ಶ್ರೀಲಂಕಾದಲ್ಲಿ ಇಂಧನ ಕೊರತೆಯಿಂದ ಶಾಲೆಗಳಿಗೆ ರಜೆ, ಭಾರತದಿಂದ ಮತ್ತೆ ತೈಲ ಪೂರೈಕೆ - Vistara News

ಪ್ರಮುಖ ಸುದ್ದಿ

ಶ್ರೀಲಂಕಾದಲ್ಲಿ ಇಂಧನ ಕೊರತೆಯಿಂದ ಶಾಲೆಗಳಿಗೆ ರಜೆ, ಭಾರತದಿಂದ ಮತ್ತೆ ತೈಲ ಪೂರೈಕೆ

ಭಾರತವು ಸಂಕಷ್ಟದಲ್ಲಿರುವ ಶ್ರೀಲಂಕಾಕ್ಕೆ ಮತ್ತೊಮ್ಮೆ ತುರ್ತಾಗಿ ಹಡಗುಗಳ ಮೂಲಕ ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಪೂರೈಸಲು ನಿರ್ಧರಿಸಿದೆ. ಭಾರತದ ದೀರ್ಘಕಾಲೀನ ನೆರವನ್ನು ಲಂಕಾ ಕೋರಿದೆ.

VISTARANEWS.COM


on

Petrol Bunk
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ, ತುರ್ತಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಪ್ರತ್ಯೇಕ ಹಡಗುಗಳಲ್ಲಿ ರವಾನಿಸಲು ಭಾರತ ನಿರ್ಧರಿಸಿದೆ.

ತೈಲವನ್ನು ಹೊತ್ತ ಒಂದು ಹಡಗು ಜುಲೈ ೧೩ ಮತ್ತು ೧೫ರೊಳಗೆ ತಲುಪುವ ನಿರೀಕ್ಷೆ ಇದೆ. ಮತ್ತೊಂದು ಹಡಗು ಜುಲೈ ೨೯-೩೧ರ ನಡುವೆ ತಲುಪಲಿದೆ. ಕೊನೆಯದಾಗಿ ಆಗಸ್ಟ್‌ ೧೦ ಮತ್ತು ೧೫ರ ನಡುವೆ ಮತ್ತೊಂದು ಹಡಗು ತಲುಪುವ ಸಾಧ್ಯತೆ ಇದೆ.

ಶ್ರೀಲಂಕಾದ ರಾಯಭಾರಿ ಮಿಲಿಂದಾ ಮೊರಗೊಡಾ ಅವರು ಇತ್ತೀಚೆಗೆ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ಜತೆ ಮಾತುಕತೆ ನಡೆಸಿ ತೈಲ ಪೂರೈಕೆಗೆ ಮನವಿ ಮಾಡಿದ್ದರು.

ಭಾರತದಿಂದ ದೀರ್ಘಕಾಲೀನವಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ತರಿಸಿಕೊಳ್ಳಲು ಶ್ರೀಲಂಕಾ ಉತ್ಸುಕವಾಗಿದೆ. ಪ್ರಸ್ತುತ ಬಿಕ್ಕಟ್ಟನ್ನು ಎದುರಿಸಲು ಭಾರತದ ನೆರವನ್ನು ಕೋರಿದೆ. ಪ್ರಸ್ತುತ ಲಂಕಾದಲ್ಲಿ ಇರುವ ಡೀಸೆಲ್‌ ದಾಸ್ತಾನನ್ನು ತೀರಾ ಅಗತ್ಯ ಬಳಕೆಗೆ ಮಾತ್ರ ಖರ್ಚು ಮಾಡಲಾಗುತ್ತಿದೆ. ಲಂಕಾಕ್ಕೆ ಜುಲೈನಲ್ಲಿ ೩೩,೦೦೦ ಟನ್‌ ಅನಿಲ ಲಭಿಸುವ ನಿರೀಕ್ಷೆ ಇದೆ. ಜತೆಗೆ ಮುಂದಿನ ೪ ತಿಂಗಳಿಗೆ ೧ ಲಕ್ಷ ಟನ್‌ ಅನಿಲ ಖರೀದಿಗೂ ನಿರ್ಧರಿಸಿದೆ.

೧೯೪೮ರಲ್ಲಿ ಸ್ವಾತಂತ್ರ್ಯ ಗಳಿಸಿದ ಬಳಿಕ ಇದುವರೆಗಿನ ಅತಿ ದೊಡ್ಡ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಆಹಾರ, ಔಷಧ, ಪೆಟ್ರೋಲ್-ಡೀಸೆಲ್‌, ಅಡುಗೆ ಅನಿಲಕ್ಕೆ ಹಾಹಾಕಾರ ಏರ್ಪಟ್ಟಿದೆ.

