Mutual Fund SIP : ಮ್ಯೂಚುವಲ್‌ ಫಂಡ್‌ನಲ್ಲಿ ಪ್ರತಿಯೊಂದು ಸಿಪ್‌ ಕೂಡ ಅಷ್ಟೇ ಮುಖ್ಯ Vistara News
Connect with us

ಮನಿ-ಗೈಡ್

Mutual Fund SIP : ಮ್ಯೂಚುವಲ್‌ ಫಂಡ್‌ನಲ್ಲಿ ಪ್ರತಿಯೊಂದು ಸಿಪ್‌ ಕೂಡ ಅಷ್ಟೇ ಮುಖ್ಯ

Mutual Fund SIP ಮ್ಯೂಚುವಲ್‌ ಫಂಡ್‌ ಯೋಜನೆಗಳಲ್ಲಿ ಹೂಡಿಕೆದಾರರು ಪ್ರತಿಯೊಂದು ಸಿಪ್‌ ಅನ್ನೂ ತಪ್ಪದೆ ಪಾವತಿಸುವುದು ಮುಖ್ಯವಾಗುತ್ತದೆ. ಇಲ್ಲದಿದ್ದರೆ ಏನಾಗುತ್ತದೆ? ಇಲ್ಲಿದೆ ಉದಾಹರಣೆ ಸಹಿತ ವಿವರ.

VISTARANEWS.COM


on

RBI
Koo

ಮಾರುಕಟ್ಟೆ ದುರ್ಬಲವಾಗಿದ್ದಾಗ ನಿಮ್ಮ ಮ್ಯೂಚುವಲ್‌ ಫಂಡ್‌ ಸಿಪ್‌ ಅತ್ಯಂತ ಪರಿಣಾಮಕಾರಿಯಾಗಿ ಇರುತ್ತದೆ. (Mutual Fund SIP ) ಏಕೆಂದರೆ ಯುನಿಟ್‌ಗಳ ಸಂಖ್ಯೆ ಹೆಚ್ಚುತ್ತದೆ. ಇಲ್ಲೊಂದು ಉದಾಹರಣೆಯನ್ನು ನಾವೀಗ ನೋಡೋಣ.

ಎ ಮತ್ತು ಬಿ ಎಂಬ ಎರಡು ವ್ಯಕ್ತಿಗಳನ್ನು ತೆಗೆದುಕೊಳ್ಳೋಣ. ಇವರು ಜನವರಿ 2005ರಿಂದ ಡಿಸೆಂಬರ್‌ 2010 ತನಕ ಮಾಸಿಕ 10,000 ಸಿಪ್‌ ಹೂಡಿಕೆ ಮಾಡಿದ್ದಾರೆ. ಎ ವ್ಯಕ್ತಿ ಮಾರುಕಟ್ಟೆ ಹಿಂದಿನ ತಿಂಗಳಿಗಿಂ 5% ಹೆಚ್ಚಿದ್ದಾಗಲೆಲ್ಲ ಸಿಪ್‌ ಅನ್ನು ಮಿಸ್‌ ಮಾಡುತ್ತಾರೆ. ಆದರೆ ಬಿ ವ್ಯಕ್ತಿ ಸಿಪ್‌ ಅನ್ನು ಮುಂದುವರಿಸುತ್ತಾರೆ. ಎಲ್ಲಿಯೂ ಮಿಸ್‌ ಮಾಡುವುದಿಲ್ಲ. ಅವಧಿಯ ಮುಕ್ತಾಯಕ್ಕೆ ಬಿ ವಾರ್ಷಿಕ 16.12% ರಿಟರ್ನ್‌ನೊಂದಿಗೆ 11.72 ಲಕ್ಷ ರೂ. ಗಳಿಸುತ್ತಾರೆ. ಎ ವ್ಯಕ್ತಿ 16.41% ರಿಟರ್ನ್‌ ಪಡೆದರೂ, ಸಿಗುವ ಮೊತ್ತ 7.95 ಲಕ್ಷ ರೂ. ಇದಕ್ಕೆ ಕಾರಣ ಎ ವ್ಯಕ್ತಿ 24 ಸಲ ಸಿಪ್‌ ಮಿಸ್‌ ಮಾಡಿರುವುದು.

ಮಾರುಕಟ್ಟೆ ಉನ್ನತ ಮಟ್ಟದಲ್ಲಿ ಇದ್ದಾಗ ಸಿಪ್‌ ಅಷ್ಟೊಂದು ಫಲದಾಯಕ ಆಗಿರುವುದಿಲ್ಲ ಎಂಬ ಮಾತು ಪೂರ್ಣ ಸತ್ಯವಲ್ಲ. ದೀರ್ಘಾವಧಿಯ ಸಿಪ್‌ ಕೆಲವು ಯುನಿಟ್‌ಗಳನ್ನು ಅತ್ಯಂತ ಅಗ್ಗದ ದರದಲ್ಲಿ ನೀಡುತ್ತದೆ. ಕೆಲವು ಸಿಪ್‌ಗಳು ದುಬಾರಿಯಾಗುತ್ತವೆ. ಕೆಲವು ಸಾಧಾರಣ ದರಕ್ಕೆ ಸಿಗುತ್ತವೆ. ಆದ್ದರಿಂದ ಯಾತ್ರೆಯ ಮಧ್ಯೆ ಸಿಪ್‌ಗಳನ್ನು ಮಿಸ್‌ ಮಾಡುವುದು ಅಷ್ಟೊಂದು ಸೂಕ್ತವಲ್ಲ.

ದೀರ್ಘಾವಧಿಗೆ ಸಿಪ್‌ಗಳಲ್ಲಿ ಹೂಡಿಕೆಯು ನಿಮ್ಮನ್ನು ಕೋಟ್ಯಧಿಪತಿಯನ್ನಾಗಿಸಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. 2005ರ ಆಗಸ್ಟ್‌ 5ರಂದು ಶುರುವಾದ ಆದಿತ್ಯ ಬಿರ್ಲಾ ಸನ್‌ಲೈಫ್‌ ಇಂಡಿಯಾ ಜನ್‌ನೆಕ್ಸ್ಟ್‌ ಫಂಡ್‌ (Aditya Birla sun life India GenNext Fund) ವಾರ್ಷಿಕ 15.20 ಗ್ರೋತ್‌ ರೇಟ್‌ ಅನ್ನು ನೀಡಿದೆ. ಹೀಗಾಗಿ ಒಂದು ವೇಳೆ ಆಗ ಲಂಪ್ಸಮ್‌ ಆಗಿ 10,000 ರೂ. ಹೂಡಿದ್ದರೆ ಈಗ 1.55 ಲಕ್ಷ ರೂ. ಆಗಿರುತ್ತಿತ್ತು. ಪ್ರತಿ ತಿಂಗಳು 10,000 ರೂ. ಸಿಪ್‌ ಹೂಡಿದ್ದರೆ ಈಗ 1.1 ಕೋಟಿ ರೂ. ಆಗಿರುತ್ತಿತ್ತು. 2023ರ ಜೂನ್‌ 30ಕ್ಕೆ ಫಂಡ್‌ ಹೌಸ್‌ 3,855 ಕೋಟಿ ರೂ. ಆಸ್ತಿಯನ್ನು ನಿರ್ವಹಿಸುತ್ತಿದೆ.

ಕಂಪನಿಗಳಲ್ಲಿ ಹಲವಾರು ಉದ್ಯೋಗಿಗಳಿಗೆ ಈ ವರ್ಷ ವೇತನ ಏರಿಕೆ ಅತ್ಯಲ್ಪ ಪ್ರಮಾಣದಲ್ಲಿ ನಡೆದಿದೆ. ವರ್ಷದಿಂದ ವರ್ಷಕ್ಕೆ ವೇತನ ಏರಿಕೆಯಲ್ಲಿ ವ್ಯತ್ಯಾಸ ಇರುತ್ತದೆ. ಆದರೆ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮೂಲಕ ನಿಮ್ಮ ವೇತನ ಏರಿಕೆ ಆಗದಿದ್ದರೂ ಆದಾಯ ಏರಿಸಬಹುದು ಎನ್ನುತ್ತಾರೆ ತಜ್ಞರು.

