3 ವರ್ಷದ ಬಾಲೆಯ ಮೇಲೆ ಸ್ಕೂಲ್​ ಬಸ್​​ನಲ್ಲಿ ಅತ್ಯಾಚಾರ; ಅಂಗಿ ಬದಲಿಸಿ ಕಳಿಸಿದ್ದ ಕ್ರೂರ ಚಾಲಕ - Vistara News

ಕ್ರೈಂ

3 ವರ್ಷದ ಬಾಲೆಯ ಮೇಲೆ ಸ್ಕೂಲ್​ ಬಸ್​​ನಲ್ಲಿ ಅತ್ಯಾಚಾರ; ಅಂಗಿ ಬದಲಿಸಿ ಕಳಿಸಿದ್ದ ಕ್ರೂರ ಚಾಲಕ

ಪುಟ್ಟ ಹುಡುಗಿ ಮನೆಗೆ ಬಂದು ತನ್ನ ಖಾಸಗಿ ಭಾಗದಲ್ಲಿ ನೋವು ಎಂದಿದ್ದಳು. ಆದರೆ ಏನೋ ಸಣ್ಣ ಕಾರಣ ಇರಬಹುದು ಎಂದು ಪಾಲಕರು ಅಷ್ಟೊಂದು ಗಮನ ಕೊಟ್ಟಿರಲಿಲ್ಲ.

VISTARANEWS.COM


on

nursery school student raped in School Bus in Bhopal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭೋಪಾಲ್​: ಮೂರು ವರ್ಷದ ಬಾಲಕಿಯ ಮೇಲೆ ಬಸ್​​ನಲ್ಲಿಯೇ ಅತ್ಯಾಚಾರ ನಡೆದಿದೆ. ಆಕೆಯನ್ನು ಪ್ರತಿದಿನ ನರ್ಸರಿಗೆ ಕರೆದೊಯ್ದು, ಅಲ್ಲಿಂದ ಮನೆಗೆ ಕರೆದುಕೊಂಡು ಬಂದು ಬಿಡುವ ಚಾಲಕನೇ ಈ ದುಷ್ಕೃತ್ಯ ನಡೆಸಿದ್ದು, ಸದ್ಯ ಆತ ಬಂಧಿತನಾಗಿದ್ದಾನೆ. ಅವನೊಂದಿಗೆ ಬಸ್​​ ಅಟೆಂಡೆಂಟ್​ ಕೂಡ ಅರೆಸ್ಟ್​ ಆಗಿದ್ದಾಳೆ. ಸೆಪ್ಟೆಂಬರ್​ 8ರಂದು ಮಧ್ಯಪ್ರದೇಶದ ಭೋಪಾಲ್​ನಲ್ಲಿ ಘಟನೆ ನಡೆದಿದೆ. ಆ ಕ್ರೂರ ಚಾಲಕ ಬಸ್​​​ನಲ್ಲಿದ್ದ ಮಹಿಳಾ ಅಟೆಂಡೆಂಟ್​ ಎದುರೇ ಮೂರು ವರ್ಷದ ಹುಡುಗಿಯ ಮೇಲೇ ರೇಪ್​ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆ.8ರಂದು ಎಂದಿನಂತೆ ನರ್ಸರಿಯಿಂದ ಎಲ್ಲರೊಂದಿಗೆ ಈ ಪುಟ್ಟ ಬಾಲಕಿಯೂ ಬಸ್​​ನಲ್ಲಿ ಮನೆಗೆ ಹೊರಟಿದ್ದಳು. ಎಲ್ಲ ಮಕ್ಕಳನ್ನೂ ಬಿಟ್ಟ ನಂತರ ಕೊನೇದಾಗಿ ಡ್ರೈವರ್​ ಈಕೆಯನ್ನು ಮನೆಗೆ ಬಿಡಲಿದ್ದ. ಆದರೆ ಮಾರ್ಗಮಧ್ಯೆ ಹುಡುಗಿಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಅಷ್ಟಲ್ಲದೆ, ಆಕೆಯ ನರ್ಸರಿ ಯೂನಿಫಾರ್ಮ್​ ಬಿಚ್ಚಿ, ಅವಳ ಬ್ಯಾಗ್​​ನಲ್ಲಿದ್ದ ಮತ್ತೊಂದು ಡ್ರೆಸ್​​ ಹಾಕಿದ್ದಾನೆ. ನರ್ಸರಿ ಮಕ್ಕಳಿಗೆ ಮನೆಯಿಂದ ಶಾಲೆಗೆ ಹೊರಡುವಾಗ ಯೂನಿಫಾರ್ಮ್​ ಹಾಕುವ ಜತೆಗೆ, ಪಾಲಕರು ಅವರ ಬ್ಯಾಗ್​​ನಲ್ಲಿ ಇನ್ನೊಂದು ಉಡುಪನ್ನು ಇಟ್ಟು ಕಳಿಸುವುದು ಕಡ್ಡಾಯವಾಗಿದೆ. ಹೀಗೆ ಹುಡುಗಿಯ ಅಮ್ಮ ಇಟ್ಟು ಕಳಿಸಿದ್ದ ಇನ್ನೊಂದು ಡ್ರೆಸ್​ ಹಾಕಿಸಿ, ಮನೆಗೆ ಬಿಟ್ಟಿದ್ದಾನೆ.

