ನೂಪುರ್‌ ಶರ್ಮಾ ಬೆಂಬಲಿಸಿ ಪೋಸ್ಟ್‌ ಹಾಕಿದ ಹಿಂದು ಯುವಕನ ಶಿರಚ್ಛೇದ; ರಸ್ತೆ ಮಧ್ಯೆ ರಕ್ತದೋಕುಳಿ - Vistara News

ಕ್ರೈಂ

ನೂಪುರ್‌ ಶರ್ಮಾ ಬೆಂಬಲಿಸಿ ಪೋಸ್ಟ್‌ ಹಾಕಿದ ಹಿಂದು ಯುವಕನ ಶಿರಚ್ಛೇದ; ರಸ್ತೆ ಮಧ್ಯೆ ರಕ್ತದೋಕುಳಿ

ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಪ್ರವಾದಿ ಮೊಹಮ್ಮದ್‌ ವಿರುದ್ಧ ಮಾತನಾಡಿದ್ದರು. ಇದರಿಂದಾಗಿ ರಾಷ್ಟ್ರಾದ್ಯಂತ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ಕಾನೂನು-ಸುವ್ಯವಸ್ಥೆ ಹದಗೆಟ್ಟಿತ್ತು.

VISTARANEWS.COM


on

Nupur Sharma
ಸಾಂಕೇತಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಉದಯಪುರ: ಪ್ರವಾದಿ ಮೊಹಮ್ಮದ್‌ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುವ ಮೂಲಕ ವಿವಾದ ಸೃಷ್ಟಿಸಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾರಿಗೆ ಬೆಂಬಲ ವ್ಯಕ್ತಪಡಿಸಿ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಾಕಿದ್ದ ಹಿಂದು ಯುವಕನ ಶಿರಚ್ಛೇದ ಮಾಡಲಾಗಿದೆ. ಈ ಭೀಕರ ಘಟನೆ ನಡೆದಿದ್ದು ರಾಜಸ್ಥಾನದ ಉದಯಪುರದಲ್ಲಿ. ಇಲ್ಲಿನ ಮಾಲ್ಡಾಸ್‌ ರಸ್ತೆಯಲ್ಲಿ ಇಬ್ಬರು ಮುಸ್ಲಿಂ ವ್ಯಕ್ತಿಗಳು ಸೇರಿ ಯುವಕನ ತಲೆ ಕತ್ತರಿಸಿದ್ದಾರೆ. ಹಾಡಹಗಲಲ್ಲೇ ರಕ್ತದೋಕುಳಿಯಾಗಿದೆ. ಮೃತನನ್ನು ಕನ್ನಯ್ಯ ಲಾಲ್‌ (27)ಎಂದು ಗುರುತಿಸಲಾಗಿದೆ.

ಜ್ಞಾನವಾಪಿ ಮಸೀದಿ ವಿಚಾರದ ಬಗ್ಗೆ ಮಾತನಾಡಲು ಟಿವಿ ಚಾನೆಲ್‌ವೊಂದಕ್ಕೆ ಬಿಜೆಪಿ ಪರ ಹೋಗಿದ್ದ ನೂಪುರ್‌ ಶರ್ಮಾ ಪ್ರವಾದಿ ಮೊಹಮ್ಮದರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಆ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಮುಸ್ಲಿಂ ಸಮುದಾಯದವರು ತಿರುಗಿಬಿದ್ದರು. ದೇಶದಲ್ಲಷ್ಟೇ ಅಲ್ಲ, ವಿಶ್ವದ ಹಲವು ಮುಸ್ಲಿಂ ರಾಷ್ಟ್ರಗಳಿಂದಲೂ ತೀವ್ರ ಆಕ್ರೋಶ ವ್ಯಕ್ತವಾಯಿತು. ನೂಪುರ್‌ ಶರ್ಮಾಗಂತೂ ಹತ್ಯೆ-ಅತ್ಯಾಚಾರ ಬೆದರಿಕೆಗಳು ಸಾಲುಸಾಲು ಬರತೊಡಗಿದವು. ನೂಪುರ್‌ ಶರ್ಮಾ ವಿರುದ್ಧವೂ ಹಲವು ಠಾಣೆಗಳಲ್ಲಿ ದೂರು ದಾಖಲಾಗಿವೆ. ಆದರೆ ಅವರನ್ನು ವಿಚಾರಣೆಗೆ ಒಳಪಡಿಸೋಣವೆಂದರೆ ಎಲ್ಲಿಯೂ ಕಾಣಿಸುತ್ತಿಲ್ಲವೆಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಇತ್ತೀಚೆಗೆ ನೂಪುರ್‌ ಶರ್ಮಾ ವಿವಾದ ಸ್ವಲ್ಪ ಮಟ್ಟಿಗೆ ತಣ್ಣಗಾಗಿತ್ತು. ಆದರೆ ಈಗ ರಾಜಸ್ಥಾನದಲ್ಲಿ ನಡೆದ ಯುವಕನ ಹತ್ಯೆ ಮತ್ತೆ ಆತಂಕ ಮೂಡಿಸಿದೆ. ಈ ಕೊಲೆಗೆಡುಕರು ಯುವಕನ ಶಿರಚ್ಛೇದ ಮಾಡಿದ ವಿಡಿಯೋವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಜೀವ ತೆಗೆಯುವುದಾಗಿಯೂ ಬೆದರಿಕೆ ಹಾಕಿದ್ದಾರೆಂದು ಸುದ್ದಿ ಮಾಧ್ಯಮ ಎಎನ್‌ಐ ವರದಿ ಮಾಡಿದೆ. ಅಂದಹಾಗೇ, ಮೃತ ಯುವಕ ಟೇಲರ್‌ ಆಗಿದ್ದ. ಅವನ ಅಂಗಡಿಗೇ ನುಗ್ಗಿದ್ದ ದುಷ್ಕರ್ಮಿಗಳು ಮೊದಲು ಚಾಕುವಿನಿಂದ ಹಲ್ಲೆ ನಡೆಸಿ, ನಂತರ ತಲೆ ಕತ್ತರಿಸಿದ್ದಾರೆ. ಬಳಿಕ ತಮ್ಮ ತಪ್ಪನ್ನೂ ವಿಡಿಯೋ ಮೂಲಕ ಒಪ್ಪಿಕೊಂಡಿದ್ದಾರೆ. ಸದ್ಯ ಇವರಿಬ್ಬರೂ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕಠಿಣ ಕ್ರಮದ ಭರವಸೆ
ಘಟನೆಯನ್ನು ರಾಜಸ್ಥಾನ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ. ಯುವಕನ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಘಟನೆಯಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆದರೆ ಇದೇ ಘಟನೆ ಮತ್ತೆ ಗಲಾಟೆಗೆ ಕಾರಣವಾಗಬಾರದು. ಶಾಂತಿ ಕಾಪಾಡಬೇಕು. ಯುವಕನ ಶಿರಚ್ಛೇದದ ವಿಡಿಯೋವನ್ನು ಶೇರ್‌ ಮಾಡಿಕೊಳ್ಳಬಾರದು ಎಂದು ಸಿಎಂ ಟ್ವೀಟ್‌ ಮಾಡಿ ಮನವಿ ಮಾಡಿದ್ದಾರೆ. ಆದರೂ ವಿಡಿಯೋ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್‌ ಬಿಗಿ ಭದ್ರತೆ ಒದಗಿಸಲಾಗಿದೆ. 300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಇದನ್ನ ೂ ಓದಿ: ಎಲ್ಲೂ ಕಾಣಿಸುತ್ತಿಲ್ಲ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ, ಮುಂಬೈ ಪೊಲೀಸರಿಂದ ಹುಡುಕಾಟ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Prajwal Revanna Case: ಹೊಳೆನರಸೀಪುರ ರೇವಣ್ಣ ನಿವಾಸದಲ್ಲಿ ಎಸ್‌ಐಟಿ ಸ್ಥಳ ಮಹಜರು; ಸಂತ್ರಸ್ತೆ ಹೇಳಿಕೆ ದಾಖಲು

