Concentration tips for students : ವಿದ್ಯಾರ್ಥಿಗಳು ಸ್ಥಿತಪ್ರಜ್ಞತೆ ಬೆಳೆಸಿಕೊಳ್ಳುವುದು ಹೇಗೆ? - Vistara News

ಪ್ರಮುಖ ಸುದ್ದಿ

Concentration tips for students : ವಿದ್ಯಾರ್ಥಿಗಳು ಸ್ಥಿತಪ್ರಜ್ಞತೆ ಬೆಳೆಸಿಕೊಳ್ಳುವುದು ಹೇಗೆ?

ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚು ಸಾಧನೆ ಮಾಡಲು ಏಕಾಗ್ರತೆ ತುಂಬಾ ಮುಖ್ಯ. ಈ ಕುರಿತ (concentration tips for students) ಉಪಯುಕ್ತ ವಿವರ ಇಲ್ಲಿದೆ.

VISTARANEWS.COM


on

Student Concentration
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Education Guide

ನಿರಾಶೆ, ವೈಫಲ್ಯ, ಯಶಸ್ಸು, ಬೇಸರ, ಖಾಲಿತನ- ಹೀಗೆ ಬದುಕಿನಲ್ಲಿ ಎಂದಾದರೂ ಎದುರಿಸಲೇಬೇಕಾದ ಭಾವನೆಗಳನ್ನು ಮೀರಲಾಗದೆ ಸಿಟ್ಟಿನ ಕೈಗೆ ಬುದ್ಧಿ ಕೊಡುವವರ ಬಗ್ಗೆ ಕೇಳಿದಾಗಲೆಲ್ಲಾ ಅವರಿಂದ ಆಗಬಹುದಾದ ಅನಾಹುತವನ್ನು ನೆನೆದು ಮನ ತಲ್ಲಣಿಸುತ್ತದೆ. ನಂನಮ್ಮ ಭಾವನೆಗಳ ಮೇಲೆ ಹಿಡಿತವನ್ನು ಸಾಧಿಸುವ ಬದಲು, ನಾವೇ ಭಾವನೆಗಳ ಹಿಡಿತಕ್ಕೆ ಒಳಗಾಗುತ್ತಿದ್ದೇವಲ್ಲ.

ಯಾವುದೇ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ತಲೆಕೆಟ್ಟ ವಿದ್ಯಾರ್ಥಿಯೊಬ್ಬ ನಡೆಸಿದ ಶೂಟೌಟ್‌ನಲ್ಲಿ ಎಷ್ಟೋ ಮಂದಿ ಸತ್ತರು ಎಂದು ಸುದ್ದಿ ಕೇಳಿದಾಗೆಲ್ಲ ಎದೆ ನಡುಗುತ್ತದೆ. ಇಂದಿನ ದಿನಗಳಲ್ಲಿ ಎಲ್ಲಾ ಕುಟುಂಬಗಳಲ್ಲೂ ಮಕ್ಕಳು ಎಲ್ಲೆಲ್ಲೋ ಓದುತ್ತಿರುವ ಸಂದರ್ಭಗಳಲ್ಲಿ ಇಂಥ ಸುದ್ದಿಗಳು ಹೆತ್ತವರ ನಿದ್ದೆಗೆಡಿಸುತ್ತವೆ. ನಿರಾಶೆ, ವೈಫಲ್ಯ, ಯಶಸ್ಸು, ಬೇಸರ, ಖಾಲಿತನ- ಹೀಗೆ ಬದುಕಿನಲ್ಲಿ ಎಂದಾದರೂ ಎದುರಿಸಲೇಬೇಕಾದ ಭಾವನೆಗಳನ್ನು ಮೀರಲಾಗದೆ ಸಿಟ್ಟಿನ ಕೈಗೆ ಬುದ್ಧಿ ಕೊಡುವವರ ಬಗ್ಗೆ ಕೇಳಿದಾಗಲೆಲ್ಲಾ ಅವರಿಂದ ಆಗಬಹುದಾದ ಅನಾಹುತವನ್ನು ನೆನೆದು ಮನ ತಲ್ಲಣಿಸುತ್ತದೆ. ಹೀಗೇಕೆ ಆಗುತ್ತಿದೆ? ನಂನಮ್ಮ ಭಾವನೆಗಳ ಮೇಲೆ ಹಿಡಿತವನ್ನು ಸಾಧಿಸುವ ಬದಲು, ನಾವೇ ಭಾವನೆಗಳ ಹಿಡಿತಕ್ಕೆ ಒಳಗಾಗುತ್ತಿದ್ದೇವಲ್ಲ.

ನಮ್ಮ ಭಾವನೆಗಳ ಮೇಲೆ ನಿಯಂತ್ರಣ ಅಥವಾ ಪ್ರಜ್ಞೆಯನ್ನು ಸ್ಥಿಮಿತದಲ್ಲಿ ಇರಿಸಿಕೊಳ್ಳುವ ಈ ಪ್ರಕ್ರಿಯೆಯನ್ನು ಸ್ಥಿತಪ್ರಜ್ಞತೆ (Emotional Resilience) ಎಂದು ಕರೆಯೋಣ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಸುಖ-ಯಶಸ್ಸುಗಳಿಗೆ ಹಿಗ್ಗದೆ ಶೋಕ-ಸೋಲುಗಳಿಗೆ ಕುಗ್ಗದೆ ಇರುವಂಥ ಮನಸ್ಥಿತಿಯದು. ಇದೀಗ ಎಲ್ಲರಿಗೂ ಅಗತ್ಯವಾಗಿ ಬೇಕಾದ ಗುಣವೇ ಹೌದಾದರೂ, ವಿದ್ಯಾರ್ಥಿಗಳಿಗೆ ಇದರ ಅಗತ್ಯ ಎಂದಿಗಿಂತ ಹೆಚ್ಚು ಎನಿಸುತ್ತಿದೆ. ಉದಾ, ಸಿದ್ಧಾಂತಗಳ ಹೆಸರಿನಲ್ಲಿ ವೈಯಕ್ತಿಕ ದ್ವೇಷಗಳನ್ನು ಬೆಳೆಸಿಕೊಳ್ಳುವುದು ವಿದ್ಯಾರ್ಥಿ ಜೀವನದಿಂದಲೇ ಕಾಣುತ್ತೇವಲ್ಲ. ಹಾಗಾದರೆ ಯಾವುದಕ್ಕೆ ಎಲ್ಲಿ ಮತ್ತು ಎಷ್ಟು ಆದ್ಯತೆ ನೀಡಬೇಕು ಎಂಬಂಥ ನಿರ್ಧಾರಗಳು ನಂನಮ್ಮ ಭಾವಗಳ (Emotional Resilience) ಸ್ಥಿತಪ್ರಜ್ಞತೆಗೆ ಬಿಟ್ಟಿದ್ದಲ್ಲವೇ? ಹೌದು ಎಂದಾದರೆ, ಇದನ್ನು ಬೆಳೆಸಿಕೊಳ್ಳಲು ಸಾಧ್ಯವೇ?

ಕೆಲವು ಸಾಧ್ಯತೆಗಳು ಹುಟ್ಟಿನಿಂದಲೇ ಬಂದಿರುವಂಥವು. ಉದಾ, ಚೆನ್ನಾಗಿ ಹಾಡುವುದು ಅಥವಾ ಚಿತ್ರ ಬರೆಯುವುದು ಇತ್ಯಾದಿ. ಹಾಡುವ ಪ್ರತಿಭೆಯೇ ಇಲ್ಲವೆಂದಾದರೆ ಎಷ್ಟೇ ಕಂಠ ಶೋಷಣೆ ಮಾಡಿಕೊಂಡರೂ ಅವರಿಂದ ಚೆನ್ನಾಗಿ ಹಾಡುವುದು ಕಷ್ಟಸಾಧ್ಯ. ಆದರೆ ಗುಣಗಳನ್ನು ಸ್ವಪ್ರಯತ್ನದಿಂದ ಬೆಳೆಸಿಕೊಳ್ಳಬಹುದಲ್ಲ. ಎಮೋಶನಲ್‌ ರೆಸಿಲಿಯನ್ಸ್‌ ಎಂದೇ ವಿಶ್ವದೆಲ್ಲೆಡೆ ಗುರುತಿಸಲ್ಪಟ್ಟಿರುವ ಭಾವನಾತ್ಮದ ಸ್ಥಿತಿಸ್ಥಾಪಕತ್ವ ಅಥವಾ ನಾವು ಮೊದಲಿನಿಂದ ಕೇಳುತ್ತಾ ಬಂದಿರುವ (Emotional Resilience) ಸ್ಥಿತಪ್ರಜ್ಞತೆಯನ್ನು ಮೈಗೂಡಿಸಿಕೊಳ್ಳುವುದು ಹೇಗೆ? ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವೇನು?

ಸ್ಥಿತಪ್ರಜ್ಞತೆ ಎಂದರೆ?

ಒಂದಿಷ್ಟು ಸಂದರ್ಭಗಳನ್ನು ಗಮನಿಸೋಣ. ಮಗುವನ್ನು ಮೊದಲ ಬಾರಿಗೆ ಶಾಲೆ ಕರೆದೊಯ್ಯುತ್ತೀರಿ. ಕೆಲವು ಮಕ್ಕಳು ಏನೂ ಆಗದಂತೆ ಖುಷಿಯಿಂದಲೇ ಶಾಲೆಗೆ ಹೋದರೆ, ಕೆಲವು ಅತ್ತು ರಂಪ ಮಾಡುತ್ತವೆ. ಹಾಗೆಯೇ ಶಾಲೆಯನ್ನು ಬದಲಾಯಿಸಿದಾಗ, ಅವರಿಷ್ಟದ ಟೀಚರ್‌ ಶಾಲೆ ಬಿಟ್ಟು ಹೋದಾಗ, ಮಿತ್ರರೊಂದಿಗೆ ಜಗಳವಾಡಿದಾಗ- ಇಂಥ ಸಣ್ಣ ಸಂದರ್ಭಗಳಲ್ಲೂ ಮಕ್ಕಳು ಕೆಲವೊಮ್ಮೆ ಅತಿಯಾಗಿ ಪ್ರತಿಕ್ರಿಯಿಸುವುದನ್ನು ಕಾಣಬಹುದು. ಹೊಸದನ್ನು, ಬದಲಾವಣೆಯನ್ನು, ಅನಿರೀಕ್ಷಿತವಾದುದನ್ನು ಒಪ್ಪಿಕೊಳ್ಳಲು ಕಷ್ಟವಾದಾಗ ಅಥವಾ ಸಿದ್ಧರಿಲ್ಲದಿದ್ದಾಗ ಇಂಥವು ಹೆಚ್ಚಾಗುತ್ತವೆ ಎಂಬುದನ್ನು ಗಮನಿಸಬೇಕು. ಇದೇ ಮುಂದುವರಿದು, ಮನೆ ಬಿಟ್ಟು ಹಾಸ್ಟೆಲ್‌ ಸೇರಿದಾಗ ಎದುರಾಗಬಹುದು. ಮನೆಯ ಸೌಖ್ಯ ಕಾಣದೆ ಒಂದಿಷ್ಟು ವಿದ್ಯಾರ್ಥಿಗಳು ಒದ್ದಾಡಿದರೆ, ಹಲವರು ಬೇಗನೇ ಹೊಂದಿಕೊಳ್ಳುತ್ತಾರೆ, ಕೆಲವರು ಏನೂ ಆಗದಂತೆ ಬಿಂದಾಸ್‌ ಆಗಿಯೇ ಇರುತ್ತಾರೆ. ಬದಲಾವಣೆಗೆ ಎಷ್ಟು ಶೀಘ್ರ ಹೊಂದಿಕೊಳ್ಳುತ್ತೇವೆ ಎಂಬುದು ನಮ್ಮ ಎಮೋಶನ್‌ ರೆಸಿಲಿಯನ್ಸ್‌ ಎಷ್ಟು ಚೆನ್ನಾಗಿದೆ ಎಂಬುದನ್ನು ಅವಲಂಬಿಸಿರುತ್ತದೆ. ಬದುಕಿನ ಎಲ್ಲಾ ತಿರುವುಗಳಲ್ಲಿ, ಅನಿರೀಕ್ಷಿತ ವಿದ್ಯಮಾನಗಳಲ್ಲಿ ನಮ್ಮನ್ನು ಕಾಯುವುದು ನಾವೇ ಬೆಳೆಸಿಕೊಳ್ಳುವ ಈ ಮಾನಸಿತ ಸ್ಥಿರತೆ(Concentration tips).