ಮಗಳು ಮನೆಗೆ ಬರುತ್ತಿದ್ದಂತೆ ತಾಯಿ ‘ಯೂನಿಫಾರ್ಮ್​ ಎಲ್ಲಿ? ಯಾಕೆ ಈ ಅಂಗಿ ತೊಟ್ಟೆ?’ ಎಂದು ಪ್ರಶ್ನಿಸಿದ್ದಾರೆ. ಆಗ ಅವಳು ‘ಬಸ್​​ನಲ್ಲಿ ಡ್ರೈವರ್​ ತೊಡಿಸಿದ್ದಾರೆ’ ಎಂದಿದ್ದಾಳೆ. ಅದಾದ ಬಳಿಕ ಹುಡುಗಿಯ ಪಾಲಕರು ಶಾಲೆಯ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದಾರೆ. ‘ನನ್ನ ಮಗಳ ಮುಖ, ದೇಹವನ್ನೆಲ್ಲ ಆ ಚಾಲಕ ಮುಟ್ಟಿದ್ದಾನೆ. ನಮ್ಮ ಮಗಳು ತನ್ನ ಖಾಸಗಿ ಭಾಗದಲ್ಲಿ ನೋವು ಎಂದು ಹೇಳುತ್ತಿದ್ದಳು, ನಾವು ಅದನ್ನು ಗಂಭೀರವಾಗಿ ಪರಿಗಣಿಸದೆ ತಪ್ಪು ಮಾಡಿದೆವು’ ಎಂದೂ ಪಾಲಕರು ಹೇಳಿದ್ದಾರೆ. ಅದಾದ ಮೇಲೆ ಪೊಲೀಸರಿಗೂ ದೂರು ನೀಡಲಾಗಿದೆ.

ಆರೋಪಿಗಳಾದ ಹನುಮಂತ್ ಜಾತವ್​ (31), ಬಸ್​ ಅಟೆಂಡೆಂಟ್​ ಊರ್ಮಿಳಾ ಸಾಹು (28) ಬಂಧಿತರಾಗಿದ್ದು, ಪೋಕ್ಸೋ ಕಾಯ್ದೆ ಮತ್ತು ಐಪಿಸಿ ಸೆಕ್ಷನ್​ 376ರಡಿ ಕೇಸ್​ ದಾಖಲಾಗಿದೆ. ಬಸ್​​ನಲ್ಲಿ ಸಿಸಿಟಿವಿ ಕ್ಯಾಮರಾಗಳು ಇವೆ. ಆದರೆ ಅದರ ಫೂಟೇಜ್​ಗಳನ್ನು ಮೂರು ದಿನಕ್ಕೊಮ್ಮೆ ಡಿಲೀಟ್ ಮಾಡಲಾಗುತ್ತದೆ ಎಂದು ನಮಗೆ ಶಾಲಾ ಆಡಳಿತ ತಿಳಿಸಿದೆ ಎಂದು ಭೋಪಾಲ್​ ಪೊಲೀಸ್ ಆಯುಕ್ತ ಮಕ್ರಂಡ್ ದಿಯೋಸ್ಕರ್ ತಿಳಿಸಿದ್ದಾರೆ. ಹಾಗೇ, ‘ಈ ಕೇಸ್​ಗೆ ಸಂಬಂಧಪಟ್ಟು ತನಿಖೆ ನಡೆಸಲು ಎಲ್ಲ ರೀತಿಯ ಸಹಕಾರವನ್ನೂ ನಾವು ನೀಡುತ್ತೇವೆ ಎಂದು ಶಾಲೆಯ ಪ್ರಿನ್ಸಿಪಾಲ್​ ಹೇಳಿದ್ದಾರೆ.

ಇದನ್ನೂ ಓದಿ: Verdict | 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದವನಿಗೆ 7 ವರ್ಷ ಜೈಲು; ಸಂತ್ರಸ್ತೆಗೆ 1.15 ಲಕ್ಷ ಪರಿಹಾರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Valmiki Corporation Scam: ನಾಗೇಂದ್ರ ಕಸ್ಟಡಿ ಅಂತ್ಯ, ಇಂದು ಕೋರ್ಟ್‌ಗೆ ಹಾಜರು; ಪತ್ನಿಯೂ ಇಡಿ ವಶದಲ್ಲಿ

Valmiki Corporation Scam:
ನಾಗೇಂದ್ರರವರ ಇಬ್ಬರು ಪಿಎಗಳು, ನಾಗೇಂದ್ರರ ಪತ್ನಿ ಎಲ್ಲರ ಹೇಳಿಕೆಯನ್ನು ಪಡೆದಿರುವ ಇಡಿ, ಇನ್ನಷ್ಟು ವಿಚಾರಗಳನ್ನು ಹೊರತೆಗೆಯುವ ಅಗತ್ಯದಲ್ಲಿ ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಹೆಚ್ಚಿದೆ. ಅಕೌಂಟ್ಸ್ ವ್ಯವಹಾರ, ಹಣ ಎಲ್ಲೆಲ್ಲಿ ವ್ಯವಹಾರವಾಗಿದೆ, ಇನ್ನೂ ಯಾರು ಯಾರು ಇದ್ದಾರೆ ಹೀಗೆ ಅನೇಕ ಮಾಹಿತಿಗಳು ಇಡಿಗೆ ಬೇಕಾಗಿವೆ.

