ಗೋವಿನ ಕರುವಿನ ಮೇಲೂ ಕರುಣೆ ತೋರದೆ ರೇಪ್‌ ಮಾಡಿದ ಬಾಲಕ; ಹಿಂದು ಸಂಘಟನೆಗಳಿಂದ ಪ್ರತಿಭಟನೆ Vistara News

ಕ್ರೈಂ

ಗೋವಿನ ಕರುವಿನ ಮೇಲೂ ಕರುಣೆ ತೋರದೆ ರೇಪ್‌ ಮಾಡಿದ ಬಾಲಕ; ಹಿಂದು ಸಂಘಟನೆಗಳಿಂದ ಪ್ರತಿಭಟನೆ

ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಸರಿಯಾಗಿ ಮೀಸೆಯೇ ಬಾರದ ಬಾಲಕನೊಬ್ಬ ಕರುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿದ ಬಳಿಕ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.

VISTARANEWS.COM

on

Minor Boy Rapes Calf
ಸಾಂದರ್ಭಿಕ ಚಿತ್ರ.
Follow us on
Koo

ಶಿಮ್ಲಾ: ಆಧುನಿಕ ಜಗತ್ತಿನಲ್ಲಿ ಕಾಮಾಂಧತೆ ಹೆಚ್ಚುತ್ತಿದೆ. ಇನ್ನೂ 18 ತುಂಬದ ಬಾಲಕರು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಾಗುತ್ತಿರುವುದು, ಅತ್ಯಾಚಾರ ಎಸಗುವ ಮನಸ್ಥಿತಿಗೆ ಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಹಿಮಾಚಲ ಪ್ರದೇಶದಲ್ಲಿ ಬಾಲಕನೊಬ್ಬ ಹಸುವಿನ ಕರುವನ್ನೇ ರೇಪ್‌ ಮಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಬಾಲಕನು ಹಸುವಿನ ಕರುವಿನ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ಈತನ ವಿರುದ್ಧ ಕೆಲ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿವೆ. ಪ್ರತಿಭಟನೆ ಬೆನ್ನಲ್ಲೇ ಪೊಲೀಸರು ಬಾಲಕನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಬಿಜ್‌ಹಾರಿ ಪ್ರದೇಶದ ಗ್ರಾಮವೊಂದರ ಕೊಟ್ಟಿಗೆಯಲ್ಲಿ ಕಟ್ಟಿದ ಕರುವಿನ ಮೇಲೆ ಬಾಲಕ ಅತ್ಯಾಚಾರ ಮಾಡುತ್ತಿರುವುದನ್ನು ಕಂಡ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕ ಎಸಗಿದ ಕೃತ್ಯದ ಸುದ್ದಿಯು ಗ್ರಾಮ ಸೇರಿ ಇಡೀ ಬಿಜ್‌ಹಾರಿ ಪ್ರದೇಶದಾದ್ಯಂತ ಹರಡಿದೆ.

ಇದನ್ನೂ ಓದಿ: Crime News: ಚಾಕಲೇಟ್‌ ಕೊಡಿಸುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ಅತ್ಯಾಚಾರ

ಪುಟ್ಟ ಕರುವಿನ ಮೇಲೆ ಅತ್ಯಾಚಾರ ಎಸಗಿದ ಸುದ್ದಿ ತಿಳಿಯುತ್ತಲೇ ಪ್ರದೇಶದ ವ್ಯಾಪ್ತಿಯಲ್ಲಿರುವ ಹಿಂದು ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. ಆದಾಗ್ಯೂ, ಬಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಶಾಂತಿ ಕಾಪಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ, ಮಧ್ಯಪ್ರದೇಶದಲ್ಲಿ ಕಾಮಾಂಧರಿಬ್ಬರು ಮೇಕೆಯ ಮೇಲೆಯೇ ಅತ್ಯಾಚಾರ ಎಸಗಿದ್ದರು. ಮಧ್ಯಪ್ರದೇಶದ ಸೆಹೋರ್‌ ಜಿಲ್ಲೆ ಭೆರುಂಡ ಪ್ರದೇಶದಲ್ಲಿ ಇಬ್ಬರು ದುರುಳರು ಮೇಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ಮೇಕೆ ಮೇಲೆ ಗ್ಯಾಂಗ್‌ರೇಪ್‌ ಮಾಡುತ್ತಿರುವುದನ್ನು ಕಂಡ ಮೇಕೆಯ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಧಿಸಿದಂತೆ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ. ಬಂಧಿತನನ್ನು ಗೆಂಡಾಲಾಲ್‌ ಎಂದು ಗುರುತಿಸಲಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Anekal News: ಮಹಡಿ ಮೇಲಿಂದ ಬಿದ್ದು 2 ವರ್ಷದ ಮಗು ಸಾವು

Anekal News: ಬೆಂಗಳೂರು ಹೊರವಲಯದ ಆನೇಕಲ್‌ ತಾಲೂಕಿನ ಹೆಬ್ಬಗೋಡಿಯ ಶಂಕರಪ್ಪ ಬಡಾವಣೆಯಲ್ಲಿ ದುರ್ಘಟನೆ ನಡೆದಿದೆ.

VISTARANEWS.COM

on

Child dies
Koo

ಆನೇಕಲ್: ಮಹಡಿಯ ಮೇಲಿಂದ ಬಿದ್ದು ಎರಡು ವರ್ಷದ ಮಗು ಮೃತಪಟ್ಟಿರುವ ಘಟನೆ ತಾಲೂಕಿನ ಹೆಬ್ಬಗೋಡಿಯ ಶಂಕರಪ್ಪ ಬಡಾವಣೆಯಲ್ಲಿ ನಡೆದಿದೆ. ಗುಲ್ಬರ್ಗ ಮೂಲದ ಜಗದೀಶ್ ಹಾಗೂ ಪೂಜಾ ದಂಪತಿಯ ಪುತ್ರ ಮೃತಪಟ್ಟಿದ್ದಾನೆ.

