Best Foods to boost memory: ವಿದ್ಯಾರ್ಥಿಗಳ ನೆನಪಿನ ಶಕ್ತಿ ಹೆಚ್ಚಿಸುವ ಆಹಾರಗಳಿವು… - Vistara News

ಶಿಕ್ಷಣ

Best Foods to boost memory: ವಿದ್ಯಾರ್ಥಿಗಳ ನೆನಪಿನ ಶಕ್ತಿ ಹೆಚ್ಚಿಸುವ ಆಹಾರಗಳಿವು…

ಕೆಲವು ಆಹಾರಗಳು ಸ್ಮರಣಶಕ್ತಿಯನ್ನು ಉತ್ತೇಜಿಸಬಲ್ಲವು. ಮಾತ್ರವಲ್ಲ, ಒಟ್ಟಾರೆಯಾಗಿ ಮೆದುಳಿನ (Best Foods to boost brain and memory) ಸಾಮರ್ಥ್ಯವನ್ನು ಹೆಚ್ಚಿಸಬಲ್ಲವು. ಯೋಚನೆ, ಯೋಜನೆ, ಸೃಜನಶೀಲತೆ ಮುಂತಾದ ಬಹಳಷ್ಟನ್ನು ಪ್ರಚೋದಿಸಬಲ್ಲವು. ಹಾಗಾದರೆ ಎಂಥಾ ಆಹಾರಗಳು ವಿದ್ಯಾರ್ಥಿಗಳಿಗೆ ಅನುಕೂಲವಾದೀತು?

VISTARANEWS.COM


on

Best Foods To students
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೇಹದಲ್ಲಿ ಸ್ವಲ್ಪವೇ ಜಾಗವನ್ನು ಆಕ್ರಮಿಸಿಕೊಳ್ಳುವ ಮೆದುಳು ಮಾಡುವ ಕೆಲಸಗಳು ಮಾತ್ರ ವಿರಾಟ್‌ ಸ್ವರೂಪದ್ದು. ಇಂಥ ಮೆದುಳಿಗೆ ಸೂಕ್ತವಾದ ಗ್ರಾಸ ನೀಡಬೇಡವೇ? ಆಗ ಮಾತ್ರ ದೇಹ ಮತ್ತು ಮನಸ್ಸು ಚೈತನ್ಯಪೂರ್ಣವಾಗಿರುತ್ತದೆ. ಓದುವ ಮಕ್ಕಳಿಗೆ (Education Guide) ನೆನಪಿನ ಶಕ್ತಿ ಸರಿಯಾಗಿ ಬೆಳೆಯುವಲ್ಲಿಂದ ಹಿಡಿದು ವೃದ್ಧರ ನೆನಪು ಉಳಿಯುವಲ್ಲಿವರೆಗೆ ಮೆದುಳಿನ ಕ್ಷಮತೆ ಚೆನ್ನಾಗಿರಬೇಕು. ಹಾಗಾದರೆ ನೆನಪು ಚುರುಕು ಮಾಡುವ ಆಹಾರಗಳೂ ( Best Foods to boost brain and memory) ಉಂಟೇ ಎಂಬುದೀಗ ಪ್ರಶ್ನೆ.

ಉತ್ತರವೆಂದರೆ- ಹೌದು! ಕೆಲವು ಆಹಾರಗಳು ಸ್ಮರಣಶಕ್ತಿಯನ್ನು ಉತ್ತೇಜಿಸಬಲ್ಲವು. ಮಾತ್ರವಲ್ಲ, ಒಟ್ಟಾರೆಯಾಗಿ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸಬಲ್ಲವು. ಯೋಚನೆ, ಯೋಜನೆ, ಸೃಜನಶೀಲತೆ ಮುಂತಾದ ಬಹಳಷ್ಟನ್ನು ಪ್ರಚೋದಿಸಬಲ್ಲವು. ಹಾಗಾದರೆ ಎಂಥಾ ಆಹಾರಗಳು ವಿದ್ಯಾರ್ಥಿಗಳಿಗೆ ಅನುಕೂಲವಾದೀತು? ಅವರ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸೀತು? ಅಂಥ ಕೆಲವು ಆಹಾರಗಳು ಇಲ್ಲಿವೆ-

ಮೀನು: ಸಾಲ್ಮನ್‌ (ವಾಮೀನು), ಸೋಧಿ, ಭೂತಾಯಿ, ಗೆದರೆ, ಸಿಹಿ ನೀರಿನ ಟ್ರೌಟ್‌ಗಳು ಮುಂತಾದ ಮೀನುಗಳಲ್ಲಿ ಒಮೇಗಾ 3 ಫ್ಯಾಟಿ ಆಮ್ಲ ಹೇರಳವಾಗಿದೆ. ಮೆದುಳಿನ ಅರ್ಧಕ್ಕರ್ಧ ಭಾಗ ಮಾಡಿರುವುದು ಕೊಬ್ಬಿನಿಂದ. ಈ ಕೊಬ್ಬಿನ ಹೆಚ್ಚಿನ ಭಾಗ ಒಮೇಗಾ ೩ ಫ್ಯಾಟ್‌ ಕೋಶಗಳಿಂದ ಆವರಿಸಿದೆ. ಹಾಗಾಗಿ ಮೆದುಳಿನ ಯೋಗಕ್ಷೇಮ ಚೆನ್ನಾಗಿರಬೇಕೆಂದರೆ ಒಮೇಗಾ 3 ಸೇವನೆ ಕಡ್ಡಾಯ.

ಬ್ಲೂಬೆರ್ರಿ: ಆಂಥೋಸಯನಿನ್‌ಗಳಿಂದ ತುಂಬಿರುವ ಈ ಕಡುನೀಲಿ ಹಣ್ಣುಗಳು ದೇಹದಲ್ಲಿ ಉರಿಯೂತ ನಿವಾರಿಸುತ್ತವೆ. ಉರಿಯೂತ ಮತ್ತು ಆಕ್ಸಿಡೇಶನ್‌ ಹೆಚ್ಚಾಗುವುದರಿಂದ ಮೆದುಳಿಗೆ ಬೇಗ ವಯಸ್ಸಾಗುತ್ತದೆ. ಬ್ಲೂಬೆರ್ರಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮೆದುಳಿಗೆ ವಯಸ್ಸಾಗುವುದನ್ನು ಮುಂದೂಡಿ, ಮೆದುಳಿನ ಕೋಶಗಳ ನಡುವಿನ ಸಂವಹನವನ್ನು ಸುಧಾರಿಸುತ್ತವೆ.

