಮ್ಮ ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆ ಇದೆ. ಸಂಗಾತಿಯ ಮಧುರ ಮಾತುಗಳು ಹಿತವೆನಿಸುಬಹುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ವೃಷಭ: ದೀರ್ಘಕಾಲದ ಪ್ರಯತ್ನ ನಿಮಗೆ ಯಶಸ್ಸು ತಂದು ಕೊಡಲಿದೆ. ಈ ಹಿಂದೆ ನೀವು ಮಾಡಿದ ಸಹಾಯ ಇಂದು ಫಲ ನೀಡಲಿದೆ. ಹಿರಿಯರಿಂದ ಪ್ರಶಂಸೆ ಸಿಗಲಿದೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರ ಅಭಿವೃದ್ಧಿ ಕಾಣಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6
ಮಿಥುನ: ಹತಾಶೆಯ ಭಾವನೆಯಿಂದ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಅನಿರೀಕ್ಷಿತ ಲಾಭ ಸಿಗುವ ಸಾಧ್ಯತೆ ಇದೆ. ಪ್ರೀತಿ-ಪಾತ್ರರ ಜತೆ ವಾದಗಳಿಗೆ ಕಾರಣವಾಗಬಹುದಾದ ವಿವಾದಾತ್ಮಕ ವಿಷಯಗಳನ್ನು ತಪ್ಪಿಸಿ, ಎಚ್ಚರಿಕೆಯಿಂದ ಮಾತನಾಡಿ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಸದೃಢವಾಗಿರಿ. ಉದ್ಯೋಗಿಗಳಿಗೆ ಶುಭ ಫಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ
ಅದೃಷ್ಟ ಸಂಖ್ಯೆ: 4
ಕಟಕ: ಮಾನಸಿಕವಾಗಿ ದೈಹಿಕವಾಗಿ ಆರೋಗ್ಯ ಪರಿಪೂರ್ಣವಾಗಿರಲಿದೆ. ಹರ್ಷ ತುಂಬಿದ ಮನಸ್ಸು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಹಳೆಯ ಬಾಕಿ ಮರುಪಾವತಿ ಮಾಡುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯಮಿಗಳಿಗೆ ಒಳ್ಳೆಯ ದಿನ. ವ್ಯಾಪಾರದ ಉದ್ದೇಶಕ್ಕಾಗಿ ಕೈಗೊಂಡ ಪ್ರವಾಸ ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತದೆ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ಸಿಂಹ: ಬಹಳ ದಿನಗಳಿಂದ ಕಾಡುತ್ತಿರುವ ಸಮಸ್ಯಗೆ ಪರಿಹಾರ ಸಿಗಲಿದೆ. ಭವಿಷ್ಯದ ಹೂಡಿಕೆ ವ್ಯವಹಾರದ ಕುರಿತಾಗಿ ಆಲೋಚನೆ ಮಾಡುವಿರಿ. ನಿಮ್ಮ ಹಿಂದೆ ನಿಮಗೆ ಆಗದವರು ಪಿತೂರಿ ನಡೆಸುವ ಸಾಧ್ಯತೆ ಇದೆ, ಎಚ್ಚರಿಕೆ ಇರಲಿ. ದಿಢೀರ್ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6
ಕನ್ಯಾ: ಸೃಜನಾತ್ಮಕ ಕ್ಷೇತ್ರದಲ್ಲಿರುವವರು ಬಹಳ ದಿನಗಳಿಂದ ಕಾಯುತ್ತಿದ್ದ ಪ್ರಸಿದ್ಧಿ ಮತ್ತು ಗುರುತಿಸುವಿಕೆಯನ್ನು ಪಡೆಯುವ ಯಶಸ್ವಿ ದಿನವಿದು. ಭೂಮಿ ಸಂಬಂಧಿ, ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ದಿನಕ್ಕಿಂತ ಹೆಚ್ಚಿನ ಸಂತೋಷ ಇರಲಿದೆ. ಆರ್ಥಿಕ ಚಟುವಟಿಕೆ ಗರಿಗೆದರಲಿದೆ. ದಿನದ ಕೊನೆಯಲ್ಲಿ ಕೌಟುಂಬಿಕ ಕಲಹಗಳು ನಡೆಯುವ ಸಾಧ್ಯತೆ, ಮಾತಿನಲ್ಲಿ ಹಿಡಿತವಿರಲಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಒತ್ತಡ ತುಂಬಿದ ವಾತಾವರಣ ಇರಲಿದೆ. ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ವ್ಯಾಪಾರ ವ್ಯವಹಾರದಲ್ಲಿ ತೊಡಗಿರುವವರಿಗೆ ದಿನದ ಮಟ್ಟಿಗೆ ಹೆಚ್ಚಿನ ಲಾಭ ಸಿಗಲಿದೆ. ಕುಟುಂಬ ಸಹಿತರಾಗಿ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ ಸಿಗಲಿದೆ. ಆರ್ಥಿಕವಾಗಿ ಪ್ರಗತಿ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ವೃಶ್ಚಿಕ: ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ. ನಿಮ್ಮ ಸಂತೋಷದ ಸಂಗತಿಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅಗತ್ಯ ವಸ್ತುಗಳ ಖರೀದಿಯಿಂದ ಆರ್ಥಿಕವಾಗಿ ಸಾಧಾರಣವಾಗಿರಲಿದೆ. ಅಮೂಲ್ಯ ವಸ್ತುಗಳ ಬಗೆಗೆ ಜಾಗೃತಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8
ಧನಸ್ಸು: ಕೆಲವು ಪ್ರಮುಖ ನಿರ್ಧಾರಗಳು ನಿಮ್ಮ ಮೇಲೆ ಪರಿಣಾಮ ಬೀರಬಹುದು. ಅದರ ಹೊರತಾಗಿ ಇಂದು ಮಾಡಿದ ಹೂಡಿಕೆ ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ.
ಕುಟುಂಬ ಸದಸ್ಯರ ಮಾತುಗಳು ನಿಮ್ಮನ್ನು ಘಾಸಿಗೊಳಿಸಬಹುದು.
ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಮಿಶ್ರ ಫಲ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5
ಉಸಿರಾಟದ ಸಮಸ್ಯೆಗಳಿಗೆ ಈ ಕ್ಷೇತ್ರದಲ್ಲಿ ಸಿಗಲಿದೆ ಪರಿಹಾರ
ಮಕರ: ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ. ಅದರಲ್ಲಿಯೂ ಗರ್ಭಿಣಿಯರು ಹೆಚ್ಚಿನ ಮುತುವರ್ಜಿ ವಹಿಸಬೇಕು. ಅನಾವಶ್ಯಕ ಖರ್ಚುಗಳಿಂದ ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ. ಸಂಬಂಧ ಪಡದೆ ಇರುವ ವಿಷಯದ ಕುರಿತು ಮೂಗು ತೂರಿಸುವುದು ಬೇಡ. ಟೀಕೆಗಳನ್ನು ಎದಿರಿಸಬೇಕಾದಿತು, ಎಚ್ಚರಿಕೆ ಇರಲಿ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5
ಕುಂಭ: ವಿವಾದಾತ್ಮಕ ವಿಷಯಗಳಿಂದ ದೂರ ಇರಿ. ಮಾತಿನಲ್ಲಿ ಹಿಡಿತವಿರಲಿ. ತಮ್ಮ ಬಳಿ ಯಾರಾದರೂ ಹಣದ ಸಹಾಯ ಬೇಡುವ ಸಾಧ್ಯತೆ ಇದೆ. ಆಲೋಚಿಸಿ ಹೆಜ್ಜೆ ಇಡಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಮಧ್ಯಮ ಫಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3
ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?
