KCET Toppers List 2023 Bengaluru Boys Vignesh and Arjun Top Karnataka CETKCET Toppers List 2023 : ಟಾಪರ್ಸ್‌ ಪಟ್ಟಿಯಲ್ಲಿ ಬೆಂಗಳೂರಿಗರದ್ದೇ ಪ್ರಾಬಲ್ಯ; ಇಲ್ಲಿದೆ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳ ಪಟ್ಟಿ - Vistara News

ಪ್ರಮುಖ ಸುದ್ದಿ

KCET Toppers List 2023 : ಟಾಪರ್ಸ್‌ ಪಟ್ಟಿಯಲ್ಲಿ ಬೆಂಗಳೂರಿಗರದ್ದೇ ಪ್ರಾಬಲ್ಯ; ಇಲ್ಲಿದೆ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳ ಪಟ್ಟಿ

ಕರ್ನಾಟಕ ಪರೀಕ್ಷ ಪ್ರಾಧಿಕಾರವು (ಕೆಇಎ) ಸಿಇಟಿ ಪರೀಕ್ಷೆಯ (KCET Result 2023 ) ಫಲಿತಾಂಶವ ಪ್ರಕಟಿಸಿದೆ. ವಿವಿಧ ವಿಭಾಗಗಳಲ್ಲಿ ಟಾಪ್‌ ರ‍್ಯಾಂಕ್‌ ಪಡೆದ (KCET Toppers List 2023) ವಿದ್ಯಾರ್ಥಿಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

KCET Toppers List 2023 KCET 2023 Result
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷ ಪ್ರಾಧಿಕಾರ (ಕೆಇಎ) ನಡೆಸಿದ ʻಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆʼಯ (KCET 2023) ಫಲಿತಾಂಶ (KCET 2023 Result) ಪ್ರಕಟವಾಗಿದೆ. ಯಾವ ವಿಭಾಗದಲ್ಲಿ ಯಾರೆಲ್ಲಾ ಟಾಪ್‌ 10 ರ‍್ಯಾಂಕ್‌ ಪಡೆದಿದ್ದಾರೆ (KCET Toppers List 2023)ಎಂಬ ಮಾಹಿತಿ ಇಲ್ಲಿದೆ.

ಟಾಪರ್ಸ್‌ನಲ್ಲಿ ಬೆಂಗಳೂರು ಫಸ್ಟ್‌

ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಟಾಪ್‌ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಲ್ಲಿ ಬಹುತೇಕರು ಬೆಂಗಳೂರಿನ ವಿವಿಧ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳಾಗಿದ್ದಾರೆ. ಎಂಜಿನಿಯರಿಂಗ್‌ನ ಟಾಪ್‌ 10 ಪಟ್ಟಿಯಲ್ಲಿ ಎಂಟು ಮಂದಿ ವಿದ್ಯಾರ್ಥಿಗಳು ಬೆಂಗಳೂರಿನವರು. ಇನ್ನಿಬ್ಬರು ಧಾರವಾಡ ಹಾಗೂ ಬಳ್ಳಾರಿಯವರು.

ನ್ಯಾಚುರೋಪತಿ ಹಾಗೂ ಯೋಗ ವಿಭಾಗದ ಟಾಪ್‌ ಟೆನ್‌ ಪಟ್ಟಿಯಲ್ಲಿ ಬೆಂಗಳೂರುನ ಆರು ಮಂದಿ ಇದ್ದಾರೆ. ಉಳಿದವರು ಮಂಗಳೂರು, ರಾಜಸ್ಥಾನ, ಬೀದರ್, ಹುಬ್ಬಳ್ಳಿಯವರು. ಬಿ.ಫಾರ್ಮಾದಲ್ಲಿ ಬೆಂಗಳೂರಿನ ಏಳು ವಿದ್ಯಾರ್ಥಿಗಳು ಟಾಪ್‌ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೆ, ಉಳಿದವರು ಬಾಗಲಕೋಟೆ, ಮಂಗಳೂರು ಮತ್ತು ರಾಜಸ್ಥಾನಕ್ಕೆ ಸೇರಿದ ವಿದ್ಯಾರ್ಥಿಗಳಾಗಿದ್ದಾರೆ. ಡಿ.ಫಾರ್ಮದಲ್ಲಿಯೂ ಇದೇ ಸ್ಥಿತಿ ಇದೆ. ಬಿಎಸ್ಸಿ ನರ್ಸಿಂಗ್‌ನಲ್ಲಿ ಬೆಂಗಳೂರಿನ ಆರು ವಿದ್ಯಾರ್ಥಿಗಳು ಟಾಪ್‌ 10 ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದವರು ಮಂಗಳೂರು, ರಾಜಸ್ಥಾನ, ಹುಬ್ಬಳ್ಳಿ ಮತ್ತು ಬೀದರ್‌ನ ವಿದ್ಯಾರ್ಥಿಗಳಾಗಿದ್ದಾರೆ.

KCET Toppers List 2023

ಎಂಜಿನಿಯರಿಂಗ್‌ ವಿಭಾಗ

ಕ್ರ.ಸಂ.ಹೆಸರು ಕಾಲೇಜಿನ ಮಾಹಿತಿ
1ವಿಘ್ನೇಶ್‌ ನಟರಾಜ್‌ ಕುಮಾರ್‌ ಶ್ರೀ ಕುಮಾರನ್‌ ಪಿಯು ಕಾಲೇಜು, ಬೆಂಗಳೂರು
2ಅರ್ಜುನ್‌ ಕೃಷ್ಣಸ್ವಾಮಿಆರ್‌ವಿ ಕಾಲೇಜು, ಬೆಂಗಳೂರು
3ಸಮೃದ್‌ ಶೆಟ್ಟಿವಿದ್ಯಾನಿಕೇತನ, ಧಾರವಾಡ
4ಸುಮೇದ್‌ ಎಸ್‌ ಎಸ್‌ಜಿಂದಾಲ್‌ ವಿದ್ಯಾಮಂದಿರ್‌, ಬಳ್ಳಾರಿ
5ಮಾಧವ್‌ ಸೂರ್ಯ ತದೇಪಲ್ಲಿನಾರಾಯಣ ಇ ಟೆಕ್ನೋ ಸ್ಕೂಲ್‌, ಬೆಂಗಳೂರು
6ಸುಜಿತ್‌ ಅಡಿಗಆರ್‌ವಿ ಪಿಯು ಕಾಲೇಜ್‌, ಬೆಂಗಳೂರು
7ಉಜ್ವಲ್‌ ಎಲ್‌ ಶಂಕರ್‌ನಾರಾಯಣ್‌ ಒಲಂಪಿಯಾಡ್‌ ಸ್ಕೂಲ್‌, ಬೆಂಗಳೂರು
8ರಿಶಿತ್‌ ಗುಪ್ತಾಆಲ್‌ಪೈನ್‌ ಪಬ್ಲಿಕ್‌ ಸ್ಕೂಲ್‌, ಬೆಂಗಳೂರು
9ಅಭಿನವ್‌ ದೀಕ್ಷಾದೀಕ್ಷಾ ಪಿಯು ಕಾಲೇಜ್‌, ಬೆಂಗಳೂರು
10ಭುವನ್‌ ಕೆ ಪ್ರಸಾದ್‌ದೀಕ್ಷಾ ಪಿಯು ಕಾಲೇಜ್‌, ಬೆಂಗಳೂರು

ನ್ಯಾಚುರೋಪಥಿ ಹಾಗೂ ಯೋಗ

ಕ್ರ.ಸಂ.ಹೆಸರು ಕಾಲೇಜಿನ ಮಾಹಿತಿ
1ಪ್ರತೀಕ್ಷಾ ಆರ್‌. ಶ್ರೀ ಕುಮಾರನ್‌ ಪಿಯು ಕಾಲೇಜು, ಬೆಂಗಳೂರು
2ಭೈರೇಶ್‌ ಎಸ್‌ ಎಚ್‌ಎಕ್ಸ್‌ಪರ್ಟ್‌ ಪಿಯು ಕಾಲೇಜು, ಮಂಗಳೂರು.
3ಸೃಜನ್‌ ಎಂ ಎಚ್‌ಬೇಸ್‌ ಪಿಯು ಕಾಲೇಜ್‌, ಹುಬ್ಬಳ್ಳಿ
4ಕಾರ್ತಿಕ್‌ ಮನೋಹರ್‌ ಸಿಂಹಾಸನ್‌ಲೇಡಿ ಅನುಸೂಯ ಕಾಲೇಜು, ರಾಜಸ್ಥಾನ
5ಮಾಳವಿಕಾ ಕಪೂರ್‌ಮಹೇಶ್‌ ಪಿಯು ಕಾಲೇಜು, ಬೆಂಗಳೂರು
6ಪ್ರತೀಕ್ಷಾ ಎ.ಶ್ರೀ ಚೈತನ್ಯ ಪಿಯು ಕಾಲೇಜು, ಬೆಂಗಳೂರು.
7ವೈಶಾಖ್‌ ಎಂ.ಎಕ್ಸೆಲೆಂಟ್‌ ಪಿಯು ಕಾಲೇಜು ಮೂಡಬಿದ್ರೆ
8ಆಕಾಶ್‌ ಗೋವಿಂದಯ್ಯಶ್ರೀ ಚೈತನ್ಯ ಪಿಯು ಕಾಲೇಜು, ಮೈಸೂರು
9ಸಾತ್ವೀಕ್‌ ಕುಲಕರ್ಣಿಮಿರಂದಾ ಜೂನಿಯರ್‌ ಕಾಲೇಜು, ಬೆಂಗಳೂರು.
10ಶ್ರೀನಿವಾಸ್‌ ಬಸವನಗೌಡ ಮಾಲಿ ಪಾಟೀಲ್‌ಶ್ರೀ ಎಂವಿ ಪಿಯು ಕಾಲೇಜು, ದಾವಣಗೆರೆ