ಇದನ್ನೂ ಓದಿ: Education Guide : ಬಹುಮುಖಿ ಉದ್ಯೋಗ ಖಾತ್ರಿಯ ಡಿಪ್ಲೊಮಾ ಕೋರ್ಸ್‌

Education Guide

ಅರಿಶಿನ: ಇದರಲ್ಲಿರುವ ಕರ್ಕುಮಿನ್‌ ಎಂಬ ಅಂಶ ನಿಜಕ್ಕೂ ಮಾಯಾಮದ್ದಿನಂತೆ ಕೆಲಸ ಮಾಡಬಲ್ಲದು. ಮೆದುಳಿಗೆ ಆವರಿಸುವ ಅಮೈಲಾಯ್ಡ್ ಪೊರೆಯನ್ನು ನಿವಾರಿಸುವಲ್ಲಿ ಅರಿಶಿನದ ಸಾಮರ್ಥ್ಯ ಬಹುದೊಡ್ಡದು. ಅಲ್‌ಜೈಮರ್ಸ್‌ ಇರುವ ರೋಗಿಗಳು ಸಹ ಕರ್ಕುಮಿನ್‌ ಪೂರಕ ಮಾತ್ರೆಗಳಿಗೆ ಉತ್ತಮ ಸ್ಪಂದನೆ ತೋರಿದ್ದಾರೆ. ದೇಹದಲ್ಲಿ ಸೆರೊಟೋನಿನ್‌ ಮತ್ತು ಡೋಪಮಿನ್‌ ಚೋದಕಗಳ ಮಟ್ಟವನ್ನು ಹೆಚ್ಚಿನ, ಖಿನ್ನತೆ ಆವರಿಸದಂತೆ ತಡೆಯುತ್ತದೆ. ಮಾತ್ರವಲ್ಲ, ಮೆದುಳಿನಲ್ಲಿ ಹೊಸ ಕೋಶಗಳ ಬೆಳವಣಿಯನ್ನು ಸಹ ಅರಿಶಿನದಲ್ಲಿರುವ ಕರ್ಕುಮಿನ್‌ ಉತ್ತೇಜಿಸುತ್ತದೆ.

ಬ್ರೊಕೊಲಿ: ವಿಟಮಿನ್‌ ಕೆ ಭರಪೂರ ಇರುವ ಈ ಹಸಿರು ತರಕಾರಿ ಮೆದುಳಿನ ಕ್ಷಮತೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಒಂದು ಕಪ್‌ ಬೇಯಿಸಿದ ಬ್ರೊಕೊಲಿಯಲ್ಲಿ, ಇಡೀ ದಿನಕ್ಕೆ ಸಾಕಾಗುವಷ್ಟು ಕೆ ಜೀವಸತ್ವ ದೊರೆಯುತ್ತದೆ. ಇದರಲ್ಲಿರುವ ಒಂದು ವಿಶಿಷ್ಟವಾದ ಲಿಪಿಡ್‌ ಮೆದುಳಿನ ಕೋಶಗಳ ಬೆಳವಣಿಗೆಯನ್ನು ಪ್ರಚೋದಿಸುತ್ತದೆ. ಇದಲ್ಲದೆ, ಬ್ರೊಕೊಲಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮೆದುಳಿಗೆ ಹಾನಿಯಾಗದಂತೆ ರಕ್ಷಿಸಬಲ್ಲವು

ಕುಂಬಳಕಾಯಿ ಬೀಜ: ಇದರಲ್ಲಿರುವ ಮೆಗ್ನಿಶಿಯಂ, ಜಿಂಕ್‌, ಕಬ್ಬಿಣ ಮತ್ತು ತಾವ್ರದ ಸತ್ವಗಳು ಮೆದುಳಿನ ರಕ್ಷಕರಂತೆ ಕೆಲಸ ಮಾಡುತ್ತವೆ. ಜಿಂಕ್‌ ಕೊರತೆಯಾದರೆ, ಅಲ್‌ಜೈಮರ್ಸ್‌, ಪಾರ್ಕಿನ್ಸನ್‌ ಸೇರಿದಂತೆ ಗಂಭೀರವಾದ ನರರೋಗಗಳು ಅಮರಿಕೊಳ್ಳುತ್ತವೆ. ಕಲಿಕೆ ಮತ್ತು ನೆನಪಿನ ವೃದ್ಧಿಗೆ ಮೆಗ್ನೀಶಿಯಂ ಬೇಕೆಬೇಕು. ತಾಮ್ರ ಮತ್ತು ಕಬ್ಬಿಣದ ಕೊರತೆಗಳೂ ಸಹ ನೇರವಾಗಿ ಮೆದುಳಿನ ಕಾರ್ಯಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಈ ಎಲ್ಲಾ ಖನಿಜಗಳು ಹೇರಳವಾಗಿ ಕುಂಬಳ ಬೀಜದಲ್ಲಿ ದೊರೆಯುವುದರಿಂದ, ಒಂದಿಷ್ಟು ಬಾಯಾಡುವುದು ಒಳ್ಳೆಯದು.

Education Guide

ಕಪ್ಪು ಚಾಕಲೇಟ್:‌ ಫ್ಲವನಾಯ್ಡ್‌, ಕೆಫೇನ್‌ ಮತ್ತು ಉತ್ಕರ್ಷಣ ನಿರೋಧಕಗಳಿಂಬ ತುಂಬಿದ ಕಪ್ಪು ಚಾಕಲೇಟ್‌ ಹೆಚ್ಚಿನ ಜನರಿಗೆ ಅಂಥ ಇಷ್ಟವಾಗುವುದಿಲ್ಲ. ಚಾಕಲೇಟ್‌ ಹೌದಾದರೂ ರುಚಿ ಸ್ವಲ್ಪ ಕಹಿ. ಹಾಲು ಬೆರೆಸಿದ ಚಾಕಲೇಟ್‌ಗಳಿಗಿಂತ ಅಧಿಕ ಪ್ರಮಾಣದಲ್ಲಿ ಡಾರ್ಕ್‌ ಚಾಕಲೇಟ್‌ಗಳು ಕೊಕೊ ಹೊಂದಿರುತ್ತವೆ. ಹಾಗಾಗಿ ಇದರಲ್ಲಿ ಫ್ಲವನಾಯ್ಡ್‌ಗಳೂ ಸಾಂದ್ರವಾಗಿರುತ್ತವೆ. ಕಲಿಕೆ ಮತ್ತು ನೆನಪನ್ನು ಹೆಚ್ಚಿಸುವ ಸಾಮರ್ಥ್ಯ ಇವುಗಳಿಗಿದೆ.

ಬೀಜಗಳು: ವಾಲ್‌ನಟ್‌, ಬಾದಾಮಿಯಂಥ ಬೀಜಗಳಲ್ಲಿ ಒಮೇಗಾ 3 ಫ್ಯಾಟಿ ಆಮ್ಲಗಳಿರುವುದರಿಂದ ಮೆದುಳಿಗೆ ಪೂರಕವಾಗಿ ಕೆಲಸ ಮಾಡುತ್ತವೆ. ಇದಲ್ಲದೆ, ವಿಟಮಿನ್‌ ಇ, ಆರೋಗ್ಯಕರ ಕೊಬ್ಬು ಮತ್ತು ಉತ್ಕರ್ಷಣ ನಿರೋಧಕಗಳು ವಿಫುಲವಾಗಿ ಇರುವುದರಿಂದ, ನೆನಪನ್ನು ಹೆಚ್ಚಿಸಿ, ಮೆದುಳಿಗೆ ಹಾನಿಯಾಗದಂತೆ ಕಾಪಾಡುತ್ತವೆ.

