Life Insurance : ಶ್ರೀಮಂತ ಮತ್ತು ಬಡವರಲ್ಲಿ ಯಾರಿಗೆ ವಿಮೆಯ ಅಗತ್ಯ ಹೆಚ್ಚು? - Vistara News

ಮನಿ-ಗೈಡ್

Life Insurance : ಶ್ರೀಮಂತ ಮತ್ತು ಬಡವರಲ್ಲಿ ಯಾರಿಗೆ ವಿಮೆಯ ಅಗತ್ಯ ಹೆಚ್ಚು?

ಜೀವ ವಿಮೆ ಮತ್ತು ಆರೋಗ್ಯ ವಿಮೆ ಎಲ್ಲರಿಗೂ ಅಗತ್ಯ. ಆದರೆ ( Life Insurance ) ಶ್ರೀಮಂತರಿಗಿಂತಲೂ ಬಡವರಿಗೆ ಇದರ ಅಗತ್ಯ ಹೆಚ್ಚು. ಆದರೆ ಬಡವರು ಖರೀದಿಸುವುದು ಕಡಿಮೆ.

VISTARANEWS.COM


on

All in one insurence policy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜೀವ ವಿಮೆ ( Life Insurance) ಮತ್ತು ವೈದ್ಯಕೀಯ ವಿಮೆ ( Medical Insurance) ಎರಡೂ ಎಲ್ಲರಿಗೂ ಅವಶ್ಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಕುಟುಂಬದ ಆಧಾರ ಸ್ಥಂಭದಂತೆ ಇರುವ ಹಾಗೂ ಆದಾಯವನ್ನು ತಂದು ಕೊಡುವವರು ಅಗಲಿದ ಸಂದರ್ಭ ಸೂಕ್ತ ಜೀವ ವಿಮೆ ಇಲ್ಲದಿದ್ದರೆ, ಅಂಥ ಕುಟುಂಬ ಆರ್ಥಿಕ ಭದ್ರತೆಯನ್ನು ಕಳೆದುಕೊಂಡು ಬೀದಿ ಪಾಲಾಗುತ್ತದೆ. ಅದೇ ರೀತಿ ಅವರಿಗೆ ಅಪಘಾತ ಅಥವಾ ಇತರ ಕಾರಣಗಳಿಂದ ಆಸ್ಪತ್ರೆಗೆ ದಾಖಲಾಗುವ ಹಾಗೂ ಚಿಕಿತ್ಸೆಗೆ ಲಕ್ಷಾಂತರ ರೂ. ಖರ್ಚು ವೆಚ್ಚಗಳು ಸಂಭವಿಸಿದರೆ, ವೈದ್ಯಕೀಯ ವಿಮೆ ಅವಶ್ಯಕವಾಗುತ್ತದೆ. ಇಲ್ಲದಿದ್ದರೆ ಮತ್ತೆ ಆರ್ಥಿಕ ವ್ಯವಸ್ಥೆ ಬುಡಮೇಲಾಗಬಹುದು.

ಶ್ರೀಮಂತರು ಮತ್ತು ಬಡವರಲ್ಲಿ ಯಾರಿಗೆ ವಿಮೆಯ ಅಗತ್ಯ ಹೆಚ್ಚು ಇರುತ್ತದೆ? ಶ್ರೀಮಂತನಿಗೆ ಹೋಲಿಸಿದರೆ ಬಡವರಿಗೇ ವಿಮೆಯ ಅಗತ್ಯ ಹೆಚ್ಚು. ಇದಕ್ಕೊಂದು ಉದಾಹರಣೆ ನೋಡೋಣ. ಕುಟುಂಬದ ಆದಾಯಗಳ ಜವಾಬ್ದಾರಿ ಹೊತ್ತಿರುವ ವ್ಯಕ್ತಿ ನಿಧನರಾದರೆ, ಆ ಆದಾಯದ ಹರಿವು ಕುಟುಂಬಕ್ಕೆ ನಿಲ್ಲಬಾರದು. ಆಗ ಮಾತ್ರ ಕುಟುಂಬ ಬೀದಿ ಪಾಲಾಗುವುದು ತಪ್ಪುತ್ತದೆ.

ಇದನ್ನೂ ಓದಿ : Ram Mandir: ರಾಮಮಂದಿರ ಆತ್ಮನಿರ್ಭರತೆಯ ಸಂಕೇತ;‌ ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

ಒಂದು ವಿಮೆಯಲ್ಲಿ 10 ಲಕ್ಷ ರೂ. ಪರಿಹಾರದ ಕವರೇಜ್‌ ಇದೆ ಎಂದು ಇಟ್ಟುಕೊಳ್ಳೋಣ. 10 ಲಕ್ಷ ರೂ. ಆಸ್ತಿ ಇರುವ ಶ್ರೀಮಂತ ಮತ್ತು ಅಷ್ಟು ಆಸ್ತಿ ಪಾಸ್ತಿ ಇರದ ಬಡ ವ್ಯಕ್ತಿಯಲ್ಲಿ ಯಾರಿಗೆ ವಿಮೆಯ ಅಗತ್ಯ ಹೆಚ್ಚು ಇರುತ್ತದೆ? ಖಂಡಿತವಾಗಿಯೂ ಬಡವನಿಗೆ. ಏಕೆಂದರೆ ಶ್ರೀಮಂತ ವ್ಯಕ್ತಿ ವಿಮೆ ಇಲ್ಲದೆ ಮೃತಪಟ್ಟರೂ, ಆತ ಬಿಟ್ಟು ಹೋಗಿರುವ 10 ಲಕ್ಷ ರೂ. ಸಂಪತ್ತು ಆತನ ಕುಟುಂಬದ ಆರ್ಥಿಕ ಭದ್ರತೆಗೆ ನೆರವಾಗುತ್ತದೆ. ಆದರೆ ಬಡ ವ್ಯಕ್ತಿ ನಿಧನರಾದರೆ, ಆತ ಬಿಟ್ಟು ಹೋಗಿರುವ ಸಂಪತ್ತು ಕಡಿಮೆಯಾಗಿರುವುದರಿಂದ ಕುಟುಂಬ ಸಂಕಷ್ಟಕ್ಕೀಡಾಗುವುದುದ ಖಚಿತ. ಆದರೆ ಜೀವ ವಿಮೆ ಇದ್ದರೆ, ಅಲ್ಪ ಪ್ರೀಮಿಯಂ ವೆಚ್ಚದಲ್ಲಿ 10 ಲಕ್ಷ ರೂ. ಪರಿಹಾರವನ್ನು ಆತನ ಕುಟುಂಬವು ಪಡೆಯುತ್ತದೆ. ವಿಪರ್ಯಾಸವೇನೆಂದರೆ, ಸಾಮಾನ್ಯವಾಗಿ ಶ್ರೀಮಂತರು ವಿಮೆಯನ್ನು ಪಡೆದಿರುತ್ತಾರೆ. ಬಡವರು ಖರೀದಿಸಿರುವುದಿಲ್ಲ. ಆದರೆ ವಾಸ್ತವವಾಗಿ ಬಡವರಿಗೆ ವಿಮೆಯ ಅಗತ್ಯ ಹೆಚ್ಚು. ಸರಿಯಾದ ವಿಮೆಯನ್ನು ಪಡೆದಿರುವುದು ಮುಖ್ಯ. ಹಲವಾರು ಮಂದಿ ಬೇಕಾದಷ್ಟು ವಿಮೆ ಹೊಂದಿರುವುದಿಲ್ಲ, ಅಥವಾ ತಪ್ಪಾಗಿ ವಿಮೆ ಖರೀದಿಸಿರುತ್ತಾರೆ.

