ಪ್ರಮುಖ ಸುದ್ದಿ
ವಿಸ್ತಾರ ಸಂಪಾದಕೀಯ: ರಷ್ಯಾದಲ್ಲಿ ಬಂಡಾಯ, ಪುಟಿನ್ ವಿಸ್ತರಣಾಕಾಂಕ್ಷೆಯ ದುಷ್ಪರಿಣಾಮ
ಭಾರತಕ್ಕೆ ಮೇಲ್ನೋಟಕ್ಕೆ ಈ ಬೆಳವಣಿಗೆಗಳಿಂದ ತಕ್ಷಣದ ಹಾನಿಯಿಲ್ಲವಾದರೂ, ಇದರ ಪಶ್ಚಾತ್ ಪರಿಣಾಮಗಳ ಬಗ್ಗೆ ಎಚ್ಚರ ವಹಿಸಬೇಕಿದೆ. ಪ್ರಜಾಪ್ರಭುತ್ವದ ಮೌಲ್ಯಗಳೇ ಸದಾ ಶಾಂತಿಯ ಮೂಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.
ರಾಷ್ಟ್ರದ ನಾಯಕತ್ವ ವಹಿಸಿದವರಲ್ಲಿ ವಿಸ್ತರಣಾಕಾಂಕ್ಷೆ, ಸರ್ವಾಧಿಕಾರ ಧೋರಣೆ ಸೇರಿಕೊಂಡಾಗ ಏನಾಗುತ್ತದೆ ಎಂಬುದಕ್ಕೆ ಸದ್ಯದ ರಷ್ಯದ ಸ್ಥಿತಿಯೇ ಉದಾಹರಣೆ. ಸದ್ಯ ಅಲ್ಲಿನ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೇ ಹುಟ್ಟಿಸಿ ಸಾಕಿ ಬೆಳೆಸಿದ ಬಾಡಿಗೆ ಸೈನ್ಯದ ನಾಯಕನೇ ಅವರಿಗೆ ತಿರುಗಿ ಬಿದ್ದಿದ್ದಾನೆ. ರಷ್ಯಾದ ಸೈನ್ಯಕ್ಕೂ ಬಾಡಿಗೆ ಸೈನ್ಯಕ್ಕೂ ಚಕಮಕಿ ಶುರುವಾಗಿದೆ. ಪುಟಿನ್ ಅವರ ಸರ್ವಾಧಿಕಾರಿ ಧೋರಣೆಯಿಂದ ನೊಂದಿರುವ ಹಲವರು ಬಂಡಾಯ ಸೈನ್ಯದ ಜತೆ ಹೋಗಲೂಬಹುದು. ಪರಿಣಾಮ ಏನಾಗುತ್ತದೆ ಎಂದು ಹೇಳಬರುವಂತಿಲ್ಲ. ಪುಟಿನ್ ಅವರೇ ಉಳಿದುಕೊಳ್ಳಲೂಬಹುದು; ತಲೆದಂಡವಾಗಲೂಬಹುದು. ಆದರೆ ಏನೇ ಆದರೂ ರಷ್ಯಾದ ಅಮಾಯಕ ಪ್ರಜೆಗಳಿಗಂತೂ ಕಂಟಕ ಕಟ್ಟಿಟ್ಟ ಬುತ್ತಿ.
ಪಕ್ಕದ ದೇಶ ಉಕ್ರೇನ್ ನ್ಯಾಟೋ ಸೇರಲು ಬಯಸುತ್ತಿದೆ ಎಂಬುದು ರಷ್ಯಾದಂಥ ಬಲಿಷ್ಠ ದೇಶದ ನಾಯಕನಲ್ಲಿ ಹುಟ್ಟಿಸಿದ ಆತಂಕವೇ ಉಕ್ರೇನ್‌ನ ಮೇಲೆ ರಷ್ಯಾದ ದಾಳಿಯ ಮೂಲ. ಉಕ್ರೇನ್‌ನ ಹಿಂದೆ ಅಮೆರಿಕದಂಥ ಹಿತಾಸಕ್ತಿಗಳು ಇರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲವಾದರೂ, ವ್ಲಾದಿಮಿರ್ ಪುಟಿನ್ ಅವರ ಸರ್ವಾಧಿಕಾರ ಧೋರಣೆಯ ಬಗ್ಗೆ ಮೊದಲಿನಿಂದಲೂ ಜಾಗತಿಕ ಆತಂಕವಿದೆ. ಅಲ್ಲಿ ಹೆಸರಿಗೆ ಪ್ರಜಾಪ್ರಭುತ್ವವಿದ್ದರೂ, ಚೀನಾದಂತೆಯೇ ಏಕಾಧಿಪತ್ಯವನ್ನು ಪುಟಿನ್ ಸಾಧಿಸಿಕೊಂಡಿದ್ದಾರೆ. ನ್ಯಾಟೋದಂಥ ಪವರ್ ಕೇಂದ್ರಗಳು ತಮ್ಮ ಅಸ್ತಿತ್ವಕ್ಕೆ ಅಪಾಯ ಉಂಟುಮಾಡಬಹುದು ಎಂಬ ಅಸ್ಥಿರತೆಯಿಂದ ಪುಟಿನ್ ಉಕ್ರೇನ್ ಮೇಲೆ ದಾಳಿ ಶುರುಮಾಡಿದರು. ಅಧಿಕಾರ ಉಳಿಸಿಕೊಳ್ಳಲು ನಡೆಸಿದ ಈ ಅನಗತ್ಯ ದಾಳಿಯಿಂದಾಗಿ ಎರಡೂ ಕಡೆ ಅಪಾರ ನಷ್ಟವಾಯಿತು. ಸಾವಿರಾರು ಮಂದಿಯ ಸಾವುನೋವುಗಳಾದವು. ಚಿಂದಿಯಾಗಿರುವ ಉಕ್ರೇನ್ ಅನ್ನು ಮತ್ತೆ ಕಟ್ಟಲು ದಶಕಗಳೇ ಬೇಕು. ಯುದ್ಧದಿಂದ ಛಿದ್ರಗೊಂಡಿರುವ ದೇಶಗಳು ಮರಳಿ ಸುಧಾರಿಸಿಕೊಳ್ಳುವುದು ಮರೀಚಿಕೆ ಎಂಬುದನ್ನು ಅಫಘಾನಿಸ್ತಾನ, ಸಿರಿಯಾ, ಇರಾಕ್, ರುವಾಂಡ ಇತ್ಯಾದಿ ದೇಶಗಳು ಸಾಬೀತುಪಡಿಸಿವೆ. ರಷ್ಯಾದಲ್ಲಿ ಕೂಡ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಣದುಬ್ಬರದಿಂದ ಜನತೆ ತತ್ತರಿಸುತ್ತಿದ್ದಾರೆ.
