Education Guide: ಕಾಲೇಜು ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕಗಳಿವು - Vistara News

ಕಲೆ/ಸಾಹಿತ್ಯ

Education Guide: ಕಾಲೇಜು ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕಗಳಿವು

Educatin Guide: ಕಾಲೇಜು ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಕಡೆಗೆ ಹೆಚ್ಚಿನ ಗಮನ ಕೊಡಬೇಕು ನಿಜ. ಆದರೆ ಪಠ್ಯೇತರ ಕೃತಿಗಳ ಪರಿಚಯವೂ ಇರಬೇಕು. ವಿದ್ಯಾರ್ಥಿ ಜೀವನದಲ್ಲಿ ಓದಲೇಬೇಕಾದ ಕೆಲವು ಕನ್ನಡ ಮತ್ತು ಇಂಗ್ಲಿಷ್‌ ಕೃತಿಗಳ ಪಟ್ಟಿ ಇಲ್ಲಿದೆ.

VISTARANEWS.COM


on

Books
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

1.ಕರ್ವಾಲೋ: ಪೂರ್ಣಚಂದ್ರ ತೇಜಸ್ವಿ

ಅಕಸ್ಮಾತ್ತಾಗಿ ಪರಿಚಯವಾದ ಮಂದಣ್ಣ ಎಂಬ ಹಳ್ಳಿಗನ ಬದುಕು ಮತ್ತು ಅವನಲ್ಲಿ ಹುದುಗಿರುವ ಪ್ರತಿಭೆ ಈ ಕಾದಂಬರಿಯ ತಳಪಾಯ; ಈತನ ಗೆಳೆತನದಿಂದ ಮತ್ತು ಕರ್ವಾಲೋ ಅವರ ಮಾರ್ಗದರ್ಶನದಿಂದ ಕತೆಗಾರರು ಕಂಡುಕೊಂಡ ಅರಣ್ಯ ಮಧ್ಯದ ಜೀವರಾಶಿಯ ನಿಗೂಢ ಬದುಕು ಈ ಕಾದಂಬರಿಯ ಇನ್ನೊಂದು ಸ್ತರ. ಅತ್ಯಂತ ಸ್ಪಷ್ಟ ಭಾಷೆಯಲ್ಲಿ ಮುಗ್ಧ ಕುತೂಹಲದಿಂದ ಹೇಳಲಾಗಿರುವ ಈ ಕತೆ ಸಮಾಜದ (education news) ನಿರ್ಲಕ್ಷ್ಯದಿಂದ ನಾಶವಾಗುತ್ತಿರುವ ಮಂದಣ್ಣರು, ಕ್ರಮೇಣ ಇಲ್ಲವಾಗುತ್ತಿರುವ ಸೃಜನಶೀಲ ಕರ್ವಾಲೋಗಳು ಮತ್ತು ನಾಗರಿಕತೆಯ ತುಳಿತಕ್ಕೆ ಧ್ವಂಸಗೊಂಡು ಮಾಯವಾಗುತ್ತಿರುವ ಅರಣ್ಯ ಮತ್ತು ಜೀವರಾಶಿ – ಈ ಎಲ್ಲವನ್ನೂ, ಎಲ್ಲರನ್ನೂ ಕುರಿತದ್ದು.

2.ದುರ್ಗಾಸ್ತಮಾನ- ತ. ರಾ. ಸುಬ್ಬರಾಯ

ಚಿತ್ರದುರ್ಗವನ್ನು ಆಳಿದ ರಾಜಾ ಮದಕರಿ ನಾಯಕನ ಕಥೆಯೇ ಈ ಕಾದಂಬರಿಯ ಹಂದರ. ಮದಕರಿ ನಾಯಕ ಪಟ್ಟಕ್ಕೆ ಬಂದ ದಿನಗಳಿಂದ ಹಿಡಿದು ಹೈದರಾಲಿಯೊಂದಿಗಿನ ಯುದ್ಧದ ದಿನಗಳವರೆಗೆ ಹೆಣೆಯಲಾದ ಸುಂದರ ಐತಿಹಾಸಿಕ ಕಥೆಯಿದು. ಚಿತ್ರದುರ್ಗದ ಸಾಮಾಜಿಕ ಸ್ಥಿತಿಗತಿಯೂ ಈ ಕಾದಂಬರಿಯಲ್ಲಿ ಮನೋಜ್ಞವಾಗಿ ಚಿತ್ರಿತವಾಗಿದೆ. ದಕ್ಷ ಆಡಳಿತಗಾರ, ವಿಧೇಯ ಮಗ, ಪ್ರೇಮಿ, ಮಿತ್ರ, ಶತ್ರು- ಹೀಗೆ ಮದಕರಿ ನಾಯಕನ ವ್ಯಕ್ತಿತ್ವದ ಹಲವು ಆಯಾಮಗಳನ್ನಿಲ್ಲಿ ಕಾಣಬಹುದು

3.ಚೋಮನದುಡಿ- ಶಿವರಾಮ ಕಾರಂತ

ಸ್ವಾತಂತ್ರ್ಯಪೂರ್ವ ಕಾಲದ ದಲಿತ ವರ್ಗದ ಬವಣೆಯ ಬಾಳಿನ ಚಿತ್ರಣ ಈ ಕಾದಂಬರಿಯ ಕಥಾವಸ್ತು. ಬದಲಾಗುತ್ತಿರುವ ದೇಶ ಕಾಲಗಳಲ್ಲಿ ಬದಲಾಗದೆ ಇರುವುದೆಂದರೆ ಕಥಾನಾಯಕ ಚೋಮನ ಕಷ್ಟಜೀವನ. ಈತನ ಪ್ರೀತಿಯ ವಸ್ತು ಎಂದರೆ ದುಡಿ, ಅದೊಂದೇ ಅವನ ಸಂಪತ್ತು. ಕಡು ಬಡತನದಲ್ಲಿ ಜೀವನ ಸಾಗಿಸುತಿದ್ದ ಈತ, ಧಣಿಗಳ ಸಾಲ ತೀರಿಸಲು ತನ್ನ ಮಗನನ್ನೂ, ಮುಂದೆ ಮಗಳನ್ನು ದೂರದ ಊರಿಗೆ ಕಾಫಿ ತೋಟದ ಕೆಲಸಕ್ಕೆ ಕಳುಹಿಸುತ್ತಾನೆ. ಅಲ್ಲಿ ಮಗಳು ಬೆಳ್ಳಿ ಒಡೆಯನ ಕೈಸೆರೆಯಾದುದನ್ನು ಕಂಡ ಚೋಮ ವಿಹ್ವಲನಾಗಿ, ಕೊನೆಗೆ ಸಾಲವೂ ತೀರದೆ ಮಕ್ಕಳನ್ನು ಕಾಣದೆ ದುಡಿ ಬಾರಿಸುತ್ತಲೇ, ಏಕಾಂಗಿಯಾಗಿ ಸಮಾಜದ ಕ್ರೌರ್ಯಕ್ಕೆ ಬಲಿಪಶುವಾಗಿ ಮರಣವನ್ನು ಹೊಂದುತ್ತಾನೆ.

4.ಮಲೆಗಳಲ್ಲಿ ಮದುಮಗಳು- ಕುವೆಂಪು

ಆಕಾಶವೇ ಚಿಕ್ಕದಾಗಿ, ಕಾಡೇ ದೊಡ್ಡದಾಗಿ; ಕಾಡಿನ ಚೂರುಪಾರು ಜಾಗವನ್ನು ಸವರಿ ತನ್ನ ಬದುಕು ಕಟ್ಟಿಕೊಂಡ ಮನುಷ್ಯ ಕಾಡಿನ ಭವ್ಯತೆಯ ಮುಂದೆ ಕುಬ್ಜನಾಗಿ, ಕಾಡೇ ದೇವರಾಗಿ, ತೊಂದರೆಯನ್ನೂ ಆನಂದವನ್ನೂ ಏಕಕಾಲಕ್ಕೆ ಕೊಡುವ ದಿವ್ಯಾನುಭವವಾಗಿ; ಕಾಡು ಮದುಮಗಳು ಕಾದಂಬರಿಯಲ್ಲಿ ಮೂಡಿಬಂದಿದೆ. ಆ ಅರ್ಥದಲ್ಲಿ ಕುವೆಂಪುರವರ ಅದ್ವಯವಾದೀ ದಾರ್ಶನಿಕತೆಗೆ ಈ ಕಾಡೇ ಒಂದು ಭವ್ಯವಾದ ರೂಪಕ. ಭರಮೈ ಹೆಗ್ಗಡೆಯವರಿಂದ ಹಿಡಿದು ನಾಯಿ ಗುತ್ತಿಯವರೆಗೆ ಐತ-ಪೀಂಚಲುವಿನಿಂದ ತೊಡಗಿ ಮುಕುಂದಯ್ಯ-ಚಿನ್ನಮ್ಮನವರೆಗೆ ಮತ್ತು ಕಿಲಸ್ತರಿಂದ ಹಿಡಿದು ಹೊನ್ನಾಳಿ ಸಾಬರವರೆಗೆ ಎಲ್ಲರೂ ಈ ಕಾಡಿನ ಮಕ್ಕಳೇ. ಈ ಕಾಡು ಇಲ್ಲದಿದ್ದರೆ ಇಲ್ಲಿಯ ಜನರ ಯಾವ ವ್ಯೂಹವೂ, ಅವರ ಯಾವ ಕನಸೂ, ಅವರ ಯಾವ ಬದುಕೂ ನೆರವೇರಲು ಸಾಧ್ಯವೇ ಇಲ್ಲ.. ಈ ಕಾದಂಬರಿಯಲ್ಲಿ ಮರ್ಯಾದಾ ಪುರುಷೋತ್ತಮರಿಲ್ಲ. ಸಾಮಾನ್ಯ ಮನುಷ್ಯ ಬದುಕಿನ ಒಳಜಗತ್ತು ಎಷ್ಟು ವೈವಿಧ್ಯಮಯವೂ, ಜೀವಂತವೂ, ಕ್ರೂರವೂ ಆಗಿದೆ. ಅನೇಕಾನೇಕ ಮನುಷ್ಯ ಚೇತನಗಳ ಒಂದು ಮಹಾಒಕ್ಕೂಟವನ್ನು ಈ ಕಾದಂಬರಿ ನಮಗೆ ಕಾಣಿಸುತ್ತದೆ.

5.ಪರ್ವ- ಎಸ್‌. ಎಲ್‌. ಭೈರಪ್ಪ

ಪರ್ವ ಎಸ್.‌ ಎಲ್.‌ ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲೇ ಭಾರೀ ಚರ್ಚೆಗೆ ಒಳಗಾದದ್ದು. ಮಹಾಭಾರತದ ಕಥೆಯನ್ನು ವೈಚಾರಿಕ ದೃಷ್ಟಿಕೋನದಿಂದ ಪರ್ವದಲ್ಲಿ ಹೇಳಲಾಗಿದೆ. ಮಹಾಭಾರತ ಕಾಲದ ಭಾರತೀಯ ಸಮಾಜದ ರೀತಿನೀತಿಗಳನ್ನೂ, ಆ ಕಾಲದ ಜೀವನ ಮೌಲ್ಯಗಳನ್ನು, ಮೃತ್ಯುವಿನ ರಹಸ್ಯಾತ್ಮಕತೆಯನ್ನು ಕಾದಂಬರಿಯಲ್ಲಿ ಅರ್ಥಪೂರ್ಣವಾಗಿ ಮೈಗೂಡಿಸಲಾಗಿದೆ.

6.ಮೂರು ದಾರಿಗಳು- ಯಶವಂತ ಚಿತ್ತಾಲ

ಖ್ಯಾತ ಕತೆಗಾರ ಯಶವಂತ ಚಿತ್ತಾಲರ ಮೊದಲ ಕಾದಂಬರಿ “ಮೂರು ದಾರಿಗಳು’.. ಕಾದಂಬರಿಯಲ್ಲಿಯ ಪ್ರಾದೇಶಿಕತೆಯ ವೈಶಿಷ್ಟವು ಕೇವಲ ಹಿನ್ನೆಲೆಯಾಗಿ ಮಾತ್ರ ಬರುವುದಿಲ್ಲ. ಅದು ಕತೆಯ ಭಾಗವಾಗಿಯೇ ಬರುತ್ತದೆ. ಈ ಕಾದಂಬರಿಯ ಬಹುತೇಕ ಪಾತ್ರಗಳು ಕರಾವಳಿ ಪ್ರದೇಶದ ಅಲ್ಲಿಯ ಸಮಾಜಕ್ಕೆ ನಿಕಟವಾಗಿ ಸಂಬಂಧಿಸಿದವುಗಳು. ಜೀವನದೊಡಲಿನಿಂದ ಅವರ ವ್ಯಕ್ತಿತ್ವ ರೂಪುಗೊಂಡಿದೆ. ಹಾಗೂ ಆ ಕಕ್ಷೆಯಲ್ಲಿಯೇ ಅವರ ವೈಯಕ್ತಿಕ ಜೀವನ ನಡೆಯುತ್ತದೆ.

7.ಯುಗಾಂತ- ಇರಾವತಿ ಕರ್ವೆ

ಈ ಪುಸ್ತಕವು ಮಹಾಭಾರತದ ಮುಖ್ಯ ಪಾತ್ರಧಾರಿಗಳ ಅಧ್ಯಯನವಾಗಿದೆ. ಈ ಪಾತ್ರದ ಅಧ್ಯಯನಗಳು ಪುಸ್ತಕದ ಮುಖ್ಯಪಾತ್ರಗಳನ್ನು ಪೌರಾಣಿಕ ಪಾತ್ರಗಳಿಗಿಂತ ಐತಿಹಾಸಿಕ ವ್ಯಕ್ತಿಗಳಾಗಿ ಪರಿಗಣಿಸುತ್ತವೆ. ಈ ಪುಸ್ತಕದಲ್ಲಿ ಲೇಖಕರು ಮಹಾಭಾರತದ ಅನೇಕ ಘಟನೆಗಳನ್ನು ಸಾಮಾಜಿಕ-ರಾಜಕೀಯ ಸಂದರ್ಭದಲ್ಲಿ ಅರ್ಥೈಸಲು ಪ್ರಯತ್ನಿಸಿದ್ದಾರೆ. ಕರ್ವೆಯವರ ವಿಶ್ಲೇಷಣೆಯ ಪ್ರಕಾರ, ಮಹಾಭಾರತವು ನಿಜವಾಗಿಯೂ ಪುರಾಣವಲ್ಲ, ಆದರೆ ಇದು ಭಾರತದ ರಾಷ್ಟ್ರದಲ್ಲಿ ಸಾವಿರಾರು ವರ್ಷಗಳ ಹಿಂದೆ ನಡೆದ ಐತಿಹಾಸಿಕ ಘಟನೆಗಳ ನಿರೂಪಣೆಯಾಗಿದೆ. ಈ ಸಂದರ್ಭದಲ್ಲಿ, ಲೇಖಕರು ಭಾರತೀಯ ಇತಿಹಾಸದಲ್ಲಿ ಆ ಅವಧಿಯಲ್ಲಿ ಪ್ರಚಲಿತದಲ್ಲಿದ್ದ ರಾಜಕೀಯ ಮತ್ತು ಸಾಮಾಜಿಕ ಸನ್ನಿವೇಶಗಳ ಬಗ್ಗೆ ಆಳವಾದ ಒಳನೋಟವನ್ನು ಓದುಗರಿಗೆ ಒದಗಿಸುತ್ತಾರೆ.

8.ಹಸುರು ಹೊನ್ನು- ಬಿ.ಜಿ.ಎಲ್‌. ಸ್ವಾಮಿ

“ಹಸುರು ಹೊನ್ನು’ ಕೃತಿಯ ಮೂಲಕ ಲೇಖಕರು ತಮ್ಮ ಬದುಕಿನೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಒಡನಾಡಿಗಳಾಗಿ ಬೆಳೆದು ಬಂದಿರುವ ಗಿಡಮರಗಳ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಇದೊಂದು ಪ್ರವಾಸ ಕಥನ. ಸಸ್ಯಶಾಸ್ತ್ರ ಪ್ರಾಧ್ಯಾಪಕರಾದ ಸ್ವಾಮಿಯವರು ತಮ್ಮಲ್ಲಿ ವ್ಯಾಸಂಗ ಮಾಡುತ್ತಿದ್ದ ಸಸ್ಯಶಾಸ್ತ್ರ ವಿದ್ಯಾರ್ಥಿಗಳ ಶಿಕ್ಷಣದ ಅಗತ್ಯಗಳಲ್ಲೊಂದನ್ನು ಪೂರೈಸುವುದಕ್ಕಾಗಿ ಅವರನ್ನು ಕರೆದುಕೊಂಡು ದೂರದೂರದ ಅರಣ್ಯಗಳಿಗೆ ಹೋಗಿಬಂದುದರ ಕಥೆ ಇದು. ದೂರ ಪ್ರವಾಸಕ್ಕಾಗಿ ಮಾಡಿಕೊಳ್ಳುವ ಸಿದ್ಧತೆಗಳು, ಪ್ರಯಾಣದ ಕಷ್ಟಸುಖಗಳು, ಮಾರ್ಗಮಧ್ಯ, ಅನಿರೀಕ್ಷಿತವಾಗಿ ಜರುಗುವ ಆಕಸ್ಮಿಕ ಘಟನೆಗಳು, ದಾರಿಯುದ್ದಕ್ಕೂ ಕಂಡು ಆನಂದಿಸಿದ ಪ್ರಕೃತಿಯ ಸೊಬಗು, ಸಂಗಡಿಗರಾದ ವಿದ್ಯಾರ್ಥಿಗಳ ಹಾಗೂ ದಾರಿಯಲ್ಲಿ ಸಂಧಿಸಿದ ಆಗಂತುಕರ ಓರೆಕೋರೆಗಳು – ಇದೆಲ್ಲವನ್ನೂ ರಸವತ್ತಾಗಿ ಮತ್ತು ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಮನುಷ್ಯ ಸ್ವಭಾವದ ನಿಕಟ ಪರಿಚಯವೂ ಮಾನವ ಸಹಜ ದೌರ್ಬಲ್ಯಗಳ ಬಗ್ಗೆ ಸಹಾನುಭೂತಿಯೂ ಅವರ ಬರವಣಿಗೆಯಲ್ಲಿ ಸ್ಪಷ್ಟವಾಗಿದೆ.

