Wipro AI investment : ವಿಪ್ರೊದಿಂದ 3 ವರ್ಷಗಳಲ್ಲಿ AI ವಲಯದಲ್ಲಿ 8,200 ಕೋಟಿ ರೂ. ಹೂಡಿಕೆ - Vistara News

ಪ್ರಮುಖ ಸುದ್ದಿ

Wipro AI investment : ವಿಪ್ರೊದಿಂದ 3 ವರ್ಷಗಳಲ್ಲಿ AI ವಲಯದಲ್ಲಿ 8,200 ಕೋಟಿ ರೂ. ಹೂಡಿಕೆ

Wipro AI investment ಐಟಿ ದಿಗ್ಗಜ ವಿಪ್ರೊ ಮುಂದಿನ 3 ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ ವಲಯದಲ್ಲಿ 8,200 ಕೋಟಿ ರೂ. ಹೂಡಿಕೆಗೆ ಮುಂದಾಗಿದೆ. ಇದರ ಉದ್ದೇಶವೇನು? ವಿವರ ಇಲ್ಲಿದೆ.

VISTARANEWS.COM


on

wipro
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಐಟಿ ದಿಗ್ಗಜ ವಿಪ್ರೊದಿಂದ ಮುಂದಿನ ಮೂರು ವರ್ಷಗಳಲ್ಲಿ 1 ಶತಕೋಟಿ ಡಾಲರ್‌ (ಅಂದಾಜು 8,200 ಕೋಟಿ ರೂ.) (Wipro AI investment) ಹೂಡಿಕೆ ಮಾಡಲು ನಿರ್ಧರಿಸಿದೆ. ಕೃತಕ ಬುದ್ಧಿಮತ್ತೆ (artificial intelligence) ಬಿಗ್‌ ಡೇಟಾ, ಅನಾಲಿಟಿಕ್ಸ್‌ ವಲಯದಲ್ಲಿ (big data) ವಿಪ್ರೊ ಕಂಪನಿಯು ವ್ಯಾಪಕವಾಗಿ ಹೂಡಿಕೆ ಮಾಡಲಿದೆ ಎಂದು ವಿಪ್ರೊದ ಸಿಇಒ ಥೆರ್ರಿ ಡೆಲಾಪೊರೇಟ್‌ ಅವರು ಬುಧವಾರ ತಿಳಿಸಿದ್ದಾರೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ ತನ್ನ 25,000 ಕ್ಕೂ ಹೆಚ್ಚು ಎಂಜಿನಿಯರ್‌ಗಳನ್ನು ಎಐ, ಬಿಗ್‌ ಡೇಟಾ ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡಲು ಉದ್ದೇಶಿಸಿದೆ. ಮೈಕ್ರೊಸಾಫ್ಟ್‌ನ ಅಜ್ಯೂರ್‌ ಓಪನ್‌ ಎಐ ಸರ್ಟಿಫಿಕೇಟ್‌ ಗಳಿಸಲು ಉದ್ದೇಶಿಸಿದೆ.

ಜಗತ್ತಿನಾದ್ಯಂತ ಬ್ಯಾಂಕ್‌ಗಳಿಂದ ಬಿಗ್‌ ಟೆಕ್‌ ಕಂಪನಿಗಳ ತನಕ ಎಲ್ಲ ಸಂಸ್ಥೆಗಳೂ ಎಐನಲ್ಲಿ ಹೂಡಿಕೆ ಹೆಚ್ಚಿಸಲು ಬಯಸುತ್ತಿವೆ. ಮೈಕ್ರೊಸಾಫ್ಟ್‌ ಬೆಂಬಲಿತ ಓಪನ್‌ ಎಐ ಅಭಿವೃದ್ಧಿಪಡಿಸಿರುವ ಚಾಟ್‌ ಜಿಪಿಟಿ ಜನಪ್ರಿಯವಾಗಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಇದನ್ನೂ ಓದಿ: TCS mass resignation : ಟಿಸಿಎಸ್‌ನಲ್ಲಿ ಮಹಿಳಾ ಟೆಕ್ಕಿಗಳ ಸಾಮೂಹಿಕ ರಾಜೀನಾಮೆ‌, ಕಾರಣವೇನು?

ವಿಪ್ರೊ ಕಂಪನಿಯು ವಿಪ್ರೊ ಎಐ360 ಅನ್ನು (wipro ai360) ಅನ್ನು ಬಿಡುಗಡೆಗೊಳಿಸಿದೆ. ಮುಂದಿನ 12 ತಿಂಗಳುಗಳಲ್ಲಿ 2.50 ಲಕ್ಷ ಉದ್ಯೋಗಿಗಳನ್ನು ಎಐ ತಂತ್ರಜ್ಞಾನದಲ್ಲಿ ತರಬೇತುಗೊಳಿಸುವುದಾಗಿ ಕಂಪನಿ ತಿಳಿಸಿದೆ. ಭವಿಷ್ಯದ ದಿನಗಳಲ್ಲಿ ಎಐ ತಂತ್ರಜ್ಞಾನವು ಬಹುತೇಕ ಎಲ್ಲ ವಲಯಗಳನ್ನು ಆವರಿಸಲಿದೆ. ದೈನಂದಿನ ಬದುಕಿಗೆ ಉಪಯುಕ್ತವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