ಯಾಕೆ ಬೇಕು?

ದಿನನಿತ್ಯ ಅಪಾರ ಪ್ರಮಾಣದಲ್ಲಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ವಿದ್ಯಾರ್ಥಿಗಳು ಎದುರಿಸುತ್ತಿರುತ್ತಾರೆ. ಇವಿಷ್ಟರ ನಡುವೆ ಓದು, ಒತ್ತಡ, ಮಿತ್ರರು, ಹೆತ್ತವರು- ಎಲ್ಲವನ್ನೂ ಎಲ್ಲರನ್ನೂ ನಿಭಾಯಿಸಬೇಕು. ಹಾಗಾಗಿ ಎದುರು ಬರುವುದನ್ನೆಲ್ಲಾ ʻವಾತಾಪಿ ಜೀರ್ಣೋಭವʼ ಮಾಡಿಕೊಂಡು ಬದುಕಿನಲ್ಲಿ ಮುಂದುವರಿಯೇಡವೇ? ಬಹುನಿರೀಕ್ಷಿತ ಪರೀಕ್ಷೆಯಲ್ಲಿ ಗುರಿಯಿರಿಸಿಕೊಂಡಷ್ಟು ಯಶಸ್ಸು ದೊರೆಯದಿದ್ದರೆ, ನಿನ್ನೆಯವರೆಗೆ ೨೪*೭ ತನ್ನೊಂದಿಗೆ ಚಾಟ್‌ ಮಾಡುತ್ತಿದ್ದವಳು ಇಂದು ಮುಖವನ್ನೇ ನೋಡದಿದ್ದರೆ, ಕುಟುಂಬದಲ್ಲಿ ಆಪ್ತರೊಬ್ಬರು ಕಣ್ಮರೆಯಾದರೆ, ಊರು-ಮನೆಗಳನ್ನು ಬಿಟ್ಟು ಎಲ್ಲಿಗೋ ಹೋಗಬೇಕಾಗಿ ಬಂದರೆ- ಅದೇ ಜೀವನದ ಕೊನೆಯಲ್ಲ! ಹೊಸ ಬದುಕಿನ ಆರಂಭವೂ ಆಗಿರಬಹುದಲ್ಲ. ಇಂಥವೆಲ್ಲವನ್ನೂ ಅರಗಿಸಿಕೊಳ್ಳಲು ವಿದ್ಯಾರ್ಥಿ ಜೀವನದಲ್ಲಿ ಇದು ಮುಖ್ಯ ಎನಿಸುತ್ತದೆ. ಇದಕ್ಕೇನು ಮಾಡಬೇಕು?

ಪ್ರಗತಿಯನ್ನೂ ಗುರುತಿಸಿ

ಹೌದು, ಯಶಸ್ಸುಗಳನ್ನು ಮಾತ್ರವೇ ಗುರುತಿಸಿ ಸಂಭ್ರಮಿಸಬೇಕೆಂದೇನಿಲ್ಲ. ಸಣ್ಣ ಪ್ರಗತಿಯನ್ನೂ ಗುರುತಿಸಿಕೊಳ್ಳಿ. ಕಳೆದ ಬಾರಿಗಿಂತ ಈ ಬಾರಿಯ ಗ್ರೇಡ್‌ ಅಥವಾ ಅಂಕಗಳು ಕೊಂಚವೇ ಹೆಚ್ಚಾದರೆ, ಅದನ್ನೂ ಪರಿಗಣಿಸಿ. ಇದರಿಂದ ಬೆಳವಣಿಗೆಯ ಹಾದಿಯಲ್ಲಿ ದೃಢವಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ. ನಮ್ಮ ಉದ್ದೇಶವಿರುವುದು ಬದುಕಿನಲ್ಲಿ ಧನಾತ್ಮಕವಾಗಿದ್ದು ಎಲ್ಲಿದೆ ಅದನ್ನು ಕೇಂದ್ರೀಕರಿಸುವುದು, ಎಷ್ಟೇ ಸಣ್ಣದಾದರೂ ಸರಿ.

ಗುರಿ ಹೇಗಿದೆ?

ಅಂಬೆಗಾಲಿಡುವ ಮಕ್ಕಳ ಮುಂದೆ ಸ್ವಲ್ಪವೇ ದೂರದಲ್ಲಿ ಗೊಂಬೆಯನ್ನಿಟ್ಟರೆ, ಅದನ್ನು ಹಿಡಿಯಲು ಯತ್ನಿಸುತ್ತಾರೆ. ತೀರಾ ದೂರದಲ್ಲಿಟ್ಟರೆ ಪ್ರಯತ್ನ ನಿಲ್ಲಿಸುತ್ತಾರೆ. ಇದು ದೊಡ್ಡ ಮಕ್ಕಳ ವಿಷಯದಲ್ಲೂ ಸತ್ಯ. ಹಾಗಾಗಿ ಯಶಸ್ಸಿನೆಡೆಗೆ ಒಂದೊಂದೇ ಹೆಜ್ಜೆ ಇರಿಸುವುದಕ್ಕೆ ಬೇಕಾಗಿ, ಪ್ರಾಕ್ಟಿಕಲ್‌ ಆದಂಥ ಗುರಿಯನ್ನು ಇರಿಸಿಕೊಳ್ಳಿ. ತೀರಾ ಅಸಾಧ್ಯವಾದ ಗುರಿಯನ್ನು ಇರಿಸಿಕೊಂಡರೆ ಧನಾತ್ಮಕ ಗುಣವನ್ನು ಮೈಗೂಡಿಸಿಕೊಳ್ಳುವುದು ಕಷ್ಟವಾದೀತು.

ನೆರವಾಗಿ

ನಿಮ್ಮದೇ ಮನೆಯವರು, ಆಪ್ತರು, ಮಿತ್ರರು ವಿನಂತಿಸಿಕೊಂಡರೆ, ನಿಮ್ಮ ಮಿತಿಯಲ್ಲಿ ನೆರವಾಗಿ. ನಾವು ಮಾಡಿದ ಒಳ್ಳೆಯ ಕೆಲಸಗಳು ಯಾವುದೋ ರೂಪದಲ್ಲಿ, ಯಾರದ್ದೋ ಮೂಲಕ ನಮ್ಮನ್ನೇ ಸೇರುತ್ತವೆ ಎಂಬ ಧನಾತ್ಮಕ ನಂಬಿಕೆಯನ್ನು ಇರಿಸಿಕೊಳ್ಳಿ. ಕಷ್ಟದ ದಿನಗಳಲ್ಲಿ ಇಂಥವೇ ಭಾವನೆಗಳು ನಮ್ಮನ್ನು ಗಟ್ಟಿ ಮಾಡುತ್ತವೆ.

ಒಪ್ಪಿಕೊಳ್ಳಿ

ನಿಮ್ಮ ಯಶಸ್ಸನ್ನು ಒಪ್ಪಿಕೊಂಡಂತೆ, ಸೋಲನ್ನೂ ಹಿಂಜರಿಕೆ ಇಲ್ಲದೆ ಒಪ್ಪಿಕೊಳ್ಳಿ. ಮಾತ್ರವಲ್ಲ, ನಿಮ್ಮಲ್ಲಿನ ಯಾವುದೇ ಅನಗತ್ಯ ಗುಣಗಳನ್ನು ಗುರುತಿಸುವಷ್ಟು ಸಹನೆ ಇರಲಿ. ತೊಡಕು ಇದೆ ಎಂದು ಒಪ್ಪಿಕೊಳ್ಳುವುದೇ ಅದರ ನಿವಾರಣೆಯತ್ತ ನಾವು ಇಡುವ ಮೊದಲ ಹೆಜ್ಜೆ.

ಹೇಳಿಕೊಳ್ಳಿ

ನಿಮ್ಮ ಮನಸ್ಸಿನ ಭಾವನೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಿ. ಮನಸ್ಸು ಹಗುರವಾದಷ್ಟೂ ಆರೋಗ್ಯಪೂರ್ಣವಾಗಿರುತ್ತದೆ. ನೆರವು ಬೇಕೆನಿಸಿದರೆ, ಕೇಳುವುದಕ್ಕೆ ಹಿಂಜರಿಯೇಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

DK Shivakumar: ಸಿಎಂ- ಡಿಸಿಎಂ ದಂಗಲ್‌ ವಿಷಯ ಎತ್ತುವ ಶಾಸಕರಿಗೆ ನೊಟೀಸ್: ಡಿಕೆ ಶಿವಕುಮಾರ್

DK Shivakumar: ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಸಿಎಂ- ಡಿಸಿಎಂ ದಂಗಲ್ ವಿಚಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೊಬ್ಬರಿಂದ ಪ್ರಸ್ತಾಪವಾಯಿತು. ಸಿಎಂ, ಡಿಸಿಎಂ ಬದಲಾವಣೆ ಬಗ್ಗೆ ಮಾತನಾಡುವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಒತ್ತಾಯ ಮಾಡಿದರು. ಪದಾಧಿಕಾರಿಗಳ ಪ್ರಸ್ತಾಪಕ್ಕೆ ಡಿಕೆ ಶಿವಕುಮಾರ್ ಖಡಕ್ ಉತ್ತರ ನೀಡಿದರು.

VISTARANEWS.COM


on

DK ShivaKumar
Koo

ಬೆಂಗಳೂರು: ಸಿಎಂ- ಡಿಸಿಎಂ ಬದಲಾವಣೆ ಕುರಿತು ಮಾತನಾಡುವ ಪಕ್ಷದ ಶಾಸಕರಿಗೆ ಇಷ್ಟರಲ್ಲೇ ನೋಟೀಸ್‌ (Notice) ನೀಡುತ್ತೇವೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಜೊತೆಗೂ ಮಾತನಾಡಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಹೇಳಿದ್ದಾರೆ.

ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಸಿಎಂ- ಡಿಸಿಎಂ ದಂಗಲ್ ವಿಚಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೊಬ್ಬರಿಂದ ಪ್ರಸ್ತಾಪವಾಯಿತು. ಸಿಎಂ, ಡಿಸಿಎಂ ಬದಲಾವಣೆ ಬಗ್ಗೆ ಮಾತನಾಡುವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಒತ್ತಾಯ ಮಾಡಿದರು. ಪದಾಧಿಕಾರಿಗಳ ಪ್ರಸ್ತಾಪಕ್ಕೆ ಡಿಕೆ ಶಿವಕುಮಾರ್ ಖಡಕ್ ಉತ್ತರ ನೀಡಿದರು.

ʼಕೆಲವರಿಗೆ ಮೈಕ್ ಕಂಡ ತಕ್ಷಣ ಮಾತಾಡುವ ದೊಡ್ಡ ಚಟವಿದೆ. ಆದರೆ ಇದನ್ನು ಎಐಸಿಸಿ ಗಮನಿಸುತ್ತಿದೆ. ಗೊಂದಲ ಮೂಡಿಸುತ್ತಿರುವವರ ಬಗ್ಗೆ ಅರಿವಿದೆ. ಸಭೆಯಲ್ಲಿ ಶಾಸಕರಿಗೆ ನೋಟೀಸ್ ನೀಡಲಾಗುವುದು. ನಾನು ಮತ್ತು ಸಿಎಂ ಈ ಬಗ್ಗೆ ಮಾತಾಡಿದ್ದೇವೆ. ಸಿಎಂ ಜೊತೆಗೆ ಕೆಲವರ ಬಗ್ಗೆ ಮಾತಾಡಿದ್ದೇನೆ. ಶೀಘ್ರದಲ್ಲೇ ಕೆಲವು ಶಾಸಕರಿಗೆ ನೊಟೀಸ್ ನೀಡುತ್ತೇವೆʼ ಎಂದು ಡಿಕೆಶಿ ನುಡಿದರು.

ಇದೇ ಸಂದರ್ಭದಲ್ಲಿ ಪಕ್ಷಾಧ್ಯಕ್ಷನಾಗಿ ತಮ್ಮ ಶ್ರಮದ ಬಗ್ಗೆ ಪದಾಧಿಕಾರಿಗಳಿಗೆ ಡಿಕೆ ಶಿವಕುಮಾರ್ ಮನವರಿಕೆ ಮಾಡಿಕೊಟ್ಟರು. ʼನಾನು ಅಧ್ಯಕ್ಷನಾಗುವ ಮೊದಲು ಪಕ್ಷ ಹೇಗಿತ್ತು, ಈಗ ಹೇಗಿದೆ ನೋಡಿ. ಸೋನಿಯಾ ಗಾಂಧಿ ಪಕ್ಷ ಸಂಕಷ್ಟದಲ್ಲಿದ್ದಾಗ ನನ್ನ ಅಧ್ಯಕ್ಷನನ್ನಾಗಿ ಮಾಡಿದರು. ಈಗ ಪಕ್ಷ ಸದೃಢವಾಗಿದೆ, ಇನ್ನಷ್ಟು ಬಲಿಷ್ಠ ಮಾಡುವ ಹೊಣೆಗಾರಿಕೆ ನನ್ನ ಮೇಲಿದೆ. ಯಾರೋ ಒಂದಿಬ್ಬರು ನನ್ನನ್ನು ಬಗ್ಗಿಸಬಹುದು ಅಂತ ಭಾವಿಸಿದ್ದರೆ ಅದು ಆಗದ ಕೆಲಸʼ ಎಂದು ಶಿವಕುಮಾರ್‌ ಭರವಸೆ ನೀಡಿದರು.

ಪಕ್ಷ ಕಟ್ಟುವತ್ತ ಡಿಕೆ ಶಿವಕುಮಾರ್‌ ಚಿತ್ತ

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ರಾಜ್ಯ ಕಾಂಗ್ರೆಸ್‌ ನಾಯಕರಿಂದಲೇ ಒತ್ತಾಯ ಕೇಳಿಬರುತ್ತಿದೆ. ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ (DCM Post) ಸ್ಥಾನವನ್ನು ಒಬ್ಬರಿಗೆ ನೀಡಿರುವುದಕ್ಕೆ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ಆದರೆ, ಒನ್ ಮ್ಯಾನ್ ಒನ್ ಪೋಸ್ಟ್ ಕೂಗಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದು, ಕೇಡರ್ ಬೇಸ್ ಪಾರ್ಟಿ ಕಟ್ಟಲು ಅವರು ಪಣತೊಟ್ಟಿದ್ದಾರೆ. ಇದಕ್ಕಾಗಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

ಚುನಾವಣೆ ದೃಷ್ಟಿಯಿಂದ ಪ್ರತ್ಯೇಕ ಆ್ಯಕ್ಷನ್ ಪ್ಲ್ಯಾನ್ ಸಿದ್ಧಪಡಿಸಿ ಪದಾಧಿಕಾರಿಗಳ ಸಭೆಯಲ್ಲಿ ಮಂಡನೆ ಮಾಡಿದ್ದಾರೆ. ಇನ್ನು ಲೋಕಸಭೆ ಫಲಿತಾಂಶದ ಹಿನ್ನಡೆ ಹಿನ್ನೆಲೆಯಲ್ಲಿ ವಲಯವಾರು ಸತ್ಯ ಶೋಧನಾ ಸಮಿತಿ ರಚನೆಗೆ ನಿರ್ಧಾರ ಮಾಡಿದ್ದಾರೆ.

ಲೋಕಸಭೆಯಲ್ಲಿ ಹಿನ್ನಡೆ ಅನುಭವಿಸಿದ ವಿಧಾನಸಭಾ ಕ್ಷೇತ್ರಗಳ ಪ್ರಗತಿ ಪರಿಶೀಲನೆ, ಕಾರಣಗಳನ್ನು ಪತ್ತೆ ಹಚ್ಚುವುದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ರೂಪುರೇಷೆ ಸಿದ್ಧಪಡಿಸಲು ವಲಯವಾರು ಸಮಿತಿ ರಚನೆ ಮಾಡಲು ಹಾಗೂ ಬಿಬಿಎಂಪಿ, ಜಿಪಂ, ತಾಪಂ ಚುನಾವಣೆಗೆ ಹಾಗೂ ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ.

ಪ್ರತಿ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರವಾರು ಸಂಚಾಲನ ಸಮಿತಿ ರಚನೆಗೂ ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ ಮಾಜಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್ ಸದಸ್ಯರ ಪ್ರತ್ಯೇಕ ಸಭೆಯನ್ನು ಡಿಕೆಶಿ ನಡೆಸಲಿದ್ದಾರೆ. ಕೆಳಹಂತದಲ್ಲಿ ಪಕ್ಷ ಬಲವರ್ಧನೆಗೆ ಸಲಹೆ ನೀಡಲು ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹಾಗೆಯೇ ಬೂತ್ ಮಟ್ಟದ ಸಮಸ್ಯೆ ಬಗೆಹರಿಸಲು ವಾರ್ಡ್ ಸಮಿತಿ/ ಪಂಚಾಯತ್ ಸಮಿತಿಗಳ ರಚನೆಗೆ ತೀರ್ಮಾನ ಮಾಡಿದ್ದು, ಗ್ಯಾರಂಟಿ ಫಲಾನುಭವಿಗಳ ದಾಖಲೆ ಹಾಗೂ ಮೊಬೈಲ್ ಸಂಖ್ಯೆ ಸಂಗ್ರಹಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಮಟ್ಟದಲ್ಲಿ ಅಪಾರ್ಟ್ಮೆಂಟ್ ಸೆಲ್ ಹಾಗೂ ರೆಸಿಡೆಂಟ್ ವೆಲ್ಫೆರ್ ಅಸೋಸಿಯೇಷನ್‌ಗೆ ಪುನಶ್ಚೇತನ ನೀಡಲು ಯೋಜಿಸಿದ್ದು, ಉಪ ಚುನಾವಣೆಗಳಿಗೆ ಸಚಿವರು, ಶಾಸಕರನ್ನು ಹೋಬಳಿ ಮಟ್ಟದಲ್ಲಿ ನಿಯೋಜನೆಗೆ ನಿರ್ಧಾರ ಮಾಡಿದ್ದಾರೆ. ಅಲ್ಲದೇ ಸ್ಥಳೀಯ ಶಾಸಕರು, ಹಿರಿಯ ನಾಯಕರ ನೇತೃತ್ವದಲ್ಲಿ ಎಲೆಕ್ಷನ್ ಕ್ಯಾಂಪ್ ಆಫೀಸ್, ವಾರ್ ರೂಂ ಸ್ಥಾಪನೆ ಮಾಡಲು ನಿರ್ಧರಿಸಿದ್ದಾರೆ.

ಪದಾಧಿಕಾರಿಗಳ ಸಭೆಯಲ್ಲಿ ಎರಡು‌ ರೀತಿಯ ಪ್ಲ್ಯಾನ್ ಆಫ್ ಆ್ಯಕ್ಷನ್ ಮಾಡಲು ಮುಂದಾಗಿದ್ದು, ಪಕ್ಷ ಸಂಘಟನೆ ಮತ್ತು ಮುಂಬರುವ ಚುನಾವಣೆ ಕುರಿತು ಕಾರ್ಯ ಯೋಜನೆ ಮಾಡಲು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ | Hosur Airport: ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಹೊಣೆ ಬಿಐಎಎಲ್‌ಗೆ! ಕರ್ನಾಟಕಕ್ಕೆ ಟಕ್ಕರ್‌ ಕೊಟ್ಟ ತಮಿಳುನಾಡು

Continue Reading

ಪ್ರಮುಖ ಸುದ್ದಿ

M.R.Jayaram: ಶಿಕ್ಷಣ ತಜ್ಞ ಡಾ ಎಂ ಆರ್ ಜಯರಾಮ್‌ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್

M.R.Jayaram: ಶಿಕ್ಷಣ ತಜ್ಞ ದಿವಂಗತ ಡಾ.ಎಂ.ಎಸ್.ರಾಮಯ್ಯ ಅವರ ಹಿರಿಯ ಪುತ್ರ, ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್.ಜಯರಾಮ್ ಅವರಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯವು ತನ್ನ ಮೂರನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಅವರು ಎಂ.ಆರ್.ಜಯರಾಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್, ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ಕುಲಸಚಿವ ಜವರೇಗೌಡ ಮತ್ತಿತರರು ಉಪಸ್ಥಿತರಿದ್ದರು.

VISTARANEWS.COM


on

M.R.Jayaram
Koo

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯವು ತನ್ನ ಮೂರನೇ ಘಟಿಕೋತ್ಸವದಲ್ಲಿ ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಆರ್.ಜಯರಾಮ್ (M.R.Jayaram) ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಮಾನ್ಯ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಅವರು ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್.ಜಯರಾಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್, ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ಕುಲಸಚಿವ ಜವರೇಗೌಡ ಮತ್ತಿತರರು ಉಪಸ್ಥಿತರಿದ್ದರು.