9.ಯಯಾತಿ- (ಮರಾಠಿ ಮೂಲ) ವಿ. ಎಸ್.‌ ಖಾಂಡೇಕರ್‌.

ಕನ್ನಡಕ್ಕೆ- ವಿ.ಎಂ. ಇನಾಂದಾರ್

ಖಾಂಡೇಕರ್ ಅವರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಒಂದಾದ ಇದು ಹಿಂದೂ ಮಹಾಕಾವ್ಯವಾದ ಮಹಾಭಾರತದಿಂದ ರಾಜ ಯಯಾತಿಯ ಕಥೆಯನ್ನು ಪುನಃ ಹೇಳುತ್ತದೆ. ಕಾದಂಬರಿಯಲ್ಲಿ ನಿರೂಪಕರು ಹಲವರಿದ್ದು, ನೈತಿಕತೆಯ ಸ್ವರೂಪದ ಮೇಲೆ ಹಲವಾರು ಪ್ರಶ್ನೆಗಳನ್ನು ಮುಂದಿಡುತ್ತದೆ. ಈ ಕಾದಂಬರಿಯ ನಾಯಕ ಯಯಾತಿಯನ್ನು ವಿದ್ವಾಂಸರು ಆಧುನಿಕ ಮನುಷ್ಯನ ಪ್ರಾತಿನಿಧ್ಯ ಎಂದು ವಿಶ್ಲೇಷಿಸಿದ್ದಾರೆ.

10.ಬಂಡಾಯ- ವ್ಯಾಸರಾಯ ಬಲ್ಲಾಳ

ಮಹಾನಗರಿ ಮುಂಬಯಿಯ ಶ್ರಮಜೀವಿಗಳ ಬದುಕು, ಬವಣೆ ಹಾಗೂ ಮುಷ್ಕರಗಳೇ ಈ ಕಾದಂಬರಿ ದ್ರವ್ಯ. ಮುಷ್ಕರಗಳಿಂದ ಕಾರ್ಮಿಕರ ಸಮಸ್ಯೆಗಳನ್ನು ನಿವಾರಿಸಬಹುದೇ ಅಥವಾ ಅದಕ್ಕೂ ಹಿಂಸೆಯ ಹೋರಾಟ ಬೇಕೆ ಎನ್ನುವುದು ಕಾದಂಬರಿಯ ಕೊನೆಯಲ್ಲಿ ಪ್ರಶ್ನೆಯಾಗಿ ಕಾಡುತ್ತದೆ. ಸಂಕೀರ್ಣವಾದ ತಾತ್ವಿಕ ವಸ್ತುವನ್ನು, ಆಸಕ್ತಿ ಕೆರಳಿಸುವ ಕಾದಂಬರಿಯಾಗಿ ತೋರಿಸುವಲ್ಲಿ ಬಲ್ಲಾಳರ ಕಥನಕೌಶಲ ದೊಡ್ಡದು.

11.The Alchemist- Paulo Coelho

This is a classic novel in which a boy named Santiago embarks on a journey seeking treasure in the Egyptian pyramids after having a recurring dream about it and on the way meets mentors, falls in love, and most importantly, learns the true importance of who he is and how to improve himself and focus on what really matters in life.

12.The last Lecture- Prof. Randy Paush

This is a college professor’s final message to the world before his impending death of cancer at a relatively young age, offering meaningful life advice, significant words of wisdom, and a great deal of optimism and hope for humanity.

13.7 Habits of Highly Effective People- Stephan R. Covey

Teaches you both personal and professional effectiveness by changing your view of how the world works and giving you 7 habits, which, if adopted well, will lead you to immense success.

14.Ignited Minds- Dr. APJ Abdul Kalam

The text entreats the Indian youth to rise to the occasion and light a fire in their minds and hearts.

15.My Experiments With Truth- M. K. Gandhi

This is the autobiography of Mohandas K. “Mahatma” Gandhi. Published in a weekly journal, Navjivan, between 1925 and 1929, it covers the span of time betweenGandhi’s early childhood through roughly 1921. The autobiography seeks to explain the experiential roots of Gandhi’s activist vocation. The book has been recognized as one of the most important spiritual works of the twentieth century.

16.This Side of the Paradise- F. Scott Fitzgerald

This is a semi-autobiographical novel by American author F. Scott Fitzgerald. Considered a quintessential work of the Jazz Age, the novel follows Amory, an impulsive young man who squanders his college education at Princeton and recklessly falls in love with a girl from the South. Amory’s hedonistic lifestyle reflects the broader spirit of America’s capitalist exuberance in the 1920s up until the Great Depression

17.Who Moved My Cheese?- Spencer Johnson

This is a parable about change that takes place in a Maze where four characters look for “Cheese”—cheese being a metaphor for what we want in life. The four imaginary characters depicted in the story—the mice: “Sniff” and “Scurry,” and the Littlepeople: “Hem” and “Haw”—are intended to represent the simple and the complex parts of ourselves.

18.The Monk Who Sold His Ferrari- Robin Sharma

A Fable About Fulfilling Your Dreams and Reaching Your Destiny by motivational speaker and author Robin Sharma is an inspiring tale that provides a step-by-step approach to living with greater courage, balance, abundance and joy. The Monk Who Sold His Ferrari tells the extraordinary story of Julian Mantle, a lawyer forced to confront the spiritual crisis of his out-of-balance life, and the subsequent wisdom that he gains.

19.Atomic Habits- James Clear

This is the definitive guide to breaking bad behaviors and adopting good ones in four steps, showing you how small, incremental, everyday routines compound into massive, positive change over time.

20.Rich Dad Poor Dad- Robert Kiyosaki

Tells the story of a boy with two fathers, one rich, one poor, to help you develop the mindset and financial knowledge you need to build a life of wealth and freedom.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Gode Bengaluru : ಬೆಂಗಳೂರು ಗೋಡೆಗಳ ಮೇಲೆ ಚಿತ್ತಾರ; ʻಗೋಡೆ ಬೆಂಗಳೂರುʼ ಘೋಷಿಸಿದ ಅನ್‌ಬಾಕ್ಸಿಂಗ್‌

BMRCL : ಬಿಎಂಆರ್‌ಸಿಎಲ್‌ ಸಹಯೋಗದೊಂದಿಗೆ ಬೆಂಗಳೂರಿನ ಗೋಡೆಗಳ ಮೇಲೆ ಚಿತ್ರಕಲೆ ಬಿಡಿಸುವ “ಗೋಡೆ ಬೆಂಗಳೂರು” (Gode Bengaluru) ಚಟುವಟಿಕೆಯನ್ನು ಅನ್‌ಬಾಕ್ಸಿಂಗ್‌ ಬೆಂಗಳೂರು ಘೋಷಿಸಿದೆ.

VISTARANEWS.COM


on

By

Gode Bengaluru
Koo

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಗೋಡೆಗಳನ್ನು ಚಿತ್ರಗಳಿಂದ ಕಂಗೊಳಿಸುವಂತೆ ಮಾಡುವ ಉದ್ದೇಶದಿಂದ ಅನ್‌ಬಾಕ್ಸಿಂಗ್‌ ಬೆಂಗಳೂರು ಫೌಂಡೇಷನ್‌, ಬಿಎಂಆರ್‌ಸಿಎಲ್‌ ಸಹಯೋಗದೊಂದಿಗೆ “ಗೋಡೆ ಬೆಂಗಳೂರು” ಶೀರ್ಷಿಕೆಯಡಿ (Gode Bengaluru) ಗೋಡೆಗಳ ಮೇಲೆ ಚಿತ್ರಬಿಡುಸುವ ಉಪಕ್ರಮವನ್ನು ಘೋಷಿಸಿದೆ.

ಬೆಂಗಳೂರಿನಾದ್ಯಂತ ಇರುವ ಗೋಡೆಗಳ ಮೇಲೆ ನಮ್ಮ ಕಲೆ, ಸಂಸ್ಕೃತಿ, ಆಚರಣೆ ಇತ್ಯಾದಿ ಸೊಬಗನ್ನು ಬಿಂಬಿಸುವ ಚಿತ್ರಗಳನ್ನು ಬಿಡಿಸುವ ಚಟುವಟಿಕೆ ನಡೆಸುತ್ತಿದೆ. ಸರ್ಕಾರದ ಸಹಭಾಗಿತ್ವದಲ್ಲಿ ಇದೇ ನವೆಂಬರ್ 30 ರಿಂದ ಡಿಸೆಂಬರ್ 15ರ ವರೆಗೆ “ಬೆಂಗಳೂರು ಹಬ್ಬ”ವನ್ನು ಅದ್ಧೂರಿಯಿಂದ ಅನ್‌ಬಾಕ್ಸಿಂಗ್‌ ಫೌಂಡೇಷನ್‌ ಆಚರಿಸಲು ಸಿದ್ಧತೆ ನಡೆಸುತ್ತಿದೆ.

Gode Bengaluru
Gode Bengaluru

ಇದರ ಭಾಗವಾಗಿ “ಗೋಡೆ ಬೆಂಗಳೂರು” ಚಟುವಟಿಕೆಯನ್ನು ಪ್ರಾರಂಭಿಸಲಾಗುತ್ತಿದೆ. ಬಿಎಂಆರ್‌ಸಿಎಲ್‌ನ ಸಹಯೋಗದಿಂದಿಗೆ “ಗೋಡೆ ಬೆಂಗಳೂರು” ಚಟುವಟಿಕೆ ನಡೆಯಲಿದ್ದು, ನಮ್ಮ ಸಂಸ್ಕೃತಿ ಹಾಗೂ ಕ್ರಿಯಾತ್ಮಕ ಮನೋಭಾವದ ಚಿತ್ರಗಳನ್ನು ಗೋಡೆಗಳ ಮೇಲೆ ಚಿತ್ರಿಸಿ ನಮ್ಮ ನಗರವನ್ನು ಸುಂದವಾಗಿಸಲು ಪ್ರಯತ್ನಿಸಲಾಗುತ್ತಿದೆ. ಈ ಉಪಕ್ರಮವು ಮೆಟ್ರೋ ನಿಲ್ದಾಣಗಳು, ನಗರದ ಪ್ರಮುಖ ಗೋಡೆಗಳ ಮೇಲೆ ಚಿತ್ರಿಸಲಾಗುತ್ತದೆ. ಬೆಂಗಳೂರಿನ ನಿವಾಸಿಗಳು ಹಾಗೂ ಬೆಂಗಳೂರಿಗೆ ಭೇಟಿ ನೀಡುವ ಪ್ರವಾಸಿಗರು ಈ ಸುಂದರ ಕಲೆಗಳ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಈಗಾಗಲೇ ಆಗಸ್ಟ್ ತಿಂಗಳಲ್ಲೇ “ ಗೋಡೆ ಬೆಂಗಳೂರು” ಚಟುವಟಿಕೆಗೆ ಕಲಾವಿದರಿಂದ ಅರ್ಜಿ ಆಹ್ವಾನಿಸಿ, ಹತ್ತು ಪ್ರತಿಭಾವಂತ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಈ ಅರ್ಜಿಗಳನ್ನು 1ಶಾಂತಿರೋಡ್ ಸ್ಟುಡಿಯೋ/ಗ್ಯಾಲರಿಯ ಸಂಸ್ಥಾಪಕ, ದೃಶ್ಯ ಕಲಾವಿದ, ಕಲಾ ಇತಿಹಾಸಕಾರ ಮತ್ತು ಮೇಲ್ವಿಚಾರಕರಾದ ಸುರೇಶ್ ಜಯರಾಮ್, ಕಲಾವಿದೆ ಅರ್ಚನಾ ಹಂಡೆ, ಬಹುಶಿಸ್ತೀಯ ಕಲಾವಿದ ಮತ್ತು ಚಿತ್ರಕಲೆ, ಶಿಲ್ಪಕಲೆ ಕಲಾವಿದಾರದ ರವಿಕುಮಾರ್ ಕಾಶಿ ಈ ತೀರ್ಪುಗಾರರನ್ನು ಒಳಗೊಂಡ ಸ್ವತಂತ್ರ ಸಮಿತಿಯು ಪರಿಶೀಲನೆ ನಡೆಸಿ ಕಲಾವಿದರನ್ನು ಆಯ್ಕೆ ಮಾಡಿದೆ.

ಆಯ್ಕೆಯಾಗಿರುವ ಹತ್ತು ಪ್ರತಿಭಾವಂತ ಕಲಾವಿದರು ಬೆಂಗಳೂರಿನ ಗೋಡೆಗಳ ಮೇಲೆ ಸುಂದರ ಕಲಾಕೃತಿಗಳನ್ನು ರಚಿಸಲಿದ್ದಾರೆ. ಈ ಕಲಾವಿದರು ‘ಬೆಂಗಳೂರು ವರ್ಣಗಳು’ ಎಂಬ ವಿಷಯದ ಸುತ್ತ ಚಿತ್ರಗಳನ್ನು ರಚಿಸಲಿದ್ದಾರೆ. ಇದು ನಗರದ ಸಾರವನ್ನು ಸೆರೆಹಿಡಿಯುವ ಪ್ರಯತ್ನವಾಗಿದೆ. ನಮ್ಮ ನಗರದ ಇತಿಹಾಸ, ಸಂಸ್ಕೃತಿ, ಹಬ್ಬಗಳು, ಸಸ್ಯ ಮತ್ತು ಪ್ರಾಣಿಗಳು ಮತ್ತು ಬೆಂಗಳೂರನ್ನು ಅನನ್ಯವಾಗಿಸುವ ದೈನಂದಿನ ಮೋಡಿ ಸೇರಿದಂತೆ ಹಲವು ಪ್ರಮುಖ ಆಕರ್ಷಣೆಗಳು ಒಳಗೊಂಡರಲಿದೆ.’

ಗೋಡೆ ಬೆಂಗಳೂರಿನ ಮುಖ್ಯ ಕ್ಯುರೇಟರ್, ಕಾಮಿನಿ ಸಾಹ್ನಿ ಮಾತನಾಡಿ, ಈ ವಿನೂತನ ಉಪಕ್ರಮವು ನಮ್ಮ ಹೆಮ್ಮೆಯ ಕಲೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ಎತ್ತಿ ತೋರಿಸಲಿದೆ. “ಗೋಡೆ ಬೆಂಗಳೂರು” ಶೀರ್ಷಿಕೆಯಲ್ಲಿ ಮೂಡಿ ಬರುವ ಗೋಡೆ ಚಿತ್ರಗಳು ಬೆಂಗಳೂರಿನ ಜನರ ಮನಸ್ಸಿನಲ್ಲಿ ಅವಿನಾಭಾವ ಸೆಳೆತ ಸೃಷ್ಟಿಸುವ ಪ್ರಯತ್ನ ಮಾಡಲಿದೆ..
ಈ ಗೋಡೆ ಚಿತ್ರಗಳು ನಮ್ಮ ಸಮುದಾಯ ಎತ್ತ ಸಾಗುತ್ತಿದೆ, ಸಂಸ್ಕೃತಿಯ ಮಹತ್ವ ಇತ್ಯಾದಿ ಅಂಶಗಳನ್ನು ಜನರ ನಡುವೆ ಸಂಭಾಷಣಾ ಕ್ಯಾನ್ವಾಸ್ ಆಗಿ ಕಾರ್ಯನಿರ್ವಹಿಸಬೇಕೆಂದು ನಾವು ಬಯಸುತ್ತೇವೆ. ಪ್ರತಿಯೊಂದು ಕಲೆಯು ಒಂದೊಂದು ವಿಶಿಷ್ಟವಾದ ಕಥೆಯನ್ನು ಹೇಳುತ್ತವೆ, ಈ ಉಪಕ್ರಮವು ಅನುಭವಿ ಮತ್ತು ಉದಯೋನ್ಮುಖ ಕಲಾವಿದರಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಇದು ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಛಾಪು ಮೂಡಿಸಲು ಅನುವು ಮಾಡಿಕೊಡುತ್ತದೆ.