ಜೀವ ವಿಮೆ ಪಾಲಿಸಿಗಳಲ್ಲಿ ಮೂರು ಪ್ರಮುಖ ಪಾಲಿಸಿಗಳು ಇವೆ. ಮೊದಲನೆಯದಾಗಿ ಸಮಗ್ರ ಜೀವ ವಿಮೆ ಪಾಲಿಸಿ. ಎರಡನೆಯದಾಗಿ ಎಂಡೊಮೆಂಟ್‌ ಪಾಲಿಸಿ. ಮೂರನೆಯದಾಗಿ ಟರ್ಮ್‌ ಪಾಲಿಸಿ. ಮೊದಲನೆಯದಾಗಿ ಸಮಗ್ರ ಜೀವ ವಿಮೆ ಪಾಲಿಸಿ ಎಂದರೇನು ಎಂದು ನೋಡೋಣ. ಇದು ಪಾಲಿಸಿದಾರರ ಜೀವನ ಪರ್ಯಂತ ವಿಮೆ ಕವರೇಜ್‌ ಅನ್ನು ನೀಡುತ್ತದೆ. 99 ವರ್ಷದ ತನಕ ಇದು ಲಭಿಸುತ್ತದೆ. ಈ ಅವಧಿಯಲ್ಲಿ ಪಾಲಿಸಿದಾರ ಮೃತಪಟ್ಟರೆ ಕುಟಂಬದ ಆರ್ಥಿಕ ಭದ್ರತೆಗೆ ವಿಮೆ ಆಸರೆಯಾಗುತ್ತದೆ. ಎಂಡೊಮೆಂಟ್‌ ಪಾಲಿಸಿಯಲ್ಲಿ ಪಾಲಿಸಿದಾರ ಮೃತಪಟ್ಟಾಗ ಅಥವಾ ಪಾಲಿಸಿ ಮೆಚ್ಯೂರ್‌ ಆದಾಗ ಲಂಪ್ಸಮ್‌ ಮೊತ್ತವೊಂದನ್ನು ನೀಡಲಾಗುವುದು. ಸಾಮಾನ್ಯವಾಗಿ ಮೆಚ್ಯೂರಿಟಿಯ ಅವಧಿ 10 ವರ್ಷ, 15 ಅಥವಾ 20 ವರ್ಷವಾಗಿರುತ್ತದೆ.

ಟರ್ಮ್‌ ಲೈಫ್‌ ಇನ್ಷೂರೆನ್ಸ್‌ನಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ಅಪ್ಪಟ ವಿಮೆಯನ್ನು ಒದಗಿಸಲಾಗುತ್ತದೆ. ಇಲ್ಲಿ ಪಾಲಿಸಿಯ ಮೆಚ್ಯೂರಿಟಿ ಆದಾಗ ಕಟ್ಟಿದ ಪ್ರೀಮಿಯಂ ಸಿಗುವುದಿಲ್ಲ. ಆದರೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಮೊತ್ತದ ವಿಮೆ ಕವರೇಜ್‌ ಸಿಗುತ್ತದೆ. ಇದು ಕೂಡ ವಾಹನ ವಿಮೆ ಪ್ರೀಮಿಯಂ ಇದ್ದಂತೆ. ವಾಹನ ಅಪಘಾತವಾದಾಗ ವಿಮೆ ಕ್ಲೇಮ್‌ ಮಾಡಿಕೊಳ್ಳಬಹುದು. ಅದೇ ರೀತಿ ಪಾಲಿಸಿದಾರ ಮೃತಪಟ್ಟಾಗ ವಿಮೆ ಪರಿಹಾರ ಕ್ಲೇಮ್‌ ಮಾಡಿಕೊಳ್ಳಬಹುದು. ಸಮಗ್ರ ಜೀವ ವಿಮೆ ಪಾಲಿಸಿ ಮತ್ತು ಎಂಡೊಮೆಂಟ್‌ ಪಾಲಿಸಿಯಲ್ಲಿ, ಪಾಲಿಸಿ ಮೆಚ್ಯೂರ್‌ ಆದಾಗ ಒಂದಷ್ಟು ಮೊತ್ತದ ಇಂಟರೆಸ್ಟ್‌ ಹಾಗೂ ಬೋನಸ್‌ ಸಿಗುತ್ತದೆ. ಎಂಡೊಮೆಂಟ್‌ ಪಾಲಿಸಿಗಳು 10-20 ವರ್ಷ ಅವಧಿಯದ್ದು. ಹೋಲ್‌ ಲೈಫ್‌ ಇನ್ಷೂರೆನ್ಸ್‌ ಅಥವಾ ಸಮಗ್ರ ಜೀವ ವಿಮೆ 99 ವರ್ಷದ ತನಕ ಸುದೀರ್ಘಾವಧಿಗೆ ಸಿಗುತ್ತವೆ. ಸಮಗ್ರ ಜೀವ ವಿಮೆಗೆ ಹೋಲಿಸಿದರೆ ಎಂಡೊಮೆಂಟ್‌ ಪಾಲಿಸಿಯ ಪ್ರೀಮಿಯಂ ದುಬಾರಿ. ಟರ್ಮ್‌ ಇನ್ಷೂರೆನ್ಸ್‌ ಅತ್ಯಂತ ಅಗ್ಗ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ ಗೈಡ್

Retirement Plan: ನಿವೃತ್ತಿ ನಂತರ ನೆಮ್ಮದಿ ಜೀವನ ನಡೆಸಬೇಕೆ? ಈ 5 ಯೋಜನೆಗಳನ್ನು ಮರೆಯಬೇಡಿ

ನಿವೃತ್ತಿಗಾಗಿ ಯೋಜಿಸುತ್ತಿದ್ದರೆ ಮತ್ತು ಪ್ರತಿ ತಿಂಗಳು ಪಿಂಚಣಿ ಪಡೆಯಲು ಬಯಸಿದರೆ ಉತ್ತಮ ಆದಾಯವನ್ನು ನೀಡುವ ಯೋಜನೆಗಳಲ್ಲಿ (Retirement Plan) ಹೂಡಿಕೆ ಮಾಡುವುದು ಒಳ್ಳೆಯದು. ಐದು ನಿವೃತ್ತಿ ಯೋಜನೆಗಳ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

By

Retirement Plan
Koo

ಉದ್ಯೋಗ (job) ಆರಂಭಿಸುವಾಗಲೇ ನಿವೃತ್ತಿ ಯೋಜನೆಯನ್ನು (Retirement Plan) ರೂಪಿಸಬೇಕು. ಇಲ್ಲವಾದರೆ ವಯಸ್ಸು ಜಾರಿದ್ದು ಗೊತ್ತೇ ಆಗುವುದಿಲ್ಲ. ನಿವೃತ್ತಿ ಸಮೀಪಿಸಿದಾಗ ಕೈಯಲ್ಲಿ ಬಿಡಿಗಾಸೂ ಇಲ್ಲದೆ ಕಷ್ಟ ಪಡಬೇಕಾಗಬಹುದು. ಇಲ್ಲವಾದರೆ ಅವರಿವರ ಮುಂದೆ ಕೈಚಾಚಿಕೊಂಡು ನಿಲ್ಲುವಂತಹ ಸಂದರ್ಭ ಬರಬಹುದು.

