Celebrity Fashion Corner | ಒರಿಗಾಮಿ ಡಿಸೈನಿಂಗ್‌ ಪರಿಚಯಿಸಿದ ವಿದ್ಯಾ ವಿವೇಕ್‌ - Vistara News

ಫ್ಯಾಷನ್

Celebrity Fashion Corner | ಒರಿಗಾಮಿ ಡಿಸೈನಿಂಗ್‌ ಪರಿಚಯಿಸಿದ ವಿದ್ಯಾ ವಿವೇಕ್‌

ಒರಿಗಾಮಿ ಡಿಸೈನಿಂಗ್‌ ಕಾನ್ಸೆಪ್ಟನ್ನು (Celebrity Fashion Corner) ಫ್ಯಾಷನ್‌ ಲೋಕಕ್ಕೂ ಪರಿಚಯಿಸಿದ ಕ್ರೆಡಿಟ್‌ ಫ್ಯಾಷನ್‌ ಮೆಂಟರ್‌ ವಿದ್ಯಾ ವಿವೇಕ್‌ ಅವರಿಗೆ ಸಲ್ಲುತ್ತದೆ. ಈ ಬಾರಿಯ ಸೆಲೆಬ್ರಿಟಿ ಫ್ಯಾಷನ್‌ ಕಾರ್ನರ್‌ನಲ್ಲಿ ವಿಸ್ತಾರದೊಂದಿಗೆ ಮಾತನಾಡಿರುವ ಅವರು ತಮ್ಮ ಫ್ಯಾಷನ್‌ ಜರ್ನಿ ಇತ್ಯಾದಿ ವಿಷಯಗಳ ಬಗ್ಗೆ ಹಂಚಿಕೊಂಡಿದ್ದಾರೆ.

VISTARANEWS.COM


on

Celebrity Fashion Corner (origami design)
ವಿದ್ಯಾ ವಿವೇಕ್‌, ಸೆಲೆಬ್ರಿಟಿ ಫ್ಯಾಷನ್‌ ಮೆಂಟರ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬೆಂಗಳೂರಿನ ಫ್ಯಾಷನ್‌ ಜಗತ್ತಿನಲ್ಲಿ ಸುಮಾರು ೨೫ ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವವರ ಸಾಲಿನಲ್ಲಿ ವಿದ್ಯಾ ವಿವೇಕ್‌ ಕೂಡ ಸೇರುತ್ತಾರೆ. ಇವರು ವಿದ್ಯಾ ಫ್ಯಾಷನ್‌ ಅಕಾಡೆಮಿಯ ಸಂಸ್ಥಾಪಕರು ಮಾತ್ರವಲ್ಲ, ನಮ್ಮ ರಾಷ್ಟ್ರದಲ್ಲೆ ಮೊತ್ತ ಮೊದಲ ಬಾರಿಗೆ ಜಪಾನ್‌ನ ಒರಿಗಾಮಿ ಫ್ಯಾಷನ್‌ ಕಾನ್ಸೆಪ್ಟನ್ನು (Celebrity Fashion Corner) ಪರಿಚಯಿಸಿದವರು.

ಈ ಬಾರಿಯ ವಿಸ್ತಾರದ ಸೆಲೆಬ್ರಿಟಿ ಫ್ಯಾಷನ್‌ ಕಾರ್ನರ್‌ನಲ್ಲಿ ತಮ್ಮ ಫ್ಯಾಷನ್‌ ಜರ್ನಿ ಹಾಗೂ ಫ್ಯಾಷನ್‌ನಲ್ಲಿ ತಂತ್ರಜ್ಞಾನ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಸುಮಾರು ೨೫ ವರ್ಷಗಳಿಂದ ಫ್ಯಾಷನ್‌ ಕ್ಷೇತ್ರದಲ್ಲಿ ಎಲೆಮರೆ ಕಾಯಿಯಂತೆ ತೊಡಗಿಸಿಕೊಂಡಿರುವ ನಿಮ್ಮ ಫ್ಯಾಷನ್‌ ಜರ್ನಿಯ ಬಗ್ಗೆ ಹೇಳಿ?
ವಿದೇಶದಲ್ಲಿ ಫ್ಯಾಷನ್‌ ವ್ಯಾಸಂಗ ಮಾಡಿದ ನಂತರ ಉದ್ಯಾನನಗರಿಯಲ್ಲಿ ಆರಂಭಿಸಿದ ವಿದ್ಯಾ ಫ್ಯಾಷನ್‌ ಅಕಾಡೆಮಿ ಮೂಲಕ ನಾವು ಇದುವರೆಗೂ ಸಾವಿರಾರು ಡಿಸೈನರ್‌ಗಳನ್ನು ಹುಟ್ಟುಹಾಕಿದ್ದೇವೆ. ಇದರೊಂದಿಗೆ ಸಾಕಷ್ಟು ವಿದೇಶಿ ಪ್ರಾಜೆಕ್ಟ್‌ಗಳಿಗೂ ಕಾರ್ಯ ನಿರ್ವಹಿಸಿದ್ದು, ವರ್ಕ್‌ಶಾಪ್‌ ಮೂಲಕ ಫ್ಯಾಷನ್‌ ಕುರಿತ ಲೆಕ್ಕವಿಲ್ಲದಷ್ಟು ಕಾರ್ಯಾಗಾರಗಳನ್ನು ಏರ್ಪಡಿಸಿ, ಹೊಸ ಕಾನ್ಸೆಪ್ಟ್‌ಗಳನ್ನು ಪರಿಚಯಿಸಿದ್ದೇವೆ.

ಇದನ್ನೂ ಓದಿ | Celebrity Fashion Corner | ಪೇಜೆಂಟ್‌ಗಳಲ್ಲಿ ವಿವಾಹಿತರಿಗೆ ಝೀರೊ ಸೈಝ್‌ ಅಗತ್ಯವಿಲ್ಲ : ಅಮೃತ್ ಕಲೇರ್

Celebrity Fashion Corner (origami design)

ಒರಿಗಾಮಿ ಫ್ಯಾಷನ್‌ ಡಿಸೈನಿಂಗ್‌ ಕಾನ್ಸೆಪ್ಟ್‌ ಮೊದಲ ಬಾರಿ ನಮ್ಮ ರಾಷ್ಟ್ರದಲ್ಲಿ ಪರಿಚಯಿಸಿದ ಕ್ರೆಡಿಟ್‌ ನಿಮಗೆ ಸಲ್ಲುತ್ತದೆ. ಈ ಬಗ್ಗೆ ತಿಳಿಸಿ.
ಹೌದು. ಇದುವರೆಗೂ ಆ ಪ್ರಯತ್ನವನ್ನು ಯಾರೂ ಮಾಡಿರಲಿಲ್ಲ. ಜಪಾನ್‌ನಿಂದ ಒರಿಗಾಮಿ ಫ್ಯಾಷನ್‌ ತಜ್ಞ ಶಿಂಗೋಸ್ಯಾಟೋರನ್ನು ಕರೆಸಿ ವರ್ಕ್‌ಶಾಪ್‌ ಮಾಡಿಸಿದ್ದೇವೆ. ಅಷ್ಟು ಮಾತ್ರವಲ್ಲ, ಒರಿಗಾಮಿಯ ಡಿಸೈನ್‌ಗಳನ್ನು ನಾವು ಫ್ಯಾಷನ್‌ ಡಿಸೈನಿಂಗ್‌ನಲ್ಲಿ ಅಳವಡಿಸಿದ್ದೇವೆ. ನಾನಾ ಪ್ರಯೋಗಾತ್ಮಕ ಡಿಸೈನ್‌ಗಳನ್ನು ಸಿದ್ಧಪಡಿಸಿದ್ದೇವೆ. ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ಇವುಗಳ ಪ್ರಯೋಗ ಕಾಲರ್‌, ಪಾಕೆಟ್‌, ಸೀರೆಯ ಬ್ಲೌಸ್‌ ಸ್ಲೀವ್‌ಗಳಲ್ಲೂ ಕಾಣಬಹುದು.