Prajwal Revanna Case: ಹೊಳೆನರಸೀಪುರದ ರೇವಣ್ಣ ಅವರ ನಿವಾಸದಲ್ಲಿ ಸಂತ್ರಸ್ತೆ ಸಮ್ಮುಖದಲ್ಲಿ ಸತತ 3:46 ಗಂಟೆ ಕಾಲ ಎಸ್‌ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ.

VISTARANEWS.COM


on

Prajwal Revanna Case
Koo

ಹಾಸನ: ಹಾಸನ ಪೆನ್‌ ಡ್ರೈವ್‌ ಕೇಸ್‌ (Prajwal Revanna Case) ಸಂಬಂಧಿಸಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಎಚ್‌.ಡಿ. ರೇವಣ್ಣ ವಿರುದ್ಧ ತಲಾ ಎರಡು ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆ ಸಮ್ಮುಖದಲ್ಲಿ ಶುಕ್ರವಾರ ಹೊಳೆನರಸೀಪುರದ ರೇವಣ್ಣ ಅವರ ನಿವಾಸದಲ್ಲಿ ಎಸ್‌ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿದರು.

ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮತ್ತು ಎಚ್‌.ಡಿ. ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಸಂತ್ರಸ್ತ ಮಹಿಳೆಯ ಅಪಹರಣ ಆರೋಪದಲ್ಲಿ 2 ಕೇಸ್‌ ದಾಖಲಾಗಿವೆ. ಪ್ರಕರಣದಲ್ಲಿ ಈಗಾಗಲೇ ಸಿಆರ್‌ಪಿಸಿ ಸೆಕ್ಷೆನ್ 164 ಅಡಿ ನ್ಯಾಯಾಧೀಶರ ಮುಂದೆ ಸಂತ್ರಸ್ತ ಮಹಿಳೆಯರು ಹೇಳಿಕೆ ನೀಡಿದ್ದಾರೆ. ಹೀಗಾಗಿ ಹೊಳೆನರಸೀಪುರದ ರೇವಣ್ಣ ನಿವಾಸದಲ್ಲಿ ಮಹಜರು ನಡೆಸಲಾಗಿದೆ.

ಸಂತ್ರಸ್ತೆಯೊಂದಿಗೆ ಡಿವೈಎಸ್ಪಿ, ಇಬ್ಬರು ಇನ್‌ಸ್ಪೆಪೆಕ್ಟರ್ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಆಗಮಿಸಿ, ಎಸ್‌ಐಟಿ ತಂಡಕ್ಕೆ ಸಾಥ್ ನೀಡಿದರು. ಸ್ಥಳ ಮಹಜರು ಬಳಿಕ ಸಂತ್ರಸ್ತೆಯ ಹೇಳಿಕೆಯನ್ನು ಎಸ್‌ಐಟಿ ಅಧಿಕಾರಿಗಳು ದಾಖಲಿಸಿಕೊಂಡಿದ್ದು, ಎಲ್ಲವನ್ನೂ ವಿಡಿಯೊ ಮಾಡಿಕೊಂಡಿದ್ದಾರೆ. ಮನೆಯ ಬಾಗಿಲು ಬಳಿಯಿಂದ ಮೂಲೆ‌ ಮೂಲೆಯಲ್ಲೂ ಪರಿಶೀಲನೆ ನಡೆಸಲಾಗಿದ್ದು, ಯಾವ ಸ್ಥಳ ಏನಾಗಿತ್ತು ಎಂಬ ಬಗ್ಗೆ ಸಂತ್ರಸ್ತೆಯಿಂದ ಮಾಹಿತಿ ಪಡೆಯಲಾಗಿದೆ.

ಮನೆಯಲ್ಲಿ ಭವಾನಿ ರೇವಣ್ಣ ಇಲ್ಲದ ವೇಳೆ ಈ ಮೂರು ಕಡೆ ದೌರ್ಜನ್ಯ ನಡೆಸಿದ್ದರು ಎಂದು ಸಂತ್ರಸ್ತೆ ಆರೋಪ ಮಾಡಿದ್ದರು. ಸತತ 3:46 ಗಂಟೆ ಕಾಲ ಅಧಿಕಾರಿಗಳು ಮಹಜರು ನಡೆಸಿ, ಅಗತ್ಯ ಮಾಹಿತಿ, ಸಾಕ್ಷ್ಯಗಳನ್ನು ಕಲೆಹಾಕಿದರು.

ಇದನ್ನೂ ಓದಿ | Prajwal Revanna Case: ಹಾಸನ ಸಂಸದರಿಗೂ ನನಗೂ ಸಂಬಂಧವಿಲ್ಲ ಎಂದ ನಿಖಿಲ್‌ ಕುಮಾರಸ್ವಾಮಿ!

