ಜಪಾನ್‌ನಲ್ಲಿ ಅತಿಯಾದ ದುಡಿಮೆಯಿಂದ ವರ್ಷಕ್ಕೆ 10,000 ನೌಕರರ ಅಕಾಲಿಕ ಸಾವು! - Vistara News

ಪ್ರಮುಖ ಸುದ್ದಿ

ಜಪಾನ್‌ನಲ್ಲಿ ಅತಿಯಾದ ದುಡಿಮೆಯಿಂದ ವರ್ಷಕ್ಕೆ 10,000 ನೌಕರರ ಅಕಾಲಿಕ ಸಾವು!

ಜಪಾನ್‌ನಲ್ಲಿ ಅತಿಯಾದ ದುಡಿಮೆಯ ಪರಿಣಾಮ ವರ್ಷಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಕಾರ್ಮಿಕರು, ವೇತನದಾರರು ಅಕಾಲಿಕ ಸಾವಿಗೀಡಾಗುತ್ತಾರೆ. ಇಂಥ ಸಾವಿಗೆ ಕರೋಶಿ ಎಂಬ ಹೆಸರೇ ಇದೆ.

VISTARANEWS.COM


on

japan work
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಟೋಕಿಯೊ: ಎರಡನೇ ಜಾಗತಿಕ ಯುದ್ಧದಲ್ಲಿ ಅಮೆರಿಕದ ಪರಮಾಣು ಬಾಂಬ್‌ ದಾಳಿಗೆ ಸಿಲುಕಿ ಜರ್ಜರಿತವಾಗಿದ್ದ ಜಪಾನ್‌ ನಂತರದ ದಶಕಗಳಲ್ಲಿ ಮೈಕೊಡವಿಕೊಂಡು ಕಠಿಣ ಪರಿಶ್ರಮದಿಂದ, ಶಿಸ್ತು ಸಂಯಮದಿಂದ, ಬುದ್ಧಿವಂತಿಕೆಯಿಂದ ಪ್ರಪಂಚದ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಿತ್ತು. ಯುದ್ಧದ ಬೂದಿಯಿಂದ ಫೀನಿಕ್ಸ್‌ ಪಕ್ಷಿಯಂತೆ ಚೇತರಿಸಿತ್ತು. ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿದೆ. ಇದಕ್ಕೆ ಕಾರಣ ಜಪಾನಿಗರ ಕಠೋರ ಪರಿಶ್ರಮ. ಆದರೆ ಜಪಾನ್‌ನಲ್ಲಿ ಅತಿಯಾದ ದುಡಿಮೆಯಿಂದ ಪ್ರತಿ ವರ್ಷ 10 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಮಿಕರು ಅಕಾಲಿಕ ಸಾವಿಗೀಡಾಗುತ್ತಿದ್ದಾರೆ! ಅತಿಯಾದರೆ ವಿಪರೀತ ದುಡಿಮೆಯೂ ವಿಷವಾಗುತ್ತದೆ ಎಂಬುದಕ್ಕೆ ಜಪಾನ್‌ ಸಾಕ್ಷಿಯಾಗಿದೆ.

ಅತಿಯಾದ ದುಡಿತದಿಂದ ಸತ್ತರೆ ಕರೋಶಿ ಸಾವು

ಜಪಾನ್‌ನಲ್ಲಿ ಅವಿರತ ದುಡಿಮೆಯನ್ನು ಅತ್ಯಂತ ಗೌರವದಾಯಕ ಎಂದು ಪರಿಗಣಿಸಲಾಗುತ್ತದೆ. ರಜೆ ತೆಗೆದುಕೊಳ್ಳುವುದನ್ನು ಮಹಾಪರಾಧ ಎಂಬಂತೆ ತಪ್ಪಾಗಿ ಭಾವಿಸಲಾಗುತ್ತದೆ. ದುಡಿದೂ ದುಡಿದು ಸತ್ತರೆ ಅದನ್ನು “ಕರೋಶಿʼ ಸಾವು ಎಂದು ಕರೆಯಲಾಗುತ್ತದೆ. 1970 ರಿಂದಲೂ ಕರೋಶಿ ಪದಕ್ಕೆ ಮಾನ್ಯತೆಯೂ ಇದೆ. ಜಪಾನ್ ಸರಕಾರ ಹೇಳುವ ಪ್ರಕಾರ ಅಲ್ಲಿ ವರ್ಷಕ್ಕೆ ಸುಮಾರು ಮೂರು ಸಾವಿರ ಮಂದಿ ಅಸುನೀಗುತ್ತಾರೆ. ಆದರೆ ಅನಧಿಕೃತವಾಗಿ 10 ಸಾವಿರಕ್ಕೂ ಹೆಚ್ಚು ಮಂದಿ ಅತಿಯಾದ ದುಡಿತದ ಒತ್ತಡ ತಾಳಲಾರದೆ ಸಾವಿಗೀಡಾಗುತ್ತಾರೆ. ವಿಪರೀತ ಕೆಲಸದಿಂದ ಖಿನ್ನತೆಗೆ ಒಳಗಾಗಿ ಅನೇಕ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಸಂಬಳ ಸಹಿತ ರಜೆ ತೆಗೆದುಕೊಳ್ಳಲು ಹಿಂದೇಟು!