ಈ ಯುದ್ಧದಿಂದ ಜಾಗತಿಕವಾಗಿಯೂ ಕೆಟ್ಟ ಪರಿಣಾಮವಾಗಿದೆ. ಜಾಗತಿಕ ಆರ್ಥಿಕತೆ ಮೇಲೆ ಇದು ದುಷ್ಪರಿಣಾಮ ಬೀರಿತು. ಯುದ್ಧವೊಂದು ಕಡೆ ಶುರುವಾದರೆ ತೈಲ ದೇಶಗಳು ತೈಲ ಮಾರಾಟದಲ್ಲಿ ರಾಜಕೀಯ ಶುರು ಮಾಡುತ್ತವೆ. ಸ್ವತಃ ರಷ್ಯಾ ಕೂಡ ತೈಲ ಮಾರಾಟ ರಾಷ್ಟ್ರ. ಆದರೆ ಇತರ ದೇಶಗಳ ಜತೆಗಿನ ಅದರ ರಫ್ತು- ಆಮದು ಕೆಟ್ಟುಹೋಯಿತು. ರಷ್ಯಾದ ಜೊತೆಗೆ ರಕ್ಷಣಾ- ವ್ಯಾಪಾರ ಸಂಬಂಧ ಹೊಂದಿದ್ದ ದೇಶಗಳ ಸ್ಥಿತಿ ಹದಗೆಟ್ಟಿತು. ಇದೆಲ್ಲವೂ ಯುದ್ಧದ ಅನಿವಾರ್ಯ ಪರಿಣಾಮಗಳು. ಒಂದು ದೇಶ ಎಲ್ಲ ನಿಯಮಗಳನ್ನು ಮರೆತು ವರ್ತಿಸತೊಡಗಿದರೆ, ಉಳಿದ ಬಲಿಷ್ಠ ದೇಶಗಳಿಗೂ ಹಾಗೆಯೇ ವರ್ತಿಸಲು ಆಹ್ವಾನ ಕೊಟ್ಟಂತಾಗುತ್ತದೆ. ಜಾಗತಿಕ ಶಾಂತಿಯನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ.
ಇದನ್ನೂ ಓದಿ: Turmoil In Russia: ಮಾಸ್ಕೋದತ್ತ ವ್ಯಾಗ್ನರ್ ಸೇನೆ ಲಗ್ಗೆ, ರಷ್ಯಾದಿಂದಲೇ ವ್ಲಾಡಿಮಿರ್ ಪುಟಿನ್ ಪಲಾಯನ
ಇದೀಗ ರಷ್ಯಾದಲ್ಲೇ ಅಂತರ್ಯುದ್ಧ ಶುರುವಾಗಿದೆ. ಇದೂ ಕೂಡ ಯುದ್ಧದ ಅನಿವಾರ್ಯ ಪರಿಣಾಮವೇ ಆಗಿದೆ. ಪುಟಿನ್ ಈಗ ತಾವೇ ಸಾಕಿದ ಬಾಡಿಗೆ ಕೊಲೆಗಡುಕರ ಕೈಯಲ್ಲಿ ಸಿಕ್ಕಿಬೀಳುವಂತಾಗಿದೆ. ತಾನೇ ಸಾಕಿದ ಹದ್ದು ತನ್ನ ಕೈಯನ್ನೇ ಕುಕ್ಕಿದಂತಾಗಿದೆ. ವ್ಯಾಗ್ನರ್ ಗ್ರೂಪ್ ಎಂಬ ಬಾಡಿಗೆ ಸೈನಿಕರ ಪಡೆ ರಷ್ಯಕ್ಕೆ ನಿದ್ರೆಯಿಲ್ಲದ ರಾತ್ರಿಗಳನ್ನು ಕರುಣಿಸುವುದು ನಿಶ್ಚಿತ. ವಿಷಸರ್ಪಗಳನ್ನು ಸಾಕಿದವನು ಕುಟುಕಿಸಿಕೊಳ್ಳಲು ಸಿದ್ಧನಾಗಿರಬೇಕಾಗುತ್ತದೆ. ಸರ್ವಾಧಿಕಾರ, ಸೈನ್ಯದ ಕೈಯಲ್ಲಿ ಹೆಚ್ಚಿನ ಅಧಿಕಾರ ನಿಕ್ಷೇಪ, ಎಲ್ಲರ ಮೇಲೂ ಬೇಹುಗಾರಿಕೆ, ವಿಪಕ್ಷಗಳ ನಾಯಕರನ್ನು ಸಾಯಿಸಲು ಯತ್ನ ಮುಂತಾದ ಆರೋಪಗಳು ಪುಟಿನ್ ಮೇಲಿವೆ. ಪ್ರಜಾಪ್ರಭುತ್ವೀಯ ಮೌಲ್ಯಗಳ ದಾರಿಯಲ್ಲಿ ನಡೆದಿದ್ದರೆ ಇಂಥ ಸ್ಥಿತಿ ಒದಗುತ್ತಿರಲಿಲ್ಲ. ಭಾರತಕ್ಕೆ ಮೇಲ್ನೋಟಕ್ಕೆ ಈ ಬೆಳವಣಿಗೆಗಳಿಂದ ತಕ್ಷಣದ ಹಾನಿಯಿಲ್ಲವಾದರೂ, ಇದರ ಪಶ್ಚಾತ್ ಪರಿಣಾಮಗಳ ಬಗ್ಗೆ ಎಚ್ಚರ ವಹಿಸಬೇಕಿದೆ. ಪ್ರಜಾಪ್ರಭುತ್ವದ ಮೌಲ್ಯಗಳೇ ಸದಾ ಶಾಂತಿಯ ಮೂಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಕರ್ನಾಟಕ
Karnataka Bandh : ಸೆ. 29ರ ಕರ್ನಾಟಕ ಬಂದ್‌ಗೆ ವಾಟಾಳ್ ಟೀಮ್ ರೆಡಿ; ಹಲವು ಸಂಘಟನೆ ಬಲ, ಏನಿರುತ್ತೆ? ಏನಿರಲ್ಲ?