ನೀವು ಸಿಪ್‌ ಹೇಗೆ ದೊಡ್ಡ ಮೊತ್ತ ಕೊಡುತ್ತದೆ ಎಂಬುದಕ್ಕೆ ಈ ಉದಾಹರಣೆ ಗಮನಿಸಿ. ನೀವು ಪ್ರತಿ ತಿಂಗಳು 10,000 ರೂ. ಮಾಸಿಕ ಸಿಪ್‌ ಹೂಡಿಕೆ ಮಾಡಿದರೆ, 32 ವರ್ಷ ಮತ್ತು 11 ತಿಂಗಳುಗಳಲ್ಲಿ 5 ಕೋಟಿ ರೂ. ಗಳಿಸುತ್ತೀರಿ. ಆದರೆ ವಾರ್ಷಿಕ ರಿಟರನ್‌ 12% ಸಿಗಬೇಕು. ಆದರೆ ಸಿಪ್‌ ಮೊತ್ತವನ್ನು ಪ್ರತಿ ವರ್ಷ 5% ಏರಿಸಿದರೆ 24 ವರ್ಷದಲ್ಲಿ ಈ ಗುರಿ ಸಾಧಿಸಬಹುದು.

ಮಕ್ಕಳ ವಿದ್ಯಾಭ್ಯಾಸ, ವಿವಾಹ, ವಿದೇಶ ಪ್ರವಾಸ, ಇಳಿ ವಯಸ್ಸಿನ ಆರ್ಥಿಕ ಭದ್ರತೆ ಸಲುವಾಗಿ ಮ್ಯೂಚುವಲ್‌ ಸಿಪ್‌ ಮೂಲಕ ಹೂಡಿಕೆ ಮಾಡಬಹುದು. ಉದಾಹರಣೆಗೆ ನಿಮ್ಮ ಮಗುವಿನ ವಯಸ್ಸು 5 ವರ್ಷ ಎಂದಿಟ್ಟುಕೊಳ್ಳಿ. ಸುಮಾರು 13 ವರ್ಷಗಳಲ್ಲಿ ಕಾಲೇಜು ಶಿಕ್ಷಣ ಪಡೆಯಬಹುದು. ಇಂಥ ಸಂದರ್ಭ ಈಗಲೇ ಪ್ರತಿ ತಿಂಗಳು ಸಿಪ್‌ ಹೂಡಿಕೆ ಶುರು ಮಾಡಿದರೆ ಪ್ರಯೋಜನವಾದೀತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ದೇಶ

Interest Rates: ಈ ವಾರ ಬದಲಾಗಲಿದೆ ಉಳಿತಾಯ ಖಾತೆ ಬಡ್ಡಿ ದರ; ತಜ್ಞರು ಹೇಳೋದೇನು?

Interest Rates: ಈ ವಾರ ಸಣ್ಣ ಉಳಿತಾಯ ಖಾತೆಗಳ (small savings schemes) ಬಡ್ಡಿ ದರ (Interest Rates) ಪರಿಷ್ಕರಣೆಯಾಗಲಿದೆ. ಬಡ್ಡಿ ದರ ಯಥಾ ಸ್ಥಿತಿ ಮುಂದುವರಿಯುವ ನಿರೀಕ್ಷೆ ಇದೆ.

VISTARANEWS.COM


on

Edited by

savings
Koo

ನವ ದೆಹಲಿ: 2023ರ ಅಕ್ಟೋಬರ್‌-ಡಿಸೆಂಬರ್‌ ತ್ರೈ ಮಾಸಿಕದ (October-December 2023 quarter) ಪಿಪಿಎಫ್‌(PPF), ಎನ್‌ಎಸ್‌ಸಿ(NSC), ಕೆವಿಪಿ(KVP) ಮತ್ತು ಪೋಸ್ಟ್‌ ಆಫೀಸ್‌(Post office) ಮುಂತಾದ ಸಣ್ಣ ಉಳಿತಾಯ ಯೋಜನೆಗಳ(small savings schemes) ಹೂಡಿಕೆ ಮೇಲಿನ ಬಡ್ಡಿದರಗಳ ಪರಿಷ್ಕರಣೆ ಸೆಪ್ಟೆಂಬರ್‌ 30ರಂದು ನಡೆಯಲಿದೆ. ಹಿಂದಿನ ತ್ರೈಮಾಸಿಕ(ಜುಲೈ-ಸೆಪ್ಟೆಂಬರ್ 2023)ದ ದರವನ್ನು ಜಿ-ಸೆಕ್ ಇಳುವರಿಯ ಆಧಾರದ ಮೇಲೆ ನಿರ್ಧರಿಸಲಾಗುವುದರಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಈ ಬಾರಿ ಬದಲಾಯಿಸುವ ಸಾಧ್ಯತೆಯಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಸಾಮಾನ್ಯವಾಗಿ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಹಿಂದಿನ ತ್ರೈ ಮಾಸಿಕದ ಟ್ರೆಂಡ್‌ಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ.

ತಜ್ಞರು ಏನು ಹೇಳುತ್ತಾರೆ?

ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಪರಿಷ್ಕರಿಸಲಾಗುತ್ತದೆ ಮತ್ತು ಅದಕ್ಕನುಗುಣವಾಗಿ ಮುಂದಿನ ತ್ರೈ ಮಾಸಿಕ ದರವನ್ನು ನಿರ್ಧರಿಸಲಾಗುತ್ತದೆ. 10 ವರ್ಷಗಳ ಜಿ-ಸೆಕ್ ಶೇಕಡಾ 7.0 ರಿಂದ 7.2ರ ನಡುವೆ ಇದೆ ಮತ್ತು ಮುಂದೆ ಶೇಕಡಾ 7.1-7.2ರಷ್ಟು ಮುಂದುವರಿಯುವ ನಿರೀಕ್ಷೆಯಿದೆ. ಈ ವರ್ಷದ ಸೆಪ್ಟಂಬರ್ ನಂತರ ಹಣದುಬ್ಬರ ದರವು ಶೇಕಡಾ 5-6ರ ಆಸುಪಾಸಿನಲ್ಲಿರಲಿದೆ ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಬದಲಾಗುವ ಸಾಧ್ಯತೆ ಇಲ್ಲ ಎಂದು ಆರ್ಥಿಕ ಪರಿಣತರು ಹೇಳಿದ್ದಾರೆ.

ಪ್ರಸಕ್ತ ಬಡ್ಡಿ ದರ ಎಷ್ಟಿದೆ?

ಪ್ರಸ್ತುತ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರಗಳ ವಿವರ ನೋಡುವುದಾದರೆ, ವಾರ್ಷಿಕವಾಗಿ ಪೋಸ್ಟ್‌ ಆಫೀಸ್‌ ಉಳಿತಾಯ ಖಾತೆಗಳಿಗೆ 4%, ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್ಸ್‌ ಸ್ಕೀಮ್‌-SCSSಗೆ 8.2% ಮತ್ತು ಸಾರ್ವಜನಿಕ ಭವಿಷ್ಯ ನಿಧಿ-PPFಗೆ 7.1% ಬಡ್ಡಿ ದರವಿದೆ.

ಹಣಕಾಸು ಸಚಿವಾಲಯವು ಅಕ್ಟೋಬರ್-ನವೆಂಬರ್ ತ್ರೈಮಾಸಿಕದಲ್ಲಿ ಸಾರ್ವಜನಿಕ ಭವಿಷ್ಯ ನಿಧಿ ಖಾತೆಗಳ ಬಡ್ಡಿದರವನ್ನು 2023ರ ಸೆಪ್ಟಂಬರ್ ವೇಳೆಗೆ ವಾರ್ಷಿಕವಾಗಿ ಶೇಕಡಾ 7.10ಕ್ಕೆ ಉಳಿಸಿಕೊಳ್ಳಬಹುದು ಎಂಬ ಸಲಹೆ ವ್ಯಕ್ತವಾಗಿದೆ.

