Chandassu: ಕನ್ನಡ ಛಂದಸ್ಸಿನ ಮೇಲೊಂದು ನೋಟ… - Vistara News

ಶಿಕ್ಷಣ

Chandassu: ಕನ್ನಡ ಛಂದಸ್ಸಿನ ಮೇಲೊಂದು ನೋಟ…

ಛಂದಸ್ಸಿನ ಸಂಬಂಧದದಲ್ಲಿ ಎರಡು ದೃಷ್ಟಿಗಳನ್ನು ಗುರುತಿಸಬಹುದು. ಒಂದು ಸೌಂದರ್ಯ ದೃಷ್ಟಿ, ಇನ್ನೊಂದು ಪ್ರಯೋಜನ ದೃಷ್ಟಿ. ಛಂದಸ್ಸು ಕಾವ್ಯದ ಸೌಂದರ್ಯಕ್ಕೆ ಕಳೆಕಟ್ಟಿ ಆನಂದವನ್ನುಂಟುಮಾಡುತ್ತದೆ ಎಂಬುದು ಸೌಂದರ್ಯ ದೃಷ್ಟಿ. ಕಾವ್ಯಕ್ಕೆ ಪ್ರವಹಿಸಲು ನೆರವಾಗುತ್ತದೆ ಎಂಬುದು ಅಥವಾ ಜ್ಞಾಪಕಕ್ಕೆ ಅನುಕೂಲವಾಗುತ್ತದೆ ಎಂಬುದು ಪ್ರಯೋಜನ ದೃಷ್ಟಿ.

VISTARANEWS.COM


on

kannada inscription
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕನ್ನಡ ಕಾವ್ಯಗಳಲ್ಲಿ (kannada poetry) ಮೂರು ಪ್ರಕಾರದ ಛಂದಸ್ಸುಗಳು (Chandassu) ಕಂಡುಬರುತ್ತವೆ. ಒಂದು, ಕನ್ನಡಕ್ಕೆ ವಿಶಿಷ್ಟವಾದ ಛಂದಸ್ಸು. ಇನ್ನೊಂದು, ಚಂಪೂಕಾವ್ಯಗಳಲ್ಲಿ ಮಿಳಿತವಾಗಿರುವ ಸಂಸ್ಕೃತ (Sanskrit) ವರ್ಣಛಂದಸ್ಸು. ಮೂರನೇಯದು, ಪ್ರಾಕೃತಕ್ಕೆ ವಿಶಿಷ್ಟವಾದ ಮಾತ್ರಾಗಣ ಛಂದಸ್ಸು.

ಅದಕ್ಕೂ ಮುನ್ನ, ಛಂದಸ್ಸಿನ ವ್ಯುತ್ಪತ್ತಿ ಮತ್ತು ಕಲ್ಪನೆಗಳತ್ತ ಗಮನ ಹರಿಸೋಣ. ಛಂದಸ್ಸಿನ ವ್ಯುತ್ಪತ್ತಿಯನ್ನು ಛದ್‌ ಮತ್ತು ಛಂದ್-‌ ಈ ಎರಡೂ ಧಾತುಗಳಿಂದ ಸಾಧಿಸುತ್ತಾರೆ. ಎರಡೂ ಧಾತುಗಳ ಅರ್ಥ ಬಹುತೇಕ ಒಂದೇ. ಆಚ್ಛಾದಿಸು ಅಥವಾ ಹೊದಿಸು ಎಂಬ ಅರ್ಥವನ್ನು ಕೊಡುತ್ತವೆ. “ಆಹ್ಲಾದವನ್ನುಂಟು ಮಾಡುವುದು ಯಾವುದೇ ಅದು ಛಂದ” ಎಂದೂ ಅರ್ಥೈಸುವುದುಂಟು. ಅಂದರೆ, ಛಂದಸ್ಸು ಕಾವ್ಯದ ಹೊರಗಿನ ಅಂಶವಲ್ಲ; ಒಳಗಿನ ಅಂಶ. ಕಾವ್ಯಕ್ಕೆ ಚಲನೆಯುಂಟಾಗುವುದು ಛಂದದಿಂದಲೇ.

ಛಂದಸ್ಸಿನ ಸಂಬಂಧದದಲ್ಲಿ ಎರಡು ದೃಷ್ಟಿಗಳನ್ನು ಗುರುತಿಸಬಹುದು. ಒಂದು ಸೌಂದರ್ಯ ದೃಷ್ಟಿ, ಇನ್ನೊಂದು ಪ್ರಯೋಜನ ದೃಷ್ಟಿ. ಛಂದಸ್ಸು ಕಾವ್ಯದ ಸೌಂದರ್ಯಕ್ಕೆ ಕಳೆಕಟ್ಟಿ ಆನಂದವನ್ನುಂಟುಮಾಡುತ್ತದೆ ಎಂಬುದು ಸೌಂದರ್ಯ ದೃಷ್ಟಿ. ಕಾವ್ಯಕ್ಕೆ ಪ್ರವಹಿಸಲು ನೆರವಾಗುತ್ತದೆ ಎಂಬುದು ಅಥವಾ ಜ್ಞಾಪಕಕ್ಕೆ ಅನುಕೂಲವಾಗುತ್ತದೆ ಎಂಬುದು ಪ್ರಯೋಜನ ದೃಷ್ಟಿ. ಕಾವ್ಯವು ನೃತ್ಯಕಲೆ, ಸಂಗೀತಗಳ ಸಂಪರ್ಕದಿಂದ ಕಲೆಯ ಛಾಯೆಯನ್ನು ಹೊಂದುವುದೆಂಬುದು ಸೌಂದರ್ಯ ದೃಷ್ಟಿ. ಮಾತ್ರೆ, ಗಣ, ಚರಣ, ಪ್ರಾಸಗಳ ಲೆಕ್ಕಾಚಾರವನ್ನು ಒಳಗೊಂಡ ಶಾಸ್ತ್ರ ಎಂಬುದು ಪ್ರಯೋಜನ ದೃಷ್ಟಿ. ಬಲ್ಲವರಿಗೆ ಸೌಂದರ್ಯದಲ್ಲಿ ಪ್ರಯೋಜನವುಂಟು. ಪ್ರಯೋಜನದಲ್ಲಿ ಸೌಂದರ್ಯ ಒಂದುಗೂಡಬಹುದು.

ಶಾಸ್ತ್ರವೋ, ಕಲೆಯೋ?

ಛಂದಸ್ಸು ಶಾಸ್ತ್ರ ಎನ್ನಲಾಗುತ್ತದೆ. ಕಾವ್ಯದ ಲಯಗಳನ್ನು ಪರಿಶೀಲಿಸಿ ಅವುಗಳ ಲಕ್ಷಣ ಹೇಳುವ ಶಾಸ್ತ್ರವದು. ಆದರೆ ಅದನ್ನು ಬರಿಯ ಶಾಸ್ತ್ರವೆಂದು ತಿಳಿಯುವುದು ಸಾಧುವಲ್ಲ. ಏಕೆಂದರೆ ಅದಕ್ಕೆ ಕಲೆಯ ಸಂಪರ್ಕವೂ ಉಂಟು. ಛಂದಸ್ಸು ನೀಡುವ ಆನಂದವನ್ನು ಗಮನಿಸಿದರೆ ಅದಕ್ಕಿರುವ ಕಲೆಯ ಸಂಪರ್ಕದ ಅರಿವು ಆಗದಿರದು. ಛಂದಸ್ಸು ಒಂದು ಕೈಯನ್ನು ಕಾವ್ಯದೆಡೆಗೆ ಚಾಚಿದರೆ, ಇನ್ನೊಂದನ್ನು ಸಂಗೀತದೆಡೆಗೆ ಚಾಚುತ್ತದೆ. ಅದು ಭಾವಾನುಸಾರಣಿಯು ಹೇಗೋ ಹಾಗೆ ರಾಗಾನುವರ್ತಿಯೂ ಹೌದು. ಹೀಗೆ ಭಾವ, ರಾಗ, ತಾಳಗಳನ್ನು ಅನುಸರಿಸುವ ಛಂದಸ್ಸು ನಿಜವಾಗಿಯೂ ಒಂದು ಕಲೆ.