ಬಿಎಸ್ಸಿ (ಕೃಷಿ) ವಿಭಾಗ

ಕ್ರ.ಸಂ.ಹೆಸರು ಕಾಲೇಜಿನ ಮಾಹಿತಿ
1ಭೈರೇಶ್‌ ಎಸ್‌. ಎಚ್‌.ಎಕ್ಸ್‌ಪರ್ಟ್‌ ಪಿಯು ಕಾಲೇಜು, ಮಂಗಳೂರು
2ಅನುರಾಗ್‌ ರಾಜನ್‌ಪ್ರಮಾಣ ಪಿಯು ಕಾಲೇಜು, ರಾಯಚೂರು
3ಕಾರ್ತಿಕ್‌ ಮನೋಹರ್‌ ಸಿಂಹಾಸನ್‌ಲೇಡಿ ಅನುಸೂಯ ಕಾಲೇಜು, ರಾಜಸ್ಥಾನ
4ಪಸುಪುಲೇತಿ ಧ್ರುವ ಶಿವ್‌ಕಾಂತ್‌ಶ್ರೀ ಚೈತನ್ಯ ಟೆಕ್ನೋ ಪಿಯು ಕಾಲೇಜು, ಬೆಂಗಳೂರು
5ಶ್ರೀನಿವಾಸ್‌ ಬಸವನಗೌಡ ಮಾಲಿ ಪಾಟೀಲ್‌ಶ್ರೀ ಎಂ ವಿ ಪಿಯು ಕಾಲೇಜು ದಾವಣಗೆರೆ
6ಪ್ರಣವ್‌ ಗುಜ್ಜಾರ್‌ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು, ಉಡುಪಿ
7ಪ್ರೀತಮ್‌ ಎನ್‌ವಿದ್ಯಾಮಂದಿರ್‌ ಪಿಯು ಕಾಲೇಜು ಬೆಂಗಳೂರು
8ಪ್ರಣವ್‌ ಆರ್‌ ಭಟ್‌ವೆಂಕಟ್‌ ಇಂಟರ್‌ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ಬೆಂಗಳೂರು
9ಉಜ್ವಲ್‌ ಶಂಕರ್‌ನಾರಾಯಣ ಒಲಂಪಿಯಾಡ್‌ ಸ್ಕೂಲ್‌, ಬೆಂಗಳೂರು
10ಸಾತ್ವಿಕ್‌ ಕುಲಕರ್ಣಿಮಿರಂದಾ ಜೂನಿಯರ್‌ ಕಾಲೇಜು, ಬೆಂಗಳೂರು.

ಬಿವಿಎಸ್ಸಿ (ಪಶು ವಿಜ್ಞಾನ)

ಕ್ರ.ಸಂ.ಹೆಸರು ಕಾಲೇಜಿನ ಮಾಹಿತಿ
1ಮಾಳವಿಕಾ ಕಪೂರ್‌ಮಹೇಶ್‌ ಪಿಯು ಕಾಲೇಜು, ಬೆಂಗಳೂರು
2ಪ್ರತೀಶಾ ಆರ್‌ಶ್ರೀ ಕುಮಾರನ್‌ ಪಿಯು ಕಾಲೇಜು, ಬೆಂಗಳೂರು
3ಚಂದನ್‌ಗೌಡ ಸಿ ಎನ್‌ಮಹೇಶ್‌ ಪಿಯು ಕಾಲೇಜು, ಬೆಂಗಳೂರು
4ಭೈರೇಶ್‌ ಎಸ್‌ ಎಚ್‌ಎಕ್ಸ್‌ಪರ್ಟ್‌ ಪಿಯು ಕಾಲೇಜು, ಮಂಗಳೂರು
5ಕಾರ್ತಿಕ್‌ ಮನೋಹರ್‌ ಸಿಂಹಾಸನ್‌ಲೇಡಿ ಅನುಸೂಯಾ ಕಾಲೇಜು, ರಾಜಸ್ಥಾನ
6ಶ್ರೀಜನ್‌ ಎಂ ಎಚ್‌ಬೇಸ್‌ ಪಿಯು ಕಾಲೇಜು, ಹುಬ್ಬಳ್ಳಿ
7ಆದಿತ್ಯಾಶಾಹೀನ್‌ ಹಿಂದ್‌ ಪಿಯು ಕಾಲೇಜು, ಬೀದರ್‌
8ಆದರ್ಶ ಎಸ್‌ ಸಜ್ಜನ್‌ಶ್ರೀ ರಾಮ್‌ ಗ್ಲೋಬಲ್‌ ಸ್ಕೂಲ್‌, ಬೆಂಗಳೂರು
9ಪ್ರತೀಕ್ಷಾ ಎ.ಶ್ರೀ ಚೈತನ್ಯ ಪಿಯು ಕಾಲೇಜು, ಬೆಂಗಳೂರು.
10ಆಕಾಶ್‌ ಗೊಂವಿದಯ್ಯಶ್ರೀ ಚೈತನ್ಯ ಪಿಯು ಕಾಲೇಜು, ಬೆಂಗಳೂರು.

ಫಲಿತಾಂಶ ನೋಡಲು ವೆಬ್‌ ವಿಳಾಸ: https://cetonline.karnataka.gov.in/kea

ಬಿ.ಫಾರ್ಮಾ ವಿಭಾಗ

ಕ್ರ.ಸಂ.ಹೆಸರು ಕಾಲೇಜಿನ ಮಾಹಿತಿ
1ಪ್ರತೀಕ್ಷಾ ಆರ್‌.ಶ್ರೀ ಕುಮಾರನ್‌ ಪಿಯು ಕಾಲೇಜು, ಬೆಂಗಳೂರು
2ಮಾಳವಿಕಾ ಕಪೂರ್‌ಮಹೇಶ್‌ ಪಿಯು ಕಾಲೇಜು, ಬೆಂಗಳೂರು
3ಮಾಧವ್‌ ಸೂರ್ಯ ತದೇಪಲ್ಲಿನಾರಾಯಣ ಇ-ಟೆಕ್ನೋ ಸ್ಕೂಲ್‌ ಬೆಂಗಳೂರು
4ಭೈರೇಶ್‌ ಎಸ್‌ ಎಚ್‌ಎಕ್ಸ್‌ಪರ್ಟ್‌ ಪಿಯು ಕಾಲೇಜು, ಮಂಗಳೂರು
5ಕಾರ್ತಿಕ್‌ ಮನೋಹರ್‌ ಸಿಂಹಾಸನ್‌ಲೇಡಿ ಅನುಸೂಯಾ ಕಾಲೇಜು, ರಾಜಸ್ಥಾನ
6ಚಂದನ್‌ ಗೌಡ ಸಿ. ಎನ್‌.ಮಹೇಶ್‌ ಪಿಯು ಕಾಲೇಜು ಬೆಂಗಳೂರು
7ಆದಿತ್ಯಾ ಕೆ ಅನಿಲ್‌ಶ್ರೀ ಚೈತನ್ಯ ಟೆಕ್‌ ಸ್ಕೂಲ್‌, ಬೆಂಗಳೂರು
8ವಿಘ್ನೇಶ್‌ ನಟರಾಜ್‌ ಕುಮಾರ್‌ಶ್ರೀ ಕುಮಾರನ್‌ ಪಿಯು ಕಾಲೇಜು, ಬೆಂಗಳೂರು.
9ಸೃಜನ್‌ ಎಂ ಎಚ್‌.ಬೇಸ್‌ ಪಿಯು ಕಾಲೇಜು, ಹುಬ್ಬಳ್ಳಿ
10ರಿಶಿತ್‌ ಗುಪ್ತಾಆಲ್‌ಪೈನ್‌ ಪಿಯು ಕಾಲೇಜು, ಬೆಂಗಳೂರು.