ಮೊಮ್ಮಗನ ದೆಸೆಯಿಂದ ದೇವೇಗೌಡರ ಆರೋಗ್ಯ ಏರುಪೇರು, ಕುಟುಂಬದಿಂದ ತೀವ್ರ ನಿಗಾ

HD Deve gowda prajwal revanna case

ಬೆಂಗಳೂರು: ಮೊಮ್ಮಗ, ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಪೆನ್ ಡ್ರೈವ್ ಪ್ರಕರಣ (Pen drive Case) ಉಂಟುಮಾಡಿರುವ ಚಿಂತೆ ಹಾಗೂ ಒತ್ತಡದ ದೆಸೆಯಿಂದ ಮಾಜಿ ಪ್ರಧಾನಿ ದೇವೇಗೌಡರ (hd Deve gowda) ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ದೇವೇಗೌಡ ಕುಟುಂಬದ ಸದಸ್ಯರು ಅಲರ್ಟ್‌ ಆಗಿದ್ದು, ತೀವ್ರ ನಿಗಾ ಇರಿಸಿದ್ದಾರೆ.

ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು, ಹಿರಿಮಗ ಹಾಗೂ ಮೊಮ್ಮಗನ ಹಗರಣಗಳಿಂದಾಗಿ ತೀವ್ರವಾಗಿ ನೊಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಈ ಪ್ರಕರಣದಲ್ಲಿ ಕೈ ತೊಳೆದುಕೊಂಡು ಬೆನ್ನು ಹತ್ತಿರುವುದು ಇನ್ನಷ್ಟು ಚಿಂತೆ ಮೂಡಿಸಿದೆ. ಇದರಿಂದಾಗಿ, ಇತ್ತೀಚೆಗೆ ತಾನೇ ಆಗಿರುವ ಬಿಜೆಪಿ- ಜೆಡಿಎಸ್‌ ಮೈತ್ರಿಯ ಮೇಲೂ ದುಷ್ಪರಿಣಾಮ ಆಗುವ ಸಾಧ್ಯತೆಯೂ ಅವರನ್ನು ಬಾಧಿಸುತ್ತಿದೆ.

ಈ ಹಿನ್ನೆಲೆಯಲ್ಲಿ ದೇವೇಗೌಡರು ಹಾಗೂ ಪತ್ನಿ ಚೆನ್ನಮ್ಮ ಆರೋಗ್ಯದ ಬಗ್ಗೆಯೂ ಕುಟುಂಬದ ಸದಸ್ಯರು ತೀವ್ರ ನಿಗಾ ವಹಿಸುತ್ತಿದ್ದಾರೆ. ಹೆಣ್ಣು ಮಕ್ಕಳು ಸಂಪೂರ್ಣ ಮೇಲ್ವಿಚಾರಣೆ ಹೊತ್ತಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ಎರಡೂ ಟೈಮ್ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. “ಟಿವಿ ನೋಡಬೇಡಿ.. ಸಂಪೂರ್ಣ ರೆಸ್ಟ್ ಮಾಡಿ” ಎಂದು ದೇವೇಗೌಡರಿಗೆ ವೈದ್ಯರು ಕೂಡ ಸಲಹೆ ನೀಡಿದ್ದಾರೆ.

ನಿನ್ನೆ ದೇವೇಗೌಡರ ಅಳಿಯ, ಹೃದಯ ತಜ್ಞ ಡಾ. ಸಿ.ಎನ್‌ ಮಂಜುನಾಥ್ ಗೌಡರ ಮನೆಗೆ ಭೇಟಿ ನೀಡಿ ನಿಯಮಿತ ತಪಾಸಣೆ ನಡೆಸಿದ್ದಾರೆ. ಇತರ ನುರಿತ ವೈದ್ಯರಿಂದಲೂ ತಪಾಸಣೆ ನಡೆದಿದೆ. ಪುತ್ರಿಯರು ದೇವೇಗೌಡರ ಮನೆಯಲ್ಲಿಯೇ ಉಳಿದುಕೊಂಡಿದ್ದು, ದೇವೇಗೌಡರ ಕೋಣೆಯಲ್ಲಿ ಒಬ್ಬ ವ್ಯಕ್ತಿಯನ್ನು ಸದಾ ನೋಡಿಕೊಳ್ಳಲು ಇರಿಸಿದ್ದಾರೆ.

ರೇವಣ್ಣ ಕೂಡ ಕಣ್ಮರೆ

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ (Pen Drive Case) ಪ್ರಕರಣದಲ್ಲಿ ರೇವಣ್ಣಗೆ ಎಸ್ಐಟಿ ಮೂರನೇ ನೋಟೀಸ್ ಹಾಗೂ ಕೊನೆಗೆ ಲುಕೌಟ್ ನೋಟೀಸ್ (Lookout notice) ಜಾರಿಯಿಂದಾಗಿ ಮತ್ತಷ್ಟು ಸಂಕಷ್ಟ ಎದುರಾಗಿದೆ. ರೇವಣ್ಣ ಅವru ವಿದೇಶಕ್ಕೆ ಹಾರಬಹುದು ಎಂಬ ಮುಂದಾಲೋಚನೆಯಿಂದ ಲುಕೌಟ್‌ ನೋಟೀಸ್‌ ಜಾರಿ ಮಾಡಲಾಗಿದ್ದು, ಈಗ ಅವರು ಯಾವುದೇ ಏರ್‌ಪೋರ್ಟ್‌ ಮೂಲಕ ಹಾದು ಹೋಗಲು ಸಾಧ್ಯವಿಲ್ಲದಾಗಿದೆ.

ವಿದೇಶದಲ್ಲಿದ್ದುಕೊಂಡು ಲೈಂಗಿಕ ಹಗರಣ (Pen drive case) ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಪ್ರಜ್ವಲ್ ರೇವಣ್ಣ (Prajwal Revanna Case) ವಿರುದ್ಧ ರೆಡ್ ಕಾರ್ನರ್ ನೊಟೀಸ್ (Red Corner Notice) ಜಾರಿ ಮಾಡಲು ಎಸ್‌ಐಟಿ (SIT) ಸಿದ್ಧತೆ ನಡೆಸಿದೆ ಎನ್ನಲಾಗಿದ್ದು, ಇನ್ನೊಂದೆಡೆ ಭವಾನಿ ರೇವಣ್ಣ ಅವರಿಗೂ ವಿಚಾರಣೆಗೆ ಎಸ್‌ಐಟಿ ಬುಲಾವ್‌ ಮಾಡಿದೆ.