ಬೆಂಗಳೂರು ಹಬ್ಬಾ ಮುಖ್ಯ ಸಂಚಾಲಕ ರವಿಚಂದರ್ ವಿ ಅವರು, ಈ ಉಪಕ್ರಮದ ಬಗ್ಗೆ ಹರ್ಷ ವ್ಯಕ್ತಪಡಿಸಿದರು, “ಗೋಡೆ ಬೆಂಗಳೂರು” ಕೇವಲ ಕಲೆಯನ್ನು ಚಿತ್ರಿಸುವುದಷ್ಟೇ ಅಲ್ಲದೆ, ಇದು ಬೆಂಗಳೂರಿನ ಜನರ ನಡುವೆ ಅವಿನಾಭಾವ ಸಂಬಂಧ ಬೆಸೆಯಲಿದೆ.ಈ ಉಪಕ್ರಮದ ಮೂಲಕ, ನಾವು ನಗರದ ಚೈತನ್ಯ, ವೈವಿಧ್ಯತೆ ಮತ್ತು ಅದನ್ನು ವ್ಯಾಖ್ಯಾನಿಸುವ ನಾವೀನ್ಯತೆಯ ಮನೋಭಾವವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದ್ದೇವೆ. ಕಲೆಯು ಜನರನ್ನು ಒಟ್ಟುಗೂಡಿಸುವ ಮತ್ತು ಸಂಭಾಷಣೆಗಳನ್ನು ಪ್ರೇರೇಪಿಸುವ ಶಕ್ತಿಯನ್ನು ಹೊಂದಿದ್ದು, ಇದನ್ನು ಗೋಡೆ ಬೆಂಗಳೂರಿನ ಮೂಲಕ ಸಾಕಾರಗೊಳಿಸಲಿದ್ದೇವೆ ಎಂದರು.

ಅನ್‌ಬಾಕ್ಸಿಂಗ್ ಬೆಂಗಳೂರು ವತಿಯಿಂದ ಇದೇ ನವೆಂಬರ್‌ ತಿಂಗಳಲ್ಲಿ ಆಚರಿಸಲಾಗುತ್ತಿರುವ “ಬೆಂಗಳೂರು ಹಬ್ಬ”ದ ಮುನ್ನ ವಾರದಲ್ಲಿ “ಗೋಡೆ ಬೆಂಗಳೂರು” ಮೂಲಕ ಗೋಡೆಗಳ ಮೇಲೆ ಕಲಾಕೃತಿಗಳು ಲೈವ್‌ ಇನ್‌ಸ್ಟಾಲ್‌ ಆಗಲಿವೆ. ಈ ಅದ್ಭುತ ಕಲಾಕೃತಿಗಳನ್ನು ಬೆಂಗಳೂರಿಗರು ಕಣ್ತುಂಬಿಕೊಳ್ಳಬಹುದು.

ಬೆಂಗಳೂರು ಹಬ್ಬ 2024

ಬೆಂಗಳೂರು ಹಬ್ಬ ಸರ್ಕಾರಿ ಬೆಂಬಲಿತ, ನಾಗರಿಕ-ಆಧಾರಿತ ಉತ್ಸವವಾಗಿದ್ದು, ಬೆಂಗಳೂರಿಗರಿಗಾಗಿ ಆಚರಿಸುತ್ತದೆ. ಉತ್ಸವದ ಎರಡನೇ ಆವೃತ್ತಿಯು ನವೆಂಬರ್ 30 ರಿಂದ ಡಿಸೆಂಬರ್ 15, 2024 ರವರೆಗೆ ನಡೆಯಲಿದೆ. ಬೆಂಗಳೂರು ಹಬ್ಬವನ್ನು ಅನ್‌ಬಾಕ್ಸಿಂಗ್‌ ಬಿಎಲ್‌ಆರ್ ಫೌಂಡೇಶನ್ ಆಯೋಜಿಸುತ್ತಿದೆ. ಇದು ಲಾಭೋದ್ದೇಶವಿಲ್ಲದ ವೇದಿಕೆ ಆಗಿದ್ದು, ಜನಸಾಮ್ಯರನ್ನು ಸಕ್ರಿಯಗೊಳಿಸುವ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಬೆಂಗಳೂರಿನ ಪ್ರಯಾಣವನ್ನು ಜಾಗತಿಕ ಟೆಕ್ ಹಬ್ ಮತ್ತು ಸಾಂಸ್ಕೃತಿಕ ನಗರಿಯನ್ನಾಗಿ ಆಚರಿಸುತ್ತದೆ. ಬೆಂಗಳೂರು ಹಬ್ಬ ಬೆರಗುಗೊಳಿಸುವ ಪ್ರದರ್ಶನಗಳು ಮತ್ತು ಕಲಾತ್ಮಕ ಪ್ರದರ್ಶನಗಳು ಮತ್ತು ತಲ್ಲೀನಗೊಳಿಸುವ ಅನುಭವಗಳಿಂದ ನಗರದ ರೋಮಾಂಚಕ ಸಂಸ್ಕೃತಿಯನ್ನು ಆಚರಿಸುತ್ತದೆ.

Continue Reading

ಬೆಂಗಳೂರು

Siddheshwar Temple : ಸೊಲ್ಲಾಪುರದ ಸಿದ್ದೇಶ್ವರ ದೇಗುಲದ ಆವರಣದಲ್ಲಿ ವಚನಕಾರ ಸಿದ್ದರಾಮನ ವಚನಗಳ ಅಳವಡಿಕೆಗೆ ಕಸಾಪ ಆಗ್ರಹ

ಸೊಲ್ಲಾಪುರದ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ವಚನಕಾರ ಸಿದ್ದರಾಮನ ವಚನಗಳನ್ನು ಅಳವಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.

VISTARANEWS.COM


on

By

Siddeshwara Temple
Koo

ಬೆಂಗಳೂರು: ಪ್ರಸಿದ್ಧ ವಚನಕಾರನಾದ ಸೊನ್ನಲಿಗೆಯ ಸಿದ್ದರಾಮ, ಸೊಲ್ಲಾಪುರದಲ್ಲಿ ಸ್ಥಾಪಿಸಿದ ಸಿದ್ದೇಶ್ವರ ಗುಡಿಯಲ್ಲಿ (Siddheshwar Temple) ಸಿದ್ದರಾಮನ ಆಯ್ದ ವಚನಗಳನ್ನು ಕನ್ನಡ ಮತ್ತು ಮರಾಠಿ ಭಾಷೆಯ ಫಲಕಗಳಲ್ಲಿ ಮುದ್ರಿಸಿ, ದೇವಸ್ಥಾನದ ಆವರಣದಲ್ಲಿ ತೂಗುಹಾಕಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ದೇವಳದ ಆಡಳಿತ ಮಂಡಳಿಯನ್ನು ಆಗ್ರಹಿಸಿದ್ದಾರೆ.

ಈ ಕುರಿತಂತೆ ಆಡಳಿತ ಮಂಡಳಿಯ ಮುಖ್ಯಸ್ಥರಿಗೆ ಪತ್ರ ಬರೆದು ಮಾತನಾಡಿದ ಡಾ. ಬಿಳಿಮಲೆ ಪ್ರಸಿದ್ಧ ವಚನಕಾರನಾದ ಸೊನ್ನಲಿಗೆಯ ಸಿದ್ದರಾಮ ಕಲ್ಯಾಣ ಕ್ರಾಂತಿಯ ಕೇಂದ್ರ ಬಿಂದುವಾಗಿದ್ದ ಶೂನ್ಯ ಸಿಂಹಾಸನವನ್ನೇರಿದ ಮೂರನೆಯ ಅನುಭಾವಿ ಆಗಿದ್ದ. ತನ್ನ ಕಾಯಕ ತತ್ವದಿಂದಲೇ ಪ್ರಸಿದ್ಧನಾಗಿದ್ದ ಆತ, ಶರೀರವನ್ನು ವ್ಯರ್ಥವಾಗಿ ಕಳೆಯಬಾರದೆಂಬ ನಿಲುವನ್ನು ಹೊಂದಿದ್ದ. ಸಿದ್ದರಾಮ ಕಟ್ಟಿಸಿದ ಕೆರೆಗಳು ಮತ್ತು ಅರವಟ್ಟಿಗೆಗಳು ಇಂದಿಗೂ ಬದುಕುಳಿದಿದ್ದು, ಅವರ ಸಾಮಾಜಿಕ ಬದ್ಧತೆ ಅನನ್ಯವಾದುದು ಎಂದಿದ್ದಾರೆ.

ಕರ್ನಾಟಕ ಏಕೀಕರಣದ ನಂತರ ಸಿದ್ದರಾಮನ ಹುಟ್ಟೂರಾದ ಸೊನ್ನಲಿಗೆಯು ಮಹಾರಾಷ್ಟ್ರಕ್ಕೆ ಸೇರಿ, ಆ ಪ್ರದೇಶವು ಮರಾಠಿಮಯವಾಗುತ್ತಲೇ ಹೋಯಿತು. ಇವತ್ತು ಅಲ್ಲಿ ಕನ್ನಡ ಕಾಣೆಯಾಗಿದ್ದು, ಜನರಿಗೂ ಸಿದ್ದರಾಮನ ಮಹತ್ವ ತಿಳಿಯದ ಸ್ಥಿತಿ ನಿರ್ಮಾಣವಾಗಿದೆ. ಕಪಿಲ ಸಿದ್ಧಮಲ್ಲಿಕಾರ್ಜುನನ ಅಂಕಿತದಲ್ಲಿ ೧೯೦೦ಕ್ಕೂ ಹೆಚ್ಚು ವಚನಗಳನ್ನು ಬರೆದ ಸಿದ್ದರಾಮನ ಹೆಸರು ಹೀಗೆ ಮರೆಯಾಗುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.

ಕನ್ನಡ ಮತ್ತು ಮರಾಠಿಯಲ್ಲಿ ಸಿದ್ದರಾಮನ ವಚನಗಳ ಸಂದೇಶವು ದೇವಸ್ಥಾನದ ಆವರಣದಲ್ಲಿಯೇ ದೊರೆತಲ್ಲಿ, ಅದು ಭಾಷಾ ಸೌಹಾರ್ದತೆಯ ಸಂಕೇತವಾಗುತ್ತದೆಯಷ್ಟೇ ಅಲ್ಲ, ನಾಗರಿಕ ಸಮಾಜಕ್ಕೆ ದೊರೆಯಬಹುದಾದ ಅತ್ಯುತ್ತಮ ಸಂದೇಶವೂ ಆಗುತ್ತದೆ ಎಂದಿದ್ದಾರೆ. ತಮ್ಮ ಕೋರಿಕೆಯನ್ನು ಸಕಾರಾತ್ಮಕವಾಗಿ ಪರಿಗಣಿಸಿರುವ ಆಡಳಿತ ಮಂಡಳಿಯು ಇಷ್ಟರಲ್ಲಿಯೇ ಕ್ರಮವಹಿಸಲಿದೆ ಎಂದು ಸಹ ಡಾ. ಬಿಳಿಮಲೆ ಹೇಳಿದ್ದಾರೆ.

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧ ಹೇಗಿತ್ತು?

ಧವಳ ಧಾರಿಣಿ ಅಂಕಣ: ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧದ ಅಪರೂಪದ ಸನ್ನಿವೇಶ ಇಲ್ಲಿದೆ. ವಾನರೇಂದ್ರನ ಮಂತ್ರಿ ಕೋಸಲೇಂದ್ರನ ದಾಸನಾದ ಪ್ರಸಂಗವಿದು.

VISTARANEWS.COM


on

By

dhavala dharini column Hanuman's setubandha to meet Sugriva in ramayana by narayana yaji
Koo

ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧದ ಅಪರೂಪದ ಸನ್ನಿವೇಶ

dhavala dharini by Narayana yaji

ಧವಳ ಧಾರಿಣಿ ಅಂಕಣ: ಭವತಾ ಸಖ್ಯಕಾಮೌ ತೌ ಭ್ರಾತರೌ ರಾಮಲಕ್ಷ್ಮಣೌ.
ಪ್ರತಿಗೃಹ್ಯಾರ್ಚಯಸ್ವೈತೌ ಪೂಜನೀಯತಮಾವುಭೌ৷৷ ಕಿ.5.7৷৷

ಸಹೋದರರಾದ ರಾಮಲಕ್ಷ್ಮಣರು ನಿನ್ನೊಡನೆ ಗೆಳೆತನವನ್ನು ಬೆಳೆಸುವ ಆಶಯವನ್ನು ಹೊಂದಿದ್ದಾರೆ. ಪೂಜನೀಯರಾದ ಇವರಿಬ್ಬರನ್ನೂ ನೀನು ಯಥೋಚಿತವಾಗಿ ಪ್ರತಿಗ್ರಹಿಸಿ ಪೂಜಿಸಬೇಕು

ರಾಮಾಯಣದ ಕಿಷ್ಕಿಂಧಾಕಾಂಡದಿಂದ ತೊಡಗಿ ಯುದ್ಧ ಕಾಂಡದಕೊನೆಯ ತನಕ ಸುಗ್ರೀವ ಪ್ರಮುಖವಾದ ಪಾತ್ರವನ್ನು ವಹಿಸುತ್ತಾನೆ. ಅನೇಕ ಸಲ ಆತನ ವ್ಯಕ್ತಿತ್ವ ಮರ್ಕಟ ಸ್ವಭಾವಕ್ಕೆ ಅನುಗುಣವಾಗಿದೆ. ವಾಲಿಯನ್ನು ಸಂಹರಿಸಿದ ನಂತರದಲ್ಲಿ ಸೀತಾನ್ವೇಷಣೆಗೆ ಪ್ರಾರಂಭಿಸಿದನೋ, ಅಲ್ಲಿಂದ ಆತ ತುಂಬಾ ಪ್ರೌಢತ್ವದಿಂದಲೇ ವ್ಯವಹರಿಸುತ್ತಾನೆ. ಸುಗ್ರೀವನ ಜೊತೆ ರಾಮನ ಸಖ್ಯದಲ್ಲಿ ಆತನ ವ್ಯವಹಾರ ಮೇಲ್ನೋಟಕ್ಕೆ ಚಂಚಲತೆಯಿಂದ ಕೂಡಿತ್ತು ಎಂದು ತೋರಿದರೂ ವಾಸ್ತವವಾಗಿ ಆತ ಸೂಕ್ಷ್ಮವಾಗಿ ಎದುರಾದವರನ್ನು ಅಭ್ಯಸಿಸುತ್ತಿದ್ದ. ವಾಲಿ ಆತನನ್ನು ರಾಜ್ಯದಿಂದ ಹೊರಗಟ್ಟಿ ಆತನನ್ನು ಕೊಲ್ಲಬೇಕೆಂದು ಇಡೀ ಪ್ರಪಂಚವನ್ನೆಲ್ಲಾ ಓಡಾಡಿಸಿದ ವಿಷಯವನ್ನು ಸವಿಸ್ತಾರವಾಗಿ ಹಿಂದಿನ ಸಂಚಿಕೆಯಲ್ಲಿ ಗಮನಿಸಿದ್ದೇವೆ. ಮತಂಗ ಋಷಿಯ ಶಾಪದ ಕಾರಣಕ್ಕೆ ವಾಲಿಗೆ ಮತಂಗಾಶ್ರಮವಿರುವ ಋಷ್ಯಮೂಕ ಪರ್ವತವನ್ನು ತನ್ನ ಅಡಗುದಾಣವನ್ನಾಗಿಸಿಕೊಂಡ. ಋಷ್ಯಮೂಕ ಪರ್ವತಕ್ಕೆ ಆ ಹೆಸರು ಬಂದಿರುವುದಕ್ಕೆ ಕಾರಣ ಅದು ತಪಸ್ವಿಗಳ ಜ್ಞಾನಾರ್ಜನಗೆ ಹೇಳಿ ಮಾಡಿಸಿದ ಸ್ಥಳವಾಗಿತ್ತು ಎನ್ನುವ ಕಾರಣಕ್ಕಾಗಿ. ಋಷೀಣಾಂ ತತ್ರ ಪ್ರಾಪ್ವಾನಾಂ ಅಮೂಕಃ- ಅಲ್ಲಿಗೆ ಹೋದ ಋಷಿಗಳ ಅಜ್ಞಾನವು ಹೋಗಿಬಿಡುತ್ತಿತ್ತು ಹಾಗಾಗಿ ಆ ಪರ್ವತಕ್ಕೆ ಋಷ್ಯಮೂಕವೆನ್ನುವ ಹೆಸರು ಬಂತು. ಮೌನಿಗಳಾದ ಋಷಿಗಳ ಪರ್ವತ ಎನ್ನುವ ಇನ್ನೊಂದು ಅರ್ತವೂ ಋಷ್ಯಮೂಕಕ್ಕೆ ಇದೆ. ಅಲ್ಲಿ ಮತಂಗ ಮುನಿಗಳು ಮೌನವಾಗಿಯೇ ತಪಸ್ಸಿಗೆ ಕುಳಿತಿರುತ್ತಿದ್ದರು.