ಡಿ.ಫಾರ್ಮಾ ವಿಭಾಗ

ಕ್ರ.ಸಂ.ಹೆಸರು ಕಾಲೇಜಿನ ಮಾಹಿತಿ
1ಪ್ರತೀಕ್ಷಾ ಆರ್‌.ಶ್ರೀ ಕುಮಾರನ್‌ ಪಿಯು ಕಾಲೇಜು, ಬೆಂಗಳೂರು
2ಮಾಳವಿಕಾ ಕಪೂರ್‌ಮಹೇಶ್‌ ಪಿಯು ಕಾಲೇಜು, ಬೆಂಗಳೂರು
3ಮಾಧವ್‌ ಸೂರ್ಯ ತದೇಪಲ್ಲಿನಾರಾಯಣ ಇ-ಟೆಕ್ನೋ ಸ್ಕೂಲ್‌ ಬೆಂಗಳೂರು
4ಭೈರೇಶ್‌ ಎಸ್‌ ಎಚ್‌ಎಕ್ಸ್‌ಪರ್ಟ್‌ ಪಿಯು ಕಾಲೇಜು, ಮಂಗಳೂರು
5ಕಾರ್ತಿಕ್‌ ಮನೋಹರ್‌ ಸಿಂಹಾಸನ್‌ಲೇಡಿ ಅನುಸೂಯಾ ಕಾಲೇಜು, ರಾಜಸ್ಥಾನ
6ಚಂದನ್‌ ಗೌಡ ಸಿ. ಎನ್‌.ಮಹೇಶ್‌ ಪಿಯು ಕಾಲೇಜು ಬೆಂಗಳೂರು
7ಆದಿತ್ಯಾ ಕೆ ಅನಿಲ್‌ಶ್ರೀ ಚೈತನ್ಯ ಟೆಕ್‌ ಸ್ಕೂಲ್‌, ಬೆಂಗಳೂರು
8ವಿಘ್ನೇಶ್‌ ನಟರಾಜ್‌ ಕುಮಾರ್‌ಶ್ರೀ ಕುಮಾರನ್‌ ಪಿಯು ಕಾಲೇಜು, ಬೆಂಗಳೂರು.
9ಸೃಜನ್‌ ಎಂ ಎಚ್‌.ಬೇಸ್‌ ಪಿಯು ಕಾಲೇಜು, ಹುಬ್ಬಳ್ಳಿ
10ರಿಶಿತ್‌ ಗುಪ್ತಾಆಲ್‌ಪೈನ್‌ ಪಿಯು ಕಾಲೇಜು, ಬೆಂಗಳೂರು.

ಬಿಎಸ್ಸಿ ನರ್ಸಿಂಗ್‌ ವಿಭಾಗ

ಕ್ರ.ಸಂ.ಹೆಸರು ಕಾಲೇಜಿನ ಮಾಹಿತಿ
1ಮಾಳವಿಕಾ ಕಪೂರ್‌ಮಹೇಶ್‌ ಪಿಯು ಕಾಲೇಜು, ಬೆಂಗಳೂರು
2ಪ್ರತೀಕ್ಷಾ ಆರ್‌.ಶ್ರೀ ಕುಮಾರನ್‌ ಪಿಯು ಕಾಲೇಜು, ಬೆಂಗಳೂರು
3ಚಂದನ್‌ ಗೌಡ ಸಿ. ಎನ್‌.ಮಹೇಶ್‌ ಪಿಯು ಕಾಲೇಜು ಬೆಂಗಳೂರು
4ಭೈರೇಶ್‌ ಎಸ್‌ ಎಚ್‌ಎಕ್ಸ್‌ಪರ್ಟ್‌ ಪಿಯು ಕಾಲೇಜು, ಮಂಗಳೂರು
5ಕಾರ್ತಿಕ್‌ ಮನೋಹರ್‌ ಸಿಂಹಾಸನ್‌ಲೇಡಿ ಅನುಸೂಯಾ ಕಾಲೇಜು, ರಾಜಸ್ಥಾನ
6ಸೃಜನ್‌ ಎಂ ಎಚ್‌.ಬೇಸ್‌ ಪಿಯು ಕಾಲೇಜು, ಹುಬ್ಬಳ್ಳಿ
7ಆದಿತ್ಯಾ ಶಾಹೀನ್‌ ಹಿಂದ್‌ ಪಿಯು ಕಾಲೇಜು, ಬೀದರ್‌
8ಆದರ್ಶ್‌ ಎಸ್‌ ಸಜ್ಜನ್‌ಶ್ರೀ ರಾಮ್‌ ಗ್ಲೋಬಲ್‌ ಸ್ಕೂಲ್‌, ಬೆಂಗಳೂರು.
9ಪ್ರತೀಕ್ಷಾ ಎ.ಶ್ರೀ ಚೈತನ್ಯ ಪಿಯು ಕಾಲೇಜು, ಬೆಂಗಳೂರು.
10ಆಕಾಶ್‌ ಗೋವಿಂದಯ್ಯಶ್ರೀ ಚೈತನ್ಯ ಪಿಯು ಕಾಲೇಜು, ಬೆಂಗಳೂರು.

ಇದನ್ನೂ ಓದಿ : NIRF Ranking 2023 : ರಾಜ್ಯದ ಬೆಸ್ಟ್‌ ಎಂಜಿನಿಯರಿಂಗ್‌ ಕಾಲೇಜುಗಳ ಪಟ್ಟಿ ಪ್ರಕಟ; ಇವು ಟಾಪ್‌ 10 ಕಾಲೇಜುಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

BJP Candidates List : ಬಿಜೆಪಿಯ ಈ ನಾಲ್ವರು ವಿವಾದಾತ್ಮಕ ಸಂಸದರಿಗೆ ಈ ಬಾರಿ ಟಿಕೆಟಿಲ್ಲ!

BJP Candidates List: ಬಿಜೆಪಿಯ ಮೊದಲ ಪಟ್ಟಿಯಲ್ಲಿ ಪರ್ವೇಶ್ ವರ್ಮಾ, ಜಯಂತ್ ಸಿನ್ಹಾ, ಸಾಧ್ವಿ ಪ್ರಜ್ಞಾ ಠಾಕೂರ್ ಮತ್ತು ರಮೇಶ್ ಬಿಧುರಿ ಅವರ ಹೆಸರುಗಳು ಇಲ್ಲ.

VISTARANEWS.COM


on

BJP Candidates List
Koo

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ 195 ಅಭ್ಯರ್ಥಿಗಳಿರುವ ತನ್ನ ಮೊದಲ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ (BJP) ಶನಿವಾರ ಬಿಡುಗಡೆ ಮಾಡಿದೆ. ಅದರಲ್ಲಿ 33 ಹಾಲಿ ಸಂಸದರ ಬದಲಿಗೆ ಹೊಸ ಮುಖಗಳನ್ನು ಕಣಕ್ಕಿಳಿಸಲಾಗಿದೆ. ಅದರಲ್ಲಿಯೂ ದೆಹಲಿಯ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ ಪರ್ವೇಶ್ ವರ್ಮಾ, ಮಾಜಿ ಕೇಂದ್ರ ಸಚಿವ ಮತ್ತು ಹಜಾರಿಬಾಗ್ ಸಂಸದ ಜಯಂತ್ ಸಿನ್ಹಾ, ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ಮತ್ತು ದಕ್ಷಿಣ ದೆಹಲಿ ಸಂಸದ ರಮೇಶ್ ಬಿಧುರಿ ಈ ಪಟ್ಟಿಯಲ್ಲಿ ಇಲ್ಲದಿರುವುದು ಚರ್ಚೆಯ ವಿಷಯವಾಗಿದೆ. ಯಾಕೆಂದರೆ ಇವರೆಲ್ಲರೂ ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ವಿವಾದಗಳಿಂದ ಕೂಡಿದ ಹೇಳಿಕೆ ನೀಡಿ ಬಿಜೆಪಿ ಟಿಕೆಟ್​ ಗಿಟ್ಟಿಸಬಹುದೆಂಬ ಜನನಾಯಕರ ಊಹೆಗೆ ವರಿಷ್ಠರು ಪೆಟ್ಟು ಕೊಟ್ಟಿದ್ದಾರೆ.

ಮೊದಲ ಪಟ್ಟಿಯಲ್ಲಿ ದೆಹಲಿಯ ಲೋಕಸಭಾ ಸ್ಥಾನಗಳಿಗೆ ಬಿಜೆಪಿ ಐದು ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ. ಅವರಲ್ಲಿ ನಾಲ್ವರು ಹಾಲಿ ಸಂಸದರ ಹೆಸರು ನಾಪತ್ತೆಯಾಗಿದೆ! ಎರಡು ಬಾರಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಹರ್ಷವರ್ಧನ್ ಅವರನ್ನು ಕೈಬಿಟ್ಟು ಚಾಂದನಿ ಚೌಕ್ ಲೋಕಸಭಾ ಕ್ಷೇತ್ರದಿಂದ ಪ್ರವೀಣ್ ಖಂಡೇಲ್ವಾಲ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ. ಪಶ್ಚಿಮ ದೆಹಲಿ ಕ್ಷೇತ್ರಕ್ಕೆ ಬಿಜೆಪಿ ಎರಡು ಬಾರಿ ಸಂಸದರಾಗಿದ್ದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಬದಲಿಗೆ ಕಮಲ್ಜೀತ್ ಸೆಹ್ರಾವತ್ ಅವರನ್ನು ಕಣಕ್ಕಿಳಿಸಿದೆ. ದಿವಂಗತ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರನ್ನು ಪ್ರಸ್ತುತ ಮೀನಾಕ್ಷಿ ಲೇಖಿ ಪ್ರತಿನಿಧಿಸುವ ನವದೆಹಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ದಕ್ಷಿಣ ದೆಹಲಿಯಿಂದ ರಮೇಶ್ ಬಿಧುರಿ ಅವರನ್ನು ಕೈಬಿಟ್ಟು ಬಿಜೆಪಿ ರಾಮ್ವೀರ್ ಸಿಂಗ್ ಬಿಧುರಿ ಅವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ.