ಇತ್ತೀಚೆಗೆ ವರ್ಚುವಲ್‌ ಡಿಸೈನ್‌ ಹಾಗೂ ಬೋಟಿಕ್‌ ಕಾನ್ಸೆಪ್ಟ್‌ ಎಂಟ್ರಿಯಾಗಿದೆಯಲ್ಲ! ಇದು ಸ್ಮಾರ್ಟ್ ಫ್ಯಾಷನ್‌ಗೆ ನಾಂದಿ ಹಾಡುತ್ತಿದೆಯೇ!
ಖಂಡಿತ. ಮಿಲಾನ್‌, ಪ್ಯಾರೀಸ್‌ ಎಲ್ಲೆಡೆ ಇದು ಯಶಸ್ವಿಯಾಗಿದೆ. ಇದೀಗ ನಮ್ಮಲ್ಲೂ ಈ ವರ್ಚುವಲ್‌ ಡಿಸೈನಿಂಗ್‌ ಹಾಗೂ ಬೋಟಿಕ್‌ ಕಾನ್ಸೆಪ್ಟ್‌ ಎಂಟ್ರಿ ನೀಡಿದೆ. ಹೇಗೆ ವರ್ಚುವಲ್‌ ಪೇಮೆಂಟ್‌ ಯಶಸ್ವಿಯಾಗಿದೆಯೋ ಹಾಗೆಯೇ ಮುಂದೊಮ್ಮೆ ಇದು ಕೂಡ ಟ್ರೆಂಡಿಯಾಗುತ್ತದೆ. ಕೊಂಚ ಸಮಯ ಬೇಕಷ್ಟೆ!

Celebrity Fashion Corner (origami design)

ಉದ್ಯಾನನಗರಿ ಮುಂಬರುವ ಫ್ಯಾಷನ್‌ ಹಬ್‌ ಲಿಸ್ಟ್‌ನಲ್ಲಿ ಸೇರಲಿದೆ ಎಂಬುದರ ಬಗ್ಗೆ ಏನು ಹೇಳುತ್ತೀರಾ?
ಖುಷಿಯಾಗುತ್ತದೆ. ದೂರದ ಮುಂಬೈ, ಚೆನ್ನೈಗೆ ಫ್ಯಾಷನ್‌ ವಿದ್ಯಾರ್ಥಿಗಳು ಭವಿಷ್ಯ ಕಲ್ಪಿಸಿಕೊಳ್ಳಲು ಹೋಗುವ ಬದಲು ಇಲ್ಲಿಯೇ ತಮ್ಮ ಕೆರಿಯರ್‌ ರೂಪಿಸಿಕೊಳ್ಳಬಹುದಲ್ಲ ಎಂಬುದರ ಬಗ್ಗೆ ಯೋಚಿಸಿದಾಗ ಖುಷಿಯಾಗುತ್ತದೆ.

ನೀವು ವಿಶೇಷ ಚೇತನ ಹೆಣ್ಣುಮಗಳೊಬ್ಬಳನ್ನು ಡಿಸೈನರ್‌ ಮಾಡಿ ಸ್ವಾವಲಂಬಿಯಾಗಿಸಿರುವುದು ಸಾಕಷ್ಟು ಪ್ರಶಂಸೆಗೊಳಗಾಗಿದೆ...
ಸಾಮಾನ್ಯರು ಡಿಸೈನಿಂಗ್‌ ಕಲಿಯುವುದು ಕಷ್ಟವಲ್ಲ! ಆದರೆ, ಕಿವಿ ಕೇಳದ, ಮಾತನಾಡಲು ಬಾರದ ದೀಕ್ಷಿತಾ ಎಂಬ ಹೆಣ್ಣುಮಗಳೊಬ್ಬಳು ಕಲಿತು ತಾನೇ ಡಿಸೈನಿಂಗ್‌ ಆರಂಭಿಸಿರುವುದು ಖುಷಿ ತಂದಿದೆ. ಇಂತಹ ಮಹಿಳಾ ಸಬಲೀಕರಣ ಕಾರ್ಯಗಳು ಕ್ಷೇತ್ರದಲ್ಲಿನ ಉತ್ಸಾಹ ಹೆಚ್ಚಿಸುತ್ತದೆ.

Celebrity Fashion Corner (origami design)

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ | Kids Fashion | ಥೀಮ್‌ಗೆ ತಕ್ಕಂತೆ ಬದಲಾಗುವ ಇಂದಿನ ಮಕ್ಕಳ ಫ್ಯಾಷನ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Monsoon star fashion: ಮಾನ್ಸೂನ್‌ ಟ್ರಾವೆಲ್‌ ಫ್ಯಾಷನ್‌ಗೆ ಸೈ ಎಂದ ನಟಿ ಮೋಕ್ಷಿತಾ ಪೈ

Monsoon star fashion: ಪಾರು ಸಿರಿಯಲ್‌ ಖ್ಯಾತಿಯ ನಟಿ ಮೋಕ್ಷಿತಾ ಪೈ ಮಾನ್ಸೂನ್‌ ಟ್ರಾವೆಲ್‌ ಫ್ಯಾಷನ್‌ಗೆ ಸೈ ಎಂದಿದ್ದಾರೆ. ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿರುವ ಅವರು, ಮಳೆಯಲ್ಲಿ ಪ್ರಯಾಣ ಮಾಡುವಾಗ ಸ್ಟೈಲಿಂಗ್‌ ಹೇಗಿರಬೇಕು? ಸೀಸನ್‌ಗೆ ತಕ್ಕಂತೆ ಹೇಗೆ ಬದಲಾಗಬೇಕು ಎಂಬುದರ ಬಗ್ಗೆ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ.

