RBI repo rate hike| ಬೆಲೆ ಏರಿಕೆಯನ್ನು ಇಳಿಸಲು ಬಡ್ಡಿ ದರ ಹೆಚ್ಚಳದ ಅಸ್ತ್ರ ಪ್ರಯೋಗಿಸಿದ ಆರ್‌ಬಿಐ - Vistara News

ಪ್ರಮುಖ ಸುದ್ದಿ

RBI repo rate hike| ಬೆಲೆ ಏರಿಕೆಯನ್ನು ಇಳಿಸಲು ಬಡ್ಡಿ ದರ ಹೆಚ್ಚಳದ ಅಸ್ತ್ರ ಪ್ರಯೋಗಿಸಿದ ಆರ್‌ಬಿಐ

ಬೆಲೆ ಏರಿಕೆಯನ್ನು ಸುರಕ್ಷಿತ ಮಟ್ಟಕ್ಕೆ ಇಳಿಸುವ ನಿಟ್ಟಿನಲ್ಲಿ ಆರ್‌ಬಿಐ ತನ್ನ ಹಣಕಾಸು ನೀತಿಯಲ್ಲಿ ಆದ್ಯತೆ ನೀಡಿರುವುದು ಸ್ಪಷ್ಟ. ಆದರೆ ಇದಕ್ಕಾಗಿ ಬಡ್ಡಿ ದರ ಏರಿಕೆಯ ಬೆಲೆ ಕೊಡಬೇಕಾಗಿದೆ.

VISTARANEWS.COM


on

Shaktikanta Das
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ದೇಶವನ್ನು ತೀವ್ರವಾಗಿ ಕಾಡುತ್ತಿರುವ ಬೆಲೆ ಏರಿಕೆಯನ್ನು ನಿಯಂತ್ರಿಸಲು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ರೆಪೊ ದರದಲ್ಲಿ (RBI Repo rate hike) ಈ ವರ್ಷ ಮೂರು ಹಂತಗಳಲ್ಲಿ ಒಟ್ಟು ೧.೪೦% ಏರಿಸಿದೆ. ಹಣದುಬ್ಬರದ ನಿಯಂತ್ರಣವೇ ಇದರ ಪ್ರಮುಖ ಉದ್ದೇಶ.

ರೆಪೊ ದರದಲ್ಲಿ ಕಳೆದ ಮೇನಲ್ಲಿ ೦.೪೦% ಜೂನ್‌ನಲ್ಲಿ ೦.೫೦% ಹಾಗೂ ಇದೀಗ ಆಗಸ್ಟ್‌ನಲ್ಲಿ ೦.೫೦% ಏರಿಕೆ ಮಾಡಿದೆ. ಪರಿಷ್ಕೃತ ರೆಪೊ ದರ ೫.೪೦% ಆಗಿದೆ. ಅಂದರೆ ಕೋವಿಡ್‌ ಪೂರ್ವ ಮಟ್ಟಕ್ಕೆ ರೆಪೊ ದರ ಏರಿಕೆಯಾಗಿದೆ.

ಆರ್‌ಬಿಐನ ೨೦೨೨-೨೩ರ ಸಾಲಿನ ೪ನೇ ಹಣಕಾಸು ನೀತಿ ಪರಾಮರ್ಶೆಯ ಮುಖ್ಯಾಂಶಗಳು

  • ಆರ್‌ಬಿಐನ ಅಲ್ಪಾವಧಿಯ ಸಾಲದ ಬಡ್ಡಿ ದರದಲ್ಲಿ (ರೆಪೊ ದರ) ೦.೫೦% ಏರಿಕೆ, ಪರಿಷ್ಕೃತ ರೆಪೊ ದರ ೫.೪೦%, ಈ ವರ್ಷ ಸತತ ಮೂರನೇ ಬಾರಿಗೆ ಹೆಚ್ಚಳ
  • ಬೆಲೆ ಏರಿಕೆಯನ್ನು ಹತ್ತಿಕ್ಕಲು ರೆಪೊ ದರದಲ್ಲಿ ೨೦೨೨ರ ಮೇ ಬಳಿಕ ೧.೪೦% ಏರಿಕೆ.
  • ಈ ೨೦೨೨-೨೩ಕ್ಕೆ ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು ೭.೨%ಕ್ಕೆ ಉಳಿಸಿಕೊಳ್ಳಲಾಗಿದೆ.
  • ಜಿಡಿಪಿ ಮುನ್ನೋಟ: ಏಪ್ರಿಲ್-ಜೂನ್‌- ೧೬.೨%, ಜುಲೈ-ಸೆಪ್ಟೆಂಬರ್-೬.೨%, ಅಕ್ಟೋಬರ್-ಡಿಸೆಂಬರ್-‌೪.೧%, ಜನವರಿ-ಮಾರ್ಚ್:‌ ೪%
  • ೨೦೨೨-೨೩ಕ್ಕೆ ಚಿಲ್ಲರೆ ಹಣದುಬ್ಬರದ ಮುನ್ನೋಟ: ೬.೭%
  • ಹಣದುಬ್ಬರದ ಮುನ್ನೋಟ: ಜುಲೈ-ಸೆಪ್ಟೆಂಬರ್ :‌ ೭.೧%, ಅಕ್ಟೋಬರ್-ಡಿಸೆಂಬರ್-‌೬.೪%, ಜನವರಿ-ಮಾರ್ಚ್:‌ ೫%
  • ೨೦೨೨-೨೩ರಲ್ಲಿ ಆಗಸ್ಟ್‌ ೩ ರ ತನಕ ಅತಿ ಹೆಚ್ಚು ಸಾಂಸ್ಥಿಕ ಹೂಡಿಕೆಯ ಹೊರ ಹರಿವು ಆಗಿದೆ. ಅದರ ಮೊತ್ತ ೧೩.೩ ಶತಕೋಟಿ ಡಾಲರ್‌ (ಅಂದಾಜು 1.05 ಲಕ್ಷ ಕೋಟಿ ರೂ.)
  • ಹಣಕಾಸು ವಲಯದ ಬಂಡವಾಳ ಸ್ಥಿತಿಗತಿ ಉತ್ತಮವಾಗಿದೆ.
  • ಭಾರತದ ವಿದೇಶಿ ವಿನಿಮಯ ಸಂಗ್ರಹ ಸಮೃದ್ಧವಾಗಿದ್ದು, ಜಾಗತಿಕ ಬಿಕ್ಕಟ್ಟಿನ ಪರಿಣಾಮಗಳ ನಿರ್ವಹಣೆಗೆ ಸಹಕರಿಸುತ್ತಿದೆ.
  • ಹಣದುಬ್ಬರ ಹತ್ತಿಕ್ಕಲು ರಿಸರ್ವ್‌ ಬ್ಯಾಂಕ್‌ ಆದ್ಯತೆ ಕೊಟ್ಟಿದೆ.
  • ಡಾಲರ್‌ ಎದುರು ರೂಪಾಯಿ ಮೌಲ್ಯ ಈ ವರ್ಷ ಆಗಸ್ಟ್‌ ೪ರ ತನಕ ೪.೭% ಮೌಲ್ಯ ಇಳಿಕೆ ದಾಖಲಿಸಿದೆ.
  • ಅನಿವಾಸಿ ಭಾರತೀಯರು (ಎನ್‌ಆರ್‌ಐ) ಭಾರತ್‌ ಬಿಲ್‌ ಪೇಮೆಂಟ್‌ ಸಿಸ್ಟಮ್‌ ಮೂಲಕ (Bharat Bill Payment System) ಭಾರತದಲ್ಲಿನ ತಮ್ಮ ಕುಟುಂಬಗಳ ಬಿಲ್‌ ಪಾವತಿ, ಶಿಕ್ಷಣ ವೆಚ್ಚ ಭರಿಸಬಹುದು.
  • ಖಾದ್ಯ ತೈಲಗಳ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.
  • ಆರ್‌ ಬಿಐನ ಮುಂದಿನ ಹಣಕಾಸು ನೀತಿ ಪರಾಮರ್ಶೆ ೨೦೨೨ರ ಸೆಪ್ಟೆಂಬರ್‌ ೨೮-೩೦ಕ್ಕೆ ನಡೆಯಲಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Delhi excise policy Case: ಆಪ್‌ಗೆ 25 ಕೋಟಿ ಲಂಚ ನೀಡಲು ಒತ್ತಾಯಿಸಿದ್ದ ಕವಿತಾ: ಸಿಬಿಐ ಆರೋಪ