ಮನೆಯ ಮೊದಲನೇ ಮಹಡಿಯಲ್ಲಿ ಆಟವಾಡುತ್ತಿದ್ದ ಮಗು, ಆಯತಪ್ಪಿ ಮಹಡಿಯ ಮೇಲಿಂದ ಕೆಳಗೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಚಿಕಿತ್ಸೆಗಾಗಿ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪುಟ್ಟ ಕಂದಮ್ಮ ಕೊನೆಯುಸಿರೆಳೆದಿದೆ. ಹೀಗಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ | Mangalore News: 70, 80 ವರ್ಷದ ಇಬ್ಬರು ವೃದ್ಧ ಸಹೋದರಿಯರು ಆತ್ಮಹತ್ಯೆಗೆ ಶರಣು

ಮನೆಯಲ್ಲಿ 15 ಲಕ್ಷ ರೂ. ಮೌಲ್ಯದ ನಗದು, ಚಿನ್ನಾಭರಣ ಕಳವು

ಆನೇಕಲ್: ಮನೆಯ ಬೀಗ ಒಡೆದು 15 ಲಕ್ಷ ಮೌಲ್ಯದ ನಗದು, ಚಿನ್ನ ಕಳವು ಮಾಡಿರುವುದು ತಾಲೂಕಿನ ಸಿಡಿ ಹೊಸಕೋಟೆಯ ಅಭಯ ಲೇಔಟ್‌ನಲ್ಲಿ ನಡೆದಿದೆ. ಕಳ್ಳತನ ನಡೆಸಿದ ಬಳಿಕ ಯಾವುದೇ ಸುಳಿವು ಸಿಗಬಾರದು ಎಂದು ಖದೀಮರು ಖಾರದ ಪುಡಿ ಚೆಲ್ಲಿ ಹೋಗಿದ್ದಾರೆ.

ಬಿಜೆಪಿ ಮುಖಂಡ ರವಿಚಂದ್ರನ್ ಮನೆಯಲ್ಲಿ ಕಳ್ಳತನ ನಡೆದಿದೆ. ಮಾಲೀಕ ಸೋಮವಾರ ಕುಟುಂಬ ಸಮೇತವಾಗಿ ಮೈಸೂರಿಗೆ ಹೋಗಿದ್ದರು. ಈ ವೇಳೆ ಇಬ್ಬರು ಖದೀಮರು ಕೈಚಳಕ ತೋರಿಸಿದ್ದಾರೆ. ಮೈಸೂರಿನಿಂದ ವಾಪಸ್ ಮನೆಗೆ ಬಂದು ನೋಡಿದಾಗ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ಪರಿಶೀಲನೆ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Sagara News: ಸಾಗರದಲ್ಲಿ ತಲ್ವಾರ್‌ ಝಳಪಿಸಿ, ಹಿಂದು ವಿರೋಧಿ ಘೋಷಣೆ; ಮೂವರ ಬಂಧನ

Continue Reading

ಕರ್ನಾಟಕ

Mangalore News: 70, 80 ವರ್ಷದ ಇಬ್ಬರು ವೃದ್ಧ ಸಹೋದರಿಯರು ಆತ್ಮಹತ್ಯೆಗೆ ಶರಣು

Mangalore News: ಮಂಗಳೂರಿನಲ್ಲಿ ಕೌಟುಂಬಿಕ ವಿಚಾರಕ್ಕೆ ಮನನೊಂದು ವೃದ್ಧ ಸಹೋದರಿಯರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

VISTARANEWS.COM

on

Latha bhandari and sundari shetty
Koo

ಮಂಗಳೂರು: ಕೌಟುಂಬಿಕ ವಿಚಾರಕ್ಕೆ ಮನನೊಂದು ವೃದ್ಧ ಸಹೋದರಿಯರಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ (Mangalore News) ಕದ್ರಿ ಕಂಬಳ ಎಂಬಲ್ಲಿ ನಡೆದಿದೆ.

ಜಗನ್ನಾಥ್ ಭಂಡಾರಿ ಎಂಬುವವರ ಪತ್ನಿ ಲತಾ ಭಂಡಾರಿ (70) ಹಾಗೂ ಆಕೆಯ ಅಕ್ಕ ಸುಂದರಿ ಶೆಟ್ಟಿ (80) ಆತ್ಮಹತ್ಯೆ ಮಾಡಿಕೊಂಡವರು. ಜಗನ್ನಾಥ ಭಂಡಾರಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಸಹೋದರಿಯರು ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರ ಜಗನ್ನಾಥ ಭಂಡಾರಿ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕದ್ರಿ ಪೊಲೀಸರು ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Attempt to murder : ಮೊಬೈಲ್ ಫ್ಲಾಶ್‌ ಮಾಡಲ್ಲ ಎಂದವನಿಗೆ ಲಾಂಗ್‌ನಿಂದ ಹೊಡೆದು ಅಟ್ಟಾಡಿಸಿದ ಕಳ್ಳಿ!

ಬಿಜಿಎಸ್‌ ಕಾಲೇಜಿನ ಉಪನ್ಯಾಸಕ ನೇಣಿಗೆ ಶರಣು; ಸಾವಿನ ಸುತ್ತ ಅನುಮಾನದ ಹುತ್ತ

BGS College lecturer Sudharshan

ಚಿಕ್ಕಬಳ್ಳಾಪುರ: ಇಲ್ಲಿನ ಅವಲಗುರ್ಕಿ ಗ್ರಾಮದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಉಪನ್ಯಾಸಕರೊಬ್ಬರು (Lecturer Death) ಮೃತಪಟ್ಟಿದ್ದಾರೆ. ಸುದರ್ಶನ್ (25) ಮೃತ ಉಪನ್ಯಾಸಕ.