ಇದನ್ನೂ ಓದಿ: Education Guide: ಕಾಲೇಜು ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕಗಳಿವು

ಇದಲ್ಲದೆ, ವಿಟಮಿನ್‌ ಬಿ6, ಬಿ12, ಫೋಲೇಟ್‌ ಮತ್ತು ಕೋಲಿನ್‌ ಇರುವ ಮೊಟ್ಟೆ, ವಿಟಮಿನ್‌ ಸಿ ಸಾಂದ್ರವಾಗಿರುವ ಕಿತ್ತಳೆ ಹಣ್ಣು, ಕಾಫಿ, ಗ್ರೀನ್‌ ಟೀ ಮುಂತಾದ ಹಲವಾರು ಆಹಾರಗಳು ನೆನಪಿನ ಶಕ್ತಿ ಹೆಚ್ಚಳಕ್ಕೆ, ಮೆದುಳನ್ನು ಸಶಕ್ತವಾಗಿ ಇರಿಸುವುದಕ್ಕೆ ಸಹಕಾರ ನೀಡುವಂಥವು. ಮುಖ್ಯವಾಗಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿರುವ ಆಹಾರಗಳು ಮೆದುಳನ್ನು ಘಾಸಿಗೊಳ್ಳುವುದರಿಂದ ಕಾಪಾಡಬಲ್ಲವು. ಸ್ಮರಣಶಕ್ತಿ ವೃದ್ಧಿಸಿ, ಏಕಾಗ್ರತೆ ಮತ್ತು ಕಲಿಕೆಯನ್ನು ಹೆಚ್ಚಿಸುವ ಉದ್ದೇಶವಿದ್ದರೆ ಈ ಆಹಾರಗಳು ಪೂರಕ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉತ್ತರ ಕನ್ನಡ

Uttara Kannada News: ವಿಶ್ವದರ್ಶನ ಕಾಲೇಜಿನಲ್ಲಿ ಪ್ರಥಮ ಪಿಯು ತರಗತಿ ಪ್ರಾರಂಭೋತ್ಸವ

Uttara Kannada News: ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಕಾಲೇಜಿನಲ್ಲಿ ಪ್ರಥಮ ಪಿಯು ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು.

VISTARANEWS.COM


on

First PU Class Commencement Programme at Vishwadarshana College
Koo

ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಕಾಲೇಜಿನಲ್ಲಿ ಪ್ರಥಮ ಪಿಯು ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮ ಸೋಮವಾರ (Uttara Kannada News) ನಡೆಯಿತು.

ವಿಶ್ವದರ್ಶನ ಶಿಕ್ಷಣ ಸಮೂಹದ ಸಿಇಒ ಅಜಯ್ ಭಾರತೀಯ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಮಾಡುವ ಕಾರ್ಯ ಸ್ವಹಿತದ ಜತೆಗೆ ದೇಶದ ಹಿತವನ್ನು ಸಾಧಿಸುವಂತಿರಬೇಕು. ಶಿಕ್ಷಣ ನೀಡಬೇಕಾದ, ಪಡೆಯಬೇಕಾದ ಎಲ್ಲರೂ ರಾಷ್ಟ್ರದ ಘನತೆ, ಗೌರವವನ್ನು ಕಾಪಾಡುವ ಆಲೋಚನೆಯನ್ನು ಸದಾ ಮಾಡುತ್ತಿರಬೇಕು ಎಂದು ಹೇಳಿದರು.

ಇದನ್ನೂ ಓದಿ: Book Release: ಬೆಂಗಳೂರಿನಲ್ಲಿ ಜೂ. 5ರಂದು ಗ್ರಂಥ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ

ಕಾಲೇಜಿನ ಪ್ರಾಚಾರ್ಯ ಡಿ.ಕೆ. ಗಾಂವ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗಾಗಿ ಸಂಪತ್ತು ಮಾಡುವುದಕ್ಕಿಂತ ಮಕ್ಕಳನ್ನೇ ಸಂಪತ್ತಾಗಿಸುವುದು ಸೂಕ್ತ. ಜ್ಞಾನ ಸಂಪತ್ತಿನಿಂದ ಮಕ್ಕಳನ್ನು ಶ್ರೀಮಂತರಾಗಿಸುವ ಮಾರ್ಗವೇ ಶ್ರೇಷ್ಠವಾದದ್ದು ಆ ಕಾರ್ಯವನ್ನು ವಿಶ್ವದರ್ಶನ ಮಾಡುತ್ತಿದೆ‌ ಎಂದರು.

ಅದಕ್ಕಾಗಿ ನಮ್ಮ ಪಿಯು ಕಾಲೇಜು ಉತ್ತಮ ಮೂಲಸೌಕರ್ಯ ಮತ್ತು ನುರಿತ ಉಪನ್ಯಾಸಕ ವರ್ಗವನ್ನು ಹೊಂದಿದೆ ಎಂದು ಹೇಳಿದರಲ್ಲದೇ, ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಕಾಲೇಜಿನ ಉಪನ್ಯಾಸಕ ವರ್ಗವನ್ನು ಪರಿಚಯಿಸಿ, ಕಾಲೇಜಿನ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.

ಕಾಲೇಜಿನ ಮಾಜಿ ವಿದ್ಯಾರ್ಥಿಗಳಾದ ಅಪೂರ್ವ ಹಾಗೂ ಶ್ರೀಗೌರಿ ಭಟ್, ಕಾಲೇಜಿನಲ್ಲಿ ತಮ್ಮ ಅನುಭವ ಜೀವನಪೂರ್ತಿ ಸ್ಮರಿಸುವಂತದ್ದು ಎಂದು ಅನಿಸಿಕೆ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 42 ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ, ಗೌರವಿಸಲಾಯಿತು.

ಇದನ್ನೂ ಓದಿ: Samsung: ಸ್ಯಾಮ್‌ಸಂಗ್‌ನ ʼಬಿಗ್‌ ಟಿವಿ ಡೇಸ್‌ʼ ಸೇಲ್‌; ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್‌!

ಶ್ರಾವ್ಯ ಪ್ರಾರ್ಥಿಸಿದಳು. ಉಪನ್ಯಾಸಕ ಗುರುರಾಜ್ ಭಟ್ ನಿರ್ವಹಿಸಿದರು. ಉಪ ಪ್ರಾಂಶುಪಾಲ ನಾಗರಾಜ ಹೆಗಡೆ ವಂದಿಸಿದರು.