ದುಂದುಭಿಯಂತಹ ರಾಕ್ಷಸನನ್ನು ಕೊಂದು ವಾಲಿ ಲೋಕಕ್ಕೆ ಉಪಕಾರವನ್ನು ಮಾಡಿದರೂ ಆತನಿಗೆ ಶಾಪ ಏತಕ್ಕೆ ಬಂತು ಎಂದು ಅನುಕಂಪ ಬರುವುದು ಸಹಜ. ವಾಲಿ ಮತ್ತು ದುಂದುಭಿಯ ಜಗಳದ ಹಿನ್ನೆಲೆಯನ್ನು ಗಮನಿಸಬೇಕು. ದುಂದುಭಿ ಕೋಣನ ಆಕಾರವನ್ನು ಹೊಂದಿದ್ದ ರಾಕ್ಷಸ. ಆತನಿಗೆ ಸಾವಿರ ಆನೆಯ ಬಲವಿತ್ತು. ತನ್ನ ಪರಾಕ್ರಮವನ್ನು ತೋರುವ ಹುಚ್ಚು. ಆ ಕಾರಣಕ್ಕಾಗಿ ಆತ “ಮಹ್ಯಂ ಯುದ್ಧ ಪ್ರಯಚ್ಛ- ನನಗೆ ಯುದ್ಧದ ಆತಿಥ್ಯವನ್ನು ನೀಡಿ” ಎಂದು ಎಲ್ಲಾ ಬಲಶಾಲಿಗಳ ಹತ್ತಿರ ಹೋಗಿ ಕೇಳಿದ್ದ. ಮೊದಲು ಆತ ಹೋಗಿದ್ದು ಸಮುದ್ರ ರಾಜನಲ್ಲಿಗೆ.

ಮುದ್ರದೊಡಯನಿಗೆ ಆತನೊಡನೆ ಯುದ್ಧ ಮಾಡುವ ಸಾಮರ್ಥ್ಯವಿಲ್ಲವೆಂದು ಅರ್ಥವಲ್ಲ; ಇದು ವೃಥಾ ಜಗಳ, ಅದರಿಂದ ತನ್ನೊಡಲಲ್ಲಿದ್ದ ಜಲಚರಗಳಿಗೆ ತೊಂದರೆಯಾಗುತ್ತದೆ ಎಂದು ಆತ ಪರ್ವತಗಳ ರಾಜನಾದ ಹಿಮವಂತನನ್ನು ತೋರಿಸಿದ. ಆತ ದುಂದುಭಿಯ ಆಹ್ವಾನವನ್ನು ನಿರಾಕರಿಸುವ ಕಾರಣ ತನ್ನಲ್ಲಿ ಸತ್ವಗುಣಶೀಲರಾದ ತಪಸ್ವಿಗಳು ತಪಸ್ಸನ್ನು ಮಾಡುತ್ತಿದ್ದಾರೆ. ಅವರ ತಪಸ್ಸಿಗೆ ಭಂಗಬಾರದೆನ್ನುವಕಾರಣಕ್ಕಾಗಿ ಜಗಳಕ್ಕೆ ಬರಲು ಒಪ್ಪುವುದಿಲ್ಲ. ಜಗಳವೆನ್ನುವುದು ಇನ್ನೊಬ್ಬರ ಶಾಂತತೆಗೆ ಭಂಗತರುವಂತಹುದಾಗಬಾರದು ಎನ್ನುವ ವಿವೇಕ ಇರಬೇಕು. ಸಮುದ್ರರಾಜನಾಗಲಿ, ಹಿಮವಂತನಾಗಲೀ ದುಂದುಭಿಯ ಯುದ್ಧಾಹ್ವಾನವನ್ನು ತಿರಸ್ಕರಿಸಿದರು ಎಂದ ಕಾರಣಕ್ಕೆ ಅವರು ಸಣ್ಣವರೇನೂ ಆಗಲಿಲ್ಲ. ವಾಲಿ ಜಗಳಕ್ಕೆ ಒಪ್ಪಿದ್ದೂ ಅಲ್ಲದೇ ಯುದ್ಧಮಾಡಿ ಆ ರಾಕ್ಷಸನನ್ನು ಕೊಂದಮೇಲೆ ಆತನ ದೇಹವನ್ನು ಒಂದು ಯೋಜನದಷ್ಟು ದೂರ ಎಸೆದನು. ಆಗ ಸಿಡಿದ ರಕ್ತದ ಹನಿಗಳೂ ಮತಂಗ ಆಶ್ರಮದಲ್ಲಿ ಬಿದ್ದು ಆಶ್ರಮ ಮಲಿನವಾಯಿತು. ಸತ್ತಮೇಲೆ ವೈರವಿರಕೂಡದು ಎನ್ನುತ್ತದೆ ಧರ್ಮಶಾಸ್ತ್ರ. ವಾಲಿ ಸತ್ತಮೇಲೆಯಾಗಲೀ, ರಾವಣ ಸತ್ತಮೇಲೆಯಾಗಲಿ ಅವರ ಕಳೇಬರಕ್ಕೆ ರಾಮ ಗೌರವಯುತವಾಗಿ ಅಂತ್ಯಸಂಸ್ಕಾರವನ್ನು ಮಾಡಿಸುತ್ತಾನೆ. ವಿಭೀಷಣ ರಾವಣನ ಸಂಸ್ಕಾರಕ್ಕೆ ಒಪ್ಪದಿದ್ದರೆ ತಾನೇ ರಾವಣನ ಅಂತ್ಯಸಂಸ್ಕಾರವನ್ನು ಮಾಡುತ್ತೇನೆ ಎನ್ನುತ್ತಾನೆ. ಮತಂಗರು ಶಾಪವನ್ನು ಕೊಡುವಾಗ ಹೇಳುವ ಮಾತು

ಯೇನಾಹಂ ಸಹಸಾ ಸ್ಪೃಷ್ಟಶ್ಶೋಣಿತೇನ ದುರಾತ್ಮನಾ.

ಕೋಯಂ ದುರಾತ್ಮಾ ದುರ್ಭುದ್ಘಿರಕೃತಾತ್ಮಾ ಚ ಬಾಲಿಶಃ II ಕಿ.11.50৷৷

ನನ್ನನ್ನು ಅಪವಿತ್ರವಾದ ರಕ್ತದ ಮೂಲಕ ಮುಟ್ಟಿದ ದುರಾತ್ಮನು ಯಾವನು. ಮೂಢನಾದ, ದುರಾತ್ಮನಾದ, ದುರ್ಬುದ್ಧಿಯುಳ್ಳ, ಜಿತೇಂದ್ರಿಯನಲ್ಲದ (ಅಕೃತಾತ್ಮಾ) ಆ ಮೂರ್ಖನು ಯಾರಾಗಿಬಹುದು”

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡದಲ್ಲಿನ ರಾಜನೀತಿಯ ವಿಲಕ್ಷಣ ಘಟನೆ

ಇಲ್ಲಿ ಜಿತೇಂದ್ರಿಯ ಎನ್ನುವ ಶಬ್ಧವನ್ನು ಬಳಸಿದ್ದಾರೆ. ಮೈತೀಟೆಯನ್ನು ತೀರಿಸಿಕೊಳ್ಳುವುದಕ್ಕೆ ಯುದ್ಧವಲ್ಲ. ಲೋಕ ಹಿತಕ್ಕಾಗಿ ಯುದ್ಧ ಅಪರಾಧವಲ್ಲ. ಇಲ್ಲಿ ವಾಲಿ ಕೇವಲ ರಕ್ತದಿಂದ ಆಶ್ರಮವನ್ನು ಮಲಿನಮಾಡಿದ್ದಲ್ಲ. ಪರ್ವತಮಯವಾದ ದುಂದುಭಿಯ ದೇಹವನ್ನು ಬಿಸುಟು ಆಶ್ರಮದ ವೃಕ್ಷಗಳೆಲ್ಲವನ್ನೂ ಧ್ವಂಸಮಾಡಿದ್ದಾನೆ. ಅವರಿಗೆ ಈ ಕೃತ್ಯವನ್ನು ನಡೆಸಿದವ ವಾಲಿ ಎನ್ನುವುದು ತಿಳಿಯಿತು. “ಯಾವಾತ ಈ ಕೃತ್ಯವನ್ನು ಎಸಗಿದವೋ ಆತನೇನಾದರೂ ಇನ್ನುಮುಂದೆ ಈ ಆಶ್ರಮದ ಪ್ರದೇಶಕ್ಕೆ ಬಂದರೆ ಇಲ್ಲಿಯೇ ಮರಣ ಹೊಂದುವನು. ಪುತ್ರನಂತೆ ಅಕ್ಕರೆಯಿಂದ ಬೆಳೆಸಿದ ಅವರ ಆಶ್ರಮದ ಗಡ್ಡೆಗೆಣಸುಗಳ ವಿನಾಶಾರ್ಥವಾಗಿ ಆತನ ಮಂತ್ರಿಗಳೇನಾದರೂ ಆತನ ಆಶ್ರಮದ ಪರಿಸರದಲ್ಲಿದ್ದರೆ ಅವರು ಒಂದು ದಿನಗಳೊಳಗಾಗಿ ಆ ಪ್ರದೇಶದಿಂದ ಹೊರಟುಬಿಡಬೇಕು. ಹೋಗದೇ ಉಳಿದರೆ ಅಂತವರು ಹಲವಾರು ಸಾವಿರ ವರುಷಗಳ ಕಾಲ ಕಲ್ಲಾಗಿಬಿಡುವರು” ಎನ್ನುವ ಶಾಪ ಕೊಟ್ಟರು. ವಿಷಯ ಅರಿತ ವಾಲಿ ಓಡೋಡಿ ಬಂದು ಮತಂಗ ಮುನಿಗಳಿಗೆ ತನ್ನನ್ನು ಕ್ಷಮಿಸಿ ಎಂದರೂ ಅವರು ಕ್ಷಮಿಸದೇ ಆಶ್ರಮವನ್ನೇ ಬಿಟ್ಟು ಹೊರಟುಹೋದರು. ಆ ನಂತರದಲ್ಲಿ ವಾಲಿಯಾಗಲೀ ಆತನ ಕಡೆಯವರಾಗಲೀ, ಶಾಪದ ಭಯದಿಂದ ಮತಂಗಾಶ್ರಮದ ಪರಿಸರಕ್ಕೆ ಬರುತ್ತಿರಲಿಲ್ಲ. ವಾಲಿ ಸುಗ್ರೀವ ಎಲ್ಲಿಯೇ ಅಡಗಿದ್ದರೂ ಆತನನ್ನು ಹುಡುಕಿ ಕೊಲ್ಲಲು ಬರುತ್ತಿದ್ದ ಎಂದು ಅನಿಸುತ್ತದೆ. ತನ್ನ ಜೀವ ಉಳಿಸಿಕೊಳ್ಳಲು ಸುಗ್ರೀವ ಪ್ರಪಂಚದ ಎಲ್ಲಾ ಕಡೆ ನಿರಂತರವಾಗಿ ಎಲ್ಲಿಯೂ ನಿಲ್ಲದೇ ಹಾರುತ್ತಿದ್ದ. ಶಾಪದ ಘಟನೆ ಹನುಮಂತನಿಗೆ ಅದುಹೇಗೋ ತಿಳಿಯಿತು. ಆತ ಈ ವಿಷಯವನ್ನು ಸುಗ್ರೀವನಿಗೆ ಹೇಳಿದ. ಮತಂಗಮುನಿಗಳ ಶಾಪದ ಕಾರಣದಿಂದ ಋಷ್ಯಮೂಕ ಪರ್ವತ ಸುಗ್ರೀವನಿಗೆ ಸುರಕ್ಷಿತ ತಾಣವಾಗಿ ಉಳಿಯಿತು. ಸುಗ್ರೀವ ತನ್ನ ಹತ್ತಿರವೇ ಬಂದು ಉಳಿದದ್ದು ನೋಡಿದ ವಾಲಿಗೆ ಮೈ ಪರಚಿಕೊಳ್ಳುವಂತಾಗಿದ್ದಂತೂ ಸತ್ಯ.

ಲಕ್ಷ್ಮಣನಿಂದ ಸಮಾಧಾನಿಸಲ್ಪಟ್ಟ ರಾಮ ಋಷ್ಯಮೂಕ ಪರಿಸರದಲ್ಲಿ ತಿರುಗಾಡುತ್ತಿರುವುದನ್ನು ದೂರದಲ್ಲಿಯೇ ನೋಡಿದ ಸುಗ್ರೀವನಿಗೆ ನಡುಕ ಉಂಟಾಯಿತು. ಅವರ ತೇಜಸ್ಸು ಆತನನ್ನು ಭಯಪಡಿಸಿತು. ವಾಲಿಯೇನಾದರೂ ತನ್ನನ್ನು ಕೊಲ್ಲಲು ಬೇರೆಯವರನ್ನು ಕಳುಹಿಸಿರಬಹುದೆನ್ನುವ ಸಂಶಯದಿಂದ ಆತನ ಚಲನವಲನಗಳೇ ನಿಂತು ಹೋಯಿತು. ಆತ ಹೆದರಿಕೆಯಿಂದ ಏನು ಮಾಡುವುದು ಎಂದು ತಿಳಿಯದೇ ಒಂದು ಪರ್ವತದಿಂದ ಇನ್ನೊಂದು ಪರ್ವತಕ್ಕೆ ಹಾರತೊಡಗಿದ. ಆಗ ಹನುಮಂತ ಸುಗ್ರೀವನಿಗೆ ಸಮಾಧಾನವನ್ನು ಹೇಳಿ “ನೀನು ರಾಜನಾದವನು, ಹೀಗೆ ಹೆದರಕೂಡದು. ಚನ್ನಾಗಿ ಆಲೋಚಿಸಿ ಅವರ ಹಾವ ಭಾವವನ್ನು ತಿಳಿದು ಶತ್ರುವೋ ಅಲ್ಲವೋ ಎನ್ನುವುದನ್ನು ತಿಳಿಯಬೇಕೆನ್ನುತ್ತಾನೆ. ಸುಗ್ರೀವ ಹನುಮಂತನಿಗೆ ಬಂದವರು ಯಾರು ಎಂದು ತಿಳಿದುಕೊಂಡು ಬರಲು ಕಳಿಸುತ್ತಾನೆ.