ಕಳೆದ ವರ್ಷದಲ್ಲಿ ದರ ಏರಿಕೆಯೊಂದಿಗೆ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಪ್ರಸ್ತುತ ದೀರ್ಘಾವಧಿಯ ಸ್ಥಿರ ಠೇವಣಿ(FD)ಗಳಿಗೆ ಸಮಾನವಾಗಿವೆ ಎಂದು ಬ್ಯಾಂಕಿಂಗ್‌ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಏಪ್ರಿಲ್‌ನಿಂದ ದರ ಏರಿಕೆಯನ್ನು ಸ್ಥಗಿತಗೊಳಿಸಿದೆ. ಅಲ್ಲದೆ ಜಾಗತಿಕವಾಗಿ ಹಣದುಬ್ಬರವು ನಿಧಾನವಾಗಿ ಕಡಿಮೆಯಾಗುತ್ತಿರುವುದರಿಂದ ರೆಪೊ ದರವು ಇದೇ ರೀತಿ ಮುಂದುವರಿಯುವ ನಿರೀಕ್ಷೆಯಿದೆ. ಆದ್ದರಿಂದ ಹೆಚ್ಚಿನ ಪರಿಷ್ಕರಣೆಗೆ ಯಾವುದೇ ಸಾಧ್ಯತೆ ಇಲ್ಲ. ಜೊತೆಗೆ SCSSನಲ್ಲಿ ಗಮನಾರ್ಹ ದರ ಏರಿಕೆಯ ಸಾಧ್ಯತೆಗಳು ಕಡಿಮೆ ಎಂದೂ ಅವರು ಹೇಳಿದ್ದಾರೆ.

ಜೂನ್‌ 30, 2023ರಲ್ಲಿ ಸರ್ಕಾರ ಅನೇಕ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಹೆಚ್ಚಿಸಿತ್ತು. 2020-21ರ ಎರಡನೇ ತ್ರೈ ಮಾಸಿಕದಿಂದ 2022-23ರ ಎರಡನೇ ತ್ರೈಮಾಸಿಕದವರೆಗೆ ಸತತ ಒಂಬತ್ತು ತ್ರೈ ಮಾಸಿಕಗಳಲ್ಲಿ ಯಾವುದೇ ಬದಲಾವಣೆಯಾಗದ ನಂತರ, ಅಕ್ಟೋಬರ್-ಡಿಸೆಂಬರ್ 2022ರ ತ್ರೈಮಾಸಿಕದಲ್ಲಿ ಸರ್ಕಾರವು ಕೆಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದ ನಂತರ ಇದು ನಾಲ್ಕನೇ ಹೆಚ್ಚಳವಾಗಿತ್ತು.

ಸದ್ಯದ ಬಡ್ಡಿ ದರಗಳ ವಿವರ

ಜುಲೈ ಮತ್ತು ಸೆಪ್ಟೆಂಬರ್‌ 2023ರ ತ್ರೈ ಮಾಸಿಕದಲ್ಲಿರುವ ಬಡ್ಡಿ ದರಗಳ ವಿವರ ಇಲ್ಲಿದೆ.

 • ಉಳಿತಾಯ ಠೇವಣಿ-4%
 • 1 ವರ್ಷದ ಪೋಸ್ಟ್‌ ಆಫೀಸ್‌ ಠೇವಣಿ-6.9%
 • 1 ವರ್ಷದ ಪೋಸ್ಟ್‌ ಆಫೀಸ್‌ ಟೈಮ್‌ ಡೆಪಾಸಿಟ್‌-6.9%
 • 2 ವರ್ಷದ ಪೋಸ್ಟ್‌ ಆಫೀಸ್‌ ಡೆಪಾಸಿಟ್-‌ 7.0%
 • 3 ವರ್ಷದ ಪೋಸ್ಟ್‌ ಆಫೀಸ್‌ ಟೈಮ್‌ ಡೆಪಾಸಿಟ್‌-7%
 • 5 ವರ್ಷದ ಪೋಸ್ಟ್‌ ಆಫೀಸ್‌ ಡೆಪಾಸಿಟ್-7.5‌%
 • 5 ವರ್ಷದ ರಿಕರಿಂಗ್‌ ಡೆಪಾಸಿಟ್‌-6.5%
 • ನ್ಯಾಷನಲ್‌ ಸೇವಿಂಗ್‌ ಸರ್ಟಿಫಿಕೆಟ್ಸ್‌(NCS)-7.7%
 • ಕಿಸಾನ್‌ ವಿಕಾಸ್‌ ಪತ್ರ: 7.5%(ಇದು 115 ತಿಂಗಳಲ್ಲಿ ಮೆಚ್ಯುರ್‌ ಆಗಲಿದೆ)
 • ಪಬ್ಲಿಕ್‌ ಪ್ರೊವಿಡೆಂಟ್‌ ಫಂಡ್‌-7.1%
 • ಸುಕನ್ಯಾ ಸಮೃದ್ದಿ ಖಾತೆ- 8.0%
 • ಸೀನಿಯರ್‌ ಸಿಟಿಸನ್‌ ಸೇವಿಂಗ್‌ ಸ್ಕೀಮ್‌-8.2%
 • ಮಾಸಿಕ ಆದಾಯ ಖಾತೆ-7.4%

ಸಣ್ಣ ಉಳಿತಾಯ ಯೋಜನೆಗಳಲ್ಲಿ 3 ವಿಧಗಳಿವೆ – ಉಳಿತಾಯ ಠೇವಣಿ, ಸಾಮಾಜಿಕ ಭದ್ರತಾ ಯೋಜನೆ ಮತ್ತು ಮಾಸಿಕ ಆದಾಯ ಯೋಜನೆ. ಉಳಿತಾಯ ಠೇವಣಿಗಳಲ್ಲಿ 1-3 ವರ್ಷಗಳ ಟೈಮ್ ಡೆಪಾಸಿಟ್ ಮತ್ತು 5 ವರ್ಷಗಳ ರಿಕರಿಂಗ್ ಡಿಪಾಸಿಟ್ ಗಳು ಸೇರಿವೆ. ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ಧಿ ಖಾತೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿವೆ. ಮಾಸಿಕ ಆದಾಯ ಯೋಜನೆ ಮಾಸಿಕ ಆದಾಯ ಖಾತೆಯನ್ನು ಒಳಗೊಂಡಿದೆ.

ಇದನ್ನೂ ಓದಿ: Server Hack : ಆಸ್ತಿ ನೋಂದಣಿಗಾಗಿ ರಿಜಿಸ್ಟ್ರಾರ್ ಕಚೇರಿಗೆ ಹೋದವರ ಬ್ಯಾಂಕ್ ಖಾತೆಯಿಂದ ಹಣ ಮಾಯ!

Continue Reading

ಪ್ರಮುಖ ಸುದ್ದಿ

₹2000 Notes Withdrawn: ಪಿಂಕ್‌ ನೋಟು ಮರಳಿಸಲು ಇನ್ನು ಐದೇ ದಿನ ಅವಕಾಶ; ನಿಮ್ಮಲ್ಲಿ ಇನ್ನೂ ಇದೆಯಾ?

ಇನ್ನೂ ಸುಮಾರು 240 ಶತಕೋಟಿ ರೂಪಾಯಿ ಮೌಲ್ಯದ ₹2000
ನೋಟುಗಳು (₹ 2000 Notes Withdrawn) ಚಲಾವಣೆಯಲ್ಲಿ ಇವೆ. ಇವು ಬ್ಯಾಂಕುಗಳಿಗೆ ಇನ್ನು ಐದು ದಿನಗಳಲ್ಲಿ ಮರಳಬೇಕಿವೆ.

VISTARANEWS.COM


on

Edited by

2000 rupees note
Koo

ಹೊಸದಿಲ್ಲಿ: ₹ 2000 ಮುಖಬೆಲೆಯ ನೋಟುಗಳನ್ನು ಆರ್‌ಬಿಐ (RBI) ಹಿಂದೆಗೆದುಕೊಳ್ಳುವ (₹2000 Notes Withdrawn) ಪ್ರಕ್ರಿಯೆ ನಡೆಯುತ್ತಿದ್ದು, ನಿಮ್ಮಲ್ಲಿರುವ ನೋಟುಗಳನ್ನು ಬದಲಿಸಿಕೊಳ್ಳಲು ಇನ್ನೊಂದೇ ವಾರ ಅವಕಾಶವಿದೆ. ಇದರ ಅಂತಿಮ ಗಡು ಸೆಪ್ಟೆಂಬರ್ 30ರಂದು ಇದೆ.