Continue Reading

ಉದ್ಯೋಗ

Job News: ಗುಡ್‌ನ್ಯೂಸ್‌; 35 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರದಿಂದ ಅನುಮತಿ

Job News: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 35 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಪ್ರಸ್ತುತ ಖಾಲಿ ಇರುವ 33,863 ಹುದ್ದೆಗಳಿಗೆ ಮೊದಲ ಹಂತದಲ್ಲಿ ಜಿಲ್ಲಾವಾರು ಮತ್ತು ತಾಲೂಕುವಾರು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

VISTARANEWS.COM


on

Job News
Koo

ಬೆಂಗಳೂರು: ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 35 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಶೀಘ್ರದಲ್ಲಿಯೇ ಈ ಕುರಿತಾದ ಅಧಿಸೂಚನೆ ಹೊರ ಬೀಳಲಿದೆ (Job News).

ಶಾಲಾ ಶಿಕ್ಷಣ ಇಲಾಖೆ ಈ ಕುರಿತು ಜೂನ್‌ 3ರಂದು ಪ್ರಕಟಣೆ ಹೊರಡಿಸಿದೆ. 2024-25ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅನೇಕ ಬೋಧಕ ಹುದ್ದೆಗಳು ಖಾಲಿ ಇವೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ, ಖಾಯಂ ಶಿಕ್ಷಕರ ನೇಮಕವಾಗುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ-ಇದರಲ್ಲಿ ಯಾವುದು ಮೊದಲೊ ಅಲ್ಲಿಯವರೆಗೆ ಶಿಕ್ಷಕರ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಒಟ್ಟು 35 ಸಾವಿರ ಅತಿಥಿ ಶಿಕ್ಷಕರನ್ನು ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳಲು ಸರ್ಕಾರದ ಪತ್ರದಲ್ಲಿ ಅನುಮತಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಕಟಣೆಯಲ್ಲಿ ಏನಿದೆ?

ಅತಿಥಿ ಶಿಕ್ಷಕರ ಹಾಜರಾತಿಯನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗುವುದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನ 10 ಸಾವಿರ ರೂ. ನಿಗದಿಪಡಿಸಲಾಗಿದೆ ಎಂದು ತಿಳಿಸಲಾಗಿದೆ. ಅಲ್ಲದೆ, ಅತಿಥಿ ಶಿಕ್ಷಕರು ನೇಮಕಗೊಂಡ ಸ್ಥಳಕ್ಕೆ ಮುಂದೆ ಖಾಯಂ ಶಿಕ್ಷಕರು ನಿಯುಕ್ತಿಗೊಂಡರೆ ಅತಿಥಿ ಶಿಕ್ಷಕರನ್ನು ಕರ್ತವ್ಯದಿಂದ ಕೈ ಬಿಟ್ಟು, ತಾಲೂಕಿನಲ್ಲಿ ಖಾಲಿ ಇರುವ ಇತರ ಕಡೆಗೆ ನೇಮಕ ಮಾಡಲಾಗುವುದು ಎಂದು ಹೇಳಲಾಗಿದೆ.

ಪ್ರಸ್ತುತ ಖಾಲಿ ಇರುವ 33,863 ಹುದ್ದೆಗಳಿಗೆ ಮೊದಲ ಹಂತದಲ್ಲಿ ಜಿಲ್ಲಾವಾರು ಮತ್ತು ತಾಲೂಕುವಾರು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ತಾಲೂಕುವಾರು ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಯ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ.

ಉದ್ಯೋಗ ಹುಡುಕಾಟದಲ್ಲಿರುವ ಪದವೀಧರರಿಗೆ ಲಿಂಕ್ಡ್‌ಇನ್‌ ಸಲಹೆಗಳು ಪ್ರಕಟ

ವಿಶ್ವದ ಅತಿದೊಡ್ಡ ಪ್ರೊಫೆಷನಲ್ ನೆಟ್‌ವರ್ಕ್ ಆಗಿರುವ ಲಿಂಕ್ಡ್‌ಇನ್ (LinkedIn) ಉದ್ಯೋಗ ಹುಡುಕಾಟದಲ್ಲಿರುವ ಇತ್ತೀಚಿನ ಪದವೀಧರರಿಗಾಗಿ ಭಾರತದಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಹುದ್ದೆಗಳು, ಕೈಗಾರಿಕೆಗಳು, ಕೆಲಸಗಳು ಮತ್ತು ಕೌಶಲ್ಯಗಳ ಕುರಿತು ಹೊಸ ಮಾಹಿತಿಯನ್ನು ಬಹಿರಂಗಪಡಿಸಿದೆ. ಪ್ರಸ್ತುತ ಸಂದರ್ಭದಲ್ಲಿ ಆರಂಭಿಕ ಹಂತದ ಹುದ್ದೆಗಳಿಗೆ ಡಿಸೈನ್ (ವಿನ್ಯಾಸ), ಅನಾಲಿಟಿಕ್ಸ್ (ವಿಶ್ಲೇಷಣೆ) ಮತ್ತು ಪ್ರೋಗ್ರಾಮಿಂಗ್‌ಗಳು ಅತ್ಯುನ್ನತ ಕೌಶಲ್ಯಗಳು ಎಂದು ಲಿಂಕ್ಡ್‌ಇನ್ ತಿಳಿಸಿದೆ.

2024ರಲ್ಲಿ ಕಂಪನಿಗಳು ಹೊಂದಿಕೊಳ್ಳುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದನ್ನು ಮುಂದುವರೆಸುತ್ತಿವೆ. ಹೆಚ್ಚು ಹೊಂದಿಕೊಳ್ಳುವ ಕೆಲಸದ ವ್ಯವಸ್ಥೆಗಳ ಕಡೆಗೆ ಗಮನ ಕೊಡುವ ಟ್ರೆಂಡ್ ಈಗ ನಡೆಯುತ್ತಿದೆ. ಆನ್-ಸೈಟ್ ಹುದ್ದೆಗಳು 15% ರಷ್ಟು ಕಡಿಮೆಯಾಗುತ್ತಿವೆ ಮತ್ತು ವರ್ಷದಿಂದ ವರ್ಷಕ್ಕೆ ಆರಂಭಿಕ ಹಂತದ ಹುದ್ದೆಗಳಿಗೆ 52% ರಷ್ಟು ಹೈಬ್ರಿಡ್ ಸ್ಥಾನಗಳು ಹೆಚ್ಚಾಗುತ್ತಿವೆ. ಈ ಬದಲಾವಣೆಯು ಹೊಸ ಪದವೀಧರರಿಗೆ ಆಯ್ಕೆ ಮಾಡಲು ಮತ್ತು ವೃತ್ತಿ ಜೀವನ ಮುಂದುವರಿಸಲು ವಿಸ್ತಾರವಾದ ಕೆಲಸದ ಅವಕಾಶಗಳನ್ನು ಒದಗಿಸುತ್ತದೆ. ಲಿಂಕ್ಡ್‌ಇನ್‌ನ ಕರಿಯರ್ ಸ್ಟಾರ್ಟರ್ 2024 ವರದಿಯ ಪ್ರಕಾರ, ಯುಟಿಲಿಟೀಸ್ ಕ್ಷೇತ್ರ ಬಹಳ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದ್ದು, ಬ್ಯಾಚುಲರ್ ಡಿಗ್ರಿ ಅಥವಾ ಪದವಿ ಹೊಂದಿರುವ ಯುವ ವೃತ್ತಿಪರರು ಆಯ್ಕೆಗೆ ಪರಿಗಣಿಸಬಹುದಾಗಿದೆ.