ಸದ್ಯ ರೇವಣ್ಣ ವಿರುದ್ಧ ತನಿಖೆಗೆ ಒಳಗಾಗಬೇಕಾದ ಗಂಭೀರ ಆರೋಪವಿದೆ. ಮೈಸೂರಿನಲ್ಲಿ ಸಂತ್ರಸ್ತೆಯ ಪುತ್ರ ರೇವಣ್ಣ ವಿರುದ್ಧ ಕಿಡ್ನಾಪ್ ಪ್ರಕರಣ ದಾಖಲು ಮಾಡಿದ್ದಾರೆ. ಹೀಗಾಗಿ ರೇವಣ್ಣಗೆ ಎಸ್ಐಟಿ ಮುಂದೆ ಹಾಜರಾಗಲು ನೋಟೀಸ್ ನೀಡಲಾಗಿದೆ. ಆದರೆ ಕಳೆದ ಎರಡು ದಿನಗಳಿಂದ ರೇವಣ್ಣ ನಾಪತ್ತೆಯಾಗಿದ್ದಾರೆ. ಅವರು ಅತ್ತ ಎಚ್.ಡಿ ದೇವೇಗೌಡರ ನಿವಾಸದಲ್ಲಿಯಾಗಲೀ, ಈತ್ತ ಬಸವನಗುಡಿಯ ತಮ್ಮ ನಿವಾಸದಲ್ಲಿಯಾಗಲೀ, ಹಾಸನದ ಎರಡು ನಿವಾಸಗಳಲ್ಲಾಗಲೀ ಇಲ್ಲ.

ಇದನ್ನೂ ಓದಿ: Prajwal Revanna Case: ಹಾಸನ ಸಂಸದರ ನಿವಾಸದ ಗೇಟಿಗೆ ಬೀಗ; ನಿವಾಸದ ಕೀ ನಾಪತ್ತೆ! ಎಚ್‌ಡಿ ರೇವಣ್ಣ ಕೂಡ ಗಾಯಬ್!‌

ಹೀಗಾಗಿ ಅವರು ಬಂಧನದ ಭೀತಿಯಿಂದ ಅಜ್ಞಾತ ಸ್ಥಳಕ್ಕೆ ಎಸ್ಕೇಪ್ ಆಗಿರಬಹುದು ಎಂದು ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಸದ್ಯ ರೇವಣ್ಣ ಅವರಿಗೆ ಬಂಧನದ ಭಯ ಕಾಡುತ್ತಿದೆ. ಕಿಡ್ನಾಪ್ ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ತೀರ್ಪು ನೋಡಿಕೊಂಡು ನಿರ್ಧಾರ ಮಾಡಲಿದ್ದಾರೆ. ಜಾಮೀನು ಸಿಕ್ಕರೆ ಎಸ್ಐಟಿ ಮುಂದೆ ಬರುವುದು, ಇಲ್ಲವೇ ಮೇಲಿನ ಕೋರ್ಟ್ ಮೊರೆ ಹೋಗೋಣ ಎಂದು ರೇವಣ್ಣ ಪರ ವಕೀಲರು ಹೇಳಿದ್ದಾರೆ.

Continue Reading

ಬೆಂಗಳೂರು

Rowdy Sheeter: ಸಿಸಿಬಿ ಅಧಿಕಾರಿಗಳ ಕಂಡು ಡಿಸಿಪಿ ಕಚೇರಿಯಿಂದ ರೌಡಿಶೀಟರ್‌ ಒಂಟೆ ರೋಹಿತ್‌ ಎಸ್ಕೇಪ್‌

Rowdy Sheeter : ಸಿಸಿಬಿ ಅಧಿಕಾರಿಗಳ ಕಂಡೊಡನೆ ಡಿಸಿಪಿ ಕಚೇರಿಯಿಂದಲೇ ರೌಡಿಶೀಟರ್‌ ಒಂಟೆ ರೋಹಿತ್‌ ಎಸ್ಕೇಪ್‌ ಆಗಿದ್ದಾನೆ. ಸದ್ಯ ಸಿಸಿಬಿ ಹಾಗೂ ಸುಬ್ರಹ್ಮಣ್ಯ ಪೊಲೀಸರು ರೌಡಿಶೀಟರ್‌ಗಾಗಿ ಹುಡುಕಾಟ ನಡೆಸಿದ್ದಾರೆ.

VISTARANEWS.COM


on

By

Rowdy sheeter camel Rohit escapes from DCPs office after ccb officials spotted him
Koo

ಬೆಂಗಳೂರು: ಉತ್ತರ ವಿಭಾಗ ಡಿಸಿಪಿ ಕಚೇರಿಯಿಂದ ರೌಡಿಶೀಟರ್‌ವೊಬ್ಬ (Rowdy Sheeter) ಪೊಲೀಸ್‌ರಿಂದ ತಪ್ಪಿಸಿಕೊಂಡಿದ್ದಾನೆ. ರೋಹಿತ್‌ ಅಲಿಯಾಸ್‌ ಒಂಟೆ ರೋಹಿತ್‌ ಎಸ್ಕೇಪ್ ಆದವನು. 110 ಸೆಕ್ಷನ್ ಬಾಂಡ್ ಹಾಕಲು ಸುಬ್ರಹ್ಮಣ್ಯ ನಗರ ಠಾಣೆ ರೌಡಿಶೀಟರ್ ಆಗಿರುವ ಒಂಟೆ ರೋಹಿತ್‌ನನ್ನು ಕರೆಸಿಕೊಂಡಿದ್ದರು. ಒಂದು ವಾರದ ಹಿಂದೆ ಠಾಣೆಗೆ ಕರೆಸಿಕೊಂಡಿದ್ದ ಪೊಲೀಸರು ಇಂದು ಠಾಣೆಯಿಂದ ಡಿಸಿಪಿ ಮುಂದೆ ಕರೆದೊಯ್ದಿದ್ದರು.

ಇತ್ತ ಒಂಟೆ ರೋಹಿತ್‌ಗಾಗಿ ಹುಡುಕಾಟ ನಡೆಸುತ್ತಿದ್ದ ಸಿಸಿಬಿ ಪೊಲೀಸರು, ಮುಂಚೆಯೇ ಡಿಸಿಪಿ ಕಚೇರಿ ಬಳಿ ಕಾಯುತ್ತಿದ್ದರು. ಸಿಸಿಬಿ ಪೊಲೀಸರನ್ನು ನೋಡಿದ ಕೂಡಲೇ ಒಂಟೆ ರೋಹಿತ್‌ ಸುಬ್ರಹ್ಮಣ್ಯ ನಗರ ಪೊಲೀಸರಿಂದ ತಪ್ಪಿಸಿಕೊಂಡು ಎಸ್ಕೇಪ್‌ ಆಗಿದ್ದಾನೆ.