ಸಾಧ್ವಿ ಪ್ರಜ್ಞಾ ಠಾಕೂರ್

ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದಿಂದ ಹಾಲಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ಬದಲಿಗೆ ಬಿಜೆಪಿ ಅಲೋಕ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ, ಠಾಕೂರ್ ‘ದೈತ್ಯ ಸಂಹಾರಿ’ ಯಾಗಿ ಕಾಣಿಸಿಕೊಂಡರು. ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರನ್ನು 3,64,822 ಮತಗಳ ಅಂತರದಿಂದ ಸೋಲಿಸಿದವರು ಅವರು. ಚುನಾವಣಾ ಯಶಸ್ಸಿನ ಹೊರತಾಗಿಯೂ, ಠಾಕೂರ್ ಅಧಿಕಾರಾವಧಿಯು ವಿವಾದಗಳಿಂದ ಹಾಳಾಯಿತು. ಅಶೋಕ್ ಚಕ್ರ ಪ್ರಶಸ್ತಿ ಪುರಸ್ಕೃತ ಮತ್ತು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಪೌರಾಣಿಕ ವ್ಯಕ್ತಿಗಳಾದ ರಾವಣ ಮತ್ತು ಕಂಸನಿಗೆ ಹೋಲಿಸುವ ಮೂಲಕ ಅವರು ಆಕ್ರೋಶ ಹುಟ್ಟುಹಾಕಿದ್ದರು. ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ಕರ್ಕರೆ ಅವರ ನಿಧನದ ಬಗ್ಗೆ ಅವರ ಹೇಳಿಕೆಗಳು ಮತ್ತಷ್ಟು ವಿವಾದವನ್ನು ಹುಟ್ಟುಹಾಕಿದವು. ಇದು ಚುನಾವಣಾ ಆಯೋಗದಿಂದ ಶೋಕಾಸ್ ನೋಟಿಸ್​ ಪಡೆಯುವಂತೆ ಮಾಡಿತ್ತು.

ಇದನ್ನೂ ಓದಿ : BJP Candidates List: ಬಿಜೆಪಿ ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಟಿಕೆಟಿಲ್ಲ!

ಸಾಧ್ವಿ ಠಾಕೂರ್, ಮಹಾತ್ಮ ಗಾಂಧಿಯವರ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಹೊಗಳುವ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದರು. ಕ್ಷಮೆಯಾಚಿಸಿದರೂ, ಅವರ ಹೇಳಿಕೆಗಳು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಖಂಡನೆಗೆ ಗುರಿಯಾಗುತ್ತಲೇ ಇದ್ದವು,

ರಮೇಶ್ ಭಿದುರಿ

ಬಿಜೆಪಿ ಸಂಸದ ರಮೇಶ್ ಬಿಧುರಿ ಇತ್ತೀಚೆಗೆ ಚಂದ್ರಯಾನ -3 ಮಿಷನ್ ಯಶಸ್ಸಿನ ಕುರಿತ ಪಾರ್ಲಿಮೆಂಟ್​ ಚರ್ಚೆಯ ಸಂದರ್ಭದಲ್ಲಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದವನ್ನು ಹುಟ್ಟುಹಾಕಿದ್ದರು. ಡ್ಯಾನಿಶ್ ಅಲಿಯನ್ನು ಗುರಿಯಾಗಿಸಿಕೊಂಡಿದ್ದ ಬಿಧುರಿ ಅವರ ವಿವಾದಾತ್ಮಕ ಹೇಳಿಕೆಗಳ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆಗೆ ಗುರಿಯಾದವು. ಅದಕ್ಕಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ತಮ್ಮ ಪಕ್ಷದ ಸಂಸದ ರಮೇಶ್ ಬಿಧುರಿ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದರು ಎಂದು ವರದಿಯಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಧಿವೇಶನದಲ್ಲಿ ಬಿಧುರಿ ಅವರ ನಡವಳಿಕೆಗೆ ತಕ್ಷಣ ವಿಷಾದ ವ್ಯಕ್ತಪಡಿಸಿದ್ದರು.

ಪರ್ವೇಶ್ ವರ್ಮಾ

ನವದೆಹಲಿಯ ಪಶ್ಚಿಮ ದೆಹಲಿ ಕ್ಷೇತ್ರದಿಂದ ಬಿಜೆಪಿ ತನ್ನ ಹಾಲಿ ಸಂಸದ ಪರ್ವೇಶ್ ವರ್ಮಾ ಅವರನ್ನು ಕೈಬಿಟ್ಟು ಕಮಲ್ಜೀತ್ ಸೆಹ್ರಾವತ್ ಅವರನ್ನು ಕಣಕ್ಕಿಳಿಸಿದೆ. ಕಮಲ್ಜೀತ್ ಸಹ್ರಾವತ್ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್​​ನ ಮಾಜಿ ಮೇಯರ್ ಮತ್ತು ದೆಹಲಿ ಎಂಸಿಡಿಯಲ್ಲಿ ಪಕ್ಷದ ಪ್ರಬಲ ಮುಖಗಳಲ್ಲಿ ಒಬ್ಬರು. ಕಳೆದ ವರ್ಷ, ನಿರ್ದಿಷ್ಟ ಸಮುದಾಯವೊಂದಕ್ಕೆ “ಆರ್ಥಿಕ ಬಹಿಷ್ಕಾರ” ಮಾಡಲು ಪರ್ವೇಶ್ ವರ್ಮಾ ಕರೆ ನೀಡಿದ್ದರು. ಅದನ್ನು ಬಿಜೆಪಿಯ ನಾಯಕತ್ವವು ಬಲವಾಗಿ ಖಂಡಿಸಿತ್ತು. ಕಳೆದ ವರ್ಷ ಅಕ್ಟೋಬರ್ 9 ರಂದು ಪೂರ್ವ ದೆಹಲಿಯಲ್ಲಿ ವಿಶ್ವ ಹಿಂದೂ ಪರಿಷತ್​ನ ಸ್ಥಳೀಯ ಘಟಕ ಮತ್ತು ಇತರ ಹಿಂದೂ ಸಂಘಟನೆಗಳು ಆಯೋಜಿಸಿದ್ದ ‘ವಿರಾಟ್ ಹಿಂದೂ ಸಭಾ’ ಎಂಬ ಸಭೆಯಲ್ಲಿ ವರ್ಮಾ ಈ ಹೇಳಿಕೆ ನೀಡಿದ್ದರು. ಭಾಷಣದಲ್ಲಿ ವರ್ಮಾ ನಿರ್ದಿಷ್ಟ ಸಮುದಾಯವನ್ನು ಸ್ಪಷ್ಟವಾಗಿ ಹೆಸರಿಸದೆ “ಈ ಜನರನ್ನು” ಸಂಪೂರ್ಣವಾಗಿ ಬಹಿಷ್ಕರಿಸಬೇಕೆಂದು ಕರೆ ಕೊಟ್ಟಿದ್ದರು.

ಜಯಂತ್ ಸಿನ್ಹಾ

ಹಜಾರಿಬಾಗ್ ಸಂಸದ ಜಯಂತ್ ಸಿನ್ಹಾ ಅವರ ಬದಲಿಗೆ ಬಿಜೆಪಿಯ ಹಜಾರಿಬಾಗ್ ಶಾಸಕ ಮನೀಶ್ ಜೈಸ್ವಾಲ್ ಅವರಿಗೆ ಟಿಕೆಟ್​ ನೀಡಲಾಗಿದೆ. ಜೈಸ್ವಾಲ್ 2019 ರಲ್ಲಿ ಹಜಾರಿಬಾಗ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಡಾ.ರಾಮಚಂದ್ರ ಪ್ರಸಾದ್ ಅವರನ್ನು ಸೋಲಿಸುವ ಮೂಲಕ ಗೆದ್ದಿದ್ದರು.

2017 ರಲ್ಲಿ ಜಾರ್ಖಂಡ್​​ನ ರಾಮಗಢದಲ್ಲಿ ಮಾಂಸ ವ್ಯಾಪಾರಿಯನ್ನು ಥಳಿಸಿ ಹತ್ಯೆ ಮಾಡಿದ ಆರೋಪಿಗಳ ಕಾನೂನು ಶುಲ್ಕವನ್ನು ಪಾವತಿಸಲು ತಾನು ಮತ್ತು ಇತರ ಕೆಲವು ಬಿಜೆಪಿ ನಾಯಕರು ಆರ್ಥಿಕ ನೆರವು ನೀಡಿದ್ದೇವೆ ಎಂದು ಜಯಂತ್ ಸಿನ್ಹಾ 2019 ರಲ್ಲಿ ಹೇಳಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಮತ್ತು ನೇರವಾಗಿ ಹಜಾರಿಬಾಗ್​ನಲ್ಲಿರು ತಮ್ಮ ನಿವಾಸಕ್ಕೆ ಕರೆದು ಆರು ಆರೋಪಿಗಳನ್ನು ಸನ್ಮಾನಿಸಿದ್ದರು. ಇದ ವೈರಲ್​ ಆಗಿತ್ತು.

Continue Reading

ಬೆಂಗಳೂರು

Blast in Bengaluru : ರಾಮೇಶ್ವರಂ ಕೆಫೆ ಬ್ಲಾಸ್ಟ್‌ನಲ್ಲಿ ಒಬ್ಬನೇ ಭಾಗಿ? ಏನಿದು ಒಂಟಿ ತೋಳ ದಾಳಿ?