ಜಪಾನ್‌ನಲ್ಲಿ ಪ್ರಪಂಚದ ಬೇರಾವ ಭಾಗದಲ್ಲೂ ಕಾಣಲು ಸಿಗದಷ್ಟು ಸುದೀರ್ಘ ಕೆಲಸದ ಅವಧಿಯನ್ನು, ಕೆಲಸದ ಒತ್ತಡವನ್ನು ನೋಡಬಹುದು. ಇದಕ್ಕೆ ಎರಡನೇ ಮಹಾಯುದ್ಧದ ನಂತರದ ಕಾಲದ ಸಂಪ್ರದಾಯದ ಚೌಕಟ್ಟೂ ಇದೆ. ಅದು ಅವರ ಸಂಸ್ಕೃತಿಯೂ ಆಗಿದೆ. ಜಪಾನಿನ ಕನಿಷ್ಠ ಶೇ.25ರಷ್ಟು ಕಂಪನಿಗಳಲ್ಲಿ ತಿಂಗಳಿಗೆ 80 ಗಂಟೆಗಳ ಓವರ್‌ ಟೈಮ್ ಕೆಲಸ ಸಾಮಾನ್ಯ. ಈ ಓವರ್‌ ಟೈಮ್‌ ಕೆಲಸಕ್ಕೆ ಸಂಬಳವೂ ಕೊಡುವುದಿಲ್ಲ. ಜಪಾನ್‌ನಲ್ಲಿ ವರ್ಷಕ್ಕೆ 10 ದಿನಗಳ ಸಂಬಳ ಸಹಿತ ರಜೆಯ ವ್ಯವಸ್ಥೆ ಇದೆ. ಆದರೆ ಶೇ.60 ಮಂದಿ ಉದ್ಯೋಗಿಗಳು ಈ ಸಂಬಳ ಸಹಿತ ರಜೆಯನ್ನು ತೆಗೆದುಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ಅವರ ಮನಸ್ಸು ಒಪ್ಪುವುದಿಲ್ಲ. ಗಂಟೆಗಟ್ಟಲೆ ಕೆಲಸ ಮಾಡುತ್ತಾರೆ ಎಂದ ಮಾತ್ರಕ್ಕೆ ಜಪಾನ್‌ ಅತಿ ಹೆಚ್ಚು ಉತ್ಪಾದಕ ತೆ ಹೊಂದಿರುವ ರಾಷ್ಟ್ರವೇನಲ್ಲ. ಜಿ-7 ರಾಷ್ಟ್ರಗಳಲ್ಲಿ ಕಡಿಮೆ ಉತ್ಪಾದಕತೆ ಹೊಂದಿರುವ ದೇಶಗಳಲ್ಲಿ ಜಪಾನ್‌ ಕೂಡ ಒಂದು.

ಕೆಲಸದ ಶೈಲಿ ಬದಲಿಸಲು ಸರಕಾರದ ಯತ್ನ

ಜಪಾನ್‌ನಲ್ಲಿ ಸವಾಲಾಗಿ ಪರಿಣಮಿಸಿರುವ ಅತಿಯಾದ ಕೆಲಸದ ಸಂಸ್ಕೃತಿಯನ್ನು ತಪ್ಪಿಸಲು, ಸರಕಾರ ಮತ್ತು ಕಾರ್ಪೊರೇಟ್‌ ವಲಯ ಯತ್ನಿಸುತ್ತಿದೆ. ಕಚೇರಿಯಲ್ಲಿ ಕೆಲಸದ ಅವಧಿಯನ್ನು ಕಡಿತಗೊಳಿಸಲು ಉತ್ತೇಜಿಸಲಾಗುತ್ತಿದೆ. ವರ್ಷಕ್ಕೆ ಕನಿಷ್ಠ ೫ ದಿನಗಳ ವಿರಾಮದ ರಜೆ ತೆಗೆದುಕೊಳ್ಳಬೇಕು ಎಂಬ ನಿಯಮ ಜಾರಿಗೆ ಬಂದಿದೆ. 2016ರಲ್ಲಿ ಮೌಂಟೇನ್‌ ಡೇʼ ಎಂಬ ಹೊಸ ರಜಾ ದಿನವನ್ನು ಆರಂಭಿಸುವುದರೊಂದಿಗೆ ವಾರ್ಷಿಕ ಸಾರ್ವಜನಿಕ ರಜಾ ದಿನಗಳ ಸಂಖ್ಯೆಯನ್ನು 16ಕ್ಕೆ ಏರಿಸಲಾಯಿತು. ಸರಕಾರ “ಪ್ರೀಮಿಯಂ ಫ್ರೈಡೇʼ ಎಂಬ ಪದ್ಧತಿಯನ್ನು ಜಾರಿಗೊಳಿಸಿದ್ದು, ಪ್ರತಿ ತಿಂಗಳಿನ ಕೊನೆಯ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಕಚೇರಿಂದ ಬಿಡಬೇಕು. ವಿರಾಮ ತೆಗೆದುಕೊಳ್ಳಬೇಕು.

ದುಡಿತದ ಜತೆಗೆ ಕುಡಿತದ ನಂಟು

ಜಪಾನ್‌ನಲ್ಲಿ ಅತಿಯಾದ ದುಡಿಮೆಯಿಂದ ಒತ್ತಡಕ್ಕೊಳಗಾಗುವ ಜನ ಸಹೋದ್ಯೋಗಿಗಳ ಜತೆ ಮದ್ಯಪಾನದ ಮೊರೆ ಹೋಗುತ್ತಾರೆ. ಕೆಲಸ ಮುಗಿದ ಬಳಿಕ ಸಹೋದ್ಯೋಗಿಗಳ ಜತೆ ಮದ್ಯ ಸೇವನೆ ಸಾಮಾನ್ಯ ಪರಿಪಾಠವೆನಿಸಿದೆ. ಆದ್ದರಿಂದ ಜಗತ್ತಿನ ಮೂರನೇ ಬೃಹತ್‌ ಆರ್ಥಿಕತೆಯಾದ ಜಪಾನ್‌, ಕೆಲಸ ಮತ್ತು ಜನತೆಯ ಆರೋಗ್ಯ, ನೆಮ್ಮದಿಯ ಜೀವನದ ನಡುವೆ ಸಮತೋಲನ ಕಂಡುಕೊಳ್ಳಬೇಕಾದ ಅಗತ್ಯ ಇದೆ. ಎಷ್ಟು ದುಡ್ಡು ಇದ್ದರೇನು? ನೆಮ್ಮದಿ ಇರದಿದ್ದರೇನು ಫಲ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರವಾಡ

Murder Case: ಕಾರ್ಪೋರೇಟರ್‌ ಮಗಳ ಕೊಲೆ; ಪ್ರೀತಿಸಲು ನಿರಾಕರಿಸಿದ್ದಕ್ಕೆ 9 ಬಾರಿ ಚಾಕುವಿನಿಂದ ಇರಿದ ಪಾಗಲ್‌ ಪ್ರೇಮಿ!