ಇದನ್ನೂ ಓದಿ: Job Alert: ಯುಪಿಎಸ್‌ಸಿಯಿಂದ 312 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

Continue Reading

ಶಿಕ್ಷಣ

2nd PUC Exam 3: ದ್ವಿತೀಯ ಪಿಯುಸಿ ಪರೀಕ್ಷೆ-3ರ ದಂಡಸಹಿತ ಶುಲ್ಕ ಪಾವತಿಗೆ ಇಂದೇ ಕೊನೇ ದಿನ

2nd PUC Exam 3 : 2024ನೇ ಸಾಲಿನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿತ್ತು. ದಂಡ ಸಹಿತ ಶುಲ್ಕ ಪಾವತಿಸಲು ಇಂದೇ ಕೊನೆಯ ದಿನವಾಗಿದೆ.

VISTARANEWS.COM


on

By

2nd Puc Exam 3
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಜೂನ್‌ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-3ರ (2nd PUC Exam 3) ಶುಲ್ಕ ಪಾವತಿಸಲು ಇಂದೇ (ಜೂ.3) ಕೊನೆ ದಿನವಾಗಿದೆ. ವಿದ್ಯಾರ್ಥಿಗಳು ದಂಡಸಹಿತ ಶುಲ್ಕ ಪಾವತಿ ಮಾಡಬೇಕಾಗಿದ್ದು, ದಿನಕ್ಕೆ 50 ರೂ.ಅಂತೆ ಪಾವತಿಸಬೇಕಾಗಿದೆ.

ಈ ಹಿಂದೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಮೇ 28ಕ್ಕೆ ಕೊನೆ ದಿನವಾಗಿತ್ತು. ಆದರೆ ಪೋಷಕರು ಹಾಗೂ ವಿದಾರ್ಥಿಗಳ ದೂರವಾಣಿ ಕರೆಗಳ ಮೇರೆಗೆ ಪರೀಕ್ಷೆಗೆ ಶುಲ್ಕ ಪಾವತಿಸುವ ದಿನಾಂಕವನ್ನು ವಿಸ್ತರಿಸಿ ಆದೇಶಿಸಲಾಗಿತ್ತು. ಇದು ವಿದ್ಯಾರ್ಥಿಗಳಿಗೆ ಅಂತಿಮ ಅವಕಾಶವಾಗಿದ್ದು, ಮುಂದೆ ಯಾವುದೇ ಕಾರಣಕ್ಕೂ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ ಎಂದು ಶಾಲಾ ಶಿಕ್ಷಿಣ ಇಲಾಖೆ ಸೂಚನೆ ನೀಡಿತ್ತು.

ಅದರಂತೆ ವಿದ್ಯಾರ್ಥಿಗಳು ತಮ್ಮ ಕಾಲೇಜು ಅಥವಾ KSEAB ಪೋರ್ಟಲ್‌ನಲ್ಲಿ ಆನ್‌ಲೈನ್‌ ಮುಖಾಂತರ ನೋಂದಾಯಿಸಿಕೊಳ್ಳಬಹುದು. 2023-24ನೇ ಸಾಲಿನ ಫಲಿತಾಂಶ ಪೂರ್ಣಗೊಂಡಿರದ ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳುವ ಹೊಸಬರು ಮತ್ತು ಖಾಸಗಿಯಾಗಿ ನೋಂದಾವಣೆಯಾದ ವಿದ್ಯಾರ್ಥಿಗಳು ಮಂಡಲಿಯ ವೆಬ್‌ಸೈಟ್‌ ಮೂಲಕ ನೇರವಾಗಿ ಪರೀಕ್ಷೆ 3ಕ್ಕೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

2nd Puc Exam 3

ಈ ಮೊದಲು ಮೇ 23ರಿಂದ 28ರವರಗೆ ದಂಡ ರಹಿತ ನೋಂದಣಿ ಮಾಡಿಕೊಳ್ಳಬಹುದಿತ್ತು. ಒಂದು ವೇಳೆ ಮೇ 28ರೊಳಗೆ ಅರ್ಜಿ ಸಲ್ಲಿಸದೇ ಹೋದರೆ ಮೇ 29ರಿಂದ 30ರವರೆಗೆ ದಂಡ ಸಹಿತ ನೋಂದಣಿ ಮಾಡಿಕೊಳ್ಳಬೇಕಾಗಿತ್ತು. ಆದರೆ ವಿದ್ಯಾರ್ಥಿಗಳ ಮನವಿ ಮೇರೆಗೆ ದಿನಾಂಕವನ್ನು ವಿಸ್ತರಿಸಲಾಗಿತ್ತು. ಸದ್ಯ ಜೂನ್‌ 3ರಂದು ದಂಡ ಸಹಿತ ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ಅಂದಹಾಗೇ ವಿದ್ಯಾರ್ಥಿಗಳು ಕಾಲೇಜಿಗೆ ಪರೀಕ್ಷಾ ಶುಲ್ಕ ಪಾವತಿಸಲು ಮೇ 31 ದಂಡರಹಿತ ಕೊನೆ ದಿನವಾಗಿತ್ತು. ದಂಡ ಸಹಿತ ಜೂ. 1 ರಿಂದ 3 ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಪರೀಕ್ಷೆ 3ಕ್ಕೆ ಪರೀಕ್ಷಾ ಶುಲ್ಕ ಪಾವತಿಸಲು ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು ಫಲಿತಾಂಶ ಉತ್ತಮ ಪಡಿಸಿಕೊಳ್ಳುವ ವಿದ್ಯಾರ್ಥಿಗಳ ಮಾಹಿತಿಯನ್ನು ಪ್ರಾಂಶುಪಾಲರು ಕೆಎಸ್‌ಇಎಬಿ ತಂತ್ರಾಂಶದಲ್ಲಿ ಸಲ್ಲಿಸಬೇಕು. ಇದಕ್ಕೆ ದಂಡ ರಹಿತ ಜೂ.3ರಂದು ಕೊನೆ ದಿನವಾದರೆ, ದಂಡಸಹಿತ ಜೂ.5ರಂದು ನಿಗಧಿ ಮಾಡಲಾಗಿದೆ.