Karnataka Bandh: ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ಹಲವು ಸಂಘಟನೆಗಳು ಬೆಂಬಲ ಘೋಷಿಸಿವೆ, ಕೆಲವು ಬೆಂಬಲ ಕೊಡುವುದಿಲ್ಲ ಎಂದಿವೆ. ಹಾಗಿದ್ದರೆ ಏನಿರುತ್ತದೆ ಬಂದ್? ಇಲ್ಲಿದೆ ವಿವರ
ಬೆಂಗಳೂರು: ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ನೀಡಿದ ಬೆಂಗಳೂರು ಬಂದ್ (Bangalore Bandh) ಯಶಸ್ಸಿನ ಬೆನ್ನಿಗೇ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದ ಕನ್ನಡ ಒಕ್ಕೂಟ ಕರೆ ನೀಡಿದ ಸೆಪ್ಟೆಂಬರ್ 29ರ ಕರ್ನಾಟಕ ಬಂದ್‌ಗೆ (Karnataka Bandh) ಭರದ ಸಿದ್ಧತೆಗಳು ನಡೆಯುತ್ತಿದೆ. ಸಂಘಟಕರು ನಾನಾ ಸಂಘಟನೆಗಳ ಬೆಂಬಲವನ್ನು ಕೋರುತ್ತಿದ್ದಾರೆ. ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಆದರೆ, ಕೆಲವು ಸಂಘಟನೆಗಳು ಒಂದೇ ವಾರದಲ್ಲಿ ನಡೆಯುತ್ತಿರುವ ಎರಡನೇ ಬಂದ್ ಬೆಂಬಲ ನೀಡಲು ಹಿಂದೇಟು ಹಾಕುತ್ತಿವೆ. ಈ ನಡುವೆ ಒಂದು ವೇಳೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇನಾದರೂ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿದರೆ ಈಗಲೇ ಬಂದ್ ಕರೆಯನ್ನು ಹಿಂದೆ ಪಡೆಯಲು ಸಿದ್ಧ ಎಂದು ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.
ಬಿಜೆಪಿ, ಜೆಡಿಎಸ್ ಪಕ್ಷಗಳ ಬೆಂಬಲ
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಬಂದ್‌ಗೆ ಸಾಥ್ ನೀಡುವುದಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಘೋಷಣೆ ಮಾಡಿವೆ. ಕಾವೇರಿ ವಿಚಾರಕ್ಕಾಗಿ ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂದೆ ಬುಧವಾರ ಜಂಟಿ ಪ್ರತಿಭಟನೆ ನಡೆಸಿದ ಪಕ್ಷಗಳು ಕರ್ನಾಟಕ ಬಂದ್‌ಗೆ ಬೆಂಬಲ ಘೋಷಿಸಿದವು.
ವಾಟಾಳ್ ನಾಗರಾಜ್ ಅವರು ಬುಧವಾರ ಫಿಲಂ ಚೇಂಬರ್ ಜೊತೆ ಸಭೆ ನಡೆಸಿದರು. ಚಿತ್ರರಂಗ ಸಂಪೂರ್ಣವಾಗಿ ಬೆಂಬಲ ನೀಡುವುದಾಗಿ ಚೇಂಬರ್ ಪ್ರಕಟಿಸಿತು.
ಹಾಗಿದ್ದರೆ ಕರ್ನಾಟಕ ಬಂದ್‌ಗೆ ಯಾರ್ಯಾರ ಬೆಂಬಲ ಇದೆ?
-ಓಲಾ,ಊಬರ್ ಯೂನಿಯನ್
-ಆದರ್ಶ ಆಟೋ ಚಾಲಕರ ಸಂಘ
-ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ
-ಕರ್ನಾಟಕ ರಾಜ್ಯ ಕಾರ್ಮಿಕರ ಜಾಗೃತಿ ವೇದಿಕೆ
-ಕರುನಾಡ ರೈತ ಸಂಘ
-ಕರವೇ ಶಿವರಾಮೇಗೌಡ ಬಣ
-ಕರವೇ ಪ್ರವೀಣ್ ಶೆಟ್ಟಿ ಬಣ
-ಲಾರಿ ಮಾಲೀಕರ ಸಂಘ
-ಕೈಗಾರಿಕೆಗಳ ಒಕ್ಕೂಟ
-ಪೀಣ್ಯ ಕೈಗಾರಿಕಾ ಸಂಘ
-ಹೋಟೆಲ್ ಮಾಲೀಕರ ಸಂಘ
ಯಾರ್ಯಾರ ಬೆಂಬಲ ಇಲ್ಲ?
-ಕರ್ನಾಟಕ ಚಾಲಕರ ಸಂಘ
-ಪೀಸ್ ಆಟೋ ಯೂನಿಯನ್
-ಕಬ್ಬು ಬೆಳೆಗಾರರ ಸಂಘ
50:50: ಇವರು ಇನ್ನೂ ತೀರ್ಮಾನ ಮಾಡಿಲ್ಲ?
-ಖಾಸಗಿ ಶಾಲಾ ಸಂಘಟನೆಗಳು
-ಏರ್ ಪೋರ್ಟ್ ಟ್ಯಾಕ್ಸಿ
–ಖಾಸಗಿ ಸಾರಿಗೆ ಸಂಘಟನೆ
ರಾಜ್ಯದಲ್ಲಿ ಬಂದ್ ದಿನ ಏನೆಲ್ಲ ಇರುತ್ತೆ. ಏನಿರುವುದಿಲ್ಲ?
ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ಸುಮಾರು 1 ಸಾವಿರಕ್ಕೂ ಹೆಚ್ಚು ಸಂಘಟನೆಗಳು ಸಾಥ್ ನೀಡಲಿವೆ ಎಂದು ಹೇಳಲಾಗಿದ್ದು, ರಾಜ್ಯ-ರಾಜ್ಯ ರಾಜಧಾನಿಯಲ್ಲಿ ಕೆಲ ಸೇವೆಗಳು ವ್ಯತ್ಯಯವಾಗಲಿವೆ
ಹಾಗಿದ್ದರೆ ಏನೆಲ್ಲ ಸೇವೆ ಇರುತ್ತದೆ?: -ಆಸ್ಪತ್ರೆ, ಮೆಡಿಕಲ್, ಆಂಬುಲೆನ್ಸ್, ಬೆಂಬಲ ನೀಡದ ಒಕ್ಕೂಟದ ಆಟೋ, ಟ್ಯಾಕ್ಸಿ
ಏನೆಲ್ಲ ಸೇವೆಗಳು ಇರುವುದಿಲ್ಲ?: ಹೋಟೆಲ್, ಸಿನಿಮಾ ಹಾಲ್, ಮಾಲ್, ಆಟೋ, ಕ್ಯಾಬ್, ಬೇಕರಿ, ಓಲಾ, ಊಬರ್
ಕುರುಬೂರು ಶಾಂತ ಕುಮಾರ್ ಟೀಮ್ ಬೆಂಬಲ ಇರುತ್ತಾ?
ಬೆಂಗಳೂರು ಬಂದ್ ಸಕ್ಸಸ್ ಖುಷಿಯಲ್ಲಿರೋ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಕುರುಬೂರು ಶಾಂತಕುಮಾರ್ ಮತ್ತು ಟೀಮ್ ಕರ್ನಾಟಕ ಬಂದ್‌ಗೆ ಬೆಂಬಲ ನೀಡಬೇಕಾ, ಬೇಡ್ವಾ ಅನ್ನೋದನ್ನ ಸಿಎಂ ಭೇಟಿ ಬಳಿಕ ನಿರ್ಧರಿಸುವುದಾಗಿ ತಿಳಿಸಿದೆ. ಸರ್ಕಾರದ ನಡೆ ನೋಡಿ ಮುಂದಿನ ತೀರ್ಮಾನ ಅನ್ನೋ ಮೂಲಕ ಸದ್ಯಕ್ಕೆ ಬೆಂಬಲ ಇಲ್ಲ ಅನ್ನೋ ಸುಳಿವು ನೀಡಿದೆ. ಬೆಂಗಳೂರು ಬಂದ್‌ಗೆ ವಾಟಾಳ್ ನಾಗರಾಜ್ ಟೀಮ್ ಬೆಂಬಲ ಕೊಟ್ಟಿರಲಿಲ್ಲ.
ಅಂದು ಏನೇನು ಘಟನಾವಳಿ ನಡೆಯಲಿದೆ?
ಯಾವ ಕಾರಣಕ್ಕೂ ಸೆಪ್ಟೆಂಬರ್ 29ರ ಬಂದ್ ವೇಳೆ ಸೆಕ್ಷನ್ 144 ಜಾರಿ ಮೂಲಕ ಪ್ರತಿಭಟನೆ ಹತ್ತಿಕ್ಕಬಾರದು ಎಂದು ಆಗ್ರಹಿಸಿರುವ ವಾಟಾಳ್ ನಾಗರಾಜ್ ಅವರು ಶುಕ್ರವಾರ ಬೆಂಗಳೂರಿನ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರ‍್ಯಾಲಿ ನಡೆಸಲು ಪ್ಲ್ಯಾನ್ ಮಾಡಿದ್ದಾರೆ. ರಾಜ್ಯದ ವಿವಿಧೆಡೆ ಟೋಲ್, ಏರ್ ಪೋರ್ಟ್ ಬಂದ್ ಮಾಡುವುದಕ್ಕೂ ಕರೆ ನೀಡಿದ್ದಾರೆ.
ಸಿಎಂ ಮನೆಗೆ ಮುತ್ತಿಗೆ ಯತ್ನ, ವಾಟಾಳ್ ನಾಗರಾಜ್ ವಶಕ್ಕೆ
ಈ ನಡುವೆ ವಾಟಾಳ್ ನಾಗರಾಜ್ ಮತ್ತು ಇತರ ಕನ್ನಡ ಪರ ಹೋರಾಟಗಾರರು ಮುಖ್ಯಮಂತ್ರಿಗಳ ನಿವಾಸಕ್ಕೆ ದಾಳಿ ಮಾಡಲು ಮುಂದಾದರು. ಅವರನ್ನು ತಡೆದು ವಶಕ್ಕೆ ಪಡೆಯಲಾಯಿತು. ಮುತ್ತಿಗೆಯನ್ನು ವಿಫಲಗೊಳಿಸಲಾಯಿತು.
ಕರ್ನಾಟಕ
Rowdism in Ramanagara : ರೋಡಲ್ಲೇ ರೌಡಿಸಂ; ಚುನಾವಣಾಧಿಕಾರಿಗಳ ಮೇಲೆ ಕಾರು ಹಾಯಿಸಿ ಬ್ಯಾಲೆಟ್ ಪೇಪರ್ ಲೂಟಿ
Rowdism in Ramanagara : ರಾಮನಗರದ ಒಂದು ಹಾಲು ಉತ್ಪಾದಕರ ಸಂಘಕ್ಕೆ ಚುನಾವಣೆ ನಡೆಸಬಾರದು ಎಂದು ಆಗ್ರಹಿಸಿದ ರೌಡಿಗಳ ಗ್ಯಾಂಗ್ ಚುನಾವಣಾ ಅಧಿಕಾರಿಗಳ ಮೇಲೆಯೇ ದಾಳಿ ನಡೆಸಿ ಬ್ಯಾಲೆಟ್ ಪೇಪರ್ ಎತ್ತಿಕೊಂಡು ಹೋಗಿದೆ. ಆರೋಪಿಗಳನ್ನು ಗುರುತಿಸಲಾಗಿದೆ.
