ಕ್ರೈಂ
Mumbai : ಮುಂಬಯಿನಲ್ಲಿ ಜಾಗಿಂಗ್ ಮಾಡುತ್ತಿದ್ದ ಟೆಕ್ ಕಂಪನಿ ಸಿಇಒಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಸಾವು
ಮುಂಬಯಿನ (Mumbai) ವರ್ಲಿಯಲ್ಲಿ ಭಾನುವಾರ ಬೆಳಗ್ಗೆ ಜಾಗಿಂಗ್ ಮಾಡುತ್ತಿದ್ದ ಟೆಕ್ ಕಂಪನಿ ಸಿಇಒ ರಾಜಲಕ್ಷ್ಮಿ ರಾಮಕೃಷ್ಣನ್ ಅವರಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾರು ಚಾಲಕನನ್ನು ಬಂಧಿಸಲಾಗಿದೆ.
ಮುಂಬಯಿ: ಮುಂಬಯಿನ (Mumbai) ವರ್ಲಿಯಲ್ಲಿ ಭಾನುವಾರ ಬೆಳಗ್ಗೆ ಜಾಗಿಂಗ್ ಮಾಡುತ್ತಿದ್ದ ಟೆಕ್ ಕಂಪನಿಯೊಂದರ ಸಿಇಒಗೆ ವೇಗವಾಗಿ ಸಂಚರಿಸುತ್ತಿದ್ದ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಸಿಇಒ ಅನ್ನು ರಾಜಲಕ್ಷ್ಮಿ ರಾಮಕೃಷ್ಣನ್ ಎಂದು ಗುರುತಿಸಲಾಗಿದೆ. ಕಾರಿನ ಚಾಲಕ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ರಾಜಲಕ್ಷ್ಮಿ ಅವರು ಟೆಕ್ನಾಲಜಿ ಕಂಪನಿಯೊಂದರ ಸಿಇಒ ಆಗಿದ್ದರು. ಫಿಟ್ನೆಸ್ ಬಗ್ಗೆ ಕಾಳಜಿ ಹೊಂದಿದ್ದು, ಮುಂಬಯಿನ ಶಿವಾಜಿ ಪಾರ್ಕ್‌ನ ಜಾಗರ್ಸ್ ಗ್ರೂಪ್‌ನಲ್ಲಿ ಸಕ್ರಿಯರಾಗಿದ್ದರು. ಭಾನುವಾರ ಬೆಳಗ್ಗೆ ವರ್ಲಿ ಡೇರಿ ಸಮೀಪ ಅಪಘಾತ ಸಂಭವಿಸಿದೆ.
ಪೊಲೀಸರ ಪ್ರಕಾರ ಚಾಲಕ 23 ವರ್ಷ ವಯಸ್ಸಿನ ಸುಮೇರ್ ಮರ್ಚೆಂಟ್ ಆಗಿದ್ದು, ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ. ಮೂಲಗಳ ಪ್ರಕಾರ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಹೊಡೆದು ಬಳಿಕ ಮಹಿಳೆಗೆ ಡಿಕ್ಕಿಯಾಗಿದೆ. ರಾಜ ಲಕ್ಷ್ಮಿಯವರ ತಲೆಗೆ ತೀವ್ರ ಗಾಯವಾಗಿತ್ತು.
ಕರ್ನಾಟಕ
Road Accident: ನೆಲಮಂಗಲದ ಬಳಿ ಲಾರಿ ಹರಿದು ಯುವತಿ ಸ್ಥಳದಲ್ಲೇ ಸಾವು
Road Accident: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಲಕ್ಕೂರು ಬಳಿ ಅಪಘಾತ ನಡೆದಿದೆ. ಲಾರಿಯು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.