M.R.Jayaram

ಡಾ.ಎಂ.ಆರ್.ಜಯರಾಮ್ ಕುರಿತು

ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಆರ್.ಜಯರಾಮ್ ಅವರು ಕರ್ನಾಟಕದ ಹೆಸರಾಂತ ಲೋಕೋಪಕಾರಿ ಮತ್ತು ಶಿಕ್ಷಣ ತಜ್ಞ ದಿವಂಗತ ಡಾ.ಎಂ.ಎಸ್.ರಾಮಯ್ಯ ಅವರ ಹಿರಿಯ ಪುತ್ರ. 1947ರಲ್ಲಿ ಜನಿಸಿದ ಡಾ.ಜಯರಾಮ್ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದ ಅವರು ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುವ ಕಾಯಕಕ್ಕೆ ಸಜ್ಜಾದರು.

M.R.Jayaram

1972ರಲ್ಲಿ, ತಮ್ಮ ಇಪ್ಪತ್ತೈದನೇ ವಯಸ್ಸಿನಲ್ಲಿ, ಜಯರಾಮ್ ಎಂ.ಎಸ್.ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಎಸ್ಆರ್‌ಟಿ) ಆಡಳಿತ ಮಂಡಳಿಯ (ಈಗ ಆಡಳಿತ ಮಂಡಳಿ) ಅಧ್ಯಕ್ಷರಾಗಿ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರ ತಮ್ಮ ಜಾಣ್ಮೆ ಮತ್ತು ನಿರ್ವಹಣಾ ಸಾಮರ್ಥ್ಯಗಳಿಂದ ಸಂಸ್ಥೆಗೆ ಗೌರವವನ್ನು ತಂದುಕೊಟ್ಟರು. ಅಂದಿನಿಂದ ಇದು ಎಂಜಿನಿಯರಿಂಗ್ ಶಿಕ್ಷಣದಲ್ಲಿ ಪ್ರಮುಖ ಸಂಸ್ಥೆಯಾಗಿ ಅಭಿವೃದ್ಧಿ ಹೊಂದಿದೆ.

M.R.Jayaram

ರಾಜಕೀಯ ತ್ಯಜಿಸಿದ ಡಾ. ಜಯರಾಮ್

1972ರಲ್ಲಿ ಡಾ. ಜಯರಾಮ್ ಅವರು ಕರ್ನಾಟಕ ವಿಧಾನಸಭೆಯ ಅತ್ಯಂತ ಕಿರಿಯ ಸದಸ್ಯರಾಗಿ ಆಯ್ಕೆಯಾದರು. ನಾಲ್ಕು ವರ್ಷಗಳ ಕಾಲ ಶಾಸಕರಾಗಿ ಸೇವೆ ಸಲ್ಲಿಸಿದ್ದ ಡಾ. ಜಯರಾಮ್ ಅವರು ರಾಜಕೀಯದಿಂದ ಬೇಸರಗೊಂಡು ವಿಧಾನಸಭೆಗೆ ರಾಜೀನಾಮೆ ನೀಡಿ ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು. ಚುನಾಯಿತ ಪ್ರತಿನಿಧಿಯೊಬ್ಬರು ತಾವೇ ಇಷ್ಟಪಟ್ಟು ಅಧಿಕಾರವನ್ನು ತ್ಯಜಿಸಿದಕ್ಕೆ ಇದು ಏಕೈಕ ಉದಾಹರಣೆಯಾಗಿದೆ. ರಾಜ್ಯ ಶಾಸಕಾಂಗದಿಂದ ಅವರು ಹೊರಗೆ ನಡೆದಿದ್ದು, ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಬಹಳ ಲಾಭವಾಗಿತ್ತು, ಯಾಕೆಂದರೆ ನಂತರ ಅವರು ಶಿಕ್ಷಣ ಮತ್ತು ಸಮಾಜ ಕಲ್ಯಾಣಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರು.

1979ರಲ್ಲಿ ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜು (ಎಂಎಸ್ಆರ್‌ಎಂಸಿ) ಸ್ಥಾಪಿಸಿದರು ಮತ್ತು ಡಾ. ಜಯರಾಮ್ ಅವರು ಎಂಎಸ್ಆರ್‌ಎಂಸಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಂಡರು. ಸ್ನಾತಕೋತ್ತರ ಶಿಕ್ಷಣ ಮತ್ತು ಸಂಶೋಧನೆಯನ್ನು ಬಲಪಡಿಸಲು ಅವರು ಎರಡೂ ಸಂಸ್ಥೆಗಳನ್ನು ಬಹಳ ಬುದ್ಧಿವಂತ ನಾಯಕತ್ವದೊಂದಿಗೆ ಮುನ್ನಡೆಸಿದರು, ಜೊತೆಗೆ ಪದವಿಪೂರ್ವ ಶಿಕ್ಷಣದಲ್ಲಿ ಹೆಚ್ಚಿನ ಖ್ಯಾತಿಯನ್ನು ಗಳಿಸಿದರು. ಡಾ.ಎಂ.ಆರ್.ಜಯರಾಮ್ ಅವರು ಉನ್ನತ ಶಿಕ್ಷಣದಲ್ಲಿ ಗುಣಮಟ್ಟ, ಕೈಗೆಟುಕುವಿಕೆ ಮತ್ತು ಪ್ರವೇಶಕ್ಕೆ ಒತ್ತು ನೀಡುವ ಮೂಲಕ ಈ ಸಂಸ್ಥೆಗಳನ್ನು ಪರಿವರ್ತಿಸಿದ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಅವರ ಪ್ರಯತ್ನಗಳ ಪರಿಣಾಮವಾಗಿ, ಈ ಪ್ರಮುಖ ಸಂಸ್ಥೆಗಳು ದೇಶದ 25 ಸಂಸ್ಥೆಗಳಲ್ಲಿ ಆಯಾ ಕ್ಷೇತ್ರಗಳಲ್ಲಿವೆ.

M.R.Jayaram

ಡಾ.ಜಯರಾಮ್ ಅವರ ಉತ್ತಮ ನಾಯಕತ್ವಕ್ಕೆ ಸಾಕ್ಷಿ ಎಂಬಂತೆ ಇಂದು ಜಿಇಎಫ್ ತನ್ನ 85 ಎಕರೆ ಜ್ಞಾನ ಗಂಗೋತ್ರಿ ಕ್ಯಾಂಪಸ್‌ನಲ್ಲಿ 18 ಕಾಲೇಜುಗಳು / ಶಾಲೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಈ ಶಾಲೆಗಳಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ನರ್ಸಿಂಗ್, ದಂತವೈದ್ಯಕೀಯ, ಕಾನೂನು, ಸಮಾಜ ವಿಜ್ಞಾನ ಮತ್ತು ಮ್ಯಾನೇಜ್‌ಮೆಂಟ್‌ ಸೇರಿವೆ. ಕ್ಯಾಂಪಸ್‌ನಲ್ಲಿ ಭಾರತ ಮತ್ತು ವಿದೇಶಗಳ ವಿದ್ಯಾರ್ಥಿಗಳನ್ನು ಒಳಗೊಂಡ 11,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಅವರ ದೃಢನಿಶ್ಚಯ ಮತ್ತು ನಿರಂತರ ಪ್ರಯತ್ನದಿಂದ ಈ ಪ್ರತಿಯೊಂದು ಸಂಸ್ಥೆಯೂ “ಅತ್ಯುತ್ತಮ ಕೇಂದ್ರ”ವಾಗಿ ಕರೆಯಿಸಿಕೊಳ್ಳುತ್ತಿದೆ.

M.R.Jayaram

ಡಾ.ಎಂ.ಎಸ್.ರಾಮಯ್ಯ ಅವರ ನಿಧನದ ನಂತರ, ಡಾ.ಜಯರಾಮ್ ಅವರು ತಮ್ಮ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸಿದರು. ಈಗ ತಮ್ಮ ತಂದೆಯ ನೆನಪಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುವತ್ತ ಗಮನ ಹರಿಸಿದ್ದಾರೆ ಮತ್ತು ಎಂ.ಎಸ್.ರಾಮಯ್ಯ ಸ್ಮಾರಕ ಆಸ್ಪತ್ರೆ ಇಂದು ಬೆಂಗಳೂರಿನ ಹೆಮ್ಮೆಯಾಗಿದೆ. ಎಂ.ಎಸ್. ರಾಮಯ್ಯ ಸ್ಕೂಲ್ ಆಫ್ ಅಡ್ವಾನ್ಸ್‌ಡ್‌ ಸ್ಟಡೀಸ್‌ ಕೂಡ ಅವರ ಸೃಷ್ಟಿಯಾಗಿದ್ದು, ನಂತರ ಅದು ಈಗ ಪ್ರಸಿದ್ಧ ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯವಾಗಿ ರೂಪಾಂತರಗೊಂಡಿತು. ಮತ್ತು ಇದು ಅವರು ಅವಿರತವಾಗಿ ನಿರ್ಮಿಸಿದ ಹದಿಮೂರು ಬೋಧಕವರ್ಗಗಳನ್ನು ಒಳಗೊಂಡಿದೆ. ಹಾಗೇ ಡಾ.ಜಯರಾಮ್ ಅವರು ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾರೆ.

ಡಾ.ಜಯರಾಮ್ ಅವರು ಶಿಕ್ಷಣ ತಜ್ಞರಲ್ಲದೆ, ಖ್ಯಾತ ಉದ್ಯಮಿ ಮತ್ತು ಕೈಗಾರಿಕೋದ್ಯಮಿಯಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಎಲ್ಲಾ ವ್ಯವಹಾರಗಳನ್ನು ಕ್ರೋಢೀಕರಿಸಿದರು ಮತ್ತು ಅವುಗಳನ್ನು “ವಾಲ್ಡೆಲ್ ಕಾರ್ಪೊರೇಷನ್” ಎಂಬ ಒಂದೇ ಹೆಸರಿನಡಿಯಲ್ಲಿ ತಂದರು. ವಾಲ್ಡೆಲ್ ವಿನ್ಯಾಸ ಎಂಜಿನಿಯರಿಂಗ್ ಮತ್ತು ಇತರ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಸಮುದಾಯ ಅಭಿವೃದ್ಧಿ ಮತ್ತು ಲೋಕೋಪಕಾರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅವರು ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಆಧ್ಯಾತ್ಮಿಕ ಪುನರುತ್ಥಾನದ ಕೇಂದ್ರವಾದ ಕೈವಾರ ಕ್ಷೇತ್ರದ ಧರ್ಮಾಧಿಕಾರಿ (ಮುಖ್ಯಸ್ಥ) ಆಗಿದ್ದಾರೆ. ಕ್ಷೇತ್ರವು ಹಳೆಯ ದೇವಾಲಯಗಳ ಪುನರುಜ್ಜೀವನ, ಕೈವಾರದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆರೋಗ್ಯ ಮತ್ತು ಶಿಕ್ಷಣವನ್ನು ಒದಗಿಸುವುದು, ಅನಾನುಕೂಲಕರ ಮತ್ತು ದುರ್ಬಲ ಜನಸಂಖ್ಯೆಯ ಕಲ್ಯಾಣ ಚಟುವಟಿಕೆಗಳನ್ನು ಒಳಗೊಂಡಿದೆ.