ಸದ್ಯ ಇರುವುದರಲ್ಲಿ ಅತ್ಯಧಿಕ ಮುಖಬೆಲೆಯ ಈ ಕರೆನ್ಸಿಗಳನ್ನು ಆರ್‌ಬಿಐ ವಾಪಸ್‌ ಪಡೆಯುತ್ತಿದೆ. ಈಗಾಗಲೇ ಸಾಕಷ್ಟು ನೋಟುಗಳು ಬ್ಯಾಂಕುಗಳಿಗೆ ಮರಳಿ ಬಂದಿದ್ದು, ಇನ್ನೂ ಸುಮಾರು 240 ಶತಕೋಟಿ ರೂಪಾಯಿ ಮೌಲ್ಯದ ನೋಟುಗಳು ಚಲಾವಣೆಯಲ್ಲಿ ಇವೆ. ಇವು ಬ್ಯಾಂಕುಗಳಿಗೆ ಇನ್ನು ಐದು ದಿನಗಳಲ್ಲಿ ಮರಳಬೇಕಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ಮೇ 19ರಂದು 2,000 ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವ ಆದೇಶ ನೀಡಿತು. ಜನರಿಗೆ ಅವುಗಳನ್ನು ವಿನಿಮಯ ಮಾಡಿಕೊಳ್ಳಲು ಅಥವಾ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ಸೆಪ್ಟೆಂಬರ್ ಅಂತ್ಯದವರೆಗೆ ಅವಕಾಶ ನೀಡಿದೆ. 3.56 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳು ಮಾರುಕಟ್ಟೆಯಲ್ಲಿದ್ದವು. ಅವುಗಳಲ್ಲಿ ಬಹುಪಾಲು ಬ್ಯಾಂಕ್‌ಗೆ ಮರಳಿ ಬಂದಿವೆ. ಆದರೆ ಸೆ.1ರಿಂದ 7% ನೋಟುಗಳು ಚಲಾವಣೆಯಲ್ಲಿವೆ.

ಗುಲಾಬಿ ಬಣ್ಣದ ಈ 2,000 ರೂಪಾಯಿ ನೋಟನ್ನು ನವೆಂಬರ್ 2016ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಯಿತು. ಭ್ರಷ್ಟಾಚಾರ ತಡೆಗಾಗಿ 1,000 ಮತ್ತು 500 ರೂಪಾಯಿಗಳ ನೋಟುಗಳನ್ನು ಡಿಮಾನಿಟೈಸೇಷನ್‌ ಮಾಡಿದಾಗ, ಅವುಗಳ ಬದಲಿಗೆ ಇದನ್ನು ತರಲಾಗಿತ್ತು. ನಂತರ ಇದು ದೊಡ್ಡ ಮೌಲ್ಯದ ನಗದು ವ್ಯವಹಾರಗಳ ಹೆಚ್ಚಾಗಿ ಬಳಕೆಯಾಗತೊಡಗಿತು.

ಈ ನೋಟುಗಳು ತಮ್ಮ ಉದ್ದೇಶವನ್ನು ಪೂರೈಸಿವೆ. ಇವು ಈಗ ಸಾಮಾನ್ಯವಾಗಿ ಬಳಕೆಯಲ್ಲಿಲ್ಲ ಎಂದು ಆರ್‌ಬಿಐ ಹೇಳಿದೆ. ನಾಲ್ಕರಿಂದ ಐದು ವರ್ಷಗಳ ಬಳಕೆಯಲ್ಲಿ ಹರಿದ, ಮುದ್ದೆಯಾದ ನೋಟುಗಳನ್ನು ಬದಲಿಸುವುದು ಆರ್‌ಬಿಐಯ “ಕ್ಲೀನ್ ನೋಟ್ ನೀತಿ”ಯಲ್ಲಿ ಒಂದು. ಮೇ ತಿಂಗಳಲ್ಲಿ ಇದರ ಪ್ರಕಟಣೆ ಬಂದಾಗ ಇದ್ದಕ್ಕಿದ್ದಂತೆ ₹2000 ಹೊರಗೆ ಬಂದವು; ಆಭರಣದ ಅಂಗಡಿಗಳಲ್ಲಿ ವ್ಯಾಪಾರ ಹೆಚ್ಚಿತು ಎಂದು ವರದಿಯಾಗಿದೆ.

ಗಡುವಿನ ಒಳಗೆ ಮರಳಿಸದಿದ್ದರೆ ಏನಾಗುತ್ತದೆ?

ಈ ನೋಟುಗಳು ಸೆಪ್ಟೆಂಬರ್ 30ರ ನಂತರವೂ ಕಾನೂನುಬದ್ಧವಾದ ಕರೆನ್ಸಿಯಾಗಿಯೇ ಉಳಿಯಲಿವೆ. ಆದರೆ ಅವುಗಳನ್ನು ವಹಿವಾಟುಗಳಲ್ಲಿ ನೀಡುವಂತಿಲ್ಲ ಅಥವಾ ಸ್ವೀಕರಿಸುವಂತಿಲ್ಲ. ಇದನ್ನು RBIಯೊಂದಿಗೆ ಮಾತ್ರ ವಿನಿಮಯ ಮಾಡಿಕೊಳ್ಳಬಹುದು. ಯಾಕೆ ಗಡುವಿನ ಒಳಗೆ ಮರಳಿಸಿಲ್ಲ ಎಂದು ಅದನ್ನು ಹೊಂದಿರುವವರು ಬ್ಯಾಂಕ್‌ಗೆ ವಿವರಿಸಬೇಕಾಗುತ್ತದೆ.

ಇದನ್ನೂ ಓದಿ: ₹ 2000 Notes Withdrawn: ನೋಟ್‌ ವಾಪಸ್‌ ಉತ್ತಮ ನಡೆಯೆ? ಮಾಜಿ ಸಿಇಎ ನೀಡಿದ 6 ಕಾರಣ ಇಲ್ಲಿದೆ

Continue Reading

ಮನಿ-ಗೈಡ್

Money Guide: ಹಣ ಉಳಿಸೋದು ಹೇಗೆ? ಮಿಲೇನಿಯಲ್ಸ್‌ಗಾಗಿ 10 ಟಿಪ್ಸ್‌ ಇಲ್ಲಿವೆ!

ನೀವು ಮಿಲೇನಿಯಲ್ಸ್‌ ಆಗಿದ್ದರೆ (1981- 1996 ನಡುವೆ ಜನಿಸಿದವರು) ಮತ್ತು ನಿಮ್ಮ ಭವಿಷ್ಯಕ್ಕಾಗಿ ಹಣವನ್ನು ಉಳಿಸುವ ಬಗೆಗಳನ್ನು ಆಲೋಚನೆ ಮಾಡುತ್ತಿದ್ದರೆ, ಹಣಕಾಸು ತಜ್ಞರು ನೀಡಿರುವ ಈ ಟಾಪ್ 10 ಸಲಹೆಗಳನ್ನು ಓದಿ.

VISTARANEWS.COM


on

Edited by

money saving tips
Koo

1981ರಿಂದ 1996ರ ನಡುವೆ ಜನಿಸಿದವರನ್ನು ʼಮಿಲೇನಿಯಲ್ಸ್’ (millennials) ಎಂದು ಕರೆಯುತ್ತಾರೆ. ಇವರ ಆದಾಯ, ವೆಚ್ಚದ ಸಾಮರ್ಥ್ಯ ಹೆಚ್ಚು. ನಿರಂತರ ಏರಿಕೆಯನ್ನೂ ಕಾಣುತ್ತಿದೆ. ಕ್ರೆಡಿಟ್ ಕಾರ್ಡ್‌ಗಳು ಮತ್ತು ವಿವಿಧ ಆನ್‌ಲೈನ್ ಶಾಪಿಂಗ್ (Online shopping) ಇವರಿಗೆ ಸುಲಭ. ಮಿಲೇನಿಯಲ್‌ಗಳು ಖರ್ಚು ಮಾಡುವತ್ತ ಗಮನಹರಿಸುವುದು ಹೆಚ್ಚು. ಉಳಿತಾಯದ ಮೇಲೆ ಗಮನ ಹರಿಸುವುದು ಕಡಿಮೆ. ಆದರೆ ಮಿಲೇನಿಯಲ್‌ಗಳು (millennials saving) ಸಹ ತಮ್ಮ ಹಣವನ್ನು ಉತ್ತಮವಾಗಿ ನಿರ್ವಹಿಸುವುದು (money guide) ಅಗತ್ಯ.