ನೆಲಮಂಗಲ: ಟಿಪ್ಪರ್ ಹರಿದು ಯುವತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ (Road Accident) ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಲಕ್ಕೂರು ಬಳಿ ನಡೆದಿದೆ. ನರಸೀಪುರ ಗ್ರಾಮದ ಹೇಮಾವತಿ (27) ಮೃತ ಯುವತಿ. ಈಕೆ ದ್ವಿಚಕ್ರ ವಾಹನದಲ್ಲಿ ತರಕಾರಿ ತೆಗೆದುಕೊಂದು ಮನೆಗೆ ತೆರಳುವಾಗ ಲಾರಿ ಡಿಕ್ಕಿ ಹೊಡೆದಿದ್ದು, ಈ ವೇಳೆ ಕೆಳಗೆ ಬಿದ್ದಾಗ ಲಾರಿ ಹರಿದಿದೆ. ಇದರಿಂದ ಗಂಭೀರ ಗಾಯಗಳಾಗಿ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಚಾಲಕನನ್ನು ಡಾಬಸ್‌ಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನೇಣು ಬಿಗಿದುಕೊಂಡು ಇಬ್ಬರು ಪ್ರೇಮಿಗಳು ಆತ್ಮಹತ್ಯೆಗೆ ಶರಣು
ಧಾರವಾಡ: ನೇಣುಬಿಗಿದುಕೊಂಡು ಇಬ್ಬರು ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ಹೆಬ್ಬಳ್ಳಿ ಗ್ರಾಮದ ಮೈಲಾರಿ ಕಾಲಾಳದ (22), 16 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮನೆಯಲ್ಲಿ ಇಬ್ಬರ ಪ್ರಿತಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಇಬ್ಬರು ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಮಗಳು ನಾಪತ್ತೆ ಆಗಿರುವ ಬಗ್ಗೆ ಬಾಲಕಿ ಮನೆಯವರು ಧಾರವಾಡ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು. ಆದರೆ, ಮಂಗಳವಾರ ನಿರ್ಮಾಣ ಹಂತದಲ್ಲಿರುವ ಯುವಕನ ಮನೆಯಲ್ಲಿ ಇಬ್ಬರು ಪ್ರೇಮಿಗಳು ನೇಣಿಗೆ ಶರಣಾಗಿದ್ದಾರೆ.
ಪರವಾನಗಿ ಇಲ್ಲದೇ ಜಾನುವಾರು ಸಾಗಾಟ; ಮೂವರ ಬಂಧನ, 11 ಜಾನುವಾರು ರಕ್ಷಣೆ
ಕಾರವಾರ: ಪರವಾನಗಿ ಇಲ್ಲದೇ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿ 11 ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ | 10 ಅಡಿ ಸುರಂಗ ಕೊರೆದು ಮಳಿಗೆಯಲ್ಲಿ ಆಭರಣ ಕದ್ದರು, ಬಳಿಕ ಕ್ಷಮಾಪಣೆ ಪತ್ರ ಬರೆದಿಟ್ಟು ಹೋದರು
ಧಾರವಾಡ ಮೂಲದ ಚಾಲಕ ಸಂತೋಷ ಮಂಟೂರು, ಕ್ಲೀನರ್ ಮಣಿಕಂಠ ದೇಸಾಯಿ, ಬೈಂದೂರು ಮೂಲದ ನಾಗರಾಜ ಮೊಗೇರ್ ಬಂಧಿತ ಆರೋಪಿಗಳು. 4 ಹಸು, 7 ಕರು ಸೇರಿ 11 ಜಾನುವಾರುಗಳ ರಕ್ಷಣೆ ಮಾಡಲಾಗಿದೆ. ಲಾರಿಯಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳನ್ನು ತುಂಬಿ ಬೈಂದೂರಿನಿಂದ ಪುಣೆಗೆ ಸಾಗಿಸಲಾಗುತ್ತಿತ್ತು. ಕಸಾಯಿಖಾನೆಯಲ್ಲಿ ವಧೆ ಮಾಡುವ ಉದ್ದೇಶದಿಂದ ಜಾನುವಾರುಗಳ ಸಾಗಾಟ ಯತ್ನ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕರ್ನಾಟಕ
Highway robbery : ಯುವಕ-ಯುವತಿಯನ್ನು ಅಡ್ಡಗಟ್ಟಿ ಬೈಕ್, ಐಫೋನ್ ಕಿತ್ತುಕೊಂಡು ಹೋದ ಮೂವರು ಸುಲಿಗೆಕೋರರು ಅರೆಸ್ಟ್
ಹೆದ್ದಾರಿಯಲ್ಲಿ ಸಾಗುತ್ತಿದ್ದ ಜೋಡಿಯನ್ನು ಅಡ್ಡಗಟ್ಟಿ(Highway robbery) ಬೈಕ್ ಮತ್ತು ಐಫೋನ್ ಕಿತ್ತುಕೊಂಡಿದ್ದ ಮೂವರು ಕ್ರಿಮಿನಲ್‌ಗಳು ಸೆರೆ ಸಿಕ್ಕಿದ್ದಾರೆ. ಉಳ್ಳಾಲ ಪೊಲಿಸರ ಕಾರ್ಯಾಚರಣೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.