ನಮ್ಮ ರಾಜ್ಯದ ಆನೆಗೊಂದಿಯಲ್ಲಿ ಹನುಮಂತ ಮೊದಲು ರಾಮ ಲಕ್ಷ್ಮಣರನ್ನು ಭೆಟ್ಟಿಮಾಡಿರುವುದು. ಇಲ್ಲಿಯತನಕ ಸುಗ್ರೀವನ ಸಚಿವನಾಗಿದ್ದ ಹನುಮಂತ ಇಲ್ಲಿಂದ ಮುಂದೆ “ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ” ಎಂದು ಪ್ರಸಿದ್ದನಾಗುವುದಕ್ಕೆ ಪೀಠಿಕೆ ಇದು. ಕಪಿಯ ರೂಪದಲ್ಲಿದ್ದರೆ ಯಾರಿಗೂ ನಂಬಿಕೆ ಹುಟ್ಟಲು ಸಾಧ್ಯವಿಲ್ಲವೆಂದು ಹನುಮಂತ ಬಿಕ್ಷುವಿನ ರೂಪದಲ್ಲಿ ರಾಮನ ಪರಿಚಯವನ್ನು ಕೇಳುತ್ತಾನೆ. ಕಿಷ್ಕಿಂಧಾ ಕಾಂಡದ 3 ನೆಯ ಸರ್ಗದಲ್ಲಿ ಹನುಮಂತ ರಾಮನ್ನು ಮಾತಾಡಿಸುವಾಗ ಉಪಯೋಗಿಸುವ ಭಾಷೆ, ದೇಹದ ಭಂಗಿ, ವಿನೀತ ಭಾವ, ತನ್ನ ಒಡೆಯನ ಕುರಿತು ಗೌರವ ಇವೆಲ್ಲವೂ ಸಮ್ಮಿಳಿತವಾಗಿದ್ದವು. ದೀರ್ಘವಾಗಿ ಮಾತಾಡಿದ್ದರಲ್ಲಿ ಒಂದೇ ಒಂದು ಅಪಶಬ್ಧವೂ ಇಲ್ಲವಾಗಿತ್ತು. ದೇಹದ ಯಾವ ಅವಯವಗಳಲ್ಲಿಯೂ ಯಾವುದೇ ದೋಷವಿರಲಿಲ್ಲ. ವಿಷಯನಿರೂಪಣೆಯಲ್ಲಿ ವಿಸ್ತಾರವಿರಲಿಲ್ಲ. ಸಮಯಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡಿದ್ದನು. ಸಂಶಯಕ್ಕೆಡೆಮಾಡುವಂತಹ ಯಾವ ಮಾತನ್ನೂ ಆತ ಆಡಲಿಲ್ಲ. ಮದ್ಯಸ್ವರದಲ್ಲಿ ವ್ಯಾಕರಣದಿಂದ ಸಂಸ್ಕೃತವಾದ ಶಬ್ದಗಳನ್ನು ಬಳಸಿ ಯಾವ ಯಾವ ವಾಕ್ಯಗಳನ್ನು ಎಲ್ಲೆಲ್ಲಿ ಆಡಬೇಕೋ ಅದನ್ನು ಮಾತ್ರವೇ ಆಡಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಕೇಳುವವರ ಮನಸ್ಸಿಗೆ ಹರ್ಷವನ್ನುಂಟುಮಾಡುವ ಶುಭಕರವಾದ ಮಾತುಗಳನ್ನೇ ಆಡಿದ್ದ. ಇಲ್ಲಿ ಒಂದು ಸಂಶಯ ಬರುತ್ತದೆ. ಅಷ್ಟೊಂದು ಸುಂದರವಾಗಿ ಮಾತನಾಡಿದ್ದ ಹನುಮಂತ ತನ್ನ ವೇಷವನ್ನು ಮರೆಮಾಚಿ ಬಿಕ್ಶುವಿನ ವೇಷವನ್ನು ಧರಿಸಿರುವುದು ವಂಚನೆಯಲ್ಲವೇ. ಅದಕ್ಕೆ ವಾಲ್ಮೀಕಿ ಪ್ರಾರಂಬದಲ್ಲಿಯೇ ಹೇಳಿದ್ದಾನೆ. ನೇರವಾಗಿ ಆತ ಕಪಿಯ ರೂಪದಲ್ಲಿಯೇ ಹೋದರೆ ಆತ ಆಡುವ ಮಾತಿನ ಶೈಲಿಗೂ ಆತನ ಬಹಿರಂಗ ರೂಪಕ್ಕೂ ಅಂತರ ಕಂಡು ಇದು ಯಾವುದೋ ಮಾಯೆ ಎನ್ನುವ ಭಾವಕ್ಕೆ ರಾಮ ಲಕ್ಷ್ಮಣರು ಬರುವ ಸಾಧ್ಯತೆಯಿದೆ. ಬಿಕ್ಷುವಿನ ವೇಷವಾದರೆ ಆಡುವ ಮಾತಿಗೆ ಸಾಮ್ಯತೆ ಬರುತ್ತದೆ. ಅದೂ ಅಲ್ಲದೇ ರಾಮ ಲಕ್ಷ್ಮಣರೂ ಸಹ ತಾಪಸಿಗಳಂತೆ ಇದ್ದರು. ಆದರೆ ಅವರ ಕೈಯಲ್ಲಿ ಬಿಲ್ಲು ಬಾಣಗಳಿದ್ದವು. ಬತ್ತಳಿಕೆ ಬಿಗಿದ್ದರು. ಹೀಗಿರುವಾಗ ಅವರನ್ನು ಮೊದಲು ನೋಡಲು ಸರ್ವಮಾನ್ಯವಾದ ಬಿಕ್ಷುವಿನ ರೂಪ ಧರಿಸಿದರೆ ಅವರು ತನ್ನ ಕಡೆಗೆ ಗಮನವನ್ನು ಹರಿಸುತ್ತಾರೆ ಎನ್ನುವುದಾಗಿದೆ. ರಾಮ ಲಕ್ಷ್ಮಣರನ್ನು ಹತ್ತಿರದಿಂದ ಕಂಡಾಗ ಅವರಲ್ಲಿ ದಿವ್ಯ ಪ್ರಭೆ ದೇದೀಪ್ಯಮಾನವಾಗಿ ಬೆಳಗುತ್ತಿತ್ತು. ಆ ಪ್ರಭೆಯ ಎದುರು ಹನುಮಂತನಿಗೆ ತಾನು ವೇಷವನ್ನು ಮರೆಮಾಚಿರುವ ವಿಷಯವನ್ನು ಮುಚ್ಚಿಟ್ಟುಕೊಳ್ಳಲಾವದಾಗಲಿಲ್ಲ. ಆತ ತಾನು ಬಿಕ್ಷುವಿನ ವೇಷವನ್ನು ಧರಿಸಿ ಬಂದವ. ಕಾಮರೂಪಿಯಾದ ತಾನು ಇಚ್ಛೆಬಂದ ಕಡೆ ಹೋಗಬಲ್ಲೆ, ಇಚ್ಛೆಬಂದ ರೂಪವನ್ನು ಧರಿಸಬಲ್ಲೆ ಎಂದು ಪ್ರಾರಂಭದಲ್ಲಿಯೇ ಹೇಳಿಬಿಡುತ್ತಾನೆ. ಸುಗ್ರೀವನ ಸಚಿವ ತಾನು, ಆತನಿಗೆ ಪ್ರಿಯವನ್ನುಂಟುಮಾಡಬೇಕೆಂಬ ಆಶಯದಿಂದ ಈ ವೇಷದಲ್ಲಿ ಬಂದಿರುವೆ ಎನ್ನುತ್ತಾನೆ. ಆತನ ಮಾತಿನಲ್ಲಿ ಎಲ್ಲಿಯೂ ಕಪಟತೆ ತಿಲಮಾತ್ರವೂ ಇರಲಿಲ್ಲ. ಧ್ವನಿ ಹೃದಯ ಕಂಠ ಮತ್ತು ಮುಖಗಳ ಮೂಲಕವಾಗಿ ಹೊರಬರುತ್ತಿತ್ತು. ತನ್ನೊಡೆಯನ ಕ್ಷೇಮಕ್ಕಾಗಿ ವೇಷಧರಿಸುವುದು ಅಗತ್ಯವಿತ್ತು. ಆದರೆ ಅವರನ್ನು ನೋಡಿದಾಗ ಅದರ ಅವಶ್ಯಕತೆ ಉಳಿದಿಲ್ಲ ಎನ್ನುವುದು ಆತನ ಮಾತಿನ ಸಾರಾಂಶವಾಗಿತ್ತು. ರಾಮನಿಗೆ ಆತನ ಸರಳ ಮತ್ತು ಸುಂದರವಾದ ಭಾಷೆಯನ್ನು ಕೇಳಿ ಆನಂದವಾಯಿತು. ಅದಕ್ಕಿಂತಲೂ ಆತ ಸುಗ್ರೀವನ ಸಚಿವನೆನ್ನುವುದನ್ನು ಕೇಳಿ ಇಮ್ಮಡಿ ಆನಂದವಾಯಿತು. ಯಾರನ್ನು ತಾವು ಹುಡುಕಲು ಬಂದ್ದೇವೆಯೋ ಆತನ ಸಚಿವನೇ ತನ್ನನ್ನು ಎದುರುಗೊಳ್ಳಲು ಬಂದಿದ್ದಾನೆ. ಇದರಿಂದ ಅಯೋಧ್ಯೆಯ ಚಕ್ರವರ್ತಿ ಮನೆತನದವರು ಅಪರಿಚಿತರಂತೆ ಬೇರೊಬ್ಬರ ಭೇಟಿಗೆ ಹೋಗಿರುವುದಲ್ಲ, ರಾಜಪರಂಪರೆಯ ನಡಾವಳಿಯಂತೆ (Protocol) ಸಚಿವನೋರ್ವ ಎದುರುಗೊಳ್ಳಲು ಬಂದಿದ್ದಾನೆ. ರಾಜರುಗಳನ್ನು ಎದುರುಗೊಳ್ಳಲು ಯಾರು ಯಾರು ಹೋಗಬೇಕೆನ್ನುವ ನಡಾವಳಿಕೆಗಳು ಪ್ರಾಚೀನ ಕಾಲದಲ್ಲಿಯೂ ಇತ್ತು. ರಾಮನಿಗೆ ಆತನ ವ್ಯಕ್ತಿತ್ವ ಮೊದಲ ಭೇಟಿಯಲ್ಲಿಯೇ ಇಷ್ಟವಾಯಿತು. ಲಕ್ಷ್ಮಣನಿಗೆ ಆತ ಹೇಳುವ ಮಾತು

ನಾನೃಗ್ವೇದವಿನೀತಸ್ಯ ನಾಯಜುರ್ವೇದಧಾರಿಣಃ.
ನಾಸಾಮವೇದವಿದುಷಶ್ಶಕ್ಯಮೇವಂ ವಿಭಾಷಿತುಮ್ ৷৷ಕಿ.3.27৷৷

ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳನ್ನು ಅಧ್ಯಯನಮಾಡಿ ಶಿಕ್ಷಣ ಪಡೆಯದವನಿಗೆ ಹೀಗೆ ಮಾತಾಡಲು ಸಾಧ್ಯವಿಲ್ಲ. ಎನ್ನುತ್ತಾನೆ. ಇಲ್ಲಿ ಪ್ರತಿಯೊಂದು ವೇದದ ವಿಶೇಷವನ್ನುಹೇಳುವಾಗ “ವಿನೀತ”, “ಧಾರಿ” ಮತ್ತು “ವಿತ್” ಶಬ್ಧಗಳನ್ನು ವಿಶೇಷಣಗಳನ್ನಾಗಿ ಬಳಸಿದ್ದಾರೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡ ಭಾಗ 2: ದೀಪದ ಬುಡದಲ್ಲಿ ಕತ್ತಲೆ

ಸಂಭಾಷಣೆಯಲ್ಲಿ ಸಂವಹನ ಕ್ರಿಯೆ ತುಂಬಾ ಮುಖ್ಯ. ಇದೊಂದು ಮಾತಿನಲ್ಲಿ ಹನುಮಂತನ ವಾಕ್ ಪಟುತ್ವವನ್ನು ರಾಮ ಶ್ಲಾಘಿಸುತ್ತಾನೆ. ಋಗ್ವೇದದ ಪ್ರತಿವರ್ಣವೂ ಸ್ವರಪೂರ್ಣವಾಗಿರುತ್ತದೆ. ಅದನ್ನು ಉಚ್ಛರಿಸಬೇಕಾದರೆ ಸಾವಧಾನವಾಗಿ, ವಿನಿಯೋಗಿಸಬೇಕಾದ ಛಂದಸ್ಸು, ವ್ಯಾಕರಣ ಶುದ್ಧತೆ ಮತ್ತು ಗಂಭೀರ ಸ್ವರಬೇಕಾಗುತ್ತದೆ. ಅದನ್ನು ಸರಿಯಾಗಿ ಅಧ್ಯಯನ ಮಾಡಿದವನಿಂದಲೇ ಹೀಗೆ ಮಾತಾಡಲು ಸಾಧ್ಯ. ಹಾಗಾಗಿ ವಿನೀತ ಎನ್ನುವ ಶಬ್ದವನ್ನು ಬಳಸಿದ್ದಾನೆ. ವಿನೀತ ಎಂದರೆ ಆಚಾರ್ಯಮುಖೇನ ಶಾಸ್ತ್ರಬದ್ಧವಾಗಿ ಕಲಿತವ ಎಂದು ಅರ್ಥ. ಯಜುರ್ವೇದದಲ್ಲಿ ಪ್ರತಿಯೊಂದು ಅನುವಾಕನ್ನೂ ಇತರ ಅನುವಾಕಗಳೊಡನೆ ಸಂಕರ ಆಗದ ರೀತಿಯಲ್ಲಿ ಉಚ್ಛರಿಸಬೇಕು. ಅದಕೆ ಅಸಾಧಾರಣ ಧಾರಣಶಕ್ತಿಯ ಅವಶ್ಯಕತೆ ಇದೆ. ಸಾಮವೇದವು ಊಹರಹಸ್ಯಗಳಿಂದ ಗಾನರೂಪವಾಗಿದೆ. ಹನುಮಂತ ಆಡುವ ಮಾತಿನಲ್ಲಿ ಪದ್ಯದ ಗೇಯತೆಯೂ ಇತ್ತು. ಕಿವಿಗೆ ಇಂಪಾಗಿ ಆದರೆ ಅರ್ಥಗರ್ಭಿತವಾಗಿ ಇತ್ತು ಎನ್ನುವುದನ್ನು ಮೂರು ಶಬ್ದಗಳಾದ ವಿನೀತ, ಧಾರಿ ಮತ್ತು ವಿತ್ ಶಬ್ದಗಳ ಮೂಲಕ ರಾಮ ತಿಳಿಸುತ್ತಾನೆ. ರಾಮನೂ ಮೂರೂ ವೇದಗಳಲ್ಲಿ ಪಾರಂಗತನಾಗಿರುವುದರಿಂದಲೇ ಹನುಮಂತನ ಮಾತನ್ನು ಗ್ರಹಿಸಲು ಸಾಧ್ಯವಾಯಿತು ಎಂದೂ ಇಲ್ಲಿ ಅರ್ಥೈಸಬಹುದಾಗಿದೆ. ಮಂತ್ರಿ ಎದುರಾದಾಗ ರಾಜನಾದವ ಮಾತನ್ನಾಡುವುದಲ್ಲ. ಆತನ ಪರವಾಗಿ ಮಂತ್ರಿಯೋ ಅಥವಾ ಸಮರ್ಥ ದೂತನೋ ಮಾತನ್ನಾಡಬೇಕು. ಹಾಗಾಗಿ ಇಲ್ಲಿ ಹನುಮಂತನೊಡನೆ ಮುಂದಿನ ವಿಷಯವನ್ನು ಲಕ್ಷ್ಮಣ ಮಾತಾಡಲಿ ಎಂದು ರಾಮ ಇಂಗಿತವನ್ನು ವ್ಯಕ್ತಪಡಿಸುತ್ತಾನೆ. ಹಾಗಾಗಿ ಮುಂದೆ ಲಕ್ಷ್ಮಣ ಹನುಮಂತನಲ್ಲಿ ತಮ್ಮ ಅರಣ್ಯವಾಸದ ವಿಷಯವನ್ನು, ಸೀತಾಪಹರಣದ ವಿಷಯವನ್ನೂ ಸಹ ಸಮಗ್ರವಾಗಿ ತಿಳಿಸಿ ತಮ್ಮ ಭೇಟಿಯ ಉದ್ಧೇಶ ಸೀತೆ ಎಲ್ಲಿರುತ್ತಾಳೆಂದು ಕಂಡುಹಿಡಿಯಲು ಕಬಂಧನ ಸೂಚನೆಯ ಮೇರೆಗೆ ಸುಗ್ರೀವನೊಡನೆ ಆಶ್ರಯಕೋರಲು ಬಂದಿದ್ದೇವೆ ಎನುತ್ತಾ ಮೊದಲು ಹೇಳಿದ ಸುಗ್ರೀವಂ ಶರಣಂ ಗತಃ ಎನ್ನುವ ಆರು ಬಗೆಯ ಉಲ್ಲೇಖವನ್ನು ಮಾಡುತ್ತಾನೆ.

ಹನುಮಂತನು ಸೂರ್ಯನ ಹತ್ತಿರ ಸೂತ್ರ, ವೃತ್ತಿ, ವಾರ್ತಿಕ, ಮಹಾಭಾಷ್ಯ, ಶಾಸ್ತ್ರ, ಛಂದಃಶಾಸ್ತ್ರಗಳನ್ನೂ, ನವವ್ಯಾಕರಣಗಳನ್ನೂ ಕಲಿತವ. ಅಗಸ್ತ್ಯರು ಹನುಮಂತನ ಕುರಿತು ಆತ ಶಾಸ್ತ್ರವಿಷಯದಲ್ಲಿ ಬ್ರಹಸ್ಪತಿಯೊಡನೆ ಹೋಲಿಸಬಹುದು ಎನ್ನುತ್ತಾರೆ. ಆತನಿಗೆ ಲಕ್ಷ್ಮಣ ಸುಗ್ರೀವನೊಡನೆ ಶರಣಾಗತಿಗಾಗಿ ಬಂದಿದ್ದಾರೆ ಎಂದು ಹೇಳಿರುವುದು ಮನಸ್ಸಿಗೆ ಸರಿಕಾಣಲಿಲ್ಲ. ಅತನಿಗೆ ಸೂರ್ಯವಂಶದ ವಿಷಗಳೆಲ್ಲವೂ ತಿಳಿದಿದೆ. ಅವರ ಶ್ರೇಷ್ಠತೆಯ ಮತ್ತು ಮಹಾತ್ಮತೆಯ ಕುರಿತು ಗೌರವವಿದೆ. ಆದರೆ ಈ ವಾಕ್ ದೋಷವನ್ನು ಟೀಕಿಸಲೂ ಹೋಗುವುದಿಲ್ಲ. ರಾಮಲಕ್ಷ್ಮಣರನ್ನು ತನ್ನ ಭುಜದಮೇಲೆ ಹೊತ್ತು ಅವರನ್ನು ಋಷ್ಯಮೂಕ ಪರ್ವತಕ್ಕೆ ಕರೆತರುತ್ತಾನೆ. ಸುಗ್ರೀವ ಆಗ ಆಗಂತುಕರ ವಿಷಯದಲ್ಲಿ ಭಯಪಟ್ಟು ಅಲ್ಲೇ ಪಕದಲ್ಲಿದ್ದ ಮಲಯ ಪರ್ವತದಲ್ಲಿ ಇದ್ದ. ಆತನಲ್ಲಿ ರಾಮ ಲಕ್ಷ್ಮಣರ ಮತ್ತು ದಶರಥನ ಸಹಿತವಾಗಿ ಸೂರ್ಯವಂಶದ ದೊರೆಗಳ ಮಹಿಮೆಯನ್ನು ಹೇಳುತ್ತಾನೆ. ಅಂತಹ ಮಹಿಮಾನ್ವಿತರು ಸೀತಾನ್ವೇಷಣೆಯ ಸಲುವಾಗಿ ನಿನ್ನ ಸಹಾಯವನ್ನು ಬಯಸಿ ಬಂದಿದ್ದಾರೆ ಎನ್ನುತ್ತಾನೆ. ಇಲ್ಲಿ ಹನುಮಂತನ ಜಾಣ್ಮೆಯನ್ನು ಗಮನಿಸಬೇಕು. “ಸುಗ್ರೀವನಲ್ಲಿ ಶರಣಾಗತಿಯನ್ನು ಹೊಂದಲು ಬಂದಿದ್ದಾರೆ ಎನ್ನುವ ಮಾತಿನ ದೋಷವನ್ನು ಹನುಮಂತ ಪ್ರಾರಂಭದಲ್ಲಿ ಹೇಳಿದ ಶ್ಲೋಕದಂತೆ “ಸಹೋದರರಾದ ರಾಮಲಕ್ಷ್ಮಣರು ನಿನ್ನೊಡನೆ ಗೆಳೆತನವನ್ನು ಬೆಳೆಸುವ ಆಶಯವನ್ನು ಹೊಂದಿದ್ದಾರೆ. ಪೂಜನೀಯರಾದ ಇವರಿಬ್ಬರನ್ನೂ ನೀನು ಯಥೋಚಿತವಾಗಿ ಪ್ರತಿಗ್ರಹಿಸಿ ಪೂಜಿಸಬೇಕು” ಎಂದು ಬದಲಾಯಿಸಿ ಹೇಳುತ್ತಾನೆ.