ಸುದರ್ಶನ್ ಬಾಗೇಪಲ್ಲಿ ಮೂಲದ ನಿವಾಸಿ ಆಗಿದ್ದಾರೆ. ಬಿಜಿಎಸ್ ಕಾಲೇಜಿನಲ್ಲಿ ಗಣಿತ ವಿಭಾಗದ ಉಪನ್ಯಾಸಕನಾಗಿದ್ದರು. ಕಾಲೇಜು ಸಮೀಪದ ಆವಲಗುರ್ಕಿ ಗ್ರಾಮದಲ್ಲೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇದೇ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹವು ಪತ್ತೆಯಾಗಿದೆ.

ಇದನ್ನೂ ಓದಿ: Namma Metro: ಮೆಟ್ರೋ ಟ್ರ್ಯಾಕ್‌ನಲ್ಲಿ ಲಾಕ್‌ ಆದ ಮೆಂಟೈನ್ಸ್‌ ವೆಹಿಕಲ್‌! ಮೇಲೆತ್ತಲು ಕ್ರೇನ್‌ ಬಳಕೆ

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ವಿಷಕಾರಿ ಹಣ್ಣಿನ ಜ್ಯೂಸ್ ಕುಡಿದ ಮಹಿಳೆ ಸಾವು

ಮಂಗಳೂರು: ಇಲ್ಲಿನ ಸುಳ್ಯ ಬೆಳ್ಳಾರೆ ಸಮೀಪದ ಶೇಣಿ‌ ಎಂಬಲ್ಲಿ ವಿಷಕಾರಿ ಹಣ್ಣಿನ (Poison juice‌) ಜ್ಯೂಸ್ ಕುಡಿದು ಅಸ್ವಸ್ಥಗೊಂಡಿದ್ದ ಮಹಿಳೆಯೊಬ್ಬರು (Mangaluru News) ಮೃತಪಟ್ಟಿದ್ದಾರೆ. ಶೇಣಿಯ ಕುಳ್ಳಾಜೆ ನಿವಾಸಿ ಲೀಲಾವತಿ (35) ಮೃತ ದುರ್ದೈವಿ.

ಲೀಲಾವತಿ ವಾರದ ಹಿಂದೆ ಮೈರೋಲ್ ಎಂಬ ಕಾಡಿನ ಹಣ್ಣು ತಂದಿದ್ದರು. ಆದರೆ ಅದು ಮೈರೋಲ್ ಹಣ್ಣಿನಂತೇ ಹೋಲುವ ವಿಷದ ಹಣ್ಣಾಗಿತ್ತು. ಇದು ತಿಳಿಯದೆ ಆ ಹಣ್ಣಿನಲ್ಲಿ ಜ್ಯೂಸ್‌ ಮಾಡಿ ಲೀಲಾವತಿ ಹಾಗೂ ಆಕೆ ತಂದೆ ಕುಡಿದಿದ್ದರು. ಜ್ಯೂಸ್ ಕುಡಿಯುತ್ತಿದ್ದಂತೆ ಅಸ್ವಸ್ಥಗೊಂಡಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ವಾಂತಿ, ಭೇದಿಯಾಗಿ ಸುಸ್ತು, ಆಯಾಸದಿಂದ ಬಳಲುತ್ತಿದ್ದ ಲೀಲಾವತಿಯನ್ನು ಕೂಡಲೇ ಸುಳ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗುವ ವೇಳೆ ದಾರಿ ಮಧ್ಯೆ ಜೀವ ಬಿಟ್ಟಿದ್ದಾಳೆ. ಜ್ಯೂಸ್‌ ಕುಡಿದಿದ್ದ ಲೀಲಾವತಿ ತಂದೆಯವರು ಚೇತರಿಸಿಕೊಳ್ಳುತ್ತಿದ್ದಾರೆ.

Continue Reading

ಕರ್ನಾಟಕ

Sagara News: ಸಾಗರದಲ್ಲಿ ತಲ್ವಾರ್‌ ಝಳಪಿಸಿ, ಹಿಂದು ವಿರೋಧಿ ಘೋಷಣೆ; ಮೂವರ ಬಂಧನ

Sagara News: ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಸೋಮವಾರ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಅನ್ಯ ಕೋಮಿನ ಯುವಕರು ತಲ್ವಾರ್‌ ಝಳಪಿಸಿ, ಪ್ರಚೋದನಕಾರಿ ಘೋಷಣೆ ಕೂಗಿದ್ದರು.

VISTARANEWS.COM

on

Eid Milad procession
Koo

ಶಿವಮೊಗ್ಗ: ನಗರದ ರಾಗಿಗುಡ್ಡದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಗಲಭೆ, ಕಲ್ಲು ತೂರಾಟ ನಡೆದ ಬೆನ್ನಲ್ಲೇ ಜಿಲ್ಲೆಯ ಸಾಗರದಲ್ಲೂ ಹಿಂದೂ ವಿರೋಧಿ ಘೋಷಣೆ ಕೂಗಿ ಅನ್ಯ ಸಮುದಾಯದ ಕೆಲ ಯುವಕರು ತಲ್ವಾರ್‌ ಝಳಪಿಸಿರುವ ಘಟನೆ ನಡೆದಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂದು ಜಾಗರಣಾ ವೇದಿಕೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಪೊಲೀಸರು ಮೂವರನ್ನು ಬಂಧಿಸಿ, ಮೆರವಣಿಗೆಗೆ ಬಳಸಿದ್ದ ವಾಹನ ವಶಕ್ಕೆ ಪಡೆದಿದ್ದಾರೆ.