VISTARANEWS.COM


on

b nagendra valmiki corporation scam
Koo

ಬೆಂಗಳೂರು: ವಾಲ್ಮಿಕಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ (Valmiki Corporation Scam) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (Enforcement Directorate) ಧಿತರಾಗಿರುವ ಮಾಜಿ ಸಚಿವ ಬಿ. ನಾಗೇಂದ್ರ (Ex minister B Nagendra) ಕಸ್ಟಡಿ ಇಂದು ಅಂತ್ಯವಾಗುತ್ತಿದ್ದು, ಅವರನ್ನು ಮತ್ತೆ ಕೋರ್ಟ್ ಮುಂದೆ ಇಡಿ ಹಾಜರ್ (ED Raid) ಪಡಿಸಲಿದೆ. ತನಿಖೆ ಇನ್ನಷ್ಟು ನಡೆಯಬೇಕಿರುವುದರಿಂದ ಮತ್ತೆ ಕಸ್ಟಡಿಗೆ ಕೇಳಲಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಇಂದು ಮಧ್ಯಾಹ್ನ 2 ಗಂಟೆಗೆ ನಾಗೇಂದ್ರ ಅವರನ್ನು ಇಡಿ ಹಾಜರು ಪಡಿಸಲಿದೆ. ಮತ್ತೆ ಮೂರರಿಂದ ನಾಲ್ಕು ದಿನಗಳ ಕಾಲ ಕಸ್ಟಡಿಗೆ‌ ಕೇಳುವ ಸಾಧ್ಯತೆ ಇದೆ. ನಾಗೇಂದ್ರರವರ ಇಬ್ಬರು ಪಿಎಗಳು, ನಾಗೇಂದ್ರರ ಪತ್ನಿ ಎಲ್ಲರ ಹೇಳಿಕೆಯನ್ನು ಪಡೆದಿರುವ ಇಡಿ, ಇನ್ನಷ್ಟು ವಿಚಾರಗಳನ್ನು ಹೊರತೆಗೆಯುವ ಅಗತ್ಯದಲ್ಲಿ ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಹೆಚ್ಚಿದೆ. ಅಕೌಂಟ್ಸ್ ವ್ಯವಹಾರ, ಹಣ ಎಲ್ಲೆಲ್ಲಿ ವ್ಯವಹಾರವಾಗಿದೆ, ಇನ್ನೂ ಯಾರು ಯಾರು ಇದ್ದಾರೆ ಹೀಗೆ ಅನೇಕ ಮಾಹಿತಿಗಳು ಇಡಿಗೆ ಬೇಕಾಗಿವೆ.

ನಿನ್ನೆ ನಾಗೇಂದ್ರ ಅವರ ಪತ್ನಿ ಮಂಜುಳಾ ಅವರನ್ನು ವಶಕ್ಕೆ ತೆಗೆದುಕೊಂಡು ಇಡಿ ವಿಚಾರಣೆ ಮಾಡಿತ್ತು. ಅಧಿಕಾರಿಗಳು 7ರಿಂದ 8 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ಮಾಡಿದ್ದರು. ಸಾಕಷ್ಟು ವಿಚಾರಗಳನ್ನು ಹೊರ ತೆಗೆದಿದ್ದಾರೆ. ಪತಿ ಪತ್ನಿಯನ್ನು ಮುಖಾಮುಖಿ ಕೂರಿಸಿ ಪ್ರಶ್ನೆ ಮಾಡಲಾಗಿದೆ. ಮಂಜುಳಾ ಅವರ ಹೆಸರಲ್ಲಿ ಹಣದ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಅವ್ಯವಹಾರ ನಡೆದ ಸಮಯದಲ್ಲಿ ಮಂಜುಳಾ ಅವರ ಬ್ಯಾಂಕ್ ಖಾತೆಗಳಿಗೂ ಹಣ ಬಂದಿರುವ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ಇದರ ಮೂಲವನ್ನು ಪ್ರಶ್ನಿಸಲಿದ್ದಾರೆ.

ಜುಲೈ 13ರಂದು ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಳಿಕ ಯಲಹಂಕದಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು 5 ದಿನಗಳ ಕಾಲ ಕಸ್ಟಡಿಗೆ ನೀಡಿದ್ದರು. 18ನೇ ತಾರೀಖಿನಂದು ಬೆಳಿಗ್ಗೆ 11ಕ್ಕೆ ಮತ್ತೆ ಹಾಜರುಪಡಿಸುವಂತೆ ಸೂಚನೆ ನೀಡಿದ್ದರು.

ಅವರ ಮನೆ ಸೇರಿ 23 ಕಡೆಗಳಲ್ಲಿ ಇಡಿ ಏಕಕಾಲಕ್ಕೆ ದಾಳಿ ಮಾಡಿತ್ತು. 6 ದಿನಗಳ ಕಾಲದ ಇಡಿ ವಿಚಾರಣೆ ವಿಚಾರಣೆಯಲ್ಲಿ ನಾಗೇಂದ್ರ ಸಮರ್ಪಕವಾಗಿ ಉತ್ತರ ನೀಡಿಲ್ಲ. ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿರುವ ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್‌ ಕೂಡ ಪ್ರಕರಣದಲ್ಲಿ ವಿಚಾರಣೆಗಾಗಿ ಇಡಿಗೆ ಬೇಕಾಗಿದ್ದಾರೆ. ಈಗಾಗಲೇ ಬಂದಿತ ಆರೋಪಿಗಳನ್ನು ಪ್ರಶ್ನಿಸಿದಾಗ ದದ್ದಲ್‌ ಪಿಎಯ ಕೈವಾಡ ಕೂಡ ಇದರಲ್ಲಿ ಕಂಡುಬಂದಿದೆ.