Blast in Bengaluru : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆಸಿರುವುದು ಒಂಟಿ ತೋಳ ದಾಳಿನಾ? ಈ ಹಿಂದೆ ನಡೆದ ಎರಡು ದಾಳಿಗಳು ಇದೇ ಮಾದರಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

VISTARANEWS.COM


on

Blast in Bangalore Rameshwaram Cafe Accused
Koo

ಬೆಂಗಳೂರು: ರಾಜಧಾನಿಯ ವೈಟ್‌ ಫೀಲ್ಡ್‌ ಸಮೀಪದ ಬ್ರೂಕ್‌ ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸಂಭವಿಸಿದ ಬಾಂಬ್‌ ಸ್ಫೋಟವನ್ನು (Bomb Blast) ನಡೆಸಿದ್ದು ಒಬ್ಬನೇ ವ್ಯಕ್ತಿ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ ಮೂರು ಪ್ರಮುಖ ಸ್ಫೋಟಗಳು (Blast in Bengaluru) ಸಂಭವಿಸಿದ್ದು, ಮೂರೂ ಪ್ರಕರಣಗಳಲ್ಲಿ ಒಬ್ಬನೇ ಭಾಗಿಯಾಗಿದ್ದು, ಇದನ್ನು ಒಂಟಿ ತೋಳ ಅಟ್ಯಾಕ್‌ (Single Wolf attack) ಎಂದು ವ್ಯಾಖ್ಯಾನಿಸಲಾಗಿದೆ.

2014ರ ಡಿಸೆಂಬರ್‌ 28ರಂದು ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿರುವ ಕೋಕೊನಟ್‌ ಗ್ರೋವ್‌ ರೆಸ್ಟೋರೆಂಟ್‌ (Coconut Grove restaurant) ಎದುರಿನ ಪಾದಚಾರಿ ರಸ್ತೆಯ ಹೂವಿನ ಕುಂಡದಲ್ಲಿ ಬಾಂಬ್‌ ಇಟ್ಟು ಸ್ಫೋಟಿಸಲಾಗಿತ್ತು. ಅದರಲ್ಲಿ ಭವಾನಿ ಎಂಬ 37 ವರ್ಷದ ಮಹಿಳೆ ಮೃತಪಟ್ಟಿದ್ದರು. ಅಂದು ಈ ಕೃತ್ಯವನ್ನು ನಡೆಸಿದ್ದು ಒಬ್ಬನೇ ಎನ್ನುವುದು ತನಿಖೆಯಲ್ಲಿ ‌ ಗೊತ್ತಾಗಿತ್ತು.

Blast in Bangalore Rameshwaram Cafe11

2022ರ ನವೆಂಬರ್‌ 19ರಂದು ಮಂಗಳೂರಿನ ಗರೋಡಿಯಲ್ಲಿ ರಿಕ್ಷಾದಲ್ಲಿ ಹೋಗುತ್ತಿದ್ದಾಗ ಕುಕ್ಕರ್‌ ಬಾಂಬ್‌ ಸ್ಫೋಟ ಸಂಭವಿಸಿತ್ತು. ಅದನ್ನು ನಡೆಸಿದ್ದು ಶಿವಮೊಗ್ಗದ ತೀರ್ಥಹಳ್ಳಿಯ ಮೊಹಮ್ಮದ್‌ ಶಾರಿಖ್‌. ಈ ಪ್ರಕರಣದಲ್ಲಿ ಕೂಡಾ ಒಬ್ಬನೇ ಭಾಗಿಯಾಗಿದ್ದ.

ಇದೇ ರೀತಿ ರಾಮೇಶ್ವರಂ ಕೆಫೆ ಸ್ಫೋಟದಲ್ಲೂ ಒಬ್ಬನೇ ವ್ಯಕ್ತಿ ಒಂಟಿ ತೋಳದ ರೀತಿಯಲ್ಲಿ ಈ ದಾಳಿ ನಡೆಸಿದ್ದಾನೆ ಎಂದು ಹೇಳಲಾಗಿದೆ. ಅಂದರೆ ಈ ಕೃತ್ಯದ ಹಿಂದೆ ಎಷ್ಟೇ ಜನರು ಇರಬಹುದು. ಆದರೆ, ಒಟ್ಟಾರೆ ಕೃತ್ಯವನ್ನು ಹ್ಯಾಂಡಲ್‌ ಮಾಡಿದ್ದು ಒಬ್ಬನೇ ವ್ಯಕ್ತಿ ಎನ್ನುವುದು ಈಗ ಬಯಲಾಗಿದೆ.

ಚರ್ಚ್‌ ಸ್ಟ್ರೀಟ್‌ ಮತ್ತು ಮಂಗಳೂರು ಕುಕ್ಕರ್‌ ಬಾಂಬ್‌‌ ಸ್ಫೋಟದ ಹೊಣೆಯನ್ನು ಅಂದು ಐಸಿಸ್‌ ತಾನು ಹೊತ್ತುಕೊಂಡಿತ್ತು. ಆದರೆ, ರಾಮೇಶ್ವರಂ ಕೆಫೆ ವಿಚಾರದಲ್ಲಿ ಮೌನವಾಗಿದೆ.

ಇದನ್ನು ಓದಿ : Blast in Bengaluru : ಬಾಂಬ್​ ಬ್ಲಾಸ್ಟ್​ ಆದ ರಾಮೇಶ್ವರಂ ಕೆಫೆ ಶಿವರಾತ್ರಿ ದಿನ ರೀ ಓಪನ್​

Blast in Bengaluru : ಏನಿದು ಒಂಟಿ ತೋಳ ಮಾದರಿ ದಾಳಿ?

ರಾಮೇಶ್ವರಂ ಕೆಫೆ ದಾಳಿ ಪ್ರಕರಣವನ್ನು ನಾನಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ಪ್ರತ್ಯೇಕ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಇಲ್ಲಿ ನಡೆದಿರುವ ದಾಳಿಯನ್ನು ಒಂಟಿ ತೋಳ ದಾಳಿ (single Wolf Terrorist) ಎಂಬ ಮಾದರಿ ಎಂದು ಉಲ್ಲೇಖಿಸಲಾಗಿದೆ. ಒಬ್ಬನೇ ವ್ಯಕ್ತಿ ಬಾಂಬ್ ತಯಾರಿಸಿ, ಆತನೇ ಸ್ಫೋಟಿ ಸುವ ಸಂಪೂರ್ಣ ಜವಾಬ್ದಾರಿ ಹೊಂದಿದ್ದರೆ ಒಂಟಿ ತೋಳ ಭಯೋತ್ಪಾದಕ ಎಂದು ಹೆಸರು ನೀಡಲಾಗುತ್ತದೆ. ಈ ಹೆಸರನ್ನು ಮೊದಲು ನೀಡಿದ್ದು ಅಮೆರಿಕ.

ಹಲವು ರಾಜ್ಯಗಳ ಸಂಪರ್ಕದಲ್ಲಿ ಪೊಲೀಸರು

ಈ ನಡುವೆ, ರಾಮೇಶ್ವರಂ ಕೆಫೆಯಲ್ಲಿ ಕೃತ್ಯ ನಡೆಸಿ ಪರಾರಿಯಾಗಿರುವ ಈತನಿಗಾಗಿ ಎಲ್ಲ ಕಡೆ ಹುಡುಕಾಟ ನಡೆಯುತ್ತಿದೆ. ರಾಜ್ಯದ ಪೊಲೀಸರು ಮಹಾರಾಷ್ಟ್ರ ಹಾಗೂ ತೆಲಂಗಾಣದ ಎಟಿಸಿ ಹಾಗೂ ಕೌಂಟರ್ ಇಂಟೆಲಿಜೆನ್ಸ್ ಸೆಲ್ ಟೀಂ ಸಂಪರ್ಕದಲ್ಲಿದ್ದಾರೆ. ಕೌಂಟರ್ ಇಂಟಲಿಜೆನ್ಸ್ ಸೆಲ್‌ಗಳು ಬಾಂಬ್ ಸ್ಫೋಟ. ಉಗ್ರ ಕೃತ್ಯಗಳ ತನಿಖೆಯಲ್ಲಿ ಖ್ಯಾತಿ ಗಳಿಸಿದೆ. ನಗರ ಪೊಲೀಸರು ತಮಿಳುನಾಡು, ಕೇರಳ ಹಾಗೂ ತೆಲಂಗಾಣದಲ್ಲಿ ಬೀಡುಬಿಟ್ಟಿದ್ದಾರೆ.

ಮೂರ್ನಾಲ್ಕು ಬಸ್‌ ಚೇಂಜ್‌, ಗಡಿ ದಾಟಿ ಹೋಗಿದ್ದಾನಾ ಕಿರಾತಕ?

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಬಿಎಂಟಿಸಿ ಬಸ್‌ನಲ್ಲಿ ಬಂದಿದ್ದ. ಬ್ಯಾಗ್‌ ಹಾಕಿಕೊಂಡು ರಾಮೇಶ್ವರ ಕೆಫೆಗೆ ಬಂದು ಇಡ್ಲಿ ತಿಂದು ಅಲ್ಲೇ ಬ್ಯಾಗ್‌ ಇಟ್ಟು ಹೋಗಿದ್ದ ಆತ ಅಲ್ಲಿಂದ ಮತ್ತೆ ಬಸ್‌ನಲ್ಲೇ ಹೋಗಿದ್ದ.

ಆತ ಹಲವು ಬಸ್‌ಗಳಲ್ಲಿ ಪ್ರಯಾಣ ಮಾಡಿರುವ ಬಗ್ಗೆ ಮಾಹಿತಿ ಇದೆ. ಒಂದು ಬಸ್ ನಲ್ಲಿ ಒಂದೇ ಸ್ಟಾಪ್ ಪ್ರಯಾಣ ಮಾಡಿ 15ಕ್ಕೂ ಅಧಿಕ ಬಸ್ ಗಳಲ್ಲಿ ಪ್ರಯಾಣ ಮಾಡಿರುವ ಮಾಹಿತಿ ಇದೆ. ಹೀಗೆ ಮಾಡುವ ಮೂಲಕ ತನ್ನನ್ನು ಯಾರೂ ಟ್ರ್ಯಾಕ್‌ ಮಾಡದಂತೆ ಜಾಗರೂಕತೆ ವಹಿಸಿದ್ದಾನೆ ಎನ್ನಲಾಗಿದೆ.