ಜಿಲ್ಲೆಯ ಸಾಗರದಲ್ಲಿ ಸೋಮವಾರ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಅನ್ಯ ಕೋಮಿನ ಯುವಕರು ತಲ್ವಾರ್‌ ಝಳಪಿಸಿ, ಪ್ರಚೋದನಕಾರಿ ಘೋಷಣೆ ಕೂಗಿದ್ದರು. ಇದಕ್ಕೆ ಹಿಂದುಪರ ಸಂಘಟನೆಗಳು ವ್ಯಾಪಕ ಆಕ್ರೋಶ ಹೊರಹಾಕಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದವು. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಮಾದರಿಯಲ್ಲಿಯೇ ಸಾಗರದಲ್ಲಿ ಬೃಹತ್‌ ತಲ್ವಾರ್‌ ಮಾದರಿಯ ದ್ವಾರ ಅಳವಡಿಸಿರುವುದು ಕಂಡುಬಂದಿದೆ.

ಸಾಗರದ ಶಿವಪ್ಪ ನಾಯಕ ವೃತ್ತದಲ್ಲಿ ಬೃಹತ್‌ ತಲ್ವಾರ್‌ ಮಾದರಿಯ ದ್ವಾರ

ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಕೆ.ಎಚ್‌.ಸುದೀಂದ್ರ ಮಾತನಾಡಿ, ಈದ್‌ ಮಿಲಾದ್‌ ಪ್ರಯುಕ್ತ ಮುಸ್ಲಿಂ ಸಮುದಾತ ಸಾಗರದಲ್ಲಿ ಸೋಮವಾರ ಮೆರವಣಿಗೆ ಹಮ್ಮಿಕೊಂಡಿತ್ತು. ಆದರೆ, ಈ ವೇಳೆ ಹಿಂದುಗಳ ತೇಜೋವಧೆ ಹಾಗೂ ಬೆದರಿಕೆ ಒಡ್ಡುವ ರೀತಿಯಲ್ಲಿ ಕೆಲವರು ವರ್ತಿಸಿರುವುದನ್ನು ನಾವು ಖಂಡಿಸುತ್ತೇವೆ. ಇಂತಹ ಕುಚೇಷ್ಟೆಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗಿ, ದ್ವೇಷ ಮೂಡಲು ಕಾರಣವಾಗುತ್ತಿದೆ. ಹಿಂದು ವಿರೋಧಿ ಘೋಷಣೆ ಕೂಗಿ ಶಾಂತಿ ಕದಡಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ | CM Siddaramaiah : ಕೋಮು ಗಲಭೆ ಮಾಡುವವರ ವಿರುದ್ಧ ಕಠಿಣ ಕ್ರಮ; ಸಿದ್ದರಾಮಯ್ಯ ಎಚ್ಚರಿಕೆ

ಎನ್‌ಕೌಂಟರ್‌ ಸುದ್ದಿ ಸುಳ್ಳು, ಮುಸ್ಲಿಮರು ಬಳಸಿದ್ದು ಆಟಿಕೆ ತಲವಾರ್‌ ಎಂದ ಎಸ್ಪಿ

ಶಿವಮೊಗ್ಗ: ಶಿವಮೊಗ್ಗದಲ್ಲಿ ಪೊಲೀಸರು ಎನ್‌ಕೌಂಟರ್‌ (Police Encounter) ಮಾಡಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು (Fake News) ಹರಡಿಸಲಾಗುತ್ತಿದೆ. ನಮ್ಮಲ್ಲಿ ಯಾವುದೇ ಎನ್‌ಕೌಂಟರ್‌ ನಡೆದಿಲ್ಲ ಎಂದು ಶಿವಮೊಗ್ಗ ಎಸ್‌ಪಿ ಮಿಥುನ್‌ ಕುಮಾರ್‌ (Shivamogga SP Mithun Kumar) ಸ್ಪಷ್ಟಪಡಿಸಿದ್ದಾರೆ. ಈ ರೀತಿಯಾದ ಸುಳ್ಳು ಸುದ್ದಿಯನ್ನು ಫಾರ್ವರ್ಡ್‌ ಮಾಡಿ ಸಮಾಜದಲ್ಲಿ ಅಶಾಂತಿ ಹರಡಿಸುವ ಪ್ರಯತ್ನ ನಡೆಸಿದ ಅಜ್ಗರ್‌ ಎಂಬಾತನನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ತಿಳಿಸಿದರು. ಇದೇ ವೇಳೆ ಮುಸ್ಲಿಮರ ಮೆರವಣಿಗೆಯಲ್ಲಿ (Muslims Procession) ಬಳಸಿದ್ದು ಆಟಿಕೆಯ ತಲವಾರ್‌ (Toy Talwar) ಎಂದು ಅವರು ಸ್ಪಷ್ಟಪಡಿಸಿದರು.