ಬೆಂಗಳೂರು: ಹಾಲು ಉತ್ಪಾದಕರ ಸಂಘದ (Milk Producers Union) ನಿರ್ದೇಶಕರ ಆಯ್ಕೆಗಾಗಿ (Election of directors) ಬಂದ ಚುನಾವಣಾಧಿಕಾರಿಗಳ ಮೇಲೆ ಕಾರು ಹಾಯಿಸಿ (Attack on Election officers) ಅವರ ಕೈಯಲ್ಲಿದ್ದ ಬ್ಯಾಲೆಟ್ ಪ್ಯಾಪರ್ (Ballet Paper), ಲ್ಯಾಪ್‌ಟಾಪ್, ಮೊಬೈಲ್ ಮತ್ತು ಇತರ ಸಾಮಗ್ರಿ ದರೋಡೆ ಮಾಡಿದ ಭಯಾನಕ ಘಟನೆಯೊಂದು ರಾಮನಗರ ಜಿಲ್ಲೆಯ (Ramanagara News) ಮಾಗಡಿ ತಾಲೂಕಿನ ಹೊಸಪಾಳ್ಯ ಬಳಿ ನಡೆದಿದೆ.
ಇಲ್ಲಿನ ಹುಳ್ಳೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ನಿರ್ದೇಶಕ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯುವುದಿತ್ತು. ಚುನಾವಣಾಧಿಕಾರಿ ಉಮೇಶ್ ಮತ್ತು ಉಷಾ ಅವರು ಹಾಲು ಉತ್ಪಾದಕರ ಸಂಘದತ್ತ ಹೋಗುವಾಗ ಅವರ ಮೇಲೆ ದಾಳಿ ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಬಲರಾಮ್ ಹಾಗೂ ಸಹಚರರು ಈ ಕೃತ್ಯ ಮಾಡಿದ್ದು ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಾಗಡಿ-ಕುಣಿಗಲ್ ರಸ್ತೆಯಲ್ಲಿ ಈ ದಾಳಿ ನಡೆದಿದೆ.
ಹಾಡುಹಗಲೇ ಭಯಾನಕ ಕೃತ್ಯ
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹುಳ್ಳೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಾಲು ಉತ್ಪಾದಕರ ಸಂಘದ ಚುನಾವಣೆಗೆ ಎಲ್ಲವೂ ಸಿದ್ಧತೆ ನಡೆದಿತ್ತು. ಆದರೆ, ಪಂಚಾಯಿತಿ ಅಧ್ಯಕ್ಷ ಬಲರಾಮ್ ಮತ್ತು ಇತರ ಚುನಾವಣೆ ನಡೆಸಬಾರದು ಎಂದು ಪಟ್ಟು ಹಿಡಿದಿದ್ದರು. ಆದರೆ, ದಿನಾಂಕ ನಿಗದಿಯಾಗಿ ಎಲ್ಲ ವ್ಯವಸ್ಥೆಗಳೂ ನಡೆದಿದ್ದವು.
ಉಮೇಶ್ ಮತ್ತು ಉಷಾ ಎಂಬ ಇಬ್ಬರು ಚುನಾವಣಾ ಅಧಿಕಾರಿಗಳಾಗಿ ನಿಯುಕ್ತರಾಗಿದ್ದರು. ಬುಧವಾರ ಅವರು ಕಾರಿನಲ್ಲಿ ಹಾಲು ಉತ್ಪಾದಕರ ಸಂಘದತ್ತ ಸಾಗುತ್ತಿದ್ದಂತೆಯೇ ಪುಂಡರ ತಂಡವೊಂದು ಅವರ ಕಾರನ್ನು ಅಡ್ಡಗಟ್ಟಿತ್ತು. ಮಾರಕಾಸ್ತ್ರಗಳನ್ನು ತೋರಿಸಿ ಕಾರಿನಿಂದ ಇಳಿಸಿತು.
ಚುನಾವಣಾಧಿಕಾರಿಗಳ ಕಾರನ್ನು ಅಡ್ಡಗಟ್ಟಿ ಅವರನ್ನು ಕೆಳಗೆ ಇಳಿಸಿದ ದುಷ್ಟರು ಕಾರಿನಲ್ಲಿದ್ದ ಬ್ಯಾಲೆಟ್ ಪೇಪರ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಕಿತ್ತುಕೊಂಡಿತು. ಉಮೇಶ್ ಅವರು ತಮ್ಮ ಕೈಯಿಂದ ಕಿತ್ತುಕೊಂಡ ಪೇಪರ್‌ಗಳನ್ನು ಕಸಿದುಕೊಳ್ಳಲು ಅವರನ್ನು ಬೆನ್ನಟ್ಟಿದರು. ಆದರೆ ದುಷ್ಕರ್ಮಿಗಳು ತಾವು ಬಂದಿದ್ದ ಸ್ಯಾಂಟ್ರೋ ಕಾರಿನಲ್ಲಿ ಕುಳಿತು ಪರಾರಿಯಾದರು. ಈ ಹಂತದಲ್ಲಿ ಕೆಲವರು ಕಾರನ್ನು ನಿಲ್ಲಿಸಲು ಯತ್ನಿಸಿದರು. ಆದರೆ, ದುಷ್ಕರ್ಮಿಗಳು ಅವರನ್ನು ತಳ್ಳಿ ಮುಂದಕ್ಕೆ ಸಾಗಿದರು. ಈ ಹಂತದಲ್ಲಿ ಕಾರಿನ ಮುಂಭಾಗದಲ್ಲಿದ್ದ ಉಷಾ ಅವರ ಮೇಲೆಯೇ ಕಾರು ನುಗ್ಗಿತ್ತು. ಕಾರು ಡಿಕ್ಕಿಯಾಗಿ ಮುಗ್ಗರಿಸಿ ಬಿದ್ದ ಅವರು ರಸ್ತೆಗೆ ಉರುಳಿದರು.