VISTARANEWS.COM


on

Monsoon star fashion Actress Mokshita Pai
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಾನ್ಸೂನ್‌ ಟ್ರಾವೆಲ್‌ (Monsoon star fashion) ಫ್ಯಾಷನ್‌ಗೆ ಸೈ ಎಂದಿದ್ದಾರೆ ನಟಿ ಮೋಕ್ಷಿತಾ ಪೈ. ಟೊರ್ನ್ ಜೀನ್ಸ್, ಸ್ಟ್ರೈಪ್ಸ್ ಕ್ರಾಪ್‌ ಟಾಪ್‌ ಹಾಗೂ ವುಲ್ಲನ್‌ ಕ್ಯಾಪ್‌ನಲ್ಲಿ ರಾಯಲ್‌ ಬ್ಲ್ಯೂ ಕೊಡೆ ಹಿಡಿದು ಆಕರ್ಷಕವಾಗಿ ಕಾಣಿಸಿಕೊಂಡಿರುವ ಮೋಕ್ಷಿತಾಗೆ ಮಳೆಗಾಲವೆಂದರೇ ಸಖತ್‌ ಲವ್‌ ಅಂತೆ.

ಸೀಸನ್‌ಗೆ ತಕ್ಕಂತೆ ಬದಲಾಗುವ ಮೋಕ್ಷಿತಾ

ಇನ್ನು, ನಿಮಗೆಲ್ಲರಿಗೂ ಗೊತ್ತಿರುವಂತೆ ಪಾರು ಸೀರಿಯಲ್‌ ಮೂಲಕ ಖ್ಯಾತಿ ಗಳಿಸಿರುವ ನಟಿ ಮೋಕ್ಷಿತಾ ಪೈಗೆ ಆಗಾಗ ಟ್ರಾವೆಲ್‌ ಮಾಡುವುದು ಅವರಿಗೆ ಇಷ್ಟವಾದ ಸಂಗತಿಗಳಲ್ಲೊಂದಂತೆ. ಇದಕ್ಕೆ ಪೂರಕ ಎಂಬಂತೆ, ಆಯಾ ಸೀಸನ್‌ ಹಾಗೂ ಹವಮಾನಕ್ಕೆ ತಕ್ಕಂತೆ ನಾನಾ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರಂತೆ. ತಮ್ಮ ಮಾನ್ಸೂನ್‌ ಟ್ರಾವೆಲ್‌ ಫ್ಯಾಷನ್‌ ಬಗ್ಗೆ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ ಅವರು ಒಂದಿಷ್ಟು ಸ್ಟೈಲಿಂಗ್‌ ಟಿಪ್ಸ್ ಹಂಚಿಕೊಂಡಿದ್ದಾರೆ.

ಮೋಕ್ಷಿತಾ ಹಿಲ್‌ ಸ್ಟೇಷನ್‌ ಲವ್‌

ನನಗೆ ಮೊದಲಿನಿಂದಲೂ ಹಿಲ್‌ ಸ್ಟೇಷನ್‌ ಅಂದ್ರೆ ಇಷ್ಟ. ಅದರಲ್ಲೂ ಈ ಮಳೆಗಾಲದಲ್ಲಿ ಹಿಲ್‌ಸ್ಟೇಷನ್‌ಗಳಲ್ಲಿ ಉಳಿದು ಕೊಂಡು ಪ್ರಕೃತಿ ಸೌಂದರ್ಯ ಸವಿಯುವ ಯೂನಿಕ್‌ ಅನುಭವವೇ ಒಂಥರ ಖುಷಿ ನೀಡುತ್ತದೆ. ಈ ಬಾರಿ ಊಟಿ ಹೋಗಿದ್ವಿ. ಅಲ್ಲಿನ ವಾತಾವರಣಕ್ಕೆ ತಕ್ಕಂತೆ, ಔಟ್‌ಫಿಟ್ಸ್ ಧರಿಸಿದ್ದೆ. ಹೋಗುವಾಗ ಜೀನ್ಸ್ ಪ್ಯಾಂಟ್‌ ಹಾಗೂ ಶೂನಲ್ಲಿ ಇದ್ದೆ. ಆದರೆ, ನಂತರ ನನ್ನ ಔಟ್‌ಫಿಟ್ಸ್ ಕಂಪ್ಲೀಟ್‌ ಬದಲಾಯಿತು. ಒದ್ದೆಯಾದ ಶೂ ಬದಲು ಚಪ್ಪಲಿ ಧರಿಸಬೇಕಾಯಿತು. ಜೊತೆಗೆ ಚಳಿಯಿಂದ ಕಾಪಾಡಿಕೊಳ್ಳಲು ಕ್ಯಾಪ್‌ ಬಳಸಿದೆ. ಅದು ನೋಡಲು ಕೊಂಚ ಸ್ಟೈಲಾಗಿಯೇ ಕಾಣಿಸಿತು ಎಂದು ನಗುತ್ತಾರೆ ಮೋಕ್ಷಿತಾ ಪೈ.

ಇದನ್ನೂ ಓದಿ: The Birthday Boy: ಹೆಸರು ಬದಲಾಯಿಸಿ ಕದ್ದು ಮುಚ್ಚಿ ಸಿನಿಮಾ ಮಾಡಿ, ಮಾಸ್ಕ್‌ ಧರಿಸಿ ಬಂದ ನಿರ್ದೇಶಕ! ಏನು ಕಥೆ?

ಟ್ರಾವೆಲ್‌ಗೆ ತಕ್ಕಂತಿರಲಿ ಫ್ಯಾಷನ್‌

ಮಾನ್ಸೂನ್‌ ಸೀಸನ್‌ನಲ್ಲಿ ಟ್ರಾವೆಲ್‌ ಮಾಡುವಾಗ ಆದಷ್ಟೂ, ಸೀಸನ್‌ಗೆ ತಕ್ಕಂತೆ ಉಡುಪು ಧರಿಸುವುದು ಮುಖ್ಯ. ಇಲ್ಲವಾದಲ್ಲಿ ಆರೋಗ್ಯ ಹದಗೆಡಬಹುದು. ಪ್ರಯಾಣ ಸುಖಕರವಾಗದೇ ಇರಬಹುದು. ಅಲ್ಲದೇ, ಜಿಟಿಜಿಟಿ ಮಳೆಗೆ ಕಿರಿಕಿರಿ ಎಂದೆನಿಸಬಹುದು. ಹಾಗಾಗಿ ಟ್ರಾವೆಲ್‌ ಸಮಯದಲ್ಲಿ ಮಾತ್ರ, ಮೊದಲೇ ನಿಮ್ಮ ಔಟ್‌ಫಿಟ್ಸ್ ಪ್ಲಾನ್‌ ಮಾಡಿ. ಸ್ಟೈಲಿಂಗ್‌ಗಿಂತ ಹೆಚ್ಚಾಗಿ, ನಿಮ್ಮ ದೇಹವನ್ನು ಬೆಚ್ಚಗಿಡುವಂತಹ ಉಡುಪನ್ನು ಧರಿಸಿ. ಮಿಡಿ , ಶಾರ್ಟ್ ಡ್ರೆಸ್‌, ಲೇಯರ್‌ ಡ್ರೆಸ್‌ ಓಕೆ. ಶೂಗಳ ಬದಲು ಚಪ್ಪಲಿ ಆಯ್ಕೆ ಮಾಡಿ ಎನ್ನುವ ಮೋಕ್ಷಿತಾ ಇನ್ನೊಂದಿಷ್ಟು ಸಿಂಪಲ್‌ ಸಲಹೆಗಳನ್ನು ನೀಡಿದ್ದಾರೆ.