ಛಂದೋಗ್ರಂಥಗಳು

ಲಭ್ಯವಿರುವ ಕನ್ನಡ ಛಂದೋಗ್ರಂಥಗಳಲ್ಲಿ ಒಂದನೆಯ ನಾಗವರ್ಮ ಬರೆದ ಛಂದೋಂಬುಧಿ ಅತ್ಯಂತ ಪ್ರಾಚೀನವೂ ಪ್ರಮಾಣಭೂತವೂ ಪ್ರಸಿದ್ಧವೂ ಆದ ಗ್ರಂಥ. ಇದಲರಲಿ ಕನ್ನಡ ಛಂದಸ್ಸಿಗೆ ಸಂಬಂಧಿಸಿದ ನಾನಾ ವಿಷಯಗಳು ಸ್ವತಂತ್ರವಾಗಿಯೂ ತಕ್ಕಮಟ್ಟಿಗೆ ವಿಸ್ತಾರವಾಗಿಯೂ ಪ್ರತಿಪಾದಿತವಾಗಿವೆ. ಇದಕ್ಕೂ ಮುಂಚಿನ ಕಾವ್ಯಲಕ್ಷಣ ಗ್ರಂಥವಾದ ಕವಿರಾಜಮಾರ್ಗ ಕನ್ನಡ ಛಂದಸ್ಸಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಒಳಗೊಂಡಿದೆ. ಮಾತ್ರವಲ್ಲ, ಈಶ್ವರ ಕವಿಯ ಕವಿಜಿಹ್ವಾಬಂಧನಂ, ಗುಣಚಂದ್ರನ ಛಂದಸ್ಸಾರ, ಶಾಲ್ಯದ ಕೃಷ್ಣರಾಜನ ಷಟ್ಪ್ರತ್ಯಯ ಮೊದಲಾದ ಛಂದೋಗ್ರಂಥಗಳಲ್ಲಿ ಛಂದಸ್ಸಿನ ಸಾಮಾನ್ಯ ವಿಷಯಗಳನ್ನೂ ಕನ್ನಡ ಛಂದಸ್ಸನ್ನೂ ಕುರಿತಂತೆ ಯಥೋಚಿತವಾಗಿ ವಿಷಯ ನಿರೂಪಣೆ ಕಂಡುಬರುತ್ತದೆ.

ಕನ್ನಡ ಛಂದಸ್ಸಿನ ಸ್ವರೂಪ

ಕನ್ನಡದಲ್ಲಿ ಪ್ರಚಲಿತದಲ್ಲಿರುವ ಪದ್ಯಜಾತಿಗಳಲ್ಲಿ ಮೂರು ವಿಧ. ವರ್ಣವೃತ್ತಗಳು, ಮಾತ್ರವೃತ್ತಗಳು ಮತ್ತು ಅಂಶವೃತ್ತಗಳು. ವರ್ಣವೃತ್ತಗಳಲ್ಲಿ ಪ್ರತಿಪಾದಗಳಲ್ಲಿಯೂ ನಿರ್ದಿಷ್ಟವಾದ ಅಕ್ಷರ ಸಂಖ್ಯೆಯಿದ್ದು ಲಘುವೋ ಗುರುವೋ ಆಗಿರುವ ಆಯಾ ಅಕ್ಷರಗಳ ವಿನ್ಯಾಸವೂ ನಿರ್ದಿಷ್ಟವಾಗಿರುತ್ತದೆ. ಮಾತ್ರಾವೃತ್ತಗಳಲ್ಲಿ ಪ್ರತಿಪಾದದಲ್ಲಿಯೂ ಇಷ್ಟಿಷ್ಟು ಮಾತ್ರೆಗಳ ಇಷ್ಟಿಷ್ಟು ಗಣಗಳೆಂದಿದ್ದು, ಮಾತ್ರಾ ಸಂಖ್ಯೆಗೆ ಅನುಗುಣವಾಗಿ ಕೆಲವು ಸಂದರ್ಭಗಳಲ್ಲಿ ಕೆಲವು ಗಣನಿಯಮಗಳನ್ನು ಅನುಸರಿಸಿ ಗಣವಿಭಾಗವಿರುತ್ತದೆ. ಅಂಶವೃತ್ತಗಳಲ್ಲಿ ಪ್ರತಿಪಾದದಲ್ಲಿಯೂ ವಾಚನದ ಅಥವಾ ಗಾಯನದ ಗತಿಯನ್ನು ಅನುಸರಿಸಿ, ತಾಳಲಯಗಳು ಸರಿಯಾಗಿ ಹೊಂದಿಕೊಳ್ಳಲು ಅನುವಾಗುವಂತೆ ಅಕ್ಷರಗಳಿಂದ ಕೂಡಿದ ಗಣಗಳು ಬಂದಿರುತ್ತವೆ. ಅಚ್ಚಕನ್ನಡ ಮಟ್ಟುಗಳು ಅಂಶವೃತ್ತದವು.

ಸಂಸ್ಕೃತ ಛಂದಸ್ಸಿನ ಮೂಲದ ವರ್ಣವೃತ್ತಗಳು

ಪ್ರಾಚೀನ ಕನ್ನಡ ಸಾಹಿತ್ಯದ ಕಾವ್ಯಗಳೂ ಪುರಾಣಗಳೂ ವಿಶೇಷವಾಗಿ ಚಂಪೂ ಪದ್ಧತಿಯಲ್ಲಿ ರಚಿತವಾಗಿವೆ. ಚಂಪೂ ಪದ್ಧತಿಯ ಚೌಕಟ್ಟು ಮುಖ್ಯವಾಗಿ ಗದ್ಯ ಹಾಗೂ ಕಂದ, ವೃತ್ತಗಳಿಂದ ರಚಿತವಾಗಿದೆ. ಸಮ, ಅರ್ಧಸಮ ಮತ್ತು ವಿಷಮ ಎಂಬ ಅವುಗಳ ಮೂರು ಪ್ರಕಾರಗಳಲ್ಲಿ ಮೊದಲನೆಯದೇ ವಿಶೇಷವಾಗಿ ಬಳಕೆಯಾಗಿದ್ದು, ಉಳಿದವು ಕ್ವಚಿತ್ತಾಗಿ ಬಂದಿವೆ. ವರ್ಣವೃತ್ತಗಳಲ್ಲಿ ಕೆಲವನ್ನು ಸಂಸ್ಕೃತ ಛಂದಸ್ಸಿನಿಂದ ನೇರವಾಗಿ ಕನ್ನಡಕ್ಕೆ ತೆಗೆದುಕೊಂಡಿದೆ.

ಕನ್ನಡ ಪದ್ಯಸಾಹಿತ್ಯದಲ್ಲಿ ಬಹುಪ್ರಚಲಿತವಾಗಿರುವ ವರ್ಣವೃತ್ತಗಳು ಖ್ಯಾತ ಕರ್ಣಾಟಕಗಳು ಎಂಬ ಹೆಸರಿನಿಂದ ರೂಢಿಯಲ್ಲಿವೆ. ಇವು ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಉತ್ಪಲಮಾಲೆ, ಚಂಪಕಮಾಲೆ, ಸ್ರಗ್ಧರೆ ಮತ್ತು ಮಹಾಸ್ರಗ್ಧರೆ ಎಂಬ ಆರು ವೃತ್ತಗಳು. ಇವು ಸರಿಸುಮಾರು ಏಳನೇ ಶತಮಾನದಿಂದ ಕನ್ನಡ ಶಾಸನಗಳಲ್ಲಿಯೂ ಕಾವ್ಯಗಳಲ್ಲಿಯೂ ಬಳಕೆಯಲ್ಲಿವೆ.