ಮಾಜಿ ಅಧ್ಯಕ್ಷ ಬಲರಾಮ್ ಮತ್ತು ಟೀಮ್, ಕಾರಿಗಾಗಿ ಶೋಧ
ಇದು ಮಾಜಿ ಅಧ್ಯಕ್ಷ ಬಲರಾಂ ಮತ್ತು ಅವನ ಸಹಚರರ ಕೃತ್ಯ ಎಂದು ಪೊಲೀಸರಿಗೆ ತಿಳಿದುಬಂದಿದೆ. ಸ್ಥಳೀಯರು ಕೂಡಾ ಇದನ್ನು ದೃಢೀಕರಿಸಿದ್ದಾರೆ.
ಹುಲ್ಲೇನಹಳ್ಳಿ ನಾಲ್ಕು ವ್ಯಕ್ತಿಗಳಿಂದ ಕೃತ್ಯ ನಡೆಸಿದೆ. ಗ್ರಾಪಂ ಮಾಜಿ ಅಧ್ಯಕ್ಷ ಬಲರಾಮ ಬಳಗದಲ್ಲಿ ಗುರುತಿಸಿಕೊಂಡಿದ್ದ ಹೇಮಂತ್, ಸೀನು, ದಾಸೇಗೌಡ, ಮತ್ತೊಬ್ಬನಿಂದ ಈ ಕೃತ್ಯ ನಡೆದಿದೆ ಎಂದು ಎಸ್‌ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ. ಆರೋಪಿಗಳು ಮತ್ತು ಸ್ಯಾಂಟ್ರೋ ಕಾರು ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.
ಮಾಜಿ ಶಾಸಕ ಮಂಜು ಕುಮ್ಮಕ್ಕು ಆರೋಪ
ಈ ನಡುವೆ, ದರೋಡೆಗೆ ಜೆಡಿಎಸ್ ಮಾಜಿ ಶಾಸಕ ಎ ಮಂಜು ಕುಮ್ಮಕ್ಕು ನೀಡಿದ್ದಾರೆ. ಮಾಜಿ ಅಧ್ಯಕ್ಷ ಬಲರಾಮ್ ತನ್ನ ಸಹಚರರ ಮೂಲಕ ಈ ಕೃತ್ಯ ನಡೆಸಿದ್ದಾನೆ ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಪ್ರವೀಣ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
23 ವರ್ಷದ ಬಳಿಕ ಚುನಾವಣೆ ನಡೆಯುತ್ತಿತ್ತು!
ಹುಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಾಕಾರ ಸಂಘದ ನಿರ್ದೇಶಕರ ಚುನಾವಣೆ 23 ವರ್ಷಗಳ ಬಳಿಕ ನಡೆಯುತ್ತಿದೆ. ಇಲ್ಲಿ ಚುನಾವಣೆ ನಡೆಯಬೇಕು ಎನ್ನುವುದು ಬಹು ವರ್ಷಗಳ ಬೇಡಿಕೆಯಾಗಿತ್ತು. ಆದರೆ, ಹುಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಲರಾಮ್ ಹಾಗೂ ಬೆಂಬಲಿಗರ ತಂಡವು ಹಾಲು ಉತ್ಪಾದಕರ ಸಂಘದ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಈ ಕೃತ್ಯವನ್ನು ಎಸಗಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ
MP Muniswamy : ಸಚಿವ ಬೈರತಿ, ಶಾಸಕ ನಾರಾಯಣಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟ ಸಂಸದ ಮುನಿಸ್ವಾಮಿ
MP Muniswamy : ಎರಡು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ತಮ್ಮ ಮೇಲೆ ಅಸಾಂವಿಧಾನಿಕವಾಗಿ ನಡೆದುಕೊಂಡಿದ್ದಲ್ಲದೆ, ಹಲ್ಲೆಗೆ ಮುಂದಾಗಲಾಗಿದೆ ಎಂದು ಕೋಲಾರ ಸಂಸದ ಮುನಿಸ್ವಾಮಿ ಅವರು ಕೋಲಾರ ಶಾಸಕ ನಾರಾಯಣಸ್ವಾಮಿ, ಉಸ್ತುವಾರಿ ಸಚಿವ ಬೈರತಿ ಸುರೇಶ್, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಬೆಂಗಳೂರು: ಕೋಲಾರ ಶಾಸಕ ನಾರಾಯಣಸ್ವಾಮಿ (Kolar MLA Narayanaswamy) ಈಚೆಗೆ ಕಾರ್ಯಕ್ರಮವೊಂದರಲ್ಲಿ ತಮ್ಮ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆಗೆ ಮುಂದಾಗಿದ್ದಾರೆ. ಜತೆಗೆ ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್ (Kolar Incharge Minister Byrathi Suresh), ಕೋಲಾರ ಎಸ್‌ಪಿ ಅಸಾಂವಿಧಾನಿಕವಾಗಿ ನಡೆದುಕೊಂಡಿದ್ದಾರೆ ಎಂದು ಕೋಲಾರ ಸಂಸದ ಮುನಿಸ್ವಾಮಿ (Kolar MP Muniswamy) ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಕೋಲಾರ ಸಂಸದ ಮುನಿಸ್ವಾಮಿ ಮೇಲೆ ಹಲ್ಲೆ ಆರೋಪ ಪ್ರಕರಣ ಈಗ ರಾಜ್ಯಪಾಲರ ಅಂಗಳ ತಲುಪಿದೆ. ಉಸ್ತುವಾರಿ ಸಚಿವ ಬೈರತಿ ಸುರೇಶ್, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧವೂ ಸಂಸದ ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ (MLC Chalavadi Narayanaswamy), ಕೇಶವ್ ಪ್ರಸಾದ್ ಸೇರಿದಂತೆ 30 ಮಂದಿ ನಿಯೋಗ ತೆರಳಿ ದೂರು ನೀಡಿದೆ.