 • ಮಳೆಗಾಲಕ್ಕೆ ಮೋಕ್ಷಿತಾ ಸ್ಟೈಲಿಂಗ್‌ ಟಿಪ್ಸ್:
 • ರೇನ್‌ ಕೋಟ್‌ ಹಾಗೂ ಅಂಬ್ರೆಲ್ಲಾ ಪ್ರಯಾಣದ ಜೊತೆಗಿರಲಿ.
 • ಹುಡುಗಿಯರು ಲಾಂಗ್‌ ಸ್ಕರ್ಟ್ಸ್, ಮ್ಯಾಕ್ಸಿ, ಗೌನ್‌ ಆವಾಯ್ಡ್ ಮಾಡಿ.
 • ಭಾರವೆನಿಸುವ ಹೆವ್ವಿ ಕ್ಲಾತಿಂಗ್‌ ಬೇಡ!
 • ಜಾಕೆಟ್‌, ಶ್ರಗ್ಸ್, ಸ್ಕಾರ್ಫ್‌ ಎಲ್ಲವೂ ಜೊತೆಗಿರಲಿ.
 • ತೆಳುವಾದ ಲೇಯರ್‌ ಲುಕ್‌ಗೆ ಆದ್ಯತೆ ನೀಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Golden Designer Fashion Wears: ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಶೈಲಿಯ ಗೋಲ್ಡನ್‌ ಡಿಸೈನರ್‌ವೇರ್ಸ್!

Golden Designer Fashion Wears: ಅಂಬಾನಿ ಫ್ಯಾಮಿಲಿಯ ಮದುವೆಯಲ್ಲಿ ಸೆಲೆಬ್ರೆಟಿಗಳ ಗೋಲ್ಡನ್‌ ಲುಕ್‌ ಸಖತ್‌ ಟ್ರೆಂಡಿಯಾಗಿದೆ. ಅವುಗಳಲ್ಲಿ 3 ಶೈಲಿಯ ಡಿಸೈನರ್‌ವೇರ್‌ಗಳಲ್ಲಿನ ಲುಕ್‌ ಪಾಪುಲರ್‌ ಆಗಿದೆ. ಹಾಗಾದಲ್ಲಿ, ಅವು ಯಾವುವು? ಆಯ್ಕೆ ಮಾಡುವುದಾದರೇ ಹೇಗೆ? ಡಿಸೈನರ್‌ಗಳು ಒಂದಿಷ್ಟು ಟಿಪ್ಸ್‌ ನೀಡಿದ್ದಾರೆ.  ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Golden Designer Fashion Wears Trendy Golden Designer Wedding Fashion
ಚಿತ್ರಗಳು: ಸೆಲೆಬ್ರೆಟಿಗಳ ಗೋಲ್ಡನ್‌ ಲುಕ್‌ ಡಿಸೈನರ್‌ವೇರ್ಸ್
Koo

– ಶೀಲಾ ಸಿ. ಶೆಟ್ಟಿ, ಬೆಂಗಳೂರು

ಅನಂತ್‌ ಅಂಬಾನಿ –ರಾಧಿಕಾ ಮರ್ಚೆಂಟ್‌  (Golden Designer Fashion Wears) ಮದುವೆಯಲ್ಲಿ, ಸೆಲೆಬ್ರೆಟಿಗಳು ಧರಿಸಿದ ಗೋಲ್ಡನ್‌ ಡಿಸೈನರ್ವೇರ್‌ಗಳು ಇದೀಗ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡ್‌ ಸೆಟ್‌ ಮಾಡಿವೆ. ರಾಯಲ್‌ ಲುಕ್‌ ನೀಡುವ ಈ  3 ಶೈಲಿಯ ಗೋಲ್ಡನ್‌ ಲುಕ್‌ ನೀಡಿದ ಡಿಸೈನರ್‌ವೇರ್‌ಗಳ್ಯಾವು? ಆಯ್ಕೆ ಹೇಗೆ? ಇಲ್ಲಿದೆ ಡಿಟೇಲ್ಸ್.

ಗೋಲ್ಡನ್ ಶೇಡ್‌ ರೆಡಿ ಸೀರೆ

ಬಂಗಾರ ವರ್ಣದ  ರೆಡಿ ಸೀರೆಗಳು ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಸಖತ್‌ ಟ್ರೆಂಡಿಯಾಗಿವೆ. ಸಾಲಿಡ್‌ ಶೇಡ್‌ನ ಬಂಗಾರ ವರ್ಣದ ಕಲರ್‌ನ ಡಿಸೈನರ್‌ ರೆಡಿ ಸೀರೆಗಳು ಇದೀಗ ಸೆಲೆಬ್ರೆಟಿಗಳನ್ನು ಅಲಂಕರಿಸಿದ್ದು, ನೋಡುಗರ ಕಣ್ಮನ ಸೆಳೆದಿವೆ. ಇ, ಕಾಪರ್‌ ಗೋಲ್ಡ್, ಲೈಟ್‌ ಗೋಲ್ಡ್, ಕ್ರೀಮ್‌ ಗೋಲ್ಡನ್‌ ಸೀರೆಗಳಲ್ಲಿ ಮೆರ್ಮೈಡ್, ಬಾಡಿಕಾನ್‌ ಡಿಸೈನ್‌ನವು ಮಹಿಳೆಯರಿಗೆ ಹೆಚ್ಚು ಇಷ್ಟವಾಗಿವೆ.

ಗೋಲ್ಡನ್‌ ಡಿಸೈನರ್‌ ಘಾಗ್ರ ಗಮ್ಮತ್ತು

ಬಂಗಾರ ವರ್ಣದ ಘಾಗ್ರಗಳು ಕೂಡ ಮದುವೆ ಫ್ಯಾಷನ್‌ನಲ್ಲಿ ಸೇರಿಕೊಂಡಿದ್ದು, ಧರಿಸಿದವರನ್ನು ಮೆರೆಸಿವೆ. ನೋಡಲು ಮೊಗಲರ ರಾಣಿಯರಂತೆ ಬಿಂಬಿಸುವ ಇವು ಇದೀಗ ನಾನಾ ಡಿಸೈನರ್‌ ಬ್ಲೌಸ್‌ಗಳ ಜೊತೆ ಜೊತೆಯಾಗಿವೆ. ಇನ್ನು ಐವರಿ, ಹಾಫ್‌ ವೈಟ್‌, ಕ್ರಿಮೀಶ್‌ ಗೋಲ್ಡನ್‌ನಂತಹ ನಾನಾ ಮಿಕ್ಸ್ ಮ್ಯಾಚ್‌ ಗೋಲ್ಡ್ ಥೀಮ್‌ನ ಈ ಘಾಗ್ರಗಳು ಯುವತಿಯರನ್ನುಹೆಚ್ಚಾಗಿ  ಸೆಳೆದಿವೆ.