ನಿವೃತ್ತಿಗಾಗಿ ಯೋಜಿಸುತ್ತಿದ್ದರೆ ಮತ್ತು ಪ್ರತಿ ತಿಂಗಳು ಪಿಂಚಣಿ (pension ) ಪಡೆಯಲು ಬಯಸಿದರೆ ಉತ್ತಮ ಆದಾಯವನ್ನು (regular income) ನೀಡುವ ಯೋಜನೆಗಳಲ್ಲಿ ಹೂಡಿಕೆ (investment) ಮಾಡುವುದು ಒಳ್ಳೆಯದು. ನಿಯಮಿತ ಆದಾಯದ ಮೂಲವನ್ನು ನಮ್ಮನು ಸುರಕ್ಷಿತಗೊಳಿಸುತ್ತದೆ ಮತ್ತು ಆರಾಮದಾಯಕ ವೃದ್ಧಾಪ್ಯವನ್ನು ಖಚಿತಪಡಿಸಿಕೊಳ್ಳಲು ಗಮನಾರ್ಹವಾದ ಒಟ್ಟು ಮೊತ್ತವನ್ನು ಸಂಗ್ರಹಿಸುತ್ತದೆ. ಒಂದು ದೊಡ್ಡ ಮೊತ್ತವು ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಆದರೆ ಮಾಸಿಕ ಆದಾಯವು ದೈನಂದಿನ ಖರ್ಚುಗಳನ್ನು ಒಳಗೊಂಡಿರುತ್ತದೆ.

ವಿಶ್ವಾಸಾರ್ಹ ಮಾಸಿಕ ಪಿಂಚಣಿಯನ್ನು ನೀಡುವ ಐದು ಯೋಜನೆಗಳು ಇಲ್ಲಿವೆ. ಇದರಲ್ಲಿ ಹೂಡಿಕೆ ಮಾಡಿದರೆ ನಿವೃತ್ತಿ ಬಳಿಕ ಯಾರನ್ನೂ ಅವಲಂಬಿಸಬೇಕಿಲ್ಲ.

1. ಅಟಲ್ ಪಿಂಚಣಿ ಯೋಜನೆ

ತೆರಿಗೆದಾರರಲ್ಲದಿದ್ದರೆ ಅಟಲ್ ಪಿಂಚಣಿ ಯೋಜನೆ ಮೂಲಕ ನಿಮ್ಮ ವೃದ್ಧಾಪ್ಯದಲ್ಲಿ ನಿಯಮಿತ ಆದಾಯಕ್ಕೆ ವ್ಯವಸ್ಥೆ ಮಾಡಬಹುದು. ಈ ಯೋಜನೆಯು 18ರಿಂದ 40 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಲಭ್ಯವಿರುತ್ತದೆ. ಭಾಗವಹಿಸುವವರು 60 ವರ್ಷವನ್ನು ತಲುಪುವವರೆಗೆ ಸಣ್ಣ ಮಾಸಿಕ ಕೊಡುಗೆಗಳನ್ನು ನೀಡಬೇಕು. ಅನಂತರ ಅವರು ತಮ್ಮ ಕೊಡುಗೆಗಳ ಆಧಾರದ ಮೇಲೆ 1,000 ರಿಂದ ರೂ 5,000 ರವರೆಗಿನ ಮಾಸಿಕ ಪಿಂಚಣಿಯನ್ನು ಪಡೆಯುತ್ತಾರೆ.

2. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ಮಾಸಿಕ ಪಿಂಚಣಿ ಪಡೆಯಲು ಮತ್ತೊಂದು ಕಾರ್ಯಸಾಧ್ಯವಾದ ಆಯ್ಕೆಯಾಗಿದೆ. 18 ರಿಂದ 70 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ನೋಂದಾಯಿಸಿಕೊಳ್ಳಬಹುದು. NPS 60 ವರ್ಷ ವಯಸ್ಸಿನವರೆಗೆ ಹೂಡಿಕೆಯ ಅಗತ್ಯವಿರುವ ಮಾರುಕಟ್ಟೆ-ಸಂಯೋಜಿತ ಸರ್ಕಾರಿ ಯೋಜನೆಯಾಗಿದೆ. ತುರ್ತು ಸಂದರ್ಭದಲ್ಲಿ ನಿಮ್ಮ ಕೊಡುಗೆಗಳ ಶೇ. 60ರಷ್ಟನ್ನು ಹಿಂಪಡೆಯಬಹುದು, ಶೇ. 40 ಪಿಂಚಣಿಗೆ ನಿಗದಿಪಡಿಸಲಾಗಿದೆ. ಇದು ನಿಮ್ಮ ಪಿಂಚಣಿ ಮೊತ್ತವನ್ನು ನಿರ್ಧರಿಸುತ್ತದೆ. ವರ್ಷಾಶನವು ದೊಡ್ಡದಾಗಿದ್ದರೆ ಪಿಂಚಣಿ ಮೊತ್ತವೂ ಹೆಚ್ಚಾಗುತ್ತದೆ.


3. ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆ (SWP)

ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆಯು ಹೂಡಿಕೆದಾರರಿಗೆ ಮ್ಯೂಚುಯಲ್ ಫಂಡ್ ಯೋಜನೆಯಿಂದ ನಿಗದಿತ ಮಾಸಿಕ ಮೊತ್ತವನ್ನು ಪಡೆಯಲು ಅನುಮತಿಸುತ್ತದೆ. ಇದರಿಂದ ಲಾಭ ಪಡೆಯಲು ನಿಮ್ಮ ಕೆಲಸದ ವರ್ಷಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಅಥವಾ ಇತರ ಯೋಜನೆಗಳ ಮೂಲಕ ನೀವು ಗಣನೀಯ ಪ್ರಮಾಣದ ಹಣವನ್ನು ಹೂಡಿಕೆ ಮಾಡಿರಬೇಕು. ನೀವು SWP ಗಾಗಿ ನಿಮ್ಮ ನಿವೃತ್ತಿ ನಿಧಿಯನ್ನು ಬಳಸಬಹುದು, ಅಲ್ಲಿ ನೀವು ಮ್ಯೂಚುಯಲ್ ಫಂಡ್ ಘಟಕಗಳನ್ನು ಮಾರಾಟ ಮಾಡುವ ಮೂಲಕ ಮಾಸಿಕ ಪಾವತಿಗಳನ್ನು ಸ್ವೀಕರಿಸುತ್ತೀರಿ. ನಿಧಿಯು ಖಾಲಿಯಾದ ಅನಂತರ SWP ನಿಲ್ಲುತ್ತದೆ. ನೀವು ವಾಪಸಾತಿ ಆವರ್ತನವನ್ನು ನಿರ್ದಿಷ್ಟಪಡಿಸಬೇಕು ಮತ್ತು SWP ಅನ್ನು ಸಕ್ರಿಯಗೊಳಿಸಲು ಅಗತ್ಯ ವಿವರಗಳನ್ನು ಒದಗಿಸಬೇಕು.