“ನವವ್ಯಾಕರಣವೇತ್ತಾ -ಒಂಬತ್ತು ವ್ಯಾಕರಣ ಸಿದ್ಧಾಂತವನ್ನು ತಿಳಿದವ ಹನುಮಂತ ಎಂದು ಅಗಸ್ತ್ಯರು ಈತನನ್ನು ಹೊಗಳಿದ್ದು ಆತನ ಜಾಣ್ಮೆ ಮತ್ತು ಶಾಸ್ತ್ರಕೌಶಲ್ಯದ ಪರಿಣಿತಿಗಾಗಿ. ರಾಮನ ಅನುಗ್ರಹದಿಂದ ಹನುಮಂತ ಬ್ರಹ್ಮನೇ ಆಗುವನು- “ಬ್ರಹ್ಮಾ ಭವಿಷ್ಯತ್ಯಪಿ ತೇ ಪ್ರಸಾದಾತ್” ಎನ್ನುವ ಮಾತನ್ನೂ ಆಡುತ್ತಾರೆ. ಸುಂದರನೆನ್ನುವುದು ಆತನ ಇನ್ನೊಂದು ಹೆಸರು. ಅದು ಬಾಹ್ಯರೂಪದಿಂದ ಅಲ್ಲ, ಆತನ ವಿದ್ಯೆ ಮತ್ತು ವಿನಯಗಳ ಶೋಭೆಯಿಂದಾಗಿ. ಸುಗ್ರೀವನ ಸಚಿವ ರಾಮನೆಡೆಗೆ ಆಕರ್ಷಿತನಾಗುವುದು ಆತನ ಮೊದಲ ನೋಟದಲ್ಲಿಯೇ. ರಾಮನನ್ನು ನೋಡಿದ ತಕ್ಷಣ ಆತನ ಶಾಪ ವಿಮೋಚನೆಯಾಯಿತು ಎನ್ನುವ ಕಥೆ ಮೂಲ ರಾಮಾಯಣದಲ್ಲಿಲ್ಲ.

ಸುಗ್ರೀವನ ಚಂಚಲತೆಯ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ಗಮನಿಸೋಣ.

Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮವಿಲಾಪಕ್ಕೆ ಲಕ್ಷ್ಮಣೋಪಶಮನ

ಧವಳ ಧಾರಿಣಿ ಅಂಕಣ: ಹಲವು ವಿಧಗಳಲ್ಲಿ ಸೀತೆಗಾಗಿ ವಿಲಪಿಸುತ್ತಾನೆ. ರಾಮನ ದುಃಖವನ್ನು ಶಮನ ಮಾಡುವ ಲಕ್ಷ್ಮಣನ ಸಂಯಮ ಅದ್ಭುತವಾದದ್ದು. ಲಕ್ಷ್ಮಣ ರಾಮನಿಗೆ ತನ್ನ ಕರ್ತವ್ಯವನ್ನು ನಿಭಾಯಿಸುವಂತೆ ಆತನನ್ನು ಎಚ್ಚರಿಸುವ ಅಪೂರ್ವ ಮಾತುಗಳು ಕಿಷ್ಕಿಂಧಾಕಾಂಡದ ಮೊದಲನೆಯ ಸರ್ಗದಲ್ಲಿ ಬರುತ್ತದೆ.

VISTARANEWS.COM


on

rama laxmana ಧವಳ ಧಾರಿಣಿ ಅಂಕಣ
Koo

ವಿಯೋಗದಿಂದ ಕದಡಿದ ಮನಸ್ಸಿಗೆ ಪೂರ್ವಸ್ಮೃತಿಯನ್ನು ತಂದುಕೊಡುವ ಸನ್ನಿವೇಶ

dhavala dharini by Narayana yaji

:: ನಾರಾಯಣ ಯಾಜಿ

ತ್ಯಜತ್ವಾಂ ಕಾಮವೃತ್ತತ್ತ್ವಂ ಶೋಕಂ ಸಂನ್ಯಸ್ಯ ಪೃಷತಃ I
ಮಹಾತ್ಮನಂ ಕೃತಾತ್ಮಾನಮಾತ್ಮಾನಂ ನಾವಬಿಧ್ಯಸೇ II ಕಿ. 1.123 II

ಸೀತಾವಿಯೋಗದಿಂದುಂಟಾಗಿರುವ ಶೋಕವನ್ನು ಬಿಡು. ಮನ್ಮಥವಿಕಾರವನ್ನು ತ್ಯಜಸು! ನೀನು ಮಹಾತ್ಮನೆಂಬುದನ್ನೂ , ಕೃತಾತ್ಮನೆನ್ನುವುದನ್ನೂ ಮರೆತುಬಿಟ್ಟಿರುವೆ.

ರಾಮಾಯಣದಲ್ಲಿ ಕಿಷ್ಕಿಂಧಾ ಕಾಂಡದ ಬಹುಮುಖ್ಯವಾದ ಘಟನೆಯೇ ಪತ್ನಿಯ ವಿರಹದಿಂದ ಅಪಾರ ದುಃಖಕ್ಕೆ ಒಳಗಾದ ರಾಮನನ್ನು ಲಕ್ಷ್ಮಣ ಸಮಾಧಾನಪಡಿಸುವುದು. ಕಿಷ್ಕಿಂಧಾ ಕಾಂಡದ ನಾಲ್ಕನೆಯ ಸರ್ಗದಲ್ಲಿ ಲಕ್ಷ್ಮಣ ಎಂಟು ಶ್ಲೋಕದಲ್ಲಿ ರಾಮನು ಸುಗ್ರೀವನಲ್ಲಿಗೆ ಶರಣು ಹೊಂದಲು ಬಂದಿದ್ದಾನೆ ಎನ್ನುವ ಮಾತುಗಳನ್ನು ಹೇಳಿದ್ದಾನೆ ಎನ್ನುವುದನ್ನು ನೋಡಿದ್ದೇವೆ. ಆರು ಬಗೆಯಲ್ಲಿ ಎಂಟು ಶ್ಲೋಕಗಳಲ್ಲಿ (ರಾಮಶ್ಚ ಸುಗ್ರೀವಂ ಶರಣಂ ಗತೌ ಮುಂತಾಗಿ) ಲಕ್ಷ್ಮಣನು ಹನುಮಂತನ ಹತ್ತಿರ ಕೇಳಿಕೊಳ್ಳುವ ಭಾಗ ರಾಮನ ವ್ಯಕ್ತಿತ್ವಕ್ಕೆ ಒಂದು ಕಪ್ಪುಚುಕ್ಕೆ ಎಂದು ಕೆಲ ಟೀಕಾಕಾರರು ಹೇಳಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಲಕ್ಷ್ಮಣ ಹಾಗೆ ಹೇಳಲಿಕ್ಕೆ ಕಾರಣವಾಗಿರುವ ಸಂಗತಿಯನ್ನು ಕಿಷ್ಕಿಂಧಾ ಕಾಂಡದ ಮೊದಲ ಭಾಗದಲ್ಲಿ ವಿವರವಾಗಿ ವಿವೇಚಿಸಲಾಗಿದೆ. ಸಮಗ್ರ ಭೂಮಂಡಲದ ಚಕ್ರವರ್ತಿಗಳಾದ ರಘುವಂಶೀಯ ರಾಮ ತನ್ನ ಸಿಂಹಾಸನದ ಘನತೆ ಗೌರವವನ್ನೆಲ್ಲಾ ಬಿಟ್ಟು ಸುಗ್ರೀವನಲ್ಲಿ ಆಶ್ರಯ ಕೋರಿ ಬಂದಿದ್ದಾನೆ. ಸೀತೆಯನ್ನು ಕಳೆದುಕೊಂಡ ರಾಮನಿಗೆ ಬುದ್ಧಿ ವಿಸ್ಮೃತಿಯಾಗಿತ್ತು. ವಿರಹದಿಂದಲಾಗಿ ರಾಮ ಗೋದಾವರಿ ನದಿಯನ್ನು ಬತ್ತಿಸಿಬಿಡುವೆ, ವಿಂದ್ಯಪರ್ವತವನ್ನೇ ಕೆಡಹಿಬಿಡುವೆ ಎಂದು ಕೂಗಾಡುವುದು ನಂತರ ಪಂಪಾಸರೋವರದಲ್ಲಿದ್ದ ಕಮಲವನ್ನೇ ತಿಂಗಳ ಬೆಳಕಿನಲ್ಲಿ ಕಮಲಮುಖಿ ಸೀತೆ ಎಂದು ಭ್ರಮಿಸಿ ಸರೋವರಕ್ಕೆ ಧುಮುಕಲು ಹೋಗುವುದು, ಹೀಗೆ ಹಲವು ವಿಧಗಳಲ್ಲಿ ಸೀತೆಗಾಗಿ ವಿಲಪಿಸುತ್ತಾನೆ. ರಾಮನ ದುಃಖವನ್ನು ಶಮನ ಮಾಡುವ ಲಕ್ಷ್ಮಣನ ಸಂಯಮ ಅದ್ಭುತವಾದದ್ದು. ಲಕ್ಷ್ಮಣ ರಾಮನಿಗೆ ತನ್ನ ಕರ್ತವ್ಯವನ್ನು ನಿಭಾಯಿಸುವಂತೆ ಆತನನ್ನು ಎಚ್ಚರಿಸುವ ಅಪೂರ್ವ ಮಾತುಗಳು ಕಿಷ್ಕಿಂಧಾಕಾಂಡದ ಮೊದಲನೆಯ ಸರ್ಗದಲ್ಲಿ ಬರುತ್ತದೆ. ರಾಮ ತನ್ನ ತಂದೆ ತಾಯಿಯರಿಗೆ, ಸುಮಂತ್ರನಿಗೆ, ಗುಹನಿಗೆ ವಶಿಷ್ಠರು, ಜಾಬಾಲಿ ಮತ್ತು ಭರತನಿಗೆ ತನ್ನ ವನವಾಸ ದೀಕ್ಷೆಯ ಕುರಿತು ತಿಳಿಹೇಳುವ ಮಾತುಗಳು ಬಲು ಪ್ರಸಿದ್ಧ. ಪ್ರಸ್ತುತ ಸಂದರ್ಭದಲ್ಲಿ ಸೀತಾಪಹರಣವೆನ್ನುವುದು ಆತನ ಬುದ್ಧಿಯನ್ನು ವಿಭ್ರಣೆಗೊಳಿಸಿಬಿಟ್ಟಿದೆ. ಆತನಿಗೆ ಆ ದಟ್ಟ ಅರಣ್ಯದಲ್ಲಿ ಬುದ್ಧಿ ಹೇಳುವವರು ಯಾರೂ ಇಲ್ಲ. ಆ ಕೆಲಸವನ್ನು ಇಲ್ಲಿ ಲಕ್ಷ್ಮಣ ಮಾಡಬೇಕಾದ ಅನಿವಾರ್ಯತೆ ಬರುತ್ತದೆ. ಹಾಗೇ ವಿವೇಕವನ್ನು ಹೇಳುವಾಗ ಲಕ್ಷ್ಮಣನಿಗೆ ತನ್ನ ಮಿತಿಯ ಅರಿವಿದೆ. ಆಜ್ಞಾಪೂರ್ವಕವಾಗಿ ಹೇಳುವಂತಿಲ್ಲ. ಉಪದೇಶವೂ ಆಗಕೂಡದು, ಹೇಳುವ ವಿಧಾನದಲ್ಲಿ ಹಿರಿಯನ ಗೌರವವಕ್ಕೆ ಚ್ಯುತಿಬರಬಾರದು.

ವಾಲ್ಮೀಕಿ ಇಲ್ಲಿ ಲಕ್ಷ್ಮಣನಿಂದ ಅಣ್ಣನಿಗೆ ವಿವೇಕವನ್ನು ಹೇಳುವ ವಿವರ ಬಲು ಆಸಕ್ತಿದಾಯಕವಾಗಿದೆ. ಮಹಾಕಾವ್ಯವನ್ನು ಬರೆಯಲು ವಾಲ್ಮೀಕಿಯಲ್ಲಿ ಅದೆಷ್ಟು ಲೋಕಾನುಭವ ಮತ್ತು ಶಾಸ್ತ್ರದ ಅಧ್ಯಯನ ಇರಬಹುದೆನ್ನುವುದಕ್ಕೆ ಇದೊಂದು ನಿದರ್ಶನ. ಆತ ರಾಮನಿಗೆ ಹೀಗೆ ಮಾಡಿ ಎಂದು ಹೇಳುವುದಿಲ್ಲ. ಚಿಕ್ಕವ ಹಿರಿಯರ ಹತ್ತಿರ ತನಗೆ ತಿಳಿಯದ ವಿಷಯವನ್ನು ಕಲಿಸಿಕೊಡು ಎನ್ನುವ ರೀತಿಯಲ್ಲಿ ಇದೇಕೆ ಹೀಗೆ ಎನ್ನುವ ಅನೇಕ ಪ್ರಶ್ನೆಗಳ ಮೂಲಕ ರಾಮನಲ್ಲಿ ಪ್ರಶ್ನೆ ಮಾಡುತ್ತಾನೆ. ರಾವಣನು ಪಾತಾಳಕ್ಕೆ ಹೊಕ್ಕರೂ. ಅಲ್ಲಿಂದ ಮುಂದೆ ಇನ್ನೋ ಗಹನವಾದ ಸ್ಥಳ ಹೊಕ್ಕರೂ ಆತ ಉಳಿಯಲಾರನು. ದಿತಿಯ ಗರ್ಭವನ್ನು ಹೊಕ್ಕರೂ ಮೈಥಿಲಿಯನ್ನು ತಂದೊಪ್ಪಿಸದಿದ್ದಲ್ಲಿ ಗರ್ಭವನ್ನು ಪ್ರವೇಶಿಸಿಯಾದರೂ ನಾನು ಅವನನ್ನು ಸಂಹರಿಸುತ್ತೇನೆ. ನೀನು ಉತ್ಸಾಹವನ್ನು ಕಳೆದುಕೊಂಡು ಹೀಗೆ ಯಾಕೆ ಇರುವೆ ಎನ್ನುವ ಮಾತುಗಳಲ್ಲಿ ನೀನು ಭ್ರಮಿತನಾಗಿದ್ದೀಯಾ ಎಂದು ನೇರವಾಗಿ ಹೇಳುವುದಿಲ್ಲ; ನೀನು ಉತ್ಸಾಹವನ್ನು ಕಳೆದುಕೊಳ್ಳಬೇಡ, ನೀನು ಹೀಗೆಲ್ಲಾ ಇರುವವಂತವನಲ್ಲ ವ್ಯಕ್ತಿಯಲ್ಲ ಎನ್ನುವ ಭಾವ ಪ್ರತೀ ಮಾತಿನಲ್ಲಿಯೂ ವ್ಯಕ್ತವಾಗುತ್ತದೆ.