2024ರ ಪರೀಕ್ಷೆ 3ಕ್ಕೆ ಪರೀಕ್ಷಾ ಶುಲ್ಕವನ್ನು ನಿಗಧಿಸಲಾಗಿದೆ. ಒಂದು ವಿಷಯಕ್ಕೆ 140 ರೂ ಹಾಗೂ ಎರಡು ವಿಷಯಕ್ಕೆ 270 ರೂ., ಮೂರು ಅಥವಾ ಹೆಚ್ಚಿನ ವಿಷಯಗಳಿಗೆ 400 ರೂ. ನಿಗದಿ ಮಾಡಲಾಗಿದೆ. ಇನ್ನೂ ಫಲಿತಾಂಶ ತಿರಸ್ಕರಣಾ ಪದ್ಧತಿಯನ್ನು ರದ್ದುಪಡಿಸಲಾಗಿದೆ. 2023ರ ನಂತರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು 2024ರ ದ್ವಿತೀಯ ಪಿಯುಸಿ ಪರೀಕ್ಷೆ 3ರಲ್ಲಿ ಹಾಜರಾಗಬೇಕಾದರೆ ಮಂಡಲಿಯು ಒದಗಿಸಿದ ಫಲಿತಾಂಶದ ಪಟ್ಟಿಯ ಆಧಾರದ ಮೇಲೆ ಶುಲ್ಕವನ್ನು ಭರಿಸಬೇಕಾಗುತ್ತದೆ.

ಇದನ್ನೂ ಓದಿ: Stock Market News: ಮೋದಿ ಸರಕಾರ ಪುನರಾಗಮನಕ್ಕೆ ಷೇರು ಮಾರುಕಟ್ಟೆ ಹರ್ಷ, ಸೆನ್ಸೆಕ್ಸ್‌- ನಿಫ್ಟಿ ದಾಖಲೆ ಏರಿಕೆ

ದ್ವಿತೀಯ ಪಿಯುಸಿ ಪರೀಕ್ಷೆ -3ರ ವೇಳಾಪಟ್ಟಿ ಹೀಗಿದೆ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ (2nd PUC Exam) 3ನೇ ಪೂರಕ ಪರೀಕ್ಷೆಯು ನಡೆಯಲಿದ್ದು, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಜೂನ್‌ 24 ರಿಂದ ಜುಲೈ 5ರವರೆಗೆ ಪರೀಕ್ಷೆಯು ನಡೆಯಲಿದೆ. ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30 ಹಾಗೂ ಮಧ್ಯಾಹ್ನ 2:15ರಿಂದ 4:30 ಪರೀಕ್ಷೆಯ ಸಮಯವಾಗಿದೆ.

ದಿನಾಂಕ- ವಿಷಯ
ಜೂನ್‌ 24- ಕನ್ನಡ, ಅರೇಬಿಕ್
ಜೂನ್‌ 25- ಇಂಗ್ಲೀಷ್‌
ಜೂನ್‌ 26- ಸಮಾಜಶಾಸ್ತ್ರ , ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
ಜೂನ್‌ 27- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
ಜೂನ್‌ 28- ಅರ್ಥಶಾಸ್ತ್ರ, ರಸಾಯನಶಾಸ್ತ್ರ
ಜೂನ್‌ 29 – ಇತಿಹಾಸ, ಭೌತಶಾಸ್ತ್ರ
ಜುಲೈ 1 – ಗೃಹ ವಿಜ್ಞಾನ, ರಾಜ್ಯಶಾಸ್ತ್ರ, ಸಂಖ್ಯಾ ಶಾಸ್ತ್ರ
ಜುಲೈ 2 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ
ಜುಲೈ 3 – ಭೂಗೋಳಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ
ಜುಲೈ 4- ಹಿಂದಿ
ಜುಲೈ 5- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಹಾಗೂ ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ,ರೀಟೈಲ್‌, ಆಟೋ ಮೊಬೈಲ್‌, ಬ್ಯೂಟಿ ಮತ್ತು ವೆಲ್‌ನೆಸ್‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

CET Ranking : ಸಿಇಟಿ ರ‍್ಯಾಂಕಿಂಗ್‌ನಲ್ಲಿ ಎಂಜಿನಿಯರಿಂಗ್‌ನ 10 ಟಾಪರ್ಸ್‌ಗಳು ಬೆಂಗಳೂರಿನ ವಿದ್ಯಾರ್ಥಿಗಳು!

CET Ranking : ರಾಜ್ಯಾದ್ಯಂತ ನಡೆದ ಸಿಇಟಿ ಪರೀಕ್ಷೆಯ ಫಲಿತಾಂಶವು ಶನಿವಾರ ಪ್ರಕಟಗೊಂಡಿದೆ. ವಿವಿಧ ಕೋರ್ಸ್‌ಗಳಲ್ಲಿ ಹೆಚ್ಚು ರ‍್ಯಾಂಕ್‌ಗಳನ್ನು ಬೆಂಗಳೂರಿನ ಅಭ್ಯರ್ಥಿಗಳೇ ಪಡೆದಿದ್ದಾರೆ. ಎಂಜಿನಿಯರಿಂಗ್‌ನ ಟಾಪ್‌ 10ನಲ್ಲಿ ಹತ್ತು ಟಾಪರ್ಸ್‌ಗಳು ಬೆಂಗಳೂರಿಗರೇ ಆಗಿದ್ದಾರೆ.

VISTARANEWS.COM


on

By

CET Ranking
ಸಿಇಟಿ ಟಾಪರ್ಸ್‌
Koo

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗಾಗಿ ನಡೆದಿದ್ದ ಸಿಇಟಿ ಪರೀಕ್ಷೆಯ ಫಲಿತಾಂಶದಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳೇ ಹೆಚ್ಚು ರ‍್ಯಾಂಕ್‌ (CET Ranking) ಪಡೆದಿದ್ದಾರೆ. ಎಂಜಿನಿಯರಿಂಗ್‌ನಲ್ಲಿ ಹತ್ತಕ್ಕೆ ಹತ್ತು ಟಾಪರ್ಸ್‌ಗಳು ಬೆಂಗಳೂರಿನವರೇ ಆಗಿದ್ದಾರೆ. ಅದರಲ್ಲೂ ಇಂಜಿನಿಯರಿಂಗ್ ರ‍್ಯಾಂಕ್‌ನ 10ರಲ್ಲಿ ಟಾಪ್ 9 ಬಾಲಕರೇ ಇದ್ದಾರೆ. ಇನ್ನೂ ವಿವಿಧ ಕೋರ್ಸ್‌ಗಳಲ್ಲಿ 45 ಮಂದಿ ಬೆಂಗಳೂರಿನವರೇ ಟಾಪರ್ಸ್‌ ಆಗಿದ್ದಾರೆ.

ಎಂಜಿನಿಯರಿಂಗ್‌ನಲ್ಲಿ ಬೆಂಗಳೂರಿನ ಸಹಕಾರ ನಗರದ ನಾರಾಯಣ ಒಲಿಂಪಿಯಾಡ್‌ ಶಾಲೆಯ ಹರ್ಷ ಕಾರ್ತಿಕೇಯ ವುಟುಕುರಿ ಮೊದಲ ರ‍್ಯಾಂಕ್‌ ಪಡೆದಿದ್ದಾನೆ. ಜತೆಗೆ ಬಿ.ಫಾರ್ಮಾ ಹಾಗೂ ಫಾರ್ಮ್ ಡಿಯಲ್ಲೂ 2ನೇ ರ‍್ಯಾಂಕ್‌ ಪಡೆದಿದ್ದಾನೆ.