ಹೆಚ್ಚಿನ ಮಿಲೇನಿಯಲ್‌ಗಳು ದೊಡ್ಡ ಮನೆಯನ್ನು ಹೊಂದುವ, ರಜೆಯಲ್ಲಿ ವಿದೇಶಗಳಿಗೆ ಹೋಗುವ ಕನಸು ಕಾಣುತ್ತಾರೆ. ಕಠಿಣ ಕಾರ್ಪೊರೇಟ್ ಉದ್ಯೋಗಗಳನ್ನು ನಿರ್ವಹಿಸುತ್ತಾರೆ. ಆದರೆ ಭವಿಷ್ಯದಲ್ಲಿ ತಮ್ಮ ಜೀವನಶೈಲಿಯನ್ನು ಉಳಿಸಿಕೊಳ್ಳಲು ಅವರು ಸಾಕಷ್ಟು ಉಳಿಸುತ್ತಾರೆಯೇ? ನೀವು ಮಿಲೇನಿಯಲ್ಸ್‌ ಆಗಿದ್ದರೆ, ಭವಿಷ್ಯಕ್ಕಾಗಿ ಹಣ ಉಳಿಸುವ ಯೋಚನೆ ಹೊಂದಿದ್ದರೆ ಈ ಟಿಪ್ಸ್‌ ಓದಿ.

1) ಸಣ್ಣ ಉಳಿತಾಯ ಅಭ್ಯಾಸ ರೂಢಿಸಿಕೊಳ್ಳಿ

ಉಳಿತಾಯಕ್ಕೆ (small savings) ಸಂಬಂಧಿಸಿ ಮಿಲೇನಿಯಲ್‌ಗಳ ಚಿಂತನೆ ವಿಭಿನ್ನ. ಪ್ರವಾಸ, ದುಬಾರಿ ಗ್ಯಾಜೆಟ್‌, ಫ್ಯಾಶನ್ ಟ್ರೆಂಡ್‌ಗಳನ್ನು ಅನುಸರಿಸುವುದು ಇತ್ಯಾದಿಗಳಿಂದಾಗಿ ದೀರ್ಘಾವಧಿಯ ಉಳಿತಾಯದ ಶಿಸ್ತನ್ನು ಅನುಸರಿಸುವಲ್ಲಿ ಅಡ್ಡಿಯಾಗುತ್ತದೆ. ಖರ್ಚು ಮಾಡುವ ಮೊದಲು ಮಾಸಿಕ ಆದಾಯದ ಒಂದು ಭಾಗವನ್ನು ಉಳಿಸುವುದು ಉಳಿತಾಯದ ಶಿಸ್ತನ್ನು ಬೆಳೆಸಲು ಅತ್ಯುತ್ತಮ ಸೂತ್ರ.

ಸ್ಮಾರ್ಟ್ ಸಲಹೆ: 50-20-30 ನಿಯಮವನ್ನು ಅನುಸರಿಸಿ. ಇದರ ಅಡಿಯಲ್ಲಿ, ಆದಾಯದ 50% ಜೀವನ ವೆಚ್ಚಕ್ಕಾಗಿ, 20% ಆಹಾರ, ಮನರಂಜನೆ ಮತ್ತು ಪ್ರಯಾಣಕ್ಕಾಗಿ ಮೀಸಲಿಡಬಹುದು. ಉಳಿದ ಶೇ.30ರಷ್ಟು ಹಣವನ್ನು ಉಳಿತಾಯವಾಗಿ ಇಡಬೇಕು.

2) ವೆಚ್ಚಗಳನ್ನು ಟ್ರ್ಯಾಕ್ ಮಾಡಿ

ಮಿಲೇನಿಯಲ್ಸ್ ಆದಾಯವನ್ನು ತಕ್ಷಣ ಖರ್ಚು ಮಾಡುವತ್ತಲೇ ಪರಿಗಣಿಸುತ್ತಾರೆ. ಮನೆ ಬಾಡಿಗೆ, ದಿನಸಿ, ಭೋಜನ ಇತ್ಯಾದಿಗಳಂತಹ ತಕ್ಷಣದ ಉದ್ದೇಶಗಳಿಗಾಗಿ ಅದನ್ನು ಬಳಸಲು ಬಯಸುತ್ತಾರೆ. ಸ್ಮಾರ್ಟ್ ಉಳಿತಾಯ ಅಭ್ಯಾಸ ಅಳವಡಿಸಿಕೊಳ್ಳುವ ಒಂದು ಹೆಜ್ಜೆಯೆಂದರೆ ಖರ್ಚುಗಳನ್ನು ಗುರುತಿಸುವುದು. ಒಂದು ನಿರ್ದಿಷ್ಟ ಅವಧಿಗೆ ಎಲ್ಲಾ ಖರ್ಚುಗಳನ್ನು ನಮೂದಿಸುವ ಮೂಲಕ ಇದನ್ನು ಮಾಡಬಹುದು. ಇದರಿಂದ ಅನಗತ್ಯ ಅಥವಾ ತಪ್ಪಿಸಬಹುದಾದ ವೆಚ್ಚವನ್ನು ಕಡಿತಗೊಳಿಸಬಹುದು.

ಸ್ಮಾರ್ಟ್ ಸಲಹೆ: ಖರ್ಚು ಟ್ರ್ಯಾಕರ್ ಅಪ್ಲಿಕೇಶನ್‌ಗಳನ್ನು ಬಳಸಿ. ಹೆಚ್ಚಿನ ಮಿಲೇನಿಯಲ್‌ಗಳು ಟೆಕ್ ಸೇವಿಗಳು. ಮೊಬೈಲ್ ಖರ್ಚು ಟ್ರ್ಯಾಕರ್ ಅಪ್ಲಿಕೇಶನ್ ಅನ್ನು ಬಳಸುವುದು ವೆಚ್ಚಗಳನ್ನು ಟ್ರ್ಯಾಕ್ ಮಾಡುಲು ಉತ್ತಮ ಆಹಾರ, ಶಾಪಿಂಗ್ ಮತ್ತು ಮನರಂಜನೆಯಂತಹ ವೆಚ್ಚಗಳನ್ನು ವರ್ಗೀಕರಿಸಲು ಈ ಅಪ್ಲಿಕೇಶನ್‌ಗಳು ಸಹಾಯ ಮಾಡುತ್ತವೆ. ತಡವಾಗಿ ಬಿಲ್‌ಗಳನ್ನು ಪಾವತಿಸುವುದನ್ನು ತಪ್ಪಿಸಲು ರಿಮೈಂಡರ್‌ ಬಳಸಬಹುದು.

cash

3) ವಿವೇಚನೆಯಿಂದ ವೆಚ್ಚ ಮಾಡಿ

ತಮ್ಮ ವೃತ್ತಿಜೀವನವನ್ನು ಇತ್ತೀಚೆಗೆ ಪ್ರಾರಂಭಿಸಿರುವ ಮಿಲೇನಿಯಲ್‌ಗಳು ಉಳಿತಾಯ ಪ್ರಾರಂಭಿಸಲು ಅನಿವಾರ್ಯವಲ್ಲದ ವೆಚ್ಚಗಳನ್ನು ತಪ್ಪಿಸಬೇಕು. ಅಗತ್ಯ ಮತ್ತು ಅನಿವಾರ್ಯವಲ್ಲದ ವೆಚ್ಚವನ್ನು ಗುರುತಿಸುವುದು ಮುಖ್ಯ. ಅನಿಯಂತ್ರಿತವಾಗಿ ಬಿಟ್ಟರೆ ಈ ವೆಚ್ಚಗಳು ಸುಲಭವಾಗಿ ಆದಾಯವನ್ನು ಅಳಿಸಿಹಾಕಬಹುದು ಮತ್ತು ಭವಿಷ್ಯದ ಬಳಕೆಗಾಗಿ ಏನನ್ನೂ ಉಳಿಸದೇ ಇರಬಹುದು.