ಆದರೆ ಮನೆಗೆ ಇಡಿ ದಾಳಿಯ ಬಳಿಕ ಇಡಿ ಬಂಧನ ತಪ್ಪಿಸಿಕೊಳ್ಳಲು ದದ್ದಲ್‌ ಎಸ್‌ಐಟಿ ಮುಂದೆ ಹಾಜರಾಗ ಇಡೀ ದಿನ ಕೂತಿದ್ದರು. ನಂತರ ಅಲ್ಲಿಂದ ಹೊರಬಿದ್ದು ಮೂರು ದಿವಸ ಕಣ್ಮರೆಯಾಗಿದ್ದ ದದ್ದಲ್‌, ನಾಲ್ಕನೇ ದಿವಸ ವಿಧಾನಮಂಡಲ ಅಧಿವೇಶನ ಶುರುವಾದಾಗ ವಿಧಾನಸಭೆಯಲ್ಲಿ ಕಾಣಿಸಿಕೊಂಡಿದ್ದರು. ವಿಚಾರಣೆಗೆ ಬರುವಂತೆ ದದ್ದಲ್‌ ಅವರಿಗೆ ಇಡಿ ನೋಟೀಸ್‌ ನೀಡಿದೆ ಎನ್ನಲಾಗಿದೆ. ಆದರೆ ನನಗೆ ಯಾವುದೇ ನೋಟೀಸ್‌ ಬಂದಿಲ್ಲ ಎಂದಿದ್ದಾರೆ ದದ್ದಲ್.‌ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವಾಗ ಸ್ಪೀಕರ್‌ ಅನುಮತಿ ಇಲ್ಲದೆ ಶಾಸಕರನ್ನು ಇಡಿ ಬಂಧಿಸುವಂತಿಲ್ಲ.

ಇದನ್ನೂ ಓದಿ: Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಮಾಜಿ ಸಚಿವ ನಾಗೇಂದ್ರ ಪತ್ನಿಯನ್ನು ವಶಕ್ಕೆ ಪಡೆದ ಇಡಿ

Continue Reading

Latest

Passenger Arrest: ವಿಮಾನದಲ್ಲಿ ಗಗನಸಖಿ ನೀಡಿದ ನೀರು, ಆಹಾರ ಸೇವಿಸದ ಪ್ರಯಾಣಿಕನ ಬಂಧನ! ಕಾರಣ ಕುತೂಹಲಕರ!

Passenger Arrest: ಜೆಡ್ಡಾದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಪ್ರಯಾಣಿಕನೊಬ್ಬನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಏರ್ ಹೋಸ್ಟೆಸ್ ಪ್ರಯಾಣಿಕರಿಗೆ ನೀರು, ಚಹಾ ಮತ್ತು ಆಹಾರ ಸೇರಿದಂತೆ ಉಪಾಹಾರವನ್ನು ನೀಡುತ್ತಿದ್ದಾಗ ಆರೋಪಿ ಐದೂವರೆ ಗಂಟೆಗಳ ಪ್ರಯಾಣದ ಅವಧಿಯಲ್ಲಿ ಅವೆಲ್ಲವನ್ನೂ ನಿರಾಕರಿಸಿದ್ದಾನೆ. ಆತ ಆಹಾರವನ್ನು ನಿರಂತರವಾಗಿ ನಿರಾಕರಿಸಿದ್ದರಿಂದ ಶಂಕೆಗೊಂಡ ಏರ್ ಹೋಸ್ಟೆಸ್ ಕ್ಯಾಪ್ಟನ್‌ಗೆ ಮಾಹಿತಿ ನೀಡಿದಳು. ವಿಮಾನ ಇಳಿದಾದ ಬಳಿಕ ಅಧಿಕಾರಿಗಳು ಆತನನ್ನು ವಿಚಾರಿಸಿದಾಗ ಅಕ್ರಮ ಚಿನ್ನ ಕಳ್ಳ ಸಾಗಾಣಿಗೆ ಬೆಳಕಿಗೆ ಬಂತು.

VISTARANEWS.COM


on

Passenger Arrest
Koo

ನವದೆಹಲಿ: ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ಕಳ್ಳಸಾಗಾಣಿಕೆ ಪ್ರಕರಣ ಕೂಡ ಹೆಚ್ಚಾಗುತ್ತಿದೆ. ಜನರು ಅನೇಕ ರೀತಿಯಲ್ಲಿ ನಾನಾ ರೀತಿಯಲ್ಲಿ ಚಿನ್ನವನ್ನು ಕಳ್ಳಸಾಗಾಣಿಕೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಇದೀಗ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಅಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ಜೆಡ್ಡಾದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಎಐ 992ರಲ್ಲಿ ಗುದದ್ವಾರದಲ್ಲಿ ಚಿನ್ನವಿಟ್ಟುಕೊಂಡು ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು (Passenger Arrest) ಅಧಿಕಾರಿಗಳು ಬಂಧಿಸಿದ್ದಾರೆ.

ಏರ್ ಹೋಸ್ಟೆಸ್ ಪ್ರಯಾಣಿಕರಿಗೆ ನೀರು, ಚಹಾ ಮತ್ತು ಆಹಾರ ಸೇರಿದಂತೆ ಉಪಾಹಾರವನ್ನು ನೀಡುತ್ತಿದ್ದಾಗ ಆರೋಪಿ ಐದೂವರೆ ಗಂಟೆಗಳ ಪ್ರಯಾಣದ ಅವಧಿಯಲ್ಲಿ ಅವೆಲ್ಲವನ್ನು ನಿರಾಕರಿಸಿದ್ದಾನೆ. ಆತ ಆಹಾರವನ್ನು ನಿರಂತರವಾಗಿ ನಿರಾಕರಿಸಿದ್ದರಿಂದ ಅನುಮಾನಗೊಂಡ ಏರ್ ಹೋಸ್ಟೆಸ್ ಕ್ಯಾಪ್ಟನ್‍ಗೆ ಮಾಹಿತಿ ನೀಡಿದಳು. ಅವರು ಏರ್ ಟ್ರಾಫಿಕ್ ಕಂಟ್ರೋಲ್ ಮೂಲಕ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಿದರು. ವಿಮಾನದಿಂದ ಇಳಿದ ನಂತರ ಆರೋಪಿಯ ಮೇಲೆ ಕಣ್ಗಾವಲು ಇಡಲಾಗಿತ್ತು.