ಉಳ್ಳಾಲ(ಮಂಗಳೂರು): ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಯನ್ನು ಅಡ್ಡಗಟ್ಟಿ, ಐ-ಪೋನ್ ಮತ್ತು ಬೈಕನ್ನ ದೋಚಿದ್ದ ಮೂವರು ಖದೀಮರನ್ನು ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ (Highway robbery) ನಡೆಸಿ ಬಂಧಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಬಳಿ ಈ ಘಟನೆ ನಡೆದಿತ್ತು.
ಸೋಮವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಯುವಕ ಮತ್ತು ಯುವತಿ ಬೈಕಲ್ಲಿ ಜತೆಯಾಗಿ ತೆರಳುತ್ತಿದ್ದರು. ಈ ವೇಳೆ ಎರಡು ಸ್ಕೂಟರಲ್ಲಿ ಬಂದ ಮೂವರು ಖದೀಮರು ಉಚ್ಚಿಲದ ಜಿಯೋ ಪೆಟ್ರೋಲ್ ಪಂಪ್ ಬಳಿ ಅವರನ್ನು ಅಡ್ಡಗಟ್ಟಿದರು.
ಯುವಕ ಮತ್ತು ಯುವತಿಯನ್ನು ಬೆದರಿಸಿದ ಸುಲಿಗೆಕೋರರು ಯುವತಿ ಕೈಯಲ್ಲಿದ್ದ ಬೆಲೆ ಬಾಳುವ ಐ-ಫೋನ್ ಕಿತ್ತುಕೊಂಡಿದ್ದರು. ಮೋಟಾರು ಬೈಕನ್ನೂ ಕೂಡಾ ಕಸಿದುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಬೈಕ್ ಸವಾರ ಅಬ್ದುಲ್ಲ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಉಳ್ಳಾಲ ಬಸ್ತಿಪಡ್ಪು ನಿವಾಸಿ ಝಾಕೀರ್ ಹುಸೇನ್ ಅಲಿಯಾಸ್ ಶಾಕೀರ್-ಜಾಹೀರ್(27), ಸೋಮೇಶ್ವರ ಗ್ರಾಮದ ಪಿಲಾರು ನಿವಾಸಿ ಮಹಮ್ಮದ್ ಉಬೈದುಲ್ಲಾ ಅಲಿಯಾಸ್ ಉಬ್ಬಿ (33), ಉಳ್ಳಾಲ ಮೇಲಂಗಡಿ ನಿವಾಸಿ ಇಬ್ರಾಹಿಮ್ ಖಲೀಲ್ ಅಲಿಯಾಸ್ ಖಲೀಲ್(22) ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾಗಿದ್ದ 2 ಸ್ಕೂಟರ್ ಗಳು, ಸುಲಿಗೆ ನಡೆಸಿದ್ದ ಐಫೋನ್ ಮತ್ತು ಯಮಹಾ ಮೋಟಾರು ಬೈಕನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು ಆರೋಪಿಗಳನ್ನು ನಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಕುಲದೀಪ್ ಜೈನ್ ಮಾರ್ಗದರ್ಶನದ ಮೇರೆಗೆ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ.ಎಸ್ ಮತ್ತು ಉಪನಿರೀಕ್ಷಕರಾದ ಕೃಷ್ಣ ಕೆ.ಎಚ್ ,ಸಂತೋಷ್ ಮತ್ತು ಪಿಸಿಗಳಾದ ಪ್ರವೀಣ ಶೆಟ್ಟಿ, ಅಶೋಕ್, ವಾಸುದೇವ ಸಿಬ್ಬಂದಿಗಳ ತಂಡ ಪ್ರಕರಣವನ್ನು ಶೀಘ್ರದಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದೆ.
ಈ ಭಾಗದಲ್ಲಿ ಇತ್ತೀಚೆಗೆ ವಾಹನಗಳ ಕಳ್ಳತನ ಹೆಚ್ಚಾಗಿದ್ದು, ಅದಕ್ಕೆ ಹೆದ್ದಾರಿ ದರೋಡೆಯೂ ಸೇರಿಕೊಂಡಂತಾಗಿದೆ. ಪೊಲೀಸರು ಈ ದರೋಡೆ ಪ್ರಕರಣವನ್ನು ತ್ವರಿತವಾಗಿ ಪತ್ತೆ ಹಚ್ಚಿದ್ದನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ಈ ಭಾಗದಲ್ಲಿ ಹೈವೇ ಪ್ಯಾಟ್ರೋಲಿಂಗ್ ಹೆಚ್ಚಿಸುವಂತೆ, ಬೈಕ್ ಕಳವು ಪ್ರಕರಣಗಳನ್ನು ಕೂಡಾ ಪತ್ತೆ ಹಚ್ಚುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : Bike theft : ಉಳ್ಳಾಲದಲ್ಲಿ ಸರಣಿ ಬೈಕ್ ಕಳ್ಳತನ, ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳರಿಗಾಗಿ ಪೊಲೀಸರ ಹುಡುಕಾಟ!
ಕ್ರೈಂ
10 ಅಡಿ ಸುರಂಗ ಕೊರೆದು ಮಳಿಗೆಯಲ್ಲಿ ಆಭರಣ ಕದ್ದರು, ಬಳಿಕ ಕ್ಷಮಾಪಣೆ ಪತ್ರ ಬರೆದಿಟ್ಟು ಹೋದರು
ಉತ್ತರ ಪ್ರದೇಶದ ಮೀರತ್‌ನಲ್ಲಿ ಕಳ್ಳರು ಚರಂಡಿ ಮೂಲಕ ಸುರಂಗ ಕೊರೆದು, ಆಭರಣ ಮಳಿಗೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ. ಸಿನಿಮೀಯ ರೀತಿಯಲ್ಲಿ ನಡೆದ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಲಖನೌ: ಬ್ಯಾಂಕ್‌ಗಳ ಬಳಿ ನೂರಾರು ಅಡಿಗಳ ಸುರಂಗ ಕೊರೆದು, ತಿಂಗಳುಗಟ್ಟಲೆ ಪ್ಲಾನ್ ರೂಪಿಸಿ ಬ್ಯಾಂಕ್‌ಗಳಲ್ಲಿಯೋ, ಆಭರಣಗಳ ಮಳಿಗೆಗಳಲ್ಲಿಯೋ ಕೋಟ್ಯಂತರ ರೂಪಾಯಿ, ಆಭರಣಗಳನ್ನು ದೋಚುವುದನ್ನು ಸಿನಿಮಾಗಳಲ್ಲಿ, ವೆಬ್ ಸಿರೀಸ್‌ಗಳಲ್ಲಿ ನೋಡಿರುತ್ತೇವೆ. ಆದರೆ, ಇದೇ ಸಿನಿಮೀಯ ರೀತಿಯಲ್ಲಿ ಉತ್ತರ ಪ್ರದೇಶದಲ್ಲಿ ಕಳ್ಳರು ಚರಂಡಿ ಮೂಲಕ 10 ಅಡಿ ಸುರಂಗ ಕೊರೆದು, ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ಕದ್ದಿದ್ದಾರೆ.
ಉತ್ತರ ಪ್ರದೇಶದ ಮೀರತ್‌ನಲ್ಲಿರುವ ಜ್ಯುವೆಲ್ಲರಿ ಶೋರೂಮ್ ಪಕ್ಕದ ಚರಂಡಿ ಮೂಲಕ ಕಳ್ಳರು ಸುರಂಗ ಅಗೆದಿದ್ದಾರೆ. ಇಟ್ಟಿಗೆಗಳನ್ನು ತೆಗೆದು, ಕೆಸರನ್ನು ಅಗೆದು ಸುರಂಗ ಕೊರೆದಿದ್ದಾರೆ. ಇದಾದ ಬಳಿಕ ರಾತ್ರೋರಾತ್ರಿ ಮಳಿಗೆ ಪ್ರವೇಶಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ. ಆಭರಣ ಮಳಿಗೆಯ ಮಾಲೀಕರು ಬೆಳಗ್ಗೆ ಮಳಿಗೆ ತೆರೆದಾಗ, ಸುರಂಗ ಕೊರೆದು, ಚಿನ್ನಾಭರಣ ದೋಚಿರುವುದು ಗೊತ್ತಾಗಿದೆ.