ಶಿವಮೊಗ್ಗ ಪೊಲಿಸರು ಒಬ್ಬ ಆರೋಪಿಯನ್ನು ಎನ್‌ಕೌಂಟರ್‌ ಮಾಡಿದ್ದಾರೆ ಎಂದು ಹೇಳುವ ಚಿತ್ರ, ವರದಿ, ವಿಡಿಯೊಗಳು ಬೆಳಗ್ಗಿನಿಂದ ಹರಿದಾಡುತ್ತಿದ್ದವು. ಇದು ರಾಜ್ಯ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ಸದ್ದು ಮಾಡಿತ್ತು. ಕೂಡಲೇ ಎಚ್ಚೆತ್ತುಕೊಂಡ ಶಿವಮೊಗ್ಗ ಪೊಲೀಸರು ಶಿವಮೊಗ್ಗದಲ್ಲಿ ಈ ಫೋಟೊ ಮತ್ತು ಸುದ್ದಿ ಹರಡಲು ಯಾರು ಕಾರಣ ಎಂದು ಹುಡುಕಾಡಿದರು. ಕೊನೆಗೆ ಈ ಚಿತ್ರ ಮತ್ತು ವರದಿಯನ್ನು ಫಾರ್ವರ್ಡ್‌ ಮಾಡಿದ್ದು ಅಜ್ಗರ್‌ ಎಂಬಾತ ಎಂದು ತಿಳಿದುಬಂತು. ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇಷ್ಟು ಮಾತ್ರವಲ್ಲ, ಯಾರೆಲ್ಲ ಈ ಸುಳ್ಳು ಸುದ್ದಿಯನ್ನು ಫಾರ್ವರ್ಡ್‌ ಮಾಡಿದ್ದಾರೋ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಸ್‌ಪಿ ಮಿಥುನ್‌ ಕುಮಾರ್‌ ತಿಳಿಸಿದರು. ಫಾರ್ವರ್ಡ್ ಆಗಿದ್ದ ವಿಡಿಯೋ ಡಿಲಿಟ್ ಮಾಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಯಾರೂ ವದಂತಿಗಳಿಗೆ ಕಿವಿಗೊಡಬೇಡಿ ಎಂದ ಎಸ್‌ಪಿ

ʻʻಶಿವಮೊಗ್ಗದಲ್ಲಿ ಈಗ ಪರಿಸ್ಥಿತಿ ಶಾಂತವಾಗಿದೆ. ಸಹಜ ಸ್ಥಿತಿ ಮರುಕಳಿಸಿದೆ. ರಾಗಿಗುಡ್ಡ ಘಟನೆಗೆ ಸಂಬಂಧಿಸಿದಂತೆ 24 ಕೇಸು ದಾಖಲಾಗಿದೆ. ಒಟ್ಟು 60 ಜನರನ್ನು ಬಂಧಿಸಲಾಗಿದೆ. ಎಲ್ಲೆಡೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಯಾರೂ ಕೂಡ ವದಂತಿಗೆ ಕಿವಿಗೊಡಬೇಡಿ. ಸಾರ್ವಜನಿಕರು ಸುಳ್ಳು ಸುದ್ದಿ ನಂಬಬೇಡಿʼʼ ಎಂದು ವಿನಂತಿಸಿರುವ ಎಸ್‌ಪಿ ಮಿಥುನ್‌ ಕುಮಾರ್‌ ಅವರು, ಇನ್ನೂ ಹಲವರನ್ನು ಬಂಧಿಸಲಿದ್ದೇವೆ. ಘಟನೆಗೆ ಕಾರಣರಾದ ಯಾರನ್ನೂ ಬಿಡುವ ಪ್ರಶ್ನೆ ಇಲ್ಲ. ಹೊರಗಿನಿಂದ ಬಂದವರ ತನಿಖೆ ಮಾಡುತ್ತಿದ್ದೇವೆ. ಎಲ್ಲಾ ಆಯಾಮಗಳಲ್ಲಿ ಸಾಕ್ಷಿಗಳು ನಮಗೆ ಸಿಕ್ಕಿವೆ. ಯಾರು ಕಾರಣಕರ್ತರಿದ್ದಾರೆ ಅವರ ಬಗ್ಗೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಯಾರು ತಪ್ಪಿತಸ್ಥರಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಮೆರವಣಿಗೆಯಲ್ಲಿ ಮಚ್ಚು, ಲಾಂಗು ತೋರಿಸಿದವರ ಬಗ್ಗೆ ತನಿಖೆ ನಡೆಯುತ್ತಿದೆʼʼ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Shivamogga Violence : ಶಿವಮೊಗ್ಗ ಗಲಭೆ ವೇಳೆ ಕಾಣಿಸಿಕೊಂಡ ಹೊರ ಜಿಲ್ಲೆ ಕಾರುಗಳ ರಹಸ್ಯ ಬಯಲು

ಮೆರವಣಿಗೆಯಲ್ಲಿ ಜಳಪಿಸಿದ ಕತ್ತಿ ಒರಿಜಿನಲ್‌ ಅಲ್ಲ, ಆಟಿಕೆ

ಮಚ್ಚು, ಲಾಂಗ್‌ ತೋರಿಸಿದವರ ವಿರುದ್ಧ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗುವುದು, ಮೆರವಣಿಗೆಯಲ್ಲಿ ಕತ್ತಿಗಳನ್ನು ಝಳಪಿಸಿರುವುದಕ್ಕೆ ಆಕ್ಷೇಪ ಮಾಡಲಾಗಿದೆ. ಆದರೆ, ಕೆಲವು ಕಡೆ ಆಟಿಕೆ ಕತ್ತಿಗಳನ್ನು ತರಲಾಗಿದೆ. ಇದು ಒರಿಜಿನಲ್ ಕತ್ತಿ ಅಲ್ಲ ಎಂಬುದು ತಿಳಿದು ಬಂದಿದೆ. ಆಕಸ್ಮಾತ್ ಒರಿಜಿನಲ್ ಕತ್ತಿ ಎಂದು ಕಂಡು ಬಂದರೆ, ಅಂತಹ ವಿಡಿಯೋ ನನಗೆ ಕಳಿಸಿ. ನಾನು ಪರಿಶೀಲನೆ ನಡೆಸಿ ತಿಳಿಸುತ್ತೇನೆ. ಆದರೆ, ಯಾವುದೇ ಸುಳ್ಳು ಸುದ್ದಿ ವಿಡಿಯೋಗಳನ್ನು ನಂಬಬೇಡಿ ಎಂದು ಅವರು ಹೇಳಿದರು.