ಜನಪ್ರತಿನಿಧಿ ಮೇಲೆ ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ. ಹಾಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ.
ನನ್ನನ್ನೂ ಸೇರಿದಂತೆ, ಎಲ್ಲರ ವಿರುದ್ಧ ತನಿಖೆ ಆಗಲಿ: ಕೋಲಾರ ಸಂಸದ ಮುನಿಸ್ವಾಮಿ
ಸಂವಿಧಾನದಲ್ಲಿ ಆಡಳಿತ ಪಕ್ಷಕ್ಕೆ ಎಷ್ಟು ಅಧಿಕಾರ ಇದೆಯೋ, ವಿಪಕ್ಷಗಳಿಗೂ ಅಷ್ಟೇ ಹಕ್ಕು ಇದೆ. ಇಡೀ ಕೋಲಾರ ಜಿಲ್ಲೆಯಲ್ಲಿ ಇರುವ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಅಂತ ಹೇಳಿದ್ದರು. ರೈತರ ಜಮೀನನ್ನು ಕಬಳಿಸುವ ಕೆಲಸ ಮಾಡಿದ್ದಾರೆ. ರೈತರ ವಿರುದ್ಧ ಒಕ್ಕಲೆಬ್ಬಿಸುವ ಕೆಲಸವನ್ನು ಮಾಡಿದ್ದೀರಿ. ರಾಜಕೀಯ ವೇದಿಕೆ ಮೇಲೂ ಭೂ ಕಳ್ಳರಿದ್ದಾರೆ ಎಂದು ನಾನು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ಕೋಲಾರ ಸಂಸದ ಮುನಿಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ನನ್ನನ್ನು ಹೊರಗೆ ದಬ್ಬಿಸುವ ಕೆಲಸ ಮಾಡಿದ್ದಾರೆ
ಎಸ್‌ಎನ್ ಸಿಟಿ ಅಂತ ಲೇಔಟ್ ಮಾಡಿದ್ದಾರೆ. ನನ್ನನ್ನೂ ಸೇರಿದಂತೆ, ಎಲ್ಲರ ವಿರುದ್ಧ ತನಿಖೆ ಆಗಲಿ ಅಂತ ಹೇಳಿದೆ. ಆಗ ಕೋಲಾರ ಶಾಸಕ ನಾರಾಯಣಸ್ವಾಮಿ ಹಾಗೂ ಉಸ್ತುವಾರಿ ಸಚಿವರು ನನ್ನನ್ನು ಹೊರಗೆ ದಬ್ಬಿಸುವ ಕೆಲಸ ಮಾಡಿದರು. ಹಾಗಾಗಿ ಉಸ್ತುವಾರಿ ಸಚಿವ ಬೈರತಿ ಸುರೇಶ್, ಶಾಸಕ ನಾರಾಯಣಸ್ವಾಮಿ ಹಾಗೂ ಕೋಲಾರ ಎಸ್‌ಪಿ ವಿರುದ್ಧ ದೂರು ನೀಡಿದ್ದೇನೆ ಎಂದು ಸಂಸದ ಮುನಿಸ್ವಾಮಿ ಹೇಳಿದರು.
ಇದನ್ನೂ ಓದಿ: BJP JDS alliance : ಸೆಕ್ಯುಲರಿಸಂ ಅನ್ನು ನಾಶ ಮಾಡಿದ್ದೇ ಕಾಂಗ್ರೆಸ್: ಎಚ್.ಡಿ. ಕುಮಾರಸ್ವಾಮಿ ಕಿಡಿ
ರೈತರ ಪರವಾಗಿ ಹೋರಾಟ ಮುಂದುವರಿಯಲಿದೆ
ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡುವಂತೆ ಮನವಿ ಮಾಡಲಿದ್ದೇವೆ. ದೆಹಲಿಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರಿಗೂ ದೂರು ನೀಡುತ್ತೇನೆ. ಎಷ್ಟೇ ಗದಾ ಪ್ರಹಾರ ಮಾಡಿದರೂ ನಮ್ಮ ರೈತರ ಪರವಾಗಿ ನನ್ನ ಹೋರಾಟ ನಡೆಯಲಿದೆ ಎಂದು ಸಂಸದ ಮುನಿಸ್ವಾಮಿ ಇದೇ ವೇಳೆ ಹೇಳಿದರು.
South Cinema
Oscars 2024: ‘ಆಸ್ಕರ್’ಗೆ ಪ್ರವೇಶ ಪಡೆದ ಮಲಯಾಳಂ ಸಿನಿಮಾ; ನೀವೂ ಇದನ್ನು ನೋಡಿರುತ್ತೀರಿ!
Oscars 2024: ನಿರ್ದೇಶಕ ಗಿರೀಶ್ ಕಾಸರವಳ್ಳಿ ನೇತೃತ್ವದ 17 ಸದಸ್ಯರ ತೀರ್ಪುಗಾರರನ್ನು ಒಳಗೊಂಡಿರುವ ಆಯ್ಕೆ ಸಮಿತಿಗೆ ಭಾರತದಾದ್ಯಂತ ತೆರೆಕಂಡ 22 ಸಿನಿಮಾಗಳು ಅಧಿಕೃತ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿತ್ತು.
ಬೆಂಗಳೂರು: ಟೊವಿನೋ ಥಾಮಸ್ ನಟಿಸಿರುವ 2018 ಮಲಯಾಳಂ ಸಿನಿಮಾ (Malayalam Film 2018) 2024ರ 96ನೇ ಆಸ್ಕರ್ ಅವಾರ್ಡ್ಸ್‌ಗೆ (Oscars 2024:) ಭಾರತದಿಂದ ಅಧಿಕೃತವಾಗಿ ಪ್ರವೇಶ ಪಡೆದಿದೆ. ಕನ್ನಡ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ನೇತೃತ್ವದ ತೀರ್ಪುಗಾರರು ಸೆ.27ರಂದು ಅನೌನ್ಸ್ ಮಾಡಿದ್ದಾರೆ. ನಿರ್ದೇಶಕ ಗಿರೀಶ್ ಕಾಸರವಳ್ಳಿ ನೇತೃತ್ವದ 17 ಸದಸ್ಯರ ತೀರ್ಪುಗಾರರನ್ನು ಒಳಗೊಂಡಿರುವ ಆಯ್ಕೆ ಸಮಿತಿಗೆ ಭಾರತದಾದ್ಯಂತ ತೆರೆಕಂಡ 22 ಸಿನಿಮಾಗಳು ಅಧಿಕೃತ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದವು.