ಶಾಲೆಗಳೇ ಬಂದ್

ಇಂಧನ ಕೊರತೆ ಹಿನ್ನೆಲೆಯಲ್ಲಿ ಜುಲೈ ೪ರಿಂದ ೧ ವಾರಗಳ ಕಾಲ ಶ್ರೀಲಂಕಾದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶಿಕ್ಷಕರು ಮತ್ತು ಮಕ್ಕಳನ್ನು ಶಾಲೆಗೆ ಕರೆತರಲು ಸಾರಿಗೆ ವ್ಯವಸ್ಥೆಗೆ ಬೇಕಾದ ಇಂಧನ ಕೊರತೆ ಉಂಟಾಗಿದೆ ಎಂದು ಸರ್ಕಾರ ತಿಳಿಸಿದೆ. ಪೆಟ್ರೋಲ್‌ ಬಂಕ್‌ಗಳಲ್ಲಿ ಕಿಲೋಮೀಟರ್‌ ಉದ್ದದ ಸರದಿ ನಿರ್ಮಾಣವಾಗಿದೆ. ತೈಲ ದಾಸ್ತಾನು ಕೇವಲ ೪,೦೦೦ ಟನ್‌ಗೆ ಕುಸಿದಿದೆ. ಇದು ಲಂಕಾದ ಒಂದು ದಿನದ ಖರ್ಚಿನ ಅಗತ್ಯಕ್ಕಿಂತಲೂ ಕಡಿಮೆಯಾಗಿದೆ ಎಂದು ಇಂಧನ ಸಚಿವ ಕಾಂಚನ ವಿಜೆಶೇಖರ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Dengue Fever: ಡೆಂಗ್ಯು ಜ್ವರಕ್ಕೆ ಮೈಸೂರು ಜಿಲ್ಲೆಯಲ್ಲಿ ಆರೋಗ್ಯಾಧಿಕಾರಿಯೇ ಮೊದಲ ಬಲಿ!

Dengue Fever: ಮೈಸೂರು ಜಿಲ್ಲೆಯಲ್ಲಿ ಇದುವರೆಗೆ ಡೆಂಗ್ಯುವಿಗೆ ಸಂಬಂಧಿಸಿ 3489 ಪರೀಕ್ಷೆ ನಡೆಸಲಾಗಿದ್ದು, 479 ಡೆಂಗ್ಯು ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. 162 ಆ್ಯಕ್ಟೀವ್ ಪ್ರಕರಣಗಳಿವೆ. ಹುಣಸೂರು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗೇಂದ್ರ (32) ಮೃತ ಸಮುದಾಯ ಆರೋಗ್ಯ ಅಧಿಕಾರಿಯಾಗಿದ್ದಾರೆ.

VISTARANEWS.COM


on

dengue fever mysore death
Koo

ಮೈಸೂರು: ಮೈಸೂರು ಜಿಲ್ಲೆಯಲ್ಲಿ (Mysore news) ಡೆಂಗ್ಯು ಜ್ವರ (Dengue fever) ವ್ಯಾಪಕವಾಗಿದ್ದು, ಮೊದಲ ಬಲಿ (Dengue Death) ತೆಗೆದುಕೊಂಡಿದೆ. ಸಮುದಾಯ ಆರೋಗ್ಯಾಧಿಕಾರಿಯೇ (Health Officer) ಡೆಂಗ್ಯು ಜ್ವರದಿಂದ ಮೃತಪಟ್ಟಿದ್ದಾರೆ. ಹುಣಸೂರು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗೇಂದ್ರ (32) ಮೃತ ಸಮುದಾಯ ಆರೋಗ್ಯ ಅಧಿಕಾರಿಯಾಗಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಇದುವರೆಗೆ ಡೆಂಗ್ಯುವಿಗೆ ಸಂಬಂಧಿಸಿ 3489 ಪರೀಕ್ಷೆ ನಡೆಸಲಾಗಿದ್ದು, 479 ಡೆಂಗ್ಯು ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. 162 ಆ್ಯಕ್ಟೀವ್ ಪ್ರಕರಣಗಳಿವೆ.

ಡೆಂಗ್ಯು ಜ್ವರದಿಂದ ಇದುವರೆಗೆ ರಾಜ್ಯದಲ್ಲಿ 6 ಮಂದಿ ಸತ್ತಿದ್ದಾರೆ ಎಂದು ಮಂಗಳವಾರ ರಾಜ್ಯ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದರು. ನಿನ್ನೆ ಹಾಸನ ಜಿಲ್ಲೆಯಲ್ಲಿ ಒಬ್ಬಳು ಬಾಲಕಿ ಡೆಂಗ್ಯುವಿನಿಂದ ಮೃತಪಟ್ಟಿದ್ದು, ಡೆಂಗ್ಯು ಖಚಿತವಾಗಬೇಕಿದೆ. ಬೆಂಗಳೂರಿನಲ್ಲಿ ಒಬ್ಬರು ಡೆಂಗ್ಯುವಿನಿಂದ ಮೃತಪಟ್ಟಿದ್ದಾರೆ. ಹೀಗಾಗಿ ಇದುವರೆಗೂ 7 ಮಂದಿ ಡೆಂಗ್ಯುವಿಗೆ ಬಲಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಡೆಂಗ್ಯು ಜ್ವರ ಪರೀಕ್ಷೆಗೆ ದರ ನಿಗದಿ

ಬೆಂಗಳೂರು: ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಡೆಂಗ್ಯೂ ಜ್ವರ ಪತ್ತೆಗೆ ಎರಡು ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಈ ಪರೀಕ್ಷೆಗಳಿಗೆ ಒಟ್ಟು 600 ರೂ. ನಿಗದಿಪಡಿಸಲು ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ.

