ಕೆಲಸ ಮಾಡಿ, ಇಲ್ಲದಿದ್ದರೆ ಮನೆಗೆ ಹೊರಡಿ: ಬಿಎಸ್ಸೆನ್ನೆಲ್‌ ಸಿಬ್ಬಂದಿಗೆ ಟೆಲಿಕಾಂ ಸಚಿವರ ತಾಕೀತು - Vistara News

ಪ್ರಮುಖ ಸುದ್ದಿ

ಕೆಲಸ ಮಾಡಿ, ಇಲ್ಲದಿದ್ದರೆ ಮನೆಗೆ ಹೊರಡಿ: ಬಿಎಸ್ಸೆನ್ನೆಲ್‌ ಸಿಬ್ಬಂದಿಗೆ ಟೆಲಿಕಾಂ ಸಚಿವರ ತಾಕೀತು

ಬಿಎಸ್ಸೆನ್ನೆಲ್‌ನಲ್ಲಿ ಕೆಲಸ ಮಾಡುವ ಎಲ್ಲ 62,000 ಉದ್ಯೋಗಿಗಳೂ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ತಪ್ಪಿದರೆ ಅಂಥವರನ್ನು ಬಲವಂತದ ನಿವೃತ್ತಿಗೆ ಒಳಪಡಿಸಲಾಗುವುದು ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ಎಚ್ಚರಿಸಿದ್ದಾರೆ.

VISTARANEWS.COM


on

BSNL users data hack and sold on dark web
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆಯಾದ ಬಿಎಸ್ಸೆನ್ನೆಲ್‌ನ ಉದ್ಯೋಗಿಗಳಿಗೆ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ಅವರು ನೀಡಿದ ಕಠಿಣ ಸಂದೇಶದಲ್ಲಿ, ” ನಿರೀಕ್ಷೆಗೆ ತಕ್ಕಂತೆ ಸರಿಯಾಗಿ ಕೆಲಸ ಮಾಡಿ, ಇಲ್ಲದಿದ್ದರೆ ಬಲವಂತದ ನಿವೃತ್ತಿಗೆ ಸಿದ್ಧರಾಗಿʼʼ ಎಂದು ಎಚ್ಚರಿಸಿದ್ದಾರೆ.

ಬಿಎಸ್ಸೆನ್ನೆಲ್‌ ಸಿಬ್ಬಂದಿ ತನ್ನ “ಸರ್ಕಾರಿʼ ಧೋರಣೆಯನ್ನು ಕೈಬಿಟ್ಟು, ಚೆನ್ನಾಗಿ ದುಡಿದು ಸಂಸ್ಥೆಯ ಅಭಿವೃದ್ಧಿಗೆ ಕಾರಣರಾಗಬೇಕು. ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದಿದ್ದರೆ ಅಂಥವರನ್ನು ಗುರುತಿಸಿ ಬಲವಂತದ ನಿವೃತ್ತಿ ಕೊಟ್ಟು ಮನೆಗೆ ಕಳಿಸಲಾಗುವುದು. ಇದರಲ್ಲಿ ಯಾವುದೇ ಸಂದೇಹವೇ ಬೇಡ ಎಂದು ಸಚಿವರು ಹೇಳಿದ್ದಾರೆ.

ಬಿಎಸ್ಸೆನ್ನೆಲ್‌ನಲ್ಲಿ ೬೨,೦೦೦ ಉದ್ಯೋಗಿಗಳಿದ್ದು, ಸಮರ್ಪಕವಾಗಿ ಕೆಲಸ ಮಾಡದ ಉದ್ಯೋಗಿಗಳಿಗೆ ಇದೀಗ ಬಲವಂತದ ನಿವೃತ್ತಿ ಸನ್ನಿಹಿತವಾಗಿದೆ. ಇತ್ತೀಚೆಗೆ ಬಿಎಸ್ಸೆನ್ನೆಲ್‌ಗೆ ಕಾಯಕಲ್ಪ ನೀಡಲು ೧.೬೪ ಲಕ್ಷ ಕೋಟಿ ರೂ. ಪ್ಯಾಕೇಜ್‌ ಘೋಷಿಸಲಾಗಿತ್ತು. ಬಿಎಸ್ಸೆನ್ನೆಲ್‌ ಖಾಸಗಿ ವಲಯದ ರಿಲಯನ್ಸ್‌ ಜಿಯೊ, ಏರ್‌ಟೆಲ್‌ನಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದೆ. ಇದನ್ನು ಎದುರಿಸಲೇಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್

ಬಿಎಸ್ಸೆನ್ನೆಲ್‌ ಟೆಲಿಕಾಂ ಕಚೇರಿಗಳಲ್ಲಿ ಮತ್ತು ದೂರಸಂಪರ್ಕ ವಿನಿಮಯ ಕೇಂದ್ರಗಳಲ್ಲಿ ಆಡಳಿ ವ್ಯವಸ್ಥೆಯ ಲೋಪದೋಷಗಳು, ಸಿಬ್ಬಂದಿಯ ಅದಕ್ಷತೆಯಿಂದ ಸ್ವಚ್ಛ ವಾತಾವರಣವನ್ನು ಕೂಡ ಕಲ್ಪಿಸಲು ಸಾಧ್ಯವಾಗಿಲ್ಲ. ಕಚೇರಿಗಳ ಕೊಳಕು ಮತ್ತು ಕಳಪೆ ಪರಿಸ್ಥಿತಿಯನ್ನು ಸಹಿಸಲಾಗದು ಎಂದು ಸಚಿವರು ಹೇಳಿದ್ದಾರೆ.

ಸಮಸ್ಯೆಗಳೇನೇ ಇರಲಿ, ಬಿಎಸ್ಸೆನ್ನೆಲ್‌ ಎಲ್ಲ ೬೨ ಸಾವಿರ ಉದ್ಯೋಗಿಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಪ್ರತಿ ತಿಂಗಳು ಎಲ್ಲರ ಕಾರ್ಯವೈಖರಿಯನ್ನು ಮಾಪನ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಭಾರತದ ಟೆಲಿಕಾಂ ಕಂಪನಿಗಳ ಪೈಕಿ ಅತ್ಯಂತ ಹೆಚ್ಚು ಉದ್ಯೋಗಿಗಳನ್ನು ಬಿಎಸ್ಸೆನ್ನೆಲ್‌ ಹೊಂದಿದೆ. ಬಿಎಸ್ಸೆನ್ನೆಲ್‌ ಅನ್ನು ೨೦೦೦ನೇ ಅಕ್ಟೋಬರ್‌ ೧ಕ್ಕೆ ಆರಂಭಿಸಲಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Neeraj Chopra: ನೀರಜ್‌ ಚೋಪ್ರಾ ಜಾವೆಲಿನ್‌ ಎಸೆತದಲ್ಲಿ ಭಾರತಕ್ಕೆ ಚಿನ್ನ ಮಿಸ್‌ ಆದದ್ದು ಹೇಗೆ? ಕೋಚ್‌ ಏನ್‌ ಹೇಳ್ತಾರೆ ನೋಡಿ

Neeraj Chopra: ಭಾರತೀಯ ಸೇನೆಯಲ್ಲಿ ನಾಯ್ಕ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಶೀನಾಥ್ ನಾಯ್ಕ್, ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಮೂಲದವರು. 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜಾವೆಲಿನ್‌ ಎಸೆತದಲ್ಲಿ ಕಾಶೀನಾಥ್ ನಾಯ್ಕ್ ಕಂಚಿನ ಪದಕ ಗೆದ್ದವರು.