ʻʻರಾಗಿಗುಡ್ಡದಲ್ಲಿ ಮೆರವಣಿಗೆ ದಿನ ಎರಡು ಮಾರುತಿ ವ್ಯಾನ್ ಬಂದಿರುವ ಬಗ್ಗೆ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಅವರು ನ್ಯಾಮತಿಯಿಂದ ಮೆರವಣಿಗೆ ನೋಡಲು ಬಂದಿದ್ದವರಾಗಿದ್ದರು. ಅವರ ಬಗ್ಗೆ ಮಾಹಿತಿ ಪಡೆಯಲಾಗಿದೆ. ಈ ವಿಚಾರದಲ್ಲಿ ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮ ಜರುಗಿಸಲಾಗುವುದುʼʼ ಎಂದು ಕೂಡಾ ಎಚ್ಚರಿಕೆ ನೀಡಿದರು.

Continue Reading

ಕರ್ನಾಟಕ

Shivamogga Violence : ಎನ್‌ಕೌಂಟರ್‌ ಸುದ್ದಿ ಸುಳ್ಳು, ಮುಸ್ಲಿಮರು ಬಳಸಿದ್ದು ಆಟಿಕೆ ತಲವಾರ್‌ ಎಂದ ಎಸ್ಪಿ

Shivamogga Violence : ಶಿವಮೊಗ್ಗದಲ್ಲಿ ಪೊಲೀಸ್‌ ಎನ್‌ಕೌಂಟರ್‌ ನಡೆದಿದೆ ಎಂದು ಸುಳ್ಳು ಸುದ್ದಿ ಹರಡಿದ ಆರೋಪಿ ಮೇಲೆ ಪೊಲೀಸರು ಎಫ್‌ಐಆರ್‌ ಹಾಕಿದ್ದಾರೆ. ಜತೆಗೆ ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಬಳಸಿದ್ದು ಒರಿಜಿನಲ್‌ ತಲವಾರು ಅಲ್ಲ ಎಂದಿದ್ದಾರೆ.

VISTARANEWS.COM

on

Shivamogga encounter Fake News
Koo

ಶಿವಮೊಗ್ಗ: ಶಿವಮೊಗ್ಗದಲ್ಲಿ ಪೊಲೀಸರು ಎನ್‌ಕೌಂಟರ್‌ (Police Encounter) ಮಾಡಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು (Fake News) ಹರಡಿಸಲಾಗುತ್ತಿದೆ. ನಮ್ಮಲ್ಲಿ ಯಾವುದೇ ಎನ್‌ಕೌಂಟರ್‌ ನಡೆದಿಲ್ಲ ಎಂದು ಶಿವಮೊಗ್ಗ ಎಸ್‌ಪಿ ಮಿಥುನ್‌ ಕುಮಾರ್‌ (Shivamogga SP Mithun Kumar) ಸ್ಪಷ್ಟಪಡಿಸಿದ್ದಾರೆ. ಈ ರೀತಿಯಾದ ಸುಳ್ಳು ಸುದ್ದಿಯನ್ನು ಫಾರ್ವರ್ಡ್‌ ಮಾಡಿ ಸಮಾಜದಲ್ಲಿ ಅಶಾಂತಿ ಹರಡಿಸುವ ಪ್ರಯತ್ನ ನಡೆಸಿದ ಅಜ್ಗರ್‌ ಎಂಬಾತನನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ತಿಳಿಸಿದರು. ಇದೇ ವೇಳೆ ಮುಸ್ಲಿಮರ ಮೆರವಣಿಗೆಯಲ್ಲಿ (Muslims Procession) ಬಳಸಿದ್ದು ಆಟಿಕೆಯ ತಲವಾರ್‌ (Toy Talwar) ಎಂದು ಅವರು ಸ್ಪಷ್ಟಪಡಿಸಿದರು.

ಶಿವಮೊಗ್ಗ ಪೊಲಿಸರು ಒಬ್ಬ ಆರೋಪಿಯನ್ನು ಎನ್‌ಕೌಂಟರ್‌ ಮಾಡಿದ್ದಾರೆ ಎಂದು ಹೇಳುವ ಚಿತ್ರ, ವರದಿ, ವಿಡಿಯೊಗಳು ಬೆಳಗ್ಗಿನಿಂದ ಹರಿದಾಡುತ್ತಿದ್ದವು. ಇದು ರಾಜ್ಯ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ಸದ್ದು ಮಾಡಿತ್ತು. ಕೂಡಲೇ ಎಚ್ಚೆತ್ತುಕೊಂಡ ಶಿವಮೊಗ್ಗ ಪೊಲೀಸರು ಶಿವಮೊಗ್ಗದಲ್ಲಿ ಈ ಫೋಟೊ ಮತ್ತು ಸುದ್ದಿ ಹರಡಲು ಯಾರು ಕಾರಣ ಎಂದು ಹುಡುಕಾಡಿದರು. ಕೊನೆಗೆ ಈ ಚಿತ್ರ ಮತ್ತು ವರದಿಯನ್ನು ಫಾರ್ವರ್ಡ್‌ ಮಾಡಿದ್ದು ಅಜ್ಗರ್‌ ಎಂಬಾತ ಎಂದು ತಿಳಿದುಬಂತು. ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇಷ್ಟು ಮಾತ್ರವಲ್ಲ, ಯಾರೆಲ್ಲ ಈ ಸುಳ್ಳು ಸುದ್ದಿಯನ್ನು ಫಾರ್ವರ್ಡ್‌ ಮಾಡಿದ್ದಾರೋ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಸ್‌ಪಿ ಮಿಥುನ್‌ ಕುಮಾರ್‌ ತಿಳಿಸಿದರು. ಫಾರ್ವರ್ಡ್ ಆಗಿದ್ದ ವಿಡಿಯೋ ಡಿಲಿಟ್ ಮಾಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಯಾರೂ ವದಂತಿಗಳಿಗೆ ಕಿವಿಗೊಡಬೇಡಿ ಎಂದ ಎಸ್‌ಪಿ