4) ಅನಗತ್ಯ ಸಾಲವನ್ನು ತಪ್ಪಿಸಿ

ಕ್ರೆಡಿಟ್ ಸೌಲಭ್ಯಗಳು ಸುಲಭವಾಗಿ ಲಭ್ಯವಿವೆ ಮತ್ತು ಸುಲಭವಾಗಿ ಪಡೆಯಬಹುದು. ಈ ಕಾರಣದಿಂದ ಅನೇಕ ಯುವಜನ ತಮ್ಮ ಜೀವನಶೈಲಿಯ ಅವಶ್ಯಕತೆಗಳನ್ನು ಪೂರೈಸಲು ಇವುಗಳ ಕಡೆಗೆ ಒಲವು ತೋರುತ್ತಾರೆ. ಆದರೆ ಇದು ಸಾಲದ ಬಲೆಗೆ ಕಾರಣವಾಗಬಹುದು. ಅಸುರಕ್ಷಿತ ವೈಯಕ್ತಿಕ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ ಸಾಲಗಳಂತಹ ಅನಗತ್ಯ ಸಾಲವನ್ನು ತಪ್ಪಿಸುವುದು ಉತ್ತಮ. ಸಾಲದ ಉದ್ದೇಶ, ಮರುಪಾವತಿ ಯೋಜನೆ, ಮರುಪಾವತಿಗೆ ಹಣದ ಲಭ್ಯತೆ ಇತ್ಯಾದಿ ಅಂಶಗಳನ್ನು ಪರಿಗಣಿಸಿ.

5) ತುರ್ತು ನಿಧಿಯನ್ನು ಹೊಂದಿಸಿಡಿ

ಹೊಸ ಕಾರನ್ನು ಹೊಂದುವುದು, ಮದುವೆ ಅಥವಾ ಮನೆ ನವೀಕರಣಗಳಿಗೆಲ್ಲ ಸಾಕಷ್ಟು ಹಣದ ಅಗತ್ಯವಿರುತ್ತದೆ. ಈ ಗುರಿಗಳು ಉತ್ತಮವಾಗಿ ಉಳಿಸಲು ನಿಮ್ಮನ್ನು ಪ್ರೇರೇಪಿಸುತ್ತವೆ. ಆದರೆ ಹೆಚ್ಚಿನವರು ತುರ್ತು ನಿಧಿಯ (Emergency fund) ಅವಶ್ಯಕತೆಯನ್ನು ಕಡೆಗಣಿಸುತ್ತಾರೆ. ವೈದ್ಯಕೀಯ ಅಗತ್ಯಗಳಂತಹ ತುರ್ತು ಪರಿಸ್ಥಿತಿಗಳಿಗಾಗಿ ಉಳಿಸುವುದು ಯಾವಾಗಲೂ ಒಳ್ಳೆಯದು.

6) ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ

ಇನ್ನೂ ಹೂಡಿಕೆಯನ್ನು ಪ್ರಾರಂಭಿಸದ ಮಿಲೇನಿಯಲ್‌ಗಳು ತಮ್ಮ ಹೂಡಿಕೆಯ ಪ್ರಯಾಣವನ್ನು ಪ್ರಾರಂಭಿಸಲು ಸರಿಯಾದ ಸಮಯವಿದು. ದೀರ್ಘಾವಧಿಯ ಗುರಿಗಳನ್ನು ಸಾಧಿಸಲು ಹಣವನ್ನು ಉಳಿಸುವುದು ಹೂಡಿಕೆಯ ಮೂಲಕ ಮಾತ್ರ ಸಾಧ್ಯ. ನಿಮ್ಮ ಆದಾಯದ ಮಟ್ಟವನ್ನು ಲೆಕ್ಕಿಸದೇ ಮ್ಯೂಚುಯಲ್ ಫಂಡ್ ಹೂಡಿಕೆಗಳಿಗಾಗಿ ಕನಿಷ್ಠ 15-20% ಅನ್ನು ಮೀಸಲಿಡಬೇಕು. ಇವುಗಳು ನೀವು ಅನುಸರಿಸಿದ ಹೂಡಿಕೆಯ ಮಾದರಿ ಅವಲಂಬಿಸಿ ಧನಾತ್ಮಕ ಆದಾಯವನ್ನು ನೀಡಬಹುದು.

ಸ್ಮಾರ್ಟ್ ಸಲಹೆ: ಇಂದು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮ್ಯೂಚುವಲ್ ಫಂಡ್‌ಗಳು ಲಭ್ಯವಿದೆ. ಮ್ಯೂಚುವಲ್ ಫಂಡ್‌ಗಳ ರಿಸ್ಕ್ ರೇಟಿಂಗ್ ಅನ್ನು ನೋಡಿ ಹೂಡಿಕೆ ಮಾಡಲು ಪ್ರಾರಂಭಿಸಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಮ್ಯೂಚುಯಲ್ ಫಂಡ್‌ನಲ್ಲಿ ಹೆಚ್ಚಿನ ರಿಸ್ಕ್‌ ಕೂಡಾ ಇರುತ್ತದೆ.

Mutual Fund

7) ಷೇರು ಮಾರುಕಟ್ಟೆಯಲ್ಲಿ ಹೂಡಿಕೆ

ಇಂದು ಷೇರು ಮಾರುಕಟ್ಟೆ ಎಲ್ಲರಿಗೂ ಸುಲಭವಾಗಿ ಲಭ್ಯವಿದೆ ಮತ್ತು ಪ್ರವೇಶಿಸಬಹುದಾಗಿದೆ. ಹೂಡಿಕೆಯ ಆಯ್ಕೆಗಳಿಗಾಗಿ ಸ್ಟಾಕ್ ಮಾರುಕಟ್ಟೆಯನ್ನು ಅನ್ವೇಷಿಸುವುದು, ಒಟ್ಟು ಆದಾಯದ ಒಂದು ನಿರ್ದಿಷ್ಟ ಭಾಗವನ್ನು ಹೂಡುವುದು ಒಳ್ಳೆಯದು. ಸ್ಟಾಕ್ ಮಾರುಕಟ್ಟೆಗಳು ಏರಿಳಿತಗೊಳ್ಳುತ್ತಲೇ ಇರುತ್ತವೆ. ಆದ್ದರಿಂದ ಇವುಗಳ ಬಗ್ಗೆ ಹೆಚ್ಚಿನ ಜ್ಞಾನವನ್ನೂ ಗಳಿಸಿಕೊಳ್ಳಬೇಕು.

ಇದನ್ನೂ ಓದಿ: Money Guide: ಅತ್ಯುತ್ತಮ ನಿವೃತ್ತ ಜೀವನಕ್ಕಾಗಿ ಟಾಪ್ 10 ಹಣ ಉಳಿತಾಯದ ಟಿಪ್ಸ್!

8) ವಿಮೆ ಇರಲಿ

ಇಂದಿನ ಕಾಲದಲ್ಲಿ ಆರೋಗ್ಯ ವಿಮೆ ಬಹಳ ನಿರ್ಣಾಯಕ. ಆರೋಗ್ಯ ರಕ್ಷಣೆ, ಜೀವ ವಿಮೆಯಂತಹ ವಿಮೆಗಳನ್ನು ಆರಿಸಿಕೊಳ್ಳುವ ಮೂಲಕ ಮಿಲೇನಿಯಲ್‌ಗಳು ಹಣಕಾಸಿನ ಭದ್ರತೆಯನ್ನು ಹೊಂದಬೇಕು. ವಿಮೆಯು ನಿಮ್ಮ ಭವಿಷ್ಯಕ್ಕೆ ಮತ್ತು ನಿಮ್ಮ ಕುಟುಂಬ/ಅವಲಂಬಿತರ ಭವಿಷ್ಯಕ್ಕೆ ಆರ್ಥಿಕ ರಕ್ಷಣೆ ಒದಗಿಸುತ್ತದೆ. ವಿಮೆ ಯೋಜನೆ ಆರಿಸುವ ಮೊದಲು ನೀವು ವಿಮೆಯ ಕೆಲವು ಮೂಲಭೂತ ಅಂಶಗಳನ್ನು ಕಲಿಯಬೇಕು, ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಸರಿಯಾದುದನ್ನು ಆರಿಸಿಕೊಳ್ಳಬೇಕು. ವಿಮೆಯು ಕೇವಲ ಹಿರಿಯರಿಗೆ ಮಾತ್ರ ಅಲ್ಲ.