ಪ್ರಾರಂಭದಲ್ಲಿ ಹೇಳಿದ ತ್ಯಜತ್ವಾಂ… ಎನ್ನುವ ಶ್ಲೋಕವನ್ನು ಗಮನಿಸಿ. ಅದರಲ್ಲಿ ಎರಡನೆಯ ಸಾಲಿನಲ್ಲಿ ಬರುವ “ಮಹಾತ್ಮನಂ ಕೃತಾತ್ಮಾನಮಾತ್ಮಾನಂ ನಾವಬಿಧ್ಯಸೇ” ಎನ್ನುವದರಲ್ಲಿ ಪ್ರಯೋಗಿಸಿದ “ಮಹಾತ್ಮ ಮತ್ತು ಕೃತಾತ್ಮಾ” ಎನ್ನುವುದು ರಾಮನ ಪೂರ್ವದ ಮೂಲಸ್ವರೂಪವಾದ ಮಹಾವಿಷ್ಣುವನ್ನು ಹೇಳುತ್ತದೆ. ಮಹಾತ್ಮಾ ಎಂದರೆ ಶ್ರೇಷ್ಠ, ಯಾರ ಶರೀರವು ಇತರರಿಗೆ ಶ್ರೇಷ್ಠವಾಗಿ ಕಾಣುವುದೋ; ಯಾವಾತನಿಗೆ ರಜಸ್ತಮಗಳೆನ್ನುವ ಮಲಿನತೆ ಇರುವುದಿಲ್ಲವೋ ಆತ ಮಹಾತ್ಮನು, ಸತ್ತ್ವಸ್ವರೂಪನು ಎಂದು ಆರ್ಥವಾಗುತ್ತದೆ. ಮತ್ತೊಂದು ಕೃತಾತ್ಮಾ-ಶುದ್ಧವಾದ ಆತ್ಮವುಳ್ಳವನು. ಶಾಶ್ತ್ರಗಳಿಂದ ಪರಿಶುದ್ಧವಾದ ಹೃದಯವುಳ್ಳವನು. ಶ್ರುತಿ ಸ್ಮೃತಿಗಳಲ್ಲಿ ಸ್ಮರಿಸಲ್ಪಟ್ಟವ ಎಂದಾಗುತ್ತದೆ. ಈ ಕಾರಣದಿಂದ ನೀನು “ತ್ಯಜತಾಂ ಕಾಮವೃತ್ತತ್ತ್ವಂ- ಕಾಮವಿಕಾರವೆನ್ನುವುದು ನಿನಗಲ್ಲ ಎನ್ನುತ್ತಾನೆ. ರಾಮನ ಮೂಲ ಯಾವುದು ಎನ್ನುವುದನ್ನು ಇಲ್ಲಿ ಲಕ್ಷ್ಮಣ ಈ ರೀತಿಯಲ್ಲಿ ಸೂಚಿಸುತ್ತಾನೆ. ಆತನ ಅವತಾರದ ಉದ್ಧೇಶವು ರಾವಣನನ್ನು ಸಂಹರಿಸುವ ಸಲುವಾಗಿಯೇ ಆಗಿದೆ. ಎಲ್ಲ ಕಡೆಯೂ ಮಾನವರಂತೆ ವ್ಯವಹರಿಸುವ ರಾಮ ಜಟಾಯುವಿನ ಪ್ರಕರಣದಲ್ಲಿ ಪರೋಕ್ಷವಾಗಿ, ಶಬರಿಯ ವಿಷಯದಲ್ಲಿ ಸ್ವ-ಸ್ವರೂಪದ ಪ್ರಜ್ಞೆಯಲ್ಲಿಯೇ ಅವರವರಿಗೆ ಮೋಕ್ಷವನ್ನು ಅನುಗ್ರಹಿಸಿದ್ದಾನೆ. ರಾಮಾಯಣದಲ್ಲಿ ರಾಮ ತನ್ನ ಮೂಲ ಸ್ವರೂಪವನ್ನು ಪ್ರಕಟಮಾಡುವ ಅಪರೂಪದ ಸಂದರ್ಭಗಳು ಇವು.

ಅಣ್ಣನಿಗೆ “ನೀನು ಪುರುಷೋತ್ತಮ” ಎನ್ನುತ್ತಾ ರಾಮನೆನ್ನುವ ದಶರಥನ ಮಗ ಯತಾರ್ಥದಲ್ಲಿ ವಿರಜಾಸ್ವರೂಪನಾದವ (ಪರತತ್ತ್ವ ಸ್ವರೂಪನಾದವ) ಇದೀಗ ಕಾರ್ಯಕಾರಣ ಸಂಬಂಧದಿಂದಾಗಿ ಸಂಸಾರಿಮಂಡಲಕ್ಕೆ ಅಭಿಮುಖನಾಗಿದ್ದಾನೆ. ಅದಕ್ಕೆ ಕಾರಣವಾದ ಅಂಶವನ್ನು ಸ್ಮರಣೆಗೆ ತಂದುಕೊಳ್ಳಬೇಕು. ರಾಮನ ಈ ದುಃಖವೆಲ್ಲವೂ ಅಭಿನಯವೇ ಹೊರತು ಅನುಭವಿಸಿ ಅದರಲ್ಲಿಯೇ ಮುಳುಗಿಹೋಗುವುದಲ್ಲ ಎನ್ನುವ ಅನೇಕ ಅರ್ಥವನ್ನು ಇಲ್ಲಿ ಕೊಡುತ್ತದೆ. ಕಿರಿಯರು ಹಿರಿಯರಿಗೆ ವಿವೇಕವನ್ನು ಹೇಳುವುದಲ್ಲ; ಅದರ ಕುರಿತಾದ ಅರಿವನ್ನು ಅವರ ಸ್ಮರಣೆಗೆ ತಂದುಕೊಡುವುದು ಎನ್ನುವುದು ಇಲ್ಲಿ ಲಕ್ಷ್ಮಣನ ವಿನಂತಿಯಲ್ಲಿ ಸ್ಪಷ್ಟವಾಗುತ್ತದೆ. ಹಿರಿಯರು ಉಪದೇಶವನ್ನು ನೀಡುತ್ತಾರೆ, ಸಮವಯಸ್ಕರು ಸಲಹೆಯನ್ನು ನೀಡುತ್ತಾರೆ (ಮಿತ್ರವಾಕ್ಯ), ಕಿರಿಯರು ತಮಗೆ ಗೊತ್ತಿದೆ ಎಂದು ಹಿರಿಯರನ್ನು ಯಾವ ಸಂದರ್ಭದಲ್ಲಿಯೂ ಅತಿಕ್ರಮಿಸಬಾರದು. ಇದೇಕೆ ಹೀಗೆ ಎನ್ನುತ್ತಲೇ ಹೇಳಬೇಕಾದುದನ್ನು ಹೇಳಬೇಕೆನ್ನುವುದಕ್ಕೆ ಇಲ್ಲಿ ಲಕ್ಷ್ಮಣನ ಮಾತುಗಳು ಸಾಕ್ಷಿ. ಈ ಭಾಗದಲ್ಲಿ ಲಕ್ಷ್ಮಣನನ್ನು ಮದಿಸಿದ ಮದ್ದಾನೆಗೆ ಕವಿ ಹೋಲಿಸಿದ್ದಾನೆ.

ತಂ ಮತ್ತಮಾತಙ್ಗವಿಲಾಸಗಾಮೀ ಗಚ್ಛನ್ತಮವ್ಯಗ್ರಮನಾ ಮಹಾತ್ಮಾ.
ಸ ಲಕ್ಷ್ಮಣೋ ರಾಘವಮಪ್ರಮತ್ತೋ ರರಕ್ಷ ಧರ್ಮೇಣ ಬಲೇನ ಚೈವ৷৷ಕಿ.1.127৷৷

ಮದಿಸಿದ ಆನೆಯಂತೆ ಒಯ್ಯಾರದಿಂದ ಹೆಜ್ಜೆಯಿಡುತ್ತಿದ್ದ ಅಣ್ಣನ ಸೇವೆಯಲ್ಲಿಯೇ ಏಕಾಗ್ರವಾದ ಮನಸ್ಸಿನಿಂದ ಕೂಡಿದ ಮಹಾತ್ಮನಾದ ಲಕ್ಷ್ಮಣನಾದರೋ, “ರರಕ್ಷ ಧರ್ಮೇಣ ಬಲೇನ ಚೈವ- ಧರ್ಮದಿಂದಲೂ ಬಲದಿಂದಲೂ ರಾಘವನ ದುಃಖವು ಕಡಿಮೆಯಾಗುವಂತೆ ಮಾಡಿದನು”. ರರಕ್ಷ- ಎನ್ನುವುದಕ್ಕೆ ದುಃಖರಹಿತನನ್ನಾಗಿ ಮಾಡಿದನು ಎನ್ನುವ ಅರ್ಥಬರುತ್ತದೆ(ನಿರ್ಧುಃಖಮಕರೋತ್). ರಾಮನಿಗೆ ಆತನ ಪೂರ್ವಸ್ಮರಣೆಯನ್ನು ತಂದುಕೊಡುವ ಸನ್ನಿವೇಶ ಇದು. ರಾಮನಿಗೆ ಅವನ ಮೂಲವನ್ನು ನೆನಪಿಸಿ ಆತ ಪರಂಧಾಮಕ್ಕೆ ಮರಳುವಂತೆ ಮಾಡುವವನು ಕಾಲಪುರುಷ. ಅದೂ ರಾಮಾಯಣದ ಅವತಾರದ ಉದ್ಧೇಶವಎಲ್ಲವೂ ಸಫಲವಾದ ಮೇಲೆ. ಇಲ್ಲಿ ಲಕ್ಷ್ಮಣನಿಗೆ ರಾಮನಿಗುಂಟಾದ ಬುದ್ಧಿವಿಸ್ಮೃತಿಯಿಂದ ಹೊರತರಬೇಕಾಗಿದೆ. ಇಲ್ಲಿ ಬರುವ “ಧರ್ಮೇಣ” ಅಂದರೆ ಸದಾಕಾಲವೂ ರಾಮನಿಗೆ ವಿಧೇಯನಾಗಿರುವ ಆತ ಆತನಿಗೆ ವಿವೇಕವನ್ನು ಹೇಳುವ ಸಂಧರ್ಭದಲ್ಲಿಯೂ ರಾಮಸೇವಕರೂಪದ ತನ್ನ ಸ್ವಭಾವಕ್ಕೆ ಕಿಂಚಿತ್ ಭಂಗ ಬಾರದಿರುವ ರೀತಿಯಲ್ಲಿ ವಿಷಯವನ್ನು ತಿಳಿಸುತ್ತಿದ್ದಾನೆ. ಇನ್ನು “ಬಲೇನಚೈವ” ಎನ್ನುವುದಕ್ಕೆ ಲಕ್ಷ್ಮಣ ಸೀತೆಯನ್ನು ರಾವಣ ಕದ್ದೊಯ್ದಿದ್ದಾನೆ ಎನ್ನುವುದು ಅವರಿಗೆ ತಿಳಿದಿದೆ. ಆದರೆ ರಾವಣ ಎಲ್ಲಿರಬಹುದು ಎನ್ನುವುದರ ಸುಳಿವು ಸಿಕ್ಕಿಲ್ಲ. ಇಲ್ಲಿ ದುಃಖಿಸುತ್ತಾ ಕುಳಿತರೆ ಕಾರ್ಯಸಾಧಿಸುವುದಿಲ್ಲ. ರಾವಣ ಎಲ್ಲಿದ್ದಾನೆ ಎನ್ನುವುದನ್ನು ಮೊದಲು ತಿಳಿಯಬೇಕು. ಆತ ಪಾತಾಳದಲ್ಲಿ ಇದ್ದರೂ, ಅಲ್ಲಿಂದ ಮುಂದೆ ಇನೂ ಗಹನವಾದ ಸ್ಥಳವನ್ನು ಹೊಕ್ಕರೂ ಪಾಪಿಷ್ಟನಾದ ಆತನನ್ನು ಹುಡುಕೋಣ ಎಂದು ಸಮಾಧಾನ ಹೇಳುತ್ತಾನೆ.

dhavala dharini king dasharatha
rama laxmana ಧವಳ ಧಾರಿಣಿ ಅಂಕಣ

ಅಯೋಧ್ಯಾ ಕಾಂಡದಲ್ಲಿ ಮುಂಗೋಪಿಯಾಗಿ ಲಕ್ಷ್ಮಣ ಕಾಣಿಸಿಕೊಳ್ಳುತ್ತಾನೆ. ತಂದೆಯಾದ ದಶರಥನನ್ನು ಬಂಧಿಸಿ ಸೆರೆಯಲ್ಲಿಟ್ಟು ರಾಜ್ಯವನ್ನು ಗೆದ್ದು ಅಣ್ಣನಾದ ರಾಮನಿಗೆ ಕೊಡುವೆ ಎಂದು ಅಬ್ಬರಿಸುತ್ತಾನೆ. ರಾಮನ ವಿವೇಕದ ಮಾತಿಗೆ ಅನಿವಾರ್ಯತೆಯಿಂದ ಸುಮ್ಮನಾಗುತ್ತಾನೆ. ಮುಂದೆ ಭರತ ರಾಮನನ್ನು ಕರೆತರಲು ಚಿತ್ರಕೂಟಕ್ಕೆ ಬರುವಾಗ ಆತನನ್ನು ನೋಡಿ, ತಮ್ಮಮೇಲೆ ಆಕ್ರಮಣಮಾಡಲು ಬಂದಿರಬಹುದೆನ್ನುವ ಸಂಶಯದಿಂದ ಭರತನನ್ನು ಎದುರಿಸುವೆ ಎನ್ನುವ ವೀರಾವೇಶದ ಮಾತುಗಳನ್ನು ಆಡುತ್ತಿದ್ದ ಲಕ್ಷ್ಮಣನ ಮೂಲ ಸ್ವಭಾವ ದುಡುಕಿನದ್ದಲ್ಲ. ರಾಮ ಗುಹನ ಆತಿಥ್ಯದಲ್ಲಿ ಗಂಗಾ ನದಿಯ ದಡದ ಮೇಲೆ ಮಲಗಿರುವಾಗ ಆತನ ಸ್ಥಿತಿಯನ್ನು ನೋಡಿ ಗುಹನ ಹತ್ತಿರ ಲಕ್ಷ್ಮಣ ಮರುಗುವುದು ಕರಳು ಚುರುಕ್ಕೆನ್ನುತ್ತದೆ. ಸದಾ ಹಂಸತೂಲಿಕಾತಲ್ಪದಲ್ಲಿ ಮಲಗುವ ತನ್ನ ಅಣ್ಣ ಇಂದು ಹೀಗೆ ಕೈಯನ್ನೇ ತಲೆದಿಂಬನ್ನಾಗಿಸಿಕೊಂಡು ಮಲಗಿರುವುದನ್ನು ನೋಡಲು ಆತನಿಗೆ ಸಾಧ್ಯವಾಗುವುದಿಲ್ಲ. ಲಕ್ಷ್ಮಣನದ್ದು ಹೆಂಗರಳು. ರಾಮನ ವಿಷಯದಲ್ಲಿ ಮಾತ್ರ ಕರುಣೆ ತೋರುವುದಲ್ಲ.

ಜನಸ್ಥಾನದಲ್ಲಿ ಅವರು ವಾಸಮಾಡುವಾಗ ನಡೆದ ಘಟನೆ. ವನವಾಸದ ಹದಿಮೂರನೆಯ ವರ್ಷದಲ್ಲಿ ಅವರು ಇದ್ದಾರೆ. ಆ ವರ್ಷದ ಹೇಮಂತ ಋತುವಿನಲ್ಲಿ ಅಸಾಧ್ಯವಾದ ಚಳಿಯಿದೆ. ಕಾಡಾನೆಗಳ ಹಿಂಡು ಬಾಯಾರಿಕೆಯಿಂದ ನೀರುಕುಡಿಯಲು ನದಿಗೆ ಬರುತ್ತಿದ್ದವಂತೆ ಆದರೆ ಹೇಮಂತದ ಚಳಿಯನ್ನು ತಾಳಲಾರದೇ ಸೊಂಡಿಲನ್ನು ನೀರಿಗೆ ಚಾಚಿ ನೀರು ಕುಡಿಯಲು ಯತ್ನಿಸಿದರೆ ಅವುಗಳಿಗೆ ತಣ್ಣನೆಯ ನೀರಿನ ಛಳಿಯನ್ನು ತಾಳಿಕೊಳ್ಳಲಾಗುವುದಿಲ್ಲ, ಮೈಕೊರೆವ ಚಳಿಗೆ ಅಂಜಿ ನೀರನ್ನು ಕುಡಿಯದೇ ಬಾಯಾರಿಕೆಯನ್ನು ಸಹಿಸಿಕೊಂಡು ಕಾಡಿಗೆ ಮರಳುತ್ತಿದ್ದವು. ಸದಾ ನೀರಿನಲ್ಲಿಯೇ ಇರುವ ಹಂಸಪಕ್ಷಿಗಳು ಸಹ ಚಳಿಗೆ ಹೆದರಿ ನೀರಿಗಿಳಿಯದೇ ದಡದಲ್ಲಿಯೇ ಸಾಲಾಗಿ ಕುಳಿತುಕೊಂಡಿದ್ದವು. ಅದನ್ನು ನೋಡಿದ ಲಕ್ಷ್ಮಣನಿಗೆ ನಂದಿಗ್ರಾಮದಲ್ಲಿ ಭರತನೂ ತಮ್ಮಂತೆ ವೃತಧಾರಿಯಾಗಿ ಗಡ್ಡೆ ಗಣಸು ತಿನ್ನುತ್ತಾ, ಜಟಾಧಾರಿಯಾಗಿ ನೆಲದಮೇಲೆ ಮಲಗುತ್ತಿದ್ದಾನೆ ಎನ್ನುವುದು ನೆನಪಾಯಿತು. ಸ್ವತಃ ತಾವು ಅಂತಹ ಚಳಿಯಲ್ಲಿ ನಡುಗುತ್ತಿದ್ದರೂ ಲಕ್ಷ್ಮಣನ ಮನಸ್ಸು ಇಲ್ಲಿ ಭರತನಿಗಾಗಿ ಮರುಗುತ್ತದೆ.