ʻʻಶಿವಮೊಗ್ಗದಲ್ಲಿ ಈಗ ಪರಿಸ್ಥಿತಿ ಶಾಂತವಾಗಿದೆ. ಸಹಜ ಸ್ಥಿತಿ ಮರುಕಳಿಸಿದೆ. ರಾಗಿಗುಡ್ಡ ಘಟನೆಗೆ ಸಂಬಂಧಿಸಿದಂತೆ 24 ಕೇಸು ದಾಖಲಾಗಿದೆ. ಒಟ್ಟು 60 ಜನರನ್ನು ಬಂಧಿಸಲಾಗಿದೆ. ಎಲ್ಲೆಡೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಯಾರೂ ಕೂಡ ವದಂತಿಗೆ ಕಿವಿಗೊಡಬೇಡಿ. ಸಾರ್ವಜನಿಕರು ಸುಳ್ಳು ಸುದ್ದಿ ನಂಬಬೇಡಿʼʼ ಎಂದು ವಿನಂತಿಸಿರುವ ಎಸ್‌ಪಿ ಮಿಥುನ್‌ ಕುಮಾರ್‌ ಅವರು, ಇನ್ನೂ ಹಲವರನ್ನು ಬಂಧಿಸಲಿದ್ದೇವೆ. ಘಟನೆಗೆ ಕಾರಣರಾದ ಯಾರನ್ನೂ ಬಿಡುವ ಪ್ರಶ್ನೆ ಇಲ್ಲ. ಹೊರಗಿನಿಂದ ಬಂದವರ ತನಿಖೆ ಮಾಡುತ್ತಿದ್ದೇವೆ. ಎಲ್ಲಾ ಆಯಾಮಗಳಲ್ಲಿ ಸಾಕ್ಷಿಗಳು ನಮಗೆ ಸಿಕ್ಕಿವೆ. ಯಾರು ಕಾರಣಕರ್ತರಿದ್ದಾರೆ ಅವರ ಬಗ್ಗೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಯಾರು ತಪ್ಪಿತಸ್ಥರಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಮೆರವಣಿಗೆಯಲ್ಲಿ ಮಚ್ಚು, ಲಾಂಗು ತೋರಿಸಿದವರ ಬಗ್ಗೆ ತನಿಖೆ ನಡೆಯುತ್ತಿದೆʼʼ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Shivamogga Violence : ಶಿವಮೊಗ್ಗ ಗಲಭೆ ವೇಳೆ ಕಾಣಿಸಿಕೊಂಡ ಹೊರ ಜಿಲ್ಲೆ ಕಾರುಗಳ ರಹಸ್ಯ ಬಯಲು

ಮೆರವಣಿಗೆಯಲ್ಲಿ ಜಳಪಿಸಿದ ಕತ್ತಿ ಒರಿಜಿನಲ್‌ ಅಲ್ಲ, ಆಟಿಕೆ

ಮಚ್ಚು, ಲಾಂಗ್‌ ತೋರಿಸಿದವರ ವಿರುದ್ಧ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗುವುದು, ಮೆರವಣಿಗೆಯಲ್ಲಿ ಕತ್ತಿಗಳನ್ನು ಝಳಪಿಸಿರುವುದಕ್ಕೆ ಆಕ್ಷೇಪ ಮಾಡಲಾಗಿದೆ. ಆದರೆ, ಕೆಲವು ಕಡೆ ಆಟಿಕೆ ಕತ್ತಿಗಳನ್ನು ತರಲಾಗಿದೆ. ಇದು ಒರಿಜಿನಲ್ ಕತ್ತಿ ಅಲ್ಲ ಎಂಬುದು ತಿಳಿದು ಬಂದಿದೆ. ಆಕಸ್ಮಾತ್ ಒರಿಜಿನಲ್ ಕತ್ತಿ ಎಂದು ಕಂಡು ಬಂದರೆ, ಅಂತಹ ವಿಡಿಯೋ ನನಗೆ ಕಳಿಸಿ. ನಾನು ಪರಿಶೀಲನೆ ನಡೆಸಿ ತಿಳಿಸುತ್ತೇನೆ. ಆದರೆ, ಯಾವುದೇ ಸುಳ್ಳು ಸುದ್ದಿ ವಿಡಿಯೋಗಳನ್ನು ನಂಬಬೇಡಿ ಎಂದು ಅವರು ಹೇಳಿದರು.

ʻʻರಾಗಿಗುಡ್ಡದಲ್ಲಿ ಮೆರವಣಿಗೆ ದಿನ ಎರಡು ಮಾರುತಿ ವ್ಯಾನ್ ಬಂದಿರುವ ಬಗ್ಗೆ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಅವರು ನ್ಯಾಮತಿಯಿಂದ ಮೆರವಣಿಗೆ ನೋಡಲು ಬಂದಿದ್ದವರಾಗಿದ್ದರು. ಅವರ ಬಗ್ಗೆ ಮಾಹಿತಿ ಪಡೆಯಲಾಗಿದೆ. ಈ ವಿಚಾರದಲ್ಲಿ ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮ ಜರುಗಿಸಲಾಗುವುದುʼʼ ಎಂದು ಕೂಡಾ ಎಚ್ಚರಿಕೆ ನೀಡಿದರು.