ಡೆಂಗ್ಯೂ ಜ್ವರ ಪತ್ತೆಗೆ ಎರಡು ಮಾದರಿಯ ಪರೀಕ್ಷೆ ನಡೆಸಲಾಗುತ್ತದೆ. ತಲಾ 300 ರೂ.ನಂತೆ ಒಟ್ಟು 600 ರೂ. ದರವನ್ನು ನಿಗದಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಈ ಸಂದರ್ಭವನ್ನು ಬಳಸಿಕೊಂಡು ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಪರೀಕ್ಷೆಗೆ ದುಪ್ಪಟ್ಟು ಹಣ ವಸೂಲಿಯಾಗುತ್ತಿದೆ ಎಂಬ ಬಗ್ಗೆ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಪರೀಕ್ಷೆಗೆ ರಾಜ್ಯ ಸರ್ಕಾರ ದರ ನಿಗದಿ ಮಾಡಲು ಮುಂದಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಪ್ರಕರಣಗಳು ಡಬಲ್ ಆಗಿವೆ. ಜನವರಿಯಿಂದ ಜುಲೈ 1ರ ತನಕ ಒಟ್ಟು 6187 ಕೇಸ್ ಪಾಸಿಟಿವ್ ಇದೆ. ಕಳೆದ ವರ್ಷ 2903 ಇತ್ತು. ಇಷ್ಟೇ ಅಲ್ಲ ರಾಜ್ಯದಲ್ಲಿ ಮತ್ತಷ್ಟು ಡೆಂಗ್ಯು ಕೇಸ್ ಇರಬಹುದು. 47% ಟೆಸ್ಟಿಂಗ್ ರೇಟ್ ಹೆಚ್ಚಳ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದರು.

ಡೆಂಗ್ಯು ಜ್ವರ ಇನ್ನಷ್ಟು ಹೆಚ್ಚಾಗಬಹುದು. ಸೆಪ್ಟಂಬರ್‌ನಲ್ಲಿ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳು ಮುಂಜಾಗ್ರತಾ ಕ್ರಮಕ್ಕೆ ಸೂಚಿಸಿದ್ದಾರೆ. ಟೆಸ್ಟಿಂಗ್ ಕಿಟ್ ಹೆಚ್ಚುವರಿ ಇರಿಸಲಾಗಿದೆ. ಪ್ಲೇಟ್‌ಲೆಟ್ಸ್‌ ಕೊಡುವುದಕ್ಕೆ ತಿಳಿಸಿದ್ದೇವೆ. ಡೆಂಗ್ಯುವಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಪ್ಲೇಟ್ ಲೆಟ್ಸ್ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಬ್ಲಡ್ ಯೂನಿಟ್‌ಗಳ ಜತೆ ಮಾತುಕತೆ ಮಾಡಲಾಗಿದೆ. ಐವಿ ಫ್ಲೂವಿಡ್‌ಗಳನ್ನು ಕೊಡಲಾಗುತ್ತದೆ. ಇದು ನಮ್ಮ ಬಳಿ ಸಾಕಷ್ಟು ಇದೆ. ಆರಂಭದಲ್ಲಿ ಪ್ಯಾರಸಿಟಮಲ್ ಕೊಟ್ಟರೆ ಸಾಕಾಗುತ್ತದೆ ಎಂದು ಸಚಿವರು ತಿಳಿಸಿದ್ದರು.

ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ

ಖಾಸಗಿ ಆಸ್ಪತ್ರೆಗಳು ಡೆಂಗ್ಯು ಕೇಸ್ ರಿಪೋರ್ಟ್ ಮಾಡುತ್ತಿಲ್ಲ. ಕೆಪಿಎಂ ಆಕ್ಟ್ ಪ್ರಕಾರ ಖಾಸಗಿ ಆಸ್ಪತ್ರೆಗಳು ಡೆಂಗ್ಯು ಕೇಸ್ ರಿಪೋರ್ಟ್ ಮಾಡುವುದು ಕಡ್ಡಾಯ. IHIPಯಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಅಪ್ಲೋಡ್ ಮಾಡುತ್ತಿಲ್ಲ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ಡೆಂಗ್ಯು ತಪಾಸಣೆಗೆ ದರ ನಿಗದಿ ಮಾಡುವ ಬಗ್ಗೆ ಚರ್ಚೆ ಮಾಡಿಲ್ಲ. ಆ ಬಗ್ಗೆ ಮುಂದೆ ಚರ್ಚೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Dengue Fever In Children: ಮಗುವಿನ ಮೈ ಬಿಸಿ ಆಗಿದೆಯೇ? ಡೆಂಗ್ಯು ಜ್ವರದ ಲಕ್ಷಣಗಳನ್ನು ತಿಳಿದುಕೊಳ್ಳಿ

Continue Reading

ಪ್ರಮುಖ ಸುದ್ದಿ

Rain News: ಭಾರಿ ಮಳೆ ಹಿನ್ನೆಲೆ, ಜಲಪಾತ ವೀಕ್ಷಣೆ- ಟ್ರೆಕ್ಕಿಂಗ್‌ಗೆ ನಿರ್ಬಂಧ; ಈ ತಾಣಗಳಿಗೆ ಹೋಗಬೇಡಿ!

Rain News: ಈ ಮೂರು ಜಿಲ್ಲೆಗಳಲ್ಲಿ ಹಲವು ಪ್ರವಾಸಿ ಸ್ಥಳಗಳಿಗೆ (tourist places) ಭೇಟಿ ನೀಡಲು ಅರಣ್ಯ ಇಲಾಖೆ (Forest Department) ನಿರ್ಬಂಧ ವಿಧಿಸಿದೆ. ವನ್ಯಜೀವಿ (Wildlife) ವಲಯದ ವ್ಯಾಪ್ತಿಗೆ ಬರುವ ಕಾಡುಗಳು, ಬೆಟ್ಟಗಳು- ಜಲಪಾತಗಳ ಪ್ರವೇಶ ನಿರ್ಬಂಧಿಸಲಾಗಿದೆ.

VISTARANEWS.COM


on

rain news no entry falls
Koo

ಮಂಗಳೂರು: ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದಾಗಿ (Rain News) ಹೊಳೆ- ಹಳ್ಳಗಳು ತುಂಬಿಕೊಂಡಿದ್ದು, ಜಲಪಾತಗಳು (falls) ಭೋರ್ಗರೆಯುತ್ತಿವೆ. ಆದರೆ ಅಪಾಯವೂ ಇರುವುದರಿಂದಾಗಿ, ಜಲಪಾತಗಳತ್ತ ತೆರಳದಂತೆ ಪ್ರವಾಸಿಗರಿಗೆ ನಿರ್ಬಂಧ (No Entry) ವಿಧಿಸಲಾಗಿದೆ. ಬೆಟ್ಟಗುಡ್ಡಗಳಿಗೆ ಟ್ರೆಕ್ಕಿಂಗ್‌ (Trekking) ಹೋಗುವವರಿಗೂ ಮುಂದಿನ ಸೂಚನೆ ಸಿಗುವವರೆಗೂ ಮುಂದುವರಿಯದಂತೆ ಸೂಚಿಸಲಾಗಿದೆ.

ಈ ನಾಲ್ಕು ಜಿಲ್ಲೆಗಳಲ್ಲಿ ಹಲವು ಪ್ರವಾಸಿ ಸ್ಥಳಗಳಿಗೆ (tourist places) ಭೇಟಿ ನೀಡಲು ಅರಣ್ಯ ಇಲಾಖೆ (Forest Department) ನಿರ್ಬಂಧ ವಿಧಿಸಿದೆ. ವನ್ಯಜೀವಿ (Wildlife) ವಲಯದ ವ್ಯಾಪ್ತಿಗೆ ಬರುವ ಕಾಡುಗಳು, ಬೆಟ್ಟಗಳು- ಜಲಪಾತಗಳ ಪ್ರವೇಶ ನಿರ್ಬಂಧಿಸಲಾಗಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ನರಸಿಂಹಗಡ (ಗಡಾಯಿಕಲ್ಲು) ಬೆಟ್ಟ, ಅರಿಶಿನಗುಂಡಿ, ಕೂಡ್ಲು, ಬರ್ಕಳ, ಹಿಡ್ಲುಮನೆ, ವನಕಬ್ಬಿ, ಬಂಡಾಜೆ ಜಲಪಾತಗಳತ್ತ ತೆರಳದಂತೆ ನಿರ್ಬಂಧಿಸಲು ಬೆಳ್ತಂಗಡಿ ಆರ್‌ಎಫ್‌ಓಗೆ ಕುದುರೆಮುಖ ಸಿಎಫ್ ಆದೇಶ ನೀಡಿದ್ದಾರೆ.

ಯಲ್ಲಾಪುರ ಫಾಲ್ಸ್‌ಗಳಿಗೆ ನಿರ್ಬಂಧ

ಕಾರವಾರ: ಯಲ್ಲಾಪುರ ತಾಲೂಕಿನಾದ್ಯಂತ ಅಬ್ಬರದ ಮಳೆ ಹಿನ್ನೆಲೆಯಲ್ಲಿ ಧಾರಾಕಾರ ಮಳೆಗೆ ಜಲಪಾತ ಮೈದುಂಬಿ ಧುಮುಕುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಲವು ಜಲಪಾತಗಳಿಗೆ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗಿದೆ. ಯಲ್ಲಾಪುರದ ಸಾತೊಡ್ಡಿ ಜಲಪಾತ ಇದರಲ್ಲಿ ಮುಖ್ಯವಾಗಿದ್ದು, ಮಳೆಗಾಲದಲ್ಲಿ ವಿವಿಧೆಡೆಗಳಿಂದ ಜಲಪಾತ ವೀಕ್ಷಣೆಗೆ ಇಲ್ಲಿ ಪ್ರವಾಸಿಗರು ಬರುತ್ತಾರೆ. ಜಲಪಾತ ಅಪಾಯಕಾರಿ ಮಟ್ಟದಲ್ಲಿ ತುಂಬಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಪ್ಪಿಸಲು ಸ್ಥಳೀಯ ಆಡಳಿತ ಕ್ರಮ ಕೈಗೊಂಡಿದೆ.

ಗಂಗಾವಳಿ ನದಿ ನೀರಿ‌ನ ಪ್ರಮಾಣ ಹೆಚ್ಚಳದಿಂದ ತಾಲೂಕಿನ ಹಲವು ಫಾಲ್ಸ್‌ಗಳಿಗೆ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ಹಾಕಲಾಗಿದೆ. ಯಲ್ಲಾಪುರದ ಶಿರಲೆ ಫಾಲ್ಸ್, ಕಾನೂರು ಫಾಲ್ಸ್, ಕುಳಿ ಮಾಗೋಡು ಜಲಪಾತಗಳಲ್ಲಿ ಅರಣ್ಯ ಇಲಾಖೆ, ಸ್ಥಳೀಯ ಗ್ರಾಮ ಅರಣ್ಯ ಸಮಿತಿಯಿಂದ ಪ್ರವೇಶ ನಿಷೇಧ ಮಾಡಲಾಗಿದೆ. ತಾಲೂಕಿನ ಪಣಸಗುಳಿ ಸೇತುವೆ ಮುಳುಗಡೆ ಹಾಗೂ ಗಂಗಾವಳಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನಲೆ ಸಂಚಾರ ನಿರ್ಬಂಧಿಸಲಾಗಿದೆ.

ಶೃಂಗೇರಿಯಲ್ಲಿ ತುಂಬಿಕೊಂಡ ತುಂಗೆ

ಚಿಕ್ಕಮಗಳೂರು: ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಶೃಂಗೇರಿಯ ಕೆರೆಕಟ್ಟೆ ಘಟ್ಟಪ್ರದೇಶದಲ್ಲಿ ಭಾರೀ ಮಳೆಯಾಗಿ ತುಂಗಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಂದಿದೆ. ತುಂಗಾ ನದಿ ಅಪಾಯದ ಅಂಚಿನಲ್ಲಿ ಹರಿಯುತ್ತಿದೆ. ಶೃಂಗೇರಿ ಶಾರದಾಂಬಾ ದೇವಾಲಯದ ದಡದವರೆಗೆ ತುಂಗೆಯ ನೀರು ಬಂದಿದೆ. ತುಂಗಾ ನದಿ ಇಕ್ಕೆಲಗಳ ತೋಟಗಳು ಜಲಾವೃತ‌ವಾಗಿವೆ.

ಶಾಲೆಗಳಿಗೆ ರಜೆ

ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ನೀಡಿ ಬೆಳ್ತಂಗಡಿ ಹಾಗೂ ಬಂಟ್ವಾಳ ತಹಶೀಲ್ದಾರ್ ಆದೇಶ ನೀಡಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ಶಿಕ್ಷಣ ವಲಯ ವ್ಯಾಪ್ತಿಯಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ರಜೆ ನೀಡಲಾಗಿದೆ. ಭೌಗೋಳಿಕವಾಗಿ ತಗ್ಗು ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ನೀಡಲಾಗಿದೆ ಎಂದು ಉಡುಪಿ ಡಿಸಿ ಡಾ. ವಿದ್ಯಾ ಕುಮಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Rain News: ಚಿಕ್ಕಮಗಳೂರು, ಕೊಡಗಿನಲ್ಲಿ ಮಳೆ ಅಬ್ಬರ; ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ಜನ ಪರದಾಟ

Continue Reading

ಉಡುಪಿ

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ಧದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

Tornado Effect : ಉಡುಪಿಯಲ್ಲಿ (Udupi News) ದಿಢೀರ್‌ ಸುಂಟರಗಾಳಿ ಎದ್ದಿದ್ದು, ಗ್ರಾಮಸ್ಥರು ಕಂಗಲಾಗಿದ್ದಾರೆ. ಸುಂಟರಗಾಳಿಗೆ ಅಪಾರ ಪ್ರಮಾಣದ ಮರಗಳು ಕತ್ತರಿಸಿದಂತೆ ನೆಲಕ್ಕುರುಳಿವೆ. ರಟ್ಟಾಡಿ ವ್ಯಾಪ್ತಿಯ ಹಲವು ಮನೆಗಳಿಗೂ ಸುಂಟರಗಾಳಿಯಿಂದ ಹಾನಿಯಾಗಿದೆ.

VISTARANEWS.COM


on

By

Tornado Effect in Udupi
Koo

ಉಡುಪಿ: ಒಂದು ಕಡೆ ಮಳೆಯು (Karnataka Rain) ಅಬ್ಬರಿಸುತ್ತದ್ದರೆ ಮತ್ತೊಂದು ಕಡೆ ಸುಂಟರಗಾಳಿ (Tornado Effect) ಹವಾ ಜೋರಾಗಿದೆ. ಉಡುಪಿಯ ಅಮಾವಾಸ್ಯೆಬೈಲು ವ್ಯಾಪ್ತಿಯಲ್ಲಿ ಸುಂಟರಗಾಳಿ ಕಾಣಿಸಿಕೊಂಡಿದೆ. ಭಾರೀ ಸುಂಟರಗಾಳಿಗೆ ರಟ್ಟಾಡಿ ಗ್ರಾಮದ ಕೃಷಿಕರು ಕಂಗಾಲಾಗಿದ್ದಾರೆ.

ಅಪಾರ ಪ್ರಮಾಣದ ಮರ, ಮನೆಗಳಿಗೆ ಹಾನಿಯಾಗಿದೆ. ಭಾರಿ ಶಬ್ಧದೊಂದಿಗೆ ಸುಂಟರಗಾಳಿ ಅಪ್ಪಳಿಸಿದೆ. ಕೆಲವು ಹೊತ್ತು ಚಂಡಮಾರುತದಂತೆ ಸುಂಟರಗಾಳಿ ಭಾಸವಾಗಿದೆ. ಮೊದಲ ಬಾರಿಗೆ ಇಂತಹ ಅನುಭವಕ್ಕೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ರಟ್ಟಾಡಿಯಲ್ಲಿ ಏಕಾಏಕಿ ಸುಂಟರಗಾಳಿ ಕಾಣಿಸಿಕೊಂಡಿದೆ.

ರಟ್ಟಾಡಿಯಲ್ಲಿ ಭೀಕರ ಸುಂಟರಗಾಳಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಮಾವಾಸ್ಯೆ ಬೈಲು ಗ್ರಾಮ ಪಂಚಾಯತ್‌ ಪಿಡಿಓ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡ್ರೋನ್‌ ಕ್ಯಾಮೆರಾ ಮೂಲಕ ಮರ, ಮನೆಗಳ ಹಾನಿ ಕುರಿತು ಅಂದಾಜು ಲೆಕ್ಕಚಾರ ನಡೆಸಿದ್ದಾರೆ.

ಇನ್ನೂ ರಟ್ಟಾಡಿ ವ್ಯಾಪ್ತಿಯಲ್ಲಿರುವ ಸಾವಿರಾರು ಮರಗಳು ಧರಶಾಹಿಯಾಗಿವೆ. 5 ಸಾವಿರಕ್ಕೂ ಅಧಿಕ ಅಡಿಕೆ ಮರ, 2 ಸಾವಿರದಷ್ಟು ರಬ್ಬರ್‌ ಮರ ಹಾಗೂ ತೆಂಗಿಗೂ ಹಾನಿಯಾಗಿದೆ. ಅಪಾರ ಪ್ರಮಾಣದ ಮರಗಳು ಕತ್ತರಿಸಿದಂತೆ ನೆಲಕ್ಕುರುಳಿದೆ. ರಟ್ಟಾಡಿ ವ್ಯಾಪ್ತಿಯ ಹಲವು ಮನೆಗಳಿಗೂ ಸುಂಟರಗಾಳಿಯಿಂದ ಹಾನಿಯಾಗಿದೆ.

ಅಮಾಸೆಬೈಲು ರಟ್ಟಾಡಿಯಲ್ಲಿ ಕಾಣಿಸಿಕೊಂಡ ಭೀಕರ ಸುಂಟರಗಾಳಿಯ ಎಫೆಕ್ಟ್‌ನಿಂದಾಗಿ ರಟ್ಟಾಡಿ ನಂಜಿನ ಹಾಡಿ ಕತ್ಗೋಡು ಎಂಬಲ್ಲಿ ಮನೆಯ ಮೇಲೆ ಮರ ಬಿದ್ದಿದೆ. ಸುಂಟರಗಾಳಿಯ ಆರ್ಭಟಕ್ಕೆ ಮನೆಯ ಪಕ್ಕದಲ್ಲಿದ್ದ ಮರ ಉರಳಿ ಬಿದ್ದಿದೆ. ಮನೆ ಮೇಲೆ ಮರ ಬಿದ್ದ ಪರಿಣಾಮ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಕಡು ಬಡತನದಲ್ಲಿ ಜೀವನ ನಡೆಸುತ್ತಿದ್ದ ಕುಟುಂಬ ಸುಂಟರಗಾಳಿಯಿಂದ ಅತಂತ್ರಕ್ಕೆ ಸಿಲುಕಿದೆ. ದಿಢೀರನೆ ಕಾಣಿಸಿಕೊಂಡಿದ್ದ ಸುಂಟರಗಾಳಿಯಿಂದ ರಟ್ಟಾಡಿ ಗ್ರಾಮ ಅಲ್ಲೋಲಕಲ್ಲೋಲವೇ ಎದ್ದಿದೆ. ದುರ್ಗಿ ಅವರ ಕುಟುಂಬ ಮನೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

Tornado Effect in udupi

ಇದನ್ನೂ ಓದಿ: Murder case : ಹಾಸನದಲ್ಲಿ ದಾಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯ

ಕಮಲಶಿಲೆ ದೇವಾಲಯದಲ್ಲಿ ನೈಸರ್ಗಿಕ ಪುಣ್ಯಸ್ನಾನ

ಉಡುಪಿಯ ಕುಂದಾಪುರ ತಾಲೂಕಿನ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದೊಳಗೆ ಕುಬ್ಜ ನದಿ ನೀರು ಹರಿದಿದೆ. ಬೆಳಗಿನ ಜಾವ ಮೂರುವರೆ ಸುಮಾರಿಗೆ ದೇವಿಯ ಚರಣವನ್ನು ಕುಬ್ಜಾ ನದಿ ನೀರು ಸ್ಪರ್ಶ ಮಾಡಿದೆ. ಈ ಮೂಲಕ ದೇವಸ್ಥಾನದಲ್ಲಿ ನೈಸರ್ಗಿಕ ಪುಣ್ಯಸ್ನಾನ ನಡೆದಿದೆ.

ಗರ್ಭಗುಡಿಗೆ ನೀರು ಬರುತ್ತಿದ್ದಂತೆ ಅರ್ಚಕರು ಮಂಗಳಾರತಿ ಮಾಡಿದ್ದಾರೆ. ವರ್ಷಂಪ್ರತಿ ಒಂದು ಬಾರಿ ಗರ್ಭಗುಡಿಗೆ ಕುಬ್ಜಾ ನದಿ ನೀರು ಬರುತ್ತದೆ. ಈ ನೈಸರ್ಗಿಕ ಪುಣ್ಯಸ್ನಾನಕ್ಕೆ ಭಕ್ತರು ಕಾತರದಿಂದ ಕಾಯುತ್ತಾರೆ. ಸದ್ಯ ನೀರು ಇಳಿಮುಖವಾಗಿ ದೇವಾಲಯದಿಂದ ತೆರವು ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೀಡೆ

Team India Arrival: ಪ್ರಧಾನಿ ಮೋದಿ ಔತಣ ಕೂಟಕ್ಕೆ ತೆರಳಿದ ಟೀಮ್​ ಇಂಡಿಯಾ

Team India Arrival: ವಿಶ್ವಕಪ್​ ಗೆಲುವಿನ ಕುರಿತು ಆಟಗಾರರು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡ ಬಳಿಕ ಮೋದಿ ಜತೆ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ. ಇದಾದ ಬಳಿಕ ಆಟಗಾರರು ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಲಿದ್ದಾರೆ. ಅಲ್ಲಿ ತೆರೆದ ವಾಹನದಲ್ಲಿ ಆಟಗಾರರನ್ನು ಮೆರವಣಿಗೆ ನಡೆಸಿ ಬಳಿಕ ಅದ್ಧೂರಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

VISTARANEWS.COM


on

Team India Arrival
Koo

ನವದೆಹಲಿ: ಟಿ20 ವಿಶ್ವಕಪ್​ ಟ್ರೋಫಿಯೊಂದಿಗೆ ತವರಿಗೆ ಮರಳಿದ ಟೀಮ್​ ಇಂಡಿಯಾ ಇದೀಗ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi)ಅವರ ನಿವಾಸಕ್ಕೆ(Team India Arrival) ಭೇಟಿ ನೀಡಿದೆ. ವಿಶ್ವಕಪ್​ ಗೆಲುವಿನ ಕುರಿತು ಆಟಗಾರರು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡ ಬಳಿಕ ಮೋದಿ ಜತೆ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ. ಇದಾದ ಬಳಿಕ ಆಟಗಾರರು ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಲಿದ್ದಾರೆ. ಅಲ್ಲಿ ತೆರೆದ ವಾಹನದಲ್ಲಿ ಆಟಗಾರರನ್ನು ಮೆರವಣಿಗೆ ನಡೆಸಿ ಬಳಿಕ ಅದ್ಧೂರಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್‌ (T20 World Cup 2024) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿದ ರೋಹಿತ್‌ ಶರ್ಮಾ (Rohit Sharmaನೇತೃತ್ವದ ಭಾರತದ ಕ್ರಿಕೆಟ್‌ ತಂಡವು ಭಾರತಕ್ಕೆ ಆಗಮಿಸಿದೆ. ಏರ್‌ ಇಂಡಿಯಾ ಏರ್‌ಲೈನ್ಸ್‌ನ ವಿಶೇಷ ಚಾರ್ಟರ್ಡ್‌ ವಿಮಾನದಲ್ಲಿ ಭಾರತ ತಂಡದ (Team India) ಆಟಗಾರರು ದೆಹಲಿಗೆ ಆಗಮಿಸಿದ್ದಾರೆ. ಪ್ರತಿಕೂಲ ಹವಾಮಾನದ ಕಾರಣದಿಂದ ಆಟಗಾರರು ಕೆಲವು ದಿನ ಬಾರ್ಬಡಾಸ್​ನಲ್ಲೇ ಸಿಲುಕಿ ಹಾಕಿಕೊಂಡಿದ್ದರು. ಇದೀಗ ತವರಿಗೆ ಆಗಮಿಸಿದ ವಿಶ್ವಕಪ್‌ ಹೀರೋಗಳಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ.

ಬೆರಿಲ್ ಚಂಡಮಾರುತದಿಂದ ಉಂಟಾದ ವಿಳಂಬದಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶೇಷ ಚಾರ್ಟರ್ ವಿಮಾನದ ವ್ಯವಸ್ಥೆ ಮಾಡಿತ್ತು. ಭಾರತೀಯ ಪತ್ರಕರ್ತರು, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜಯ್ ಶಾ ವಿಮಾನದಲ್ಲಿದ್ದರು ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ. ವಿಮಾನ ಬಂದಿಳಿಯುತ್ತಿದ್ದಂತೆ ಅಭಿಮಾನಿಗಳು ಜಯಘೋಷ ಕೂಗಿ ಸ್ವಾಗತಿಸಿದರು.