ಇದನ್ನೂ ಓದಿ: Money Guide: ಎನ್‌ಪಿಎಸ್‌ಗೆ 15 ವರ್ಷ; ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ

4. ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO)

ಸಂಬಳ ಪಡೆಯುವ ಉದ್ಯೋಗಿಯಾಗಿದ್ದರೆ ಮತ್ತು ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಗೆ (ಇಪಿಎಫ್‌ಒ) ಕೊಡುಗೆ ನೀಡುತ್ತಿದ್ದರೆ ನೀವು ಉದ್ಯೋಗಿ ಪಿಂಚಣಿ ಯೋಜನೆ (ಇಪಿಎಸ್) ಬಗ್ಗೆ ತಿಳಿದಿರಬಹುದು. ಈ ಯೋಜನೆಯು ಖಾಸಗಿ ವಲಯದ ಉದ್ಯೋಗಿಗಳಿಗೆ ನಿವೃತ್ತಿಯ ಅನಂತರ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. EPFO ನಿಂದ ಪಿಂಚಣಿ ಪಡೆಯಲು ಅರ್ಹರಾಗಲು, ನೀವು ಕನಿಷ್ಠ 10 ವರ್ಷಗಳ ಕಾಲ EPS ಗೆ ಕೊಡುಗೆ ನೀಡಿರಬೇಕು. ಪಿಂಚಣಿ ಮೊತ್ತವು ನಿಮ್ಮ ಕೊಡುಗೆಗಳನ್ನು ಅವಲಂಬಿಸಿರುತ್ತದೆ ಮತ್ತು ನಿವೃತ್ತಿಯ ನಂತರ ಲಭ್ಯವಿರುತ್ತದೆ.

5. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS)

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು ಮಾಸಿಕ ಆದಾಯವನ್ನು ಗಳಿಸಲು ಸರ್ಕಾರ-ಖಾತ್ರಿಪಡಿಸಿದ ಠೇವಣಿ ಆಯ್ಕೆಯನ್ನು ನೀಡುತ್ತದೆ. ನೀವು ಏಕ ಅಥವಾ ಜಂಟಿ ಖಾತೆಗಳನ್ನು ತೆರೆಯಬಹುದು, ಏಕ ಖಾತೆಗಳಿಗೆ ಗರಿಷ್ಠ 9 ಲಕ್ಷ ರೂ. ಮತ್ತು ಜಂಟಿ ಖಾತೆಗಳಿಗೆ 15 ಲಕ್ಷ ರೂ. ಠೇವಣಿ ಅವಧಿಯು ಐದು ವರ್ಷಗಳು ಮತ್ತು ನಿಮ್ಮ ಅಸಲು ಮೊತ್ತದ ಸುರಕ್ಷತೆಯನ್ನು ಖಾತರಿಪಡಿಸುವ ಮೂಲಕ ನೀವು ಬಡ್ಡಿಯನ್ನು ಗಳಿಸುತ್ತೀರಿ. ಪ್ರಸ್ತುತ ಶೇ.7.4 ಬಡ್ಡಿದರದಲ್ಲಿ ಜಂಟಿ ಖಾತೆಯು ತಿಂಗಳಿಗೆ 9,250 ರೂ. ವರೆಗೆ ಗಳಿಸಬಹುದು. ಐದು ವರ್ಷಗಳ ಅನಂತರ ನೀವು ಹೊಸ ಖಾತೆಯನ್ನು ತೆರೆಯುವ ಮೂಲಕ ಯೋಜನೆಯನ್ನು ನವೀಕರಿಸಬಹುದು.

Continue Reading

ಮನಿ ಗೈಡ್

Bal Jeevan Bima: ಮಕ್ಕಳ ಹೆಸರಲ್ಲಿ ನಿತ್ಯ 6 ರೂ.ನಂತೆ ಕಟ್ಟಿದರೆ 1 ಲಕ್ಷ ರೂ. ವಿಮೆಯ ರಕ್ಷಣೆ

ಬಾಲ ಜೀವನ್ ವಿಮಾ ಯೋಜನೆಯು ಭಾರತೀಯ ಅಂಚೆ ಕಚೇರಿಯು ಮಕ್ಕಳಿಗಾಗಿ ನೀಡುವ ಜೀವ ವಿಮಾ (Bal Jeevan Bima) ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ, ಪೋಷಕರು ಪೋಸ್ಟ್ ಆಫೀಸ್ ಖಾತೆಯಲ್ಲಿ ದಿನಕ್ಕೆ 6 ರೂ. ನಷ್ಟು ಕಡಿಮೆ ಹಣವನ್ನು ಠೇವಣಿ ಮಾಡಬಹುದು

VISTARANEWS.COM


on

By

Bal Jeevan Bima
Koo

ಮಗುವಿನ ಜನನದ (child birth) ಅನಂತರ ಅನೇಕ ಪೋಷಕರು ತಮ್ಮ ಮಗುವಿನ ಭವಿಷ್ಯಕ್ಕಾಗಿ ವಿವಿಧ ಯೋಜನೆಯಲ್ಲಿ (insurance scheme) ಹೂಡಿಕೆಯನ್ನು ಮಾಡಲು ಪ್ರಾರಂಭಿಸುತ್ತಾರೆ. ಇದಕ್ಕಾಗಿ ಹೂಡಿಕೆಯ (Bal Jeevan Bima) ವಿವಿಧ ಮಾರ್ಗಗಳನ್ನು ಅನ್ವೇಷಿಸುತ್ತಾರೆ. ಹೆಣ್ಣು ಮಕ್ಕಳಿಗಾಗಿ (girl child) ಹಲವು ಉಳಿತಾಯ ಯೋಜನೆಗಳಿವೆ. ಅಂತೆಯೇ ಎಲ್ಲ ಮಕ್ಕಳಿಗೂ ಪ್ರಯೋಜನವಾಗುವ ಕೆಲವು ಯೋಜನೆಗಳಿವೆ. ಅದರಲ್ಲಿ ಅಂಚೆ ಕಚೇರಿಯಲ್ಲಿ ಸಿಗುವ ಬಾಲ ಜೀವನ್ ವಿಮಾ ಯೋಜನೆಯೂ ಒಂದು. ಇದು ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಜೀವ ವಿಮಾ ಯೋಜನೆಯಾಗಿದೆ.

ಬಾಲ ಜೀವನ್ ವಿಮಾ ಯೋಜನೆಯು ಭಾರತೀಯ ಅಂಚೆ ಕಚೇರಿಯು ಮಕ್ಕಳಿಗಾಗಿ ನೀಡುವ ಜೀವ ವಿಮಾ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ, ಪೋಷಕರು ಪೋಸ್ಟ್ ಆಫೀಸ್ ಖಾತೆಯಲ್ಲಿ ದಿನಕ್ಕೆ 6 ರೂ. ನಷ್ಟು ಕಡಿಮೆ ಹಣವನ್ನು ಠೇವಣಿ ಮಾಡಬಹುದು. ಮಗುವಿನ ಅಕಾಲಿಕ ಅಥವಾ ದುರದೃಷ್ಟಕರ ಮರಣದ ಸಂದರ್ಭದಲ್ಲಿ ನಾಮನಿರ್ದೇಶಿತ ಫಲಾನುಭವಿಗೆ ಒಟ್ಟು 1 ಲಕ್ಷ ರೂ. ಪರಿಹಾರ ವಿಮೆ ದೊರೆಯುವುದು. ಶಿಕ್ಷಣ ಶುಲ್ಕ ಕಟ್ಟುವ ಸಂದರ್ಭದಲ್ಲೂ ಇದು ನೆರವಾಗುತ್ತದೆ. ಪಾಲಿಸಿ ಅವಧಿ ಮುಗಿದ ಬಳಿಕವೂ 1 ಲಕ್ಷ ರೂ. ಸಿಗುತ್ತದೆ. ಪೋಷಕರು ಗರಿಷ್ಠ ಇಬ್ಬರು ಮಕ್ಕಳಿಗೆ ಈ ವಿಮೆ ಮಾಡಿಸಬಹುದು.