ಇವ್ರೇ ಎಂಜಿನಿಯರಿಂಗ್‌ನಲ್ಲಿ ಟಾಪರ್ಸ್‌

1) ಹರ್ಷ ಕಾರ್ತಿಕೇಯ ವುಟುಕುರಿ – ನಾರಾಯಣ ಒಲಿಂಪಿಯಾಡ್ ಶಾಲೆ
2) ಮನೋಜ್ ಸೋಹನ್ ಗಜುಲಾ- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್
3) ಅಭಿನವ್ ಪಿ.ಜೆ -ನೆಹರು ಸ್ಮಾರಕ ವಿದ್ಯಾಲಯ’
4)ಸನಾ ತಬಸ್ಸುಮ್- ನಾರಾಯಣ ಪಿಯು ಕಾಲೇಜು
5) ಅನಿಮೇಶ್ ಸಿಂಗ್ ರಾಥೋಡ್- ಶ್ರೀ ಚೈತನ್ಯ ಟೆಕ್ನೋ ಶಾಲೆ
6)ಪ್ರಭಾವ್ ಪಿ- ಆರ್ ವಿ ಪಿಯು ಕಾಲೇಜು
7)ವಿದೀಪ್ ರೆಡ್ಡಿ ಜಲಪಲ್ಲಿ-ದೆಹಲಿ ಪಬ್ಲಿಕ್ ಸ್ಕೂಲ್
8) ಶಾನ್ ಥಾಮಸ್ ಕೋಶಿ- ಗೇರ್ ಇನ್ನೋವೇಟಿವ್‌ ಇಂಟರ್‌ನ್ಯಾಷನಲ್
9) ವಾರಣಾಸಿ ಕಾರ್ತಿಕೇಯ ಶ್ರೀರಾಮ್- ಎಚ್ಎಂಆರ್ ನ್ಯಾಷನಲ್ ಪಿಯು
ಕಾಲೇಜು
10) ಸಾಗರ್ – ಡೆಲ್ಲಿ ಪಬ್ಲಿಕ್ ಸ್ಕೂಲ್

ಇದನ್ನೂ ಓದಿ: CET Ranking : 3 ಸಾವಿರ ಅಭ್ಯರ್ಥಿಗಳಿಗೆ ಸಿಕ್ಕಿಲ್ಲ ಸಿಇಟಿ ರ‍್ಯಾಂಕ್‌! ಮುಂದೇನು ಮಾಡ್ಬೇಕು?

ಬ್ಯಾಚುಲರ್ ಆಫ್ ನ್ಯಾಚುರೋಪತಿ & ಯೋಗ ಸೈನ್ಸಸ್

ಟಾಪ್‌ 3 ಪ್ರೀತಂ ರಾವಳಪ್ಪ ಪನಸುದಕರ್- ಶೇಷಾದ್ರಿಪುರಂ ಕಾಂಪ್ ಪಿಯು
ಟಾಪ್‌ 4 ವಜ್ರಕಾಂತ್ ಮಿರಗಿ – ನಾರಾಯಣ ಪಿಯು ಕಾಲೇಜು
ಟಾಪ್‌ 5 ಸ್ನೇಹಾ ಎದಾಯತ್ -ಕೇಂದ್ರೀಯ ವಿದ್ಯಾಲಯ
ಟಾಪ್‌ 7 ನೈತಿಕ್ ಜೈನ್-ಆರ್ ವಿ ಪಿಯು ಕಾಲೇಜು
ಟಾಪ್‌ 8 ಸುಷ್ಮಾ ಅಮರೇಶ- ಜಿ ಆರ್ ಪಿ ಯು ಕಾಲೇಜು
ಟಾಪ್‌ 9 ಶಶಾಂಕ್ ಎ. ವಿದ್ಯಾಮಂದಿರ್ ಪಿಯು ಕಾಲೇಜು

ಬಿಎಸ್ಸಿ (ಕೃಷಿ)

  • ಟಾಪ್‌ 3 ಅನಿಮೇಶ್ ಸಿಂಗ್ ರಾಥೋಡ್-ಶ್ರೀ ಚೈತನ್ಯ ಟೆಕ್ನೋ ಶಾಲೆ
  • ಟಾಪ್‌ 6 ಆದಿತ್ಯ ಎ-ಶ್ರೀ ಚೈತನ್ಯ ಟೆಕ್ನೋ ಶಾಲೆ
  • ಟಾಪ್‌ 10 ಸ್ಕಂದ ಪಿ -ದೀಕ್ಷಾ ಸಿಎಫ್‌ಎಲ್ ಪಿಯು ಕಾಲೇಜು

ವೆಟರ್ನರಿ

ಟಾಪ್‌ 1 ಕಲ್ಯಾಣ್ ವಿ- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್
ಟಾಪ್‌ 2 ಡಿ ಎನ್ ನಿತಿನ್ – ನಾರಾಯಣ ಇ ಟೆಕ್ನೋ ಶಾಲೆ
ಟಾಪ್‌ 4 ಧ್ರುವ ಅವಸ್ಥಿ- ನಾರಾಯಣ ಇ ಟೆಕ್ನೋ ಶಾಲೆ
ಟಾಪ್‌ 5 ಸ್ನೇಹಾ ಎದಾಯತ್ -ಕೇಂದ್ರೀಯ ವಿದ್ಯಾಲಯ
ಟಾಪ್‌ 7 ವಜ್ರಕಾಂತ್ ಮಿರಗಿ – ನಾರಾಯಣ ಪಿಯು ಕಾಲೇಜು
ಟಾಪ್‌ 10 ಅಕ್ಷತ್ ಮಿಶ್ರಾ- ನಾರಾಯಣ ಇ ಟೆಕ್ನೋ ಶಾಲೆ

ಇದನ್ನೂ ಓದಿ: ನೀಟ್ ಫಲಿತಾಂಶದ ಬಳಿಕ ಎಂಜಿನಿಯರ್ ಸೀಟು ಹಂಚಿಕೆ; 1.24 ಲಕ್ಷ ಸೀಟುಗಳು ಲಭ್ಯ, ಆನ್ ಲೈನ್ ಪ್ರಕ್ರಿಯೆ

ಬಿ.ಫಾರ್ಮಾ

ಟಾಪ್‌ 1 ಕಲ್ಯಾಣ್ ವಿ- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್
ಟಾಪ್‌ 2 ಹರ್ಷ ಕಾರ್ತಿಕೇಯ ವುಟುಕುರಿ – ನಾರಾಯಣ ಒಲಿಂಪಿಯಾಡ್ ಶಾಲೆ
ಟಾಪ್‌ 3 ಡಿ ಎನ್ ನಿತಿನ್ – ನಾರಾಯಣ ಇ ಟೆಕ್ನೋ ಶಾಲೆ
ಟಾಪ್‌ 4 ಸ್ನೇಹಾ ಎದಾಯತ್ -ಕೇಂದ್ರೀಯ ವಿದ್ಯಾಲಯ
ಟಾಪ್‌ 6 ಧ್ರುವ ಅವಸ್ಥಿ- ನಾರಾಯಣ ಇ ಟೆಕ್ನೋ ಶಾಲೆ
ಟಾಪ್‌ 7 ಮನೋಜ್ ಸೋಹನ್ ಗಜುಲಾ- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್
ಟಾಪ್‌ 9 ವಜ್ರಕಾಂತ್ ಮಿರಗಿ – ನಾರಾಯಣ ಪಿಯು ಕಾಲೇಜು