ಇದನ್ನೂ ಓದಿ Team India: ತವರಿಗೆ ಬಂದ ಖಷಿಯಲ್ಲಿ ಕುಣಿದು ಕುಪ್ಪಳಿಸಿದ ನಾಯಕ ರೋಹಿತ್​, ಹಾರ್ದಿಕ್​, ಪಂತ್; ವಿಡಿಯೊ ವೈರಲ್​​

ವಿಜಯಯಾತ್ರೆಗೆ ಸಕಲ ಸಿದ್ಧತೆ

ವಿಶ್ವಕಪ್‌ ಗೆದ್ದ ಭಾರತ ತಂಡದ ಆಟಗಾರರಿಗೆ ಮುಂಬೈನಲ್ಲಿ ಗುರುವಾರ ಸಂಜೆ ವಿಜಯಯಾತ್ರೆ ಆಯೋಜಿಸಲಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ 5 ಗಂಟೆಗೆ ಭಾರತ ತಂಡದ ಆಟಗಾರರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ. ಇದಕ್ಕೂ ಮೊದಲು ಅಂದರೆ, ಸಂಜೆ 4 ಗಂಟೆಗೆ ಮರೀನ್‌ನಿಂದ ವಾಂಖೆಡೆ ಸ್ಟೇಡಿಯಂವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಬರಲಿದ್ದಾರೆ. ವಿಕ್ಟರಿ ಪರೇಡ್‌ನಲ್ಲಿ ಸಾವಿರಾರು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಎಲ್ಲರೂ ಬನ್ನಿ ಎಂಬುದಾಗಿ ರೋಹಿತ್‌ ಶರ್ಮಾ ಅವರು ಈಗಾಗಲೇ ಆಹ್ವಾನ ನೀಡಿದ್ದಾರೆ.

Continue Reading
Advertisement
Karnataka Rain
ಮಳೆ5 mins ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

dengue fever mysore death
ಪ್ರಮುಖ ಸುದ್ದಿ14 mins ago

Dengue Fever: ಡೆಂಗ್ಯು ಜ್ವರಕ್ಕೆ ಮೈಸೂರು ಜಿಲ್ಲೆಯಲ್ಲಿ ಆರೋಗ್ಯಾಧಿಕಾರಿಯೇ ಮೊದಲ ಬಲಿ!

Hathras Stampede
ದೇಶ18 mins ago

Hathras Stampede: ಹತ್ರಾಸ್‌ ಕಾಲ್ತುಳಿತಕ್ಕೆ ಸಮಾಜಘಾತುಕ ಶಕ್ತಿ ಕಾರಣ ಎಂದ ಭೋಲೇ ಬಾಬಾ

Virat Kohli
ಕ್ರೀಡೆ19 mins ago

Virat Kohli: ಕಟ್ಲೆಟ್‌ ಬಿಸಿ ಮಾಡಲು ಪರದಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Shiva Rajkumar Bhairavana Kone PaaTa Title announce
ಸ್ಯಾಂಡಲ್ ವುಡ್44 mins ago

Shiva Rajkumar: ‘ಭೈರವನ ಕೊನೆ ಪಾಠ’ದಲ್ಲಿ ಶಿವರಾಜ್‌ಕುಮಾರ್‌; ಹ್ಯಾಟ್ರಿಕ್ ಹೀರೊಗೆ ಹೇಮಂತ್‌ ರಾವ್‌ ಆ್ಯಕ್ಷನ್‌ ಕಟ್‌!

rain news no entry falls
ಪ್ರಮುಖ ಸುದ್ದಿ54 mins ago

Rain News: ಭಾರಿ ಮಳೆ ಹಿನ್ನೆಲೆ, ಜಲಪಾತ ವೀಕ್ಷಣೆ- ಟ್ರೆಕ್ಕಿಂಗ್‌ಗೆ ನಿರ್ಬಂಧ; ಈ ತಾಣಗಳಿಗೆ ಹೋಗಬೇಡಿ!

Tornado Effect in Udupi
ಉಡುಪಿ59 mins ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ಧದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

MS Dhoni
ಕ್ರೀಡೆ1 hour ago

MS Dhoni: ಪತ್ನಿಗೆ ಕೇಕ್​ ತಿನ್ನಿಸಿ 15ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿದ ಧೋನಿ; ವಿಡಿಯೊ ವೈರಲ್​

Hathras Stampede
ದೇಶ1 hour ago

Hathras Stampede: ಹತ್ರಾಸ್‌ ಕಾಲ್ತುಳಿತ- FIRನಲ್ಲಿ ಭೋಲೇ ಬಾಬಾನ ಹೆಸರೇ ಇಲ್ಲ!

Stock Market
ವಾಣಿಜ್ಯ1 hour ago

Stock Market: ಷೇರು ಮಾರುಕಟ್ಟೆಯಲ್ಲಿ ಮುಂದುವರಿದ ಗೂಳಿಯ ಅಬ್ಬರ; ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ5 mins ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ59 mins ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ಧದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು4 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ5 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ5 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ6 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

ಟ್ರೆಂಡಿಂಗ್‌