ಪ್ರಾಕೃತಕ್ಕೆ ವಿಶಿಷ್ಟವಾದ ಮಾತ್ರಾಗಣ ಛಂದಸ್ಸು

ಕನ್ನಡ ಸಾಹಿತ್ಯದ ಕಾವ್ಯ ಶಾಸ್ತ್ರಾದಿ ಗ್ರಂಥಗಳಲ್ಲಿ ವಿಶೇಷವಾಗಿ ಬಳಕೆಯಾಗಿರುವ ಕಂದಪದ್ಯವೂ ವಿರಳವಾಗಿ ಬಳಕೆಯಾಗಿರುವ ರಗಳೆಯೂ ಈ ಗುಂಪಿನಲ್ಲಿವೆ. ಸಂಸ್ಕೃತದ ಆರ್ಯಾವೃತ್ತಗಳ ಮೂಲಕ ಆರ್ಯಾಗೀತೆಯೇ ಪ್ರಾಕೃತದಲ್ಲಿ ಸ್ಕಂಧಕವೆಂದಾಗಿ ಈ ಮೂಲಕ ಕನ್ನಡಕ್ಕೆ ಬಂದು ಕಂದ ಎಂಬ ಹೆಸರಿನಲ್ಲಿ ರೂಢಿಯಾಗಿರುವಂತೆ ತೋರುತ್ತದೆ. ಲಕ್ಷಣಗ್ರಂಥಗಳ ರಚನೆಗೆ ಕಂದಪದ್ಯಗಳು ಹೆಚ್ಚಾಗಿ ಬಳಕೆಯಾಗಿವೆ. ಇದನ್ನೇ ಬಳಸಿ ಕೃತಿ ರಚನೆ ಮಾಡಿರುವುದೂ ಇದೆ. ಜನ್ನನ ಯಶೋಧರ ಚರಿತೆ ಕಾವ್ಯವಾಗಿಯೂ ಸಮಗ್ರವಾಗಿ ಕಂದದಲ್ಲಿ ರಚಿತವಾಗಿದೆ.

ಹರಿಹರ ಮತ್ತು ಅವನೀಚಿನ ಕೆಲವು ಕವಿಗಳು ರಚಿಸಿರುವ ಕೃತಿಗಳು ರಗಳೆಯಲ್ಲಿವೆ. ನಾಗವರ್ಮ ಮತ್ತು ಜಯಕೀರ್ತಿ ಈ ಛಂದಸ್ಸಿನ ಲಕ್ಷಣಗಳನ್ನು ಹೇಳಿದವರಲ್ಲಿ ಪ್ರಮುಖರು. ಮಂದಾನಿಲ, ಲಲಿತ ಮತ್ತು ಉತ್ಸಾಹ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಮೂರು ರಗಳೆಗಳು ಹರಿಹರನ ಮತ್ತು ಆನಂತರ ಕಾವ್ಯಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತವೆ.

ಅಚ್ಚಕನ್ನಡ ಛಂದಸ್ಸಿನ ಮಟ್ಟುಗಳು

ಇದನ್ನು ನಾಗವರ್ಮನು ಕರ್ಣಾಟಕ ವಿಷಯಜಾತಿವೃತ್ತ ಎಂದೂ ಜಯಕೀರ್ತಿಯು ಕರ್ಣಾಟಕ ವಿಷಯಭಾಷಾಜಾತಿ ಎಂದೂ ಕರೆದಿದ್ದಾರೆ. ಅಕ್ಕರ, ತ್ರಿಪದಿ, ಏಳೆ, ಚೌಪದಿ, ಛಂದೋವತಂಸ, ಅಕ್ಕರಿಕೆ, ಮದನವತಿ, ಗೀತಿಕೆ, ಉತ್ಸಾಹ ಮತ್ತು ಷಟ್ಪದಿಗಳೆಂಬ ಹತ್ತು ಮುಖ್ಯವಾದ ಮಟ್ಟುಗಳನ್ನು ನಾಗವರ್ಮ ಹೇಳಿದ್ದಾನೆ.

ಅಕ್ಕರ: ಇದರಲ್ಲಿ ಪಿರಿಯಕ್ಕರ, ದೊರೆಯಕ್ಕರ, ನಡುವಕ್ಕರ, ಎಡೆಯಕ್ಕರ ಮತ್ತು ಕಿರಿಯಕ್ಕರ ಎಂಬ ಐದು ಪ್ರಬೇಧಗಳಿವೆ. ಸಂಸ್ಕೃತದಲ್ಲಿ ಇವಕ್ಕೆ ಕ್ರಮವಾಗಿ ಮಹಾಕ್ಷರ, ಸಮಾನಾಕ್ಷರ, ಮಧ್ಯಾಕ್ಷರ, ಅಂತರಾಕ್ಷರ ಮತ್ತು ಅಲ್ಪಾಕ್ಷರಗಳೆಂದು ಕರೆಯಲಾಗುತ್ತದೆ.

ತ್ರಿಪದಿ: ಮೂರುಸಾಲಿನ ಒಂದು ಪದ್ಯಜಾತಿ. ಕನ್ನಡದಲ್ಲಿ ಬಾದಾಮಿ ಶಾಸನದ ತ್ರಿಪದಿಗಳೇ ಅತ್ಯಂತ ಪ್ರಾಚೀನವಾದುದು. ಆದರೆ ಕನ್ನಡ ಲಿಖಿತ ಸಾಹಿತ್ಯ ದೊರೆಯುವುದಕ್ಕೆ ಮೊದಲೇ ಜನಪದ ಸಾಹಿತ್ಯದ ರೂಪದಲ್ಲಿ ತ್ರಿಪದಿಗಳು ಪ್ರಚಲಿತದಲ್ಲಿರುವಂತೆ ಕಾಣುತ್ತವೆ. ವಿದ್ಯಾವಂತರಲ್ಲದವರು, ಅಕ್ಷರ ಸಂಸ್ಕೃತಿ ಇಲ್ಲದವರು ಸಹ ತ್ರಿಪದಿಗಳನ್ನು ಕಟ್ಟಿ ಹಾಡಿ ನಲಿಯುತ್ತಿದ್ದರೆಂಬುದಕ್ಕೆ ಶಾಸನಗಳಲ್ಲಿ ಸಾಕ್ಷಿ ದೊರೆತಿದೆ. ಬೀಸುವಾಗ, ಕುಟ್ಟುವಾಗ, ಸಾಮಾನ್ಯ ಜನರು ತ್ರಿಪದಿಗಳನ್ನು ಹಾಡುತ್ತಿದ್ದರು. ಇವೆಲ್ಲ ಮನೋಲ್ಲಾಸಕ್ಕೆ ಅಗತ್ಯವಾದ ಕ್ರಿಯೆಗಳಾಗಿದ್ದವು.