ಕಸ್ಟಮ್ಸ್ ಕ್ಲಿಯರೆನ್ಸ್ ಮೂಲಕ ಹೊರಗೆ ಹೋಗಲು ಪ್ರಯತ್ನಿಸುತ್ತಿದ್ದಂತೆ ಅಧಿಕಾರಿಗಳು ಅವನನ್ನು ತಡೆದರು. ನಂತರ ಆತನನ್ನು ವಿಚಾರಿಸಿದಾಗ ಪ್ರಯಾಣಿಕನು ತನ್ನ ಗುದದ್ವಾರದಲ್ಲಿ ಚಿನ್ನದ ಪೇಸ್ಟ್ ಅನ್ನು ಅಡಗಿಸಿಟ್ಟಿದ್ದಾನೆ ಎಂಬುದು ಅಧಿಕಾರಿಗಳಿಗೆ ತಿಳಿದುಬಂದಿದೆ, ಅದನ್ನು ಅವನು ನಾಲ್ಕು ಅಂಡಾಕಾರದ ಕ್ಯಾಫ್ಸುಲ್‍ಗಳ ರೂಪದಲ್ಲಿ ಹೊರಗೆ ತೆಗೆದಿದ್ದಾನೆ ಎನ್ನಲಾಗಿದೆ. ಆ ಮೂಲಕ ಸುಮಾರು 69,16,169 ರೂ ಮೌಲ್ಯದ ಸುಮಾರು 1096.76 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಜೆಡ್ಡಾದಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿರುವುದಾಗಿ ಪ್ರಯಾಣಿಕ ಒಪ್ಪಿಕೊಂಡಿದ್ದು, ಕಸ್ಟಮ್ಸ್ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಧಿಕಾರಿಗಳು ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ತನ್ನ ಫಾಲೋವರ್ಸ್‌ಗಳನ್ನೇ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದ ಖ್ಯಾತ ಮಾಡೆಲ್‌ಗೆ ಜೈಲು ಶಿಕ್ಷೆ!

ವಿಮಾನ ಪ್ರಯಾಣದ ವೇಳೆ ಪ್ರಯಾಣಿಕರಿಗೆ ಏರ್ ಹೋಸ್ಟೆಸ್ ಆಹಾರ ಅಥವಾ ಪಾನೀಯಗಳನ್ನು ನೀಡುತ್ತಾರೆ. ಒಂದು ವೇಳೆ ಪ್ರಯಾಣಿಕರು ಪದೇ ಪದೇ ಅದನ್ನು ನಿರಾಕರಿಸಿದರೆ ಅವರನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಯಾಕೆಂದರೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕೆಲವು ವೇಳೆ ಹೊರದೇಶಗಳಿಗೆ ಕಳ್ಳಸಾಗಾಣಿಕೆಗಳು ಮಾಡುತ್ತಿರುತ್ತಾರೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ವಿಮಾನಯಾನ ಸಂಸ್ಥೆಗಳು ಮತ್ತು ಅಧಿಕಾರಿಗಳು ಪ್ರಯಾಣಿಕರ ಮೇಲೆ ಕಣ್ಗಾವಲು ಇಟ್ಟಿರುತ್ತಾರೆ.

Continue Reading

Latest

Murder Case: ನರ್ಸ್‌ ಜೊತೆ ಅಕ್ರಮ ಸಂಬಂಧ; ಪತ್ನಿ, ಇಬ್ಬರು ಮಕ್ಕಳನ್ನು ಕೊಂದ ಡಾಕ್ಟರ್‌!

Murder Case: ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಸೋನಿ ಫ್ರಾನ್ಸಿಸ್ ಜೊತೆ ಅಕ್ರಮ ಸಂಬಂಧದಲ್ಲಿದ್ದ ವೈದ್ಯ ಬೋಡಾ ಪ್ರವೀಣ್ ಎಂಬಾತ ಗೆಳತಿಯ ಜೊತೆ ಜೀವನ ನಡೆಸುವ ಉದ್ದೇಶದಿಂದ ಪತ್ನಿ ಮತ್ತು ಇಬ್ಬರು ಮಕ್ಕಳನ್ನೇ ಕ್ರೂರವಾಗಿ ಕೊಂದಿದ್ದಾನೆ. ಗೆಳತಿ ಸೋನಿ ಫ್ರಾನ್ಸಿಸ್ ಒತ್ತಾಯದ ಮೇರೆಗೆ ಹೆಂಡತಿಗೆ ಹೈಡೋಸ್ ಅರಿವಳಿಕೆ ಚುಚ್ಚುಮದ್ದನ್ನು ನೀಡಿ ಕೊಂದಿದ್ದಾನೆ. ಇನ್ನು ಇಬ್ಬರು ಹೆಣ್ಣುಮಕ್ಕಳನ್ನು ಕಾರಿನ ಮುಂಭಾಗದ ಸೀಟಿನಲ್ಲಿ ಮೂಗು ಮತ್ತು ಬಾಯಿಯನ್ನು ಮುಚ್ಚಿ ಉಸಿರುಗಟ್ಟಿಸಿ ಕೊಂದಿದ್ದಾನೆ.