ಅತ್ಯನ್ತಸುಖಸಂವೃದ್ಧಸ್ಸುಕುಮಾರಸ್ಸುಖೋಚಿತಃ.
ಕಥಂ ನ್ವಪರರಾತ್ರೇಷು ಸರಯೂಮವಗಾಹತೇ৷৷ಅ.16.30৷৷

ಸುಖದಲ್ಲಿ ಬೆಳೆದ ಭರತ ಚಳಿಯಿಂದ ಕೂಡಿದ ಈ ಅಪರಾತ್ರಿಯಲ್ಲಿ ಸರಯೂ ನದಿಯಲ್ಲಿ ಹೇಗೆ ಸ್ನಾನ ಮಾಡಿಯಾನು ಎಂದು ಭರತನ ಕುರಿತು ಕಳವಳವನ್ನು ವ್ಯಕ್ತಪಡುತ್ತಾನೆ. ಅಪರಾತ್ರಿಯೆಂದರೆ ಮುಂಜಾನೆ ಬ್ರಾಹ್ಮೀ ಮುಹೂರ್ತಕ್ಕೆ ಮುನ್ನವೇ ಎದ್ದು ಸ್ನಾನಗಳನ್ನು ಪೂರೈಸಿ ನಿತ್ಯಕರ್ಮಾನುಷ್ಠಾನಗಳನ್ನು ಮಾಡಿ ಪ್ರಜೆಗಳ ಯೋಗಕ್ಷೇಮಗಳನ್ನು ನೋಡಲು ಪ್ರಾತಃಕಾಲದಲ್ಲಿ ಸಿದ್ಧನಾಗುತ್ತಿದ್ದ. ತಮಗಾದರೋ ವನವಾಸದ ದೀಕ್ಷೆಯಿದೆ. ಆದರೆ ಭರತ ಸುಖವಾಗಿ ಇರಬಹುದಾಗಿದ್ದರೂ ತಮ್ಮಂತೆ ವನವಾಸೀ ದೀಕ್ಷೆಯನ್ನು ಕೈಗೊಂಡು ರಾಜ್ಯವನ್ನು ನಡೆಸುತ್ತಿದ್ದಾನೆ. ರಾಜ್ಯವನ್ನು ರಾಮನ ಪ್ರತಿನಿಧಿಯಾಗಿ ನಿರ್ವಹಿಸುವ ಆತ ಅದಕ್ಕೆ ಚ್ಯುತಿಬಾರದ ರೀತಿಯಲ್ಲಿ ಚಳಿಗಾಲವನ್ನು ಲೆಕ್ಕಿಸದೇ ಕರ್ತವ್ಯಪರಾಯಣನಾಗಿದ್ದಾನೆ. ಚಳಿಗಾಲದ ವರ್ಣನೆ ಮತ್ತು ಭರತನ ಕುರಿತು ಲಕ್ಷ್ಮಣನ ಕಾಳಜಿ ಎರಡನ್ನೂ ಅನೇಕ ಉಪಮೆಗಳೊಂದಿಗೆ ವಾಲ್ಮೀಕಿ ಕಟ್ಟಿಕೊಟ್ಟಿದ್ದಾರೆ. ಧರ್ಮದ ಮೂಲಕವಾಗಿ ರಾಮನನ್ನು ಸಮಾಧಾನ ಮಾಡಿದ ಜೊತೆಗೆ ಬಲದ ಪ್ರದರ್ಶನದ ಮೂಲಕವೂ ರಾಮನನ್ನು ಸಮಾಧಾನಿಸಿದ ಎನ್ನುವುದಕ್ಕೆ ಲಕ್ಷ್ಮಣ ರಾಮನಲ್ಲಿ ”ಮೊದಲು ರಾವಣನನ್ನು ಹುಡುಕೋಣ. ಆತನಲ್ಲಿ ತಮ್ಮ ಪರಾಕ್ರಮವೆಷ್ಟು ಎನ್ನುವುದನ್ನು ತೋರಿಸಿ ಆತ ಸೀತೆಯನ್ನು ಬಿಟ್ಟುಕೊಡುವಂತೆ ಎಚ್ಚರಿಸೋಣ. ಅದಕ್ಕೂ ಆತ ಬಗ್ಗದಿದ್ದರೆ ಆತ ದಿತಿಯ ಗರ್ಭದಲ್ಲಿದ್ದರೂ ಆತನನ್ನು ಸಂಹರಿಸುವೆ” ಎನ್ನುವ ಮೂಲಕ ಬಲದಿಂದಲೂ ರಾಮನನ್ನು ಸಮಾಧಾನಿಸುತ್ತಾನೆ.

rama laxmana ಧವಳ ಧಾರಿಣಿ ಅಂಕಣ
rama laxmana ಧವಳ ಧಾರಿಣಿ ಅಂಕಣ

ಕಾವ್ಯದಲ್ಲಿ ನಾಟಕೀಯತೆಯ ಸನ್ನಿವೇಶ ಹೇಗೆ ಬರಬೇಕೆನ್ನುವುದಕ್ಕೆ ಇಲ್ಲಿನ ವರ್ಣನೆ ಸಾಕ್ಷಿ. ಲಕ್ಷ್ಮಣ ಪರಾಕ್ರಮದಲ್ಲಿ ಯಾರಿಗೂ ಕಡಿಮೆ ಇಲ್ಲದವನು. ಆನೆಯಷ್ಟು ಬಲ ಆತನಲ್ಲಿದೆ. ಮದಿಸಿದ ಆನೆ ತನ್ನ ಮಾವುತನ ಮೇಲೆ ಅಪಾರಪ್ರೀತಿಯನ್ನು ತೋರುತ್ತದೆ. ತನ್ನ ಮಾವುತ ವ್ಯಾಕುಲತೆಯಿಂದ ಕುಳಿತರೆ ಆತನನ್ನು ರಮಿಸಿ ತನ್ನೊಂದಿಗೆ ಕರೆದೊಯ್ಯುವ ಸ್ವಭಾವ ಅದಕ್ಕಿರುತ್ತದೆ ಇಂತಹ ದೃಶ್ಯವನ್ನು ಅನೇಕ ಕಡೆ ನೋಡಬಹುದಾಗಿದೆ. ಸುಮಾರು 70ರ ಉತ್ತರಾರ್ಧದಶಕದಲ್ಲಿ ರಾಜೇಶ ಖನ್ನಾ ಅಭಿನಯಿಸಿದ “ಹಾಥಿ ಮೇರಾ ಸಾಥಿ” ಸಿನೇಮಾವನ್ನು ನೋಡಿದ್ದರೆ ಅದು ಅರ್ಥವಾದೀತು. ರಾಮನೆನ್ನುವ ಸೋದರತ್ವದ ಒಲವಿನಲ್ಲಿ ಬಂಧಿತನಾದ ಲಕ್ಷ್ಮಣ ಅಥವಾ ತನ್ನ ತಾಯಿಯಾದ ಸುಮಿತ್ರೆಯ ಹತ್ತಿರ ಲಕ್ಷ್ಮಣ ಕಾಡಿಗೆ ಅಣ್ಣನನ್ನು ಅನುಸರಿಸಿಕೊಂಡು ಹೋಗುತ್ತೇನೆ ಎಂದು ಆಶೀರ್ವಾದವನ್ನು ಕೇಳಿದಾಗ ಆಕೆ ಮಗನಿಗೆ “ರಾಮಂ ದಶರಥಂ ವಿದ್ಧಿ ಮಾಂ ವಿದ್ಧಿ ಜನಕಾತ್ಮಜಾಮ್..” ರಾಮನನ್ನು ದಶರಥನೆಂದೆ ತಿಳಿದು ಗೌರವಿಸು, ನನ್ನನ್ನು ಹೇಗೆ ಗೌರವಿಸುತ್ತೀಯೋ ಅದೇ ರೀತಿ ಸೀತೆಗೆ ಗೌರವವನ್ನು ನೀಡು , ಅಡವಿಯನ್ನೇ ಅಯೋಧ್ಯೆಯೆಂದು ಭಾವಿಸು” ಎಂದು ಹರಸಿಕಳುಹಿಸಿದ್ದಳು. ಸಹಜವಾಗಿಯೂ ರಾಮನಲ್ಲಿ ಭಯಭಕ್ತಿಯುಳ್ಳ ಮತ್ತು ಅತನೇ ತನ್ನ ರಾಜನೆಂದು ತಿಳಿದು ತ್ರಿಕರಣಪೂರ್ವಕವಾಗಿ ಅನುಸರಿಸಿಕೊಂಡು ಬಂದವ ಲಕ್ಷ್ಮಣ. ಹಾಗಾಗಿ ಇಲ್ಲಿ ರಾಮನೆನ್ನುವ ಮಾವುತನನ್ನು ಮದಿಸಿದ ಆನೆಯಂತಿರುವ ಲಕ್ಷ್ಮಣ ಒಯ್ಯಾರದಿಂದ ಕರೆದುಕೊಂಡು ಬಂದ ಎನ್ನುವ ಉಪಮೆ ಸುಂದರವಾಗಿ ಮೂಡಿಬಂದಿದೆ.

ರಾಮನಿಗೆ ಸೀತೆಯನ್ನು ಕಳೆದುಕೊಂಡ ದುಃಖ ತಡೆಯಲಾರದೇ ವಿಸ್ಮೃತಿಗೊಳಗಾದ ವಿಷಯವನ್ನು ವಾಲ್ಮೀಕಿ ರಾಮಾಯಣದಲ್ಲಿ ವಿವರವಾಗಿ ಬಂದರೂ ಸ್ಕಾಂದಪುರಾಣದಲ್ಲಿ ಇನ್ನಷ್ಟು ವಿವರವಾಗಿ ವರ್ಣಿಸಲಾಗಿದೆ. ರಾಮನಿಗೆ ಅರಣ್ಯದಲ್ಲಿ ಸೀತೆಯ ವಿರಹದಿಂದ ಕಾಮೋದ್ದೀಪಕವಾಯಿತು. ಕಾಡಿನಲ್ಲಿರುವ ಭ್ರಮರವೇ ಮೊದಲಾದವುಗಳು ಸ್ವಂಚ್ಛಂದದಿಂದ ಹಾರಾಡುತ್ತಾ ಸಂಪಿಗೆಯ ಹೂವಿನ ಮಕರಂದವನ್ನು ಹೀರುತ್ತಿದ್ದವು. ಮಂದಮಾರುತ ಬೀಸುತ್ತಿತ್ತು. ಚಕ್ರವಾಕ ಪಕ್ಷಿಜೋಡಿಗಳು ಹಗಲಿನಲ್ಲಿ ಪರಸ್ಪರ ಮುದ್ದಾಡುತ್ತಿದ್ದವು. ವಿರಹಿಯಾದ ರಾಮ ಅದನ್ನು ನೋಡಿ ಕೋಪಗೊಂಡನಂತೆ. ತನ್ನ ವಿರಹದುಃಖವನ್ನು ನೋಡಿಯೂ ಕರುಣೆತೋರದೇ ಸಂತಸದಿಂದ ಇರುವ ಅವುಗಳನ್ನು ನೋಡಿ

ವೈಮುಖ್ಯಂ ಗಂಧಫಲ್ಯಾಸ್ತು ಭ್ರಮರಾಶಪತ್ಪ್ರಭುಃ I
ಕೋಕಾನ್ನಿಶಿಧೇ ವಿಶ್ಲೇಷಂ ಪಿಕಮನ್ಯವಿವರ್ಧನಮ್I
ಚಂದನಂ ಸರ್ಪ ನಿಲಯಂ ವಾಯುಂ ಸರ್ಪಾಶನಂ ತಥಾ I
ಜ್ಯೋತ್ಸ್ನಾಂ ಕಳಂಕಸಛನ್ನಾಂ ಶಶಾಪ ರಘುನಂದನಃ II II

ಸಂಪಗೆಯನ್ನು ಮುಟ್ಟದಂತೆ ಭ್ರಮರಗಳಿಗೂ, ರಾತ್ರಿಯಲ್ಲಿ ವಿಯೋಗವನ್ನು ಹೊಂದುವಂತೆ ಚಕ್ರವಾಕ ಜೋಡಿಗಳಿಗೂ, ಇತರಪಕ್ಷಿಗಳ ಪೋಷಣೆಗೊಳಗಾಗುವಂತೆ ಕೋಗಿಲೆಗಳಿಗೂ (ಪರಪುಟ್ಟ), ಕ್ರೂರಸರ್ಪಗಳಿಗೆ ಆಶ್ರಯತಾಣವಾಗುವಂತೆ ಚಂದನವೃಕ್ಷಕ್ಕೂ, ಹಾವುಗಳಿಗೆ ಆಹಾರವಾಗುವಂತೆ ಗಾಳಿಗೂ, ಕಳಂಕವಿಶಿಷ್ಟ (ಕಲೆಗಳಿಂದ ಕೂಡಿರುವಂತೆ) ಚಂದ್ರಕಾಂತಿಗೂ ಶಾಪಕೊಟ್ಟ ಎನ್ನುವ ವರ್ಣನೆ ಬರುತ್ತದೆ.

ಸೀತೆಯ ವಿಯೋಗ ರಾಮನಿಗೆ ಎರಡು ರೀತಿಯಿಂದ ಕಾಡುತ್ತಿತ್ತು. ಮೊದಲನೆಯದು ತನ್ನ ಪ್ರಿಯ ಮಡದಿಯನ್ನು ಕಳೆದುಕೊಂಡಿರುವುದು. ಎರಡನೆಯದು ರಾವಣ ಸೀತೆಯನ್ನು ಕದ್ದೊಯ್ಯುವ ಮೂಲಕ ರಾಮನ ಪುರುಷತ್ವಕ್ಕೆ ಸವಾಲನ್ನು ಎಸೆದಿದ್ದ. ಇದು ಸ್ಕಂಧಪುರಾಣದ ಮೇಲಿನ ಶ್ಲೋಕದಿಂದ ಸ್ಪಷ್ಟವಾಗುತ್ತದೆ. ಈ ಕಾರಣದಿಂದ ನೊಂದಿದ್ದ ರಾಮನನ್ನು ಲಕ್ಷ್ಮಣ ಸಮಾಧಾನ ಪಡಿಸಿ ಆತನ ಸ್ಮೃತಿಯನ್ನು ವಾಸ್ತವಕ್ಕೆ ಕರೆತರುತ್ತಾನೆ. ಆತನ ದುಃಖವನ್ನು ಶಮನಮಡುತ್ತಾನೆ. ಈಗ ಆತನಿಗೆ ಸೀತೆಯನ್ನು ಹುಡುಕುವ ಸಲುವಾಗಿ ಕಬಂಧ ಹೇಳಿದಂತೆ ಸುಗ್ರೀವನ ಸಖ್ಯ ಅನಿವಾರ್ಯವೆನ್ನುವುದು ನೆನಪಾಗುತ್ತದೆ. ಆ ಕಾರಣದಿಂದ ಹನುಮಂತನ ಹತ್ತಿರ ಲಕ್ಷ್ಮಣ ರಘುಕುಲದ ಶ್ರೇಷ್ಠನಾದ ರಾಮನೇ ಸುಗ್ರೀವನಲ್ಲಿ ಆಶ್ರಯವನ್ನು ಕೋರಿ ಬಂದಿದ್ದಾನೆ. ಆತನಲ್ಲಿ ಶರಣಾಗಲು ಬಂದಿದ್ದಾನೆ. ಎನ್ನುವ ಮಾತುಗಳನ್ನು ಲಕ್ಷ್ಮಣ ಆಡುವುದು.

ಸುಗ್ರೀವನ ಸ್ಥಿತಿ ಮತ್ತು ಇನ್ನಷ್ಟು ರೋಚಕ ವಿಚಾರಗಳನ್ನು ಮುಂದಿನ ಸಂಚಿಕೆಯಲ್ಲಿ ಗಮನಿಸೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡ ಭಾಗ 2: ದೀಪದ ಬುಡದಲ್ಲಿ ಕತ್ತಲೆ

Continue Reading
Advertisement
Kodava Family Hockey Tournament Website Launched
ಕೊಡಗು2 ವಾರಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು2 ವಾರಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ2 ವಾರಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ2 ವಾರಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು2 ವಾರಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ3 ವಾರಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ12 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್3 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