Murder Case: ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ‌ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಈ ವೇಳೆ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಾಳೆ. ಇದರಿಂದ ರೊಚ್ಚಿಗೆದ್ದ ಆತ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದಾನೆ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ, ನೇಹಾ ಪ್ರೀತಿಸಲು‌ ನಿರಾಕರಿಸಿದ್ದಾಳೆ. ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿಯು ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದಾನೆ.

VISTARANEWS.COM


on

Murder case Man stabbed to death 9 times for refusing to love
Koo

ಹುಬ್ಬಳ್ಳಿ: ಪ್ರೀತಿಸಲು‌ ನಿರಾಕರಿಸಿದಳು (Refusal to love) ಎಂಬ ಕಾರಣಕ್ಕಾಗಿ ಪಾಗಲ್‌ ಪ್ರೇಮಿಯೊಬ್ಬ ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್‌ವೊಬ್ಬರ ಮಗಳನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದಾನೆ. ಚಾಕುವಿನಿಂದ 9 ಬಾರಿ ಇರಿದು (Murder Case) ಕೊಂದಿದ್ದಾನೆ.

ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲಿ ಕೊಲೆ ನಡೆದಿದೆ. ನೇಹಾ ಹಿರೇಮಠ ಕೊಲೆಯಾದ ಯುವತಿಯಾಗಿದ್ದಾಳೆ. ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ನೇಹಾ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳಾಗಿದ್ದಾಳೆ. ಫೈಜಲ್ ಎಂಬಾತ ಆರೋಪಿ ಎಂದು ಗುರುತಿಸಲಾಗಿದೆ.

ಪ್ರೀತಿಸಲು ನಿರಾಕರಿಸಿದ್ದಕ್ಕೆ ಕೊಲೆ

ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ‌ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಈ ವೇಳೆ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಾಳೆ. ಇದರಿಂದ ರೊಚ್ಚಿಗೆದ್ದ ಆತ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದಾನೆ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ, ನೇಹಾ ಪ್ರೀತಿಸಲು‌ ನಿರಾಕರಿಸಿದ್ದಾಳೆ. ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿಯು ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದಾನೆ.

ಯುವತಿಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದು, ನೇಹಾಳಿಗೆ ತೀವ್ರ ರಕ್ತಸ್ರಾವವಾಗಿದೆ. ಸ್ಥಳೀಯರು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.

ಆರೋಪಿ ಫೈಜಲ್ ಕೊಂಡಿಕೊಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಠಾಣೆ‌ ಪೊಲೀಸರಿಂದ ಆರೋಪಿಯ ವಿಚಾರಣೆ ನಡೆಸಲಾಗಿದೆ.

Student Death: ರೈಲಿಗೆ ತಲೆ ಕೊಟ್ಟು ಮಣಿಪಾಲ್‌ ಆಸ್ಪತ್ರೆಯ ಸ್ಟಾಫ್ ನರ್ಸ್ ಸೂಸೈಡ್‌

ಬೆಂಗಳೂರು: ರೈಲಿಗೆ ಸಿಲುಕಿ ಯುವಕನೊಬ್ಬ ಆತ್ಮಹತ್ಯೆಗೆ (Student death) ಶರಣಾಗಿದ್ದಾರೆ. ಬೆಂಗಳೂರಿನ ದೀಪಾಂಜಲಿನಗರ ರೈಲ್ವೆ ಟ್ರಾಕ್ ಬಳಿ ಘಟನೆ ನಡೆದಿದೆ. ವಿಜಯಪುರ ಮೂಲದ ಚನ್ನಬಸು ಅಶೋಕ್ (22) ಮೃತ ದುರ್ದೈವಿ.

ಚನ್ನಬಸು ಅಶೋಕ್‌ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನ ತನ್ನ ಚಿಕ್ಕಮ್ಮನೊಟ್ಟಿಗೆ ವಾಸವಾಗಿದ್ದ. ಇಂದು ಗುರುವಾರ ಮನೆಯಿಂದ ಹೊರಟವನು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿಟಿ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Summer Special Trains: ಹಾಲಿಡೇ ಟ್ರಿಪ್‌ಗೆ ರೆಡಿನಾ? ಬೆಂಗಳೂರು-ಮೈಸೂರಿನಿಂದ ಈ ರಾಜ್ಯಗಳಿಗೆ ಸ್ಪೆಷಲ್‌ ಟ್ರೈನ್‌

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಬೆಂಗಳೂರಿನ ಕಮ್ಮನಹಳ್ಳಿ ಮುಖ್ಯರಸ್ತೆಯ ಸುಖಸಾಗರ್ ಬಳಿ ವೃದ್ಧರೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತದೇಹ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ಕೊಟ್ಟಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತರ ಗುರುತು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಮಕ್ಕಳಾಗಿಲ್ಲವೆಂದು ಕಿರುಕುಳ; ಶೌಚಾಲಯದಲ್ಲಿ ನೇಣು ಬಿಗಿದುಕೊಂಡ ಗೃಹಿಣಿ

ಚಿತ್ರದುರ್ಗ: ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಮತ್ತೋಡು ಗ್ರಾಮದಲ್ಲಿ ಘಟನೆ ನಡೆದಿದೆ. ಆಶಾ (26) ಮೃತ ದುರ್ದೈವಿ.

ಮಕ್ಕಳಾಗಿಲ್ಲ ಎಂಬ ಕಾರಣವನ್ನೇ ನೆಪವನ್ನಾಗಿ ಇಟ್ಟುಕೊಂಡು ಪತಿ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಆಶಾಗೆ, ಮದುವೆ ಆಗಿ 5 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಈ ಕಾರಣಕ್ಕೆ ಆಶಾಗೆ ತವರು ಮನೆಗೆ ವಾಪಸ್‌ ಕಳಿಸುತ್ತೇನೆ ಎಂದು ಅತ್ತೆ ಹಿಂಸೆ ನೀಡುತ್ತಿದ್ದರು.