ವ್ಯಾಪಾರಿಗಳಿಂದ ಪ್ರತಿಭಟನೆ
ಚಿನ್ನದ ಮಳಿಗೆಗೆ ನುಗ್ಗಿ, ಆಭರಣ ದೋಚಿರುವುದು ಅಂಗಡಿ ಮಾಲೀಕರ ಗಮನಕ್ಕೆ ಬರುತ್ತಲೇ, ನಗರದಾದ್ಯಂತ ಸುದ್ದಿ ಹರಡುತ್ತಲೇ ಮೀರತ್ ಬುಲ್ಲಿಯನ್ ಟ್ರೇಟರ್ಸ್ ಅಸೋಸಿಯೇಷನ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಕೂಡಲೇ ಕಳ್ಳರನ್ನು ಪತ್ತೆಹಚ್ಚಿ, ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಮಳಿಗೆಗೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಲ್ಲದೆ, ಪ್ರಕರಣ ದಾಖಲಿಸಿದ್ದಾರೆ.
ಕ್ಷಮಾಪಣೆ ಪತ್ರ ಬರೆದಿಟ್ಟ ಕಳ್ಳರು
ವಾರಗಟ್ಟಲೆ ಪ್ಲಾನ್ ಮಾಡಿ, ಚರಂಡಿಯಲ್ಲಿ ಸುರಂಗ ಕೊರೆದ ಕಳ್ಳರು, ಚಿನ್ನಾಭರಣಗಳನ್ನು ದೋಚಿಕೊಂಡು ಹೋಗುವ ಮುನ್ನ ಕ್ಷಮಾಪಣೆ ಪತ್ರವೊಂದನ್ನು ಬರೆದಿಟ್ಟು ಹೋಗಿದ್ದಾರೆ. “ನಾವು ನಿಮ್ಮ ಕ್ಷಮೆ ಕೇಳುತ್ತೇವೆ. ನಮಗೆ ಕಳ್ಳತನ ಮಾಡುವುದಷ್ಟೇ ಉದ್ದೇಶವಾಗಿತ್ತು. ಈ ಫ್ಲೋರ್ ತುಂಬ ಗಟ್ಟಿಯಾಗಿತ್ತು” ಎಂಬುದಾಗಿ ಪತ್ರದಲ್ಲಿ ಬರೆದಿದ್ದಾರೆ. ಆದಾಗ್ಯೂ, ಮಳಿಗೆಯಲ್ಲಿ ಎಷ್ಟು ರೂಪಾಯಿ ಮೌಲ್ಯದ ಆಭರಣ ಕಳ್ಳತನ ಮಾಡಲಾಗಿದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಈ ಕುರಿತು ಮಾಹಿತಿ ನೀಡಿ ಎಂಬುದಾಗಿ ಮಳಿಗೆಯ ಮಾಲೀಕರಿಗೆ ಪೊಲೀಸರು ಸೂಚಿಸಿದ್ದಾರೆ.
ಇದನ್ನೂ ಓದಿ: Bike theft : ಉಳ್ಳಾಲದಲ್ಲಿ ಸರಣಿ ಬೈಕ್ ಕಳ್ಳತನ, ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳರಿಗಾಗಿ ಪೊಲೀಸರ ಹುಡುಕಾಟ!
ಕರ್ನಾಟಕ
Fraud Case: ಈತ ಕೇಸಲ್ಲಿ ಶತಕವೀರ; ಕೊನೆಗೂ ಸೆರೆ ಸಿಕ್ಕ ಕೋಟಿ ಚೋರ!
ಕೋಟಿ ಲೂಟಿ ಮಾಡಿ 108 ಪ್ರಕರಣಗಳಲ್ಲಿ (Fraud Case) ಬೇಕಿದ್ದ ಚಲಾಕಿ ಖದೀಮನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಚಿನ್ನಾಭರಣ ಕದಿಯುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರು: ಕೋಟಿ ಕೋಟಿ ನುಂಗಿ ಖಾಕಿ ಕಣ್ತಪ್ಪಿಸಿ ಅಡ್ಡಾಡುತ್ತಿದ್ದ ವಂಚಕನೊಬ್ಬನನ್ನು ಸಿಸಿಬಿ ಪೊಲೀಸರು (CCB police) ಬಂಧಿಸಿದ್ದಾರೆ. ಅಶ್ವಾಕ್ ಅಹ್ಮದ್ ಎಂಬಾತ 100ಕ್ಕೂ ಹೆಚ್ಚು ಪ್ರಕರಣದಲ್ಲಿ ಬೇಕಿದ್ದ ಕುಖ್ಯಾತ ಕಳ್ಳನಾಗಿದ್ದ (Fraud Case) ಎಂದು ತಿಳಿದು ಬಂದಿದೆ.