ಬೇರೆ ಬೇರೆ ರೂಟ್ ನ ಬಸ್ ಗಳಲ್ಲಿ ಪ್ರಯಾಣ ಮಾಡಿರುವ ಶಂಕಿತ ಆರೋಪಿ, ಕೆಲ ಬಸ್ ಗಳಲ್ಲಿ ಟಿಕೆಟ್ ಪಡೆದು, ಇನ್ನೂ ಕೆಲ ಬಸ್ ಗಳಲ್ಲಿ ಟಿಕೆಟ್ ಪಡೆಯೇದ ಪ್ರಯಾಣಿಸಿರುವ ಮಾಹಿತಿ ಇದೆ.

ಶರ್ಟ್‌, ಪ್ಯಾಂಟ್‌ ಬದಲಿಸಿ ತಪ್ಪಿಸಿಕೊಂಡನಾ ಆರೋಪಿ?

ಈ ನಡುವೆ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಪೊಲೀಸರನ್ನು ಯಾಮಾರಿಸಲು ಶರ್ಟ್ ಮತ್ತು ಪ್ಯಾಂಟ್ ಬದಲಿಸಿ ಹೋಗಿದ್ದಾನೆ ಎನ್ನಲಾಗಿದೆ.

ಶರ್ಟ್ ಮೇಲೆ ಶರ್ಟ್ ಹಾಕಿಕೊಂಡು ಬಂದಿದ್ದ ಆತ ಎಸ್ಕೇಪ್ ವೇಳೆ ತಕ್ಷಣ ಬಟ್ಟೆ ಬದಲಿಸಿದ್ದಾನೆ ಎನ್ನಲಾಗಿದೆ. ಈ ರೀತಿ ಬದಲಿಸುವ ಸಿಸಿಟಿವಿ ದೃಶ್ಯ ಕಲೆಹಾಕಲು ಪೊಲೀಸರು ಸರ್ಕಸ್‌ ಮಾಡುತ್ತಿದ್ದಾರೆ. ಸಿಸಿಬಿ ಮತ್ತು ಪೊಲೀಸ್ ಇಲಾಖೆಯ ಇನ್ನೂರಕ್ಕೂ ಹೆಚ್ಚು ಅಧಿಕಾರಿಗಳಿಂದ ಶಂಕಿತನಿಗಾಗಿ ಹುಡುಕಾಟ ನಡೆಯುತ್ತಿದೆ.

Continue Reading

ಪ್ರಮುಖ ಸುದ್ದಿ

Pakistan Terrorist : ಪಾಕಿಸ್ತಾನದಲ್ಲಿ ಭಾರತದ ವಾಂಟೆಡ್​ ಲಿಸ್ಟ್​ನಲ್ಲಿರುವ ಉಗ್ರನ ಹತ್ಯೆ; ಯಾರಿವ ಉಗ್ರಗಾಮಿ?

Pakistan Terrorist : ಉಗ್ರನ ಹತ್ಯೆಯು ಪಾಕಿಸ್ತಾನವು ಉನ್ನತ ಮಟ್ಟದ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂಬ ಆರೋಪಕ್ಕೆ ಮಗದೊಂದು ಸಾಕ್ಷಿ ದೊರೆತಂತಾಗಿದೆ.

VISTARANEWS.COM


on

Terrorist murder
Koo

ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿರುವ ಪಾಕಿಸ್ತಾನಿಗಳು ಅವರ ನೆಲದಲ್ಲಿಯೇ ಮಣ್ಣು ಮುಕ್ಕುತ್ತಿದ್ದಾರೆ. ಒಬ್ಬೊಬ್ಬರನ್ನೇ ಹತ್ಯೆ (Pakistan Terrorist) ಮಾಡಿ ಅವರ ಉಪಟಳಕ್ಕೆ ಅಂತ್ಯ ಹಾಡಲಾಗುತ್ತಿದೆ. ಇದೇ ಮಾದರಿಯಲ್ಲಿ ಕುಖ್ಯಾತ ಉಗ್ರ ಶೇಖ್ ಜಮೀಲ್-ಉರ್-ರೆಹಮಾನ್ ಶನಿವಾರ (ಮಾರ್ಚ್ 2ರಂದು) ಪಾಕಿಸ್ತಾನದಲ್ಲಿ ‘ನಿಗೂಢ ರೀತಿ’ಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ವರದಿಗಳು ತಿಳಿಸಿವೆ. ಈ ಬೆಳವಣಿಗೆಯು ಪಾಕಿಸ್ತಾನವು ಉನ್ನತ ಮಟ್ಟದ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂಬ ಆರೋಪಕ್ಕೆ ಮಗದೊಂದು ಸಾಕ್ಷಿ ಕೊಟ್ಟಂತಾಗಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಕಮಾಂಡರ್ ಖೈಬರ್ ಪಖ್ತುಖ್ವಾದ ಅಬೋಟಾಬಾದ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಯುನೈಟೆಡ್ ಜಿಹಾದ್ ಕೌನ್ಸಿಲ್ (ಯುಜೆಸಿ) ನ ಸ್ವಯಂ ಘೋಷಿತ ಪ್ರಧಾನ ಕಾರ್ಯದರ್ಶಿ ರೆಹಮಾನ್ ಮೂಲತಃ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ಸೇರಿದವರು.

ಶೇಖ್ ಜಮೀಲ್-ಉರ್-ರೆಹಮಾನ್ ಯಾರು?

ಶೇಖ್ ಜಮೀಲ್-ಉರ್-ರೆಹಮಾನ್ ಮೂಲತಃ ಪುಲ್ವಾಮಾದವನಾಗಿದ್ದ, ಕಾಶ್ಮೀರದಲ್ಲಿ ಅನೇಕ ಭಯೋತ್ಪಾದಕ ದಾಳಿಗಳನ್ನು ಸಂಘಟಿಸಿದ್ದಾನೆ. ಬಳಿಕ ತನಗೆ ಬೆಂಬಲ ಕೊಡುತ್ತಿದ್ದ ಪಾಕಿಸ್ತಾನ ಸೇರಿಕೊಂಡಿದ್ದ, ಪಾಕ್​ನಲ್ಲಿ ಯುನೈಟೆಡ್ ಜಿಹಾದ್ ಕೌನ್ಸಿಲ್ (ಯುಜೆಸಿ) ಸಂಘಟಿಸಿ ಅದರ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ತಹ್ರೀಕ್-ಉಲ್-ಮುಜಾಹಿದ್ದೀನ್ (ಟಿಯುಎಂ) ನ ಎಮಿರ್ ಆಗಿ ಸೇವೆ ಸಲ್ಲಿಸಿದ್ದಾನೆ. ಅಕ್ಟೋಬರ್ 2022 ರಲ್ಲಿ ಭಾರತ ಸರ್ಕಾರದಿಂದ ಭಯೋತ್ಪಾದಕ ಎಂದು ಹೆಸರಿಸಲ್ಪಟ್ಟ ರೆಹಮಾನ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನೊಂದಿಗೆ ನಿಕಟ ಸಂಪರ್ಕದಲ್ಲಿದ್ದ.

ಆತನ ಉದ್ದೇಶವೇನು?

ಪ್ಯಾನ್-ಇಸ್ಲಾಮಿಕ್ ಎಂಬ ಗುಪ್ತ ಸೂಚಿಯನ್ನು ಹೊಂದಿದ್ದ ರೆಹಮಾನ್​ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸುವ ಗುರಿಯೊಂದಿಗೆ ಉಗ್ರ ಸಂಘಟನೆ ಆರಂಭಿಸಿದ್ದ ವಿಶೇಷವಾಗಿ 1991 ರ ಎನ್​ಕೌಂಟರ್​ನಲ್ಲಿ ಅದರ ತೆಹ್ರಿಕ್​ ಉಲ್​ ಮುಜಾಹಿದಿನ್​ ಸಂಘಟನೆಯ (ಟಿಯುಎಂ) ಸಂಸ್ಥಾಪಕ ಯೂನುಸ್ ಖಾನ್ ಮೃತಪಟ್ಟಾಗ ಪಾಕಿಸ್ತಾನ ಮೂಲದ ಜಿಹಾದಿ ಗುಂಪುಗಳ ಒಕ್ಕೂಟವಾಗಿರುವ ಯುಜೆಸಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯವಾಗಿರುವ ವಿವಿಧ ಭಯೋತ್ಪಾದಕ ಸಂಘಟನೆಗಳನ್ನು ಟಿಯುಎಂ ಜತೆ ಸೇರಿಸುವ ಗುರಿ ಹೊಂದಿತ್ತು. ಈ ಮೈತ್ರಿಕೂಟವು ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್, ಅಲ್ ಬದರ್, ಹಿಜ್ಬುಲ್ ಮುಜಾಹಿದ್ದೀನ್ ಮುಂತಾದ ಗುಂಪುಗಳನ್ನು ಒಳಗೊಂಡಿತ್ತು. ಇಲ್ಲೆಲ್ಲ ಸಕ್ರಿಯನಾಗಿದ್ದ ರೆಹಮಾನ್​, ಉಗ್ರರ ತರಬೇತಿ ಮತ್ತು ಒಳನುಸುಳುವಿಕೆ ಸೇರಿದಂತೆ ಅವರ ಚಟುವಟಿಕೆಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