VISTARANEWS.COM


on

neeraj chopra kashinath naik 1
ಕೋಚ್‌ ಕಾಶಿನಾಥ್‌ ನಾಯ್ಕ್‌ ಜೊತೆಗೆ ನೀರಜ್‌ ಚೋಪ್ರಾ
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ನಿನ್ನೆ ರಾತ್ರಿ ನಡೆದ ಜಾವೆಲಿನ್‌ ಎಸೆತ (Javelin throw) ಪಂದ್ಯದಲ್ಲಿ ಭಾರತಕ್ಕೆ ಬೆಳ್ಳಿಯ ಪದಕ (Silver medal) ಗೆದ್ದುಕೊಟ್ಟಿದ್ದಾರೆ ಬಂಗಾರದ ಹುಡುಗ ನೀರಜ್ ಚೋಪ್ರಾ (Neeraj Chopra). ಚಿನ್ನದ ಪದಕವನ್ನೇ ಗೆದ್ದು ತರುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಅದು ಕೈತಪ್ಪಿತು. ಯಾಕೆ ಹೀಗಾಯ್ತು? ಇದಕ್ಕೆ ನೀರಜ್ ಚೋಪ್ರಾ ಅವರ ಕೋಚ್‌ (Coach) ಕಾಶೀನಾಥ್ ನಾಯ್ಕ್ (Kashinath Naik) ನೀಡಿದ ಕಾರಣ ಇಲ್ಲಿದೆ.

ಭಾರತೀಯ ಸೇನೆಯಲ್ಲಿ ನಾಯ್ಕ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಶೀನಾಥ್ ನಾಯ್ಕ್, ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಮೂಲದವರು. 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜಾವೆಲಿನ್‌ ಎಸೆತದಲ್ಲಿ ಕಾಶೀನಾಥ್ ನಾಯ್ಕ್ ಕಂಚಿನ ಪದಕ ಗೆದ್ದವರು.

ʼನೀರಜ್ ಚೋಪ್ರಾ ಸತತ ಎರಡನೇ ಬಾರಿ ಒಲಿಂಪಿಕ್ಸ್ ಪದಕ ಗೆಲ್ಲುತ್ತಿರೋದಕ್ಕೆ ಸಂತಸವಾಗಿದೆ. ಆದರೆ ಈ ಬಾರಿ ಚಿನ್ನ ಗೆಲ್ಲೋದಕ್ಕೆ ಸಾಧ್ಯವಾಗಿಲ್ಲ ಅನ್ನೋ ಬೇಸರವೂ ಇದೆ. ನೀರಜ್ ಚೋಪ್ರಾ ಅತ್ಯುತ್ತಮ ಎಸೆತವನ್ನೇ ಎಸೆದಿದ್ದಾರೆ. ಆದರೆ ಪಾಕಿಸ್ತಾನದ ಅರ್ಷದ್ ನದೀಮ್ ಇನ್ನಷ್ಟು ಅತ್ಯುತ್ತಮ ಎಸೆತವನ್ನು ಎಸೆದಿದ್ದಾರೆ. ನೀರಜ್‌ ತನ್ನ ಮೊದಲ ಎಸೆತದಲ್ಲಿ ಪೌಲ್‌ ಆಗಿದ್ದು ಬೆಳ್ಳಿ ಪದಕ ಬರುವುದಕ್ಕೆ ಕಾರಣವಾಯಿತುʼ ಎಂದು ಕಾಶೀನಾಥ್‌ ವಿವರಿಸಿದ್ದಾರೆ.

ಕೋಚ್‌ ಕಾಶಿನಾಥ ನಾಯ್ಕ್‌

2022ರ ಕಾಮನ್ ವೇಲ್ತ್ ಗೇಮ್ಸ್ ಬಳಿಕ ಅರ್ಷದ್ ನದೀಮ್ ಗಾಯದ ಸಮಸ್ಯೆಗೊಳಗಾಗಿದ್ದರು. ಗಾಯದಿಂದ ವಾಪಸಾದ ಬಳಿಕವೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿಯೂ 88 ಮೀಟರ್ ಎಸೆದಿದ್ರು. ಆದ್ರೆ ನೀರಜ್ ತನ್ನ ಮೊದಲ ಎಸೆತದಲ್ಲಿ ಪೌಲ್ ಆಗಿದ್ದು ಅವರಿಗೆ ಧೈರ್ಯ ತುಂಬಿತು. ಒಂದು ವೇಳೆ ನೀರಜ್ ತನ್ನ ಮೊದಲ ಎಸೆತದಲ್ಲಿ 88, 89 ಮೀಟರ್ ಎಸೆದಿದ್ರೆ ಆತ ನರ್ವಸ್ ಆಗಿಬಿಡುತ್ತಿದ್ದ. ನೀರಜ್ ಮೊದಲ ಎಸೆತ ಫೌಲ್ ಆಗಿದ್ರಿಂದಲೇ ಆತನ ಆತ್ಮವಿಶ್ವಾಸ ಹೆಚ್ಚಾಯ್ತು ಎಂದು ಕಾಶೀನಾಥ್‌ ಹೇಳಿದ್ದಾರೆ.

ಯಾವಾಗಲೂ ನೀರಜ್ ತನ್ನ ಮೊದಲ ಎಸೆತದಲ್ಲಿ 88, 89 ಮೀಟರ್ ಎಸೆಯುತ್ತಿದ್ದ. ಆದರೆ ಈ ಬಾರಿ ಪೌಲ್ ಆಗಿದ್ದು ಅರ್ಷದ್ ನದೀಮ್‌ಗೆ ವರವಾಯ್ತು. ನದೀಮ್ ಒಲಿಂಪಿಕ್ಸ್ ರೆಕಾರ್ಡ್ಸ್ ಮಾಡುತ್ತಿದ್ದಂತೆ ನೀರಜ್ ನರ್ವಸ್ ಆಗಿಬಿಟ್ಟ. ಆದರೂ ನೀರಜ್ ತನ್ನ ಸಾಮರ್ಥ್ಯ ಮೀರಿ ಪ್ರಯತ್ನ ಮಾಡಿದ್ದಾನೆ. ಅಥ್ಲೆಟಿಕ್ಸ್‌ನಲ್ಲಿ ಸತತ ಎರಡನೇ ಪದಕ ಗೆದ್ದು ಸಾಧನೆ ಮಾಡಿದ್ದಾನೆ. ಇದು ನಿಜಕ್ಕೂ ದೊಡ್ಡ ಸಾಧನೆ ಎಂದು ತಮ್ಮ ಶಿಷ್ಯನನ್ನು ಕಾಶೀನಾಥ್ ನಾಯ್ಕ ಶ್ಲಾಘಿಸಿದ್ದಾರೆ.