ಈ ಒಂಟೆ ರೋಹಿತ್‌, ಸೈಲೆಂಟ್ ಸುನಿಲ್ ಅಸೋಸಿಯೇಟ್ ಆಗಿದ್ದ. ಕೊಲೆ, ಕೊಲೆ ಯತ್ನ ಸೇರಿ ಹಲವು ಕೇಸಿನಲ್ಲಿ ಫಿಟ್ ಆಗಿದ್ದ. ಸದ್ಯ‌ ಪೊಲೀಸರ ಕೈಯಿಂದ ಎಸ್ಕೇಪ್ ಆಗಿರುವ ಒಂಟೆ ರೋಹಿತ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: Road Accident : ಟಿಪ್ಪರ್‌ ಲಾರಿ ಡಿಕ್ಕಿಗೆ ಕಾರು ಪುಡಿ ಪುಡಿ; ಸಿದ್ದನಕೊಳ್ಳ ಶ್ರೀಗಳು ಗಂಭೀರ ಗಾಯ

ಏನಿದು 110 ಸೆಕ್ಷನ್‌

ಬೆಂಗಳೂರಿನಲ್ಲಿ ಕ್ರೈಂ ರೇಟ್‌ ಹೆಚ್ಚಾಗುತ್ತಲೇ ಇದೆ. ಅಪರಾಧ ಕೃತ್ಯಗಳನ್ನು ತಡೆಯಲು ಆಗದಷ್ಟು ಪೊಲೀಸರು ಕೈ ಚೆಲ್ಲಿ ಕುಳಿತಂತೆ ಇದೆ. ಸದ್ಯ ರೌಡಿಗಳ ಪಾಲಿಗೆ ದುಸ್ವಪ್ನವಾಗಿರುವ ಸೆಕ್ಷನ್‌ 110 ಪ್ರಕಾರ ಪೊಲೀಸರು ರೌಡಿಗಳಿಂದ ತಾವು ಯಾವುದೇ ಅಪರಾಧಿ ಚಟುವಟಿಕೆಗಳಲ್ಲಿ ಭಾಗವಹಿಸೋದಿಲ್ಲ ಎಂದು ಬಾಂಡ್ ಬರೆಸಿಕೊಳ್ಳುತ್ತಾರೆ.

ಈ ಮೊದಲು ಕೂಡ ಬಾಂಡ್ ಬರೆಸಿಕೊಂಡು ಸುಮ್ಮನೆ ಇರುತ್ತಿದ್ದರು. ಅದರ ಕಾರ್ಯ ರೂಪ‌ ಮಾತ್ರ ಆಗುತ್ತಿರಲಿಲ್ಲ. ಪೊಲೀಸರು ಕೂಡಾ ಇಷ್ಟು ದಿನ ಸುಮ್ಮನೆ ಇದ್ದರು. ಆದರೆ ನಗರದಲ್ಲಿ ಕ್ರೈಂ ರೇಟ್ ಹೆಚ್ಚಾಗುತ್ತಿರುವುದರಿಂದ ಈ ಅಸ್ತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ.

ಈ ಬಾಂಡಿನಲ್ಲಿ ರೌಡಿಗಳಿಂದ 3-5ಲಕ್ಷದವರೆಗೆ ಕುಟುಂಬ ಸಮೇತವಾಗಿ ಬಾಂಡ್ ಬರೆಸಿಕೊಳ್ಳಲಾಗುತ್ತದೆ. ರೌಡಿಶೀಟರ್‌ ಬಾಂಡ್​ಗೆ ಸಹಿ ಹಾಕಿದ ಮೇಲೆ ಕೊಲೆ, ಕಳ್ಳತನ, ದರೋಡೆಯಂತಹ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ. ಒಂದು ವೇಳೆ ಬಾಂಡ್ ಮೀರಿ ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಅಂಥ ಆರೋಪಿಗಳನ್ನು ನ್ಯಾಯಾಧೀಶರ ‌ಮುಂದೆ ಹಾಜರು ಪಡಿಸುವ ಅಗತ್ಯ ಇಲ್ಲ. ಬದಲಿಗೆ ಯಾವುದೇ ರೀತಿಯ ಕೇಸ್ ದಾಖಲಿಸದಯೇ ಡಿಸಿಪಿ ಅಧಿಕಾರಿ ಉಪಯೋಗಿಸಿ ನೇರವಾಗಿ 3ರಿಂದ 10 ತಿಂಗಳವರೆಗೆ ಜೈಲಿಗೆ ಅಟ್ಟಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬಾಗಲಕೋಟೆ

Road Accident : ಟಿಪ್ಪರ್‌ ಲಾರಿ ಡಿಕ್ಕಿಗೆ ಕಾರು ಪುಡಿ ಪುಡಿ; ಸಿದ್ದನಕೊಳ್ಳ ಶ್ರೀಗಳು ಗಂಭೀರ ಗಾಯ

Road Accident : ಟಿಪ್ಪರ್‌ ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ ಸಿದ್ದನಕೊಳ್ಳ ಡಾ.ಶಿವಕುಮಾರ್ ಶ್ರೀಗಳಿಗೆ ಗಂಭೀರ ಗಾಯವಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

VISTARANEWS.COM


on

By

Road Accident in bagalakote
Koo

ಬಾಗಲಕೋಟೆ: ಬಾಗಲಕೋಟೆ (Baglkote News) ಜಿಲ್ಲೆಯ ಹುನಗುಂದ ತಾಲೂಕಿನ ಬಾನಂತಿ ಕೊಳ್ಳದ ಸಮೀಪ ವೇಗವಾಗಿ ಬಂದ ಟಿಪ್ಪರ್‌ ಲಾರಿ- ಕಾರಿನ ನಡುವೆ ಅಪಘಾತ (Road Accident) ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಕಾರು ಛಿದ್ರಗೊಂಡಿದ್ದು, ಲಾರಿ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ.

ಇನ್ನೂ ಕಾರಿನೊಳಗೆ ಇದ್ದ ಸಿದ್ದನಕೊಳ್ಳ ಡಾ.ಶಿವಕುಮಾರ್ ಶ್ರೀಗಳಿಗೆ ಗಂಭೀರ ಗಾಯಗೊಂಡಿದ್ದಾರೆ. ಶ್ರೀಗಳೇ ಕಾರು ಚಾಲನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸ್ಥಳೀಯರು ಗಾಯಗೊಂಡ ಡಾ.ಶಿವಕುಮಾರ್ ಶ್ರೀಗಳನ್ನು ಆಂಬ್ಯುಲೆನ್ಸ್‌ ಮೂಲಕ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಮಿನಗಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ಅಮಿನಗಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Self Harming : ಸಾಲಬಾಧೆಗೆ ನೊಂದು ಮನೆಯೊಳಗೆ ನೇಣಿಗೆ ಕೊರಳೊಡ್ಡಿದ ಗೃಹಿಣಿ

ಹೆರಿಗೆಯಾದ ಮೂರು ಗಂಟೆಗಳಲ್ಲೇ ಅಪಾರ್ಟ್‌ಮೆಂಟ್‌ ಮೇಲಿಂದ ಮಗುವನ್ನೇ ಎಸೆದ್ಳಾ?