ಬಾಲ ಜೀವನ್ ವಿಮಾ ಯೋಜನೆಯು 5ರಿಂದ 20 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತದೆ. 20 ವರ್ಷ ವಯಸ್ಸಿನವರೆಗೆ ಇದು ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಈ ಯೋಜನೆಯ ಗಮನಾರ್ಹ ವೈಶಿಷ್ಟ್ಯವೆಂದರೆ ಕೈಗೆಟುಕುವಿಕೆ ದರದಲ್ಲಿ ಇದನ್ನು ಪ್ರಾರಂಭಿಸಬಹುದು. ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕವಾಗಿ ಪ್ರೀಮಿಯಂ ಕಟ್ಟಬಹುದು.

ಏನು ಲಾಭ?

ಪ್ರತಿನಿತ್ಯ 6 ರೂ. ನಂತೆ ಹೂಡಿಕೆ ಮಾಡಿ ಇದನ್ನು ಪ್ರಾರಂಭಿಸಬಹುದು. 20 ವರ್ಷಕ್ಕಿಂತ ಮೊದಲು ವಿಮೆ ಮಾಡಲಾದ ಮಗುವಿನ ಯಾವುದೇ ಕಾರಣದಿಂದ ಮೃತಪಟ್ಟರೆ 1 ಲಕ್ಷ ರೂ. ವರೆಗೆ ವಿಮಾ ರಕ್ಷಣೆಯನ್ನು ಭರವಸೆ ನೀಡುತ್ತದೆ. ಮಗುವು 20 ವರ್ಷಗಳ ವಯಸ್ಸಿನ ಮಿತಿಯನ್ನು ದಾಟಿದ ಅನಂತರವೂ ಈ ಪ್ರಯೋಜನ ಪಡೆಯಬಹುದು. ಅದರ ಅನಂತರ ವಿಮೆ ಪಾವತಿಗೆ ಯಾವುದೇ ನಿಬಂಧನೆ ಇಲ್ಲ.

ಇದು ಮಗುವಿನ ಶಿಕ್ಷಣ ಅಥವಾ ಇತರ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಭರಿಸಲು ಸಹಾಯ ಮಾಡುತ್ತದೆ.

ಮಕ್ಕಳಲ್ಲಿ ಉಳಿತಾಯ ಮತ್ತು ಆರ್ಥಿಕ ಶಿಸ್ತನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ. ಖಾತೆಗೆ ನಿಯಮಿತ ಠೇವಣಿಗಳನ್ನು ಮಾಡುವ ಮೂಲಕ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಉಳಿತಾಯ ಮತ್ತು ಆರ್ಥಿಕ ಯೋಜನೆಗಳ ಮಹತ್ವವನ್ನು ಕಲಿಯುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ?

ಬಾಲ ಜೀವನ್ ವಿಮಾ ಯೋಜನೆಗೆ ಅರ್ಜಿ ಸಲ್ಲಿಸಲು ಪೋಷಕರು ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ. ಫಾರ್ಮ್‌ ನಲ್ಲಿ ಹೆಸರು, ವಯಸ್ಸು ಮತ್ತು ವಿಳಾಸದಂತಹ ಮಗುವಿನ ಬಗ್ಗೆ ವಿವರಗಳು ಮತ್ತು ನಾಮನಿರ್ದೇಶಿತ ಫಲಾನುಭವಿಯ ವಿವರಗಳನ್ನು ಸಲ್ಲಿಸಬೇಕು. ಅರ್ಜಿದಾರರು ಗುರುತಿನ ಮತ್ತು ವಿಳಾಸದ ಪುರಾವೆಯನ್ನು ಸಹ ಒದಗಿಸಬೇಕಾಗುತ್ತದೆ.


ನಿಯಮ ಏನಿದೆ?

ಈ ಯೋಜನೆಯು ಪಾಲಿಸಿದಾರರ ಮಕ್ಕಳಿಗೆ ಜೀವ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಪಾಲಿಸಿದಾರರ (ಪೋಷಕರ) ಗರಿಷ್ಠ ಇಬ್ಬರು 5 ರಿಂದ 20 ವರ್ಷದೊಳಗಿನ ಮಕ್ಕಳು ಅರ್ಹರಾಗಿರುತ್ತಾರೆ.
ಗರಿಷ್ಠ ವಿಮಾ ಮೊತ್ತ 1 ಲಕ್ಷ ರೂ. ಅಥವಾ ಪೋಷಕರ ವಿಮಾ ಮೊತ್ತಕ್ಕೆ ಸಮ. ಯಾವುದು ಕಡಿಮೆಯೋ ಅದು. ಪಾಲಿಸಿದಾರರ (ಪೋಷಕರು) 45 ವರ್ಷಕ್ಕಿಂತ ಮೇಲ್ಪಟ್ಟಿರಬಾರದು.
ಪಾಲಿಸಿದಾರರ (ಪೋಷಕರ) ಮರಣದ ಬಳಿಕ ಮಕ್ಕಳ ಪಾಲಿಸಿಗೆ ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಪೂರ್ಣ ವಿಮಾ ಮೊತ್ತ ಮತ್ತು ಸಂಚಿತ ಬೋನಸ್ ಅನ್ನು ಅವಧಿಯ ಪೂರ್ಣಗೊಂಡ ಅನಂತರ ಪಾವತಿಸಲಾಗುತ್ತದೆ
ಮಕ್ಕಳ ಪಾಲಿಸಿಯ ಪಾವತಿಗೆ ಪಾಲಿಸಿದಾರರು (ಪೋಷಕರು) ಜವಾಬ್ದಾರರಾಗಿರುತ್ತಾರೆ. ಯಾವುದೇ ಸಾಲವನ್ನು ಸ್ವೀಕರಿಸಲಾಗುವುದಿಲ್ಲ
5 ವರ್ಷಗಳ ಕಾಲ ನಿರಂತರವಾಗಿ ಪ್ರೀಮಿಯಂ ಪಾವತಿಸಿದರೆ ಅದನ್ನು ಪಾವತಿಸುವ ಸೌಲಭ್ಯವಿದೆ. ಪಾಲಿಸಿಯನ್ನು ಮಧ್ಯೆ ನಿಲ್ಲಿಸುವ ಸೌಲಭ್ಯವಿಲ್ಲ. ಅರ್ಜಿ ಸಲ್ಲಿಸಲು ಮಗುವಿನ ವೈದ್ಯಕೀಯ ಪರೀಕ್ಷೆ ಅಗತ್ಯವಿಲ್ಲ. ಆದರೂ ಮಗು ಆರೋಗ್ಯವಾಗಿರಬೇಕು. ಪ್ರಸ್ತಾಪವನ್ನು ಸ್ವೀಕರಿಸಿದ ದಿನದಿಂದ ರಿಸ್ಕ್ ಕವರ್ ಪ್ರಾರಂಭವಾಗುತ್ತದೆ. ಬೋನಸ್ ದರವು ಪ್ರತಿ ವರ್ಷಕ್ಕೆ 1000 ರೂ. ಗೆ 48 ರೂ. ಆಗಿರುತ್ತದೆ.

ಇದನ್ನೂ ಓದಿ: Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ವಿವಿಧ ಬ್ಯಾಂಕ್‌ಗಳ ಬಡ್ಡಿದರ ಪರಿಶೀಲಿಸಿ

ಯಾರು ಅರ್ಜಿ ಸಲ್ಲಿಸಬಹುದು?