ಮೀನ: ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಸಾಧನೆ ಮಾರ್ಗಸೂಚಿಯಾಗುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.ಆರ್ಥಿಕವಾಗಿ ಸದೃಢವಾಗಿ ಇರಲಿದ್ದೀರಿ. ಉದ್ಯೋಗಿಗಳಿಗೆ ಅಭದ್ರತೆಯ ಭಾವನೆ ಕಾಡಲಿದೆ. ನಿಮ್ಮ ಸಹನೆಯನ್ನು ಪರೀಕ್ಷಿಸು ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | [email protected]
ದೇಶ
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
UNGA Speech: 78ನೇ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ಪಾಲ್ಗೊಂಡು ದೇಶದ ವಾದವನ್ನು ಮಂಡಿಸಿದರು.
ವಿಶ್ವ ಸಂಸ್ಥೆ: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು(Respect for territorial integrity), ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಷೇರಿದಂತೆ ಅನೇಕ ವಿಷಯಗಳನ್ನು ಭಾರತದ ವಿದೇಶಾಂಗ ಸಚಿವ ಎಸ್ ಜೈ ಶಂಕರ್ (External affairs minister S Jaishankar) ಅವರು, ಮಂಗಳವಾ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದರು. ”ನಮಸ್ತೆ, ನಾನು ಭಾರತದಿಂದ ಬಂದಿದ್ದೇನೆ(Bharat)” ಎಂದು ಮಾತು ಆರಂಭಿಸಿದ ಜೈ ಶಂಕರ್ ಅವರು, ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಮತ್ತು ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದರು. ಇದೇ ವೇಳೆ, ಪರೋಕ್ಷವಾಗಿ ಕೆನಡಾಕ್ಕೆ ಕುಟುಕಿದ ಜೈ ಶಂಕರ್ ಅವರು, ಭಯೋತ್ಪಾದನೆಯ ಪ್ರತಿಕ್ರಿಯೆಯು ರಾಜಕೀಯ ಅನುಕೂಲಕ್ಕಾಗಿ ನಿರ್ಧರಿಸಬಾರದು ಎಂದು ಹೇಳಿದರು(UNGA Speech).
ಲಸಿಕೆ ವರ್ಣಭೇದ ನೀತಿಯಂತಹ ಅನ್ಯಾಯವನ್ನು ಮರುಕಳಿಸಲು ನಾವು ಎಂದಿಗೂ ಅವಕಾಶವನ್ನು ನೀಡಬಾರದು. ಹವಾಮಾನ ಕ್ರಿಯೆಯು ಸಹ ಐತಿಹಾಸಿಕ ಜವಾಬ್ದಾರಿಗಳ ತಪ್ಪಿಸಿಕೊಳ್ಳುವಿಕೆಗೆ ಸಾಕ್ಷಿಯಾಗಲು ಸಾಧ್ಯವಿಲ್ಲ. ಆಹಾರ ಮತ್ತು ಶಕ್ತಿಯನ್ನು ಅಗತ್ಯವಿರುವವರಿಂದ ಶ್ರೀಮಂತರಿಗೆ ಸಾಗಿಸಲು ಮಾರುಕಟ್ಟೆಯ ಶಕ್ತಿಯನ್ನು ಬಳಸಬಾರದು ಎಂದು ಭಾರತೀಯ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ಹೇಳಿದರು.
ರಾಜಕೀಯ ಅನುಕೂಲವು ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸೆಗೆ ಪ್ರತಿಕ್ರಿಯೆಗಳನ್ನು ನಿರ್ಧರಿಸುತ್ತದೆ ಎಂದು ನಾವು ಪರಿಗಣಿಸಬಾರದು. ಅದೇ ರೀತಿ, ಪ್ರಾದೇಶಿಕ ಸಮಗ್ರತೆಗೆ ಗೌರವ ಮತ್ತು ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಒಳ್ಳೆಯದು ಎಂದು ಭಾರತೀಯ ವಿದೇಶಾಂಗ ಸಚಿವರು ಹೇಳಿದರು.