VISTARANEWS.COM


on

Murder Case
Koo


ಹೈದರಾಬಾದ್: ಇಂದಿನ ಕಾಲದಲ್ಲಿ ಅಕ್ರಮ ಸಂಬಂಧಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಅಕ್ರಮ ಸಂಬಂಧಕ್ಕಾಗಿ ಜನರು ತಮ್ಮ ಪ್ರೀತಿಪಾತ್ರರನ್ನು ಕೊಲೆ (Murder Case ) ಮಾಡಲೂ ಹಿಂಜರಿಯುವುದಿಲ್ಲ. ಅಂತಹದೊಂದು ಘಟನೆ ಇದೀಗ ಹೈದರಾಬಾದ್‍ನಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ಫಿಸಿಯೋಥೆರಪಿಸ್ಟ್ ತನ್ನ ಗೆಳತಿಯ ಒತ್ತಾಯದ ಮೇರೆಗೆ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಕೊಂದು ಸುಮಾರು 45 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

32 ವರ್ಷದ ಬೋಡಾ ಪ್ರವೀಣ್ ತನ್ನ ಹೆಂಡತಿ, ಮಕ್ಕಳನ್ನು ಕೊಂದ ಆರೋಪಿ. ಪತ್ನಿ ಕುಮಾರಿ (29), ಪುತ್ರಿಯರಾದ ಕೃಷಿಕಾ (5) ಮತ್ತು ಕೃತಿಕಾ (3) ಕೊಲೆಯಾದ ಬಲಿಪಶುಗಳು. ಪ್ರವೀಣ್‍ಗೆ ಸೋನಿ ಫ್ರಾನ್ಸಿಸ್ ಎಂಬ ಗೆಳತಿ ಇದ್ದಳು. ಆಕೆ ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಳು. ಈತ ಆಕೆಯ ಜೊತೆ ಅಕ್ರಮ ಸಂಬಂಧದಲ್ಲಿದ್ದ. ಹಾಗಾಗಿ ಗೆಳತಿಯ ಜೊತೆ ಜೀವನ ನಡೆಸುವ ಉದ್ದೇಶದಿಂದ ಇದಕ್ಕೆ ಅಡ್ಡವಿದ್ದ ಪತ್ನಿ ಮತ್ತು ಮಕ್ಕಳನ್ನು ಕೊಲ್ಲುವ ಯೋಜನೆ ಮಾಡಿದ್ದಾನೆ.

ಹಾಗಾಗಿ ಗೆಳತಿ ಸೋನಿ ಫ್ರಾನ್ಸಿಸ್ ಒತ್ತಾಯದ ಮೇರೆಗೆ ಮೇ 28 ರಂದು ಹೈಡೋಸ್ ಅರಿವಳಿಕೆ ಚುಚ್ಚುಮದ್ದನ್ನು ನೀಡುವ ಮೂಲಕ ಅವನು ತನ್ನ ಹೆಂಡತಿಯನ್ನು ಕೊಂದ. ಹಾಗೇ ಅವನು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕಾರಿನ ಮುಂಭಾಗದ ಸೀಟಿನಲ್ಲಿ ಮೂಗು ಮತ್ತು ಬಾಯಿಯನ್ನು ಮುಚ್ಚಿ ಉಸಿರುಗಟ್ಟಿಸಿ ಕೊಂದ. ನಂತರ ತಲೆಮರೆಸಿಕೊಂಡ ಆರೋಪಿ ಪ್ರವೀಣ್ ಆಸ್ಪತ್ರೆಯಲ್ಲಿ ಸಣ್ಣ ಗಾಯಗಳ ಚಿಕಿತ್ಸೆ ಪಡೆದು ತಾನು ಅಂದುಕೊಂಡಂತೆ ಗೆಳೆತಿಯ ಜೊತೆ ಮುಂದಿನ ಜೀವನ ನಡೆಸಲು ಹೈದರಾಬಾದ್‍ಗೆ ಮರಳಿದ್ದ.

ಇತ್ತ ಪೊಲೀಸರು ಕುಮಾರಿ ಹಾಗೂ ಆಕೆಯ ಮಕ್ಕಳ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ತನಿಖೆಯ ವೇಳೆ ಕಾರಿನಲ್ಲಿ ಸಿರಿಂಜ್ ಪತ್ತೆಯಾಗಿದೆ. ಹೆಚ್ಚಿನ ತನಿಖೆಗಾಗಿ ಪೊಲೀಸರು ಸಿರಿಂಜ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆರಂಭದಲ್ಲಿ ಅಪಘಾತ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ನಂತರ ಅದು ಕೊಲೆ ಎಂಬುದು ತಿಳಿಯಿತು.

ಇದನ್ನೂ ಓದಿ: ಮಧ್ಯವಯಸ್ಕ ಮಹಿಳೆಯ ಮೇಲೆ ಮಗನ ಸ್ನೇಹಿತನಿಂದಲೇ ಅತ್ಯಾಚಾರ!

ಪ್ರವೀಣ್ ಕೊಲೆ ಮಾಡಿರುವ ಅನುಮಾನದ ಮೇರೆಗೆ ಕೊಲೆ ನಡೆದ 48 ದಿನಗಳ ಬಳಿಕ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರವೀಣ್ ಹೈದರಾಬಾದ್‍ನ ಅಟ್ಟಾಪುರ್ ಪ್ರದೇಶದ ಜರ್ಮೆಂಟನ್ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಘಟನೆಯ ನಂತರ ಪ್ರವೀಣ್ ತನ್ನ ಗೆಳತಿ ಸೋನಿ ಫ್ರಾನ್ಸಿಸ್ ಅವರೊಂದಿಗೆ ಪ್ರತ್ಯೇಕ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆದರೆ ಪತ್ನಿ ಮತ್ತು ಮಕ್ಕಳ ಸಾವಿನ ಬಗ್ಗೆ ಆತನಿಗೆ ಯಾವುದೇ ಪಶ್ಚಾತ್ತಾಪ ಇರಲಿಲ್ಲ ಎನ್ನಲಾಗಿದೆ.