ಬಾಲ ಜೀವನ್ ವಿಮಾ ಯೋಜನೆಯು 5 ರಿಂದ 20 ವರ್ಷದೊಳಗಿನ ಮಕ್ಕಳಿಗಾಗಿ. ಹೀಗಾಗಿ ಅರ್ಜಿ ನೀಡುವ ಸಮಯದಲ್ಲಿ ಮಗುವಿನ ವಯಸ್ಸನ್ನು ಪರಿಗಣಿಸಲಾಗುತ್ತದೆ ಮತ್ತು ಮಗುವಿಗೆ 20 ವರ್ಷ ತುಂಬುವವರೆಗೆ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ.

ಪೋಷಕರು ತಮ್ಮ 10 ವರ್ಷದ ಮಗುವಿಗೆ ಬಾಲ ಜೀವನ್ ವಿಮಾ ಯೋಜನೆಗೆ ಸೇರಿಸಲು ಬಯಸಿದರೆ ಪೋಷಕರು ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದು. ಅರ್ಜಿ ನಮೂನೆಯನ್ನು ಭರ್ತಿ ಮಾಡಿ ದಿನಕ್ಕೆ 6 ರೂ.ಗಳ ಠೇವಣಿಗಳನ್ನು ಮಾಡಲು ಪ್ರಾರಂಭಿಸಬಹುದು.

Continue Reading

ಮನಿ-ಗೈಡ್

Money Guide: ಎನ್‌ಪಿಎಸ್‌ಗೆ 15 ವರ್ಷ; ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ

Money Guide: ದೇಶದ ಜನರಲ್ಲಿನ ಉಳಿತಾಯ ಪ್ರವೃತ್ತಿಯನ್ನು ಉತ್ತೇಜಿಸಲು ಸರ್ಕಾರ ಜಾರಿಗೆ ತಂದ ಯೋಜನೆಗಳಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ ಕೂಡ ಒಂದು. 18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಜತೆಗೆ ಇದರಲ್ಲಿ ಹೂಡಿಕೆ ಮಾಡಿದರೆ ಹಲವು ರೀತಿಯ ತೆರಿಗೆ ಪ್ರಯೋಜನಗಳೂ ಲಭ್ಯ. ಇಂತಹ ಅತ್ಯುತ್ತಮ ಯೋಜನೆ ಜಾರಿಗೆ ಬಂದು ಇಂದಿಗೆ 15 ವರ್ಷ ಪೂರ್ಣಗೊಂಡಿದೆ. ಈ ಯೋಜನೆ ಕುರಿತಾದ ಕೆಲವು ಆಸಕ್ತಿದಾಯಕ ಸಂಗತಿಗಳ ವಿವರ ಇಲ್ಲಿದೆ

VISTARANEWS.COM


on

Money Guide
Koo

ಬೆಂಗಳೂರು: ದೇಶದ ಜನರಲ್ಲಿನ ಉಳಿತಾಯ ಪ್ರವೃತ್ತಿಯನ್ನು ಉತ್ತೇಜಿಸಲು ಸರ್ಕಾರ ಜಾರಿಗೆ ತಂದ ಯೋಜನೆಗಳಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಕೂಡ ಒಂದು. 18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಜತೆಗೆ ಇದರಲ್ಲಿ ಹೂಡಿಕೆ ಮಾಡಿದರೆ ಹಲವು ರೀತಿಯ ತೆರಿಗೆ ಪ್ರಯೋಜನಗಳೂ ಲಭ್ಯ. ಇಂತಹ ಅತ್ಯುತ್ತಮ ಯೋಜನೆ ಜಾರಿಗೆ ಬಂದು ಇಂದಿಗೆ 15 ವರ್ಷ ಪೂರ್ಣಗೊಂಡಿದೆ. 2009ರ ಮೇ 1ರಂದು ಈ ಯೋಜನೆಯನ್ನು ದೇಶದಲ್ಲಿ ಜಾರಿಗೊಳಿಸಲಾಯಿತು. ಈ ಯೋಜನೆ ಕುರಿತಾದ ಕೆಲವು ಆಸಕ್ತಿದಾಯಕ ಸಂಗತಿಗಳ ವಿವರ ಇಲ್ಲಿದೆ (Money Guide).

ಭಾರತ ಸರ್ಕಾರ 2004ರ ಜನವರಿ 1ರಂದು ಎನ್‌ಪಿಎಸ್‌ ಅನ್ನು ಪರಿಚಯಿಸಿತು ಮತ್ತು ಐದು ವರ್ಷಗಳ ನಂತರ (2009) ಅದನ್ನು ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಯಿತು. ಈ ಯೋಜನೆಯು ಭಾರತದ ನಾಗರಿಕರಿಗೆ ವೃದ್ಧಾಪ್ಯದ ಭದ್ರತೆಯಾಗಿ ಪಿಂಚಣಿ ಮತ್ತು ಹೂಡಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿಯಂತ್ರಿಸುತ್ತದೆ.

ಯಾರೆಲ್ಲ ಅರ್ಹರು?

ಭಾರತೀಯ ಮತ್ತು ಆನಿವಾಸಿ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೀಡಿಕೆ ಮಾಡಬಹುದಾಗಿದೆ. 18ರಿಂದ 70 ವರ್ಷದವರು ಈ ಯೋಜನೆಗೆ ಅರ್ಹರು. ವೃದ್ಧಾಪ್ಯ ಆದಾಯವನ್ನು ಒದಗಿಸುವುದು, ದೀರ್ಘಾವಧಿಯಲ್ಲಿ ಮಾರುಕಟ್ಟೆ ಆಧಾರಿತ ಆದಾಯ ನೀಡುವುದು ಮತ್ತು ಎಲ್ಲ ನಾಗರಿಕರಿಗೆ ವೃದ್ಧಾಪ್ಯ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವುದು ಕೂಡ ಈ ಯೋಜನೆಯ ಉದ್ದೇಶ.

ಎನ್‌ಆರ್‌ಐ ಕೂಡ ಹೂಡಿಕೆ ಮಾಡಬಹುದೆ?

ವಿಶೇಷ ಎಂದರೆ ಆನಿವಾಸಿ ಭಾರತೀಯರು ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅದಾಗ್ಯೂ ಆರ್‌ಬಿಐ ಮತ್ತು ಫೆಮಾ ಸೂಚಿಸುವ ಷರತ್ತುಗಳು ಅನ್ವಯವಾಗುತ್ತವೆ. ಇನ್ನು ಒಸಿಐ (ಓವರ್‌ಸೀಸ್‌ ಸಿಟಿಜನ್ಸ್ ಆಫ್ ಇಂಡಿಯಾ) ಮತ್ತು ಪಿಐಒ (ಪರ್ಸನ್ ಆಫ್ ಇಂಡಿಯನ್ ಒರಿಜಿನ್) ಕಾರ್ಡ್ ಹೊಂದಿರುವವರು ಈ ಯೋಜನೆಗೆ ಅರ್ಹರಲ್ಲ.

ಎನ್‌ಪಿಎಸ್‌ ಖಾತೆ ತೆರೆಯುವುದು ಹೇಗೆ?

ಆಫ್‌ಲೈನ್‌

  • ನಿಮ್ಮ ಮನೆ ಹತ್ತಿರದ ಪಿಒಪಿ (PoP) ಅಥವಾ ಪೋಸ್ಟ್‌ ಆಫೀಸ್‌ಗೆ ತೆರಳಿ.
  • ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌ ಒದಗಿಸಿ.
  • ಟೈರ್‌ 1 ಖಾತೆಗೆ ಕನಿಷ್ಠ 500 ರೂ. ಹೂಡಿಕೆ ಮಾಡಿ.
  • ಅಪ್ಲಿಕೇಷನ್‌ ಫಾರಂ ಸಲ್ಲಿಸಿ.