Continue Reading
Advertisement
Hospital
ಪ್ರಮುಖ ಸುದ್ದಿ38 mins ago

ವಿಸ್ತಾರ ಸಂಪಾದಕೀಯ: ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳಲ್ಲಿನ ಸರಣಿ ಸಾವು ಆಘಾತಕರ

dina bhavishya
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರು ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Vivek Ramaswamy offering rs 80 lakh to nanny Says media report
ಪ್ರಮುಖ ಸುದ್ದಿ7 hours ago

ಮಕ್ಕಳನ್ನು ನೋಡಿಕೊಳ್ಳುವ ಆಯಾ ಕೆಲಸಕ್ಕೆ 80 ಲಕ್ಷ ರೂ. ಸ್ಯಾಲರಿ ಆಫರ್!

MLC TA Sharavana
ಬೆಂಗಳೂರು7 hours ago

TA Sharavana: ಅನಾಮಿಕರಾಗಿದ್ದ ಜಮೀರ್‌ಗೆ ರಾಜಕೀಯ ಬದುಕು ಕೊಟ್ಟಿದ್ದೇ ಜೆಡಿಎಸ್: ಟಿ.ಎ.ಶರವಣ

Justin Trudeau
ದೇಶ7 hours ago

India Canada Row: ಥಂಡಾ ಹೊಡೆದ ಕೆನಡಾ ಪಿಎಂ! ಭಾರತದೊಂದಿಗೆ ಇನ್ನು ಜಗಳ ಮಾಡಲ್ಲ ಎಂದ ಟ್ರೂಡೋ

Netherlands cricket team
ಕ್ರಿಕೆಟ್8 hours ago

ICC World Cup 2023 : ವಿಶ್ವ ಕಪ್​ನಲ್ಲಿ ಆಡಲಿರುವ ನೆದರ್ಲ್ಯಾಂಡ್ಸ್​​ ತಂಡದ ಬಲವೇನು? ದೌರ್ಬಲ್ಯವೇನು?

Modi and KTR
ದೇಶ8 hours ago

ಎನ್‌ಡಿಎಗೆ ಸೇರಿಸಿಕೊಳ್ಳಿ ಎಂದಿದ್ದ ಕೆಸಿಆರ್; ಮೋದಿ! ಬಿಜೆಪಿ ಜತೆ ಹೋಗಲು ನಮಗೇನು ಹುಚ್ಚು ನಾಯಿ ಕಚ್ಚಿದೆಯಾ; ಕೆಟಿಆರ್

Child dies
ಕರ್ನಾಟಕ8 hours ago

Anekal News: ಮಹಡಿ ಮೇಲಿಂದ ಬಿದ್ದು 2 ವರ್ಷದ ಮಗು ಸಾವು

MB Patil visits america
ಕರ್ನಾಟಕ8 hours ago

MB Patil : ಬೆಂಗಳೂರಿನಲ್ಲಿ 800 ಕೋಟಿ ರೂ. ಹೂಡಲು ಕ್ರಿಪ್ಟನ್ ಸೊಲ್ಯೂಷನ್ಸ್ ಒಲವು: ಎಂ.ಬಿ. ಪಾಟೀಲ್

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Karnataka bandh Majestic
ಕರ್ನಾಟಕ1 week ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

kpsc recruitment 2023 pdo recruitment 2023
ಉದ್ಯೋಗ3 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ10 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

dina bhavishya
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರು ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ

The maintenance train finally lifted Metro services as usual
ಕರ್ನಾಟಕ15 hours ago

Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್‌ ವೆಹಿಕಲ್‌; ಎಂದಿನಂತೆ ಮೆಟ್ರೋ ಓಡಾಟ

BBK Season 10 KicchaSudeep
ಕಿರುತೆರೆ16 hours ago

BBK Season 10 : ಅಕ್ಟೋಬರ್‌ 8 ರಿಂದ ಬಿಗ್‌ ಬಾಸ್‌ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?

dina bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!

Actor Nagabhushana
ಕರ್ನಾಟಕ2 days ago

Actor Nagabhushana : ಡ್ರಂಕ್‌ ಆ್ಯಂಡ್‌ ಡ್ರೈವ್‌ನಲ್ಲಿ ನಟ ನಾಗಭೂಷಣ್‌ ನೆಗಟಿವ್‌; ವಿಚಾರಣೆಗೆ ಕರೆದ ಪೊಲೀಸರು

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಆಪ್ತರೊಂದಿಗೆ ಮಾಡುವ ವ್ಯಾಪಾರ ನಷ್ಟ ತಂದೀತು ಹುಷಾರ್‌!

Terrorist Attack in Turkey Suicide bomber blows himself near parliament
ಪ್ರಮುಖ ಸುದ್ದಿ2 days ago

Terrorist Attack: ಟರ್ಕಿ ಸಂಸತ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸ್ಫೋಟದ ಕ್ಷಣಗಳು!

prajwal and yashswini
ಕರ್ನಾಟಕ3 days ago

Actor Nagabhushana : ಆ್ಯಕ್ಟಿಂಗ್‌ ನೋಡಿ ಮೆಚ್ಚಿದವರ ಪಾಲಿಗೆ ಯಮನಾಗಿಬಿಟ್ಟ; ಮೃತ ಕುಟುಂಬಸ್ಥರ ಆಕ್ರೋಶ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಆಪ್ತರೊಂದಿಗೆ ಅತಿಯಾದ ಸಲುಗೆ ಈ ರಾಶಿಯವರಿಗೆ ಒಳ್ಳೆಯದಲ್ಲ!

dina bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನ ಪೂರ್ತಿ ಈ ರಾಶಿಯವರಿಗೆ ಟೆನ್ಷನ್‌ ಜತೆಗೆ ಪ್ರೆಶರ್‌

ಟ್ರೆಂಡಿಂಗ್‌