Delhi excise policy Case: ಹೊಸ ನೀತಿಯಡಿ ಅರಬಿಂದೋ ಫಾರ್ಮಾ ಸಂಸ್ಥೆಗೆ ಮಂಜೂರು ಮಾಡಿರುವ ಐದು ಚಿಲ್ಲರೆ ವಲಯಗಳಿಗೆ ಸಂಬಂಧಿಸಿ ಹಣ ನೀಡುವಂತೆ ಆಕೆ ಒತ್ತಾಯಿಸಿದ್ದಳು. ಹಣ ಪಾವತಿ ಮಾಡದಿದ್ದಲ್ಲಿ ಅಬಕಾರಿ ನೀತಿಯಡಿ (Delhi excise policy) ತೆಲಂಗಾಣ ಮತ್ತು ದೆಹಲಿಯಲ್ಲಿ ಸಂಸ್ಥೆಯ ವ್ಯವಹಾರಕ್ಕೆ ಹಾನಿಯಾಗುತ್ತದೆ ಎಂದು ಕವಿತಾ ರೆಡ್ಡಿ ಬೆದರಿಸಿದ್ದರು ಎಂದು ಸಿಬಿಐ ಆರೋಪಿಸಿದೆ.

VISTARANEWS.COM


on

Posters with BL Santosh Photo Called As wanted criminal seen at Hyderabad
Koo

ಹೊಸದಿಲ್ಲಿ: ದೆಹಲಿ ಸರ್ಕಾರದ ಅಬಕಾರಿ ನೀತಿಯಡಿ (Delhi excise policy) ಮಾಡಿಕೊಡಲಾದ ಲಾಭಗಳಿಗಾಗಿ ಆಮ್ ಆದ್ಮಿ ಪಕ್ಷಕ್ಕೆ (Aam Admi party) 25 ಕೋಟಿ ರೂಪಾಯಿ ನೀಡುವಂತೆ ಅರಬಿಂದೋ ಫಾರ್ಮಾ ಪ್ರಮೋಟರ್ ಶರತ್ ಚಂದ್ರ ರೆಡ್ಡಿ ಅವರಿಗೆ ಬಿಆರ್‌ಎಸ್ (BRS) ನಾಯಕಿ ಕೆ.ಕವಿತಾ (K Kavitha) ಬೆದರಿಕೆ ಹಾಕಿದ್ದರು ಎಂದು ಸಿಬಿಐ (CBI) ಶುಕ್ರವಾರ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.

ಹೊಸ ನೀತಿಯಡಿ ಅರಬಿಂದೋ ಫಾರ್ಮಾ ಸಂಸ್ಥೆಗೆ ಮಂಜೂರು ಮಾಡಿರುವ ಐದು ಚಿಲ್ಲರೆ ವಲಯಗಳಿಗೆ ಸಂಬಂಧಿಸಿ ಹಣ ನೀಡುವಂತೆ ಆಕೆ ಒತ್ತಾಯಿಸಿದ್ದಳು. ಹಣ ಪಾವತಿ ಮಾಡದಿದ್ದಲ್ಲಿ ಅಬಕಾರಿ ನೀತಿಯಡಿ (Delhi excise policy) ತೆಲಂಗಾಣ ಮತ್ತು ದೆಹಲಿಯಲ್ಲಿ ಸಂಸ್ಥೆಯ ವ್ಯವಹಾರಕ್ಕೆ ಹಾನಿಯಾಗುತ್ತದೆ ಎಂದು ಕವಿತಾ ರೆಡ್ಡಿ ಬೆದರಿಸಿದ್ದರು ಎಂದು ಸಿಬಿಐ ಆರೋಪಿಸಿದೆ.

ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಪಿಎಂಎಲ್‌ಎ ಪ್ರಕರಣದಡಿ ಆರೋಪಿಯಾಗಿದ್ದ ರೆಡ್ಡಿ, ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿದ್ದರು. ಅವರ ವಿರುದ್ಧ ಸಿಬಿಐ ಇನ್ನೂ ಆರೋಪ ಪಟ್ಟಿ ಸಲ್ಲಿಸಿಲ್ಲ. ಕವಿತಾ ಅವರನ್ನು ಕಸ್ಟಡಿ ವಿಚಾರಣೆಗೆ ಒಳಪಡಿಸಲು ಕೋರಿದ ಸಿಬಿಐ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರನ್ನು ಕೋರಿದೆ. ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿರುವ ಕವಿತಾ ಅವರ ಒತ್ತಾಯ ಮತ್ತು ಭರವಸೆಯಿಂದಲೇ ರೆಡ್ಡಿ ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ವ್ಯವಹಾರದಲ್ಲಿ ಭಾಗವಹಿಸಿದ್ದಾರೆ ಎಂದು ಸಿಬಿಐ ದೂರಿದೆ.