ಏಳೆ: ಇದಕ್ಕೆ ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ನಿದರ್ಶನಗಳಿಲ್ಲ. ಜನಪದ ಸಾಹಿತ್ಯದಲ್ಲಿಯೂ ಹೊಸಗನ್ನಡ ಕಾವ್ಯದಲ್ಲಿಯೂ ಈಚೆಗೆ ವಿರಳವಾಗಿ ನಿದರ್ಶನಗಳು ದೊರೆಯುತ್ತವೆ. ನಾಗವರ್ಮ, ಜಯಕೀರ್ತಿ ಮುಂತಾದ ಲಾಕ್ಷಣಿಕರು ಈ ಬಗ್ಗೆ ವಿವರಿಸಿದ್ದಾರೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ʼನೇತಿ ನೇತಿ’- ವಾಸ್ತವ ಮತ್ತು ತೋರಿಕೆಯಲ್ಲಿ ಸತ್ಯದ ಹುಡುಕಾಟ

ಚೌಪದಿ: ಇದರಲ್ಲಿ ಅಂಶಗಣ ಚೌಪದಿ ಮತ್ತು ಮಾತ್ರಾಗಣ ಚೌಪದಿ ಎಂಬ ಎರಡು ವಿಧಗಳಿವೆ. ಇವರಡರ ಹುಟ್ಟು ಮತ್ತು ಸ್ವರೂಪ ಬೇರೆಯೆ ಆಗಿದೆ. ಕನ್ನಡದಲ್ಲಿ ಅಂಶಗಣ ಲಕ್ಷಣದ (ನಾಗವರ್ಮ ಮತ್ತು ಜಯಕೀರ್ತಿ ವಿವರಿಸಿದ) ಚೌಪದಿ ದೊರೆತಿರುವುದು ಒಂದು ಮಾತ್ರ. ಮಾತ್ರಾಗಣದ ಚೌಪದಿಯ ಲಕ್ಷಣಗಳನ್ನು ಪ್ರಾಚೀನ ಲಕ್ಷಣ ಗ್ರಂಥಗಳಲ್ಲಿ ಹೇಳಿಲ್ಲ. ನಾಗವರ್ಮನ ಗ್ರಂಥದಲ್ಲಿ ಹೇಳಿರುವ ಇಂಥ ಲಕ್ಷಣಗಳು ನಡುಗನ್ನಡ ಕಾಲದ ಕಾವ್ಯ, ದಾಸರ ಪದಗಳಲ್ಲಿ ಕಂಡುಬರುತ್ತವೆ.

ಛಂದೋವತಂಸ: ಇದಕ್ಕೆ ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಉದಾಹರಣೆಗಳಿಲ್ಲ. ನಡುಗನ್ನಡ ಕಾವ್ಯ ಮತ್ತು ದಾಸರ ಪದಗಳಲ್ಲಿ ಇದರ ಲಕ್ಷಣಗಳನ್ನು ಹೋಲುವ ಪದ್ಯಗಳಿವೆ.

ಅಕ್ಕರಿಕೆ: ಮೊದಲಿಗೆ ಅಂಶಗಣದಂತೆ ನಿರೂಪಿತವಾಗಿವೆ ಇದರ ಲಕ್ಷಣಗಳು. ನಂತರ ಮಾತ್ರಾಗಣವಾಗಿ ಪರಿಣಮಿಸಿದಂತೆ ತೋರುತ್ತವೆ.

ಮದನವತಿ: ನಾಗವರ್ಮ ಮತ್ತು ಜಯಕೀರ್ತಿಯ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಇದು ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಕಂಡುಬಂದಿಲ್ಲ.

ಗೀತಿಕೆ: ಇದು ಗೇಯಾತ್ಮಕವಾದದ್ದು. ಏಳೆ, ತ್ರಿಪದಿ, ಸಾಂಗತ್ಯ, ಗೀತಿಕೆ- ಇವೆಲ್ಲ ಒಂದೇ ಛಂದೋರೀತಿಯವಾದ್ದರಿಂದ ಇವಕ್ಕೆಲ್ಲ ಪರಸ್ಪರ ಸಂಬಂಧವಿದ್ದಂತೆ ತೋರುತ್ತದೆ. ಗೀತಿಕೆಯ ಮೊದಲ ಉಲ್ಲೇಖ ಕಂಡಿರುವುದು ಕವಿರಾಜ ಮಾರ್ಗದಲ್ಲಿ. ಉಳಿದಂತೆ ಪ್ರಾಚೀನ ಕಾವ್ಯಗಳಲ್ಲಿ ಗೀತಿಕೆ ಕಂಡುಬರುವುದಿಲ್ಲ.

ಷಟ್ಪದಿ: ಅಚ್ಚಕನ್ನಡದ ಮಟ್ಟುಗಳಲ್ಲಿ ಗಮನಾರ್ಹವಾದ ಮಟ್ಟಿದು. ಅಂಶಗಣದ ಒಂದು ಷಟ್ಪದಿ ಕಾಣಿಸಿಕೊಂಡಿದ್ದರೆ, ಮಾತ್ರಾ ಗಣದಲ್ಲಿ- ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಧಿನಿ ಮತ್ತು ವಾರ್ಧಕ ಎಂಬ ಆರು ಷಟ್ಪದಿಗಳು ಪ್ರಸಿದ್ಧವಾಗಿವೆ.

ಇದನ್ನೂ ಓದಿ: ಧೀಮಹಿ ಅಂಕಣ: ಪ್ರಾಚೀನ ಭಾರತದಲ್ಲಿ ಸಪ್ತರ್ಷಿಗಳ ನ್ಯಾಯಾಡಳಿತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Ragi Malt: ರಾಗಿ ಮಾಲ್ಟ್‌ ಕುಡಿದ ಸಿಎಂ ಸಿದ್ದರಾಮಯ್ಯ ವಿದ್ಯಾರ್ಥಿನಿಗೂ ಕುಡಿಸಿದರು!

Ragi Malt: ಈಗ ಅತ್ಯಂತ ಪೌಷ್ಟಿಕವಾದ ರಾಗಿ ಮಾಲ್ಟ್ ಕೊಡುವ ಕಾರ್ಯಕ್ರಮ ಶುರುವಾಗಿದೆ. ಇದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಮಕ್ಕಳಿಗೆ ರಕ್ತಹೀನತೆ ಬರಲೇಬಾರದು. ಪೌಷ್ಟಿಕಾಂಶ ಕೊರತೆ ಆಗಲೇಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

VISTARANEWS.COM


on

CM Siddaramaiah drank ragi malt and gave it to student
Koo

ಬೆಂಗಳೂರು: 55 ಲಕ್ಷ ಸರ್ಕಾರಿ ಶಾಲೆ ಮಕ್ಕಳ ಮಾನಸಿಕ ದೈಹಿಕ ಆರೋಗ್ಯಕ್ಕಾಗಿ ರಾಗಿ ಮಾಲ್ಟ್ (Ragi Malt) ವಿತರಣೆ ಮಾಡಲು ಶುರು ಮಾಡಿದ್ದೇವೆ. ಉತ್ತಮ ಪೌಷ್ಟಿಕಾಂಶ ಉತ್ತಮ ಶಿಕ್ಷಣಕ್ಕೆ ರಹದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು. ಈ ವೇಳೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸ್ವತಃ ಸಿದ್ದರಾಮಯ್ಯ ಅವರೇ ರಾಗಿ ಮಾಲ್ಟ್‌ ಕುಡಿಸಿದರು. ಬಳಿಕ ತಾವೂ ಸೇವಿಸಿದರು.

ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 2013ರಲ್ಲಿ ನಮ್ಮ ಸರ್ಕಾರ ಬಂದಾಗ ನಮ್ಮಲ್ಲಿ ಹಾಲು ಉತ್ಪಾದನೆ ಹೆಚ್ಚಾಯಿತು. ಈ ಹೆಚ್ಚುವರಿ ಹಾಲಿನ ಮಾರಾಟ ಮತ್ತು ಹಾಲಿನ ಉಪ ಉತ್ಪನ್ನಗಳನ್ನೂ ಹೆಚ್ಚುವರಿಯಾಗಿ ಉತ್ಪಾದನೆ ಮಾಡಲು ಸಾಧ್ಯವಿರಲಿಲ್ಲ. ಹೀಗಾಗಿ ಆ ಕೂಡಲೇ ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ ಐದು ದಿನ ಹಾಲು ಕೊಡುವ ಕ್ಷೀರಭಾಗ್ಯ ಯೋಜನೆಯನ್ನು ಆರಂಭಿಸಿದೆ. ಕೆಎಂಎಫ್‌ (KMF) ಮೂಲಕ ಮಕ್ಕಳಿಗೆ ಹಾಲು ಹೋಗುತ್ತದೆ. ಈ ಹಾಲಿನ ಹಣವನ್ನು ಸರ್ಕಾರ ಕೆಎಂಎಫ್‌ಗೆ ನೀಡುತ್ತದೆ. ಆ ಮೂಲಕ ಕೆಎಂಎಫ್‌ಗೆ ಹಾಲು ಸರಬರಾಜು ಮಾಡುವ ರೈತರಿಗೆ ನೆರವಾಗುವ ತೀರ್ಮಾನ ಮಾಡಿದೆವು. ಇದರ ಜತೆಗೆ ಕಳೆದ ಬಜೆಟ್‌ನಲ್ಲಿ ಶಾಲಾ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ಕೊಡುವ ಕಾರ್ಯಕ್ರಮ ಶುರು ಮಾಡಿದೆವು ಎಂದು ವಿವರಿಸಿದರು.