CH Vijayashankar: ಮೇಘಾಲಯ ರಾಜ್ಯಪಾಲರಾಗಿ ಸಿ.ಎಚ್. ವಿಜಯಶಂಕರ್ ನೇಮಕ

CH Vijayashankar: ಬಿಜೆಪಿ ನಾಯಕರಾಗಿರುವ ಚಂದ್ರಶೇಖರ್ ಎಚ್. ವಿಜಯಶಂಕರ್ (21.10.1956) ಲೋಕಸಭೆಯ ಸದಸ್ಯರಾಗಿ ಮೈಸೂರು ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿದ್ದರು. 2017ರ ಅಕ್ಟೋಬರ್‌ನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು. 2019 ನವೆಂಬರ್‌ನಲ್ಲಿ ಮರಳಿ ಬಿಜೆಪಿ ಸೇರಿದ್ದರು.

VISTARANEWS.COM


on

CH Vijayashankar
Koo

ಮೈಸೂರು: ಮೇಘಾಲಯದ (Meghalaya) ರಾಜ್ಯಪಾಲರಾಗಿ (Meghalaya Governor) ರಾಜ್ಯದ ಮಾಜಿ ಸಂಸದ ಸಿ.ಎಚ್. ವಿಜಯಶಂಕರ್ (CH Vijayashankar) ಅವರನ್ನು ನೇಮಕ ಮಾಡಲಾಗಿದೆ.

ಕೇಂದ್ರ ಸರ್ಕಾರದ ಶಿಫಾರಸ್ಸಿನಂತೆ ವಿಜಯಶಂಕರ್‌ ಅವರನ್ನು ಮೇಘಾಲಯದ ರಾಜ್ಯಪಾಲರಾಗಿ ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಆದೇಶ ಹೊರಡಿಸಿದ್ದಾರೆ. ನಿನ್ನೆ ತಡರಾತ್ರಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ವಿಜಯಶಂಕರ್‌ ಅವರು ಮೈಸೂರಿನ ಮಾಜಿ ಸಂಸದ ಹಾಗೂ ಮಾಜಿ ಸಚಿವರಾಗಿದ್ದಾರೆ.

ಬಿಜೆಪಿ ನಾಯಕರಾಗಿರುವ ಚಂದ್ರಶೇಖರ್ ಎಚ್. ವಿಜಯಶಂಕರ್ (21.10.1956) ಲೋಕಸಭೆಯ ಸದಸ್ಯರಾಗಿ ಮೈಸೂರು ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿದ್ದರು. 1994ರಲ್ಲಿ ಹುಣಸೂರಿನಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. 1998ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ 12ನೇ ಲೋಕಸಭೆಗೆ ಆಯ್ಕೆಯಾದರು. ಮೈಸೂರಿನ ಒಡೆಯರ್ ರಾಜವಂಶದ ಮುಖ್ಯಸ್ಥರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿರುದ್ಧ 2004ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ನಿಂತು ಮರು ಆಯ್ಕೆಯಾದರು.

ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಅರಣ್ಯ, ಪರಿಸರ ಇಲಾಖೆ, ಸಣ್ಣ ಪ್ರಮಾಣದ ಕೈಗಾರಿಕೆಗಳು ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ವಿರುದ್ಧ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 15 ಜೂನ್ 2010ರಿಂದ ಜನವರಿ 2016ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. 2017ರ ಅಕ್ಟೋಬರ್‌ನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು. 2019 ನವೆಂಬರ್‌ನಲ್ಲಿ ಮರಳಿ ಬಿಜೆಪಿ ಸೇರಿದ್ದರು.

6 ಮಂದಿ ನೂತನ ರಾಜ್ಯಪಾಲರ ನೇಮಕ

ಪ್ರಧಾನಿ ನರೇಂದ್ರ ಮೋದಿ ಅವರ ನಿಕಟವರ್ತಿಯಾಗಿರುವ ಗುಜರಾತ್‌ನ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಕೈಲಾಸನಾಥನ್ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದೆ. ಹರಿಭಾವು ಬಾಗಡೆ ಅವರನ್ನು ರಾಜಸ್ಥಾನದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಸಂತೋಷ್‌ ಗಂಗ್ವಾರ್ ಅವರು ಜಾರ್ಖಂಡ್‌ಗೆ ಹಾಗೂ ಒ.ಪಿ ಮಾಥುರ್ ಅವರನ್ನು ಸಿಕ್ಕಿಂನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ತ್ರಿಪುರಾ ಮಾಜಿ ಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರನ್ನು ತೆಲಂಗಾಣದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ರಮೆನ್ ದೇಕಾ ಅವರು ಛತ್ತೀಸಗಢಕ್ಕೆ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