ಕೊಚ್ಚಿ: ಹೆತ್ತ ತಾಯಿಯೊಬ್ಬಳು ಹಸುಗೂಸನ್ನು (Newly born Child) ಅಪಾರ್ಟ್‌ಮೆಂಟ್‌(Apartment)ನಿಂದ ಕೆಳಗೆಸೆದಿರುವಂತಹ ಆಘಾತಕಾರಿ ಘಟನೆ(Viral News) ಕೇರಳದ(Kerala) ಕೊಚ್ಚಿಯಲ್ಲಿ ನಡೆದಿದೆ. ಪಣಂಪುಲ್ಲಿನಗರದಲ್ಲಿ ಈ ಘಟನೆ ನಡೆದಿದ್ದು, ಅಪಾರ್ಟ್‌ಮೆಂಟ್‌ವೊಂದರ ಪಕ್ಕದ ರಸ್ತೆಯಲ್ಲಿ ಬಟ್ಟೆ ಮತ್ತು ಕೊರಿಯರ್‌ ಪ್ಲಾಸ್ಟಿಕ್‌ನಲ್ಲಿ ಸುತ್ತಿದ್ದ ಮಗುವಿನ ಮೃತದೇಹ ಪತ್ತೆಯಾಗಿತ್ತು. ಇದನ್ನು ನೋಡಿದ ಜನ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದಾಗ ತಾಯಿಯೇ ಮಗುವನ್ನು ಎಸೆದಿರುವ ಆಘಾತಕಾರಿ ವಿಚಾರ ಬಯಲಾಗಿದೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ಅಪಾರ್ಟ್‌ಮೆಂಟ್‌ನಿಂದ ಮಗುವನ್ನು ಎಸೆದಿರುವುದು ಸ್ಪಷ್ಟವಾಗಿದೆ. ಮೇಲಿನಿಂದ ಕೆಳಗೆ ಬಿದ್ದ ಮಗು ಸ್ಥಳದಲ್ಲೇ ಅಸುನೀಗಿದೆ. ತಕ್ಷಣ ಅಪಾರ್ಟ್‌ಮೆಂಟ್‌ ಒಳಗೆ ಹೋದ ಪೊಲೀಸರು 23ವರ್ಷದ ಮಹಿಳೆಯಯನ್ನು ಅರೆಸ್ಟ್‌ ಮಾಡಿದ್ದು, ಆಕೆ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಮುಂದಿನ ಕಾನೂನು ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಇನ್ನು ಮಹಿಳೆ ಹೆರಿಗೆಯಾದ ಮೂರು ಗಂಟೆಗಳ ನಂತರ ಗಾಬರಿಯಲ್ಲಿ ಮಗುವನ್ನು ಬಟ್ಟೆಯಲ್ಲಿ, ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿ ಮಹಿಳೆ ಅಪಾರ್ಟ್‌ಮೆಂಟ್‌ನಿಂದ ಎಸೆದಿದ್ದಾಳೆ ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಮಹಿಳೆ ಅತ್ಯಾಚಾರ ಸಂತ್ರಸ್ತೆ ಎಂಬ ಶಂಕೆ

ವಿಚಾರಣೆ ಆರಂಭಿಸಿರುವ ಪೊಲೀಸರು ಮಹಿಳೆ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ವಿಚಾರಣೆ ವೇಳೆ ಮಹಿಳೆ ಈ ಕೃತ್ಯ ತಾನೇ ಎಸಗಿರುವುದಾಗಿ ಒಪ್ಪಿಕೊಂಡಿದ್ದು, ಮಗುವಿನ ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಕೃತ್ಯದ ಹಿಂದಿರುವ ನಿಜವಾದ ಉದ್ದೇಶ ಬಯಲಾಗಲಿದೆ. ಒಂದು ವೇಳೆ ಮಹಿಳೆ ಮೇಲೆ ಅತ್ಯಾಚಾರ ನಡೆದಿದ್ದರೆ ಅದರ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಇನ್ನು ಆರೋಪಿ ಮಹಿಳೆ ಗರ್ಭಿಣಿಯಾಗಿರುವ ವಿಚಾರ ಆಕೆಯ ಮನೆಯವರಿಗೆ ತಿಳಿದಿರಲಿಲ್ಲ. ಅವರಿಗೂ ಈ ಕೊಲೆಗೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ.

ಇಂತಹದ್ದೇ ಒಂದು ಘಟನೆ ಎರಡು ತಿಂಗಳ ಹಿಂದೆ ಮಡಿಕೇರಿಯ ಸುಂಠಿಕೊಪ್ಪದಲ್ಲಿ ನಡೆದಿತ್ತು. ಯಂಕನ ದೇವರಾಜು ಎಂಬುವವರ ಗದ್ದೆಯಲ್ಲಿ ನವಜಾತ ಶಿಶುವಿನ ಮೃತದೇಹ ಮಣ್ಣಿನೊಳಗೆ ಪತ್ತೆಯಾಗಿತ್ತು. ತನಿಖೆ ನಡೆಸಿದಾಗ ಹೆತ್ತ ತಾಯಿಯೇ ಮಗುವನ್ನು ಕತ್ತು ಹಿಸುಕಿ ಕೊಂದು ನಂತರ ಮಣ್ಣಿನಲ್ಲಿ ಹೂತಿರುವುದು ಬೆಳಕಿಗೆ ಬಂದಿತ್ತು. ಘಟನೆಗೆ ಸಂಬಂಧಿಸಿ ಸುಂಟಿಕೊಪ್ಪ ಪೊಲೀಸರು ಆರೋಪಿಗಳಿಬ್ಬರನ್ನು ಪತ್ತೆಹಚ್ಚಿ ಬಂಧಿಸಿದ್ದು, ಬಂಧಿತರನ್ನು ಗದ್ದೆಹಳ್ಳ ಗಿರಿಯಪ್ಪ ಮನೆ ಗದ್ದೆಯಲ್ಲಿ ವಾಸವಾಗಿರುವ ಕುಮಾರ ಮತ್ತು ಆತನ ತಾಯಿ ಯಮುನಾ ಎಂದು ಗುರುತಿಸಲಾಗಿದೆ. ಇವರು ಆಗಷ್ಟೇ ಹುಟ್ಟಿದ ಮಗುವಿನ ಕತ್ತು ಹಿಸುಕಿ ಸಾಯಿಸಿ ನಂತರ ಹೂತು ಹಾಕಿರುವುದನ್ನು ಪೋಲೀಸರ ವಿಚಾರಣೆ ಸಂದರ್ಭ ಒಪ್ಪಿಕೊಂಡಿದ್ದರು.