CM Siddaramaiah drank ragi malt and gave it to student

ಈಗ ಅತ್ಯಂತ ಪೌಷ್ಟಿಕವಾದ ರಾಗಿ ಮಾಲ್ಟ್ ಕೊಡುವ ಕಾರ್ಯಕ್ರಮ ಶುರುವಾಗಿದೆ. ಇದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಮಕ್ಕಳಿಗೆ ರಕ್ತಹೀನತೆ ಬರಲೇಬಾರದು. ಪೌಷ್ಟಿಕಾಂಶ ಕೊರತೆ ಆಗಲೇಬಾರದು. ಆಗ ಮಾತ್ರ ಮಕ್ಕಳು ಮಾನಸಿಕವಾಗಿ ಸದೃಢವಾಗಿ ಓದಿನಲ್ಲಿ ಹೆಚ್ಚು ಚುರುಕಾಗುತ್ತಾರೆ. ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳುತ್ತಾರೆ. ಶ್ರೀಮಂತರ ಮಕ್ಕಳ ರೀತಿ ಬಡವರು, ಶ್ರಮಿಕರು, ದಲಿತ, ಶೂದ್ರರ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯಬೇಕು. ಏಕೆಂದರೆ ಮಕ್ಕಳೇ ದೇಶದ, ಸಮಾಜದ ಭವಿಷ್ಯವನ್ನು ರೂಪಿಸುತ್ತಾರೆ ಎನ್ನುತ್ತಾ ಬುದ್ದ, ಬಸವ, ಅಂಬೇಡ್ಕರ್ ಮಾತುಗಳನ್ನು ಸಿಎಂ ಸಿದ್ದರಾಮಯ್ಯ ಉಲ್ಲೇಖಿಸಿದರು.

CM Siddaramaiah drank ragi malt and gave it to student

ಮೌಢ್ಯಮುಕ್ತ ಸಮಾಜ ನಿರ್ಮಾಣವಾಗಲಿ

ಶಿಕ್ಷಣದಿಂದ ಮಾತ್ರ ಸ್ವಾಭಿಮಾನ ಹೆಚ್ಚಾಗಲು ಸಾಧ್ಯ. ಜ್ಞಾನದ ಬೆಳವಣಿಗೆ ಶಿಕ್ಷಣದಿಂದ ಸಾಧ್ಯ. ಶಿಕ್ಷಣ ಅಂದರೆ ಕೇವಲ ಓದು, ಬರಹ ಕಲಿಸುವುದಲ್ಲ. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ವೈಚಾರಿಕತೆಯುಳ್ಳ ಶಿಕ್ಷಣ ಅಗತ್ಯ. ಉನ್ನತ ಶಿಕ್ಷಣ ಪಡೆದ ವೈದ್ಯರು, ಎಂಜಿನಿಯರ್‌ಗಳೂ ಈಗ ಮೌಢ್ಯಕ್ಕೆ ಜೋತು ಬಿದ್ದಿದ್ದಾರೆ. ಬಸವಾದಿ ಶರಣರು ಮೌಢ್ಯಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ವೈಚಾರಿಕ ಶಿಕ್ಷಣದಿಂದ ಮಾತ್ರ ಮೌಢ್ಯಮುಕ್ತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

2023-24ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಬಹುಪೌಷ್ಟಿಕಾಂಶವುಳ್ಳ ಸಾಯಿ ಶ್ಯೂರ್‌ರಾಗಿ ಮಾಲ್ಟ್ ಹೆಲ್ತ್ ಮಿಕ್ಸ್ ವಿತರಿಸುವ ಕಾರ್ಯಕ್ರಮದಲ್ಲಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

ಹಾಸನ

Hasana News : ಹಾಸ್ಟೆಲ್‌ನಲ್ಲಿ ಅನುಮಾನಾಸ್ಪದವಾಗಿ ವಿದ್ಯಾರ್ಥಿ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Hasana News: ಕಾಲೇಜಿನಿಂದ ಹಾಸ್ಟೆಲ್‌ಗೆ ಬಂದಿದ್ದ ವಿದ್ಯಾರ್ಥಿಯೊಬ್ಬ ( Student death ) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ವಿದ್ಯಾರ್ಥಿ ಸಾವಿಗೆ ವಾರ್ಡನ್ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

VISTARANEWS.COM


on

By

Student found dead in hostel Found hanging
ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ ಹಾಗೂ ವಿಕಾಶ್‌
Koo

ಹಾಸನ: ಹಾಸ್ಟೆಲ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ (Self harming) ಪತ್ತೆಯಾಗಿದೆ. ಹಾಸನ ನಗರದ ಉದಯಗಿರಿಯಲ್ಲಿರುವ (Hasana News) ಮಾಸ್ಟರ್ ಪಿಯು ಕಾಲೇಜಿನ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ವಿಕಾಶ್ (18) ಮೃತ ದುರ್ದೈವಿ.

ಚನ್ನರಾಯಪಟ್ಟಣ ತಾಲೂಕಿನ ಬೆಳಗುಲಿ ಗ್ರಾಮದ ಸುರೇಶ್ ಹಾಗೂ ಮಮತಾ ದಂಪತಿಯ ಪುತ್ರ ವಿಕಾಸ್ ಎಂಬಾತ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ಮಾಸ್ಟರ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿಕಾಶ್‌ ಅಲ್ಲಿನ ಹಾಸ್ಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಫೆ.22ರ ಗುರುವಾರ ಬೆಳಗ್ಗೆ ಕಾಲೇಜಿಗೆ ತೆರಳಿ ನಂತರ ಒಬ್ಬನೇ ಹಾಸ್ಟೆಲ್‌ಗೆ ವಾಪಸ್‌ ಆಗಿದ್ದ. ಬಳಿಕ ಹಾಸ್ಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ವಿಕಾಶ್‌ ಪೋಷಕರು ಸ್ಥಳಕ್ಕಾಗಮಿಸಿದ್ದು, ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಮಗನ ಸಾವಿಗೆ ಹಾಸ್ಟೆಲ್ ವಾರ್ಡನ್ ಕಾರಣ ಎಂದು ಆರೋಪಿಸಿದ್ದಾರೆ. ಆಡಳಿತ ಮಂಡಳಿಯ ಪ್ರಮುಖರು ಬರುವವರೆಗೂ ಮೃತದೇಹವನ್ನು ತೆಗೆಯಲು ಬಿಡಲ್ಲ ಎಂದು ಪಟ್ಟು ಹಿಡಿದರು.

ಇದನ್ನೂ ಓದಿ: Bengaluru News : ಬೆಂಗಳೂರಲ್ಲಿ ವೃದ್ಧ ದಂಪತಿ ಸೂಸೈಡ್‌

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮೃತನ ಸಂಬಂಧಿಕರು ಪೊಲೀಸರ ಜತೆಗೆ ವಾಗ್ವಾದ ನಡೆಸಿದರು. ಘಟನೆ ನಡೆದು ಮೂರು ಗಂಟೆಯಾದರೂ ಆಡಳಿತ ಮಂಡಳಿಯ ಯಾವ ಸಿಬ್ಬಂದಿಯು ಬಂದಿಲ್ಲ ಎಂದು ಕಿಡಿಕಾರಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಮತ್ತೊಂದು ಕಡೆ ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.