ಇದನ್ನೂ ಓದಿ: Hand Painted lehenga Fashion: ವೆಡ್ಡಿಂಗ್‌ ಫ್ಯಾಷನ್‌ ಟ್ರೆಂಡ್‌ ಲಿಸ್ಟ್‌ಗೆ ಸೇರಿದ ರಾಧಿಕಾ ಮರ್ಚೆಂಟ್‌ ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾ!

ಆಕರ್ಷಕ ಗೋಲ್ಡ್ ಎಂಬ್ರಾಯ್ಡರಿ ಲೆಹೆಂಗಾ

ರಾಯಲ್‌ ಲುಕ್‌ ನೀಡುವ ಗೋಲ್ಡನ್‌ ಲೆಹೆಂಗಾಗಳು ಲೆಕ್ಕವಿಲ್ಲದಷ್ಟು ಸೆಲೆಬ್ರೆಟಿಗಳನ್ನು ಅಲಂಕರಿಸಿವೆ ಎನ್ನಬಹುದು. ಇನ್ನು, ಗ್ಲಾಮರಸ್‌ ಬ್ಲೌಸ್‌, ಟ್ರೆಡಿಷನಲ್‌ ಬ್ಲೌಸ್‌, ಜ್ಯುವೆಲ್‌ ಬ್ಲೌಸ್‌ ಹೀಗೆ ವೆರೈಟಿ ವಿನ್ಯಾಸದಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿವೆ. ಪ್ರತಿ ಲೆಹೆಂಗಾ ಡಿಸೈನ್‌ಗಳು ಅಷ್ಟೇ ! ಊಹೆಗೂ ಮೀರಿದ ಡಿಸೈನ್‌ನಲ್ಲಿ ಕಾಣಿಸಿಕೊಂಡು ಹುಡುಗಿಯರ ಮನ ಗೆದ್ದಿವೆ ಎನ್ನುತ್ತಾರೆ ಡಿಸೈನರ್‌ ಜಿಶಾ.

 • ಗೋಲ್ಡನ್‌ ಲುಕ್‌ ಬಯಸುವವರಿಗೆ ಗೋಲ್ಡನ್‌ ಟಿಪ್ಸ್
 • ಗೋಲ್ಡ್‌ ಡಿಸೈನರ್‌ವೇರ್‌ನಲ್ಲಿ ನಿಮಗೆ ಕಂಫರ್ಟಬಲ್‌ ಎಂದೆನಿಸುವಂತಹ ಡ್ರೆಸ್‌ಕೋಡ್‌ ಆಯ್ಕೆ ಮಾಡಿ.
 • ರೆಡಿ ಗೋಲ್ಡ್‌ ಸೀರೆಗಳು ಇಂಡೋ-ವೆಸ್ಟರ್ನ್‌ ಲುಕ್‌ ನೀಡುತ್ತವೆ.
 • ಗೋಲ್ಡ್‌ ಲೆಹೆಂಗಾಗಳು ಸಂಗೀತ್‌, ಮೆಹಂದಿ ಕಾರ್ಯಕ್ರಮಗಳಿಗೆ ಬೆಸ್ಟ್ ಅಪ್ಷನ್‌.
 • ಗೋಲ್ಡ್ ದಾರದ ಹ್ಯಾಂಡ್‌ ಎಂಬ್ರಾಯ್ಡರಿ ಡಿಸೈನ್‌ನ ಲೆಹೆಂಗಾಗಳು ಸೆಲೆಬ್ರೆಟಿ ಲುಕ್‌ ನೀಡುತ್ತವೆ.
 • ಘಾಗ್ರಾಗಳು ಸ್ಲಿಮ್‌ ಇರುವವರಿಗೆ ಬೆಸ್ಟ್.
 • ಪ್ಲಂಪಿಯಾಗಿರುವವರು ಆದಷ್ಟೂ ಫ್ಲೋ ಆಗುವಂತಹ ಫ್ಯಾಬ್ರಿಕ್‌ನ ರೆಡಿ ಸೀರೆ ಚೂಸ್‌ ಮಾಡುವುದು ಉತ್ತಮ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Hand Painted lehenga Fashion: ವೆಡ್ಡಿಂಗ್‌ ಫ್ಯಾಷನ್‌ ಟ್ರೆಂಡ್‌ ಲಿಸ್ಟ್‌ಗೆ ಸೇರಿದ ರಾಧಿಕಾ ಮರ್ಚೆಂಟ್‌ ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾ!

Hand painted lehenga Fashion: ಮದುವೆಯಲ್ಲಿ ರಾಧಿಕಾ ಮರ್ಚೆಂಟ್‌ ಧರಿಸಿದ್ದ ಅತ್ಯಾಕರ್ಷಕ ಹ್ಯಾಂಡ್‌ ಪೇಂಟೆಡ್ ಲೆಹೆಂಗಾ ಮುಂಬರುವ ವೆಡ್ಡಿಂಗ್‌ ಫ್ಯಾಷನ್‌ನ ಟ್ರೆಂಡಿ ಲೆಹೆಂಗಾಗಳ ಲಿಸ್ಟ್‌ಗೆ ಸೇರಿಸಿಕೊಂಡಿದೆ. ಹಾಗಾದಲ್ಲಿ, ಈ ಲೆಹೆಂಗಾದ ವಿಶೇ‍ಷತೆಯೇನು? ಈ ಕುರಿತಂತೆ ಫ್ಯಾಷನಿಸ್ಟಾಗಳ ಅಭಿಪ್ರಾಯವೇನು ಎಂಬುದರ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Hand Painted lehenga Fashion
ಚಿತ್ರಗಳು: ರಾಧಿಕಾ ಮರ್ಚೆಂಟ್‌ ಹ್ಯಾಂಡ್‌ಪೇಂಟ್‌ ಲೆಹೆಂಗಾ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಧಿಕಾ ಮರ್ಚೆಂಟ್‌ (Hand painted lehenga Fashion) ಧರಿಸಿದ್ಧ, ಅತ್ಯಾಕರ್ಷಕ ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾ, ಮುಂಬರುವ ವೆಡ್ಡಿಂಗ್‌ ಫ್ಯಾಷನ್‌ನ ಟ್ರೆಂಡಿ ಲೆಹೆಂಗಾಗಳ ಲಿಸ್ಟ್‌ಗೆ ಸೇರಿಕೊಂಡಿದೆ.

ವೆಡ್ಡಿಂಗ್‌ ಫ್ಯಾಷನ್‌ ಟ್ರೆಂಡ್‌ಗೆ ಸೇರಿದ ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾ

ಹೌದು. ತಮ್ಮ ಮದುವೆಯಲ್ಲಿ ರಾಧಿಕಾ ಮರ್ಚೆಂಟ್‌ ಧರಿಸಿದ್ದ ನಾನಾ ಬಗೆಯ ಅತ್ಯಾಕರ್ಷಕ ಲೆಹೆಂಗಾಗಳಲ್ಲಿ, ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾ ಕಂಪ್ಲೀಟ್‌ ವಿಭಿನ್ನವಾಗಿತ್ತು. ನಮ್ಮ ನೆಲದ ಪುರಾತನ ಕಲಾತ್ಮಕ ಹ್ಯಾಂಡ್‌ ಪೇಂಟ್‌ ಚಿತ್ತಾರಗಳು ಹಾಗೂ ಅದಕ್ಕೆ ಹೊಂದುವಂತಹ ಸೂಕ್ಷ್ಮ ಕುಸುರಿ ಕಲೆಗಳು, ಆಂಟಿಕ್‌ ಡಿಸೈನ್‌ಗಳು ಮನಮೋಹಕವಾಗಿ ಮೂಡಿಬಂದಿದ್ದವು. ಇದು ಕೇವಲ ಫ್ಯಾಷನ್‌ ಪ್ರಿಯರನ್ನು ಮಾತ್ರ ಸೆಳೆದಿಲ್ಲ,ಮುಂಬರುವ ವೆಡ್ಡಿಂಗ್‌ ಫ್ಯಾಷನ್‌ನ ಟ್ರೆಂಡಿ ಲೆಹೆಂಗಾ ಲಿಸ್ಟ್‌ಗೂ ಸೇರಿಕೊಂಡಿವೆ. ವಿಭಿನ್ನ ವಿನ್ಯಾಸದ ಲೆಹೆಂಗಾ ಲಿಸ್ಟ್‌ನಲ್ಲಿ ಇವುಗಳ ಡಿಸೈನ್‌ಗಳು ಇತರೇ ಡಿಸೈನರ್‌ಗಳನ್ನು ಆಕರ್ಷಿಸಿದ್ದು, ಈಗಾಗಲೇ ನಾನಾ ಡಿಸೈನರ್‌ಗಳು ಮದುಮಗಳ ಲೆಹೆಂಗಾಗಳಲ್ಲಿ, ಕಸ್ಟಮೈಸ್ಡ್ ಹ್ಯಾಂಡ್‌ಪೇಂಟ್‌ ವಿನ್ಯಾಸ ಮೂಡಿಸಲಾರಂಭಿಸಿದ್ದಾರೆ ಎನ್ನುತ್ತಾರೆ ಡಿಸೈನರ್‌ ದಿಯಾ.

ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾದ ವಿಶೇ‍ಷತೆ

ಸೆಲೆಬ್ರೆಟಿ ಡಿಸೈನರ್‌ ಅಬು ಜಾನಿ ಸಂದೀಪ್‌ ಕೋಸ್ಲಾ ಅವರು ಕಂಟೆಂಪರರಿ ಇಂಡಿಯನ್‌ ಆರ್ಟಿಸ್ಟ್ ಹಾಗೂ ಮೂಲ ಕಲಾವಿದರ ಸಹಾಯದೊಂದಿಗೆ ಈ ಸುಂದರ ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾ ಡಿಸೈನ್‌ ಮಾಡಿದ್ದು, ಲೆಹೆಂಗಾದ 12 ಪ್ಯಾನೆಲನ್ನು ಇಟಾಲಿಯನ್‌ ಕ್ಯಾನ್‌ವಸ್‌ ಮೇಲೆ ಚಿತ್ರಿಸಲಾಗಿದೆ. ಜೀವನದ ಆರಂಭ ಮದುವೆಯಿಂದ ಎಂದು ಬಿಂಬಿಸುವ ಚಿತ್ತಾರಗಳು,ಮದುವೆಯ ಅನುಬಂಧ ವಿವರಿಸುವ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಚಿತ್ತಾರಗಳನ್ನು ಲೆಹೆಂಗಾ ಮೇಲೆ ಮೂಡಿಸಲಾಗಿದೆ. ಖುಷಿಯಾಗಿರುವ ದಂಪತಿಗಳ ಪ್ರತಿರೂಪಗಳನ್ನು ಇದರಲ್ಲಿ ಕಾಣಬಹುದು. ಅಲ್ಲದೇ, ಆನೆಗಳ ಕುರಿತಂತೆ ಅನಂತ್‌ ಅಂಬಾನಿಗಿರುವ ಪ್ರೇಮವನ್ನು ಲೆಹೆಂಗಾ ತುಂಬೆಲ್ಲಾ ಕಾಣಬಹುದು. ಇನ್ನು, ಸ್ಪೆಷಲ್‌ ಮಾಸ್ಟರ್‌ಗಳು, ರಿಯಲ್‌ ಗೋಲ್ಡ್ ಜರ್ದೋಸಿ ಹ್ಯಾಂಡ್‌ ವರ್ಕ್‌ ಮೂಲಕ ಈ ಲೆಹೆಂಗಾ ಡಿಸೈನ್‌ ಮಾಡಿರುವುದು ಎಲ್ಲರ ಪ್ರೀತಿಗೆ ಪಾತ್ರವಾಗಿದೆ.

ಇದನ್ನೂ ಓದಿ: Nita Ambani Saree Fashion: ಮಾರುಕಟ್ಟೆಗೆ ಬಂತು ನೀತಾ ಅಂಬಾನಿಯ ಸೀರೆಗಳ ಮಾಡೆಲ್‌!

ಫ್ಯಾಷನ್‌ ವಿಶ್ಲೇಷಕರ ಅಭಿಪ್ರಾಯ

ಯಾವುದೇ ಡಿಸೈನಿಂಗ್‌ ವಿಷಯ ಓದಿಲ್ಲದ ಕ್ರಾಫ್ಟ್ ಮೆನ್‌ಗಳು ಅಂದರೇ ಆರ್ಟಿಸ್ಟ್‌ಗಳು, ಲೆಹೆಂಗಾ ಮೇಲೆ ಈ ಆಕರ್ಷಕ ಹ್ಯಾಂಡ್‌ ಪೇಂಟ್‌ ಮಾಡಿರುವುದು ನಿಜಕ್ಕೂ ಅದ್ಭುತವಾಗಿದೆ. ಇದೊಂದು ಅಪರೂಪದ ಲೆಹೆಂಗಾ! ಇನ್ಮುಂದೆ ಮದುವೆ ಫ್ಯಾಷನ್‌ನಲ್ಲಿ, ಹ್ಯಾಂಡ್‌ಪೇಂಟೆಡ್‌ ಲೆಹೆಂಗಾಗಳನ್ನು ಕಾಣಬಹುದು ಎಂಬುದಕ್ಕೆ ಇದೀಗ ಇವು ವೆಡ್ಡಿಂಗ್‌ ಫ್ಯಾಷನ್‌ ಲಿಸ್ಟ್‌ಗೆ ಸೇರಿರುವುದೇ ಸಾಕ್ಷಿ ಎನ್ನುತ್ತಾರೆ. ಫ್ಯಾಷನ್‌ ವಿಶ್ಲೇಷಕರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Nita Ambani Saree Fashion: ಮಾರುಕಟ್ಟೆಗೆ ಬಂತು ನೀತಾ ಅಂಬಾನಿಯ ಸೀರೆಗಳ ಮಾಡೆಲ್‌!