ಪೌಲ್‌ ಮಾಡಿದ ನೀರಜ್

ನೀರಜ್​ ಚೋಪ್ರಾ ಅವರ ಮೊದಲ ಎಸೆತವೇ ಪೌಲ್​. ಹೀಗಾಗಿ ನಿರಾಸೆಯ ಆರಂಭವಾಯಿತು. ನಂತರದ ಎಸೆತದಲ್ಲಿ 89.45 ಮೀಟರ್ ದೂರ ಎಸೆದರು. ಅಲ್ಲದೆ ಆ ಬಳಿಕದ ನಾಲ್ಕು ಎಸೆತಗಳು ಪೌಲ್​ ಆದವು. ತಮ್ಮ ಎಸೆತಗಳು ನಿರೀಕ್ಷೆಯಷ್ಟು ದೂರ ಹೋಗದ ಕಾರಣ ನಂತರದ ಮೂರು ಬಾರಿ ಅವರು ಅಂತಿಮ ಲೈನ್ ಮೆಟ್ಟಿ ಸ್ವತಃ ಪೌಲ್ ಮಾಡಿದರು. ಅರ್ಷದ್​ 92. ಮೀಟರ್​ಗಿಂತಲೂ ದೂರ ಎಸೆದ ತಕ್ಷಣವೇ ಒತ್ತಡಕ್ಕೆ ಬಿದ್ದ ನೀರಜ್​ಗೆ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ, ಅರ್ಷದ್​ ತಮ್ಮ ಕೊನೇ ಎಸೆತವನ್ನೂ 91. 79 ಮೀಟರ್ ದೂರ ಎಸೆದರು. ಅಂದ ಹಾಗೆ ಪಾಕಿಸ್ತಾನಕ್ಕೆ 32 ವರ್ಷಗಳ ಬಳಿಕ ಒಲಿಂಪಿಕ್ಸ್​ನಲ್ಲಿ ಪದಕವೊಂದು ದೊರಕಿತು. ಅದೂ ಚಿನ್ನ!

ಇದನ್ನೂ ಓದಿ: Neeraj Chopra : ನೀರಜ್​ ಚೋಪ್ರಾಗೆ ರಜತ ಪದಕ; ಪಾಕಿಸ್ತಾನದ ನದೀಮ್​ಗೆ ಒಲಿಂಪಿಕ್​ ದಾಖಲೆಯ ಬಂಗಾರ

Continue Reading

ಬೆಂಗಳೂರು

BBMP Property Tax: ಬಿಬಿಎಂಪಿ ಆಸ್ತಿ ತೆರಿಗೆ ಬಾಕಿದಾರರಿಗೆ ಗುಡ್ ನ್ಯೂಸ್, ಬಾಕಿ ಪಾವತಿಗೆ ಸೆ.30ರವರೆಗೆ ಅವಧಿ ವಿಸ್ತರಣೆ

BBMP Property Tax: ಇದೀಗ 2 ತಿಂಗಳವರೆಗೆ ಒಟಿಎಸ್ ತೆರಿಗೆ ಪಾವತಿಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಸೂಚನೆಯಂತೆ ವಿಸ್ತರಣೆ ಮಾಡಲಾಗಿದೆ.

VISTARANEWS.COM


on

BBMP Property Tax Hike postpone
Koo

ಬೆಂಗಳೂರು: ಬೆಂಗಳೂರು ಮಹಾನಗರಪಾಲಿಕೆಯ (BBMP) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿ ಬಾಕಿ (BBMP Property Tax) ಉಳಿಸಿಕೊಂಡಿರುವವರಿಗೆ ಬಿಬಿಎಂಪಿ ಸಿಹಿ ಸುದ್ದಿ ನೀಡಿದೆ. ಒನ್ ಟೈಮ್ ಸೆಟಲ್ ಮೆಂಟ್‌ಗೆ (One time Settlement) ಕಾಲಾವಕಾಶವನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ.

ಒಟಿಎಸ್ ಮೂಲಕ ತೆರಿಗೆ ಪಾವತಿಗೆ ಸೆಪ್ಟೆಂಬರ್ 30ರ ತನಕ ಅವಕಾಶ ನೀಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಹಾಗೂ ಮಹಾನಗರಪಾಲಿಕೆ ಅಧಿಕೃತ ಆದೇಶ ಹೊರಡಿಸಿವೆ. ಈ ಹಿಂದೆ ಜುಲೈ 31ರ ತನಕ ಮಾತ್ರ ಡೆಡ್‌ಲೈನ್ ನೀಡಿದ್ದರು. ತೆರಿಗೆದಾರರಿಂದ ವಿಸ್ತರಣೆಗೆ ಮನವಿ ಹಿನ್ನೆಲೆಯಲ್ಲಿ ಒಂದು ತಿಂಗಳ ವಿಸ್ತರಣೆ ಚಿಂತನೆ ನಡೆದಿತ್ತು.

ಇದೀಗ 2 ತಿಂಗಳವರೆಗೆ ಒಟಿಎಸ್ ತೆರಿಗೆ ಪಾವತಿಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಸೂಚನೆಯಂತೆ ವಿಸ್ತರಣೆ ಮಾಡಲಾಗಿದೆ. ಸೆಪ್ಟೆಂಬರ್ 30ರ ತನಕ ಆಸ್ತಿ ತೆರಿಗೆ ಬಾಕಿ ಪಾವತಿಗೆ ಅವಕಾಶ ಕೊಟ್ಟ ಪಾಲಿಕೆ, ತದನಂತರ ವಿಸ್ತರಣೆ ಇಲ್ಲ ಎಂದಿದೆ. ಒಟಿಎಸ್‌ ಅವಕಾಶದಲ್ಲಿ ತೆರಿಗೆ ಮೇಲಿನ ಸಂಪೂರ್ಣ ಬಡ್ಡಿ ಮನ್ನಾ, ಜೊತೆಗೆ ದಂಡದಲ್ಲಿ ಶೇ.50ರಷ್ಟು ರಿಯಾಯಿತಿಯನ್ನು ಪಾಲಿಕೆ ನೀಡಿದೆ.