ಡಾ.ಜಯರಾಮ್ ಅವರು ಎಂ.ಎಸ್.ರಾಮಯ್ಯ ಚಾರಿಟೀಸ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿಯಾಗಿದ್ದು, ಇದು ಹಲವಾರು ಉತ್ತಮವಾಗಿ ವ್ಯಾಖ್ಯಾನಿಸಲಾದ ಸಾಮಾಜಿಕ ಉದ್ದೇಶಗಳನ್ನು ಅನುಸರಿಸುತ್ತದೆ. ಉನ್ನತ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಟ್ರಸ್ಟ್ ವಾರ್ಷಿಕವಾಗಿ ವಾರ್ಷಿಕ ವಿದ್ಯಾರ್ಥಿವೇತನವನ್ನು ನೀಡುತ್ತದೆ.

ಡಾ.ಜಯರಾಮ್ ಅವರು ವೃತ್ತಿಪರ ಸಂಘಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು 7000 ಕ್ಕೂ ಹೆಚ್ಚು ಉನ್ನತ ಶಿಕ್ಷಣವನ್ನು ಪ್ರತಿನಿಧಿಸುವ ಉನ್ನತ ವೃತ್ತಿಪರ ಸಂಸ್ಥೆಯಾದ ಎಜುಕೇಶನ್ ಪ್ರಮೋಷನ್ ಸೊಸೈಟಿ ಫಾರ್ ಇಂಡಿಯಾದ ಅಧ್ಯಕ್ಷರಾಗಿದ್ದಾರೆ.

ಸಂಸ್ಥೆಗಳು: ಅವರು ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟದ (ಸಿಒಎಂಇಡಿಕೆ) ಅಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ: ರೈಲು ಪ್ರಯಾಣಿಕರು ತಿಳಿದುಕೊಳ್ಳಲೇಬೇಕಾದ ನಿಯಮಗಳು

ಪ್ರಶಸ್ತಿ: ಸೆಪ್ಟೆಂಬರ್‌ 2006 ರಲ್ಲಿ, ಡಾ.ಜಯರಾಮ್ ಅವರಿಗೆ ಶಿಕ್ಷಣ ಮತ್ತು ವ್ಯವಹಾರಕ್ಕೆ ನೀಡಿದ ಕೊಡುಗೆಗಾಗಿ ಯುಕೆಯ ಕೊವೆಂಟ್ರಿ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿತು. ಮೇ 2022 ರಲ್ಲಿ, ಚಿಕಾಗೋದ ಇಲಿನಾಯ್ಸ್ ವಿಶ್ವವಿದ್ಯಾಲಯವು ಅವರಿಗೆ ಡಾಕ್ಟರ್ ಆಫ್ ಹ್ಯೂಮನ್ ಲೆಟರ್ಸ್ ನೀಡಿತು.

Continue Reading

ಕರ್ನಾಟಕ

Actor Darshan: ದರ್ಶನ್ ಅಪ್ಪಿಕೊಂಡು ಕಣ್ಣೀರಿಟ್ಟ ತಾಯಿ ಮೀನಾ; ಕುಟುಂಬಸ್ಥರನ್ನು ಕಂಡು ನಟ ಭಾವುಕ

Actor Darshan: ದರ್ಶನ್‌ ಅವರ ತಾಯಿ ಮೀನಾ, ತಮ್ಮ ದಿನಕರ್, ದರ್ಶನ್ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್‌ ಪರಪ್ಪನ ಅಗ್ರಹಾರ ಜೈಲಿಗೆ ಸೋಮವಾರ ಭೇಟಿ ನೀಡಿದ್ದರು. ಕುಟುಂಬಸ್ಥರನ್ನು ಕಂಡು ದರ್ಶನ್‌ ಕೂಡ ಭಾವುಕರಾಗಿದ್ದಾರೆ.

VISTARANEWS.COM


on

Actor Darshan
Koo

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರನ್ನು ಕುಟುಂಬಸ್ಥರು ಸೋಮವಾರ ಭೇಟಿ ಮಾಡಿದರು. ಕುಟುಂಬಸ್ಥರನ್ನು ನೋಡುತ್ತಿದ್ದಂತೆ ದರ್ಶನ್ ಭಾವುಕರಾಗಿದ್ದು, ಈ ವೇಳೆ ಮಗನನ್ನು ಅಪ್ಪಿಕೊಂಡು ತಾಯಿ ಮೀನಾ ಕೂಡ ಕಣ್ಣೀರು ಹಾಕಿದ್ದಾರೆ. ತನ್ನ ಸ್ಥಿತಿ ಕಂಡು ಗೋಳಾಡುತ್ತಿದ್ದ ತಾಯಿಗೆ ದರ್ಶನ್ (Actor Darshan) ಸಮಾಧಾನ ಹೇಳಿದ್ದಾರೆ.

ಭೇಟಿ ವೇಳೆ ಮಗ ವಿನೀಶ್‌ನನ್ನು ತೊಡೆಯ ಮೇಲೆ ಕೂರಿಸಿಕೊಂಡು ದರ್ಶನ್ ಮುದ್ದಾಡಿದ್ದಾರೆ. ಸ್ನೇಹಿತರಂತಿದ್ದ ತಂದೆ-ಮಗನ ಸ್ಥಿತಿ ಕಂಡು ದರ್ಶನ್ ಪತ್ನಿ ವಿಜಯಲಕ್ಷ್ಮಿ ಭಾವುಕರಾಗಿದ್ದಾರೆ. ಇನ್ನು ದರ್ಶನ್‌ಗೆ ಸಹೋದರ ದಿನಕರ್ ತೂಗುದೀಪ್ ಧೈರ್ಯ ತುಂಬಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಕಳೆದ ಹತ್ತು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಹೀಗಾಗಿ ಹಲವು ನಟ, ನಟಿಯರು ಹಾಗೂ ಕುಟುಂಬಸ್ಥರು ನಟ ದರ್ಶನ್‌ರನ್ನು ಭೇಟಿ ಮಾಡುತ್ತಿದ್ದಾರೆ.

ಇದನ್ನೂ ಓದಿ | Actor Darshan: ಕೆಟ್ಟ ಕಮೆಂಟ್‌ ಮಾಡೋರನ್ನ ಬ್ಲಾಕ್‌ ಮಾಡಿ, ದರ್ಶನ್‌ ನಿರಪರಾಧಿ ಆಗಿ ಹೊರ ಬರಲಿ ಎಂದ ಅದ್ವಿತಿ ಶೆಟ್ಟಿ

ಇನ್ನು ಬಂದಿಖಾನೆ ಇಲಾಖೆ ಕಾನೂನನ್ನು ಗಾಳಿಗೆ ತೂರಿ ದರ್ಶನ್‌ಗೆ ರಾಜಾತಿಥ್ಯ ನೀಡಿದೆ. ಸಾಮಾನ್ಯರು ಜೈಲಿಗೆ ಎಂಟ್ರಿ‌ ಕೊಡಬೇಕಾದರೆ ಹತ್ತಾರು ರೂಲ್ಸ್‌ ಹೇಳುತ್ತಾರೆ. ಅದೇ ನಟ ದರ್ಶನ್ ಕುಟುಂಬಕ್ಕೆ ಮಾತ್ರ ಕಂಡಿಷನ್ ಇಲ್ಲವೆಂಬಂತಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ರಾಜಾರೋಷವಾಗಿ ನಟ ದರ್ಶನ್ ಕುಟುಂಬದವರಿಗೆ ಜೈಲು ಎಂಟ್ರಿ ನೀಡಲಾಗಿದೆ. ಮಾಧ್ಯಮಗಳ ಕಣ್ತಪ್ಪಿಸಿ ನಟ ದರ್ಶನ್ ಅವರನ್ನು ಕುಟುಂಬ ಭೇಟಿ ಮಾಡಿದೆ. ಪರಪ್ಪನ ಅಗ್ರಹಾರ ಜೈಲಿಗೆ ನಟ ದರ್ಶನ್ ತಾಯಿ, ತಮ್ಮ ಪತ್ನಿ ಮಗ ಎಂಟ್ರಿ ಕೊಟ್ಟರು. ಹತ್ತು ಗಂಟೆ ಸುಮಾರಿಗೆ ಕುಟುಂಬ ಜೈಲಿಗೆ ಬಂದಿತ್ತು. ಪರಪ್ಪನ ಅಗ್ರಹಾರ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಉದಯ್ ದರ್ಶನ್ ಭೇಟಿಗೆ ಕರೆದೊಯ್ದರು. ಉದಯ್‌ ಅವರು ಕಳೆದ ಸೋಮವಾರ ಸಹ ಮಾಧ್ಯಮಗಳ ಕಣ್ತಪ್ಪಿಸಿ ಪತ್ನಿ ಮಗನನ್ನು ಕರೆದೊಯ್ದಿದ್ದರು. ಇಂದು ಕೂಡ ಖಾಸಗಿ ಕಾರಿನಲ್ಲಿ ಉದಯ್‌ ಕುಟುಂಬವನ್ನು ಕರೆದೊಯ್ದಿದ್ದಾರೆ ಎಂದು ಹೇಳಲಾಗಿದೆ.

Actor Darshan: ದರ್ಶನ್ ನನ್ನ ಮಗು, ಆತ ಕೊಟ್ಟ ಕೊಡುಗೆ ಕಡೆ ನೋಡೋಣ ಎಂದ ಹಂಸಲೇಖ!

Actor Darshan is like my son says hamsalekha

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್‌ (Actor Darshan) ಸೆರೆವಾಸ ಇಂದು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನವೂ ದರ್ಶನ್‌ ಅವರ ಅಮ್ಮ ಹಾಗೂ ತಮ್ಮ ಮಗನ ಭೇಟಿಗೆ ಸೆರೆಮನೆಯತ್ತ ಕಾಲಿಟ್ಟಿರಲಿಲ್ಲ. ಇಂದಾದರೂ ಅವರು ಆಗಮಿಸಲಿದ್ದಾರಾ ಎಂಬ ಕುತೂಹಲ ಮೂಡಿದೆ. ರಚಿತಾ ರಾಮ್, ರಕ್ಷಿತಾ, ಪ್ರೇಮ್ ಸೇರಿದಂತೆ ಸಾಕಷ್ಟು ಮಂದಿ ದರ್ಶನ್ ಪರ ನಿಂತಿದ್ದಾರೆ. ಈಗ ನಾದ ಬ್ರಹ್ಮ ಹಂಸಲೇಖ ಕೂಡ ದರ್ಶನ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಂಸಲೇಖ ಮಾತನಾಡಿ ʻʻನಾವು ಸಿಟ್ಟನ್ನು ಸ್ಕ್ರಿಪ್ಟ್ ಮಾಡಬೇಕು. ದ್ವೇಷ ಇದೆಯಲ್ಲ ಅದನ್ನು ಕ್ಯಾರೆಕ್ಟರ್ ಮಾಡಬೇಕು. ಸಿಟ್ಟು ಅಂದರೆ ಅದೊಂದು ಸ್ಕ್ರಿಪ್ಟ್‌ . ದ್ವೇಷ ಅಂದರೆ ಅದು ಕ್ಯಾರೆಕ್ಟರ್ ಅಯ್ಯ. ಆತರ ಸಿನಿಮಾದಲ್ಲಿ ತೋರಿಸಬೇಕಷ್ಟೆ ನಾವು. ನಿಜ ಜೀವನದಲ್ಲಿ ಸ್ಕ್ರಿಪ್ಟ್ ತರಬಾರದು. ನಿಜ ಜೀವನದಲ್ಲಿ ಕ್ಯಾರೆಕ್ಟರ್ ಅನ್ನು ತರಬಾರದು. ಇದು ಕಲಾವಿದರ ಕರ್ತವ್ಯ.” ಎಂದು ಹಂಸಲೇಖ ಹೇಳಿದ್ದಾರೆ.

“ದರ್ಶನ್ ನನ್ನ ಮಗು ಅಂತ ತಿಳಿದುಕೊಳ್ಳಿ. ನನ್ನ ಮಗು ತಪ್ಪು ಮಾಡಿದ್ದರೆ, ತಂದೆ ಎಷ್ಟು ನೋವು ತಿಂತಾನೋ ಅಷ್ಟೇ ನಾನು ನೋವು ತಿನ್ನುತ್ತೀನಿ. ಆ ಮಗು ಕೂಡ ಅಷ್ಟೇ ನೋವು ತಿನ್ನುತ್ತಿರುತ್ತೆ. ನಾವು ಆತ ಕೊಟ್ಟಿರುವ ಕೊಡುಗೆ ಕಡೆ ನೋಡೋಣ.” ಎಂದು ದರ್ಶನ್ ಜೈಲು ಸೇರಿರುವ ಬಗ್ಗೆ ಹಂಸಲೇಖ ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ನಷ್ಟದ ಹಾದಿ ಹಿಡಿದಿರುವ ಬಗ್ಗೆನೂ ಹಂಸಲೇಖ ಪ್ರತಿಕ್ರಿಯೆ ನೀಡಿದ್ದಾರೆ. “ಚಂದನವನ ಎಷ್ಟು ಕೀರ್ತಿಯನ್ನು ಗಳಿಸಿತು. ಎಷ್ಟು ಪ್ರಶಸ್ತಿಗಳು. ಎಷ್ಟು ರಾಷ್ಟ್ರ ಪ್ರಶಸ್ತಿಗಳು. ಎಷ್ಟು ಗೌರವ. ಎಂತಹ ಪ್ರತಿಭಾವಂತರು ಹುಟ್ಟಿ ಬೆಳೆದಿದ್ದಾರೆ. ಅಂದರೆ, ಆ ಎತ್ತರಕ್ಕೆ ಏರಿದ್ದಾರೆ. ಆ ಎತ್ತರಕ್ಕೆ ಹೋದ ಮೇಲೆ ಅಲ್ಲಿಂದ ಕೆಳಗೆ ಬೀಳಬೇಕಾಗುತ್ತೆ. ಹಾಗಾಗುವುದು ಬೇಡ. ಅಲ್ಲಿಂದ ಬಿದ್ದ ಕೂಡಲೇ ಅಲ್ಲಿಂದ ಮತ್ತೆ ಏಳುವ ಚಾನ್ಸ್ ಇದೆ.” ಎಂದು ಹಂಸಲೇಖ ಚಿತ್ರರಂಗದ ಬಗ್ಗೆ ಹೇಳಿದ್ದಾರೆ.

Actor Darshan:  ದರ್ಶನ್‌‌‌‌‌‌ ವಿರುದ್ಧ ಪರೋಕ್ಷವಾಗಿ ಕೌಂಟರ್‌ ಕೊಟ್ಟ ನಟ ಜಗ್ಗೇಶ್!

ಜೈಲೂಟ ಒಗ್ಗದೆ ಇದ್ದರೂ ವಿಧಿಯಿಲ್ಲದೆ ಜೈಲೂಟ ಸವಿಯುತ್ತಿರುವ ದರ್ಶನ್ ಇಂದು ಜೈಲಿನ ಮೆನುವಿನಂತೆ ಉಪ್ಪಿಟ್ಟು ಸೇವಿಸಿದ್ದಾನೆ. ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿರುವ ನಟ ದರ್ಶನ್ ತಾಯಿ ಮತ್ತು ಸಹೋದರ ಇಂದು ಭೇಟಿ ನೀಡಲಿದ್ದು, ದರ್ಶನ್‌ಗೆ ತಾಯಿ ಮತ್ತು ಸಹೋದರ ಧೈರ್ಯ ಹೇಳಲಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ದರ್ಶನ್ ಮಡದಿ ಮಗ ಆಗಮಿಸಿದ್ದರು. ಅವರು ಬಂದು ಹೋದ ದಿನ ಖುಷಿಯಾಗಿದ್ದ ದರ್ಶನ್‌, ಬಳಿಕ ಮತ್ತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಸಹ ಬಂಧಿಗಳ ಜೊತೆ ಬೆರೆಯದೆ ಒಬ್ಬಂಟಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ದಾನೆ.

Continue Reading

ಕರ್ನಾಟಕ

DCM Post: ಒನ್ ಮ್ಯಾನ್ ಒನ್ ಪೋಸ್ಟ್ ಕೂಗಿಗೆ ಡಿಕೆಶಿ ಡೋಂಟ್ ಕೇರ್‌; ಕೇಡರ್ ಬೇಸ್ ಪಾರ್ಟಿ ಕಟ್ಟಲು ಪಣ!

DCM Post: ಪಕ್ಷ ಸಂಘಟನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸರಣಿ ಸಭೆಗಳನ್ನು ಮುಂದುವರಿಸಿದ್ದಾರೆ. ಕಳೆದ ವಾರ ಬೆಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆ ನಡೆದಿತ್ತು, ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆ ನಡೆಸಿದ್ದಾರೆ.

VISTARANEWS.COM


on

DCM Post
Koo

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ರಾಜ್ಯ ಕಾಂಗ್ರೆಸ್‌ ನಾಯಕರಿಂದಲೇ ಒತ್ತಾಯ ಕೇಳಿಬರುತ್ತಿದೆ. ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ (DCM Post) ಸ್ಥಾನವನ್ನು ಒಬ್ಬರಿಗೆ ನೀಡಿರುವುದಕ್ಕೆ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ಆದರೆ, ಒನ್ ಮ್ಯಾನ್ ಒನ್ ಪೋಸ್ಟ್ ಕೂಗಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದು, ಕೇಡರ್ ಬೇಸ್ ಪಾರ್ಟಿ ಕಟ್ಟಲು ಅವರು ಪಣತೊಟ್ಟಿದ್ದಾರೆ. ಇದಕ್ಕಾಗಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

ಚುನಾವಣೆ ದೃಷ್ಟಿಯಿಂದ ಪ್ರತ್ಯೇಕ ಆ್ಯಕ್ಷನ್ ಪ್ಲ್ಯಾನ್ ಸಿದ್ಧಪಡಿಸಿ ಪದಾಧಿಕಾರಿಗಳ ಸಭೆಯಲ್ಲಿ ಮಂಡನೆ ಮಾಡಿದ್ದಾರೆ. ಇನ್ನು ಲೋಕಸಭೆ ಫಲಿತಾಂಶದ ಹಿನ್ನಡೆ ಹಿನ್ನೆಲೆಯಲ್ಲಿ ವಲಯವಾರು ಸತ್ಯ ಶೋಧನಾ ಸಮಿತಿ ರಚನೆಗೆ ನಿರ್ಧಾರ ಮಾಡಿದ್ದಾರೆ.

ಲೋಕಸಭೆಯಲ್ಲಿ ಹಿನ್ನಡೆ ಅನುಭವಿಸಿದ ವಿಧಾನಸಭಾ ಕ್ಷೇತ್ರಗಳ ಪ್ರಗತಿ ಪರಿಶೀಲನೆ, ಕಾರಣಗಳನ್ನು ಪತ್ತೆ ಹಚ್ಚುವುದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ರೂಪುರೇಷೆ ಸಿದ್ಧಪಡಿಸಲು ವಲಯವಾರು ಸಮಿತಿ ರಚನೆ ಮಾಡಲು ಹಾಗೂ ಬಿಬಿಎಂಪಿ, ಜಿಪಂ, ತಾಪಂ ಚುನಾವಣೆಗೆ ಹಾಗೂ ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ | Hosur Airport: ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಹೊಣೆ ಬಿಐಎಎಲ್‌ಗೆ! ಕರ್ನಾಟಕಕ್ಕೆ ಟಕ್ಕರ್‌ ಕೊಟ್ಟ ತಮಿಳುನಾಡು

ಪ್ರತಿ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರವಾರು ಸಂಚಾಲನ ಸಮಿತಿ ರಚನೆಗೂ ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ ಮಾಜಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್ ಸದಸ್ಯರ ಪ್ರತ್ಯೇಕ ಸಭೆಯನ್ನು ಡಿಕೆಶಿ ನಡೆಸಲಿದ್ದಾರೆ. ಕೆಳಹಂತದಲ್ಲಿ ಪಕ್ಷ ಬಲವರ್ಧನೆಗೆ ಸಲಹೆ ನೀಡಲು ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹಾಗೆಯೇ ಬೂತ್ ಮಟ್ಟದ ಸಮಸ್ಯೆ ಬಗೆಹರಿಸಲು ವಾರ್ಡ್ ಸಮಿತಿ/ ಪಂಚಾಯತ್ ಸಮಿತಿಗಳ ರಚನೆಗೆ ತೀರ್ಮಾನ ಮಾಡಿದ್ದು, ಗ್ಯಾರಂಟಿ ಫಲಾನುಭವಿಗಳ ದಾಖಲೆ ಹಾಗೂ ಮೊಬೈಲ್ ಸಂಖ್ಯೆ ಸಂಗ್ರಹಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಮಟ್ಟದಲ್ಲಿ ಅಪಾರ್ಟ್ಮೆಂಟ್ ಸೆಲ್ ಹಾಗೂ ರೆಸಿಡೆಂಟ್ ವೆಲ್ಫೆರ್ ಅಸೋಸಿಯೇಷನ್‌ಗೆ ಪುನಶ್ಚೇತನ ನೀಡಲು ಯೋಜಿಸಿದ್ದು, ಉಪ ಚುನಾವಣೆಗಳಿಗೆ ಸಚಿವರು, ಶಾಸಕರನ್ನು ಹೋಬಳಿ ಮಟ್ಟದಲ್ಲಿ ನಿಯೋಜನೆಗೆ ನಿರ್ಧಾರ ಮಾಡಿದ್ದಾರೆ. ಅಲ್ಲದೇ ಸ್ಥಳೀಯ ಶಾಸಕರು, ಹಿರಿಯ ನಾಯಕರ ನೇತೃತ್ವದಲ್ಲಿ ಎಲೆಕ್ಷನ್ ಕ್ಯಾಂಪ್ ಆಫೀಸ್, ವಾರ್ ರೂಂ ಸ್ಥಾಪನೆ ಮಾಡಲು ನಿರ್ಧರಿಸಿದ್ದಾರೆ.

ಪದಾಧಿಕಾರಿಗಳ ಸಭೆಯಲ್ಲಿ ಎರಡು‌ ರೀತಿಯ ಪ್ಲ್ಯಾನ್ ಆಫ್ ಆ್ಯಕ್ಷನ್ ಮಾಡಲು ಮುಂದಾಗಿದ್ದು, ಪಕ್ಷ ಸಂಘಟನೆ ಮತ್ತು ಮುಂಬರುವ ಚುನಾವಣೆ ಕುರಿತು ಕಾರ್ಯ ಯೋಜನೆ ಮಾಡಲು ತೀರ್ಮಾನಿಸಿದ್ದಾರೆ.

ಪಕ್ಷ ಸಂಘಟನೆಯ ಕಾರ್ಯ ಯೋಜನೆ ಏನು?

1.ಉಸ್ತುವಾರಿಗಳ ಹಂಚಿಕೆ
ಜಿಲ್ಲೆಗಳು, ಅಸೆಂಬ್ಲಿ ಕ್ಷೇತ್ರಗಳಿಗೆ ನಿಯೋಜಿಸಲಾದ ಕೆಪಿಸಿಸಿ ಪದಾಧಿಕಾರಿಗಳಗೆ ಜವಾಬ್ದಾರಿ ಹಂಚುವುದು

2.ಹೊಣೆಗಾರಿಕೆ
ಎಲ್ಲಾ ಕೆಪಿಸಿಸಿ ಪದಾಧಿಕಾರಿಗಳಿಂದ ಮಾಸಿಕ ಕೆಲಸದ ವರದಿಗಳನ್ನು ಸಂಗ್ರಹಿಸುವುದು

    3.ವಿಭಾಗೀಯ ಸಭೆಗಳು
    ಕೆಪಿಸಿಸಿ ವಿಭಾಗೀಯ ಸಭೆಗಳು ಜುಲೈ 2024 ರಲ್ಲಿ ನಡೆಯಲಿವೆ
    ಆಗಸ್ಟ್ 2024 ರಲ್ಲಿ ಬ್ಲಾಕ್, ಜಿಲ್ಲೆ ಮತ್ತು ಅಸೆಂಬ್ಲಿ ಹಂತಗಳಲ್ಲಿ ಸಾಂಸ್ಥಿಕ ಕಾರ್ಯಾಗಾರಗಳನ್ನು ನಡೆಸುವುದು.

    4.ದತ್ತಾಂಶ ಪರಿಶೀಲನೆ
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಬೂತ್ ಸಮಿತಿ ಮತ್ತು BLA 2 ನೇಮಕಾತಿಗಳನ್ನು ಪರಿಶೀಲಿಸುವುದು

    5.ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು
    ಪ್ರತಿ ಜಿಲ್ಲೆ/ಬ್ಲಾಕ್/ಬೂತ್‌ನಲ್ಲಿ ಪದಾಧಿಕಾರಿಗಳನ್ನು ನೇಮಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು
    ಖಾಲಿ ಇರುವ ಹುದ್ದೆಗಳನ್ನ ಒಂದು ಅಥವಾ ಎರಡು ತಿಂಗಳಿನಲ್ಲಿ ಡಿಸಿಸಿ ಅಧ್ಯಕ್ಷರು, ಸ್ಥಳೀಯ ಸಂಸದರು/ಶಾಸಕರು ಮತ್ತು ಹಿರಿಯ ಪದಾಧಿಕಾರಿಗಳು ಅಭಿಪ್ರಾಯ ಪಡೆದು ಭರ್ತಿ ಮಾಡುವುದು

      6.ಡಿಜಿಟಲೈಸೇಶನ್
      ಬ್ಲಾಕ್, ಹಿರಿಯ ನಾಯಕರು, ಮುಂಚೂಣಿ ಘಟಕಗಳು, ಇಲಾಖೆಗಳ ಮುಖ್ಯಸ್ಥರು ಹೀಗೆ ಎಲ್ಲರ ಸಂಪರ್ಕ ವಿವರಗಳೊಂದಿಗೆ ಕೆಪಿಸಿಸಿ ಡೇಟಾ ಡಿಜಿಟಲೈಸೇಷನ್ ಮಾಡುವುದು

      7.ವೆಬ್‌ಸೈಟ್ ಮತ್ತು ಸೋಶಿಯಲ್ ಮೀಡಿಯಾ
      ಕೆಪಿಸಿಸಿ ವೆಬ್‌ಸೈಟ್‌ನಲ್ಲಿ ಪಕ್ಷದ ಕಾರ್ಯಕ್ರಮಗಳ ಕುರಿತು ಅಪ್‌ಡೇಟ್‌ ಆಗುತ್ತಿರಬೇಕು

      8.ಪ್ರಚಲಿತ ವಿದ್ಯಮಾನಗಳು
      ಕೆಪಿಸಿಸಿ ಪದಾಧಿಕಾರಿಗಳನ್ನು ಬೆಂಬಲಿಸುವಂತ, ನರೇಟಿವ್ ಸೆಟ್ ಮಾಡುವ ಕೌಂಟರ್ ಮಾಡಬೇಕು

      9.ಗ್ರೌಂಡ್ ಲೆವೆಲ್ ರೀಚ್
      ಬ್ಲಾಕ್ ಮತ್ತು ಬೂತ್ ಮಟ್ಟದ ನಡುವೆ ಮಧ್ಯವರ್ತಿಗಳಾಗಿ ಪಂಚಾಯತಿವಾರು ಸಮಿತಿಗಳು ಕೆಲಸ ಮಾಡಬೇಕು

        10.ಸಾಧನೆಗಳ ಮಾಹಿತಿ
        ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನ ಬ್ಲಾಕ್ ಮತ್ತು ಬೂತ್ ಸಮಿತಿಗಳ ಮೂಲಕ ಸ್ಥಳೀಯವಾಗಿ ಪ್ರಚಾರ ಮಾಡಬೇಕು

          11.ಬೂತ್ ಮಟ್ಟದ ಫಲಾನುಭವಿ ಕಾರ್ಯಕ್ರಮ
          ಸರ್ಕಾರವು ಕೋಟಿಗಟ್ಟಲೆ ಫಲಾನುಭವಿಗಳನ್ನು ಸೃಷ್ಟಿಸಿದೆ
          ಹೀಗಾಗಿ ರಾಜ್ಯಾದ್ಯಂತ ತಳಮಟ್ಟದ ಆಂದೋಲನವನ್ನು ರಚಿಸಲು ಫಲಾನುಭವಿ ಆಧಾರಿತ ಕಾರ್ಯಕ್ರಮವನ್ನು ಪ್ರಾರಂಭಿಸುವುದು

          12.ಡಿಜಿಟಲ್ ಯೂತ್
          ತ್ವರಿತ ಮಾಹಿತಿ ಒದಗಿಸಲು ಹಾಗೂ ಪ್ರಚಾರ ಮಾಡಲು ಪ್ರತಿ ಬೂತ್‌ನಲ್ಲಿ “ಡಿಜಿಟಲ್ ಯೂತ್” ಸ್ಥಾಪಿಸುವುದು.
          ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗ ಇದನ್ನ ನಿರ್ವಹಿಸುವುದು.

            13.ಸದಸ್ಯತ್ವ ನೋಂದಣಿ
            ಪಕ್ಷದ ಸದಸ್ಯರನ್ನು ಹೆಚ್ಚಿಸುವ ಸಲುವಾಗಿ ಮತ್ತೊಮ್ಮೆ ಸದಸ್ಯತ್ವ ನೋಂದಣಿ ಮರುಪ್ರಾರಂಭಿಸುವುದು

              14. AIPC ಮತ್ತು ವೃತ್ತಿಪರರ ಕೋಶ ಪುನರುಜ್ಜೀವನ
              ವೃತ್ತಿಪರರ ಕೋಶ ಮತ್ತು AIPC ಅನ್ನು ಪುನರುಜ್ಜೀವನಗೊಳಿಸಲಾಗುವುದು
              ನಗರ ಕಾರ್ಯನಿರತ ವೃತ್ತಿಪರರನ್ನ ಹೆಚ್ಚೆಚ್ಚು ತಲುಪುವಂತೆ ಮಾಡುವುದು ಇದರ ಉದ್ದೇಶ

              ಚುನಾವಣಾ ಸಿದ್ಧತೆಯ ಪ್ಲಾನ್ ಆಫ್ ಆ್ಯಕ್ಷನ್

              1.ವಿಭಾಗೀಯ ಸತ್ಯಶೋಧನೆ ಮತ್ತು ತಯಾರಿ ಸಮಿತಿ
              ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಸೋಲಿನ ಕಾರಣಗಳನ್ನು ತನಿಖೆ ಮಾಡಲು ಸಮಿತಿಯನ್ನು ನೇಮಿಸುವುದು.
              ಇತ್ತೀಚಿನ ಚುನಾವಣೆಯಲ್ಲಿ ನಮ್ಮ ಕಾರ್ಯಕ್ಷಮತೆಗೆ ಕಾರಣಗಳನ್ನು ಅಳೆಯಲು ವಿಭಾಗವಾರು ಸಮಿತಿಗಳು ಕೆಲಸ ಮಾಡುತ್ತವೆ.
              ಮುಂಬರುವ ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ಚುನಾವಣೆಗಳಿಗೆ ನಿಖರ ಮಾಹಿತಿ ಒದಗಿಸುವುದು.

                2.ಕ್ರಿಯಾಶೀಲ ಪಾತ್ರ
                ಮುಂಬರುವ BBMP/ZP/TP ಚುನಾವಣೆಗಳು ಮತ್ತು ಉಪಚುನಾವಣೆಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಕೆಪಿಸಿಸಿ ಕಚೇರಿ ಪೂರ್ವಭಾವಿಯಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು

                3.ಸಮನ್ವಯ ತಂಡಗಳು
                ಪ್ರತಿ ಜಿಲ್ಲೆ, ವಿಧಾನಸಭಾ ಕ್ಷೇತ್ರವು ಅಭ್ಯರ್ಥಿಗಳಿಗೆ ಸಹಾಯ ಮಾಡಲು ಮತ್ತು ಕೆಪಿಸಿಸಿಗೆ ವರದಿ ಮಾಡಲು ಹಿರಿಯ ನಾಯಕರ ನೇತೃತ್ವದಲ್ಲಿ ಕಾರ್ಯನಿರತ ತಂಡ ರಚಿಸುವುದು
                ಸಮನ್ವಯ ತಂಡಕ್ಕೆ ಆಯಾ ಚುನಾವಣೆಗೆ ನಿರ್ಣಾಯಕ ಬೂತ್‌ಗಳನ್ನು ಗುರುತಿಸುವ ಜವಾಬ್ದಾರಿ ಇರುತ್ತದೆ

                4.ವಿಭಾಗೀಯ ಸಭೆಗಳು
                ಎಲ್ಲಾ ಮಾಜಿ TP/ZP ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು/ಉಪ ನಾಯಕರ ಸಭೆಗಳನ್ನ ಮಾಡಿ ಸಲಹೆ ಸೂಚನೆ ಪಡೆಯುವುದು

                5.ಮತದಾರರ ಪಟ್ಟಿಯನ್ನು ನವೀಕರಿಸುವುದು
                ಮತದಾರರ ಪಟ್ಟಿಯಿಂದ ಮತದಾರರ ಸೇರ್ಪಡೆ ಮತ್ತು ಅಳಿಸುವಿಕೆ ಮತ್ತು ಅದರ ನಿರಂತರ ಮೇಲ್ವಿಚಾರಣೆ ಮಾಡಬೇಕು

                6.ಸಮನ್ವಯ ಸಮಿತಿಗಳು
                ಬಿ.ಬಿ.ಎಂ.ಪಿ ಮತ್ತು ಗ್ರಾಮ ಪಂಚಾಯತಿಗಾಗಿ ವಾರ್ಡ್/ಪಂಚಾಯತ್ ವಾರು ಕಮಿಟಿಗಳನ್ನು ಮಾಡುವುದು
                ಗ್ರೌಂಡ್ ಲೆವೆಲ್‌ಗೆ ತಲುಪಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ರೂಪಿಸುವುದು

                7.ಫಲಾನುಭವಿ ಡೇಟಾ
                ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಡೇಟಾವನ್ನು ಸಂಗ್ರಹಿಸುವುದು ಮತ್ತು ಪ್ರತ್ಯೇಕಿಸುವುದು
                ನಿರ್ದಿಷ್ಟ ಸಂದೇಶವನ್ನು ಕಳುಹಿಸುವ ಸಲುವಾಗಿ ಡೇಟಾ ಬಳಕೆ ಮಾಡುವುದು.