ಕೇಂದ್ರ ಸರ್ಕಾರ ಮೂವರು ರಾಜ್ಯಪಾಲರನ್ನು ಬೇರೆ ರಾಜ್ಯಗಳಿಗೆ ವರ್ಗಾವಣೆ ಮಾಡಿದೆ. ಜಾರ್ಖಂಡ್ ಗವರ್ನರ್ ಸಿ.ಪಿ. ರಾಧಾಕೃಷ್ಣನ್ ಅವರನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಗಿದೆ. ಪಂಜಾಬ್‌ನಲ್ಲಿ ಭಗವಂತ ಮಾನ್‌ ನೇತೃತ್ವದ ಎಎಪಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಬನ್ವಾರಿಲಾಲ್ ಪುರೋಹಿತ್ ಅವರ ಸ್ಥಾನಕ್ಕೆ ಅಸ್ಸಾಂನ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ನೇಮಿಸಲಾಗಿದೆ. ಸಿಕ್ಕಿಂ ಗವರ್ನರ್ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಅಸ್ಸಾಂನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಜತೆಗೆ ಮಣಿಪುರದ ರಾಜ್ಯಪಾಲರ ಹೆಚ್ಚುವರಿ ಜವಾಬ್ದಾರಿಯನ್ನು ಸಹ ನೀಡಲಾಗಿದೆ.

ಇದನ್ನೂ ಓದಿ: New Governors: ನೂತನ ರಾಜ್ಯಪಾಲರನ್ನು ನೇಮಿಸಿದ ರಾಷ್ಟ್ರಪತಿ; ಮೈಸೂರಿನ ವಿಜಯ ಶಂಕರ್ ಮೇಘಾಲಯ ಗವರ್ನರ್‌

Continue Reading

ಪ್ರಮುಖ ಸುದ್ದಿ

INDW vs SLW Final: ಇಂದು ಭಾರತ-ಲಂಕಾ ಏಷ್ಯಾ ಕಪ್​ ಫೈನಲ್​; 8ನೇ ಟ್ರೋಫಿ ಮೇಲೆ ಕಣ್ಣಿಟ್ಟ ಹರ್ಮನ್​ಪ್ರೀತ್​​ ಪಡೆ  

INDW vs SLW Final: ದಾಂಬುಲಾದ ರಂಗಿರಿ ಕ್ರಿಕೆಟ್​ ಸ್ಟೇಡಿಯಂನ ಪಿಚ್​ ಚೇಸಿಂಗ್​ ನಡೆಸುವ ತಂಡಕ್ಕೆ ಹೆಚ್ಚಾಗಿ ಸಹಕಾರಿಯಾಗಿದೆ. ಅದರಲ್ಲೂ ಈ ಪಂದ್ಯ ಹಗಲು ರಾತ್ರಿ ನಡೆಯುವ ಕಾರಣ ಸ್ಪಿನ್ನಿಗೆ ಹೆಚ್ಚು ನೆರವು ನೀಡುತ್ತದೆ. ಹೀಗಾಗಿ ಇತ್ತಂಡಗಳು ಕೂಡ ಟಾಸ್​ ಗೆದ್ದರೆ ಚೇಸಿಂಗ್​ ಹಾಗೂ ಸ್ಪಿನ್​ ಬೌಲಿಂಗ್​ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಾಧ್ಯತೆ ಇದೆ.

VISTARANEWS.COM


on

INDW vs SLW Final
Koo

ದಾಂಬುಲಾ,(ಶ್ರೀಲಂಕಾ): ಇಂದು ನಡೆಯುವ 9ನೇ ಆವೃತ್ತಿಯ ಮಹಿಳಾ ಏಷ್ಯಾಕಪ್​ ಫೈನಲ್​(Womens Asia Cup Final) ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಮತ್ತು ಹಾಲಿ ಚಾಂಪಿಯನ್​ ಭಾರತ(India Women vs Sri Lanka Women Final) ಮುಖಾಮುಖಿಯಾಗಲಿವೆ. 7 ಬಾರಿಯ ಚಾಂಪಿಯನ್​ ಭಾರತವೇ(INDW vs SLW Final) ಈ ಬಾರಿಯ ಪ್ರಶಸ್ತಿ ಗೆಲ್ಲುವ ಹಾಟ್‌ ಫೇವರಿಟ್‌ ಆಗಿದೆ. ಅತ್ತ ಆತಿಥೇಯ ಲಂಕಾ ಚೊಚ್ಚಲ ಪ್ರಶಸ್ತಿ ಗೆಲ್ಲುವ ಇದಾರೆಯಲ್ಲಿದೆ. ಹೀಗಾಗಿ ಈ ಪಂದ್ಯದವನ್ನು ಹೈವೋಲ್ಟೇಜ್​ ಎಂದು ನಿರೀಕ್ಷೆ ಮಾಡಬಹುದು.