ಇದನ್ನೂ ಓದಿ : Narendra Modi : ಭಾರತ್​ ಶಕ್ತಿಯಲ್ಲಿ ಭಾಗಿಯಾಗಲಿದ್ದಾರೆ ಪ್ರಧಾನಿ ಮೋದಿ; ಏನಿದು ಮಿಲಿಟರಿ ಶಕ್ತಿ ಪ್ರದರ್ಶನ

ಮಸಣ ಸೇರಿದ ಭಾರತ ವಿರೋಧಿಗಳು

ಇದೇ ರೀತಿಯಾಗಿ ಲಷ್ಕರ್-ಎ-ತೈಬಾಗೆ ಸಂಬಂಧಿಸಿದ ಭಯೋತ್ಪಾದಕ ಹಬೀಬುಲ್ಲಾ 2023 ರ ಡಿಸೆಂಬರ್ 17 ರಂದು ಖೈಬರ್ ಪಖ್ತುನ್ಖ್ವಾದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಗೆ ಬಲಿಯಾಗಿದ್ದ. ಏತನ್ಮಧ್ಯೆ ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ಅಪರಿಚಿತ ವ್ಯಕ್ತಿಗಳಿಂದಾಗಿವು ವಿಷಪ್ರಾಶನದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ವರದಿಗಳು ಹೇಳಿವೆ.

Continue Reading

ದಕ್ಷಿಣ ಕನ್ನಡ

Chaithra Hebbar : ಚೈತ್ರಾ ಹೆಬ್ಬಾರ್‌ ಮಿಸ್ಸಿಂಗ್‌ ಕೇಸ್‌ಗೆ ಬಿಗ್‌ ಟ್ವಿಸ್ಟ್‌; ಪ್ರಿಯಕರ ಹಿಮಾಚಲದಲ್ಲಿ; ಅವಳೆಲ್ಲಿ?

Chaithra Hebbar : ಫೆ. 17ರಿಂದ ಮಂಗಳೂರಿನಿಂದ ನಾಪತ್ತೆಯಾಗಿರುವ ಚೈತ್ರಾ ಹೆಬ್ಬಾರ್‌ ಈಗ ಎಲ್ಲಿದ್ದಾಳೆ ಎನ್ನುವುದು ಇನ್ನೂ ತಿಳಿದಿಲ್ಲ. ಆದರೆ ಆಕೆಯ ಜತೆಗೆ ಆತ್ಮೀಯನಾಗಿದ್ದ ಶಾರುಖ್‌ ಶೇಖ್‌ ಹಿಮಾಚಲದಲ್ಲಿ ಸಿಕ್ಕಿದ್ದಾನೆ. ಹಾಗಿದ್ದರೆ ಇವಳೆಲ್ಲಿ?

VISTARANEWS.COM


on

Chaithra Hebbar News found
Koo

ಮಂಗಳೂರು: ಮಂಗಳೂರಿನ ದೇರಳಕಟ್ಟೆಯ ಖಾಸಗಿ ವಿಶ್ವವಿದ್ಯಾಲಯಲ್ಲಿ (Private University) ಪಿಎಚ್‌ಡಿ ಅಧ್ಯಯನ (PhD Study) ನಡೆಸುತ್ತಿದ್ದು ಕಳೆದ ಫೆಬ್ರವರಿ 17ರಿಂದ ನಾಪತ್ತೆಯಾಗಿದ್ದ ಪುತ್ತೂರು ಮೂಲದ ಬ್ರಾಹ್ಮಣ ಯುವತಿ ಚೈತ್ರಾ ಹೆಬ್ಬಾರ್‌ (Chaithra Hebbar Missing Case) ಮಿಸ್ಸಿಂಗ್‌ ಕೇಸ್‌ಗೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಅದೇನೆಂದರೆ ಚೈತ್ರಾ ಹೆಬ್ಬಾರ್‌ ಯಾರ ಜತೆ ಓಡಿ ಹೋಗಿದ್ದಾಳೆ ಎಂದು ನಂಬಲಾಗಿತ್ತೋ ಆ ಯುವಕ ಈಗ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದ್ದಾನೆ. ಆದರೆ, ಚೈತ್ರಾ ಹೆಬ್ಬಾರ್‌ ಆತನ ಜತೆಗಿಲ್ಲ. ಆಕೆ ವಿಸಿಟಿಂಗ್‌ ವಿಸಾ ಪಡೆದು ಕತಾರ್‌ಗೆ ಹಾರಿದ್ದಾಳೆ ಎಂದು ಹೇಳಲಾಗುತ್ತಿದೆ.

ಆಕೆ ನಾಪತ್ತೆಯಾದ ದಿನದಿಂದ ಆಕೆಯೊಂದಿಗೆ ಆತ್ಮೀಯತೆಯಿಂದ ಇದ್ದ ಶಾರುಖ್‌ ಶೇಖ್‌ (Sharukh Shekh) ಎಂಬಾತ ಕೂಡಾ ನಾಪತ್ತೆಯಾಗಿದ್ದಾನೆ. ಹೀಗಾಗಿ ಇದು ಹಿಂದು-ಮುಸ್ಲಿಂ ಜೋಡಿ (Hindu Muslim) ಪಲಾಯನ, ಲವ್‌ ಜಿಹಾದ್‌ (Love Jihad) ಎಂಬಿತ್ಯಾದಿ ವ್ಯಾಖ್ಯಾನಗಳಿಗೂ ಕಾರಣವಾಗಿತ್ತು. ಹೀಗಾಗಿ ಇಬ್ಬರನ್ನೂ ಪೊಲೀಸರು ನಿರಂತರವಾಗಿ ಹುಡುಕಾಟ ನಡೆಸಿದ್ದರು.

ಚೈತ್ರಾ ಹೆಬ್ಬಾರ್‌ ಮೂಲತಃ ಪುತ್ತೂರಿನ ಪುರುಷರ ಕಟ್ಟೆ ನಿವಾಸಿ. ತಂದೆಯ ನಿಧನದ ಬಳಿಕ ಆಕೆ ಮಂಗಳೂರಿನ ದೊಡ್ಡಪ್ಪನ ಮನೆಯಲ್ಲಿದ್ದು, ಎಂಎಸ್‌ಸಿ ಮಾಡಿದ್ದಳು. ಮುಂದೆ ದೇರಳಕಟ್ಟೆಯ ಖಾಸಗಿ ವಿವಿಯಲ್ಲಿ ಪಿಎಚ್‌ಡಿ ಮಾಡಲು ಆರಂಭಿಸಿದ್ದಳು. ಅದಕ್ಕೆ ಅನುಕೂಲವಾಗಲಿ ಎಂಬಂತೆ ಮಾಡೂರಿನಲ್ಲಿ ಪಿಜಿ ಒಂದಕ್ಕೆ ಸೇರಿದ್ದಳು.

Chaithra Hebbar Missing Case

ಚೈತ್ರಾ ಪಿಜಿಯಲ್ಲಿ ಉಳಿದುಕೊಂಡಿದ್ದಾಗ ಆಕೆಯನ್ನು ಭೇಟಿಯಾಗಲು ಒಬ್ಬ ಮುಸ್ಲಿಂ ಹುಡುಗ ಬರುತ್ತಿದ್ದ ಎನ್ನಲಾಗಿದೆ. ಆತನ ಹೆಸರು ಶಾರುಖ್‌ ಶೇಖ್‌. ಶಾರುಖ್‌ ಶೇಖ್‌ ಮೂಲತಃ ಬಂಟ್ವಾಳ ತಾಲೂಕಿನ ನೇರಳ ಕಟ್ಟೆಯವನು. ಆದರೆ, ಅವನು ಇದ್ದದ್ದು ಪುತ್ತೂರಿನ ಕೂರ್ನಡ್ಕದ ಚಿಕ್ಕಮ್ಮನ ಮನೆಯಲ್ಲಿ. ಕೂರ್ನಡ್ಕ ಮತ್ತು ಪುರುಷರ ಕಟ್ಟೆ ಹತ್ತಿರ ಹತ್ತಿರ. ಹೀಗಾಗಿ ಚೈತ್ರಾ ಪುತ್ತೂರಿನಲ್ಲಿ ಇದ್ದಾಗಲೇ ಅವರಿಬ್ಬರಿಗೆ ಪರಿಚಯವಾಗಿರಬಹುದು ಎಂದು ಹೇಳಲಾಗಿದೆ.

ಶಾರುಖ್‌ ಶೇಖ್‌ ಚೈತ್ರಾ ಹೆಬ್ಬಾರ್‌ಳನ್ನು ಭೇಟಿಯಾಗುತ್ತಿರುವುದು ಮಾಡೂರಿನ ಬಜರಂಗ ದಳದ ಯುವಕರ ಕಣ್ಣಿಗೆ ಬಿದ್ದಿತ್ತು, ಇದರಿಂದ ಮುಂದೆ ಅಪಾಯವಿದೆ ಎಂದು ಅರಿತ ಅವು ಚೈತ್ರಾಳ ದೊಡ್ಡಪ್ಪನಿಗೆ ವಿಷಯ ತಿಳಿಸಿದ್ದರು ಎನ್ನಲಾಗಿದೆ. ದೊಡ್ಡಪ್ಪ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದರು. ಈ ನಡುವೆ ಕಳೆದ ಫೆಬ್ರವರಿ 17ರಂದು ಆಕೆ ನಾಪತ್ತೆಯಾಗಿದ್ದಾಳೆ.