ಈತ 2009-10ರಲ್ಲಿ ಗ್ರ್ಯಾನಿಟಿ ಪ್ರಾಪರ್ಟಿಸ್ ಎಂಬ ಸಂಸ್ಥೆ ಆರಂಭಿಸಿದ್ದ. ಈ ಸಂಸ್ಥೆ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಕೃಷಿ ಭೂಮಿಯನ್ನು ಕಂದಾಯ ಭೂಮಿಗಳನ್ನಾಗಿ ಮಾರ್ಪಾಡು ಮಾಡಿ ಮಾರಾಟ ಮಾಡಲು ಮುಂದಾಗಿದ್ದ. ಅಲ್ಲದೆ ಕೆಲ ನಿವೇಶನಗಳನ್ನು ಮಾಡಿ ಹಲವರ ಬಳಿ ಹಣ ಪಡೆದು ಪಂಗನಾಮ ಹಾಕಿ ಎಸ್ಕೇಪ್ ಆಗಿದ್ದ.
ಹೀಗೆ ಕೋಟಿ ಕೋಟಿ ವಂಚನೆ ಮಾಡಿದ್ದ ಈ ಕ್ರಿಮಿನಲ್ ಮೇಲೆ ಅಶೋಕ್ ನಗರ, ಇಂದಿರಾನಗರ ಸೇರಿದಂತೆ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಬಂಧಿಸಿದ್ದ ಸಿಸಿಬಿ ನ್ಯಾಯಾಲಯಕ್ಕೂ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದರು. 2016ರಲ್ಲಿ ಹಳೇ ಪ್ರಕರಣದಲ್ಲಿ ಬೇಲ್ ಪಡೆದು ಹೊರ ಬಂದಿದ್ದ ಅಶ್ವಾಕ್ ಮತ್ತೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಾರೆಂಟ್ ಹೊರಡಿಸಿತ್ತು. ಈ ನಿಟ್ಟಿನಲ್ಲಿ ಸ್ಪೇಷಲ್ ಟೀಂ ರೆಡಿ ಮಾಡಿಕೊಂಡ ಸಿಸಿಬಿ ಅಧಿಕಾರಿಗಳು, ತಲೆಮರೆಸಿಕೊಂಡಿದ್ದ ಅಶ್ವಾಕ್‌ನನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.
ರೈಲ್ವೆ ನಿಲ್ದಾಣದ ಕಳ್ಳರ ಬಂಧನ
ರೈಲ್ವೆ ನಿಲ್ದಾಣಗಳಲ್ಲಿ ಚೈನ್ ಸ್ನಾಚ್ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ದಂಡು ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮುಂಬೈ ಮೂಲದ ಅನ್ಸರ್ ಉಸೇನ್ ಶೇಕ್ ಬಂಧಿತ ಆರೋಪಿ ಆಗಿದ್ದಾನೆ. ಕಳೆದ ಎರಡು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದ. ಆಗಾಗ ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಈ ಆರೋಪಿ, ಲಾಡ್ಜ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: SSLC Exam 2023: ಮಾ.31ರಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
ಇನ್ನು ಆರೋಪಿ ಉಸೇನ್ ಕೊಟ್ಟ ಮಾಹಿತಿ ಮೇರೆಗೆ ಮತ್ತೊಬ್ಬ ಆರೋಪಿ ಗುಡ್ಢರಾಮಧಾನಿ ಸೋನಿ ಎಂಬಾತನನ್ನು ಬಂಧಿಸಲಾಗಿದೆ. ಇಬ್ಬರು ಜತೆಯಾಗಿ ನಗರದ ರೈಲ್ವೆ ನಿಲ್ದಾಣಗಳಲ್ಲಿ ಕೈಚಳಕ ತೋರುತ್ತಿದ್ದರು. ಬಂಧಿತರಿಂದ 12 ಪ್ರಕರಣಗಳು ಪತ್ತೆ ಆಗಿದ್ದು, ಸುಮಾರು 23.4 ಲಕ್ಷ ಮೌಲ್ಯದ 536 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
-
ಕರ್ನಾಟಕ13 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ14 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ17 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕರ್ನಾಟಕ12 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ8 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್9 hours ago
Google: ಗೂಗಲ್ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ11 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ
-
ಕರ್ನಾಟಕ15 hours ago
Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?