ಪತಿ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ಆಶಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಶಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ

Continue Reading

ಪ್ರಮುಖ ಸುದ್ದಿ

Viral Video: ಐಷಾರಾಮಿ ಹಾರ್ಲೆ –ಡೇವಿಡ್ಸನ್​ ಬೈಕ್​ನಲ್ಲಿ ಫುಡ್​ ಡೆಲಿವರಿ ಕೊಟ್ಟ ಯುವಕ; ವಿಡಿಯೊ ವೈರಲ್

Viral Video ಜೊಮ್ಯಾಟೋ ಡೆಲಿವರಿ ಬಾಯ್ ಒಬ್ಬ ಹಾರ್ಲೆ –ಡೇವಿಡ್ಸ್ ನ ಬೈಕ್ ನಲ್ಲಿ ಪಾರ್ಸೆಲ್ ಅನ್ನು ಸಾಗಿಸುತ್ತಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

VISTARANEWS.COM


on

Video Viral
Koo

ಬೆಂಗಳೂರು: ನಮ್ಮಲ್ಲಿ ಹಲವಾರು ಫುಡ್ ಡೆಲಿವರಿ ಕಂಪೆನಿಗಳಿವೆ. ಅವುಗಳಲ್ಲಿ ಹಲವಾರು ಯುವಕರು ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಈ ಡೆಲಿವರಿ ಬಾಯ್​ ಕೆಲಸವನ್ನು (Viral Video) ತುಂಬಾ ಬಡತನದಲ್ಲಿರುವವರೇ ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮ ಮನೆಯ ದಿನನಿತ್ಯದ ಖರ್ಚುಗಳನ್ನು ತೂಗಿಸಲು, ಓದಿನ ಫೀಸ್ ಗಾಗಿ ಇಲ್ಲಿ ಕೆಲಸಕ್ಕೆ ಸೇರುತ್ತಾರೆ. ಬಿಸಿಲು, ಮಳೆ, ಚಳಿ ಎನ್ನದೇ ಸಮಯಕ್ಕೆ ಸರಿಯಾಗಿ ಗ್ರಾಹಕರ ಮನೆಗೆ ಫುಡ್ ಅನ್ನು ತಂದು ಕೊಡುತ್ತಾರೆ.

ಫುಡ್ ಡೆಲಿವರಿ ಕಂಪೆನಿಗಳಲ್ಲಿ ಕೆಲಸ ಮಾಡುವ ಹುಡುಗರು ಬೈಕ್ ಅನ್ನು ಹೊಂದಿರಲೇಬೇಕು. ಯಾಕೆಂದರೆ ಫುಡ್ ಗಳನ್ನು ಡೆಲಿವರಿ ಮಾಡಲು ಬೈಕ್ ಮೂಲಕವೇ ಹೋಗಬೇಕಾಗುತ್ತದೆ ಹಾಗಾಗಿ ಇಲ್ಲಿ ಕೆಲಸ ಮಾಡುವಂತಹ ಹೆಚ್ಚಿನ ಯುವಕರು ಬೈಕ್ ಅನ್ನು ಸಾಲ ಮಾಡಿ ಖರೀದಿಸಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಆದರೆ ಇಲ್ಲೊಬ್ಬ ಡೆಲಿವರಿ ಬಾಯ್ ಸೂಪರ್ ಬೈಕ್​ನಲ್ಲಿ ಹೋಗಿ ಡೆಲಿವರಿ ಮಾಡುತ್ತಿದ್ದಾನೆ. ಆತನ ವೈಖರಿ ನೋಡಿ ಎಲ್ಲರೂ ಚಕಿತರಾಗಿದ್ದಾರೆ.

ಜೊಮ್ಯಾಟೋ ಡೆಲಿವರಿ ಬಾಯ್ ಒಬ್ಬ ಹಾರ್ಲೆ –ಡೇವಿಡ್ಸನ್​ ಬೈಕ್ ನಲ್ಲಿ ಪಾರ್ಸೆಲ್ ಅನ್ನು ಸಾಗಿಸುವುದು ಕಂಡು ಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೊದಲ್ಲಿರುವ ಸಿಟಿ ಪೊಲೀಸ್ ಬ್ಯಾರಿಕೆಡ್ ಮತ್ತು ಪೊಲೀಸರ ಸಮವಸ್ತ್ರ ನೋಡಿ ಇದು ಬೆಂಗಳೂರಿನಲ್ಲಿ ಶೂಟ್ ಮಾಡಿದ ವಿಡಿಯೊ ಎನ್ನಲಾಗಿದೆ.

ಈ ವಿಡಿಯೊ ಡೆಲಿವರಿ ಬಾಯ್ ಕೆಲಸವನ್ನು ಕೀಳುಮಟ್ಟದಲ್ಲಿ ನೋಡತ್ತಿಲ್ಲ. ಆದರೆ ಹಾರ್ಲೆ ಡೇವಿಡ್ಸ್ ಕಂಪೆನಿ ಅಮೇರಿಕಾ ಪ್ರಸಿದ್ಧ ಬೈಕ್ ಉತ್ಪಾದನಾ ಕಂಪೆನಿಯಾಗಿದೆ. ಕೆಲ ದಿನಗಳ ಹಿಂದೆ ಈ ಕಂಪೆನಿ ಎಕ್ಸ್ 440 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಬೈಕ್ ನ ಬೆಲೆ 2.4 ಲಕ್ಷ ರೂಪಾಯಿಯಾಗಿದೆ. ಇಂತಹ ಐಷರಾಮಿ ಬೈಕ್ ಅನ್ನು ಹೆಚ್ಚಾಗಿ ಶ್ರೀಮಂತರು ಬಳಸುತ್ತಾರೆ. ಆದರೆ ಇದನ್ನು ಜೊಮೆಟೊ ಡೆಲಿವರಿ ಬಾಯ್ ಬಳಿ ನೋಡಿ ಜನರು ಆಶ್ಚರ್ಯಚಕಿತರಾಗಿದ್ದಾರೆ.

ಇದನ್ನೂ ಓದಿ: Raj Kundra: ಬಿಟ್‌ಕಾಯಿನ್‌ ಪೋಂಜಿ ಸ್ಕೀಮ್‌; ಇಡಿಯಿಂದ ರಾಜ್‌ ಕುಂದ್ರಾ ₹97 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಫುಡ್ ಕಂಪೆನಿಯ ಗಿಮಿಕ್!

ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದುವರೆಗೂ 2 ಮಿಲಿಯನ್ ಕ್ಕಿಂತ ಹೆಚ್ಚು ವೀವ್ಸ್​ ಅನ್ನು ಪಡೆದಿದೆ ಎನ್ನಲಾಗಿದೆ. ಅಲ್ಲದೇ ಈ ವಿಡಿಯೊಗೆ ಹೆಚ್ಚು ಕಾಮೆಂಟ್ ಬಂದಿದ್ದು, ಕೆಲವರು ವ್ಯಕ್ತಿಯನ್ನು ಹೊಗಳಿದರೆ ಇನ್ನು ಕೆಲವರು ತಮಾಷೆ ಮಾಡಿದ್ದಾರೆ. ಇದು ಫುಡ್ ಕಂಪೆನಿಯ ಪ್ರಚಾರಕ್ಕಾಗಿ ಮಾಡಿರಬಹುದು ಎಂದರೆ ಕೆಲವರು ಜೊಮ್ಯಾಟೋ ಫುಡ್ ಕಂಪೆನಿ ಮಾಲೀಕರು ಈ ಫುಡ್ ಅನ್ನು ಡೆಲಿವರಿ ಮಾಡುತ್ತಿರಬಹುದು ಎಂದಿದ್ದಾರೆ. ಇನ್ನೂಬ್ಬರು ಮನೆಯಲ್ಲಿ ಖರ್ಚಿಗೆ ಹಣ ನೀಡದ ಕಾರಣ ಈ ಕೆಲಸ ಮಾಡುತ್ತಿದ್ದಾನೆ ಎಂದಿದ್ದಾರೆ. ಒಟ್ಟಾರೆ ಡೆಲಿವರಿ ಬಾಯ್ ಬಳಿ ಈ ಬೈಕ್ ನೋಡಿ ಜನರು ಅಚ್ಚರಿಗೊಂಡಿದ್ದಲ್ಲದೇ ಡೆಲಿವರಿ ಬಾಯ್ ಐಷರಾಮಿ ಬೈಕ್ ಅನ್ನು ಹೊಂದಲು ಸಾಧ್ಯವಿಲ್ಲ ಎಂಬ ನಿಲುವನ್ನು ಬದಲಾಯಿಸಿದ್ದಾರೆ.

Continue Reading

Lok Sabha Election 2024

Lok Sabha Election 2024: ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಆಸ್ತಿ ಮೌಲ್ಯ ಎಷ್ಟು ಕೋಟಿ?

Lok Sabha Election 2024: ಬಿ.ವೈ. ರಾಘವೇಂದ್ರ ಅವರು ತಮ್ಮ ಪತ್ನಿ ತೇಜಸ್ವಿನಿ, ಮಕ್ಕಳಾದ ಭಗತ್‌, ಸುಭಾಷ್‌ ಮತ್ತು ತಮ್ಮ ಸಹೋದರ ವಿಜಯೇಂದ್ರ ಅವರಿಗೆ ಸಾಲ ನೀಡಿದ್ದಾರೆ. ವಿಜಯೇಂದ್ರ ಅವರಿಗೆ 85 ಲಕ್ಷ ರೂಪಾಯಿ, ಪತ್ನಿ ತೇಜಸ್ವಿನಿಗೆ 5.49 ಕೋಟಿ ರೂ., ಪುತ್ರ ಭಗತ್‌ಗೆ 65 ಲಕ್ಷ ರೂ., ಮತ್ತೊಬ್ಬ ಪುತ್ರ ಸುಭಾಷ್‌ಗೆ 85 ಲಕ್ಷ ರೂ. ಸಾಲ ನೀಡಿದ್ದಾರೆ. ಇದಲ್ಲದೆ, ವಿವಿಧ ಸಂಸ್ಥೆಗಳಿಗೆ ರಾಘವೇಂದ್ರ ಅವರು ಒಟ್ಟು 20.39 ಕೋಟಿ ರೂ. ಸಾಲ ನೀಡಿದ್ದಾರೆ. ಪತ್ನಿ ತೇಜಸ್ವಿನಿ ಅವರು ಭಗತ್‌ ಹೋಮ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ 2.50 ಲಕ್ಷ ರೂ. ನೀಡಿದ್ದಾರೆ

VISTARANEWS.COM


on

Lok Sabha Election 2024 How much is BY Raghavendra assets worth
Koo

ಶಿವಮೊಗ್ಗ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ (Shivamogga Lok Sabha constituency) ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ (BY Raghavendra) ನಾಮಪತ್ರ ಸಲ್ಲಿಸಿದ್ದಾರೆ. ಅವರು ಚುನಾವಣಾ ಆಯೋಗಕ್ಕೆ (Election Commission) ಆಸ್ತಿ ವಿವರ ಸಲ್ಲಿಸಿದ್ದು, ಒಟ್ಟು 73.71 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಬಿ.ವೈ. ರಾಘವೇಂದ್ರ ಬಳಿ 55.85 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದ್ದರೆ, ಪತ್ನಿ ತೇಜಸ್ವಿನಿ ಹೆಸರಿನಲ್ಲಿ 17.86 ಕೋಟಿ ರೂಪಾಯಿ ಆಸ್ತಿ ಇದೆ. ರಾಘವೇಂದ್ರ ಕೈಯಲ್ಲಿ 33,291 ರೂಪಾಯಿ ನಗದು ಹಣವಿದೆ. ಪತ್ನಿ ಬಳಿ ನಗದು 9,39,109 ರೂ. ಇದೆ.

ಪತಿ – ಪತ್ನಿ ಬಳಿ 21 ಬ್ಯಾಂಕ್‌ ಖಾತೆಗಳು!

ಬಿ.ವೈ. ರಾಘವೇಂದ್ರ ಅವರು ವಿವಿಧ ಬ್ಯಾಂಕ್‌ಗಳಲ್ಲಿ 13 ಅಕೌಂಟ್‌ ಹೊಂದಿದ್ದಾರೆ. ಅವುಗಳಲ್ಲಿ 98,01,123 ರೂಪಾಯಿ ಇದೆ. ಪತ್ನಿ ತೇಜಸ್ವಿನಿ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 8 ಅಕೌಂಟ್‌ಗಳಿವೆ. ಇವುಗಳಲ್ಲಿ 25,65,577 ರೂಪಾಯಿ ಹಣವಿದೆ.