ಇದನ್ನೂ ಓದಿ: Chaithra Hebbar : ಪಿಎಚ್‌ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್‌ ನಿಗೂಢ ನಾಪತ್ತೆ; ಯಾರು ಈ ಶಾರುಖ್‌ ಶೇಖ್‌?

ಆಕೆ ಶಾರುಖ್‌ ಶೇಖ್‌ ಜತೆ ಸ್ಕೂಟರ್‌ನಲ್ಲಿ ಹೋಗಿದ್ದು ತಿಳಿದುಬಂದಿತ್ತು. ಆ ಸ್ಕೂಟರ್‌ ಮಂಗಳೂರಿನಲ್ಲಿ ಪತ್ತೆಯಾಗಿತ್ತು. ಆಕೆಯ ಮೊಬೈಲ್‌ ಕೂಡಾ ಸ್ವಿಚ್‌ ಆಫ್‌ ಆಗಿತ್ತು. ಚೈತ್ರಾ ನಾಪತ್ತೆಯಾದ ಬಳಿಕ ಆಕೆಯ ಸುರತ್ಕಲ್‌ನ ಎಟಿಎಂನಲ್ಲಿ ಆಕೆಯ ಅಕೌಂಟ್‌ನಿಂದ ಹಣ ಡ್ರಾ ಮಾಡಲಾಗಿತ್ತು. ಈಗ ಪೊಲೀಸರು ಅಕೌಂಟ್‌ ಬ್ಲಾಕ್‌ ಮಾಡಿದ್ದಾರೆ.

ಶಾರುಖ್‌ ಶೇಖರ್‌ಗೆ ಡ್ರಗ್ಸ್‌ ಜಾಲದ ಜತೆ ಸಂಪರ್ಕವಿದ್ದು ಆತ ಚೈತ್ರಾ ಹೆಬ್ಬಾರ್‌ಗೂ ಡ್ರಗ್ಸ್‌ ಆಸೆ ತೋರಿಸಿ ಆಕೆಯನ್ನು ಬುಟ್ಟಿಗೆ ಹಾಕಿಕೊಂಡಿದ್ದ ಎಂಬ ಗುಮಾನಿ ಇದೆ. ಐಟಿಐ ವಿದ್ಯಾಭ್ಯಾಸ ಪಡೆದ ಆತ ಕತಾರ್‌ಗೆ ಹೋಗಿದ್ದ. ಅಲ್ಲಿ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದ. ಜೈಲು ಸೇರಿ ಬಳಿಕ ಬಿಡುಗಡೆಯಾಗಿ ಊರಿಗೆ ಬಂದವನೇ ಇಲ್ಲೂ ಅಂತಹುದೇ ಕೃತ್ಯದಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದೆ.

Chaithra Hebbar : ಹಿಮಾಚಲ‌ ಪ್ರದೇಶದಲ್ಲಿ ಸಿಕ್ಕಿಬಿದ್ದ ಶಾರುಖ್‌

ಈ ನಡುವೆ, ಮಂಗಳೂರು ಪೊಲೀಸರು ನಾನಾ ತನಿಖಾ ತಂಡಗಳನ್ನು ರಚಿಸಿ ಚೈತ್ರಾ ಮತ್ತು ಶಾರುಖ್‌ ಶೇಖ್‌ ಪತ್ತೆಗೆ ಪ್ರಯತ್ನ ನಡೆಸಿದ್ದರು. ಅದರ ಫಲವಾಗಿ ಈಗ ಶಾರುಖ್‌ ಶೇಖ್‌ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದ್ದಾನೆ.

ಆದರೆ, ಚೈತ್ರಾ ಆತನ ಜತೆಗೆ ಇರಲಿಲ್ಲ. ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಚೈತ್ರಾ ವಿಸಿಟಿಂಗ್ ವೀಸಾ ಪಡೆದು ಕತಾರ್ಗೆ ತೆರಳಿದ್ದಾಳೆ. ಹಾಗಿದ್ದರೆ ಆಕೆ ಶಾರುಖ್‌ ಶೇಖ್‌ ಜತೆ ಹೋಗಿರಲಿಲ್ಲವಾ? ಆಕೆ ನಾಪತ್ತೆಯಾಗುತ್ತಿದ್ದಂತೆಯೇ ಶಾರುಖ್‌ ಕೂಡಾ ಕಣ್ಮರೆಯಾಗಿದ್ದೇಕೆ? ಆಕೆಯನ್ನು ಮೊದಲು ಕತಾರ್‌ಗೆ ಕಳುಹಿಸಿ ತಾನು ಬಳಿಕ ತೆರಳಲು ಪ್ಲ್ಯಾನ್‌ ಮಾಡಿದ್ದನಾ? ಎನ್ನುವ ಹಲವು ಪ್ರಶ್ನೆಗಳಿಗೆ ಈಗ ಉಳ್ಳಾಲ ಪೊಲೀಸರು ಉತ್ತರ ಹುಡುಕುತ್ತಿದ್ದಾರೆ.

Continue Reading
Advertisement
The bike collided with a tipper lorry Rider death
ತುಮಕೂರು12 mins ago

Road Accident : ಬೈಕ್‌ನಲ್ಲಿ ತ್ರಿಬಲ್‌ ರೈಡಿಂಗ್‌ ಎಡವಟ್ಟು; ಹಾರಿಹೋಯ್ತು ಸವಾರ ಪ್ರಾಣ

train accident
ದೇಶ23 mins ago

Andhra Train Accident: ಚಾಲಕ ಮೊಬೈಲ್‌ನಲ್ಲಿ ಕ್ರಿಕೆಟ್‌ ನೋಡುತ್ತಿದ್ದುದೇ ರೈಲು ದುರಂತಕ್ಕೆ ಕಾರಣ

BJP Candidates List
ದೇಶ34 mins ago

BJP Candidates List : ಬಿಜೆಪಿಯ ಈ ನಾಲ್ವರು ವಿವಾದಾತ್ಮಕ ಸಂಸದರಿಗೆ ಈ ಬಾರಿ ಟಿಕೆಟಿಲ್ಲ!

Manisha Rani wins Jhalak Dikhhla Jaa 11
ಕಿರುತೆರೆ35 mins ago

Jhalak Dikhhla Jaa 11: `ಝಲಕ್ ದಿಖ್ಲಾ ಜಾ ಸೀಸನ್ 11′ ರ ವಿಜೇತರಾಗಿ ಹೊರಹೊಮ್ಮಿದ ಮನೀಷಾ ರಾಣಿ!

Blast in Bangalore Rameshwaram Cafe Accused
ಬೆಂಗಳೂರು40 mins ago

Blast in Bengaluru : ರಾಮೇಶ್ವರಂ ಕೆಫೆ ಬ್ಲಾಸ್ಟ್‌ನಲ್ಲಿ ಒಬ್ಬನೇ ಭಾಗಿ? ಏನಿದು ಒಂಟಿ ತೋಳ ದಾಳಿ?

Child assaulted by Mother and her boyfriend in Bengaluru
ಬೆಂಗಳೂರು59 mins ago

Inhuman Behaviour : ಬಾಯ್‌ ಫ್ರೆಂಡ್‌ ಜತೆ ಸೇರಿ ಹೆತ್ತ ಮಗುವಿನ ಮರ್ಮಾಂಗ ಕಚ್ಚಿದಳು ರಾಕ್ಷಸಿ!

Deepika Padukone, Ranveer Singh perform on Galla Goodiyan
ಬಾಲಿವುಡ್1 hour ago

Deepika Padukone: ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್‌: ಸಖತ್‌ ಸ್ಟೆಪ್ಸ್ ಹಾಕಿದ ಪ್ರೆಗ್ನೆಂಟ್‌ ನಟಿ!

bjp list
Lok Sabha Election 20241 hour ago

BJP Candidates List: ಬಿಜೆಪಿ ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಟಿಕೆಟಿಲ್ಲ!

Terrorist murder
ಪ್ರಮುಖ ಸುದ್ದಿ1 hour ago

Pakistan Terrorist : ಪಾಕಿಸ್ತಾನದಲ್ಲಿ ಭಾರತದ ವಾಂಟೆಡ್​ ಲಿಸ್ಟ್​ನಲ್ಲಿರುವ ಉಗ್ರನ ಹತ್ಯೆ; ಯಾರಿವ ಉಗ್ರಗಾಮಿ?

Chaithra Hebbar News found
ದಕ್ಷಿಣ ಕನ್ನಡ2 hours ago

Chaithra Hebbar : ಚೈತ್ರಾ ಹೆಬ್ಬಾರ್‌ ಮಿಸ್ಸಿಂಗ್‌ ಕೇಸ್‌ಗೆ ಬಿಗ್‌ ಟ್ವಿಸ್ಟ್‌; ಪ್ರಿಯಕರ ಹಿಮಾಚಲದಲ್ಲಿ; ಅವಳೆಲ್ಲಿ?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for march 3rd 2024
ಭವಿಷ್ಯ7 hours ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು19 hours ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು23 hours ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು2 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು2 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ2 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ3 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ5 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

ಟ್ರೆಂಡಿಂಗ್‌