ವಿವಾಹಿತನಾಗಿರುವ ಕುಮಾರನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಈತ ಚೆಟ್ಟಳ್ಳಿ ಸಮೀಪದ ಗ್ರಾಮವೊಂದರ ಮಹಿಳೆ ಒಬ್ಬಳ ಜತೆ ಅಕ್ರಮ ಸಂಬಂಧ ಇರಿಸಿದ್ದು ಇದರ ಫಲವಾಗಿ ಆಕೆ ತುಂಬು ಗರ್ಭಿಣಿಯಾಗಿದ್ದಳು. ರಾತ್ರಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ ಕುಮಾರ ಮತ್ತು ಅವನ ತಾಯಿ ನವಜಾತ ಶಿಶುವಿನ ಕತ್ತುಹಿಸುಕಿ ಅದರ ಜೀವ ಕಿತ್ತುಕೊಂಡಿದ್ದರು. ಮರುದಿನ ಮುಂಜಾನೆ ಕುಮಾರ ಮತ್ತು ಯಮುನಾ ರಸ್ತೆ ಬದಿಯ ಗದ್ದೆಯಲ್ಲಿ ಗುಂಡಿ ತೋಡಿ ನವಜಾತ ಶಿಶುವನ್ನು ಹೂತಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದಕ್ಷಿಣ ಕನ್ನಡ

Bomb Threat: ಮಂಗಳೂರು ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ, ಪ್ರಕರಣ ತಡವಾಗಿ ಬೆಳಕಿಗೆ

Bomb Threat: ಉಗ್ರರ ಹೆಸರಲ್ಲಿ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕಳಿಸಲಾಗಿದೆ. “ಏರ್‌ಪೋರ್ಟ್ ಆವರಣದಲ್ಲಿ ಸ್ಫೋಟಕಗಳನ್ನು ಇಡಲಾಗಿದೆ. ಮೂರು ವಿಮಾನದಲ್ಲಿಯೂ ಬಾಂಬ್ ಇಟ್ಟಿದ್ದೇವೆ. ಇನ್ನು ಕೆಲವೇ ಗಂಟೆಗಳಲ್ಲಿ ದೊಡ್ಡ ಮಟ್ಟದ ರಕ್ತಪಾತ ಆಗಲಿದೆ” ಎಂದು ಬೆದರಿಕೆ ಒಡ್ಡಲಾಗಿತ್ತು. “ಟೆರರೈಸರ್ಸ್ 111” ಸಂಘಟನೆ ಈ ಕೃತ್ಯದ ಹಿಂದೆ ಇದೆ ಎಂದು ಬೆದರಿಕೆ ಇಮೇಲ್ ತಿಳಿಸಿತ್ತು.

VISTARANEWS.COM


on

mangaluru airport bomb threat
Koo

ಮಂಗಳೂರು: ಮಂಗಳೂರು ಏರ್‌ಪೋರ್ಟ್ (Mangaluru Airport) ಕಚೇರಿಗೆ ಬಾಂಬ್ ಬೆದರಿಕೆ (Bomb Threat) ಬಂದಿದೆ. ಏರ್‌ಪೋರ್ಟ್‌ ಆವರಣದಲ್ಲಿ ಹಾಗೂ ಮೂರು ವಿಮಾನಗಳಲ್ಲಿಯೂ ಬಾಂಬ್‌ ಇಟ್ಟಿರುವುದಾಗಿ ಬೆದರಿಕೆ ಇಮೇಲ್‌ (threat Email) ಬಂದಿದ್ದು, ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅನುಮಾನ ಬಂದ ಕಡೆಗಳಲ್ಲಿ ತಪಾಸಣೆ ಕೂಡ ನಡೆಸಲಾಗಿದೆ.

ಉಗ್ರರ ಹೆಸರಲ್ಲಿ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕಳಿಸಲಾಗಿದೆ. “ಏರ್‌ಪೋರ್ಟ್ ಆವರಣದಲ್ಲಿ ಸ್ಫೋಟಕಗಳನ್ನು ಇಡಲಾಗಿದೆ. ಮೂರು ವಿಮಾನದಲ್ಲಿಯೂ ಬಾಂಬ್ ಇಟ್ಟಿದ್ದೇವೆ. ಇನ್ನು ಕೆಲವೇ ಗಂಟೆಗಳಲ್ಲಿ ದೊಡ್ಡ ಮಟ್ಟದ ರಕ್ತಪಾತ ಆಗಲಿದೆ” ಎಂದು ಬೆದರಿಕೆ ಒಡ್ಡಲಾಗಿತ್ತು. “ಟೆರರೈಸರ್ಸ್ 111” ಸಂಘಟನೆ ಈ ಕೃತ್ಯದ ಹಿಂದೆ ಇದೆ ಎಂದು ಬೆದರಿಕೆ ಇಮೇಲ್ ತಿಳಿಸಿತ್ತು.

ಎಪ್ರಿಲ್ 29ರಂದೇ ಬಾಂಬ್ ಇಟ್ಟಿರುವ ಬಗ್ಗೆ ಬೆದರಿಕೆ ಇಮೇಲ್ ಬಂದಿದ್ದು, ಅಂದೇ ತಪಾಸಣೆ ನಡೆದು ಇದೊಂದು ಹುಸಿ ಬೆದರಿಕೆ ಎಂಬುದು ರುಜುವಾತಾಗಿದೆ. ಇಮೇಲ್ ಸಂದೇಶದ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಂಬ್ ಬೆದರಿಕೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ಬಾಂಬ್ ಬೆದರಿಕೆ ವಿಷಯವನ್ನು ಗೌಪ್ಯವಾಗಿಟ್ಟು ಪೊಲೀಸರು ಭದ್ರತೆ ಹೆಚ್ಚಿಸಿದ್ದರು.

ಎರಡು ದಿನಗಳ ಹಿಂದೆ ದಿಲ್ಲಿಯ ಶಾಲೆಗಳಿಗೆ ಇದೇ ರೀತಿಯ ಬಾಂಬ್‌ ಸ್ಫೋಟದ ಇಮೇಲ್‌ ಬೆದರಿಕೆ ಬಂದಿತ್ತು. ನೂರಾರು ಶಾಲೆಗಳಿಗೆ ಈ ಇಮೇಲ್‌ ಬಂದಿದ್ದು, ಇದರ ಮೂಲವನ್ನು ಪೊಲೀಸರು ಟ್ರೇಸ್‌ ಮಾಡಿದ್ದಾರೆ. ಬೆಂಗಳೂರಿನಲ್ಲಿಯೂ ಹಲವು ಶಾಲೆಗಳಿಗೆ ಇದೇ ರೀತಿಯ ಬೆದರಿಕೆ ಮೇಲ್‌ ಬಂದಿದ್ದುದನ್ನು ನೆನಪಿಸಿಕೊಳ್ಳಬಹುದು. ಇದುವರೆಗೂ ಇಂಥ ಬೆದರಿಕೆ ಮೇಲ್‌ಗಳು ನಿಜವಾದ ಉದಾಹರಣೆ ಇಲ್ಲ.

ಆದರೆ, ಭದ್ರತಾ ಪಡೆಗಳು ರಿಸ್ಕ್‌ ತೆಗೆದುಕೊಳ್ಳಲು ಇಚ್ಛಿಸದೆ ತೀವ್ರ ತಪಾಸಣೆ ನಡೆಸುತ್ತವೆ ಹಾಗೂ ಸೈಬರ್‌ ಪೊಲೀಸರು ಇಂಥ ಇಮೇಲ್‌ಗಳ ಮೂಲದ ಬೆನ್ನು ಬೀಳುತ್ತಾರೆ. ಆದರೆ ಹೆಚ್ಚಾಗಿ ಇಂಥ ಇಮೇಲ್‌ಗಳ ಮೂಲ ಪತ್ತೆಯಾಗದಂತೆ ವಿಪಿಎನ್‌ ಮೂಲಕ ಕಾರ್ಯಾಚರಿಸಿ, ಯಾವುದೋ ವಿದೇಶದ ಸರ್ವರ್‌ನಿಂದ ಬಂದದ್ದು ಎಂದು ಕಾಣಿಸುವಂತೆ ಮಾಡಲಾಗುತ್ತಿದೆ.

ಇದನ್ನೂ ಓದಿ: Bomb Threat: ದೆಹಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ; ಇ-ಮೇಲ್‌ ಮಾಡಿದವ 16 ವರ್ಷದ ಪೋರ?

Continue Reading
Advertisement
Prajwal Revanna Case
ಕರ್ನಾಟಕ2 mins ago

Prajwal Revanna Case: ಹೊಳೆನರಸೀಪುರ ರೇವಣ್ಣ ನಿವಾಸದಲ್ಲಿ ಎಸ್‌ಐಟಿ ಸ್ಥಳ ಮಹಜರು; ಸಂತ್ರಸ್ತೆ ಹೇಳಿಕೆ ದಾಖಲು

Lok Sabha Election
ಪ್ರಮುಖ ಸುದ್ದಿ11 mins ago

Lok Sabha Election : ರಾಹುಲ್ ಪ್ರಧಾನಿಯಾಗುವುದು ಪಾಕಿಸ್ತಾನದ ಆಸೆ ಎಂದ ಮೋದಿ, ತಿರುಗೇಟು ಕೊಟ್ಟ ಪ್ರಿಯಾಂಕಾ

Prajwal Revanna Case
ಕರ್ನಾಟಕ33 mins ago

Prajwal Revanna Case: ಪ್ರಜ್ವಲ್‌ ಕೇಸ್‌ಗೆ ಬಿಗ್‌ ಟ್ವಿಸ್ಟ್;‌ ರೇವಣ್ಣ ಪಿಎ ಮನೆಯಲ್ಲಿ ಸಂತ್ರಸ್ತೆಯ ರಕ್ಷಣೆ!

Hardik Pandya
ಕ್ರಿಕೆಟ್35 mins ago

IPL 2024 : ಹಾರ್ದಿಕ್​ ಪಾಂಡ್ಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಇರ್ಫಾನ್ ಪಠಾಣ್​​

karnataka weather Forecast
ಮಳೆ38 mins ago

Karnataka Weather: ಮೈಸೂರಲ್ಲಿ ಬಿರುಗಾಳಿಗೆ ಸಿಲುಕಿ ವೃದ್ಧೆ ಸಾವು; ಮತ್ತೆ ಗುಡುಗು ಸಹಿತ ಗಾಳಿ ಮಳೆಯ ಎಚ್ಚರಿಕೆ

Zameer Ahmed Khan
ಕರ್ನಾಟಕ48 mins ago

Zameer Ahmed Khan: 3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪ ಸಂಖ್ಯಾತರನ್ನು ಮುಗಿಸ್ತಾರೆ ಎಂದ ಜಮೀರ್‌ ಅಹ್ಮದ್

Mobile Side Effect
ಆರೋಗ್ಯ51 mins ago

Mobile Side Effect: ಅತಿಯಾದ ಮೊಬೈಲ್ ಬಳಕೆ; ಮಕ್ಕಳು ಕಿವುಡರಾಗುತ್ತಿದ್ದಾರೆ!

Suchitra Krishnamoorthi Reveals Her Face Swelled Like A Balloon
ಬಾಲಿವುಡ್59 mins ago

Suchitra Krishnamoorthi: ಶಾರುಖ್ ಖಾನ್ ಜತೆ ನಟಿಸಿರುವ ನಟಿಯ ಮುಖ ಬಲೂನ್‌ನಂತೆ ಊದಿಕೊಂಡಿದ್ದು ಏಕೆ?

Wedding Season Hair Fashion
ಫ್ಯಾಷನ್59 mins ago

Wedding Season Hair Fashion: ವೆಡ್ಡಿಂಗ್‌ ಸೀಸನ್‌ನಲ್ಲಿ ಎಂಟ್ರಿ ನೀಡಿದ ಆರ್ಟಿಫಿಶಿಯಲ್‌ ಹೇರ್‌ ಎಕ್ಸ್‌ಟೆನ್ಷನ್ಸ್‌!

Virat Kohli
ಕ್ರೀಡೆ1 hour ago

Virat Kohli: ಗುಜರಾತ್​ ವಿರುದ್ಧ 6 ರನ್ ಬಾರಿಸಿದರೆ ವಿಶೇಷ ದಾಖಲೆ ಬರೆಯಲಿದ್ದಾರೆ ಕಿಂಗ್​ ಕೊಹ್ಲಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ13 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ1 day ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