Nita Ambani Saree Fashion: ಮಗನ ಮದುವೆ ಸಮಾರಂಭಗಳಲ್ಲಿ ನೀತಾ ಅಂಬಾನಿಯವರು ಉಟ್ಟಿದ್ದ, ನಾನಾ ಬಗೆಯ ದುಬಾರಿ ಡಿಸೈನರ್‌ ಸೀರೆಗಳ ತದ್ರೂಪದಂತೆ ಕಾಣಿಸುವ ರಿಪ್ಲಿಕಾ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಕುರಿತಂತೆ ಇಲ್ಲಿದೆ ವರದಿ. ಅಂದಹಾಗೆ, ನೀತಾ ಅಂಬಾನಿಯವರ ಪಾಪ್ಯುಲರ್‌ ಆದ ಸೀರೆಗಳ ಮಾಹಿತಿ ಇಲ್ಲಿದೆ.

VISTARANEWS.COM


on

Nita Ambani Saree Fashion
ಚಿತ್ರಗಳು: ಪಾಪುಲರ್‌ ಆಗಿರುವ ನೀತಾ ಅಂಬಾನಿ ಸೀರೆಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಗನ ಮದುವೆ ಸಮಾರಂಭಗಳಲ್ಲಿ ನೀತಾ ಅಂಬಾನಿಯವರು (Nita Ambani Saree Fashion) ಉಟ್ಟಿದ್ದ ನಾನಾ ಬಗೆಯ ದುಬಾರಿ ಡಿಸೈನರ್‌ ಸೀರೆಗಳನ್ನೇ ಹೋಲುವ ರಿಪ್ಲಿಕಾ ಸೀರೆಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹಾಗೆಂದು, ಇವ್ಯಾವು ಓರಿಜಿನಲ್‌ ಕ್ರಿಯೇಷನ್‌ ಸೀರೆಗಳಲ್ಲ! ಬದಲಿಗೆ ತದ್ರೂಪದಂತೆ ಕಾಣಿಸುವ ಕಾಪಿಕ್ಯಾಟ್ ಸೀರೆಗಳು ಅಥವಾ ರಿಪ್ಲಿಕಾ ಸೀರೆಗಳು ಎನ್ನುತ್ತಾರೆ ಸೀರೆ ಮಾರಾಟಗಾರರು.

Nita Ambani Saree Fashion

ರಿಪ್ಲಿಕಾ ಸೀರೆಗಳ ಹಾವಳಿ

ನೀತಾ ಅಂಬಾನಿಯವರು ಉಟ್ಟಿದ್ದ, ಬಹುತೇಕ ಸೀರೆಗಳು, ಈಗಾಗಲೇ ಮಹಿಳೆಯರನ್ನು ಸೆಳೆದಿವೆ. ಪರಿಣಾಮ, ಮಾರುಕಟ್ಟೆಯಲ್ಲಿ ಇವರ ಸೀರೆಗಳಂತೆ ಕಾಣಿಸುವ ಕೈಗೆಟಕುವ ಬೆಲೆಯ ಡಿಸೈನರ್‌ ಸೀರೆಗಳು, ಜಗಮಗಿಸುವ ಸೀರೆಗಳು ಆಗಮಿಸಿವೆ. ಹಾಗೆಂದು, ನೀತಾ ಅಂಬಾನಿಯವರ ಓರಿಜಿನಲ್‌ ಸೀರೆಗಳಲ್ಲಿ ಬಳಸಿರುವ ಹಾಗೇ ಇಲ್ಲಿ ಚಿನ್ನ ಹಾಗೂ ಡೈಮಂಡ್‌ ಡಿಸೈನ್‌ಗಳ ನೆರಳನ್ನೂ ಕೂಡ ನೋಡಲು ಸಾಧ್ಯವೇ ಇಲ್ಲ! ಬದಲಿಗೆ ಆರ್ಟಿಫಿಷಿಯಲ್‌ ಜರತಾರಿ, ಸಿಲ್ವರ್‌ ಗೋಲ್ಡನ್‌ ಶೇಡ್‌ನ ಮೆಷಿನ್‌ ಥ್ರೆಡ್‌ ವರ್ಕ್‌ ಇರುವಂತ ಡಿಸೈನ್‌ ಹೊಂದಿರುವುದನ್ನಷ್ಟೇ ಕಾಣಬಹುದು. ಸಂತಸದ ವಿಚಾರವೆಂದರೇ, ಸಾಮಾನ್ಯ ಮಹಿಳೆಯೂ ಕೂಡ ಕೈಗೆಟಕುವ ಬೆಲೆಯಲ್ಲಾದರೂ ಸರಿಯೇ, ಅವರಂತೆ ಕಾಣುವ ರಿಪ್ಲಿಕಾ ಸೀರೆಗಳನ್ನು ಉಟ್ಟು ಆನಂದಿಸಬಹುದಲ್ಲ! ಎನ್ನುತ್ತಾರೆ ಕಮರ್ಷಿಯಲ್‌ ಸ್ಟ್ರೀಟ್‌ನ ಡಿಸೈನರ್‌ ಸೀರೆ ಶಾಪ್‌ ಮಾಲೀಕ ಅಲಿ ಹಕೀಂ. ನೋಡಲು ಹೆವ್ವಿ ಎಂದೆನಿಸುವ ಈ ಡಿಸೈನರ್‌ ಸೀರೆಗಳು ಕಡಿಮೆ ಬೆಲೆಯ ಸಿಕ್ವಿನ್ಸ್, ಥ್ರೆಡ್‌ ಹಾಗೂ ಜರಿಗಳನ್ನು ಹೊಂದಿರುತ್ತವಂತೆ. ಬಾಳಿಕೆ ಬರುವುದು ಕಡಿಮೆ. ಮೂರ್ನಾಲ್ಕು ಬಾರಿ ಉಟ್ಟು ಸಂಭ್ರಮಿಸಬಹುದಷ್ಟೇ! ಎನ್ನುತ್ತಾರೆ. ಇನ್ನು ಸೀರೆ ಡ್ರೇಪರ್‌ ರಜಿಯಾ ಪ್ರಕಾರ, ಇವ್ಯಾವು ಪಕ್ಕಾ ಅದೇ ಸೀರೆಗಳನ್ನು ಹೋಲುವುದಿಲ್ಲ, ಬದಲಿಗೆ ಒಂದಿಷ್ಟು ಕಾನ್ಸೆಪ್ಟ್ ಹಾಗೂ ಡಿಸೈನ್‌ಗಳಿಂದಾಗಿ ನೀತಾ ಅಂಬಾನಿ ಸೀರೆಗಳೆಂದು ನಾಮಕರಣ ಗೊಂಡಿವೆ ಎನ್ನುತ್ತಾರೆ.

Nita Ambani Saree Fashion

ಪಾಪುಲರ್‌ ಆದ ನೀತಾ ಅಂಬಾನಿ ಸೀರೆಗಳು

ಅಂದಹಾಗೆ, ನೀತಾ ಅಂಬಾನಿಯವರ ಪಾಪುಲರ್‌ ಆದ ಸೀರೆಗಳ ಸಂಕ್ಷೀಪ್ತ ವಿವರ ಇಲ್ಲಿದೆ.