ಆನ್‌ಲೈನ್‌

  • ಇಲ್ಲಿ ಕ್ಲಿಕ್‌ ಮಾಡಿ
  • ಹೆಸರು ನೋಂದಾಯಿಸಿ.
  • ಮೊಬೈಲ್‌ ನಂಬರ್‌, ಪ್ಯಾನ್‌ ಕಾರ್ಡ್‌ ನಂಬರ್‌ ಮತ್ತು ಇಮೇಲ್‌ ಐಡಿ ನಮೂದಿಸಿ.
  • ಮೊಬೈಲ್‌ಗೆ ಬಂದ ಒಟಿಪಿ ನಮೂದಿಸಿ.
  • ಅಗತ್ಯ ವಿವರಗಳನ್ನು ಭರ್ತಿ ಮಾಡಿ. ಈಗ ನಿಮಗೆ PRAN (Permanent Retirement Account Number) ಸಂಖ್ಯೆ ದೊರೆಯುತ್ತದೆ. ಇದನ್ನು ಬಳಸಿ ಲಾಗಿನ್‌ ಆಗಬಹುದು.

ಯಾವೆಲ್ಲ ದಾಖಲೆ ಅಗತ್ಯ?

  • ಇತ್ತೀಚಿನ ಭಾವಚಿತ್ರ
  • ಪ್ಯಾನ್‌ ಕಾರ್ಡ್‌
  • ವಿಳಾಸದ ಪುರಾವೆ
  • ಬ್ಯಾಂಕ್‌ ಅಕೌಂಟ್‌ ವಿವರ

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ಸಿಗಲಿದೆ. ಈ ಯೋಜನೆಯಲ್ಲಿ ಗರಿಷ್ಠ 1.5 ಲಕ್ಷ ರೂಪಾಯಿವರೆಗಿನ ಹೂಡಿಕೆಗೆ ತೆರಿಗೆ ವಿನಾಯಿತಿ ಪಡೆಯಬಹುದು.

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Continue Reading

ಮನಿ ಗೈಡ್

EPF Withdraw Rule: ಪಿಎಫ್‌ ಮುಂಗಡ ಹಣ ಪಡೆಯುವುದು ಈಗ ಮತ್ತಷ್ಟು ಸುಲಭ; ಹೊಸ ಬದಲಾವಣೆಯ ಸಂಪೂರ್ಣ ಮಾಹಿತಿ

ಉದ್ಯೋಗಿಗಳ ಭವಿಷ್ಯ ನಿಧಿ ಹೊಂದಿರುವ ಸದಸ್ಯರಿಗೆ ಇಲ್ಲಿದೆ ಗುಡ್ ನ್ಯೂಸ್. ಶಿಕ್ಷಣ, ಮದುವೆ ಮತ್ತು ವಸತಿಗಾಗಿ ಪಿಎಫ್ ನಿಂದ ಮುಂಗಡ ಹಣವನ್ನು ಪಡೆಯುವುದು ಈಗ ಸುಲಭವಾಗಿದೆ. ಈ ಬಗ್ಗೆ ನಿಯಮಗಳು (EPF Withdraw Rule) ಏನು ಹೇಳಿವೆ ಗೊತ್ತೇ? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

EPF Withdrawal Rule
Koo

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPF Withdraw Rule) ಶಿಕ್ಷಣ, ಮದುವೆ ಮತ್ತು ವಸತಿಗೆ ಸಂಬಂಧಿಸಿ ಮುಂಗಡ ಕ್ಲೈಮ್‌ಗಳಿಗಾಗಿ (advance claims) ಸ್ವಯಂ-ಮೋಡ್ ಸೆಟಲ್‌ಮೆಂಟ್ (auto-mode settlement ) ಅನ್ನು ಪರಿಚಯಿಸುವುದಾಗಿ ಘೋಷಿಸಿದೆ. ಈ ವ್ಯವಸ್ಥೆಯಲ್ಲಿ ಯಾರದೇ ಹಸ್ತಕ್ಷೇಪವಿಲ್ಲದೆ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಬಹುದು ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಹೇಳಿಕೆಯ ಪ್ರಕಾರ, ಅನಿರುದ್ಧ್ ಪ್ರಸಾದ್ ಎಂಬುವರು 2024ರ ಮೇ 9ರಂದು ಪ್ಯಾರಾ 68J ಅಡಿಯಲ್ಲಿ ಅನಾರೋಗ್ಯಕ್ಕಾಗಿ ಮುಂಗಡವಾಗಿ ಅರ್ಜಿ ಸಲ್ಲಿಸಿದ್ದರು. ಅವರ ಮುಂಗಡ ಕ್ಲೈಮ್ ಅನ್ನು 2024ರ ಮೇ 11 ರಂದು 92,143 ರೂ. ಅನ್ನು ಮೂರು ದಿನಗಳ ಒಳಗೆ ಇತ್ಯರ್ಥಪಡಿಸಲಾಗಿದೆ. ಇಂತಹ ಹಲವು ಮಂದಿ ಇಪಿಎಫ್‌ಒನಲ್ಲಿ ಮುಂಗಡ ಕ್ಲೈಮ್ ಪಾವತಿಯ ಪ್ರಯೋಜನವನ್ನು ಪಡೆದಿದ್ದಾರೆ.

ಇಪಿಎಫ್‌ಒ ಆಟೋ ಮೋಡ್ ಸೆಟಲ್ಮೆಂಟ್

ಅನಾರೋಗ್ಯದ ಕಾರಣಕ್ಕಾಗಿ ಮುಂಗಡ ಕ್ಲೈಮ್ ಮಾಡಲು 2020ರ ಏಪ್ರಿಲ್ ನಲ್ಲಿ ಕ್ಲೈಮ್ ಸೆಟ್ಲ್ ಮೆಂಟ್ ಸ್ವಯಂ ಮೋಡ್ ಅನ್ನು ಪರಿಚಯಿಸಲಾಯಿತು. ಈಗ ಈ ಮಿತಿಯನ್ನು 1 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಸುಮಾರು 2.25 ಕೋಟಿ ಸದಸ್ಯರು ಈ ಸೌಲಭ್ಯದ ಲಾಭವನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

2023- 24ರ ಹಣಕಾಸು ವರ್ಷದಲ್ಲಿ ಇಪಿಎಫ್‌ಒ ಸುಮಾರು 4.45 ಕೋಟಿ ಕ್ಲೈಮ್‌ಗಳನ್ನು ಇತ್ಯರ್ಥಪಡಿಸಿದೆ. ಅದರಲ್ಲಿ ಶೇ. 60ಕ್ಕಿಂತ ಹೆಚ್ಚು ಮಂದಿ ಒಟ್ಟು 2.84 ಕೋಟಿ ಕ್ಲೈಮ್‌ಗಳು ಮುಂಗಡ ಕ್ಲೈಮ್‌ಗಳಾಗಿವೆ. ವರ್ಷದಲ್ಲಿ ಇತ್ಯರ್ಥವಾದ ಒಟ್ಟು ಮುಂಗಡ ಕ್ಲೇಮ್‌ಗಳಲ್ಲಿ ಸುಮಾರು 89.52 ಲಕ್ಷ ಕ್ಲೇಮ್‌ಗಳನ್ನು ಇತ್ಯರ್ಥಗೊಳಿಸಲಾಗಿದೆ.

ಪಿಎಫ್ ಹಿಂಪಡೆಯುವುದು ಹೇಗೆ?

ಇಪಿಎಫ್ ಸದಸ್ಯರು ನಿಯಮ 68J ಅಡಿಯಲ್ಲಿ ವೈದ್ಯಕೀಯ ಕಾಯಿಲೆಗಳಿಗೆ ಇಪಿಎಫ್ ಹಿಂತೆಗೆದುಕೊಳ್ಳುವಿಕೆಗೆ ಅನ್ವಯಿಸಲು ನಿಯಮಗಳನ್ನು ತಿಳಿದಿರಬೇಕು, ನಿಯಮ 68K ಅಡಿಯಲ್ಲಿ ಮದುವೆ ಅಥವಾ ಉನ್ನತ ಶಿಕ್ಷಣ ಮತ್ತು ನಿಯಮ 68B ಅಡಿಯಲ್ಲಿ ವಸತಿ ಸೌಲಭ್ಯಕ್ಕಾಗಿ ಮುಂಗಡವನ್ನು ಪಡೆಯಬಹುದು.

ನಿಯಮ 68 ಜೆ

ಇಪಿಎಫ್ ಸದಸ್ಯರು ಉದ್ಯೋಗದಾತ ಅಥವಾ ವೈದ್ಯರಿಂದ ಸಹಿ ಮಾಡಿದ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ವೈದ್ಯಕೀಯ ಕ್ಲೈಮ್‌ಗಾಗಿ, ಇಪಿಎಫ್ ಯೋಜನೆಗೆ ಎಷ್ಟು ವರ್ಷಗಳವರೆಗೆ ಅನ್ವಯಿಸಲಾಗಿದೆ ಎಂಬ ನಿಯಮವಿಲ್ಲ.

ಇದನ್ನೂ ಓದಿ: Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ವಿವಿಧ ಬ್ಯಾಂಕ್‌ಗಳ ಬಡ್ಡಿದರ ಪರಿಶೀಲಿಸಿ

ನಿಯಮ 68K

ಮದುವೆ ಅಥವಾ ಉನ್ನತ ಶಿಕ್ಷಣದ ಉದ್ದೇಶಗಳಿಗಾಗಿ ಪಿಎಫ್ ಹಣವನ್ನು ಹಿಂಪಡೆಯಲು ಇಪಿಎಫ್ ಸದಸ್ಯರು ಇಪಿಎಫ್‌ಒನೊಂದಿಗೆ 7 ವರ್ಷಗಳನ್ನು ಪೂರ್ಣಗೊಳಿಸಬೇಕು. ಇಪಿಎಫ್ ಸದಸ್ಯರು ಅದನ್ನು ಆನ್‌ಲೈನ್ ಸ್ವರೂಪದಲ್ಲಿ ಘೋಷಿಸಬೇಕಾಗುತ್ತದೆ. ಆದ್ದರಿಂದ ಅವರು ತಮ್ಮ ಷೇರಿನ ಗರಿಷ್ಠ ಶೇ. 50ರಷ್ಟನ್ನು ಬಡ್ಡಿಯೊಂದಿಗೆ ಹಿಂತೆಗೆದುಕೊಳ್ಳಬಹುದು.

ನಿಯಮ 68B

ಫ್ಲಾಟ್/ಮನೆಯನ್ನು ಖರೀದಿಸಲು ಅಥವಾ ನಿರ್ಮಿಸಲು, ಇಪಿಎಫ್ ಸದಸ್ಯರು ಇಪಿಎಫ್‌ಒನೊಂದಿಗೆ ಐದು ವರ್ಷಗಳನ್ನು ಪೂರ್ಣಗೊಳಿಸಬೇಕು. ಇಪಿಎಫ್‌ಒ ಮನೆಯ ದುರಸ್ತಿ ಮತ್ತು ನವೀಕರಣಕ್ಕಾಗಿ ಮುಂಗಡ ಹಿಂತೆಗೆದುಕೊಳ್ಳುವಿಕೆಯನ್ನು ಸಹ ಅನುಮತಿಸುತ್ತದೆ. ಇದನ್ನು ಎರಡು ಬಾರಿ ಮಾಡಬಹುದು. ಹಿಂಪಡೆಯಬಹುದಾದ ಮೊತ್ತವು ಉದ್ದೇಶವನ್ನು ಅವಲಂಬಿಸಿರುತ್ತದೆ. ಶೇ.90ರವರೆಗೂ ಹಣ ಹಿಂಪಡೆಯಲು ಸಾಧ್ಯ.

Continue Reading
Advertisement
drowned 4 death in kolhapur
ಕ್ರೈಂ23 mins ago

Drowned: ಬಟ್ಟೆ ತೊಳೆಯಲು ಹೋಗಿ ನಾಲ್ವರು ಜಲ ಸಮಾಧಿ

Virat kohli
ಪ್ರಮುಖ ಸುದ್ದಿ29 mins ago

Virat kohli : ಆರ್​ಸಿಬಿ ಆಟಗಾರರಿಗೆ ಬ್ಯಾಟಿಂಗ್ ಅಭ್ಯಾಸ ನಡೆಸಲು ನೆರವಾದ ಕೊಹ್ಲಿ; ಇಲ್ಲಿದೆ ವಿಡಿಯೊ

Crime News
ಕ್ರೈಂ39 mins ago

Crime News: ಪತ್ನಿಯನ್ನು ಕೊಂದು ಶವದ ಫೋಟೊ ಸಂಬಂಧಿಕರಿಗೆ ಕಳುಹಿಸಿ ನೇಣಿಗೆ ಶರಣಾದ ಪತಿ; ಅನಾಥವಾಯ್ತು ಹೆಣ್ಣು ಮಗು

RCB vs CSK
ಕ್ರೀಡೆ44 mins ago

RCB vs CSK: ವಾಹನ ಸವಾರರೇ ಗಮನಿಸಿ, ಇಂದು ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ

sarjapura boy murder case
ಕ್ರೈಂ1 hour ago

Murder Case: ಬಾಲಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್‌, ಮೊಬೈಲ್‌ ಗೀಳಿಗಾಗಿ ಅಣ್ಣನೇ ಕೊಂದ

Skin Care Tips
ಆರೋಗ್ಯ2 hours ago

Skin Care Tips: ಬಿಸಿಲಿನಿಂದ ಚರ್ಮ ಕಪ್ಪಾಗಿದೆಯಾ? ಇಲ್ಲಿದೆ ಸರಳ ಮನೆಮದ್ದು

karnataka Weather Forecast
ಮಳೆ2 hours ago

Karnataka Weather : ಈ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ

Food Tips Kannada
ಆರೋಗ್ಯ3 hours ago

Food Tips Kannada: ಶಕ್ತಿವರ್ಧಕಗಳಲ್ಲ, ನಿಮ್ಮ ಶಕ್ತಿಯನ್ನೇ ಬಸಿದು ತೆಗೆಯುವ ಆಹಾರಗಳಿವು!

World Aids Vaccine Day
ದೇಶ4 hours ago

World Aids Vaccine Day: ಇಂದು ವಿಶ್ವ ಏಡ್ಸ್ ಲಸಿಕೆ ದಿನ; ಈ ದಿನದ ಹಿನ್ನೆಲೆ ಏನು?

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯವರ ಬೆನ್ನ ಹಿಂದೆ ನಡೆಯುತ್ತೆ ಪಿತೂರಿ..ಎಚ್ಚರವಾಗಿರಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ12 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