ಬೆಂಗಳೂರು ನಗರ ಅಭಿವೃದ್ಧಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾರ್ಚ್‌ನಲ್ಲಿ ತೆರಿಗೆ ಸಂಗ್ರಹವನ್ನು ಸುಗಮಗೊಳಿಸಲು ಮತ್ತು ಆದಾಯವನ್ನು ಹೆಚ್ಚಿಸಲು ಹೊಸ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಿದ್ದರು. ಎಂದಿಗೂ ತೆರಿಗೆ ಪಾವತಿಸದ ಆಸ್ತಿ ಮಾಲೀಕರಿಗೆ ಒಂದು ಬಾರಿ ಪರಿಹಾರದ ಆಯ್ಕೆಯನ್ನು ಅವರು ಈ ಯೋಜನೆಯ ಅಡಿಯಲ್ಲಿ ಘೋಷಿಸಿದ್ದರು.

ಆಸ್ತಿ ಮಾಲೀಕರಿಗೆ ಪರಿಹಾರ ನೀಡಲು ಬೆಂಗಳೂರಿನಲ್ಲಿ ಬಾಕಿ ಉಳಿದಿರುವ ಆಸ್ತಿ ತೆರಿಗೆ ಪಾವತಿ ವಿಂಡೋವನ್ನು ಈ ವರ್ಷ ಏಪ್ರಿಲ್ 30ರಿಂದ ಜುಲೈ 31ರವರೆಗೆ ವಿಸ್ತರಿಸಲಾಗಿತ್ತು. ಜುಲೈ 31ರ ಗಡುವು ಮೀರಿದ ಬಳಿಕ ಅವಧಿ ವಿಸ್ತರಣೆಗೆ ತೆರಿಗೆ ಪಾವತಿ ಬಾಕಿದಾರರಿಂದ ಒತ್ತಾಯ ಬಂದಿತ್ತು.

ಹೆಚ್ಚು ಬಾಕಿ ಯಾವ ವಲಯದ್ದು?

ಮಹದೇವಪುರ ವಲಯವು 60,000ಕ್ಕೂ ಹೆಚ್ಚು ಆಸ್ತಿಗಳೊಂದಿಗೆ ಮುಂಚೂಣಿಯಲ್ಲಿದ್ದು, ಒಟ್ಟು 124.23 ಕೋಟಿ ರೂ. ಬಾಕಿಯನ್ನು ಹೊಂದಿದೆ. ಬೊಮ್ಮನಹಳ್ಳಿ 45,381 ಆಸ್ತಿಗಳಿಂದ 71.10 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಕಿಅಂಶಗಳ ಪ್ರಕಾರ ಏಪ್ರಿಲ್ 1 ರಿಂದ ಜುಲೈ 29 ರ ನಡುವೆ 184.77 ಕೋಟಿ ರೂ. ಮೊತ್ತದ 1,07,344 ಆಸ್ತಿಗಳ ಆಸ್ತಿ ತೆರಿಗೆ ಪಾವತಿಸಲಾಗಿದೆ.

ಒಟ್ಟು 282.59 ಕೋಟಿ ರೂ. ಮೊತ್ತದ 16,904 ಆಸ್ತಿಗಳನ್ನು ಒಳಗೊಂಡ ಪರಿಷ್ಕರಣೆ ಪ್ರಕರಣಗಳು 2024ರ ಜುಲೈ 29ರವರೆಗೆ ಬಾಕಿ ಉಳಿದಿವೆ ಎಂದು ಅಂಕಿ ಅಂಶಗಳಿಂದ ಬಹಿರಂಗವಾಗಿದೆ. ಬಿನ್ನಿಪೇಟೆ, ಬಸವನಗುಡಿ, ಹನುಮಂತನಗರ ಮತ್ತು ಜಯನಗರದಂತಹ ಪ್ರದೇಶಗಳನ್ನು ಒಳಗೊಂಡಿರುವ ಪಶ್ಚಿಮ ವಲಯವು ಅತಿ ಹೆಚ್ಚು ಬಾಕಿ ಉಳಿಸಿಕೊಂಡಿದೆ. ಇವು ಒಟ್ಟು ಸೇರಿ 3,474 ಆಸ್ತಿ ಪ್ರಕರಣಗಳನ್ನು ಒಳಗೊಂಡಿವೆ.

“ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುತ್ತಿರುವವರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲಾಗುವುದು. ಒಂದು ವೇಳೆ ಯಾರಾದರೂ ಹೆಚ್ಚಿಗೆ ಹಣ ಪಾವತಿ ಮಾಡಿದ್ದರೆ, ಮುಂದಿನ ಬಾರಿ ಆಸ್ತಿ ತೆರಿಗೆ ಪಾವತಿ ವೇಳೆ ಅದನ್ನು ವಜಾಗೊಳಿಸಲಾಗುವುದು. ಈ ವಿಚಾರದಲ್ಲಿ ಅನಗತ್ಯವಾಗಿ ಗಾಬರಿಯಾಗುವುದು ಬೇಡ” ಎಂದು ಡಿಕೆ ಶಿವಕುಮಾರ್ ಹೇಳಿ‌ದ್ದರು.

ಇದನ್ನೂ ಓದಿ: BBMP Property Tax: ಆಸ್ತಿ ತೆರಿಗೆ ಒನ್‌ ಟೈಮ್‌ ಸೆಟ್ಲ್‌ಮೆಂಟ್‌ಗೆ ಮತ್ತೆ 1 ತಿಂಗಳು ಕಾಲಾವಕಾಶ ವಿಸ್ತರಣೆ ಮಾಡಿದ ಬಿಬಿಎಂಪಿ

Continue Reading

ಅಂಕಣ

ರಾಜಮಾರ್ಗ ಅಂಕಣ: ನಾಗಾರಾಧನೆ- ಪ್ರಕೃತಿಯ ಆರಾಧನೆ ಆಗಲಿ

ರಾಜಮಾರ್ಗ ಅಂಕಣ: ಮನುಷ್ಯನ ಬೆನ್ನು ಮೂಳೆಯು ದೇಹದ ಮೂಲಾಧಾರ ಚಕ್ರದ ಕೇಂದ್ರ. ಮನುಷ್ಯನ ಎಲ್ಲ ಸಂವೇದನೆಗಳ ಕೇಂದ್ರವೂ ಹೌದು. ಅದರ ತುದಿಯಲ್ಲಿ ಇರುವ ಮೆದುಳು ನಾಗದೇವರ ಹೆಡೆಗೆ ಹೋಲಿಕೆ ಪಡೆಯುತ್ತದೆ. ಬೆನ್ನು ಮೂಳೆಯನ್ನು ನಾಗನ ದೇಹಕ್ಕೆ ಹೋಲಿಕೆ ಮಾಡುತ್ತಾರೆ. ನಾಗದೇವರ ಆರಾಧನೆಯನ್ನು ಮಾಡುವುದರಿಂದ ಬೆನ್ನು ಮೂಳೆಯ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಉಂಟಾಗುತ್ತದೆ.