Nita Ambani Saree Fashion

ಟಿಶ್ಯೂ ಬನರಾಸಿ ಸೀರೆ

ಗುಜರಾತಿ ಶೈಲಿಯ ಈ ಸೀರೆಯನ್ನು ಕಂಪ್ಲೀಟ್‌ ಬಂಗಾರ ಹಾಗೂ ಬೆಳ್ಳಿಯ ಹ್ಯಾಂಡ್‌ ಎಂಬ್ರಾಯ್ಡರಿಯಿಂದ ಡಿಸೈನ್‌ ಮಾಡಲಾಗಿದೆ. ಇದನ್ನು ಸಿದ್ಧಪಡಿಸಲು ಸುಮಾರು 70 ದಿನಗಳ ಕಾಲ ಬೇಕಾಯಿತಂತೆ.

Nita Ambani Saree Fashion

ವೆಡ್ಡಿಂಗ್‌ ರಿಸೆಪ್ಷನ್‌ ಸೀರೆ

ಬ್ರೋಕೆಡ್‌ ಪಿಂಕ್‌ ಶೇಡ್‌ನ ಮಲ್ಟಿ ರೇಷ್ಮೆ ಸೀರೆಯ ಒಡಲಿನ ತುಂಬೆಲ್ಲಾ ಬೆಳ್ಳಿಯ ದಾರದಿಂದ ಮಾಡಿದ ಹ್ಯಾಂಡ್‌ ಎಂಬ್ರಾಯ್ಡರಿಯಿದೆ. ಇದಕ್ಕೆ ಪರ್ಪಲ್‌ ಡಿಸೈನರ್‌ ಬ್ಲೌಸ್‌ ಗ್ರ್ಯಾಂಡ್‌ ಲುಕ್‌ನೀಡಿದೆ. ರಿಯಲ್‌ ಸಿಲ್ವರ್‌ ಜರಿ ಡಿಫರೆಂಟ್‌ ಲುಕ್‌ ನೀಡಿದೆ.

ಇದನ್ನೂ ಓದಿ: Ambani Wedding Fashion: ನೀತಾ ಅಂಬಾನಿಯ ಗ್ರ್ಯಾಂಡ್‌ ಘಾಗ್ರ ಬ್ಲೌಸ್‌ ಮೇಲೆ ಬಂಗಾರದಲ್ಲಿ ಮೂಡಿದ ಕುಟುಂಬದವರ ಹೆಸರು!

ರಂಗ್ಕಟ್‌ ಸೀರೆ

ವಾರಣಾಸಿಯ ಹೆರಿಟೇಜ್‌ ಬಿಂಬಿಸುವ 28 ಚೌಕಗಳ ರಂಗ್ಕಟ್‌ ಸೀರೆ ಸಿದ್ಧಪಡಿಸಲು ಸುಮಾರು 6 ತಿಂಗಳ ಕಾಲ ಬೇಕಾಯಿತಂತೆ. ಫ್ಲೋರಲ್‌ ಮೋಟಿಫ್‌ ಹೊಂದಿರುವ ಈ ಸೀರೆ ವೈಬ್ರೆಂಟ್‌ ಜರಿ ಹೊಂದಿದೆ ಎನ್ನುತ್ತಾರೆ ಡಿಸೈನರ್ಸ್.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Sexual Assault case
ಕ್ರೈಂ5 mins ago

Sexual Assualt Case: ಅಶ್ಲೀಲ ವಿಡಿಯೊ ವೀಕ್ಷಿಸಿ ಉದ್ರೇಕಗೊಂಡ ಮೂವರು ಶಾಲಾ ಬಾಲಕರಿಂದ ಬಾಲಕಿಯ ಅತ್ಯಾಚಾರ, ಕೊಲೆ

International Cricket Council
ಕ್ರಿಕೆಟ್20 mins ago

International Cricket Council : ಟಿ20 ವಿಶ್ವಕಪ್ ಆಯೋಜನೆಯಲ್ಲಿ ಐಸಿಸಿಗೆ 167 ಕೋಟಿ ರೂಪಾಯಿ ನಷ್ಟ

Team India Srilanka Tour
ಪ್ರಮುಖ ಸುದ್ದಿ29 mins ago

Team India Srilanka Tour : ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಸೂರ್ಯಕುಮಾರ್​ಗೆ ಟಿ20 ನಾಯಕತ್ವ

Viral Video
Latest57 mins ago

Viral Video: ಬಸ್‌ ಡ್ರೈವರ್‌ನ ರೀಲ್ಸ್‌ ಕ್ರೇಜ್‌ಗೆ 2 ಎತ್ತುಗಳು ಬಲಿ; ರೈತನ ಸ್ಥಿತಿ ಗಂಭೀರ

Train Accident
ದೇಶ58 mins ago

Train Derail: ಹಳಿ ತಪ್ಪಿದ ರೈಲು; ಅಪಘಾತದ ಹಿಂದೆ ಇದ್ಯಾ ವಿಧ್ವಂಸಕ ಕೃತ್ಯ?

Crime News
ಪ್ರಮುಖ ಸುದ್ದಿ1 hour ago

Bangalore News : ಬೆಂಗಳೂರಲ್ಲಿ ಆಘಾತಕಾರಿ ಘಟನೆ; ಗಾಂಜಾ ನಶೆಯಲ್ಲಿ ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ಬಾಲಕಿಯರನ್ನು ಬೆದರಿಸಿದ ಪುಂಡರು

Lady Police Officer
Latest1 hour ago

Lady Police Officer: ಗೂಂಡಾಗಿರಿ ಮಾಡಿದರೆ ಹುಷಾರ್‌! ಪುಂಡರಿಗೆ ಲೇಡಿ ಪೊಲೀಸ್ ವಾರ್ನಿಂಗ್‌; ವಿಡಿಯೊ ವೈರಲ್

kiccha sudeep‌ Fans
ಸಿನಿಮಾ2 hours ago

Kiccha Sudeep: ಸೆಲ್ಫಿಗಾಗಿ 2 ಗಂಟೆ ಕಾದ ಅಭಿಮಾನಿಗೆ ಕಿಚ್ಚ ಸುದೀಪ್ ಅವಮಾನ! ವಿಡಿಯೊ ನೋಡಿ

Ratna Bhandar
ದೇಶ2 hours ago

Ratna Bhandar: ಒಂದೇ ವಾರದಲ್ಲಿ ಎರಡನೇ ಬಾರಿ ತೆರೆದ ಪುರಿ ಜಗನ್ನಾಥನ ʼರತ್ನ ಭಂಡಾರʼ

GT World Mall
ಪ್ರಮುಖ ಸುದ್ದಿ2 hours ago

GT World Mall : ಜಿಟಿ ಮಾಲ್​ ಏಳು ದಿನಗಳ ಕಾಲ ಬಂದ್​, ಮಾಲೀಕರಿಂದಲೇ ಸ್ವಯಂಪ್ರೇರಿತ ಕ್ರಮ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ5 hours ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ4 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

ಟ್ರೆಂಡಿಂಗ್‌