ದೆಹಲಿ ಸರ್ಕಾರದಲ್ಲಿ ತನಗೆ ಸಂಪರ್ಕವಿದೆ ಮತ್ತು ಹೊಸ ಅಬಕಾರಿ ನೀತಿಯ ಅಡಿಯಲ್ಲಿ ದೆಹಲಿಯಲ್ಲಿ ಮದ್ಯದ ವ್ಯವಹಾರದಲ್ಲಿ ರೆಡ್ಡಿಗೆ ಸಹಾಯ ಮಾಡುವುದಾಗಿ ಕವಿತಾ ಭರವಸೆ ನೀಡಿದ್ದರು ಎನ್ನಲಾಗಿದೆ. “ಮದ್ಯದ ವ್ಯಾಪಾರವನ್ನು ಪಡೆಯಲು ಸಗಟು ವ್ಯಾಪಾರಕ್ಕೆ 25 ಕೋಟಿ ರೂಪಾಯಿ ಮತ್ತು ಪ್ರತಿ ಚಿಲ್ಲರೆ ವಲಯಕ್ಕೆ 5 ಕೋಟಿ ರೂಪಾಯಿಗಳ ಮುಂಗಡ ಹಣದ ಪಾವತಿಯನ್ನು ಆಮ್ ಆದ್ಮಿ ಪಕ್ಷಕ್ಕೆ ಮಾಡಲಾಗುವುದು ಎಂದು ಕವಿತಾ, ಶರತ್ ಚಂದ್ರ ರೆಡ್ಡಿಗೆ ತಿಳಿಸಿದ್ದರು. ಆಕೆಯ ಸಹಚರರಾದ ಅರುಣ್ ಆರ್. ಪಿಳ್ಳೈ ಮತ್ತು ಅಭಿಷೇಕ್ ಬೋಯಿನ್ಪಲ್ಲಿ ಅವರಿಗೆ ಇದನ್ನು ಪಾವತಿಸಲಾಗಿದೆ. ಅವರು ಅರವಿಂದ್ ಕೇಜ್ರಿವಾಲ್ ಅವರ ಪ್ರತಿನಿಧಿಯಾಗಿದ್ದ ವಿಜಯ್ ನಾಯರ್ ಅವರೊಂದಿಗೆ ಸಮನ್ವಯ ಸಾಧಿಸಿದ್ದರು,” ಎಂದು ಸಿಬಿಐ ಆರೋಪಿಸಿದೆ.

ಇದಕ್ಕೂ ಮುನ್ನ ದೆಹಲಿ ನ್ಯಾಯಾಲಯವು ಕೆ. ಕವಿತಾ ಅವರನ್ನು ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಏಪ್ರಿಲ್ 15ರವರೆಗೆ ಸಿಬಿಐ ಕಸ್ಟಡಿಗೆ ಕಳುಹಿಸಿದೆ. ಮಾರ್ಚ್ ಮತ್ತು ಮೇ 2021ರಲ್ಲಿ, ಅಬಕಾರಿ ನೀತಿಯನ್ನು ರೂಪಿಸುವಾಗ, ಕವಿತಾ ಅವರ ಸಹಚರರಾದ ಅರುಣ್ ಆರ್ ಪಿಳ್ಳೈ, ಅಭಿಷೇಕ್ ಬೋನಪಲ್ಲಿ ಮತ್ತು ಬುಚ್ಚಿಬಾಬು ಗೋರಂಟ್ಲಾ ಅವರು ದೆಹಲಿಯ ಹೋಟೆಲ್ ಒಬೆರಾಯ್‌ನಲ್ಲಿ ಡೀಲ್‌ಗಳನ್ನು ಕುದುರಿಸಿದ್ದರು.

2021ರ ಜುಲೈನಲ್ಲಿ 7 ಕೋಟಿ ಮತ್ತು 2021ರ ನವೆಂಬರ್ ಮಧ್ಯದಲ್ಲಿ ಏಳು ಕೋಟಿ ರೂ.ಗಳನ್ನು ಬ್ಯಾಂಕ್ ವಹಿವಾಟಿನ ಮೂಲಕ ಆಕೆಗೆ ಒಟ್ಟು 14 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ ಎಂದು ಸಿಬಿಐ ಹೇಳಿದೆ. 2021ರ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ರೆಡ್ಡಿ ಅವರಿಗೆ ಮಂಜೂರು ಮಾಡಿದ ಐದು ಚಿಲ್ಲರೆ ವಲಯಗಳಿಗೆ ಪ್ರತಿ ವಲಯಕ್ಕೆ ಐದು ಕೋಟಿ ರೂಪಾಯಿಗಳಂತೆ 25 ಕೋಟಿ ರೂಪಾಯಿಗಳನ್ನು ಪಾವತಿಸುವಂತೆ ಕೇಳಿಕೊಂಡರು ಕವಿತಾ ಆಗ್ರಹಿಸಿದತರು ಸಿಬಿಐ ಆರೋಪಿಸಿದೆ.

ಇದನ್ನೂ ಓದಿ: K Kavitha : ತಿಹಾರ್​ ಜೈಲಿನಿಂದಲೇ ಕವಿತಾ ಅರೆಸ್ಟ್​​; ಇದೀಗ ಸಿಬಿಐ ಸರದಿ

Continue Reading

ಪ್ರಮುಖ ಸುದ್ದಿ

Karave Meeting: ಹೊಸ ಪ್ರಾದೇಶಿಕ ಪಕ್ಷದ ಸುಳಿವು ನೀಡಿದ ಕರವೇ ನಾರಾಯಣಗೌಡ

Karave Meeting: ಬೀದರ್‌ನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಕರವೇ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರ ಸಭೆ ನಡೆಯಿತು. ಈ ವೇಳೆ ಸಂಘಟನೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಅವರು ಮಾತನಾಡಿದ್ದು, ರಾಜ್ಯದಲ್ಲಿ ಅಪ್ಪಟ ಕನ್ನಡಿಗರ ಪಕ್ಷ ಇಲ್ಲ, ನಮಗೆ ಒಂದು ಪಕ್ಷ ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Karave Meeting
Koo

ಬೀದರ್: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ. ಭಾಲ್ಕಿಯಲ್ಲಿ ಮರಾಠಿಗರ ಬೃಹತ್‌ ಸಮಾವೇಶ ನಡೆದ ಬೆನ್ನಲ್ಲೇ ಆ್ಯಕ್ಟೀವ್ ಆಗಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು, ಬೀದರ್‌ನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಕರವೇ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರ ಸಭೆ ನಡೆಸಿದ್ದಾರೆ. ಈ ವೇಳೆ ಎಂಇಎಸ್‌ ವಿರುದ್ಧ ಕಿಡಿ ಕಾರಿರುವ ಅವರು, ಕನ್ನಡ ನಾಡು, ನುಡಿ, ಜಲ ರಕ್ಷಣೆಗಾಗಿ ಹೊಸ ಪ್ರಾದೇಶಿಕ ಪಕ್ಷ ಕಟ್ಟುವ ಸುಳಿವು ನೀಡಿದ್ದಾರೆ.

ಗಡಿ ಭಾಗದಲ್ಲಿ ಕನ್ನಡ ವಿರೋಧಿಗಳ ಸದ್ದಡಗಿಸಲು ಟಿ.ಎ. ನಾರಾಯಣಗೌಡ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರವೇ ಸದಸ್ಯತ್ವ ಅಭಿಯಾನ ಕೂಡ ಕೈಗೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ನಾರಾಯಣಗೌಡರು, ಬೀದರ್‌ನಲ್ಲಿ ನಮ್ಮ ಕಾರ್ಯಕರ್ತರಿಗೆ ಕೊರತೆಯಿಲ್ಲ. ಬೀದರ್‌ನಿಂದ ಚಾಮರಾಜನಗರವರೆಗೆ ನಮ್ಮ ಕಾರ್ಯಕರ್ತರು ಗಟ್ಟಿಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಪ್ಪಟ ಕನ್ನಡಿಗರ ಪಕ್ಷ ಇಲ್ಲ, ನಮಗೆ ಒಂದು ಪಕ್ಷ ಬೇಕು. ಅಪ್ಪಟ ಕನ್ನಡಿಗರ ಪಕ್ಷ ಕಟ್ಟುವುದು ಕರವೇಯಿಂದ ಮಾತ್ರ ಸಾಧ್ಯ ಎಂದು ಹೇಳುವ ಮೂಲಕ ಹೊಸ ಪ್ರಾದೇಶಿಕ ಪಕ್ಷದ ಸ್ಥಾಪನೆ ಸುಳಿವು ನೀಡಿದರು.

ಇದನ್ನೂ ಓದಿ | ಮೈಸೂರಲ್ಲಿ ಸಿದ್ದುಗೆ ಟಕ್ಕರ್‌, ಕರಾವಳಿಯಲ್ಲಿ ಅಲೆ; ನಾಳೆ ಕರ್ನಾಟಕದಲ್ಲಿ ಮೋದಿ ಹವಾ, ಇಲ್ಲಿದೆ ವಿವರ

ಎಂಇಎಸ್ ಕಥೆ ಮುಗಿದು ಹೋಯಿತು, ಅವರ ಕಥೆ ಮುಗಿಸಿಬಿಟ್ಟಿದ್ದೇವೆ. ಮೊದಲು 7 ಶಾಸಕರು ಇದ್ದರು, ಇವಾಗ ಅವರ ಕೈಯಲ್ಲಿ ಏನೂ ಇಲ್ಲ. ರಾಜ್ಯದ ಯಾವುದೇ ಭಾಗದಲ್ಲಿ ಅವರಿಗೆ ತಲೆ ಎತ್ತಲು ಬಿಡಲ್ಲ ಎಂದು ಹೇಳಿದರು.

‘ಭಾರತ್‌ ಮಾತಾ ಕಿ ಜೈ’ ಬಿಜೆಪಿ ಅಪ್ಪನ ಮನೆ ಆಸ್ತಿನಾ? ಲಕ್ಷ್ಮಣ ಸವದಿ ಆಕ್ರೋಶ

Laxman Savadi
Lok Sabha Election 2024: Is Bharat Mata Ki Jai Property Of BJP; Laxman Savadi Taunts In Kalaburagi

ಕಲಬುರಗಿ: ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ ಅವರು ಭಾರತ್‌ ಮಾತಾ ಕಿ ಜೈ (Bharat Mata Ki Jai) ಎಂಬುದಾಗಿ ಕೂಗುವ ಮೊದಲು “ಖರ್ಗೆಯವರು ತಪ್ಪು ತಿಳಿದುಕೊಳ್ಳಬಾರದು” ಎಂದು ಹೇಳಿರುವುದು ಈಗ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. “ಕಾಂಗ್ರೆಸ್‌ನಲ್ಲಿ (Congress) ಭಾರತ್‌ ಮಾತಾ ಕಿ ಜೈ ಎಂದು ಕೂಗಲು ಕೂಡ ಅನುಮತಿ ಪಡೆಯಬೇಕಾದ ದುಸ್ಥಿತಿ ಇದೆ” ಎಂದು ಬಿಜೆಪಿ ಟೀಕಿಸಿದ ಬೆನ್ನಲ್ಲೇ ಲಕ್ಷ್ಮಣ ಸವದಿ (Laxman Savadi) ತಿರುಗೇಟು ನೀಡಿದ್ದಾರೆ. “ಭಾರತ್‌ ಮಾತಾ ಕಿ ಜೈ ಎಂಬ ಘೋಷಣೆಯು ಬಿಜೆಪಿ (BJP) ಮನೆ ಆಸ್ತಿನಾ” ಎಂದು ಪ್ರಶ್ನಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, “ವಿನಾಶಕಾಲೆ ವಿಪರೀತ ಬುದ್ಧಿ ಎಂಬಂತಹ ಸ್ಥಿತಿ ಬಿಜೆಪಿಗೆ ಬಂದಿದೆ. ಭಾರತ್‌ ಮಾತಾ ಕಿ ಜೈ ಅನ್ನೋದು ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು, ಅಭಿಮಾನ ಹಾಗೂ ದೇಶಭಕ್ತಿಯಾಗಿದೆ. ಕಾಂಗ್ರೆಸ್‌ನಲ್ಲಿ ಕೂಡ ಭಾರತ್‌ ಮಾತಾ ಕಿ ಜೈ ಎನ್ನುತ್ತೇವೆ. ದೇಶಭಕ್ತಿ, ಘೋಷಣೆಗಳು ಬಿಜೆಪಿಯವರಿಗೆ ಗುತ್ತಿಗೆ ಕೊಡಲಾಗಿದೆಯೇ? ವಂದೇ ಮಾತರಂ ಅನ್ನುತ್ತೇವೆ, ಜೈ ಹಿಂದು ಕೂಡ ಎನ್ನುತ್ತೇವೆ. ನಮ್ಮಲ್ಲಿ ಇವರಿಗಿಂತ ದೇಶಭಕ್ತಿ ಹೆಚ್ಚಿದೆ” ಎಂದು ತಿರುಗೇಟು ನೀಡಿದರು.

“ಬಿಜೆಪಿಯವರ ದೇಶಭಕ್ತಿಯು ತೋರಿಕೆಗೆ ಸೀಮಿತವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೆಸ್.‌ 400ಕ್ಕೂ ಅಧಿಕ ಸೀಟು ಗೆದ್ದರೆ ಸಂವಿಧಾನ ಬದಲಾಯಿಸುತ್ತೇವೆ ಎಂಬುದಾಗಿ ಹೇಳುತ್ತಾರೆ. ಹಾಗಾಗಿ, ಬಿಜೆಪಿಯವರೇ ನಿಜವಾದ ದೇಶದ್ರೋಹಿಗಳು. ಸಂವಿಧಾನವನ್ನು ವಿರೋಧಿಸುತ್ತಾರೆ, ಜಾತಿ ವಿರೋಧ ಮಾಡುತ್ತಾರೆ. ಇವರ ಮನಸ್ಥಿತಿಯಿಂದಾಗಿ ದೇಶಕ್ಕೆ ಹಾನಿಯಾಗುತ್ತಿದೆ” ಎಂದು ಹೇಳಿದರು.

ಇದನ್ನೂ ಓದಿ: ‘ನನಗೆ ಒಳ್ಳೇ ದಿನಗಳು ಬರುತ್ತವೆ’ಎಂದ ಲಕ್ಷ್ಮಣ್​ ಸವದಿ; ಸಿದ್ದರಾಮಯ್ಯ ಎರಡೂವರೆ ವರ್ಷಕ್ಕೆ ಮುಖ್ಯಮಂತ್ರಿಯಾ?

ನನ್ನ ಹೆಸರೇ ಲಕ್ಷ್ಮಣ, ಜೈ ಶ್ರೀರಾಮ್‌ ಎನ್ನುವೆ

“ದೇಶದಲ್ಲಿ ಘೋಷಣೆ ಕೂಗಲು ಬಿಜೆಪಿಯವರ ಪರ್ಮಿಷನ್‌ ತೆಗೆದುಕೊಳ್ಳಬೇಕಾ? ಅದೇ ಅವರ ಅಪ್ಪನ ಮನೆ ಆಸ್ತಿಯೇ? ನನ್ನ ಹೆಸರೇ ಲಕ್ಷ್ಮಣ. ರಾಮನ ತಮ್ಮನ ಹೆಸರು ಲಕ್ಷ್ಮಣ. ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುತ್ತೇವೆ. ಭಾರತ್‌ ಮಾತಾ ಕಿ ಜೈ ಎನ್ನುತ್ತೇವೆ. ದೇಶಭಕ್ತಿಯ ಪಾಠವನ್ನು ಬಿಜೆಪಿಯವರಿಂದ ಕಲಿಯಬೇಕಿಲ್ಲ” ಎಂದರು. ರಾಮೇಶ್ವರಂ ಕೆಫೆ ಸ್ಫೋಟದ ಕುರಿತು ಮಾತನಾಡಿದ ಲಕ್ಷ್ಮಣ ಸವದಿ, “ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಮಾಡುವುದು ಬಿಜೆಪಿಯವರ ಕೆಲಸ. ಇಂತ ಕೀಳು ರಾಜಕೀಯದಿಂದಾಗಿಯೇ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲ್ಲ” ಎಂದು ವಾಗ್ದಾಳಿ ನಡೆಸಿದರು.

Continue Reading

ಕರ್ನಾಟಕ

Siddaramaiah: ಯಾವ ಮುಖ ಇಟ್ಕೊಂಡು ಮೋದಿ ಮತ ಕೇಳ್ತಾರೆ? ಸಿದ್ದರಾಮಯ್ಯ ವಾಗ್ದಾಳಿ

Siddaramaiah: ಬಿಜೆಪಿಗೆ ಮೈಸೂರು-ಕೊಡಗಿನ ಜನತೆ ಅವಕಾಶ ಕೊಟ್ಟಾಗ ಬಿಜೆಪಿ ಸಂಸದರು, ಶಾಸಕರು, ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಲಿಲ್ಲ. ಈಗ ಕೇವಲ ಅಭ್ಯರ್ಥಿಯನ್ನು ಬದಲಾಯಿಸಿ ಮತ ಕೇಳುತ್ತಿದ್ದಾರೆ. ಇದು ಹೊಣೆಗೇಡಿತನ ಅಲ್ಲವೇ ಎಂದು ಪ್ರಶ್ನಿಸಿದರು. ಆ ಮೂಲಕ ಸಂಸದ ಪ್ರತಾಪ್‌ ಸಿಂಹ ಅವರಿಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟರು.

VISTARANEWS.COM


on

Siddaramaiah
Koo

ಮೈಸೂರು: ಲೋಕಸಭೆ ಚುನಾವಣೆ (Lok Sabha Election) ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ (ಏಪ್ರಿಲ್‌ 14) ಮೈಸೂರಿಗೆ ಆಗಮಿಸುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ದೇಶದ ಜನರಿಗೆ ಸತತವಾಗಿ ಸುಳ್ಳು ಹೇಳಿದ, ನೀಡಿದ ಭರವಸೆಗಳನ್ನು ಈಡೇರಿಸದ ನರೇಂದ್ರ ಮೋದಿ ಅವರು ಯಾವ ಮುಖ ಇಟ್ಟುಕೊಂಡು ಮತ ಕೇಳಲು ಕರ್ನಾಟಕಕ್ಕೆ ಬರುತ್ತಾರೆ” ಎಂದು ಟೀಕಿಸಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕೃಷ್ಣರಾಜದಲ್ಲಿ ನಡೆದ ಜನಧ್ವನಿ-2 ಯಾತ್ರೆಯ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಸುಳ್ಳು ಹೇಳಿದರೆ ಜನ ಮೋದಿ ಮೋದಿ ಎನ್ನುತ್ತಾರೆ ಎನ್ನುವುದು ಅವರಿಗೆ ಗೊತ್ತಾಗಿದೆ. ಹೀಗಾಗಿ ಅವರು ಸುಳ್ಳು ಹೇಳುವುದನ್ನು ಮತ್ತಷ್ಟು ಹೆಚ್ಚಿಸಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

“ಪ್ರತಿಯೊಬ್ಬ ಭಾರತೀಯರ ಖಾತೆಗೆ 15 ಲಕ್ಷ ರೂ. ಹಾಕ್ತೀನಿ ಅಂದ್ರು, ವಿದೇಶದಿಂದ ಕಪ್ಪು ಹಣ ತರ್ತೀನಿ ಅಂದ್ರು, ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದ್ರು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರು, ಡೀಸೆಲ್- ಪೆಟ್ರೋಲ್‌, ಗ್ಯಾಸ್‌, ರಸಗೊಬ್ಬರದ ಬೆಲೆ ಕಡಿಮೆ ಮಾಡ್ತೀವಿ ಅಂದ್ರು, ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಿಸ್ತೀವಿ ಅಂದರು. ಹೀಗೆ ರಾಶಿ ರಾಶಿ ಸುಳ್ಳುಗಳ ಮೂಲಕವೇ ಭಾರತೀಯರನ್ನು ನಿರಂತರವಾಗಿ ಬಕ್ರಾ ಮಾಡಿ ವಂಚಿಸಿದರು. ಹತ್ತು ವರ್ಷಗಳ ಕಾಲ ನಿಮ್ಮನ್ನು ವಂಚಿಸಿದವರಿಗೇ ಮತ ಹಾಕೋಕೆ ನಿಮಗೆ ಮನಸ್ಸು ಬರುತ್ತದೆಯೇ” ಎಂಬುದಾಗಿ ಪ್ರಶ್ನಿಸಿದರು.

“ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಮಾಡಿದವರು ಯಾರು, ಮಹಿಳಾ-ಮಕ್ಕಳ ಆಸ್ಪತ್ರೆ ಮಾಡಿದವರು ಯಾರು, ಶಾಲೆ-ಹಾಸ್ಟೆಲ್ ಗಳನ್ನು ಮಾಡಿದವರು ಯಾರು, ಮೈಸೂರಿನ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಕೊಟ್ಟ ಸರ್ಕಾರ ಯಾವುದು ಎನ್ನುವುದು ಮೈಸೂರಿನ ಪ್ರತಿ ಪ್ರಜ್ಞಾವಂತರಿಗೂ ಗೊತ್ತು. ನಾವು ಮಾಡಿದಷ್ಟು ಕೆಲಸವನ್ನು ಮಾಡಲು ಬಿಜೆಪಿಗೂ ಅವಕಾಶ ಇತ್ತು. ಜನ ಅವಕಾಶ ಕೊಟ್ಟಿದ್ದರು. ಆದರೆ ಈ ಅವಕಾಶ ಸಿಕ್ಕಾಗ ಬಿಜೆಪಿ ಸಂಸದರು ಕೆಲಸ ಮಾಡಲಿಲ್ಲ. ಹೀಗಾಗಿ ನುಡಿದಂತೆ ನಡೆದು ಅಭಿವೃದ್ಧಿಯ ದಿಕ್ಕಲ್ಲಿ ಮುನ್ನುಗ್ಗುತ್ತಿರುವ ನಮಗೆ ಅವಕಾಶ ಕೊಡಿ. ಸಾಮಾನ್ಯ ಕಾರ್ಯಕರ್ತರಾಗಿ ಹೋರಾಟ, ಪ್ರತಿಭಟನೆಗಳಿಂದ ಬೆಳೆದ ಎಂ.ಲಕ್ಷ್ಮಣ್ ಅವರನ್ನು ಈ ಬಾರಿ ಗೆಲ್ಲಿಸಿ” ಎಂದು ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಬಡವರು, ದುಡಿಯವ ವರ್ಗಗಳ ಪರವಾಗಿ, ಮಹಿಳೆಯರ ಪರವಾಗಿ ಮಾಡಿದ ಒಂದೇ ಒಂದು ಕೆಲಸ ಯಾರಿಗಾದರೂ ಗೊತ್ತಾ ಎಂದು ಪ್ರಶ್ನಿಸಿದ ಅವರು, ಕೇವಲ ಸುಳ್ಳುಗಳನ್ನು ಸೃಷ್ಟಿಸಿ, ಭಾವನಾತ್ಮಕವಾಗಿ ಕೆರಳಿಸದವರಿಗೆ ಮತ ಹಾಕಿದರೆ ನೀವು ಮೋಸಹೋದಂತೆ ತಾನೇ ಎಂದು ಪ್ರಶ್ನಿಸಿದರು.

ಮತ ಕೇಳೋದಕ್ಕೆ ಮೋದಿಯವರಿಗೆ ಮುಖ ಇದೆಯಾ?

ನಾಳೆ ಮೈಸೂರಿಗೆ ಬರುತ್ತಿರುವ ಮೋದಿಯವರು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆ? ಮೋದಿಯವರಾಗಲೀ, ಇವರ ಸಂಸದರಾಗಲೀ ಮೈಸೂರಿಗೆ ಏನು ಕೆಲಸ ಮಾಡಿದ್ದಾರೆ ತೋರಿಸಲಿ. ಬರೀ ಸುಳ್ಳುಗಳ ಸವಾರಿ ಮಾಡಿಕೊಂಡು 10 ವರ್ಷ ಮುಗಿಸಿದರು. ಹೀಗಿದ್ದಾಗ ಮೋದಿಯವರು ಯಾವ ಮುಖ ಹೊತ್ಕೊಂಡು ರಾಜ್ಯಕ್ಕೆ ಬರ್ತಾರೆ? ಯಾವ ಮುಖ ಹೊತ್ತಕೊಂಡು ಮತ ಕೇಳ್ತಾರೆ” ಎಂದು ಪ್ರಶ್ನಿಸಿದರು.‌

“ಸ್ವಾತಂತ್ರ್ಯಾ ನಂತರ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ಕಾಂಗ್ರೆಸ್. ಬಡತನ ನಿರ್ಮೂಲನೆಗೆ ಇಂದಿರಾಗಾಂಧಿಯವರು 20 ಅಂಶಗಳ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದರು. ಕೇವಲ ಅತ್ಯಂತ ಶ್ರೀಮಂತರಿಗಾಗಿ ಕೆಲಸ ಮಾಡಿದ ಮೋದಿ ಬಡವರಿಗಾಗಿ, ಬಡತನ ಹೋಗಲಾಡಿಸಲು ಒಂದಂಶದ ಕಾರ್ಯಕ್ರಮವನ್ನೂ ಏಕೆ ಕೊಡಲಿಲ್ಲ? ಇಂತಹ ಬಿಜೆಪಿಗೆ ಒಂದೂ ಮತ ಹಾಕಬೇಡಿ” ಎಂದು ಕರೆ ನೀಡಿದರು.

ಇದನ್ನೂ ಓದಿ: ಇಂಡಿಯಾ ಒಕ್ಕೂಟಕ್ಕೆ ಬಹುಮತ ಸಿಗಲ್ಲ ಎಂದ ಸಿದ್ದರಾಮಯ್ಯ; ಚುನಾವಣೆ ಮೊದಲೇ ಸೋಲೊಪ್ಪಿಗೆ?

Continue Reading

ವಿದೇಶ

Terror Attack: ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ; 11 ಜನರನ್ನು ಅಪಹರಿಸಿ ಬರ್ಬರ ಹತ್ಯೆ

Terror Attack: ಪಾಕಿಸ್ತಾನದ ಗ್ವಾದರ್‌ನಲ್ಲಿ ಕಳೆದ ತಿಂಗಳು ನಡೆದ ಉಗ್ರರ ದಾಳಿಯಲ್ಲಿ 17 ಜನ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಈಗ ಬಲೂಚಿಸ್ತಾನದಲ್ಲೂ ಉಗ್ರರ ದಾಳಿ ನಡೆದಿದ್ದು, 11 ಮಂದಿ ಹತರಾಗಿದ್ದಾರೆ. ಪಾಕಿಸ್ತಾನ ಹಾಗೂ ತಾಲಿಬಾನ್‌ ಮಧ್ಯೆ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಇತ್ತೀಚಿನ ದಾಳಿಗಳ ಕುರಿತು ತಾಲಿಬಾನಿಗಳ ಮೇಲೆ ಪಾಕ್‌ ಆರೋಪ ಮಾಡಿದೆ. ಆದರೆ, ಈಗ ಮಾಡಿದ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.

VISTARANEWS.COM


on

Terror Attack
Koo

ಇಸ್ಲಾಮಾಬಾದ್: ಉಗ್ರರಿಗೆ ಹಣಕಾಸು ನೆರವಿನ ಜತೆಗೆ ಅವರಿಗೆ ಆಶ್ರಯವನ್ನೂ ಕೊಡುತ್ತಿದ್ದ ಪಾಕಿಸ್ತಾನಕ್ಕೆ (Pakistan) ಈಗ ಉಗ್ರರೇ ಮುಳುವಾಗಿದ್ದಾರೆ. ಉಗ್ರ ಪೋಷಣೆಯಿಂದಲೇ ಪಾಕಿಸ್ತಾನವು ಜಾಗತಿಕವಾಗಿ ಹಣಕಾಸು ನೆರವು ಸಿಗದಂತಹ ಪರಿಸ್ಥಿತಿಗೆ ತಲುಪಿದೆ. ಇಷ್ಟಾದರೂ, ಪಾಕಿಸ್ತಾನದಲ್ಲಿ ಉಗ್ರರ (Terrorists) ಅಟ್ಟಹಾಸ ನಿಲ್ಲುತ್ತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಉಗ್ರರು 11 ಮಂದಿಯನ್ನು ಅಪಹರಿಸಿ, ಅವರನ್ನು ಭೀಕರವಾಗಿ (Terror Attack) ಹತ್ಯೆ ಮಾಡಿದ್ದಾರೆ.

ಬಲೂಚಿಸ್ತಾನದ ಕ್ವೆಟ್ಟಾದಿಂದ ತಫ್ತಾನ್‌ಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ವಾಹನವೊಂದು ತೆರಳುತ್ತಿತ್ತು. ಇದೇ ವೇಳೆ ವಾಹನವನ್ನು ಅಡ್ಡಹಾಕಿದ ಅಪರಿಚಿತ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ವಾಹನದಿಂದ ಪ್ರಯಾಣಿಕರನ್ನು ಹೊರಗೆಳೆದ ಉಗ್ರರು, ಅವರ ಮೇಲೆ ನಿರಂತರವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಪಂಜಾಬ್‌ ಪ್ರಾಂತ್ಯದ 9 ಮಂದಿ ಸೇರಿ ಒಟ್ಟು 11 ಜನ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಎಲ್ಲೆಂದರಲ್ಲಿ ಬಿದ್ದಿದ್ದ ಹೆಣಗಳು

ಪ್ರಯಾಣಿಕರನ್ನು ವಾಹನದಿಂದ ಹೊರಗೆಳೆದು, ಅವರನ್ನು ಅಪಹರಿಸಿದ ಉಗ್ರರು ಎಲ್ಲೆಂದರಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. “ವಾಹನದಲ್ಲಿ ತೆರಳುತ್ತಿದ್ದ ಪ್ರಯಾಣಿಕರನ್ನು ಉಗ್ರರು ಅಪಹರಿಸಿದ್ದಾರೆ. ಇದಾದ ಬಳಿಕ ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಕೊಲೆ ಮಾಡಿದ್ದಾರೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 11 ಜನರ ಹತ್ಯೆ ಮಾಡಲಾಗಿದೆ. 9 ಜನರ ಶವಗಳು ಬೆಟ್ಟ ಗುಡ್ಡಗಳು, ಸೇತುವೆಗಳ ಬಳಿ ಸಿಕ್ಕಿವೆ” ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಹತರನ್ನು ವಾಜಿರಾಬಾದ್‌, ಮಂಡಿ, ಬಹಾವುದ್ದೀನ್‌ ಹಾಗೂ ಗುಜ್ರನ್‌ವಾಲಾದವರು ಎಂಬುದಾಗಿ ಗುರುತಿಸಲಾಗಿದೆ. ಇದೇ ಪ್ರಾಂತ್ಯದಲ್ಲಿ ಮತ್ತೊಂದು ಕಡೆ ದಾಳಿ ನಡೆದಿದೆ. ದಾಳಿಯಲ್ಲಿ ಇಬ್ಬರನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಉಗ್ರರ ದಾಳಿಯನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಖಂಡಿಸಿದ್ದಾರೆ. “ಉಗ್ರರ ದಾಳಿಯನ್ನು ನಾವು ಖಂಡಿಸುತ್ತೇವೆ. ಯಾವುದೇ ರೀತಿಯ ಉಗ್ರವಾದವನ್ನು ನಾವು ಸಹಿಸುವುದಿಲ್ಲ. ದಾಳಿಗೆ ಕಾರಣರಾದವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ” ಎಂದಿದ್ದಾರೆ. ಗೃಹ ಸಚಿವ ಮೊಹ್ಸಿನ್‌ ನಖ್ವಿ ಅವರು ಕೂಡ ಘಟನೆಯನ್ನು ಖಂಡಿಸಿದ್ದಾರೆ. ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿಯನ್ನೂ ಕೋರಿದ್ದಾರೆ. ಉಗ್ರರ ದಾಳಿಯ ಬಳಿಕ ಯಾವುದೇ ಸಂಘಟನೆಯು ಹೊಣೆಯನ್ನು ಹೊತ್ತುಕೊಂಡಿಲ್ಲ. ಕಳೆದ ತಿಂಗಳು ಗ್ವಾದರ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 17 ಮಂದಿಯನ್ನು ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ: ISIS Threat : ಭಾರತಕ್ಕೆ ಎದುರಾಗಿದೆ ಐಸಿಸ್​ ಉಗ್ರರ ದಾಳಿಯ ಬೆದರಿಕೆ

Continue Reading
Advertisement
Posters with BL Santosh Photo Called As wanted criminal seen at Hyderabad
ಪ್ರಮುಖ ಸುದ್ದಿ10 mins ago

Delhi excise policy Case: ಆಪ್‌ಗೆ 25 ಕೋಟಿ ಲಂಚ ನೀಡಲು ಒತ್ತಾಯಿಸಿದ್ದ ಕವಿತಾ: ಸಿಬಿಐ ಆರೋಪ

Karave Meeting
ಪ್ರಮುಖ ಸುದ್ದಿ10 mins ago

Karave Meeting: ಹೊಸ ಪ್ರಾದೇಶಿಕ ಪಕ್ಷದ ಸುಳಿವು ನೀಡಿದ ಕರವೇ ನಾರಾಯಣಗೌಡ

Electric Shock
ಯಾದಗಿರಿ12 mins ago

Electric Shock: ಜಾನುವಾರುಗಳಿಗೆ ಮೇವು ತರುವಾಗ ವಿದ್ಯುತ್ ತಂತಿ ತಗುಲಿ ರೈತ ಸಾವು

Siddaramaiah
ಕರ್ನಾಟಕ14 mins ago

Siddaramaiah: ಯಾವ ಮುಖ ಇಟ್ಕೊಂಡು ಮೋದಿ ಮತ ಕೇಳ್ತಾರೆ? ಸಿದ್ದರಾಮಯ್ಯ ವಾಗ್ದಾಳಿ

Health Drink
ದೇಶ21 mins ago

Health Drink: ಬೋರ್ನ್‌ವೀಟಾವನ್ನು ‘ಆರೋಗ್ಯ ಪಾನೀಯ’ ವಿಭಾಗದಿಂದ ತೆಗೆದು ಹಾಕಿ; ಕೇಂದ್ರದ ಆದೇಶ

CSK vs MI
ಕ್ರಿಕೆಟ್36 mins ago

CSK vs MI: ಬದ್ಧ ವೈರಿಗಳಾದ ಮುಂಬೈ-ಚೆನ್ನೈ ಕಾದಾಟಕ್ಕೆ ವೇದಿಕೆ ಸಿದ್ಧ; ಯಾರಿಗೆ ಗೆಲುವಿನ ಲಕ್​?

IPL 2024 BMTC And Namma Metro
ಬೆಂಗಳೂರು45 mins ago

IPL 2024: ಐಪಿಎಲ್‌ ಪಂದ್ಯಕ್ಕೆ ಬೆಂಗಳೂರಿನಲ್ಲಿ ಬಿಎಂಟಿಸಿ ವಿಶೇಷ ಕಾರ್ಯಾಚರಣೆ; ಮೆಟ್ರೋ ರೈಲು ಓಡಾಟ ವಿಸ್ತರಣೆ

Kannada New Movie Puksatte Paisa set on theator
ಸಿನಿಮಾ56 mins ago

Kannada New Movie: ಕಾಸಿನ ಹಿಂದೆ ಬಿದ್ದವರ ಕನಸಿನ ಕಥೆ `ಪುಕ್ಸಟ್ಟೆ ಪೈಸ’ ಥಿಯೇಟರಿನತ್ತ

Terror Attack
ವಿದೇಶ1 hour ago

Terror Attack: ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ; 11 ಜನರನ್ನು ಅಪಹರಿಸಿ ಬರ್ಬರ ಹತ್ಯೆ

Urvashi Rautela
ಕ್ರೀಡೆ2 hours ago

Urvashi Rautela: ಕ್ರಿಕೆಟಿಗರಾದ ಪಂತ್​,ನಸೀಮ್​ಗೆ ಕೈಕೊಟ್ಟು ಖ್ಯಾತ ಫುಟ್ಬಾಲರ್​ ಜತೆ ಡೇಟಿಂಗ್ ಆರಂಭಿಸಿದ ಊರ್ವಶಿ ರೌಟೇಲಾ​

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 day ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 day ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ2 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20242 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರದಲ್ಲಿ ಅಧಿಕ ಲಾಭ

Ugadi 2024
ಬಾಗಲಕೋಟೆ4 days ago

Ugadi 2024 : ಬೀಳಗಿಯ ಎಕ್ಕೆ ಎಲೆ ಭವಿಷ್ಯ; ಈಶಾನ್ಯ, ಪಶ್ಚಿಮ ಭಾಗದಲ್ಲಿ ಭಾರಿ ಕಂಟಕ!

ugadi 2024
ಧಾರವಾಡ4 days ago

Ugadi 2024 : ಹನುಮನಕೊಪ್ಪದಲ್ಲಿ ಭವಿಷ್ಯ ನುಡಿದ ಬೊಂಬೆ! ಮುಂದಿನ ಪ್ರಧಾನಿ ಯಾರಾಗ್ತಾರೆ?

Dina Bhavishya
ಭವಿಷ್ಯ4 days ago

Dina Bhavishya : ನೂತನ ಸಂವತ್ಸರದಲ್ಲಿ ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ

Dina Bhavishya
ಭವಿಷ್ಯ5 days ago

Dina Bhavishya : ಅತಿರೇಕದ ಮಾತು ಈ ರಾಶಿಯವರಿಗೆ ಒಳ್ಳೆಯದಲ್ಲ

ಟ್ರೆಂಡಿಂಗ್‌