ಇನ್ನೂ ಇದೇ ವೇಳೆ ಆಡಳಿತ ಮಂಡಳಿಯ ಪರವಾಗಿ ಮಾತನಾಡಿದ ವ್ಯಕ್ತಿಯನ್ನು ಸುತ್ತುವರೆದು ಹಲ್ಲೆಗೆ ಯತ್ನಿಸಿದ ಘಟನೆಯು ನಡೆದಿದೆ. ಕೂಡಲೆ ಎಚ್ಚೆತ್ತ ಪೊಲೀಸರು ಆ ವ್ಯಕ್ತಿಯನ್ನು ಕರೆದೊಯ್ದಲು ಮುಂದಾಗಿದ್ದಾರೆ, ಈ ವೇಳೆ ಯುವಕನ ಕುಟುಂಬಸ್ಥರು ಪೊಲೀಸ್ ಜೀಪ್ ಸುತ್ತುವರೆದು ಆಕ್ರೋಶಿಸಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಪರಿಸ್ಥಿತಿಯನ್ನು ಪೊಲೀಸರು ತಿಳಿಗೊಳಿಸಿದರು. ಪೋಷಕರ‌ ಜತೆ ಮಾತನಾಡಿ ಮನವೊಲಿಸಿ ಮೃತದೇಹವನ್ನು ಹಾಸನದ ಹಿಮ್ಸ್‌ ಆಸ್ಪತ್ರೆಗೆ ರವಾನಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Nadageethe Row : ಕೆಟ್ಟ ಮೇಲೆ ಬುದ್ಧಿ; ವಿವಾದಿತ ನಾಡಗೀತೆ ಸುತ್ತೋಲೆ ಬದಲಿಸಿದ ಸರ್ಕಾರ!

Nadageethe Row : ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬ ಸುತ್ತೋಲೆಯನ್ನು ರಾಜ್ಯ ಸರ್ಕಾರ ಹಿಂದೆ ಪಡೆದಿದೆ. ಈಗ ಎಲ್ಲ ಶಾಲೆಗಳಿಗೂ ಕಡ್ಡಾಯ ಎಂಬ ಹಿಂದಿನ ಸೂಚನೆಯನ್ನೇ ಉಳಿಸಲಾಗಿದೆ.

VISTARANEWS.COM


on

Nadageethe row Amendment old and New
Koo

ಬೆಂಗಳೂರು: ಕುವೆಂಪು ವಿರಚಿತ ನಾಡಗೀತೆಯನ್ನು (Nadageethe Row) ಖಾಸಗಿ ಶಾಲೆಗಳಲ್ಲಿ ಹಾಡುವುದು ಕಡ್ಡಾಯವಲ್ಲ, ಐಚ್ಛಿಕ ಎಂಬ ಸುತ್ತೋಲೆ (Government Circular) ಹೊರಡಿಸಿ ಭಾರಿ ಎಡವಟ್ಟಿನ ಮೂಲಕ ಮುಖಭಂಗಕ್ಕೆ ಒಳಗಾಗಿದ್ದ ರಾಜ್ಯ ಸರ್ಕಾರ (Karnataka Government) ಇದೀಗ ತಿದ್ದುಪಡಿಗೇ ತಿದ್ದುಪಡಿ ಮಾಡಿ ಮುಖ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಹೊಸ ಸುತ್ತೋಲೆ ಪ್ರಕಾರ, ಖಾಸಗಿ ಶಾಲೆಗಳಲ್ಲೂ ನಾಡಗೀತೆ ಹಾಡುವುದು ಕಡ್ಡಾಯ (Nadageethe Compulsory in private schools also) ಎಂದು ಇದರಲ್ಲಿ ಹೇಳಲಾಗಿದೆ.

ನಾಡಗೀತೆಗೆ ಸಂಬಂಧಿಸಿ ಹೈಕೋರ್ಟ್‌ಗೆ ನೀಡಬೇಕಾಗಿದ್ದ ದಾಖಲೆಯಲ್ಲಿ ಸರ್ಕಾರ ಈ ಎಡವಟ್ಟು ಮಾಡಿಕೊಂಡಿತ್ತು ಎನ್ನಲಾಗಿದೆ. ಇದು ಪ್ರತಿಪಕ್ಷಗಳ ತೀವ್ರ ವಾಗ್ದಾಳಿ, ಗೇಲಿಗೆ ಒಳಗಾದ ಹಿನ್ನೆಲೆಯಲ್ಲಿ ಸರ್ಕಾರ ಆ ಸುತ್ತೋಲೆಯಲ್ಲೇ ಬದಲಾವಣೆ ಮಾಡಿದೆ.

ಹಿಂದಿನ ಸುತ್ತೋಲೆಯಲ್ಲಿ ಏನು ಹೇಳಲಾಗಿತ್ತು?

ಕುವೆಂಪು ಅವರ ‘ಜಯ ಭಾರತ ಜನನಿಯ ತನುಜಾತೆ’ (Jaya Bharatha Jananiya Thanujathe) ಕವನವನ್ನು ‘ನಾಡಗೀತೆ’ಯಾಗಿ ಘೋಷಿಸಿ ಈ ಹಿಂದೆ ಸರಕಾರ ಹೊರಡಿಸಿದ್ದ ಆದೇಶದಲ್ಲಿ ಒಂದು ತಿದ್ದುಪಡಿಯನ್ನು ಪ್ರಕಟಿಸಿ ಫೆ. 16ರಂದು ಹೊಸ ಆದೇಶವನ್ನು ಹೊರಟಿಸಲಾಗಿದೆ. ‘ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂಬುದು ಮೂಲ ಆದೇಶ. ಅದನ್ನು ‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

Nadageethe row
ಮೊದಲ ತಿದ್ದುಪಡಿ ಮಾಡಿದ ಸುತ್ತೋಲೆ.. ಇದರಲ್ಲಿ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ಎಂದಿದೆ.

ಇದನ್ನೂ ಓದಿ : Nadageethe Row : ಮಿಷನರಿಗಳಿಗೆ ಮಣಿದ ಸರ್ಕಾರ, ಡೋಂಗಿ ಕನ್ನಡ ಪ್ರೇಮಿ ಸಿದ್ದರಾಮಯ್ಯ; ಬಿಜೆಪಿ ಆಕ್ರೋಶ

ಬದಲಾದ ತಿ‌ದ್ದುಪಡಿ ಸುತ್ತೋಲೆಯಲ್ಲಿ ಏನಿದೆ?

ಸರ್ಕಾರ ಬುಧವಾರ ಮಧ್ಯಾಹ್ನದ ಹೊತ್ತಿಗೆ ತಿದ್ದುಪಡಿ ಸುತ್ತೋಲೆಯನ್ನು ಪ್ರಕಟಿಸಿದೆ. ಅಂದರೆ ಮೂಲದಲ್ಲಿ ನಾಡಗೀತೆಯನ್ನು ಎಲ್ಲರೂ ಹಾಡುವುದು ಕಡ್ಡಾಯ ಎಂಬ ಸೂಚನೆಯಲ್ಲಿ ಸಣ್ಣದಾಗಿ ಬದಲಾವಣೆ ಮಾಡಲಾಗಿತ್ತು. ಎಲ್ಲರಿಗೂ ಕಡ್ಡಾಯ ಎಂಬ ಸೂಚನೆಯಲ್ಲಿ ಖಾಸಗಿ ಶಾಲೆಗಳಿಗೆ ವಿನಾಯಿತಿ ನೀಡಲಾಗಿತ್ತು. ಈಗ ಪ್ರಕಟಿಸಿರುವ ತಿದ್ದುಪಡಿಯಲ್ಲಿ ಹಿಂದಿನ ಅಂಶವನ್ನೇ ಉಳಿಸಿಕೊಳ್ಳಲಾಗಿದೆ. ಅಂದರೆ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯ ಎಂಬ ಅಂಶವನ್ನು ಉಲ್ಲೇಖಿಸಿ ಅದೇ ಅಂಶ ಮುಂದುವರಿಯುತ್ತದೆ ಎಂದು ಎರಡು ಬಾರಿ ಹೇಳಲಾಗಿದೆ.