ಭಾರತ ಪರ ಬ್ಯಾಟಿಂಗ್​ನಲ್ಲಿ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮ ಮತ್ತು ಸ್ಮೃತಿ ಮಂಧಾನ ಎಲ್ಲ ಪಂದ್ಯಗಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ಶಫಾಲಿ 184 ರನ್​ ಗಳಿಸಿ ಕೂಟದ ಅತ್ಯಧಿಕ ರನ್​ ಗಳಿಸಿದ ಆಟಗಾರ್ತಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ವಿಭಾಗ ತುಂಬಾನೆ ಘಾತಕವಾಗಿದೆ. ಸ್ಪಿನ್ನ್​ ಮತ್ತು ವೇಗದ ವಿಭಾಗದಲ್ಲಿ ಸಮತೋಲಿತವಾಗಿದೆ. ರಾಧಾ ಯಾದವ್​, ಆಲ್​ರೌಂಡರ್​ ದೀಪ್ತಿ ಶರ್ಮಾ ತಂಡದ ಸ್ಪಿನ್ನರ್​ಗಳಾದರೆ, ವೇಗಿ ರೇಣುಕಾ ಸಿಂಗ್​ ಮತ್ತು ಪೂಜಾ ವಸ್ತ್ರಾಕರ್​ ವೇಗಿಗಳಾಗಿದ್ದಾರೆ.

ಎದುರಾಳಿ ಶ್ರೀಲಂಕಾವನ್ನು ಕಡೆಗಣಿಸುವಂತಿಲ್ಲ. ಕೂಟದ ಗರಿಷ್ಠ ಸ್ಕೋರರ್​ ಎನಿಸಿಕೊಂಡಿರುವ ನಾಯಕಿ ಚಾಮರಿ ಅತಪಟ್ಟು ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಒಂದು ಶತಕ ಕೂಡ ಬಾರಿಸಿದ್ದಾರೆ. ಆಡಿದ 4 ಪಂದ್ಯಗಳಿಂದ 243 ರನ್​ ಕಲೆ ಹಾಕಿದ್ದಾರೆ. ಇವರು ಸಿಡಿದು ನಿಂತರೆ ಪಂದ್ಯದ ಗತಿಯೇ ಬದಲಾಗಬಹುದು. ಹೀಗಾಗಿ ಇವರನ್ನು ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸದಂತೆ ಭಾರತೀಯ ಬೌಲರ್​ಗಳು ನೋಡಿಕೊಳ್ಳುವ ಅಗತ್ಯವಿದೆ.

ದಾಂಬುಲಾದ ರಂಗಿರಿ ಕ್ರಿಕೆಟ್​ ಸ್ಟೇಡಿಯಂನ ಪಿಚ್​ ಚೇಸಿಂಗ್​ ನಡೆಸುವ ತಂಡಕ್ಕೆ ಹೆಚ್ಚಾಗಿ ಸಹಕಾರಿಯಾಗಿದೆ. ಅದರಲ್ಲೂ ಈ ಪಂದ್ಯ ಹಗಲು ರಾತ್ರಿ ನಡೆಯುವ ಕಾರಣ ಸ್ಪಿನ್ನಿಗೆ ಹೆಚ್ಚು ನೆರವು ನೀಡುತ್ತದೆ. ಹೀಗಾಗಿ ಇತ್ತಂಡಗಳು ಕೂಡ ಟಾಸ್​ ಗೆದ್ದರೆ ಚೇಸಿಂಗ್​ ಹಾಗೂ ಸ್ಪಿನ್​ ಬೌಲಿಂಗ್​ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ Paris Olympics 2024 : ಭಾರತಕ್ಕೆ ಒಲಿಂಪಿಕ್ ಕ್ರೀಡಾಕೂಟ ತರುವ ದಿನ ದೂರವಿಲ್ಲ; ಇಂಡಿಯಾ ಹೌಸ್ ಉದ್ಘಾಟನೆಯಲ್ಲಿ ನೀತಾ ಅಂಬಾನಿ

ಇದುವರೆಗಿನ ಮಹಿಳಾ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ಮತ್ತು ಶ್ರೀಲಂಕಾ 5 ಬಾರಿ ಫೈನಲ್​ ಮುಖಾಮುಖಿಯಾಗಿವೆ. ಎಲ್ಲ ಪಂದ್ಯಗಳನ್ನು ಭಾರತವೇ ಗೆದ್ದು ಬೀಗಿದೆ. ಈ ಬಾರಿಯದ್ದು 6ನೇ ಮುಖಾಮುಖಿ. ಮಹಿಳಾ ಏಷ್ಯಾ ಕಪ್​ ಈವರೆಗಿನ 8 ಕೂಟಗಳಲ್ಲಿ ಭಾರತ 7 ಸಲ ಚಾಂಪಿಯನ್‌ ಆಗುವ ಮೂಲಕ ಪ್ರಭುತ್ವ ಸಾಧಿಸಿದೆ. ಸೋಲು ಕಂಡಿದ್ದು ಒಮ್ಮೆ ಮಾತ್ರ. ಅದು 2018ರಲ್ಲಿ ಬಾಂಗ್ಲಾದೇಶ ವಿರುದ್ಧ. ಅಂದಿನ ಫೈನಲ್​ ಪಂದ್ಯದಲ್ಲಿ ಭಾರತ 3 ವಿಕೆಟ್‌ ಅಂತರದಿಂದ ಸೋಲನುಭವಿಸಿ ಪ್ರಶಸ್ತಿಯಿಂದ ವಂಚಿತವಾಗಿತ್ತು.

ಸಂಭಾವ್ಯ ತಂಡಗಳು


ಶ್ರೀಲಂಕಾ: ವಿಶ್ಮಿ ಗುಣರತ್ನೆ, ಚಾಮರಿ ಅಟಪಟ್ಟು (ನಾಯಕಿ), ಹರ್ಷಿತಾ ಸಮರವಿಕ್ರಮ, ಹಾಸಿನಿ ಪೆರೇರಾ, ಅನುಷ್ಕಾ ಸಂಜೀವನಿ (ವಾಕ್), ಕವಿಶಾ ದಿಲ್ಹಾರಿ, ನೀಲಾಕ್ಷಿ ಡಿ ಸಿಲ್ವಾ, ಇನೋಶಿ ಪ್ರಿಯದರ್ಶನಿ, ಉದೇಶಿಕಾ ಪ್ರಬೋಧನಿ, ಸುಗಂದಿಕಾ ಕುಮಾರಿ, ಅಚಿನಿ ಕುಲಸೂರ್ಯ.

ಭಾರತ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಉಮಾ ಚೆಟ್ರಿ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೀ), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ತನುಜಾ ಕನ್ವರ್, ರೇಣುಕಾ ಠಾಕೂರ್ ಸಿಂಗ್.

Continue Reading

ಪ್ರಮುಖ ಸುದ್ದಿ

Olympic Games Paris: ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಸ್ಪರ್ಧೆಗಳ ವಿವರ

Olympic Games Paris: ವನಿತೆಯರ 10 ಮೀ. ಏರ್‌ ಪಿಸ್ತೂಲ್‌ ಫೈನಲ್‌ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್‌ ಕಣಕ್ಕಿಳಿಯಲಿದ್ದಾರೆ.

VISTARANEWS.COM


on

Koo

ಪ್ಯಾರಿಸ್​: ಒಲಿಂಪಿಕ್ಸ್​ನಲ್ಲಿ(Olympic Games Paris) ಶನಿವಾರ ಭಾರತಕ್ಕೆ ಮಿಶ್ರ ಫಲಿತಾಂಶ ಲಭಿಸಿತ್ತು. ಇಂದು(ಭಾನುವಾರ) ಹಲವು ಸ್ಪರ್ಧೆಗಳಲ್ಲಿ ಭಾರತದ ಕ್ರೀಡಾಪಟುಗಳು ಪದಕ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಇಂದಿನ ಸ್ಪರ್ಧೆಯ ವೇಳಾಪಟ್ಟಿ ಹೀಗಿದೆ.

ಬ್ಯಾಡ್ಮಿಂಟನ್‌ (ಆರಂಭ: ಮಧ್ಯಾಹ್ನ 12.45)

ಪುರುಷರ ಸಿಂಗಲ್ಸ್‌ ಗ್ರೂಪ್‌ ಹಂತ: ಎಚ್‌.ಎಸ್‌. ಪ್ರಣಯ್‌, ಲಕ್ಷ್ಯ ಸೇನ್‌.

ಮಹಿಳಾ ಸಿಂಗಲ್ಸ್‌ ಗ್ರೂಪ್‌ ಹಂತ: ಪಿ.ವಿ. ಸಿಂಧು.

ಪುರುಷರ ಡಬಲ್ಸ್‌ ಗ್ರೂಪ್‌ ಹಂತ: ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌.

ಮಹಿಳಾ ಡಬಲ್ಸ್‌ ಗ್ರೂಪ್‌ ಹಂತ: ತನಿಷಾ ಕ್ರಾಸ್ಟೊ-ಅಶ್ವಿ‌ನಿ ಪೊನ್ನಪ್ಪ.

ಶೂಟಿಂಗ್‌ (ಮಧ್ಯಾಹ್ನ12.45)

ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ಅರ್ಹತಾ ಸುತ್ತು: ಇಳವೆನಿಲ್‌ ವಲರಿವನ್‌, ರಮಿತಾ ಜಿಂದಲ್‌.

ಪುರುಷರ 10 ಮೀ. ಏರ್‌ ಪಿಸ್ತೂಲ್‌ ಫೈನಲ್‌
ಪುರುಷರ 10 ಮೀ. ಏರ್‌ ರೈಫ‌ಲ್‌ ಅರ್ಹತಾ ಸುತ್ತು:
ಸಂದೀಪ್‌ ಸಿಂಗ್‌, ಅರ್ಜುನ್‌ ಬಬುಟ.(ಮಧ್ಯಾಹ್ನ 2.45)

ವನಿತೆಯರ 10 ಮೀ. ಏರ್‌ ಪಿಸ್ತೂಲ್‌ ಫೈನಲ್‌: ಮನು ಭಾಕರ್‌ (ಮಧ್ಯಾಹ್ನ, 3.30)

ಆರ್ಚರಿ

ಮಹಿಳೆಯರ ತಂಡ ಸ್ಪರ್ಧೆ, 16ರ ಸುತ್ತು: ದೀಪಿಕಾ ಕುಮಾರಿ, ಅಂಕಿತಾ ಭಕತ್‌, ಭಜನ್‌ ಕೌರ್‌. (ಮಧ್ಯಾಹ್ನ 1.00)

ಮಹಿಳಾ ತಂಡದ ಕಂಚಿನ ಸ್ಪರ್ಧೆ.(ರಾತ್ರಿ 8.18)

ಮಹಿಳಾ ತಂಡದ ಚಿನ್ನದ ಸ್ಪರ್ಧೆ.(ರಾತ್ರಿ 8.41)

ರೋಯಿಂಗ್​


ಪುರುಷರ ಸಿಂಗಲ್‌ ಸ್ಕಲ್ಸ್‌ ರೆಪಿಶಾಜ್‌ ಸುತ್ತು: ಬಲ್ರಾಜ್‌ ಪನ್ವರ್‌.(ಮಧ್ಯಾಹ್ನ 1.06)

ಟೇಬಲ್‌ ಟೆನಿಸ್

ಪುರುಷರ ಸಿಂಗಲ್ಸ್‌: ಶರತ್‌ ಕಮಲ್‌, ಹರ್ಮೀತ್‌ ದೇಸಾಯಿ.

ಮಹಿಳಾ ಸಿಂಗಲ್ಸ್‌: ಮಣಿಕಾ ಬಾತ್ರಾ, ಶ್ರೀಜಾ ಅಕುಲಾ.(ಮಧ್ಯಾಹ್ನ 1.30)

ಬಾಕ್ಸಿಂಗ್‌


ಪುರುಷರ 51 ಕೆಜಿ, 32ರ ಸುತ್ತು: ಅಮಿತ್‌ ಪಂಘಲ್‌.(ಮಧ್ಯಾಹ್ನ 2.30)

ಪುರುಷರ 71 ಕೆಜಿ, 32ರ ಸುತ್ತು: ನಿಶಾಂತ್‌ ದೇವ್‌.(ಮಧ್ಯಾಹ್ನ 3.02)

ಮಹಿಳೆಯರ 50 ಕೆಜಿ, 32ರ ಸುತ್ತು: ನಿಖತ್‌ ಜರೀನ್‌ (ಸಂಜೆ 4.06)

ಈಜು


ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ ಹೀಟ್ಸ್‌: ಶ್ರಿಹರಿ ನಟರಾಜ್‌.

ವನಿತೆಯರ 200 ಮೀ. ಫ್ರೀಸ್ಟೈಲ್‌ ಹೀಟ್ಸ್‌: ಧಿನಿಧಿ ದೇಸಿಂಗೂ. (ಮಧ್ಯಾಹ್ನ 2.30)

ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ ಸೆಮಿಫೈನಲ್‌. (ತಡರಾತ್ರಿ 1.02)

ಮಹಿಳೆಯರ 200 ಮೀ. ಫ್ರೀಸ್ಟೈಲ್‌ ಸೆಮಿಫೈನಲ್‌.(ತಡರಾತ್ರಿ 1.20.)

ಟೆನಿಸ್‌

ಪುರುಷರ ಸಿಂಗಲ್ಸ್‌ ಮೊದಲ ಸುತ್ತು: ಸುಮಿತ್‌ ನಾಗಲ್‌.

ಪುರುಷರ ಡಬಲ್ಸ್‌: ರೋಹನ್‌ ಬೋಪಣ್ಣ-ಶ್ರೀರಾಮ್‌ ಬಾಲಾಜಿ(ಮಧ್ಯಾಹ್ನ 3.30)

Continue Reading

ದೇಶ

New Governors: ನೂತನ ರಾಜ್ಯಪಾಲರನ್ನು ನೇಮಿಸಿದ ರಾಷ್ಟ್ರಪತಿ; ಮೈಸೂರಿನ ವಿಜಯ ಶಂಕರ್ ಮೇಘಾಲಯ ಗವರ್ನರ್‌

New Governors: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 6 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ. ಈ ಪೈಕಿ ಮೇಘಾಲಯದ ರಾಜ್ಯಪಾಲರಾಗಿ ಮೈಸೂರಿನ ಮಾಜಿ ಸಂಸದ, ಮಾಜಿ ಸಚಿವ ಸಿ.ಎಚ್.ವಿಜಯ ಶಂಕರ್ ನೇಮಕವಾಗಿದ್ದಾರೆ. ಹೊಸ ರಾಜ್ಯಪಾಲರ ಪಟ್ಟಿ ಇಲ್ಲಿದೆ.

VISTARANEWS.COM


on

New Governors
Koo

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು 6 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ (New Governors). ಜತೆಗೆ ಮೂವರು ರಾಜ್ಯಪಾಲರನ್ನು ಬೇರೆಡೆಗೆ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಪೈಕಿ ಮೇಘಾಲಯದ ರಾಜ್ಯಪಾಲರಾಗಿ ಮೈಸೂರಿನ ಮಾಜಿ ಸಂಸದ, ಮಾಜಿ ಸಚಿವ ಸಿ.ಎಚ್.ವಿಜಯ ಶಂಕರ್ ನೇಮಕವಾಗಿದ್ದಾರೆ. ಇನ್ನು ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಅಸ್ಸಾಂ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದ್ದು, ಅವರಿಗೆ ಮಣಿಪುರದ ಹೆಚ್ಚುವರಿ ಉಸ್ತುವಾರಿ ನೀಡಲಾಗಿದೆ. ಬನ್ವಾರಿಲಾಲ್ ಪುರೋಹಿತ್ ಅವರ ಬದಲಿಗೆ ಗುಲಾಬ್ ಚಂದ್ ಕಟಾರಿಯಾ ಅವರನ್ನು ಪಂಜಾಬ್ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನ ಪ್ರಕಟಿಸಿದೆ.

ಇನ್ನು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದ ಆಡಳಿತಾಧಿಕಾರಿಯಾಗಿ ಗುಲಾಬ್ ಚಂದ್ ಕಟಾರಿಯಾ ಅವರನ್ನೇ ನೇಮಕ ಮಾಡಲಾಗಿದೆ. ಪಂಜಾಬ್ ರಾಜ್ಯಪಾಲ ಮತ್ತು ಚಂಡೀಗಢದ ಆಡಳಿತಾಧಿಕಾರಿ ಹುದ್ದೆಗೆ ಬನ್ವಾರಿಲಾಲ್ ಪುರೋಹಿತ್ ಅವರು ಫೆಬ್ರವರಿಯಲ್ಲಿ ರಾಜೀನಾಮೆ ನೀಡಿದ್ದು, ರಾಷ್ಟ್ರಪದಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ. 83 ವರ್ಷದ ಬನ್ವಾರಿಲಾಲ್ ಪುರೋಹಿತ್ ತಮ್ಮ ರಾಜೀನಾಮೆ ಪತ್ರದಲ್ಲಿ, “ವೈಯಕ್ತಿಕ ಕಾರಣಗಳು ಮತ್ತು ಇತರ ಕೆಲವು ಬದ್ಧತೆಗಳಿಂದಾಗಿ ನಾನು ಕೇಂದ್ರಾಡಳಿತ ಪ್ರದೇಶ ಚಂಡೀಗಢದ ರಾಜ್ಯಪಾಲ ಮತ್ತು ಆಡಳಿತಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆʼʼ ಎಂದು ತಿಳಿಸಿದ್ದರು.

ಸಿಕ್ಕಿಂ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಅಸ್ಸಾಂ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ ಮತ್ತು ಹೆಚ್ಚುವರಿಯಾಗಿ ಮಣಿಪುರದ ಜವಾಬ್ದಾರಿಯನ್ನು ಸಹ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅನುಸೂಯಾ ಉಕ್ಯೆ ಅವರು ಕಳೆದ ವರ್ಷ ಫೆಬ್ರವರಿಯಿಂದ ಮಣಿಪುರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಿಜೆಪಿ ಹಿರಿಯ ನಾಯಕ ಓಂ ಪ್ರಕಾಶ್ ಮಾಥುರ್ ಅವರನ್ನು ಸಿಕ್ಕಿಂನ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ತೆಲಂಗಾಣದ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದ ಜಾರ್ಖಂಡ್ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರಿಗೆ ಮಹಾರಾಷ್ಟ್ರದ ಜಬಾಬ್ದಾರಿ ನೀಡಲಾಗಿದೆ. ಕೇಂದ್ರದ ಮಾಜಿ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರನ್ನು ಜಾರ್ಖಂಡ್ ರಾಜ್ಯಪಾಲರನ್ನಾಗಿ ನಿಯುಕ್ತಿಗೊಳಿಸಲಾಗಿದೆ.

ತ್ರಿಪುರಾದ ಮಾಜಿ ಉಪಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರನ್ನು ತೆಲಂಗಾಣದ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸಾರ್ಹ ಸಹಾಯಕರಲ್ಲಿ ಒಬ್ಬರಾದ ಮಾಜಿ ಐಎಎಸ್ ಅಧಿಕಾರಿ ಕೆ.ಕೈಲಾಶ್‌ನಾಥನ್‌ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಮುಖ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೈಲಾಶ್‌ನಾಥನ್‌ ಜೂನ್ 30ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಮಹಾರಾಷ್ಟ್ರದ ಬಿಜೆಪಿಯ ಹಿರಿಯ ನಾಯಕ ಹರಿಭಾವು ಕಿಸಾನ್ ರಾವ್ ಬಾಗ್ಡೆ ಅವರನ್ನು ರಾಜಸ್ಥಾನದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಅಸ್ಸಾಂನ ಮಾಜಿ ಲೋಕಸಭಾ ಸದಸ್ಯ ರಾಮನ್ ದೇಕಾ ಅವರನ್ನು ಛತ್ತೀಸ್ ಗಢದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ರಾಜ್ಯ ಹೊಸ ರಾಜ್ಯಪಾಲರು
ಮೇಘಾಲಯಸಿ.ಎಚ್.ವಿಜಯ ಶಂಕರ್
ರಾಜಸ್ಥಾನಹರಿಭಾವು ಕಿಸಾನ್ ರಾವ್ ಬಾಗ್ಡೆ
ತೆಲಂಗಾಣಜಿಷ್ಣು ದೇವ್ ವರ್ಮಾ
ಸಿಕ್ಕಿಂಓಂ ಪ್ರಕಾಶ್ ಮಾಥುರ್
ಜಾರ್ಖಂಡ್ಸಂತೋಷ್ ಕುಮಾರ್ ಗಂಗ್ವಾರ್
ಛತ್ತೀಸ್‌ಗಢರಾಮನ್ ದೇಕಾ
ಮಹಾರಾಷ್ಟ್ರಸಿ.ಪಿ. ರಾಧಾಕೃಷ್ಣನ್
ಪಂಜಾಬ್ಗುಲಾಬ್ ಚಂದ್ ಕಟಾರಿಯಾ
ಅಸ್ಸಾಂ, ಮಣಿಪುರಲಕ್ಷ್ಮಣ್ ಪ್ರಸಾದ್ ಆಚಾರ್ಯ

ಇದನ್ನೂ ಓದಿ: Delhi Floods: ದೆಹಲಿಯಲ್ಲಿ ಭಾರಿ ಮಳೆ; ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಇಬ್ಬರು ವಿದ್ಯಾರ್ಥಿನಿಯರ ಸಾವು!

Continue Reading
Advertisement
IND vs SL
ಕ್ರೀಡೆ4 mins ago

IND vs SL: ಗ್ಲೆನ್​ ಮ್ಯಾಕ್ಸ್​ವೆಲ್​ ಟಿ20 ವಿಶ್ವ ದಾಖಲೆ ಮುರಿದ ಸೂರ್ಯಕುಮಾರ್

Gold Rate Today
ಚಿನ್ನದ ದರ18 mins ago

Gold Rate Today: ಆಭರಣ ಖರೀದಿಸುವ ಯೋಚನೆಯಲ್ಲಿದ್ದೀರಾ? ಇಂದಿನ ಬೆಲೆ ಚೆಕ್‌ ಮಾಡಿ

Bigg Boss OTT 3 Anil Kapoor as the worst ever host of Bigg Boss
ಬಿಗ್ ಬಾಸ್23 mins ago

Bigg Boss OTT 3: ಅನಿಲ್​ ಕಪೂರ್ ʻವರ್ಸ್ಟ್‌ ನಿರೂಪಕʼ ಎಂದ ನೆಟ್ಟಿಗರು ; ಬೇಸತ್ತ ವೀಕ್ಷಕರು!

CH Vijayashankar
ಪ್ರಮುಖ ಸುದ್ದಿ36 mins ago

CH Vijayashankar: ಮೇಘಾಲಯ ರಾಜ್ಯಪಾಲರಾಗಿ ಸಿ.ಎಚ್. ವಿಜಯಶಂಕರ್ ನೇಮಕ

Vinay Rajkumar pepe the film A certificate
ಸ್ಯಾಂಡಲ್ ವುಡ್48 mins ago

Vinay Rajkumar: ಸೆನ್ಸಾರ್ ಪಾಸಾದ ‘ಪೆಪೆ’; ವಿನಯ್ ರಾಜ್ ಕುಮಾರ್ ಚಿತ್ರಕ್ಕೆ A’ ಸರ್ಟಿಫಿಕೇಟ್!

INDW vs SLW Final
ಪ್ರಮುಖ ಸುದ್ದಿ48 mins ago

INDW vs SLW Final: ಇಂದು ಭಾರತ-ಲಂಕಾ ಏಷ್ಯಾ ಕಪ್​ ಫೈನಲ್​; 8ನೇ ಟ್ರೋಫಿ ಮೇಲೆ ಕಣ್ಣಿಟ್ಟ ಹರ್ಮನ್​ಪ್ರೀತ್​​ ಪಡೆ  

Suzuki India
ಆಟೋಮೊಬೈಲ್50 mins ago

4 ಲಕ್ಷ ಬೈಕ್‌, ಸ್ಕೂಟರ್‌ ಹಿಂಪಡೆಯಲು ಮುಂದಾದ ಸುಜುಕಿ ಇಂಡಿಯಾ; ಈ ಪಟ್ಟಿಯಲ್ಲಿ ನಿಮ್ಮ ವಾಹನವೂ ಇದ್ಯಾ? ಹೀಗೆ ಚೆಕ್‌ ಮಾಡಿ

rowdysheeters police firing
ಕ್ರೈಂ57 mins ago

Police Firing: ಕೈ ಕಟ್‌ ಮಾಡಿದ ರೌಡಿಗಳ ಕಾಲಿಗೆ ಪೊಲೀಸರ ಗುಂಡೇಟು

ಪ್ರಮುಖ ಸುದ್ದಿ1 hour ago

Olympic Games Paris: ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಸ್ಪರ್ಧೆಗಳ ವಿವರ

Bigg Boss Marathi 5 premiere ritesh deshmukh co star shubhankar tawde
ಬಿಗ್ ಬಾಸ್1 hour ago

Bigg Boss Marathi 5: ಶುರುವಾಯ್ತು ಮರಾಠಿ ಬಿಗ್​ಬಾಸ್ 5; ಈ ಬಾರಿ ರಿತೇಶ್ ದೇಶ್​ಮುಖ್ ನಿರೂಪಕ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ15 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ20 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ21 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ3 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್3 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ3 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