Continue Reading

ವೈರಲ್ ನ್ಯೂಸ್

Viral Video: 300 ಮೊಸಳೆಗಳಿರುವ ಕೆರೆಯಲ್ಲಿ ಬೈಕ್‌, ಕಾರು ಸ್ಟಂಟ್‌; ಹುಚ್ಚಾಟ ಮೆರೆದ ಯುವಕರಿಗೆ ಆಗಿದ್ದೇನು ಗೊತ್ತಾ?

Viral Video: ರೀಲ್ಸ್‌ಗಾಗಿ ಅನೇಕ ಯುವಕರು ನೀರಿನಲ್ಲಿ ಬೈಕ್‌ ಮತ್ತು ಕಾರು ಚಲಾಯಿಸಿದ್ದಾರೆ. ಅಲ್ಲದದೇ ಕೆರೆಯ ಬದಿಯಲ್ಲಿ ಮೊಸಳೆಗಳು ಓಡಾಡುತ್ತಿರುವುದನ್ನೂ ವಿಡಿಯೋದಲ್ಲೀ ಕಾಣಬಹುದಾಗಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಕಾರು ಮತ್ತು ಏಳು ಬೈಕ್‌ ಸೇರಿ ಯುವಕರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

VISTARANEWS.COM


on

Viral Video
Koo

ಜೈಪುರ: ಇತ್ತೀಚೆಗೆ ಯುವಕರ ರೀಲ್ಸ್‌(Reels) ಹುಚ್ಚು ಎಂತೆಂಥಾ ಅಪಾಯವನ್ನು ತಂದೊಡ್ಡುತ್ತದೆ ಎಂದರೆ ಅದನ್ನು ಊಹಿಸಲೂ ಸಾಧ್ಯವಿಲ್ಲ. ಪ್ರಾಣವನ್ನೂ ಲೆಕ್ಕಿಸದೇ ರೀಲ್ಸ್‌ಗಾಗಿ ಸಾರ್ವಜನಿಕ ಸ್ಥಳದಲ್ಲಿ ಹುಚ್ಚಾಟ ಮೆರೆಯುತ್ತಿರುತ್ತಾರೆ. ಅಂತಹದ್ದೇ ಒಂದು ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ. ಬರೋಬ್ಬರಿ 300 ಮೊಸಳೆಗಳ ಅಭಯಾರಣ್ಯದ(Crocodile Lake) ಕೆರೆಯಲ್ಲಿ ಅಪಾಯಕಾರಿ ಬೈಕ್‌, ಕಾರು ಸ್ಟಂಟ್‌ ಮಾಡುವ ಮೂಲಕ ಯುವಕರು ಹುಚ್ಚಾಟ ಮೆರೆದಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್‌ (Viral Video) ಆಗಿದ್ದು, ಪೊಲೀಸರು 20 ಮಂದಿ ಯುವಕರನ್ನು ಅರೆಸ್ಟ್‌ ಮಾಡಿದ್ದಾರೆ. ರಾಜಸ್ಥಾನದ ಆಲ್ವಾರ್‌ ಜಿಲ್ಲೆಯಲ್ಲಿರುವ ಸಿಲಿಸೆಹ್ರ್‌ ಮೊಸಳೆ ಪಾರ್ಕ್‌ನಲ್ಲಿ ಯುವಕರು ಹುಚ್ಚಾಟ ಮೆರೆದಿದ್ದಾರೆ.

ರೀಲ್ಸ್‌ಗಾಗಿ ಅನೇಕ ಯುವಕರು ನೀರಿನಲ್ಲಿ ಬೈಕ್‌ ಮತ್ತು ಕಾರು ಚಲಾಯಿಸಿದ್ದಾರೆ. ಅಲ್ಲದದೇ ಕೆರೆಯ ಬದಿಯಲ್ಲಿ ಮೊಸಳೆಗಳು ಓಡಾಡುತ್ತಿರುವುದನ್ನೂ ವಿಡಿಯೋದಲ್ಲೀ ಕಾಣಬಹುದಾಗಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಕಾರು ಮತ್ತು ಏಳು ಬೈಕ್‌ ಸೇರಿ ಯುವಕರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಗುರುಮೇಲ್ ಸಿಂಗ್ (28), ಯೋಗೇಶ್ (23), ಕೃಷ್ಣ (23), ಪುನೀತ್ (19), ಸಚಿನ್ (27), ಶಿವಚರಣ್ (29), ಎಲ್ಲರೂ ಸೊರ್ಖಾ ಕಾಲಾ ಗ್ರಾಮದ ನಿವಾಸಿಗಳು ಮತ್ತು ಉದಯ್ (18) ಬರೋಡಾದಿಂದ ಏಳು ವ್ಯಕ್ತಿಗಳನ್ನು ಅರೆಸ್ಟ್‌ ಮಾಡಲಾಗಿತ್ತು. ಮರುದಿನ 13 ಇತರರನ್ನು ಬಂಧಿಸಲಾಯಿತು.

ಅಲ್ವಾರ್ ಪೊಲೀಸ್ ಅಧೀಕ್ಷಕ ಆನಂದ್ ಶರ್ಮಾ ಅವರು, ಸಿಲಿಸೆರ್ಹ್ ಸರೋವರ ಮತ್ತು ನಟ್ನಿ ಕಾ ಬಾರಾದಂತಹ ಪ್ರವಾಸಿ ಸ್ಥಳಗಳ ಬಳಿ ಇಂತಹ ಸಾಹಸಗಳನ್ನು ಮಾಡುವ ಮೂಲಕ ಯಾರಾದರೂ ತಮ್ಮನ್ನು ಅಥವಾ ವನ್ಯಜೀವಿಗಳಿಗೆ ಅಪಾಯವನ್ನುಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಅಜಾಗರೂಕ ಕೃತ್ಯಗಳು ಭಾಗಿಯಾಗಿರುವವರ ಜೀವಕ್ಕೆ ಅಪಾಯವನ್ನುಂಟುಮಾಡುವುದು ಮಾತ್ರವಲ್ಲದೆ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ತೊಂದರೆಯಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

ಅಲ್ವಾರ್ ಪೊಲೀಸರು ಈ ಪ್ರದೇಶಗಳಲ್ಲಿ ಗಸ್ತು ತೀವ್ರಗೊಳಿಸಿದ್ದಾರೆ ಮತ್ತು ಪ್ರವಾಸಿಗರು ಮತ್ತು ವನ್ಯಜೀವಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿಯನ್ನು ನಿಯೋಜಿಸುತ್ತಿದ್ದಾರೆ. ಕೆರೆಗೆ ಹೋಗುವ ಅನಧಿಕೃತ ರಸ್ತೆಗಳನ್ನೂ ಅಧಿಕಾರಿಗಳು ಮುಚ್ಚಿದ್ದಾರೆ. ಸಾಮಾಜಿಕ ಮಾಧ್ಯಮದ ಜನಪ್ರಿಯತೆಗಾಗಿ ಯುವಕರು ಇಂತಹ ಅಪಾಯಕಾರಿ ನಡವಳಿಕೆಯಿಂದ ದೂರವಿರಬೇಕು ಎಂದು ಪೊಲೀಸರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Viral Video: ಸಫಾರಿಯಲ್ಲಿ ಪ್ರವಾಸಿಗರ ಎದುರೇ ಸಿಂಹಗಳ ಕಾಮಕೇಳಿ!

Continue Reading
Advertisement
SL vs IND
ಕ್ರಿಕೆಟ್20 mins ago

SL vs IND: ಇಂದು ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ; ಯಾರಿಗೆ ಒಲಿಯಲಿದೆ ನಾಯಕತ್ವ?

Narendra Modi
ರಾಜಕೀಯ28 mins ago

Narendra Modi: ಇಂದು ಮೋದಿ ನೇತೃತ್ವದಲ್ಲಿ ಬಿಜೆಪಿ ಸಭೆ: ಮಹತ್ವದ ತೀರ್ಮಾನ ಸಾಧ್ಯತೆ; ಏನೆಲ್ಲ ಚರ್ಚೆಯಾಗಲಿದೆ?

Vijay Sethupathi 'Viduthalai 2' first look out now
ಕಾಲಿವುಡ್32 mins ago

Vijay Sethupathi: ವಿಜಯ್​ ಸೇತುಪತಿ ನಟನೆಯ’ʻವಿಡುತಲೈ 2ʼ ಫಸ್ಟ್‌ ಲುಕ್‌ ಔಟ್‌!

b nagendra valmiki corporation scam
ಪ್ರಮುಖ ಸುದ್ದಿ33 mins ago

Valmiki Corporation Scam: ನಾಗೇಂದ್ರ ಕಸ್ಟಡಿ ಅಂತ್ಯ, ಇಂದು ಕೋರ್ಟ್‌ಗೆ ಹಾಜರು; ಪತ್ನಿಯೂ ಇಡಿ ವಶದಲ್ಲಿ

Actor  Karthi Stuntman falls 20 ft to his death
ಕಾಲಿವುಡ್51 mins ago

Actor  Karthi: ನಟ ಕಾರ್ತಿ ಸಿನಿಮಾ ಸೆಟ್‌ನಲ್ಲಿ ಅವಘಡ; 20 ಅಡಿಯಿಂದ ಬಿದ್ದು ಸ್ಟಂಟ್‌ ಮ್ಯಾನ್‌ ಸಾವು

Paris Olympics
ಕ್ರೀಡೆ55 mins ago

Paris Olympics: ಪ್ಯಾರಿಸ್‌ ಒಲಿಂಪಿಕ್ಸ್​ ಭದ್ರತಾ ಕಾರ್ಯದಲ್ಲಿ ಭಾರತದ ಶ್ವಾನದಳ; ಬೆಂಗಳೂರಿನಲ್ಲಿ ತರಬೇತಿ

Anant Radhika Wedding
ವಾಣಿಜ್ಯ1 hour ago

Anant Radhika Wedding: ಅನಂತ್ ಅಂಬಾನಿ ಮದುವೆ ಊಟಕ್ಕೆ 2500 ಬಗೆಯ ಖಾದ್ಯಗಳು! ಏನ್ ತಿಂದ್ರೋ ಏನ್ ಬಿಟ್ರೋ!

Lalbagh Flower Show 2024
ಪ್ರಮುಖ ಸುದ್ದಿ1 hour ago

Lalbagh Flower Show: ಈ ಬಾರಿಯ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದೆ ಡಾ. ಅಂಬೇಡ್ಕರ್‌ ಜೀವನಗಾಥೆ!

Bhole Baba
ದೇಶ2 hours ago

Bhole Baba: ʼʼಏನಾಗಬೇಕೋ ಅದೇ ಆಗುತ್ತೆʼʼ- 121 ಜನರ ಸಾವಿಗೆ ಕಾರಣನಾದ ಭೋಲೆ ಬಾಬಾ ಉವಾಚ

karnataka jobs reservation Siddaramaiah and BY Vijayendra
ಪ್ರಮುಖ ಸುದ್ದಿ2 hours ago

Karnataka Jobs Reservation: ಉದ್ಯೋಗ ವಿಚಾರದಲ್ಲಿ ಕನ್ನಡಿಗರೊಂದಿಗೆ ಸರ್ಕಾರ ಚೆಲ್ಲಾಟ: ವಿಜಯೇಂದ್ರ ಆಕ್ರೋಶ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ5 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