VISTARANEWS.COM


on

ರಾಜಮಾರ್ಗ ಅಂಕಣ nagara panchami
Koo

ತುಳುನಾಡಿನ ನಾಗಾರಾಧನೆಗೆ – ನೂರಾರು ಆಯಾಮಗಳು

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ತಮಗೆಲ್ಲರಿಗೂ ನಾಗರಪಂಚಮಿ (Nagara Panchami) ಹಬ್ಬದ ಶುಭಾಶಯಗಳು. ನಾಗಾರಾಧನೆಯು ನಮ್ಮ ಹಿರಿಯರ ಪ್ರಕೃತಿ ಪ್ರೇಮ, ಕೃತಜ್ಞತೆಯ ಪ್ರತೀಕ ಎಂದೇ ಭಾವಿಸಲಾಗುತ್ತದೆ. ಜಗತ್ತಿನಾದ್ಯಂತ ನಾಗಾರಾಧನೆಯು ಇದ್ದರೂ ತುಳುನಾಡಿನ (Tulunadu) ನಾಗಾರಾಧನೆಯ (nagaradhane) ವಿಸ್ತಾರ ಮತ್ತು ಹರಹು ದೊಡ್ಡದು. ಅದಕ್ಕೆ ನೂರಾರು ಕಾರಣಗಳೂ ಇವೆ.

ತುಳುನಾಡು ಅಂದರೆ ನಾಗದೇವರ ಭೂಮಿ

ಭಾರತದ ಎಲ್ಲ 18 ಪುರಾಣಗಳಲ್ಲಿ ನಾಗದೇವರ ಉಲ್ಲೇಖವು ಬರುತ್ತದೆ ಅನ್ನುತ್ತದೆ ಒಂದು ಆಯಾಮ. ಇನ್ನೊಂದು ಈ ಕರಾವಳಿಯ ಭಾಗವು ‘ನಾಗರಖಂಡ ‘ಎಂದು ಕರೆಯಲ್ಪಟ್ಟಿದೆ. ಈ ಭೂಮಿಯನ್ನು ನಾಗದೇವರು ನಮಗೆ ದಾನವಾಗಿ ನೀಡಿದರು ಅನ್ನುವುದು ಇನ್ನೊಂದು ಆಯಾಮ. ಅದರಿಂದಾಗಿ ನಾಗಾರಾಧನೆ ಅಂದರೆ ನಮ್ಮ ಹಿರಿಯರ ಕೃತಜ್ಞತೆಯ ಸಂಕೇತವೇ ಆಗಿದೆ. ಇಲ್ಲಿನ ಸಡಿಲ ಮಣ್ಣು, ತೇವಾಂಶ ಮತ್ತು ವಾತಾವರಣದ ಉಷ್ಣತೆ ಇವುಗಳು ನಾಗನ ನಡೆಗೆ ಪೂರಕವಾಗಿಯೇ ಇವೆ. ಆದ್ದರಿಂದ ಇಡೀ ತುಳುನಾಡು ನಾಗದೇವರ ನಡೆಯೇ ಆಗಿದೆ. ನಾಗದೇವರು ನಮ್ಮ ಪೂರ್ವಜ ಎಂಬಲ್ಲಿಗೆ ಸರ್ಪ ಸಂಸ್ಕಾರ ಇತ್ಯಾದಿ ವಿಧಿಗಳೂ ನಡೆದುಬಂದವು. ಭೂಮಿಯನ್ನು ಹೊತ್ತವನು ಮಹಾಶೇಷ ಎಂಬ ಕಾರಣಕ್ಕೆ ಕೂಡ ನಾಗದೇವರ ಆರಾಧನೆಯು ಪ್ರಾಮುಖ್ಯತೆ ಪಡೆಯುತ್ತದೆ.

ತುಳುನಾಡಿನಲ್ಲಿ ನಾಗದೇವರು ಮತ್ತು ದೈವಗಳೇ ಸಾರ್ವಭೌಮರು. ಇಲ್ಲಿನ ಜನಗಳು ಅವೆರಡನ್ನು ನಂಬಿದಷ್ಟು ಬೇರೆ ಯಾವುದನ್ನೂ ನಂಬುವುದಿಲ್ಲ. ಕುಟುಂಬದ ಹಿರಿಯರು ಮೂಲನಾಗನಿಗೆ ತನು ಹಾಕುವುದನ್ನು ಎಂದಿಗೂ ತಪ್ಪಿಸುವುದಿಲ್ಲ. ನಾಗನ ಬಗ್ಗೆ ಇರುವ ಭಕ್ತಿ, ಗೌರವ ಮತ್ತು ಭಯಗಳು ನಮ್ಮ ಜನ್ಮದಿಂದಲೂ ನಮ್ಮ ಹೊಕ್ಕಳಬಳ್ಳಿಯ ಒಳಗೇ ಕೂತಿರುತ್ತವೆ.

ತುಳುನಾಡಿನ ನಾಗಾರಾಧನೆ ನೂರು ವಿಧ

ಹುತ್ತಪೂಜೆ, ನಾಗದೇವರ ಶಿಲಾ ಪೂಜನ, ತನು ಹಾಕುವುದು, ಆಶ್ಲೇಷಾ ಪೂಜೆ, ನಾಗಮಂಡಲ, ತಂಬಿಲ ನೀಡುವುದು, ಢಕ್ಕೆಬಲಿ, ಸರ್ಪ ಸಂಸ್ಕಾರ…ಹೀಗೆ ನೂರಾರು ಆಯಾಮಗಳಲ್ಲಿ ತುಳುನಾಡಿನ ನಾಗಾರಾಧನೆಯು ಸಾಗಿಬಂದಿದೆ. ಇವೆಲ್ಲವೂ ತುಳುನಾಡಿನಲ್ಲಿ ಅನೂಚಾನವಾಗಿ ನಡೆದುಕೊಂಡು ಬರುತ್ತಿವೆ. ಶ್ರಾವಣ ಶುಕ್ಲ ಪಂಚಮಿಯಂದು ನಡೆಸುವ ನಾಗಬನದಲ್ಲಿ ತನು ಹಾಕುವ ವಿಧಿಯನ್ನು ಯಾವ ಕುಟುಂಬವೂ ತಪ್ಪಿಸಿಕೊಳ್ಳುವುದಿಲ್ಲ. ಶ್ರದ್ಧೆ ಒಂದಿಂಚೂ ಕಡಿಮೆ ಆಗುವುದಿಲ್ಲ. ಇಡೀ ಕುಟುಂಬವು ಮೂಲನಾಗನನ್ನು ಹುಡುಕಿಕೊಂಡು ಬಂದು ಭಾಗವಹಿಸುವುದರಿಂದ ನಾಗರಪಂಚಮಿಯು ಕೂಡು ಕುಟುಂಬದ ಹಬ್ಬ.

ನಾಗಾರಾಧನೆಯ ವೈಜ್ಞಾನಿಕ ಹಿನ್ನೆಲೆ

ಮನುಷ್ಯನ ಬೆನ್ನು ಮೂಳೆಯು ದೇಹದ ಮೂಲಾಧಾರ ಚಕ್ರದ ಕೇಂದ್ರ. ಮನುಷ್ಯನ ಎಲ್ಲ ಸಂವೇದನೆಗಳ ಕೇಂದ್ರವೂ ಹೌದು. ಅದರ ತುದಿಯಲ್ಲಿ ಇರುವ ಮೆದುಳು ನಾಗದೇವರ ಹೆಡೆಗೆ ಹೋಲಿಕೆ ಪಡೆಯುತ್ತದೆ. ಬೆನ್ನು ಮೂಳೆಯನ್ನು ನಾಗನ ದೇಹಕ್ಕೆ ಹೋಲಿಕೆ ಮಾಡುತ್ತಾರೆ. ನಾಗದೇವರ ಆರಾಧನೆಯನ್ನು ಮಾಡುವುದರಿಂದ ಬೆನ್ನು ಮೂಳೆಯ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ನಾಗಾರಾಧನೆಯ ಬಣ್ಣ ಬಣ್ಣದ ಮಂಡಲಗಳು, ಸುವಾಸನೆ ಬೀರುವ ಹೂವುಗಳು, ಆ ಬಣ್ಣಗಳ ವಿನ್ಯಾಸಗಳು, ನಾಗದೇವರ ಬನದ ಪರಿಸರ, ಅಲ್ಲಿರುವ ಔಷಧಿಯ ಸಸ್ಯಗಳು ಇವೆಲ್ಲವೂ ಸೇರಿ ನಮ್ಮ ದೇಹದ ಮತ್ತು ಮಾನಸಿಕ ಆರೋಗ್ಯವು ಅಭಿವೃದ್ದಿ ಆಗುತ್ತದೆ ಎನ್ನುತ್ತದೆ ವಿಜ್ಞಾನ. ನಾಗನ ನಡೆಯ ಮಣ್ಣು ಔಷಧೀಯ ಗುಣವನ್ನು ಹೊಂದಿದ್ದು ಅದರ ಸ್ಪರ್ಶದಿಂದ ಚರ್ಮರೋಗ ಗುಣವಾಗುವುದು ಸಾಬೀತು ಆಗಿದೆ. ಹಾಗೆಯೇ ಸಂತಾನ ದೋಷ ಪರಿಹಾರ, ದೃಷ್ಟಿದೋಷ ಪರಿಹಾರ ಕೂಡ ಆಗಿರುವ ಸಾವಿರಾರು ಉದಾಹರಣೆಗಳು ನಮಗೆ ಇಲ್ಲಿ ದೊರೆಯುತ್ತವೆ. ನಾಗಾರಾಧನೆಯ ವಿಷಯದಲ್ಲಿ ನಂಬಿಕೆ ಮತ್ತು ವಿಜ್ಞಾನಗಳು ಜೊತೆ ಜೊತೆಯಾಗಿ ಮುನ್ನಡೆಯುತ್ತವೆ.

ಕಾಂಕ್ರೀಟ್ ಕಾಡುಗಳು ಮತ್ತು ನಾಗದೇವರ ಬನ

ಸಾವಿರಾರು ವರ್ಷಗಳಿಂದ ಹರಿದುಬಂದ ‘ನಾಗದೇವರ ನೈಸರ್ಗಿಕ ಬನದ ಕಲ್ಪನೆ ‘ಯು ಇತ್ತೀಚೆಗೆ ಮತ್ತೆ ಮುನ್ನೆಲೆಗೆ ಬಂದಿದೆ. ನಾಗನನ್ನು ಕೃತಕವಾದ ಕಾಂಕ್ರೀಟ್ ಕಾಡನ್ನು ಮಾಡಿ ಪೂಜೆ ಮಾಡುವುದಕ್ಕಿಂತ ನೈಸರ್ಗಿಕವಾದ ನಾಗನ ಬನ (ಬನ ಅಂದರೆ ಕಾಡು ಎಂದರ್ಥ)ದಲ್ಲಿಯೇ ನಾಗನ ಪೂಜೆ ನೆರವೇರಿಸಬೇಕು ಎಂಬ ಬೃಹತ್ ಅಭಿಯಾನವು ಇಂದು ಕರಾವಳಿಯ ಉದ್ದಕ್ಕೂ ಜಾಗೃತಿ ಮೂಡಿಸುತ್ತಿದೆ. ಅಂದರೆ ನಿರ್ದಿಷ್ಟವಾದ ಗಿಡಗಳ ಜೊತೆಗೆ ಔಷಧೀಯ ಸಸ್ಯಗಳನ್ನು ಅಲ್ಲಿ ಬೆಳೆಸಿ ಅಲ್ಲಿಯೇ ತಂಪಾದ ಜಾಗದಲ್ಲಿ ನಾಗನ ಆವಾಸ ಸ್ಥಾನವನ್ನು ನಿರ್ಮಾಣ ಮಾಡುವ ಮತ್ತು ಅಲ್ಲಿಯೇ ನಾಗಾರಾಧನೆ ಮಾಡುವ ಅದ್ಭುತ ಕಲ್ಪನೆ ಇಂದು ಜನಪ್ರಿಯತೆ ಪಡೆಯುತ್ತಿದೆ. ಅದು ವೈಜ್ಞಾನಿಕವಾಗಿ ಕೂಡ ಪುಷ್ಟಿಯನ್ನು ಪಡೆಯುತ್ತಿದೆ. ವಿಶೇಷವಾಗಿ ಉಡುಪಿಯ ಉರಗತಜ್ಞರಾದ ಗುರುರಾಜ್ ಸನಿಲ್ ಹಲವಾರು ಪುಸ್ತಕಗಳನ್ನು ಬರೆದು ಮತ್ತು ಉಪನ್ಯಾಸಗಳ ಮೂಲಕ ಜಾಗೃತಿ ಮೂಡಿಸುತ್ತಿರುವುದು ಅಭಿನಂದನೀಯ. ಅವರು ಮತ್ತು ಅವರ ಗೆಳೆಯರು ಅಂತಹ ಹತ್ತಾರು ಕಡೆ ನಾಗಬನ ನಿರ್ಮಾಣ ಕೂಡ ಮಾಡಿದ್ದಾರೆ. ಹಾಗೆಯೇ ಉಡುಪಿಯ ಸಂವೇದನಾ ಫೌಂಡೇಶನ್ (ಸಂಚಾಲಕರು – ಪ್ರಕಾಶ್ ಮಲ್ಪೆ) ನೂರು ಪ್ರಾಕೃತಿಕ ನಾಗಬನಗಳನ್ನು ನಿರ್ಮಿಸುವ ಸಂಕಲ್ಪ ಮಾಡಿಕೊಂಡು ಮುಂದುವರೆಯುತ್ತಿದ್ದಾರೆ. ಅವರಿಗೆ ನಮ್ಮ ನೆರವು ದೊರೆಯಲಿ.

ನಾಡಿನ ಎಲ್ಲ ಧಾರ್ಮಿಕ ಬಂಧುಗಳಿಗೆ ನಾಡಿನ ಅತೀ ದೊಡ್ಡ ಹಬ್ಬ ನಾಗರಪಂಚಮಿಯ ಹಾರ್ದಿಕ ಶುಭಾಶಯಗಳು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿನೇಶ್ ಪೋಗಟ್ ತೂಕ ಇದ್ದಕ್ಕಿದ್ದಂತೆ 2 ಕೆ.ಜಿ ಹೆಚ್ಚಿದ್ದು ಹೇಗೆ? ಉತ್ತರ ಸಿಗದ ಪ್ರಶ್ನೆ!

Continue Reading

ಪ್ರಮುಖ ಸುದ್ದಿ

Govt Teachers: ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ ಆಲಿಸಿದ ಸಚಿವ ಮಧು ಬಂಗಾರಪ್ಪ; ಹೋರಾಟ ನಿಲ್ಲದು ಎಂದ ಸಂಘ

Govt Teachers: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ಕುರಿತು ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸುದೀರ್ಘ ಸಭೆ ನಡೆಸಿದ್ದು, ಸಚಿವರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ ಎಂಬುದಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಿಳಿಸಿದೆ. ಆದರೆ, ಹೋರಾಟ ಮುಂದುವರಿಸುವುದಾಗಿಯೂ ಮಾಹಿತಿ ನೀಡಿದೆ.

VISTARANEWS.COM


on

Govt Teachers
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಸಮಗ್ರ ಶಿಕ್ಷಣ ಕರ್ನಾಟಕ (ಎಸ್.ಎಸ್.ಕೆ) ಭವನದಲ್ಲಿ ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ (Govt Teachers) ಬಡ್ತಿ ಪ್ರಕ್ರಿಯೆ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಭೆ ನಡೆಸಿದರು. ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಧ್ಯಕ್ಷ ಕೆ.ನಾಗೇಶ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ, ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ ಕಾವೇರಿ ಸೇರಿ ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳೊಂದಿಗೆ ಮಧು ಬಂಗಾರಪ್ಪ (Madhu Bangarappa) ಸಭೆ ನಡೆಸಿದ್ದು, ಬೇಡಿಕೆ ಈಡೇರಿಸುವ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

“ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ಕುರಿತು ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸುದೀರ್ಘ ಸಭೆ ನಡೆಸಿದ್ದು, ಸಚಿವರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ” ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಿಳಿಸಿದೆ.

“ಸಚಿವರು ಸುದೀರ್ಘವಾಗಿ ಎಲ್ಲ ಅಂಶಗಳನ್ನು ಮುಕ್ತವಾಗಿ ಆಲಿಸಿ, ಹೋರಾಟ ಮಾಡುವುದು ಸಂಘಟನೆಯ ಹಕ್ಕಾಗಿದೆ. ಆದರೆ 12/08/24ರ ಹೋರಾಟದ ಬಗ್ಗೆ ಸಂಘಟನೆಯು ಮರು ಪರಿಶೀಲಿಸಿ. ಈ ಸಮಸ್ಯೆ ಬಗ್ಗೆ ಹರಿಸಲು ಮುಖ್ಯ ಮಂತ್ರಿಗಳ ಸಹಕಾರವೂ ಅತ್ಯಂತ ಅವಶ್ಯಕತೆ ಇದೆ. ಸಿಎಂ ಜತೆ ಶೀಘ್ರವೇ ಚರ್ಚಿಸುತ್ತೇನೆ. ಸಮಸ್ಯೆ ಪರಿಹಾರಕ್ಕಾಗಿ ಸೂಕ್ತ ಕಾಲವಕಾಶದ ಅಗತ್ಯ ಇದೆ” ಎಂದು ಸಂಘ ತಿಳಿಸಿದೆ. ಆದರೆ ಸಂಘವು, “ಸಮಸ್ಯೆಗಳಿಗೆ ಪರಿಹಾರವನ್ನು ಕಾರ್ಯರೂಪದಲ್ಲಿ ಶೀಘ್ರವಾಗಿ ನೀಡಬೇಕು” ಎಂಬ ಒತ್ತಡವನ್ನು ಹೇರಿದೆ.

ಹೋರಾಟ ಮುಂದುವರಿಕೆ

ಸರ್ಕಾರದಿಂದ ಸೂಕ್ತ ಆದೇಶ ಬರುವವರೆಗೂ ರಾಜ್ಯ ಕಾರ್ಯಕಾರಿ ಸಮಿತಿಯ ಒಕ್ಕೊರಲ ತೀರ್ಮಾನದಂತೆ ಹೋರಾಟವನ್ನು ಮುಂದುವರಿಸಲು ಸಂಘವು ನಿರ್ಧರಿಸಿದೆ ಎಂದು ಸಂಘವು ಮಾಹಿತಿ ನೀಡಿದೆ. ಆಗಸ್ಟ್‌ 12ರಂದು ಬೆಂಗಳೂರು ಚಲೋ, ಫ್ರೀಡಂ ಪಾರ್ಕ್ ಹೋರಾಟವನ್ನು ಹಿಂಪಡೆದಿಲ್ಲ. ಹೋರಾಟ ನಿಶ್ಚಿತವಾಗಿದ್ದು, ಸಮಸ್ಯೆಗೆ ತಾರ್ಕಿಕ ಅಂತ್ಯ ಸಿಗುವವರೆಗೂ ಸರಣಿ ಹೋರಾಟ ಮುಂದುವರಿಸಲಾಗುತ್ತದೆ” ಎಂದು ಸಂಘ ತಿಳಿಸಿದೆ.

ಆಗಸ್ಟ್‌ 12ರಂದು ನಮ್ಮ ನ್ಯಾಯಯುತ ಬೇಡಿಕೆಯ ತೀವ್ರತೆಯನ್ನು ನಮ್ಮ ಬೃಹತ್ ಸಂಖ್ಯೆ ಭಾಗವಹಿಸುವಿಕೆಯಿಂದ ಜಾಹಿರು ಮಾಡಬೇಕಿದೆ. ರಾಜ್ಯಾದ್ಯಂತ ಹೋರಾಟಕ್ಕೆ ತೋರುತ್ತಿರುವ ಉತ್ಸಾಹವು, ಈ ಕ್ಷಣದಿಂದ ನೂರ್ಮಡಿ ಗೊಳಿಸಬೇಕಿದೆ. ಪ್ರತಿ ಶಿಕ್ಷಕರ ಸಮಸ್ಯೆಯ ಪ್ರಯಧ್ವನಿಯಂತೆ ಮಾರ್ಧನಿಸಬೇಕಿದೆ. ತಾಲೂಕು, ಜಿಲ್ಲಾ ಘಟಕಗಳು ಬೆಂಗಳೂರಿಗೆ ಬರಲು ಸಕಲ ಸಿದ್ಧತೆಗಳನ್ನು ಬಹು ಕಾಳಜಿ, ಉತ್ಸಾಹದಿಂದ ಮಾಡಿಕೊಳ್ಳಬೇಕಿದೆ ಎಂದು ಸಂಘವು ಕರೆ ನೀಡಿದೆ.

ಪ್ರಮುಖ ಬೇಡಿಕೆಗಳು

  • 2017ರ ನಿಮಯಗಳನ್ನು ಪೂರ್ವಾನ್ವಯ ಗೊಳಿಸಬಾರದು
  • ಎಚ್‌ಎಂ, ಎಸ್‌ಎಚ್‌ಎಂ ಹುದ್ದೆಗಳಿಗೆ ಈ ಹಿಂದೆ ನೀಡುತ್ತಿದ್ದ ಬಡ್ತಿಯ ಸ್ವರೂಪವನ್ನೇ (ಪ್ರಾಥಮಿಕ ಶಾಲೆಗಳಲ್ಲಿ ಸಲ್ಲಿಸಿದ ಒಟ್ಟು ಸೇವಾ ಜ್ಯೇಷ್ಠತೆಯ ಆಧಾರದ ಮೇಲೆ) ಮುಂದುವರಿಸಿಕೊಂಡು ಹೋಗಬೇಕು
  • ಪ್ರಾಥಮಿಕ ಶಾಲಾ ಶಿಕ್ಷಕ ವೃಂದದಿಂದ ಪ್ರೌಢಶಾಲಾ ಸಹ ಶಿಕ್ಷಕ ವೃಂದಕ್ಕೆ ಬಡ್ತಿಯ ಕ್ರಮವನ್ನು ಸಹ ಈ ಹಿಂದಿನಂತೆ ಮುಂದುವರಿಸಬೇಕು
  • ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದನಾಮೀಕರಿಸಿ, ವಿಲೀನಗೊಳಿಸಿ ನ್ಯಾಯ ಒದಗಿಸಬೇಕು

ಇದನ್ನೂ ಓದಿ: Government Job: ಅಂತಾರಾಷ್ಟ್ರೀಯ ಕ್ರೀಡಾಕೂಟ ಪದಕ ಗೆದ್ದ 12 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ

Continue Reading
Advertisement
neeraj chopra kashinath naik 1
ಕ್ರೀಡೆ4 mins ago

Neeraj Chopra: ನೀರಜ್‌ ಚೋಪ್ರಾ ಜಾವೆಲಿನ್‌ ಎಸೆತದಲ್ಲಿ ಭಾರತಕ್ಕೆ ಚಿನ್ನ ಮಿಸ್‌ ಆದದ್ದು ಹೇಗೆ? ಕೋಚ್‌ ಏನ್‌ ಹೇಳ್ತಾರೆ ನೋಡಿ

Bhavishya
ಭವಿಷ್ಯ13 mins ago

Bhavishya: ಅಂಗೈಯಲ್ಲಿರುವ ʼಹೃದಯ ರೇಖೆಗಳುʼ ನಿಮ್ಮ ವ್ಯಕ್ತಿತ್ವ ಏನೆಂದು ಹೇಳುತ್ತವೆ; ಚೆಕ್‌ ಮಾಡಿ ನೋಡಿ!

BBMP Property Tax Hike postpone
ಬೆಂಗಳೂರು33 mins ago

BBMP Property Tax: ಬಿಬಿಎಂಪಿ ಆಸ್ತಿ ತೆರಿಗೆ ಬಾಕಿದಾರರಿಗೆ ಗುಡ್ ನ್ಯೂಸ್, ಬಾಕಿ ಪಾವತಿಗೆ ಸೆ.30ರವರೆಗೆ ಅವಧಿ ವಿಸ್ತರಣೆ

ರಾಜಮಾರ್ಗ ಅಂಕಣ nagara panchami
ಅಂಕಣ56 mins ago

ರಾಜಮಾರ್ಗ ಅಂಕಣ: ನಾಗಾರಾಧನೆ- ಪ್ರಕೃತಿಯ ಆರಾಧನೆ ಆಗಲಿ

Govt Teachers
ಪ್ರಮುಖ ಸುದ್ದಿ2 hours ago

Govt Teachers: ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ ಆಲಿಸಿದ ಸಚಿವ ಮಧು ಬಂಗಾರಪ್ಪ; ಹೋರಾಟ ನಿಲ್ಲದು ಎಂದ ಸಂಘ

Herbal Supplement
ಆರೋಗ್ಯ2 hours ago

Herbal Supplement: ಅರಿಶಿನ ಸೇರಿದಂತೆ ಹರ್ಬಲ್‌ ಸಪ್ಲಿಮೆಂಟ್‌ ಸೇವಿಸುತ್ತಿದ್ದೀರಾ? ಹಾಗಾದರೆ ಎಚ್ಚರ!

Paris Olympics 2024
ಕ್ರೀಡೆ2 hours ago

Paris Olympics 2024: ಒಲಿಂಪಿಕ್ಸ್‌ನಲ್ಲಿ ಇಂದು ಭಾರತದ ಸ್ಪರ್ಧಿಗಳ ಕಾದಾಟ; ಯಾವ ಪದಕ ನಿರೀಕ್ಷೆ? ಇಲ್ಲಿದೆ ವೇಳಾಪಟ್ಟಿ

Nagara Panchami 2024
ಕರ್ನಾಟಕ2 hours ago

Nagara Panchami 2024: ನಾಗದೋಷ ಎಂದರೇನು? ಇದರ ಪರಿಹಾರ ಕ್ರಮಗಳು ಏನೇನು?

karnataka weather forecast
ಮಳೆ2 hours ago

Karnataka Weather : ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ಭಾರಿ ಮಳೆ ಎಚ್ಚರ

Dina Bhavishya
ಭವಿಷ್ಯ3 hours ago

Dina Bhavishya : ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ; ವಾತಾವರಣ ಹದಗೆಡದಂತೆ ಜಾಗ್ರತೆ ವಹಿಸಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ14 hours ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ16 hours ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ17 hours ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ6 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