ಮ್ಯೂಚುವಲ್‌ ಕಂಪನಿಗಳಲ್ಲಿ ಹೂಡಿಕೆ

ಬಿ.ವೈ. ರಾಘವೇಂದ್ರ ಅವರು 15 ಕಂಪನಿಗಳಲ್ಲಿ 7.68 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, ತೇಜಸ್ವಿನಿ ಆರು ಕಂಪನಿಗಳಲ್ಲಿ 1.22 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಮ್ಯೂಚುವಲ್‌ ಫಂಡ್ಸ್‌, ಬಾಂಡ್‌ಗಳಲ್ಲಿ ರಾಘವೇಂದ್ರ 2.22 ಕೋಟಿ ರೂಪಾಯಿ, ತೇಜಸ್ವಿನಿ 30 ಸಾವಿರ ರೂಪಾಯಿಯನ್ನು ಹೂಡಿಕೆ ಮಾಡಿದ್ದಾರೆ.

ಪತ್ನಿ, ಮಕ್ಕಳು, ಸಹೋದರನಿಗೆ ಸಾಲ ನೀಡಿರುವ ರಾಘವೇಂದ್ರ

ಬಿ.ವೈ. ರಾಘವೇಂದ್ರ ಅವರು ತಮ್ಮ ಪತ್ನಿ ತೇಜಸ್ವಿನಿ, ಮಕ್ಕಳಾದ ಭಗತ್‌, ಸುಭಾಷ್‌ ಮತ್ತು ತಮ್ಮ ಸಹೋದರ ವಿಜಯೇಂದ್ರ ಅವರಿಗೆ ಸಾಲ ನೀಡಿದ್ದಾರೆ. ವಿಜಯೇಂದ್ರ ಅವರಿಗೆ 85 ಲಕ್ಷ ರೂಪಾಯಿ, ಪತ್ನಿ ತೇಜಸ್ವಿನಿಗೆ 5.49 ಕೋಟಿ ರೂ., ಪುತ್ರ ಭಗತ್‌ಗೆ 65 ಲಕ್ಷ ರೂ., ಮತ್ತೊಬ್ಬ ಪುತ್ರ ಸುಭಾಷ್‌ಗೆ 85 ಲಕ್ಷ ರೂ. ಸಾಲ ನೀಡಿದ್ದಾರೆ. ಇದಲ್ಲದೆ, ವಿವಿಧ ಸಂಸ್ಥೆಗಳಿಗೆ ರಾಘವೇಂದ್ರ ಅವರು ಒಟ್ಟು 20.39 ಕೋಟಿ ರೂ. ಸಾಲ ನೀಡಿದ್ದಾರೆ. ಪತ್ನಿ ತೇಜಸ್ವಿನಿ ಅವರು ಭಗತ್‌ ಹೋಮ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ 2.50 ಲಕ್ಷ ರೂ. ನೀಡಿದ್ದಾರೆ

ರಾಘವೇಂದ್ರ – ತೇಜಸ್ವಿನಿ ಸಾಲಗಾರರು!

ಬಿ.ವೈ. ರಾಘವೇಂದ್ರ ಮತ್ತು ಪತ್ನಿ ತೇಜಸ್ವಿನಿ ಸಾಲಗಾರರಾಗಿದ್ದಾರೆ. ರಾಘವೇಂದ್ರ ಅವರಿಗೆ 69.39 ಲಕ್ಷ ರೂ. ಸಾಲವಿದೆ. ಪತ್ನಿ ತೇಜಸ್ವಿನಿಗೆ 12.91 ಕೋಟಿ ರೂ. ಸಾಲವಿದೆ.

ಚಿನ್ನ, ವಜ್ರ, ಬೆಳ್ಳಿ, ವಾಹನಗಳು

ಬಿ.ವೈ. ರಾಘವೇಂದ್ರ ಅವರ ಬಳಿ 1988 ಮಾಡಲ್‌ನ ಅಂಬಾಸಿಡರ್‌, ಒಂದು ಟ್ರ್ಯಾಕ್ಟರ್‌, ಟೊಯೋಟ ಫಾರ್ಚುನರ್‌ ಕಾರು ಇದೆ. ಇವುಗಳ ಒಟ್ಟು ಮೌಲ್ಯ 44.77 ಲಕ್ಷ ರೂಪಾಯಿ ಆಗಿದೆ.

ಸಾವಿರ ಗ್ರಾಂ ಮೇಲೆ ಚಿನ್ನ!

ರಾಘವೇಂದ್ರ ಬಳಿ 1021.50 ಗ್ರಾಂ ಚಿನ್ನವಿದೆ. 114.26 ಕ್ಯಾರೆಟ್‌ ವಜ್ರ, 8.6 ಕೆ.ಜಿ ಬೆಳ್ಳಿ, 42 ಬೆಲೆಬಾಳುವ ಹರಳು ಇದೆ ಇವುಗಳ ಮೌಲ್ಯ 98.83 ಲಕ್ಷ ರೂಪಾಯಿ ಆಗಿದೆ. ಇನ್ನು, ಪತ್ನಿ ತೇಜಸ್ವಿನಿ ಬಳಿ 1395.92 ಗ್ರಾಂ ಚಿನ್ನ, 96.022 ಕ್ಯಾರೆಟ್‌ ವಜ್ರ, 5.1 ಕೆ.ಜಿ ಬೆಳ್ಳಿ ಇದೆ. ಇದರ ಮೌಲ್ಯ 1.13 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: Lok Sabha Election 2024: ಈ ಬಾರಿ ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ: ಸಿಎಂ ಸಿದ್ದರಾಮಯ್ಯ ಭವಿಷ್ಯ

ಕೃಷಿ ಜಮೀನು ಎಷ್ಟು?

ರಾಘವೇಂದ್ರ ಹೆಸರಿನಲ್ಲಿ 11.33 ಎಕರೆ ಕೃಷಿ ಜಮೀನು ಇದೆ. ಇದರ ಮೌಲ್ಯ 1.32 ಕೋಟಿ ರೂಪಾಯಿ, ವಿವಿಧೆಡೆ 18 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ ಇದೆ. ಪತ್ನಿ ಹೆಸರಿನಲ್ಲಿ 8.07 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ ಇದೆ.