78 ನೇ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರ ಭಾಷಣವು ಗಮನ ಸೆಳೆಯಿತು. ನ್ಯಾಯಯುತ, ಸಮಾನ ಮತ್ತು ಪ್ರಜಾಪ್ರಭುತ್ವದ ವಿಶ್ವ ಕ್ರಮಕ್ಕಾಗಿ ಕರೆ ನೀಡಿದರು. ನಮ್ಮ ಚರ್ಚೆಗಳಲ್ಲಿ, ನಾವು ಸಾಮಾನ್ಯವಾಗಿ ನಿಯಮಾಧಾರಿತ ಆದೇಶದ ಪ್ರಚಾರವನ್ನು ಪ್ರತಿಪಾದಿಸುತ್ತೇವೆ. ಕಾಲಕಾಲಕ್ಕೆ, ಯುಎನ್ ಚಾರ್ಟರ್ಗೆ ಗೌರವವನ್ನು ಸಹ ಒಳಗೊಂಡಿರುತ್ತದೆ. ಆದರೆ ಎಲ್ಲಾ ಚರ್ಚೆಗಾಗಿ, ಇನ್ನೂ ಕೆಲವು ರಾಷ್ಟ್ರಗಳು ಕಾರ್ಯಸೂಚಿಯನ್ನು ರೂಪಿಸುತ್ತವೆ ಮತ್ತು ರೂಢಿಗಳನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತವೆ. ಇದು ಅನಿರ್ದಿಷ್ಟವಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: ಯುರೋಪ್ ದೇಶಗಳಿಗೆ ತಮ್ಮ ಸಮಸ್ಯೆ ಜಗತ್ತಿನ ಸಮಸ್ಯೆ ಎಂಬ ಭ್ರಮೆ: ವಿದೇಶಾಂಗ ಸಚಿವ ಜೈ ಶಂಕರ್ ಖಡಕ್ ಮಾತು
ಮಹಿಳಾ ಮಸೂದೆ ಪ್ರಸ್ತಾಪ
ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಲಾದ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆಯೂ ವಿದೇಶಾಂಗ ಸಚಿವರು ಮಾತನಾಡಿದರು. “ನಮ್ಮ ಇತ್ತೀಚಿನ ಸಮರ್ಥನೆಯು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಶಾಸನ ಮಾಡಿದ್ದೇವೆ. ಪ್ರಜಾಪ್ರಭುತ್ವದ ಪ್ರಾಚೀನ ಸಂಪ್ರದಾಯಗಳು ಆಳವಾದ ಆಧುನಿಕ ಬೇರುಗಳನ್ನು ಹೊಂದಿರುವ ಸಮಾಜ ಪರವಾಗಿ ನಾನು ಮಾತನಾಡುತ್ತಿದ್ದೇನೆ. ಪರಿಣಾಮವಾಗಿ, ನಮ್ಮ ಆಲೋಚನೆಗಳು, ವಿಧಾನಗಳು ಮತ್ತು ಕಾರ್ಯಗಳು ಹೆಚ್ಚು ಆಧಾರವಾಗಿವೆ ಮತ್ತು ಅಧಿಕೃತವಾಗಿವೆ ಎಂದು ಸಚಿವರು ಪ್ರತಿಪಾದಿಸಿದರು.
ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇಶ
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
Manipur Horror: ಹದಿ ಹರಿಯದ ಇಬ್ಬರ ವಿದ್ಯಾರ್ಥಿಗಳನ್ನು ಅಪಹರಿಸಿದ ದುಷ್ಕರ್ಮಿಗಳು, ಅವರನ್ನು ಹತ್ಯೆ ಮಾಡಿದ್ದಾರೆ. ಈ ಸಂಬಂಧ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ನವದೆಹಲಿ: ನನ್ನ ಮಗ ಅಥವಾ ಆ ಹುಡುಗಿ ಮಾಡಿದ ಅಪರಾಧವಾದರೂ ಏನು? (done anything wrong?) ಅವರನ್ನು ಅಪಹರಿಸಿದ ವೇಳೆ ಅವರು ಪ್ರಯಾಣಿಸುತ್ತಿರುವುದೇ ತಪ್ಪಾಯ್ತಾ ಎಂದು ಶಸ್ತ್ರ ಸಜ್ಜಿತ ದುಷ್ಕರ್ಮಿಗಳಿಂದ ಹತ್ಯೆಗೀಡಾದ 17 ವರ್ಷದ ವಿದ್ಯಾರ್ಥಿಯ ತಂದೆ ಫಿಜಾಮ್ ಇಬುಂಗೋಬಿ ಅವರು ಪ್ರಶ್ನಿಸಿದ್ದಾರೆ(Parents Of Manipur Teens). ಶಸ್ತ್ರಸಜ್ಜಿತ ದುಷ್ಕರ್ಮಿಗಳಿಂದ ಹತ್ಯೆಗೀಡಾದ 17 ವರ್ಷದ ವಿದ್ಯಾರ್ಥಿಯ ಪೋಷಕರು ಎರಡು ತಿಂಗಳಿನಿಂದ ಪ್ರತಿದಿನ ಬೆಳಿಗ್ಗೆ ತಿಂಡಿಯ ತಟ್ಟೆಯನ್ನು ಅವನ ಟೇಬಲ್‌ಗೆ ಹಾಕುತ್ತಿದ್ದರು, ಅವನು ಮನೆಗೆ ಮರಳುತ್ತಾನೆ ಎಂದು ಆಶಿಸುತ್ತಿದ್ದರು. ಅವರು ಈಗ ಟೇಬಲ್‌ನಲ್ಲಿ ಆಹಾರ ತಟ್ಟೆ ಹಾಕುವುದನ್ನು ನಿಲ್ಲಿಸಿದ್ದಾರೆ. ಈ ವಿಷಯವನ್ನು ಕಣ್ಣೀರು ಹಾಕುತ್ತಲೇ ಅವರು ತಿಳಿಸಿದರು(Manipur Horror).
ಜುಲೈನಲ್ಲಿ ನಾಪತ್ತೆಯಾಗಿದ್ದ ಮೈತಿ ಸಮುದಾಯದ ಇಬ್ಬರು ವಿದ್ಯಾರ್ಥಿಗಳಾದ ಹಿಜಾಮ್ ಲಿಂಥೋಯಿಂಗಾಂಬಿ (17) ಮತ್ತು ಫಿಜಾಮ್ ಹೇಮ್ಜಿತ್ (20) ಅವರ ಕೊಲೆಯಾಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವೈರಲ್ ಆಗಿರುವ ಫೋಟೋವೊಂದರಲ್ಲಿ ಸಶಸ್ತ್ರ ಗುಂಪೊಂದರ ಮುಂದೆ ಹುಲ್ಲುಗಾವಲಿನ ಕಾಂಪೌಂಡ್‌ನಲ್ಲಿ ವಿದ್ಯಾರ್ಥಿಗಳಿಬ್ಬರು ಕುಳಿತಿದ್ದಾರೆ. ಲಿಂಥೋಯಿಂಗಾಂಬಿ ಬಿಳಿ ಟೀ ಶರ್ಟ್ ಧರಿಸಿದ್ದರೆ, ಹೇಮ್ಜಿತ್ ಚೆಕ್ಸ್ ಶರ್ಟ್ ಧರಿಸಿದ್ದಾರೆ. ಅವರ ಹಿಂದೆ ಬಂದೂಕುಗಳನ್ನು ಹಿಡಿದುಕೊಂಡಿರುವ ಇಬ್ಬರು ನಿಂತಿದ್ದಾರೆ. ಇನ್ನೊಂದು ಫೋಟೋದಲ್ಲಿ ವಿದ್ಯಾರ್ಥಿಗಳ ದೇಹಗಳು ನೆಲದ ಮೇಲೆ ಬಿದ್ದಿರುವುದು ಕಾಣಬಹುದು.
ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಭಾರೀ ಆಕ್ರೋಶವಾಗಿದ್ದು, ಸಿಬಿಐ ಈ ಪ್ರಕರಣದ ತನಿಖೆಯನ್ನು ಕೈಗೊಂಡಿದೆ. ಈ ಮಧ್ಯೆ, ಹತರಾದ ವಿದ್ಯಾರ್ಥಿಯ ತಂದೆ ಎನ್‌ಡಿ ಟಿವಿಯೊಂದಿಗೆ ಮಾತನಾಡಿ, ತಮ್ಮ ಅಳಲನ್ನು ಹೊರ ಹಾಕಿದ್ದಾರೆ.
17ರ ಹರೆಯದ ಬಾಲಕಿ ಜುಲೈ 6ರಂದು ಬೆಳಗ್ಗೆ ಕೆಲ ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಿದಾಗ ವೈದ್ಯಕೀಯ ಪೂರ್ವ ವ್ಯಾಸಂಗಕ್ಕೆ ಪ್ರವೇಶಕ್ಕಾಗಿ ನೀಟ್ ತರಗತಿಗಳಿಗೆ ಹಾಜರಾಗಲು ಮನೆಯಿಂದ ತೆರಳಿದ್ದಳು. ಆಕೆಯನ್ನು ಅವಳ ಸ್ನೇಹಿತ ಮೋಟಾರು ಸೈಕಲ್‌ನಲ್ಲಿ ಕರೆದುಕೊಂಡು ಹೋಗಿದ್ದ. ಪರಿಸ್ಥಿತಿ ಸುಧಾರಿಸಿದೆ ಎಂದು ಭಾವಿಸಿ, ಇಬ್ಬರೂ ಚುರಚಂದಪುರ ಮತ್ತು ಬಿಷ್ಣುಪುರ ಜಿಲ್ಲೆಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಗೆ ಹೋಗಿದ್ದರು. ಈ ಪ್ರದೇಶದಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ಭಾರೀ ಸಂಘರ್ಷ ನಡೆದಿತ್ತು. ಬಳಿಕ ಅವರು ಕಾಣೆಯಾಗಿದ್ದರು. ವಿದ್ಯಾರ್ಥಿಗಳಿಬ್ಬರ ತಂದೆ-ತಾಯಿ ಮಕ್ಕಳ ಕಾಣೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದದ್ರು.
ಈ ಸುದ್ದಿಯನ್ನೂ ಓದಿ: Manipur Horror: ಮೈತಿ ವಿದ್ಯಾರ್ಥಿಗಳಿಬ್ಬರ ಶವಗಳ ಫೋಟೊ ವೈರಲ್; ಮಣಿಪುರ ಮತ್ತೆ ಉದ್ವಿಗ್ನ?
ಮಗಳು ಮನೆಗೆ ಬರಲಿಲ್ಲ. ಆಗ ಅವಳಿಗೆ ಕರೆ ಮಾಡಿದೆ. ಕರೆ ಸ್ವೀಕರಿಸಿದಳು. ಆದರೆ, ಭಯಭೀತಳಂತೆ ಕಂಡಳು. ಅಲ್ಲದೇ ನಂಬೋಲ್‌ನಲ್ಲಿದ್ದೇನೆ ಎಂದು ಹೇಳಿದಳು. ಅಲ್ಲಿಗೆ ಯಾಕೆ ಹೋಗಿರುವೆ ಎಂದು ಪ್ರಶ್ನಿಸಿದೆ. ಅಲ್ಲದೇ, ನಂಬೋಲ್‌ನಲ್ಲಿ ಎಲ್ಲಿದ್ದಿಯಾ ಸ್ಥಳ ಮಾಹಿತಿ ನೀಡು ಎಂದು ಕೇಳಿದೆ. ಅವಳು ಖೌಪುಮ್ (ನಂಬೋಲ್‌ನಿಂದ 20 ಕಿಮೀ) ಎಂದು ಗೊಣಗಿದಳು ಮತ್ತು ಅವಳ ಫೋನ್ ಸ್ವಿಚ್ ಆಫ್ ಆಯಿತು ಎಂದು ವಿದ್ಯಾರ್ಥಿನಿಯ ತಾಯಿ ಜಯಶ್ರೀ ಆಗಸ್ಟ್ 2 ರಂದು ಎನ್‌ಡಿಟಿವಿಗೆ ತಿಳಿಸಿದ್ದರು. ನಮಗೆ ನ್ಯಾಯ ದೊರೆಯಬೇಕು. ಕೊಲೆಗಾರರಿ ಶಿಕ್ಷೆಯಾಗಬೇಕು. ನಾನು ಈ ದಿನಗಳನ್ನು ಹೇಗೆ ಕಳೆದಿದ್ದೇನೆ ಎಂದು ನನಗೆ ಗೊತ್ತು ಎಂದು ಬಾಲಕಿಯ ತಂದೆ ಹಿಜಾಮ್ ಕುಲ್ಲಜಿತ್ ಹೇಳುತ್ತಾ ಕಣ್ಣೀರಾದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇಶ
GST Evasion: ಜಿಎಸ್‌ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
GST Evasion: ಮಹಾರಾಷ್ಟ್ರದ ಬಿಜೆಪಿ ನಾಯಕಿಯೊಬ್ಬರ ಕಾರ್ಖಾನೆಯು ಸಕ್ಕರೆ ಮಾರಾಟದ ಸಂಬಂಧ ಜಿಎಸ್‌ಟಿ ವಂಚಿಸಿತ್ತು. ಈ ಹಿನ್ನೆಲೆಯಲ್ಲಿ ಕಾರ್ಖಾನೆಯ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ.
ಮುಂಬೈ: ಜಿಎಸ್‌ಟಿ ವಂಚನೆ (GST Evasion) ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಪಂಕಜಾ ಮುಂಡೆ (BJP national secretary Pankaja Munde) ಒಡೆತನದ, ಬೀಡ್ ಜಿಲ್ಲೆಯಲ್ಲಿರುವ (Beed District) ವೈದ್ಯನಾಥ್ ಸಹಕಾರಿ ಸಕ್ಕರೆ ಕಾರ್ಖಾನೆಗೆ (Vaidyanath Co-operative sugar factory) ಸೇರಿದ 19 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸರಕು ಮತ್ತು ಸೇವಾ ತೆರಿಗೆ ಕಮಿಷನರೇಟ್ (Goods and Services Tax Commissionerate) ಸೋಮವಾರ ವಶಪಡಿಸಿಕೊಂಡಿದೆ. ಸಕ್ಕರೆ ಮಾರಾಟಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿ ವಂಚನೆ ಹಿನ್ನೆಲೆಯಲ್ಲಿ ಕಮಿಷನರೇಟ್ ಈ ಕ್ರಮ ಕೈಗೊಂಡಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ವೈದ್ಯನಾಥ್ ಸಹಕಾರಿ ಸಕ್ಕರೆ ಕಾರ್ಖಾನೆಯು ಜಿಎಸ್‌ಟಿ ಪಾವತಿಸಲು ವಿಫಲವಾಗಿತ್ತು. ವಶಪಡಿಸಿಕೊಂಡ ಸೊತ್ತುಗಳಲ್ಲಿ 19 ಕೋಟಿ ರೂ. ಮೌಲ್ಯದ ಕಾರ್ಖಾನೆಯ ಬಾಯ್ಲರ್ ಮತ್ತು ಇತರ ಸಂಬಂಧಿತ ಯಂತ್ರೋಪಕರಣಗಳು ಸೇರಿವೆ.
ಹಣದ ಕೊರತೆಯಿಂದಾಗಿ ನಮ್ಮ ಕಾರ್ಖಾನೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಾವು ಮೊದಲು ರೈತರ ಬಾಕಿ ಪಾವತಿಸಲು ನಿರ್ಧರಿಸಿದ್ದೇವೆ. ನಮಗೆ ಸರ್ಕಾರದಿಂದ ಆರ್ಥಿಕ ನೆರವು ಬೇಕಿತ್ತು. ಇನ್ನು ಕೆಲವು ಕಾರ್ಖಾನೆಗಳ ಜತೆಗೆ ನಮ್ಮ ಸಕ್ಕರೆ ಕಾರ್ಖಾನೆಯ ಹೆಸರೂ ಮೊದಲ ಪಟ್ಟಿಯಲ್ಲಿದ್ದು, ಸರ್ಕಾರದಿಂದ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ ನಮ್ಮ ಕಾರ್ಖಾನೆಯನ್ನು ಹೊರತುಪಡಿಸಿ ಉಳಿದೆಲ್ಲ ಕಾರ್ಖಾನೆಗಳು ಆರ್ಥಿಕ ನೆರವು ಪಡೆದಿವೆ. ಆ ಸಮಯದಲ್ಲಿ ನಮಗೆ ನೆರವು ಸಿಕ್ಕಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಪಂಕಜಾ ಮುಂಡೆ ಅವರು ಹೇಳಿದ್ದಾರೆ.
ಮುಂಡೆ ಅವರು ಜುಲೈ 7 ರಿಂದ ಎರಡು ತಿಂಗಳ ರಾಜಕೀಯ ವಿರಾಮ ತೆಗೆದುಕೊಂಡಿದ್ದರು. ಅದಾದ ಬಳಿಕ ಶಿವಶಕ್ತಿ ಯಾತ್ರೆಗಾಗಿ ಸುಮಾರು 10 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದರು. ಈ ಪ್ರವಾಸವನ್ನು ಅವರು ಬಿಜೆಪಿಯ ಬ್ಯಾನರ್‌ನ ಅಡಿ ಮಾಡಿರಲಿಲ್ಲ. ಸ್ವಂತ ರಾಜಕೀಯ ಪ್ರವಾಸ ಕೈಗೊಂಡಿದ್ದರು. ಈ ಹಂತದಲ್ಲಿ ಮುಂಡೆ ನೇತೃತ್ವದ ಸಕ್ಕರೆ ಕಾರ್ಖಾನೆಯ ಸೊತ್ತುಗಳನ್ನು ಜಫ್ತಿ ಮಾಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಈ ಸುದ್ದಿಯನ್ನೂ ಓದಿ: NCP Crisis: ಎನ್‌ಸಿಪಿ-ಬಿಜೆಪಿ ದೋಸ್ತಿ; ‘ಮಹಾ’ ಕಮಲ ಶಾಸಕರ ಅಸಮಾಧಾನ! ಪಂಕಜಾ ಮುಂಡೆ ಬಹಿರಂಗ ಆಕ್ರೋಶ
2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿಯ ತಮ್ಮ ಸೋದರಸಂಬಂಧಿ ಧನಂಜಯ್ ಮುಂಡೆ ವಿರುದ್ಧ ಪಂಕಾಜ ಮುಂಡೆ ಅವರು ಸೋಲು ಅನುಭವಿಸಿದ್ದರು. ಆ ಬಳಿಕ ಅವರನ್ನು ಬಿಜೆಪಿಯಲ್ಲಿ ಪೂರ್ತಿಯಾಗಿ ಪಕ್ಕಕ್ಕೆ ತಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪಂಕಜಾ ಮುಂಡೆ ಅವರು ಮಹಾರಾಷ್ಟ್ರದಲ್ಲಿ ಪಕ್ಷದ ನಾಯಕತ್ವದ ವಿರುದ್ಧ, ವಿಶೇಷವಾಗಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.
-
Live News22 hours ago
Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!
-
ವಿದೇಶ13 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ5 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ಸುವಚನ7 mins ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
South Cinema16 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಕರ್ನಾಟಕ16 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ಆಟೋಮೊಬೈಲ್12 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ13 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!