Health insurence
insurence 4

9) ಲೈಫ್‌ಸ್ಟೈಲ್‌ ಬದಲಾವಣೆಗಳು

ಮಿಲೇನಿಯಲ್‌ಗಳ ಜೀವನಶೈಲಿಯು (lifestyle) ಹಿಂದಿನ ಪೀಳಿಗೆಗಿಂತ ಬಹಳ ಭಿನ್ನ. ಮಿಲೇನಿಯಲ್ಸ್ ಜೀವನದಲ್ಲಿ ಐಷಾರಾಮಿತನ ಬಯಸುತ್ತಾರೆ. ಐಷಾರಾಮಿ ಕೆಟ್ಟದ್ದಲ್ಲ. ಆದರೆ ಕೆಲವು ಜೀವನಶೈಲಿ ಹೊಂದಾಣಿಕೆಗಳು ದೀರ್ಘಾವಧಿಯಲ್ಲಿ ಗಮನಾರ್ಹ ಉಳಿತಾಯವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ.

10) ಕ್ರೆಡಿಟ್ ಕಾರ್ಡ್ ಬಾಕಿ ಪಾವತಿ ತಪ್ಪಿಸಬೇಡಿ

ಕ್ರೆಡಿಟ್ ಕಾರ್ಡ್‌ಗಳು ಬಳಕೆದಾರರಿಗೆ ಪಾವತಿ (credit card payment) ಮುಂದೂಡಲು ಅವಕಾಶ ನೀಡುತ್ತವೆ. ಆದರೆ ಅಷ್ಟೇ ಪ್ರಮಾಣದ ಬಡ್ಡಿಯನ್ನೂ ಕಸಿಯುತ್ತವೆ. ನಿಗದಿತ ದಿನಾಂಕದಂದು ಬಾಕಿ ಕಟ್ಟದೆ ಮುಂದೂಡಿ ಅದೇ ಹಣವನ್ನು ಇತರ ವೆಚ್ಚಗಳಿಗೆ ಬಳಸುವುದು ಅಪಾಯಕಾರಿ. ನೀವು ಹಣ ಉಳಿಬಯಸಿದ್ದರೆ ಕ್ರೆಡಿಟ್ ಕಾರ್ಡ್ ಬಾಕಿ ಮೇಲೆ ಪೂರ್ಣ ಪಾವತಿ ಮಾಡಿ. ಇದರಿಂದ ಲಾಭವೆಂದರೆ, ಒಂದು, ನಿಮ್ಮ ಕ್ರೆಡಿಟ್ ಸ್ಕೋರ್‌ ಮೇಲೆ ಧನಾತ್ಮಕ ಪರಿಣಾಮ ಮತ್ತು ಎರಡನೆಯದು, ನಿಮ್ಮ ಆದಾಯ-ವೆಚ್ಚದ ಮೇಲೆ ಉತ್ತಮ ನಿಯಂತ್ರಣ.

ಇದನ್ನೂ ಓದಿ: Money Guide: ಅಕ್ಟೋಬರ್ 1ರ ಮೊದಲೇ ಇದೆಲ್ಲ ಮಾಡಿಕೊಳ್ಳಿ… ಇಲ್ಲದಿದ್ದರೆ ಹಣ ಕಳೆದುಕೊಳ್ಳುವಿರಿ!

Continue Reading

ಮನಿ ಗೈಡ್

Money Guide: ಅಕ್ಟೋಬರ್ 1ರ ಮೊದಲೇ ಇದೆಲ್ಲ ಮಾಡಿಕೊಳ್ಳಿ… ಇಲ್ಲದಿದ್ದರೆ ಹಣ ಕಳೆದುಕೊಳ್ಳುವಿರಿ!

ಆಧಾರ್ ಕಾರ್ಡ್ (Aadhar card) ವಿವರ ಬದಲಾವಣೆ, ಮ್ಯೂಚುವಲ್ ಫಂಡ್ (Mutual fund), ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗಳಿಗೆ ನಾಮಿನಿಗಳ ನೇಮಕ ಅಥವಾ ಬದಲಾವಣೆ, ಟಿಸಿಎಸ್ ನಿಯಮಗಳು, ರೂ. 2000 ನೋಟುಗಳ ಬದಲಾವಣೆ, ಮತ್ತು ಜನನ ಪ್ರಮಾಣಪತ್ರ ಕಡ್ಡಾಯ- ಈ 6 ದೊಡ್ಡ ಬದಲಾವಣೆಗಳು ಅಕ್ಟೋಬರ್ 1ರಿಂದ ನಿಮ್ಮ ಆರ್ಥಿಕ ಜೀವನದ ಮೇಲೆ ಪರಿಣಾಮ ಬೀರಲಿವೆ.

VISTARANEWS.COM


on

Edited by

money guide
Koo

ಬೆಂಗಳೂರು: ಅಕ್ಟೋಬರ್ 1ರಿಂದ ನಿಮ್ಮ ಹಣಕಾಸು ಸ್ಥಿತಿಗತಿಯ (Money Guide) ಮೇಲೆ ಪರಿಣಾಮ ಬೀರಬಲ್ಲ ಹಲವು ಸಂಗತಿಗಳು ವೈಯಕ್ತಿಕ ಹಣಕಾಸು (Personal Finance) ವಲಯದಲ್ಲಿ ನಡೆಯಲಿವೆ. ಹೀಗಾಗಿ ಅಕ್ಟೋಬರ್‌ 1ರ ಮೊದಲೇ ಇವುಗಳನ್ನು ನೀವು ಅಪ್‌ಡೇಟ್‌ ಮಾಡಿಕೊಳ್ಳಬೇಕಾದೀತು.

ಆಧಾರ್ ಕಾರ್ಡ್ (Aadhar card) ವಿವರ ಬದಲಾವಣೆ, ಮ್ಯೂಚುವಲ್ ಫಂಡ್ (Mutual fund), ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗಳಿಗೆ ನಾಮಿನಿಗಳ ನೇಮಕ ಅಥವಾ ಬದಲಾವಣೆ, ಟಿಸಿಎಸ್ ನಿಯಮಗಳು, ರೂ. 2000 ನೋಟುಗಳ ಬದಲಾವಣೆ, ಮತ್ತು ಜನನ ಪ್ರಮಾಣಪತ್ರ ಕಡ್ಡಾಯ- ಈ 6 ದೊಡ್ಡ ಬದಲಾವಣೆಗಳು ಅಕ್ಟೋಬರ್ 1ರಿಂದ ನಿಮ್ಮ ಆರ್ಥಿಕ ಜೀವನದ ಮೇಲೆ ಪರಿಣಾಮ ಬೀರಲಿವೆ. ಇವುಗಳ ವಿವರ ಕೆಳಗಿದೆ.

1) ಮ್ಯೂಚುಯಲ್ ಫಂಡ್‌ಗಳಿಗೆ ನಾಮಿನಿ

ಅಸ್ತಿತ್ವದಲ್ಲಿರುವ ಎಲ್ಲಾ ಮ್ಯೂಚುಯಲ್ ಫಂಡ್ ಫೋಲಿಯೊಗಳಿಗೆ (ಜಂಟಿ ಹೆಸರು ಹೊಂದಿರುವುದನ್ನೂ ಸೇರಿಸಿ) ನಾಮನಿರ್ದೇಶಿತರನ್ನು (ನಾಮಿನಿ) ಸೇರಿಸಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2023 ಎಂದು ನಿಗದಿಪಡಿಸಲಾಗಿದೆ. ವಿಫಲವಾದರೆ ಫೋಲಿಯೊಗಳನ್ನು ಡೆಬಿಟ್‌ಗಳಿಗಾಗಿ ಫ್ರೀಜ್ ಮಾಡಲಾಗುತ್ತದೆ.