ಕಟ್ಟಡಗಳ ಮೌಲ್ಯವೆಷ್ಟು?

ರಾಘವೇಂದ್ರ ಹೆಸರಿನಲ್ಲಿ 1.24 ಕೋಟಿ ರೂ. ಮೌಲ್ಯದ ಕಟ್ಟಡಗಳಿವೆ. ರಾಘವೇಂದ್ರ ಹೆಸರಿನಲ್ಲಿ ಶಿವಮೊಗ್ಗದ ವಿನೋಬನಗರ, ಶಿಕಾರಿಪುರದಲ್ಲಿ ವಾಸದ ಮನೆಗಳಿವೆ. ಇವುಗಳ ಮೌಲ್ಯ 4.18 ಕೋಟಿ ರೂಪಾಯಿ ಇದೆ. ಪತ್ನಿ ತೇಜಸ್ವಿನಿ 6.82 ಕೋಟಿ ರೂ. ಮೌಲ್ಯದ ವಾಸದ ಮನೆಗಳಿವೆ. ಇನ್ನು, ಬಿ.ವೈ.ರಾಘವೇಂದ್ರ ವಿರುದ್ಧ ನಾಲ್ಕು ಪ್ರಕರಣಗಳಿವೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.

Continue Reading

ದೇಶ

Arvind Kejriwal : ಜಾಮೀನಿಗಾಗಿ ಕುತಂತ್ರ; ಸಿಹಿ ತಿಂಡಿ ತಿಂದು ಸಕ್ಕರೆ ಕಾಯಿಲೆ ಎನ್ನುತ್ತಿರುವ ಕೇಜ್ರಿವಾಲ್​ ಎಂದ ಇಡಿ

Aravind Kejriwal: ಅಧಿಕ ಮಧುಮೇಹವಿದೆ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿ. ಮಾವಿನ ಹಣ್ಣುಗಳನ್ನು ಸೇವಿಸುವುದು, ನಿಯಮಿತವಾಗಿ ಸಿಹಿತಿಂಡಿಗಳನ್ನು ಸೇವಿಸುವುದು ಮತ್ತು ಸಕ್ಕರೆ ಇರುವ ಚಹಾ ಸೇವಿಸುತ್ತಿದ್ದಾರೆ. ಈ ಮೂಲಕ ಸಕ್ಕರೆ ಮಟ್ಟ ಹೆಚ್ಚಿಸಿಕೊಂಡು ಜಾಮೀನು ಪಡೆಯಲು ಸುಳ್ಳು ಹೇಳುತ್ತಿದ್ದಾರೆ ” ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೋರ್ಟ್​ ಮುಂದೆ ಆರೋಪಿಸಿದ್ದಾರೆ.

VISTARANEWS.COM


on

Aravind Kejriwal
Koo

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal ) ಅವರಿಗೆ ತಿಹಾರ್​ ಜೈಲಿನಲ್ಲಿ ಮಾವಿನ ಹಣ್ಣುಗಳು ಹಾಗೂ ಸಿಹಿ ತಿಂಡಿಗಳ ಪುಷ್ಕಳ ಭೋಜನ ನಡೆಯುತ್ತಿದೆ. ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಸೇರಿದಂತೆ ಎಲ್ಲ ಸಂದರ್ಭಗಳಲ್ಲಿ ಸಕ್ಕರೆ ಅಂಶವಿರುವ ವಸ್ತುಗಳನ್ನು ತಿನ್ನುತ್ತಿದ್ದಾರೆ. ಇದು ಕುತಂತ್ರ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಂಡು ಕೋರ್ಟ್​​ ಮುಂದೆ ತಮಗೆ ಸಕ್ಕರೆ ಕಾಯಿಲೆ ಇದೆ ಎಂದು ಹೇಳುವ ಮೂಲಕ ಜಾಮೀನು ಕೋರುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆಕ್ಷೇಪ ವ್ಯಕ್ತಪಡಿಸಿದೆ.

ತಮ್ಮ ಸಕ್ಕರೆ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಮತ್ತು ವೈದ್ಯರನ್ನು ಸಂಪರ್ಕಿಸಲು ಅವಕಾಶ ನೀಡುವಂತೆ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯನ್ನು ದೆಹಲಿ ನ್ಯಾಯಾಲಯ ವಿಚಾರಣೆ ನಡೆಸಿತು. ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಳಿತಗೊಳ್ಳುತ್ತಿದೆ ಮತ್ತು ಅವರು ತಮ್ಮ ನಿಯಮಿತ ವೈದ್ಯರನ್ನು ಸಂಪರ್ಕಿಸುವ ಅಗತ್ಯವಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಕೇಜ್ರಿವಾಲ್ ಅವರು ವಾರಕ್ಕೆ ಮೂರು ಬಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ವೈದ್ಯರನ್ನು ಸಂಪರ್ಕಿಸಬೇಕಾಗಿದೆ ಎಂದು ಹೇಳಿದರು.

“ಅಧಿಕ ಮಧುಮೇಹವಿದೆ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿ. ಮಾವಿನ ಹಣ್ಣುಗಳನ್ನು ಸೇವಿಸುವುದು, ನಿಯಮಿತವಾಗಿ ಸಿಹಿತಿಂಡಿಗಳನ್ನು ಸೇವಿಸುವುದು ಮತ್ತು ಸಕ್ಕರೆ ಇರುವ ಚಹಾ ಸೇವಿಸುತ್ತಿದ್ದಾರೆ. ಈ ಮೂಲಕ ಸಕ್ಕರೆ ಮಟ್ಟ ಹೆಚ್ಚಿಸಿಕೊಂಡು ಜಾಮೀನು ಪಡೆಯಲು ಸುಳ್ಳು ಹೇಳುತ್ತಿದ್ದಾರೆ ” ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೋರ್ಟ್​ ಮುಂದೆ ಹೇಳಿದ್ದಾರೆ.

ಇದನ್ನೂ ಓದಿ: Lok Sabha Election 2024: ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಲು ಬಿಜೆಪಿಗೆ ಮತ ನೀಡಿ: ಕಾಗೇರಿ ಮನವಿ

ಈ ಉದ್ದೇಶಪೂರ್ವಕ ಸೇವನೆಯ ಹಿಂದೆ ಕೇಜ್ರಿವಾಲ್ ಅವರ ಕೆಟ್ಟ ಉದ್ದೇಶವಿದೆ. ಅವರ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿನ ಏರಿಳಿತಗಳನ್ನು ಉಲ್ಲೇಖಿಸಿ ಜಾಮೀನು ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಹುಸೇನ್ ವಾದಿಸಿದರು.

ಈಗ ರದ್ದುಪಡಿಸಲಾದ ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದ ನಂತರ ಅರವಿಂದ್ ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ವಿಚಾರಣಾ ನ್ಯಾಯಾಲಯವು ಅವರ ನ್ಯಾಯಾಂಗ ಬಂಧನವನ್ನು ಏಪ್ರಿಲ್ 23, 2024 ರವರೆಗೆ ವಿಸ್ತರಿಸಿತು.

ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಬಂಧನ ಮತ್ತು ನಂತರದ ರಿಮಾಂಡ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ

ವಿಧಾನಸಭಾ ಸದಸ್ಯರು ಮತ್ತು ಕ್ಯಾಬಿನೆಟ್ ಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಲು ಕೇಜ್ರಿವಾಲ್ ಅವರಿಗೆ ಅವಕಾಶ ನೀಡುವ ಮೂಲಕ ದೆಹಲಿಯ ದಕ್ಷ ಆಡಳಿತಕ್ಕಾಗಿ ವ್ಯವಸ್ಥೆ ಮಾಡಲು ಕಾರಾಗೃಹಗಳ ಮಹಾನಿರ್ದೇಶಕರಿಗೆ ನಿರ್ದೇಶನ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರುವುದಕ್ಕೆ ಸಂಬಂಧಿಸಿದ ತಪ್ಪು ಸಂದೇಶಗಳನ್ನು ಸಾರುವ ಶೀರ್ಷಿಕೆಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳನ್ನು ನಿರ್ಬಂಧಿಸಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.

Continue Reading
Advertisement
Murder case Man stabbed to death 9 times for refusing to love
ಧಾರವಾಡ3 mins ago

Murder Case: ಕಾರ್ಪೋರೇಟರ್‌ ಮಗಳ ಕೊಲೆ; ಪ್ರೀತಿಸಲು ನಿರಾಕರಿಸಿದ್ದಕ್ಕೆ 9 ಬಾರಿ ಚಾಕುವಿನಿಂದ ಇರಿದ ಪಾಗಲ್‌ ಪ್ರೇಮಿ!

Infosys
ವಾಣಿಜ್ಯ6 mins ago

Infosys Q4 Result: ಇನ್ಫೋಸಿಸ್‌ಗೆ 7,969 ಕೋಟಿ ರೂ. ನಿವ್ವಳ ಲಾಭ; 28 ರೂ.ಗಳ ಡಿವಿಡೆಂಡ್‌ ಘೋಷಣೆ

EPF New rules
ವಾಣಿಜ್ಯ8 mins ago

EPF New rule: ತುರ್ತು ಚಿಕಿತ್ಸೆಗ ಪಿಎಫ್​ನಿಂದ 1 ಲಕ್ಷ ರೂ. ಪಡೆಯಬಹುದು; ಹೇಗೆ ಗೊತ್ತಾ?

Siriya Crime
ಕ್ರೈಂ14 mins ago

Honour Killing: ರಸ್ತೆ ಬದಿಯಲ್ಲೇ ಮಹಿಳೆಯನ್ನು ದರದರನೆ ಎಳೆದು, ತಲೆಗೆ ಹೊಡೆದು ಕೊಲೆ ಮಾಡಿದ್ರು; ಇದೇನು ಮರ್ಯಾದೆ ಹತ್ಯೆಯಾ?

Flop Film
ಸಿನಿಮಾ35 mins ago

Flop Film: ಫ್ಲಾಪ್ ಎಂದು ಕರೆಸಿಕೊಂಡ ಈ ಚಿತ್ರದ 25 ಕೋಟಿ ಟಿಕೆಟ್ ಮಾರಾಟವಾಗಿದ್ದು ಹೇಗೆ; ಇಲ್ಲಿದೆ ರೋಚಕ ಸಿನಿ ಇತಿಹಾಸ

Summer Fashion
ಫ್ಯಾಷನ್42 mins ago

Summer Fashion: ಸಮ್ಮರ್‌ ಹೈ ಸ್ಟ್ರೀಟ್‌ ಫ್ಯಾಷನ್‌ಗೆ ಮರಳಿದ 3 ಶೈಲಿಯ ಬ್ಯಾಕ್‌ಲೆಸ್‌ ಔಟ್‌ಫಿಟ್ಸ್

Video Viral
ಪ್ರಮುಖ ಸುದ್ದಿ45 mins ago

Viral Video: ಐಷಾರಾಮಿ ಹಾರ್ಲೆ –ಡೇವಿಡ್ಸನ್​ ಬೈಕ್​ನಲ್ಲಿ ಫುಡ್​ ಡೆಲಿವರಿ ಕೊಟ್ಟ ಯುವಕ; ವಿಡಿಯೊ ವೈರಲ್

IPL Betting
ಮಂಡ್ಯ49 mins ago

IPL‌ Betting: ಸಾಲಗಾರರ ಕಾಟ; ಹೆಂಡತಿ-ಮಕ್ಕಳಿಗೆ ವಿಷವಿಕ್ಕಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪಾಪಿ

Safest Countries
ವಿದೇಶ54 mins ago

Safest Countries : ವಿಶ್ವದ ಎಲ್ಲೆಡೆ ನೋಡಿದರೂ ಯುದ್ಧ ಭೀತಿ; ಈ ದೇಶಗಳಷ್ಟೇ ಸುರಕ್ಷಿತ!

Lok Sabha Election 2024 How much is BY Raghavendra assets worth
Lok Sabha Election 202457 mins ago

Lok Sabha Election 2024: ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಆಸ್ತಿ ಮೌಲ್ಯ ಎಷ್ಟು ಕೋಟಿ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ7 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 week ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