Nadageethe-row-Amendment-Change

ಇದು ತಿದ್ದುಪಡಿಗೇ ತಿದ್ದುಪಡಿ ಮಾಡಿ ಪ್ರಕಟಿಸಿದ ಹೊಸ ಸುತ್ತೋಲೆ

ಇದನ್ನೂ ಓದಿ: Nadageethe Row : ಇದು ಎಡವಟ್ಟು ಗಿರಾಕಿ ಸರ್ಕಾರ, ಇಲ್ಲಿ ಅಧಿಕಾರಿಗಳದ್ದೇ ದರ್ಬಾರ್‌; ಅಶ್ವತ್ಥನಾರಾಯಣ

ಬಿಜೆಪಿಯಿಂದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ತ್ವರಿತ ಕ್ರಮ

ರಾಜ್ಯ ಸರ್ಕಾರ ನಾಡಗೀತೆಯನ್ನು ಖಾಸಗಿ ಶಾಲೆಗಳಲ್ಲಿ ಹಾಡಬೇಕಾಗಿಲ್ಲ ಎಂಬ ಸರ್ಕಾರದ ಹೊಸ ಸುತ್ತೋಲೆಯನ್ನು ಮಿಷನರಿಗಳ ಒತ್ತಡಕ್ಕೆ ಮಣಿದ ಸರ್ಕಾರ ಎಂಬಂತೆ ಬಿಜೆಪಿ ಬಿಂಬಿಸಿತ್ತು. ಅದರ ಜತೆಗೆ ಪದೇಪದೆ ಸರ್ಕಾರ ಎಡವಟ್ಟುಗಳನ್ನು ಮಾಡುತ್ತಿದ್ದು, ಇದು ಅಧಿಕಾರಿಗಳ ದರ್ಬಾರಿನ ಸರ್ಕಾರ ಎಂದು ವ್ಯಾಖ್ಯಾನಿಸಿತ್ತು. ಹೀಗೆ ವಿದ್ಯಮಾನ ಬೇರೆ ಬೇರೆ ಸ್ವರೂಪಗಳನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತ್ವರಿತವಾಗಿ ಸ್ಪಂದಿಸಿ ತಿದ್ದುಪಡಿಯನ್ನು ತಿದ್ದುಪಡಿ ಮಾಡಿದೆ. ಆದರೆ, ಈ ಮೂಲ ತಿದ್ದುಪಡಿಯನ್ನು ಮಾಡಿದ್ದರ ಹಿಂದಿನ ಉದ್ದೇಶ ನಿಗೂಢವಾಗಿದೆ.

Continue Reading

ರಾಜಕೀಯ

Nadageethe row : ಇನ್ನೊಂದು ಎಡವಟ್ಟು; ಖಾಸಗಿ ಶಾಲೆಯಲ್ಲಿ ನಾಡಗೀತೆ ಹಾಡಬೇಕಿಲ್ಲ ಎಂದ ಸರ್ಕಾರ!

Nadageethe row : ನಾಡಗೀತೆಯನ್ನು ಖಾಸಗಿ ಶಾಲೆಗಳಲ್ಲಿ ಹಾಡುವುದು ಕಡ್ಡಾಯವಲ್ಲ ಎಂಬ ಆದೇಶ ಹೊರಡಿಸಿ ಸರ್ಕಾರ ಎಡವಟ್ಟು ಮಾಡಿಕೊಂಡಿದೆ. ಕೊನೆಗೆ ಅದು ಪ್ರಿಂಟ್‌ ಮಿಸ್ಟೇಕ್‌ ಎಂದು ಹೇಳಿ ತಪ್ಪಿಸಿಕೊಂಡಿದೆ.

VISTARANEWS.COM


on

Nadageethe row
Koo

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರ (Congress Government) ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ವಸತಿ ಶಾಲೆಗಳಲ್ಲಿ ಧಾರ್ಮಿಕ ಹಬ್ಬಗಳ (Religious Festivals) ಆಚರಣೆ ಮಾಡಬಾರದು ಎಂದು ಆದೇಶ ಹೊರಡಿಸಿ ಅದನ್ನು ಹಿಂದಕ್ಕೆ ಪಡೆದ ಸರ್ಕಾರ, ಬಳಿಕ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಕವಿತೆಯ ಬರಹದ ಸಾಲುಗಳನ್ನೇ ಬದಲಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿತ್ತು. ಬಳಿಕ ಯೂಟರ್ನ್‌ ಹೊಡೆದಿತ್ತು. ಇದೀಗ ಖಾಸಗಿ ಶಾಲೆಗಳಲ್ಲಿ (Private Schools) ನಾಡಗೀತೆ ಹಾಡುವುದು ಕಡ್ಡಾಯವಲ್ಲ (Nadageethe row) ಎಂಬ ಸುತ್ತೋಲೆ ಹೊರಡಿಸಿ ವಿವಾದಕ್ಕೆ ಒಳಗಾಗಿದೆ. ಫೆಬ್ರವರಿ 16ರಂದು ಹೊರಡಿಸಿರುವ ಆದೇಶ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದಂತೆಯೇ ಅದು ಕಣ್ತಪ್ಪಿನ ಆದೇಶ ಎಂದು ತಿಪ್ಪೆ ಸಾರಿಸಿದೆ!

ಸುತ್ತೋಲೆಯಲ್ಲಿ ಏನು ಹೇಳಲಾಗಿದೆ?

ಕುವೆಂಪು ಅವರ ‘ಜಯ ಭಾರತ ಜನನಿಯ ತನುಜಾತೆ’ (Jaya Bharatha Jananiya Thanujathe) ಕವನವನ್ನು ‘ನಾಡಗೀತೆ’ಯಾಗಿ ಘೋಷಿಸಿ ಈ ಹಿಂದೆ ಸರಕಾರ ಹೊರಡಿಸಿದ್ದ ಆದೇಶದಲ್ಲಿ ಒಂದು ತಿದ್ದುಪಡಿಯನ್ನು ಪ್ರಕಟಿಸಿ ಫೆ. 16ರಂದು ಹೊಸ ಆದೇಶವನ್ನು ಹೊರಟಿಸಲಾಗಿದೆ. ‘ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂಬುದು ಮೂಲ ಆದೇಶ. ಅದನ್ನು ‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಅಂದರೆ ‘ಎಲ್ಲಾ ಶಾಲೆಗಳಲ್ಲಿ ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆಯನ್ನು ಹಾಡುವುದು’ ಎಂಬುದರ ಬದಲಾಗಿ, ‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ’ ಎಂದು ಬದಲಾಯಿಸಲಾಗಿದೆ. ಇದರ ಅರ್ಥ ‌ ನಾಡಗೀತೆಯನ್ನು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಹಾಡಿದರೆ ಸಾಕು, ಖಾಸಗಿ ಶಾಲೆಗಳಲ್ಲಿ ಹಾಡಬೇಕಾಗಿಲ್ಲ ಎಂದು ಸರ್ಕಾರ ಹೇಳಿರುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ.

Nadageethe row song

ಇದನ್ನೂ ಓದಿ :Naadageethe row: ನಾಡಗೀತೆಯ ಬೆನ್ನುಹತ್ತಿದ ಹೈಕೋರ್ಟ್‌; ಕಟಕಟೆಗೆ ಬರ್ತಾರಾ ಗಾಯಕಿ ಬಿ.ಕೆ ಸುಮಿತ್ರಾ?