2) ಇತ್ತೀಚಿನ TCS ನಿಯಮಗಳು

ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಿಮ್ಮ ಸಾಗರೋತ್ತರ ವೆಚ್ಚಗಳು ರೂ. 7 ಲಕ್ಷವನ್ನು ಮೀರಿದರೆ, ನೀವು ಅಕ್ಟೋಬರ್ 1ರಿಂದ 20 ಪ್ರತಿಶತ TCSಗೆ ಒಳಪಡುತ್ತೀರಿ. ಆದರೆ ವೈದ್ಯಕೀಯ ಅಥವಾ ಶೈಕ್ಷಣಿಕ ಉದ್ದೇಶಗಳಿಗಾಗಿ ಅಂತಹ ವೆಚ್ಚಗಳನ್ನು ಮಾಡಿದರೆ TCS ಅನ್ನು 5 ಶೇಕಡ ವಿಧಿಸಲಾಗುತ್ತದೆ. ಸಾಗರೋತ್ತರ ಶಿಕ್ಷಣಕ್ಕಾಗಿ ಸಾಲ ಪಡೆಯುವವರಿಗೆ 7 ಲಕ್ಷದ ನಂತರದ ಮೊತ್ತಕ್ಕೆ ಕೇವಲ 0.5 ಶೇಕಡಾ ಹೆಚ್ಚುವರಿ TCS ದರ ವಿಧಿಸಲಾಗುತ್ತದೆ. ಕೇಂದ್ರವು 2023-24ರ ಬಜೆಟ್‌ನಲ್ಲಿ ಸಾಗರೋತ್ತರ ಪ್ರವಾಸ ಪ್ಯಾಕೇಜ್‌ ಮತ್ತು LRS ಅಡಿಯಲ್ಲಿ ರವಾನೆಯಾಗುವ ಹಣಕ್ಕೆ (ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶ ಹೊರತುಪಡಿಸಿ) TCS ದರಗಳನ್ನು ಪ್ರಸ್ತುತದ ಶೇಕಡಾ 5ರಿಂದ ಶೇಕಡಾ 20ಕ್ಕೆ ಹೆಚ್ಚಿಸಿದೆ.

3) ಡಿಮ್ಯಾಟ್, ಟ್ರೇಡಿಂಗ್ ಖಾತೆಗಳಿಗೆ ನಾಮನಿರ್ದೇಶನ

ಅಸ್ತಿತ್ವದಲ್ಲಿರುವ ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆದಾರರಿಗೆ ಫಲಾನುಭವಿಗಳನ್ನು ನಾಮನಿರ್ದೇಶನ ಮಾಡುವ ಗಡುವು ಸೆಪ್ಟೆಂಬರ್ 30ರಂದು ಕೊನೆಗೊಳ್ಳುತ್ತದೆ.

4) ಉಳಿತಾಯ ಖಾತೆಗೆ ಆಧಾರ್

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ), ಅಂಚೆ ಕಚೇರಿ ಠೇವಣಿ ಮತ್ತು ಇತರ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದವರು ಈ ತಿಂಗಳ ಅಂತ್ಯದೊಳಗೆ ತಮ್ಮ ಆಧಾರ್ ಸಂಖ್ಯೆಯನ್ನು ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಸಲ್ಲಿಸಬೇಕು. ಸೆಪ್ಟೆಂಬರ್ 30ರಂದು ಗಡುವು ನೀಡಲಾಗಿದೆ. ಇಲ್ಲದಿದ್ದಲ್ಲಿ ಈ ಹೂಡಿಕೆಗಳನ್ನು ಫ್ರೀಜ್ ಮಾಡಬಹುದು.

5) ರೂ. 2000 ಕರೆನ್ಸಿ ನೋಟುಗಳ ವಿನಿಮಯ

ನಿಮ್ಮಲ್ಲಿ ಕೆಲವರು ಇನ್ನೂ ರೂ. 2000 ನೋಟುಗಳನ್ನು ಹೊಂದಿದ್ದರೆ, 30 ಸೆಪ್ಟೆಂಬರ್ 2023ರೊಳಗೆ ಖಂಡಿತವಾಗಿಯೂ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಿ. ರಿಸರ್ವ್ ಬ್ಯಾಂಕ್ ಸೆಪ್ಟೆಂಬರ್ 30 ಅನ್ನು ಈ ನೋಟುಗಳನ್ನು ಬದಲಾಯಿಸಲು ಗಡುವು ಎಂದು ನಿಗದಿಪಡಿಸಿದೆ.

6) ಸರ್ಕಾರಿ ಉದ್ಯೋಗಗಳಿಗೆ ಜನನ ಪ್ರಮಾಣ ಪತ್ರ ಕಡ್ಡಾಯ

ಹಣದ ವಿಷಯಗಳ ಹೊರತಾಗಿ, ಜನನ ಪ್ರಮಾಣಪತ್ರಗಳು ಮುಂದಿನ ತಿಂಗಳಿನಿಂದ ಆಧಾರ್ ಮತ್ತು ಸರ್ಕಾರಿ ಉದ್ಯೋಗಗಳಿಗೆ ಒಂದೇ ದಾಖಲೆಯಾಗಿ ಮಾರ್ಪಟ್ಟಿವೆ. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023 ಅಕ್ಟೋಬರ್ 1, 2023 ರಿಂದ ದೇಶದಲ್ಲಿ ಜಾರಿಗೆ ಬರಲಿದೆ.

ಇದನ್ನೂ ಓದಿ: Money Guide: ಅತ್ಯುತ್ತಮ ನಿವೃತ್ತ ಜೀವನಕ್ಕಾಗಿ ಟಾಪ್ 10 ಹಣ ಉಳಿತಾಯದ ಟಿಪ್ಸ್!

Continue Reading
Advertisement
dina bhavishya
ಪ್ರಮುಖ ಸುದ್ದಿ13 mins ago

Dina Bhavishya : ನಿಮಗೆ ಆಗದವರು ಪಿತೂರಿ ಮಾಡ್ಬಹುದು ಎಚ್ಚರ!

Sphoorti Salu
ಸುವಚನ13 mins ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

MLA BY Vijayendra
ಕರ್ನಾಟಕ5 hours ago

Cauvery Water Dispute: ಜನರ ಸಂಕಷ್ಟದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟ: ಬಿ.ವೈ.ವಿಜಯೇಂದ್ರ

jai shankar
ದೇಶ5 hours ago

UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!

Raja Three yakshagana
ಕಲೆ/ಸಾಹಿತ್ಯ5 hours ago

Yakshagana Show: ಅ.7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷನೂಪುರ ʼರಾಜಾ ತ್ರೀʼ ಪ್ರದರ್ಶನ

What did they wrong, Why they are murdered asked Parents Of Manipur Teens
ದೇಶ6 hours ago

Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ

Vaidyanath Co-operative sugar factory
ದೇಶ6 hours ago

GST Evasion: ಜಿಎಸ್‌ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!

Dale stain
ಕ್ರಿಕೆಟ್7 hours ago

Rohit Sharma : ರೋಹಿತ್ ಶರ್ಮಾ ಪಾಲಿನ ಭಯಾನಕ ಬೌಲರ್ ಯಾರು ಗೊತ್ತೇ? ಅವರೇ ಹೇಳಿದ್ದಾರೆ ಕೇಳಿ

MLA Dr N T Srinivas drives the foot and mouth disease vaccination campaign at Kudligi
ವಿಜಯನಗರ7 hours ago

Vijayanagara News: ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಚಾಲನೆ

Death News Prajna Basavanyappa passed away
ಶಿವಮೊಗ್ಗ7 hours ago

Death News: ಹಿರಿಯ ಸಾಹಿತಿ ಪ್ರಾಜ್ಞ ಬಸವಣ್ಯಪ್ಪ ನಿಧನ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

dina bhavishya
ಪ್ರಮುಖ ಸುದ್ದಿ13 mins ago

Dina Bhavishya : ನಿಮಗೆ ಆಗದವರು ಪಿತೂರಿ ಮಾಡ್ಬಹುದು ಎಚ್ಚರ!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ1 day ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ2 days ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ2 days ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ2 days ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ3 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

ಟ್ರೆಂಡಿಂಗ್‌