                8.ಅಪಾರ್ಟ್‌ಮೆಂಟ್ ಸೆಲ್
                ಬಿಬಿಎಂಪಿ ಚುನಾವಣೆ ಅನುಕೂಲಕ್ಕಾಗಿ ಆರ್‌ಡಬ್ಲ್ಯೂಎ ಮತ್ತು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ತಲುಪಲು ಕೆಪಿಸಿಸಿ ಅಪಾರ್ಟ್‌ಮೆಂಟ್ ಸೆಲ್ ಪುನರುಜ್ಜೀವನಗೊಳಿಸುವುದು

                9.ಉಪಚುನಾವಣೆಗಳ ಗಮನ
                ವಿಧಾನಸಭೆ ಮತ್ತು ಪರಿಷತ್ ಉಪಚುನಾವಣೆಗಳಲ್ಲಿ ಗೆಲುವು ಸಾಧಿಸಲು ಪಕ್ಷದ ಹಿರಿಯ ನಾಯಕರು, ಶಾಸಕರು ಮತ್ತು ಇತರ ಪ್ರಮುಖ ನಾಯಕರನ್ನು ನಿಯೋಜಿಸುವುದು

                  10.ಚುನಾವಣಾ ಶಿಬಿರ ಕಚೇರಿಗಳು
                  ಹಿರಿಯ ಕೆಪಿಸಿಸಿ ನಾಯಕರು ಮತ್ತು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಉಪ-ಚುನಾವಣೆ ಸ್ಥಾನಗಳಲ್ಲಿ ಚುನಾವಣಾ ಶಿಬಿರ ಕಚೇರಿಗಳು/ವಾರ್ ರೂಮ್‌ಗಳನ್ನು ಸ್ಥಾಪಿಸಿ.

                  11.ಪರಿಶೀಲನಾ ಸಭೆಗಳು
                  ಮಾಜಿ TP/ZP ಅಧ್ಯಕ್ಷರು/ಉಪಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು/ಉಪ ನಾಯಕರ ಸಭೆಗಳನ್ನು ನಡೆಸಿ ಜಬಾವ್ದಾರಿ ಹಂಚುವುದು ಹಾಗೂ ಸಲಹೆ ಪಡೆಯುವುದು

                  12.ಕಾರ್ಯಕ್ಷಮತೆಯ ವಿಮರ್ಶೆ
                  ಇತ್ತೀಚಿನ ಲೋಕಸಭೆ ಚುನಾವಣೆಗಳಲ್ಲಿನ ಕಾರ್ಯಕ್ಷಮತೆಯನ್ನು ಕೂಲಂಕಷವಾಗಿ ಪರಿಶೀಲಿಸುವುದು
                  ಯಾವ ಅಸೆಂಬ್ಲಿ ಸ್ಥಾನಗಳು ಕಳಪೆ ಸಾಧನೆ ಮಾಡಿವೆ ಎಂಬುದನ್ನು ಗುರುತಿಸುವುದು ಮತ್ತು ಅದಕ್ಕೆ ಕಾರಣ ತಿಳಿದುಕೊಳ್ಳುವುದು (important)

                  13.ಸದಸ್ಯತ್ವ ಡ್ರೈವ್ ಬಳಕೆ
                  ರಾಜ್ಯದಾದ್ಯಂತ ಕೆಪಿಸಿಸಿ ಸದಸ್ಯರನ್ನು ತಲುಪಲು, ಕೆಪಿಸಿಸಿ ಸದಸ್ಯತ್ವ ಡ್ರೈವ್‌ನಿಂದ ಡೇಟಾವನ್ನು ಬಳಸಿಕೊಳ್ಳುವುದು

                    14.ವಿಷನ್ ಡಾಕ್ಯುಮೆಂಟ್
                    ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ವಿಷನ್ ಡಾಕ್ಯುಮೆಂಟ್/ಪ್ರಣಾಳಿಕೆಯನ್ನು ರಚಿಸುವುದು

                    ಇದನ್ನೂ ಓದಿ | DV Sadananda Gowda: ಬಿಜೆಪಿ ರಾಜ್ಯ ನಾಯಕರ ಮೇಲೆ ಸಿಡಿದೆದ್ದ ಸದಾನಂದ ಗೌಡ; ಪಕ್ಷವಿರೋಧಿಗಳಿಗೆ ಮಣೆ ಹಾಕಿದ್ದಕ್ಕೆ ಕಿಡಿ

                    ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಸೋಮವಾರ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ್, ಜಿ.ಸಿ. ಚಂದ್ರಶೇಖರ್, ವಿ.ಎಸ್. ಉಗ್ರಪ್ಪ, ರಮಾನಾಥ್ ರೈ ಸೇರಿದಂತೆ ಕೆಪಿಸಿಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

                    Continue Reading
                    Advertisement
                    police constable commits suicide
                    ಬೆಂಗಳೂರು5 mins ago

                    police constable : 3 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಕಾನ್ಸ್‌ಟೇಬಲ್‌ ನಾಪತ್ತೆ; ಪಾಳು ಬಾವಿಯಲ್ಲಿ ಶವವಾಗಿ ಪತ್ತೆ

                    New Rules
                    ವಾಣಿಜ್ಯ12 mins ago

                    New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

                    new criminal law
                    ಕ್ರೈಂ32 mins ago

                    New Criminal Law: ರಾಜ್ಯದ ಮೊದಲ ಬಿಎನ್‌ಎಸ್‌ ಪ್ರಕರಣ ಹಾಸನದಲ್ಲಿ ದಾಖಲು, ಯಾವ ಕೇಸ್?‌

                    tumkur News Assault Case
                    ತುಮಕೂರು48 mins ago

                    Tumkur News : ತುಮಕೂರಿನಲ್ಲಿ ಗ್ರಾಪಂ ಸದಸ್ಯನ ಮೇಲೆ ಚಪ್ಪಲಿ ಎಸೆದು ಮನಬಂದಂತೆ ಥಳಿಸಿದ ಉಪಾಧ್ಯಕ್ಷ!

                    Amith Shah
                    ದೇಶ49 mins ago

                    Amit Shah: ಹೊಸ ಕ್ರಿಮಿನಲ್ ಕಾನೂನಿನಲ್ಲಿ ಶಿಕ್ಷೆಯ ಬದಲು ನ್ಯಾಯಕ್ಕೆ ಪ್ರಾಧಾನ್ಯತೆ; ಅಮಿತ್ ಶಾ

                    Parliament Sessions
                    ದೇಶ50 mins ago

                    Parliament Sessions: ಹಿಂದೂ ಹಿಂಸಾವಾದಿ ಹೇಳಿಕೆ; ಸಂಸತ್‌ನಲ್ಲಿ ರಾಹುಲ್‌-ಮೋದಿ ಜಟಾಪಟಿ

                    Meghana Raj didn't want to enter the film Father Sundarraj
                    ಸ್ಯಾಂಡಲ್ ವುಡ್56 mins ago

                    Meghana Raj: ಮೇಘನಾ ರಾಜ್‌  ಫಿಲ್ಮ್​ಗೆ ಎಂಟ್ರಿ ಕೊಟ್ಟಿದ್ದು ಇಷ್ಟವಿರಲಿಲ್ಲ; ಬೇಸರ ಹೊರಹಾಕಿದ್ದ ಅಪ್ಪ ಸುಂದರರಾಜ್​ 

                    Assault Case in Hubballi
                    ಹುಬ್ಬಳ್ಳಿ1 hour ago

                    Assault case: ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಗ್ಯಾಂಗ್ ವಾರ್! ನಡುರಸ್ತೆಯಲ್ಲೆ ಹೊಡಿಬಡಿ

                    DK ShivaKumar
                    ಪ್ರಮುಖ ಸುದ್ದಿ1 hour ago

                    DK Shivakumar: ಸಿಎಂ- ಡಿಸಿಎಂ ದಂಗಲ್‌ ವಿಷಯ ಎತ್ತುವ ಶಾಸಕರಿಗೆ ನೊಟೀಸ್: ಡಿಕೆ ಶಿವಕುಮಾರ್

                    M.R.Jayaram
                    ಪ್ರಮುಖ ಸುದ್ದಿ1 hour ago

                    M.R.Jayaram: ಶಿಕ್ಷಣ ತಜ್ಞ ಡಾ ಎಂ ಆರ್ ಜಯರಾಮ್‌ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್

                    Sharmitha Gowda in bikini
                    ಕಿರುತೆರೆ9 months ago

                    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

                    Kannada Serials
                    ಕಿರುತೆರೆ9 months ago

                    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

                    Bigg Boss- Saregamapa 20 average TRP
                    ಕಿರುತೆರೆ9 months ago

                    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

                    galipata neetu
                    ಕಿರುತೆರೆ7 months ago

                    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

                    Kannada Serials
                    ಕಿರುತೆರೆ9 months ago

                    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

                    Kannada Serials
                    ಕಿರುತೆರೆ9 months ago

                    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

                    Bigg Boss' dominates TRP; Sita Rama fell to the sixth position
                    ಕಿರುತೆರೆ8 months ago

                    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

                    geetha serial Dhanush gowda engagement
                    ಕಿರುತೆರೆ7 months ago

                    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

                    varun
                    ಕಿರುತೆರೆ8 months ago

                    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

                    Kannada Serials
                    ಕಿರುತೆರೆ10 months ago

                    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

                    karnataka Weather Forecast
                    ಮಳೆ22 hours ago

                    Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

                    Actor Darshan
                    ಬೆಂಗಳೂರು1 day ago

                    Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

                    karnataka weather Forecast
                    ಮಳೆ2 days ago

                    Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

                    karnataka Rain
                    ಮಳೆ2 days ago

                    Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

                    karnataka Weather Forecast
                    ಮಳೆ3 days ago

                    Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

                    karnataka Rain
                    ಮಳೆ3 days ago

                    Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

                    Karnataka Weather Forecast
                    ಮಳೆ4 days ago

                    Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

                    karnataka Weather Forecast
                    ಮಳೆ4 days ago

                    Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

                    Heart Attack
                    ಕೊಡಗು4 days ago

                    Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

                    karnataka Rains Effected
                    ಮಳೆ4 days ago

                    Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

                    ಟ್ರೆಂಡಿಂಗ್‌