Naadageethe row

ಇದು ಪ್ರಿಂಟ್‌ ಮಿಸ್ಟೇಕ್‌ ಎಂದ ಸಚಿವ ಶಿವರಾಜ್‌ ತಂಗಡಗಿ

ಈ ಹೊಸ ಸುತ್ತೋಲೆ ವಿಚಾರ ಫೆ. 21ರಂದು ಬಹಿರಂಗಗೊಳ್ಳುತ್ತಿದ್ದಂತೆಯೇ ಓಡೋಡಿ ಬಂದು ಸ್ಪಷ್ಟೀಕರಣ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಸಚಿವ ಶಿವರಾಜ್ ತಂಗಡಗಿ ಅವರು, ಇದು ಪ್ರಿಂಟ್ ಮಿಸ್ಟೇಕ್‌ನಿಂದ ತಪ್ಪು ಆಗಿದೆ. ಇಂದೇ ಶೀಘ್ರವೇ ಪ್ರಿಂಟ್ ಮಿಸ್ಟೆಕ್ ಸರಿ ಮಾಡಲಾಗುವುದು ಎಂದರು. ಜತೆಗೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಎಂದರು.

ʻʻನಮಗೆ ಎಲ್ಲಾ ಶಾಲೆಗಳು ಒಂದೇ. ಆದೇಶ ಮಾಡಬೇಕಾದ್ರೆ ಸರ್ಕಾರಿ ಶಾಲೆ ಅನುದಾನಿತ‌ ಶಾಲೆ ಅಂತಾ ಹಾಕಿದ್ದಾರೆ. ಅದು ಎಲ್ಲಾ ಶಾಲೆಗಳು ಅಂತಾ ಹಾಕಿಸುತ್ತೇವೆ. ನಮ್ಮ ಸರ್ಕಾರ ಕನ್ನಡ ಬಗ್ಗೆ ಕಾಳಜಿ ಇಟ್ಟಿದೆ. ನಾವು ಬಹಳ ಸ್ಪಷ್ಟವಾಗಿ ಇದ್ದೇವೆ. ಆದೇಶ ಪ್ರತಿಯ ಸಾಧಕ ಭಾದಕ ಹೇಳಬೇಕು.ಮಾಧ್ಯಮ ಮಿತ್ರರಿಗೆ ಇದರ ಬಗ್ಗೆ ತಿಳಿಸಬೇಕು ಅಂತಾನೇ ಬಂದೆ. ಸಹಜವಾಗಿ ನೋಟ್ ಶೀಟ್ ಒಳಗಡೆ ಸಣ್ಣಪುಟ್ಟ ಸಮಸ್ಯೆ ಆಗಿದೆʼʼ ಎಂದು ತಿಪ್ಪೆ ಸಾರಿಸಿದರು.

Continue Reading
Advertisement
D. hiremath foundation
ಉತ್ತರ ಕನ್ನಡ2 mins ago

Arun Yogiraj : ರಾಮಲಲ್ಲಾ ವಿಗ್ರಹ ಕೆತ್ತಿದ ಅರುಣ್​ ಯೋಗಿರಾಜ್​ಗೆ ‘ಅಭಿನವ ಅಮರ ಶಿಲ್ಪಿ’ ಪುರಸ್ಕಾರ

For Registration Movie Telugu Dubbing Rights sold for huge amount
ಸಿನಿಮಾ9 mins ago

For Registration Movie: ರಿಲೀಸ್‌ಗೂ ಮೊದ್ಲೇ ’ಫಾರ್ ರಿಜಿಸ್ಟ್ರೇಷನ್’ಗೆ ಡಿಮ್ಯಾಂಡ್! ತೆಲುಗಿಗೂ ಹೊರಟ ಪೃಥ್ವಿ-ಮಿಲನಾ

Uttara Kannada ZP CEO eshwar Kandu visited Dayanilaya specially abled School in Kumta
ಉತ್ತರ ಕನ್ನಡ18 mins ago

Uttara Kannada News: ಸಾಧಿಸುವ ಛಲವಿದ್ದರೆ ಸಾಧನೆಯ ಹಾದಿ ಕಷ್ಟವಲ್ಲ: ಜಿ.ಪಂ ಸಿಇಒ ಈಶ್ವರ ಕಾಂದೂ

Chakravarthi sulibele spoke in Namo Bharat programme at Kudligi
ವಿಜಯನಗರ20 mins ago

Vijayanagara News: ಸರ್ವ ಶ್ರೇಷ್ಠ ಭಾರತಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು: ಚಕ್ರವರ್ತಿ ಸೂಲಿಬೆಲೆ

DY Chandrachud
ಪ್ರಮುಖ ಸುದ್ದಿ29 mins ago

C J Chandrachud : ಯೋಗ, ಸಸ್ಯಾಹಾರ; ಒತ್ತಡ ನಿವಾರಣೆ ತಂತ್ರ ವಿವರಿಸಿದ ಸುಪ್ರಿಂ ಕೋರ್ಟ್​​ ಮುಖ್ಯ​ ನ್ಯಾಯಮೂರ್ತಿ

Belagavi Airport recorded the lowest minimum temperature and Dry weather likely to prevail
ಮಳೆ36 mins ago

Karnataka Weather : ಬೆಂಗಳೂರಲ್ಲಿ ಸೂರ್ಯ ಮರೆಯಾದರೂ ಏರಲಿದೆ ತಾಪಮಾನ

Kannada Name Board Shivaraj Tangadagi
ಬೆಂಗಳೂರು36 mins ago

Kannada Name Board : ಕನ್ನಡ ನಾಮಫಲಕ ನಿಯಮ ಜಾರಿ ಆಗ್ಲೇಬೇಕು; ಸಚಿವ ತಂಗಡಗಿ ಆದೇಶ

Karnataka Budget Session 2024 BBMP passes Property Tax Amendment Bill 50 percent reduction in penalty
ಕರ್ನಾಟಕ37 mins ago

Karnataka Budget Session 2024: ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕ ಅಂಗೀಕಾರ; ದಂಡದ ಪ್ರಮಾಣ ಶೇ.50 ಕಡಿತ

Maharashtra has marathi signboard act but it Opposing Kannada Signboard Policy
ಕರ್ನಾಟಕ49 mins ago

ನಾಮಫಲಕ ವಿಚಾರದಲ್ಲಿ ಕರ್ನಾಟಕಕ್ಕೆ ಬುದ್ಧಿ ಹೇಳುವ ಮಹಾರಾಷ್ಟ್ರದಲ್ಲಿ ಯಾವ ನಿಯಮ ಇದೆ ನೋಡಿ!

Karnataka Budget Session 2024 E khata mandatory for property registration in cities
ರಾಜಕೀಯ1 hour ago

Karnataka Budget Session 2024: ಇನ್ಮುಂದೆ ನಗರಗಳ ಆಸ್ತಿ ನೋಂದಣಿಗೆ ಇ-ಖಾತೆ ಕಡ್ಡಾಯ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Catton Candy contain cancer Will there be a ban in Karnataka
ಬೆಂಗಳೂರು2 hours ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ6 hours ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ3 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ4 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ5 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ5 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

read your daily horoscope predictions for february 17 2024
ಭವಿಷ್ಯ6 days ago

Dina Bhavishya : ಈ ರಾಶಿಯವರು ಸೀಕ್ರೆಟ್‌ ವಿಷ್ಯವನ್ನು ರಿವೀಲ್‌ ಮಾಡಿದ್ರೆ ಅಪಾಯ ಗ್ಯಾರಂಟಿ!

Karnataka Budget Session 2024 siddaramaiah use cinema Lines
ಸಿನಿಮಾ6 days ago

Karnataka Budget Session 2024: ಡಾಲಿ ಧನಂಜಯ್‌ ಬರೆದ ಸಾಲುಗಳು ಬಜೆಟ್‌ನಲ್ಲಿ ಹೈಲೈಟ್‌!

ಟ್ರೆಂಡಿಂಗ್‌