ಫಾರ್ಮ್.ಡಿ

ಟಾಪ್‌ 1 ಕಲ್ಯಾಣ್ ವಿ- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್
ಟಾಪ್‌ 2 ಹರ್ಷ ಕಾರ್ತಿಕೇಯ ವುಟುಕುರಿ – ನಾರಾಯಣ ಒಲಿಂಪಿಯಾಡ್ ಶಾಲೆ
ಟಾಪ್‌ 3 ಡಿ ಎನ್ ನಿತಿನ್ – ನಾರಾಯಣ ಇ ಟೆಕ್ನೋ ಶಾಲೆ
ಟಾಪ್‌ 4 ಸ್ನೇಹಾ ಎದಾಯತ್ -ಕೇಂದ್ರೀಯ ವಿದ್ಯಾಲಯ
ಟಾಪ್‌ 6 ಧ್ರುವ ಅವಸ್ಥಿ- ನಾರಾಯಣ ಇ ಟೆಕ್ನೋ ಶಾಲೆ
ಟಾಪ್‌ 7 ಮನೋಜ್ ಸೋಹನ್ ಗಜುಲಾ- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್
ಟಾಪ್‌ 9 ವಜ್ರಕಾಂತ್ ಮಿರಗಿ – ನಾರಾಯಣ ಪಿಯು ಕಾಲೇಜು

ಬಿಎಸ್ಸಿ ನರ್ಸಿಂಗ್

ಟಾಪ್‌ 1 ಕಲ್ಯಾಣ್ ವಿ- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್
ಟಾಪ್‌ 2 ಡಿ ಎನ್ ನಿತಿನ್ – ನಾರಾಯಣ ಇ ಟೆಕ್ನೋ ಶಾಲೆ
ಟಾಪ್‌ 4 ಧ್ರುವ ಅವಸ್ಥಿ- ನಾರಾಯಣ ಇ ಟೆಕ್ನೋ ಶಾಲೆ
ಟಾಪ್‌ 5 ಸ್ನೇಹಾ ಎದಾಯತ್ -ಕೇಂದ್ರೀಯ ವಿದ್ಯಾಲಯ
ಟಾಪ್‌ 7 ವಜ್ರಕಾಂತ್ ಮಿರಗಿ – ನಾರಾಯಣ ಪಿಯು ಕಾಲೇಜು
ಟಾಪ್‌ 10 ಅಕ್ಷತ್ ಮಿಶ್ರಾ- ನಾರಾಯಣ ಇ ಟೆಕ್ನೋ ಶಾಲೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Sobhita Dhulipala Naga Chaitanya in Europe
ಟಾಲಿವುಡ್4 mins ago

Sobhita Dhulipala: ಯುರೋಪ್‌ನಲ್ಲಿ ಜತೆಯಾಗಿ ಕಂಡ ನಾಗ ಚೈತನ್ಯ-ಶೋಭಿತಾ ಧೂಲಿಪಾಲ!

Bangalore Central Election Result 2024
ಪ್ರಮುಖ ಸುದ್ದಿ4 mins ago

Bangalore Central Election Result 2024 : ಬೆಂಗಳೂರು ಸೆಂಟ್ರಲ್​ ಸ್ಥಾನ ಉಳಿಸಿಕೊಂಡ ಪಿ.ಸಿ ಮೋಹನ್​​

Election Results 2024 narendra modi amit shah
Lok Sabha Election 202411 mins ago

Election Results 2024: ಎಕ್ಸಿಟ್‌ ಪೋಲ್‌ಗಳಿಗೆ ತೀವ್ರ ಮುಖಭಂಗ; ನಂಬಿದ ಹೂಡಿಕೆದಾರರಿಗೆ 40 ಲಕ್ಷ ಕೋಟಿ ರೂ. ನಷ್ಟ!

Stock Market Crash
ವಾಣಿಜ್ಯ18 mins ago

Stock Market Crash: ಬಿಜೆಪಿ ಹಿನ್ನಡೆಯಿಂದ ಹೂಡಿಕೆದಾರರಿಗೆ 40 ಲಕ್ಷ ಕೋಟಿ ನಷ್ಟ! ಯಾವ ಷೇರುಗಳು ಹೆಚ್ಚು ಕುಸಿತ?

Fazalhaq Farooqi
ಕ್ರೀಡೆ24 mins ago

Fazalhaq Farooqi: ಟಿ20 ವಿಶ್ವಕಪ್​ನಲ್ಲಿ ದಾಖಲೆ ಬರೆದ ಫಜಲ್ಹಕ್ ಫಾರೂಕಿ

Election Results 2024
Lok Sabha Election 202434 mins ago

Election Results 2024: ಉತ್ತರ-ದಕ್ಷಿಣ ಎರಡೂ ಕಡೆ ಭರ್ಜರಿ ಜಯ ದಾಖಲಿಸಿದ ರಾಹುಲ್‌ ಗಾಂಧಿ

Karnataka Election Results 2024
Lok Sabha Election 202434 mins ago

Karnataka Election Results 2024: ಗ್ಯಾರಂಟಿ ದರ್ಬಾರ್ ಮಧ್ಯೆಯೂ ಬಿಜೆಪಿ ಗೆದ್ದು ಬೀಗಿದೆ ಎಂದ ವಿಜಯೇಂದ್ರ

Udupi Chikmagalur Result 2024:
ಪ್ರಮುಖ ಸುದ್ದಿ41 mins ago

Bangalore South Election Result 2024 : ತೇಜಸ್ವಿ ಸೂರ್ಯಗೆ ಭಾರಿ ಅಂತರದ ಗೆಲುವು

Election Results 2024
ದೇಶ1 hour ago

Election Results 2024: ನಿತೀಶ್‌ ಕುಮಾರ್‌ ಬೆಂಬಲ ಯಾರಿಗೆ? ಏನಂದ್ರು ಜೆಡಿಯು ನಾಯಕರು?

IND vs IRE T20 World Cup
ಕ್ರೀಡೆ1 hour ago

IND vs IRE T20 World Cup: ಐರ್ಲೆಂಡ್​ ಸವಾಲಿಗೆ ಟೀಮ್​ ಇಂಡಿಯಾ ಸಿದ್ಧ; ವಿಶ್ವಕಪ್​ ಸಾಧನೆ ಹೇಗಿದೆ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ10 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 day ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು3 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ5 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ7 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