96ನೇ ಆಸ್ಕರ್ ಅವಾರ್ಡ್ ಎಬಿಸಿಯಲ್ಲಿ 2024ರ ಮಾರ್ಚ್ 10ರ ಭಾನುವಾರ ಓವೇಶನ್ ಹಾಲಿವುಡ್‌ನಲ್ಲಿರುವ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಿಂದ ವಿಶ್ವಾದ್ಯಂತ 200 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪ್ರಸಾರವಾಗಲಿದೆ ಎಂದು ವರದಿಯಾಗಿದೆ.
ಇದರಲ್ಲಿ “ಬಾಲಗಮ್”, “ದಿ ಕೇರಳ ಸ್ಟೋರಿ”, “ಜ್ವಿಗಾಟೊ” “ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿ”ಅನಂತ್ ಮಹದೇವನ್ ಅವರ ಸ್ಟೋರಿ ಟೇಲರ್ (ಹಿಂದಿ), ಮ್ಯೂಸಿಕ್ ಸ್ಕೂಲ್ (ಹಿಂದಿ), ಮಿಸಸ್ ಚಟರ್ಜಿ ವರ್ಸಸ್ ನಾರ್ವೆ (ಹಿಂದಿ), 12th ಫೇಲ್ (ಹಿಂದಿ) ವಿದುತಲೈ ಭಾಗ 1 (ತಮಿಳು), ಘೂಮರ್ (ಹಿಂದಿ), ಮತ್ತು ದಸರಾ (ತೆಲುಗು) ಸಿನಿಮಾಗಳು ಆಸ್ಕರ್‌ನ ಅಧಿಕೃತ ಪ್ರವೇಶ ಪಡೆಯವ ಸ್ಥಾನದಲ್ಲಿದ್ದವು. ಅಂತಿಮವಾಗಿ ಜೂಡ್ ಆಂಥೊನಿ ಜೋಸೆಫ್ ನಿರ್ದೇಶನದ ಈ ಸಿನಿಮಾ ಆಸ್ಕರ್ ಸ್ಪರ್ಧೆಗೆ ಅಧಿಕೃತವಾಗಿ ಆಯ್ಕೆಯಾಗಿದೆ.
ಇದನ್ನೂ ಓದಿ: Oscars 2024: ಮುಂದಿನ ʻಆಸ್ಕರ್ʼ ರೇಸ್‌ನಲ್ಲಿ ಯಾವೆಲ್ಲ ಸಿನಿಮಾಗಳು ಇರಲಿವೆ?
Tovino Thomas' 2018 movie is India's official entry for #Oscars2024 pic.twitter.com/e2bFwOrg1d
— Veerni Srinivasa Rao (@veernisrinivas) September 27, 2023
ಜೂಡ್ ಆಂಥೊನಿ ಜೋಸೆಫ್ ನಿರ್ದೇಶನದ ನೈಜ ಘಟನೆ ಆಧಾರಿತ ಮಲಯಾಳಂ `2018′ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾದಾಗ ಮಾನವೀಯತೆ ಗೆದ್ದಿತ್ತು. ಈ ಧೈರ್ಯಶಾಲಿ ನೈಜ ಕಥೆಯು ಕೇರಳ ಚಲನಚಿತ್ರೋದ್ಯಮದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿತ್ತು.
ಟೊವಿನೋ ಥಾಮಸ್ ಜತೆ ಆಸಿಫ್ ಅಲಿ, ಅಪರ್ಣಾ ಬಾಲಮುರಳಿ, ವಿನೀತ್ ಶ್ರೀನಿವಾಸನ್, ಕಲೈಯರಸನ್, ಸುದೇಶ್, ಅಜು ವರ್ಗೀಸ್, ತನ್ವಿ ರಾಮ್, ಗೌತಮಿ ನಾಯರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
2018 ಸಿನಿಮಾ ಕಥೆ ಏನು?
‘2018’ ಸಿನಿಮಾ 2018ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹವನ್ನು ಆಧರಿಸಿ ಮಾಡಿದ ಸಿನಿಮಾ ಇದಾಗಿದೆ. ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟದ ಘಟನೆಗಳು ಇವೆ. ಅತೀ ಕಷ್ಟದ ಸಮಯದಲ್ಲೂ ಕೇರಳದ ಪ್ರತಿಯೊಬ್ಬರು ಹೇಗೆ ನಡೆದುಕೊಂಡರು ಎಂಬ ವಿವರ ಈ ಸಿನಿಮಾದಲ್ಲಿ. ‘ಪ್ರತಿಯೊಬ್ಬರೂ ಹೀರೊ’ ಎಂಬ ಟ್ಯಾಗ್ಲೈನ್ ಗಮನ ಸೆಳೆದಿತ್ತು. 2018ರ ಪ್ರವಾಹದಲ್ಲಿ ಕೇರಳದ 400ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಅನೇಕರು ನಾಪತ್ತೆಯಾದರು. 1924ರ ಬಳಿಕ ಕೇರಳದಲ್ಲಿ ಉಂಟಾಗಿದ್ದ ಅತಿ ಭೀಕರ ಪ್ರವಾಹ ಅದಾಗಿತ್ತು.
-
ದೇಶ15 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ23 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ16 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ16 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್22 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ23 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್19 hours ago
Ruturaj Gaikwad : ಚೀನಾಗೆ ಹೊರಡುವ ಮೊದಲು ಪುಣೆಯ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಋತುರಾಜ್