Income Tax AIS App : App of tax department to know TDS and other information for free on mobileIncome Tax AIS App : ಮೊಬೈಲ್‌ನಲ್ಲೇ ಟಿಡಿಎಸ್‌ ಮತ್ತಿತರ ಮಾಹಿತಿ ಉಚಿತವಾಗಿ ತಿಳಿಯಲು ತೆರಿಗೆ ಇಲಾಖೆಯ ಆ್ಯಪ್

ಪ್ರಮುಖ ಸುದ್ದಿ

Income Tax AIS App : ಮೊಬೈಲ್‌ನಲ್ಲೇ ಟಿಡಿಎಸ್‌ ಮತ್ತಿತರ ಮಾಹಿತಿ ಉಚಿತವಾಗಿ ತಿಳಿಯಲು ತೆರಿಗೆ ಇಲಾಖೆಯ ಆ್ಯಪ್

Income Tax AIS App ಮೊಬೈಲ್‌ನಲ್ಲಿಯೇ ತೆರಿಗೆದಾರರು ಸಮಗ್ರ ಮಾಹಿತಿ ಪಡೆಯಲು ಇಲಾಖೆ ಸಿದ್ಧಪಡಿಸಿರುವ ಉಪಯುಕ್ತ ಮೊಬೈಲ್‌ ಅಪ್ಲಿಕೇಶನ್‌ ವಿವರ ಇಲ್ಲಿದೆ.

VISTARANEWS.COM


on

tax
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಆದಾಯ ತೆರಿಗೆ ಇಲಾಖೆಯು (Income Tax Department) ಕಳೆದ ಮಾರ್ಚ್‌ನಲ್ಲಿ AIS for Taxpayer ಎಂಬ ಮೊಬೈಲ್‌ ಆ್ಯಪ್ ಅನ್ನು ಬಿಡುಗಡೆಗೊಳಿಸಿದೆ. ತೆರಿಗೆದಾರರಿಗೆ ತಮ್ಮ Annual Information Statement (AIS) ಅಥವಾ Taxpayer Information Summary (TIS) ಬಗ್ಗೆ ಮಾಹಿತಿಯನ್ನು ಉಚಿತವಾಗಿ ತಿಳಿದುಕೊಳ್ಳಲು ಇದು ಸಹಕಾರಿ. (Income Tax AIS App) ಗೂಗಲ್‌ ಪ್ಲೇ ಮತ್ತು ಆ್ಯಪ್ ಸ್ಟೋರ್‌ನಲ್ಲಿ ನೀವು ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಈ ಆ್ಯಪ್ ತೆರಿಗೆದಾರರಿಗೆ AIS/TIS ಬಗ್ಗೆ ಸಮಗ್ರ ವಿವರಗಳನ್ನು ನೀಡುತ್ತದೆ. ತೆರಿಗೆದಾರನಿಗೆ ಸಂಬಂಧಿಸಿ ನಾನಾ ಮೂಲಗಳಿಂದ ಸಂಗ್ರಹಿಸಿ ಡಿಟೇಲ್ಸ್‌ಗಳನ್ನು ನೀಡುತ್ತದೆ. ತೆರಿಗೆದಾರರು ಈ ಮೊಬೈಲ್‌ ಆ್ಯಪ್ ಮೂಲಕ ಟಿಡಿಎಸ್‌, ಟಿಸಿಎಸ್‌, ಬಡ್ಡಿ ದರ, ಡಿವಿಡೆಂಡ್‌, ಶೇರು ವರ್ಗಾವಣೆ ವಿವರಗಳು, ತೆರಿಗೆ ಪಾವತಿ, ಆದಾಯ ತೆರಿಗೆ ರಿಫಂಡ್‌, ಜಿಎಸ್‌ಟಿ ಡೇಟಾ, ಫಾರಿನ್‌ ರೆಮಿಟೆನ್ಸ್‌ ಇತ್ಯಾದಿಗಳ ವಿವರ ಪಡೆಯಬಹುದು.

AIS For Taxpayer App ಡೌನ್‌ಲೋಡ್‌ :

ಈ ಮೊಬೈಲ್‌ ಆ್ಯಪ್ ಅನ್ನು ಬಳಸಿಕೊಳ್ಳಲು ತೆರಿಗೆದಾರರು ಡೌನ್‌ಲೋಡ್‌ ಮಾಡಿದ ಬಳಿಕ ಆ್ಯಪ್‌ನಲ್ಲಿ ಪ್ಯಾನ್‌ ಸಂಖ್ಯೆ, OTP ಪ್ರಕ್ರಿಯೆ ಪೂರ್ಣಗೊಳಿಸಬೇಕು. ಬಳಿಕ 4 ಅಂಕಿಗಳ PIN ಅನ್ನು ಕ್ರಿಯೇಟ್‌ ಮಾಡಬೇಕು.

AIS for Taxpayer App ನಲ್ಲಿ ನೋಂದಣಿ ಪ್ರಕ್ರಿಯೆ ಹೀಗೆ ಮಾಡಿಕೊಳ್ಳಿ:

ಗೂಗಲ್‌ ಪ್ಲೇ ಅಥವಾ ಆ್ಯಪ್ ಸ್ಟೋರ್‌ನಲ್ಲಿ ಆ್ಯಪ್ ಅನ್ನು ಡೌನ್‌ಲೋಡ್‌ ಮಾಡಿದ ಬಳಿಕ PAN ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.

ಮೊಬೈಲ್‌ಗೆ ಮತ್ತು ಇ-ಫೈಲಿಂಗ್‌ ವೆಬ್‌ಸೈಟ್‌ನಲ್ಲಿ ನೋಂದಾಯಿತ ಇ-ಮೇಲ್‌ಗೆ OTP ಬಂದ ಬಳಿಕ ದೃಢೀಕರಿಸಿ.

4 ಅಂಕಿಗಳ ಡಿಜಿಟ್‌ PIN ಸೃಷ್ಟಿಸಿ

ಬಳಿಕ Annual Information Statement (AIS) ಮೇಲೆ ಕ್ಲಿಕ್ಕಿಸಿ. ಅದು ನೀವು 4 ಡಿಜಿಟ್‌ PIN ಹಾಕಿದ ಬಳಿಕ ಡಿಸ್‌ ಪ್ಲೇ ಆಗುತ್ತದೆ.

AIS ಮೇಲೆ ಕ್ಲಿಕ್‌ ಮಾಡಿದ ಬಳಿಕ Financial year ಆಯ್ಕೆ ಮಾಡಿಕೊಳ್ಳಿ. ವಿವರಗಳನ್ನು ತಿಳಿಯಿರಿ.

FY ಸಿಲೆಕ್ಟ್‌ ಮಾಡಿದ ಬಳಿಕ Taxpayer Information System ಮತ್ತು AIS ವೀಕ್ಷಿಸಿ.

TIS ಮೇಲೆ ಕ್ಲಿಕ್ಕಿಸಿದ ಬಳಿಕ ನಿಮ್ಮ ವೇತನ ವಿವರ, ಮ್ಯೂಚುವಲ್‌ ಫಂಡ್‌ ವಿವರಗಳನ್ನು ತಿಳಿದುಕೊಳ್ಳಬಹುದು.

AIS ಮೇಲೆ ಕ್ಲಿಕ್ಕಿಸಿ TDS/TCS ಮಾಹಿತಿ, SFT ಮಾಹಿತಿ, ತೆರಿಗೆ ಪಾವತಿ, ಡಿಮಾಂಡ್‌ & ರಿಫಂಡ್‌, ಇತರ ಮಾಹಿತಿಗಳನ್ನು ಪಡೆಯಬಹುದು.

Annual Information Statement ಅನ್ನು ವೆಬ್‌ ಪೋರ್ಟಲ್‌ನಲ್ಲಿ ವೀಕ್ಷಿಸುವುದು ಹೇಗೆ?

https://www.incometax.gov.in/ ವೆಬ್‌ ಪೋರ್ಟಲ್‌ಗೆ ಲಾಗಿನ್‌ ಆಗಿ. Annual Information Statement (AIS) ಗೆ ಲಾಗಿನ್‌ ಆಗಿ.

AIS tab ಮೇಲೆ ಕ್ಲಿಕ್ಕಿಸಿ, FY ಆಯ್ಕೆ ಮಾಡಿರಿ. AIS Title ಮೇಲೆ ಕ್ಲಿಕ್ಕಿಸಿ Annual information statement ವೀಕ್ಷಿಸಿ. Annual Information Statement ಎಂದರೆ ಫಾರ್ಮ್‌ 26AS ನಲ್ಲಿ ಸಿಗುವ ತೆರಿಗೆದಾರರ ಸಮಗ್ರ ವಿವರಗಳು.

ಇದನ್ನೂ ಓದಿ: Income tax return filing : ವೆಬ್‌ಸೈಟ್‌ನಲ್ಲಿ ಐಟಿಆರ್‌ 1, 4 ಫಾರ್ಮ್‌ ಲಭ್ಯ, ರಿಟರ್ನ್‌ ಸಲ್ಲಿಕೆಗೆ ರೆಡಿಯಾಗಿದ್ದೀರಾ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Virat kohli : ತಮ್ಮ ಜೀವನದ ಎರಡು ಆಘಾತಕಾರಿ ಸಂದರ್ಭಗಳನ್ನು ವಿವರಿಸಿದ ವಿರಾಟ್ ಕೊಹ್ಲಿ

Virat kohli: 2016ರಲ್ಲಿ ಭಾರತದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ 273 ರನ್ ಬಾರಿಸಿದ್ದರು. ಆದಾಗ್ಯೂ, ವೆಸ್ಟ್ ಇಂಡೀಸ್ ವಿರುದ್ಧದ ಸೆಮಿಫೈನಲ್​ನಲ್ಲಿ ಭಾರತದ ಭರವಸೆಗಳು ಭಗ್ನಗೊಂಡಿದ್ದರು. ಇದು ಕೊಹ್ಲಿಗೆ ಆಘಾತವನ್ನುಂಟು ಮಾಡಿದ ಎರಡನೇ ಘಟನೆ.

VISTARANEWS.COM


on

Virat kohli
Koo

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಋತು ತನ್ನ ಅಂತ್ಯ ತಲುಪುತ್ತಿದ್ದಂತೆ, ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ (Virat Kohli ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವನ್ನು ಪ್ಲೇಆಫ್​ಗೆ ಕೊಂಡೊಯ್ಯುವ ಪ್ರಮುಖ ಜವಾಬ್ದಾರಿ ಅವರ ಮೇಲಿದೆ. ಪ್ರಸ್ತುತ 13 ಪಂದ್ಯಗಳಲ್ಲಿ 661 ರನ್​ಗಳೊಂದಿಗೆ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಚೊಚ್ಚಲ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸುವ ಕೊಹ್ಲಿ ಅವರ ನಿಶ್ಚಯ ದೃಢವಾಗಿದೆ.

35 ವರ್ಷದ ಆಟಗಾರ ಇತ್ತೀಚೆಗೆ ತಮ್ಮನ್ನು ಇಂದಿಗೂ ಕಾಡುತ್ತಿರುವ ಎರಡು ಕ್ರಿಕೆಟ್ ವೃತ್ತಿ ಜೀವನದ ಆಘಾತಕಾರಿ ಘಟನೆಗಳ ಬಗ್ಗೆ ವಿವರಿಸಿದ್ದಾರೆ. ಮೊದಲನೆಯದು ಐಪಿಎಲ್ 2016 ಋತುವಿನಲ್ಲಿ, ಅಲ್ಲಿ 973 ರನ್​ಗಳೊಂದಿಗೆ ಅಗ್ರ ರನ್ ಸ್ಕೋರರ್ ಆಗಿದ್ದರೂ, ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್​ಎಚ್​ ) ವಿರುದ್ಧದ ಫೈನಲ್​​ನಲ್ಲಿ ಹೃದಯ ವಿದ್ರಾವಕ ಸೋಲು ಅವರಿಗೆ ಸಾಕಷ್ಟು ಬೇಸರ ಉಂಟು ಮಾಡಿತ್ತು.

2016ರಲ್ಲಿ ಭಾರತದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ 273 ರನ್ ಬಾರಿಸಿದ್ದರು. ಆದಾಗ್ಯೂ, ವೆಸ್ಟ್ ಇಂಡೀಸ್ ವಿರುದ್ಧದ ಸೆಮಿಫೈನಲ್​ನಲ್ಲಿ ಭಾರತದ ಭರವಸೆಗಳು ಭಗ್ನಗೊಂಡಿದ್ದರು. ಇದು ಕೊಹ್ಲಿಗೆ ಆಘಾತವನ್ನುಂಟು ಮಾಡಿದ ಎರಡನೇ ಘಟನೆ.

“2016 ರಲ್ಲಿ ನನ್ನ ಜೀವನದಲ್ಲಿ ಎರಡು ಸಂದರ್ಭಗಳು ಇದ್ದವು. ಮೊದಲನೆಯದು ವಿಶ್ವ ಟಿ 20 ಮತ್ತು ನಂತರ ಐಪಿಎಲ್ ಫೈನಲ್. ವಿಶ್ವ ಟಿ 20 ಸೋಲಿನಿಂದ ಹೊರಬರಲು ನನಗೆ ಕೆಲವು ದಿನಗಳು ಬೇಕಾಯಿತು ಏಕೆಂದರೆ ನಾನು ಭಾರತಕ್ಕಾಗಿ ಈ ಸಾಧನೆ ಮಾಡಬಹುದು ಎಂದು ಭಾವಿಸಿದ್ದೆ”ಎಂದು ಕೊಹ್ಲಿ ಜಿಯೋ ಸಿನೆಮಾಗೆ ತಿಳಿಸಿದರು.

ಗವಾಸ್ಕರ್​​ಗೆ ವಿರಾಟ್​ ಕೊಹ್ಲಿಯನ್ನು ಬೈಯುವುದೇ ಕೆಲಸ, ಇದೀಗ ಮತ್ತೊಂದು ಬಾರಿ ಟೀಕೆ

ಟಿ20 ಸ್ವರೂಪದಲ್ಲಿ (T20 Cricket) ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಹೇಳಿಕೆ ನೀಡಿದ್ದವರಿಗೆ ವಿರಾಟ್ ಕೊಹ್ಲಿ (Virat kohli) ಪ್ರತ್ಯುತ್ತರ ನೀಡಿದ್ದರು. ಅದರಲ್ಲಿ ಮುಖ್ಯವಾಗಿ ಮಾಜಿ ಆಟಗಾರ ಸುನೀಲ್​ ಗವಾಸ್ಕರ್​ ಅವರ ಹೇಳಿಕೆಗಳ ಬಗ್ಗೆ ವ್ಯಂಗ್ಯವಾಡಿದ್ದರು. ಇದೀಗ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ (Sunil Gavaskar) ಅವರು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪ್ರಮುಖ ಪಂದ್ಯಕ್ಕೆ ಮುಂಚಿತವಾಗಿ ಮತ್ತೊಂದು ಬಾರಿ ಕೊಹ್ಲಿಯನ್ನು ತೆಗಳಿದ್ದಾರೆ. ಕೊಹ್ಲಿಯನ್ನು ಆಧುನಿಕ ಯುಗದ ದಂತಕಥೆಯಾಗಿ ಪರಿವರ್ತಿಸುವಲ್ಲಿ ಎಂಎಸ್ ಧೋನಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಗವಾಸ್ಕರ್ ಹೇಳಿಕೆ ನೀಡಿದ್ದಾರೆ. ಇದೀಗ ನೇರ ಟೀಕೆಯ ಬದಲು ಹೋಲಿಕೆ ಮಾಡಿ ಟೀಕೆ ಮಾಡಲು ಶುರು ಮಾಡಿದ್ದಾರೆ.

ಇದನ್ನೂ ಓದಿ: IPL 2024 : ಬೆಂಗಳೂರಿನ ಬೀದಿ ಬೀದಿಗಳಲ್ಲಿ ‘ಧೋನಿ, ಧೋನಿ’ ಘೋಷಣೆ, ಇಲ್ಲಿದೆ ವಿಡಿಯೊ

ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮುಂಬೈ ಇಂಡಿಯನ್ಸ್​ ತಂಡದ ಅಂತಿಮ ಲೀಗ್ ಪಂದ್ಯದ ನಡುವೆ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು. ಆ ವೇಳೆ ಮಾತನಾಡಿದ ಗವಾಸ್ಕರ್, ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ “ಸ್ಟಾರ್ಟ್-ಸ್ಟಾಪ್” (ಅಡೆ ತಡೆಯಿಂದ ತುಂಬಿದ) ವೃತ್ತಿಜೀವನ ಹೊಂದಿದ್ದರು. ಧೋನಿ ಅವರ ಮೇಲೆ ಇಟ್ಟಿರುವ ನಂಬಿಕೆಯಿಂದಾಗಿಯೇ ವೃತ್ತಿಜೀವನ ರೂಪುಗೊಂಡಿತು ಎಂದು ಹೇಳಿದರು.

“ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಾಗ, ಅದು ಸ್ಟಾಪ್-ಸ್ಟಾರ್ಟ್ ವೃತ್ತಿಜೀವನವಾಗಿತ್ತು. ಎಂಎಸ್ ಧೋನಿ ಅವರಿಗೆ ಸ್ವಲ್ಪ ಹೆಚ್ಚುವರಿ ಅವಕಾಶ ನೀಡಿದ್ದು. ಅದರಿಂದಾಗಿ ಇಂದು ನಾವು ನೋಡುವ ಕೊಹ್ಲಿ ಇದ್ದಾರೆ ಎಂದು ಅವರು ಸ್ಟಾರ್ ಸ್ಪೋರ್ಟ್ಸ್​ನಲ್ಲಿ ಹೇಳಿದರು.‘ಟಿ 20 ಕ್ರಿಕೆಟ್​ನಲ್ಲಿ ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಟೀಕಾಕಾರರಿಗೆ ತಿರುಗೇಟು ನೀಡಲು ಆರ್​ಸಿಬಿಯ ಮಾಜಿ ಬ್ಯಾಟರ್​ ನಿರ್ಧರಿಸಿದ ನಂತರ ಅವರಿಬ್ಬರ ನಡುವೆ ವಕೆಲವು ದಿನಗಳ ಹಿಂದೆ ವಾಕ್ಸಮರ ನಡೆಸಿದ್ದರು.

Continue Reading

ಪ್ರಮುಖ ಸುದ್ದಿ

Virat kohli : ಗವಾಸ್ಕರ್​​ಗೆ ವಿರಾಟ್​ ಕೊಹ್ಲಿಯನ್ನು ಬೈಯುವುದೇ ಕೆಲಸ, ಇದೀಗ ಮತ್ತೊಂದು ಬಾರಿ ಟೀಕೆ

Virat kohli:: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮುಂಬೈ ಇಂಡಿಯನ್ಸ್​ ತಂಡದ ಅಂತಿಮ ಲೀಗ್ ಪಂದ್ಯದ ನಡುವೆ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು. ಆ ವೇಳೆ ಮಾತನಾಡಿದ ಗವಾಸ್ಕರ್, ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ “ಸ್ಟಾರ್ಟ್-ಸ್ಟಾಪ್” (ಅಡೆ ತಡೆಯಿಂದ ತುಂಬಿದ) ವೃತ್ತಿಜೀವನ ಹೊಂದಿದ್ದರು. ಧೋನಿ ಅವರ ಮೇಲೆ ಇಟ್ಟಿರುವ ನಂಬಿಕೆಯಿಂದಾಗಿಯೇ ವೃತ್ತಿಜೀವನ ರೂಪುಗೊಂಡಿತು ಎಂದು ಹೇಳಿದ್ದಾರೆ.

VISTARANEWS.COM


on

Virat Kohli
Koo

ನವದೆಹಲಿ: ಟಿ20 ಸ್ವರೂಪದಲ್ಲಿ (T20 Cricket) ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಹೇಳಿಕೆ ನೀಡಿದ್ದವರಿಗೆ ವಿರಾಟ್ ಕೊಹ್ಲಿ (Virat kohli) ಪ್ರತ್ಯುತ್ತರ ನೀಡಿದ್ದರು. ಅದರಲ್ಲಿ ಮುಖ್ಯವಾಗಿ ಮಾಜಿ ಆಟಗಾರ ಸುನೀಲ್​ ಗವಾಸ್ಕರ್​ ಅವರ ಹೇಳಿಕೆಗಳ ಬಗ್ಗೆ ವ್ಯಂಗ್ಯವಾಡಿದ್ದರು. ಇದೀಗ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ (Sunil Gavaskar) ಅವರು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪ್ರಮುಖ ಪಂದ್ಯಕ್ಕೆ ಮುಂಚಿತವಾಗಿ ಮತ್ತೊಂದು ಬಾರಿ ಕೊಹ್ಲಿಯನ್ನು ತೆಗಳಿದ್ದಾರೆ. ಕೊಹ್ಲಿಯನ್ನು ಆಧುನಿಕ ಯುಗದ ದಂತಕಥೆಯಾಗಿ ಪರಿವರ್ತಿಸುವಲ್ಲಿ ಎಂಎಸ್ ಧೋನಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಗವಾಸ್ಕರ್ ಹೇಳಿಕೆ ನೀಡಿದ್ದಾರೆ. ಇದೀಗ ನೇರ ಟೀಕೆಯ ಬದಲು ಹೋಲಿಕೆ ಮಾಡಿ ಟೀಕೆ ಮಾಡಲು ಶುರು ಮಾಡಿದ್ದಾರೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮುಂಬೈ ಇಂಡಿಯನ್ಸ್​ ತಂಡದ ಅಂತಿಮ ಲೀಗ್ ಪಂದ್ಯದ ನಡುವೆ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು. ಆ ವೇಳೆ ಮಾತನಾಡಿದ ಗವಾಸ್ಕರ್, ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ “ಸ್ಟಾರ್ಟ್-ಸ್ಟಾಪ್” (ಅಡೆ ತಡೆಯಿಂದ ತುಂಬಿದ) ವೃತ್ತಿಜೀವನ ಹೊಂದಿದ್ದರು. ಧೋನಿ ಅವರ ಮೇಲೆ ಇಟ್ಟಿರುವ ನಂಬಿಕೆಯಿಂದಾಗಿಯೇ ವೃತ್ತಿಜೀವನ ರೂಪುಗೊಂಡಿತು ಎಂದು ಹೇಳಿದರು.

“ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಾಗ, ಅದು ಸ್ಟಾಪ್-ಸ್ಟಾರ್ಟ್ ವೃತ್ತಿಜೀವನವಾಗಿತ್ತು. ಎಂಎಸ್ ಧೋನಿ ಅವರಿಗೆ ಸ್ವಲ್ಪ ಹೆಚ್ಚುವರಿ ಅವಕಾಶ ನೀಡಿದ್ದು. ಅದರಿಂದಾಗಿ ಇಂದು ನಾವು ನೋಡುವ ಕೊಹ್ಲಿ ಇದ್ದಾರೆ ಎಂದು ಅವರು ಸ್ಟಾರ್ ಸ್ಪೋರ್ಟ್ಸ್​ನಲ್ಲಿ ಹೇಳಿದರು.‘ಟಿ 20 ಕ್ರಿಕೆಟ್​ನಲ್ಲಿ ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಟೀಕಾಕಾರರಿಗೆ ತಿರುಗೇಟು ನೀಡಲು ಆರ್​ಸಿಬಿಯ ಮಾಜಿ ಬ್ಯಾಟರ್​ ನಿರ್ಧರಿಸಿದ ನಂತರ ಅವರಿಬ್ಬರ ನಡುವೆ ವಕೆಲವು ದಿನಗಳ ಹಿಂದೆ ವಾಕ್ಸಮರ ನಡೆಸಿದ್ದರು.

ಸ್ಪಿನ್ನ ವೇಳೆ ನಿಧಾನ ಆಟ

ಟಿ20 ಸ್ವರೂಪದಲ್ಲಿ, ವಿಶೇಷವಾಗಿ ಮಧ್ಯಮ ಓವರ್​ಗಳಲ್ಲಿ ಮತ್ತು ಸ್ಪಿನ್ನರ್​ಗಳ ವಿರುದ್ಧ ನಿಧಾನಗತಿಯ ಸ್ಕೋರ್ ಉದ್ದೇಶದ ಬಗ್ಗೆ ಕೊಹ್ಲಿ ಟೀಕೆಗೆ ಒಳಗಾಗಿದ್ದರು. ಆದಾಗ್ಯೂ, ಈ ಋತುವಿನ ಆರಂಭದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅಜೇಯ 70 ರನ್ ಗಳಿಸಿದ ನಂತರ, ಅವರು ಸ್ಪಿನ್ನರ್​ಗಳ ವಿರುದ್ಧ 179 ಸ್ಟ್ರೈಕ್ ರೇಟ್ನಲ್ಲಿ 61 ರನ್ ಗಳಿಸಿದ ನಂತರ, ಕೊಹ್ಲಿ ತಮ್ಮ ಟೀಕಾಕಾರರ ವಿರುದ್ಧ ವಾಗ್ದಾಳಿ ನಡೆಸಿದ್ದರು. “ಸ್ಟ್ರೈಕ್ ರೇಟ್ ಮತ್ತು ನಾನು ಸ್ಪಿನ್ ಅನ್ನು ಚೆನ್ನಾಗಿ ಆಡದಿರುವ ಬಗ್ಗೆ ಮಾತನಾಡಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ನನಗೆ ಇದು ತಂಡಕ್ಕಾಗಿ ಪಂದ್ಯವನ್ನು ಗೆಲ್ಲುವುದರ ಪ್ರಶ್ನೆಯಾಗಿದೆ. ಮತ್ತು ನೀವು ಇದನ್ನು 15 ವರ್ಷಗಳಿಂದ ಮಾಡಲು ಒಂದು ಕಾರಣವಿದೆ. ಏಕೆಂದರೆ ನೀವು ಈ ದಿನವನ್ನು ಹಿಂದೆಯೂ ಮಾಡಿದ್ದೀರ. ನೀವು ನಿಮ್ಮ ತಂಡಗಳಿಗಾಗಿ ಪಂದ್ಯಗಳನ್ನು ಗೆದ್ದಿದ್ದೀರಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: IPL 2024 : ಬೆಂಗಳೂರಿನ ಬೀದಿ ಬೀದಿಗಳಲ್ಲಿ ‘ಧೋನಿ, ಧೋನಿ’ ಘೋಷಣೆ, ಇಲ್ಲಿದೆ ವಿಡಿಯೊ

ಕಾಮೆಂಟರಿ ಬಾಕ್ಸ್​ಗಳಲ್ಲಿ ಕುಳಿತು ಆಟದ ಬಗ್ಗೆ ಮಾತನಾಡುವುದು ಸುಲಭ. ನನಗೆ, ಇದು ನನ್ನ ಕೆಲಸವನ್ನು ಮಾಡುವ ಕುರಿತ ಆಸಕ್ತಿಯಾಗಿದೆ. ಜನರು ಆಟದ ಬಗ್ಗೆ ತಮ್ಮದೇ ಆದ ಆಲೋಚನೆಗಳು ಮತ್ತು ಊಹೆಗಳ ಬಗ್ಗೆ ಮಾತನಾಡಬಹುದು. ಆದರೆ ಅದನ್ನು ಹಗಲು ರಾತ್ರಿ ಕ್ರಿಕೆಟ್ ಆಡಿದವರಿಗೆ ಏನಾಗುತ್ತಿದೆ ಎಂದು ತಿಳಿದಿದೆ ಎಂದು ಹೇಳಿದ್ದಾರೆ.

ಗವಾಸ್ಕರ್ ತಿರುಗೇಟು

ಗವಾಸ್ಕರ್ ಕೂಡ ಕೊಹ್ಲಿಯ ಸ್ಫೋಟಕ ಹೇಳಿಕೆಗಳ ವಿರುದ್ಧ ವಾಗ್ದಾಳಿ ನಡೆಸಿದರು. “ನೀವು 118 ಸ್ಟ್ರೈಕ್ ರೇಟ್ ಹೊಂದಿದ್ದರೆ ಹೇಗೆ|vನೀವು ಬಂದು ಮೊದಲ ಎಸೆತವನ್ನು ಎದುರಿಸುತ್ತೀರಿ, ನಂತರ ನೀವು 14 ಅಥವಾ 15 ನೇ ಓವರ್​​ನ್ಲಿ ಔಟ್ ಆಗುತ್ತೀರಿ ಮತ್ತು ನಿಮ್ಮ ಸ್ಟ್ರೈಕ್ ರೇಟ್ 118 ಆಗಿರುತ್ತದೆ. ಅದಕ್ಕಾಗಿ ನೀವು ಚಪ್ಪಾಳೆ ಬಯಸಿದರೆ ತಪ್ಪು. ನಾವೆಲ್ಲರೂ ಸ್ವಲ್ಪ ಕ್ರಿಕೆಟ್ ಆಡಿದ್ದೇವೆ, ಸಾಕಷ್ಟು ಕ್ರಿಕೆಟ್ ಅಲ್ಲ. ಆದರೆ ನಾವು ಕಣ್ನಾರೆ ನೋಡುವುದರ ಬಗ್ಗೆ ಮಾತನಾಡುತ್ತೇವೆ. ನಮಗೆ ಯಾವುದೇ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳು ಇರಬೇಕಾಗಿಲ್ಲ. ನಮಗೆ ಇಷ್ಟಗಳು ಅಥವಾ ಇಷ್ಟಪಡದಿರುವಿಕೆಗಳು ಇದ್ದರೂ ಸ, ಏನಾಗುತ್ತಿದೆ ಎಂಬುದರ ಬಗ್ಗೆ ನಾವು ನಿಜವಾಗಿಯೂ ಮಾತನಾಡುತ್ತೇವೆ ಎಂದು ಹೇಳಿದ್ದರು.

ಸಿಎಸ್ಕೆ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಆರ್​ಸಿಬಿ ವಗುರುವಾರ ಗವಾಸ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಫ್ರಾಂಚೈಸಿ ಹಂಚಿಕೊಂಡ ವೀಡಿಯೊದಲ್ಲಿ, 35 ವರ್ಷದ ನಟ ಮಿಸ್ಟರ್ ನಾಗ್ಸ್ (ದ್ಯಾನಿಶ್​ ಸೇಠ್​) ಮೂಲಕ ತಮಾಷೆ ಮಾಡಲಾಗಿದೆ. ನೋಡಿ ವಿರಾಟ್, ನಾನು ನಿಮ್ಮ ಸ್ನೇಹಿತನ ಬಗ್ಗೆ ಮಾತನಾಡಲು ಬಯಸುತ್ತೇನೆ. ನನ್ನದಲ್ಲ, ನಿನ್ನ ಸ್ನೇಹಿತ. ಅವರು ನಿಮ್ಮ ಬಗ್ಗೆ ಸಾಕಷ್ಟು ಒಳ್ಳೆಯ ವಿಷಯಗಳನ್ನು ಹೇಳುತ್ತಿರುತ್ತಾರೆ. ಅವರೇ ಸುನಿಲ್ ಎಂದು ಹೇಳಲಾಗಿದೆ.

Continue Reading

ಕ್ರೈಂ

Crimes in Karnataka: 4 ತಿಂಗಳಲ್ಲಿ ಮಿತಿಮೀರಿದ ಕ್ರೈಂ; ಸ್ತ್ರೀಯರೇ ಹೆಚ್ಚಿನ ಟಾರ್ಗೆಟ್!‌ ʼಗೃಹ ಇಲಾಖೆ ಇದೆಯಾ?ʼ ಎಂದು ಪ್ರಶ್ನಿಸಿದ ಎಚ್‌ಡಿಕೆ

Crimes in Karnataka: ಸ್ತ್ರೀಯರ ಮೇಲೆ ನಡೆಯುವ ಅಪರಾಧಗಳ ಸಂಖ್ಯೆ ಹೆಚ್ಚಿದೆ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ, ಅಂಜಲಿ ಕೊಲೆ ಪ್ರಕರಣ, ಕೊಡಗಿನ ಮೀನಾ ಕೊಲೆ ಪ್ರಕರಣಗಳು ಇದಕ್ಕೆ ನಿದರ್ಶನಗಳಾಗಿವೆ. ಇದನ್ನು ನೋಡುತ್ತಿದ್ದರೆ ರಾಜ್ಯದಲ್ಲಿ ಜನರಿಗೆ ರಕ್ಷಣೆಯೇ ಇಲ್ಲವೇ ಎಂಬ ಪ್ರಶ್ನೆ ಮೂಡುವಂತಿದೆ.

VISTARANEWS.COM


on

crimes in karnataka
Koo

ಬೆಂಗಳೂರು: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National crime records bureau- NCRB) ಇತ್ತೀಚೆಗಿನ ಅಪರಾಧಗಳ ಅಂಕಿ ಅಂಶವನ್ನು ಪ್ರಕಟಿಸಿದ್ದು, ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳ (crimes) ಸಂಖ್ಯೆ ಮಿತಿ ಮೀರಿ ಹೆಚ್ಚಿರುವುದು ಕಂಡುಬಂದಿದೆ. ಈ ಕುರಿತ ವರದಿಯನ್ನು ʼಎಕ್ಸ್‌ʼನಲ್ಲಿ ಪೋಸ್ಟ್‌ ಮಾಡಿರುವ ಜೆಡಿಎಸ್‌ (JDS), ʼರಾಜ್ಯದಲ್ಲಿ ಗೃಹ ಇಲಾಖೆ ಇದೆಯೇʼ (Home ministry) ಎಂದು ಪ್ರಶ್ನಿಸಿದೆ.

ರಾಜ್ಯದಲ್ಲಿ ಕಳೆದ ಜನವರಿಯಿಂದ ಏಪ್ರಿಲ್‌ವರೆಗೆ ಏರಿಕೆ ಪ್ರಮಾಣದಲ್ಲಿ ಕೊಲೆ (murder), ಅತ್ಯಾಚಾರ (physical abuse), ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು (Pocso) ನಡೆದಿವೆ. ಕಳೆದ ಮೂರು ವರ್ಷಗಳಲ್ಲಿ ಕೊಲೆ, ಅತ್ಯಾಚಾರ, ಪೋಕ್ಸೋ ಕೇಸ್ ಹೆಚ್ಚಾಗಿವೆ. ಅಲ್ಲದೇ ಎನ್‌ಡಿಪಿಎಸ್ ಅಂದರೆ ಡ್ರಗ್ಸ್ ಕೇಸುಗಳು ಅಧಿಕವಾಗಿವೆ. ಲೈಂಗಿಕ ದೌರ್ಜನ್ಯ ಹಾಗೂ ಸೈಬರ್ ವಂಚನೆ (cyber crime) ಗಗನಕ್ಕೆ ಏರಿವೆ. ಹಲ್ಲೆ, ಮಾರಣಾಂತಿಕ ಹಲ್ಲೆ ಕೇಸ್‌ಗಳು ಅಧಿಕವಾಗುತ್ತಾ ಸಾಗುತ್ತಿವೆ.

ಸ್ತ್ರೀಯರ ಮೇಲೆ ನಡೆಯುವ ಅಪರಾಧಗಳ ಸಂಖ್ಯೆ ಹೆಚ್ಚಿದೆ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ, ಅಂಜಲಿ ಕೊಲೆ ಪ್ರಕರಣ, ಕೊಡಗಿನ ಮೀನಾ ಕೊಲೆ ಪ್ರಕರಣಗಳು ಇದಕ್ಕೆ ನಿದರ್ಶನಗಳಾಗಿವೆ. ಇದನ್ನು ನೋಡುತ್ತಿದ್ದರೆ ರಾಜ್ಯದಲ್ಲಿ ಜನರಿಗೆ ರಕ್ಷಣೆಯೇ ಇಲ್ಲವೇ ಎಂಬ ಪ್ರಶ್ನೆ ಮೂಡುವಂತಿದೆ.

ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳ ಅಪರಾಧ ಪ್ರಮಾಣ ಹೀಗಿದೆ:

ಕೊಲೆಗಳು
430
ಪೋಕ್ಸೋ ಕೇಸ್‌
1262
ಅತ್ಯಾಚಾರ 198
ಹಲ್ಲೆ 6063
ಡ್ರಗ್ಸ್ 1144
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ
2327
ಸೈಬರ್ ಅಪರಾಧ
7421
ವಂಚನೆ
2243
ರಾಬರಿ
450
ಡಕಾಯಿತಿ 68


ರಾಷ್ಟ್ರೀಯ ಕ್ರೈಂ ರೆಕಾರ್ಡ್ ಬ್ಯೂರೋ ಅಂಕಿ ಅಂಶಗಳಲ್ಲಿ ರಾಜ್ಯದ ಅಪರಾಧ ಕೃತ್ಯಗಳ ಬಗ್ಗೆ ವಿವರ ತೆರೆದಿಟ್ಟಿದೆ. ಕಳೆದ ಮೂರು ವರ್ಷಗಳಲ್ಲಿ ಅಪರಾಧ ಪ್ರಕರಣಗಳು ಏರಿಕೆ ಕಂಡಿವೆ. ಕ್ರೈಂ ರೆಕಾರ್ಡ್ಸ್ ಬ್ಯೂರೋ ಅಂಕಿ ಅಂಶ ಹೀಗಿವೆ:

ಅಪರಾಧ
2022 2023 2024 ಏಪ್ರಿಲ್‌ವರೆಗೆ
ಕೊಲೆ
1370 1295 430
ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ (ಪೋಕ್ಸೋ)
3192 38561262
ಅತ್ಯಾಚಾರ ಪ್ರಕರಣಗಳು
537609 198
ಹಲ್ಲೆ ಕೇಸ್
15372 174396063
ಡ್ರಗ್ಸ್
64606764 1144
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕೇಸ್
58626486 2327
ಸೈಬರ್ ಅಪರಾಧ ಪ್ರಕರಣಗಳು
12557
21895 7421
ವಿವಿಧ ರೀತಿಯ ವಂಚನೆಗಳು
6411 6921 2243
ರಾಬರಿಗಳು
1069 1248 450
ಡಕಾಯಿತಿಗಳು217 180 68

ಗೃಹ ಇಲಾಖೆ ಇದೆಯಾ?

“ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಹಾದಿಬೀದಿಯಲ್ಲಿ ಕೊಲೆಗಳಾಗುತ್ತಿವೆ. ರಾಜ್ಯವು ಅತ್ಯಾಚಾರಿಗಳ ಆಡಂಬೋಲವಾಗಿದೆ. ಬೆಂಗಳೂರು ಮಹಾನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ. ಕೇವಲ 4 ತಿಂಗಳಲ್ಲಿ ಇಷ್ಟೆಲ್ಲಾ ನಡೆದಿದೆ! ರಾಜ್ಯ ಗೃಹ ಇಲಾಖೆ ಎನ್ನುವುದು ಕೆಲಸ ಮಾಡುತ್ತಿದೆಯಾ? ಅಥವಾ ನಿದ್ದೆ ಮಾಡುತ್ತಿದೆಯಾ? ದಯಮಾಡಿ ಹೇಳುವಿರಾ @DrParameshwara ಅವರೇ?” ಎಂದು ಜೆಡಿಎಸ್‌ ಅಧಿಕೃತ ಖಾತೆಯಿಂದ ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ.

ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್‌ ಕೇಸ್‌ನಲ್ಲಿ ಶಾಮೀಲಾಗಲು ಡಿಕೆಶಿಯಿಂದ 100 ಕೋಟಿ ರೂಪಾಯಿ ಆಫರ್; ದೇವರಾಜೇಗೌಡ ಆರೋಪ

Continue Reading

ಪ್ರಮುಖ ಸುದ್ದಿ

IPL 2024 : ಬೆಂಗಳೂರಿನ ಬೀದಿ ಬೀದಿಗಳಲ್ಲಿ ‘ಧೋನಿ, ಧೋನಿ’ ಘೋಷಣೆ, ಇಲ್ಲಿದೆ ವಿಡಿಯೊ

IPL 2024: ಒಂದು ವೇಳೆ ಸಿಎಸ್​​ಕೆ ಈ ಪಂದ್ಯವನ್ನು ಸೋತರೆ, ಅವರು ಪಂದ್ಯಾವಳಿಯಿಂದ ಹೊರಗುಳಿಯುತ್ತಾರೆ. ಹೀಗಾಗಿ ಎಂಎಸ್ ಧೋನಿ ಸಿಎಸ್​ಕೆ ಹಳದಿ ಬಣ್ಣ ಧರಿಸುವುದನ್ನು ಎಲ್ಲರೂ ನೋಡುವುದು ಇದೇ ಕೊನೆಯ ಬಾರಿ. ಆದ್ದರಿಂದ, ಇದು ಎಲ್ಲಾ ಸಿಎಸ್​ಕೆ ಅಭಿಮಾನಿಗಳಿಗೆ ವಿಶೇಷ ಮತ್ತು ಭಾವನಾತ್ಮಕ ಪಂದ್ಯವಾಗಲಿದೆ. ಋತುವಿನಲ್ಲಿ, ಇದು ಎರಡು ಬ್ಲಾಕ್ಬಸ್ಟರ್ ತಂಡಗಳಾದ ಆರ್​ಸಿಬಿ ಮತ್ತು ಸಿಎಸ್ಕೆ ನಡುವೆ ಸಾಕಷ್ಟು ಸ್ಪರ್ಧೆಯಾಗಲಿದೆ.

VISTARANEWS.COM


on

IPL 2024
Koo

ಬೆಂಗಳೂರು: ಟೀಮ್​ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಬಗ್ಗೆ ಜಗತ್ತಿನಾದ್ಯಂತ ಎಲ್ಲೆಡೆ ಕ್ರೇಜ್ ಇದೆ. ಈ ಬಾರಿಯೂ ಐಪಿಎಲ್ ವೇಳೆಯೂ ಅದು ಪ್ರಕಟಗೊಂಡಿದೆ. ಅವರು ಹೋದಲ್ಲೆಲ್ಲ ಅಭಿಮಾನಿಗಳ ಘೋಷಣೆಗಳು ಕಂಡುಬರುತ್ತಿವೆ. ಐಪಿಎಲ್ 2024 (IPL 2024: ) ಬ’ಹುಶಃ ಅವರ ಕೊನೆಯ ಋತುವಾಗಿರುವುದರಿಂದ, ಈ ಋತುವಿನಲ್ಲಿ ಅವರು ಕಾಣಿಸಿಕೊಂಡಾಗಲೆಲ್ಲಾ ಉತ್ಸಾಹವು ಇಮ್ಮಡಿಯಾಗುತ್ತಿದೆ. ಅಂತೆಯೇ ಚಿನ್ನಸ್ವಾಮಿ ಸ್ಟೇಡಿಯಂನ (Chinnaswamy Stadium) ಹೊರಗೆ ಸಿಎಸ್​ಕೆ ತಂಡದ ಬಸ್ ಹಾದುಹೋಗುವಾಗ ಅಭಿಮಾನಿಗಳು ‘ಧೋನಿ ಧೋನಿ’ ಎಂದು ಜೈಕಾರ ಹಾಕುತ್ತಿರುವ ಮತ್ತೊಂದು ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದೆ.

ಒಂದು ವೇಳೆ ಸಿಎಸ್​​ಕೆ ಈ ಪಂದ್ಯವನ್ನು ಸೋತರೆ, ಅವರು ಪಂದ್ಯಾವಳಿಯಿಂದ ಹೊರಗುಳಿಯುತ್ತಾರೆ. ಹೀಗಾಗಿ ಎಂಎಸ್ ಧೋನಿ ಸಿಎಸ್​ಕೆ ಹಳದಿ ಬಣ್ಣ ಧರಿಸುವುದನ್ನು ಎಲ್ಲರೂ ನೋಡುವುದು ಇದೇ ಕೊನೆಯ ಬಾರಿ. ಆದ್ದರಿಂದ, ಇದು ಎಲ್ಲಾ ಸಿಎಸ್​ಕೆ ಅಭಿಮಾನಿಗಳಿಗೆ ವಿಶೇಷ ಮತ್ತು ಭಾವನಾತ್ಮಕ ಪಂದ್ಯವಾಗಲಿದೆ. ಋತುವಿನಲ್ಲಿ, ಇದು ಎರಡು ಬ್ಲಾಕ್ಬಸ್ಟರ್ ತಂಡಗಳಾದ ಆರ್​ಸಿಬಿ ಮತ್ತು ಸಿಎಸ್ಕೆ ನಡುವೆ ಸಾಕಷ್ಟು ಸ್ಪರ್ಧೆಯಾಗಲಿದೆ.

ಸಿಎಸ್​ಕೆ ಕೇವಲ ಒಂದು ಪಂದ್ಯವನ್ನು ಗೆಲ್ಲಬೇಕಾಗಿದೆ. ಆದರೆ ಆರ್​ಸಿಬಿ ಗೆಲ್ಲುವುದು ಮಾತ್ರವಲ್ಲ ಸಿಎಸ್ಕೆ ವಿರುದ್ಧ ನೆಟ್ ರನ್ ರೇಟ್ ಪಡೆಯಲು ಕೆಲವು ಯೋಜನೆಗಳನ್ನು ಮಾಡಬೇಕಾಗಿದೆ. ಹಾಗೆ ಮಾಡಿದರೆ, ಅವರು ಪ್ಲೇಆಫ್​​ಗೆ ಅರ್ಹತೆ ಪಡೆಯುತ್ತಾರೆ. ಎಂಟು ಪಂದ್ಯಗಳಲ್ಲಿ ಏಳು ಸೋಲುಗಳೊಂದಿಗೆ ಒಂದು ಹಂತದಲ್ಲಿ ಅವರು ಕೆಳಗಿಳಿದು ಔಟ್ ಆಗಿರುವುದರಿಂದ ಇದು ಸಾಕಷ್ಟು ಸಾಧನೆಯಾಗಿದೆ.

ಆರ್​​ಸಿಬಿ ವಿರುದ್ಧ ಬೌಲಿಂಗ್ ಮಾಡಲು ಅಭ್ಯಾಸ ನಡೆಸಿದ ಎಂ ಎಸ್​ ಧೋನಿ

ಬೆಂಗಳೂರು: ಮೇ 18 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದ ಮೇಲೆ ಎಂಎಸ್ ಧೋನಿ (MS Dhoni) ಸಂಪೂರ್ಣ ಗಮನ ಹರಿಸಿದ್ದಾರೆ. ಸ್ಟಾರ್ ವಿಕೆಟ್ ಕೀಪರ್ ನೆಟ್ ಸೆಷನ್ ಸಮಯದಲ್ಲಿ ತಮ್ಮ ವಿಕೆಟ್​ಕೀಪಿಂಗ್​ ಗ್ಲೌಸ್ ಗಳೊಂದಿಗೆ ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಏತನ್ಮಧ್ಯೆ ಅವರು ಸ್ವಲ್ಪ ಬೌಲಿಂಗ್ ಕೂಡ ಮಾಡುತ್ತಿದ್ದಾರೆ. ಧೋನಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಎಂದಿಗೂ ಬೌಲಿಂಗ್ ಮಾಡಿಲ್ಲ. ಆದರೆ ಆರ್​ಸಿಬಿ ವಿರುದ್ಧ ಬೌಲಿಂಗ್ ಮಾಡಬಲ್ಲರು ಎಂದು ಹೇಳಲಾಗುತ್ತಿದೆ!

ಇದನ್ನೂ ಓದಿ: IPL 2024 : ಹಾರ್ದಿಕ್ ಪಾಂಡ್ಯಗೆ ನಿಷೇಧ ಹೇರಿದ ಬಿಸಿಸಿಐ; ಮುಂದಿನ ಪಂದ್ಯದಲ್ಲಿ ಆಡದಂತೆ ತಾಕೀತು

ಧೋನಿ ಕಡಿಮೆ ವೇಗದ ಆಫ್-ಸ್ಪಿನ್ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ನೆಟ್ಸ್​ನಲ್ಲಿ ತಮ್ಮ ಕೈಚಳಕ ತೋರಿದ್ದಾರೆ. ಐಪಿಎಲ್ 2023 ರ ಸಮಯದಲ್ಲಿಯೂ ಧೋನಿ ಸಿಎಸ್​ಕೆ ಬ್ಯಾಟರ್​ಗಳಿಗೆ ನೆಟ್ಸ್​ನಲ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಸಿಎಸ್​ಕೆ ಸ್ಟಾರ್ ಬೌಲಿಂಗ್​ನ ಇತ್ತೀಚಿನ ವೀಡಿಯೊ ಈಗಾಗಲೇ ವೈರಲ್ ಆಗಿದೆ.
ನೆಟ್ಸ್​ನಲ್ಲಿ ತಾವು ಎದುರಿಸಿದ ಕಠಿಣ ಬೌಲರ್ ಧೋನಿ ಎಂದು ರೈನಾ ಒಮ್ಮೆ ಹೇಳಿದ್ದರು. ಅಭ್ಯಾಸದ ವೇಲೆ ಧೋನಿ ಎಸೆತಕ್ಕೆ ಔಟಾದರೆ ಅವರು ನಿಮ್ಮನ್ನು ಪದೇ ಪದೇ ಕಾಡುತ್ತಾರೆ. ಹೇಗೆ ಔಟ್ ಮಾಡಿದೆ ಎಂಬುದನ್ನು ನೆನಪಿಸುತ್ತಾರೆ ಎಂದು ಸಿಎಸ್​ಕೆ ಮಾಜಿ ಬ್ಯಾಟ್ಸ್ಮನ್ ಹೇಳಿದ್ದರು.

“ನಾನು ಎದುರಿಸಿದ ಕಠಿಣ ಬೌಲರ್​​ ಮುರಳೀಧರನ್ ಮತ್ತು ಮಾಲಿಂಗ ಎಂದು ಭಾವಿಸುತ್ತೇನೆ. ಆದರೆ ನೆಟ್ಸ್​ನಲ್ಲಿ ಅದು ಎಂಎಸ್ ಧೋನಿ. ಅವರಯ ನಿಮ್ಮನ್ನು ಔಟ್ ಮಾಡಿದರೆ ನೀವು ಒಂದೂವರೆ ತಿಂಗಳವರೆಗೆ ಅವರ ಬಳಿಗೆ ಹೋಗಲು ಸಾಧ್ಯವಾಗುವುದಿಲ್ಲ ಏಕೆಂದರೆ ಅವರು ಔಟಾದ ರೀತಿಯನ್ನು ಸನ್ನೆ ಮಾಡುತ್ತಲೇ ಇರುತ್ತಾರೆ. ಅವರು ನಿಮ್ಮನ್ನು ಹೇಗೆ ಔಟ್ ಮಾಡಿದನೆಂದು ನೆನಪಿಸುತ್ತಾರೆ . ಅವರು ಆಫ್-ಸ್ಪಿನ್, ಮಧ್ಯಮ ವೇಗ, ಲೆಗ್ ಸ್ಪಿನ್, ಎಲ್ಲವನ್ನೂ ಬೌಲಿಂಗ್ ಮಾಡುತ್ತಿದ್ದರು. ನೆಟ್ಸ್​ಬಲ್ಲಿ ಅವರು ತಮ್ಮ ಮುಂಭಾಗದ ಪಾದದ ನೋ-ಬಾಲ್​ಗಳನ್ನು ಸಹ ಸಮರ್ಥಿಸುತ್ತಿದ್ದರು. ಟೆಸ್ಟ್ ನೆಟ್ಸ್​ನಲ್ಲಿ ಅವರು ಬೌಲಿಂಗ್ ಚೆನ್ನಾಗಿ ಮಾಡುತ್ತಿದ್ದರು. ಇಂಗ್ಲೆಂಡ್​​ನಲ್ಲಿ ಅವರು ಅದನ್ನು ವೇಗದಲ್ಲಿ ಸ್ವಿಂಗ್ ಮಾಡುತ್ತಿದ್ದರು, “ಎಂದು ರೈನಾ ಹೇಳಿದ್ದರು.

Continue Reading
Advertisement
Virat kohli
ಕ್ರೀಡೆ8 mins ago

Virat kohli : ತಮ್ಮ ಜೀವನದ ಎರಡು ಆಘಾತಕಾರಿ ಸಂದರ್ಭಗಳನ್ನು ವಿವರಿಸಿದ ವಿರಾಟ್ ಕೊಹ್ಲಿ

Robbery case
ವಿಜಯಪುರ16 mins ago

Robbery Case : ಕ್ಯಾಂಟರ್‌ ಅಡ್ಡಗಟ್ಟಿದ ದರೋಡೆಕೋರರು; ಖಾರದ ಪುಡಿ ಎರಚಿ 32 ಲಕ್ಷ ರೂ. ದೋಚಿ ಪರಾರಿ

Nitin Gadkari
Lok Sabha Election 202425 mins ago

Nitin Gadkari: ಯಾವ ಸರ್ಕಾರದಿಂದಲೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ: ನಿತಿನ್‌ ಗಡ್ಕರಿ

Mother Teresa Series life in the works
ಸಿನಿಮಾ35 mins ago

Mother Teresa Series: 30 ಕೋಟಿ ವೆಚ್ಚದಲ್ಲಿ ತಯಾರಾಗ್ತಿದೆ ‘ಮದರ್ ಥೆರೆಸಾʼ ಸಿರೀಸ್‌!

Virat Kohli
ಪ್ರಮುಖ ಸುದ್ದಿ55 mins ago

Virat kohli : ಗವಾಸ್ಕರ್​​ಗೆ ವಿರಾಟ್​ ಕೊಹ್ಲಿಯನ್ನು ಬೈಯುವುದೇ ಕೆಲಸ, ಇದೀಗ ಮತ್ತೊಂದು ಬಾರಿ ಟೀಕೆ

gold rate today aditi
ಚಿನ್ನದ ದರ57 mins ago

Gold Rate Today: ಬಂಗಾರದ ದರಗಳಲ್ಲಿ ಭಾರಿ ಏರಿಕೆ; ಇಂದು ಕೊಳ್ಳಲು ಮುಂದಾಗುತ್ತೀರಾ? ಗಮನಿಸಿ

Advisory for Students
ವಿದೇಶ58 mins ago

Advisory for Students: ಕಿರ್ಗಿಸ್ತಾನದಲ್ಲಿನ ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಭಾರತ, ಪಾಕಿಸ್ತಾನ; ಕಾರಣವೇನು?

Gas Cylinder Blast
ಬೆಳಗಾವಿ1 hour ago

Gas Cylinder Blast: ಲೈಟ್ ಆನ್ ಮಾಡುತ್ತಿದ್ದಂತೆ ಸಿಲಿಂಡರ್‌ ಸ್ಫೋಟ; ಪತಿ- ಪತ್ನಿ ಗಂಭೀರ

crimes in karnataka
ಕ್ರೈಂ1 hour ago

Crimes in Karnataka: 4 ತಿಂಗಳಲ್ಲಿ ಮಿತಿಮೀರಿದ ಕ್ರೈಂ; ಸ್ತ್ರೀಯರೇ ಹೆಚ್ಚಿನ ಟಾರ್ಗೆಟ್!‌ ʼಗೃಹ ಇಲಾಖೆ ಇದೆಯಾ?ʼ ಎಂದು ಪ್ರಶ್ನಿಸಿದ ಎಚ್‌ಡಿಕೆ

Kiara Advani Makes Cannes Debut In Thigh-High Slit Dress
ಬಾಲಿವುಡ್2 hours ago

Cannes 2024: ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಶ್ವೇತ ವರ್ಣದ ಗೌನ್​ ಧರಿಸಿ ಮಿಂಚಿದ ಕಿಯಾರ! ಇಲ್ಲಿದೆ ವಿಡಿಯೊ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ17 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